ರಾಜ್ಯ

ಕೈ ಕಮಲ ಬಿಬಿಎಂಪಿ ಸದಸ್ಯರ ನಡುವೆ ಮಾರಾಮಾರಿ

ಬೆಂಗಳೂರು : ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡಿದ್ದ ಪಕ್ಷೇತರ ಸದಸ್ಯರಾದ ರಮೇಶ್ , ದೇವದಾಸ ಹಾಗೂ ಆನಂದ ಅವರು ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಜೆಡಿಎಸ್ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಅವರು ಕೂಡ ಬಿಜೆಪಿಗೆ ಜೈ ಹೇಳಿದ್ದಾರೆ.

ಇದರಿಂದಾಗಿ ಬಿಬಿಎಂಪಿಯ ನಾಲ್ವರು ಸದಸ್ಯರು ಆಪರೇಶನ್ ಕಮಲಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಮಾರಾಮಾರಿ ನಡೆದಿದ್ದು, ಕೆಲ ಕಾಲ ಬಿಗುವಿನ ವಾತವರಣ ನಿರ್ಮಾಣವಾಯಿತು.

ಇದರಿಂದ ರೊಚ್ಚಿಗೆದ್ದ ಶಾಸಕ ಬೈರತಿ ಬಸವರಾಜ, ಸತೀಶ ರಡ್ಡಿ ಅವರು ಬಿಜೆಪಿಯ ಯಲಹಂಕ ಶಾಸಕರಾದ ವಿಶ್ವನಾಥ ಜೊತೆಗೆ ಮಾತಿನ ಚಕಮಕಿಗೆ ಇಳಿದರು. ಇದರಿಂದ ಕೆಲ ಕಾಲ ಸಭಾಂಗಣ ರಣಾಂಗಣವಾಯಿತು.

ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಜೆಡಿಎಸ್ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಅವರನ್ನು ಹಿಡಿದು ಎಳೆದಾಡಿದರು. ತಕ್ಷಣ ಎಚ್ಚೆತ್ತ ಬಿಜೆಪಿ ನಾಯಕರು ಅವರನ್ನು ರೂಮಿನಲ್ಲಿ ಕರೆದುಕೊಂಡು ಹೋಗಿ ಕುಡಿಸಿದರು.

Please follow and like us:

Leave a Reply

Your email address will not be published. Required fields are marked *