ಬೆಂಗಳೂರು : ರಾಜ್ಯದ ಸಮ್ಮೀಶ್ರ ಸರಕಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಸಮನ್ವಯತೆ ಸಾಧಿಸುವ ಉದ್ದೇಶದ ಹಿನ್ನಲೆಯಲ್ಲಿ ಶುಕ್ರವಾರ ಮಹತ್ವದ ಮೂರನೇ ಸಮನ್ವಯ ಸಮಿತಿ ಸಭೆ ನಡೆಯಿತು.
ಸೆಪ್ಟಂಬರ್ 2ನೇ ವಾರದಲ್ಲಿ ಖಾಲಿಯಿರುವ ಆರು ಸ್ಥಾನಗಳಿಗೆ ಸಚಿವರ ಹಾಗೂ 30 ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ, ಸಮನ್ವಯ ಸಮಿತಿ ಸಭೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೆಪಿಸಿಸಿ ಅಧ್ಯಕ್ಷರ ಸೇರ್ಪಡೆ ಕುರಿತು ಮಾತುಕತೆ ನಡೆಯಿತು ಎನ್ನಲಾಗಿದೆ.
ಸಭೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಡ್ಯಾನಿಶ್ ಅಲಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಡಿಸಿಎಂ ಡಾ. ಜಿ. ಪರಮೇಶ್ವರ ಸೇರಿ ಹಲವರು ಭಾಗವಹಿಸಿದ್ದರು.
ಎಲ್ಲರೂ ಒಟ್ಟಿಗೆ ಸೇರಿ ಸುಭದ್ರ ಸರಕಾರವನ್ನು ಮುನ್ನಡೆಸಿಕೊಂಡು ಹೋಗಲು ನಿರ್ಧರಿಸಿದರು. ಯಾವುದೇ ಊಹಾಪೋಹಗಳನ್ನು ಲೆಕ್ಕಿಸದೆ ಮುಂದುವರೆಸಿಕೊಂಡು ಹೋಗಲಾಗುವುದು ಎಂದರು.
ಬೆಂಗಳೂರು : ಐಟಿ ದಾಳಿ ಹಿನ್ನಲೆಯಲ್ಲಿ ಸಚಿವ ಡಿಕೆ ಶಿವಕುಮಾರ ಸೇರಿ ಇತರರಿಗೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಗುರುವಾರ ನ್ಯಾಯಾಲಯಕ್ಕೆ ಹಾಜರಾದ ಸಚಿವ ಡಿ.ಕೆ. ಶಿವಕುಮಾರ ಹಾಗೂ ಇತರರಿಗೆ ಐವತ್ತು ಸಾವಿರ ರೂಪಾಯಿ ಶ್ಯೂರಿಟಿ ಬಾಂಡ್ ಪಡೆದು ಮಧ್ಯಂತರ ಜಾಮೀನು ನೀಡುವ ಮೂಲಕ ಸದ್ಯಕ್ಕೆ ರಿಲೀಫ್ ನೀಡಿದೆ ಸರಕಾರಕ್ಕೆ ತೆರಿಗೆ ವಂಚನೆ ಹಾಗೂ ಕಾಂಗ್ರೆಸ್ ಹೈ ಕಮಾಂಡ್ ಗೆ ಹವಾಲಾ ಹಣ ತಲುಪಿಸಿದ ಗಂಭೀರ ಆರೋಪವನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ […]
ಬೆಂಗಳೂರು : ರಾಜ್ಯಾದ್ಯಂತ ಬೆಳಗ್ಗೆಯಿಂದ ನಡೆಯುತ್ತಿರುವ 105 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜ್ಯದ ಹಲವಡೆ ಗೊಂದಲ, ಗದ್ದಲ, ಗಲಾಟೆ ಹಾಗೂ ಕಾಂಗ್ರೆಸ್ ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿವೆ. ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ರಾಜ್ಯದ ಹಲವಡೆ ಮಾತಿನ ಚಕಮಕಿ, ಗದ್ದಲ ಎರ್ಪಟ್ಟಿದೆ. ವಾರ್ಡ್ ನಂ 28ರಲ್ಲಿ ಕಿರಿಕ್ ನಡೆದಿದೆ. ಮತದಾನ ಮಾಡಲು ಮತದಾರರು ವಿಳಂಬ ಮಾಡಿದ್ದಕ್ಕೆ ಗದ್ದಲ ಆರಂಭಗೊಂಡಿದ್ದು, ಇಬ್ಬರು ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಮೇಲೆ ಎರಡು ಪಕ್ಷದ ನಾಯಕರು […]
ಧಾರವಾಡ : ಮಕ್ಕಳ ತಜ್ಞ ಡಾ.ರಾಜನ್ ದೇಶಪಾಂಡೆ ಅವರಿಗೆ ಭಾರತೀಯ ವೈದ್ಯಕೀಯ ಸಂಘ ಕೊಡ ಮಾಡುವ 2017 ನೇ ಸಾಲಿನ ಬಿ ಸಿ ರಾಯ್ ಪ್ರಶಸ್ತಿ ಲಭಿಸಿದೆ. ಉತ್ತರ ಕರ್ನಾಟಕದ ಹಿರಿಯ ವೈದ್ಯರ ಪೈಕಿ ಒಬ್ಬರಾಗಿರುವ ಡಾ. ರಾಜನ್ ದೇಶಪಾಂಡೆ ಅವರಿಗೆ ವೈದ್ಯಕೀಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಲಭಿಸಿದೆ. ಪಶ್ಚಿಮ ಬಂಗಾಳದ ಮಾಜಿ ಸಿಎಂ ಭಾರತ ರತ್ನ ಬಿ ಸಿ ರಾಯ್ ಅವರ ನೆನಪಿಗಾಗಿ ಕೊಡಮಾಡುವ ಪ್ರಶಸ್ತಿ ದೇಶಪಾಂಡೆ ಅವರಿಗೆ ವೈದ್ಯಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿನ ಕೊಡುಗೆ […]