ಹುಬ್ಬಳ್ಳಿ : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ಅಮಿತ್ ಬದ್ದಿಗೂ ಯಾವುದೇ ಸಂಬಂಧವಿಲ್ಲ ಎಂದು ಬಂಧೀತ ಅಮಿತ್ ತಾಯಿ ಜಯಶ್ರೀ ಹಾಗೂ ಪತ್ನಿ ಅಂಜಲಿ ಕಣ್ಣೀರು ಹಾಕಿದ್ದಾರೆ.
ಅವರು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶೀಸಿ ಮಾತನಾಡಿ, ಗೌರಿ ಲಂಕೇಶ್ ಸಹೋದರಿ ಕವಿತಾಗೆ ಪತ್ರ ಬರೆಯಲಾಗಿದ್ದು, ಅವನ ಬಿಡುಗಡೆಗೆ ಅಗತ್ಯ ಸಹಕಾರ ನೀಡುವಂತೆ ಕೋರಿದ್ದಾರೆ.
ಎಸ್ ಐಟಿ ಅಮಾಯಕರ ಬಂಧನ ಮಾಡಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ ಅವರು ಇದರಿಂದ ನಮಗೆ ಮಾನಸಿಕ ಆಘಾತವಾಗಿದೆ,ಸಮಾಜದಲ್ಲಿ ತಲೆ ಎತ್ತಿ ಓಡಾಡಲು ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಕವಿತಾ ಲಂಕೇಶ್ ಅವರು ಗೌರಿಯ ಸಹೋದರಿಯಾಗಿದ್ದು, ಮಾನವೀಯತೆಯ ಆಧಾರದ ಮೇಲೆ ಸಹಕಾರ ನೀಡಲು ಪತ್ರ ಬರೆದಿದ್ದೇವೆ ಎಂದರು.
ಬೆಂಗಳೂರು : ಬಿಜೆಪಿ ನಾಯಕರು ಇನ್ನೂ ಆಪರೇಶನ್ ಕಮಲದಲ್ಲಿ ನಿರತರಾಗಿದ್ದು, ಯ್ಯಾರಾರು ಏನೇನು ಕೆಲಸ ಮಾಡುತ್ತಿದ್ದಾರೆ ಎಂದು ಗೊತ್ತಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಹೊಸ ಬಾಂಬ್ ಸಿಡಿಸಿದ್ದಾರೆ. ಅವರು ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆಪರೇಶನ್ ಕಮಲ ಇನ್ನೂ ನಿಂತಿಲ್ಲ. ಅದು ಮುಂದುವರೆದಿದೆ ಎಂದು ಬಿಜೆಪಿ ಮೇಲೆ ಗಂಭೀರ ಆಪಾದನೆ ಮಾಡಿದ್ದಾರೆ. ಆ ಐದು ಜನಕ್ಕೆ ಬೇರೆ ಕೆಲಸನೇ ಇಲ್ಲ. ಅವರು ಆಪರೇಶನ್ ಕಮಲದಲ್ಲಿ ನಿರತರಾಗಿದ್ದಾರೆ. ಸಮಯ ಬಂದಾಗ ಎಲ್ಲವನ್ನು ಬಿಚ್ಚಿಡುತ್ತೇನೆ ಎಂದು ಯಾರ […]
ಮಂಗಳೂರು : ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಸಿಲುಕಿ ಮನೆ ಮಠ ಕಳೆದುಕೊಂಡು ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ನೂರಾರು ಸಂತ್ರಸ್ತ್ರರ ಮಕ್ಕಳನ್ನು ಸಮೀಪದ ಸರಕಾರಿ ಶಾಲೆಗೆ ಸೇರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮದಲ್ಲಿರುವ ಶಾಲೆಯಲ್ಲಿ ಇದೀಗ ನೂರಾರು ಮಕ್ಕಳನ್ನು ತಾತ್ಕಲಿಕವಾಗಿ ದಾಖಲಿಸಲಾಗಿದೆ. ಮಕ್ಕಳು ಹೊಸ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದು, ಪೋಷಕರು ದುಗುಡದಲ್ಲಿದ್ದಾರೆ. ಕೆಲ ಮಕ್ಕಳು ಹೊಟ್ಟೆ ನೋವು, ಅನಾರೋಗ್ಯ ಹೇಳಿ ಶಾಲೆಗೆ ಚಕ್ಕರ್ ಹೊಡಿಯುತ್ತಿದ್ದಾರೆ ಎಂದು ಜೋಡಪಾಲ್ ನಿವಾಸಿಗಳು […]
ಧಾರವಾಡ : ಹಿರಿಯ ಪತ್ರಕರ್ತ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರು ಬೆಂಗಳೂರಿನ ಅನಕೃ ಪ್ರತಿಷ್ಠಾನ ಕೊಡಮಾಡುವ ಪ್ರತಿಷ್ಠಿತ ಅನಕೃ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು 50 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ. ಶನಿವಾರ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅನಕೃ ಪ್ರತಿಷ್ಠಾನದ ಸದಸ್ಯ ಶಾ.ಮಂ.ಕೃಷ್ಣರಾಯ ಅವರು, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬರುವ ಆಗಸ್ಟ್ ೧೨ ರಂದು ಭಾನುವಾರ ಹಮ್ಮಿಕೊಳ್ಳಲಾಗಿದೆ. ಇಷ್ಟು ದಿನ ‘ಅನಕೃ ನಿರ್ಮಾಣ್ ಪ್ರಶಸ್ತಿ’ ಎಂದು ನೀಡಲಾಗುತಿತ್ತು. ಇದೇ ಮೊದಲ ಬಾರಿಗೆ ಅನಕೃ […]