ಸಿನಿಮಾ

ಪಂಚಭೂತ ಗಳಲ್ಲಿ ಲೀನವಾದ ಅಂಬರೀಶ್ ಪ್ರಾರ್ಥೀವ ಶರೀರ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ, ಕೇಂದ್ರ ಹಾಗೂ ರಾಜ್ಯದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸುವ ಮೂಲಕ ಜನಾನುರಾಗಿ ಬೆಳೆದಿದ್ದ ಮಂಡ್ಯದ ಗಂಡು ಅಂಬರೀಶ್ ಅವರ ದೇಹವೂ ಸೋಮವಾರ ಪಂಚಭೂತಗಳಲ್ಲಿ ಲೀನವಾಯಿತು. ಅವರ ಪುತ್ರ ಅಭಿಷೇಕ ಅವರ ಪ್ರಾರ್ಥೀವ ಶರೀರಕ್ಕೆ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಅಂತಿಮವಾಗಿ ತಂದೆಯ ದೇಹಕ್ಕೆ ಮುತ್ತಿಕ್ಕಿ ಕಣ್ಣೀರ ಧಾರೆಯನ್ನು ಹರಿಸಿದರು. ಪತ್ನಿ ಸುಮಲತಾ ಕೂಡ ಕೊನೆಯ ಬಾರಿಗೆ ಪಾದಸ್ಪರ್ಶ ಮಾಡಿ ಹಣೆಯಿಟ್ಟು ನಮಸ್ಕರಿಸುವ ಮೂಲಕ ಅಂತಿಮ ವಿಧಾನ ಹೇಳಿದರು. ಆ […]

ಅಪರಾಧ

ಆನ್ ಲೈನ್ ನಲ್ಲಿ ಕಾರ್ ಮಾರಾಟ ಮಾಡುವುದಾಗಿ ಲಕ್ಷಾಂತರ ರೂಪಾಯಿ ವಂಚನೆ

ಬೆಂಗಳೂರು : ಆನ್ ಲೈನ್‌ದಲ್ಲಿ ಕಾರ್ ಮಾರಾಟ ಮಾಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಓಎಲ್‌ಎಕ್ಸ್ ಮುಖಾಂತರ ಕಾರ್ ಫಾರ್ ಸೇಲ್ ಅಂತಾ ಆಡ್ ಹಾಕಿದ್ದ ಪ್ರಕಾಶ ಲೀಲಿ ಸಾ: ಬೆಂಗಳೂರ ಮತ್ತು ೩ ಜನರು ಸೇರಿಕೊಂಡು ಹುಬ್ಬಳ್ಳಿಯ ಮಯೂರ ಎಸ್ಟೇಟ್ ನ ರಾಜಕುಮಾರ ಸಂಕಪ್ಪ ದ್ಯಾವನಕೊಂಡ ಎಂಬುವರಿಗೆ ಮೋಸ ಮಾಡಿದ್ದಾರೆ. ಓಎಲ್‌ಎಕ್ಸ್ ಮುಖಾಂತರ ಕಾರ ಪಾರ್ ಸೇಲ್ ಅಂತಾ ಯಾಮಾರಿಸಿ ರಾಜಕುಮಾರ ಸಂಕಪ್ಪ ದ್ಯಾವನಕೊಂಡ ಅವರಿಂದ ಎಸ್‌ಬಿಐ ಅಕೌಂಟ್‌ಗೆ ೨,೯೬,೦೦೦/- […]

ಅಂತಾರಾಷ್ಟ್ರೀಯ

ಬಾಬರನ ಮಸೀದಿ ಕಟ್ಟಲು ಬಿಡುವುದಿಲ್ಲ ಎಂದ ಮಹಾರಾಜ್

ಹುಬ್ಬಳ್ಳಿ : ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಮಸೀದಿ ಬಗ್ಗೆ ನಮಗೆ ವಿರೋಧವಿಲ್ಲ… ಆದ್ರೇ ಬಾಬರನ ಮಸೀದಿ ಕಟ್ಟಲು ಬಿಡುವುದಿಲ್ಲ ಎಂದು ಜಬಲ್ ಪುರದ ಮಹಾಮಂಡಳೇಶ್ವರ ಅಖಿಲೇಶ್ವರಂದಗಿರಿ ಮಹಾರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರು ಭಾನುವಾರ ಸಂಜೆ ಹುಬ್ಬಳ್ಳಿಯಲ್ಲಿ ವಿಶ್ವ ಹಿಂದು ಪರಿಷದ್ ಬೃಹತ್ ಜನಾಗ್ರಹ ಸಭೆಯಲ್ಲಿ ಮಾತನಾಡಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಅವರು ಅಯೋಧ್ಯದ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಮೂಲೆ ಮೂಲೆಗಳಿಂದ ಜನ ಹರಿದು ಬರುತ್ತಿದೆ. ಬಿಜೆಪಿ ರಾಮ ಜನ್ಮಭೂಮಿಯಲ್ಲಿ ನಿರ್ಮಾಣ ವಿಚಾರದಲ್ಲಿ ದೇಶದ ಜನತೆಗೆ ಮಾತು […]

ಅಪರಾಧ

ರಾಜಕೀಯ ವೈಷಮ್ಯಕ್ಕೆ ಗ್ರಾಪಂ ಅಧ್ಯಕ್ಷನ ಕಗ್ಗೊಲೆ….!?

ಹುಬ್ಬಳ್ಳಿ:- ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮ ಪಂಚಾಯತಿ ಅಧ್ಯಕ್ಷನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಬಸವರಾಜ್ ಕಡಪಟ್ಟಿ (೨೮) ಕೊಲೆಯಾದ ವ್ಯಕ್ತಿ. ನಿನ್ನೆ ರಾತ್ರಿ ಅಗಡಿ ಕ್ರಾಸ್ ಬಳಿ ಭೀಕರವಾಗಿ ಕೊಲೆ ಮಾಡಲಾಗಿದೆ. ಬಸವರಾಜ ಸಂಚರಿಸುತ್ತಿದ್ದ ಕಾರ್ ಗೆ ಡಿಕ್ಕಿ ಹೊಡೆದು ಗಲಾಟೆ ತೆಗೆಯಲಾಗಿದೆ. ಆನಂತರ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬಸವರಾಜ್ ಕಡಪಟ್ಟಿ ಇತ್ತೀಚೆಗೆ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗಿದ್ದ. ಈ ಮೊದಲು ಜೆಡಿಎಸ್ ನಲ್ಲಿದ್ದ ಬಸವರಾಜ್ ಜೆಡಿಎಸ್ […]

ರಾಜ್ಯ

ಸಂಸದ ಜೋಶಿ ಹಠಾವೋ ಬಿಜೆಪಿ ಬಚಾವೋ ಫೇಸಬುಕ್ ವಾರ್ ಆರಂಭ !

ಹುಬ್ಬಳ‍್ಳಿ : ಧಾರವಾಡ ಸಂಸದ ಪ್ರಲ್ಹಾದ ಜೋಶಿ ವಿರುದ್ದ ತವರು ನೆಲದಲ್ಲಿಯೇ ಆಕ್ರೋಶ ಚಿಗುರು ಒಡೆಯುತ್ತಿದೆ. ಅದಕ್ಕೆ ತುಪ್ಪ ಸುರವಿದವರು ಬಿಜೆಪಿಯವರೇ ಬೆಂಕಿ ಕಾಯಿಸಿಕೊಳ್ಳುತ್ತಿರುವವರು ಬಿಜೆಪಿಯವರೇ ಹೊರಗಿನವರು ಸುಮ್ಮನೇ ನಿಂತು ಮಜಾ ತೆಗೆದುಕೊಳ್ಳುತ್ತಿದ್ದಾರೆ. ಏಕೆಂದರೆ ಲೋಕಸಭಾ ಚುನಾವಣೆ ಇನ್ನೂ ದೂರ ಐತಿ ಅಲ್ಲಿಯವರೆಗೆ ಎಲ್ಲವೂ ಬಗೆಹರಿತೈತಿ ಎಂಬ ಉಡಾಫೆ ಮಾತು ಕೂಡ ಬಿಜೆಪಿಯವರದ್ದೆ. ಆದರೆ ಈ ಬಾರಿ ಧಾರವಾಡ ಸಂಸದ ಪ್ರಲ್ಹಾದ ಜೋಶಿಯವರಿಗೆ ದಾರಿ ಅಷ್ಟು ಸುಲಭವಾಗಿಲ್ಲ ಎಂಬುದು ಅವರು ಕೂಡ ಅರಿತುಕೊಳ್ಳಬೇಕಿದೆ. ಎಲ್ಲವೂ ಮೋದಿ, ಬಿಜೆಪಿ […]

