ಅಂತಾರಾಷ್ಟ್ರೀಯ

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಟಿ ಖುಷ್ಬೂ ಸುಂದರ್

ನವದೆಹಲಿ prajakiran.com : ದಕ್ಷಿಣ ಭಾರತದ ಪ್ರಖ್ಯಾತ ನಟಿ, ನಿರ್ಮಾಪಕಿ ಖುಷ್ಬೂ ಸುಂದರ್ ಅವರು ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿ ಸೋಮವಾರ ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಅವರು 2014 ರಲ್ಲಿ ಡಿಎಂಕೆ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಇದೀಗ ಬಿಜೆಪಿ ಸೇರುವ ಮೂಲಕ ತಮಿಳುನಾಡಿನ ರಾಜಕೀಯದಲ್ಲಿಮಿಂಚಿನ ಸಂಚಲನ ಸೃಷ್ಟಿಸಿದ್ದಾರೆ. ಈ ವೇಳೆ ಮಾತನಾಡಿದ ನಟಿ ಖುಷ್ಬೂ ಅವರು, ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದು, ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರಂತಹ ನಾಯಕತ್ವಅಗತ್ಯವಿದೆ. ಬರುವ ದಿನಗಳಲ್ಲಿ ತಮಿಳುನಾಡಿನಲ್ಲಿ ಬಿಜೆಪಿ […]

ರಾಜ್ಯ

ಹುಬ್ಬಳ್ಳಿಯ “ಕಾಟನ್ ಮಾರ್ಕೆಟ್” ಗೆ ಬಂದಿಳಿದ “ಶೆಟ್ಟರ್” ದೋಣಿಗಳು

ಹುಬ್ಬಳ್ಳಿ prajakiran.com : ಹುಬ್ಬಳ್ಳಿಯ “ಕಾಟನ್ ಮಾರ್ಕೆಟ್” ಗೆ “ಶೆಟ್ಟರ್” ದೋಣಿಗಳು ಬಂದಿಳಿದಿವೆ ಎಂದ ತಕ್ಷಣ ಪ್ರತಿಯೊಬ್ಬರು ಹೌಹಾರದೆ ಇರಲಾರರು. ಯಾಕೆಂದರೆ ಹುಬ್ಬಳ್ಳಿಯ ಜನತೆಗೆ ಇದು ಅಚ್ಚರಿ ಹಾಗೂ ಕುತೂಹಲದ ಸಂಗತಿ. ಅರೇ ಯಾಕಪ್ಪ ಈ ದೋಣಿಗಳು ಅಂತ ಮೂಗು ಮುರಿಯಬೇಡಿ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ತವರು ಕ್ಷೇತ್ರದ ರಸ್ತೆಗಳು ಹದಗೆಟ್ಟ ಹೈದ್ರಾಬಾದ ಆಗಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಹುಬ್ಬಳ್ಳಿಯ ಕಾಟನ್ ಮಾರ್ಕೆಟ್ ನಲ್ಲಿ ಸೋಮವಾರ ಮಕ್ಕಳು ದೋಣಿ ಯನ್ನು ಮಾಡಿ […]

ರಾಜ್ಯ

ಧಾರವಾಡದ ಪಶ್ಚಿಮ ವಿಧಾನ ಸಭಾ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ

ಧಾರವಾಡ prajakiran.com : ಧಾರವಾಡದ ಪಶ್ಚಿಮ ವಿಧಾನ ಸಭಾ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ದವಾಗಿದೆ ಎಂದು ಚುನಾವಣಾಧಿಕಾರಿಗಳು ಘೋಷಣೆ ಮಾಡಿದ್ದಾರೆ. ಕ್ರಮಬದ್ದ ನಾಮಪತ್ರಗಳ ವಿವರ ಹೀಗಿದೆ : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಆರ್. ಎಂ.ಕುಬೇರಪ್ಪ, ಜನತಾದಳ ( ಜಾತ್ಯಾತೀತ)ದ ಶಿವಶಂಕರ ಚನ್ನಪ್ಪ ಕಲ್ಲೂರ, ಭಾರತೀಯ ಜನತಾ ಪಕ್ಷದ ಸಿದ್ದಲಿಂಗಪ್ಪ ವಿ.ಸಂಕನೂರ, ಕರ್ನಾಟಕ ರಾಷ್ಟ್ರ ಸಮಿತಿಯ ಶಿವರಾಜ ಕೆಂಚಪ್ಪ ಕಾಂಬಳೆ, ಶಿವಸೇನಾ ಪಕ್ಷದ ಸೋಮಶೇಖರ ವಿರೂಪಾಕ್ಷ ಉಮರಾಣಿ, ಪಕ್ಷೇತರ ಅಭ್ಯರ್ಥಿಗಳಾದ ದಶರಥ ಚಂದ್ರಹಾಸ ರಂಗರೆಡ್ಡಿ, ಬಸನಗೌಡ […]

