ರಾಜ್ಯ

ಲಿಂಗಾಯತ ಧರ್ಮ ಹೋರಾಟ ಮಾಡಿದವರಿಗೆ ಧನ್ಯವಾದಗಳು ಎಂದ ದಿಂಗಾಲೇಶ್ವರ ಶ್ರೀ

ಧಾರವಾಡ PRAJAKIRAN.COM : ಪ್ರೌಢದೇವರಾಯನ ಕಾಲ, ಶರಣರ ಕಾಲದಲ್ಲಿ ವೀರಶೈವ ಸಮಾಜ ಬಲಶಾಲಿ ಆಗಿತ್ತು. ನಮ್ಮ ಸಮಾಜ ಎಂದು ತುಳಿತಕ್ಕೆ ಒಳಗಾಗಬಾರದು ಎಂದು ಬಾಲೆಹೊಸೂರ ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಶ್ರೀಗಳು ಹೇಳಿದರು.

ಅವರು ಅಖಿಲ ಭಾರತ ವೀರಶೈವ ಮಹಾಸಭೆ ಅಂದು- ಇಂದು - ಮುಂದು ಎಂಬ ವಿಷಯದ ಕುರಿತು ಮಾತನಾಡಿದರು.

ತುಳಿತದಿಂದ ಎದ್ದು ನಿಲ್ಲಬೇಕು. ಪ್ರತ್ಯೇಕ ಧರ್ಮ ಹೋರಾಟದಲ್ಲಿ ನಾನು ಭಾಗವಹಿಸಿರಲಿಲ್ಲ. ಯಾವಾಗ ಹಾಲಗಲ್ ಕುಮಾರಸ್ವಾಮೀಗಳ ಬಗ್ಗೆ ವೈಯಕ್ತಿಕ ವಿಚಾರಗಳು ಮಂಡನೆ ಆದಾಗ ನಾನು ಕೂಡ ಮಾತನಾಡಲು ಶುರು ಮಾಡಿದೆ ಎಂದರು.

ಹಿಂದೆ ನಮ್ಮ ಸಮಾಜ ಬಹಳಷ್ಟು ಒಂದಾಗಿತ್ತು, ಮುಂದೆ ದುರ್ಬಲ ಆಗಿ ಸದ್ಯ ಎಚ್ಚರ ಗೊಂಡಿದೆ. ಇಂದು ಬದಲಾಗದಿದ್ದರೇ ಮುಂದೆ ಅಸ್ತಿತ್ವ ಉಳಿಯುವುದು ಸಾಧ್ಯವಿಲ್ಲ‌. ಎಲ್ಲ ಜಾತಿಗಳಲ್ಲಿ ಒಳಪಂಗಡ ಇದ್ದರು ಕೂಡ ಅವರು ತಮ್ಮ ಧರ್ಮವನ್ನು ಹೇಳುತ್ತರೆ. ಹಾಗೇ ನಾವು ಆಗಬೇಕು ಎಂದರು.

ತಮ್ಮನ್ನು ಸೇರಿ ಎಲ್ಲ ಮಠಾಧಿಪತಿಗಳು ನಿಷ್ಕ್ರಿಯರಾಗಿದ್ದಾರೆ, ಮಠದ ಬಗ್ಗೆ ಮಾತ್ರ ಚಿಂತಿ ಮಾಡುತ್ತಿದ್ದಾರೆ. ಬದಲಿಗೆ ಸಮಾಜದ ಬಗ್ಗೆ ವಿಚಾರ ಮಾಡಬೇಕು ಎಂದರು.

ಸ್ವಾಮೀಗಳು ಮಠ, ಕಂಪೌಂಡ ಕಟ್ಟುವ ಬದಲು ಸಮಾಜ ಕಟ್ಟಬೇಕು ಎಂಬುದನ್ನು ವಾರ‌ದ ಮಲ್ಲಪ್ಪ ಅವರನ್ನು ಪ್ರಸ್ತಾಪಿಸಿ ಹೇಳಿದರು.

ಮಹಾಸಭೆಗೆ ಎಲ್ಲವನ್ನು ತ್ಯಾಗ ಮಾಡಿದವರನ್ನ ಇಂದು ದೂಷಿಸಲಾಗುತ್ತಿದೆ‌. ವ್ಯಕ್ತಿಗಿಂತ ಕುಟುಂಬ ದೊಡ್ಡದ, ಕುಟುಂಬಕ್ಕಿಂತ ಸಮಾಜ ದೊಡ್ಡದು‌ ಹಾಗೇ ಸಮಾಜಕ್ಕಿಂತ ಧರ್ಮ ದೊಡ್ಡದು. ಧರ್ಮಕ್ಕೆ ಸಂಕಟ ಬಂದಾಗ ಸರ್ವಸ್ವ ತೊರೆದು ಧರ್ಮಕ್ಕಾಗಿ ನಿಲ್ಲಬೇಕು.

ಕೆಲ ಕಾಲ ಪಕ್ಷ ಸಮಾಜ ಆಳಿದರೇ, ಇನ್ನೂ ಕೆಲ ಸಾರಿ ಸಮಾಜವೇ ಪಕ್ಷವನ್ನ ಆಳಿದೆ. ಮಹಾಸಭೆ ಮತ್ತು ಮಠ ಒಂದೇ ನಾಣ್ಯದ ಎರಡು ಮುಖಗಳು ಇವು ಎಂದು ದೂರಾಗವಾರದು. ನಾವು ರೈಲ್ವೇ ಟ್ಯಾಕ್ ಆಗಬೇಕು ಎಂದರು.

ಹಿಂದೆ ಭೂಮಿ ಕೊಡುವ ಭಕ್ತರಿದ್ದರು, ಅದನ್ನು ತೆಗೆದುಕೊಂಡು ಒಳ್ಳೆಯ ಕೆಲಸ ಮಾಡುವ ಶ್ರೀಗಳಿದ್ದರು. ಈಗ ಏನಾಗಿದೆ ಎಂಬುದನ್ನು ನೀವೆ ವಿಚಾರ ಮಾಡಿ. ಸದ್ಯ ಮಠಗಳ ಆಸ್ತಿ ಕೂಡ ಮಾರಾಟ ಆಗಿವೆ ಎಂದು ದೂರಿದರು.

ಶಿಕ್ಷಣ ಭಲಿಷ್ಠ ಇದ್ದಲ್ಲಿ ಸಮಾಜ ಗಟ್ಟಿಯಾಗಿ ಬೆಳೆಯುತ್ತೆ. ಮಠದಲ್ಲಿ ಕುಂತ ಸ್ವಾಮಿ ಅಜ್ಞಾನಿ ಆದರು, ಮಠಕ್ಕೆ ಹೋದ ಭಕ್ತರು ಸ್ವಾರ್ಥಿಗಳಾದರು.

ನಂತರ ಹೋಗಳಿಕೆ, ಆಮೀಷಗಳಿಗೆ ಮರುಳಾಗಿ ಮಠದ ಆಸ್ತಿ ಮಾರಿಕೊಳ್ಳುವಂತಾಯಿತು.‌ ಮಠಕ್ಕೆ ದಾನ ನೀಡುವ ಭಕ್ತರು ಆಸ್ತಿಯನ್ನು ಮಾರಾಟ ಮಾಡುವ ಹಕ್ಕು ಮಠಾಧೀಶರಿಗೆ ನೀಡಬಾರದು ಎಂದರು.

ನಮ್ಮ ಸಮಾಜದವರು ಎಲ್ಲರೊಂದಿಗೂ ಅನ್ಯೋನ್ಯವಾಗಿರಿ ಆದರೆ ಧರ್ಮ ಬಿಡಬೇಡಿ. ಅಂದರೇ ಮಾತ್ರ ಅಂದು, ಇಂದು, ಮುಂದು ಎಂಬುದಕ್ಕೆ ಬೆಲೆ ಬರುತ್ತದೆ.

ಹಿಂದಿನ ಹೆಜ್ಜೆ ತಿಳಿದು ಪದಾಧಿಕಾರಿಗಳು ಮುಂದಿನ ಹೆಜ್ಜೆ ಇಡಬೇಕು. ಇಂದು ಸಮಾಜ ಒಡೆದು ಹೋಗುತ್ತಿದೆ . ಪದಾಧಿಕಾರಿಗಳು ಇನ್ನು ಮುಂದೆ ಶಿಬಿರಗಳನ್ನು ಮಾಡಿ ನಮ್ಮ ಆಚಾರ ವಿಚಾರ ಕಲಿಸಬೇಕು‌.

ನಮ್ಮ ಪೈಕಿ ಸ್ವಾಮಿ ಯಾರು ಆಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನೀತಿಯಿಂದ ಸ್ವಾಮಿಗಳಾಗಬೇಕು , ಜಾತಿಯಿಂದ ಅಲ್ಲ‌. ಯಾರ ಬೇಕಾದರೂ ಸ್ವಾಮಿಗಳಾಗಿ ಆದರೇ ಸ್ವಾಮಿ ಆಗಿ ಜಾತಿ ಮಾಡಬೇಡಿ ಎಂದರು.

ವೀರಶೈವ ಮಹಾಸಭಾ ಪದಾಧಿಕಾರಿಗಳು, ಸ್ವಾಮಿಗಳು ಆದಷ್ಟು ಬೇಗ ಎಚ್ಚರಗೊಂಡು ಒಂದಾಗದಿದ್ದರೇ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ.

ಆದಷ್ಟು ಬೇಗ ಒಂದಾಗಿ ಸಮಾಜವನ್ನು ಎತ್ತುವ ಕಾರ್ಯ ಮಾಡಬೇಕು. ಗುರು- ವಿರಕ್ತರು ಸ್ವ ಪ್ರತಿಷ್ಠೆಗಾಗಿ ಸಮಾಜ ಬಲಿ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಇವರಿಗೆ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಅಗತ್ಯ ಚಾಟಿ ಏಟು ನೀಡುವ ಮೂಲಕ ಜಾಗೃತಗೊಳಿಸಬೇಕಿದೆ ಎಂದರು.

ಲಿಂಗಾಯತ ಧರ್ಮ ಹೋರಾಟ ಮಾಡಿದವರಿಗೆ ಧನ್ಯವಾದಗಳು. ಆ ಹೋರಾಟದಿಂದ ನಾವು ಕೂಡ ಎಚ್ಚರಗೊಂಡವಿ ಜತೆಗೆ ಯಾರ ಯಾರ ಹೇಗೆ, ಅವರ ಮಾತು ಅರ್ಥಾ ಆಯಿತು ಎಂದು ದಿಂಗಾಲೇಶ್ವರ ಶ್ರೀಗಳು ತಿಳಿಸಿದರು.

Please follow and like us:

Leave a Reply

Your email address will not be published. Required fields are marked *