ಆರೋಗ್ಯ

ರಕ್ತದೊತ್ತಡಕ್ಕೆ ಮನೆ ಮದ್ದು

  • ಕೊತ್ತಂಬರಿ ಸೊಪ್ಪನ್ನು ನುಣ್ಣಗೆ ಅರೆದು ಒಂದು ಚಮಚ ಸೇವಿಸಿದರೆ ಸೊಗಸಾದ ನಿದ್ದೆ ಬರುತ್ತದೆ. ಹಸಿವು ಆಗುತ್ತದೆ. ಪಿತ್ತ, ಉಷ್ಣವು ಕಡಿಮೆಯಾಗುತ್ತದೆ. ವಾಕರಿಕೆ, ತಲೆ ಸುತ್ತುವುದು, ನಿಲ್ಲುತ್ತದೆ. ಬಿ.ಪಿ. ಕಡಿಮೆಯಾಗಲು ನೆರವಾಗುತ್ತದೆ.
  • ಬಾಳೆ ಗಡ್ಡೆಯನ್ನು ನುಣ್ಣಗೆ ಪುಡಿ ಮಾಡಿ ಒಂದು ಚಮಚದಷ್ಟು ಹಾಲಿನಲ್ಲಿ ಹಾಕಿಕೊಂಡು ಬೆಳಗ್ಗೆ ಹಾಗೂ ಸಂಜೆ ಕುಡಿದರೆ ತಂಪು. ರಕ್ತಸ್ರಾವ ತಗ್ಗುತ್ತದೆ. ಮೂತ್ರದೋಷವು ತಗ್ಗುತ್ತವೆ.
  • ಭೋಜನ ನಂತರ ಅಡಿಕೆಯ ಪುಡಿಗೆ ಬದಲಾಗಿ ಏಲಕ್ಕಿಯನ್ನು ಅಗಿಯುವ ಅಭ್ಯಾಸ ಮಾಡಿಕೊಂಡರೆ ರಕ್ತದೊತ್ತಡವನ್ನು ತಗ್ಗಿಸಲು ನೆರವಾಗುತ್ತದೆ.
  • ಸೇವಂತಿಗೆ ಹೂವನ್ನು ಒಣಗಿಸಿ ನುಣ್ಣಗೆ ಪುಡಿ ಮಾಡಿ ಅದನ್ನು ಸಂಗ್ರಹಿಸಿ ಇಟ್ಟುಕೊಳ್ಳಿ. ಸ್ವಲ್ಪ ಖಾರವಾಗಿರುತ್ತದೆ. ಆದರೆ ತಲೆ ಸುತ್ತುವುದು, ಪಿತ್ತ ದೋಷಗಳನ್ನು ಸರಿಪಡಿಸುತ್ತದೆ.
  • ಕಾಲು ತಣ್ಣಗಿರುವುದು, ಬಿ.ಪಿ. ಹೆಚ್ಚಾಗಿರುವುದರ ಲಕ್ಷಣಗಳಲ್ಲಿ ಇದು ಚೆನ್ನಾಗಿ ಕೆಲಸ ಮಾಡುತ್ತದೆ. ಅರ್ಧ ಚಮಚ ಜೊತೆ ಒಂದು ಚಮಚ ಜೇನು ಎರಡು ಹೊತ್ತು ಸೇವನೆ.
  • ಕೆಂಪಗೆ ಹುರಿದ ಜೀರಿಗೆಯ ಪುಡಿಯನ್ನು ದಿನವು ಅನ್ನಕ್ಕೆ ಹಾಕಿಕೊಂಡು ತಿಂದರೆ ತಲೆ ನೋವು ಕಡಿಮೆಯಾಗುತ್ತದೆ.
  • ರಕ್ತದಲ್ಲಿ ತಾಪವನ್ನು ನಿಯಂತ್ರಿಸಿ ರಕ್ತದೊತ್ತಡವನ್ನು ತಗ್ಗಿಸುತ್ತದೆ.
  • ವಾಮ (ಅಜವಾನ) ಹಾಗೂ ಜೀರಿಗೆಯನ್ನು ಸಮಾನವಾಗಿ ಬೆರೆಸಿಕೊಂಡು ಹುರಿದು ಪುಡಿ ಮಾಡಿ ತೆಗೆದುಕೊಂಡರೆ ಇನ್ನು ಒಳ್ಳೆಯದು.
  • ಪಚ್ಚಕರ್ಪೂರ, ಜಾಜಿಕಾಯಿ, ಜಾಪತ್ರೆ ಮೂರನ್ನು ತಲಾ ಐದು ಗ್ರಾಂಗಳಂತೆ ತೆಗೆದುಕೊಂಡು ನುಣ್ಣಗೆ ಪುಡಿ ಮಾಡಿ ಕಡಲೆ ಬೀಜದಷ್ಟು ಗಾತ್ರದಲ್ಲಿ ದಿನವು ಬೆಳಗ್ಗೆ ಹಾಗೂ ರಾತ್ರಿ ಒಂದು ಲೋಟ ಹಾಲಿನಲ್ಲಿ ಹಾಕಿಕೊಂಡು ಕುಡಿಯಬೇಕು.
  • ಇದು ತಂಪು ಉಂಟು ಮಾಡುವ ಪದಾರ್ಥಗಳು. 30 ದಿನ ಹೀಗೆ ಮಾಡಿದರೆ ಮೂತ್ರ ರೋಗ, ಹೊಟ್ಟೆಯ ನೋವನ್ನು ತಗ್ಗಿಸುತ್ತದೆ.
  • ಶಕ್ತಿಯನ್ನು ಕೊಡುತ್ತದೆ. ತಾಪವನ್ನು ತಗ್ಗಿಸುತ್ತದೆ. ಆಯಾಸ ನಿಶ್ಯಕ್ತಿಯನ್ನು ತಗ್ಗಿಸಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಾಹಿತಿ PRAJAKIRAN.COM : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು

Please follow and like us:

Leave a Reply

Your email address will not be published. Required fields are marked *