ಹಾಸನ prajakiran.com : ಕಳೆದ ಎರಡು ದಿನಗಳಲ್ಲಿ ನಡೆದ ಎರಡು ಕೊಲೆ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಬೇಕಾಗಿದ್ದ ಪಿಎಸ್ ಐ ಒಬ್ಬರು ಕೆಲಸದ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಚನ್ನರಾಯಪಟ್ಟಣದ ಟೌನ್ ಸಬ್ ಇನ್ಸಪೆಕ್ಟರ್ ಕಿರಣ್ ಕುಮಾರ್ ಅವರೇ ಆತ್ಮ ಹತ್ಯೆ ಮಾಡಿ ಕೊಂಡು ನತದೃಷ್ಟಅಧಿಕಾರಿಯಾಗಿದ್ದಾರೆ. ದಕ್ಷತೆಗೆ ಹೆಸರಾಗಿದ್ದ ಇವರು ಮೂಲತಃ ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ಲಾಳಿನಕೆರೆ ಗ್ರಾಮದವರು. ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವಿದ್ದರಿಂದ ಇವರ […]
Tag: # sucide
ವಿದ್ಯುತ್ ಮಗ್ಗಕ್ಕೆ ನೇಣು ಹಾಕಿಕೊಂಡು ನೇಕಾರ ಆತ್ಮಹತ್ಯೆ ….!
ಬೆಂಗಳೂರು prajakiran.com : ವಿದ್ಯುತ್ ಮಗ್ಗಕ್ಕೆ ನೇಣು ಹಾಕಿಕೊಂಡು ನೇಕಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜ್ಯದ ರಾಜಧಾನಿಯಲ್ಲಿಯೇ ನಡೆದಿದೆ. ಕೊರೋನಾ ಲಾಕ್ ಡೌನ್ ನಿಂದ ಎದುರಾದ ಸಂಕಷ್ಟವನ್ನು ಎದುರಿಸಲಾಗದ ನೇಕಾರನೊಬ್ಬ ಸೀರೆ ನೇಯುವ ವಿದ್ಯುತ್ ಮಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಮೃತ ನೇಕಾರನನ್ನು 55 ವರ್ಷದ ಲಕ್ಷ್ಮೀಪತಿ ಎಂದು ಗುರುತಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ವಾಡ್೯ ನಂ 5ರ ಅಗ್ರಹಾರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಲಕ್ಷ್ಮಿಪತಿ […]
ಧಾರವಾಡದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು…..!
ಧಾರವಾಡ prajakiran.com : ಕರೋನಾ ಆತಂಕದಿಂದ ಸಂಕಷ್ಟಕ್ಕೆ ಸಿಲುಕಿರುವ ಕಂಪನಿಯಲ್ಲಿ ಎಲ್ಲಿ ತಮ್ಮ ನೌಕರಿಗೆ ಕುತ್ತು ಬರುತ್ತೋ ಎಂದು ಹೆದೆರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ. ಇಂತಹ ಮನಕಲುಕುವ ಘಟನೆ ಧಾರವಾಡದ ಮೆಹಬೂಬ್ ನಗರದಲ್ಲಿ ನಡೆದಿದೆ. ಮೃತರನ್ನು ಟಾಟಾ ಮಾರ್ಕೋಪೋಲೋ ಕಂಪನಿಯ ಉದ್ಯೋಗಿ ಮೌನೇಶ್ ವೀರಪ್ಪ ಪತ್ತಾರ (36) ಎಂದು ಗುರುತಿಸಲಾಗಿದೆ. ಇವರು ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನಅಸೂಟಿ ಗ್ರಾಮದವರು. ಟಾಟಾ ಮಾರ್ಕೋ ಪೋಲೋ ಕಂಪನಿಯ […]
ಪಿಯುಸಿಯಲ್ಲಿ ಫೇಲಾದ ವಿದ್ಯಾರ್ಥಿ ಕೆರೆಯಲ್ಲಿ ಬಿದ್ದು ಆತ್ಮಹತ್ಯೆ
ಕೋಲಾರ prajakiran.com : ಪಿಯುಸಿಯಲ್ಲಿ ಫೇಲಾದ ವಿದ್ಯಾರ್ಥಿಯೊಬ್ಬ ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ನರಸಾಪುರ ಹೋಬಳಿಯ ಬೆಳ್ಳೂರು ಗ್ರಾಮದ ವಿದ್ಯಾರ್ಥಿಯೊಬ್ಬ ಬುಧವಾರ ನರಸಾಪುರದ ಕೆರೆಯಲ್ಲಿ ಬಿದ್ದು ಸಾವಿಗೀಡಾಗಿದ್ದಾನೆ. ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದರಿಂದ ಬೆಳ್ಳೂರಿನ ರಮಾಮಣಿ ಕಾಲೇಜಿನಲ್ಲಿ ಓದುತ್ತಿದ್ದ ‘ಆದಿತ್ಯ ಚಕ್ರವರ್ತಿ’ ಎಂಬ ವಿದ್ಯಾರ್ಥಿ ದ್ವಿತೀಯ ಪಿಯುಸಿ ಆಂಗ್ಲ ಭಾಷಾ ವಿಷಯದಲ್ಲಿ ಅನುತೀರ್ಣ ಆಗಿದ್ದರಿಂದ ಮನನೊಂದು ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಈ ವಿದ್ಯಾರ್ಥಿಯು ಯಾವಾಗಲೂ ಓದಿನಲ್ಲಿ ಮುಂದೆ ಇದ್ದ, ಆದರೆ […]
ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಎಎಸ್‌ಐ…!
ಕೊಡಗು prajakiran.com : ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಒಂದೇ ತಿಂಗಳಿನಲ್ಲಿ ಗುಂಡು ಹೊಡೆದು ನಿವೃತ್ತ ಎಎಸ್ ಐ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಸೋಮವಾರಪೇಟೆ ಸಮೀಪದ ಮಾದೇಗೋಡು ಗ್ರಾಮದಲ್ಲಿ ಈ ರ್ದುಘಟನೆ ನಡೆದಿದೆ. ಮೃತರನ್ನು ಎಂ.ಎಸ್. ಈರಪ್ಪ (61) ಎಂದು ಗುರುತಿಸಲಾಗಿದ್ದು, ಇವರು ಕಳೆದ ಒಂದು ವರ್ಷದಿಂದ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿ ಸೇವೆ ಸಲ್ಲಿಸಿ, ಕಳೆದ ಮೇ ೩೦ ರಂದು ಸೇವಾ […]
ಆಲೂಗಡ್ಡೆ ಬೆಳೆ ನಾಶವಾದ್ದರಿಂದ ಮನನೊಂದ ರೈತ ಆತ್ಮಹತ್ಯೆ
ಬೆಳಗಾವಿ prajakiran.com : ಸತತವಾಗಿ ಸುರಿಯುತ್ತಿರುವ ಮಳೆಯಿಂದ ಆಲೂಗಡ್ಡೆ ಬೆಳೆ ನಾಶವಾಗಿದ್ದರಿಂದ ಮನನೊಂದ ರೈತ ಆತ್ಮಹತ್ಯೆಗೆ ಶರಣಾದ ಘಟನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಗೊಜಗೆ ಗ್ರಾಮದ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ರೈತನನ್ನು ಅಶೋಕ ಕೃಷ್ಣಾ ಭಾಮಣೆ (59) ಎಂದು ಗುರುತಿಸಲಾಗಿದೆ. ಮೃತ ರೈತ ಕೆಲ ದಿನಗಳ ಹಿಂದೆ ಮಾರುಕಟ್ಟೆಯಿಂದ ಆಲೂಗಡ್ಡೆ ಬೀಜ ತಂದು ಬಿತ್ತನೆ ಮಾಡಿದ್ದ. ಅಲ್ಲದೆ ಅದಕ್ಕೆ ಬೇಕಾದ ರಸಗೊಬ್ಬರ, ಔಷಧಿಗಾಗಿ ಸಾಕಷ್ಟು ವೆಚ್ಚ ಮಾಡಿದ್ದ ಎಂದು ತಿಳಿದುಬಂದಿದೆ. […]
ವಿಷ ಸೇವನೆ ಸೆಲ್ಫಿ ಮಾಡಿ ಆತ್ಮಹತ್ಯೆಗೆ ಶರಣಾದ ನಟಿ ಚಂದನಾ
ಬೆಂಗಳೂರು prajakiran.com : ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟಿಸಿದ್ದ ನಟಿ ಚಂದನಾ ವಿಷ ಸೇವನೆ ಸೆಲ್ಫಿ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಮೇ 28ರಂದೇ ಈ ಆತ್ಮಹತ್ಯೆ ನಡೆದಿದ್ದು, ಚಿಕಿತ್ಸೆ ಫಲಿಸದೆ ಸೋಮವಾರ ಅವರು ಸಾವನ್ನಪ್ಪಿದ್ದಾರೆ. ಆಕೆಯ ಸಾವಿಗೆ ಬಾಯ್ ಫ್ರೇಂಡ್ ದಿನೇಶ್ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನಟಿ ಚಂದನಾ ಹಾಗೂ ಖಾಸಗಿ ಕಂಪನಿ ನೌಕರ ದಿನೇಶ್ ಪರಸ್ಪರ ಪ್ರೀತಿಸಿದ್ದರು. ಇಬ್ಬರು ಜೊತೆಗೆ ಓಡಾಡಿದ್ದರು. ಅಲ್ಲದೆ, ಮದುವೆಯಾಗುವುದಾಗಿ ದೈಹಿಕ ಸಂಪರ್ಕ […]