ಹುಬ್ಬಳ್ಳಿ prajakiran.com : ಹುಬ್ಬಳ್ಳಿಯ ಗಲಾಟೆ ವಿಚಾರದಲ್ಲಿ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟು ನೋಡಬೇಕು.
ಶಾಸಕಾಂಗ, ಕಾರ್ಯಾಂಗಕ್ಕೆ ಕೈ ಹಾಕಿದ್ರೆ ಇದೆಲ್ಲ ಆಗುತ್ತದೆ ಎಂದು ನಿವೃತ್ತ ಪೋಲಿಸ ಅಧಿಕಾರಿ ಹಾಗೂ ಆಪ್ ಮುಖಂಡ ಭಾಸ್ಕರ -ರಾವ್ ಹೇಳಿದರು.
ಧಾರವಾಡದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೋಲಿಸ ಕಮಿಷನರ್, ಪೋಲಿಸ ಇನ್ಸ್ಪೆಕ್ಟರ್ ಗಳನ್ನು ಎಂಎಲ್ ಎ, ಮಿನಿಸ್ಟರ್ ನಾನೇ ನೇಮಿಸುವ ಕೆಲಸ ಮಾಡುತ್ತೇನೆ.
ನನಗೆ ಬೇಕಾದವರಿಗೆ ಪೋಸ್ಟಿಂಗ್ ಕೊಡಿಸುತ್ತೇನೆ ಎಂದರೆ ಹೇಗೆ? ಪೋಲಿಸ ಇಲಾಖೆಯೊಂದು ಶಿಸ್ತಿನ ಇಲಾಖೆ. ಮುಖ್ಯಮಂತ್ರಿ, ಗೃಹಮಂತ್ರಿ ಮೇಲೆ ಒತ್ತಡ ಹಾಕಿ ಲಕ್ಷಾಂತರ, ಕೋಟ್ಯಾಂತರ ರೂಪಾಯಿ ಪೋಲಿಸ ಇನ್ಸ್ಪೆಕ್ಟರ್ ಗಳಿಂದ ಪಡೆದುಕೊಂಡು ಬೇಕಾದವರಿಗೆ ಪೋಸ್ಟಿಂಗ್ ತೆಗೆದುಕೊಟ್ಟರೇ ಪೋಲಿಸ ಅಧಿಕಾರಿಯ ನಿಷ್ಠೆ ಹೇಗೆ ಇರುತ್ತದೆ ಎಂದು ಪ್ರಶ್ನೆ ಮಾಡಿದರು.
ಈ ರೀತಿಯಾಗಿ ಅಧಿಕಾರಕ್ಕೆ ಬಂದ ಪೋಲಿಸ ಅಧಿಕಾರಿಯ ನಿಷ್ಠೆ ಎಂಎಲ್ಎ, ಜಿಲ್ಲಾ ಉಸ್ತುವಾರಿ ಸಚಿವರ ಹತ್ತಿರ ಇರುತ್ತೆ. ಅವರು ಬರೋವಾಗ ಹೋಗೋವಾಗ ಸೆಲ್ಯೂಟ್ ಹೊಡೆಯುತ್ತಾ ಕುಳಿತುಕೊಂಡಿರುತ್ತಾರೆ.
ಅಂತವರು ಪೋಲಿಸ ಕಮಿಷನರ್ ಮಾತು ಕೇಳತ್ತಾರಾ? ಮೊದಲೇ ಪೋಲಿಸ ಇಲಾಖೆಯಲ್ಲಿ ನೂರೆಂಟು ಸಮಸ್ಯೆಗಳಿರುವಾಗ ಅಧಿಕಾರಿಗಳು ಜನರ ಮಾತನ್ನು ಕೇಳೋಕ್ಕೆ ಪುರಸೋತು ಇದೀಯಾ ಎಂದು ಕಿಡಿಕಾರಿದರು.
ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ಸಮಾಜವನ್ನು ಜೋಡಣೆ ಮಾಡಲು ಬರುವುದಿಲ್ಲ. ಜನರ ಮುಗ್ದತೆ ಹಾಗೂ ವೈಮನಸ್ಸು ಬೆಳೆಸಿ ಅದನ್ನೇ ಬಂಡವಾಳ ಮಾಡಿಕೊಳ್ಳುತ್ತಾರೆ. ಇದರ ಲಾಭ ಪಡೆದುಕೊಳ್ಳತ್ತಾರೆ. ಇಂತಹ ನಾಯಕರನ್ನು ಇಟ್ಟುಕೊಂಡರೆ ಜನರಿಗೆ ಏನೂ ಲಾಭ ಎಂದು ಹರಿಹಾಯ್ದರು.
ನಾವೆಲ್ಲರೂ ಒಂದೇ ತಾಯಿ ಮಕ್ಕಳು. ಬೇರೆ ಬೇರೆ ಧರ್ಮ ಪಾಲಿಸಿ, ಬೇರೆ ಬೇರೆ ಜಾತಿಗಳಿದ್ದರು ಈ ಹಿಂದೆ ಈ ರೀತಿ ನಡೆಯುತ್ತಿತ್ತಾ ಆದರೆ ಇದೀಗ ಇಂತಹ ಪ್ರಚೋದನೆಗಳು ನಡೆಯುತ್ತಿವೆ. ಸರ್ಕಾರಕ್ಕೆ ಹಿಡಿತ ತಪ್ಪಿದೆ. ಆಗಅವರಿಗೆ ಯಾರು ಹೇಳೋರು, ಕೇಳೋರಿಲ್ಲ ಎಂಬಂತೆ ಆಗಿದೆ ಎಂದು ಹರಿಹಾಯ್ದರು.



