ಜಿಲ್ಲೆ

ಫೇಸ್‌ಬುಕ್‌ನಲ್ಲಿ ತಪ್ಪು ಮಾಹಿತಿ : ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನತೆ ಆಕ್ರೋಶ

ಧಾರವಾಡ prajakiran.com : ವಿದ್ಯಾನಗರಿ ಧಾರವಾಡದಲ್ಲಿ ಎನ್‌ಜಿಒ ನಡೆಸುತ್ತಿರುವ ಮಹಿಳೆಯೊಬ್ಬರು ತಮ್ಮ ಫೇಸ್‌ಬುಕ್‌ನಲ್ಲಿ ತಪ್ಪು ಮಾಹಿತಿ ನೀಡಿರುವ ಮಾಹಿತಿ ಅಂಶ ತಡವಾಗಿ ಬೆಳಕಿಗೆ ಬಂದಿದೆ.

ಓಟಿಲಿ ಅನ್ಬನ್‌ಕುಮಾರ ಎಂಬುವವರೇ ಈ ಯಡವಟ್ಟುಮಾಡಿದ್ದು, ಅವರು ತಮ್ಮ ಫೇಸಬುಕ್ ನಲ್ಲಿ ಬುಧವಾರ ಮೇ 20ರಂದು ಧಾರವಾಡ ಜಿಲ್ಲೆಯಲ್ಲಿ ೯ ಜನರಿಗೆ ಕೋವಿಡ್ 19 ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಎಲ್ಲರೂ ಅಹಮದಾಬಾದ್ ಪ್ರಯಾಣದ ಹಿನ್ನಲೆ ಹೊಂದಿದ್ದಾರೆ.

ಎಲ್ಲಾ 28 ಪ್ರಕರಣಗಳು ಎಕ್ಟಿವ್ ಆಗಿವೆ ಎಂದು ಬರೆದುಕೊಂಡಿದ್ದರು. ಆದರೆ ವಾಸ್ತವವಾಗಿ ಧಾರವಾಡ ಜಿಲ್ಲೆಯಲ್ಲಿ ಬುಧವಾರ ಯಾವುದೇ ಕೋವಿಡ್ 19 ಪ್ರಕರಣ ದಾಖಲಾಗಿರಲಿಲ್ಲ ಎಂಬ ಮಾಹಿತಿ ಅರಿತ ಬಳಿಕವಷ್ಟೇ ಅವರು ತಮ್ಮ ಸ್ಟೇಟಸ್ ಅನ್ನು ತೆಗೆದು ಹಾಕಿದ್ದರು.

ಇದು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನತೆಯ ಆಕ್ರೋಶಕ್ಕೆ ಕಾರಣವಾಗಿದ್ದು, ಅವರು ಮಾಡಿದ (ಸುಳ್ಳು ಮಾಹಿತಿಯಿಂದ) ಯಡವಟ್ಟಿನಿಂದ ಜನತೆ ಕೆಲಕಾಲ ಆತಂಕಗೊಂಡು ಭಯಭೀತರಾಗಿದ್ದರು.

ಇದು ಧಾರವಾಡ ಜಿಲ್ಲೆಯ ಸಾವಿರಾರು ಜನರ ನಿದ್ದೆಗೆಡಿಸಿದೆ. ಈ ರೀತಿ ಸುಳ್ಳು ಸುದ್ದಿ ಹರಡಿದ್ದು ಸರಿಯಲ್ಲ. ಹೀಗಾಗಿ ಅವರ ವಿರುದ್ದ ಧಾರವಾಡ ಜಿಲ್ಲಾಡಳಿತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅನೇಕ ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.

ಕರೊನಾ ಪ್ರಕರಣಗಳು ದಾಖಲಾಗಿರುವ ಹಾಗೂ ಸೋಂಕಿತ ವ್ಯಕ್ತಿಗಳ ಕುರಿತು ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಧಾರವಾಡ ಜಿಲ್ಲಾಡಳಿತ ಹೇಳುತ್ತಲೇ ಬಂದಿದೆ.

ಅದರಂತೆ ಕೆಲವರ ವಿರುದ್ದ ಈ ಹಿಂದೆ ಧಾರವಾಡದ ವಿದ್ಯಾಗಿರಿ ಹಾಗೂ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು.

ಅದರಂತೆ ಇವರ ಮೇಲೆಯೂ ಶಿಸ್ತು ಕ್ರಮಕೈಗೊಳ್ಳುತ್ತಾರೆಯೇಅಥವಾ ಇಲ್ಲವೇ ಎಂಬುದನ್ನು ಬರುವ ದಿನಗಳಲ್ಲಿ ಕಾದು ನೋಡಬೇಕಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *