ರಾಜ್ಯ

ಇಬ್ಬರು ಭ್ರಷ್ಟ ಅಧಿಕಾರಿಗಳು ಎಸಿಬಿ ಬಲೆಗೆ

ಹುಬ್ಬಳ್ಳಿ PRAJAKIRAN.COM : ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಗೆ ಇಬ್ಬರು ಭ್ರಷ್ಟರು ಬಲೆಗೆ ಬಿದ್ದಿದ್ದಾರೆ.

ಎಜಿಎಂ ಜಿ. ಮಲ್ಲಪ್ಪ, ಬಿ.ಜಿ. ಗೋನಾಳ ಅವರೇ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳಾಗಿದ್ದಾರೆ.

ಜಿ.ಮಲ್ಲಪ್ಪ, ಹುಬ್ಬಳ್ಳಿಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿದ್ದು, ಬಿ.ಜಿ. ಗೋನಾಳ, ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದರು.

ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರೋ ಕಚೇರಿಯಲ್ಲಿ ಶ್ರೀನಿವಾಸ ಅನ್ನುವವರಿಂದ ಲಂಚ ಸ್ವೀಕರಿಸುತ್ತಿದ್ದಾಗ ಬಲೆಗೆ ಬಿದ್ದಿದ್ದಾರೆ.

ಶ್ರೀನಿವಾಸ್ ಅವರು ಗದಗ ಮೂಲದ ಕೈಗಾರಿಕೋದ್ಯಮಿ ಆಗಿದ್ದು,
ಗದಗ್ ನಲ್ಲಿ ಕೈಗಾರಿಕೆಗೆ ನಿವೇಶನ ನೀಡಲು ಲಂಚದ ಬೇಡಿಕೆ ಇಟ್ಟಿದ್ದರು.

ಒಂದು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ ಈ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಲು ಶ್ರೀನಿವಾಸ ಎಸಿಬಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈ ಗೊಂಡ ಎಸಿಬಿ ಮುಂಗಡವಾಗಿ ೫೦ ಸಾವಿರ ರೂ. ಲಂಚ ನೀಡುವಾಗ ದಾಳಿ ನಡೆಸಿ ಖೆಡ್ಡಾಕ್ಕೆ ಕೆಡವುವಲ್ಲಿ ಯಶಸ್ವಿಯಾಗಿದೆ.

ಎಸಿಬಿ ಡಿವೈಎಸ್ಪಿ ವಾಸುದೇವ ನೇತ್ರತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಎಸಿಬಿ ಕಾರ್ಯಾಚರಣೆಗೆ ಸಣ್ಣ ಕೈಗಾರಿಕಾ ಉದ್ಯಮಿಗಳು ಪ್ರಶಂಸೆ ವ್ಯಕ್ತಪಡಿಸಿದರು.

Please follow and like us:

Leave a Reply

Your email address will not be published. Required fields are marked *