ಧಾರವಾಡ : ಇಲ್ಲಿಯ ಶಾಂತಿನಿಕೇತನ ನಗರದ ಅಧಿದೇವತೆಯಾದ ಶ್ರೀ ಕರಿಯಮ್ಮ ದೇವಿಯ ದೇವಸ್ಥಾನದಲ್ಲಿ ನವರಾತ್ರಿ ಹಿನ್ನಲೆಯಲ್ಲಿ ಎರಡನೇ ದಿನ ಕರಿಯಮ್ಮ ದೇವಿಗೆ ಗಾಯತ್ರಿ ದೇವಿಯ ಅಲಂಕಾರ ಮಾಡಲಾಗಿದೆ.
ನೂರಾರು ಸದ್ಭಕ್ತರು ಬೆಳಗ್ಗೆ ದೇವಿಯ ಸನ್ನಿಧೀಯಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಸುಮಂಗಲೆಯರಿಂದ ಕುಂಕುಮಾರ್ಚನೆ ನಡೆಯಿತು. ದೇವಸ್ಥಾನಕ್ಕೆ ಎರಡನೇ ದಿನವೂ ಭಕ್ತರ ಸಂಭ್ರಮ ಮುಗಿಲು ಮುಟ್ಟಿದೆ.
ಗುರುವಾರ ಬೆಳಗ್ಗೆಯಿಂದ ರಾತ್ರಿಯಿಂದ ದೇವಿಯ ಸನ್ನಿಧಿಯಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಆನಂತರ ಸಾವಿರಾರು ಸದ್ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ತಪಸ್ಸಾದರ್ಶಿನಿ ಅಲಂಕಾರ :
ಅದೇ ರೀತಿ ಇಲ್ಲಿಯ ಕಾಮನಕಟ್ಟಿಯಲ್ಲಿರುವ ಕಿತ್ತೂರು ಸಂಸ್ಥಾನದ ರಾಜಗುರುಗಳಾದ ಹುಚ್ಚಪ್ಪಜ್ಜನ ವಂಶಸ್ಥರಾದ ಶ್ರೀ ಶಾಂತವೀರ ಕಟ್ಟಿಮಠ ಅವರ ಮನೆಯಲ್ಲಿ ಎರಡನೇ ದಿನ ದೇವಿಗೆ ಶ್ರೀ ತಪಸ್ಸಾದರ್ಶಿನಿ ದೇವಿ ಅಲಂಕಾರ ಮಾಡಲಾಗಿತ್ತು.