ಡಾನ್ ಬೇಕಾ ಡೆವಲಪ್‌ಮೆಂಟ್ ಬೇಕಾ ಎಂದ ಕೇಂದ್ರ ಸಚಿವ ಅನಂತಕುಮಾರ
Date : 2018-05-09 SHARE
ಧಾರವಾಡ : ಧಾರವಾಡ ವಿಧಾನ ಸಭಾ ಕ್ಷೇತ್ರ-71ರ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರ ಕೇಂದ್ರ ಸಚಿವ ಅನಂತಕುಮಾರ ದೊಡ್ಡನಾಯಕನಕೊಪ್ಪದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಈ ವೇಳೆ ನೆರೆದಿದ್ದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಚಿವ ವಿನಯ ಕುಲಕರ್ಣಿ ಅವರು ಮುಂಜಾನೆ ನಾವು ಮಾಡಿದ ಪೂಜಾಗಳಿಗೆ ಪೂಜೆ ಮಾಡಿದರೆ ಅವರು ಸಂಜೆ ಓಸಿ, ಇಸ್ಪಿಟ್, ನಂಬರ್ ೨ ದಂಧೆ ಮಾಡುವರಿಗೆ ಮಾರ್ಗದರ್ಶನ ಮಾಡುವ ಜಿಲ್ಲಾ ಮಂತ್ರಿ ಧಾರವಾಡದಂತಹ ಸುಸಂಸ್ಕೃತ ಕ್ಷೇತ್ರಕ್ಕೆ ಬೇಕಾ ಎಂದು ಪ್ರಶ್ನಿಸಿದರು. ಒಂಬರ್ ಒನ್ ಬೇಕಾ ಟೂ ಬೇಕಾ ನೀವೆ ನಿರ್ಧರಿಸಿ ಎಂದ ಅವರು ಸಚಿವ ವಿನಯ ಕುಲಕರ್ಣಿ ವಿರುದ್ಧ ವಾಗ್ದಾಳಿ ನಡೆಸಿದರು. ಒಂಬರ್ ಒನ್ ಬೇಕು. ಹಾಗೂ ನಂಬರ್ ೨ ದಂಧೆ ಬಂದ್ ಆಗಬೇಕು. ಅನೈತಿಕ ಚಟುವಟಿಕೆ, ಕ್ರಿಮಿನಲ್ ಪ್ರಕರಣಗಳ ಹಬ್ ಆಗಬಾರದು ಅಂದ್ರೆ ಜಿಲ್ಲಾ ಮಂತ್ರಿಗಳನ್ನು ಮನೆಗೆ ಕಳುಹಿಸಿ, ಸಜ್ಜನರ, ಅಭಿವೃದ್ಧಿಗೆ ಆದ್ಯತೆ ನೀಡುವ ಅಮೃತ ದೇಸಾಯಿ ಅವರನ್ನು ಆರಿಸಿ ಕಳುಹಿಸಿ ಎಂದರ. ಪ್ರತಿಯೊಬ್ಬ ನಾಗರಿಕರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಬೇಕೆಂದ್ರೆ ನಮಗೆ ಡಾನ್ ಬೇಕಾಗಿಲ್ಲ ಅಭಿವೃದ್ಧಿ ಬೇಕಾಗಿದೆ ಎಂಬುದನ್ನು ಪ್ರತಿ ಹಳ್ಳಿಗೆ ಹೋಗಿ ಕೇಳಿ ಗೂಂಡಾಗಿರಿ ಬೇಕಾ ಅಭಿವೃದ್ಧಿ ಬೇಕಾ ಕೇಳಿ, ಡಾನ್ ಬೇಕಾ ಡೆವಲಪ್‌ಮೆಂಟ್ ಬೇಕಾ ಕೇಳಿ ಎಂದು ಮನವಿ ಮಾಡಿದರು. ನಮ್ಮ ದೇಶದ ಸಲುವಾಗಿ ತಾಯಿಂದಿರ, ಅಕ್ಕತಂಗಿಯವರ ಸಲುವಾಗಿ ದಿನದ ೧೮ ಗಂಟೆ ಕೆಲಸಮಾಡುವ ಪ್ರಧಾನಮಂತ್ರಿ ಒಂದಡೆಯಾದರೆ ೧೮ ತಾಸ ನಿದ್ದೆ ಮಾಡುವ ಸಿಎಂ ಸಿದ್ದರಾಮಯ್ಯ ಇನ್ನೊಂದು ಕಡೆ. ನೂರಾರು ಕಾರ್ಯಕ್ರಮಗಳಲ್ಲಿನಿದ್ದೆ ಮಾಡುವುದೆ ದೊಡ್ಡ ಕೆಲಸ ಆಗಿದೆ. ಅದು ಕಾವೇರಿ, ಕೃಷ್ಣ ನೀರಿನ ಸಮಸ್ಯೆಯ ಸಭೆಯ ಇರಲಿ, ಯಾವುದೇ ಸಭೆ ಸಮಾರಂಭ ಇರಲಿ ಎಲ್ಲ ಸಭೆಯಲ್ಲಿ ನಿದ್ದೆ ಮಾಡಿದ ಕೀರ್ತಿ ಸಿದ್ದರಾಮಯ್ಯ ಅವರ ಸಿದ್ದ ಸರಕಾರಕ್ಜೆ ಸಲ್ಲುತ್ತದೆ. ಅಲ್ಲದೆ, ಯೋಗೀಶಗೌಡರ ಕಗ್ಗೊಲೆಗೆ ನ್ಯಾಯ ಸಿಗಲೇಬೇಕು ಎಂದ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ. ಕೆ.ಜೆ. ಜಾರ್ಜ್ ಹಾಗೂ ಗಣಪತಿ, ವಿನಯ ಕುಲಕರ್ಣಿ ಹಾಗೂ ಯೋಗೀಶಗೌಡ, ಶಾಸಕ ಹ್ಯಾರೀಸ್ ಕನಸು ಬಿಳುತ್ತವೆ ಎಂದು ವಾಗ್ದಾಳಿ ನಡೆಸಿದರು.