ಡಂಬಳ : ಗದಗ ಜಿಲ್ಲೆಯಲ್ಲಿ ಮಳೆ ಕೈಕೊಟ್ಟ ಪರಿಣಾಮ ಶೇಂಗಾ ಬೆಳೆ ಒಣಗಲು ಆರಂಭಿಸಲಾಗಿದೆ. ಇದು ರೈತರಲ್ಲಿ ಆತಂಕ ಹೆಚ್ಚಿಸಿದೆ. ದಿನನಿತ್ಯ ರೈತರು ಮುಗಿಲು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಡಂಬಳ ಗ್ರಾಮದ ರೈತ ಬಸಪ್ಪ ಹಾದಿಮನಿ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಭಾಗದ ರೈತರ ಪ್ರಮುಖ ಬೆಳೆಯಾದ ಶೇಂಗಾ, ಗೋವಿನಜೋಳ, ಸೂರ್ಯಕಾಂತಿ ಬಿತ್ತನೆ ಮಾಡಿ ಮೂರು ತಿಂಗಳಾದರೂ ಮಳೆರಾಯ ಕಣ್ಣು ತೆರೆಯುತ್ತಿಲ್ಲ. ಇದರಿಂದಾಗಿ ಶೇಂಗಾ ಬೆಳೆ ಒಣಗಿ ಬಳ್ಳಿಗಳು ಮುಗುಚುತ್ತಿವೆ. ಹೂವು, ಎಲೆಗಳು ಉದುರುತ್ತಿವೆ. ಈ ಬೆಳೆ ಎಂಟು ತಿಂಗಳ ಬೆಳೆಯಾಗಿದ್ದು, ಬಿತ್ತನೆ ಮಾಡಿ ಮೂರು ತಿಂಗಳಾದದರೂ ಇನ್ನೂ ಭೂಮಿ ಬಿಟ್ಟು ಮೇಲೆಕ್ಕೆ ಬೆಳೆದಿಲ್ಲಾ. ರೈತರು ದನಕರುಗಳನ್ನು ಸಾಕುವುದಕ್ಕೆ ಮುಂದಿನ ದಿನಗಳಲ್ಲಿ ಕಷ್ಟಕರವಾಗುತ್ತದೆ ಎಂದು ಗ್ರಾಮದ ರೈತರು ಪ್ರಜಾಕಿರಣದ ಎದುರು ಅಳಲು ತೋಡಿಕೊಂಡರು.
ಶೇಂಗಾ ಬಿತ್ತನೆ ಮಾಡಿ ಮೂರು ತಿಂಗಳು ಕಳೆದರೂ ಮಳೆ ಕೈ ಕೊಟ್ಟ ಪರಿಣಾಮ ಭೂಮಿಯ ತೇವಾಂಶ ಕಡಿಮೆಯಾಗಿ ಶೇಂಗಾ ಬಳ್ಳಿಯಲ್ಲಿ ಒಂದೂ ಎರಡು ಕಾಯಿಗಳು ಮಾತ್ರ ಹಿಡಿದಿವೆ ಎಂದು ಗ್ರಾಮದ ರೈತ ಫಕೀರಪ್ಪ ಆದಮ್ಮನವರ ನೋವು ತೋಡಿಕೊಂಡರೆ, ರೈತರ ಜೊತೆಗೆ ಮಳೆ ಜೂಜಾಟವಾಡುತ್ತಿದೆ. ಇನ್ನೂ ಮುಂದಾದರೂ ಮಳೆರಾಯ ಕಣ್ಣು ತೆರೆದ್ದರೆ. ಹಿಂಗಾರಿ ಬೆಳೆಯಾದ ಜೋಳ, ಕಡಲೆ, ಬೆಳೆಯುವುದಕ್ಕೆ ರೈತರಿಗೆ ಸಹಾಯವಾಗುತ್ತೆದೆ ಎಂದು ಡಂಬಳ ಗ್ರಾಮದ ಮಂಜಯ್ಯಸ್ವಾಮಿ ಅರವಟಿಗಿಮಠ ತಿಳಿಸಿದರು.