ರಾಜ್ಯ

ನಾನು ನನ್ನ ಕಾರ್ಯಕರ್ತರನ್ನು ಬಿಟ್ಟು ಎಲ್ಲೂ ಹೋಗಲ್ಲ ಎಂದ ವಿನಯ ಕುಲಕರ್ಣಿ

ಧಾರವಾಡ prajakiran.com : ಕಳೆದ ಕೆಲವು ದಿನಗಳಿಂದ ಬಿಜೆಪಿ ಸೇರುವ ಕುರಿತು ಊಹಾಪೋಹಗಳು ಎದ್ದಿವೆ. ನಾನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿಲ್ಲ ನಾನು ನನ್ನ ಕಾರ್ಯಕರ್ತರನ್ನು ಬಿಟ್ಟು ಎಲ್ಲೂ ಹೋಗಲ್ಲ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಸ್ಪಷ್ಟಪಡಿಸಿದರು. ಅವರು ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಆರು ಕುದುರಿ ಮಾರಾಟ ಮಾಡಿದ್ದೇನೆ. ಹೊಸ ಕುದುರೆ ನೋಡಲು ಹೋಗಿದ್ದೆ. ನಾನು ರಾಜಸ್ತಾನಕ್ಕೆ ಕುದುರೆ ತರಲು ಹೋಗಿದ್ದೆ. ಹೊರತು […]

ರಾಜ್ಯ

ಶಿರಾ, ಆರ್.ಆರ್.ನಗರ ಅಭ್ಯರ್ಥಿ ಹೆಸರು ಎರಡು ದಿನಗಳಲ್ಲಿ ಹೈಕಮಾಂಡನಿಂದ ಪ್ರಕಟ

ಧಾರವಾಡ prajakiran.com : ರಾಜ್ಯದ ಶಿರಾ ಮತ್ತು ಆರ್.ಆರ್. ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಎರಡು ದಿನಗಳಲ್ಲಿ ಹೈಕಮಾಂಡ್ ಪ್ರಕಟಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಹೇಳಿದರು. ಅವರು ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಬಿಜೆಪಿ ಕೋರ್ ಕಮೀಟಿಯಲ್ಲಿ ಚರ್ಚಿಸಿ ಈಗಾಗಲೇ ಕೇಂದ್ರಕ್ಕೆ ಅಭ್ಯರ್ಥಿಗಳ ಹೆಸರು ಕಳುಹಿಸಿದ್ದೇವೆ. ಆದ್ದರಿಂದ ಇನ್ನೆರಡು ದಿನಗಳಲ್ಲಿ ವರಿಷ್ಠರು ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದ್ದಾರೆ ಎಂದರು. ವಿಧಾಪರಿಷತ್ ಚುನಾವಣೆಗೆ ನಾವು ಪೂರ್ಣ ತಯಾರಿ ಮಾಡಿಕೊಂಡಿದ್ದೇವೆ. ಶಿರಾದಲ್ಲಿ ಕಾಂಗ್ರೆಸ್, ಜೆಡಿಎಸ್ ಮತದಾರರು […]

ರಾಜ್ಯ

ಕಾಂಗ್ರೆಸ್ ಸೇರಿದ ಡಿ.ಕೆ. ರವಿ ಪತ್ನಿ ಕುಸುಮಾ

ಬೆಂಗಳೂರು prajakiran.com : ಜೆಡಿಎಸ್ ಶಾಸಕ ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಶಿರಾ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರಲು ಆರಂಭಿಸಿದೆ. ಟಿಕೇಟ್ ಆಕಾಂಕ್ಷಿಗಳು ಪಕ್ಷ ಸೇರ್ಪಡೆಗೊಳ್ಳುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಈಗಾಗಲೇ ಕಾಂಗ್ರೆಸ್ ಟಿಕೇಟ್ ಮೇಲೆ ಕಣ್ಣೀಟ್ಟಿರುವ ದಿವಂಗತ ಮಾಜಿ ಐ ಎ ಎಸ್ ಅಧಿಕಾರಿ ಡಿ.ಕೆ. ರವಿ ಪತ್ನಿ ಹಾಗೂ ಹನುಮಂತರಾಯಪ್ಪ ಪುತ್ರಿ ಆಗಿರುವ ಕುಸಮಾ ಭಾನುವಾರ ಬೆಂಗಳೂರಿನಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಿದರು. ಬೆಳಗ್ಗೆ 10-40ಕ್ಕೆ ಕಚೇರಿಗೆ ಬಂದಿದ್ದಅವರು ಶುಭಗಳಿಗೆಗಾಗಿ ಒಂದು […]

ಅಂತಾರಾಷ್ಟ್ರೀಯ

ಉತ್ತರಪ್ರದೇಶದಲ್ಲಿ ರಾಹುಲ್ ಗಾಂಧಿ ಮೇಲೆ ಪೊಲೀಸ್ ದಾಳಿ

ಧಾರವಾಡ prajakiran.com : ಉತ್ತರಪ್ರದೇಶದ ಹತ್ರಾಸ್ ನಲ್ಲಿ ಅತ್ಯಾಚಾರ, ಕೊಲೆಗೀಡಾದ ಯುವತಿಯ ಕುಟುಂಬದ ಭೇಟಿಗೆ ತೆರಳಿದ್ದ @RahulGandhi ರಾಹುಲ್ ಗಾಂಧಿ, @priyankagandhi ಪ್ರಿಯಾಂಕ ಗಾಂಧಿ ಅವರನ್ನು ದಾರಿ ಮಧ್ಯದಲ್ಲೇ ತಡೆದು ಉತ್ತರ ಪ್ರದೇಶದ ಪೊಲೀಸರು ಉದ್ಧಟತನ ಮೆರೆದಿದ್ದಾರೆ. ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಲೂ @myogiadityanath ಯೋಗಿ ಆದಿತ್ಯನಾಥ ಅವರ ನೇತೃತ್ವದ ಬಿಜೆಪಿ ಸರ್ಕಾರ ಅವಕಾಶ ನೀಡದಿರುವುದು ಅಮಾನವೀಯ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಹೋರಾಟ ನ್ಯಾಯಕ್ಕಾಗಿ, ಬಿಜೆಪಿಯ ಗುಂಡು, ಲಾಠಿಗಳಿಂದ ನಿಲ್ಲುವುದಿಲ್ಲ. ಈ ಹೋರಾಟವು ದೇಶದ […]

ರಾಜ್ಯ

ಬಿಜೆಪಿಯಿಂದ ಜ್ಞಾನವರ್ಧನೆಗೆ ‘ಪುಸ್ತಕ ಓದು’ ಅಭಿಯಾನ ; ಜಾಲತಾಣದಲ್ಲಿ ಫೋಟೋ ವೈರಲ್

ಮಂಜುನಾಥ ಎಸ್.ರಾಠೋಡ ಗದಗ prajakiran.com : ಫೇಸ್ಬುಕ್‌ನಲ್ಲಿ ಕಳೆದೈದು ದಿನಗಳಿಂದ ಪುಸ್ತಕ ಓದುವ ಚಾಲೆಂಜ್‌ ಟ್ರೆಂಡ್‌ ಶುರುವಾಗಿದೆ. ಫೇಸ್‌ಬುಕ್‌ನಲ್ಲಿ ಕೆಲ ದಿನಗಳಿಂದ ‘ ಕಪಲ್ ಚಾಲೆಂಜ್‘, ‘ಕೆಸರಿ ಚಾಲೆಂಜ್‘, ‘ಸಿಂಗಲ್ ಚಾಲೆಂಜ್‘ ಜನಪ್ರಿಯವಾಗಿದ್ದು ಗೊತ್ತಿರಬಹುದು. ಹೀಗೆ ಒಂದಲ್ಲ ಒಂದು ಅಭಿಯಾನ ಸಕ್ರಿಯವಾಗಿರುವ ಈ ದಿನಗಳಲ್ಲಿ ಪುಸ್ತಕ ಓದುವ ಹವ್ಯಾಸಕ್ಕೆ ಪುಷ್ಟೀಕರಣ ಮತ್ತು ವಿದ್ಯಾರ್ಥಿಗಳಲ್ಲಿ ತಿಳಿವಳಿಕೆ ಮೂಡಿಸುವ ಸಲುವಾಗಿ ಬಿಜೆಪಿ ಪಕ್ಷ “ಪುಸ್ತಕ ಓದುವ ಚಾಲೆಂಜ್” ಎನ್ನುವ ವಿಶಿಷ್ಟ ಅಭಿಯಾನ ಹಮ್ಮಿಕೊಂಡಿದೆ. ಜಗತ್ತಿನಲ್ಲಿ ಪ್ರತಿಯೊಬ್ಬರು ಓದುವುದನ್ನು ರೂಡಿಸಿಕೊಳ್ಳಬೇಕು. ಅದಕ್ಕಾಗಿ […]

ರಾಜ್ಯ

ಸೆ. 25ರ ಬದಲಿಗೆ ಸೆ. 28ರಂದು ಕರ್ನಾಟಕ ಬಂದ್

ಸೆ. 25ರಂದು ಕೇವಲ ಪ್ರತಿಭಟನೆ, ರಸ್ತೆ ತಡೆ, ಜೈಲ್ ಭರೋ ಚಳುವಳಿ ಬೆಂಗಳೂರು prajakiran.com : ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ಹಾಗೂ ಕೇಂದ್ರ ಹಾಗೂ ರಾಜ್ಯದ ಜನ ವಿರೋಧಿ ನೀತಿ ಖಂಡಿಸಿ ಕರೆ ನೀಡಲಾಗಿದ್ದ ಸೆ. 25ರ ಬಂದ್ ಬದಲಿಗೆ 28ರಂದು ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈತ ಸಂಘದ ಮುಖಂಡ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ. ರಾಜ್ಯದಲ್ಲಿ ದಲಿತ, ರೈತ, ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ 32 ಸಂಘಟನೆಗಳು […]

ರಾಜ್ಯ

ನಾಯಕತ್ವ ಬದಲಾವಣೆಯ ಊಹಾಪೋಹಗಳಿಗೆ ತೆರೆಎಳೆದ ಬಿ ಎಸ್ ವೈ

ಬೆಂಗಳೂರು prajakiran.com : ಆತಂಕ, ಅಳಲಿನಲ್ಲಿಯೇ ನವದೆಹಲಿಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿ ನಾಯಕತ್ವ ಬದಲಾವಣೆಯ ಊಹಾಪೋಹಗಳಿಗೆ ತೆರೆಎಳೆದಿದ್ದಾರೆ. ಆ ಮೂಲಕ ಪಕ್ಷದಲ್ಲಿನ ಯಡಿಯೂರಪ್ಪ ವಿರೋಧಿ ಗುಂಪು, ಹಿತಶತ್ರುಗಳ ವಿರುದ್ದ ಗೆಲುವು ಸಾಧಿಸಿ ಮರಳುವಾಗ ಎದೆ ಉಬ್ಬಿಸಿ ಹೊರ ಬಂದ್ದಿದ್ದಾರೆ. ಕೆಲವರು ಅವರ ನಾಯಕತ್ವ ವಿರೋಧ, ವಯಸ್ಸಿನ ಕಾರಣ ಮುಂದಿಟ್ಟು ಮುಖ್ಯಮಂತ್ರಿ ಗಾದಿಯಲ್ಲಿ ಮುಂದುವರೆಸುವುದು ಕಷ್ಟ ಸಾಧ್ಯ ಎಂದೆ ಬಿಂಬಿಸಲಾಗಿತ್ತು. ಆದರೆ ಈ ಬಗೆ ಬಿ ಎಸ್ ವೈ […]