ಅಪರಾಧ

ಬಾವಿಗೆ ಬಿದ್ದು ತಾಯಿ, ಇಬ್ಬರು ಮಕ್ಕಳ ದಾರುಣ ಸಾವು

ಚಿಕ್ಕಬಳ್ಳಾಪುರ : ಬಟ್ಟೆ ತೊಳೆಯಲು ಹೋದ ತಾಯಿ ಜೊತೆಗೆ ಹೋಗಿದ್ದ ಇಬ್ಬರು ಪುಟ್ಟ ಕಂದಮ್ಮಗಳು ಬಾವಿ ಬಿದ್ದು ಸಾವನ್ನಪ್ಪಿದ್ದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರದ ತಿಪ್ಪೇನಹಳ್ಳಿ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದ್ದು, ತಾಯಿ ವಿಜಯಾ (30), ಅಜಯ್ (10) ಧನಲಕ್ಷ್ಮಿ (8) ಸಾವನ್ನಪ್ಪಿದ್ದ ರ್ದುದೈವಿಗಳು.

ಬಟ್ಟೆ ತೊಳೇಯಲು ಹೋದ ಸಂದರ್ಭದಲ್ಲಿ ಮಗಳು ಧನಲಕ್ಷ್ಮಿ ಬಾವಿಗೆ ಬಿದ್ದಿದ್ದಾಳೆ. ಆಕೆಯನ್ನು ರಕ್ಷಿಸಲು ಆಕೆಯ ಅಣ್ಣ ಅಜಯ್ ತೆರಳಿದ್ದಾನೆ. ಆಗ ಇಬ್ಬರು ಮಕ್ಕಳನ್ನು ರಕ್ಷಿಸಲು ತಾಯಿ ಕೂಡ ತೆರಳಿದ್ದಾಳೆ.

ಅವರ ರಕ್ಷಣೆಗೆ ಹೋದಾಗ ನೀರಿನಲ್ಲಿ ಮುಳಗಿ ಮೂವರು ಸಾವನ್ನಪ್ಪಿದ್ದಾರೆ. ತಂಗಿಯನ್ನು ರಕ್ಷಿಸಲು ಅಣ್ಣ ಹೋಗಿದ್ದ, ಮಕ್ಕಳಿಬ್ಬರನ್ನು ರಕ್ಷಿಸಲು ತಾಯಿ ಹೋಗಿದ್ದಾರೆ. ಹೀಗಾಗಿ ಒಂದೇ ಕುಟುಂಬದ ಮೂವರನ್ನು ಬಾವಿ ಆಹುತಿ ಪಡೆದಿದೆ.

ಈ ಬಾವಿಗೆ ತಡೆಗೋಡೆ ಇಲ್ಲದ ಪರಿಣಾಮ ದುರಂತ ಸಂಭವಿಸಿದೆ. ಈ ಬಾವಿ ನೀರಿಲ್ಲದೆ, ಬತ್ತಿ ಹೋಗಿತ್ತು. ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಬಾವಿ ತುಂಬಿತ್ತು. ತಾಯಿ ಮಕ್ಕಳಿಬ್ಬರ ಸಾವಿಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಚಿಕ್ಕಬಳ್ಳಾಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು, ತನಿಖೆ ಮುಂದುವರೆದಿದೆ.

Please follow and like us:

Leave a Reply

Your email address will not be published. Required fields are marked *