ಅಪರಾಧ

ಕಾಡು ಪ್ರಾಣಿಗಳ ಬೇಟೆಗೆ ಯತ್ನಿಸಿದ ಒಬ್ಬನ ಬಂಧನ

ಕಲಬುರಗಿ Prajakiran.com : ಕಾಡು ಪ್ರಾಣಿಗಳ ಬೇಟೆ ಆಡಲು ಹೊಂಚು ಹಾಕಿ ಕುಳಿತ್ತಿದ್ದ ಒಬ್ಬನನ್ನು ಬಂಧಿಸಿದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ನಡೆದಿದೆ.

ತೇಲ್ಲೂರ ಸೀಮಾಂತರದಲ್ಲಿ ಎಂಟು ಮಂದಿ ಕಾಡು ಪ್ರಾಣಿಗಳ ಬೇಟೆ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಸ್ಥಳೀಯರು ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಹುಣಚಿರಾಯ (ಕೇಶವ) ಮೋಟಗಿ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು.

ಈ ವಿಷಯವನ್ನು ಡಿ, ಎಫ್,ಒ ಕಲಬುರ್ಗಿ ಹಾಗೂ ಆಳಂದ ಆರ್,ಎಫ್,ಒ ಅವರಿಗೆ ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.

ಆಳಂದ ತಾಲೂಕಿನ ಆರ್,ಎಫ್ಒ. ಜಗನ್ನಾಥ ಕೋರಳ್ಳಿ , ಉಪ ಆರ್,ಎಫ್ಒ.‌ ಸಂತೋಷ ಕುಮಾರ್ ನಿಪ್ಪಾಣಿ ಮತ್ತು ಅರಣ್ಯ ಸಿಬ್ಬಂದಿ ಸಿದ್ರಾಮ ಕುಸೂರ. ಇವರು ಡಿ,ಎಫ್,ಒ ಶ್ರೀ ಮತಿ ವಾನತಿ, ಎಂ,ಎಂ. ಹಾಗೂ ಎಸಿಎಫ್ ಬಾಬುರಾವ್ ಪಾಟೀಲ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗೆ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಡು ಪ್ರಾಣಿಗಳ ಬೇಟೆಗೆ ಬಳಸಿದ ಎರಡೂ ಬಲೆಗಳು ಸಮೇತ ಆರೋಪಿ ಸಂಜು ತಂದೆ ಸೋಮಲು ಚೌವಾಣ್ ಸಾ. ಗೋಳಾ (ಬಿ) ಬಂಧನ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಇನ್ನುಳಿದವರು ಅರಣ್ಯ ಇಲಾಖೆ ಸಿಬ್ಬಂದಿಯನ್ನು ನೋಡಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *