ಧಾರವಾಡ : ಧಾರವಾಡ 71ನಗರ ಘಟಕದ ಕಾರ್ಯದರ್ಶಿ ಮಂಜುನಾಥ ಹಿರೇಮಠ ಅವರ ಹುಟ್ಟು ಹಬ್ಬವನ್ನು 15 ಆಶಾ ಕಾರ್ಯ ಕರ್ತೆಯರಿಗೆ ಸನ್ಮಾನ ಮಾಡುವುದರ ಮೂಲಕಅರ್ಥಪೂರ್ಣವಾಗಿ ಆಚರಿಸಲಾಯಿತು.
ಧಾರವಾಡದ ಕಾಮನಕಟ್ಟಿ ವೀರಭದ್ರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಮಂಜುನಾಥ ಹಿರೇಮಠ ಗೆಳೆಯರ ಬಳಗದ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಾಜಿ ಶಾಸಕರಾದ ಎ.ಬಿ.ದೇಸಾಯಿ ಮಾತನಾಡಿ, ಕರೋನಾ ಸಂಕಷ್ಟದ ಸಂದರ್ಭದಲ್ಲಿ ದುಡಿದ ಆಶಾಕಾರ್ಯಕರ್ತೆಯರಿಗೆ ಸನ್ಮಾನಿಸುವ ಸಮಾಜ ಮುಖಿ ಕೆಲಸ ಇತರರಿಗೆ ಮಾದರಿಯಾದದ್ದು ಎಂದರು.
ಮಂಜುನಾಥ ಹಿರೇಮಠ ಗೆಳೆಯರ ಬಳಗ ಕಳೆದ ಹಲವು ವರ್ಷಗಳಿಂದ ಸಾಮಾಜಿಕವಾಗಿ, ಧಾರ್ಮಿಕವಾಗಿ ಮತ್ತು ಪರಿಸರ ಸ್ನೇಹಿ ಹತ್ತು ಹಲವು ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಕುಂದಗೋಳಮಠ,ರಾಜ್ಯ ಸಂಘಟನಾ ಕಾರ್ಯದರ್ಶಿ ಜಯತೀರ್ಥ ಕಟ್ಟಿ, ಹುಡಾ ಅಧ್ಯಕ್ಷರಾದ ನಾಗೇಶ ಕಲಬುರ್ಗಿ, ಬಿಜೆಪಿ ಮುಖಂಡರಾದ ತವನಪ್ಪಾ ಅಷ್ಟಗಿ, ಸುನೀಲ ಮೋರೆ, ರಾಜೇಶ್ವರಿ ಅಳಗವಾಡಿ,ಮತ್ತು9 ನೇ ವಾರ್ಡ್ ನ ಗುರು ಹಿರಿಯರು ಸ್ನೇಹಿತರು ಭಾಗವಹಿಸಿದ್ದರು.