ವಿಜಯಪುರ : ರಾಜ್ಯದ ಸಮ್ಮೀಶ್ರ ಸರಕಾರ ಶ್ರಾವಣ ಮಾಸದ ಕೊನೆಯ ಸೋಮವಾರದ ಒಳಗೆ ಪತನಗೊಳ್ಳಲಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಭವಿಷ್ಯ ನುಡಿದಿದ್ದಾರೆ. ಅವರು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಸರಕಾರ ಪತನಕ್ಕೆ ಲೋಕಸಭಾ ಚುನಾವಣೆಯ ವರೆಗೆ ಕಾಯುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಸಮ್ಮೀಶ್ರ ಸರಕಾರ ಯಾವುದೇ ಕ್ಷಣದಲ್ಲೂ ಪತನವಾಗಬಹುದು ಎಂದ ಅವರು ನಂತರ ಬಿಜೆಪಿ ಸರಕಾರ ರಚನೆ ಮಾಡಲಿದ್ದು, ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಮತ್ತೋಮ್ಮೆ ಈ […]
ಕೊಪ್ಪಳ: ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿನ ನೆರೆ ಹಾವಳಿ ಮೊತ್ತೊಂಡೆ ಮಳೆ ಇಲ್ಲದೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ರೈತರ ನೆರವಿಗೆ ಬರಬೇಕೆಂದು ಕನಕಗಿರಿ ಶಾಸಕ ಬಸವರಾಜ್ ದಢೇಸೂಗೂರ ಬೆಂಗಳೂರಿನ ಸಿಎಂ ಕಚೇರಿಯಲ್ಲಿ ಮುಖ್ಯ ಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಕನಕಗಿರಿ ಕ್ಷೇತ್ರದ ರೈತರು ಸಂಕಷ್ಟದಲ್ಲಿ ಇದ್ದಾರೆ. ಒಂದೆಡೆ ತುಂಗಭದ್ರ ನದಿ ತುಂಬಿ ನದಿ ಪಾತ್ರದಲ್ಲಿ ರೈತರು ಬೆಳೆದ ಭತ್ತ ಸಂಪೂರ್ಣ ಹಾಳಾಗಿದೆ ಮೊತ್ತೊಂದಡೆ ಕನಕಗಿರಿ ಒಣ ಬೇಸಾಯದ ಬೆಳೆ […]
ಧಾರವಾಡ : ಹೆಸರು ಕಾಳು ಖರೀದಿ ಕೇಂದ್ರದಲ್ಲಿ ಯಾವುದೇ ರೀತಿಯಿಂದ ಮದ್ಯವರ್ತಿಗಳ ಹಾವಳಿಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಶಾಸಕ ಅಮೃತ ದೇಸಾಯಿ ಅವರು ಹೇಳಿದರು. ಅವರು ಸೋಮವಾರ ಧಾರವಾಡ ಕೃಷಿ ಉತ್ಪನ್ನ ಮಾರಕಟ್ಟೆ ಸಮಿತಿ ಪ್ರಾಂಗಣದಲ್ಲಿ ಹೆಸರು ಕಾಳು ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಸಕ್ತವಾಗಿ ಈಗ ಮಾರುಕಟ್ಟೆಯಲ್ಲಿ ಹೆಸರುಕಾಳು ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಜಿಲ್ಲಾಡಳಿತದಿಂದ ಕಳುಹಿಸಲಾಗಿದ್ದ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು ಖರೀದಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಸಲ್ಲಿಸಿರುವಂತೆ ಕೇಂದ್ರ ಸರ್ಕಾರ ಪ್ರತಿ […]
One Reply to “ಕೈಕೊಟ್ಟ ಮಳೆಗೆ ಒಣಗಿದ ಬೆಳೆ : ರೈತರಲ್ಲಿಹೆಚ್ಚಿದ ಆತಂಕ”
ಒಳ್ಳೆಯ ವರದಿಯನ್ನ ಪ್ರಕಟಿಸುತ್ತಿದ್ದಿರಾ ಶುಭವಾಗಲಿ.