ರಾಜ್ಯ

ಲೋಕಸಭಾ ಚುನಾವಣೆ : ರಾಜ್ಯದ 28 ಕ್ಷೇತ್ರಗಳಿಗೂ ಬಿಜೆಪಿ ಉಸ್ತುವಾರಿಗಳ ನೇಮಕ

ಬೆಂಗಳೂರು : 2019ರ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಬಿಜೆಪಿ 28 ಲೋಕಸಭಾ ಕ್ಷೇತ್ರಗಳಿಗೂ ಪ್ರಭಾರಿ ನೇಮಕ ಮಾಡಲಾಗಿದೆ. ಈ ಹಿಂದೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಹೊತ್ತಿದ್ದ ಬಿ. ಶ್ರೀರಾಮುಲು ಅವರಿಗೆ ಕೊಪ್ಪಳ ಉಸ್ತುವಾರಿ ನೀಡಿದರೆ, ಧಾರವಾಡ ಜಿಲ್ಲೆಯ ಉಸ್ತುವಾರಿ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಬಳ್ಳಾರಿ ಉಸ್ತುವಾರಿ ನೀಡಲಾಗಿದೆ. ಅದೇ ರೀತಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಹೊಂದಿದ್ದ ಕೆ.ಎಸ್. ಈಶ್ವರಪ್ಪ ಅವರಿಗೆ ಮೈಸೂರು ಮಡಿಕೇರಿ ಉಸ್ತುವಾರಿ ನೀಡಲಾಗಿದೆ. ಬೆಂಗಳೂರು ದಕ್ಷಿಣಕ್ಕೆ ಆರ್. […]

ರಾಜ್ಯ

ಸುಳ್ಳು ವಿಳಾಸ ನೀಡಿದ ಪ್ರಕರಣ : 8 ವಿಧಾನ ಪರಿಷತ್ ಸದಸ್ಯರ ವಿರುದ್ದ ದೂರು ದಾಖಲು

ಬೆಂಗಳೂರು : ಸುಳ್ಳು ವಿಳಾಸ ನೀಡಿ ಕೋಟ್ಯಾಂತರ ರೂಪಾಯಿ ಪ್ರಯಾಣ ಭತ್ಯೆ ಪಡೆದ ಆರೋಪದ ಮೇಲೆ ರಾಜ್ಯದ ಎಂಟು ವಿಧಾನಪರಿಷತ್ ಸದಸ್ಯರ ಮೇಲೆ ಇದೀಗ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸುವ ಉದ್ದೇಶದಿಂದ ಬೆಂಗಳೂರು ವಿಳಾಸ ನೀಡಿದ್ದ ಎಂಟು ವಿಧಾನ ಪರಿಷತ್ ಸದಸ್ಯರು ಪ್ರಯಾಣ ಭತ್ಯೆ ಪಡೆಯುವಾಗ ಮಾತ್ರ ಸುಳ್ಳು ವಿಳಾಸ ನೀಡಿ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ 8 […]

ರಾಜ್ಯ

84ನೇ ಕನ್ನಡ ಸಾಹಿತ್ಯ ಸಮ್ಮೇಳನ : ಸ್ಥಳ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿ

ಧಾರವಾಡ : ಧಾರವಾಡದಲ್ಲಿ ಜನೇವರಿ 4, 5 ಮತ್ತು 6 ರಂದು ಜರುಗಲಿರುವ ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುತ್ತಿರುವ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿನ ಕ್ರೀಡಾಂಗಣ, ಕಟ್ಟಡಗಳು ಹಾಗೂ ಇತರ ಸ್ಥಳಗಳನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಮಂಗಳವಾರ ಮಧ್ಯಾಹ್ನ ಕೃಷಿ ವಿಶ್ವವಿದ್ಯಾಲಯದ ಮುಖ್ಯ ಕ್ರೀಡಾಂಗಣಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆ, ಮಾಧ್ಯಮ ಕೇಂದ್ರ, ಸದಸ್ಯರ ನೋಂದಣಿ ಕೇಂದ್ರ, ಸಾಹಿತ್ಯ ಸಮ್ಮೇಳನ ಮಾಹಿತಿ ಕೇಂದ್ರ, ಊಟದ ಸ್ಥಳ, […]

ರಾಜ್ಯ

20 ಕೋಟಿ ಬಾಕಿ ಇಟ್ಟುಕೊಂಡಿರುವುದು ತೋರಿಸಿದರೆ ಸಚಿವ ಸ್ಥಾನದಲ್ಲಿ ಮುಂದುವರೆಯಲ್ಲ !

ಬೆಂಗಳೂರು : ಬೆಳಗಾವಿ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಸಮ್ಮೀಶ್ರ ಸರಕಾರದ ಪ್ರಭಾವಿ ಸಚಿವ ಮತ್ತು ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ಮಾಲೀಕರು ಆಗಿರುವ ಸಚಿವ ರಮೇಶ ಜಾರಕಿಹೊಳಿ ಮಂಗಳವಾರ ಬೆಂಗಳೂರಿನಲ್ಲಿಯೇ ಇದ್ದರೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರೈತರೊಂದಿಗೆ ನಡೆಸಿದ ಸಭೆಯಿಂದ ದೂರ ಉಳಿದಿದ್ದರು. ಸರಕಾರದ ಮೇಲೆ ಪ್ರಭಾವ ಬೀರಿದ್ದಾರೆ ಎಂಬ ತಪ್ಪು ಸಂದೇಶ ಹೋಗಬಾರದು ಎಂಬ ಕಾರಣಕ್ಕೆ ನಾನು ಸಭೆಯಿಂದ ದೂರ ಉಳಿದಿದ್ದೇನೆ. ಇಲ್ಲದಿದ್ದರೆ ಅದಕ್ಕೆ ಮತ್ತು ತಪ್ಪು ಅಪಾರ್ಥ ಕಲ್ಪಿಸುವ ಕೆಲಸ ನಡೆಯಬಾರದು […]

ರಾಜ್ಯ

ಹಾಗಿದ್ದರೆ ನಾನು ನಾಲಾಯಕ್ ಮುಖ್ಯಮಂತ್ರಿನಾ ಎಂದ ಕುಮಾರಸ್ವಾಮಿ !

ಬೆಂಗಳೂರು : ನಾಡಿನ ಮಹಿಳೆಗೆ ಅಪಮಾನ ಮಾಡಿದ್ದರೆ ಒಂದು ಸೆಂಕೆಂಡ್ ಕೂಡ ಈ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಬಯಸಲ್ಲ. ನಾನು ಪ್ರತಿಯೊಬ್ಬರಿಗೂ ಗೌರವ ಕೊಟ್ಟಿದ್ದೇನೆ. ನಾನು ಈ ಬಗ್ಗೆ ಬಹಿರಂಗ ಚರ್ಚೆಗೆ ಕೂಡ ಸಿದ್ದನಿದ್ದೇನೆ. ರೈತರು ನಡೆದುಕೊಳ್ಳವ ರೀತಿ ಸರಿಯಿಲ್ಲ ಎಂದು ರೈತ ಮಹಿಳೆಯ ವಿರುದ್ದವೇ ಸಿಎಂ ಕುಮಾರಸ್ವಾಮಿ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದರು. ಅವರು ಸೋಮವಾರ ಸಂಜೆ ವಿಧಾನಸೌಧದ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠೀಯ ಉದ್ದಕ್ಕೂ ರೈತರ ಪ್ರತಿಭಟನೆ ಬಗೆ, ಮಾಧ್ಯಮಗಳು ಸುದ್ದಿ ತೋರಿಸುವ ಹಪಾಹಪಿ, ಬಿಜೆಪಿಯ ಕುಮ್ಮಕ್ಕಿನ […]