ಅಪರಾಧ

ತಾಯಿ,ಮಗ ಸೇರಿ ಮೂರು ಮಂದಿ ಸ್ಥಳದಲ್ಲೇ ಸಾವು

ಚಿತ್ರದುರ್ಗ : ಎರಡು ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ತಾಯಿ ಮಗ ಸೇರಿ ಮೂರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೋಟೆ ನಾಡು ಚಿತ್ರದುರ್ಗದಲ್ಲಿ ನಡೆದಿದೆ.

ಚಿತ್ರದುರ್ಗ ಹೊರವಲಯದ ಕ್ಯಾದಿಗೆರೆ ಸಮೀಪ ಈ ರ್ದುಘಟನೆ ನಡೆದಿದ್ದು, ಮೃತ ದುರ್ಧೈವಿಗಳನ್ನು ರಫೀಕ್ (26), ರಜೀಯಾ (50) ಹಾಗೂ ಸಿದ್ದ (25) ಎಂದು ಗುರುತಿಸಲಾಗಿದೆ.

ಮೃತರು ಚಿತ್ರದುರ್ಗ ನಗರದ ಕಾಮನಬಾವಿ ಬಡಾವಣೆ ನಿವಾಸಿಗಳಾಗಿದ್ದು, ಈ ಅಪಘಾತದಲ್ಲಿ ಒಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಅವನ ಗುರುತು ಪತ್ತೆಯಾಗಿಲ್ಲ.

ಮೃತರು ಸಂಬಂಧಿಕರ ವಿವಾಹ ಮುಗಿಸಿ ವಾಪಸ್ ಮರಡಿಹಳ್ಳಿಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Please follow and like us:

Leave a Reply

Your email address will not be published. Required fields are marked *