ರಾಜ್ಯ

ಮಲಪ್ರಭಾ ಕಾಲುವೆಗೆ ತಕ್ಷಣ ನೀರು ಬಿಡಲು ಎನ್ ಹೆಚ್. ಕೋನರಡ್ಡಿ ಆಗ್ರಹ

ಧಾರವಾಡ : ಹಿಂಗಾರು ಬೆಳೆ ಬೆಳೆಯಲು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕಾಲುವೆಗಳಿಗೆ ತಕ್ಷಣವೇ ನೀರು ಬಿಡಬೇಕು ಎಂದು ನವಲಗುಂದ ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಎನ್.ಹೆಚ್. ಕೋನರಡ್ಡಿ ಆಗ್ರಹಿಸಿದ್ದಾರೆ.

ಈ ಕುರಿತು ಧಾರವಾಡ ಜಿಲ್ಲಾಧಿಕಾರಿಗಳನ್ನು ನೂರಾರು ರೈತರೊಂದಿಗೆ ಭೇಟಿ ಮಾಡಿ ಮಾತುಕತೆ ನಡೆಸಿ, ಮನವಿ ಸಲ್ಲಿಸಿದರು.

ಮಲಪ್ರಭಾ ಡ್ಯಾಂ ನಲ್ಲಿ ಒಟ್ಟು 26 ಟಿ.ಎಂ.ಸಿ ನೀರಿದ್ದು, ಅದರಲ್ಲಿ 22.27 ಲಭ್ಯತೆಯಿದ್ದು, ಕುಡಿಯುವ ನೀರಿಗಾಗಿ 9 ಟಿ.ಎಂ.ಸಿ. ಕಾಯ್ದಿರಿಸಿ, ಉಳಿದ 13.27 ಟಿಎಂಸಿ ನೀರನ್ನು ಕಾಲುವೆ ಮುಖಾಂತರ ಹರಿಸಬೇಕು. ಅದನ್ನು ರೈತರು ತಮ್ಮ ಹಿಂಗಾರು ಬೆಳೆ ಬೆಳೆಯಲು ಉಪಯೋಗಿಸಲು ಅನುಕೂಲವಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು.

ತಕ್ಷಣವೇ ಮಲಪ್ರಭಾ ನೀರು ಬಳಕೆದಾರರ ಮಹಾಮಂಡಳದ ಸಭೆ ಕರೆದು ನೀರಾವರಿ ಉಪಯೋಗಕ್ಕಾಗಿ ನೀರು ಬಿಡುಗಡೆ ಮಾಡುವ ಕುರಿತು ತುರ್ತು ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಾನುವಾರುಗಳಿಗೆ ಹೊಟ್ಟು, ಮೇವು ಕೊರತೆ ಎದುರಾಗುವ ಹಿನ್ನೆಲೆಯಲ್ಲಿ ರೈತರ ಜಮೀನುಗಳಿಗೆ ನೀರು ಹರಿಸುವ ತುರ್ತು ಅಗತ್ಯವನ್ನು ಮನಗಂಡು ತಕ್ಷಣ ರೈತರ ಜಮೀನುಗಳಿಗೆ ಕಾಲುವೆ ಮುಖಾಂತರ ನೀರು ಬಿಡಬೇಕೆಂದು ಮಾಜಿ ಶಾಸಕ ಕೋನರಡ್ಡಿ ಅವರು ಒತ್ತಾಯಿಸಿದರು

ಶೀಘ್ರದಲ್ಲಿಯೇ ಮಲಪ್ರಭಾ ಕಾಲುವೆಗೆ ನೀರು ಹರಿಯಲಿದ್ದು, ರೈತರು ಯಾವುದೇ ಕಾರಣಕ್ಕೂ ಆತಂಕ ಪಡಬಾರದು ಎಂದು ನವಲಗುಂದ ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಎನ್.ಹೆಚ್. ಕೋನರಡ್ಡಿ ಅವರು ಮನವಿ ಮಾಡಿದ್ದಾರೆ.

Please follow and like us:

Leave a Reply

Your email address will not be published. Required fields are marked *