ರಾಜ್ಯ

ಹುಬ್ಬಳ್ಳಿ-ಧಾರವಾಡದ ಮಹಾನಗರ ಪಾಲಿಕೆ ಮೇಯರ್, ಕಮಿಷನರ್ ಅಣಕು ಶವಯಾತ್ರೆ ನಡೆಸಿದ ನೀರು ಸರಬರಾಜು ನೌಕರರು….!

ಹುಬ್ಬಳ್ಳಿ-ಧಾರವಾಡದ ಮಹಾನಗರ ಪಾಲಿಕೆ ಮೇಯರ್, ಕಮಿಷನರ್ ಅಣಕು ಶವಯಾತ್ರೆ ನಡೆಸಿದ ನೀರು ಸರಬರಾಜು ನೌಕರರು….!

26ನೇ ದಿನವೂ ಮುಂದುವರಿದ ಸರದಿ ಉಪವಾಸ ಸತ್ಯಾಗ್ರಹ

ನೌಕರಿ ಕೊಡಿ ಇಲ್ಲವೇ ದಯಾಮರಣ ನೀಡಿ ರಾಷ್ಟ್ರಪತಿಗೆ ಮನವಿ ರವಾನೆ

ಪಾಲಿಕೆ, ಕೆ ಯು ಡಿ ಐ ಎಫ್ ಸಿ, ಎಲ್ ಆಂಡ್ ಟಿ ಕಂಪನಿ, ರಾಜ್ಯ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಬೊಬ್ಬೆ ಹೊಡೆದು ಆಕ್ರೋಶ

ಧಾರವಾಡ ಪ್ರಜಾಕಿರಣ. ಕಾಮ್ : 358 ನೀರು ಸರಬರಾಜು ನೌಕರರ ಮರು ನೇಮಕ ಹಾಗೂ 4 ತಿಂಗಳ ಸಂಬಳ ಬಿಡುಗಡೆಗೆ ಆಗ್ರಹಿಸಿ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಧಾರವಾಡ ಕಚೇರಿ ಆವರಣದಲ್ಲಿ ಕಳೆದ 26 ದಿನದಿಂದ ಹೋರಾಟ ನಡೆಸುತ್ತಿದ್ದರೂ ರಾಜ್ಯದ ಘನ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ಶುಕ್ರವಾರ ನೂರಾರು ನೌಕರರು ಪಾಲಿಕೆ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೇಯರ್ ಈರೇಶ ಅಂಚಟಗೇರಿ, ಕಮಿಷನರ್ ಗೋಪಾಲಕೃಷ್ಣ ಅವರ ಅಣಕು ಶವಯಾತ್ರೆ ನಡೆಸಿ, ದಾರಿಯುದ್ದಕ್ಕೂ ಮಡಕೆ ಹೊತ್ತು ಪಟಾಕಿ ಸಿಡಿಸಿ, ಚುರುಮುರಿ ತೂರಿ, ಬೊಬ್ಬೆ ಹೊಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಅನೇಕ ಮಹಿಳಾ ನೌಕರರು ಬಿಕ್ಕಿ ಬಿಕ್ಕಿ ಅತ್ತು ತಮ್ಮ ಅಸಮಾಧಾನ ತೊಡಿಕೊಂಡಿದ್ದು ಎಲ್ಲರ
ಗಮನ ಸೆಳೆಯಿತು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಮಾತನಾಡಿ, ನಮ್ಮ ನೂರಾರು ನೌಕರರ ಬದುಕು ಬೀದಿಗೆ ತಂದ ಹಿನ್ನೆಲೆಯಲ್ಲಿ ಪಾಲಿಕೆ ಮೇಯರ್ ಹಾಗೂ ಕಮಿಷನರ್ ಅಣಕು ಶವಯಾತ್ರೆ ನಡೆಸಲಾಗಿದೆ‌.

ರಾಜ್ಯ ಸರ್ಕಾರ ನಮ್ಮ 26 ದಿನಗಳ ಹೋರಾಟವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದರಿಂದ ನೌಕರರಿಗೆ ದಯಾಮರಣ ಕೊಡಿ ಎಂದು ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗಿದೆ‌.

ಇದಕ್ಕೂ ಜಗ್ಗದಿದ್ದರೆ ಮುಂದೆ ಕಾನೂನು ಹೋರಾಟವೊಂದೆ ದಾರಿ ಎಂದರು.

ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ ಮಾತನಾಡಿ, 26 ದಿನಗಳ ನಿರಂತರವಾದ ಹೋರಾಟಕ್ಕೂ
ಧಾರವಾಡ ಜಿಲ್ಲಾಡಳಿತ/ಮಹಾನಗರ ಪಾಲಿಕೆ ಯಾವುದೇ ಸ್ಪಂದನೆ ನೀಡದಿರುವುದು ನೋಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಸತ್ತು ಹೋಗಿದೆ ಎನೋ ಎಂಬ ಅನುಮಾನ ಕಾಡತೊಡಗಿದೆ‌.

ಇಷ್ಟೆಲ್ಲಾ ಹೋರಾಟ ಆದರೂ ಇವರು ಜಾಣಕುರುಡು ತೋರಿಸುತ್ತಿರುವುದು ನೋಡಿದರೆ ಇವರು
ಮೂರು ಬಿಟ್ಟವರಂತೆ ಕಾಣಿಸುತ್ತಿದೆ‌.
ಎಲ್ ಆಂಡ್ ಟಿ ಏಜೆಂಟ್ ರಂತೆ ವರ್ತಿಸುವ ದುಷ್ಟ ರಾಜಕಾರಣಿಗಳಿಗೆ ಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಗುಡುಗಿದರು‌.

ಇದೇ ವೇಳೆ ಪ್ರತಿಭಟನಾಕಾರರು ಮಹಾನಗರ ಪಾಲಿಕೆ, ಕೆ.ಯು.ಐ.ಡಿ.ಎಫ್.ಸಿ. ಮತ್ತು ನೀರು ಸರಬರಾಜು ನಿರ್ವಹಣೆ ಮಾಡುತ್ತಿರುವ ಎಲ್&ಟಿ ಕಂಪನಿಯ ಕಾರ್ಮಿಕ ವಿರೋಧಿ ನೀತಿ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ
ಜನ ಜಾಗೃತಿ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ನೀರು ಸರಬರಾಜು ನೌಕರರ ಸಂಘದ
ಮಹಾಂತೇಶ ಗೌಡರ, ಆನಂದ ಕಾಳಮ್ಮನವರ, ನಾಗೇಂದ್ರ ಹಮ್ಮಣಿ, ಬಸವರಾಜ ಮುಕ್ಕಲ, ಸರೋಜಾ ನಿಂಬಕ್ಕನವರ, ಅಯ್ಯಪ್ಪಯ್ಯ ಹಿರೇಮಠ, ಮಹೇಶ ಮೇಲಿನಮಠ, ಸೂರಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಮಹಾನಗರ ಪಾಲಿಕೆ ಆವರಣದಲ್ಲಿ ಪೊಲೀಸರ ಜೊತೆಗೆ ತೀವ್ರವಾದ ವಾಗ್ವಾದ ನಡೆಯಿತು.
ಉಪನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಶಂಕರಗೌಡ, ಗಂಗೇನಹಳ್ಳಿ, ಪಿ ಎಸ್ ಐ ಉಮೇಶ ಅವರು ಶವಯಾತ್ರೆ ಯ ಭಾವಚಿತ್ರವನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು‌.

ಇದಕ್ಕೆ ತೀವ್ರವಾದ ಆಕ್ಷೇಪ ವ್ಯಕ್ತಪಡಿಸಿದ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ, ಉಪಾಧ್ಯಕ್ಷ ನಾಗರಾಜ ಕಿರಣಗಿ ಇತ್ತೀಚೆಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ಶವಯಾತ್ರೆ ನಡೆಸಿದ ಬಿಜೆಪಿಯವರಿಗೆ ಹೇಗೆ ಅನುಮತಿ ನೀಡಿದಿರಿ. ನಮಗೇಕೆ ನೀಡಲ್ಲ.

ನಾವು ಮಾಡಿಯೇ ತಿರುತ್ತೇವೆ ಎಂದು ಬಿಗಿಪಟ್ಟು ಹಿಡಿದರು. ಇದರಿಂದಾಗಿ ಕೆಲಕಾಲ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.

ಬಳಿಕ ಪೊಲೀಸರು ಬಲವಂತವಾಗಿ ಇಬ್ಬರ ಭಾವಚಿತ್ರ ಕಿತ್ತರೂ, ಆನಂತರ ಶವಯಾತ್ರೆ ನಡೆಸಿದ ಪ್ರತಿಭಟನಾಕಾರರು ಘೋಷಣೆ ಕೂಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *