FOR BEST NEWS & ADVERTISEMENT CONTACT PRAJAKIRAN - 9341197609
News

ಪ್ರಧಾನಿ ಮೋದಿ ಭೇಟಿಗೆ ಮಹಾ ಹೋರಾಟಗಾರರು

ಧಾರವಾಡ : ಮಹದಾಯಿ, ಕಳಸಾ-ಬಂಡೂರಿ ಹೋರಾಟಗಾರರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಮಯಾವಕಾಶ ಕಲ್ಪಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ 9 ತಾಲೂಕಿನ ಮಹದಾಯಿ ಹೋರಾಟಗಾರ ೧೩ ಜನರ ನಿಯೋಗಕ್ಕೆ ಈ ಅವಕಾಶ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಮುಂದಾದ ರೈತ ಹೋರಾಟಗಾರರು ಹುಬ್ಬಳ್ಳಿ ಯಿಂದ ರೈಲು ಮೂಲಕ ಬೆಂಗಳೂರು ತಲುಪಿ, ಅಲ್ಲಿಂದ ವಿಮಾನ ಮೂಲಕ ನವದೆಹಲಿ ಗೆ ಪ್ರಯಾಣ ಬೆಳಸುವುದಾಗಿ ಹೋರಾಟಗಾರ ಶಂಕರ ಅಂಬಲಿ ಅವರು ಪ್ರಜಾಕಿರಣ ಕ್ಕೆ ತಿಳಿಸಿದ್ದಾರೆ. ೧೪ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸುವುದಾಗಿ ತೀಳಿಸಿದ ಅವರು ಜೂನ್ 16ರಂದು ಮೋದಿ ಅವರಿಗೆ ಭೇಟಿಯಾಗಲಿರುವ ರೈತ ಹೋರಾಟಗಾರರ ನಿಯೋಗ ಕಳಸಾ ಬಂಡೂರಿ, ಮಹದಾಯಿ ವಿವಾದಕ್ಕೆ ಇತ್ಯರ್ಥಕ್ಕೆ ಒತ್ತಾಯ ಮಾಡಲಿದೆ ಎಂದು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಉಪಮುಖ್ಯಮಂತ್ರಿ

ಬೆಂಗಳೂರು : ರಾಜ್ಯದ ಸಮ್ಮೀಶ್ರ ಸರಕಾರದಲ್ಲಿ ಗೃಹ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಶನಿವಾರ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಪೊಲೀಸ್ ಇಲಾಖೆಯ ಸದ್ಯದ ಸ್ಥಿತಿಗತಿ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಟ್ಟು ನಿಟ್ಟಿನ ಕ್ರಮಗಳ ಕುರಿತು ಮಾಹಿತಿ ಸಂಗ್ರಹಿಸಿದರು. ಅಲ್ಲದೆ, ಇಲಾಖೆಯನ್ನು ಬಲಪಡಿಸಲು ಪೊಲೀಸ್ ಅಧಿಕಾರಿಗಳ ಸಹಾಯ ಕೋರಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಜಿ. ಪರಮೇಶ್ವರ, ಇದೊಂದು ಔಪಚಾರಿಕ ಸಭೆ. ಹಿರಿಯ ಅಧಿಕಾರಿಗಳನ್ನು ಕರೆದು ಮಾತನಾಡಿಸಿದ್ದೇನೆ ಎಂದರು. ಡಾ. ಜಿ. ಪರಮೇಶ್ವರ ಅವರು ಈ ಹಿಂದೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಕೂಡ ಕೆಲ ಕಾಲ ಗೃಹ ಸಚಿವರಾಗಿದ್ದರು. ಆನಂತರ ಬದಲಾದ ಸನ್ನಿವೇಶದಲ್ಲಿ ಗೃಹ ಖಾತೆಯಿಂದ ಕೇವಲ ಕೆಪಿಸಿಸಿ ಅಧ್ಯಕ್ಷಗಿರಿಗೆ ಸೀಮಿತವಾಗಿದ್ದರು. ಇದೀಗ ಮತ್ತೇ ಗೃಹ ಖಾತೆ ಒಲಿದು ಬಂದಿರುವುದಕ್ಕೆ ಡಾ. ಜಿ. ಪರಮೇಶ್ವರ ಮುಖದಲ್ಲಿ ಸಂತಸ ಮನೆ ಮಾಡಿದೆ.

ನಟ ಸಲ್ಮಾನ್ ಖಾನ್ ಭೇಟಿ ಮಾಡಿದ ಕೇಂದ್ರ ಸಚಿವ

ಮುಂಬೈ : ಬಾಲಿವುಡ್ ಸಿನಿಮಾ ಮಂದಿಯನ್ನು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರ್ ಸತತವಾಗಿ ಸಂಪರ್ಕಿಸುವ ಮೂಲಕ ಸಂಪರ್ಕ ಫಾರ್ ಸಮರ್ಥನ್ ಅಭಿಯಾನವನ್ನು ಮುಂದುವರೆಸಿದ್ದಾರೆ. ನಟ ಸಲ್ಮಾನ್ ಖಾನ್ ಅವರ ಮನೆಗೆ ಭೇಟಿ ನೀಡಿ ಅವರ ತಂದೆ ಸಲೀಮ್ ಖಾನ್ ಅವರೊಂದಿಗೆ ಕೆಲ ಕಾಲ ಚರ್ಚಿಸಿದರು. ಆದಾದ ನಂತರ ನಾನಾ ಪಟೇಕರ್ ಅವರನ್ನು ಭೇಟಿ ಮಾಡಿ ಅವರೊಂದಿಗೂ ಉಭಯ ಕುಶಲೋಪರಿ ನಡೆಸಿದ್ದಾರೆ. ಇದಲ್ಲದೆ, ಅನೇಕ ಗಣ್ಯರನ್ನು ಭೇಟಿ ಮಾಡಿರುವ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಟ್ವಿಟೀರ್ ಖಾತೆಗಳಲ್ಲಿ ಭಾವಚಿತ್ರಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ, ಭೇಟಿ ವೇಳೆ ಅವರು ಮೋದಿ ಸರಕಾರದ ನಾಲ್ಕು ವರ್ಷದ ಸಾಧನೆಗಳನ್ನು ಮನದಟ್ಟು ಮಾಡುವ ಮೂಲಕ ತಮ್ಮ ಅಮೂಲ್ಯ ಸಲಹೆ, ಸೂಚನೆ ಕೋರಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಸಂಪರ್ಕ ಫಾರ್ ಸಮರ್ಥನ್ ಅಭಿಯಾನದ ಮೂಲಕ ಬಿಜೆಪಿ ದೇಶದೆಲ್ಲಡೆ ಮಿಂಚಿನ ಸಂಚಲನ ಸೃಷ್ಟಿಸಿದ್ದು, ಈ ಅಭಿಯಾನವನ್ನು ನಿತಿನ್ ಗಡ್ಕರಿ ಅವರು ವಿಶೇಷ ಮುತುರ್ವಜಿ ವಹಿಸಿ ನಡೆಸಿಕೊಂಡು ಹೋಗುತ್ತಿದ್ದಾರೆ. ದೇಶದ ಎಲ್ಲಡೆ ಸಂಪರ್ಕ ಫಾರ ಸಮರ್ಥನ ಅಭಿಯಾನದ ಮೂಲಕ ಮೋದಿ ಸರಕಾರದ ನಾಲ್ಕು ವರ್ಷದ ಸಾಧನೆ ಜೊತೆಗೆ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯನ್ನು ಬೆಂಬಲಿಸುವಂತೆ ಕೋರುತ್ತಿರುವುದು ವಿಶೇಷವಾಗಿದೆ.

ಶಿವಳ್ಳಿಗೆ ಸಚಿವ ಸ್ಥಾನ ನೀಡಲುಒತ್ತಾಯಿಸಿ ಪ್ರತಿಭಟನೆ

ಧಾರವಾಡ : ಮೂರನೇ ಬಾರಿಗೆ ಶಾಸಕರಾಗಿರುವ ಸಿ.ಎಸ್. ಶಿವಳ್ಳಿಗೆ ಸಮ್ಮೀಶ್ರ ಸರಕಾರದಲ್ಲಿ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಕುರುಬ ಸಮಾಜದ ವತಿಯಿಂದ ಶನಿವಾರ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ನಗರದ ಕಲಾ ಭವನ ಮೈದಾನದಿಂದ ಆಲೂರು ವೆಂಕಟರಾವ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಕೆಲಕಾಲ ರಸ್ತೆ ನಡೆಸಿದರು. ಬಳಿಕ ಟೈರ್ ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕುಂದಗೋಳ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಕುರುಬ ಸಮಾಜದ ಶಾಸಕ ಸಿ.ಎಸ್. ಶಿವಳ್ಳಿ ಅವರಿಗೆ ಸಚಿವ ಸ್ಥಾನ ನೀಡಲೇ ಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಶಾಂತವ್ವ ಗುಜ್ಜಳ, ನಾಗರತ್ನ ಹಡಗಲಿ, ಬಸವರಾಜ ಮಲಕಾರಿ, ಪ್ರಶಾಂತ ಗೊರವರ, ಸೇರಿದಂತೆ ಕುರುಬ ಸಮುದಾಯದ ನೂರಾರು ಯುವಕರು ಪಾಲ್ಗೊಂಡಿದ್ದರು.

ಜೂನ್ 11 ರಂದು ಹೊಟೇಲ್ ಬಂದ್

ಹುಬ್ಬಳ್ಳಿ : ಜೂನ್ 11 ರಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಹೊಟೇಲ್ ಬಂದ್ ಕರೆ ನೀಡಲಾಗಿದೆ ಎಂದು ಹುಬ್ಬಳ್ಳಿ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಹಾಗೂ ಧಾರವಾಡ ಹೊಟೇಲ್ ಒಡೆಯರ್ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ ತಿಳಿಸಿದರು. ಈ ಕುರಿತು ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಹಿಂದೆ ನಗರದ ಬ್ರಹ್ಮಶ್ರೀ ಹೊಟೇಲ್ ನಲ್ಲಿ ನಡೆದ ಪುಂಡರ ಪುಂಡಾಟ ಖಂಡಿಸಿ ಹೊಟೇಲ್ ಬಂದ್ ಗೆ ಕರೆ ನೀಡಲಾಗಿದೆ ಎಂದರು. ಕಳೆದ ಎರಡು ದಿನಗಳ ಹಿಂದೆ ಹುಬ್ಬಳ್ಳಿಯ ಹೊಟೇಲ್ ವೊಂದಲ್ಲಿ ಪುಂಡರಿಂದ ಹೊಟೇಲ್ ಮಾಲೀಕರ ಮೇಲೆ ನಡೆದ ಹಲ್ಲೇಯನ್ನು ಹುಬ್ಬಳ್ಳಿ ಧಾರವಾಡ ಹೊಟೇಲ್ ಸಂಘ ಗಂಭೀರವಾಗಿ ತಗೆದುಕೊಂಡಿದೆ. ಇತ್ತೀಚಿಗೆ ನಡೆಯುತ್ತಿರುವ ಗುಂಡಾಗಿರಿ ಪ್ರಕರಣಗಳನ್ನು ಖಂಡಿಸಿ ಸೋಮವಾರ ಹೊಟೇಲ್ ಬಂದ್ ಗೆ ಕರೆ ನೀಡಲಾಗಿದೆ ಎಂದ ಅವರು ಈವರೆಗೆ ಅವಳಿ ನಗರದಲ್ಲಿ 96 ಗುಂಡಾಗಿರಿ ಪ್ರಕರಣಗಳು ನಡೆದಿವೆ ಅವೆಲ್ಲವುಗಳನ್ನು ಸಹಿಸಿಕೊಂಡು ಹೊಟೇಲ್ ಉಧ್ಯಮವನ್ನು ಅನಿವಾರ್ಯವಾಗಿ ಮಾಡುತ್ತಿದ್ದೇವೆ ಆದ್ರೂ ಕೂಡಾ ದಿನದಿಂದ ದಿನಕ್ಕೇ ಇನ್ನೂ ಹೆಚ್ಚಾಗುತ್ತಿವೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದರು. ಜೂನ್ 10ರಂದು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಸೇವೆಯನ್ನು ಮಾಡಲಾಗುತ್ತಿದ್ದು ಸೋಮವಾರ ಸಾಂಕೇತಿಕವಾಗಿ ಅವಳಿ ನಗರದಲ್ಲಿ ಹೊಟೇಲ್ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುತ್ತದೆ. ಅವಳಿ ನಗರದ ಎಲ್ಲಾ ಹೊಟೇಲ್ ಬೇಕರಿ ಗಳ ಮಾಲೀಕರು ತಮ್ಮ ಹೊಟೇಲ್ ಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮಹೇಶ್ ಶೆಟ್ಟಿ ವಿವರಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹನುಮಂತ

ಗದಗ: ಸಾಮಾಜಿಕ ಜಾಲತಾಣಗಳಲ್ಲಿ ಕುರುಗಾಹಿ ಹನುಮಂತ ರಾತ್ರೋರಾತ್ರಿ ಫೇಮಸ್ ಆಗಿದ್ದಾನೆ. ಈ ಕುರಿಗಾಹಿ ಹಾಡಿರುವ ಹಾಡಿಗೆ ಜನ ಫುಲ್ ಫೀದಾ ಆಗಿದ್ದು, ಮೆಚ್ಚುಗೆಯ ಸುರಿಮಳೆ ಹರಿಸಿದ್ದಾರೆ. ಈ ಹಳ್ಳಿಗಾಡಿನ ಪ್ರತಿಭೆಗೆ ಸಾಮಾಜಿಕ ಜಾಲತಾಣವು ವೇದಿಕೆಯಾಗಿರುವುದು ವಿಶೇಷವಾಗಿದೆ. ಅಂದ ಹಾಗೆ ಈ ಕುರಿಗಾಹಿ ಹಾಡಿರುವ ಹಾಡು ಯಾವುದು ಗೊತ್ತಾ ಗಲಾಟೆ ಅಳಿಯಂದ್ರು ಚಿತ್ರದ ಸಾಗರಿಯೇ ಸಾಗರಿಯೇ ಹಾಡು. ಸೆಲ್ಫಿಯಲ್ಲಿ ಈ ಹಾಡನ್ನು ವಿಡಿಯೋ ಮಾಡಿ ಆನಂತರ ಫೇಸ್ಬುಕ್ಗೆ ಹಾಕಿದ್ದ ಹನುಮಂತ ಬಟ್ಟೂರ ಗದಗ ಜಿಲ್ಲೆ ಶಿರಹಟ್ಟಿಯವ. ಸದ್ಯ ಫೇಸ್ಬುಕ್ನಲ್ಲಿ ಹನುಮಂತ ಭಾರೀ ಕುತೂಹಲ ಮೂಡಿಸಿ, ಟ್ರೆಂಡಿಯಾಗಿದ್ದಾನೆ. ಹನುಮಂತನಿಗೆ ಚಿಕ್ಕಂದಿನಿಂದ ಸಿನಿಮಾ ನೋಡುವ ಗೀಳಿತ್ತು ಎನ್ನಲಾಗಿದೆ. ಡಾ. ರಾಜ್ಕುಮಾರ್ ಅಭಿಮಾನಿ ಆಗಿರುವ ಈತ ಹೈಸ್ಕೂಲ್ವರೆಗೆ ಶಿಕ್ಷಣ ಕಲಿತು ಕುರಿ ಕಾಯುವ ವೃತ್ತಿ ಮುಂದುವರಿಸಿದ್ದಾನೆ.

ಮುಂಬೈಯಲ್ಲಿ ಮುಂದುವರೆದ ಮಹಾಮಳೆ

ಮುಂಬೈ : ಮುಂಬೈ ಮಹಾನಗರದಲ್ಲಿ ಬೆಂಬಿಡದೆ ಭಾರೀ ಮಳೆ ಸುರಿಯುತ್ತಿದ್ದು. ಜನ ಜೀವನ ಅಸ್ತವ್ಯಸ್ಥಗೊಂಡಿದೆ. ರಸ್ತೆಗಳಲ್ಲಿ ಸಂಚರಿಸುವುದು ದುಸ್ತರವಾಗಿದ್ದು, ಜನರ ಪರದಾಟ ಎಂದಿನಂತೆ ಮುಂದುವರೆದಿದೆ. ಈ ಬಗ್ಗೆ ಮಹಾನಗರ ಪಾಲಿಕೆ ವಿರುದ್ಧ ಜನತೆ ಆಕ್ರೋಶ ವ್ಯಕ್ತಪಡಿಸಿದ್ದು, ಮುಂಬೈ ಮಹಾನಗರ ಪಾಲಿಕೆ ಹಲವು ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ ನಿರ್ಲಕ್ಷ್ಯ ತೋರಿದೆ ಎಂದು ಕಿಡಿಕಾರಿದ್ದಾರೆ. ಕಳೆದ ಒಂದು ವಾರದಿಂದ ಮುಂಬೈನಲ್ಲಿ ಮಳೆರಾಯನ ಅರ್ಭಟ ಮುಂದುವರೆದಿದೆ. ಇದು ಜೂನ್ 12ರ ವರೆಗೆ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಶಂಕಿತ ಭೂಗತ ಪಾತಕಿಗಳ ಎನ್ಕೌಂಟರ್

ನವದೆಹಲಿ: ನಾಲ್ವರು ಶಂಕಿತ ಭೂಗತ ಪಾತಕಿಗಳನ್ನು ಪೊಲೀಸರು ಎನ್ಕೌಂಟರ್ ಮಾಡಿದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶನಿವಾರ ನಡೆದಿದೆ. ದಕ್ಷಿಣ ದೆಹಲಿಯ ಚತಾರ್ಪುರ ಪ್ರದೇಶದಲ್ಲಿ ದೆಹಲಿ ವಿಶೇಷ ಪೊಲೀಸ್ ಈ ಎನ್ಕೌಂಟರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ದಾಳಿಯಲ್ಲಿ ನಾಲ್ವರು ಪಾತಕಿಗಳು ಹತ್ಯಗೀಡಾಗಿದ್ದರೆ, ಆರು ಪೊಲೀಸರಿಗೆ ಗಾಯವಾಗಿದೆ. ಪೊಲೀಸ್ ಎನ್ಕೌಂಟರ್ನಲ್ಲಿ ಹತ್ಯೆಗೀಡಾದವರನ್ನು ರಾಜೇಶ್ ಭಾರ್ತಿ ಗ್ಯಾಂಗ್ನವರು ಎಂದು ಗುರುತಿಸಲಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಭೂಗತ ಪಾತಕಿ ರಾಜೇಶ್ ಭಾರ್ತಿ ವಿರುದ್ಧ ಕೊಲೆ, ಸುಲಿಗೆ, ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕರಿಗೆ ನೀತಿ ಪಾಠ ಬೋಧನೆ

ಬೆಂಗಳೂರು : ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಕೆಲ ಕಾಂಗ್ರೆಸ್ ಶಾಸಕರು ಮನಸೋ ಇಚ್ಛೆ ಮಾತನಾಡುತ್ತಿರುವ ಬೆನ್ನ ಹಿಂದೆಯೇ ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಶಾಸಕರಿಗೆ ನೀತಿ ಪಾಠ ಬೋಧನೆ ಮಾಡಿದ್ದಾರೆ. ಪಕ್ಷ ನಮಗೆ ಎಲ್ಲವನ್ನು ನೀಡಿದೆ. ಅದಕ್ಕಾಗಿ ನಾವು ಪಕ್ಷಕ್ಕಾಗಿ ತ್ಯಾಗ ಮಾಡಲು ಕೂಡ ಸಿದ್ಧರಿರಬೇಕು. ಕೆಲವು ಬಾರಿ ಇಂತಹ ಸನ್ನಿವೇಶಗಳು ಎದುರು ಆಗುವುದು ಸಹಜ. ಹಾಗಂದ ಮಾತ್ರಕ್ಕೆ ಬುಸುಗುಡುವುದು ತರವಲ್ಲ. ಯಾರೊಬ್ಬರು ತಾಳ್ಮೆ ಕಳೇದುಕೊಳ್ಳದೆ ವಿವೇಚನೆಯಿಂದ ಮಾತನಾಡಬೇಕು. ಕಾಂಗ್ರೆಸ್ ಹೈ ಕಮಾಂಡ್ ಎಲ್ಲವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಹೀಗಾಗಿ ಯಾರೊಬ್ಬರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಬಾರದು ಎಂದು ಸಲಹೆ ಮಾಡಿದ್ದಾರೆ.

ಲೋಕಾಯುಕ್ತ ಹತ್ಯೆ ಯತ್ನ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿದ ಪ್ರಕರಣಕ್ಕೆ ಕುರಿತಂತೆ ಬೆಂಗಳೂರು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಆರೋಪಿ ತೇಜ್ರಾಜ್ ಶರ್ಮ ವಿರುದ್ಧ 600 ಪುಟಗಳ ದೋಷಾರೋಪಣ ಪಟ್ಟಿ ಒಳಗೊಂಡ ಚಾರ್ಜ್ಶೀಟ್ ಇದಾಗಿದ್ದು, ಹಲವು ಆಘಾತಕಾರಿ ಅಂಶಗಳನ್ನು ಒಳಗೊಂಡಿವೆ. ಅನ್ಯಾಯದ ವಿರುದ್ಧದ ಹೋರಾಟಕ್ಕಾಗಿ ನಾನು ನನ್ನ ಜೀವ ಕೊಡೋದಕ್ಕೆ ಸಿದ್ಧ. ಕೊಲೆ ಮಾಡಿಯೇ ಜಯ ಗಳಿಸಬೇಕಿತ್ತು ಎಂದು ಹೇಳಿಕೆ ನೀಡಿದ್ದಾನೆ. ಅಲ್ಲದೆ, ನಾನು ಲೋಕಾಯುಕ್ತ ನ್ಯಾಯಮೂರ್ತಿ ಅವರ ಬಳಿ ಹಲವು ಬಾರಿ ಹೋದರೂ ಸರಿಯಾಗಿ ಸ್ಪಂದನೆ ಸಿಕ್ಕಿಲ್ಲ. ನಾನು ಏನಾದರೂ ಪ್ರಶ್ನೆ ಮಾಡಿದರೆ ನಗು ಮುಖದಿಂದಲೇ ಉತ್ತರಿಸಿದ್ದರು. ಅದಕ್ಕಾಗಿ ಭಗವದ್ಗೀತೆಯಲ್ಲಿನ ಹೇಳಿಕೆಯಂತೆ ಅಧರ್ಮದ ವಿರುದ್ಧ ಯುದ್ಧ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಮಾರ್ಚ್ 7 ರಂದು ಲೋಕಾಯುಕ್ತ ಕಚೇರಿಗೆ ನುಗ್ಗಿ ತೇಜ್ರಾಜ್ ಶರ್ಮ, ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿದಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಳ್ಳರು ಸುಳ್ಳರು ಒಂದಾಗಿ ಮೋದಿ ಸೋಲಿಸಲು ಹೊಂಚು

ಬೆಂಗಳೂರು : ಜನರಿಂದ ತಿರಸ್ಕೃತರಾದ ಕಳ್ಳರು ಸುಳ್ಳರು ಒಂದಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಲು ಹೊಂಚು ಹಾಕುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು. ಅವರು ರಾಜ್ಯ ಬಿಜೆಪಿಯ ಯುವ ಮೋರ್ಚಾದ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದರು. ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅಲೆ, ಮೋದಿ ಅಲೆ ಎರಡೂ ಸೇರಿದರೆ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲೋದು ಕಷ್ಟವೇನಲ್ಲ ಎಂದರು. ನಮ್ಮ ಯುವ ಮೋರ್ಚಾದ ಮೂವರು ಶಾಸಕರಾಗಿ ಆಯ್ಕೆ ಆಗಿದ್ದಾರೆ. ಅದೇ ರೀತಿ ರಾಜ್ಯದ 30 ಕ್ಷೇತ್ರದಲ್ಲಿ ನಾವು ಕೇವಲ ಆರು ಸಾವಿರ ಮತಗಳ ಅಂತರದಲ್ಲಿ ಸೋತಿದ್ದೇವೆ. ಹೀಗಾಗಿ ಈಗಿನಿಂದಲೇ ಲೋಕಸಭೆ ಚುನಾವಣೆಗೆ ತಯಾರಿ ನಡೆಸೋಣ ಎಂದು ಕರೆ ನೀಡಿದರು.

ಕಾಂಗ್ರೆಸ್ ನಿಂದ ಪ್ರಜಾತಂತ್ರ ವ್ಯವಸ್ಥೆ ಬುಡಮೇಲು

ಬೆಂಗಳೂರು : ಸ್ವತಂತ್ರ ಭಾರತದ ಇತಿಹಾಸದಲ್ಲಿ ಕೇವಲ 37 ಸ್ಥಾನ ಗಳಿಸಿದ ಜೆಡಿಎಸ್ ಜೊತೆ ಕೈ ಜೋಡಿಸಿದ ಕಾಂಗ್ರೆಸ್ ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಪಾದಿಸಿದರು. ಅವರು ರೈತ ಮೋರ್ಚಾ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದರು. ಸಮ್ಮೀಶ್ರ ಸರಕಾರದ ವೇಳೇ ಜೆಡಿಎಸ್ ನಮಗೆ ಮೋಸ ಮಾಡಿದೆ. ಹೀಗಾಗಿನಾವು ಜೆಡಿಎಸ್ ಜತೆ ಹೋಗಲಿಲ್ಲ. ಆದರೆ ಕಾಂಗ್ರೆಸ್ ಆತುರದ ನಿರ್ಧಾರ ಕೈಗೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಯಲಿದೆ ಎಂದರು. ಕಳೆದ 15 ದಿನಗಳಿಂದ ಸಚಿವ ಸಂಪುಟ ತಿಕ್ಕಾಟದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಜೆಡಿಎಸ್ ಕೊಟ್ಟ ಸುಳ್ಳು ಭರವಸೆಗಳನ್ನು ಜನ ನಂಬಿದ್ದರಿಂದ ಅವರಿಗೆ 37 ಸ್ಥಾನಗಳು ಬಂದಿವೆ. ಇಲ್ಲದಿದ್ದರೆ ಅಷ್ಟು ಸ್ಥಾನಗಳಿಸಲು ಸಾಧ್ಯವಿರಲಿಲ್ಲ ಎಂದು ಛೇಡಿಸಿದರು. ರೈತರ ಸಾಲ ಮನ್ನಾ ಸೇರಿದಂತೆ ಹಲವು ವಿಷಯಗಳಿಗಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ರೈತ ಸಮಾವೇಶ ಹಮ್ಮಿಕೊಳ್ಳಲು ಚಿಂತನೆ ನಡೆದಿದೆ. ಅದೇ ರೀತಿ ಮೋದಿಯವರ ನಾಲ್ಕು ವರ್ಷದ ಸಾಧನೆಯನ್ನು ಜನರಿಗೆ ಮುಟ್ಟಿಸಲು ಬೈಕ್ ರಾಲಿ ನಡೆಸಲಾಗುವುದು ಎಂದರು.

ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತ ಕಾಂಗ್ರೆಸ್, ಜೆಡಿಎಸ್ ಶಾಸಕರು

ಬೆಂಗಳೂರು: ಸಚಿವ ಸ್ಥಾನ ವಂಚಿತ ಅನೇಕ ಕಾಂಗ್ರೆಸ್ ಹಾಗೂ ಜೆಡಿಎಸ್ನ ಅತೃಪ್ತ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. ಅವರು ಬಿಜೆಪಿ ಯುವ ಮೋರ್ಚಾ ವಿಶೇಷ ಸಭೆಯಲ್ಲಿ ಮಾತನಾಡಿ, ಮೈತ್ರಿ ಸರ್ಕಾರದಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಬಿಜೆಪಿ ಕಡೆ ಮುಖ ಮಾಡಿದ್ದಾರೆ ಎಂದರು. ಈಗಾಗಲೇ ಸಂಪರ್ಕದಲ್ಲಿ ಇರುವ ಮುಖಂಡರು ಬಿಜೆಪಿಗೆ ಬರುವ ಬೇಡಿಕೆ ಇಟ್ಟಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಆದ್ಯತೆ ನೀಡಲು ಚಿಂತನೆ ನಡೆದಿದೆ ಎಂದರು. ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಎದ್ದು ನಿಂತರೆ ಕಾಂಗ್ರೆಸ್-ಜೆಡಿಎಸ್ ಬಲ ಉಡುಗಿ ಹೋಗಲಿದೆ. ಆದರೂ ನಾವು ಪ್ರಬಲ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುವ ಮೂಲಕ ಚಾಟಿ ಬಿಸೋಣ ಎಂದರು. ಬಾದಾಮಿ ಸೇರಿದಂತೆ ಹಲವು ಕಡೆಗಳಲ್ಲಿ ಬಿಜೆಪಿ ಕಡಿಮೆ ಮತಗಳ ಅಂತರದಿಂದ ಸೋಲಲು ನೋಟಾ ಮತಗಳು ಹೆಚ್ಚಾಗಿ ಚಲಾವಣೆಯಾಗಿರೋದು ಕಾರಣ ಎಂದರು.

ಖಾತೆಗೂ ಕ್ಯಾತೆ ತೆಗೆದ ಜೆಡಿಎಸ್ ಶಾಸಕರ ಬೆಂಬಲಿಗರು

ಪಾಂಡವಪುರ/ಚಾಮುಂಡೇಶ್ವರಿ : ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಖಾತೆಯನ್ನು ಪಡೆದಿರುವ ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಬೆಂಬಲಿಗರು ಸರಿಯಾದ ಸಚಿವ ಸ್ಥಾನ ದೊರೆತಿಲ್ಲ. ಹೀಗಾಗಿ ಅವರ ಖಾತೆ ಬದಲಾವಣೆ ಮಾಡಬೇಕಿದೆ ಎಂದು ಕ್ಯಾತೆ ತೆಗೆದಿದ್ದಾರೆ. ಈ ಸಂಬಂಧ ಎರಡು ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಪ್ರತ್ಯೇಕ ಪ್ರತಿಭಟನೆ ನಡೆಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಮೇಲುಕೋಟೆಯಲ್ಲಿ ಬಾಯಿ ಬಾಯಿ ಬಡಿದುಕೊಂಡು ಆಕ್ರೋಶ ಹೊರ ಹಾಕಿದ ಜೆಡಿಎಸ್ ಕಾರ್ಯಕರ್ತರು ಉತ್ತಮ ಖಾತೆ ಸಿಗದಿದ್ದರೆ ಶಾಸಕರಾಗಿ ಮುಂದುವರೆಯಬೇಕು ಎಂದು ಒತ್ತಡ ಹೇರಿದ್ದಾರೆ. ಇದೇ ವೇಳೆ ಚಾಮುಂಡೇಶ್ವರಿ ಶಾಸಕ ದೇವೇಗೌಡರ ಮನೆ ಮುಂದೆ ಧರಣಿ ಕುಳಿತ ಜೆಡಿಎಸ್ ಕಾರ್ಯಕರ್ತರು ಉನ್ನತ ಶಿಕ್ಷಣ ಸಚಿವ ಸ್ಥಾನವನ್ನು ಜಿ.ಟಿ. ದೇವೇಗೌಡರು ಯಾವುದೇ ಕಾರಣಕ್ಕೂ ಒಪ್ಪಬಾರದು ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ ಸಣ್ಣ ನೀರಾವರಿಯನ್ನು ಯಾವುದೇ ಕಾರಣಕ್ಕೂ ಪಡೆಯಬಾರದು ಎಂದು ಮೇಲುಕೋಟೆ ಶಾಸಕ ಸಿ.ಎಸ. ಪುಟ್ಟರಾಜು ಬೆಂಬಲಿಗರು ಪಟ್ಟುಹಿಡಿದಿದ್ದಾರೆ. ಇದನ್ನು ಕುಮಾರಸ್ವಾಮಿಯವರು ಯಾವ ರೀತಿ ಸಮಾಧಾನಪಡಿಸಲಿದ್ದಾರೆ ಎಂಬುದು ಕಾದು ನೋಡಬೇಕಿದೆ.

ಸಿದ್ದರಾಮಯ್ಯ ಕಡೆಗಣಿಸಿದರೆ ಎರಡು ನಿಮಿಷದಲ್ಲಿ ಸರಕಾರ ಪತನ

ಬೀದರ್ : ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕಡೆಗಣಿಸಿದರೆ ಸಮ್ಮೀಶ್ರ ಸರಕಾರ ಎರಡು ನಿಮಿಷದಲ್ಲಿ ಪತನವಾಗಲಿದೆ ಎಂದು ಬಸವಕಲ್ಯಾಣ ಶಾಸಕ ಬಿ. ನಾರಾಯಣ ಎಚ್ಚರಿಕೆ ನೀಡಿದ್ದಾರೆ. ಅವರು ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ. ಆ ಮೂಲಕ ಕಾಂಗ್ರೆಸ್ ಮುಖಂಡ ರಿಗೆ ಎಚ್ಚರಿಕೆ ರವಾನಿಸಿರುವ ಬಿ. ನಾರಾಯಣ, ಸಿದ್ದರಾಮಯ್ಯ ತಮ್ಮ ನಾಯಕರಾಗಿದ್ದು, ಅವರು ಯಾರಿಗೂ ಗೌರವ ಕಡಿಮೆ ಮಾಡಿಲ್ಲ. ಅವರ ಒಂದು ಕೂದಲು ಕೂಡ ಕೊಂಕು ಆಗಲು ಬಿಡಲ್ಲೆಎಂದು ಗುಡುಗಿದರು. ನಾವು ಅವರೊಂದಿಗೆ ಇದ್ದೇವೆ. ನಮ್ಮ ಹೈಕಮಾಂಡ್ ಅವರೇ. ಅವರು ಸಮ್ಮೀಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರು, ಅವರನ್ನು ಯಾರೊಬ್ಬರು ಮೂಲೆಗುಂಪು ಮಾಡಲು ಸಾಧ್ಯವಿಲ್ಲ ಎಂದರು. ಈ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ಮಾಡಿದ್ದಾರೆ. ಅವರು ಕಳೆದ ಎರಡು ದಿನಗಳಿಂದ ಬಾದಾಮಿಯಲ್ಲಿ ಬಿಡಾರ ಹೂಡಿರುವುದು ನೋಡಿದರೆ, ಎಲ್ಲೋಒಂದು ಕಡೆ ನಮಗೆ ಅನುಮಾನ ಮೂಡುತ್ತಿದೆ. ಕಾಂಗ್ರೆಸ್ ನಾಯಕರು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಎಲ್ಲವೂ ಸರಿ ಹೋಗುತ್ತದೆ ಎಂದರು.

ಬೀದರ್ ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರು ಬಂಡಾಯ

ಬೀದರ : ಬೀದರ ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರು ಪತ್ರಿಕಾಗೋಷ್ಠಿ ನಡೆಸಿ ಹೈಕಮಾಂಡ್ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಭಾಲ್ಕಿ ಶಾಸಕ ಹಾಗೂ ಮಾಜಿ ಸಚಿವ ಈಶ್ವರ ಖಂಡ್ರೆ, ಬೀದರ್ ಉತ್ತರ ಕ್ಷೇತ್ರದ ಶಾಸಕ ರಹೀಂಖಾನ್ ಹಾಗೂ ಬಸವಕಲ್ಯಾಣ ಶಾಸಕ ಬಿ. ನಾರಾಯಣ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಅಚ್ಚರಿ ಮೂಡಿಸಿದ್ದಾರೆ. ಅಲ್ಪಸಂಖ್ಯಾತರ ಕೋಟಾದಡಿ ರಹೀಂ ಖಾನ್ ಗೆ ಸಚಿವ ಸ್ಥಾನ ಸಿಗಬೇಕಿತ್ತು ಎಂಬ ವಾದ ಮಂಡಿಸಿದರೆ, ಇನ್ನೊಂದಡೆ ವೀರಶೈವ ಕೋಟಾದಡಿ ಈಶ್ವರ ಖಂಡ್ರೆಗೆ ಮಂತ್ರಿಪಟ್ಟ ದೊರಕಬೇಕಿತ್ತು ಎಂದು ವಾದ ಮಂಡಿಸಿದ್ದರು. ಆ ಮೂಲಕ ಬೀದರ್ ಜಿಲ್ಲೆಯ ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ ವಿರುದ್ಧ ತಮ್ಮ ಪರೋಕ್ಷ ಅಸಮಾಧಾನವಿರುವುದು ಹೊರಬಿದ್ದಂತಾಗಿದೆ. ಹಿರಿತನ ಆಧಾರಿಸಿ ಅವರಿಗೆ ಮಣೆ ಹಾಕಲಾಗಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಸಿಎಂಗೆ ಡೆತ್ ನೋಟ ಬರೆದಿಟ್ಟು ಯುವಕ ಆತ್ಮಹತ್ಯೆ

ಬೆಂಗಳೂರು : ಸಿಎಂ ಕುಮಾರಸ್ವಾಮಿಗೆ ಡೆತ್ ನೋಟ್ ಬರೆದಿಟ್ಟು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಜಿಗಣಿ ಗ್ರಾಮದಲ್ಲಿ ನಡೆದಿದೆ. ತೇಜಸ್ ಕುಮಾರ ಎಂಬುವನೇ ಆತ್ಮಹತ್ಯೆ ಮಾಡಿಕೊಂಡವ. ಹಾರುಗದ್ದೆಯಲ್ಲಿರುವ ಎವಿದೆಂಟ್ ಕಂಪನಿ ಕೊಲೆ ಬೆದರಿಕೆ ಒಡ್ಡಿತ್ತು. ಅಲ್ಲದೆ, ಸಂಬಳ ನೀಡದೆ ಬೆದರಿಕೆ ಒಡ್ಡಿದೆ. ಇನ್ನೋಂದು ಕಂಪನಿಗೂ ಕೆಲಸಕ್ಕೆ ಸೇರಿದ್ದರೆ ಅಲ್ಲಿ ಕೂಡ ದೂರು ನೀಡಿ ನೌಕರಿ ಕಸಿದುಕೊಂಡಿದೆ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾನೆ. ಚನ್ನಪಟ್ಟಣ ಮೂಲದವನಾಗಿರುವ ತೇಜಸ್ ಕುಮಾರ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ. ಕಂಪನಿ ಮಾಲೀಕರಾದ ರಘುರಾಜ್ ಮೋಹನರಾಜ್ ಎಂಬುವರು ತಮಗೆ ಕಿರುಕುಳ ನೀಡಿದ್ದಾರೆ ಎಂದು ಆಪಾದಿಸಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಆನೇಕಲ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕುರಿ ಸಮೇತ ಪ್ರತಿಭಟನೆ ನಡೆಸಿದ ಕುರುಬ ಮುಖಂಡರು

ಬೆಳಗಾವಿ : ಕುರುಬ ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡದ ಸಮ್ಮೀಶ್ರ ಸರಕಾರದ ನಡೆ ಖಂಡಿಸಿ ಕುರುಬ ಸಮಾಜದ ಮುಖಂಡರು ನೂರಾರು ಕುರಿಗಳೊಂದಿಗೆ ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ನಡೆದಿದೆ. ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕುರುಬ ಸಮಾಜವನ್ನು ಕಡೆಗಣಿಸಿರುವ ಸರಕಾರದ ನಡೆ ಸರಿಯಲ್ಲ ಎಂದು ಹಾಲುಮತ ಮಹಾಸಭಾ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಹೆಚ್.ಎಂ. ರೇವಣ್ಣ, ಸಿ.ಎಸ್. ಶಿವಳ್ಳಿ, ಸೇರಿದಂತೆ ಅನೇಕ ಕುರುಬ ಶಾಸಕರಿದ್ದು, ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಕುರುಬ ಸಮಾಜ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ರಾಷ್ತ್ರೀಯ ಹೆದ್ದಾರಿ ಬಂದ್ ಮಾಡಿದ ಗ್ರಾಮಸ್ಥರು

ಧಾರವಾಡ : ರಸ್ತೆ ದಾಟುವಾಗ ಕಾಲೇಜು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಖಂಡಿಸಿ, ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ ಘಟನೆ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಬಳಿ ನಡೆದಿದೆ. ಕಳೆದ ಹಲವು ವರ್ಷಗಳಿಂದ ಈ ರಸ್ತೆಯಲ್ಲಿ ದುರ್ಘಟನೆ ನಡೆಯುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲಿ, ಜಿಲ್ಲೆಯ ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಳ್ಳಂಬೆಳಗ್ಗೆ ಕಾಲೇಜ್ ವಿದ್ಯಾರ್ಥಿ ಸಾವನ್ನಪ್ಪಿದರೂ, ಇತ್ತಕಡೆ ಯಾರೊಬ್ಬರೂ ಆಗಮಿಸಿಲ್ಲ ಎಂದು ಕಿಎಡಿ ಕಾರಿದರು. ಅಲ್ಲದೆ, ಟೈರ್ ಸುಟ್ಟು ಹಲವು ಗಂಟೆಗಳ ಕಾಲ ರಸ್ತೆ ಬಂದ್ ಮಾಡಿದರು. ಇದರಿಂದಾಗಿ ಹೆದ್ದಾರಿಯಲ್ಲಿ ಕಿಲೋ ಮೀಟರ್ ಗಟ್ಟಲೇ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿದರ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದರು.

ರಾಹುಲ್ ಗಾಂಧಿ ಭೇಟಿ ಮಾಡಿ ಅಸಮಾಧಾನ ತೋಡಿಕೊಂಡ ಪಾಟೀಲ

ನವದೆಹಲಿ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾಜಿ ಸಚಿವ ಎಂ.ಬಿ. ಪಾಟೀಲ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ಎದುರು ಅವರು ಡಿಸಿಎಂ ಸ್ಥಾನ ಇಲ್ಲವೇ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಸಚಿವ ಸ್ಥಾನ ಸಿಗದಕ್ಕೆ ಮುನಿಸಿಕೊಂಡಿದ್ದ ಪಾಟೀಲರನ್ನು ಕಾಂಗ್ರೆಸ್ ಹೈ ಕಮಾಂಡ್ ನಿನ್ನೆ ದೆಹಲಿಗೆ ಕರೆಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ದೆಹಲಿಗೆ ತೆರಳಿ ರಾಜ್ಯದ ಕಾಂಗ್ರೆಸ್ ನಾಯಕರ ಗೋಳನ್ನು ನಾಯಕರಿಗೆ ತಲುಪಿಸಿದ್ದಾರೆ. ಪಾಟೀಲ ಅಹವಾಲನ್ನು ಸಮಾಧಾನದಿಂದ ಆಲಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೆಲ ಕಾಲ ತಾಳ್ಮೆಯಿಂದ ಕಾಯುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸಭೆ ಬಳಿಕ ಹೊರ ಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಪಾಟೀಲ, ಮುಂದಿನ ನಡೆ ಕುರಿತು ಎಲ್ಲಶಾಸಕರು ಕುಳಿತು ಸಭೆ ಸೇರಿ ನಿರ್ಧಾರ ಕೈಗೊಳ್ಳತ್ತೇವೆ. ನಾನು ಖರ್ಗೆ ವಿರುದ್ಧ ಯಾವುದೇ ಅಸಮಾಧಾನ ತೊಡಿಕೊಂಡಿಲ್ಲ. ಅವರು ನಮ್ಮ ನಾಯಕರು. ಆತ್ಮೀಯರಾಗಿದ್ದಾರೆ. ನಾನು ಕೈ ಕಮಾಂಡ್ ಮುಂದೆ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದರು.

ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ

ಹಾವೇರಿ : ಸಚಿವ ಸ್ಥಾನ ಸಿಗದಕ್ಕೆ ತೀವ್ರ ಅಸಮಾಧಾನಗೊಂಡಿರುವ ಶಾಸಕರು ಗುಂಪು ಕಟ್ಟಿಕೊಂಡು ತಮ್ಮ ಸ್ಥಾನಕ್ಕಾಗಿ ಹೋರಟಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಹಿರೇಕೆರೂರ ಶಾಸಕ ಬಿ.ಸಿ. ಪಾಟೀಲ ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಚಿವ ಸ್ಥಾನ ಸಿಗದವರು ಅಸಮಾಧಾನಗೊಂಡಿರುವುದು ನಿಜ. ಆದರೆ ನಾವು ಯಾವುದೇ ಗುಂಪುಗಾರಿಕೆಯಲ್ಲಿ ತೊಡಗಿಲ್ಲ. ನಮ್ಮ ಹಕ್ಕಿಗಾಗಿ ನಾವು ಸಮಾಲೋಚನೆ ನಡೆಸುತ್ತಿದ್ದೇವೆ. ಎಂ.ಬಿ. ಪಾಟೀಲ ಸಮ್ಮುಖದಲ್ಲಿ ಕೆಲವು ಶಾಸಕರು ಸಭೆ ಸೇರಿರಬಹುದು. ಆದರೆ ಗುಂಪುಕಟ್ಟಿಕೊಂಡಿಲ್ಲ ಎಂದು ತಿಳಿಸಿದ್ದಾರೆ. ಬಿಜೆಪಿಯವರು ಈಗ ನನ್ನನ್ನೂ ಸಂಪರ್ಕಿಸಿಲ್ಲ ಎಂದ ಅವರು ಈಗ ಅವರಿಗೆ ಭಯವಿದೆ. ಈ ಹಿಂದೆ ಧ್ವನಿಸುರಳಿ ಬಿಡುಗಡೆಗೊಳಿಸಿದ್ದರಿಂದ ಸಂಪರ್ಕ ಸಾಧಿಸಿಲ್ಲ ಎಂದು ಹೇಳಿದರು.

ಮತ್ತೆ ಪಾಲಿಕೆ ಆಯುಕ್ತರಾದ ಶಕೀಲ್ ಅಹ್ಮದ

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡಮಹಾನಗರ ಪಾಲಿಕೆಯ ಆಯುಕ್ತರಾಗಿ ಶಕೀಲ್ ಅಹ್ಮದ್ ಮತ್ತೆ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಮಹಾನಗರ ಪಾಲಿಕೆಯಲ್ಲಿ ಕೆಲ ಕಾಲ ಆಯುಕ್ತರಾಗಿದ್ದ ಅವರನ್ನು ಸರಕಾರ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ದಿಢೀರ್ ಆಗಿ ವರ್ಗಾವಣೆ ಮಾಡಲಾಗಿತ್ತು. ಅವರ ಸ್ಥಳಕ್ಕೆ ಅಪರ್ ಜಿಲ್ಲಾಧಿಕಾರಿಯಾಗಿದ್ದ ಇಬ್ರಾಹಿಂ ಮೈಗೂರ ಅವರನ್ನು ನೇಮಿಸಿತ್ತು. ಆಗ ಅವರಿಗೆ ಅಧಿಕಾರ ಹಸ್ತಾಂತರಿಸಲು ದಿನವೀಡಿ ಕಾಯಿಸಿದ್ದರು. ಇದರಿಂದ ಬೇಸತ್ತ ಇಬ್ರಾಹಿಂ ಮೈಗೂರ ಜಿಲ್ಲಾಧಿಕಾರಿ ಗಮನಕ್ಕೆ ತಂದು ತಾವೇ ಕಡತಗಳಿಗೆ ಸಹಿ ಹಾಕುವ ಮೂಲಕ ಅಧಿಕಾರ ಸ್ವೀಕರಿಸಿದ್ದರು. ಇದೀಗ ಮತ್ತೇ ಅದೇ ಸ್ಥಳಕ್ಕೆ ನಿಯೋಜನೆಗೊಂಡ ಶಕೀಲ್ ಅಹ್ಮದ್ ಅವರಿಗೆ ಇಬ್ರಾಹೀಂ ಮೈಗೂರ ಅಧಿಕಾರ ಹಸ್ತಾಂತರಿಸದೆ ನಿರ್ಗಮಿಸಿರುವುದು ಭಾರೀ ಕುತೂಹಲ ಮೂಡಿಸಿದೆ. ಶಕೀಲ್ ಅಹ್ಮದ್ ಅವರು ಪ್ರಭಾರಿ ಅಧಿಕಾರಿಯಿಂದ ಅಧಿಕಾರ ಸ್ವೀಕರಿಸಿರುವುದು ವಿಶೇಷವಾಗಿದೆ.

ಸ್ಥಳೀಯ ಸಂಸ್ಥೆ ಸದಸ್ಯರಿಂದ ಸಾಮೂಹಿಕ ರಾಜೀನಾಮೆ

ಗದಗ : ಮಾಜಿ ಸಚಿವ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡದ ಹಿನ್ನಲೆಯಲ್ಲಿ ಗದಗ ಜಿಪಂ ಅಧ್ಯಕ್ಷ ವಾಸಣ್ಣ ಕುರಡಗಿ ಸೇರಿ 200ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಜಿಪಂ ಉಪಾಧ್ಯಕ್ಷ ರೂಪಾ ಅಂಗಡಿ ಸೇರಿ 11 ಜಿಪಂ ಸದಸ್ಯರು, 13 ತಾಪಂ ಸದಸ್ಯರು ಹಾಗೂ 24 ಗ್ರಾಪಂಗಳ ಸದಸ್ಯರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರಿಗೆ ರವಾನಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಹೈ ಕಮಾಂಡ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಲ್ಲದೇ, ಶನಿವಾರ ಗದಗ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಮ್ಮ ಅಸಮಾಧಾನ ಹೊರಹಾಕಿದರು. ಟೈರ್ ಗೆ ಬೆಂಕಿ ಹಚ್ಚಿ ಕಿಡಿ ಕಾರಿದರು.

ವಾಹನ ಡಿಕ್ಕಿ ಕಾಲೇಜು ವಿದ್ಯಾರ್ಥಿ ಸಾವು

ಧಾರವಾಡ : ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿದ್ಯಾರ್ಥಿಯೊಬ್ಬ ಸಾವವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ ೪ರ ಮಮ್ಮಿಗಟ್ಟಿ ಬಳಿ ನಡೆದಿದೆ. ಡಿಕ್ಕಿಯ ರಭಸಕ್ಕೆ ಮಮ್ಮಿಗಟ್ಟಿಯ ಕರೆಪ್ಪ ಫಕ್ಕಿರಪ್ಪ ನಾಯ್ಕರ್ (೧೯) ಎಂಬ ವಿದ್ಯಾರ್ಥೀ ಸ್ಥಳದಲ್ಲಿ ಯೇ ಮೃತಪಟ್ಟಿದ್ದಾನೆ. ಇದರಿಂದಾಗಿ ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

18 ದಿನಗಳಿಂದ ನೀರು ಪೂರೈಕೆ ಇಲ್ಲದ ಪರದಾಡುತ್ತಿರುವ ಜನತೆ

ಧಾರವಾಡ: ಹೊಸ ಹೊಸ ಬಡಾವಣೆಗಳಿಗೆ ಅನುಮತಿ ಕೊಡುವ ಸರಕಾರ ಅಲ್ಲಿ ಮೂಲಸೌಕರ್ಯ ಒದಗಿಸದೇ ನಾಗರಿಕರನ್ನು ಸತಾಯಿಸುವುದು ಇತ್ತೀಚಿಗೆ ಅತಿಯಾಗಿದೆ. ಹುಬ್ಬಳ್ಳಿ ಧಾರವಾಡ ನಡುವೆ ಇರುವ ವಾರ್ಡ್ ನಂ 24 ರ ವ್ಯಾಪ್ತಿಯಲ್ಲಿ ಬರುವ ಆರ್.ಟಿ.ಓ ಕಚೇರಿ ಎದುರಿಗಿನ ನಂದಿ ಬಡಾವಣೆಗೆ ನೀರು ಪೂರೈಸುವಲ್ಲಿ ಜಲಮಂಡಳಿ ವಿಫಲಗೊಂಡಿದೆ. ಕಳೆದೊಂದು ವರ್ಷದಿಂದ ಈ ಬಡಾವಣೆಯಲ್ಲಿ ಅಮೃತ ಯೋಜನೆಯ ಕಾಮಗಾರಿಗಳು ಅಸಂಬಧ್ಧವಾಗಿ ನಡೆಯುತ್ತಿದ್ದು ನೀರು ಪೂರೈಕೆ ವ್ಯವಸ್ಥೆಗೆ ವ್ಯಾಪಕ ಧಕ್ಕೆ ಆಗಿದೆ. ಕಳೆದ18 ದಿನಗಳಿಂದ ನಂದಿ ಬಡಾವಣೆಯ ಮೊದಲ ಮುಖ್ಯರಸ್ತೆಯ ಮೂರನೇ ಅಡ್ಡರಸ್ತೆಯಲ್ಲಿ ನೀರು ಪೂರೈಕೆ ಆಗುತ್ತಿಲ್ಲ.ಅಮೃತ ಯೋಜನೆ ಕಾಮಗಾರಿಯಿಂದಾಗಿ ಜಲಮಂಡಳಿ ಪೈಪ್ ಲೈನ್ ಗೆ ಧಕ್ಕೆಯಾಗಿದೆ. ಆದರೆ ಎಲ್ಲಿ ಲೀಕೇಜ್ ಆಗುತ್ತಿದೆ ಎಂದು ಕಂಡು ಹಿಡಿಯಲು ಜಲಮಂಡಳಿಗೆ ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರುಆಕ್ರೋಶ ವ್ಯಕ್ತಪಡಿಸಿದ್ದಾರೆ.ಈಷ್ಟಾದರೂ.ಜಲಮಂಡಳಿ ಅಧಿಕಾರಿಗಳಾಗಲೀ ಪಾಲಿಕೆ ಅಧಿಕಾರಿಗಳಾಗಲೀ ಬಡಾವಣೆಗೆ ಭೇಟಿ ನೀಡಿಜನರ ಅಹವಾಲು ಆಲಿಸಿಲ್ಲ ಎಂದು ಸ್ಥಳೀಯರು ಆಪಾದಿಸಿದ್ದಾರೆ. ವಾರ್ಡಿನ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಹೊರಕೇರಿಯವರಿಗೆ ಹಲವು ಸಲ ಫೋನ್ ಮಾಡಿದರೂ ಬಡಾವಣೆಗೆ ಕಾಲಿಡುತ್ತಿಲ್ಲ. ಹಣ ಕೊಟ್ಟು ಟ್ಯಾಂಕರ್ ಗಳಿಂದ ನೀರು ಹಾಕಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ. ಮಹಾನಗರ ಪಾಲಿಕೆ ಹಾಗೂ ಜಲಮಂಡಳಿ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಸಮಸ್ಯೆ ಬಗೆ ಹರಿಸದಿದ್ದರೆ ವ್ಯಾಪಕ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ನಂದಿ ಬಡಾವಣೆ ನಿವಾಸಿಗಳ ಸಂಘದ ಕಾರ್ಯದರ್ಶಿ ಜಿ.ಎಚ್.ಮೂಗನೂರು ಎಚ್ಚರಿಕೆ ನೀಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಅಪ್ಸರ್ ಆಘಾ ನಿಧನ

ರಾಮನಗರ : ಜೆಡಿಎಸ್ ನಿಂದ ವಿಧಾನಪರಿಷತ್ ಸದಸ್ಯರಾಗಿದ್ದ ಮುಸ್ಲಿಂ ಸಮುದಾಯದ ಹಿರಿಯ ನಾಯಕ ಸೈಯದ್ ಅಪ್ಸರ್ ಆಘಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶುಕ್ರವಾರ ಮಧ್ಯರಾತ್ರಿ 1.30 ಕ್ಕೆ ಹೃದಯಾಘಾತವಾಗಿದ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಅವರು, ಕಳೆದ ಮೂರು ತಿಂಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇಂದು ಮಧ್ಯಾಹ್ನ ಮೂರು ಗಂಟೆಗೆ ಸ್ವಗ್ರಾಮ ರಾಮನಗರದಲ್ಲಿ ಅಂತಿಮ ವಿಧಾನ ಕಾರ್ಯಗಳು ನಡೆಯಲಿದೆ ಎಂದು ಅವರ ಕುಟುಂಬದವರು ಮಾಹಿತಿ ನೀಡಿದ್ದಾರೆ.

ಬೀದಿ ಕಾಮಣ್ಣನಿಗೆ ಗೂಸಾ

ಹುಬ್ಬಳ್ಳಿ : ಹುಡುಗಿಯರನ್ನ ಚುಡಾಯಿಸುತ್ತಿದ್ದ ಬೀದಿ ಕಾಮಣ್ಣನಿಗೆ ಧರ್ಮದೇಟು ನೀಡಿದ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ. ಸಾರ್ವಜನಿಕರಿಂದ ಒದೆ ತಿಂದ ಭೂಪನನ್ನು ರಮೇಶ ಶಿಗ್ಲಿ ಎಂದು ಗುರುತಿಸಲಾಗಿದ್ದು. ಆತ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ. ನೇಕಾರ ನಗರದ ಬಿಡ್ಜ್ ಬಳಿ ನಿಂತು ಯುವತಿಯರನ್ನು ಚುಡಾಯಿಸುತ್ತಿದ್ದೆಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬೀದಿ ಕಾಮಣ್ಣ ಸಿಳ್ಳೆ, ಚಪ್ಪಾಳೆ ಹೊಡೆದು ಯುವತಿಯರನ್ನ ರೇಗಿಸುತ್ತಿದ್ದ. ಈತನ ವರ್ತನೆಯಿಂದ ಬೇಸತ್ತ ಮಹಿಳೆಯರು, ಯುವತಿಯರು ಹಾಗೂ ಸಾರ್ವಜನಿಕರು ಚೆನ್ನಾಗಿ ಥಳಿಸಿದ್ದಾರೆ. ಆನಂತರ ಆತನನ್ನು ಪೊಲೀಸರ ಸುಪರ್ದಿಗೆ ನೀಡಿದ್ದಾರೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿನೊಳಿಗೆ ಸುಟ್ಟು ಕರಕಲಾದ ಎರಡು ದೇಹಗಳು

ಹಾಸನ : ಕಾರಿನೊಳಿಗೆ ಎರಡು ದೇಹಗಳು ಸುಟ್ಟು ಕರಕಲಾಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಪುಷ್ಪಗಿರಿ ಬೆಟ್ಟದ ಬಳಿ ನಡೆದಿದೆ. ನಿನ್ನೆ ರಾತ್ರಿ ವೇಳೆ ಐ 10 ಕಾರು ಹೊತ್ತಿ ಉರಿದಿದೆ. ಇದರಿಂದಾಗಿ ಕಾರಿನಲ್ಲಿದ್ದ ಎರಡು ದೇಹಗಳು ಸುಟ್ಟು ಕರಕಲಾಗಿವೆ. ಕಾರು ಸಂಪೂರ್ಣ ಸುಟ್ಟು ಹೋಗಿದ್ದರಿಂದ ಎರಡು ದೇಹಗಳು ಬೆಂಕಿಗೆ ಆಹುತಿಯಾಗಿವೆ. ಇದಲ್ಲದೆ, ಕಾರಿನೊಳಗೆ ಇದ್ದವರು ಗಂಡೋ-ಹೆಣ್ಣೋ ಎಂದು ಗುರುತು ಸಿಕ್ಕಿಲ್ಲ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ರಾಹುಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಸಚಿವರ ಖಾತೆ ಹಂಚಿಕೆ ಕೊನೆಗೂ ಫೈನಲ್

ಬೆಂಗಳೂರು : ಸಮ್ಮೀಶ್ರ ಸರಕಾರದ ಸಚಿವರ ಖಾತೆ ಹಂಚಿಕೆ ಬಿಕ್ಕಟ್ಟು ಕೊನೆಗೊಂಡಿದ್ದು, ರಾಜ್ಯಪಾಲರ ಅನುಮೋದನೆ ಕೂಡ ದೊರೆತಿದೆ‌. ನಿರೀಕ್ಷೆ ಯಂತೆ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಹಣಕಾಸು/ ಇಂಧನ / ಗುಪ್ತವಾರ್ತೆ / ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಖಾತೆ ಹೊಂದಿದ್ದರೆ, ಡಿಸಿಎಂ ಡಾ‌. ಜಿ. ಪರಮೇಶ್ವರ್ - ಗೃಹ / ಬೆಂಗಳೂರು ನಗರಾಭಿವೃದ್ಧಿ ಪಡೆದಿದ್ದಾರೆ. ಇನ್ನುಳಿದಂತೆ ಎಚ್‌.ಡಿ ರೇವಣ್ಣ - ಲೋಕೋಪಯೋಗಿ ಆರ್‌ವಿ ದೇಶಪಾಂಡೆ - ಕಂದಾಯ ಡಿಕೆ ಶಿವಕುಮಾರ್ - ಜಲಸಂಪನ್ಮೂಲ / ವೈದ್ಯಕೀಯ ಶಿಕ್ಷಣ ಕೆಜೆ ಜಾರ್ಜ್ - ಬೃಹತ್ ಕೈಗಾರಿಕೆ ಬಂಡೆಪ್ಪ ಕಾಶಂಪುರ್ - ಸಹಕಾರ ಕೃಷ್ಣಬೈರೇಗೌಡ - ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ / ಕಾನೂನು ಮತ್ತು ಸಂಸದೀಯ ವ್ಯವಹಾರ ಯುಟಿ ಖಾದರ್ - ನಗರಾಭಿವೃದ್ಧಿ / ವಸತಿ ಸಿಎಸ್ ಪುಟ್ಟರಾಜು - ಸಣ್ಣ ನೀರಾವರಿ ಶಿವಶಂಕರ್ ರೆಡ್ಡಿ - ಕೃಷಿ ಪ್ರಿಯಾಂಕ್ ಖರ್ಗೆ - ಸಮಾಜ ಕಲ್ಯಾಣ ಜಮೀರ್ ಅಹಮದ್ - ಆಹಾರ ಮತ್ತ ನಾಗರೀಕ ಪೂರೈಕೆ / ಅಲ್ಪಸಂಖ್ಯಾತ ಕಲ್ಯಾಣ ಶಿವಾನಂದ ಪಾಟೀಲ್ - ಆರೋಗ್ಯ ವೆಂಕಟರಮಣಪ್ಪ - ಕಾರ್ಮಿಕ ರಾಜಶೇಖರ್ ಪಾಟೀಲ್ - ಗಣಿ ಮತ್ತು ಭೂವಿಜ್ಞಾನ ಪುಟ್ಟರಂಗಶೆಟ್ಟಿ - ಹಿಂದುಳಿದ ವರ್ಗಗಳ ಕಲ್ಯಾಣ ಶಂಕರ್ - ಅರಣ್ಯ ಜಯಮಾಲ - ಮಹಿಳಾ ಮತ್ತು ಮಕ್ಕಳ ಕಲ್ಯಾಣ ರಮೇಶ್ ಜಾರಕಿಹೊಳಿ - ಪೌರಾಡಳಿತ ಮತ್ತು ಯುವಜನ ಮತ್ತು ಕ್ರೀಡೆ ಜಿಟಿ ದೇವೇಗೌಡ - ಉನ್ನತ ಶಿಕ್ಷಣ ಸಾರಾ ಮಹೇಶ್ - ಪ್ರವಾಸೋದ್ಯಮ ಎನ್ ಮಹೇಶ್ - ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಡಿಸಿ ತಮ್ಮಣ್ಣ ಅವರಿಗೆ ಸಾರಿಗೆ ಖಾತೆ ನೀಡಲಾಗಿದೆ.

ಪಕ್ಷದ ಶಿಸ್ತಿಗೆ ಧಕ್ಕೆ ಮಾಡಬೇಡಿ

ಬಾಗಲಕೋಟೆ: ಕಾಂಗ್ರೆಸ್ ಪಕ್ಷದ ಶಿಸ್ತಿಗೆ ಧಕ್ಕೆ ಆಗುವಂತಹ ಕೆಲಸ ಯಾರೂ ಮಾಡಬಾರದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಮನವಿ ಮಾಡಿದ್ದಾರೆ. ಅವರು ಶುಕ್ರವಾರ ಹುಲಗೆಮ್ಮನ ಕೊಳ್ಳದಲ್ಲಿಸುದ್ದಿಗಾರರೊಂದಿಗೆ ಮಾತನಾಡಿ, ನಾನು ಸಿದ್ದರಾಮಯ್ಯನವರ ಮೇಲೆ ಅಸಮಾಧಾನ ಆಗುವ ಪ್ರಶ್ನೆಯೇ ಇಲ್ಲ ಎಂದರು. ಸಚಿವ ಸ್ಥಾನ ಸಿಗಲಿಲ್ಲ ಎಂದು ಸಭೆ ಮಾಡೋದು, ಅತೃಪ್ತಿ, ಆಕ್ರೋಶ ಹಾಗೂ ಅಳೋದು, ಕರೆಯೋದು ಮಾಡುವುದಿಲ್ಲ. ಅಧಿಕಾರ ಒಂದು ಸೇವಾ ಸ್ಥಾನ ಎಂದ ಅವರು ವರಿಷ್ಠರು ತೆಗೆದುಕೊಂಡ ನಿರ್ಣಯಕ್ಕೆ ಬದ್ಧರಾಗಿರಬೇಕು ಎಂದರು. ನನ್ನ ಮಂತ್ರಿ ಮಾಡರಿ ಎಂದು ಯಾರ ಮನೆ ಬಾಗಿಲು ತಟ್ಟಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನನ್ನ ನಿಷ್ಠೆ ಇದೆ ಎಂದ ಅವರು ಪಕ್ಷದ ವಿಷಯವನ್ನು ಬೀದಿಗೆ ತಂದು ವರಿಷ್ಠರ ವಿರುದ್ಧ ಮಾತನಾಡುವುದು ಸೂಕ್ತವಲ್ಲ ಎಂದು ಅತೃಪ್ತ ಶಾಸಕರಿಗೆ ಸಲಹೆ ನೀಡಿದರು. ಇದೇ ವೇಳೆ ಸತೀಶ್ ಜಾರಕಿಹೊಳಿ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಬಹುಶಃ ಸಚಿವ ಸ್ಥಾನ ಲಭಿಸದ ಹಿನ್ನೆಲೆಯಲ್ಲಿ ನೋವಿನಿಂದ ರಾಜೀನಾಮೆಗೆ ನಿರ್ಧರಿಸಿರಬಹುದು ಎಂದರು.

ಕಾಂಗ್ರೆಸ್ ಪಕ್ಷ ಯಡವಿದೆ ಎಂದ ತನ್ವೀರ್ ಸೇಠ್

ಬೆಂಗಳೂರು: ಕಾಂಗ್ರೆಸ್ ಪಕ್ಷ ಇಂತಹ ಸನ್ನಿವೇಶವನ್ನು ಸುಲಭವಾಗಿ ಬಗೆಹರಿಸಬಹುದಿತ್ತು. ಆದರೆ ಕೆಲ ತಪ್ಪು ಹೆಜ್ಜೆ ಯಿಂದೆ ಎಡವಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ತನ್ವೀರ್ ಸೇಠ್ ಹೇಳಿದರು. ಅವರು ಶುಕ್ರವಾರ ಸಂಜೆ ಕ್ರೆಸೆಂಟ್ ರಸ್ತೆಯ ಮಾಜಿ ಸಚಿವ ಎಚ್.ಕೆ.ಪಾಟೀಲ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಚಿವ ಸ್ಥಾನ ಕೈ ತಪ್ಪಿದಕ್ಕೆ ನಾವು ಯಾರ ಮೇಲೂ ಆಪಾದನೆ ಮಾಡುವುದಿಲ್ಲ. ನಮ್ಮ ಬೇಡಿಕೆಗಳ ಬಗ್ಗೆ ಅಷ್ಟೇ ಚರ್ಚೆ ಮಾಡಿದ್ದು, ಅದನ್ನು ವರಿಷ್ಠರ ಗಮನಕ್ಕೆ ತರುತ್ತೇವೆ ಎಂದರು. ಯಾರಿಗೆ, ಯಾಕೆ ಸಚಿವ ಸ್ಥಾನ ಕೊಟ್ಟಿದ್ದಾರೆ ಎನ್ನುವುದಕ್ಕಿಂತ ಸಮ್ಮಿಶ್ರ ಸರ್ಕಾರಕ್ಕೆ ನಾವೆಲ್ಲ ಬೆಂಬಲ ಕೊಟ್ಟಿದ್ದೇವೆ. ಅದರಿಂದ ಹಿಂದೆ ಸರಿಯುವುದಿಲ್ಲ ಎಂದರು.

ಯಾವ ಮಾನದಂಡದ ಮೇಲೆ ಜಯಮಾಲಾಗೆ ಸಚಿವ ಸ್ಥಾನ ?

ಬೆಳಗಾವಿ: ಜಯಮಾಲಾಗೆ ಎಂಎಲ್ಸಿ ಕೋಟಾದಡಿಯಲ್ಲಿ ಸಚಿವ ಸ್ಥಾನ ನೀಡಿರುವುದು ಅಚ್ಚರಿ ತಂದಿದೆ. ಯಾವ ಮಾನದಂಡದ ಮೇಲೆ ಅವರಿಗೆ ಸಚಿವ ಸ್ಥಾನ ನೀಡಿದ್ದಾರೆ ಎಂದು ಗೊತ್ತಾಗುತ್ತಿಲ್ಲ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಕಿಡಿ ಕಾರಿದರು. ಈ ಹಿಂದೆ ಮೋಟಮ್ಮ ಅವರಿಗೆ ಸ್ಥಾನ ಎಂಎಲ್ ಸಿ ಎಂದು ಸಚಿವ ಸ್ಥಾನ ತಪ್ಪಿಸಲಾಗಿತ್ತು. ಆದರೆ ಈಗ ಏಕಾಏಕಿ ಜಯಮಾಲಾ ಅವರಿಗೆ ಸಚಿವ ಸ್ಥಾನ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ. ನಾನು ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದೇನೆ. ನನ್ನ ಹೆಸರು ಕೈ ಬಿಟ್ಟಿದ್ದಕ್ಕೆ ನನಗೆ ಬೇಸರ ತಂದಿದೆ. ಪಕ್ಷದಲ್ಲಿ ಯಾರು ಮಾನದಂಡ ರೂಪಿಸುತ್ತಾರೋ, ಯಾರು ಮುರಿತಾರೋ ಎಂಬುದೇ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೆ, ಈ ಬಗ್ಗೆ ಪಕ್ಷದ ಸಭೆಯಲ್ಲಿ ನನಗೆ ಆಗಿರುವ ಅನ್ಯಾಯದ ವಿರುದ್ಧನಾನು ಖಂಡಿತ ಧ್ವನಿ ಎತ್ತುತ್ತೇನೆ ಎಂದರು. ಕೊನೆ ಕ್ಷಣದಲ್ಲಿ ಸಚಿವ ಸ್ಥಾನದಿಂದ ವಂಚಿತಗೊಂಡ ಲಕ್ಷ್ಮೀ ಹೆಬ್ಬಾಳಕರ್ ಎರಡು ದಿನ ಮೌನಕ್ಕೆ ಶರಣಾಗಿದ್ದರು. ಕೊನೆಗೂ ತಮ್ಮ ಮುಖಂಡರ ವಿರುದ್ಧ ಅಸಮಾಧಾನ ಹೊರಹಾಕಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಖಾತೆ ಅನುಮೋದನೆಗಾಗಿ ರಾಜ್ಯಪಾಲರಿಗೆ ರವಾನೆ

ಬೆಂಗಳೂರು: ರಾಜ್ಯದ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಸಮ್ಮೀಶ್ರ ಸರಕಾರದ ಸಚಿವರ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅವುಗಳ ವಿವರಗಳನ್ನು ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಲಾಗಿದೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಅವರು ಶುಕ್ರವಾರ ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ. ಮಧ್ಯಾಹ್ನವೇ ರಾಜಭವನಕ್ಕೆ ಪಟ್ಟಿ ಕಳುಹಿಸಲಾಗಿದ್ದು, ರಾಜ್ಯಪಾಲರಿಂದ ಅನುಮೋದನೆ ಸಿಕ್ಕಬಳಿಕ ರಾಜ್ಯಪತ್ರ ಹೊರಡಿಸಲಾಗುವುದು ಎಂದರು. ಕಾಂಗ್ರೆಸ್ ನ 22 ಹಾಗೂ ಜೆಡಿಎಸ್ 12 ನ ಸಚಿವರ ಪೈಕಿ ಕಾಂಗ್ರೆಸ್ನಿಂದ 15 ಹಾಗೂ ಜೆಡಿಎಸ್ನಿಂದ 10 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

43 ತಿಂಗಳಲ್ಲಿ 56 ದೇಶ ಸುತ್ತಿದ ಪ್ರಧಾನಿ

ಬೆಳಗಾವಿ: ಸದಾ ವಿದೇಶ ಪ್ರವಾಸದ ಮೂಲಕ ಸುದ್ದಿಯಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಎರಿದ ನಂತರ 43 ತಿಂಗಳಲ್ಲಿ 56 ದೇಶ ಪ್ರವಾಸ ಕೈಗೊಂಡಿರುವುದು ಬೆಳಗಾವಿಯ ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಡಾದ ಅವರು ಪಡೆದ ಮಾಹಿತಿ ಹಕ್ಕು ದಾಖಲೆ ಮೂಲಕ ಬಹಿರಂಗ ಗೊಂಡಿದೆ. ಪ್ರಧಾನಿ ಮೋದಿ ಅವರು, 2014 ರ ಜೂನ್ ನಿಂದ 2018 ಜನವರಿವರೆಗೆ 56 ದೇಶ ಸುತ್ತಾಡಿ, 165 ದಿನದ ಪ್ರವಾಸಕ್ಕೆ 377.67 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಒಟ್ಟಾರೆ ಪ್ರವಾಸದ ಪೈಕಿ ಫ್ರಾನ್ಸ್, ಜರ್ಮನಿ ಹಾಗೂ ಕೆನಡಾದ 9 ದಿನ ಪ್ರವಾಸ ವೆಚ್ಚ ಅತಿ ಹೆಚ್ಚು ಎನ್ನಲಾಗುತ್ತಿದೆ. ಇದಕ್ಕಾಗಿ ಅವರು 32.25 ಕೋಟಿ ರೂ. ವೆಚ್ಚ ಮಾಡಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕೃತ ಮಾಹಿತಿಯಿಂದ ಬಹಿರಂಗಗೊಂಡಿದೆ. ಅದೇ ರೀತಿ ಎರಡು ದಿನಗಳ ಭೂತಾನ್ ಭೇಟಿ ಅತಿ ಕಡಿಮೆ ವೆಚ್ಚದಾಗಿದ್ದು, ಇದಕ್ಕಾಗಿ 2.45 ಕೋಟಿ ತಗುಲಿದೆ ಎಂದು ವಿವರಿಸಿದ್ದಾರೆ. ಪ್ರಧಾನಿ ಕೈಗೊಂಡ ವಿದೇಶ ಪ್ರವಾಸದಿಂದ ಕೋಟ್ಯಂತರ ರೂ. ವೆಚ್ಚ ತಗುಲಿದ್ದರೂ, ದೇಶಕ್ಕೆ ಇದರಿಂದ ಏನೇನು ಲಾಭವಾಗಿದೆ ಎಂಬುವುದನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಬೇಕು ಎಂದು ಭೀಮಪ್ಪ ಗಡಾದ್ ಒತ್ತಾಯಿಸಿದ್ದಾರೆ.

ದುಶ್ಚಟಗಳಿಗೆ ತಿಲಾಂಜಲಿ ಹಾಕಿ

ಧಾರವಾಡ : ಕುಡಿತದಂತಹ ನರಕ ಜೀವನ ಇನ್ನೊಂದಿಲ್ಲ. ಅಂತಹ ದುಶ್ಚಟಕ್ಕೆ ತಿಲಾಂಜಲಿ ಹಾಕಬೇಕು. ಇತರರನ್ನುಕೂಡ ಕುಡಿತ ಬಿಡುವಂತೆ ಮಾಡಲು ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಶುಕ್ರವಾರ ಧಾರವಾಡದ ರಾಯಾಪುರದಲ್ಲಿನ ಮಹಿಳಾ ಜ್ಞಾನವಿಕಾಸತರಬೇತಿ ಸಂಸ್ಥೆಯಲ್ಲಿ ನಡೆದ ಮದ್ಯವರ್ಜನ ಶಿಬಿರದಲ್ಲಿ ಕುಡಿತ ಬಿಟ್ಟವರಿಗೆ ಜಾಗೃತಿ ಅಣ್ಣ ಹಾಗೂ ಜಾಗೃತಿ ಮಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಎಲ್ಲವೂ ಮನಸ್ಸಿನ ಭಾವನೆಯಿಂದ ನಡೆಯುತ್ತವೆ. ಕಟ್ಟುನಿಟ್ಟಿನ ಪಾಲನೆ ಮಾಡುವುದರಿಂದ ಮದ್ಯಪಾನ ಬಿಡಬಹುದು. ಆದರೆ ಅದಕ್ಕೆ ದೃಢ ಮನಸ್ಸು ಅಗತ್ಯ. ಮದ್ಯಪಾನಕ್ಕೆ ಯಾವುದೇ ಜಾತಿ, ಧರ್ಮಇಲ್ಲ. ಪಂಚೇಂದ್ರಿಯಗಳು ಎಲ್ಲವನ್ನೂ ಸೋಲಿಸುತ್ತವೆ. ಕಣ್ಣಿಗೆ ನೋಡಿದ ತಕ್ಷಣ ಬೇಕೆನ್ನಿಸುತ್ತದೆ. ಯಾರ ಒತ್ತಾಯಕ್ಕೆ ಮಣಿದು ನೀವು ಕುಡಿಯಲು ಆರಂಭಿಸಿದರೆ ಅದು ನಿಮ್ಮ ಶಾಶ್ವತ ಸೋಲು ಆಗುತ್ತದೆ ಎಂದರು. ಈ ಸಂದರ್ಭದಲ್ಲಿ ಚನ್ನಬಸವಾನಂದ ಸ್ವಾಮೀಜಿ, ಪ್ರಾದೇಶಿಕ ನಿರ್ದೇಶಕ ಜಯಶಂಕರ್ ಶರ್ಮಾ, ಸೀತಾರಾಮ್ ಶೆಟ್ಟಿ, ಮದ್ಯವರ್ಜನ ವ್ಯವಸ್ಥಾಪನಾ ಸಮಿತಿಯ ರಾಜ್ಯ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯಸ್, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಹಾವೀರ ಉಪಾಧ್ಯೆ, ರಾಜಣ್ಣ ಕೊರವಿ, ಜಿಲ್ಲಾ ನಿರ್ದೇಶಕ ದಿನೇಶ್‌ಎಮ್ , ಶಿಬಿರಾಧಿಕಾರಿ ಗಣೇಶ್, ಯೋಜನಾಧಿಕಾರಿ ಉಲ್ಲಾಸ್ ಮೇಸ್ತ ಉಪಸ್ಥಿತರಿದ್ದರು.

ಎಂ.ಬಿ. ಪಾಟೀಲ್ ಗೆ ದೆಹಲಿ ಬುಲಾವ್

ಬೆಂಗಳೂರು : ರಾಜ್ಯದ ಸಮ್ಮೀಶ್ರ ಸರಕಾರದಲ್ಲಿ ಸಚಿವ ಸ್ಥಾನ ಸಿಗದೆ ತೀವ್ರ ಅಸಮಾಧಾನಗೊಂಡಿರುವ ಮಾಜಿ ಜಲಸಂಪನ್ಮೂಲ ಸಚಿವ ಹಾಗೂ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಬುಲಾವ್ ನೀಡಿದೆ. ಈ ಹಿನ್ನಲೆಯಲ್ಲಿ ಶುಕ್ರವಾರ ಸಂಜೆ ಅವರು ಏರ್ ಇಂಡಿಯಾ ವಿಮಾನದ ಮೂಲಕ ದೆಹಲಿಗೆ ತೆರಳಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಎಂಬಿ ಪಾಟೀಲರು ದೆಹಲಿಗೆ ಹೊರಟಿದ್ದಾರೆ. ಇದಕ್ಕೂ ಮುನ್ನ ಕೆಲ ಕಾಲ ವಿಐಪಿ ಗೃಹದಲ್ಲಿ ತಂಗಿದ್ದ ಅವರು ಏರ್ ಇಂಡಿಯಾದ ಏಐ 503 ವಿಮಾನದ ಮೂಲಕ ದೆಹಲಿಗೆ ಹೊರಟಿದ್ದಾರೆ. ಅವರೊಂದಿಗೆ ಹದಿನೈದಕ್ಕೂ ಹೆಚ್ಚು ಅತೃಪ್ತ ಶಾಸಕರಿದ್ದು, ಜೂನ್ 13ರಂದು ಭಿನ್ನಮತ ಶಾಸಕರು ಮತ್ತೇ ಸಭೆ ಸೇರುವ ಸಾಧ್ಯತೆಯಿರುವುದರಿಂದ ಅವರಿಗೆ ಹೈಕಮಾಂಡ್ ಯಾವ ರೀತಿ ಸಮಾಧಾನ ಹೇಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಆಗ್ರಹ

ಧಾರವಾಡ : ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಆಗ್ರಹಿಸಿ ಎಐಡಿಎಸ್ಓ ಹಾಗೂ ಎಐಡಿವೈಓ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಶಾಲಾ-ಕಾಲೇಜುಗಳ ನೂರಾರು ವಿದ್ಯಾರ್ಥೀಗಳು ಶುಕ್ರವಾರ ಧಾರವಾಡದಲ್ಲಿ ಪ್ರತಿಭಟನಾ ರ್ಯಾ ಲಿ ನಡೆಸಿದರು. ಶೈಕ್ಷಣಿಕ ವರ್ಷ ಈಗಾಗಲೇ ಪ್ರಾರಂಭವಾಗಿದ್ದು ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಉಚಿತ ಬಸ್ಪಾಸ್ನನಿರೀಕ್ಷೆಯಲ್ಲಿದ್ದಾರೆ. ಆದರೆ ಈವರೆಗೆ ಮುಖ್ಯಮಂತ್ರಿಗಳು ನಮ್ಮ ಭರವಸೆ ಈಡೇರಿಸಿಲ್ಲ. ಇದರಿಂದಾಗಿ ಬಡವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಬಗ್ಗೆ ಕೂಡಲೇ ಸಾರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಉಚಿತ ಬಸ್ಪಾಸ್ ನೀತಿಯನ್ನು ಜಾರಿಗೊಳಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಎಐಡಿಎಸ್ಓ ಜಿಲ್ಲಾಧ್ಯಕ್ಷರಾದ ಶರಣು ಗೋನವಾರ, ಎಐಡಿವೈಓ ಜಿಲ್ಲಾ ಉಪಾಧ್ಯಕ್ಷರಾದ ರಮೇಶ ಹೊಸಮನಿ, ಭವಾನಿಶಂಕರ, ಮಹಾಂತೇಶ, ರಣಜಿತ್, ಕಿರಣ, ಸಿಂಧು, ಸಂದ್ಯಾ ಮುಂತಾದವರು ಭಾಗವಹಿಸಿದ್ದರು.

ಬೋಧನೆಗೆ ನಿರ್ಲಕ್ಷ್ಯ ತೋರುವ ಶಿಕ್ಷಕರ ಮೇಲೆ ಕ್ರಮ

ಧಾರವಾಡ : ಮಕ್ಕಳ ಕನಿಷ್ಠ ಕಲಿಕೆಗೆ ಶ್ರಮಿಸದ ಹಾಗೂ ಬೋಧನೆಯನ್ನು ಅಲಕ್ಷಿಸುವ ಶಿಕ್ಷಕರ ಮೇಲೆ ಶಿಸ್ತುಕ್ರಮ ಕೈಕೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಎಚ್ಚರಿಸಿದರು. ಅವರು ಶುಕ್ರವಾರ ನಗರದ ಡಯಟ್ದಲ್ಲಿ ಜರುಗಿದ ಸಮಾರಂಭದಲ್ಲಿ ‘ದರ್ಪಣ’ ಬಿಡುಗಡೆಗೊಳಿಸಿ ಮಾತನಾಡಿದರು. ಶಾಲಾ ಮಕ್ಕಳಲ್ಲಿ ಸ್ಪಷ್ಟ ಓದು, ಬರಹ, ಲೆಕ್ಕಾಚಾರಗಳ ಕೊರತೆ ಇರುವುದನ್ನು ತಾವು ಕಂಡುಕೊಂಡಿದ್ದು, ವಿದ್ಯಾರ್ಥಿಗಳಲ್ಲಿ ಕನಿಷ್ಠ ಕಲಿಕೆಯೂ ಸಾಧ್ಯವಾಗದೇ ಇರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು. ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು ನಿತ್ಯವೂ ಶಾಲೆಗಳಿಗೆಭೇಟಿ ನೀಡುವುದು ಕಡ್ಡಾಯಗೊಳಿಸಲಾಗಿದ್ದು, ವಿಶೇಷವಾಗಿ ತರಗತಿಗಳ ಪರಿಶೀಲನೆ ನಡೆಸಬೇಕು. ಗುಣಮಟ್ಟದ ಕಲಿಕೆ ಜೊತೆಗೆ ಸರಕಾರಿ ಶಾಲೆಗಳ ಬಗ್ಗೆ ಪೋಷಕರಿಗೆ ಭರವಸೆ ಮೂಡಬೇಕಾಗಿದೆ ಎಂದರು.

ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲ್ಲ

ದಾವಣಗೆರೆ: ಸಚಿವ ಸ್ಥಾನಕ್ಕಾಗಿ ನಾನು ಯಾವುದೇ ಲಾಬಿ ಮಾಡಲ್ಲ ಎಂದು ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸ್ಪಷ್ಟಪಡಿಸಿದ್ದಾರೆ. ಅವರು ಶುಕ್ರವಾರ ದಾವಣಗೆರೆಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಪಕ್ಕಾ ಕಾಂಗ್ರೆಸಿಗ. ಸಚಿವ ಸ್ಥಾನ ತಪ್ಪಿದ್ದಕ್ಕೆ ನನಗೆ ಬೇಸರವಿಲ್ಲ ಎಂದರು. ಸಚಿವ ಸ್ಥಾನಕ್ಕೆ ಸಂಬಂಧಪಟ್ಟಂತೆ ಪಕ್ಷದ ಯಾವೊಬ್ಬ ನಾಯಕರು ತಮ್ಮ ಜೊತೆಗೆ ಮಾತುಕತೆ ನಡೆಸಿಲ್ಲ. ಉಳಿದ ಆರು ಸಚಿವ ಸ್ಥಾನಗಳಿಗೆ ನೇಮಕ ಯಾವಾಗ ಆಗುತ್ತದೆ ಎಂದು ಹೇಳುವುದು ಕಷ್ಟ ಎಂದ ಅವರು ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡುವುದಾಗಿ ಸುಳ್ಳು ವದಂತಿ ಹರಡಿಸಲಾಗಿದೆ. ಅದೆಲ್ಲಾ ಸುಳ್ಳು ಎಂದರು.

ದುನಿಯಾ ವಿಜಯ್ ಗೆ ನಿರೀಕ್ಷಣಾ ಜಾಮೀನು

ಬೆಂಗಳೂರು: ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪ ಎದುರಿಸುತ್ತಿದ್ದ ನಟ ದುನಿಯಾ ವಿಜಯ್ ಹಾಗೂ ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಬೆಂಗಳೂರಿನ 65ನೇ ಸೆಶನ್ಸ್ ಕೋರ್ಟ್ ನಟ ವಿಜಯ್ಗೆ ಜಾಮೀನು ನೀಡಿದ್ದು, ಇಬ್ಬರಿಗೂ ತಲಾ ಒಂದು ಲಕ್ಷ ರೂ. ಭದ್ರತಾ ಠೇವಣಿ ಹಾಗೂ ವೈಯಕ್ತಿಕ ಬಾಂಡ್ ಆಧಾರದ ಮೇಲೆ ನಿರೀಕ್ಷಣಾ ಜಾಮೀನು ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ತಾವರೆಕೆರೆ ಪೊಲೀಸರು ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ಬಂಧಿಸಲು ಮುಂದಾದ ವೇಳೆ ಅವರು ಅಡ್ಡಿಪಡಿಸಿದ್ದರಿಂದ ಸುಂದರ್ ಗೌಡ ಪರಾರಿಯಾಗಿದ್ದ. ಈ ಹಿನ್ನಲೆಯಲ್ಲಿ ವಿಜಿ ವಿರುದ್ಧ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯದ ಆದೇಶಕ್ಕೂ ಮುನ್ನವೇ ದುನಿಯಾ ವಿಜಯ್ ನನ್ನು ತಮಿಳುನಾಡಿನಲ್ಲಿ ಪೊಲೀಸರು ಬಂಧಿಸಿದ್ದರಿಂದ ನಿರೀಕ್ಷಣಾ ಜಾಮೀನು ಆದೇಶ ಅನ್ವಯವಾಗುತ್ತದೆಯೋ ಅಥವಾ ಮತ್ತೆ ಸಾಮಾನ್ಯ ಜಾಮೀನು ಪಡೆದುಕೊಳ್ಳಬೇಕೋ ಎಂಬ ಗೊಂದಲಗಳಿವೆ. ಹೀಗಾಗಿ ಈ ಬಗ್ಗೆ ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಜರುಗಿಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮತದಾರರಿಗೆ ಬೆಳ್ಳಿ ನಾಣ್ಯ ವಿತರಣೆ ಮಾಡುತ್ತಿದ್ದ ವ್ಯಕ್ತಿ ಬಂಧನ

ಕಲಬುರಗಿ : ಈಶಾನ್ಯ ಪದವೀಧರರ ವಿಧಾನ ಪರಿಷತ್ ಚುನಾವಣೆ ವೇಳೆ ಮತದಾರರಿಗೆ ಬೆಳ್ಳಿ ನಾಣ್ಯ ವಿತರಣೆ ಮಾಡುತ್ತಿದ್ದ ವ್ಯಕ್ತಿಯನ್ನುಬಂಧಿಸುವಲ್ಲಿ ವಾಡಿ ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ. ವಶಕ್ಕೆ ಪಡೆದಿದ್ದಾರೆ. ತಮ್ಮ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಆಮಿಷ ಒಡ್ಡಿ ಭಾಸ್ಕರ್ ರೆಡ್ಡಿ ಎಂಬಾತ ಮತದಾರರಿಗೆ ನಾಣ್ಯ ವಿತರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಬಂಧಿತನಿಂದ 40ಕ್ಕೂ ಹೆಚ್ಚು ಬೆಳ್ಳಿ ನಾಣ್ಯಗಳನ್ನು ವಶಕ್ಕೆ ಪಡೆಯಲಾಗಿದ್ದು, ನಿನ್ನೆ ಕೂಡ ಮತದಾರರಿಗೆ 50 ಬೆಳ್ಳಿ ನಾಣ್ಯ ವಿತರಿಸಿದ್ದ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಭಾಸ್ಕರ ರೆಡ್ಡಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಕುರಿತು ಚಿತ್ತಾಪೂರ ತಾಲೂಕಿನ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ ಅಸಮಾಧಾನ ನಮ್ಮ ವ್ಯಾಪ್ತಿಗೆ ಬರಲ್ಲಎಂದ ಸಿಎಂ

ಬೆಂಗಳೂರು: ಮಂತ್ರಿಗಿರಿ ಸಿಗದೆ ಕಾಂಗ್ರೆಸ್ ಪಕ್ಷದ ಕೆಲ ಶಾಸಕರು ಅತೃಪ್ತರಾಗಿರುವುದು ನಿಜ. ಆದರೆ ಅದು ನಮ್ಮ ವ್ಯಾಪ್ತಿಗೆ ಬರಲ್ಲ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಅವರು ಶುಕ್ರವಾರ ಸದಾಶಿವನಗರದ ಎಂ.ಬಿ. ಪಾಟೀಲ್ ನಿವಾಸಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ನಮ್ಮದು ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಗಿರುವುದರಿಂದ ಜವಾಬ್ದಾರಿಯಿಂದ ನಾನು ಎಂ.ಬಿ. ಪಾಟೀಲರನ್ನು ಮಾತನಾಡಿಸಿದ್ದೇನೆ. ಅವರು ತಮ್ಮ ಮನಸ್ಸಿನ ಭಾವನೆಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಅವರ ತಂದೆ ಕೂಡ ನನಗೆ ಪರಿಚಿತರಾಗಿದ್ದರು. ಈ ಹಿನ್ನೆಲೆ ಯಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೇನೆ ಎಂದರು. ಅವರ ಅಸಮಾಧಾನವನ್ನು ನನ್ನ ಕೈಲಾದ ಮಟ್ಟಿಗೆ ನಿವಾರಿಸುವ ಪ್ರಯತ್ನ ಮಾಡಿದ್ದೇನೆ. ಇದು ಅವರ ಪಕ್ಷದ ಆಂತರಿಕ ವಿಚಾರ. ಹೀಗಾಗಿ ಈ ಬಗ್ಗೆ ಹೆಚ್ಚು ಹೇಳಲು ಸಾಧ್ಯವಿಲ್ಲ ಎಂದರು. ನಾನೊಬ್ಬ ನಿಷ್ಠಾವಂತ ರಾಜಕಾರಣಿಯಾಗಿ ಇಲ್ಲಿಗೆ ಬಂದಿದ್ದೇನೆ. ಕಾಂಗ್ರೆಸ್ ಕಷ್ಟದಲ್ಲಿರುವಾಗ ಸಂಧಾನಕ್ಕೆ ಬರುವುದು ಸರಿ ಅನ್ನಿಸಿ ಬಂದಿದ್ದೇನೆ. ಪಕ್ಷಕ್ಕಾಗಿ ಎಂ.ಬಿ. ಪಾಟೀಲ್ ಸಾಕಷ್ಟು ಶ್ರಮಿಸಿದ್ದಾರೆ. ಬೇಸರ ಆಗುವುದು ಸಹಜ. ಸಚಿವರಾಗುವ ನಿರೀಕ್ಷೆ ಹೊಂದಿದ್ದ ಅವರಿಗೆ ಕಾಂಗ್ರೆಸ್ ನಾಯಕರು ಸಮಾಧಾನ ಪಡಿಸುವ ಕೆಲಸ ಮಾಡುತ್ತಿದ್ದಾರೆ. ಸಮ್ಮೀಶ್ರ ಸರಕಾರಸುಭದ್ರವಾಗಿರಬೇಕೆಂಬ ಆಸೆಯಿಂದ ನಾನು ಕೂಡ ಕೈ ಜೋಡಿಸಿದ್ದೇನೆ ಎಂದರು. ಆದರೆ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರ ಸಂಧಾನ ಕೂಡ ವಿಫಲವಾಗಿದೆ. ಹೀಗಾಗಿ ಎಂ.ಬಿ. ಪಾಟೀಲರ ಮುಂದಿನ ನಡೆ ಭಾರೀ ಕುತೂಹಲ ಕೆರಳಿಸಿದೆ.

ಸಿದ್ದರಾಮಯ್ಯ- ಪರಮೇಶ್ವರ್ ನಡುವೆ ಭಿನ್ನಾಭಿಪ್ರಾಯವಿಲ್ಲ

ಕಲಬುರಗಿ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಎಂದು ಲೋಕಸಭಾ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ಅವರು ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಒಗ್ಗಟ್ಟಾಗಿಯೇ ಇದ್ದಾರೆ. ನಾನೊಂದು ತೀರಾ, ನೀನೊಂದು ತೀರಾ ಎನ್ನುವುದು ಕೇವಲ ಊಹಾಪೋಹ ಎಂದರು. ಅಲ್ಲದೆ, ಅವರು ಕವಲು ದಾರಿ ಹಿಡಿದಿದ್ದಾರೆ ಎಂದು ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬೇಡಿ ಎಂದು ಮಾಧ್ಯಮಗಳಿಗೆ ಸಲಹೆ ಮಾಡಿದರು. ಇದೇ ವೇಳೆ ಸಚಿವ ಸ್ಥಾನ ವಂಚಿತರಿಗೆ ಹೈಕಮಾಂಡ್ ಸಮಾಧಾನ ಮಾಡುತ್ತದೆ. ಅದಕ್ಕೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದ ಅವರು ಜಾತ್ಯಾತೀತ ತತ್ವಗಳನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಆರ್ಎಸ್ಎಸ್ ಹಾಗೂ ಬಿಜೆಪಿ ದೇಶ ಒಡೆಯುವ ಕೆಲಸ ಮಾಡುತ್ತಿವೆ. ಇದನ್ನು ನಮ್ಮ ಶಾಸಕರು ಅರ್ಥ ಮಾಡಿಕೊಂಡಿದ್ದಾರೆ ಎಂದರು.

ಜಾಣ ಆನೆಯ ಕಸರತ್ತಿಗೆ ನೆಟ್ಟಿಗರ ಭಾರೀ ಪ್ರಶಂಸೆ

ಮೈಸೂರು: ಹಲಸಿನ ಹಣ್ಣು ತಿನ್ನಲು ಕಾಡಾನೆ ಯೊಂದು ಹರಸಾಹಸ ನಡೆಸಿದಲ್ಲದೆ, ಕೊನೆಗೆ ಹಣ್ಣು ಸಿಗದಿದ್ದಾಗ ಮರದ ಮೇಲೆ ತನ್ನೆರಡು ಕಾಲಿಟ್ಟು ಕೊನೆಗೆ ಹಣ್ಣು ತಿಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಪ್ರದೇಶದ ತೋಟವೊಂದಕ್ಕೆ ನುಗ್ಗಿದ ಕಾಡಾನೆಯೊಂದು ಹಲಸಿನ ಮರದ ಬಳಿ ಬಂದು ಹಣ್ಣನ್ನು ಕೀಳಲು ಯತ್ನಿಸಿದೆ. ಅದು ಸಿಗದಿದ್ದಾಗ ತನ್ನ ಸೊಂಡಿಲನ್ನು ಆದಷ್ಟು ಮೇಲೆಕ್ಕೆ ಎತ್ತಿ ಹರಸಾಹಸ ನಡೆಸಿದೆ. ಕೊನೆಗೆ ಹಣ್ಣು ಸಿಗದಿದ್ದಾಗ ಮರದ ಮೇಲೆಯೇ ತನ್ನೆರಡು ಕಾಲುಗಳನ್ನಿಟ್ಟು ಹಲಸಿನ ಹಣ್ಣನ್ನು ಸವಿದಿದೆ. ಜಾಣ ಆನೆಯ ಕಸರತ್ತಿಗೆ ನೆಟ್ಟಿಗರು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹೈಕಮಾಂಡ್ ಗೆ ಅಸಮಾಧಾನದ ಸಂದೇಶ ರವಾನಿಸಿದ ಜಾರಕಿಹೊಳಿ

ಬೆಂಗಳೂರು : ಸಚಿವ ಸಿಗದಕ್ಕೆ ತೀವ್ರ ಅಸಮಾಧಾನಗೊಂಡಿರುವ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ತಮ್ಮ ಸಂದೇಶವನ್ನು ಹೈಕಮಾಂಡ್ ಗೆ ರವಾನಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಮಲ್ಲೇಶರಂ ಕಚೇರಿಗೆ ಭೇಟಿ ನೀಡಿ, ಕೆಲಕಾಲ ಮಾತುಕತೆ ನಡೆಸಿ, ತಮ್ಮಮುಂದಿನ ನಡೆಯನ್ನು ತಿಳಿಸಿದರು. ಕಾರ್ಯಾಧ್ಯಕ್ಷರ ಮೂಲಕ ತಮ್ಮ ಅಸಮಾಧಾನದ ಸಂದೇಶ ವನ್ನು ಹೈಕಮಾಂಡ್ಗೆ ರವಾನಿಸಿದ್ದಾರೆ ಎನ್ನಲಾಗಿದ್ದು, ಈ ವೇಳೆ ಅವರ ಮನವೊಲಿಸುವ ಕೆಲಸವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ. ಇದೇ ವೇಳೆ ಸಚಿವ ಕೃಷ್ಣ ಭೈರೇಗೌಡ ಕೂಡ ಸತೀಶ ಜಾರಕಿಹೊಳಿ ಅವರೊಂದಿಗೆ ಮಾತುಕತೆ ನಡೆಸಿ, ಭಿನ್ನಮತ ಶಮನಕ್ಕೆ ಯತ್ನಿಸಿದರು. ಅಲ್ಲದೆ, ಮುಂದೆ ಎಲ್ಲವೂ ಸರಿ ಹೋಗಲಿದೆ ಎಂದು ಭರವಸೆ ನೀಡಿದರು ಎನ್ನಲಾಗಿದೆ.

ಸಚಿವ ಸ್ಥಾನ ವಂಚಿತರಿಗೆ ಸಮಾಧಾನ ಪಡಿಸಲು ಹೊಸ ಫಾರ್ಮುಲಾ

ಬೆಂಗಳೂರು: ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ವಂಚಿತರಿಗೆ ಸಮಾಧಾನ ಪಡಿಸಲು ಕಾಂಗ್ರೆಸ್ ಹೈ ಕಮಾಂಡ್ ಹೊಸ ಫಾರ್ಮುಲಾವನ್ನು ಸಿದ್ಧಪಡಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು. ಅವರು ಶುಕ್ರವಾರ ಮಲ್ಲೇಶ್ವರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಮುಖಂಡರು ಆತುರದ ನಿರ್ಧಾರ ಕೈಗೊಳ್ಳಬಾರದು ಎಂದರು. ನಮ್ಮ ಹೈಕಮಾಂಡ್ ಸಂಪುಟ ರಚನೆ ಸಂಬಂಧ ಒಂದು ಫಾರ್ಮುಲಾ ಮಾಡಿದ್ದು,ಈ ಬಾರಿ ಸಚಿವರಾದವರ ಅವಧಿ ಕೇವಲ ಎರಡು ವರ್ಷಗಳಾದರೆ, ಮುಂದಿನ ಅವಧಿಗೆ ಸಚಿವರಾದವರಿಗೆ 3 ವರ್ಷ ಅವಧಿ ನೀಡಲು ನಿರ್ಧರಿಸಿದೆ. ಹೀಗಾಗಿ ಈ ಅವಧಿಯಲ್ಲಿ ವಂಚಿತರು 2 ವರ್ಷ ಕಾದರೆ 3 ವರ್ಷಕ್ಕೆ ಅವಕಾಶ ಲಭಿಸಲಿದೆ ಎಂದರು.

ನಾನು ಏಕಾಂಗಿ ಅಲ್ಲ ಎಂದ ಎಂ. ಬಿ. ಪಾಟೀಲ್

ಬೆಂಗಳೂರು: ನನ್ನೊಂದಿಗೆ 15-20 ಶಾಸಕರಿದ್ದಾರೆ. ನಾನು ಏಕಾಂಗಿ ಅಲ್ಲ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ್ ತಿಳಿಸಿದರು. ಅವರು ತಮ್ಮ ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಹಲವು ಸುತ್ತಿನ ಮಾತುಕತೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಏಕಾಂಗಿ ಎಂದು ಪರಿಗಣಿಸುವುದು ತಪ್ಪು ಎಂದರು. ನನ್ನನ್ನು ನಂಬಿ ಹದಿನೈದು ಶಾಸಕರು ಬಂದಿದ್ದಾರೆ. ನಾವೆಲ್ಲಾ ಕುಳಿತು ಒಟ್ಟಿಗೆ ಚರ್ಚಿಸಿ ಒಂದು ಒಮ್ಮತದ ನಿರ್ಧಾರಕ್ಕೆ ಬರುತ್ತೇವೆ ಎಂದು ಹೇಳಿದರು. ನಾನು ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ ಎಂದ ಅವರು ನನ್ನ ಮನೆಯಲ್ಲಿ ಸಭೆ ನಡೆಸಲು ಯಾರ ಪರವಾನಗಿ ಅಗತ್ಯವಿಲ್ಲ. ನಾವು ಎರಡು ದಿನಗಳಿಂದ ಚರ್ಚಿಸುತ್ತಿದ್ದೇವೆ. ನನಗೆ ಸಾಕಷ್ಟು ಜವಾಬ್ದಾರಿ ಇದೆ. ಅದನ್ನು ಮೀರಿ ಹೋಗಲು ಸಾಧ್ಯವಿಲ್ಲ ಎಂದರು. ಸ್ವತಃ ಸಿಎಂ ಕುಮಾರಸ್ವಾಮಿ ಅವರು ಎಂ.ಬಿ. ಪಾಟೀಲ ಅವರ ಮನವೊಲಿಸಲು ಆಗಮಿಸಿದ್ದರೂ ಯಾವುದೆ ಪ್ರಯೋಜನವಾಗದಿರುವುದು ಭಾರೀ ಕುತೂಹಲ ಕೆರಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹತ್ತೆ ಸಂಚು ರೂಪಿಸಲಾಗಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಸ್ಫೋಟಕ ಮಾಹಿತಿಯನ್ನು ಪುಣೆ ಪೊಲೀಸರು ಪತ್ತೆ ಹಚ್ಚಿದ್ದು, ಮಾವೋ ಉಗ್ರರ ಗುಂಪಿನ ನಾಯಕ ಕಿಶನ್ ಎಂಬುವರು ಪ್ರಕಾಶ ಎಂಬುವರಿಗೆ ಬರೆದ ಗುಪ್ತ ಪತ್ರವನ್ನು ಬಯಲಿಗೆ ಎಳೆದಿದ್ದಾರೆ. ಪ್ರಧಾನಿ ಮೋದಿಯವರನ್ನು ರಾಜೀವ್ ಗಾಂಧಿ ಅವರ ಹತ್ಯೆ ಮಾದರಿಯಲ್ಲಿಯೇ ಸಾರ್ವಜನಿಕ ಬಹಿರಂಗ ಸಭೆಯಲ್ಲಿ ಮಾನವಹತ್ಯಾ ಬಾಂಬ್ ದಾಳಿ ನಡೆಸಲು ಸೂಚಿಸಲಾಗಿರುವುದು ಪತ್ರದಲ್ಲಿ ಸೂಚನೆ ನೀಡಲಾಗಿದೆ. ಈಗಾಗಲೇ ಪ್ರಧಾನಿ ಮೋದಿಯವರಿಗೆ ಅಂತರ್ ರಾಷ್ಟ್ರೀಯ ಉಗ್ರ ಸೈಯದ್ ಹಫೀಜ್ ಸೇರಿದಂತೆ ಲಷ್ಕರ್ ತಯ್ಬಾ ಉಗ್ರರು ಹತ್ಯೆ ನಡೆಸಲು ಸಂಚು ರೂಪಿಸಿದ ಬೆನ್ನಲೇ ಮಾವೋ ಉಗ್ರರು ಕೂಡ ಹತ್ಯೆಗೆ ಸಂಚು ರೂಪಿಸುವ ಈ ಅಂಶ ಮೋದಿ ಅವರ ಕೋಟ್ಯಾಂತರ ಅಭಿಮಾನಿಗಳಿಗೆ ಹಾಗೂ ಬಿಜೆಪಿಯ ಕಾರ್ಯಕರ್ತರಿಗೆ ಭಾರೀ ಆಘಾತವುಂಟು ಮಾಡಿದೆ.

ವೀರಾಂಜನೇಯ ಬೆಳ್ಳಿ ಮೂರ್ತಿ ಕಳುವು ಮಾಡಿದ ಖದೀಮರು

ಉಡುಪಿ : ಇಲ್ಲಿಯ ಇತಿಹಾಸ ಪ್ರಸಿದ್ಧ ಶ್ರೀ ವಿಶ್ವೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿರುವ ವೀರಾಂಜನೇಯ ದೇವರ ಬೆಳ್ಳಿ ಮೂರ್ತಿ ಹಾಗೂ ಪ್ರಭಾವಳಿಯಲ್ಲಿ ಖದೀಮರು ಕಳ್ಳತನವೆಸಗಿದ್ದಾರೆ. ಗುರುವಾರ ತಡರಾತ್ರಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರ ತಂಡ ಈ ದುಷ್ಕೃತ್ಯ ಎಸಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಸಾಮಾಗ್ರಿ ಇದಾಗಿದ್ದು, ಭಕ್ತರಲ್ಲಿ ಭಾರೀ ಆಘಾತವುಂಟು ಮಾಡಿದೆ. ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಜೆಡಿಎಸ್ ನಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದ ಕುಮಾರಸ್ವಾಮಿ

ಬೆಂಗಳೂರು : ರಾಜ್ಯದ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮೀಶ್ರ ಸರಕಾರದಲ್ಲಿ ಸಚಿವ ಸ್ಥಾನ ಸಿಗದಕ್ಕೆ ಜೆಡಿಎಸ್ ನಲ್ಲಿ ಯಾವುದೇ ಶಾಸಕರು ಅಸಮಾಧಾನಗೊಂಡಿಲ್ಲ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ. ಅವರು ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೆಚ್. ವಿಶ್ವನಾಥ ಬೆಳಗ್ಗೆಯೇ ನನ್ನೊಂದಿಗೆ ತಿಂಡಿ ತಿಂದಿದ್ದಾರೆ ಎಂದರು. ಜೆಡಿಎಸ್ ನಲ್ಲಿ ಯಾವುದೇ ಭಿನ್ನಮತವಿಲ್ಲ. ಕೆಲ ಶಾಸಕರಿಗೆ ಅಸಮಾಧಾನವಿರುವುದು ನಿಜ. ಇದೆಲ್ಲಾ ಮಾಮೂಲಿ. ಅದನ್ನು ಸರಿಪಡಿಸಲಾಗುವುದು ಎಂದ ಅವರು ಕಾಂಗ್ರೆಸ ಅತೃಪ್ತ ಶಾಸಕರಿಗೆ ಅವರ ನಾಯಕರು ಸಮಾಧಾನಪಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶೀಘ್ರದಲ್ಲಿಯೇ ಎಲ್ಲ ಭಿನ್ನಮತಗಳಿಗೆ ಹೈಕಮಾಂಡ್ ತೆರೆ ಎಳೆಯಲಿದೆ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ವಿಧಾನಪರಿಷತ್ 6 ಸ್ಥಾನಗಳಿಗೆ ರಾಜ್ಯದ ವಿವಿಧಡೆ ಮತದಾನ

ಬೆಂಗಳೂರು: ಆಗ್ನೇಯ, ಈಶಾನ್ಯ ಹಾಗೂ ನೈಋತ್ಯ ವಿಧಾನಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ 6 ಸ್ಥಾನಗಳಿಗೆ ಇಂದು ರಾಜ್ಯದ ವಿವಿಧಡೆ ಮತದಾನ ಪ್ರಕ್ರಿಯೆ ಬೆಳಗ್ಗೆಯಿಂದಲೇ ಆರಂಭಗೊಂಡಿದೆ. ಮತದಾನಕ್ಕೆ ಎಲ್ಲಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅನೇಕ ಘಟಾನುಘಟಿ ನಾಯಕರು ತಮ್ಮ ಹಕ್ಕು ಚಲಾಯಿಸಿದರು. ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ. ರವಿ, ನೈಋತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಭೋಜೋಗೌಡ ಮತದಾನ ಮಾಡಿದರು. ಆಗ್ನೇಯ, ಈಶಾನ್ಯ ಹಾಗೂ ನೈಋತ್ಯ ವಿಧಾನಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ 6 ಸ್ಥಾನಗಳಿಗೆ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಲಿದೆ.

ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ರಾಜೀನಾಮೆ ?

ಬೆಳಗಾವಿ : ಯಮಕನಮರಡಿ ಕ್ಷೇತ್ರದ ಹಿರಿಯ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸಮ್ಮೀಶ್ರ ಸರಕಾರದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆಯಲ್ಲಿ ಅವರು ತಮ್ಮ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಬಲಿಗರ ಒತ್ತಡ ಇದ್ದದ್ದು ನಿಜ. ಆದರೆ ಈವರೆಗೆ ರಾಜೀನಾಮೆ ನೀಡಿಲ್ಲ. ಬೆಂಬಲಿಗರ ಸಭೆ ಬಳಿಕ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇದೇವೇಳೆ, ಜಾರಕಿಹೊಳಿ ಬೆಂಬಲಿಗರು ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ರಸ್ತೆ ಸಂಚಾರ ತಡೆದು ಆಕ್ರೋಶ ಹೊರಹಾಕಿದ್ದಾರೆ. ಅವರ ಅನೇಕ ಜಿಲ್ಲಾ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಪರಾರಿಯಾಗಿದ್ದ ದುನಿಯಾ ವಿಜಯ ಬಂಧನ

ತಮಿಳುನಾಡು : ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ಸಾವನ್ನಪ್ಪಿದ್ದ ಇಬ್ಬರು ಖಳನಟರ ಸಾವಿಗೆ ಕಾರಣವಾಗಿದ್ದ ಸುಂದರ್ ಗೌಡ ಬಂಧನದ ವೇಳೆ ಪರಾರಿಯಾಗಲು ಸಹಕಾರ ನೀಡಿದ್ದ ಆರೋಪ ಎದುರಿಸುತ್ತಿದ್ದ ನಟ ದುನಿಯಾ ವಿಜಯನನ್ನು ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ಕಳೇದ ನಾಲ್ಕೈದು ದಿನಗಳಿಂದ ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿದ್ದ ದುನಿಯಾ ವಿಜಯ ಬಂಧನಕ್ಕೆ ಅಲ್ಲಿಯೇ ಬೀಡು ಬಿಟ್ಟಿದ್ದ ಬೆಂಗಳೂರು ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮಿಳುನಾಡಿನಿಂದ ಬೆಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಪರಾರಿಯಾಗಿದ್ದರು. ಉದಯ ಮತ್ತು ಅನಿಲ್ ಸಾವಿಗೆ ಕಾರಣವಾಗಿದ್ದ ಸುಂದರಗೌಡ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ವಾರೆಂಟ್ ಹೊರಡಿಸಲಾಗಿತ್ತು. ಆಗ ಪೊಲೀಸರು ಸುಂದರಗೌಡನನ್ನು ಬಂಧಿಸಲು ಮುಂದಾಗಿದ್ದರು. ಆಗ ನಟ ದುನಿಯಾ ವಿಜಯ ಪರಾರಿಯಾಗಲು ಸಹಕರಿಸಿದ್ದರು. ಹೀಗಾಗಿ ನ್ಯಾಯಾಲಯ ವಿಜಯ ಬಂಧನಕ್ಕೆ ವಾರೆಂಟ್ ಹೊರಡಿಸಿತ್ತು.

ಪರಮೇಶ್ವರಗೆ ಘೇರಾವ್ ಹಾಕಿದ ಪಾಟೀಲ ಬೆಂಬಲಿಗರು

ಬೆಂಗಳೂರು : ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಎಂ.ಬಿ. ಪಾಟೀಲ ಬೆಂಬಲಿಗರು ಡಿಸಿಎಂ ಡಾ. ಜಿ. ಪರಮೇಶ್ವರ ಅವರಿಗೆ ಘೇರಾವ್ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸದಾಶಿವನಗರದಲ್ಲಿರುವ ಪಾಟೀಲರ ಮನೆಗೆ ಶುಕ್ರವಾರ ಬೆಳಗ್ಗೆ ದೌಡಾಯಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರುಹಾಗೂ ಪಾಟೀಲರ ಬೆಂಬಲಿಗರು ಪರಮೇಶ್ವರ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದರು. ಡಿಸಿಎಂ ಆಗಮನಕ್ಕೂ ಮುನ್ನವೇ ಸಚಿವರಾದ ಆರ್. ವಿ. ದೇಶಪಾಂಡೆ, ಕೆ.ಜೆ. ಜಾರ್ಜ್, ಡಿ.ಕೆ. ಶಿವಕುಮಾರ ಎಂ.ಬಿ. ಪಾಟೀಲ ಮನವೊಲಿಕೆ ಪ್ರಯತ್ನ ಮಾಡಿದರು. ಆದರೆ ಇದಕ್ಕೆ ಎಂ.ಬಿ. ಪಾಟೀಲ ಸ್ಪಂದಿಸಿಲ್ಲ ಎನ್ನಲಾಗಿದೆ. ಇದು ಕಾಂಗ್ರೆಸ್ ಹೈಕಮಾಂಡ್ ಗೆ ತಲೆ ನೋವಾಗಿದ್ದು, ಜೂನ್ 11ರಂದು ಸೋಮವಾರ ವಿಜಯಪುರ ಬಂದ್ ಕರೆ ನೀಡಲು ಪಾಟೀಲ ಬೆಂಬಲಿಗರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಚಾಕುವಿನಿಂದ ಇರಿದುಕೊಂಡು ಯುವಕರಿಬ್ಬರು ಸಾವು

ಹುಬ್ಬಳ್ಳಿ: ಪರಸ್ಪರ ಚಾಕುವಿನಿಂದ ಇರಿದುಕೊಂಡು ಯುವಕರಿಬ್ಬರು ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ತಡರಾತ್ರಿ ನಗರದ ಅಜಂತಾ ಹೊಟೇಲ್ ಬಳಿ ಈ ರ್ದುಘಟನೆ ನಡೆದಿದೆ. ಕೇಶ್ವಾಪುರ ನಿವಾಸಿ ರಿಯಾಜ್ ಸವಣೂರ (23) ಹಾಗೂ ಮಿಲತ್ ನಗರ ನಿವಾಸಿ ಫಿರೋಜ್ ಹನಸಿ(23) ಸಾವನ್ನಪ್ಪಿದ ಯುವಕರಾಗಿದ್ದಾರೆ. ಇಬ್ಬರು ಸ್ನೇಹಿತರಾಗಿದ್ದರು. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಚಾಕುವಿನಿಂದ ಇರಿದುಕೊಂಡು ಸಾವನ್ನಪ್ಪಿದ್ದಾರೆ. ಎನ್ನಲಾಗಿದೆ. ಆದರೆ ಈವರೆಗೆ ಇಬ್ಬರ ನಡುವಿನ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಭಾರೀ ಮಳೆ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ರೆಡ್ ಅಲರ್ಟ್

ಮಂಗಳೂರು: ಕಳೆದ ಹಲವು ದಿನಗಳಿಂದ ಬೆನ್ನು ಬಿಡದೆ ಧೋ ಎಂದು ಸುರಿಯುತ್ತಿರುವ ಮಳೆಯಿಂದಾಗಿ ಕರಾವಳಿ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದಲ್ಲದೆ, ಮಂಗಳೂರಿನಲ್ಲಿ ಎರಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜೂನ್ 8 ಹಾಗೂ 9ರಂದು ಶಾಲಾ ಕಾಲೇಜಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್ ಘೋಷಿಸಿದ್ದಾರೆ. ಕಳೆದ ವಾರವಷ್ಟೇ ಸುರಿದ ಭಾರೀ ಮಳೆಗೆ ಮಂಗಳೂರಿನಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿತ್ತು. ಇದೀಗ ಮತ್ತೇ ಪ್ರವಾಹ ಭೀತಿ ಆತಂಕ ಎದುರಾಗಿದೆ.

ಒಂಟಿ ಸಲಗವನ್ನು ಕಾಡಿಗೆ ಅಟ್ಟಿದ ಅರಣ್ಯ ಇಲಾಖೆ

ಹಳಿಯಾಳ : ಕಳೆದ ಎರಡು ದಿನಗಳಿಂದ ಧಾರವಾಡ ಜಿಲ್ಲೆಯ ಕಲಘಟಗಿ. ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಹತ್ತಾರು ಹಳ್ಳಿಗಳ ಜನರ ನೆಮ್ಮದಿ ಕೆಡಿಸಿದ್ದ ಒಂಟಿ ಸಲಗವನ್ನು ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕಾಡು ಬಿಟ್ಟು ನಾಡಿಗೆ ಬಂದಿದ್ದ ಕಾಡಾನೆ ಅನೇಕ ಜನರ ಜಮೀನು, ಗದ್ದೆಗಳನ್ನು ಹಾಳು ಮಾಡಿತ್ತು. ಇದರಿಂದ ಜನ ಭಯಭೀತಗೊಂಡು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಅಲೆದಾಡುತ್ತಿದ್ದರು. ಇದಲ್ಲದೆ, ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎರಡು ದಿನಗಳ ಬಳಿಕ ಕೊನೆಗೂ ಆನೆ ಕಾಡು ಸೇರಿರುವುದು ಜನರಿಗೆ ನೆಮ್ಮದಿ ತಂದಿದೆ.

ಕುಮಾರಸ್ವಾಮಿ ಮನೆಯಲ್ಲಿ ಚಂಡಿಕಾ ಪಾರಾಯಣ

ಬೆಂಗಳೂರು : ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರ ಜೆಪಿ ನಗರದ ನಿವಾಸದಲ್ಲಿ ಚಂಡಿ ಪಾರಾಯಣ ನಡೆಯುತ್ತಿದೆ. ಸಿಎಂ ಕುಮಾರಸ್ವಾಮಿ ಆದಾಗಿನಿಂದ ಇದನ್ನು ಪ್ರತಿ ಶುಕ್ರವಾರ ಅವರ ಮನೆಯಲ್ಲಿ ನೆರವೇರಿಸಲಾಗುತ್ತಿದೆ. ಅದೇ ರೀತಿ ಈ ಶುಕ್ರವಾರವೂ ಚಂಡಿಕಾ ಪಾರಾಯಣ ಹಮ್ಮಿಕೊಳ್ಳಲಾಗಿದೆ. ಇದಲ್ಲದೆ ಸಿಎಂ ಕುಮಾರಸ್ವಾಮಿ ಇಂದು ಯಾವುದೇ ಅಧಿಕೃತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಈ ಚಂಡಿಕಾ ಪಾರಾಯಣದಿಂದ ಅವರ ಮನೋಕಾಮನೆಗಳು ಈಡೇರುತ್ತವೇ ಎಂಬ ಪ್ರತೀತಿಯಿದೆ. ಈ ಹಿನ್ನಲೆಯಲ್ಲಿ ಕುಮಾರಸ್ವಾಮಿ ಅವರ ಮನೆಯ ಚಂಡಿಕಾ ಪಾರಾಯಣ ತೀವ್ರ ಕುತೂಹಲ ಕೆರಳಿಸಿದೆ. ಕುಮಾರಸ್ವಾಮಿ ಅವರ ಕುಟುಂಬಸ್ಥರು ಈ ಪೂಜೆಯಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ.

ವಿನಯ ಗುರೂಜಿ ಪಾದಪೂಜೆ ಮಾಡಿದ ಸ್ಪೀಕರ್ ರಮೇಶಕುಮಾರ

ಚಿಕ್ಕಮಗಳೂರು : ಮೌಢ್ಯವಿರೋಧಿ ಬಗ್ಗೆ ವಿಧಾನ ಸಭೆಯಲ್ಲಿ ಗಂಟೆಗಟ್ಟಲೇ ಭಾಷಣ ಬಿಗಿಬಿದಿದ್ದ ಸ್ಫೀಕರ್ ಕೆ.ಆರ್. ರಮೇಶಕುಮಾರ ಅವರು ಚಿಕ್ಕಮಗಳೂರು ಜಿಲ್ಲೆಯ ಗೌರಿ ಗದ್ದೆ ಗ್ರಾಮದಲ್ಲಿರುವ ವಿನಯ ಗುರೂಜಿ ಪಾದಪೂಜೆ ನೆರವೇರಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ರಮೇಶಕುಮಾರ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದ ಶಾಸಕರಾಗಿದ್ದು, ಚುನಾವಣೆ ಪೂರ್ವದಲ್ಲಿ ವಿನಯ ಗುರುಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಆಗ ನೀವು ಈ ಬಾರಿ ಖಂಡಿತ ಗೆಲ್ಲುತ್ತೀರಿ ಎಂದು ಭವಿಷ್ಯ ನುಡಿದಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಭೇಟಿ ಮಾಡಿ ಪಾದಪೂಜೆ ಸಲ್ಲಿಸಿದ್ದಾರೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ವಿನಯ ಗುರೂಜಿಯವರನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಸಿಎಂ ಕುಮಾರಸ್ವಾಮಿ ಕೂಡ ಚುನಾವಣೆ ಪೂರ್ವದಲ್ಲಿ ಸಹೋದರ ರೇವಣ್ಣ ಜೊತೆಗೆ ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಅನೇಕ ರಾಜಕಾರಣಿಗಳು ಇವರನ್ನು ಭೇಟಿ ಮಾಡಿ ತಮ್ಮ ಭವಿಷ್ಯ ತಿಳಿದುಕೊಂಡಿದ್ದರು ಎನ್ನಲಾಗಿದೆ. ಇದೀಗ ವಿನಯ ಗುರೂಜಿಯವರ ಬಗ್ಗೆ ನಾಡಿನಲ್ಲಡೆ ಭಾರೀ ಕುತೂಹಲ ಕೆರಳಿಸಿದೆ.

ಸಾಲಬಾಧೆ ತಾಳಲಾರದೆ ಯುವ ರೈತ ಆತ್ಮಹತ್ಯೆ

ಧಾರವಾಡ : ಸಾಲಭಾದೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ತಾಲೂಕಿನ ದುಬ್ಬದಮರಡಿ ಗ್ರಾಮದಲ್ಲಿ ನಡೆದಿದೆ. ಜ್ಯೋತಿಬಾ ಅರ್ಜುನ ಬುಸಡಿ (26) ಎಂಬ ರೈತನೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.ಕೂಡಲೇ ಆತನನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅವರು ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಿದ್ದರು, ಆದರೆ ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆ. ಆತನಿಗೆ ಎರಡ ಎಕರೆ ಜಮೀನು ಇದ್ದು, ಉಪ ಕಸುಬಾಗಿ ನೇಕಾರಿಕೆ ಮಾಡುತ್ತಿದ್ದರು. ಮುಂಗಾರು ಹಂಗಾಮು ಆರಂಭವಾಗಿದ್ದು, ಬಿತ್ತನೆ ಕೆಲಸಕ್ಕೆ ಹಣಕಾಸು ಅಡಚಣೆ ಇತ್ತು ಎನ್ನಲಾಗಿದೆ. ಇದಲ್ಲದೆ, ಗಡ ಸಾಲ ತಂದೆ ತಾಯಿ, ಸಹೋದರಿ ಕೈಗಡ ಸಾಲ, ಬ್ಯಾಂಕ್ ಹಾಗೂ ಜವಳಿ ಇಲಾಖೆಯಲ್ಲಿ ಕೂಡ ನೇಕಾರಿಕೆಗಾಗಿ ಸಾಲ ಮಾಡಿದ್ದ ಎಂದು ತಿಳಿದುಬಂದಿದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಾತೆ ಹಂಚಿಕೆಗೂ ಮುನ್ನವೇ ಕಚೇರಿ ಹಂಚಿಕೆ

ಬೆಂಗಳೂರು:ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮೀಶ್ರ ಸರಕಾರದ ನೂತನ ಸಚಿವರಿಗೆ ಖಾತೆ ನೀಡುವ ಮುನ್ನವೇ ವಿಧಾನಸೌಧದಲ್ಲಿ ಕಚೇರಿ ಹಂಚಿಕೆ ಮಾಡುವ ಮೂಲಕ ಹೆಚ್ಡಿಕೆ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಈಗಾಗಲೇ ಎಲ್ಲ ಸಚಿವರುಗಳಿಗೆ ಶಕ್ತಿ ಕೇಂದ್ರದಲ್ಲಿ ಕಚೇರಿಗಳನ್ನು ಹಂಚಿಕೆ ಮಾಡಲಾಗಿದ್ದು, ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ, ಬಂಡೆಪ್ಪಾ ಕಾಶೆಂಪೂರ, ಜಿ.ಟಿ. ದೇವೇಗೌಡ ಸೇರಿದಂತೆ ಅನೇಕರು ವಿಧಾನ ಸೌಧದಲ್ಲಿ ಕಚೇರಿಯನ್ನು ಪಡೆದರೆ, ಕೃಷ್ಣ ಭೈರೇಗೌಡ, ಯು.ಟಿ ಖಾದರ್, ಪ್ರಿಯಾಂಕ್ ಖರ್ಗೆ, ಶಿವಾನಂದ ಪಾಟೀಲ್, ರಾಜಶೇಖರ್ ಪಾಟೀಲ್ ಹುಮ್ನಾಬಾದ್, ಜಮೀರ್ ಅಹ್ಮದ್ ಅವರು ವಿಕಾಸ ಸೌಧದಲ್ಲಿ ಕಚೇರಿಗಳನ್ನು ಪಡೆದಿದ್ದಾರೆ. ಈಗಾಗಲೇ ಹೆಚ್.ಡಿ. ರೇವಣ್ಣ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕಚೇರಿ ಪ್ರವೇಶ ಮಾಡಿದ್ದರೆ, ಇನ್ನುಳಿದವರು ಕೂಡ ಅದೇ ರೀತಿಯ ತಯಾರಿಯಲ್ಲಿದ್ದಾರೆ.

ಹೆಚ್ಡಿಕೆ ವಿರುದ್ಧ ಮತ್ತೇ ಕಿಡಿಕಾರಿದ ಯಡಿಯೂರಪ್ಪ

ಹೆಚ್ಡಿಕೆ ವಿರುದ್ಧ ಮತ್ತೇ ಕಿಡಿಕಾರಿದ ಯಡಿಯೂರಪ್ಪ ಬೆಂಗಳೂರು: 104 ಶಾಸಕರಿರುವ ಬಿಜೆಪಿ ಪ್ರತಿಪಕ್ಷ ಸ್ಥಾನದಲ್ಲಿದ್ದರೆ, ಕೇವಲ 37 ಶಾಸಕರಿರುವ ಜೆಡಿಎಸ್ನ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿ ಮೆರೆಯುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದ್ದಾರೆ. ಅವರು ಗುರುವಾರ ಜಯನಗರ ವಿಧಾನಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು ಪರ ರೋಡ್ ಶೋ ಹಾಗೂ ಬಹಿರಂಗ ಪ್ರಚಾರ ನಡೆಸಿ, ಮಾತನಾಡಿದರು. ಈ ಜಯನಗರ ವಿಧಾನ ಸಭಾ ಕ್ಷೇತ್ರವನ್ನು ಬಿಜೆಪಿಗೆ ನೀಡುವ ಮೂಲಕ ಮೈತ್ರಿ ಸರ್ಕಾರಕ್ಕೆ ಕ್ಷೇತ್ರದ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಸಮ್ಮಿಶ್ರ ಸರ್ಕಾರಕ್ಕೆ ಟಾಂಗ್ ನೀಡಿದರು. ಜಯನಗರ ಅಭ್ಯರ್ಥಿ ಆಗಿದ್ದ ವಿಜಯ್ ಕುಮಾರ್ ನಿಧನದಿಂದ ಈ ಚುನಾವಣೆ ಮುಂದೂಡಲಾಗಿದೆ. ಅವರು ಬಿಜೆಪಿಯ ದೊಡ್ಡ ಶಕ್ತಿ ಆಗಿದ್ದರು. ಅವರ ಆತ್ಮಕ್ಕೆ ಶಾಂತಿ ದೊರಕಬೇಕಾದರೆ ಬಿಜೆಪಿ ಗೆಲ್ಲಿಸುವ ಮೂಲಕ ಕ್ಷೇತ್ರದ ಮತದಾರರು ಶಕ್ತಿತುಂಬಬೇಕು ಎಂದರು. ಜೆಡಿಎಸ್ -ಕಾಂಗ್ರೆಸ್ ಸಮ್ಮೀಶ್ರ ಸರಕಾರದ ಸಂಪುಟ ರಚನೆ ಬಳಿಕ ಭುಗಿಲ್ಲೆದ್ದಿರುವ ಭಿನ್ನಮತ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಏನೆಲ್ಲ ಬೆಳವಣಿಗೆಗಳು ನಡೆಯುತ್ತದೆಯೋ ನಡೆಯಲಿ ಕಾದು ನೋಡೋಣ ಎಂದು ಹೇಳಿದರು.

ಬಿಜೆಪಿ ಹೆಚ್ಚು ಸ್ಥಾನ ಗೆದ್ದ ಜಿಲ್ಲೆಗಳ ಕಡೆಗಣನೆ

ಬೆಂಗಳೂರು:ಉಡುಪಿಯ ದನ ಕಳವು ಮಾಡುತ್ತಿದ್ದ ವ್ಯಕ್ತಿ ಪೊಲೀಸ್ ಜೀಪಿನಲ್ಲೇ ಸಾವನ್ನಪ್ಪಿದ್ದರೂ, ಬಿಜೆಪಿ ಹಾಗೂ ಸಂಘ ಪರಿವಾರದ ತಲೆಗೆ ಕಟ್ಟುವ ಕೆಲಸ ಈ ಸರ್ಕಾರ ಮಾಡುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಅವರು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಸನಬ್ಬ ನನ್ನು ಬಂಧಿಸಿ, ಪೊಲೀಸ್ ಜೀಪ್ನಲ್ಲಿ ಠಾಣೆಗೆ ಕರೆತರುವ ವೇಳೆ ಹೃದಯಾಘಾತದಿಂದ ಸತ್ತಿದ್ದಾನೆ. ಆದರೂ ನಮ್ಮ ಮೇಲೆ ಗೂಬೆ ಕೂರಿಸಲು ಷಡ್ಯಂತ್ರ ನಡೆಯಿತ್ತಿದೆ ಎಂದು ಕಿಡಿಕಾರಿದರು. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರುವ ಮುನ್ನವೇ ನಮ್ಮ ಏಳು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಕೆಲಸವನ್ನೇ ಸಮ್ಮಿಶ್ರ ಸರ್ಕಾರ ಮುಂದುವರೆಸಿದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲೆಯ ಮಳೆಯಾಗಿ ನೆರೆ, ಪ್ರವಾಹ ಬಂತು, ಜನ ಪ್ರಾಣ ಕಳೆದುಕೊಂಡರೂ ಸರ್ಕಾರ ಬದುಕಿದೆ ಎಂದು ತೋರಿಸಲೇ ಇಲ್ಲ, ಒಂದು ರೀತಿಯ ತಾರತಮ್ಯದ ಆಡಳಿತ ನಡೆಸುತ್ತಿದೆ, ಬಿಜೆಪಿ ಹೆಚ್ಚು ಸ್ಥಾನ ಗೆದ್ದ ಜಿಲ್ಲೆಗಳನ್ನು ಕಡೆಗಣಿಸುವ ಕೆಲಸವನ್ನು ಈ ಸಮ್ಮಿಶ್ರ ಸರ್ಕಾರ ಮಾಡುತ್ತಿದೆ ಎಂದು ಟೀಕಿಸಿದರು.

ಆರ್ ಎಸ್ ಎಸ್ ಕಚೇರಿಗೆ ಭೇಟಿ ನೀಡಿದ ಮಾಜಿ ರಾಷ್ಟ್ರಪತಿ

ನಾಗ್ಪುರ್: ಮಾಜಿ ರಾಷ್ಟ್ರಪತಿಯೊಬ್ಬರು ನಾಗ್ಪುರದ ಆರ್ ಎಸ್ ಎಸ್ ಕಚೇರಿಗೆ ಇದೇ ಮೊದಲ ಬಾರಿಗೆ ಭೇಟಿ ನೀಡಿರುವುದು ದೇಶದ್ಯಾಂತ ಭಾರೀ ಕುತೂಹಲ ಕೆರಳಿಸಿದೆ. ನಾಗ್ಪುರದಲ್ಲಿರುವ ಆರ್ ಎಸ್ ಎಸ್ ಸಂಸ್ಥಾಪಕ ಕೆ.ಬಿ. ಹೆಡಗೆವಾರ್ ಜನ್ಮಸ್ಥಳಕ್ಕೆ ಭೇಟಿ ನೀಡಿದ್ದು, ಅಲ್ಲಿನ ವಿಜಿಟರ್ ಬುಕ್ನಲ್ಲಿ ಹೆಡೆಗೆವಾರ್ ಅವರನ್ನು 'ಗ್ರೇಟ್ ಸನ್ ಆಫ್ ಮದರ್ ಇಂಡಿಯಾ' ಎಂದು ಬರೆಯುವ ಮೂಲಕ ಶಹಬ್ಬಾಷ್ಗಿರಿ ಕೊಟ್ಟಿದ್ದಾರೆ. ಆರ್ ಎಸ್ ಎಸ್ ಸ್ವಯಂ ಸೇವಕರ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಗಮಿಸಿದ್ದ ವೇಳೆ ಈ ಭೇಟಿ ನೀಡಿದ್ದರು. ಇದೀಗ ಆರ್ ಎಸ್ ಎಸ್ ಸಂಸ್ಥಾಪಕ ಹೆಡಗೆವಾರ್ ಅವರ ಬಗ್ಗೆ ಪ್ರಣಬ್ ಮುಖರ್ಜಿ ಬರೆದಿರುವ ಬರಹಕ್ಕೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವಿಟ್ ಮಾಡಿರುವ ಅಹಮ್ಮದ್ ಪಟೇಲ್ , ಪ್ರಣಬ್ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪ್ರಣಬ್ ಪುತ್ರಿ ಶರ್ಮಿಷ್ಠಾ ಮುಖರ್ಜಿ ಬಿಜೆಪಿ ಮತ್ತು ಆರ್ ಎಸ್ ಎಸ್ ಸುಳ್ಳು ಪ್ರಚಾರ ಮಾಡುತ್ತಿದೆ. ಅವರನ್ನು ಬಳಕೆ ಮಾಡಿಕೊಳ್ಳಲು ಹವಣಿಸುತ್ತಿವೆ. ಇದಕ್ಕೆ ಪ್ರಣವ್ ಮುಖರ್ಜಿ ಈಡಾಗಬಾರದು ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ್ ಬಂಧನ

ಚಿಕ್ಕಮಗಳೂರು: ಉಡುಪಿ ನ್ಯಾಯಾಲಯದ ಮುಂದೆಯೇ ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ್ ಅವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಅವರು ಗುರುವಾರ ನ್ಯಾಯಾಲಯಕ್ಕೆ ಹಾಜರಾಗಿ ಹೊರಬರುತ್ತಿದ್ದಂತೆ ವಾರೆಂಟ್ ನೀಡಿ ವಶಕ್ಕೆ ಪಡೆದಿದ್ದಾರೆ. ಪದ್ಮನಾಭ್ ಬಂಧನಕ್ಕೆ ಪತ್ನಿ ರೇಣುಕಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ನಿತ್ಯ ಕಿರುಕುಳ ನೀಡುತ್ತಿದ್ದಾರೆ. ಒಂಬತ್ತು ತಿಂಗಳು ಜೈಲಿನಲ್ಲಿದ್ದಾಗ ಯಾರೊಬ್ಬರು ಬಂದಿರಲಿಲ್ಲ, ಈಗ ಏಕಾಏಕಿ ನ್ಯಾಯಾಲಯದ ಗಮನಕ್ಕೂ ತರದೆ ಕೋರ್ಟ್ನಿಂದ ಹೊರಬರುವ ವೇಳೆ ಅರೆಸ್ಟ್ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈಗೆ ದೂರು ನೀಡಲಾಗುವುದು ಎಂದು ಪತ್ನಿ ರೇಣುಕಾ ತಿಳಿಸಿದ್ದಾರೆ. ಕಳೆದ ಹಲವು ದಶಕಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ ನಿಲಗುಳಿ ಪದ್ಮನಾಭ 2016ರ ನವೆಂಬರ್ನಲ್ಲಿ ಗೌರಿ ಲಂಕೇಶ್ ಅವರ ಮಧ್ಯಸ್ಥಿಕೆಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಿದ್ದರು.

ಸಚಿವ ರೇವಣ್ಣಗೆ ವಿಧಾನಸೌಧದಲ್ಲಿ ಅದೃಷ್ಣದ ಕೊಠಡಿ

ಬೆಂಗಳೂರು: ಸಮ್ಮೀಶ್ರ ಸರಕಾರದ ಸಾರಥ್ಯ ವಹಿಸಿರುವ ಸಿಎಂ ಕುಮಾರಸ್ವಾಮಿ ಅವರ ಹಿರಿಯ ಸಹೋದರ ಹಾಗೂ ಹಾಲಿ ಸಚಿವ ಹೆಚ್.ಡಿ. ರೇವಣ್ಣಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಅದೃಷ್ಟದ ಕೊಠಡಿಯೇ ಹಂಚಿಕೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಗುರುವಾರ ವಿಧಾನಸೌಧದಲ್ಲಿನ ಕೊಠಡಿ ಸಂಖ್ಯೆ 316 ಗೆ ಪ್ರವೇಶಿಸಿ, ವಿಶೇಷ ಪೂಜೆಯನ್ನು ನೆರವೇರಿಸಿದರು. ಈ ಹಿಂದೆ ಲೋಕೋಪಯೋಗಿ ಸಚಿವರಾಗಿದ್ದಾಗ ಹೆಚ್.ಡಿ.ರೇವಣ್ಣ ಅವರು ಕೊಠಡಿ ಸಂಖ್ಯೆ 316 ಯಲ್ಲಿ ಕಚೇರಿ ಪಡೆದಿದ್ದರು. ಈ ಹಿನ್ನಲೆಯಲ್ಲಿ ಈ ಬಾರಿಯೂ ಅದೇ ಕಚೇರಿಯನ್ನು ಕೇಳಿ ಪಡೆದಿದ್ದಾರೆ ಎನ್ನಲಾಗಿದೆ. ಅಲ್ಲದೆ, ವಾಸ್ತು ಪ್ರಕಾರವೂ ಈ ಕೊಠಡಿ ಭಾರೀ ಅದೃಷ್ಟದಿಂದ ಕೂಡಿದೆ ಎನ್ನಲಾಗಿದೆ. ರೇವಣ್ಣಗೆ ಸಚಿವರಾದ ಬಂಡೆಪ್ಪ ಕಾಶೆಂಪೂರ್, ಸಾ.ರಾ.ಮಹೇಶ್ ಸಾಥ್ ನೀಡಿದ್ದು ವಿಶೇಷವಾಗಿತ್ತು.

ಅಂಗವಿಕಲ ಮಹಿಳೆಗೆ ಉದ್ಯೋಗ ನೀಡಿದ ಹೆಚ್ಡಿಕೆ

ಬೆಂಗಳೂರು: ಅಂಗವಿಕಲ ಮಹಿಳೆಯೊಬ್ಬರಿಗೆ ಉದ್ಯೋಗ ಕಲ್ಪಿಸಿ, ಸಿಎಂ ಹೆಚ್. ಡಿ. ಕುಮಾರಸ್ವಾಮಿ ಮತ್ತೋಮ್ಮೇ ಮಾನವೀಯತೆ ಮೆರೆದಿದ್ದಾರೆ. ದಾವಣಗೆರೆಯ ಶೈಲಾ ಎಂಬ ಮಹಿಳೆಯ ಅಳಲನ್ನು ಆಲಿಸಿದ ಸಿಎಂ ದಾವಣಗೆರೆ ಜಿಲ್ಲಾ ವಾರ್ತಾ ಇಲಾಖೆಯಲ್ಲಿ ಟೈಪಿಸ್ಟ್ ಕೆಲಸ ಕೊಡಿಸುವಂತೆ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಿನಾರಾಯಣ್ ಅವರಿಗೆ ಸೂಚಿಸಿದರು. ಎರಡು ತಿಂಗಳ ಹಸುಗೂಸು ಹಾಗೂ ತಾಯಿಯ ಜವಾಬ್ದಾರಿ ಹೊತ್ತಿರುವ ಶೈಲಾ ದಾವಣಗೆರೆ ನಿವಾಸಿಯಾಗಿದ್ದು,ಗಂಡ ಬಿಟ್ಟುಕೊಟ್ಟಿದ್ದಾನೆ. ಅಪಘಾತದಲ್ಲಿ ಬಲಗೈ ಕಳಕೊಂಡಿರುವ ಇಕೆ ತನ್ನ ಪುಟ್ಟ ಕಂದಮ್ಮ ಮತ್ತು ತಾಯಿಯೊಂದಿಗೆ ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದರು. ಅವಳ ಅಳಲನ್ನು ಆಲಿಸಿದ ಸಿಎಂ ಹೆಚ್ಡಿಕೆ ಶೈಲಾಗೆ ಮಾನವೀಯತೆ ದೃಷ್ಠಿಯಿಂದ ಕೆಲಸ ಕೊಡಲು ಸೂಚಿಸಿದ್ದಾರೆ. ಇದೇ ವೇಳೆ ಶೈಲಾ ಅವರ ಎರಡು ತಿಂಗಳ ಹಸುಗೂಸನ್ನು ಮುದ್ದಾಡಿದ್ದು ವಿಶೇಷವಾಗಿತ್ತು. ಇತ್ತೀಚೆಗೆ ಗುಂಡ್ಲುಪೇಟೆಯ ವಿಕಲಾಂಗ ಮಹಿಳೆಗೆ ಸಿಎಂ ಕಚೇರಿಯಲ್ಲೇ ಉದ್ಯೋಗ ನೀಡಿದ್ದಕುಮಾರಸ್ವಾಮಿ ಅಂಗವಿಕಲರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವುದನ್ನು ಇಲ್ಲಿ ಸ್ಮರಿಸಬಹುದು.

ಆರು ತಿಂಗಳಿಗೊಮ್ಮೆ ಸಚಿವರ ಮೌಲ್ಯಮಾಪನ

ಬೆಂಗಳೂರು : ಸಮ್ಮೀಶ್ರ ಸರಕಾರದ ನೂತನ ಸಚಿವರ ಮೌಲ್ಯಮಾಪನ ನಡೆಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ ಹೇಳಿದ್ದಾರೆ. ಅವರು ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವರ ಪಟ್ಟಿಗೆ ಸಹಿ ಮಾಡುವಾಗ ಹೈಕಮಾಂಡ್ ಈ ಷರತ್ತು ವಿಧಿಸಿದೆ ಎಂದರು. ಕಾಂಗ್ರೆಸ್ ಅಧಿನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಈ ವಿಷಯ ತಿಳಿಸಿದ್ದಾರೆ ಎಂದ ಅವರು ಪ್ರತಿ ಆರು ತಿಂಗಳಿಗೊಮ್ಮೆ ಅವರ ಕಾರ್ಯವೈಖರಿ ಪರಾಮರ್ಶೆ ನಡೆಯಲಿದೆ. ಅವರ ಕೆಲಸ ಕಾರ್ಯಗಳು ಹೈ ಕಮಾಂಡ್ ಗೆ ಸಂತೃಪ್ತಿ ತರದಿದ್ದರೆ ಹೊಸ ಮುಖಗಳಿಗೆ ಮನ್ನಣೆ ನೀಡಲಾಗುವುದು ಎಂದು ಸುಳಿವು ನೀಡಿದರು.

ಅತೃಪ್ತ ಶಾಸಕರು ನಿರಾಶರಾಗದೆ, ಕಾಯಿರಿ

ಬೆಂಗಳೂರು: ಸಚಿವ ಸ್ಥಾನ ವಂಚಿತ ಅತೃಪ್ತ ಶಾಸಕರು ನಿರಾಶರಾಗದೆ, ಕೆಲಕಾಲ ತಾಳ್ಮೆಯಿಂದ ಕಾಯಿರಿ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮನವಿ ಮಾಡಿದ್ದಾರೆ. ಅವರು ಗುರುವಾರ ಬೆಂಗಳೂರಿನ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲರಿಗೂ ಸಚಿವ ಸ್ಥಾನ ಕಷ್ಟಸಾಧ್ಯ. ಹೀಗಾಗಿ ಯಾರೊಬ್ಬರು ಹತಾಶರಾಗದೆ ಕೆಲ ಕಾಲ ಕಾಯ್ದರೆ ಒಳಿತು ಎಂದರು. ಮೈತ್ರಿ ಸರ್ಕಾರವನ್ನು ಇಡೀ ದೇಶ ನೋಡುತ್ತಿದೆ. ಪ್ರತಿಪಕ್ಷ ಬಿಜೆಪಿ ಅವಕಾಶಕ್ಕಾಗಿ ಎದುರು ನೋಡುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಸಂಯಮ ಅಗತ್ಯ. ಹೀಗಾಗಿ ಯಾರೊಬ್ಬರು ನಿರಾಸೆಯಾಗಬೇಡಿ. ಆದಷ್ಟು ಬೇಗ ಖಾಲಿ ಇರುವ ಸ್ಥಾನವನ್ನು ತುಂಬುತ್ತೇವೆ ಎಂಬ ಭರವಸೆ ನೀಡಿದರು. ಶೀಘ್ರದಲ್ಲಿಯೇ ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನ ಹಂಚಿಕೆ ಆಗಲಿದೆ. ಅಲ್ಲಿ ಶೇ.50ರಷ್ಟು ಶಾಸಕರಿಗೆ ಹಾಗೂ ಉಳಿದ ಸ್ಥಾನಗಳು ಪಕ್ಷದ ನಾಯಕರಿಗೆ ಹಂಚಿಕೆ ಮಾಡಲಾಗುವುದು ಎಂದರು.

ಜೂನ್ 12ರವರೆಗೆ ಭಾರೀ ಮಳೆ ಸಂಭವ

ನವದೆಹಲಿ : ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಜೂನ್ 7ರಿಂದ 12ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಶ್ಚಿಮ ಕರಾವಳಿ ಪ್ರದೇಶಗಳಾದ ಕೇರಳ, ಕರ್ನಾಟಕ, ಮಹರಾಷ್ಟ್ರ, ಗೋವಾ ಮತ್ತು ಗುಜರಾತ್ಗಳಲ್ಲೂ ಭಾರಿ ಮಳೆಯಾಗಲಿದೆ ಎಂದು ವರದಿ ತಿಳಿಸಿದೆ. ಮಹಾರಾಷ್ಟ್ರದ ನಾಸಿಕ್, ದಿಯು, ದಮನ್, ಮುಂತಾದ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುವ ಮುನ್ಸೂಚನೆ ಇದೆ. ಈ ಹಿನ್ನೆಲೆಯಲ್ಲಿ ಜೂನ್ 9ರಿಂದ 11ರವರೆಗೆ ಕರ್ನಾಟಕದ ಕರಾವಳಿ ಮತ್ತು ಕೇರಳದ ಕೆಲಭಾಗಗಳಲ್ಲಿ ಮುನ್ನಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಆಯಾ ರಾಜ್ಯಗಳಿಗೆ ಸೂಚನೆ ನೀಡಿದೆ. ಈ ರಾಜ್ಯಗಳ ಪ್ರಮುಖ ನದಿಗಳಾದ ತಾಪಿ, ತದ್ರಿ, ಕೃಷ್ಣಾ , ಕಾವೇರಿ ನದಿಗಳ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಇದು ಜೂನ್ 12ರ ವರೆಗೆ ಮುಂದುವರೆಯುವ ಲಕ್ಷಣಗಳಿವೆ. ಭಾರಿ ಮಳೆಯಿಂದ ಮುಂಬೈನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಲೋಕಲ್ ಟ್ರೈನ್ಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ. ಇನ್ನು ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಲಂಡನ್ ನಿಂದ ಮುಂಬೈಗೆ ಬರಬೇಕಿದ್ದ ಜೆಟ್ ಏರ್ವೇಸ್ ಮಾರ್ಗ ಬದಲಾವಣೆ ಮಾಡಲಾಗಿದ್ದು, ವಿಮಾನ ಮುಂಬೈ ಬದಲಿಗೆ ಅಹಮದಬಾದ್ನಲ್ಲಿಯೇ ಇಳಿಸಲಾಗಿದೆ.

ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದ ಅತೃಪ್ತ ಶಾಸಕರು ?

ಬೆಂಗಳೂರು:ಸಚಿವ ಸ್ಥಾನ ವಂಚಿತ ರಾಜ್ಯದ ಅತೃಪ್ತ ಕಾಂಗ್ರೆಸ್ ಶಾಸಕರು ಇದೀಗ ಮಾಜಿ ಸಿಎಂ ಹಾಗೂ ಶಾಸಕಾಂಗ ನಾಯಕ ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿದ್ದಾರೆ ಎನ್ನಲಾಗ್ತಿದೆ. ಹೌದು ಈ ಸಂಬಂಧ ಸದಾಶಿವನಗರದ ಎಂ.ಬಿ. ಪಾಟೀಲ್ ನಿವಾಸದಲ್ಲಿ ಸಭೆ ಸೇರಿರುವ ಅತೃಪ್ತ ಶಾಸಕರು ಮಾತು ತಪ್ಪಿದ ತಮ್ಮ ನಾಯಕನ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿ, ಸಾಮೂಹಿಕ ರಾಜೀನಾಮೆ ನೀಡುವ ನಿರ್ಧಾರ ಕೈಗೊಳ್ಳುವ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸಚಿವ ಸ್ಥಾನದ ಭರವಸೆ ನೀಡಿದ್ದ ಸಿದ್ದರಾಮಯ್ಯ ಅವರು ಮಾತು ತಪ್ಪಿದ್ದಾರೆ. ಅಲ್ಲದೆ, ಕೊನೆ ಕ್ಷಣದಲ್ಲಿ ನಮ್ಮನ್ನು ಕೈ ಬಿಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ಶಾಸಕರು ಹೈಕಮಾಂಡ್ ಹಾಗೂ ಸಿದ್ದರಾಮಯ್ಯ ಗೆ ಬಿಸಿ ಮುಟ್ಟಿಸುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ. ಈ ಸಭೆಯಲ್ಲಿ ಸಚಿವ ಸ್ಥಾನ ಪ್ರಬಲ ಆಕಾಂಕ್ಷಿಗಳಾದ ಎಂ.ಬಿ. ಪಾಟೀಲ, ರೋಷನ್ ಬೇಗ್, ಸತೀಶ್ ಜಾರಕಿಹೊಳಿ, ಎಂಟಿಬಿ ನಾಗರಾಜ್, ಭೀಮಾ ನಾಯ್ಕ್, ಡಾ. ಕೆ. ಸುಧಾಕರ್ ಸೇರಿದಂತೆ ಹಲವು ಶಾಸಕರು ಪಾಲ್ಗೊಂಡಿದ್ದಾರೆ. ಇನ್ನಷ್ಟು ಶಾಸಕರು ಇವರೊಂದಿಗೆ ಸೇರುವ ನಿರೀಕ್ಷೆಯಿದೆ. ಈ ಹಿನ್ನಲೆಯಲ್ಲಿ ಅತೃಪ್ತ ಶಾಸಕರ ಸಭೆ ಭಾರೀ ಮಹತ್ವ ಪಡೆದುಕೊಂಡಿದ್ದು, ಅವರ ಮುಂದಿನ ನಡೆ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ಶಾಕ್ ನೀಡುತ್ತಾ ಅಥವಾ ಠುಸ್ ಪಟಾಕಿ ಆಗುತ್ತಾ ಎಂಬುದು ಕಾದು ನೋಡಬೇಕಿದೆ.

ರಾಜಭವನದ ಭದ್ರತಾ ಲೋಪ : ವರದಿ ಕೇಳಿದ ಸಿಎಂ

ರಾಜಭವನದ ಭದ್ರತಾ ಲೋಪ : ವರದಿ ಕೇಳಿದ ಸಿಎಂ ಬೆಂಗಳೂರು: ಬುಧವಾರ ಮಧ್ಯಾಹ್ನ ರಾಜಭವನದ ಎದುರು ಉಂಟಾದ ಭದ್ರತಾ ಲೋಪ ಕುರಿತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವರದಿ ಕೇಳಿದ್ದಾರೆ. ಈ ಕುರಿತು ಡಿಜಿಪಿ ನೀಲಮಣಿ ರಾಜು ಅವರಿಗೆ ಖಡಕ್ ಸೂಚನೆ ನೀಡಿರುವ ಹೆಚ್ ಡಿಕೆ ಈ ಕುರಿತು ಸಮಗ್ರ ವರದಿ ನೀಡುವಂತೆ ಸೂಚಿಸಿದ್ದಾರೆ. ಟ್ರಾಫಿಕ್ ಸಮಸ್ಯೆಯಿಂದಾಗಿ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಅವರು ರಾಜಭವನದ ಎದುರು ಅರ್ಧಗಂಟೆ ಕಾದು ವಾಪಾಸ್ಸಿದ್ದರು. ಅಲ್ಲದೆ ಈ ಕುರಿತು ಸರಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಛೀಮಾರಿ ಹಾಕಿದ್ದರು. ಇದಲ್ಲದೆ, ಸಿಎಂ ಕುಮಾರಸ್ವಾಮಿ ಅವರ ತಾಯಿ ಚೆನ್ನಮ್ಮ ಹಾಗೂ ಸಂಬಂಧಿಕರು ರಾಜಭವನದ ವರೆಗೆ ನಡೆದುಕೊಂಡೆ ಬಂದಿದ್ದರಿಂದ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಈ ಹಿಂದೆ ಕೂಡ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗಮನದ ವೇಳೆಭದ್ರತಾ ಲೋಪವಾಗಿದ್ದರಿಂದ ಕುಮಾರಸ್ವಾಮಿ ವಿರುದ್ಧ ಕೆಂಡಾಮಂಡಲಗೊಂಡಿದ್ದರು. ಇದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಎರಡನೇ ಬಾರಿಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಮುಜುಗರ ಉಂಟಾಗಿದೆ.

ಸಿದ್ದರಾಮಯ್ಯ ಎದುರು ಕಣ್ಣೀರು ಹಾಕಿದ ಪಾಟೀಲ

ಬೆಂಗಳೂರು: ರಾಜ್ಯದ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮೀಶ್ರ ಸರಕಾರದಲ್ಲಿ ತಮಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ತೀವ್ರ ಬೇಸರಗೊಂಡಿರುವ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರು ತಮ್ಮ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎದುರು ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಸಚಿವ ಸ್ಥಾನ ಸಿಗದ್ದಕ್ಕೆ ಮುನಿಸಿಕೊಂಡಿರುವ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿತ್ತು. ಆದರೆ ಗುರುವಾರ ಬೆಳಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸ ಕಾವೇರಿಗೆ ಆಗಮಿಸಿ ಅವಕಾಶ ಸಿಕ್ಕಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರು ಎಂ.ಬಿ. ಪಾಟೀಲ್ ಅವರ ಮನವೊಲಿಸುವ ಕಾರ್ಯ ಮಾಡಿದರು. ಅಲ್ಲದೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ಮನವೊಲಿಸುವ ಯತ್ನ ಮಾಡಿದರು.

ರಜನಿ ಅಭಿನಯದ “ಕಾಲಾ” ಚಿತ್ರಕ್ಕೆ ಹಲವಡೆ ಭಾರೀ ವಿರೋಧ

ಬೆಂಗಳೂರು:ಸುಪರ್ ಸ್ಟಾರ್ ರಜನಿಕಾಂತ್ ಅಭಿನಯದ “ಕಾಲಾ” ಚಿತ್ರ ಪ್ರದರ್ಶನಕ್ಕೆ ರಾಜ್ಯದ ಹಲವಡೆ ಭಾರೀ ವಿರೋಧ ವ್ಯಕ್ತವಾಗಿದೆ. ಬೆಂಗಳೂರು, ಮೈಸೂರು, ಬಳ್ಳಾರಿ ಹಾಗೂ ರಾಯಚೂರು ಸೇರಿದಂತೆ ಅನೇಕ ಕಡೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪೋಸ್ಟರ್ ಹರಿದು ಆಕ್ರೋಶ ವ್ಯಕ್ತಪಡಿಸಿದರು. ಕೆಲವಡೆ ಚಿತ್ರಕ್ಕೆ ಭಾರೀ ವಿರೋಧದ ಹಿನ್ನಲೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳತ್ತ ಸುಳಿಯದೆ ಇರುವುದು ಕೂಡ ಕಂಡು ಬಂದಿದೆ. ಬೆಂಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳ ನೂರಾರು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಪ್ರತಿಭಟನೆ ನೇತೃತ್ವ ವಹಿಸಿದ್ದ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಮುಂಜಾಗ್ರತ ಕ್ರಮವಾಗಿ ಬಂಧಿಸಿದ್ದಾರೆ. ರಾಜ್ಯದಲ್ಲಿ ಚಿತ್ರ ಪ್ರದರ್ಶನಕ್ಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ರಜನಿಕಾಂತ್ ಮಗಳು ಹೈಕೋರ್ಟ್ ಮೆಟ್ಟಿಲು ಹತ್ತಿ ಚಿತ್ರ ಪ್ರದರ್ಶನಗೊಳಿಸುವಂತೆ ಆದೇಶ ತಂದಿದ್ದರು. ಈ ಹಿನ್ನಲೆಯಲ್ಲಿ ಗುರುವಾರ ಕಾಲಾ ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಂಡಿತ್ತು. ಆದರೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾದ ಹಿನ್ನಲೆಯಲ್ಲಿ ರಜನಿ ಫ್ಯಾನ್ಸ್ ಗಳಿಗೆ ಭಾರೀ ನಿರಾಶೆಯಾಗಿದೆ.

ವಾಶಿಂಗ್ ಮಷಿನ್ ಆನ್ ಮಾಡಲು ಹೋಗಿ ಮಹಿಳಾ ಪೇದೆ ಸಾವು

ಕಲಬುರಗಿ: ವಾಶಿಂಗ್ ಮಷಿನ್ ಆನ್ ಮಾಡಲು ಹೋಗಿ ಮಹಿಳಾ ಪೇದೆಯೊಬ್ಬರು ಸಾವನ್ನಪ್ಪಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಇಲ್ಲಿಯ ಸಾಯಿಮಂದಿರ ಬಳಿಯ ಮನೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯುತ್ ಶಾಕ್ ನಿಂದ ಅವರು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರೊಳಗೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಡಿಸಿಐಬಿ ನಲ್ಲಿ ಪೇದೆಯಾಗಿದ್ದ ಸುಜಾತ ರಾಠೋಡ ಮೃತ ಮಹಿಳೆಯಾಗಿದ್ದು, ಮೂಲತಃ ಜೇವರ್ಗಿ ತಾಲೂಕಿನವರಾದ ಸುಜಾತ ಕಲಬುರಗಿಯಲ್ಲಿ ಕರ್ತವ್ಯ ಹಿನ್ನಲೆಯಲ್ಲಿ ವಾಸವಾಗಿದ್ದರು. ಮೃತ ಮಹಿಳೆಯ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಅಶೋಕ್ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಚಿವ ಸ್ಥಾನ ನೀಡದಿದ್ದರೆ ಕೆಟ್ಟ ಪರಿಣಾಮದ ಎಚ್ಚರಿಕೆ

ಹಾವೇರಿ: ನನಗೆ ಸಚಿವ ಸ್ಥಾನ ನೀಡದಿದ್ದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್ ಎಚ್ಚರಿಕೆ ನೀಡಿದ್ದಾರೆ. ಅವರು ಗುರುವಾರ ಹಿರೇಕೆರೂರುನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದರು. ನನ್ನ ಹೈಕಮಾಂಡ್ ನನ್ನ ಕ್ಷೇತ್ರದ ಮತದಾರರು. ನನಗೆ ದಿಲ್ಲಿ ಹಾಗೂ ಬೆಂಗಳೂರಿನಲ್ಲಿ ಯಾರೂ ಹೈಕಮಾಂಡ್ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು ಮತದಾರರ ಜೊತೆ ಜೂನ್ 11 ರಂದು ಸಭೆ ನಡೆಸಿ ಅವರ ಸಲಹೆ, ಸೂಚನೆಯಂತೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು. ಜೆಡಿಎಸ್ ಕಾಂಗ್ರೆಸ್ ಸಮ್ಮೀಶ್ರದಲ್ಲಿ ತಾವೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಯಾವುದೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಕಿಲ್ಲ ಎಂದು ಗುಡುಗಿದರು.

ಕಾರ್ ನೊಳಗೆ ಸಾವಿಗೆ ಶರಣಾದ ಯುವ ಜೋಡಿ

ಮುಂಬೈ: ಕಾರ್ನೊಳಗೆ ಯುವ ಜೋಡಿಯೊಂದು ಸಾವಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಮುಂಬೈನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಮುಲಾಂದ್ ಬಳಿಯ ಕಾರ್ ಪಾರ್ಕ್ನಲ್ಲಿ ಈ ಘಟನೆ ನಡೆದಿದ್ದು, ಸಲ್ಮಾನ್ ಅಫ್ರೋಜ್ ಆಲಮ್ ಖಾನ್ ಹಾಗೂ ಮನಿಶಾ ನೆಗಿಲ್ ಸಾವಿಗೀಡಾದ ರ್ದುದೈವಿಗಳೆಂದು ಗುರುತಿಸಲಾಗಿದೆ. ಇಬ್ಬರು ಬೇರೆ ಬೇರೆ ಧರ್ಮಿಯರಾಗಿದ್ದರಿಂದ ಮನೆಯಲ್ಲಿ ವಿರೋಧ ವ್ಯಕ್ತವಾಗುವ ಸಾಧ್ಯತೆ ಅರಿತು ವಿಷ ಸೇವಿಸಿ ಈ ಜೋಡಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜನೌಷಧಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ, ಒಡಿಶಾ, ಗುಜರಾತ್, ಆಂಧ್ರಪ್ರದೇಶ ಹಾಗೂ ಉತ್ತರ ಪ್ರದೇಶದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಅವರು ಗುರುವಾರ ನಮೋ ಆ್ಯಪ್ ಮೂಲಕ ಈ ರಾಜ್ಯಗಳ ಜನರ ಜತೆ ಸಂವಾದ ನಡೆಸಿ, ಅವರ ಅಭಿಪ್ರಾಯ ಸಂಗ್ರಹಿಸಿದರು. ಬಳಿಕ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆರೋಗ್ಯಕರ ಭಾರತ ನಿರ್ಮಾಣ ಮಾಡುವಲ್ಲಿ ಸ್ವಚ್ಚ ಭಾರತ್ ಮಿಷನ್ ಪ್ರಮುಖ ಪಾತ್ರ ವಹಿಸುತ್ತಿದೆ. ದೇಶದ ಪ್ರತಿಯೊಬ್ಬ ನಾಗರಿಕರು ಉತ್ತಮ ಆರೋಗ್ಯ ಹೊಂದಬೇಕು. ಆರೋಗ್ಯಯುತ ಭಾರತ ಸ್ವಚ್ಛ ಭಾರತದ ಮೂಲಮಂತ್ರವಾಗಿದೆ ಎಂದರು. ಬಡವರು ಮತ್ತು ಮಧ್ಯಮ ವರ್ಗದ ಜನತೆ ಹಣಕಾಸಿನ ತೊಂದರೆ ಅನುಭವಿಸುತ್ತಿದ್ದು, ಅನಾರೋಗ್ಯಕ್ಕೆ ಒಳಗಾದವರು ಹಣ ಇಲ್ಲದೇ ತೊಂದರೆ ಎದುರಿಸುತ್ತಿದ್ದಾರೆ. ಅಂತಹವರ ನೆರವಿಗೆ ಧಾವಿಸಲು ಕೇಂದ್ರ ಸರ್ಕಾರ ಆರೋಗ್ಯಯುತ ವಾತಾವರಣ ನಿರ್ಮಾಣ ಮಾಡಲು ಹಗಲಿರುಳು ಶ್ರಮಿಸುತ್ತಿದೆ. ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ಹೇಗೆ ಪಡೆಯಹುದು ಎಂಬ ಕುರಿತು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡರು. ಮಂಗಳೂರು ಜಿಲ್ಲೆಯ ಫಲಾನುಭವಿಗಳು ಈ ಸಂವಾದದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ವಿಶ್ವಕಪ್ಗೆ 10 ತಂಡ ಮಾತ್ರ ಆಯ್ಕೆಗೆ ವಿರೋಧ

ಹೈದ್ರಾಬಾದ್ : ಇಂಗ್ಲೆಂಡ್ನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಕೇವಲ 10 ತಂಡಗಳನ್ನು ಮಾತ್ರ ಆಯ್ಕೆ ಮಾಡುತ್ತಿರುವುದಕ್ಕೆ ಮಾಜಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಇಹಾಸನ್ ಮಣಿ ವಿರೋಧ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ನಿಲುವನ್ನು ಕಟುವಾಗಿ ಟೀಕಿಸಿರುವ ಅವರು ಇದೊಂದು ಪೂರ್ವಾಗ್ರಹ ಪೀಡಿತ ನಿರ್ಧಾರವಾಗಿದ್ದು ಕೇವಲ ಹಣಕಾಸಿನ ಲೆಕ್ಕಾಚಾರದ ಮೇಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ನಿರ್ಧಾರ ನಿಜಕ್ಕೂ ಬೇಸರ ತಂದಿದ್ದು,ಇದಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬೆಂಬಲ ನೀಡಿರುವುದು ನೋವಿನ ಸಂಗತಿ ಎಂದು ತಮ್ಮ ಬೇಸರ ಹೊರಹಾಕಿದ್ದಾರೆ. ಈ ಹಿಂದೆ ವಿಶ್ವಕಪ್ಗಳಲ್ಲಿ 14 ತಂಡಗಳು ಭಾಗವಹಿಸಿದ್ದವು. ಆದರೆ ಮುಂದಿನ ಬಾರಿ ಕೇವಲ 10 ತಂಡಗಳಿಗೆ ಅವಕಾಶ ನೀಡುತ್ತಿರುವುದು ಈಗಾಗಲೇ ವಿಶ್ವಾದ್ಯಂತ ಕ್ರಿಕೆಟ್ ಪ್ರೇಮಿಗಳ ಟೀಕೆಗೆ ಗುರಿಯಾಗಿದೆ.

ಸಿಎಂಗೆ ಖಾರವಾಗಿ ಪತ್ರ ಬರೆದ ಯಡಿಯೂರಪ್ಪ

ಬೆಂಗಳೂರು:ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ನಡುವಿನ ಸಮರ ತಾರಕಕ್ಕೇರಿದೆ. ಯಡಿಯೂರಪ್ಪ ಅವರು ಉಸ್ತುವಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಳಸಿದ್ದ ಹೆಲಿಕಾಪ್ಟರ್ ವಿವಾದಕ್ಕೆ ಕಾರಣವಾಗಿದ್ದು, ಇಬ್ಬರ ನಡುವಿನ ಮುಸುಕಿನ ಗುದ್ದಾಟ ಇದೀಗ ಬಹಿರಂಗ ಪತ್ರಕ್ಕೆ ತಿರುಗಿದೆ. ಹೌದು ಕುಮಾರಸ್ವಾಮಿಯ ಹೇಳಿಕೆ ಖಂಡಿಸಿ ಯಡಿಯೂರಪ್ಪ ಅವರು ಬಹಳ ಖಾರವಾಗಿ ಪತ್ರ ಬರೆದಿದ್ದಾರೆ.ಅಲ್ಲದೆ. ಸಿಎಂ ಹಗುರವಾಗಿ ಮಾತನಾಡಿರುವುದು ಅತ್ಯಂತ ಖೇದ ಎನಿಸಿದೆ ಎಂದು ಪತ್ರದಲ್ಲಿ ಬಿಎಸ್ವೈ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಉಸ್ತುವಾರಿ ಸಿಎಂ ಆಗಿ ಅಂದು ನಾನು ಹೋಗಿದ್ದು, ಪರಿಸ್ಥಿತಿಯ ಸೂಕ್ಷ್ಮತೆಯನ್ನು ತಿಳಿದುಕೊಳ್ಳದೇ ಕುಮಾರಸ್ವಾಮಿ ಮನಬಂದಂತೆ ಆರೋಪ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಬಾಗಲಕೋಟೆ ಜಿಲ್ಲೆಯ ಇಳಕಲ್ನ ಲಿಂಗೈಕ್ಯ ಡಾ.ಮಹಾಂತ ಶಿವಯೋಗಿ ಹಾಗೂ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಭೇಟಿ ನೀಡಿದ್ದೇನೆ. ಇದನ್ನು ದುಂದುವೆಚ್ಚ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಇದಲ್ಲದೆ, ನಾನು ಈಗಲೂ ಪ್ರವಾಸದ ವೆಚ್ಚ ಭರಿಸಲು ಸಿದ್ಧನಿದ್ದು, ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಜನರ ದಾರಿತಪ್ಪಿಸುವಂತಹ ಅಸಂಬದ್ಧ ಕೆಲಸ ನಿಲ್ಲಿಸಬೇಕು. ತಮಗೆ ಸ್ವಾಮೀಗಳ ಮೇಲೆ ಗೌರವ ಇಲ್ಲದಿರಬಹುದು. ಆದರೆ ಅಹಂಕಾರದಿಂದ ಜನರಿಗೆ ತಪ್ಪು ಸಂದೇಶ ನೀಡುವುದು ಎಷ್ಟು ಸಮಂಜಯ ಎಂದು ಯಡಿಯೂರಪ್ಪ ಕಿಡಿಕಾರಿದ್ದಾರೆ. ಕಳೆದ ಎರಡು ವಾರಗಳ ರಾಜಕೀಯ ಮೇಲಾಟದಿಂದ ಆಡಳಿತ ಯಂತ್ರ ಸ್ಥಗಿತಗೊಂಡಿದ್ದು, ರೈತರ ಸಾಲಮನ್ನಾ ಮಾಡಿ ನಿಮ್ಮ ರಾಜಕೀಯ ನೈಪುಣ್ಯತೆ ಪ್ರದರ್ಶಿಸಿ ಎಂದು ಪತ್ರದ ಮೂಲಕ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ಲಿಂಗಾಯತರ ಕಡೆಗಣನೆಗೆ ಉತ್ತರಕರ್ನಾಟಕ ಭಾಗದಲ್ಲಿ ಹೆಚ್ಚಿದ ಆಕ್ರೋಶ

ಹುಬ್ಬಳ್ಳಿ/ವಿಜಯಪುರ : ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಉತ್ತರ ಕರ್ನಾಟಕ ಭಾಗದ ಇಬ್ಬರು ಪ್ರಮುಖ ಲಿಂಗಾಯತ ನಾಯಕರನ್ನು ಕಡೆಗಣಿಸಿರುವುದಕ್ಕೆ ಆಕ್ರೋಶ ಹೆಚ್ಚಿದೆ. ಅದರಲ್ಲೂ ವಿಶೇಷವಾಗಿ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಮುಂಚೂಣಿ ನಾಯಕತ್ವ ವಹಿಸಿದ್ದ ಜೆಡಿಎಸ್ ನ ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ಬಬಲೇಶ್ವರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ಬಿ. ಪಾಟೀಲ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ವಿಶ್ವಲಿಂಗಾಯತ ಪರಿಷತ್ ಹಾಗೂ ಜಾಗತಿಕ ಲಿಂಗಾಯತ್ ಸ್ವತಂತ್ರ್ಯ ಹೋರಾಟ ಸಮಿತಿ ಕಾರ್ಯಕರ್ತರು ಹುಬ್ಬಳ್ಳಿ ಹಾಗೂ ವಿಜಯಪುರದಲ್ಲಿ ಬೀದಿಗಿಳಿದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಹುಬ್ಬಳ್ಳಿಯ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಹಾಗೂ ವಿಜಯಪುರದ ಬಸವೇಶ್ವರ ವೃತ್ತದಲ್ಲಿ ಲಿಂಗಾಯತ ಹೋರಾಟಗಾರರು ಪ್ರತಿಭಟನೆ ನಡೆಸಿದರು. ಇದೇ ವೇಳೆ ಕಾರ್ಯಕರ್ತನೊಬ್ಬ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಕೂಡಲೇ ಆತನನ್ನು ಸಮಾಧಾನ ಪಡಿಸಿ ಆತ್ಮಹತ್ಯೆ ಯತ್ನದಿಂದ ಹೊರತರಲಾಗಿದೆ. ಈ ಇಬ್ಬರು ನಾಯಕರಿಗೆ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟವೇ ಸಚಿವ ಸ್ಥಾನ ಕೈತಪ್ಪಲು ಕಾರಣ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇವರಿಗೆ ಸಚಿವ ಸ್ಥಾನ ಸಿಗುವುದೇ ಇಲ್ಲವೇ ಎಂಬುದು ಕಾದು ನೋಡಬೇಕಿದೆ.

ರಾಜ್ಯದ ಹಲವಡೆ ಮುಂದುವರೆದ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಬೆಂಗಳೂರು : ಸಮ್ಮೀಶ್ರ ಸರಕಾರದಲ್ಲಿ ಸಚಿವ ಸ್ಥಾನ ಕೈ ತಪ್ಪಿದಕ್ಕೆ ಬೆಂಗಳೂರಿನ ಕೆಪಿಸಿಸಿ ಕಚೇರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ಕಾವು ಜೋರಾಗಿದೆ. ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್, ಎಂಟಿಬಿ ನಾಗರಾಜ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಮಾನ ನೀಡಬೇಕು ಎಂದು ಅವರ ಬೆಂಬಲಿಗರು ಕೆಪಿಸಿಸಿ ಕಚೇರಿ ಎದುರು ಪ್ರತ್ಯೇಕ ಪ್ರತಿಭಟನೆ ನಡೆಸಿದರು. ಇದೇ ವೇಳೆ ಮೈಸೂರಿನಲ್ಲಿ ತನ್ವೀರ್ ಸೇಟ್ ಬೆಂಬಲಿಗರು ಸಚಿವ ಸ್ಥಾನ ನೀಡದಕ್ಕೆ ಆಕ್ರೋಶ ವ್ಯಕ್ತಪಡಿಸಿ ಬೀದಿಗಿಳಿದಿದ್ದರು. ಈ ವೇಳೆ ಕಾಂಗ್ರೆಸ ಕಾರ್ಯಕರ್ತನೊಬ್ಬ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಗೆ ಯತ್ನಿಸಿದ್ದರಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿತ್ತು. ಇದಲ್ಲದೆ, ಮೈಸೂರು ಬೆಂಗಳೂರು ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಹಾವೇರಿ ಜಿಲ್ಲೆಯ ಹಿರೇಕೆರೂರನಲ್ಲಿ ಶಾಸಕ ಬಿ.ಸಿ. ಪಾಟೀಲ ಬೆಂಬಲಿಗರು ಧಾರವಾಡ ಹಾಗೂ ವಿಜಯಪುರದಲ್ಲಿ ಎಂ.ಬಿ. ಪಾಟೀಲ ಬೆಂಬಲಿಗರು ಮತ್ತು ದಾವಣಗೆರೆಯಲ್ಲಿ ಶ್ಯಾಮನೂರು ಶಿವಶಂಕ್ರಪ್ಪ ಅವರ ಅಭಿಮಾನಿಗಳು ಕೂಡ ಪ್ರತಿಭಟನೆ ನಡೆಸಿ ಸಚಿವ ಸ್ಥಾನ ನೀಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಎಂ.ಬಿ. ಪಾಟೀಲಗೆ ಸಚಿವ ಸ್ಥಾನ ನೀಡಲು ಒತ್ತಡ

ಬೆಂಗಳೂರು : ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ರೂವಾರಿ ಹಾಗೂ ಮಾಜಿ ಸಚಿವ ಎಂ.ಬಿ. ಪಾಟೀಲ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಹೈಕಮಾಂಡ್ ಭೇಟಿ ಮಾಡುವುದಾಗಿ ಮಾಜಿ ಸಚಿವ ಹಾಗೂ ರಾಷ್ಟ್ರೀಯ ಬಸವ ಸೇನೆ ಅಧ್ಯಕ್ಷ ವಿನಯ ಕುಲಕರ್ಣಿ ಹೇಳಿದ್ದಾರೆ. ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅವರಿಗೆ ಯಾಕೆ ಸಚಿವ ಸ್ಥಾನ ಕೈ ತಪ್ಪಿತು ಎಂಬುದು ತಮಗೂ ತಿಳಿದಿಲ್ಲ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹಾಗೂ ಡಿಸಿಎಂ ಡಾ. ಜಿ. ಪರಮೇಶ್ವರ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದರು. ಸಚಿವ ಸ್ಥಾನ ಕೈ ತಪ್ಪಿದ್ದಕ್ಕೂ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಸಂಬಂಧವಿಲ್ಲ ಎಂದ ಅವರು ಇದೇ ವೇಳೆ ಧಾರವಾಡ ಜಿಲ್ಲೆಗೆ ಕೂಡ ಸಚಿವ ಸ್ಥಾನ ನೀಡಿಲ್ಲ. ಆ ಬಗ್ಗೆಯೂ ಮಾತನಾಡುವುದಾಗಿ ತಿಳಿಸಿದರು. ಈ ಹಿಂದೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಧಾರವಾಡ ಜಿಲ್ಲೆಯ ವಿನಯ ಕುಲಕರ್ಣಿ ಅವರಿಗೆ ಗಣಿ ಮತ್ತು ಭೂವಿಜ್ಞಾನ ಖಾತೆ ಹಾಗೂ ಸಂತೋಷ ಲಾಡ್ ಗೆ ಕಾರ್ಮಿಕ ಖಾತೆ ನೀಡಲಾಗಿತ್ತು. ಆದರೆ ಈ ಬಾರಿ ಒಂದು ಸ್ಥಾನವೂ ದೊರೆತಿಲ್ಲ. ಜಿಲ್ಲೆಯಿಂದ ಇಬ್ಬರು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದು, ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ ಮೂರನೇ ಬಾರಿ ಶಾಸಕರಾಗಿದ್ದರೆ, ಹುಬ್ಬಳ್ಳಿ ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ ಎರಡನೇ ಬಾರಿ ಶಾಸಕರಾಗಿರುವುದು ಇಲ್ಲಿ ಸ್ಮರಿಸಬಹುದು.

ಸಚಿವ ಸಂಪುಟದಲ್ಲಿ ಹದಿಮೂರು ಜಿಲ್ಲೆಗಳ ಕಡಗಣನೆ

ಬೆಂಗಳೂರು : ಜೆಡಿಎಸ್ ಕಾಂಗ್ರೆಸ್ ಸಮ್ಮೀಶ್ರ ಸರಕಾರದಲ್ಲಿ ಹದಿಮೂರು ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡದೆ ಕಡೆಗಣನೆ ಮಾಡಲಾಗಿದೆ. ವಿಶೇಷವಾಗಿ ಹೈದ್ರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಾದ ಯಾದಗಿರಿ ಹಾಗೂ ಬಳ್ಳಾರಿಗಳನ್ನು ನಿರ್ಲಕ್ಷ್ಯ ಮಾಡಿದರೆ, ಮಧ್ಯ ಕರ್ನಾಟಕದ ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಿಗೂ ಸಚಿವ ಸ್ಥಾನ ನೀಡದಿರುವುದು ತೀವ್ರ ಕುತೂಹಲ ಕೆರಳಿಸಿದೆ. ಅದೇ ರೀತಿ ಹಳೇ ಮೈಸೂರು ಭಾಗದ ಕೊಡಗು, ಕೋಲಾರ, ಬೆಂಗಳೂರು ಗ್ರಾಮಾಂತರ ಹಾಗೂ ಕರಾವಳಿ ಜಿಲ್ಲೆಗಳಾದ ಚಿಕ್ಕಮಗಳೂರು, ಉಡುಪಿ ಮತ್ತು ಉತ್ತರ ಕರ್ನಾಟಕ ಭಾಗದ ಗದಗ, ಬಾಗಲಕೋಟ, ಧಾರವಾಡಗಳಿಗೆ ಸಚಿವ ಸ್ಥಾನ ನೀಡಲಾಗಿಲ್ಲ. ಒಟ್ಟಿನಲ್ಲಿ ಹಳೆ ಮೈಸೂರು ಭಾಗಕ್ಕೆ ಸಿಂಹಪಾಲು ನೀಡಿರುವು ಸಮ್ಮೀಶ್ರ ಸರಕಾರ ರಾಜ್ಯದ ಹಲವು ಜಿಲ್ಲೆಗಳನ್ನುಕಡೆಗಣಿಸಿದ ಆರೋಪಕ್ಕೆ ಗುರಿಯಾಗಿದೆ.

ಶಾಸಕ ಶಿವಳ್ಳಿ ಬೆಂಬಲಿಗನಿಂದ ಆತ್ಮಹತ್ಯೆ ಯತ್ನ

ಹುಬ್ಬಳ್ಳಿ: ಕುಂದಗೋಳ ವಿಧಾನ ಸಭಾ ಕ್ಷೇತ್ರದ ಶಾಸಕ ಸಿ ಎಸ್ ಶಿವಳ್ಳಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದಕ್ಕೆ ಆಕ್ರೋಶ.ವ್ಯಕ್ತಪಡಿಸಿ ಅವರ ಬೆಂಬಲಿಗನೊಬ್ಬ ಬೆಂಕಿಗೆ ಹಾರಲು ಯತ್ನಿಸಿದ ಘಟನೆ ಕುಂದಗೋಳದಲ್ಲಿ ನಡೆದಿದೆ. ಕುಂದಗೋಳ ಪಟ್ಟಣದಲ್ಲಿ ಸಿ ಎಸ್ ಶಿವಳ್ಳಿ ಬೆಂಬಲಿಗರು ಅರೆ ಬೆತ್ತಲೆಯಾಗಿ ಪ್ರತಿಭಟನೆ ನಡೆಸಿ, ಟೈಯರಿಗೆ ಬೆಂಕಿ ಹಚ್ಚಿ ತಮ್ಮ ಅಸಮಾಧಾನ ಹೊರಹಾಕಿದ ವೇಳೆ ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಕಾರ್ಯಕರ್ತನನ್ನೂ ಕಾಲವಾಡ ಎಂದು ಗುರುತಿಸಲಾಗಿದ್ದು, ಆತನನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರು ಮನವೊಲಿಸಿ, ಸಮಾಧಾನ ಪಡಿಸಿದ್ದಾರೆ. ಕುಂದಗೋಳ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯುವಾಗ ಈ ಆತ್ಮಹತ್ಯೆ ಪ್ರಯತ್ನ ನಡೆದಿದ್ದು,ಮೂರು ಭಾರಿ ಆಯ್ಕೆಯಾಗಿರುವ ಸಿ ಎಸ್ ಶಿವಳ್ಳಿ ಅವರನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ಘೋಷಣೆ ಕೂಗಿದರು. ಇದೇ ವೇಳೆ ಕುಂದಗೋಳ ಪಟ್ಟಣ ಪಂಚಾಯತಿ ಸದಸ್ಯರಾದ ಬಸವರಾಜ ವಡವಟ್ಟಿ ಸೇರಿ ನಾಲ್ಕು ಜನ ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದ್ದಾರೆ. ಶಾಸಕ ಸಿ.ಎಸ್. ಶಿವಳ್ಳಿ ಕೂಡ ಬೆಂಬಲಿಗರ ಜೊತೆಗೆ ಸಭೆ ನಡೆಸಿ ಮುಂದಿನ ನಡೆ ತಿಳಿಸುವುದಾಗಿ ಹೇಳಿರುವುದು ಕೂತುಹಲ ಕೆರಳಿಸಿದೆ.

ಅನಾಥ ಶಿಶುವಿಗೆ ಹಾಲುಣಿಸಿದ ಮಹಿಳಾ ಕಾನ್ಸ್ಟೆಬಲ್ ಅರ್ಚನಾ

ಬೆಂಗಳೂರು : ಬೆಂಗಳೂರು ಹೊರವಲಯದ ದೊಡ್ಡತೋಗೂರಿನ ಸೆಲಬ್ರಿಟಿ ಲೇಔಟ್ನ ನಿರ್ಮಾಣ ಹಂತದ ಕಟ್ಟಡದ ಬಳಿ ಪೊದೆಯೊಂದರಲ್ಲಿ ಪುಟ್ಟ ಮಗು ಎಡೆಬಿಡದೆ ಅಳುವ ಸದ್ದು ಕೇಳಿಸಿತ್ತು. ಅದೇ ಹಾದಿಯಲ್ಲಿ ಚಿಂದಿ ಆಯುತ್ತ ಹೋಗುತ್ತಿದ್ದ ಅನಾಮಿಕನೊಬ್ಬ ಆ ಅಳು ಕೇಳಿ ಮಗುವನ್ನು ಎತ್ತಿಕೊಂಡ. ಸುತ್ತಲಿನ ಜನರಿಗೆ ವಿಷಯ ತಿಳಿಸಿದ. ಯಾರೋ ಪೊಲೀಸ್ ಕಂಟ್ರೋಲ್ ರೂಂಗೆ ಫೋನ್ ಮಾಡಿದ್ರು. ಅದೇ ಪರಿಸರದಲ್ಲಿದ್ದ ಹೊಯ್ಸಳ ಗಸ್ತು ವಾಹನ ತಕ್ಷಣ ಸ್ಥಳಕ್ಕೆ ಬಂತು. ಹೊಯ್ಸಳದಲ್ಲಿದ್ದವರು ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ನಾಗೇಶ್ ಆರ್. ಮತ್ತು ಪೇದೆ ಅರ್ಚನಾ. ಪ್ಲಾಸ್ಟಿಕ್ ಸುತ್ತಿತ್ತು, ಇನ್ನೂ ಹೊಕ್ಕುಳಬಳ್ಳಿ ಕತ್ತರಿಸಿರಲಿಲ್ಲ. ಮಗು ಒಂದೇ ಸಮನೆ ಅಳುತ್ತಿತ್ತು. ‘ಹೊಯ್ಸಳ’ ನೇರ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯತ್ತ ತೆರಳಿತು. ‘ಹೊಯ್ಸಳ’ದಲ್ಲಿ ಪುಟ್ಟ ಮಗುವನ್ನು ಮಡಿಲಲ್ಲಿಟ್ಟುಕೊಂಡು ನಿಲ್ಲದ ಅಳುವಿಗೆ ಚಡಪಡಿಸುತ್ತ ಕುಳಿತಿದ್ದರು ಅರ್ಚನಾ. ಠಾಣೆ ಬರುತ್ತಿದ್ದಂತೆ ನೇರ ಪ್ರತ್ಯೇಕ ಕೋಣೆಗೆ ಮಗುವನ್ನೆತ್ತಿಕೊಂಡು ಓಡಿದರು ಅರ್ಚನಾ... ಠಾಣೆಯಲ್ಲಿದ್ದವರಿಗೆಲ್ಲ ದಿಗಿಲು. ಒಳಗೆ ಹೋದವರೇ ಅರ್ಚನಾ, ಅಳುತ್ತಿದ್ದ ಮಗುವಿಗೆ ತನ್ನ ಎದೆ ಹಾಲು ಊಣ ಬಡಿಸಿದರು. ಎಷ್ಟು ಹೊತ್ತಾಗಿತ್ತೋ ಅಮ್ಮನ ಹಾಲು ಕುಡಿಯದೆ? ಯಾತಕ್ಕಾಗಿ ಆ ಅಮ್ಮ ದೂರ ಮಾಡಿದ್ದಳೋ? ಆದರೆ ಎದೆಹಾಲು ಕುಡಿಯುತ್ತಿದ್ದಂತೆ ಅಳು ನಿಂತಿತ್ತು... 2-3 ನಿಮಿಷ ಹಾಲು ಕುಡಿಸಿದ ಬಳಿಕ ಮಗು ಜೋರಾಗಿ ನಕ್ಕಿತ್ತು.ಯಾರೋ ಅದು ದೇವರ ನಗು ಎಂದರು. ನಿತ್ಯ ಯಾವುದಾವುದೋ ಕೇಸ್ಗಳಲ್ಲಿ ಬಿಗುವಿನಿಂದಿರುವ ಪೊಲೀಸ್ ಠಾಣೆಯಲ್ಲಿ ಪುಟ್ಟ ಮಗುವಿನ ನಗು... ಜನ ಸೇರಿದರು. ಎಲ್ಲರೂ ಅರ್ಚನಾರ ಹೃದಯವಂತಿಕೆಯನ್ನು ಹೊಗಳಿದರು. ಆಮೇಲೆ ನೋಡಿದರೆ ಅವರಿಗೂ 4 ತಿಂಗಳ ಮಗುವಿತ್ತು. ಕೇವಲ ವಾರದ ಹಿಂದಷ್ಟೇ ಹೆರಿಗೆ ರಜೆ ಮುಗಿಸಿ ಠಾಣೆಗೆ ಮರಳಿದ್ದರು! ಇದ್ದಕ್ಕಿದ್ದಂತೆ ಪೊಲೀಸ್ ಠಾಣೆಯಲ್ಲಿ ಸಂಭ್ರಮದ ವಾತಾವರಣ. ಪೊಲೀಸರು, ಸ್ಥಳೀಯರು ಬಂದು ಮಗುವನ್ನು ನೋಡಿದರು, ಮಗುವಿನದ್ದೇ ಭಾಷೆಯಲ್ಲಿ ಮಾತನಾಡಿಸಿದರು. ಖುದ್ದು ಪೊಲೀಸರೇ ಬಟ್ಟೆ ಅಂಗಡಿಗೆ ಹೋಗಿ ಒಂದು ಜೊತೆ ಚಂದದ ಬಟ್ಟೆ ತಂದು ತೊಡಿಸಿದರು. ಜೊತೆಗೆ ಜನರೇ ಮಗುವಿಗೊಂದು ಹೆಸರಿಡೋಣ ಎಂದರು. ಗುಂಪಿನಲ್ಲಿ ಯಾರೋ ಒಬ್ಬ ಕುಮಾರಸ್ವಾಮಿ ಎಂದಿಡೋಣ ಎಂದ.. ಹೇಗೂ ಈಗ ಆ ಗಂಡು ಮಗು ಸರ್ಕಾರದ ಸುಪರ್ದಿಯಲ್ಲಿದೆ. ಹಾಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯ ಹೆಸರಿಡೋಣ ಎಂದು ಎಲ್ಲರೂ ನಿರ್ಧರಿಸಿದರು... ಈಗ ಈ ‘ಕುಮಾರಸ್ವಾಮಿ’ ವಿಲ್ಸನ್ಗಾರ್ಡನ್ನ ಶಿಶುಮಂದಿರದಲ್ಲಿದ್ದಾನೆ. ಒಮ್ಮೊಮ್ಮೆ ಅಳುತ್ತಾ, ಒಮ್ಮೊಮ್ಮೆ ಮೇಲೆ ಫ್ಯಾನ್ ತಿರುಗುವುದ ಕಂಡು ನಗುತ್ತಾ. ಪುತುಪುತನೆ ಪುಟಾಣಿ ಕೈಕಾಲು ಆಡಿಸುತ್ತಾ. ಕುಮಾರಸ್ವಾಮಿ ನೂರ್ಕಾಲ ಬಾಳಲಿ.... ಯಾರಿಗ್ಗೊತ್ತು ಮುಂದೊಮ್ಮೆ ಈತನೂ ನಮ್ಮನ್ನು ಆಳುವ ದೊರೆಯಾದಾನು..!! ಮಗುವನ್ನು ತ್ಯಜಿಸಬೇಕೆಂದು ನಿರ್ಧರಿಸಿದ ಆ ದುರ್ಭರ ಕ್ಷಣ ಯಾವುದೋ? ಆ ತಾಯಿ, ಈ ಮಗು, ಅದಕ್ಕೆ ಹಾಲು ಕೊಟ್ಟ ಅರ್ಚನಾ, ಮಗುವಿಗೆ ಹೊಸ ಬಟ್ಟೆ ಕೊಡಿಸಿದ ಎಎಸ್ಐ ನಾಗೇಶ್, ಆ ‘ಹೊಯ್ಸಳ’ ವಾಹನ, ಕುಮಾರಸ್ವಾಮಿ ಅಂತ ಹೆಸರಿಟ್ಟ ಆ ಅನಾಮಿಕ, ಮತ್ತು ತಾನೂ ‘ಸಾಂದರ್ಭಿಕ ಶಿಶು’ ಎಂದು ಕರೆಸಿಕೊಂಡ ನಮ್ಮ ಮುಖ್ಯಮಂತ್ರಿ ಕುಮಾರಸ್ವಾಮಿ, ಜೊತೆಗೆ ಕಣ್ಣು ತಂಪು ಮಾಡಿಕೊಂಡು ಓದುತ್ತಿರುವ ನೀವು... ‘ಈ ಸಂಬಂಧ ಅನ್ನಾದು ದೊಡ್ದು ಕನಾ...’

ಬಿಎಸ್ಪಿ ಶಾಸಕನಿಗೂ ಸಚಿವ ಸ್ಥಾನ ನೀಡಿದ ಜೆಡಿಎಸ್

ಬೆಂಗಳೂರು : ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಕ್ಷೇತ್ರದಿಂದ ವಿಧಾನ ಸಭೆ ಪ್ರವೇಶಿಸಿದ ಬಹುಜನ ಸಮಾಜ ಪಕ್ಷದ ಶಾಸಕ ಎನ್. ಮಹೇಶ್ ಅವರು ಜೆಡಿಎಸ್ ಕಾಂಗ್ರೆಸ್ ಸಮ್ಮೀಶ್ರ ಸರಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆ ಮೂಲಕ ಜೆಡಿಎಸ್ ಪಕ್ಷವೂ ಬಿಎಸ್ಪಿ ಶಾಸಕರಿಗೂ ಸಚಿವ ಸ್ಥಾನ ನೀಡಿದಂತಾಗಿದೆ. ಎನ್. ಮಹೇಶ್ ಅವರು ಥೇಟ್ ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಅವರ ಗೇಟ್ ಅಪ್ ನಲ್ಲಿ ಆಗಮಿಸಿದ್ದು, ವಿಶೇಷವಾಗಿತ್ತು. ಎನ್. ಮಹೇಶ ಅವರು ಬುದ್ಧ ಬಸವ ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ವಿಶೇಷವಾಗಿದೆ. ಇದೇ ವೇಳೆ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸಿದ್ದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ್, ಖಾನಾಪೂರ ಶಾಸಕಿ ಅಂಜಲಿ ನಿಂಬಾಳಕರ್ ಅವರ ಬದಲಿಗೆ ವಿಧಾನ ಪರಿಷತ್ ಸದಸ್ಯೆ ಜಯಮಾಲಾಗೆ ಈ ಬಾರಿಯ ಸಮ್ಮೀಶ್ರ ಸರಕಾರದಲ್ಲಿ ಸಚಿವ ಸ್ಥಾನ ದೊರೆತಿದೆ.

ಜಮೀರ್ ಅಹ್ಮದ್ ಖಾನ್ ಗೂ ಮಣೆ ಹಾಕಿದ ಕಾಂಗ್ರೆಸ್

ಬೆಂಗಳೂರು : ಇತ್ತೀಚೆಗೆ ಅಷ್ಟೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಶಾಸಕರಾಗಿದ್ದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಕಾಂಗ್ರೆಸ್ ಸಚಿವ ಸ್ಥಾನ ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಹಿರಿಯ ಶಾಸಕ ರೋಷನ್ ಬೇಗ್ ಅವರನ್ನು ಕಡೆಗಣಿಸಿ, ಯುವ ಶಾಸಕ ಜಮೀರ್ ಅಹ್ಮದ್ ಗೆ ಸಚಿವ ಸ್ಥಾನ ನೀಡಿದೆ. ಜಮೀರ್ ಅವರು ಅಲ್ಲಾ ಹಾಗೂ ತಾಯಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಎಲ್ಲರ ಗಮನ ಸೆಳೆದರು.ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಜಮೀರ್ ಅಹ್ಮದ್ ಅವರು ಕುಮಾರಸ್ವಾಮಿಗೆ ಅಭಿನಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಪಕ್ಷೇತರ ಶಾಸಕ ಶಂಕರ್ ಗೂ ಸಚಿವ ಸ್ಥಾನ ನೀಡಿದ ಕಾಂಗ್ರೆಸ್

ಬೆಂಗಳೂರು : ರಾಣೆಬೆನ್ನೂರಿನ ಪಕ್ಷೇತರ ಶಾಸಕ ಆರ್. ಶಂಕರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನ ಕರುಣಿಸಿದೆ. ಅವರು ಕೆ.ಎಸ್. ಈಶ್ವರಪ್ಪ ಅವರ ಜೊತೆಗೆ ಯಡಿಯೂರಪ್ಪ ಅವರ ಡಾಲರ್ಸ್ ಕಾಲನಿಯ ನಿವಾಸಕ್ಕೆ ಭೇಟಿ ನೀಡಿ ಬಿಜೆಪಿ ಬೆಂಬಲಿಸಲು ನಿರ್ಧರಿಸಿದ್ದರು. ಆನಂತರ ಸಿದ್ದರಾಮಯ್ಯ ಅವರ ಸಲಹೆ ಮೇರೆಗೆ ಅವರು ಕಾಂಗ್ರೆಸ್ ಗೆ ಬೆಂಬಲಿಸಿದ್ದರು. ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸಮಾಧಾನ ಪಡಿಸಿದೆ. ಅದೇ ರೀತಿ ಮಾಜಿ ಸಚಿವ ಎಂಬಿ ಪಾಟೀಲ ಅವರ ಬದಲಿಗೆ ವಿಜಯಪುರ ಜಿಲ್ಲೆಯಿಂದ ಕಾಂಗ್ರೆಸ ನ ಹಿರಿಯ ಶಾಸಕ ಶಿವಾನಂದ ಪಾಟೀಲ ಅವರಿಗೆ ಮಣೆ ಹಾಕಿದ್ದರೆ, ಬೀದರ ಜಿಲ್ಲೆಯಿಂದ ಈಶ್ವರ ಖಂಡ್ರೆ ಬದಲಿಗೆ ರಾಜಶೇಖರ ಪಾಟೀಲ ಹುಮನಾಬಾದ್ ಗೆ ಸಚಿವ ಸ್ಥಾನ ನೀಡಲಾಗಿದೆ. ಹುಮ್ನಾಬಾದ ಶಾಸಕ ರಾಜಶೇಖರ ಪಾಟೀಲ ಕಳೆದ ಬಾರಿಯೇ ಸಚಿವ ಸ್ಥಾನದಿಂದ ವಂಚಿತರಾಗಿದ್ದು. ಅವರಿಗೆ ಈ ಬಾರಿ ಅದೃಷ್ಟ ಒಲಿದಿದ್ದು, ಅವರು ಇತಿಹಾಸ ಪ್ರಸಿದ್ಧ ಹುಮನಾಬಾದ ವೀರಭದ್ರೇಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಎಲ್ಲರ ಗಮನ ಸೆಳೆದರು. ಅದೇ ರೀತಿ ಸಿ ಪುಟ್ಟರಂಗ ಶೆಟ್ಟಿ , ವೆಂಕಟರಮಣಪ್ಪಅವರು ಸಚಿವರಾದರು. ಒಟ್ಟಿನಲ್ಲಿ ಅಳೆದು ತೂಗಿ ಸಚಿವ ಸ್ಥಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದ್ದು, ಈಗಾಗಲೇ ಅನೇಕ ಕಾಂಗ್ರೆಸ್ ಶಾಸಕರ ಅಸಮಾಧಾನ ಬುಗಿಲೆದ್ದಿದ್ದು, ಅವರನ್ನು ಸಮಾಧಾನ ಪಡಿಸುವಲ್ಲಿ ಕಾಂಗ್ರೆಸ್ ಶಾಸಕಾಂಗ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಿರತರಾಗಿದ್ದಾರೆ. ಭಿನ್ನಮತ ಶಮನವಾಗುತ್ತಾ ಅಥವಾ ಇನ್ನಷ್ಟು ಉಲ್ಬಣಗೊಳ್ಳುತ್ತಾ ಕಾದು ನೋಡಬೇಕಿದೆ.

ರೇವಣ್ಣ, ದೇಶಪಾಂಡೆ, ಖಾದರ್, ಜಾರ್ಜ್ ,ಬಂಡೆಪ್ಪಾ ಕಾಶೆಂಪೂರ ಸೇರಿ ಹಲವರ ಪ್ರಮಾಣ ವಚನ

ಬೆಂಗಳೂರು : ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಬುಧವಾರ ಮಧ್ಯಾಹ್ನ ರಾಜಭವನದಲ್ಲಿ ನಡೆಯಿತು. ಜೆಡಿಎಸ್ ನಿಂದ ಕ್ಯಾಬಿನೇಟ್ ಸಚಿವರಾಗಿ ಹೆಚ್.ಡಿ. ರೇವಣ್ಣ, ಬಂಡೆಪ್ಪ ಕಾಶೆಂಪೂರ, ಜಿ.ಟಿ. ದೇವೇಗೌಡ, ಡಿ.ಸಿ.ತಮ್ಮಣ್ಣ, ಸಿಂದಗಿ ಶಾಸಕ ಎಂ.ಸಿ. ಮನಗೂಳಿ, ಎನ್.ಹೆಚ್. ಶಿವಶಂಕರರಡ್ಡಿ, ಹೆಚ್. ಆರ್. ಶ್ರೀನಿವಾಸ, ವೆಂಕಟರಾವ್ ನಾಡಗೌಡ, ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ, ಹಾಗೂ ಕಾಂಗ್ರೆಸ್ ನಿಂದ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ, ಕನಕಪುರ ಶಾಸಕ ಡಿ.ಕೆ. ಶಿವಕುಮಾರ, ಕೆ.ಜೆ. ಜಾರ್ಜ್ , ಬ್ಯಾಟರಾಯಪೂರ ಶಾಸಕ ಕೃಷ್ಣ ಭೈರೇಗೌಡ, ರಮೇಶ ಜಾರಕಿಹೊಳಿ, ಪ್ರಿಯಾಂಕಾ ಖರ್ಗೆ, ಯು.ಟಿ. ಖಾದರ್, ಸೇರಿದಂತೆ ಅನೇಕರು ಪ್ರಮಾಣವಚನ ಸ್ವೀಕರಿಸಿದರು.

ಚಾಮುಂಡಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಜಿ.ಟಿ. ದೇವೇಗೌಡ

ಬೆಂಗಳೂರು : ಕಾಂಗ್ರೆಸ್ ನ ಹಿರಿಯ ನಾಯಕರಾದ ಸಿದ್ದರಾಮಯ್ಯ ಅವರನ್ನು ಅತ್ಯಧಿಕ ಮತಗಳಿಂದ ಸೋಲಿನ ರುಚಿ ತೋರಿಸಿದ್ದಜಿ.ಟಿ. ದೇವೇಗೌಡ ಅವರು ತಾಯಿ ಚಾಮುಂಡೇಶ್ವರಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಜಿ.ಟಿ. ದೇವೇಗೌಡ ಅವರು ಸಿದ್ದರಾಮಯ್ಯ ಅವರ ಕಡು ವಿರೋಧಿಯಾಗಿದ್ದು, ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿರುವುದು ವಿಶೇಷವಾಗಿದೆ. ತಾಯಿಯ ಹೆಸರಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕ್ಷೇತ್ರವಷ್ಟೇ ಅಲ್ಲದೆ, ಇಡೀ ರಾಜ್ಯದ ಜನರ ಗಮನ ಸೆಳೆದಿದ್ದಾರೆ.

ಎಚ್. ಕೆ. ಪಾಟೀಲ್ ಗೂ ತಪ್ಪಿದ ಸಚಿವ ಸ್ಥಾನ : ಬೆಂಬಲಿಗರಿಂದ ಚಾಲುಕ್ಯ ವೃತ್ತದಲ್ಲಿ ಪ್ರತಿಭಟನೆ

ಬೆಂಗಳೂರು : ಉತ್ತರ ಕರ್ನಾಟಕ ಭಾಗದ ಪ್ರಮುಖ ಕಾಂಗ್ರೆಸ್ ನಾಯಕರ ಪೈಕಿ ಒಬ್ಬರಾಗಿರುವ ಎಚ್.ಕೆ. ಪಾಟೀಲ ಅವರಿಗೂ ಸಚಿವ ಸ್ಥಾನ ಕೈ ತಪ್ಪಿದೆ. ಇದರಿಂದಾಗಿ ಅಸಮಾಧಾನಗೊಂಡ ಅವರ ಬೆಂಬಗಲಿಗರು ದಿಢೀರ್ ಆಗಿ ಚಾಲುಕ್ಯ ವೃತ್ತದಲ್ಲಿ ರಸ್ತೆ ತಡೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ಕಾಂಗ್ರೆಸ್ ನಾಯಕರು ಆಗಿರುವ ಸಚಿವ ಎಚ್.ಕೆ. ಪಾಟೀಲ ಅವರ ಹೆಸರು ಸಂಭಾವ್ಯ ಸಚಿವರ ಪಟ್ಟಿಯಲ್ಲಿತ್ತು. ಆದರೆ ಕೊನೆ ಗಳಿಗೆಯಲ್ಲಿ ಅವರನ್ನು ಕೂಡ ಸಚಿವ ಸಂಪುಟದಿಂದ ಹೊರಗಿಟ್ಟಿರುವುದು ಸರಿಯಲ್ಲ. ಹಿರಿಯ ಶಾಸಕರು ಅಗಿರುವ ಅವರನ್ನು ಯಾವ ಕಾರಣಕ್ಕೆ ಕಡೆಗಣಿಸಲಾಗಿದೆ ಎಂಬುದು ಬಹಿರಂಗಪಡಿಸಬೇಕು ಎಂದು ಅವರ ಬೆಂಬಲಿಗರು ಒತ್ತಾಯಿಸಿದ್ದಾರೆ.

ಯೋಧ ಅರ್ಜುನ ಅಣ್ಣಿಗೇರಿಗೆ ಅಂತಿಮ ನಮನ ಸಲ್ಲಿಸಿದ ಜಿಲ್ಲಾಡಳಿತ

ಧಾರವಾಡ : ಅಸ್ಸಾಂನಲ್ಲಿ ಸೇವೆಯಲ್ಲಿದ್ದ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ವೀರಯೋಧ ಅರ್ಜುನ ಯಲ್ಲಪ್ಪ ಅಣ್ಣಿಗೇರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. 12 ವರ್ಷದಿಂದ ಸೇನೆಯಲ್ಲಿದ್ದ ಯೋಧ ಅರ್ಜುನ ಕರ್ತವ್ಯದಲ್ಲಿದ್ದಾಗ ಪಾರ್ಶ್ವವಾಯು ಆಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದರು. ಮೊರಬ ಗ್ರಾಮದ ಪ್ಯಾಟಿ ಓಣಿಯ ಮಹಾತ್ಮಾ ಗಾಂಧಿ ಪುತ್ಥಳಿ ಬಳಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಗ್ರಾಮದಲ್ಲಿ ಯೋಧನ ಸಂಬಂಧಿಕರ, ಸ್ನೇಹಿತರ ಮತ್ತು ಸಾರ್ವಜನಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಅರ್ಜುನ್ ಗೆ ತಂದೆ, ತಾಯಿ, ನಾಲ್ವರು ಸಹೋದರರು ಹಾಗೂ ನಾಲ್ವರು ಸಹೋದರಿಯರು ಇದ್ದಾರೆ. ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಉಪವಿಭಾಗಾಧಿಕಾರಿ ಪಿ.ಜಯಮಾಧವ ,ಡಿವೈಎಸ್ ಪಿ ಚಂದ್ರಶೇಖರ, ತಹಸೀಲ್ದಾರ ಕೆ.ಬಿ.ಕೋರಿಶೆಟ್ಟರ್, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ವಿಂಗ್ ಕಮಾಂಡರ್ ಈಶ್ವರ ಕೋಡೊಳ್ಳಿ ಮತ್ತಿತರರು ಅಂತಿಮ ನಮನ ಸಲ್ಲಿಸಿದರು.

ಕೃಷ್ಣ ಭೈರೇಗೌಡ ಗೆ ಮುತ್ತಿಗೆ ಹಾಕಿದ ಪಾಟೀಲ ಬೆಂಬಲಿಗರು

ಬೆಂಗಳೂರು : ಕಾಂಗ್ರೆಸ್ ಹಿರಿಯ ನಾಯಕ ಕೃಷ್ಣ ಭೈರೇಗೌಡ ಅವರಿಗೆ ಎಂ.ಬಿ. ಪಾಟೀಲ ಬೆಂಬಲಿಗರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಎಂ.ಬಿ. ಪಾಟೀಲ ಅವರ ಮನವೊಲಿಸಲು ಆಗಮಿಸಿದ್ದ ಕೃಷ್ಣ ಭೈರೇಗೌಡರಿಗೆ ಪಾಟೀಲರ ಬೆಂಬಲಿಗರು ಬಿಸಿ ಮುಟ್ಟಿಸಿದರು. ಪಾಟೀಲರಿಗೆ ಸಚಿವ ಸ್ಥಾನ ಕೊಡದಿದ್ದರೆ ವಿಷ ಕುಡಿಯುವುದಾಗಿ ಕೆಲ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಅವರಿಗೆ ಯಾವುದೇ ಕಾರಣಕ್ಕೂ ಸಚಿವ ಸಂಪುಟದಿಂದ ಹೊರಗಿಡಬಾರದು ಎಂದು ತಮ್ಮ ಅಸಮಾಧಾನ ಹೊರ ಹಾಕಿದರು. ಈ ವೇಳೆ ಮಾಧ್ಯಮಗಳಿಗೆ ಮಾತನಾಡಿದ ಎಂ.ಬಿ. ಪಾಟೀಲ ಅವರು ನನಗೆ ಯಾಕೆ ಸಚಿವ ಸ್ಥಾನ ಸಿಗಲಿಲ್ಲ ಎಂಬುದು ನನಗೆ ಗೊತ್ತಿಲ್ಲ. ಈ ಬಗ್ಗೆ ನಮ್ಮ ನಾಯಕರಾದ ಸಿದ್ದರಾಮಯ್ಯ ಜೊತೆಗೆ ಚರ್ಚಿಸುತ್ತೇನೆ ಎಂದು ಎಂ.ಬಿ. ಪಾಟೀಲ ಮಾಧ್ಯಮಗಳಿಗೆ ಸಮಜಾಯಿಸಿ ನೀಡಿದರು. ನಾನು ಹೆಚ್.ಡಿ. ಕುಮಾರಸ್ವಾಮಿಯವರ ಮೇಲೆ ಸಾಕಷ್ಟು ವಿಶ್ವಾಸವಿಟ್ಟಿದ್ದೆ. ಆದರೆ ಯಾಕೆ ಕೈ ತಪ್ಪಿತು. ಒಳಗಡೆ ಏನಾಯಿತು ಎಂಬುದು ಗೊತ್ತಿಲ್ಲ ಎಂದರು. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷೆಯಲ್ಲ ಎಂದು ಅವರು ರಾಜಕೀಯದಲ್ಲಿ ಇವೆಲ್ಲಾ ಸಾಮಾನ್ಯ ಎಂದು ಹೇಳಿದರು.

ಎಂ.ಬಿ. ಪಾಟೀಲ ಮನೆಗೆ ಕೃಷ್ಣ ಭೈರೇಗೌಡ ದೌಡು

ಬೆಂಗಳೂರು : ಸಚಿವ ಸ್ಥಾನ ಸಿಗದಕ್ಕೆ ತೀವ್ರ ಅಸಮಾಧಾನಗೊಂಡಿರುವ ಎಂ.ಬಿ.ಪಾಟೀಲ ಮನೆಗೆ ಕೃಷ್ಣ ಭೇರೇಗೌಡ ಭೇಟಿ ನೀಡಿ ಮನವೊಲಿಸಿದರು. ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದ ಎಂ.ಬಿ. ಪಾಟೀಲ ಇದರಿಂದ ಮುನಿಸಿಕೊಂಡಿದ್ದಾರೆ. ಹಿರಿಯರನ್ನು ಕಡೆಗಡಿಸಿದಕ್ಕೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅವರ ಮನೆಯ ಮುಂದೆ ಸಾಕಷ್ಟು ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಕಾಂಗ್ರೆಸ್ ಪಕ್ಷಕ್ಕೆ ಮಗ್ಗಲ ಮುಳ್ಳು ಆಗುವ ಸಾಧ್ಯತೆಯಿದೆ. ಪಾಟೀಲರು ತಮ್ಮ ಶಾಸಕ ಸ್ಥಾನಕ್ಕೂ ಕೂಡ ರಾಜೀನಾಮೆ ನೀಡುತ್ತಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಇನ್ನಷ್ಟೇ ಸ್ಪಷ್ಟ ಚಿತ್ರಣ ಹೊರಬರಬೇಕಿದೆ.

ಮಾಜಿ ಸಿಎಂ ಧರ್ಮಸಿಂಗ್ ಪುತ್ರನಿಗೂ ಕೈ ತಪ್ಪಿದ ಸಚಿವ ಸ್ಥಾನ

ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಭಾಗದಲ್ಲೂ ಕೂಡ ಸಚಿವ ಸ್ಥಾನ ಕೈತಪ್ಪಿದಕ್ಕೆ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನಬುಗಿಲೆದ್ದಿದೆ. ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರ ಪುತ್ರ ಹಾಗೂ ಜೇವರ್ಗಿ ವಿಧಾನ ಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆಯಾಗಿರುವ ಡಾ. ಅಜಯಸಿಂಗ್ ಅವರಿಗೆ ಸಚಿವ ಸ್ಥಾನ ಸಿಗದ್ದಕ್ಕೆ ಅವರ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕಲಬುರಗಿ ಜಿಲ್ಲೆಯ ಸೊನ್ನ ಕ್ರಾಸ್ ಬಳಿ ರಸ್ತೆ ತಡೆದು ಟೈರ್ಗೆ ಬೆಂಕಿ ಹಚ್ಚಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕಳೆದ ಬಾರಿಯೂ ಕೂಡ ಅಜಯ ಸಿಂಗ್ ಅವರಿಗೆ ಸಚಿವ ಸ್ಥಾನ ತಪ್ಪಿಸಿ, ಪ್ರಿಯಾಂಕ ಖರ್ಗೆ ಅವರಿಗೆ ಮಣೆ ಹಾಕಲಾಗಿತ್ತು. ಈ ಬಾರಿಯೂ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಸಚಿವ ಸ್ಥಾನ ನೀಡಿರುವುದು ಅಜಯ್ ಸಿಂಗ್ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಸಚಿವ ಸ್ಥಾನ ಸಿಗದಕ್ಕೆ ಶಾಸಕ ಶಿವಳ್ಳಿ ರಾಜೀನಾಮೆಗೆ ಚಿಂತನೆ ?

ಬೆಂಗಳೂರು : ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನ ಸಭಾ ಕ್ಷೇತ್ರದ ಶಾಸಕ ಸಿ.ಎಸ್. ಶಿವಳ್ಳಿ ಅವರು ಸಚಿವ ಸ್ಥಾನ ಸಿಗದಕ್ಕೆ ಬೇಸರಗೊಂಡಿರುವ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸಿಎಂ ಸಿದ್ದರಾಮಯ್ಯ ಆಪ್ತರು ಆಗಿರುವ ಶಿವಳ್ಳಿ, ಕುರುಬರ ಕೋಟಾ ಹಾಗೂ ಧಾರವಾಡ ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಮೂರನೇ ಬಾರಿಗೆ ಆಯ್ಕೆಯಾಗಿದ್ದಹಿರಿಯ ಶಾಸಕರಾಗಿದ್ದರು. ಸಚಿವ ಸ್ಥಾನ ಸಿಗದಕ್ಕೆ ಬೇಸರಗೊಂಡಿರುವ ಅವರು, ಉತ್ತರ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾದಂತಾಗಿದೆ. ಕುಂದಗೋಳ ಭಾಗದಿಂದ ಮೂರನೇ ಬಾರಿ ಶಾಸಕನಾಗಿದ್ದೇನೆ. ರಾಜೀನಾಮೆ ಬಗ್ಗೆ ಮುಖಂಡರ ಹಾಗೂ ಕಾರ್ಯಕರ್ತರ ಜೊತೆಗೆ ಸಮಾಲೋಚಿಸಿ ಮುಂದಿನ ನಡೆ ನಿರ್ಧರಿಸಲಾಗುವುದು ಎಂದು ಸಿ.ಎಸ್. ಶಿವಳ್ಳಿ ತಿಳಿಸಿದ್ದಾರೆ.

ಸತೀಶ ಜಾರಕಿಹೊಳಿಗೆ ಕೈ ತಪ್ಪಿದ ಸಚಿವ ಸ್ಥಾನ : ಪ್ರತಿಭಟನಾನಿರತ ಕಾಂಗ್ರೆಸ್ ಮುಖಂಡರ ಬಂಧನ

ಬೆಂಗಳೂರು : ಕಾಂಗ್ರೆಸ್ ನ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಕೊನೆಗೂ ಕೈ ತಪ್ಪಿದೆ. ಬೆಳಗಾವಿ ಜಿಲ್ಲೆಯಿಂದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳಕರ್ ಅವರ ಬದಲಿಗೆ ರಮೇಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಹೀಗಾಗಿ ಸತೀಶ ಜಾರಕಿಹೊಳಿ ಅವರ ಬೆಂಬಲಿಗರು ಕಾಂಗ್ರೆಸ್ ನಡೆ ಖಂಡಿಸಿ ವಿಧಾನ ಸೌಧ ಹಿಂಭಾಗದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ವಿಧಾನಸೌಧ ಹಾಗೂ ರಾಜಭವನ ಸುತ್ತಮುತ್ತ ಸಚಿವ ಸಂಪುಟ ವಿಸ್ತರಣೆ ಹಿನ್ನಲೆಯಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಒದಗಿಸಿದ್ದ ಹಿನ್ನಲೆಯಲ್ಲಿ ಪ್ರತಿಭಟನಾನಿರತರ ನೂರಾರು ಕಾಂಗ್ರೆಸ್ ಮುಖಂಡರನ್ನು ಪೊಲೀಸರು ಬಂಧಿಸಿ, ಬಿಎಂಟಿಸಿ ಬಸ್ ನಲ್ಲಿ ಕರೆದೊಯ್ದರು.

ಜಯನಗರದಲ್ಲಿ ಕಾಂಗ್ರೆಸ್ ಬೆಂಬಲಿಸಿದ ದೇವೇಗೌಡ

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಜಯನಗರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರಡ್ಡಿಯನ್ನು ಬೆಂಬಲಿಸಲು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ನಿರ್ಧರಿಸಿದ್ದಾರೆ. ಸೌಮ್ಯರಡ್ಡಿ ಹಾಲಿ ಶಾಸಕ ಹಾಗೂ ಮಾಜಿ ಗೃಹ ಸಚಿವ ರಾಮಲಿಂಗಾರಡ್ಡಿ ಅವರ ಪುತ್ರಿಯಾಗ್ದಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣ್ಣಕ್ಕಿಳಿಸಿದ್ದ ದೊಡ್ಡಗೌಡರು ಜಯನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮಣೆ ಹಾಕಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ದೇವೇಗೌಡರು. ಜೆಡಿಎಸ್ ಅಧಿಕೃತ ಅಭ್ಯರ್ಥಿ ಕಾಳೇಗೌಡ ಅವರು ಕಣದಿಂದ ಹಿಂದೆ ಸರಿದಿದ್ದಾರೆ. ಈ ಹಿನ್ನಲೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಸೂಚಿಸಿದ್ದಾರೆ. ಬಿಜೆಪಿ ಶಾಸಕ ಹಾಗೂ ಪಕ್ಷದ ಅಧಿಕೃತ ಅಭ್ಯರ್ಥಿ ಯಾಗಿದ್ದ ಬಿ.ಎನ್. ವಿಜಯಕುಮಾರ್ ನಿಧನದಿಂದ ಚುನಾವಣೆಯನ್ನು ಮುಂದೂಡಲಾಗಿತ್ತು. ಇದೀಗ ಜೂನ್ 11 ರಂದು ಮುಹೂರ್ತ ನಿಗದಿಯಾಗಿದ್ದು, ಈ ಚುನಾವಣೆಯೂ ಸಮ್ಮೀಶ್ರ ಸರಕಾರಕ್ಕೆ ಅಗ್ನಿ ಪರೀಕ್ಷೆಯಾಗಲಿದೆ.

ಸಮ್ಮೀಶ್ರ ಸರಕಾರ ಐದು ವರ್ಷ ಪೂರೈಸಲಿ

ಮೈಸೂರು : ರಾಜ್ಯದ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮೀಶ್ರ ಸರ್ಕಾರವೂ ಐದು ವರ್ಷ ಪೂರೈಸಲಿ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮಿಜಿ ಆಶಯ ವ್ಯಕ್ತಪಡಿಸಿದ್ದಾರೆ. ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಿನ ರಾಜ್ಯ ಸರ್ಕಾರ ಐದು ವರ್ಷ ಪೂರೈಸಲಿ ಎಂಬ ಅಪೇಕ್ಷೆಇದೆ. ಯಾವುದೇ ಸರ್ಕಾರ ಇರಲಿ, ಅಧಿಕಾರದ ಪೂರ್ಣ ಅವಧಿ ಆಡಳಿತ ನಡೆಸಬೇಕು. ಪದೇ ಪದೆ ಚುನಾವಣೆ ನಡೆಸುವುದು ಸರಿಯಲ್ಲಎಂದರು. ಪದೆಪದೇ ಚುನಾವಣೆ ನಡೆಸುವುದರಿಂದ ಅನಗತ್ಯ ದುಂದು ವೆಚ್ಚ, ಗಲಾಟೆ, ಗದ್ದಲ ನಡೆಯುತ್ತವೆ. ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಪಕ್ಷಗಳು ಸೇರಿ ಸರ್ಕಾರ ರಚಿಸಿವೆ. ಇದಕ್ಕಾಗಿ ರೆಸಾರ್ಟ್ ರಾಜಕಾರಣ ಕೂಡ ಮಾಡಿವೆ. ಆದರೂ ಆ ಪಕ್ಷಗಳಿಗೆ ಇನ್ನೂ ಭಯ ಇದೆ. ಹೀಗಾಗಿ ರೆಸಾರ್ಟ್ ರಾಜಕಾರಣ ನಿಲ್ಲಿಸಬೇಕು ಎಂದು ಸಲಹೆ ನೀಡಿದರು.

ಮೋದಿ ಮೇಲೆ ಯಾವುದೇ ಅಸಮಾಧಾನವಿಲ್ಲ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ನನಗೆ ಯಾವುದೇ ಅಸಮಾಧಾನವಿಲ್ಲ. ಆದರೆ ಸಂಪೂರ್ಣ ಸಮಾಧಾನ ಇಲ್ಲ ಎಂದು ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರು ಸ್ಪಷ್ಟಪಡಿಸಿದ್ದಾರೆ. ಅವರು ಮೈಸೂರು ಮಾಧ್ವ ವಿದ್ಯಾರ್ಥಿ ನಿಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರದ ಸಾಧನೆಗಳು ಸಮಾಧಾನ ತಂದಿಲ್ಲ ಎಂದು ನಾನು ಹೇಳಿಲ್ಲ. ಕಪ್ಪು ಹಣ, ಗಂಗಾ ಶುದ್ಧೀಕರಣ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ನಿಜ. ಪೂರ್ಣ ಪ್ರಮಾಣದಲ್ಲಿ ಸಾಧನೆ ಮಾಡಿಲ್ಲ ಎಂದು ಹೇಳಿದ್ದೇನೆ ಎಂದರು. ಈ ಮಾತಿನ ಹಿಂದೆ ಕೇಂದ್ರ ಸರ್ಕಾರಕ್ಕೆ ಉತ್ತೇಜನ ನೀಡುವ ಉದ್ದೇಶವಿದೆಯೇ ಹೊರತು ಬೇರೆನೂ ಇಲ್ಲ. ಆದರೆ ಕೆಲ ಬಿಜೆಪಿ ನಾಯಕರು ನನ್ನ ಹೇಳಿಕೆಯನ್ನು ಬೇರೆ ರೀತಿ ಅರ್ಥ ಮಾಡಿಕೊಂಡು ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸಚಿವ ಸದಾನಂದಗೌಡ ಮಾತ್ರ ನನ್ನ ಹೇಳಿಕೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದರು. ಕೇಂದ್ರ ಸರ್ಕಾರಕ್ಕೆ ಇನ್ನೂ ಒಂದು ವರ್ಷ ಅವಧಿ ಇದೆ. ಈ ಕಾಲಾವಧಿಯಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.

ಹೆಲಿಕಾಫ್ಟರ್ ವೆಚ್ಚ ಭರಿಸಲು ಸಿದ್ಧ ಎಂದ ಯಡಿಯೂರಪ್ಪ

ಮೈಸೂರು : ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾನು ಹೆಲಿಕಾಪ್ಟರ್ ಪ್ರಯಾಣ ಮಾಡಿದ ಬಗ್ಗೆ ಪದೇಪದೇ ಪ್ರಸ್ತಾಪಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಈ ಬಗ್ಗೆ ಬಹಿರಂಗ ಪತ್ರ ಬರೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ. ಅವರು ಮೈಸೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ನಾನೂ ಹೆಲಿಕ್ಯಾಪ್ಟರ್ ಮೂಲಕ ಮಹಾಂತನಂದಾ ಸ್ವಾಮೀಜಿ ಅವರ ಅಂತಿಮ ದರ್ಶನಕ್ಕೆ ಹೋಗಿದ್ದೆ. ಅದಕ್ಕೆ ರಾಜ್ಯಪಾಲರ ಅನುಮತಿ ಪಡೆದುಕೊಂಡಿದ್ದೆ. ಆದರೂ ಹೆಲಿಕ್ಯಾಪ್ಟರ್ ನಲ್ಲಿ ತಿರುಗಾಡಿದ್ದ ಬಗ್ಗೆ ಕೆದಕುತ್ತಿದ್ದೀರಿ. ಈ ಬಗ್ಗೆ ನನಗೆ ಯಾಕೆ ಕೇಳುತ್ತೀರಿ? ಕುಮಾರಸ್ವಾಮಿ ಅವರೇ ಈ ಮಾತನ್ನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಕೇಳಿ ಎಂದು ತಿರುಗೇಟು ನೀಡಿದ್ದಾರೆ. ಈ ಬಗ್ಗೆ ನಾನು ಶೀಘ್ರದಲ್ಲಿಯೇ ಅವರಿಗೆ ಬಹಿರಂಗವಾದ ಪತ್ರ ಬರೆಯುತ್ತೇನೆ. ಅಪ್ಪ ಮಕ್ಕಳು ಇಬ್ಬರೂ ಸತ್ಯ ಹರಿಶ್ಚಂದ್ರರಂತೆ ಮಾತನಾಡುತ್ತಿದ್ದಾರೆ. ಬೇಕಿದ್ದರೆ ನಾನೂ ಓಡಾಟ ಮಾಡಿದ ಖರ್ಚನ್ನು ಭರಿಸಲು ಸಿದ್ಧ ಎಂದು ಪ್ರಕಟಿಸಿದ್ದಾರೆ. ಹೆಚ್ಡಿಕೆ ಹಾಗೂ ಬಿಎಸ್ ವೈ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದ್ದ ಹೆಲಿಕಾಪ್ಟರ್ ವೆಚ್ಚ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಕಾದು ನೋಡಬೇಕಿದೆ.

ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಎಂದ ಬಿಎಸ್ ವೈ

ಮೈಸೂರು : ತಾಕತ್ತು ಇದ್ದರೆ ನಿಮ್ಮ ಸರ್ಕಾರ ವಿಸರ್ಜಿಸಿ ಚುನಾವಣೆಗೆ ಬನ್ನಿ ಮತ್ತೆ ಚುನಾವಣೆಗೆ ಹೋಗೋಣ. ಯಾರಿಗೆ ಹೆಚ್ಚು ಸ್ಥಾನ ಬರುತ್ತವೆ ಎಂದು ಗೊತ್ತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬಹಿರಂಗ ಸವಾಲ್ ಹಾಕಿದ್ದಾರೆ. ಅವರು ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧತೀವ್ರ ವಾಗ್ದಾಳಿ ನಡೆಸಿದರು. ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತೇನೆ ಎಂದು ದೊಂಬರಾಟ ಮಾಡಿ ಇದೀಗ ಯೂಟರ್ನ ಹೊಡಿದಿದ್ದೀರಿ. ನಾವು ಬಂದ್ ಮಾಡಿದ್ದಕ್ಕೆ ರೈತರ ಸಭೆ ಕರೆದಿದ್ದೀರಿ. ಇಲ್ಲದಿದ್ದರೆ ಅದುನೂ ಕರೆಯುತ್ತಿರಲಿಲ್ಲ ಎಂದು ಕಿಡಿಕಾರಿದರು. ಈ ಬಗ್ಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ ಎಂದ ಅವರು ಮುಂಬರುವ ದಿನಗಳಲ್ಲಿ ಕುಮಾರಸ್ವಾಮಿ ಆ್ಯಂಡ್ ಕಂಪನಿ ಏನಾಗಲಿದೆ ಕಾದು ನೋಡಿ. 15-20 ದಿನದಲ್ಲಿ ಅವರ ಬಣ್ಣ ಗೊತ್ತಾಗಲಿದೆ ಎಂದು ಎಚ್ಚರಿಸಿದರು.

ನಾನು ಮಂತ್ರಿ ಆಗಲ್ಲ ಎಂದ ಹೊರಟ್ಟಿ

ಮೈಸೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಬಹುಶಃ ನಾನು ಮಂತ್ರಿ ಆಗಲ್ಲ ಎಂದು ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷರು ಆಗಿರುವ ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಅವರು ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಳೆಯ ನೂತನ ಸಚಿವ ಸಂಪುಟ ವಿಸ್ತರಣೆಯ ಲ್ಲಿ ನನ್ನ ಹೆಸರು ಇಲ್ಲ ಎಂದರು. ನಾನು ಮಂತ್ರಿ ಸ್ಥಾನವನ್ನ ತ್ಯಾಗ ಮಾಡಿದ್ದು, ಯಾರು ಅಸಮಾಧಾನಗೊಂಡಿದ್ದಾರೆ ಅವರಿಗೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ. ಹೀಗಾಗಿ ನಾನು ಮಂತ್ರಿ ಅಗಲಿಕ್ಕಿಲ್ಲ ಎಂದುಕೊಂಡಿದ್ದೇನೆ. ಆದರೂ ನನ್ನನ್ನೂ ಮಂತ್ರಿ ಮಾಡುವುದು ಮುಖ್ಯಮಂತ್ರಿಗಳ ಕೈಯಲ್ಲಿದೆ ಎಂದರು. ಸಮಿಶ್ರ ಸರ್ಕಾರದಲ್ಲಿ ಎರಡೂ ಪಕ್ಷಗಳಿಂದ ಆಯ್ಕೆಯಾದ ಶಾಸಕರು ಮಂತ್ರಿಯಾಗಬೇಕೆಂದು ಆಸೆಯಿಟ್ಟುಕೊಂಡಿದ್ದಾರೆ. ಹೀಗಾಗಿ ಎಲ್ಲರನ್ನು ಸಮಾಧಾನ ಪಡಿಸುವುದು ಕಷ್ಟ ಸಾಧ್ಯ ಎಂದರು. ನೀವು ಪರಸ್ಪರ ಜಗಳ ಆಡಬೇಡಿ ಎಂದು ನಾನು ಎಲ್ಲರಿಗೂ ಬೋಧನೆ ಮಾಡುತ್ತೇನೆ. 5 ವರ್ಷಗಳ ಕಾಲ ಸರ್ಕಾರ ನಡೆಸಿ ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರಿಗೆ ಬೋಧನೆ ಮಾಡುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಅತ್ಯಾಚಾರಕ್ಕೊಳಗಾದ ಯುವತಿ ದೂರು ನೀಡಿದ್ದಕ್ಕೆ ಆಸಿಡ್ ದಾಳಿ

ಚಂಡಿಗಢ: ಅತ್ಯಾಚಾರಕ್ಕೊಳಗಾದ ಯುವತಿ ಆರೋಪಿಗಳ ವಿರುದ್ಧ ದೂರು ನೀಡಿದ ಹಿನ್ನಲೆಯಲ್ಲಿ ಆಕೆಯ ಮೇಲೆ ಆಸಿಡ್ ದಾಳಿ ಮಾಡಿದ ಘಟನೆ ಚಂಡಿಗಢ ನಲ್ಲಿ ಬೆಳಕಿಗೆ ಬಂದಿದೆ. ಪ್ರೀತಿಯ ನಾಟಕವಾಡಿ ಯುವಕನೊಬ್ಬ ಅಶ್ಲೀಲ ಫೋಟೋ ತೆಗೆದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಇದರಿಂದ ನೋಂದ ಯುವತಿ ಪ್ರಕರಣ ದಾಖಲಿಸಿದ್ದಳು. ಪ್ರಕರಣ ದಾಖಲಾದ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ 28 ದಿನಗಳ ಕಾಲ ಕಂಬಿ ಹಿಂದೆ ಇದ್ದ ಆರೋಪಿಗಳು ಜಾಮೀನು ಮೇಲೆ ಹೊರಬಂದ ನಂತರ ಆ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾರೆ. ಇದರಿಂದಾಗಿ ಯುವತಿ ಮತ್ತೇ ಮರು ದೂರು ದಾಖಲಿಸಿದ್ದಾಳೆ. ಕಾಶ್ಮೀರದ ಯುವಕ ಹಾಗೂ ಯುವತಿ 2017ರಲ್ಲಿ ಫೇಸ್ಬುಕ್ನಲ್ಲಿ ಪರಸ್ಪರ ಪರಿಚಯವಾಗಿದೆ. ತಾನೂ ಹಿಂದೂ ಯುವಕ ಎಂದು ನಂಬಿಸಿ ಆಕೆಯೊಂದಿಗೆ ಸ್ನೇಹ ಬೆಳೆಸಿದ್ದ ಯುವಕ ಆನಂತರ ಪ್ರೀತಿ, ಪ್ರೇಮದ ಬಲೆಗೆ ಬಿದ್ದು, ಇಬ್ಬರು ಪರಸ್ಪರ ಭೇಟಿಯಾಗಿದ್ದಾರೆ. ಈ ವೇಳೆ ಯುವತಿಯ ಅಶ್ಲೀಲ ಫೋಟೋ ತೆಗೆದುಕೊಂಡು ಬ್ಲಾಕ್ಮೆಲ್ ಮಾಡಿದ್ದ. ಅಲ್ಲದೆ, ಪೋಟೋ ಕೊಡುವುದಾಗಿ ಯುವತಿಯನ್ನ ಶ್ರೀನಗರಕ್ಕೆ ಕರೆಸಿಕೊಂಡು ತನ್ನ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರ ಎಸಗಿದ್ದ. ಈ ಸಂಬಂಧ ಯುವತಿ ಮರಳಿ ಚಂಡಿಗಢಕ್ಕೆ ಬಂದು ಪೊಲೀಸರಿಗೆ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಲ್ಯಾಬೊರೇಟರಿ ವಿರುದ್ಧ ಸಮರ ಸಾರಿದ ಕುಟುಂಬ

ಪಶ್ಚಿಮ ಬಂಗಾಳ : ಹೊಟ್ಟೆಯಲ್ಲಿ ಮಗು ಜೀವಂತವಿದ್ದರೂ ಸತ್ತಿದೆ ಎಂದು ಸುಳ್ಳು ವರದಿ ನೀಡಿದ ಲ್ಯಾಬೊರೇಟರಿ ವಿರುದ್ಧ ಕುಟುಂಬವೊಂದು ಸಮರ ಸಾರಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ನಲ್ಲಿ ಬೆಳಕಿಗೆ ಬಂದಿದೆ. ಗೋಶ್ಪರ ಗ್ರಾಮದ ಸಾಜೇದಾ ಬಿಬಿ ಕುಟುಂಬದವರು, ದೋಮ್ ಕಲ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ. ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದಾಗ ವೈದ್ಯರು ಲ್ಯಾಬ್ಗೆ ಕಳುಹಿಸಿದ್ದರು. ಲ್ಯಾಬ್ನವರು ಹೊಟ್ಟೆಯಲ್ಲಿದ್ದ ಭ್ರೂಣ ಸಾವನ್ನಪ್ಪಿದೆ ಎಂದು ವರದಿ ನೀಡಿದ್ದರು. ಆದರೆ, ವರದಿ ಬಂದ ಬೆನ್ನಲ್ಲೇ ಆ ಮಹಿಳೆ ಮಗುವಿಗೆ ಜನ್ಮ ನೀಡಿದ್ದಳು. ಇದರಿಂದಾಗಿ ಕುಟುಂಬದವರು ಸುಳ್ಳು ವರದಿ ನೀಡಿದ್ದ ಲ್ಯಾಬ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.

ಮುಖಾಮುಖಿ ಬೈಕ್ ಡಿಕ್ಕಿಯಲ್ಲಿ ಮೂವರು ಸಾವು

ತುಮಕೂರು: ಎರಡು ಬೈಕ್ಗಳ ನಡುವೆ ಪರಸ್ಪರ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಪಾವಗಡ ತಾಲೂಕಿನ ಕಣವೇನಹಳ್ಳಿ ಬಳಿಯ ವೆಂಕಾಟಪುರದಲ್ಲಿ ನಡೆಯುತ್ತಿದ್ದ ಮಾರಿ ಹಬ್ಬಕ್ಕೆಂದು ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮೃತರನ್ನು ವಳ್ಳೂರು ಗ್ರಾಮದ ಮುತ್ಯಾಲಪ್ಪ (27), ಆಂಧ್ರದ ಟಗರಕುಂಟೆ ಗ್ರಾಮದ ಹನುಮಂತಪ್ಪ(45), ನವೀನ್ (22) ಎಂದು ಗುರುತಿಸಲಾಗಿದೆ. ಇದರಿಂದಾಗಿ ಮೂವರು ಸ್ಥಳದಲ್ಲೇ ಸಾವನ್ನಪಿದ್ದು, ಘಟನೆಯಲ್ಲಿ ಮತ್ತೋಬ್ಬನಿಗೆ ಗಂಭೀರ ಗಾಯವಾಗಿದೆ. ಹೀಗಾಗಿಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಬೆಂಗಳೂರಿಗೆ ರವಾನಿಸಲಾಗಿದೆ. ಈ ಕುರಿತು ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಶಂಕರ ಮುಗದ ಗೆ ಒಲಿದ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನ

ಧಾರವಾಡ : ತೀವ್ರ ಕುತೂಹಲ ಕೆರಳಿಸಿದ್ದ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಶಂಕರ ಮುಗದ ಅವರು ಆಯ್ಕೆಯಾಗಿದ್ದಾರೆ. ಕೊನೆ ಕ್ಷಣದವ ರೆಗೆ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮುಸುಕಿನ ಗುದ್ಧಾಟ ನಡೆದಿತ್ತು. ಕಾಂಗ್ರೆಸ್ ನಿಂದ ಗಂಗಪ್ಪ ಮೊರಬದ ಆಕಾಂಕ್ಷಿಯಾಗಿದ್ದರೆ, ಬಿಜೆಪಿಯಿಂದ ಶಂಕರ ಮುಗದ ಆಕಾಂಕ್ಷೆ ವ್ಯಕ್ತಪಡಿಸಿದ್ದರು. ಇಬ್ಬರು ನಾಮಪತ್ತ ಸಲ್ಲಿಸಿದ್ದರೂ, ಕೊನೆ ಕ್ಷಣದವರೆಗೆ ಯಾರೊಬ್ಬರು ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಕಾಂಗ್ರೆಸ್ 6 ಮತಗಳನ್ನು ಹೊಂದಿದ್ದರೆ, ಬಿಜೆಪಿ 5 ಮತಗಳನ್ನು ಹೊಂದಿತ್ತು. ಮೂರು ಮತಗಳು ನಾಮನಿರ್ದೇಶಿತ ಅಧಿಕಾರಿಗಳು ಹೊಂದಿದ್ದರು. ಅಧ್ಯಕ್ಷ ಸ್ಥಾನಕ್ಕೆ ನೀಲಕಂಠ ಅಸೂಟಿಯವರು ರಾಜೀನಾಮೆ ನೀಡಿದ್ದರಿಂದ ತೆರವುಗೊಂಡಿತ್ತು. ಧಾರವಾಡ ಹಾಲು ಒಕ್ಕೂಟವೂ ಬಿಜೆಪಿ ಪಾಲಾಗಿರುವುದು ವಿಶೇಷವಾಗಿದ್ದು, ಶಂಕರ ಮುಗದ ಕಳೆದ ಹಲವು ವರ್ಷಗಳಿಂದ ಧಾರವಾಡ ಹಾಲು ಒಕ್ಕೂಟದ ಸಕ್ರಿಯ ಸದಸ್ಯರಾಗಿ ಅನೇಕ ಜನಪರ ಯೋಜನೆಗಳನ್ನು ರೂಪಿಸುವಲ್ಲಿ ಶ್ರಮಿಸಿದ್ದರು. ಇದೀಗ ಅವರಿಗೆ ಅಧ್ಯಕ್ಷ ಗಾದೆ ಒಲಿದುಬಂದಿರುವುದು ಸಹಕಾರಿಗಳಿಗೆ ಭಾರೀ ಸಂತಸ ತಂದಿದೆ.

ಭೀಕರ ಜ್ವಾಲಾಮುಖಿಯಲ್ಲಿ 69 ಸಾವು

ಅಮೆರಿಕಾ : ಮಧ್ಯೆ ಅಮೆರಿಕದ ಗ್ವಾಟೆಮಾಲಾದಲ್ಲಿ ಸಂಭವಿಸಿದ ಭೀಕರ ಜ್ವಾಲಾಮುಖಿ ಯಲ್ಲಿ ಈವರೆಗೆ 69 ಜನ ಮೃತಪಟ್ಟಿದ್ದಾರೆ. ಜ್ವಾಲಾಮುಖಿಯ ರೌದ್ರ ನರ್ತನಕ್ಕೆ 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಜ್ವಾಲಾಮುಖಿಯ ಬೂದಿ 10 ಕಿ.ಮೀಟರ್ ವರೆಗೂ ವಿಸ್ತರಿಸಿದ್ದು, ಇದರಿಂದಾಗಿ ಸಾವಿರಾರು ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜ್ವಾಲಾಮುಖಿಯ ಕೆನ್ನಾಲಿಗೆ ಒಳಗಾದವರನ್ನು ರಕ್ಷಿಸುವ ಕಾರ್ಯಾಚರಣೆ ಭರದಿಂದ ಸಾಗಿದ್ದು, ಪದೇ ಪದೇ ಜ್ವಾಲಾಮುಖಿ ಸ್ಫೋಟಗೊಳ್ಳುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಉಂಟಾಗುತ್ತಿದೆ. ಈವರೆಗೆ ಅಂದಾಜು 2ಸಾವಿರ ಜನರನ್ನು ರಕ್ಷಿಸಲಾಗಿದ್ದು, 2.788 ಹೆಕ್ಟೇರ್ ನಷ್ಟು ಭೂಭಾಗ ನಾಶಗೊಂಡಿದೆ. ಗ್ವಾಟೆಮಾಲಾದ ಅಧ್ಯಕ್ಷ ಜಿಮ್ಮಿ ಮೊರಾಲ್ಸ್ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ಪರಿಶೀಲನೆ ನಡೆಸಿದ್ದು, ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಮಧ್ಯ ಅಮೆರಿಕಾದಲ್ಲಿ 34ಕ್ಕೂ ಹೆಚ್ಚು ಜ್ವಾಲಾಮುಖಿಗಳು ಸಕ್ರಿಯವಾಗಿವೆ ಎಂದು ವರದಿಯಾಗಿದೆ. ಸುಮಾರು 4 ದಶಕಗಳ ಬಳಿಕ ಗ್ವಾಟೆಮಾಲಾದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಈ ದುರಂತ ಇಡೀ ವಿಶ್ವದ ಗಮನ ಸೆಳೆದಿದೆ.

ಶಶಿ ತರೂರ್ ಗೆ ಸಮನ್ಸ್ ಜಾರಿ

ನವದೆಹಲಿ: ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣಕ್ಕೆ ಕುರಿತಂತೆ ಪಟಿಯಾಲ್ ಕೋರ್ಟ್ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಸಮನ್ಸ್ ಜಾರಿ ಮಾಡಿದೆ. ಅಲ್ಲದೆ, ಜುಲೈ 7ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ. ಜನವರಿ 17ರ, 2014ರಂದು ಸುನಂದಾ ಪುಷ್ಕರ್ ಅವರು ಹೋಟೆಲ್ ಲೀಲಾ ಪ್ಯಾಲೇಸ್ನ ಕೊಠಡಿಯಲ್ಲಿ ನಿಗೂಢವಾಗಿ ಮೃತಪಟ್ಟಿರುವ ಘಟನೆ ದೇಶದ್ಯಾಂತ ಕೋಲಾಹಲ ಸೃಷ್ಟಿಸಿತ್ತು. ಶಶಿ ತರೂರ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕೇಸು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಈಗಾಗಲೇ ಶಶಿ ತರೂರ್ ವಿರುದ್ಧ ಆರೋಪಪಟ್ಟಿ ದಾಖಲಿಸಿದ್ದು ಇಲ್ಲಿ ಸ್ಮರಿಸಬಹುದು.

ವಿಮಾನ ಅಪಘಾತದಲ್ಲಿ ಪೈಲಟ್ ಸಾವು

ಗುಜರಾತ್ : ಐಎಎಫ್ನ ಜಗ್ವಾರ್ ಫೈಟರ್ ಜೆಟ್ ಭಗ್ನಾವಶೇಷವು ಗುಜರಾತ್ ನ ಕಚ್ ಮುಂದ್ರಾ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಮಂಗಳವಾರ ಭಾರತೀಯ ವಾಯುಪಡೆಯ (ಐಎಎಫ್) ಜಗ್ವಾರ್ ವಿಮಾನ ಅಪಘಾತಕ್ಕೀಡಾಗಿದ್ದು, ಓರ್ವ ಪೈಲಟ್ ಸಾವನ್ನಪ್ಪಿದ್ದಾರೆ. ಏರ್ ಕಮಾಂಡರ್ ಸಂಜಯ್ ಚೌಹಾನ್ ಮೃತ ಪೈಲಟ್ಆಗಿದ್ದಾರೆ. ಈ ವಿಮಾನವು ಜಾಮ್ ನಗರ ವಿಮಾನ ನಿಲ್ದಾಣದಿಂದ ಹೊರ ಹೋಗಿತ್ತು. ಮತ್ತು ಘಟನೆಯು ನಡೆಯುವಾಗ ನಿಯಮಿತ ತರಬೇತಿ ಕಾರ್ಯಾಚರಣೆಯನ್ನು ನಡೆಸುತ್ತಿತ್ತು ಎಂದು ಲೆಫ್ಟಿನೆಂಟ್ ಕರ್ನಲ್ ಮನೀಷ್ ಓಜಾ ಹೇಳಿದ್ದಾರೆ. ಇದಲ್ಲದೆ, ಅಪಘಾತಕ್ಕೆ ಕಾರಣ ಪತ್ತೇ ಹಚ್ಚಲು ತನಿಖೆಗೆ ಆದೇಶಿಸಲಾಗಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೇ ಪೈಸೆಯಲ್ಲಿ ಇಳಿಕೆ

ಹೊಸದಿಲ್ಲಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೂ ಮತ್ತೇ ಪೈಸೆಯಲ್ಲಿ ಇಳಿಕೆ ಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಗೆ 13 ಪೈಸೆ ಮತ್ತು ಪ್ರತಿ ಲೀಟರ್ ಡಿಸೇಲ್ ಗೆ 9 ಪೈಸೆ ಇಳಿಕೆ ಯಾಗಿದೆ. ನವದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ 77.83 ರೂ.ಇದ್ದರೆ, ಡೀಸೆಲ್ ದರ 68.88 ರೂ. ಇದೆ. ರಾಷ್ಟ್ರರಾಜಧಾನಿ ದೆಹಲಿ ಸೇರಿದಂತೆ ದೇಶದ ಬಹುತೇಕ ಮೆಟ್ರೋಗಳಲ್ಲಿ ಮತ್ತು ರಾಜ್ಯ ರಾಜಧಾನಿಗಳಲ್ಲಿ ಅಗ್ಗದ ಬೆಲೆ ಹೊಂದಿದ್ದು, ಸಾರ್ವಜನಿಕರು ಹಾಗೂ ವಿಪಕ್ಷದಿಂದ ಹೆಚ್ಚಿನ ಟೀಕೆ ಕೇಳಿ ಬಂದಿದ್ದು, ಜೂನ್ 1 ರಿಂದ ಪೆಟ್ರೋಲ್ ಗೆ 39 ಪೈಸೆ ಮತ್ತು ಡೀಸೆಲ್ ಗೆ 28 ಪೈಸೆ ಇಳಿಕೆಯಾಗಿರುವದನ್ನು ಇಲ್ಲಿ ಸ್ಮರಿಸಬಹುದು.

ಆವಾಸ್ ಯೋಜನೆ ಫಲಾನುಭವಿಗಳೊಂದಿಗೆ ನಮೋ ಸಂವಾದ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನವದೆಹಲಿಯಲ್ಲಿ ನಮೋ ಆ್ಯಪ್ ಮೂಲಕ ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಅವರ ನೋವುಗಳನ್ನು ಆಲಿಸಿದ ಬಳಿಕ ಮಾತನಾಡಿದ ಅವರು, 2022ರ ವೇಳೆಗೆ ಪ್ರತಿಯೊಬ್ಬ ಭಾರತೀಯನಿಗೂ ಮನೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಘೋಷಿಸಿದರು. ಪ್ರಧಾನಮಂತ್ರಿ ಆವಾಸ್ ಯೋಜನೆ ಕೇವಲ ಇಟ್ಟಿಗೆ, ಗಾರೆಗಳಿಗೆ ಸಂಬಂಧಿಸಿದ್ದಲ್ಲ. ಜನರಿಗೆ ಉತ್ತಮ ಗುಣಮಟ್ಟದ ಜೀವನ ಒದಗಿಸುವುದಾಗಿದೆ. 2022ರ ವೇಳೆಗೆ ಭಾರತ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಳ್ಳುವ ಸುಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯ ಮನೆ ಹೊಂದುವಂತಾಗಬೇಕು ಎಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು. ಎನ್ಡಿಎ ಸರ್ಕಾರ 4 ವರ್ಷಗಳ ಆಡಳಿತದಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಮನೆಗಳನ್ನು ನಿರ್ಮಿಸಿದೆ. ಈ ಹಿಂದೆ ಮನೆ ನಿರ್ಮಾಣಕ್ಕೆಂದು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ 70ರಿಂದ 75 ಸಾವಿರ ರೂಪಾಯಿ ನೀಡಲಾಗುತ್ತಿತ್ತು. ಆದರೆ ಇಂದು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅದನ್ನು 1.30 ಲಕ್ಷ ಕ್ಕೆ ಏರಿಸಲಾಗಿದೆ. ಕೇಂದ್ರ ಸರ್ಕಾರ ಕೇವಲ ಒಂದು ವರ್ಗಕ್ಕೆ ಮಾತ್ರವಲ್ಲದೆ ಎಲ್ಲಾ ವರ್ಗದ ವರ ಏಳಿಗೆಗಾಗಿ ಶ್ರಮಿಸುತ್ತಿದೆ. ಯಾವುದೇ ಜಾತಿಭೇದ ಮಾಡಿಲ್ಲ ಎಂದರು.

ಗುಜರಾತ್ ನೆಲದಿಂದಲೇ ಕಾಂಗ್ರೆಸ್ ಗೆಲುವಿನ ಯಾತ್ರೆ

ಗುಜರಾತ್ : 2019ರ ಲೋಕಸಭೆ ಚುನಾವಣೆಗೆ ಬಿಜೆಪಿಭರ್ಜರಿ ತಯಾರಿ ಆರಂಭಿಸಿರುವ ಬೆನ್ನಹಿಂದೆಯೇ ಕಾಂಗ್ರೆಸ್ ಕೂಡ ಅದಕ್ಕೆ ಅಣಿಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ ನ ನೆಲದಿಂದಲೇ ಕಾಂಗ್ರೆಸ್ ನ ಗೆಲುವಿನ ಯಾತ್ರೆ ಆರಂಭಿಸಲು ನಿರ್ಧರಿಸಿದ್ದು, ರಾಹುಲ್ ಗಾಂಧಿ, ಪಕ್ಷ ಬಲವರ್ದನೆಗಾಗಿ ಮತ್ತೆ ಶೀಘ್ರದಲ್ಲಿಯೇ ಗುಜರಾತ್ ಪ್ರವಾಸ ಕೈಗೊಳ್ಳಲಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆ ಬಳಿಕ ಇದೇ ಮೊದಲ ಬಾರಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂದಿನ ತಿಂಗಳು, ಮೋದಿ ನಾಡಿಗೆ ಲಗ್ಗೆ ಹಾಕಲಿದ್ದಾರೆ. ನಗರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೇರುಮಟ್ಟದಿಂದ ಬಲಪಡಿಸುವ ನಿಟ್ಟಿನಲ್ಲಿ ೀ ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ. ಗುಜರಾತ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಪ್ರವಾಸ ಭಾರೀ ಸಂಚಲನ ಸೃಷ್ಠಿಸಿತ್ತು. ಅಲ್ಲದೆ, ನರೇಂದ್ರ ಮೋದಿ ಹಾಗೂ ಅಮಿತ್ ಶಾ ಜೋಡಿಗೆ ಹಣ್ಣುಗಾಯಿ ನೀರುಗಾಯಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಕಾಂಗ್ರೆಸ್ ಜನಮಿತ್ರ ಕಾರ್ಯಕ್ರಮದ ಮೂಲಕ ನಗರ ಪ್ರದೇಶದ ಜನರ ಗಮನ ಸೆಳೆಯಲು ನಿರ್ಧರಿಸಿದೆ. 'ರಾಹುಲ್ ಗಾಂಧಿ ಅವರು ಜುಲೈನಲ್ಲಿ ಗುಜರಾತ್ ಭೇಟಿ ನೀಡಲಿದ್ದು, ವಡೋದರಾದಲ್ಲಿ ಜನಮಿತ್ರ ಸಭೆ ನಡೆಸಲಿದ್ದಾರೆ ಎಂದು ವಡೋದರ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಶೈಲೇಶ್ ಅಮಿನ್ ತಿಳಿಸಿದ್ದಾರೆ.

ನಾಡು, ನುಡಿ, ಗಡಿ ವಿಚಾರ ಬಂದಾಗ ಕಠಿಣ ಹೃದಯಿ

ತುಮಕೂರು: ನಾಡು, ನುಡಿ, ಗಡಿ ವಿಚಾರ ಬಂದಾಗ ನಾನು ಕಠಿಣ ಹೃದಯಿಯಾಗಿರುತ್ತೇನೆ ಎಂದು ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಜನಿಕಾಂತ್ ಅಭಿನಯದ 'ಕಾಲ' ಸಿನಿಮಾಕ್ಕೆ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾಷೆಗಳಿಗೆ ಗೌರವ ಕೊಡುತ್ತೇವೆ. ರಾಜ್ಯದ ಭಾಷೆಗೆ ಧಕ್ಕೆ ಬಂದರೆ ಎಂತಹ ಸ್ನೇಹಿತರಾದರೂ ಕೂಡ ಅವರ ವಿರುದ್ಧ ಧ್ವನಿ ಎತ್ತುತ್ತೇನೆ. ನಮ್ಮ ಮಾತೃ ಭಾಷೆಗೆ ಧಕ್ಕೆ ಬಂದರೆ ರಜನಿಕಾಂತ್, ಕಮಲ್ ಹಾಸನ್, ಪ್ರಕಾಶ್ ರೈ ಗೂ ಧಿಕ್ಕರಿಸುತ್ತೇನೆ ಎಂದು ಗುಡುಗಿದರು. 'ಕಾಲ' ಸಿನಿಮಾ ಬಿಡುಗಡೆ ಮಾಡದಂತೆ ಕಾನೂನು ಪ್ರಕಾರ ಹೇಳಲಿಕ್ಕೆ ಆಗದಿದ್ದರೂ, ವಿತರಿಕರಿಗೆ ಮತ್ತು ಪ್ರದರ್ಶಕರಿಗೆ ಅರಿವು ಮೂಡಿಸುತ್ತೇವೆ. ಆಕಸ್ಮಾತ್ ಪ್ರದರ್ಶನ ಮಾಡಿದರೆ ನಾವು ಧಂಗೆ ಏಳಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು ವಿತರಕರು ಸಹ ರಾಜ್ಯದ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು. ಪ್ರದರ್ಶಕರು, ವಿತರಕರು ಈ ಸಿನಿಮಾ ತೆಗೆದುಕೊಳ್ಳಬಾರದು. ತೆಗೆದುಕೊಂಡರೆ ಅನಾಹುತಕ್ಕೆ ತಯಾರಾಗುವಂತೆ ಎಚ್ಚರಿಕೆ ನೀಡಿದರು. ಪ್ರಕಾಶ್ ರೈ ಪ್ರಚಾರ ಗಿಟ್ಟಿಸಿಕೊಳ್ಳಲು ಸಂದರ್ಭಕ್ಕೆ ತಕ್ಕಂತೆ ಮಾತನಾಡುತ್ತಾರೆ. ಆದರೆ ನಮ್ಮ ಭಾಷೆ ವಿರುದ್ಧ ಯಾರೇ ಏನೇ ಮಾತನಾಡಿದರೂ ಅವರ ಬಾಯಿ ಬಚ್ಚಲು ಎಂಬುದನ್ನು ಯಾರೊಬ್ಬರು ಮರೆಯಬಾರದು ಎಂದು ಕಟುಕಿದರು.

‘ಕಾಲ’ ಚಿತ್ರ ಬಿಡುಗಡೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ಬೆಂಗಳೂರು: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ‘ಕಾಲ’ ಚಿತ್ರ ಪ್ರದರ್ಶನಕ್ಕೆ ಕೊನೆಗೂ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಚಿತ್ರ ಪ್ರದರ್ಶನ ವೇಳೆ ಅಹಿತಕರ ಘಟನೆಯಾಗದಂತೆ ಮುನ್ನಚ್ಚರಿಕೆ ವಹಿಸಿ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ. ರಜನಿಕಾಂತ್ ಪುತ್ರಿ ಪರ ವಕೀಲರಿಗೆ, ಚಿತ್ರ ನಿರ್ಮಾಪಕರು ರಾಜ್ಯ ಸರಕಾರಕ್ಕೆ ಚಿತ್ರ ಪ್ರದರ್ಶನ ಬಗೆಗಿನ ಸೂಕ್ತ ವಿವರ ನೀಡಬೇಕು. ನಂತರ ಆಯಾ ಚಿತ್ರಮಂದಿರಕ್ಕೆ ರಾಜ್ಯ ಸರಕಾರ ಸೂಕ್ತ ಭದ್ರತೆ ಒದಗಿಸಬೇಕು ಎಂದು ಸೂಚನೆ ನೀಡಿದೆ. ಕಾಲ ಚಿತ್ರದ ಪ್ರದರ್ಶನಕ್ಕೆ ಅನುಮತಿ ನೀಡಬಾರದೆಂದು ರಾಜ್ಯಾದ್ಯಂತ ವಿವಿಧ ಕನ್ನಡ ಸಂಘಟನೆಗಳು ಬೀದಿಗಿಳಿದ್ದರಿಂದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಚಿತ್ರ ಪ್ರದರ್ಶನಕ್ಕೆ ನಿರಾಕರಣೆ ಮಾಡಿ ತೀರ್ಮಾನ ಕೈಗೊಂಡಿತ್ತು. ಇದರಿಂದಾಗಿ ಕನ್ನಡ ಹೋರಾಟಗಾರರಿಗೆ ತೀವ್ರ ಹಿನ್ನಡೆಯಾದಂತಾಗಿದೆ.

ರಷ್ಯಾದಿಂದ 2.85 ಮಿಲಿಯನ್ ಮೆಟ್ರಿಕ್ ಟನ್ ಗ್ಯಾಸ್ ಆಮದು

ನವದೆಹಲಿ : ಭಾರತವೂ ರಷ್ಯಾದಿಂದ 2.85 ಮಿಲಿಯನ್ ಮೆಟ್ರಿಕ್ ಟನ್ ಗ್ಯಾಸ್ ಆಮದು ಮಾಡಿಕೊಂಡಿದೆ. ರಷ್ಯಾದಿಂದ ಎಲ್ಎನ್ಜಿ ಗ್ಯಾಸ್ ಬಂದಿರುವ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್, ಇವತ್ತು ಇಂಧನ ಸುರಕ್ಷತಾ ರೋಡ್ ಮ್ಯಾಪ್ಗೆ ಸುವರ್ಣ ದಿನ ಎಂದು ಉಲ್ಲೇಖಿಸಿದ್ದಾರೆ. ಎಲ್ಎನ್ಜಿ ಕನೋ ಹೊತ್ತ ಕಾರ್ಗೋ ಹಡುಗು ಗುಜರಾತ್ ದಹೇಜ್ ಬಂದರು ತಲುಪಿದೆ. ಅದನ್ನು ಸ್ವಾಗತಿಸಿರುವ ಚಿತ್ರವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಪ್ರಕಟಿಸಿರುವುದು ವಿಶೇಷವಾಗಿದೆ. ಪ್ರತಿ ವರ್ಷ ರಷ್ಯಾದಿಂದ ಗೇಲ್ ( ಜಿಎಐಎಲ್) 1.5 ಬಿಲಿಯನ್ ಡಾಲರ್ ಮೊತ್ತದ ಗ್ಯಾಸ್ ಆಮದು ಮಾಡಿಕೊಳ್ಳಲಿದೆ. ಈ ಸಂಬಂಧ ಭಾರತ ರಷ್ಯಾದ ಜತೆ 20 ವರ್ಷಗಳ ಒಪ್ಪಂದ ಮಾಡಿಕೊಂಡಿದೆ.

ನಾಡಿನೆಲ್ಲಡೆ ಪರಿಸರ ದಿನಾಚರಣೆ ಸಂಭ್ರಮ

ಬೆಂಗಳೂರು : ಜೂನ್ 5ರಂದು ನಾಡಿನೆಲ್ಲಡೆ ವಿಶ್ವ ಪರಿಸರ ದಿನಾಚರಣೆಯ ಸಂಭ್ರಮ ಮನೆ ಮಾಡಿದೆ. ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಜೆ.ಪಿ ನಗರದ ನಗರಪಾಲಿಕೆ ಉದ್ಯಾನವನದಲ್ಲಿ ಸಸಿ ನೆಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪರಿಸರ ಕಾಪಾಡಲು ನಮ್ಮ ಸರ್ಕಾರ ಪೂರ್ಣ ಪ್ರಮಾಣದ ಆದ್ಯತೆ ನೀಡುತ್ತದೆ. ಪರಿಸರ ಉಳಿವಿಗೆ ಪ್ರತಿಯೊಬ್ಬ ನಾಗರೀಕರು ಕೈ ಜೋಡಿಸಬೇಕು ಎಂದರು. ಪರಿಸರ ದಿನದಂದು ಪ್ರತಿಯೊಬ್ಬರು ಪರಿಸರ ಉಳಿಸುವ ಪ್ರತಿಜ್ಞೆ ಮಾಡಬೇಕು ಎಂದು ಕುಮಾರಸ್ವಾಮಿ ಕರೆ ನೀಡಿದರು. ಆನಂತರ ನಾಡಿನ ವಿವಿಧಡೆ ಪರಿಸರ ರಕ್ಷಣೆಯಲ್ಲಿ ತೊಡಗಿಸಿಕೊಂಡ ಹಿರಿಯ ಐಎಎಸ್ ಅಧಿಕಾರಿ ಶಿವಾನಂದ ಕಾಪಸೆ ಸೇರಿದಂತೆ ಅನೇಕರಿಗೆ ಪರಿಸರ ಪ್ರಶಸ್ತ್ರಿ ನೀಡಿ ಕುಮಾರಸ್ವಾಮಿ ಗೌರವಿಸಿದರು. ಹಳ್ಳಿಗಳಿಂದ ಬೆಂಗಳೂರು ವರೆಗೆ ಎಲ್ಲರೂ ಪರಿಸರದ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ. ಈ ಹಸಿರು ಸಂಭ್ರಮ ವರ್ಷವೀಡಿ ಇರಲಿ ಎಂಬುದು ಎಲ್ಲ ಪರಿಸರವಾದಿಗಳ ಆಶಯವಾಗಿದೆ.

ಆಟವಾಡಲು ಹೊರಗೆ ಹೋದ 12 ವರ್ಷದ ಮಗು ಕಾಣೆ

ಹಾವೇರಿ : ಆಟವಾಡಲು ಮನೆಯಿಂದ ಹೊರಗೆ ಹೋದ 12 ವರ್ಷದ ಮಗು ಕಾಣೆಯಾದ ಘಟನೆ ಹಾವೇರಿ ತಾಲೂಕಿನ ಕೊಳೂರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ರತ್ನವ್ವ ಹಾಗೂ ರಮೇಶ ಕಳಸಣ್ಣವರ ದಂಪತಿಯ ಮಗ ಶರಣ (12) ಕಾಣಿಯಾಗಿರುವ ಬಾಲಕನಾಗಿದ್ದಾನೆ. ಜೂನ್ 3ನೇ ರಂದು ಸಂಜೆ 6ರ ಸುಮಾರಿಗೆ ಅಜ್ಜಿ ಮನೆಗೆ ಹಾಲು ಕೊಟ್ಟುಬರಲು ಹೊಗಿದ್ದ ಶರಣಪ್ಪ ಆನಂತರ ಕಾಣೆಯಾಗಿದ್ದಾನೆ. ಎರಡು ದಿನವಾದರೂ ಬಾಲಕನ ಪತ್ತೆಯಿಲ್ಲ. ಇದರಿಂದಾಗಿ ಬಾಲಕ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ತಾಯಿ ಊಟ ಬಿಟ್ಟು ಹಾಸಿಗೆ ಹಿಡಿದಿದ್ದಾಳೆ. ಕಾಣೆಯಾದ ಬಾಲಕ ಶರಣಪ್ಪನನ್ನು ಯಾವುದೋ ದುರುದ್ದೇಶದಿಂದ ಪುಸಲಾಯಿಸಿ ಅಪಹರಣ ಮಾಡಲಾಗಿದೆ ಎಂದು ಪಾಲಕರ ಶಂಕೆ ವ್ಯಕ್ತಪಡಿಸಿದ್ದಾರೆ. ಮಗನ ಪತ್ತೆಗಾಗಿ ಸಾರ್ವಜನಿಕರಲ್ಲಿ ಪಾಲಕರು ಮನವಿ ಮಾಡಿದ್ದು, ಈ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

20 ನರ್ಸಿಂಗ್ ಪೋಸ್ಟ್ ಗಳಿಗೆ 4 ಸಾವಿರ ಆಕಾಂಕ್ಷಿಗಳು

ಹುಬ್ಬಳ್ಳಿ : ರೇಲ್ವೆ ಇಲಾಖೆ ಅಧಿಕಾರಿಗಳ ಅವಾಂತರದಿಂದಾಗಿ ಸಂದರ್ಶನಕ್ಕೆ ಬಂದವರು ಹೈರಾಣ ಆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನೈಋತ್ಯ ರೈಲ್ವೆ ಆಸ್ಪತ್ರೆ ಯಲ್ಲಿ 20 ನರ್ಸಿಂಗ್ ಪೋಸ್ಟ್ ಗಳಿಗೆ ನೇರ ಸಂದರ್ಶನ ಕರೆಯಲಾಗಿತ್ತು. 4 ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳು ಹಾಜರಾಗಿದ್ದರಿಂದ ಸಂದರ್ಶಕರು ಕಂಗಲಾಗಿದ್ದಾರೆ. ಗದಗ ರಸ್ತೆಯಲ್ಲಿರುವ ರೈಲ್ವೆ ಆಸ್ಪತ್ರೆಯ ನರ್ಸಿಂಗ್ ಪೋಸ್ಟ್ ಗಳಿಗೆ ಮಂಗಳವಾರ ನೇರ ಸಂದರ್ಶನ ಕರೆಯಲಾಗಿತ್ತು. ಈ ಹಿನ್ನಲೆಯಲ್ಲಿ ಮಹಾರಾಷ್ಟ್ರ, ಗೋವಾ, ಪಂಜಾಬ್, ಕೇರಳ, ರಾಜಸ್ಥಾನ ದಿಂದ ಬಂದಿರುವ ಸಾವಿರಾರು ಆಕಾಂಕ್ಷಿಗಳು ಬೆಳಗ್ಗೆ 4 ಗಂಟೆಯಿಂದಲೇ ಸರದಿಯಲ್ಲಿ ನಿಂತಿದ್ದಾರೆ. 9 ಗಂಟೆಗೆ ಸಂದರ್ಶನ ಮಾಡುವುದಾಗಿ ಹೇಳಿ, 11 ಗಂಟೆಯಿಂದ ಸಿದ್ದತೆಯಲ್ಲಿ ತೊಡಗಿರುವ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೋಕನ್ ಕೊಡುವುದಾಗಿ ಹೇಳಿ ಆಕಾಂಕ್ಷಿಗಳನ್ನು ಓಡಾಡಿಸುತ್ತಿರುವ ಅಧಿಕಾರಿಗಳ ನಡೆಗೆ ಕಿಡಿ ಕಾರಿರುವ ಅಭ್ಯರ್ಥಿಗಳ ಸಂಬಂಧಿಕರು ಯಾವುದೇ ಪೂರ್ವ ತಯಾರಿ ಇಲ್ಲದ ಕಾರಣ ನಾವೆಲ್ಲ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ನೋವು ತೋಡಿಕೊಂಡರು. ಸಂದರ್ಶನ ರದ್ದುಗೊಳಿಸಿ, ಲಿಖಿತ ಪರೀಕ್ಷೆ ಮಾಡುವಂತೆ ಆಕಾಂಕ್ಷಿಗಳ ಒತ್ತಾಯಿಸಿದ್ದಾರೆ. ಸಾವಿರಾರು ಉದ್ಯೋಗಾಕಾಂಕ್ಷಿಗಳು ಸಂದರ್ಶನಕ್ಕೆ ಹಾಜರಾಗಿದ್ದರಿಂದ ಸಂದರ್ಶಕರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿರಿಯ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.

ಉಚಿತ ಬಸ್ ಪಾಸ್ ನೀಡಲು ಒತ್ತಾಯಿಸಿ ಬೀದಿಗಿಳಿದ ವಿದ್ಯಾರ್ಥಿಗಳು

ಹುಬ್ಬಳ್ಳಿ : ಎಲ್ಲ ವರ್ಗದ ಬಡ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವಂತೆ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ನೂರಾರು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಮಂಗಳವಾರ ಬೆಳಗ್ಗೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿದವಿದ್ಯಾರ್ಥಿಗಳು ಸರಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು. 2018-19ನೇ ಸಾಲಿನ ಬಜೆಟ್ ನಲ್ಲಿ ರಾಜ್ಯದ ಎಲ್ಲ ಬಡ ವಿದ್ಯಾರ್ಥಿಗಳಿಗೆ ಉಚಿತ್ ಬಸ್ ಪಾಸ್ ನೀಡಲಾಗುವುದು ಎಂದು ಘೋಷಿಸಲಾಗಿತ್ತು. ಆದರೆ ಸರ್ಕಾರ ನುಡಿದಂತೆ ನಡೆದುಕೊಂಡಿಲ್ಲ. ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು, ಎಲ್ಲರಿಗೂ ತಕ್ಷಣ ಉಚಿತ ಬಸ್ ಪಾಸ್ ನೀಡುವಂತೆ ಒತ್ತಾಯ ಮಾಡಿದ ವಿದ್ಯಾರ್ಥಿಗಳು, ಕೆ.ಎಸ್.ಆರ್.ಟಿ.ಸಿ ಮುಖ್ಯ ಸಂಚಾರ ವ್ಯವಸ್ಥಾಪಕ ವೆಂಕಟೇಶ್ವರ ರಡ್ಡಿ ಅವರಿಗೆ ಮನವಿ ಸಲ್ಲಿಸಿದರು. ಎಬಿವಿಪಿ ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಮೊದಲ ಹಂತದಲ್ಲಿ ಜೆಡಿಎಸ್ ನ 9 ಶಾಸಕರಿಗೆ ಸಚಿವ ಸ್ಥಾನ

ಬೆಂಗಳೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮೊದಲ ಹಂತದಲ್ಲಿ ಜೆಡಿಎಸ್ ನ 9 ಶಾಸಕರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. • ಅವರು ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾಳೆ 8 ರಿಂದ 9 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ಚೀಕರಿಸಲಿದ್ದಾರೆ. ಇನ್ನು ಮೂರು ನಾಲ್ಕು ಸಚಿವ ಸ್ಥಾನಗಳ ಆಯ್ಕೆ ಆನಂತರ ನಡೆಯಲಿದೆ ಎಂದರು. • ಸಂಪುಟದಲ್ಲಿ ಸ್ಥಾನ ಮತ್ತು ಖಾತೆಗಳ ಹಂಚಿಕೆ ಬಗ್ಗೆ ಜೆಡಿಎಸ್ ಶಾಸಕರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಈಗಾಗಲೇ ಎಲ್ಲವೂ ಸೂಸೂತ್ರವಾಗಿ ಬಗೆಹರಿಸಲಾಗಿದೆ ಎಂದು ಹೇಳಿದರು. ಮುಂದಿನ ಹಂತದ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಶಾಸಕರ ಆಯ್ಕೆ ಕುರಿತು ಮಾಜಿ ಪ್ರಧಾನಿ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರಿಗೆ ಸಂಪೂರ್ಣ ಸ್ವಾತಂತ್ರ್ಯನೀಡಲಾಗಿದೆ ಎಂದರು. • ಈಗಾಗಲೇ ನಮ್ಮ ಶಾಸಕರ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಂಡಿದ್ದೇವೆ. ಉತ್ತಮ ಆಡಳಿತ ನೀಡುವಂತೆ ದೇವೇಗೌಡರು ಎಲ್ಲ ಶಾಸಕರಿಗೆ ಸಲಹೆ ನೀಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.

ಮಲ್ಲಿಕಾರ್ಜುನ ಖರ್ಗೆ ದೆಹಲಿ ನಿವಾಸದಲ್ಲಿ ಮಹತ್ವದ ಸಭೆ

ನವದೆಹಲಿ : ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಕಾಂಗ್ರೆಸ್ ಪಕ್ಷದ ಮಹತ್ವದ ಸಭೆ ಆರಂಭಗೊಂಡಿದೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಿನ್ನಲೆಯಲ್ಲಿ ಈ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ. ರಾಹುಲ್ ಗಾಂಧಿ ಅವರ ಅಣತಿಯಂತೆ ಸಚಿವ ಸ್ಥಾನ ಹಂಚಿಕೆ ಹಿನ್ನಲೆಯಲ್ಲಿ ಅವರನ್ನು ಭೇಟಿ ಮಾಡುವ ಮುನ್ನ ಅಂತಿಮ ಕ್ಷಣದ ಸಿದ್ಧತೆಗಳನ್ನು ಕೈ ನಾಯಕರು ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆ ಬಳಿಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ದೆಹಲಿಯಲ್ಲಿ ಬೀಡು ಬಿಟ್ಟಿರುವ ಸಚಿವ ಸ್ಥಾನದ ಆಕಾಂಕ್ಷಿಗಳು ಕೊನೆ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ. ಹಿರಿಯ ನಾಯಕರಾದ ಗುಲಾಂನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ , ಅಹ್ಮದ ಪಟೇಲ್, ಕೆ.ಸಿ. ವೇಣುಗೋಪಾಲ್, ಮಧೂಸೂಧನ ಮೇಸ್ತ್ರಿ, ಬಿ.ಕೆ. ಹರಿಪ್ರಸಾದ್ ಸೇರಿದಂತೆ ಅನೇಕ ಘಟಾನುಘಟಿ ನಾಯಕರ ಮೇಲೆ ಒತ್ತಡ ತರುತ್ತಿದ್ದು, ತಮಗೆ ಸ್ಥಾನ ಸಿಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕೊನೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ಯಾರಿಗೆಲ್ಲಾ ಮಣೆ ಹಾಕುತ್ತಾರೆ ಕಾದುನೋಡಬೇಕಿದೆ.

ಡಿ.ಕೆ. ಶಿವಕುಮಾರ ಗೆ ಸಚಿವ ಸ್ಥಾನ ನೀಡದಿರಲು ವಿರೋಧಿ ಬಣ ಪಟ್ಟು

ನವದೆಹಲಿ : ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ಮಾಜಿ ಇಂಧನ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ಈ ಬಾರಿಯ ಸಮ್ಮೀಶ್ರ ಸರಕಾರದಲ್ಲಿ ಸಚಿವ ಸ್ಥಾನ ನೀಡದಿರಲು ವಿರೋಧಿ ಬಣ ಪಟ್ಟು ಹಿಡಿದಿದೆ ಎನ್ನಲಾಗಿದೆ. ಈಗಾಗಲೇ ಅನೇಕ ಹಿರಿಯ ಕಾಂಗ್ರೆಸ್ ಮುಖಂಡರು ಹೈಕಮಾಂಡ್ ಗಮನ ಸೆಳೆದಿದ್ದು, ಅವರ ಮೇಲೆ ಐಟಿ ದಾಳಿ, ಜಾರಿ ನಿರ್ದೇಶನಾಲಯದ ಕಣ್ಣು ನೆಟ್ಟಿದೆ. ಸಿಬಿಐ ಕೂಡ ಅವರ ಆಪ್ತರ ಮನೆ ಮೇಲೆ ದಾಳಿ ನಡೆಸಿ, ಮಹತ್ತರ ದಾಖಲೆಗಳನ್ನು ಸಂಗ್ರಹಿಸಿದೆ. ಹೀಗಾಗಿ ಬರುವ ದಿನಗಳಲ್ಲಿ ಇನ್ನಷ್ಟು ಸಂಕಷ್ಟ ಎದುರಿಸುವ ಸಾಧ್ಯತೆಯಿರುವುದರಿಂದ ಅವರಿಗೆ ಮಂತ್ರಿಗಿರಿಯಿಂದ ದೂರ ಇಡಬೇಕು ಎಂದು ಆಗ್ರಹಿಸಿದ್ದಾರೆ. ಈ ನಡುವೆ ಮಂಗಳವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕರೆದಿರುವ ಸಭೆಗೆ ಡಿ.ಕೆ.ಶಿವಕುಮಾರ ಅವರನ್ನು ಆಹ್ವಾನಿಸದಿರುವುದು ಭಾರೀ ಕುತೂಹಲ ಕೆರಳಿಸಿದೆ. ಅವರನ್ನು ಸಭೆಯಿಂದ ಉದ್ದೇಶಪೂರ್ವಕವಾಗಿಯೇ ಹೊರಗಿಡಲಾಗಿದೆ ಎನ್ನಲಾಗುತ್ತಿದೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಯಾಂಕ್ ಅಗರವಾಲ್

ಮುಂಬೈ: ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರರಾಗಿದ್ದ ಮಯಾಂಕ್ ಅಗರವಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳತಿ ಆಶಿತಾ ಸೂದ್ ಜೊತೆಗೆ ನವಜೀವನಕ್ಕೆ ಕಾಲಿಟ್ಟರು. ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ಸೂದ್ ಅವರ ಪುತ್ರಿಯಾಗಿದ್ದ ಆಶಿತಾ ಜೊತೆಗೆ ಕ್ರಿಕೆಟಿಗ ಮಯಾಂಕ್ ಅಗರವಾಲ್ ಅವರೊಂದಿಗೆ ಕಳೆದ ಫೆಬ್ರವರಿ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಂದು ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಫೋಟೋವನ್ನ ಟೀಂ ಇಂಡಿಯಾ ತಂಡದ ಆಟಗಾರ ಕೆಎಲ್ ರಾಹುಲ್ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಮದುವೆ ಸಮಾರಂಭದಲ್ಲಿ ಎರಡು ಕುಟುಂಬದ ಸದಸ್ಯರು ಹಾಗೂ ಕೆಲ ಗೆಳೆಯರು ಮಾತ್ರ ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ.

ಹನಿಮೂನ್ ಗೂ ಮುನ್ನವೇ ಗಂಡನ ಸುಪಾರಿ ಕೊಟ್ಟ ಪತ್ನಿ

ಸಾತಾರಾ: ಹೆಂಡತಿ ಜೊತೆಗೆ ಮಹಾಬಲೇಶ್ವರ್ ಕ್ಕೆ ಹನಿಮೂನ್ಗೆ ಹೊರಟ್ಟಿದ್ದ ಗಂಡ ಬೀದಿ ಹೆಣವಾದ ಘಟನೆ ಮಹಾರಾಷ್ಟ್ರದ ಸತಾರಾದಲ್ಲಿ ನಡೆದಿದೆ. ಪುಣೆ ಜಿಲ್ಲೆಯ ಬಾಣೇರಾ ಗ್ರಾಮದ ನಿವಾಸಿ ಆನಂದ್ ಕಾಂಬ್ಳೆ ಜೊತೆ ದೀಕ್ಷಾ ಮೇ 20ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದರು. ಮದುವೆ ಆಗಿ ಕೇವಲ 13 ದಿನಗಳಾಗಿದ್ದವು ಆದರೆ ಮದುವೆಗೂ ಮುನ್ನವೇ ಲವ್ವಿಡವ್ವಿಯಲ್ಲಿ ಸಿಲುಕಿದ್ದ ಪತ್ನಿ ದೀಕ್ಷಾ ತನ್ನ ಪ್ರಿಯಕರ್ ನಿಖಿಲ್ ಜೊತೆಗೆ ಸೇರಿ ಹನಿಮೂನ್ ಗೂ ಮುನ್ನವೇ ಗಂಡನ ಮುಗಿಸಲು ಸ್ಕೆಚ್ ರೂಪಿಸಿ ಸುಪಾರಿ ಕೊಟ್ಟಿದ್ದಳು. ಇದರಿಂದಾಗಿ ಹಂತಕರು ಮಾರ್ಗಮಧ್ಯದಲ್ಲಿಯೇ ಮಾರಾಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದ್ದರು. ಬಳಿಕ ಸರಗಳ್ಳತನದ ಕಥೆ ಕಟ್ಟಿ ದಿಕ್ಷಾ ಪೊಲೀಸರಿಗೆ ದಾರಿ ತಪ್ಪಿಸಿದ್ದಳು. ಘಟನೆ ಕುರಿತು ತನಿಖೆ ನಡೆಸಿದ ಸಾತಾರಾ ಪೊಲೀಸರು ದೀಕ್ಷಾ ಮೇಲೆ ಅನುಮಾನಗೊಂಡು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಬಯಲಿಗೆ ಬಂದಿದೆ. ಪೊಲೀಸರು ಇವರಿಬ್ಬರನ್ನು ಕಂಬಿ ಹಿಂದೆ ತಳ್ಳಿದ್ದು, ಹಂತಕರ ಶೋಧಕ್ಕಾಗಿ ಜಾಲ ಬೀಸಿದ್ದಾರೆ.

ಧಾರಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತ

ಧಾರವಾಡ : ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಕುಂದಗೋಳ, ಧಾರವಾಡ, ಕಲಘಟಗಿ ಹಾಗೂ ನವಲಗುಂದ ತಾಲೂಕಿನಲ್ಲಿ ಸೋಮವಾರವೂ ಧಾರಕಾರ ಮಳೆ ಮುಂದುವರೆದಿದೆ. ಇದರಿಂದಾಗಿ ಜಿಲ್ಲೆಯಾದ್ಯಂತ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಸತತ ಹಲವು ಗಂಟೆಯಿಂದ ಧಾರವಾಡ, ನವಲಗುಂದ ಹಾಗೂ ಕುಂದಗೋಳ ತಾಲೂಕಿನ ಹಲವು ಕಡೆ ಭಾರಿ ಮಳೆಯಾಗಿದ್ದರಿಂದ ಬೆಣ್ಣೆಹಳ್ಳ ತುಂಬಿ ಹರಿಯುತ್ತಿದೆ. ಇದರಿಂದಾಗಿ ನೂರಾರು ಮನೆಗಳು ಜಲಾವೃತಗೊಂಡಿದ್ದು, ಶಾಲೆ, ಮನೆ, ಅಂಗಡಿ, ಬಸ್ ನಿಲ್ದಾಣ ಕೂಡ ಮಳೆ ನೀರಿನಿಂದ ಆವೃತಗೊಂಡಿದೆ. ಬೆಣ್ಣೆಹಳ್ಳ ತುಂಬಿ ಹರಿಯುತ್ತಿದೆ. ಇದಲ್ಲದೆ, ಸಣ್ಣಪುಟ್ಟ ಕೆರೆ, ಹಳ್ಳಕೊಳ್ಳಗಳು ಭರ್ತಿಯಾಗಿ ಗ್ರಾಮ ಹಾಗೂ ರಸ್ತೆಗೆ ನೀರು ನುಗ್ಗಿವೆ. ಇದಲ್ಲದೆ, ಮಳೆಯಿಂದಾಗಿ ಕುಂದಗೋಳ ತಾಲೂಕಿನ ಇಂಗಳಗಿ-ಬೂದಿಹಾಳ, ಬೆನಕನಹಳ್ಳಿ ಮತ್ತು ಹಿರೇನರ್ತಿ ಮಾರ್ಗ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ಎರಡು ಗ್ರಾಮದ ನಡುವೆ ಸಂಚಾರ ಸ್ಥಗಿತಗೊಂಡಿದೆ. ಹಿರೇನರ್ತಿ ಗ್ರಾಮದ ಕಲ್ಲನಗೌಡ ಬ್ಯಾಹಟ್ಟಿ ಅವರ ಟ್ರ್ಯಾಕ್ಟರ್ ನೀರಿನಲ್ಲಿ ತೇಲುತ್ತಿದ್ದು ಊರಿನ ಗ್ರಾಮಸ್ಥರು ಅದನ್ನು ಉಳಿಸಿಕೊಳ್ಳಲು ಹರ ಸಾಹಸ ನಡೆಸುತ್ತಿದ್ದಾರೆ.

ಕಿಚ್ಚ ಸುದೀಪ್ ಚಾಲೇಂಜ್ ಸ್ವೀಕರಿಸಿದ ನಟ ಯಶ್

ಬೆಂಗಳೂರು : ಕೇಂದ್ರ ಸಚಿವ ರಾಜರ್ವಧನ ಸಿಂಗ್ ರಾಠೋಡ್ ಆರಂಭಿಸಿರುವ ಫಿಟ್ನೇಸ್ ಚಾಲೇಂಜ್ ದೇಶ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಬಾಲಿವುಡ್ ನಲ್ಲಿ ಭಾರೀ ಸದ್ದು ಮಾಡಿರುವ ಈ ಚಾಲೇಂಜ್ ಇದೀಗ ಕನ್ನಡ ಸಿನೀಮಾ ರಂಗದಲ್ಲಿ ಸುದ್ದಿ ಜೊತೆಗೆ ಸದ್ದು ಮಾಡಿದೆ. ಕ್ರಿಕೇಟಿಗ ವಿನಯಕುಮಾರ ನೀಡಿರುವ ಈ ಚಾಲೇಂಜ್ ಅನ್ನು ಸ್ವೀಕರಿಸಿದ್ದ ನಟ ಕಿಚ್ಚ ಸುದೀಪ್ ಅವರು ಇದನ್ನು ಹಿಂದಿನಟ ರಿತೇಶ ಕುಮಾರ್ ದೇಶಮುಖ್, ನಟ ಯಶ್ ಹಾಗೂ ಹ್ಯಾಟ್ರೀಕ್ ಹೀರೋ ಶಿವರಾಜಕುಮಾರ ಅವರಿಗೆ ವರ್ಗಾಯಿಸಿದ್ದರು. ನಟ ಕಿಚ್ಚ ಸುದೀಪ್ ನೀಡಿದ್ದ ಚಾಲೇಂಜ್ ಅನ್ನು ನಟ ಯಶ್ ಸ್ವೀಕರಿಸಿದ್ದು, ನಾವು ಯಾವಾಗಲೂ ಸಿನಿಮಾಗಳಿಗೆ ಸದಾ ವರ್ಕ್ ಔಟ್ ಮಾಡ್ತಾ ಇರ್ತಿವಿ. ಆದರೆ ನಮ್ಮ ಸುತ್ತಲಿನ ಅನೇಕರು ಈ ಕಡೆ ಲಕ್ಷ್ಯ ನೀಡಬೇಕು. ಅಂತಹವರಿಂದ ಫೀಟ್ನೆಸ್ ಚಾಲೇಂಜ್ ಮಾಡಿಸಬೇಕು ಎಂದು ಹೇಳುವ ಮೂಲಕ ಕಿಚ್ಚನ ಚಾಲೇಂಜ್ ಗೆ ಟ್ವಿಸ್ಟ್ ನೀಡಿದ್ದಾರೆ. ಇದನ್ನು ಇನ್ನೂ ಯಾರೆಲ್ಲಾ ಮುಂದುವರೆಸುತ್ತಾರೆ ಕಾದು ನೋಡಬೇಕಿದೆ.

ಮತ್ತೇ ಪ್ರಧಾನಿ ಮೋದಿ ಕಾಲೆಳೆದ ರಾಹುಲ್ ಗಾಂಧಿ

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರ ಕಾಲು ಎಳೆದಿದ್ದಾರೆ. ಆದರೆ ಈ ಬಾರಿ ಅವರನ್ನು ಹೊಗಳುತ್ತಲೇ ತೆಗಳಿರುವುದು ವಿಶೇಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೀಡುವ ಸಂದರ್ಶನದ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ದಾಮೋದರ್ ಮೋದಿ ಅವರು ಪೂರ್ವ ಲಿಖಿತ ಉತ್ತರಗಳೊಂದಿಗೆ ಆಶು ಪ್ರಶ್ನೆಗಳನ್ನು ಎದುರಿಸುವ ಮೊದಲ ಭಾರತೀಯ ಪ್ರಧಾನಿ ಎಂದು ಟೀಕಿಸಿದ್ದಾರೆ. ಪ್ರಧಾನಿ ಮೋದಿ ಅವರು ಇತ್ತೀಚೆಗೆ ಸಿಂಗಾಪುರದಲ್ಲಿನ ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದದಲ್ಲಿ ಭಾಷಾಂತಕಾರರು ಮೋದಿ ಹೇಳದ ಅನೇಕ ಮಾತುಗಳನ್ನು ಸೇರಿಸಿ ಪೂರ್ವ-ಲಿಖಿತ ಮಾದರಿಯಲ್ಲಿ ಹೇಳುತ್ತಿದ್ದರು ಎಂದು ಲೇವಡಿ ಮಾಡಿದ್ದಾರೆ. ಅಲ್ಲದೆ, ವಿರೋಧ ಪಕ್ಷದವರು ಕೇಳುವ ಪ್ರಶ್ನೆಗಳಿಂದ ಮೋದಿ ಪಲಾಯನವಾದ ಚೆನ್ನಾಗಿದೆ ಎಂದು ಟಾಂಗ್ ನೀಡಿದ್ದಾರೆ. ಇದು ಟ್ವೀಟರ್ ನಲ್ಲಿ ಭಾರೀ ಪರ ವಿರೋಧಕ್ಕೆ ಕಾರಣವಾಗಿರುವುದು ವಿಶೇಷವಾಗಿದೆ.

ಸಿಎಂ ಜನತಾ ದರ್ಶನಕ್ಕೆ ವಿಕಲಚೇತನರ ದಂಡು

ಬೆಂಗಳೂರು: ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಜನತಾ ದರ್ಶನಕ್ಕೆ ಹತ್ತಾರು ವಿಕಲಚೇತನರು ಆಗಮಿಸಿದ್ದ ತಮ್ಮ ನೋವುಗಳನ್ನು ತೋಡಿಕೊಂಡರು. ಶಿವಮೊಗ್ಗ ಜಿಲ್ಲೆಯ ಸೊರಬದ ವಿಕಲಚೇತನ ಮಾಲತೇಶ್ ಜನತಾ ದರ್ಶನದ ವೇಳೆ ಸಿಎಂ ಸಹಾಯ ಕೇಳಿ ಬಂದಿದ್ದರು. ಎಂಬಿಎ ಓದುತ್ತಿರುವ ಮಾಲತೇಶ್ ಬಲಗಾಲು ಕಳೆದುಕೊಂಡಿದ್ದು, ಆತನಿಗೆ ಸಿಎಂ ಕಚೇರಿಯಲ್ಲೇ ಕೆಲಸ ನೀಡುವುದಾಗಿ ಅಭಯ ನೀಡಿದರು. ಕೊರಟಗೆರೆ ಸಮೀಪದ ಕೋಳಾಲನ ರಮೇಶ್ ಮತ್ತು ಪ್ರೇಮಾ ದಂಪತಿ ತಮ್ಮ ಮಕ್ಕಳಿಗೆ ಬೋನ್ ಮ್ಯಾರೋ ಆರೋಗ್ಯ ಸಮಸ್ಯೆ ಗೆ ಚಿಕಿತ್ಸೆ ಕೊಡಿಸಲು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡರು. ಅದಕ್ಕೆ ಸ್ಪಂದಿಸಿದ ಕುಮಾರಸ್ವಾಮಿ 10 ತಿಂಗಳ ಮಗು ಲಿಖಿತ್ ಗೆ ಚಿಕಿತ್ಸೆ ಕೊಡಿಸಲು ಇಂದಿರಾಗಾಂಧಿ ಆಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ. ಹೀಗೆ ಅನೇಕ ವಿಕಲಚೇತನರು, ನೋವು ಹತ್ತು ಬಂದ ಹಲವರ ಅಹವಾಲು ಆಲಿಸಿದ ಸಿಎಂ ಕುಮಾರಸ್ವಾಮಿ ಅಭಯ ನೀಡಿದರು.

ವೀಕ್ ಸ್ಟೂಡೆಂಟ್ ಆಗಿದ್ದ ಕುಮಾರಸ್ವಾಮಿ

ಬೆಂಗಳೂರು : ನ್ಯಾಶನಲ್ ಕಾಲೇಜ್ ಸ್ಟುಡೇಂಟ್ ಆಗಿದ್ದಹೆಚ್.ಡಿ. ಕುಮಾರಸ್ವಾಮಿ ಕಾಲೇಜ್ ದಿನಗಳಲ್ಲಿ ತುಂಬಾ ವೀಕ್ ಸ್ಟುಡೆಂಟ್ ಆಗಿದ್ದರು ಎಂದು ಸ್ವತಃ ತಾವೇ ಮೆಲಕು ಹಾಕಿಕೊಂಡಿದ್ದಾರೆ. ಹೌದು ಇಂದು ಕಾಲೇಜ್ ನಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಕಾಲೇಜು ದಿನಗಳನ್ನು ಸ್ಮರಿಸಿದರು. 79-80ನೇ ಸಾಲಿನಲ್ಲಿ ಈ ಕಾಲೇಜಿನಲ್ಲಿ ವಿದ್ಯಾರ್ಥಿ ಆಗಿದ್ದೆ. ನ್ಯಾಷನಲ್ ಕಾಲೇಜು ಸಂಸ್ಥಾಪಕರಾದ ನರಸಿಂಹಯ್ಯ ಅವರು ಈ ಕಾಲೇಜು ಕಟ್ಟಲು ಸಾಕಷ್ಟು ಶ್ರಮಿಸಿದ್ದರು ಎಂದು ಬಣ್ಣಿಸಿದ ಅವರು ನಾನು ಬೆಳೆದ ಪರಿಸರಕ್ಕೆ ಮತ್ತೇ ಇಂದು ಬಂದಿದ್ದು ತುಂಬಾ ಸಂತೋಷ ತಂದಿದೆ ಎಂದರು. ನನಗೆ ಈ ಕಾಲೇಜಿನಲ್ಲಿ ಸೀಟ್ ಸಿಕ್ಕಿದ್ದು ತುಂಬಾ ಸಂತೋಷ ಆಗಿತ್ತು. ನಾನು ಹಿಂದಿನ ಬೆಂಚ್ಅಲ್ಲಿ ಕೂರುತ್ತಿದ್ದೆ. ಕಾರಣ, ಶಿಕ್ಷಕರು ಪ್ರಶ್ನೆ ಕೇಳುತ್ತಾರೆ ಅಂತ ಅವಿತುಕೊಳ್ಳುತ್ತಿದ್ದೆ ಎಂದು ಕುಮಾರಸ್ವಾಮಿ ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡರು. ವಿದ್ಯಾರ್ಥಿ ಜೀವನದಲ್ಲಿ ನಾನು ಹಿಂದೆ ಉಳಿದಿದ್ದೆ. ಆದರೆ ಈಗ ನಾನು 20 ಗಂಟೆ ಓದಬೇಕು. ನಾನು ವಿದ್ಯಾರ್ಥಿ ಜೀವನದಲ್ಲಿ ಇಷ್ಟು ಓದಿದ್ದರೆ ಐಎಎಸ್ ಆಗುತ್ತಿದ್ದೆ. ಆದರೆ ಓದದೇ ಇರುವುದೇ ಒಳ್ಳೆಯದಾಯ್ತು ಎಂದು ನಗೆ ಚಟಾಕಿ ಹಾರಿಸಿದರು.

ಎಷ್ಟು ದಿನ ಮುಖ್ಯಮಂತ್ರಿಯಾಗಿ ಇರುತ್ತೇನೋ ಗೊತ್ತಿಲ್ಲ ಎಂದ ಹೆಚ್ಡಿಕೆ

ಬೆಂಗಳೂರು: ನಾನು ಎಷ್ಟು ದಿನ ಮುಖ್ಯಮಂತ್ರಿಯಾಗಿ ಇರುತ್ತೇನೋ ಗೊತ್ತಿಲ್ಲ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅವರು ಸೋಮವಾರ ನ್ಯಾಷನಲ್ ಕಾಲೇಜನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಆದರೆ ಜೆಡಿಎಸ್ –ಕಾಂಗ್ರೆಸ್ ಸಮ್ಮೀಶ್ರಸರಕಾರ ಹೇಗೆ ನಡೆಸಬೇಕು ಎಂಬುದು ನನಗೆ ಗೊತ್ತಿದೆ ಎಂದರು. ನಾನು ಕಾಂಗ್ರೆಸ್ನ ಮುಲಾಜಿನಲ್ಲಿ ಇದ್ದೇನೆ ಎಂದು ಈ ಹಿಂದೆ ಹೇಳಿದ್ದೆ. ನಾನು ನೀಡಿದ ಹೇಳಿಕೆ ವಾಸ್ತವ. ಅಲ್ಲದೆ, ನಾನು ಸಾಂದರ್ಭಿಕ ಶಿಶು ಎಂದು ಹೇಳಿದ್ದೆ. 37 ಸ್ಥಾನ ಗಳಿಸಿ ಅಧಿಕಾರಕ್ಕೆ ಬಂದೆ ಎಂದರೆ ನಾನು ಸಾಂದರ್ಭಿಕ ಶಿಶು ಅಲ್ಲವೇ ಎಂದು ಎದುರಾಳಿಗಳಿಗೆ ಪ್ರಶ್ನಿಸಿದರು. ಕಾಲೇಜ್ ನ ಹಳೆ ವಿದ್ಯಾರ್ಥಿಯಾದ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗಿರುವ ಹಿನ್ನೆಲೆಯಲ್ಲಿ ಜಯನಗರ ನ್ಯಾಷನಲ್ ಕಾಲೇಜ್ನಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ನಾಳೆ ಚುನಾವಣೆ

ಧಾರವಾಡ : ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ನಾಳೆ ಜೂನ್ 5ರಂದು ಚುನಾವಣೆ ನಡೆಯಲಿದೆ. ಈ ಒಕ್ಕೂಟವೂ ಗದಗ, ಹಾವೇರಿ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ್ದು, ಇತ್ತೀಚೆಗೆ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ನೀಲಕಂಠಪ್ಪ ಅಸೂಟಿ ರಾಜೀನಾಮೆನೀಡಿದ್ದರಿಂದ ಹುದ್ದೆ ಖಾಲಿಯಾಗಿತ್ತು. ಒಂದು ವರುಷದ ಅಧ್ಯಕ್ಷ ಸ್ಥಾನಕ್ಕಾಗಿ ನಾಳೆ ಚುನಾವಣೆನಡೆಯಲಿದ್ದು, ಕಾಂಗ್ರೇಸ್ ನಿಂದ ಗಂಗಪ್ಪ ಮೂಕಪ್ಪ ಮೊರಬದ ಕಣಕ್ಕೆ ಇಳಿದರೆ ಬಿಜೆಪಿಯಿಂದ ಶಂಕರ ಮುಗದ ಇಳಿಯಲಿದ್ದಾರೆ ಎನ್ನಲಾಗಿದೆ. ಒಟ್ಟು 15 ಮತಗಳನ್ನು ಹೊಂದಿರುವ ಚುನಾವಣೆಯಲ್ಲಿ 6 ಕಾಂಗ್ರೇಸ್, 5 ಬಿಜೆಪಿ ಹಾಗೂ 4 ಮತಗಳು ಸಹಕಾರದ ಸಂಘಗಳ ಅಧಿಕಾರಿಗಳದ್ದಾಗಿದೆ. ಒಟ್ಟು ಮತಗಳ ಆಧಾರದ ಮೇಲೆ ಕಾಂಗ್ರೇಸ್ ಅಭ್ಯರ್ಥಿ ಗಂಗಪ್ಪ ಮೊರಬ ಆಯ್ಕೆ ಬಹುತೇಕ ಖಚಿತವಾಗಿದೆ. ಆದರೆ ಬಿಜೆಪಿ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ನಾಳೆ ಯಾವ ರೀತಿಯ ತಿರುವು ಪಡೆಯಲಿದೆ ಎಂಬುದು ಕಾದು ನೋಡಬೇಕಿದೆ.

ಪ್ರಕಾಶ ರೈ ವಿರುದ್ಧಕುಟುಕಿದ ಸಂಸದ

ಕಲಘಟಗಿ : ಪ್ರಕಾಶ ರೈ ರಾಜ್ಯದ ಹಿತಾಸಕ್ತಿಗಿಂತ ಸ್ವ ಹಿತಾಸಕ್ತಿಗೆ ಆದ್ಯತೆ ನೀಡುವ ನಟ ಎಂದು ಸಂಸದ ಪ್ರಹ್ಲಾದ ಜೋಶಿ ಕುಟುಕಿದ್ದಾರೆ. ಅವರು ಸೋಮವಾರ ಕಲಘಟಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಕಾಶ ರೈ, ಕೆ.ಎಸ್. ಭಗವಾನ್ ಅವರಂತವರನ್ನು ನಾವೇ ದೊಡ್ಡವರನ್ನಾಗಿ ಮಾಡಿದ್ದೇವೆ. ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡದೇ ನಿರ್ಲಕ್ಷಿಸಬೇಕು ಎಂದರು. ಕಾವೇರಿ ವಿಷಯದಲ್ಲಿ ತಮಿಳುನಾಡು ಕರ್ನಾಟಕದೊಂದಿಗೆ ಯಾವಾಗಲೂ ಕಾಲುಕೆದರಿ ಜಗಳ ಮಾಡುತ್ತಿದೆ. ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳು ನಡೆಸುವ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು. ಆದರೆ, ಪ್ರಕಾಶ ರೈ ತಮಿಳುನಾಡಿನ ಜನರನ್ನು ಓಲೈಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಜೋಶಿ ಕಿಡಿಕಾರಿದರು. ಇಂತವರಿಗೆ ರಾಜ್ಯದ ಏಳ್ಗೆ ಬೇಕಿಲ್ಲ, ತಮ್ಮ ಏಳ್ಗೆ ಮಾತ್ರ ಬೇಕು ಇಂತಹವರನ್ನು ಜನ ನಿರ್ಲಕ್ಷಿಸಬೇಕು ಎಂದರು. ಇದೇ ವೇಳೆ ರಾಜ್ಯದಲ್ಲಿ ಶೀಘ್ರವೇ ಫಲಾನುಭವಿಗಳ ಸಮ್ಮೇಳನ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದ ಸಂಸದ ಜೋಶಿ, ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶಾ ಅವರು ನನಗೆ ರಾಜ್ಯದ 224 ಕ್ಷೇತ್ರದ ಉಸ್ತುವಾರಿ ನೀಡಿದ್ದು, ಎಲ್ಲ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು, ಶಾಸಕರೊಂದಿಗೆ ಹಾಗೂ ತಾಲೂಕು ಅಧ್ಯಕ್ಷರೊಂದಿಗೆ ಸಭೆ ನಡೆಸಿ ಕಾರ್ಯಕ್ರಮದ ರೂಪರೇಷೆ ಕೈಗೊಳ್ಳಲಾಗುವುದು ಎಂದರು.

ಮಗಳ ಕತ್ತು ಸೀಳಿ ಕೊಲೆ ಮಾಡಿದ ತಂದೆ

ಹುಬ್ಬಳ್ಳಿ: ತಂದೆಯೇ ಮಗಳ ಕತ್ತು ಸೀಳಿ ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ರ್ದುಘಟನೆ ನಡೆದಿದ್ದು, ನಿಖಿತಾ (16) ತಂದಯಿಂದ ಕೊಲೆಯಾದ ದುರ್ಧೈವಿ ಮಗಳಾಗಿದ್ದಾಳೆ. ಮೋಹನ್ ಕಿತ್ತೂರು ಕೊಲೆ ಮಾಡಿದ ಆರೋಪಿಯಾಗಿದ್ದು, ಗಲಾಟೆ ವೇಳೆ ಬಿಡಿಸಲು ಬಂದ ಮತ್ತೊಬ್ಬ ಮಗಳು ಹಾಗೂ ಅಳಿಯನಿಗೆ ಗಾಯಗಳಾಗಿವೆ. ಗಾಯಗೊಂಡ ಮತ್ತೊಬ್ಬ ಮಗಳು ಸುಜಾತಾಳನ್ನು ಖಾಸಗಿ ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ. ಅಶೋಕ ನಗರ ಠಾಣೆ ಇನ್ಸಪೇಕ್ಟರ್ ಜಗದೀಶ್ ಹಂಚಿನಾಳ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅಶೋಕ ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಾಜ್ಯ ಸರ್ಕಾರಕ್ಕೆ ನಿಫಾ ರೋಗ ತಗುಲಿದೆ ಎಂದ ಕೇಂದ್ರ ಸಚಿವ

ಹಾಸನ : ಮಹದಾಯಿ ವಿಚಾರ ಬಗೆಹರಿಸಲು ಕೇಂದ್ರ ಸರ್ಕಾರ ಸಿದ್ದವಿದೆ. ಆದರೆ ವಿರೋಧ ಪಕ್ಷಗಳು ಅಡ್ಡಿಪಡಿಸುತ್ತಿವೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. ಅವರು ಹಾಸನದಲ್ಲಿಸುದ್ದಿಗಾರರೊಂದಿಗೆ ಮಾತನಾಡಿ, ಪೇಜಾವರ ಶ್ರೀ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ನಿರೀಕ್ಷಿಸಿದಷ್ಟು ಅಭಿವೃದ್ಧಿ ಆಗಿಲ್ಲ ಎಂದಷ್ಟೇ ಹೇಳಿದ್ದು ಮುಂದಿನ ದಿನಗಳಲ್ಲಿ ಅವರ ಸಲಹೆಯಂತೆ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದರು. ನೀರವ್ ಮೋದಿ, ವಿಜಯ ಮಲ್ಯ ಅವರನ್ನು ಶೀಘ್ರದಲ್ಲಿಯೇ ಸೆರೆಮನೆಗೆ ಕಳುಹಿಸಲಾಗುವುದು. ಪ್ರಜಾಪ್ರಭುತ್ವವನ್ನು ಕೈಯಲ್ಲಿ ಹಿಡಿದುಕೊಂಡಂತೆ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರು ಶಾಸಕರನ್ನು ಹಿಡಿದು ಇಟ್ಟುಕೊಂಡಿದ್ದರು. ರಾಜ್ಯ ಸರ್ಕಾರಕ್ಕೆ ನಿಫಾ ರೋಗ ತಗುಲಿದ್ದು, ಯಾವಾಗಲಾದರೂ ಬೀಳಬಹುದು ಎಂದು ವ್ಯಂಗ್ಯವಾಡಿದರು. ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮುರಿದು ಬಿಳಲಿದೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ ಅಭ್ಯರ್ಥಿಯಿಂದ ಖೊಟ್ಟಿ ಜಾತಿ ಪ್ರಮಾಣ ಪತ್ರ

ಧಾರವಾಡ: ಧಾರವಾಡ ತಾಲೂಕು ಪಂಚಾಯತನ ಅಮ್ಮಿನಭಾವಿ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಸುರೇಂದ್ರ ದೇಸಾಯಿ ಅವರು ಖೊಟ್ಟಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಬಿಜೆಪಿ ಮುಖಂಡ ಸುನೀಲ ಗುಡಿ ಆರೋಪಿಸಿದ್ದಾರೆ. ಅವರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ಹಿನ್ನಲೆಯಲ್ಲಿ ಅವರ ನಾಮಪತ್ರವನ್ನು ಕೂಡಲೇ ತಿರಸ್ಕರಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದರು. ಸುರೇಂದ್ರ ದೇಸಾಯಿ ಅವರು ಜೈನ ದಿಗಂಬರ ಜಾತಿಗೆ ಸೇರಿದವ ಎಂದು ಹಿಂದುಳಿದ ಬ ವರ್ಗದ ಪ್ರಮಾಣ ಪತ್ರವನ್ನು ಗ್ರೇಡ್-೨ ತಹಶೀಲದಾರರಿಂದ ಪಡೆದಿದ್ದಾರೆ. ಇದು ಖೊಟ್ಟಿ ಪ್ರಮಾಣ ಪತ್ರ ಆಗಿದ್ದು, ದೇಸಾಯಿ ಅವರ ನಾಮಪತ್ರವನ್ನು ತಿರಸ್ಕರಿಸಬೇಕೆಂದು ಈಗಾಗಲೇ ಚುನಾವಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಎಂದರು. ಸುರೇಂದ್ರ ದೇಸಾಯಿ ಅವರು ೨೦೦೫ ರ ಗ್ರಾಮ ಪಂಚಾಯತ ಚುನಾವಣೆಯ ಸಂದರ್ಭದಲ್ಲಿ ಬೋಗಾರ ಜಾತಿಗೆ ಸೇರಿದವ ಎಂದು ಹಿಂದುಳಿದ ಅ' ವರ್ಗದ ಪ್ರಮಾಣ ಪತ್ರ ಪಡೆದಿದ್ದರು. ಈಗ ಬ ವರ್ಗದ ಪ್ರಮಾಣ ಪತ್ರ ಪಡೆಯುವ ಮುಖಾಂತರ ಅಧಿಕಾರಿಗಳ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ ಎಂದು ದಾಖಲೆಗಳ ಸಹಿತ ಸುನೀಲ ಗುಡಿ ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳು ಮತ್ತು ಚುನಾವಣಾಧಿಕಾರಿಗಳಿಗೆ ತಕರಾರು ಅರ್ಜಿ ಸಲ್ಲಿಸಿದ್ದು, ಒಂದು ವೇಳೆ ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಕೊಳ್ಳದಿದ್ದರೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ ದೇಶದ ಮತ್ತು ತಿಪ್ಪಣ್ಣ ಗರಗದ ಇದ್ದರು.

ಬಿ ಆರ್ ಟಿ ಎಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಅರವಿಂದ ಬೆಲ್ಲದ

ಧಾರವಾಡ : ನಿರಂತರ ಮಳೆಯಿಂದಾಗಿ ಹಾನಿಗೀಡಾದ ಪ್ರದೇಶಗಳ ನೆರವಿಗೆ ಧಾವಿಸದ ಬಿ ಆರ್ ಟಿ ಎಸ್ ಅಧಿಕಾರಿಗಳನ್ನು ಧಾರವಾಡ ಶಾಸಕ ಅರವಿಂಧ ಬೆಲ್ಲದ ತರಾಟೆಗೆ ತೆಗೆದುಕೊಂಡರು. ಅವಳಿನಗರದಲ್ಲಿ ಸುರಿದ ಮಳೆಯಿಂದಾಗಿ ಮನೆ ಮತ್ತು ಅಂಗಡಿಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿತ್ತು. ಆದರೆ ಘಟನಾ ಸ್ಥಳಕ್ಕೆ ದೌಡಾಯಿಸಿ ಅವರ ನೆರವಿಗೆ ಧಾವಿಸಲು ವಿಫಲವಾದ ಅಧಿಕಾರಿಗಳಿಗೆ ಚಳಿ ಬಿಡಿಸಿದರು. ಬಿಆರ್ ಟಿಎಸ್ ಯೋಜನೆ ಧಾರವಾಡ ಜನತೆಗೆ ಒಂದು ಶಾಪವಾಗಿದೆ. ಗುತ್ತಿಗೆ ಪಡೆದ ಕಂಪನಿ ಯಾವುದೇ ಸರಿಯಾದ ಪ್ಲಾನಿಂಗ್ ಮಾಡಿಲ್ಲ. ಇಂಜಿನಿಯರ್ ಗಳು ಸಹ ಯಾವುದೆ ಸರಿಯಾದ ಕೆಲಸ ಮಾಡದಯಿರುವದರಿಂದ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಲ್ಲದೆ, ಬಿಆರ್ ಟಿ ಸ್ ಅಧಿಕಾರಿಗಳು ಹಾಗೂ ಗುತ್ತಿಗೆ ಪಡೆದ ಕಂಪನಿಯ ವಿರುದ್ದ ಕ್ರಿಮಿನಲ್ ಕೇಸ್ ಧಾಖಲಿಸಲು ಅಧಿವೇಶನದಲ್ಲಿ ಒತ್ತಾಯ ಮಾಡುವದಾಗಿ ತಿಳಿಸಿದ್ದಾರೆ

ತೀವ್ರ ಕುತೂಹಲ ಕೆರಳಿಸಿದ ಕಮಲ್ ಹಾಸನ ಭೇಟಿ

ಬೆಂಗಳೂರು: ತಮಿಳು ಚಿತ್ರರಂಗದ ಹಿರಿಯ ದಿಗ್ಗಜ ಹಾಗೂ ರಾಜಕಾರಣಿ ಕಮಲ್ ಹಾಸನ್ ಸೋಮವಾರ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಗೃಹ ಕಚೇರಿ ಕೃಷ್ಣದಲ್ಲಿ ಭೇಟಿಯಾಗಿ ಕೆಲ ಕಾಲ ಚರ್ಚೆ ನಡೆಸಿದರು. ಭೇಟಿ ಬಳಿಕ ಮಾತನಾಡಿದ ನಟ ಕಮ್ ರಾಜಕಾರಣಿ ಕಮಲ್ ಹಾಸನ್, ಎರಡು ರಾಜ್ಯಗಳ ಮಧ್ಯ ಸೌಹಾರ್ದತೆ ಕಾಪಾಡಿಕೊಳ್ಳುವ ಬಗ್ಗೆ ಮಾತಾಡಿದ್ದೇವೆ. ಹೆಚ್ಡಿಕೆ ಸಿಎಂ ಆಗಿದ್ದು ನಮಗೆ ಬಹಳ ಖುಷಿ ತಂದಿದೆ ಎಂದರು. ಇದೇ ವೇಳೆ ಕಾವೇರಿ ನದಿ ನೀರು ಹಂಚಿಕೆ ವಿಷಯದ ಬಗ್ಗೆ ಮಾತನಾಡಿದ ಅವರು, ಎರಡೂ ರಾಜ್ಯಗಳ ರೈತರ ಹಿತಾಸಕ್ತಿ ನಮಗೆ ಮುಖ್ಯ ಎಂದರು.

ಮುಂದುವರೆದ ಕಾಂಗ್ರೆಸ್ ನಾಯಕರ ಹಗ್ಗಜಗ್ಗಾಟ

ನವದೆಹಲಿ: ಸಚಿವ ಸಂಪುಟ ವಿಸ್ತರಣೆ ಸಂಬಂಧ ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಹಗ್ಗಜಗ್ಗಾಟ ಸೋಮವಾರವೂ ಮುಂದುವರೆದಿದೆ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಿರಿಯ ಶಾಸಕರು, ಹಲವು ಬಾರಿ ಮಂತ್ರಿ ಪದವಿ ಗಿಟ್ಟಿಸಿಕೊಂಡ ಮಾಜಿ ಸಚಿವರು ಭಾರೀ ಕಸರತ್ತು ನಡೆಸಿದ್ದಾರೆ. ಅನೇಕ ಘಟನಾನು ಘಟಿ ನಾಯಕರು ಸಚಿವಗಿರಿ ಪಡೆಯಲೇಬೇಕು ಎಂದು ಹಲವರ ಮೇಲೆ ಒತ್ತಡ ಹೇರಿದ್ದು, ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮಾಡುತ್ತಿದ್ದಾರೆ. ಹೆಚ್.ಕೆ. ಪಾಟೀಲ, ಎಂ.ಬಿ. ಪಾಟೀಲ ಸೇರಿದಂತೆ 20ಕ್ಕೂ ಹೆಚ್ಚು ಹಾಲಿ ಶಾಸಕರು ದೆಹಲಿ ಯಲ್ಲಿ ಬಿಡಾರ ಹೂಡಿದ್ದು, ಸಚಿವ ಸ್ಥಾನಕ್ಕಾಗಿ ನಾನಾ ಕಸರಸ್ತು ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿಯೇ ಯಾರಿಗೆ ಯಾವ ಖಾತೆ ಎಂಬ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ ಎನ್ನಲಾಗಿದೆ.

ಖಳನಾಯಕನ ವಿರುದ್ಧ ಕಿಡಿ ಕಾರಿದ ಪ್ರತಾಪ ಸಿಂಹ

ಮೈಸೂರು: ಕಾಲ ಚಿತ್ರಕ್ಕೂ ಕಾವೇರಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ನಟ ಪ್ರಕಾಶ್ ರೈ ನಿಜವಾಗಿಯೂ ಕರ್ನಾಟಕದ ಪಾಲಿಗೆ ಖಳ ನಾಯಕ ಎಂಬುದನ್ನ ಸಾಬೀತು ಮಾಡಿದ್ದಾರೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಅವರು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆ ನಟನಿಗೆ ಕಾಸು ಮಾತ್ರ ಮುಖ್ಯ. ನಾಡಿನ ವಿಷಯ ಬಂದಾಗ, ನೆಲ, ಜಲ, ಭಾಷೆ ಯಾವುದು ಮುಖ್ಯವೆನಿಸುವುದಿಲ್ಲ ಎಂದು ಕುಟುಕಿದ್ದಾರೆ. ರಜನಿಕಾಂತ್ ಅವರನ್ನ ನಾವೆಲ್ಲರೂ ಇಷ್ಟಪಡುತ್ತೇವೆ. ಹಾಗಂದ ಮಾತ್ರಕ್ಕೆ ಅವರು ಹೇಳಿದೆಲ್ಲವನ್ನು ಸಹಿಸಲು ಆಗಲ್ಲ ಎಂದ ಅವರು ಈ ಹಿಂದೆ ಕಾವೇರಿ ವಿಚಾರವಾಗಿ ಕೊಟ್ಟ ಹೇಳಿಕೆ ನೋವು ತಂದಿದೆ. ಹೀಗಾಗಿ ಕನ್ನಡ ಪರ ಸಂಘಟನೆಗಳು ಸಹಜವಾಗಿ ಅವರ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿವೆ. ನಟ ಪ್ರಕಾಶ್ ರೈ ಸಾರ್ವಜನಿಕ ಜೀವನದಲ್ಲೂ ಖಳ ನಾಯಕನೆಂದು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ಈಗ ಕಾವೇರಿ ವಿಚಾರವಾಗಿ ರೈ ಮಾಡಿರುವ ಟ್ವೀಟ್ ಕರ್ನಾಟಕದ ಪಾಲಿಗೆ ಒಬ್ಬ ಖಳ ನಟ ಎಂಬುದುನ್ನ ಸಾಬೀತು ಪಡಿಸಿದೆ ಎಂದು ಗುಡುಗಿದರು. ಪ್ರಕಾಶ ರೈಗೆ ಕಾವೇರಿ ತಾಯಿಯೊಂದಿಗೆ ಭಾವನಾತ್ಮಕವಾದ ಸಂಬಂಧ ಇಲ್ಲದಿರಬಹುದು. ಆದರೆ ನಮಗೆ ಕಾವೇರಿ ಮುಖ್ಯ ಎಂದರು. ಕಾವೇರಿ ವಿಚಾರವಾಗಿ ಖಳನಾಯಕನ ಬುದ್ಧಿ ತೋರಿಸಿರುವ ಪ್ರಕಾಶ್ ರೈ ಆಗಲಿ, ರಜನಿಕಾಂತ್ ಆಗಲಿ ಬೇರೆ ಯಾರೇ ಹೇಳಿಕೆ ಕೊಟ್ಟರೂ ನಾವು ಅದನ್ನ ಸಹಿಸಲ್ಲ. ಕಾವೇರಿಯನ್ನ ಕರ್ನಾಟಕದಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

'ಕಾಲ' ಚಿತ್ರ ತಡೆಗೂ ಕಾವೇರಿಗೂ ಯಾವುದೇ ಸಂಬಂಧವಿಲ್ಲ ಎಂದ ಪ್ರಕಾಶ್ ರೈ

ಬೆಂಗಳೂರು : ಸುಪರ್ ಸ್ಟಾರ್ ರಜನಿಕಾಂತ ಅವರ ಅಭಿನಯದ ಕಾಲಚಿತ್ರ ಪ್ರದರ್ಶನಕ್ಕೂ ಕಾವೇರಿಗೂ ಯಾವುದೇ ಸಂಬಂಧವಿಲ್ಲ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕೆಲವರು ತಮ್ಮ ಆಶಯಕ್ಕೆ ತಕ್ಕ ಹಾಗೆ ಮನಸ್ಸಿಗೆ ಬಂದ ಹಾಗೆ ನಡೆದುಕೊಳ್ಳುತ್ತಾರೆ. ಇದು ಕನ್ನಡಿಗರ ಆಶಯವಲ್ಲ. ಅವರ ಆಶಯವಾಗಿದ್ದರೆ, ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿ, ಅವರೇ ಚಿತ್ರ ನೋಡದೆ ಇದ್ದಾಗ ಸತ್ಯಾಂಶ ಗೊತ್ತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾವೇರಿ ಭಾವನಾತ್ಮಕ ವಿಷಯ. ನೀರಾವರಿ ತಜ್ಞರು, ಎರಡು ಸರಕಾರ ಹಾಗೂ ಕೇಂದ್ರ ಸರಕಾರ ಕುಳಿತುಕೊಂಡು ರಾಜಕೀಯ ಬದಿಗೊತ್ತಿ ಸಮಸ್ಯೆಬಗೆಹರಿಸಿಕೊಳ್ಳಬೇಕಾದ ಕಟು ವಾಸ್ತವ. ಹಾಗೀದ್ದಾಗಲೂ ರಜನಿಕಾಂತ್ ಏನೋ ಹೇಳಿದರೂ ಎಂದು ಬೇಸರ ಮಾಡಿ ಅವರ ಚಿತ್ರಕ್ಕೆ ತಡೆ ಒಡ್ಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಆ ಚಿತ್ರ ನಿರ್ಮಾಪಕನ ಸ್ಥಿತಿ, ನೂರಾರು ತಂತ್ರಜ್ಞರ, ಸಾವಿರಾರು ಕಾರ್ಮಿಕರ ಸ್ಥಿತಿ ಏನಾಗಬೇಡ ಎಂಬುದನ್ನು ಎಲ್ಲರೂ ಚಿಂತಿಸಬೇಕಿದೆ ಎಂದು ಸಲಹೆ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪರ ವಿರೋಧ ಚರ್ಚೆಗಳು ಆರಂಭಗೊಂಡಿವೆ.

ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ ನಟ ಕಿಚ್ಚ ಸುದೀಪ್

ಬೆಂಗಳೂರು : ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಆರಂಭಿಸಿರುವ ಫಿಟ್ನೆಸ್ ಚಾಲೆಂಜ್ ಅಭಿಯಾನ ಈಗಾಗಲೇ ದೇಶದ ಗಮನ ಸೆಳೆದಿದೆ. ಇದೀಗ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಕೂಡ ಈ ಚಾಲೆಂಜ್ ಸ್ವೀಕರಿಸಿ, ಇತರರಿಗೆ ಮಾದರಿಯಾಗಿದ್ದಾರೆ. ಟ್ವೀಟರ್ ನಲ್ಲಿ ತಮ್ಮ ಫಿಟ್ನೆಸ್ ಪ್ರದರ್ಶನ ಮಾಡಿರುವ ನಟ ಸುದೀಪ್ ಈ ಚಾಲೆಂಜ್ನ್ನು ಬಾಲಿವುಡ್ ನಟ ರಿತೇಶ್ ದೇಶಮುಖ್, ನಟ ಯಶ್, ಶಿವರಾಜಕುಮಾರ್ ಹಾಗೂ ತಮ್ಮ ಪತ್ನಿಗೆ ಪ್ರಿಯಾ ಅವರಿಗೆ ವರ್ಗಾಯಿಸಿರುವುದು ಭಾರೀ ಕುತೂಹಲ ಕೆರಳಿಸಿದೆ. ನಟ ಸುದೀಪ್ ಅವರ ಈ ಫಿಟ್ನೇಸ್ ಚಾಲೆಂಜ್ ಅನ್ನು ಇವರು ಸ್ವೀಕರಿಸಿ, ಅವರು ಕೂಡ ತಮ್ಮ ಫಿಟ್ನೆಸ್ ಪ್ರದಶರ್ಶನ ಮಾಡುತ್ತಾರೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

ನಿಧಿ ಜೊತೆಗೆ ಗೆಳೆತನ ಬಿಟ್ಟು ಯಾವುದೇ ಸಂಬಂಧವಿಲ್ಲಎಂದ ರಾಹುಲ್

ಮುಂಬೈ: ಬಾಲಿವುಡ್ ನಟಿ ನಿಧಿ ಅಗರ್ವಾಲ್ ಜೊತೆಗೆ ಗೆಳೆತನ ಬಿಟ್ಟು ಯಾವುದೇ ಸಂಬಂಧವಿಲ್ಲಎಂದು ಹೆಮ್ಮೆಯ ಕನ್ನಡಿಗ ಹಾಗೂ ಕ್ರಿಕೆಟ್ ಆಟಗಾರ ರಾಹುಲ್ ಸ್ಪಷ್ಟಪಡಿಸಿದ್ದಾರೆ. ಈ ಗಾಸಿಪ್ ಕುರಿತು ಸ್ವತಃ ಮಾಧ್ಯಮಗಳ ಎದುರು ಮನಬಿಚ್ಚಿ ಮಾತನಾಡಿದ ರಾಹುಲ್ ಅವರು, ನಿಧಿ ನಟಿಯಾಗುವುದಕ್ಕಿಂತ ಮುಂಚೆ ಒಳ್ಳೆಯ ಸ್ನೇಹಿತೆ. ನಾವಿಬ್ಬರು ಬೆಂಗಳೂರಿನಿಂದಲೇ ಬಂದಿದ್ದೇವೆ. ನನಗಿರುವ ಕೆಲವು ನೆಚ್ಚಿನ ಸ್ನೇಹಿತರಲ್ಲಿ ನಿಧಿ ಕೂಡ ಒಬ್ಬರು. ಒಬ್ಬ ಹುಡುಗ- ಹುಡುಗಿ ಜೊತೆಯಾಗಿ ಕಾಣಿಸಿಕೊಂಡಿದ್ದಕ್ಕೆ ಇಷ್ಟೊಂದು ದೊಡ್ಡ ಸುದ್ದಿಯಾಗಿರುವುದು ನಂಬಲು ಕಷ್ಟವಾಗುತ್ತಿದೆ ಎಂದು ಹೇಳಿದರು. ಭವಿಷ್ಯದಲ್ಲಿ ಯಾರನ್ನಾದರೂ ಇಷ್ಟ ಪಟ್ಟರೆ ಈ ಪ್ರಪಂಚದಿಂದ ಮುಚ್ಚಿಡಲೂ ಪ್ರಯತ್ನಿಸಲ್ಲ, ನಾನು ಪ್ರೀತಿಸುವರನ್ನು ಮಹಾರಾಣಿಯ ಸ್ಥಾನದಲ್ಲಿಟ್ಟು ಜಗತ್ತಿಗೆ ತೋರಿಸುತ್ತೇನೆ ಎಂದು ಸ್ಪಷ್ಟ ಪಡಿಸಿದರು. ಇತ್ತೀಚೆಗೆ ಮುಂಬೈನ ರೆಸ್ಟೋರೆಂಟ್ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಕ್ಕೆ ಈ ವಿಷಯ ದೇಶದಾದ್ಯಂತ ಭಾರೀ ಸುದ್ದಿ ಮಾಡಿತ್ತು. ಅಲ್ಲದೆ, ಇಬ್ಬರ ನಡುವೆ ಲವ್ವಿಡವ್ವಿ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರು ಡಿನ್ನರ್ ಮಾಡಿದ ಪೋಟೋಗಳು ವೈರಲ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಫಾಲ್ಸ್ ನಲ್ಲಿ ಕೋಚ್ಚಿ ಹೋಗಿದ್ದ ವಿಜ್ಞಾನಿ ಸೋಮಶೇಖರ್ ಶವ ಪತ್ತೆ

ಮೈಸೂರು: ಜಿಲ್ಲೆಯ ಕೆ ಆರ್ ನಗರ ತಾಲೂಕಿನ ಚುಂಚನಕಟ್ಟೆ ಫಾಲ್ಸ್ ನಲ್ಲಿ ಕೋಚ್ಚಿ ಹೋಗಿದ್ದ ಮೈಸೂರಿನ ಸಿಎಫ್ಟಿಆರ್ಐನ ಹಿರಿಯ ವಿಜ್ಞಾನಿ ಸೋಮಶೇಖರ್ ಶವ ಇಂದು ಬೆಳಗ್ಗೆ ಪತ್ತೆಯಾಗಿದೆ. ವಿಕೆಂಡ್ ಹಿನ್ನಲೆಯಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ಚುಂಚನಕಟ್ಟೆ ಫಾಲ್ಸ್ಗೆ ತೆರಳಿದ್ದ ಸೋಮಶೇಖರ ಅವರು. ಜಲಪಾತದಲ್ಲಿ ನೀರಾಟ ವಾಡುತ್ತಿದ್ದ ವೇಳೆ ಎಲ್ಲರೆದುರೇ ಕೊಚ್ಚಿಕೊಂಡು ಹೋಗಿದ್ದರು. ಸೋಮಶೇಖರ ಗಾಗಿ ಸತತ 16 ಗಂಟೆಗಳ ಶೋಧ ಕಾರ್ಯ ನಡೆದಿತ್ತು. ಬಳಿಕ ಅವರು ಶವವಾಗಿ ಪತ್ತೆಯಾಗಿದ್ದಾರೆ. ಕೆ.ಆರ್. ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಶವವನ್ನು ರವಾನಿಸಲಾಗಿದ್ದು, ಈ ಕುರಿತು ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

ಬೆಳಗಾವಿ: ರೋಗದಿಂದ ಬೇಸತ್ತು ವ್ಯಕ್ತಿಯೊಬ್ಬ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ. ವಿಜಯನಗರದ ನಿವಾಸಿಯಾಗಿದ್ದ ಶೈಲೇಶ್ ಜೋಶಿ(40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಈತ ಕಳೆದ ಹಲವು ದಿನಗಳಿಂದ ಲಿವರ್ ತೊಂದರೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಸೋಮವಾರ ಬೆಳಗ್ಗೆ ನೋವು ತಾಳಲಾರದೆ ಮನೆಯಲ್ಲಿದ್ದ ಲೈಸೆನ್ಸ್ ಹೊಂದಿರುವ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಸರ್ಕಾರಿ ಆಸ್ಪತ್ರೆಗೆ ನೀರು ನುಗ್ಗಿದ್ದರಿಂದ ರೋಗಿಗಳ ಪರದಾಟ

ಕೊಪ್ಪಳ : ಜಿಲ್ಲೆಯ ಗಂಗಾವತಿ ನಗರದಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಮಳೆಯ ನೀರು ನುಗ್ಗಿದ್ದರಿಂದ ರೋಗಿಗಳು ಪರದಾಡಿದರು. ಹೆರಿಗೆ ಕೊಠಡಿ ಸೇರಿದಂತೆ ಆಸ್ಪತ್ರೆಯ ಬಹುತೇಕ ವಾರ್ಡ್ ಗಳಗೆ ನೀರು ನುಗ್ಗಿದ್ದರಿಂದ ಮಳೆನೀರನ್ನು ಹೊರ ಹಾಕಲು ಆಸ್ಪತ್ರೆಯ ಸಿಬ್ಬಂದಿಗಳು ಹರಸಾಹಸ ಪಡಬೇಕಾಯಿತು. ಇನ್ನು ಗಂಗಾವತಿಯ ಹಿರೇಜಂತಗಲ್ 27 ನೇ ವಾರ್ಡ್ ನಲ್ಲಿ ಕೂಡ ಭಾರೀ ಮಳೆಯಿಂದ ಚರಂಡಿ ನೀರು ಸುಮಾರು ಮನೆಗಳಿಗೆ ನುಗ್ಗಿದ್ದು ಮನೆ ಮಂದಿಯಲ್ಲಕೆಲಕಾಲ ಅತಂತ್ರರಾಗಿದ್ದರು. ನೀರು ಹೊರ ಹಾಕುವಲ್ಲಿ ಹರಸಾಹಸ ನಡೆಸಿದರು.. ಇಷ್ಟೆಲ್ಲಾ ಅವಾಂತರವಾದರೂ ಯಾವೊಬ್ಬ ಅಧಿಕಾರಿಯೂ ಸಹ ಬಡಾವಣೆಗೆ ಭೇಟಿ ನೀಡ್ತಾ ಇಲ್ಲ ಎಂದುಸ್ಥಳೀಯರು ಹಿಡಿಶಾಪ ಹಾಕಿದರು. .ಮಳೆ ಬಂದಾಗಲೆಲ್ಲ ಚರಂಡಿ ನೀರು ಜೊತೆ ಮಳೆ ನೀರು ಮನೆಗಳಿಗೆ ನುಗ್ಗುತ್ತಿದ್ದು ನಿದ್ದೆ ಮಾಡ್ದೆ ಮಕ್ಕಳೊಂದಿ ನೀರು ಹೊರ ಹಾಕ್ತಾ ಜಾಗರಣೆ ಮಾಡುವಂತ ಸ್ಥಿತಿ ನಿರ್ಮಾಣವಾಗಿತ್ತು ಎಂದು ನೊಂದ ಮಹಿಳೆಯಾದ ಲಕ್ಕಮ್ಮ. ಕಣ್ಣೀರು ಹಾಕಿದರು.

ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

ಬೆಂಗಳೂರು: ಪ್ರೇಮಿಗಳಿಬ್ವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಲ್ಲಿ ನಡೆದಿದೆ. ರಾಮಮೂರ್ತಿ ನಗರದ ಮಂಜುನಾಥ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನಾಗೇಶ್ ಹಾಗೂ ಮುಗಳಬೆಲೆ ಗ್ರಾಮದ ಭಾರತಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳಾಗಿದ್ದಾರೆ. ಆಡುಗೊಡಿಯ ಬಾಷ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್ ಮತ್ತು ಭಾರತಿ 10 ವರ್ಷಗಳಿಂದ ಪರಸ್ಪರ ತುಂಬಾ ಗಾಢವಾಗಿ ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗಿ ರಾಮಮೂರ್ತಿನಗರದಲ್ಲಿ ಒಟ್ಟಿಗೆ ವಾಸ ಮಾಡುತ್ತಿದ್ದರೂ ಎನ್ನಲಾಗಿದೆ. ಆದರೂ ನಾಗೇಶ್ಗೆ ಬಲವಂತದಿಂದ ಬೇರೊಂದು ಮದುವೆ ಮಾಡಿದ್ದರೂ ಪತ್ನಿಯ ಜೊತೆಗೆ ನಾಗೇಶ ವಾಸವಾಗಿರದೆ, ಭಾರತಿಯ ಜೊತೆಗೆ ವಾಸವಾಗಿದ್ದ. ಇದರಿಂದಾಗಿ ನಾಗೇಶ್ ವಿರುದ್ಧ ಆತನ ಪತ್ನಿ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಈ ವಿಚಾರ ದಿಂದ ಬೇಸತ್ತು ನಾಗೇಶ್ ಮತ್ತು ಭಾರತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದು ತಮ್ಮ ಗೆಳೆಯರಿಗೆ ರವಾನಿಸಿದ್ದಾರೆ. ಘಟನೆ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಕ್ಕಳ ಕಳ್ಳನೆಂದು ಅಮಾಯಕನಿಗೆ ಥಳಿಸಿದ ಗ್ರಾಮಸ್ಥರು

ಹುಬ್ಬಳ್ಳಿ : ಮಕ್ಕಳೆಂದು ಭಾವಿಸಿ ಅಮಾಯಕನಿಗೆ ಗ್ರಾಮಸ್ಥರು ಥಳಿಸಿದ ಘಟನೆ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೂಲಿ ಕೆಲಸಕ್ಕೆಂದು ಬಂದಿದ್ದ ಆಂದ್ರಪ್ರದೇಶ ಮೂಲದ ರಾಜು ಎಂಬಾತ ಥಳಿತಕ್ಕೊಳಗಾದ ಯುವಕ. ಕಟ್ಟಡ ಕಟ್ಟುವ ಕೂಲಿ ಕೆಲಸಕ್ಕೆಂದು ಬಂದಿದ್ದ ಈ ಅಮಾಯಕ ಯುವಕನ ಮೇಲೆ ಗ್ರಾಮಸ್ಥರು ಅನುಮಾನಗೊಂಡು ಊರ ಅಗಸಿಯ ಕಂಬಕ್ಕೆ ಕಟ್ಟಿ ಮನಸೋ ಇಚ್ಚೆ ಥಳಿಸಿದ್ದಾರೆ. ಈತನಿಗೆ ಭಾಷೆ ತೊಂದರೆಯಿಂದಾಗಿ ಮಾತನಾಡಲು ಸಾಧ್ಯವಾಗಿಲ್ಲ. ಹೀಗಾಗಿ ಬ್ಯಾಹಟ್ಟಿ ಗ್ರಾಮಸ್ಥರು ಮಕ್ಕಳ ಕಳ್ಳ ಎಂದು ಅನುಮಾನಗೊಂಡು ಯುವಕನನ್ನು ಬಡಿದಿದ್ದಾರೆ. ಆ ಬಳಿಕ ಇತನನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಿಗೆ ಬಂದಿದೆ.

ಬಸ್ ಸಂಚಾರಕ್ಕೆ ಒತ್ತಾಯಿಸಿ ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ

ಧಾರವಾಡ : ನವಲಗುಂದ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಶಿರೂರ ಗ್ರಾಮಕ್ಕೆ ಹೆಚ್ಚಿನ ಬಸ್ ಸಂಚಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಾರಿಗೆ ಇಲಾಖೆ ಕ್ಯಾರೆ ಎಂದಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ರಾಜ್ಯಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರು ರಸ್ತೆಯಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಶಿರೂರ ಗ್ರಾಮದ ರೈತ ಮುಖಂಡ ಮಲ್ಲಿಕಾರ್ಜುನ ಗೌಡ ಬಾಳನಗೌಡ ನೇತೃತ್ವದಲ್ಲಿ ಹತ್ತಾರು ಬಸ್ ಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಬೇಕು ಎಂದು ಬಿಗಿ ಪಟ್ಟು ಹಿಡಿದಿದ್ದಾರೆ. ಪ್ರತಿಭಟನೆಗೆ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಗ್ರಾಮಸ್ಥರು ಸಾಥ್ ನೀಡಿದ್ದು ವಿಶೇಷವಾಗಿದೆ.

ವಿಶ್ವ ಪರಿಸರ ದಿನಾಚರಣೆ ಗಾಗಿ ಕಚೇರಿ ಸ್ವಚ್ಛಗೊಳಿಸಿದ ಅಧಿಕಾರಿಗಳು

ಧಾರವಾಡ : ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಧಾರವಾಡದಲ್ಲಿ ಹಿರಿಯ ಅಧಿಕಾರಿಗಳು ತಮ್ಮ ಕಚೇರಿ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಇತರರಿಗೆ ಮಾದರಿಯಾದರು. ಹೌದು ಧಾರವಾಡ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ಸ್ವತಃ ಕಸ ಗೂಡಿಸುವ ಧಾರವಾಡ ಉಪವಿಭಾಗಾಧಿಕಾರಿ ಜಯಮಾಧವ್, ತಹಸೀಲ್ದಾರ್ ಪ್ರಕಾಶ ಕುದರೆ ಹಾಗೂ ಸಿಬ್ಬಂದಿ ಗೂಡಿಸುವ ಮೂಲಕ ಸ್ವಚ್ಛಗೊಳಿಸಿದರು. ಇದರಿಂದಾಗಿ ತಹಸೀಲ್ದಾರ್ ಕಚೇರಿ ಆವರಣ ಲಕ ಲಕ ಕಂಗೊಳಿಸುತ್ತಿತ್ತು. ಅಲ್ಲದೆ, ಕಚೇರಿ ಮೇಲೆ ಬಿದ್ದಿದ್ದ ಗಿಡದ ಎಲೆಗಳನ್ನುಕೂಡ ತೆರವು ಗೊಳಿಸಿದ್ದು ವಿಶೇಷವಾಗಿತ್ತು.

ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಗಳಿಗೆ ಬಸ್ ಡಿಕ್ಕಿ : ಹಲವು ಬೈಕ್ ಗಳು ಜಖಂ

ಧಾರವಾಡ : ರಸ್ತೆ ಬದಿ ನಿಲ್ಲಿಸಿದ ಬೈಕ್ ಗಳಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಹಲವು ಬೈಕ್ ಗಳು ಜಖಂಗೊಂಡ ಘಟನೆ ಧಾರವಾಡದಲ್ಲಿ ನಡೆದಿದೆ. ರಾಜ್ಯ ರಸ್ತೆ ಸಾರಿಗೆ ಬಸ್ ಚಾಲಕನ ನಿರ್ಲಕ್ಷ್ಯದಿಂದಾಗಿ ಈ ರ್ದುಘಟನೆ ನಡೆದಿದ್ದು, ಮಳೆ ಬರುವ ವೇಳೆ ರಸ್ತೆ ಬದಿ ನಿಲ್ಲಿಸಿದ ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್ ಗಳು ಹಾನೀಗೀಡಾಗಿವೆ. ಧಾರವಾಡ ನಗರದ ಸವದತ್ತಿ ರೋಡ್ ನಲ್ಲಿ ಈ ಘಟನೆ ನಡೆದಿದ್ದು, ಬಸ್ ಗುದ್ದಿದ ರಭಸಕ್ಕೆ ಮೂರು ಬೈಕ್ ಗಳು ನುಜ್ಜುಗುಜ್ಜಾಗಿವೆ. ಸವದತ್ತಿಯಿಂದ ಧಾರವಾಡಕ್ಕೆ ಬರುತ್ತಿದ್ದ ಬಸ್ ಚಾಲಕನ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಬೈಕ್ ಸವಾರರು ಆರೋಪಿಸಿದ್ದಾರೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಜನ್ನತ್ ನಗರದಲ್ಲಿ ಮನೆಗಳಿಗೆ ನುಗ್ಗಿದ ನೀರು : ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ ಜನತೆ

ಧಾರವಾಡ : ಧಾರಾಕಾರ ಮಳೆಗೆ ಜನ್ನತ್ ನಗರದ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಅನೇಕ ಕುಟುಂಬಗಳು ಸಂಗ್ರಹಿಸಿಟ್ಟಿದ್ದ ಕಾಳು ಕಡಿ ಹಾನೀಗೀಡಾಗಿವೆ. ಇದರಿಂದ ಬಡ ಕುಟುಂಬಗಳು ಕಂಗಾಲಾಗಿವೆ. ಇಷ್ಟೆಲ್ಲಾ ಅವಾಂತರಗಳಾದರೂ ಯಾರೊಬ್ಬ ಜನಪ್ರತಿನಿಧಿ ಸ್ಥಳಕ್ಕೆ ಭೇಟಿ ನೀಡಿಲ್ಲ. ನಮ್ಮ ಗೋಳು ಕೇಳುವವರಾರು ಎಂದು ಪ್ರಶ್ನಿಸಿ, ದಿಢೀರ್ ರಸ್ತೆನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಘಟನಾ ಸ್ಥಳಕ್ಕೆ ದೌಡಾಯಿಸಿದ ವಿದ್ಯಾಗಿರಿಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಹಾಂತೇಶ ಹೊಸಪೇಟೆ ಹಾಗೂ ಸಂಚಾರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮುರುಘೇಶ ಚನ್ನಣ್ಣವರ ಪ್ರತಿಭಟನಾಕಾರರ ಮನವೊಲಿಸಿಪ್ರತಿಭಟನೆ ಕೈ ಬಿಡುವಂತೆ ಮನವೊಲಿಸಿದರು. ಇದರಿಂದ ಪ್ರತಿಭಟನಾಕಾರರು ತಮ್ಮ ರಸ್ತೆ ತಡೆಯನ್ನು ಹಿಂದಕ್ಕೆ ಪಡೆದರು. ಇದರಿಂದಾಗಿ ಅರ್ಧಗಂಟೆಗೂ ಅಧಿಕ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.

ರಘು ಆಚಾರ್ ಗೆ ಸಚಿವ ಸ್ಥಾನ ನೀಡಲು ವಿಶ್ವಕರ್ಮ ಸಮಾಜ ಒತ್ತಾಯ

ಧಾರವಾಡ : ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಅವರಿಗೆ ಸಮ್ಮೀಶ್ರ ಸರಕಾರದಲ್ಲಿ ಸಚಿವ ಸ್ಥಾನನೀಡಬೇಕು ಎಂದು ಸಮಗ್ರ ಕರ್ನಾಟಕ ಶ್ರೀ ವಿಶ್ವಕರ್ಮ ಸಮಾಜ ಆಗ್ರಹಿಸಿದೆ. ಧಾರವಾಡದಲ್ಲಿ ಭಾನುವಾರ ಸಮಾಜದ ಮುಖಂಡರಾದ ವಸಂತಅರ್ಕಾಚಾರ್, ವಿನಾಯಕ ಬಡಿಗೇರ ಸೇರಿದಂತೆ ಅನೇಕ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ರಾಜ್ಯದಲ್ಲಿ 40 ಲಕ್ಷಕ್ಕೂ ಅಧಿಕ ವಿಶ್ವಕರ್ಮ ಸಮಾಜದ ಜನರಿದ್ದು, ಈವರೆಗೆ ಯಾವುದೇ ಸ್ಥಾನಮಾನಗಳು ನೀಡಿಲ್ಲ. ಹೀಗಾಗಿ ಈ ಬಾರಿ ಸಚಿವ ಸ್ಥಾನ ನೀಡುವ ಮೂಲಕ ಸಮಾಜಕ್ಕೆ ನ್ಯಾಯನೀಡಬೇಕು ಎಂದು ಒತ್ತಾಯಿಸಿದರು. ವಿಶ್ವಕರ್ಮ ಸಮಾಜದ ಏಕೈಕ ಪ್ರತಿನಿಧಿಗೆ ಸರಿಯಾದ ಸ್ಥಾನಮಾನ ನೀಡಬೇಕು. ಆ ಮೂಲಕ ಸಾಮಾಜಿಕ ನ್ಯಾಯನೀಡಬೇಕು ಎಂದರು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸುವರ್ಣ ಪತ್ತಾರ, ಸಂತೋಷ ಬಡಿಗೇರ, ರಮೇಶ ಶಿರೋಮನಿ, ಪುನೀತ ಬಡಿಗೇರ ಉಪಸ್ಥಿತರಿದ್ದರು.

ಹಂಗರಕಿ ದೇಸಾಯಿ ಮನೆತನದ ವನವಾಸ ಮುಕ್ತಗೊಳಿಸಿದ ಬಿಜೆಪಿ

ಧಾರವಾಡ : ಹಂಗರಕಿ ದೇಸಾಯಿ ಮನೆತನಕ್ಕೆ ಅಂಟಿದ್ದ ೨೯ ವರ್ಷಗಳ ವನವಾಸವನ್ನು ಭಾರತೀಯ ಜನತಾ ಪಕ್ಷ ಮುಕ್ತಗೊಳಿಸಿದೆ ಎಂದು ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಹೇಳಿದರು. ಅವರು ಮತದಾರರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಧಾರವಾಡ ಗ್ರಾಮೀಣ-೭೧ರಲ್ಲಿ ೮೫ ಸಾವಿರಕ್ಕೂ ಅಧಿಕ ಮತಗಳನ್ನು ನೀಡಿ ೨೦ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ ಇತಿಹಾಸ ನಿರ್ಮಿಸಿದ ಮತದಾರರಿಗೆ ಹಾಗೂ ಶ್ರಮಿಸಿದ ಕಾರ್ಯಕರ್ತರಿಗೆ ಕೃತಜ್ಞನೆಗಳು ಎಂದರು. ಲೋಕಸಭಾ ಚುನಾವಣೆ ಕುರಿತಂತೆ ಜೆಡಿಎಸ್ ಹಾಗೂ ಕಾಂಗ್ರೆಸ್ ಶೇಖ್ ಮಹ್ಮದ್ ಲೆಕ್ಕಚಾರ ಮಾಡುತ್ತಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಖ್ಯಾ ಹೆಚ್ಚಿಸಿದ ನರೇಂದ್ರ ಮೋದಿ ಅವರ ಬೆಂಗಾವಲಿಗೆ ಕರ್ನಾಟಕದ ಜನಮತ ನಿಲ್ಲಬೇಕಿದೆ. ಹೀಗಾಗಿ ಬರುವ ಚುನಾವಣೆಯಲ್ಲಿ ಪ್ರಹ್ಲಾದ್ ಜೋಶಿ ಅವರನ್ನು ೨.೧೫ ಲಕ್ಷ ಮತಗಳಿಂದ ಗೆಲ್ಲಿಸಬೇಕು ಎಂದು ಶಾಸಕ ಅಮೃತ ದೇಸಾಯಿ, ಕೋರಿದರು. ನಾನು ಕ್ಷೇತ್ರದ ಶಾಸಕನಲ್ಲ. ಜನರ ಸೇವಕ. ಮುಂದೆ ಮೋದಿ ಪ್ರಧಾನಿಯಾಗಲಿ. ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿ. ಉತ್ತಮ ಮಳೆ-ಬೆಳೆಯಿಂದ ರೈತರ ಬಾಳು ಹಸನಾಗಲಿ ಎಂದು ಪ್ರಾರ್ಥಿಸಿದರು. ಸಂಸದ ಪ್ರಲ್ಹಾದ ಜೋಶೀಮಾತನಾಡಿ, ಧಾರವಾಡ ಗ್ರಾಮೀಣ ಕ್ಷೇತ್ರ ಹೆಚ್ಚು ವಿಶ್ಲೇಷಣೆಗೆ ಒಳಗಾಗಿದೆ. ಇಲ್ಲಿ ಪ್ರಜಾಪ್ರಭುತ್ವ ಗೆದ್ದಿದೆ. ನಿರ್ಭಿತಿಯಿಂದ ಜನ ಬಿಜೆಪಿಗೆ ಮತಹಾಕಿದ್ದಾರೆ. ಮತದಾರರ ಮನಸ್ಸಿಗೆ ಬಿಜೆಪಿ ನಾಯಕರುಗಳು ಸೋತಿದ್ದಾರೆ. ಕ್ಷೇತ್ರದ ಅಭಿವೃದ್ಧಿ, ರೈತರ ಆದಾಯ, ಯುವಕರಿಗೆ ಉದ್ಯೋಗ ಒದಗಿಸುವ ಕೆಲಸವನ್ನು ನೂತನ ಶಾಸಕರಾದ ಅಮೃತ ದೇಸಾಯಿ ಮಾಡಲಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ ವಿನಯ ಕುಲಕರ್ಣಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಶೆಟ್ಟರ್

ಧಾರವಾಡ : ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವ ಮೂಲಕ ಸಮಾಜ ಒಡೆಯುವ ಕೆಲಸ ಮಾಡದವರಿಗೆ ಕ್ಷೇತ್ರದ ಜನತೆ ತಕ್ಕಪಾಠ ಕಲಿಸಿದ್ದಾರೆ. ಜಿಲ್ಲೆಯ ಇಬ್ಬರು ಸಚಿವರನ್ನು ಮತದಾರರು ಮನೆಗೆ ಕಳಿಸುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ ಶೆಟ್ಟರ್ ಮಾಜಿ ಸಚಿವರಾದ ವಿನಯ ಕುಲಕರ್ಣಿಹಾಗೂ ಸಂತೋಷ ಲಾಡ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಅವರು ಭಾನುವಾರ ನಗರದ ಆನಂದ ಮುಗದಮ್ ಕಲ್ಯಾಣ ಮಂಟಪದಲ್ಲಿ ನಡೆದ ಧಾರವಾಡ ಗ್ರಾಮೀಣ-೭೧ರ ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಧರ್ಮ ಒಡುಕರಿಗೆ ಮತದಾರರು ಮನೆಯ ದಾರಿ ತೋರಿಸಿದ್ದಾರೆ. ೧೦೪ ಕ್ಷೇತ್ರ ಗೆದ್ದರೂ, ಬಿಜೆಪಿಗೆ ಅಧಿಕಾರ ನಡೆಸಲು ಬಿಡದವರಿಗೆ ೨೦೧೯ರ ಲೋಕಸಭಾ ಚುನಾಚಣೆಯಲ್ಲಿ ಮತದಾರರು ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಮುಂದುವರೆದ ಮಳೆರಾಯನ ಅಟ್ಟಹಾಸ

ಧಾರವಾಡ: ಧಾರವಾಡ ಜಿಲ್ಲೆಯಾದ್ಯಂತ ಭಾನುವಾರವೂ ಮಳೆರಾಯನ ಅಟ್ಟಹಾಸ ಮುಂದುವರೆದಿದೆ. ಜಿಲ್ಲೆಯ ವಿವಿಧೆಡೆ ಸುರಿದ ಧಾರಾಕಾರಾ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿದ್ದರೆ, ಕೆಲವಡೆ ಸೇತುವೆ ತುಂಬಿ ಹರಿದಿವೆ. ಧಾರವಾಡ ತಾಲೂಕಿನ ಶಿವಳ್ಳಿ, ಹೆಬ್ಬಳ್ಳಿ, ಉಪ್ಪಿನ ಬೆಟಗೇರಿ, ಕಲ್ಲೂರ ಸೇರಿದಂತೆ ಅನೇಕ ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾದ ಪರಿಣಾಮ ನೆರೆ ಬಂದಿದೆ. ತಾಲೂಕಿನ ಉಪ್ಪಿನ ಬೆಟಗೇರಿಯಿಂದ ಹನುಮನಹಾಳಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ನೀರು ತುಂಬಿ ಹರಿದಿದೆ. ಇದರಿಂದಾಗಿ ಸೇತುವೆ ಕೂಡ ಜಲಾವೃತಗೊಂಡಿತ್ತು. ಬೈಕ್ ಸವಾರರು ಅದರಲ್ಲೇ ದಾಟಿ ಹೋಗುತ್ತಿದ್ದ ಭಯಾನಕ ದೃಶ್ಯಗಳು ಕಂಡು ಬಂದವು. ಆ ಮಾರ್ಗ ಕೆಲ ಕಾಲ ಸಂಪೂರ್ಣ ಬಂದ್ ಆಗಿತ್ತು.ಇದಲ್ಲದೆ, ಧಾರವಾಡದ ಜನ್ನತ್ ನಗರದಲ್ಲಿ ಅನೇಕ ಮನೆಗಳಿಗೆ ನೀರು ನುಗ್ಗಿದ್ದ ಪರಿಣಾಮ ಮನೆಯಲ್ಲಿನ ನೀರು ಹೊರ ಹಾಕಲು ಸ್ಥಳೀಯರು ಪರದಾಡಬೇಕಾಯಿತು.

ಕಾಂಗ್ರೆಸ್ ನ ಕೊನೆ ದಿನಗಳು ಆರಂಭ

ಧಾರವಾಡ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮುಳುಗುವ ಹಂತದಲ್ಲಿದೆ. ಅದು ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. ಸಣ್ಣ ಮೀನನ್ನು ದೊಡ್ಡ ಮೀನು ನುಂಗುವ ದೈನಿಸಿ ಸ್ಥಿತಿ ಬಂದಿದೆ ಎಂದು ಧಾರವಾಡ ಸಂಸದ ಪ್ರಲ್ಹಾದ ಜೋಶಿ ಲೇವಡಿ ಮಾಡಿದ್ದಾರೆ. ಅವರು ಭಾನುವಾರ ನಗರದಲ್ಲಿಶಾಸಕ ಅಮೃತದೇಸಾಯಿ ಅವರುಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡುಸುದ್ದಿಗಾರರೊಂದಿಗೆ ಮಾತನಾಡಿದರು. ಸಿದ್ದರಾಮಯ್ಯ ಕಾಂಗ್ರೆಸನ ಕೊನೆ ಮುಖ್ಯಮಂತ್ರಿ ಎಂಬುದು ರುಜುವಾತಾಗಿದೆ. ಕುಮಾರಸ್ವಾಮಿ ಹಾಗೂ ದೇವೇಗೌಡರು ಸೇರಿ ಮೊದಲು ಕಾಂಗ್ರೆಸ್ ನುಂಗುತ್ತಾರೆ. ಆನಂತರ ಸರಕಾರ ಪತನ ಆಗುತ್ತದೆ. ಈಗಾಗಲೇ ಅನೇಕ ಕಾಂಗ್ರೆಸ್ ಮುಖಂಡರು ಭ್ರಮನಿರಸನ ಆಗಿದ್ದಾರೆ. ರಾಹುಲ್ ಗಾಂಧಿ ಅವರಿಗೆ ವ್ಯವಹಾರ ರಾಜಕಾರಣ ಗೊತ್ತಿಲ್ಲ. ಹೀಗಾಗಿ ಅವರೇ ಸ್ವತಃ ಅವರ ಪಕ್ಷವನ್ನುಮುಗಿಸುತ್ತಿದ್ದಾರೆಎಂದು ಸಂಸದ ಜೋಶಿ ಲೇವಡಿ ವ್ಯಂಗ್ಯವಾಡಿದರು.

ಈಜಲು ತೆರಳಿದ್ದ ಮೂವರು ಮಕ್ಕಳು ನೀರು ಪಾಲು

ಶಿವಮೊಗ್ಗ: ಈಜಲು ತೆರಳಿದ್ದ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಶಿವಮೊಗ್ಗ ತಾಲೂಕಿನ ತಮ್ಮಡಿಹಳ್ಳಿ ಗ್ರಾಮದ ಜಂಗ್ಲಿ ಕೆರೆಯಲ್ಲಿ ನಡೆದಿದೆ. ತಮ್ಮಡಿಹಳ್ಳಿಯ ವಸಂತ್, ಚಿರಂತ್ ಹಾಗೂ ಅಜೇಯ ಮೃತ ಬಾಲಕರಾಗಿದ್ದು, ಭಾನುವಾರ ರಜಾ ದಿನವಾದ ಹಿನ್ನಲೆಯಲ್ಲಿ ಈ ಮೂವರು ಸ್ನೇಹಿತರು ಕೆರೆಗೆ ಈಜಲು ಹೋಗಿದ್ದಾಗ ಈ ದುರಂತ ಸಂಭವಿಸಿದೆ. ಭಾರೀ ಮಳೆಯಿಂದಾಗಿ ಕೆರೆಗೆ ಹೆಚ್ಚಿನ ನೀರು ಬಂದಿತ್ತು. ನೀರಿನ ಆಳ ಅರಿಯದೇ ಕೆರೆಗಿಳಿದಿದ್ದ ಮೂವರು ಬಾಲಕರು ಹಾರವಾಗಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ವಿದ್ಯುತ್ ತಂತಿ ತುಳಿದು ಇಬ್ಬರು ಯುವಕರು ಸಾವು

ಬೆಂಗಳೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದ ಪರಿಣಾಮ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ ಘಟನೆ ಹೆಸರಘಟ್ಟದ ದಾಸೇನಹಳ್ಳಿಯಲ್ಲಿ ನಡೆದಿದೆ. ಮುನಿರಾಜು (20) ಮತ್ತು ರವಿ (18) ಎಂಬ ಯುವಕರೇ ಮೃತ ರ್ದುದೈವಿಗಳು. ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದವು. ಈ ಕುರಿತಂತೆ ದಾಸೇನಹಳ್ಳಿಯ ಗ್ರಾಮಸ್ಥರು ಬೆಸ್ಕಾಂ ಕಚೇರಿಗೆ ಮಾಹಿತಿ ನೀಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು ಎಂದು ಮನವಿ ಮಾಡಿದ್ದರು. ಆದರೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೋಟಕ್ಕೆ ಹುಲ್ಲು ತರಲೆಂದು ಹೋಗಿದ್ದಾಗ ಕೆಳಗೆ ಬಿದ್ದ ವಿದ್ಯುತ್ ತಂತಿ ತುಳಿದು ಮುನಿರಾಜು ಹಾಗೂ ರವಿ ಮೃತಪಟ್ಟಿದ್ದಾರೆ. ಘಟನೆ ಖಂಡಿಸಿ ಹೆಸರುಘಟ್ಟದ ಗ್ರಾಮಸ್ಥರು ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ಆರಂಭಿಸಿದ್ದಾರೆ. ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸರು, ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎರಡು ತಿಂಗಳ ಬಾಣಂತಿ ಸಾವು

ದಾವಣಗೆರೆ : ಎರಡು ತಿಂಗಳ ಬಾಣಂತಿಯೊಬ್ಬಳ್ಳು ಚಿಕಿತ್ಸೆ ಫಲಿಸದೆ ಸಾವನ್ನಪಿದ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿನಡೆದಿದೆ. ಜ್ಯೋತಿ ಎಂಬ ಬಾಣಂತಿಯೇ ಸಾವನ್ನಪ್ಪಿದ ಮಹಿಳೆಯಾಗಿದ್ದಾಳೆ. ಶ್ರೀರಾಮ ನಗರ ನಿವಾಸಿ ಆಗಿದ್ದ ಜ್ಯೋತಿ ಮೂರು ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಇದರಿಂದಾಗಿ ಎರಡು ತಿಂಗಳ ಮಗು ತಾಯಿ ಇಲ್ಲದ ತಬ್ಬಲಿಯಾದಂತಾಗಿದೆ. ಆಕೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯಯೇ ಕಾರಣ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ. ಅಲ್ಲದೆ, ಆಕೆಯ ಸಾವಿಗೆ ನ್ಯಾಯ ನೀಡಬೇಕು ಎಂದು ಮೃತ ಜೋತಿ ಸಂಬಂಧಿಕರು ಆಗ್ರಹಿಸಿದ್ದು, ಆಸ್ಪತ್ರೆಯ ವೈದ್ಯರ ವಿರುದ್ದ ಅಸಮದಾನ ಹೊರ ಹಾಕಿದ್ದಾರೆ.

ಬೇಸರದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಎಂದ ಪಾಟೀಲ

ಹುಬ್ಬಳ್ಳಿ : ಉತ್ತರ ಕರ್ನಾಟಕ ಭಾಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿಲ್ಲ. ಹೀಗಾಗಿ ನನ್ನ ಮನಸ್ಸಿಗೆ ನೋವಾಗಿದ್ದರಿಂದ ನಾನು ರಾಜೀನಾಮೆ ನೀಡಿದ್ದೇನೆ. ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ್ ಹೇಳಿಕೆ ನೀಡಿದ್ದಾರೆ. ಅವರು ಭಾನುವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಹಳಷ್ಟು ನಂಬಿಕೆಯಿಂದ ನನಗೆ ಕಾಂಗ್ರೆಸ್ ಹೈಕಮಾಂಡ್ ಉತ್ತರ ಕರ್ನಾಟಕ ಜವಾಬ್ದಾರಿ ನೀಡಿತ್ತು.ಆದ್ರೆ ನಿರೀಕ್ಷೆ ಮಟ್ಟದಲ್ಲಿ ನಾವು ಗೆಲ್ಲುವ ಸಾಧಿಸಿಸಲು ಆಗಿಲ್ಲ ಎಂದು ನೋವು ತೋಡಿಕೊಂಡರು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕದಲ್ಲಿ ಸ್ಪರ್ಧೆ ಮಾಡಿದ್ರೆ ಹೆಚ್ಚು ಸೀಟು ಬರ್ತಾವೆ ಅಂತಾ ಅವರಿಗೆ ಆಹ್ವಾನ ನೀಡಿದ್ದೆ.ಆದರೆ ದುರ್ದೈವದಿಂದ ಉತ್ತರ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಬರಲಿಲ್ಲಾ. ಹೀಗಾಗಿ ರಾಜೀನಾಮೆ ಕೊಟ್ಟಿದ್ದೇನೆ ಎಂದರು. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ.ಹಾಗೇನಾದ್ರೂ ಕೇಳಿದ್ರೆ ಇಂದೇ ರಾಜೀನಾಮೆ ನೀಡುತ್ತೇನೆ. ನಾನುಪಕ್ಷದ ಶಿಸ್ತಿನ ಸಿಪಾಯಿ.ಸನನ್ನಗಿಂಗ ಉತ್ತಮ ನಾಯಕರು ಆ ಹುದ್ದೇಯನ್ನ ಅಲಂಕರಿಸುತ್ತಾರೆ ಎಂದು ಸಮಜಾಯಿಸಿ ನೀಡಿದರು.

ಮನೆಯಲ್ಲಿ ಇಟ್ಟಿದ್ದ ಮೊಬೈಲ್ ಬ್ಲಾಸ್ಟ್

ಗದಗ : ಮನೆಯಲ್ಲಿ ಇಟ್ಟಿದ್ದ ಮೊಬೈಲ್ ಬ್ಲಾಸ್ಟ್ ಆದ ಪರಿಣಾಮ ಮನೆ ಮಂದಿಯೆಲ್ಲಾ ಬೆಚ್ಚಿ ಬಿದ್ದ ಘಟನೆ ಗದಗನಲ್ಲಿ ನಡೆದಿದೆ. ಗದಗ ಜಿಲ್ಲೆ ರೋಣ ತಾಲೂಕಿನ ಯೆರೆಬೇಲೇರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಇಡೀ ಗ್ರಾಮಕ್ಕೆ ಗ್ರಾಮಕ್ಕೆ ಬೆಚ್ಚಿ ಬಿದ್ದಿದೆ. ರೆಡ್ಮಿ-4A ವರ್ಷನ್ ಮೊಬೈಲ್ ಬ್ಲಾಸ್ಟ್ಆಗಿದ್ದು, ವೀರೇಶ ಹಿರೇಮಠ ಅವರು ಟೇಬಲ್ ಮೇಲೆ ಇಟ್ಟಾಗ ಬ್ಲಾಸ್ಟ್ ಆಗಿದೆ ಎನ್ನಲಾಗಿದೆ. ಇದರಿಂದಾಗಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಳಿಕ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟೇಕಾಫ್ ಆಗದ ಸಮ್ಮೀಶ್ರ ಸರಕಾರ

ತುಮಕೂರು: ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಟೀಕಿಸಿದ್ದಾರೆ. ಅವರು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು. ಜನ ಕೂಡ ಇದನ್ನು ಗಮನಿಸುತ್ತಿದ್ದು, ಚುನಾವಣೆ ಹಿನ್ನಲೆ ಸುಮ್ಮನಿದ್ದೇನೆ, ಮುಂದಿನ ದಿನಗಳಲ್ಲಿ ಸಕಾರದ ವಿರುದ್ಧ ಮತ್ತೇ ಹೋರಾಟ ಮುಂದುವರಿಸುತ್ತೇನೆ ಎಂದರು. ಅತಿ ವೃಷ್ಠಿ ಜಿಲ್ಲೆಗಳಿಗೆ ಸಿಎಂ ಈವರೆಗೆ ಭೇಟಿ ನೀಡ್ತಿಲ್ಲ. ಜೂನ್ 8ರಿಂದ ಅತಿವೃಷ್ಠಿ ಪ್ರದೇಶಗಳಿಗೆ ನಾನು ಭೇಟಿ ನೀಡಿ ವಾಸ್ತವಾಂಶಗಳನ್ನು ಸಂಗ್ರಹಿಸಿ, ಸರಕಾರಕ್ಕೆ ಚಾಟೀ ಏಟು ನೀಡಲಾಗುವುದು ಎಂದರು.

ಪಂಚಭೂತಗಳಲ್ಲಿ ಲೀನವಾದ ವೆಂಕಣ್ಣ ಕೋನರಡ್ಡಿ

ನವಲಗುಂದ : ನಿನ್ನೇ ಸಿಡಿಲು ಬಡಿದು ಸಾವನ್ನಪ್ಪಿದ್ದ ಚಿಲಕವಾಡ ಗ್ರಾಮದ ಪ್ರಗತಿಪರ ಕೃಷಿಕ ಹಾಗೂ ಮಾಜಿಶಾಸಕ ಎನ್.ಹೆಚ್. ಕೋನರಡ್ಡಿ ಅವರ ಸಹೋದರ ವೆಂಕಣ್ಣ ಕೋನರಡ್ಡಿ ಅವರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ಚಿಲಕವಾಡದ ಅವರ ಜಮೀನಿನಲ್ಲಿ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ನೆರವೇರಿಸಲಾಯಿತು. ವೆಂಕಣ್ಣ ಕೋನರಡ್ಡಿ ಅವರ ಪುತ್ರ ಸುಜಯ ಕೋನರಡ್ಡಿ ಪ್ರಾರ್ಥಿವ ಶರೀರಕ್ಕೆಅಗ್ನಿ ಸ್ಪರ್ಶ ಮಾಡಿದರು. ಆ ಬಳಿಕ ಸಹಸ್ರಾರು ಜನರ ಸಮ್ಮುಖದಲ್ಲಿ ಅವರ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಯಿತು. ಇದಕ್ಕೂ ಮುನ್ನ ಚಿಲಕವಾಡ ಗ್ರಾಮದ ಅವರ ನಿವಾಸದಲ್ಲಿ ವೆಂಕಣ್ಣ ಕೋನರಡ್ಡಿ ಅವರ ಪ್ರಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ವೆಂಕಣ್ಣನ ಅಂತಿಮ ದರ್ಶನಕ್ಕೆ ನವಲಗುಂದ ವಿಧಾನ ಸಭಾ ಕ್ಷೇತ್ರವಷ್ಟೇ ಅಲ್ಲದೆ, ಇಡೀ ಉತ್ತರ ಕರ್ನಾಟಕ ಭಾಗದಿಂದ ಜನಸಾಗರವೇ ಹರಿದುಬಂದಿತ್ತು. ಈ ವೇಳೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಚಿಲಕವಾಡ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಕೇವಲ ಮೂರು ದಿನಗಳಲ್ಲಿ 80 ಎಕರೆಪ್ರದೇಶದಲ್ಲಿ ಬಿತ್ತನೇ ಕಾರ್ಯ ಮುಗಿಸಿದ್ದ ವೆಂಕಣ್ಣ ತನ್ನ ಹೊಲದಲ್ಲಿಯೇ ಸಿಡಿಲು ಬಡಿದು ಸಾವನ್ನಪ್ಪಿರುವುದಕ್ಕೆ ಇಡೀ ರೈತ ಸಂಕುಲ ಮಮ್ಮುಲ ಮರಗಿತು. ಇದು ವಿಧಿಯ ಆಟಕ್ಕೆ ಮೂಕ ಸಾಕ್ಷಿಯಾಗಿದೆ ಎಂದು ಅನೇಕರು ಕಂಬನಿ ಮಿಡಿದರು. ಗದಗನ ತೋಂಟದಾರ್ಯಮಠದ ಡಾ. ಸಿದ್ಧಲಿಂಗ ಸ್ವಾಮೀಜಿ, ನವಲಗುಂದ ಶಾಸಕ ಶಂಕರಪಾಟೀಲ ಮುನೇನಕೊಪ್ಪ,ನರಗುಂದ ಮಾಜಿ ಶಾಸಕರಾದ ಬಿ.ಆರ್. ಯಾವಗಲ್, ಬೀಳಗಿ ಮಾಜಿ ಶಾಸಕ ಜಿ.ಟಿ. ಪಾಟೀಲ. ಕುಂದಗೋಳ ಮಾಜಿ ಶಾಸಕ ಎಂ.ಎಸ್. ಅಕ್ಕಿ, ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧೀಕಾರಿ ಸಂಗೀತಾ ಜಿ. ಸೇರಿದಂತೆ ಅನೇಕ ಗಣ್ಯರು,ರೈತ ಮುಖಂಡರು, ಹೋರಾಟಗಾರರು, ಸಹಸ್ರಾರು ಜನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಆತ್ಮಹತ್ಯೆಗೆ ಶರಣಾದ ಉದ್ಯಮಿ ಪುತ್ರಿ

ಧಾರವಾಡ : ಪ್ರತಿಷ್ಠಿತ ಉದ್ಯಮಿಯೊಬ್ಬರ ಪುತ್ರಿಯೊಬ್ಬಳು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ. ಕೆಪಿಸಿಸಿ ಸದಸ್ಯ ಹಾಗೂ ಹಿರಿಯ ವರ್ತಕ ಶಿವಶಂಕರ ಹಂಪಣ್ಣವರ ಅವರಪುತ್ರಿಯೇ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯಾಗಿದ್ದಾಳೆ. ಶಹರದ ಚರಂತಿಮಠ ಗಾರ್ಡನನಲ್ಲಿರುವ ನೀಲಗಂಗಾ ನಿವಾಸದಲ್ಲಿ ಈ ಘಟನೆ ಜರುಗಿದೆ. ಪೂರ್ಣಿಮಾ ಅಲಿಯಾಸ್ ಪ್ರೀತಿ ಶಿವಶಂಕರ ಹಂಪಣ್ಣವರ (21)ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ6 ಸೆಮ್ ನಲ್ಲಿ ಇ ಆಂಡ್ ಸಿ ಓದುತಿದ್ದ ಪ್ರೀತಿ ಮುಂದಿನ ಉನ್ನತ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ತೆರಳುವ ಕುರಿತು ತಂದೆಯೊಂದಿಗೆ ನಿನ್ನೇ ರಾತ್ರಿ ಚರ್ಚಿಸಿದ್ದಳು. ಪೋಷಕರು ಆಯ್ತು ಇಂಜಿನಿಯರಿಂಗ್ ಪದವಿ ಮುಗಿದ ಮೇಲೆ ನೋಡೋಣ ಎಂದು ಸಮಜಾಯಿಸಿ ನೀಡಿದ್ದರು. ಇಷ್ಟಕ್ಕೆ ಮನ ನೊಂದು ಪ್ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಎಂದು ಪೋಷಕರು ಕಣ್ಣೀರು ಹಾಕಿದರು. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಮರಣೋತ್ತರ ಪರೀಕ್ಷೆ ನಂತರ ಹೊಸ ಯಲ್ಲಾಪುರದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಡಿಲು ಬಡಿದುಮಾಜಿ ಶಾಸಕ ಕೋನರಡ್ಡಿ ಸಹೋದರ ಸಾವು

ನವಲಗುಂದ : ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಅವರ ಸಹೋದರ ವೆಂಕಣ್ಣ ಹನುಮರಡ್ಡಿ ಕೋನರಡ್ಡಿ(೪೮) ಶನಿವಾರ ಸಂಜೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದ ಹೊಲದಲ್ಲಿ ಬಿತ್ತನೆ ಕಾರ್ಯ ನಡೆಯುತ್ತಿದ್ದಾಗ ಅದರ ವೀಕ್ಷಣೆಗೆ ತೆರಳಿದ್ದ ವೇಳೆ ಈ ರ್ದುಘಟನೆ ನಡೆದಿದೆ. ಇಂದು ಸಂಜೆ ಸುರಿದ ಗುಡುಗು, ಸಿಡಿಲು ಸಮೇತ ಭಾರೀ ಮಳೆಗೆ ವೆಂಕಣ್ಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ನವಲಗುಂದ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ವೆಂಕಣ್ಣ ಅವರ ಅಕಾಲಿಕ ನಿಧನದಿಂದಾಗಿ ಎನ್.ಹೆಚ್. ಕೋನರಡ್ಡಿ ಹಾಗೂ ಅವರ ಕುಟುಂಬದವರ ದುಃಖದ ಕಟ್ಟೆ ಒಡೆದಿದೆ. ಇದರಿಂದಾಗಿ ಚಿಲಕವಾಡ ಗ್ರಾಮದ ಮನೆಯಲ್ಲಿ ನೀರವ ಮೌನ ಆವರಿಸಿದೆ. ವೆಂಕಣ್ಣ ಅವರ ಅಕಾಲಿಕ ನಿಧನಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಕೆ. ಪಾಟೀಲ, ವಿಧಾನ ಪರಿಷತ್ ಸದಸ್ಯ ಬಸವರಾಜ ಎಸ್. ಹೊರಟ್ಟಿ ಸೇರಿದಂತೆ ಅನೇಕರು ತೀವ್ರ ಕಂಬನಿ ಮಿಡಿದಿದ್ದಾರೆ. ಅಲ್ಲದೆ, ಕೋನರಡ್ಡಿ ಅವರಿಗೆ ದೂರವಾಣಿ ಕರೆ ಮಾಡಿ ಧೈರ್ಯ ತುಂಬಿದ್ದಾರೆ.

ಪತ್ನಿಯ ಕೈ-ಕಾಲು ಕಡಿದ ಪತಿ

ಚಿಕ್ಕಬಳ್ಳಾಪುರ: ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಮಚ್ಚಿನಿಂದ ಪತಿಯೊಬ್ಬ ಪತ್ನಿಯ ಕೈ-ಕಾಲು ಕಡಿದು ಹಾಕಿರುವ ಹೃದಯ ವಿದ್ರಾವಕ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊನ್ನಪ್ಪನಹಳ್ಳಿ ಗ್ರಾಮದ ನರಸಿಂಹಮೂರ್ತಿ ಎಂಬಾತನೇ ತನ್ನ ಎರಡನೇ ಪತ್ನಿ ನೀಲಮ್ಮ (25)ಳ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಪತಿಮಹಾಶಯ. ನೀಲಮ್ಮಳಿಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿಲಾಗಿದೆ. ಮಾರಣಾಂತಿಕ ಹಲ್ಲೆ ಮಾಡಿದನಂತರ ಪತಿ ನರಸಿಂಹಮೂರ್ತಿಯೇ ಪೊಲೀಸರಿಗೆ ಶರಣಾಗಿದ್ದು, ಮಂಚೇನಹಳ್ಳಿ ಎಸ್ಐ ಚಂದ್ರಶೇಖರ್ ನರಸಿಂಹಮೂರ್ತಿಯನ್ನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಹಣಕ್ಕಾಗಿ ಸ್ನೇಹಿತನನ್ನೇ ಕಿಡ್ನಾಪ್ ಮಾಡಿಸಿದ ಭೂಪ

ಬೆಂಗಳೂರು: ಹಣಕ್ಕಾಗಿ ತನ್ನ ಸ್ನೇಹಿತನನ್ನೇ ಕಿಡ್ನಾಪ್ ಮಾಡಿಸಿದ್ದ ಪ್ರಕರಣವನ್ನು ಭೇದಿಸುವಲ್ಲಿ ಬೆಂಗಳೂರಿನ ಹೆಬ್ಬಾಳ ಪೊಲೀಸರು ಯಶಸ್ವಿಯಾಗಿದ್ದಾರೆ. ಸಾಪ್ಟ್ವೇರ್ ಇಂಜಿನಿಯರ್ನನ್ನು ಅಪಹರಿಸಿ 50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ. ಬಂಧಿತರನ್ನು ವಾಸೀಂ, ಸಲ್ಮಾನ್, ಸುನೀಲ್ ಮತ್ತು ಸಂದೀಪ್ ಎಂದು ಗುರುತಿಸಲಾಗಿದೆ. ಮೇ 4 ರಂದು ಕಾರಿನಲ್ಲಿ ಮನೆಗೆ ಹೋಗುತ್ತಿದ್ದ ಆಂಧ್ರ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಜೀತ್ ಮಿತ್ರ ನನ್ನು ಕಿಡ್ನಾಪ್ ಮಾಡಿ ಆನಂತರ 50 ಲಕ್ಷ ಕ್ಕೆ ಬೇಡಿಕೆಯಿಡಲಾಗಿತ್ತು. ಆದರೆ 17 ಲಕ್ಷ ಆತನನ್ನು ಬಿಟ್ಟು ಕಳುಹಿಸಲಾಗಿತ್ತು. ಆನಂತರ ಅಪಹರಣಕ್ಕೊಳಗಾದ ಸಾಪ್ಟ್ ವೇರ್ ಇಂಜಿನಿಯರ್ ಜೀತ್ ಮಿತ್ರ ಈ ಕುರಿತಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಬೆನ್ನು ಹತ್ತಿದ ಪೊಲೀಸರಿಗೆ ಜೀತ್ ಮಿತ್ರಾನ ಸ್ನೇಹಿತ ವಾಸೀಂ ಕಿಡ್ನಾಪ್ ಪ್ರಕರಣದ ಕಿಂಗ್ಪಿನ್ ಎಂಬುದು ಬೆಳಕಿಗೆ ಬಂದಿದೆ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ತಿಳಿಸಿದ್ದಾರೆ.

ಕುಮಾರಸ್ವಾಮಿ ಪೂರ್ಣಾವಧಿ ಮುಖ್ಯಮಂತ್ರಿ : ಕೈ ಪಾಳೇಯದಲ್ಲಿ ತೀವ್ರ ಅಸಮಾಧಾನ

ಬೆಂಗಳೂರು: ಜೆಡಿಎಸ್ –ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಪೂರ್ಣಾವಧಿ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿರುವುದಕ್ಕೆ ರಾಜ್ಯ ಕಾಂಗ್ರೆಸ್ ನಲ್ಲಿ ಅಸಮಾಧಾನ ಬುಗಿಲೆದ್ದಿದೆ. ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿರುದ್ಧ ಕಾಂಗ್ರೆಸ್ ಪದಾಧಿಕಾರಿಗಳು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಕೆಪಿಸಿಸಿ ಆತ್ಮಾವಲೋಕನಾ ಸಭೆಯಲ್ಲಿ ಈ ಮಾತು ಕೇಳಿಬಂದಿದ್ದು. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ಗೆ ಹಿನ್ನಡೆಯಾಗುವ ನಿರ್ಧಾರ ಕೈಗೊಂಡ ಬಗ್ಗೆ ಅನೇಕರು ತಮ್ಮ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕೆ ತೇಪೆ ಹಾಕಿರುವ ಹಾಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಾ. ಜಿ.ಪರಮೇಶ್ವರ ಅನಿವಾರ್ಯ ಪರಿಸ್ಥಿತಿಯಲ್ಲಿ ಕೈಜೋಡಿಸಿದ್ದೀವಿ. ಆದರೆ ಇನ್ನು ಮುಂದೆ ಹಾಗಾಗದಂತೆ ನೋಡಿಕೊಳ್ಳುವ ಜವಬ್ದಾರಿ ನಿಮ್ಮ ಮೇಲಿದೆ ಎಂದು ಸಮಜಾಯಿಸಿ ನೀಡಿದ್ದಾರೆ. ಆದರೆ ಇಷ್ಟಕ್ಕೆ ತೃಪ್ತರಾಗದ ಮುಖಂಡರು ಬುಸುಗುಡುತ್ತಲೇ ಇದ್ದರು. ಇದು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಕಾದು ನೋಡಬೇಕಿದೆ.

ನೀರಲ್ಲಿ ಕೊಚ್ಚಿ ಹೋದ ಯುವಕ ಶವವಾಗಿ ಪತ್ತೆ

ಬೆಳಗಾವಿ: ಬೆಳಗಾವಿ ತಾಲೂಕಿನ ಭೂತರಾಮನ ಹಟ್ಟಿ ಗ್ರಾಮದಲ್ಲಿ ಸುರಿದ ಭಾರಿ ಮಳೆಯಿಂದ ಹಳ್ಳದ ನೀರಲ್ಲಿ ಕೊಚ್ಚಿ ಹೋಗಿದ್ದ ಯುವಕನೊಬ್ಬ ಶವವಾಗಿ ಪತ್ತೆಯಾಗಿದ್ದಾನೆ. ಇಮ್ರಾನ್ ನದಾಫ್ (25) ಹಳ್ಳದಲ್ಲಿ ಕೊಚ್ಚಿಹೋಗಿದ್ದ ಯುವಕ ನಾಗಿದ್ದಾನೆ. ಈತ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದ ನಿವಾಸಿಯಾಗಿದ್ದ. ಸಹೋದರ ಅಮೀರ್ ಜೊತೆ ಬೆಳಗಾವಿಗೆ ಬಂದಿದ್ದ ಈತ. ವಾಪಸ್ ತೆರಳುವ ಹಳ್ಳ ತುಂಬಿ ಹರಿದ ಪರಿಣಾಮ ಕೊಚ್ಚಿಕೊಂಡು ಹೋಗಿದ್ದ. ಆತನನ್ನು ಉಳಿಸಿಕೊಳ್ಳಲು ಸಹೋದರ ಅಮೀರ್ ಸಾಕಷ್ಟು ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಘಟನಾ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಳಸಿದ ಕಾಂಗ್ರೆಸ್, ಅನ್ನವಿಲ್ಲದೆ ಇದ್ದ ಜೆಡಿಎಸ್

ಬಳ್ಳಾರಿ: ಅನ್ನ ಅಳಸಿತ್ತು ನಾಯಿ ಕಾದಿತ್ತು ಎಂಬಂತೆ ಹಳಸಿದ ಕಾಂಗ್ರೆಸ್ ಪಕ್ಷ ಅನ್ನವಿಲ್ಲದೆ ಇದ್ದ ಜೆಡಿಎಸ್ ಜೊತೆಗೆ ಸೇರಿ ಸರಕಾರ ರಚನೆ ಮಾಡಿಕೊಂಡಿವೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಪಾದಿಸಿದ್ದಾರೆ. ಅವರು ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಇದು ಹಸಿದವರ ಹಳಸಿದವರ ಸರ್ಕಾರವಾಗಿದೆ ಎಂದು ಟೀಕಿಸಿದರು. ಇವರು ಅಧಿಕಾರದ ಆಸೆಗಾಗಿ ಅವರ ಜೊತೆಗೆ ಹೋಗಿದ್ದಾರೆ. ಆದರೆ ಮಂತ್ರಿಮಂಡಲ ರಚನೆ ನಂತರ ಪರಸ್ಪರ ಕಚ್ಚಾಡಿಕೊಂಡು ಈ ಸರ್ಕಾರ ಬಿದ್ದು ಹೋಗಲಿದೆ ಎಂದರು. ಇದೇ ವೇಳೆ ಬಳ್ಳಾರಿ, ಬೀದರ್, ಬೆಂಗಳೂರು, ಬಿಜಾಪುರ ಜಿಲ್ಲೆಗಳ ಮತದಾರ ನಮ್ಮ ಅಭ್ಯರ್ಥಿಗಳನ್ನು ಈ ಬಾರಿ ಹೆಚ್ಚಿನದಾಗಿ ಆಯ್ಕೆ ಮಾಡಲು ಮುಂದಾಗಲಿಲ್ಲ. ಇದರಿಂದಾಗಿ ನಮಗೆ ಸರಳ ಬಹುಮತ ಸಾಧಿಸಲು ಸಾಧ್ಯವಾಗಲಿಲ್ಲ ಎಂದರು. ಅವರು ಈ ಚುನಾವಣೆಯಲ್ಲಿ ನಮ್ಮ ಮೇಲೆ ಮುನಿಸಿಕೊಂಡಿದ್ದೇ ನಮಗೆ ಅಧಿಕಾರ ವಂಚಿತವಾಗಲು ಕಾರಣವಾಯಿತು. ನಮಗೆ ನಿರೀಕ್ಷಿತ ಮಟ್ಟದಲ್ಲಿಈ ಜಿಲ್ಲೆಗಳಲ್ಲಿ ಮತಗಳು ಬಂದಿಲ್ಲ ಎಂದ ಅವರು ಕಳೆದ 2013 ರ ಚುನಾವಣೆಯಲ್ಲಿ ಈ ಜಿಲ್ಲೆಗಳ ಕೊಡುಗೆ ಬಹಳಷ್ಟು ಇತ್ತು. ಆದರೆ ಈ ಬಾರಿ ಕಡಿಮೆ ಆಗಿದ್ದರಿಂದ ಲಿವಿಂಗ್ ಟುಗೆದರ್ ಸರಕಾರ ರಚನೆಯಾಗಿದೆ ಎಂದು ವ್ಯಂಗ್ಯವಾಡಿದರು.

ತುಂಬಿ ಹರಿಯುತ್ತಿದ್ದ ಸೇತುವೆ ಮೇಲೆ ಬಸ್ ಓಡಿಸಿದ ಚಾಲಕ

ಬಾಳೆಹೊನ್ನೂರು : ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದ್ದರೂ ಖಾಸಗಿ ಬಸ್ ಚಾಲಕ ನೀರಿನಲ್ಲಿಯೇ ಬಸ್ ಚಲಾಯಿಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರಿ ಮಳೆಯಿಂದ ಬಾಳೆಹೊನ್ನೂರು ಕಳಸ ಮಾರ್ಗದ ಮಾಲ್ಗೊಡ್ ಸೇತುವೆ ಮೇಲೆ ಈ ಘಟನೆ ನಡೆದಿದೆ. ಸೇತುವೆ ಮೇಲೆ ನೀರು ಹರಿಯುತ್ತಿದ್ದರೂ ಪ್ರಯಾಣಿಕರನ್ನು ಅದೇ ಮಾರ್ಗದಲ್ಲಿ ಕರೆದುಕೊಂಡು ಸಾಗಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ವಾಹನ ಸವಾರರು ಸೇತುವೆ ದಾಟಲು ಹೆದರುತ್ತಿದ್ದ ವೇಳೆ ಖಾಸಗಿ ಬಸ್ ಚಾಲಕ ಧೈರ್ಯದಿಂದ ನೀರಲ್ಲೇ ಬಸ್ ಚಲಾಯಿಸಿಕೊಂಡು ಹೋಗಿದ್ದಾನೆ ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ಹಲವೆಡೆ ಭಾರಿ ಮಳೆ ಮುಂದುವರೆದಿದ್ದು, ಬೆಳಗಾವಿಯಲ್ಲಿ ಯುವಕ ನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟೇ ಸ್ಪಷ್ಟ ಚಿತ್ರಣ ಹೊರಬೀಳಬೇಕಿದೆ.

ಕೆಸಿ ವ್ಯಾಲಿ ನೀರು ಬಂದುದಕ್ಕೆ ಆನಂದ ಭಾಷ್ಪ ಹರಿಸಿದ ರಮೇಶಕುಮಾರ್

ಕೋಲಾರ: ಕೋಲಾರ ತಾಲೂಕಿನ ಲಕ್ಷ್ಮೀಸಾಗರ ಕೆರೆಗೆ ಕೆಸಿ ವ್ಯಾಲಿ ನೀರು ಹರಿದುಬಂದುದ್ದಕ್ಕೆ ಕರ್ನಾಟಕ ವಿಧಾನ ಸಭೆಯ ಅಧ್ಯಕ್ಷ ರಮೇಶ್ ಕುಮಾರ್ ಗಳಗಳನೇ ಅಳುವ ಮೂಲಕ ತಮ್ಮ ಆನಂದ ಬಾಷ್ಪ ಹರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಸಿ ವ್ಯಾಲಿ ನೀರು ಕೋಲಾರಕ್ಕೆ ಹರಿದು ಬಂದಿರುವುದು ನಮ್ಮ ಪೂರ್ವಕಾಲದ ಪುಣ್ಯ. ಈ ನೀರಿಗಾಗಿ ದಶಕಗಳ ಹೋರಾಟ ನಡೆದಿದ್ದನ್ನು ಮೆಲಕು ಹಾಕಿದರು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕೋಲಾರ ಜಿಲ್ಲೆಯಲ್ಲಿ ಜಾರಿಯಾದ ಮೊಟ್ಟ ಮೊದಲ ನೀರಾವರಿ ಯೋಜನೆ ಇದಾಗಿದ್ದು, ಈ ಯೋಜನೆ ಹಿಂದೆ ರಮೇಶ್ ಕುಮಾರ್ ಅವರ ಸಾಕಷ್ಟು ಪರಿಶ್ರಮವಿರುವುದನ್ನು ಇಲ್ಲಿ ಸ್ಮರಿಸಬಹುದು.

ಮಳೆ ಹಾನಿ ಕಂಡು ದಂಗಾದ ಶಾಸಕ ಅಮೃತ ದೇಸಾಯಿ

ಧಾರವಾಡ : ಧಾರವಾಡ ತಾಲೂಕಿನಲ್ಲಿ ಮಳೆಯಿಂದ ಆದ ಅವಾಂತರವನ್ನು ಕಣ್ಣಾರೆ ಕಂಡು ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಮಮ್ಮಲ ಮರಗಿದರು. ಶನಿವಾರ ಬೆಳಗ್ಗೆ ತಾಲೂಕಿನ ಉಪ್ಪಿನಬೆಟಗೇರಿ, ಕಲ್ಲೂರ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆಯುದ್ಧಕ್ಕೂ ಬಿದ್ದ ಹತ್ತಾರು ಗಿಡಮರ, ವಿದ್ಯುತ್ ಕಂಬಗಳು ನೆಲಕ್ಕುರಳಿವೆ. ಕೋಳಿ ಫಾರಂ ಹಾನಿ ಕಂಡು ದಂಗಾಗಿ ಹೋದರು. ಬಳಿಕ ಕೋಳಿ ಫಾರಂ ಮಾಲೀಕನನ್ನು ಕರೆದು ಮಾತನಾಡಿಸಿದ ಅವರು ಯಾವುದೇ ಕಾರಣಕ್ಕೂ ಅಧೀರನಾಗಬೇಡ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಆತ್ಮಸ್ಥೈರ್ಯ ತುಂಬಿದರು. ಅಲ್ಲದೆ, ಘಟನಾ ಸ್ಥಳಕ್ಕೆ ಧಾರವಾಡ ತಹಸೀಲ್ದಾರ್ ಅವರನ್ನು ಕರೆಸಿ, ಕೂಡಲೇ ಪ್ರಕೋತಿ ವಿಕೋಪ ಪರಿಹಾರ ನಿಧಿ ಅಡಿ ಸೂಕ್ತ ಪರಿಹಾರ ನೀಡುವಂತೆ ಸೂಚಿಸಿದರು. ಬಳಿಕ ಅಮ್ಮಿನಬಾವಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ಅಮೃತ ದೇಸಾಯಿ ಅವರು ರೈತರಿಗೆ ಪೂರೈಕೆ ಆಗುತ್ತಿರುವ ಬಿತ್ತನೆ ಬೀಜ ಪರಿಶೀಲನೆ ನಡೆಸಿದರು. ಅಲ್ಲದೆ, ಕೆಲ ಕಾಲ ರೈತರೊಂದಿಗೆ ಚರ್ಚೆ ನಡೆಸಿ, ಯಾವುದೇ ತೊಂದರೆ ಆದರೂ ತಕ್ಷಣ ಸಂಪರ್ಕ ಮಾಡುವಂತೆ ಮನವಿ ಮಾಡಿದರು.

ಮೂರು ಸಾವಿರಕ್ಕೂ ಅಧಿಕ ಕೋಳಿಗಳ ಮಾರಣಹೋಮ

ಧಾರವಾಡ : ನಿನ್ನೇ ಸಂಜೆ ಸುರಿದ ಧಾರಾಕಾರ ಮಳೆಗೆ ಕೋಳಿ ಫಾರಂನಲ್ಲಿದ್ದ ಮೂರು ಸಾವಿರಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿದ್ದ ಘಟನೆ ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿಯಲ್ಲಿ ನಡೆದಿದೆ. ಮೆಹಬೂಬ್ ಸಾಬ ಹಾದಿಮನಿ ಎಂಬುವರಿಗೆ ಸೇರಿದ್ದ ಕೋಳಿ ಫಾರಂ ಸಂಪೂರ್ಣ ಹಾನಿಗೀಡಾಗಿದ್ದು, ಅಕ್ಷರಶಃ ಕೋಳಿ ಫಾರಂ ನುಜ್ಜುಗುಜ್ಜಾಗಿದೆ. ಇದರಿಂದಾಗಿ 6-7ಲಕ್ಷ ರೂ ಹಾನಿಗೀಡಾಗಿದೆ ಎಂದು ಅಂದಾಜಿಸಲಾಗಿದೆ. ಹಾನಿಗೀಡಾದ ಸ್ಥಳಕ್ಕೆ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ, ಜಿಲ್ಲಾ ಪಂಚಾಯತ್ ಸದಸ್ಯ ಕಲ್ಲಪ್ಪ ಪುಡಕಲಕಟ್ಟಿ, ತಹಸೀಲ್ದಾರ್, ಕಂದಾಯ ಅಧಿಕಾರಿಗಳುಸೇರಿದಂತೆ ಅನೇಕರು ಭೇಟಿ ನೀಡಿ ಧೈರ್ಯ ತುಂಬಿ, ಶೀಘ್ರದಲ್ಲಿಯೇ ಪರಿಹಾರ ದೊರಕುವಂತೆ ಮಾಡುವ ಭರವಸೆ ನೀಡಿದ್ದಾರೆ.

ಎರಡಕ್ಕಿಂತ ಹೆಚ್ಚು ಬಾರಿ ಸಚಿವರಾದವರಿಗೆ ಈ ಬಾರಿ ಸ್ಥಾನವಿಲ್ಲ

ಬೆಂಗಳೂರು : ಎರಡಕ್ಕಿಂತ ಹೆಚ್ಚು ಬಾರಿ ಸಚಿವರಾದವರಿಗೆ ಈ ಬಾರಿ ಸ್ಥಾನವಿಲ್ಲಎಂಬುದು ನನ್ನ ಗಮನಕ್ಕೂ ಬಂದಿದೆ ಎಂದು ಡಿಸಿಎಂ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ. ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಲವು ಬಾರಿ ಸಚಿವರಾದವರಿಗೆ ಸಮ್ಮೀಶ್ರ ಸರಕಾರದ ಅವಧಿಯಲ್ಲಿ ಸ್ಥಾನಮಾನ ಬೇಡ ಎಂಬ ಸಲಹೆಗಳು ಸಾಕಷ್ಟು ಬಂದಿವೆ ಎಂದರು. ಈ ಸಲಹೆಗಳನ್ನುಈಗಾಗಲೇ ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಆದರೂ ಅಂತಿಮ ನಿರ್ಧಾರ ಹೈಕಮಾಂಡ್ಗೆ ಬಿಟ್ಟಿದ್ದು ಎಂದ ಅವರು ಹಿರಿಯರಿಗೆ ಸಚಿವ ಸ್ಥಾನ ದೌಟು ಎಂಬ ನಿಲುವನ್ನು ವ್ಯಕ್ತಪಡಿಸಿದರು. ಇದೇ ವೇಳೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು 5 ವರ್ಷ ಸಿಎಂ ಆಗುವ ಬಗ್ಗೆ ಹೈಕಮಾಂಡ್ ತನ್ನ ನಿಲುವು ಸ್ಪಷ್ಟಪಡಿಸಿದೆ. ಹೈಕಮಾಂಡ್ ಮಾತನ್ನ ಎಲ್ಲರೂ ಗೌರವಿಸಬೇಕಿದೆ. ಈ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಸೋಲಿಗೆ ಕಾರಣ ನೀಡಿ ಎಂದ ಕೆಪಿಸಿಸಿ

ಬೆಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಸೋಲಿನ ರುಚಿ ಕಂಡ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸೋಲಿಗೆ ಪ್ರಮುಖ ಕಾರಣಗಳ ಕುರಿತು ವರದಿ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ. ಅವರು ನಗರದ ಸರ್ದಾರ್ ಪಟೇಲ್ ಭವನದಲ್ಲಿ ಕೆಪಿಸಿಸಿ ಮುಖಂಡರ ಸಭೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಪರಾಮರ್ಶೆ ನಡೆಸಿದ ಬಳಿ ಜಿಲ್ಲಾ ಸಮಿತಿಗಳಿಗೆ ಈ ಸೂಚನೆ ನೀಡಿದ್ದಾರೆ. ಸಭೆ ಬಳಿಕ ಮಾತನಾಡಿದ ಡಾ. ಜಿ. ಪರಮೇಶ್ವರ್, ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹಲವು ಕ್ಷೇತ್ರಗಳಲ್ಲಿ ಸೋತ ಹಿನ್ನೆಲೆಯಲ್ಲಿ ಜಿಲ್ಲಾ ಮುಖಂಡರಿಗೆ ಸೋಲಿನ ವರದಿ ಕೊಡುವಂತೆ ಸೂಚಿಸಲಾಗಿದೆ. ಅಲ್ಲದೆ, ಪ್ರಾಮಾಣಿಕವಾಗಿ ದುಡಿದವರ ಪಟ್ಟಿ ಕೊಡುವಂತೆ ಹೇಳಿದ್ದೇವೆ ಎಂದರು. ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆ ಬಲಪಡಿಸುವ ಜೊತೆಗೆ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ನೇಮಕ ಕುರಿತು ಚರ್ಚೆ ನಡೆಸಿದ್ದೇವೆ ಎಂದರು.

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

ಕೋಲಾರ: 45 ವರ್ಷದ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪರಿಣಾಮ ಬಾಲಕಿ ಗರ್ಭಿಣಿಯಾಗಿರುವ ಘಟನೆ ಬಂಗಾರಪೇಟೆಯಲ್ಲಿ ಬೆಳಕಿಗೆ ಬಂದಿದೆ. ಗೋವಿಂದಪ್ಪ (45) ಅತ್ಯಾಚಾರ ವೆಸಗಿದ ಆರೋಪಿಯಾಗಿದ್ದು, 13 ವರ್ಷದ ಬಾಲಕಿಗೆ ಹೆದರಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ಆಕೆ ಅನಾರೋಗ್ಯದಿಂದ ಬಳಲುತ್ತಿದ್ದಾಗ ವೈದ್ಯರ ಬಳಿ ತೆರಳಿದಾಗ ಬಾಲಕಿ ಗರ್ಭಿಣಿ ಆಗಿರುವುದು ಗೊತ್ತಾಗಿದೆ. ಈ ಕುರಿತು ಅಪಾಪ್ತ ಬಾಲಕಿಯ ತಾಯಿ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಆರೋಪಿ ಗೋವಿಂದಪ್ಪ ಪತ್ತೆಗೆ ಜಾಲ ಬೀಸಿದ್ದಾರೆ. ಈ ಘಟನೆಯಿಂದ ಬಂಗಾರಪೇಟೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಗೋವಿಂದಪ್ಪ ವಿರುದ್ಧ ಕಿಡಿ ಕಾರಿದ್ದಾರೆ. ಇಂತಹ ದುಷ್ಟರಿಗೆ ತಕ್ಕ ಶಾಸ್ತಿಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಕಳಪೆ ಬಿತ್ತನೆ ಬೀಜ ಸರಬರಾಜು ಮಾಡುವವರ ವಿರುದ್ಧ ಕಠಿಣ ಕ್ರಮ

ಬೆಂಗಳೂರು:ರಾಜ್ಯದಲ್ಲಿ ಈಗಾಗಲೇ ಮುಂಗಾರು ಬಿತ್ತನೆ ಆರಂಭಗೊಂಡಿದ್ದು, ರೈತರಿಗೆ ಕಳಪೆ ಬಿತ್ತನೆ ಬೀಜ ಸರಬರಾಜು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಎಚ್ಚರಿಸಿದ್ದಾರೆ. ಅವರು ಶನಿವಾರ ವಿಧಾನಸೌಧದಲ್ಲಿ ಕೃಷಿ, ತೋಟಗಾರಿಕೆ ಮತ್ತು ಸಕ್ಕರೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಬಾರಿ ರಾಜ್ಯದಲ್ಲಿ ಉತ್ತಮವಾದ ಮುಂಗಾರು ಮಳೆಯಾಗುತ್ತಿದೆ. ರೈತರು ಉತ್ತಮ ಬೀಜ, ಗೊಬ್ಬರಗಳ ನಿರೀಕ್ಷೆಯಲ್ಲಿದ್ದಾರೆ. ಈ ಸಂಬಂಧ ಕೃಷಿ, ತೋಟಗಾರಿಕಾ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಬೀಜ ಬಿತ್ತನೆ, ಗೊಬ್ಬರ ಪೊರೈಕೆಯಲ್ಲಿ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.

ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ದಿನೇಶ್ ಅಮೀನ್ ಮಟ್ಟು

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ಅಂಕಣಕಾರ ರೋಹಿತ್ ಚಕ್ರತೀರ್ಥ ಹತ್ಯೆಗೆ ದಿನೇಶ್ ಅಮೀನ್ ಮಟ್ಟು ಸುಪಾರಿ ನೀಡಿದ್ದರು ಎಂದು ಕೆಲ ದಿನಗಳ ಹಿಂದೆ ಭಾಸ್ಕರ್ ಪ್ರಸಾದ್ ಫೇಸ್ಬುಕ್ನಲ್ಲಿ ಬರೆದಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರಿಂದ ಭಾಸ್ಕರ್ ಪ್ರಸಾದ್ ಫೇಸ್ಬುಕ್ನಲ್ಲಿ ಸುಳ್ಳು ಆರೋಪ ಮಾಡಿ ತಮ್ಮ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಭಾಸ್ಕರ್ ಪ್ರಸಾದ್ ವಿರುದ್ಧ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದೇ ವೇಳೆ ಅಂಕಣಕಾರ ರೋಹಿತ್ ಚಕ್ರತೀರ್ಥ ನನ್ನ ಸೂಪಾರಿ ಬಗ್ಗೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲಿ. ಇಲ್ಲವಾದರೆ ಕಾನೂನು ಹೋರಾಟ ನಡೆಸುವ ಬಗ್ಗೆ ಯೋಚಿಸುತ್ತೇನೆ ಎಂದು ತಮ್ಮ ಫೇಸ್ಬುಕ್ ನಲ್ಲಿ ಬರೆದುಕೊಂಡಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಉದ್ಯಮಿ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು

ಬೆಂಗಳೂರು: ಕೆಲ ದುಷ್ಕರ್ಮಿಗಳು ಉದ್ಯಮಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ. ಬೆಂಗಳೂರಿನ ಕೋರಮಂಗಲದ ಹೊಸೂರು ರಸ್ತೆಯಲ್ಲಿರುವ ರಹೇಜಾ ಆರ್ಕೇಡ್ನಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ ಎನ್ನಲಾಗಿದೆ. ಫಾರ್ಮ್ ಇಂಡಿಯಾ ಇಂಪೆಕ್ಸ್ ಕಂಪನಿ ಮಾಲೀಕನ ಮೇಲೆ ಮೂವರು ದುಷ್ಕರ್ಮಿಗಳು ಕಚೇರಿಗೆ ನುಗ್ಗಿ ಎರಡು ಸುತ್ತು ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಉದ್ಯಮಿಯನ್ನು ಸೆಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕೋರಮಂಗಲ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದರು. ಇದೇ ವೇಳೆ ಆಗ್ನೇಯ ವಿಭಾಗದ ಡಿಸಿಪಿ ಬೋರಲಿಂಗಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಆರೋಪಿಗಳ ಪತ್ತೇಗೆ ಮೂರು ವಿಶೇಷ ತಂಡಗಳನ್ನು ನೇಮಕ ಮಾಡಲಾಗಿದೆ. ಈಗಾಗಲೇ ಆರೋಪಿಗಳ ಬಗ್ಗೆ ಕೆಲ ಮಾಹಿತಿ ದೊರೆತಿದೆ. ಶೀಘ್ರದಲ್ಲಿಯೇ ಅವರನ್ನು ಬಂಧಿಸಲಾಗುವುದು ಎಂದು ತಿಳಿಸಿದರು.

ಧರೆಗೆ ಉರುಳಿದ ಭಾರೀ ಗಾತ್ರ ಮರಗಳು, ವಿದ್ಯುತ್ ಕಂಬಗಳು

ಧಾರವಾಡ: ಶುಕ್ರವಾರ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಜನ ಜೀವನ ಅಸ್ತವ್ಯಸ್ಥಗೊಂಡಿತ್ತು. ಬೆಟಗೇರಿ- ಕಲ್ಲೂರು ರಸ್ತೆಯಲ್ಲಿ ಬೃಹತ್ ಗಾತ್ರದ ಮರಗಳು ಧರೆಗೆ ಉರುಳಿದ್ದು, ಅಂದಾಜು 15 ರಿಂದ 20 ಮರಗಳು ನೆಲಕ್ಕೆಉರುಳಿದ್ದರಿಂದ ಎರಡು ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ಎರಡು ಗ್ರಾಮಗಳ ಗ್ರಾಮಸ್ಥರು ಪರದಾಡಬೇಕಾಯಿತು. ಇದೇ ವೇಳೆ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ವಿದ್ಯುತ್ ತಂತಿಗಳು ರಸ್ತೆಮೇಲೆಯೇ ಬಿದ್ದರೂ ಅವುಗಳನ್ನು ತೆರವುಗೊಳಿಸಲು ಹೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಕಾಲಾ ಸಿನಿಮಾ ಬಿಡುಗಡೆಯಾಗುವುದಿಲ್ಲ

ಬೆಂಗಳೂರು:ತಮಿಳು ಚಿತ್ರರಂಗದ ಮೇರು ನಟ ಸುಪರ್ ಸ್ಟಾರ್ ರಜನಿಕಾಂತ್ ಅವರ ಕನ್ನಡ ವಿರೋಧಿ ಧೋರಣೆಯನ್ನು ನಾವು ಖಂಡಿಸುತ್ತೇವೆ. ಅಲ್ಲದೆ, ಕಾಲ ಚಿತ್ರ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ತಿಳಿಸಿದರು. ಅವರು ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿ, ಈ ಬಗ್ಗೆ ಸಾಕಷ್ಟು ಸಂಘಟನೆಗಳು ಮನವಿ ಸಲ್ಲಿಸಿವೆ. ಇದಕ್ಕೆ ಸಂಬಂಧಪಟ್ಟಂತೆ ಚರ್ಚೆಯನ್ನು ನಡೆಸಿದ್ದೇವೆ ಎಂದರು. ಸದ್ಯ ನೇರವಾಗಿ ನಾವು ನಿಷೇಧ ಹೇರಲು ಸಾಧ್ಯವಿಲ್ಲ. ಸದ್ಯ ವಿತರಣೆ ಹಕ್ಕು ಕೊಂಡುಕೊಳ್ಳದಿರಲು ವಿತರಕರು ತೀರ್ಮಾನಿಸಿದ್ದಾರೆ. ಚಿತ್ರಮಂದಿರದ ಮಾಲೀಕರು ಚಿತ್ರ ಪ್ರದರ್ಶನ ಮಾಡದಿರಲು ತೀರ್ಮಾನಿಸಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಕಾಲಾ ಸಿನಿಮಾ ಬಿಡುಗಡೆಯಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದರು. ಇದೇ ವೇಳೆ ಮಾತನಾಡಿದ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್, ಕಾವೇರಿ ವಿಚಾರವಾಗಿ ರಜನಿಕಾಂತ್ ಹಾಗೂ ಕಮಲ್ ಹಾಸನ್ ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ರಾಜ್ಯದಲ್ಲಿ ಅವರ ಸಿನಿಮಾಗಳನ್ನು ಬಿಡುಗಡೆಗೊಳಿಸಲು ಅವಕಾಶ ನೀಡಲ್ಲ. ಪ್ರದರ್ಶನ ಮಾಡಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಚ್ಚರಿಕೆ ನೀಡಿದರು.

ಬೆಟ್ಟಿಂಗ್ ತಪ್ಪೊಪ್ಪಿಕೊಂಡ ನಟ ಅರ್ಬಾಜ್ ಖಾನ್

ಥಾಣೆ: ಬಾಲಿವುಡ್ ನಟ,ನಿರ್ಮಾಪಕ ಅರ್ಬಾಜ್ ಖಾನ್ ಬೆಟ್ಟಿಂಗ್ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರ ಎದುರು ವಿಚಾರಣೆಗೆ ಹಾಜರಾದ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಐಪಿಎಲ್ ಸೀಸನ್ 11 ರ ವೇಳೆ ಬೆಟ್ಟಿಂಗ್ ನಡೆದಿರುವುದು ಬೆಳಕಿಗೆ ಬಂದಿತ್ತು. ಈ ವಿಚಾರವಾಗಿ ಬುಕ್ಕಿ ಸೋನು ಬಟ್ಲಾನನ್ನು ಮುಂಬೈನ ಥಾಣೆ ಪೊಲೀಸರು ಬಂಧಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ವಿಚಾರಣೆಯ ವೇಳೆ ಸೋನು ನಟ ಅರ್ಬಾಜ್ ಖಾನ್ ಹೆಸರು ಬಾಯಿಬಿಟ್ಟಿದ್ದ. ಆಗ ಪೊಲೀಸರು ಸಮನ್ಸ್ ನೀಡಿ ಅರ್ಬಾಟ್ ಖಾನ್ ನನ್ನು ವಿಚಾರಣೆಗೆಒಳಪಡಿಸಿದ್ದರು. ವಿಚಾರಣೆಗೆ ಹಾಜರಾದ ಅರ್ಬಾಜ್ ಖಾನ್ , ಬೆಟ್ಟಿಂಗ್ ನಡೆಸಿರುವುದಾಗಿ ಒಪ್ಪಿಕೊಂಡಿದ್ದು, ಬೆಟ್ಟಿಂಗ್ ನನ್ನ ಹವ್ಯಾಸ ಎಂದು ಹೇಳಿದ್ದಾನೆ. ಈ ನಡುವೆ ಪೊಲೀಸ್ ಅಧಿಕಾರಿ ರಾಜಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ತನಿಖೆ ಮಾಡಬೇಕಾದ ಪ್ರಕರಣವಾಗಿದೆ. ಐಪಿಎಲ್ ಸ್ಕ್ಯಾಂನಲ್ಲಿ ದೊಡ್ಡ ದೊಡ್ಡ ಬುಕ್ಕಿಗಳು ಪಾಲ್ಗೊಂಡಿರುವ ಸಾಧ್ಯತೆ ಇದೆ. ಮುಂಬೈ, ಅಹಮದಾಬಾದ್,ಜೈಪುರ ಮತ್ತು ನವದೆಹಲಿಯಲ್ಲಿ ಈ ತಂಡ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಖಾತೆ ಹಂಚಿಕೆಯಲ್ಲಿ ದೇವೇಗೌಡರು ಯಾವುದೇ ಹಸ್ತಕ್ಷೇಪ ಮಾಡಿಲ್ಲ

ಬೆಂಗಳೂರು : ಸಮ್ಮೀಶ್ರ ಸರಕಾರದ ಖಾತೆ ಹಂಚಿಕೆ ವಿಚಾರದಲ್ಲಿ ಮಾಜಿಪ್ರಧಾನಿ ಹೆಚ್.ಡಿ. ದೇವೇಗೌಡರು ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಅವರು ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇವೇಗೌಡರು ಯಾವುದೇ ಮಾಸ್ಟರ್ ಪ್ಲಾನ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಖಾತೆ ಹಂಚಿಕೆ ವಿಚಾರವಾಗಿ ನಮ್ಮಲ್ಲಿ ಯಾವುದೇ ಜಟಾಪಟಿ ಆಗಿಲ್ಲ, ಮಾಧ್ಯಮಗಳು ಸುದ್ದಿಗಳನ್ನು ತಿರುಚುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಂಧನ ಖಾತೆ ಸಂಬಂಧ ಡಿಕೆಶಿ ಮತ್ತು ರೇವಣ್ಣ ನಡುವೆ ಕಿತ್ತಾಟ ನಡೆದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಕೊಟ್ಟು ತೆಗೆದುಕೊಳ್ಳುವ ನೀತಿ ಅನ್ವಯ ಕೆ.ಸಿ. ವೇಣುಗೋಪಾಲ್ ಅವರು ಪಟ್ಟಿ ಅಂತಿಮಗೊಳಿಸಲು ದೇವೇಗೌಡರ ಜೊತೆ ಸಭೆ ನಡೆಸಿದ್ದರು. ಆದರೆ ಅವರು ಈ ವಿಚಾರದಲ್ಲಿ ಯಾವುದೇ ರೀತಿಯ ಮೂಗು ತೂರಿಸಿಲ್ಲ ಎಂದರು.

ಶೀಘ್ರದಲ್ಲಿಯೇ ಹೊಸ ಬಜೆಟ್ ಮಂಡನೆ

ಬೆಂಗಳೂರು: ಹೊಸ ಸರ್ಕಾರ ಶೀಘ್ರದಲ್ಲಿಯೇ ಹೊಸ ಬಜೆಟ್ ಮಂಡನೆ ಮಾಡಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಅವರು ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೂರು ನಾಲ್ಕು ದಿನಗಳಲ್ಲಿ ಬಜೆಟ್ ಸಿದ್ಧತಾ ಸಭೆ ನಡೆಸಿ, ಕಳೆದ ವರ್ಷದ ಬಜೆಟ್ ಮಂಡನೆ ಅಂಶಗಳು, ಹಿಂದಿನ ಸರ್ಕಾರದ ಜನಪ್ರಿಯ ಯೋಜನೆ, ಕಾಂಗ್ರೆಸ್ ಪ್ರಣಾಳಿಕೆ ಮತ್ತು ನಮ್ಮ ಪ್ರಣಾಳಿಕೆಗಳನ್ನು ಒಳಗೊಂಡಂತೆ ಹೊಸ ಯೋಜನೆಗಳನ್ನು ಘೋಷಣೆ ಮಾಡುತ್ತೇವೆ ಎಂದರು. ಆದಷ್ಟು ಬೇಗ ಜಂಟಿ ಅಧಿವೇಶನದ ದಿನಾಂಕ ಪ್ರಕಟಿಸಲಾಗುವುದು ಎಂದು ಕುಮಾರಸ್ವಾಮಿ ವಿವರಿಸಿದರು.

ಹೆಂಡತಿ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಮಚ್ಚಿನಿಂದ ಕೊಚ್ಚಿ ಕೊಲೆ

ಆನೇಕಲ್: ಹೆಂಡತಿಯ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಮಚ್ಚಿನಿಂದ ಕೊಚ್ಚಿ ಕೊಲೆಗೈದು ಹೃದಯ ವಿದ್ರಾವಕ ಘಟನೆ ಆನೇಕಲ್ ತಾಲೂಕಿನ ಹುಲ್ಲಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ ಅಲೋಬ್ರಿಕ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸಾಬು ಎಂಬಾತನೇ ಇಂತಹ ದುಷ್ಕೃತ್ಯ ಎಸಗಿದ ಪಾಪಿ ಪತಿಯಾಗಿದ್ದು, ಕೊಲೆ ಬಳಿಕ ಪರಾರಿಯಾಗಿದ್ದಾನೆ. ಹೆಂಡತಿ ಅನುಸುಜಾಳ ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ತಪಾಸಣೆಗೆ ಕಳಿಸಲಾಗಿದೆ. ಮೂಲತಃ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಸಣ್ಣ ಬಟಗೇರಾ ಗ್ರಾಮದವರಾಗಿದ್ದು, ದುಡಿಯುವುದಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಮದುವೆಯಾಗಿ 4 ವರ್ಷಗಳಾಗಿತ್ತು. ಮಕ್ಕಳ ವಿಚಾರವಾಗಿ ಸಾಬು ಹಾಗೂ ಹೆಂಡತಿ ನಡುವೆ ಕಿತ್ತಾಟ ನಡೆದಿತ್ತು. ಇದಲ್ಲದೆ, ಹೆಂಡತಿಗೆ ತಿಳಿಯದಂತೆ ಬೋರೊಬ್ಬ ಯುವತಿಯನ್ನು ಮದುವೆ ಆಗಿದ್ದ ಎನ್ನಲಾಗಿದೆ. ಆದ್ರೆ ಆಕೆ ಸಹ ಸಾಬುನ ಕಿರುಕುಳ ತಡೆಯಲಾಗದೆ ಬಿಟ್ಟುಹೋಗಿದ್ದಾಳೆ ಎನ್ನಲಾಗಿದೆ. ಈ ಕುರಿತು ಬನ್ನೇರುಘಟ್ಟ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ದೋಸ್ತಿ ಮೈತ್ರಿ

ಬೆಂಗಳೂರು : ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಹೋಗಲಿವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ. ಅವರು ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾವ ಕ್ಷೇತ್ರ ಯಾರಿಗೆ, ಉಭಯ ಪಕ್ಷಗಳು ಎಷ್ಟು ಸ್ಥಾನ ಹಂಚಿಕೊಳ್ಳಬೇಕು ಎನ್ನುವ ಕುರಿತು ಮಾತುಕತೆ ಮೂಲಕ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಈ ಕುರಿತಂತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಪಷ್ಟ ಚಿತ್ರಣ ನೀಡಲಾಗುವುದು ಎಂದ ಅವರು ರಾಜ್ಯದಲ್ಲಿರುವ ಎಲ್ಲಾ ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯ ಸ್ಥಾನಗಳ ನೇಮಕಾತಿಯನ್ನು ಮೂರನೇ ಒಂದು ಭಾಗ ಜೆಡಿಎಸ್ ಹಾಗು ಮೂರನೇ ಎರಡು ಭಾಗ ಕಾಂಗ್ರೆಸ್ಗೆ ಹಂಚಿಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಮ್ಮಿಶ್ರ ಸರ್ಕಾರದಿಂದ ಐದು ವರ್ಷ ಅವಧಿ ಪೂರ್ಣ

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರ ಐದು ವರ್ಷ ಅವಧಿ ಪೂರ್ಣಗೊಳಿಸಲಿದೆ ಎಂದು ರಾಜ್ಯ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ವಿಶ್ವಾಸ ವ್ಯಕ್ಪಪಡಿಸಿದ್ದಾರೆ. ಅವರು ಶುಕ್ರವಾರ ನಗರದಲ್ಲಿ ಜೆಡಿಎಸ್,ಕಾಂಗ್ರೆಸ್ ನಾಯಕರೊಂದಿಗೆ ಜಂಟಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಒಡಂಬಡಿಕೆ ಮಾಡಿಕೊಂಡಿವೆ ಎಂದು ಒಪ್ಪಂದ ಪತ್ರವನ್ನು ಬಿಡುಗಡೆಗೊಳಿದರು. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ರಚನೆಯಾಗಿರುವ ಸಮ್ಮಿಶ್ರ ಸರ್ಕಾರ ಪಾರದರ್ಶಕ ಹಾಗೂ ಜವಾಬ್ದಾರಿಯುತ ಆಡಳಿತ ನೀಡಲಿದೆ. ರೈತರು, ಯುವಕರು, ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿ ಆರ್ಥಿಕಾಭಿವೃದ್ಧಿಗೆ ಆದ್ಯತೆ ಕೊಡಲಿದೆ ಎಂದರು. ಎಲ್ಲಾ ವಿಭಾಗದಲ್ಲಿ ಆರ್ಥಿಕ ಪ್ರಗತಿ, ಸಾಮಾಜಿಕ ನ್ಯಾಯ ಹಾಗೂ ಕೋಮುಸೌಹಾರ್ದತೆಗೆ ಗಮನ ಹರಿಸುವುದು. ರಾಜ್ಯದ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರ ಪ್ರಯತ್ನಿಸಬೇಕು ಎನ್ನುವುದು ಒಡಂಬಡಿಕೆಯ ಸಾರಾಂಶವಾಗಿದೆ ಎಂದು ವಿವರಿಸಿದರು.

ಕೃಷ್ಣ ಭೈರೇಗೌಡಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ?

ಬೆಂಗಳೂರು : ಮಹತ್ತರ ಬೆಳವಣಿಗೆಯೊಂದರಲ್ಲಿ ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ಮಾಜಿ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಕಟ್ಟಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಈ ಕುರಿತಂತೆ ಸ್ವತಃ ಎಐಸಿಸಿ ಅಧ್ಯಕ್ಷರು ಆಗಿರುವ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿಯವರು ಸಂದೇಶ ರವಾನಿಸಿದ್ದು, ಅವರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸುವಂತೆ ಸಲಹೆ ಮಾಡಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಕೃಷ್ಣ ಭೈರೇಗೌಡರು ನಿರಾಕರಿಸಿದ್ದು, ಅಷ್ಟು ದೊಡ್ಡ ಜವಾಬ್ದಾರಿ ಹೊರಲು ಸಿದ್ಧರಾಗಿಲ್ಲ ಎನ್ನಲಾಗಿದೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಗಾದೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಹಿರಿಯ ಮುಖಂಡ ಡಿ.ಕೆ. ಶಿವಕುಮಾರ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಬೆಳಗಾವಿ ಗ್ರಾಮೀಣ ಶಾಸಕಿ ಹಾಗೂ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಆಗಿರುವ ಲಕ್ಷ್ಮೀ ಹೆಬ್ಬಾಳಕರ್ ಅವರು ಕೃಷ್ಣ ಭೈರೇಗೌಡ ಅವರನ್ನು ಭೇಟಿಯಾಗಿ ಕೆಪಿಸಿಸಿ ಅಧ್ಯಕ್ಷ ಗಾದೆ ಒಪ್ಪದಂತೆ ಒತ್ತಡ ಹೇರಿದ್ದು, ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಬರುವ ದಿನಗಳಲ್ಲಿ ಇದು ಯಾವ ತಿರುವು ಪಡೆಯಲಿದೆ ಎಂಬುದು ಕಾದು ನೋಡಬೇಕಿದೆ.

ಸಿಂಗಾಪುರ ಜೊತೆಗೆ ಹಲವು ಒಪ್ಪಂದಗಳಿಗೆ ಸಹಿ ಹಾಕಿದ ಭಾರತ

ಸಿಂಗಾಪುರ: ಮೂರು ದಿನದ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಒಪ್ಪಂದಗಳಿಗೆ ಸಹಿ ಹಾಕಿದರು. ಪ್ರವಾಸದ ಕೊನೆ ದಿನ ಸಿಂಗಾಪೂರಕ್ಕೆ ಭೇಟಿ ನೀಡಿ, ಅಲ್ಲಿಯ ಅಧ್ಯಕ್ಷ ಹಲಿಮ್ ಯಾಕೋಬ್ ಜತೆ ಮಾತುಕತೆ ನಡೆಸಿದ ಬಳಿಕ ವ್ಯಾಪಾರ, ಹೂಡಿಕೆ, ಸಂಪರ್ಕ, ಆವಿಷ್ಕಾರ ಹಾಗೂ ತಂತ್ರಜ್ಞಾನ ಕ್ಷೇತ್ರದ ಒಡಂಬಡಿಕೆಗಳಿಗೆ ಒಪ್ಪಂದ ಮಾಡಿಕೊಂಡರು. ಇದಲ್ಲದೆ ಎರಡು ದೇಶಗಳ ನಡುವೆ ರಕ್ಷಣೆ ಹಾಗೂ ಭದ್ರತೆಗೆ ಸಂಬಂಧಪಟ್ಟಂತೆ ಕೂಡಮಹತ್ವದ ಮಾತುಕತೆ ನಡೆದಿದೆ. ಇದಕ್ಕೂ ಮೊದಲು ನಾನ್ ಯಾಂಗ್ ವಿವಿಯಲ್ಲಿ ಯುವಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂವಾದ ನಡೆಸಿದರು. ಈ ಸಂವಾದದಲ್ಲಿ 21ನೇ ಶತಮಾನದಲ್ಲಿ ಭಾರತದ ಪಾತ್ರದ ಕುರಿತು ಪ್ರಧಾನಿ ಮೋದಿ ಅವರು ಯುವಕರಿಗೆ ಮನಮುಟ್ಟುವ ಹಾಗೆ ಉತ್ತರಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾಗಿ ಲಕ್ಷ್ಮಣ ಸವದಿ ನೇಮಕ

ಬೆಂಗಳೂರು : ರಾಜ್ಯ ಬಿಜೆಪಿಯ ರೈತ ಮೋರ್ಚಾದ ಅಧ್ಯಕ್ಷರಾಗಿ ಲಕ್ಷ್ಮಣ್ ಸವದಿಯವರನ್ನುನೇಮಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಶುಕ್ರವಾರ ಸವದಿ ಅವರಿಗೆ ನೇಮಕಾತಿ ಪತ್ರ ನೀಡಿದ ಯಡಿಯೂರಪ್ಪ ಅವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ, ನಾಡಿನ ರೈತ ಸಮುದಾಯವನ್ನು ಸಂಘಟಿಸುವಂತೆ ಸೂಚಿಸಿದ್ದಾರೆ. ಇದಲ್ಲದೆ, ಲಕ್ಷ್ಮಣ ಸವದಿ ಅವರ ಸಮರ್ಥ ನಾಯಕತ್ವದಲ್ಲಿ ಬಿಜೆಪಿಯು ತಳಮಟ್ಟದಲ್ಲಿ ಇನ್ನಷ್ಟು ಸದೃಢಗೊಳ್ಳಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ಉತ್ತರ ಕರ್ನಾಟಕದ ಅದರಲ್ಲೂ ಬೆಳಗಾವಿ ಜಿಲ್ಲೆಯವರಾದ ಲಕ್ಷ್ಮಣ ಸವದಿ ಅವರಿಗೆ ಈ ಹುದ್ದೆ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸವದಿ ಅವರು ಈ ಹಿಂದೆ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರನ್ನು ಇಲ್ಲಿ ಸ್ಮರಿಸಬಹುದು,

ಉಪಮುಖ್ಯಮಂತ್ರಿ ಹುದ್ದೆರದ್ದುಗೊಳಿಸಲು ಹೈಕೋರ್ಟ್ ಮೊರೆ

ಬೆಂಗಳೂರು : ಉಪಮುಖ್ಯಮಂತ್ರಿ ಹುದ್ದೆಯನ್ನ ರದ್ದುಗೊಳಿಸಬೇಕೆಂದು ಕೋರಿ ಮೈಸೂರಿನ ಆರ್ಟಿಐ ಕಾರ್ಯಕರ್ತ ಶೇಖರ್ ಐಯ್ಯರ್ ಹೈಕೋರ್ಟ್ಮೊರೆ ಹೋಗಿದ್ದಾರೆ. ಅದು ಸಂವಿಧಾನಿಕ ಹುದ್ದೆಯಲ್ಲ. ಹೀಗಾಗಿ ಈ ಹುದ್ದೆಯನ್ನು ರದ್ದುಗೊಳಿಸಬೇಕು ಎಂದು ಅವರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾಗಿದೆ, ಈ ಹುದ್ದೆಯ ರಚನೆಯ ಬಗ್ಗೆ ಸಂವಿಧಾನದಲ್ಲಿ ಎಲ್ಲಿಯೂ ಪ್ರಸ್ತಾಪವಾಗಿಲ್ಲ. ಆದರೂ ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ಈ ಹುದ್ದೆಗೆ ಸಂವಿಧಾನಿಕ ಮಾನ್ಯತೆ ಇಲ್ಲದಿರುವುದರಿಂದ ಅದನ್ನು ಕೂಡಲೇ ರದ್ದು ಮಾಡಬೇಕೆಂದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿರುವ ಹೈಕೋರ್ಟ್ ಮುಂದಿನ ವಾರ ವಾದ-ಪ್ರತಿವಾದ ಆಲಿಸಲಿದೆ.

ಅಕ್ರಮ ಚಟುವಟಿಕೆ ಮಟ್ಟ ಹಾಕಲು ಶಾಸಕ ಅಮೃತ ದೇಸಾಯಿ ಸೂಚನೆ

ಧಾರವಾಡ : ಧಾರವಾಡ ಗ್ರಾಮೀಣದಲ್ಲಿಗಾಂಜಾ, ಇಸ್ಪೀಟು, ಅಕ್ರಮ ಚಟುವಟಿಕೆ ಮಟ್ಟ ಹಾಕಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಧಾರವಾಡ ವಿಧಾನ ಸಭಾ ಕ್ಷೇತ್ರದ ಶಾಸಕ ಅಮೃತ ದೇಸಾಯಿ ತಿಳಿಸಿದರು. ಅವರು ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಜನತೆ ಸರಳ, ಸಜ್ಜನಿಕೆಗೆ ಆದ್ಯತೆ ನೀಡಿದ್ದು, ಕ್ಷೇತ್ರದ ಜನತೆ ನೆಮ್ಮದಿ ಯಿಂದ ಇರಬೇಕು ಎಂಬುದು ತಮ್ಮ ಆಶಯವಾಗಿದೆ. ಅದನ್ನು ಕಾಪಾಡಿಕೊಂಡು ಹೋಗಲು ಮೊದಲ ಆದ್ಯತೆ ನೀಡಲಾಗುವುದು ಎಂದರು. ಅಲ್ಲದೆ, ಕ್ಷೇತ್ರದ ಬಹುದೊಡ್ಡ ಸಮಸ್ಯೆ ಕುಡಿಯುವ ನೀರಿನ ತೊಂದರೆ ಅದನ್ನು ನಿವಾರಿಸಲಾಗುವುದು. ತುಪರಿಹಳ್ಳ ನೀರಿನ ಸಂಗ್ರಹ, ಚೆಕ್ ಡ್ಯಾಂ ನಿರ್ಮಾಣ ಕ್ಕೆ ಆದ್ಯತೆ ನೀಡಿ ಅಂರ್ತಜಲ ಹೆಚ್ಚಳ ಮಾಡಲಾಗುವುದು ಎಂದರು. ಬಹುಗ್ರಾಮ ಯೋಜನೆ ನೆನೆಗುದಿಗೆ ಬಿದ್ದಿದೆ.ಅದನ್ನ ಸಂಬಂಧಿಸಿದ ಸಚಿವರ ಜೊತೆಗೆ ಚರ್ಚಿಸಿ ಪೂರ್ಣಗೊಳಿಸಲಾಗುವುದು ಎಂದರು. ಇದೇ ವೇಳೆ ಕಳೆದ ಅವಧಿಯಲ್ಲಿ ನಡೆದ ಕಳಪೆ ಕಾಮಗಾರಿ, ಅರ್ಧಕ್ಕೆ ಸ್ಥಗಿತಗೊಂಡ ಯೋಜನೆಗಳ ವಿವರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಂತಹ ಅಕ್ರಮ, ಅವ್ಯವಹಾರ ಕಂಡು ಬಂದಲ್ಲಿತನಿಖೆ ಗೆ ಆದೇಶಿಸಲಾಗುವುದು ಎಂದರು. ಜೂನ್ ಮೂರರಂದು ನಗರದ ಆನಂದ ಮುಗುದುಮ್ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಸಂಸದ ಪ್ರಹ್ಲಾದ ಜೋಶಿ ಸೇರಿದಂತೆ ಅನೇಕರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ತವನಪ್ಪ ಅಷ್ಟಗಿ, ಸಂಗನಗೌಡ ರಾಮನಗೌಡರ, ಈರೇಶ ಅಂಚಟಗೇರಿ, ಟಿ.ಎಸ್. ಪಾಟೀಲ, ಶಂಕರ ಮುಗದ, ನಾಗರಾಜ ಗಾಣಗೇರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಖಾತೆ ಹಂಚಿಕೊಂಡ ಕಾಂಗ್ರೆಸ್-ಜೆಡಿಎಸ್

ಬೆಂಗಳೂರು : ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮೀಶ್ರ ಸರಕಾರದಲ್ಲಿ ನೂತನ ಸಚಿವ ಸಂಪುಟಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ರವಿವಾರ ಇಲ್ಲವೇ ಬುಧವಾರ ರಾಜ್ಯಪಾಲರ ಕಚೇರಿ ಆವರಣದಲ್ಲಿ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ನಿಗದಿಯಾಗಿದೆ. ಈ ಕುರಿತು ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಂಪೂರ್ಣ ಚಿತ್ರಣ ನೀಡಿದರು. ಜೆಡಿಎಸ್ ಪಕ್ಷವೂ ಮಾಹಿತಿ ಮತ್ತು ತಂತ್ರಜ್ಞಾನ, ವಾರ್ತಾ ಹಣಕಾಸು, ಅಬಕಾರಿ, ಇಂಧನ, ಸಹಕಾರಿ, ಪ್ರವಾಸೋದ್ಯಮ ಪ್ರಾಥಮಿಕ ಶಿಕ್ಷಣ ಉನ್ನತ ಶಿಕ್ಷಣ ಕೃಷಿ ಹಾಗೂ ಪಶು, ಮೀನುಗಾರಿಕೆ ಸಾರಿಗೆ, ಸಣ್ಣ ಕೈಗಾರಿಕೆ ಸಣ್ಣ ನೀರಾವರಿ ಗುಪ್ತಚರ ಇಲಾಖೆ, ಯೋಜನೆ ಮತ್ತು ಸಾಂಖ್ಯಿಕ ಸಹಕಾರ ಖಾತೆಗಳನ್ನು ಉಳಿಸಿಕೊಂಡಿದೆ. ಅದೇ ರೀತಿ ಕಾಂಗ್ರೆಸ್ ಪಕ್ಷವೂ ಗೃಹ, ಕೈಗಾರಿಕಾ, ಆರೋಗ್ಯ, ಕಂದಾಯ, ಮುಜರಾಯಿ, ಗಾಮೀಣಾಭಿವೃದ್ಧಿ ಅರಣ್ಯ, ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ, ಕಾರ್ಮಿಕ ವೈದ್ಯಕ್ತಿಯ,ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ,ಬೆಂಗಳೂರು ನಗರಾಭಿವೃದ್ಧಿ,ನೀರಾವರಿ, ಆಹಾರ , ಕಾನೂನು ಮತ್ತು ಸಂಸದೀಯ ವಿಜ್ಞಾನ ಮತ್ತು ತಂತ್ರಜ್ಞಾನ ಗಳನ್ನು ಪಡೆದುಕೊಂಡಿದೆ. ಈ ಕುರಿತಂತೆ ಸಮನ್ವಯ ಸಮಿತಿ ರಚಿಸಲಾಗಿದ್ದು, ಸಣ್ಣಪುಟ್ಟ ಭೀನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಸರಕಾರ ಮುನ್ನಡೆಯಲಿದ್ದು, ಎರಡು ಪಕ್ಷಗಳ ಇಬ್ಬರು ವಕ್ತಾರರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂಗಳಾದ ವೀರಪ್ಪ ಮೊಯ್ಲಿ, ಸಿದ್ದರಾಮಯ್ಯ, ಲೋಕಸಭಾ ನಾಯಕ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಪರಮೇಶ್ವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಮ್ಮೀಶ್ರ ಸರಕಾರದ ಸಂಭಾವ್ಯ ಸಚಿವರ ಪಟ್ಟಿ ?

ಬೆಂಗಳೂರು : ಜೆಡಿಎಸ್ ಕಾಂಗ್ರೆಸ್ ಸಮ್ಮೀಶ್ರ ಸರಕಾರದ ಸಂಭಾವ್ಯ ಸಚಿವರ ಪಟ್ಟಿ ಅಂತಿಮ ಗೊಂಡಿದ್ದು, ಜೆಡಿಎಸ್ ಪಾಳೇಯದಿಂದ ಹೆಚ್.ಡಿ ರೇವಣ್ಣ, ಎಂ.ಬಿ ಫಾರೂಕ್, ಬಂಡೆಪ್ಪ ಕಾಶೆಂಪೂರ್, ಹೆಚ್.ಕೆ ಕುಮಾರಸ್ವಾಮಿ ಸೇರಿದಂತೆ ಅನೇಕರ ಹೆಸರುಗಳನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸಮ್ಮುಖದಲ್ಲಿ ಅಖೈರುಗೊಳಿಸಲಾಗಿದೆ ಎನ್ನಲಾಗಿದೆ. ಅದೇ ರೀತಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಸಮ್ಮುಖದಲ್ಲಿ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಡಿ.ಕೆ ಶಿವಕುಮಾರ್, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಪುತ್ರಿ ರೂಪಾ ಶಶಿಧರ್, ಶಾಮನೂರು ಶಿವಶಂಕರಪ್ಪ, ಎಂ.ಬಿ ಪಾಟೀಲ್, ಎಚ್. ಕೆ. ಪಾಟೀಲ ಅವರ ಹೆಸರಿಗೆ ಅಂತಿಮ ಮುದ್ರೆ ಒತ್ತಲಾಗಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ. ಸಚಿವರು ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆ ಇನ್ನಷ್ಟು ಹೆಸರುಗಳು ಅಂತಿಮಗೊಳ್ಳುವ ಸಾಧ್ಯತೆಯಿದ್ದು, ಇದು ಯಾವ ತಿರುವು ಪಡೆಯಲಿದೆ ಎಂಬುದು ಕಾದುನೋಡಬೇಕಿದೆ.

ರಾಜ್ಯಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಸಿಎಂ,ಡಿಸಿಎಂ

ಬೆಂಗಳೂರು : ಸಚಿವರ ಸಂಪುಟ ಬಿಕ್ಕಟ್ಟು ಅಂತಿಮಗೊಂಡ ಬೆನ್ನಲ್ಲೇ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಡಿಸಿಎಂ ಡಾ. ಜಿ. ಪರಮೇಶ್ವರ ರಾಜ್ಯಪಾಲರನ್ನುಭೇಟಿಯಾಗಿಮಾತುಕತೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ. ನೂತನ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ರಾಜ್ಯಪಾಲ ವಜುಬಾಯಿ ವಾಲಾ ಅವರನ್ನುಮೊದಲ ಬಾರಿಗೆ ಸಿಎಂ ಹಾಗೂ ಡಿಸಿಎಂ ಇಬ್ಬರು ಜಂಟಿಯಾಗಿ ಭೇಟಿಯಾಗಿ ಮಾತುಕತೆ ನಡೆಸಿರುವುದು ವಿಶೇಷವಾಗಿದೆ. ಸಮ್ಮೀಶ್ರ ಸರಕಾರದ ಬಹುತೇಕ ಸಚಿವರ ಪಟ್ಟಿ ಅಂತಿಮಗೊಂಡಿದ್ದು, ನೂತನ ಸಚಿವರಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ಎರ್ಪಡಿಸಲು ಕೋರಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಇನ್ನಷ್ಟೇ ಸ್ಪಷ್ಟ ಚಿತ್ರಣ ಹೊರಬೀಳಬೇಕಿದೆ.

ಸಂಪುಟ ಸರ್ಕಸ್ಗೆ ತಾರ್ಕಿಕ ಅಂತ್ಯ

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಂಪುಟ ಸರ್ಕಸ್ ಕಡೆಗೂ ತಾರ್ಕಿಕ ಅಂತ್ಯ ಕಂಡಿದೆ. ನಾಳೆ ಮೊದಲ ಹಂತದ ಸಂಪುಟ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದ್ದು, ಮೈತ್ರಿ ಸರ್ಕಾರದ ಸಂಪುಟಕ್ಕೆ 20 ಸಚಿವರು ಸೇರ್ಪಡೆಯಾಗುವ ನಿರೀಕ್ಷೆಯಿದೆ. ಕಳೆದ ಒಂದುವಾರದಿಂದ ನಡೆಯುತ್ತಿದ್ದ ಖಾತೆಗಳ ಹಂಚಿಕೆ ಪ್ರಕ್ರಿಯೆ ಅಳೆದು ತೂಗಿ ಕಡೆಗೂ ಅಂತಿಮಗೊಂಡಿದ್ದು ಪ್ರಮುಖ ಖಾತೆಗಳನ್ನು ಪಡೆಯುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ. ಕಾಂಗ್ರೆಸ್ ಕೂಡ ಕೆಲ ಪ್ರಮುಖ ಖಾತೆಗಳನ್ನು ಪಡೆದುಕೊಂಡಿದ್ದು ಪರಸ್ಪರ ಖಾತೆಗಳ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ತಿಳಿದು ಬಂದಿದೆ. ಜೆಡಿಎಸ್ ಹಣಕಾಸು, ಇಂಧನ, ಲೋಕೋಪಯೋಗಿ, ಅಬಕಾರಿ, ಸಹಕಾರಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ತೋಟಗಾರಿಕೆ, ಪೌರಾಡಳಿತ, ಸಣ್ಣ ನೀರಾವರಿಯನ್ನು ತನ್ನ ಬಳಿ ಇರಿಸಿಕೊಂಡರೆ, ಕಾಂಗ್ರೆಸ್ ಪಕ್ಷವೂ ಗೃಹ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತದ ರಾಜ್ ಖಾತೆ, ಆರೋಗ್ಯ, ಜಲಸಂಪನ್ಮೂಲ, ಕೃಷಿ, ಬೆಂಗಳೂರು ಅಭಿವೃದ್ಧಿ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ, ಉನ್ನತ ಶಿಕ್ಷಣ ವೈದ್ಯಕೀಯ ಶಿಕ್ಷಣ, ಐಟಿ-ಬಿಟಿ, ಸಮಾಜ ಕಲ್ಯಾಣ, ವಸತಿ, ಗಣಿ ಮತ್ತು ಭೂ ವಿಜ್ಞಾನ, ಅಲ್ಪ ಸಂಖ್ಯಾತ, ವಕ್ಫ್ಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ.

ಮೂವರು ಕುಖ್ಯಾತ ಕಳ್ಳರ ಬಂಧನ

ಮಂಗಳೂರು: ಐಷಾರಾಮಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಕೇರಳದ ಕಣ್ಣೂರು ಜಿಲ್ಲೆಯ ಕೂಟಕಳಂ ನಿವಾಸಿಗಳಾದ ಅರ್ಜುನ್ ಕೆ.ಬಿ.(18), ರೋಬಿನ್ ಬೇಬಿ ( 22), ಟಿಜೋ ಜೋಸೆಫ್ ಅಲಿಯಾಸ್ ಅಗಸ್ಟಿನ್ (25) ಎಂದು ಗುರುತಿಸಲಾಗಿದೆ. ಬಂಧಿತ ರಿಂದ 7 ರಾಯಲ್ ಎನ್ ಫೀಲ್ಡ್ ಬುಲೆಟ್, 2 ಕೆಟಿ ಎಂ ಬೈಕ್, 2 ಯಮಹಾ ಬೈಕ್, 1 ಸುಜುಕಿ ಜಿಕ್ಷರ್ ಬೈಕ್, 1ಬಜಾಜ್ ಆರ್ ಎಸ್ ಬೈಕ್ , 2 ಬಜಾಜ್ ಪಲ್ಸರ್ ಬೈಕ್, 2ಎಫ್ ಜೆಡ್ ಬೈಕ್ ಸೇರಿದಂತೆ ಒಟ್ಟು 17 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಕೃತ್ಯಕ್ಕೆ ಬಳಸಿಕೊಳ್ಳಲಾಗಿದ್ದ ಶೆವರ್ಲೆಟ್ ಹಾಗೂ ಇನ್ನೋವಾ ಕಾರು ಸೇರಿದಂತೆ ಒಟ್ಟು 40 ಲಕ್ಷ ರೂ. ಮೌಲ್ಯದ ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ.

ವಿಮಾನ ಹಾರಾಟ ನಡೆಸಲು ನಿರಾಕರಿಸಿದ ಪೈಲಟ್

ವಾರಣಾಸಿ: ಕೆಲಸದ ಅವಧಿ ಮುಗಿದ ಹಿನ್ನಲೆಯಲ್ಲಿ ವಿಮಾನ ಹಾರಾಟ ನಡೆಸಲು ಪೈಲಟ್ ಒಬ್ಬ ನಿರಾಕರಿಸಿದ ಘಟನೆ ಉತ್ತರ ಪ್ರದೇಶದ ಶಾಕ್ಗೊಳಗಾದ ವಾರಣಾಸಿಯಲ್ಲಿ ನಡೆದಿದೆ. ಇದರಿಂದ 180 ಪ್ರಯಾಣಿಕರು ಕಂಗಾಲಾಗಿದ್ದಾರೆ. ನಾಗರಿಕ ವಿಮಾನಯಾನ ಇಲಾಖೆಯ ನಿಮಯಗಳ ಪ್ರಕಾರ ನನ್ನ ಕೆಲಸದ ಅವಧಿ ಮುಗಿದಿದೆ ಎಂದು ಹೇಳಿ ವಿಮಾನ ಹಾರಿಸಲು ಪೈಲಟ್ ಒಪ್ಪಿಕೊಂಡಿಲ್ಲ. ಇತ್ತ, ಡಿಜಿಸಿಎ ಪ್ರಕಾರವೂ ಸುರಕ್ಷಿತ ನಿಟ್ಟಿನಲ್ಲೂ ಯಾವುದೇ ಪೈಟಲ್ ತನ್ನ ಕೆಲಸದ ಅವಧಿಯನ್ನು ವಿಸ್ತರಿಸುವಂತಿಲ್ಲ. ಗುರುವಾರ ರಾತ್ರಿ ದೆಹಲಿಯಿಂದ ಪಾಟ್ನಾಗೆ ಸ್ಪೈಸ್ಜೆಟ್ನ ಎಸ್ಜಿ 8480 ವಿಮಾನ ಹಾರಾಟ ಆರಂಭಿಸಿತ್ತು. ಹವಾಮಾನ ವೈಪರೀತ್ಯ ಕಾರಣದಿಂದ ವಾರಣಾಸಿ ಏರ್ಪೋರ್ಟ್ನಲ್ಲಿ ಇಳಿಸಲಾಗಿತ್ತು. ಎರಡು ಗಂಟೆಗಳ ಬಳಿಕ ವಾತಾವರಣ ತಿಳಿಗೊಂಡಿತ್ತು. ಪೈಲಟ್ನ ಈ ನಡೆಯಿಂದ ಗಲಿಬಿಲಿಗೊಂಡ ಪ್ರಯಾಣಿಕರು, ಗಲಾಟೆ ನಡೆಸಿದ್ದಾರೆ. ಸ್ಪೈಸ್ಜೆಟ್ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿ, ಮುಂದೆ ತಮ್ಮ ದಾರಿ ತಾವು ನೋಡಿಕೊಂಡಿದ್ದಾರೆ. ಕೆಲ ಪ್ರಯಾಣಿಕರರು ರಸ್ತೆ ಮಾರ್ಗ ಮೂಲಕ ಪಾಟ್ನಾಗೆ ಹೋಗಿದ್ದಾರೆ. ಇನ್ನು, ಈ ಬಗ್ಗೆ ಏರ್ಪೋರ್ಟ್ ಅಧಿಕಾಗಳಾಗಲಿ, ಸ್ಪೈಸ್ಜೆಟ್ ವಿಮಾನಯಾನದ ಅಧಿಕಾರಿಗಳಾಗಲಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಕಳ್ಳರ ಮೇಲೆ ಫೈರೀಂಗ್ ಮಾಡಿದ ಪೊಲೀಸರು

ಮಂಗಳೂರು:ಹಲ್ಲೆಗೆ ಯತ್ನಿಸಿದ ಕಳ್ಳರ ಮೇಲೆ ಫೈರಿಂಗ್ ಮಾಡಿದ ಪೊಲೀಸರು ಕೊನೆಗೂ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಂಧಿತರನ್ನು ಮೊಹಮ್ಮದ್ ಮುಕ್ಸಿನ್ (23), ಮೊಹಮ್ಮದ್ ಇರ್ಷಾದ್ (29), ಸದ್ದಂ ಮಾರಿಪಳ್ಳ ಎಂದು ಗುರುತಿಸಲಾಗಿದೆ. ಮಾರಕಾಸ್ತ್ರಗಳನ್ನು ಹಿಡಿದು ಕೊಂಡು ಗುರುವಾಯನಕೆರೆ ಕಡೆ ಸಂಚರಿಸುತ್ತಿದ್ದ ಐವರು ಆರೋಪಿಗಳು ಚೆಕ್ ಪಾಯಿಂಟ್ನಲ್ಲಿ ಕಾರು ನಿಲ್ಲಿಸದೆ ಹೋಗಿದ್ದರು. ಬಳಿಕ ಪೊಲೀಸರು ಮಣಿಹಳ್ಳ ಜಂಕ್ಷನ್ನಲ್ಲಿ ಅಡ್ಡಗಟ್ಟಿ ತಡೆಯಲು ಯತ್ನಿಸಿದರು. ಆಗ ಆರೋಪಿಗಳು ರಾಡ್ ಮತ್ತು ತಲವಾರಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ರಕ್ಷಣೆಗಾಗಿ ಬಂಟ್ವಾಳ ನಗರ ಠಾಣೆ ಪಿಎಸ್ಐ ಚಂದ್ರಶೇಖರ ಅವರು ತಮ್ಮ ಕೈಯಲ್ಲಿದ್ದ ಪಂಪ್ ಆಕ್ಷನ್ ವೆಪನ್ನಿಂದ ಮತ್ತು ಬಂಟ್ವಾಳ ಗ್ರಾಮಾಂತರ ಸಬ್ ಇನ್ಸ್ಪೆಕ್ಟರ್ ಪ್ರಸನ್ನ ಅವರು ತಮ್ಮ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾರೆ. ಆಗ ಇಬ್ಬರು ಪರಾರಿಯಾಗಿದ್ದು, ಮೂವರು ಸಿಕ್ಕಿ ಬಿದ್ದಿದ್ದಾರೆ. ಈ ಕುರಿತಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ದ.ಕ ಜಿಲ್ಲಾ ಎಸ್ಪಿ ರವಿಕಾಂತೆ ಗೌಡ ತಿಳಿಸಿದ್ದಾರೆ.

ಈ ಬಾರಿಯೂ ಇಫ್ತಾರ್ ಕೂಟ ಆಶಯ ವ್ಯಕ್ತಪಡಿಸಿದ ಪೇಜಾವರ ಶ್ರೀ

ಉಡುಪಿ: ಕಳೆದ ಬಾರಿಯಂತೆ ಈ ಬಾರಿಯೂ ಇಫ್ತಾರ್ ಕೂಟ ಆಯೋಜನೆ ಮಾಡುವ ಕುರಿತು ಉಡುಪಿಯ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆಶಯ ವ್ಯಕ್ತಪಡಿಸಿದ್ದಾರೆ. ಅವರು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಸ್ಲಿಂ ಮುಖಂಡರು ಹಾಗೂ ಸಮಾಜ ಬಾಂಧವರು ಒಪ್ಪಿದರೆ ಹಮ್ಮಿಕೊಳ್ಳಲಾಗುವುದು ಎಂದರು. ಮುಸ್ಲೀಂರು ಈ ಬಾರಿ ಇಫ್ತಾರ್ ಕೂಟಕ್ಕೆ ಬಹಳ ಉತ್ಸಾಹ ತೋರಿಸುತ್ತಿಲ್ಲ. ಕಳೆದ ಬಾರಿಯ ಇಫ್ತಾರ್ ಕೂಟ ಬಹಳ ಚರ್ಚೆಯಾಗಿತ್ತು. ಈ ಹಿನ್ನಲೆಯಲ್ಲಿ ಮೂರ್ತಿ ಇರುವಲ್ಲಿ ಕಾರ್ಯಕ್ರಮ ಆಯೋಜಿಸಲು ಮುಸಲ್ಮಾನರು ಒಪ್ಪುತ್ತಿಲ್ಲ. ಒಪ್ಪಿದರೆ ಎಲ್ಲವೂ ಅಂದುಕೊಂಡಂತೆ ಆದರೆ ಗೋವಿಂದ ಕಲ್ಯಾಣ ಮಂಟಪದಲ್ಲಿ ಸತ್ಕಾರ ಕೂಟ ಆಯೋಜಿಸುವ ಆಲೋಚನೆಯಿದೆ ಎಂದರು. ಅಲ್ಪಸಂಖ್ಯಾತರನ್ನು ಹಾಗೂ ಬಹು ಸಂಖ್ಯಾತರನ್ನು ಸಮಾನವಾಗಿ ಕಾಣಬೇಕು. ಸಂವಿಧಾನ ಬದಲಿಸಿ ಅಂತ ನಾನು ಯಾವತ್ತೂ ಹೇಳಿಲ್ಲ ಎಂದ ಶ್ರೀಗಳು ಎಲ್ಲರಿಗೂ ಒಂದೇ ನ್ಯಾಯ ಇರಬೇಕು. ಶಿಕ್ಷಣ, ಆಹಾರ, ಸರ್ಕಾರದ ಯೋಜನೆ ಎಲ್ಲಾ ಧರ್ಮದ ಬಡವರಿಗೆ ಸಿಗಬೇಕು ಎಂದು ಮೊದಲಿನಿಂದಲೂ ಹೇಳಿಕೊಂಡು ಬರುತ್ತಿದ್ದೇನೆ. ಈಗಲೂ ಅದಕ್ಕೆಬದ್ಧನಾಗಿದ್ದೇನೆ ಎಂದರು. ಇದೇ ವೇಳೆ ನಾನು ಅಂಬೇಡ್ಕರ್ ವಿರೋಧಿಯಲ್ಲ. ಎಲ್ಲಾ ಧರ್ಮ, ಜಾತಿಯವರೊಂದಿಗೆ ನಾನು ಚೆನ್ನಾಗಿದ್ದೇನೆ ಎಂದು ಪೇಜಾವರ ಶ್ರೀ ತಿಳಿಸಿದರು.

ಇನ್ಫೋಸಿಸ್ ನಾರಾಯಣ ಮೂರ್ತಿಜೊತೆಗೆ ಕುಮಾರಸ್ವಾಮಿ ಚರ್ಚೆ

ಬೆಂಗಳೂರು : ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇನ್ಫೋಸಿಸ್ ನ ಸ್ಥಾಪಕ ಅಧ್ಯಕ್ಷ ಎನ್ ಆರ್ ನಾರಾಯಣ ಮೂರ್ತಿ ಅವರ ಜೊತೆಗೆ ಸುಧೀರ್ಘ ಸಮಾಲೋಚನೆ ನಡೆಸಿದರು. ಮುಂದಿನ ಎರಡು ತಿಂಗಳಲ್ಲಿ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ, ಬೆಂಗಳೂರಿನ ಮೂಲ ಸೌಕರ್ಯ, ತ್ಯಾಜ್ಯ ನಿರ್ವಹಣೆ ಕುರಿತು ಅವರು ವರದಿ ನಾರಾಯಣಮೂರ್ತಿ ಅವರು ವರದಿ ನೀಡಲಿದ್ದಾರೆ. ಅವರ ವರದಿ ಆಧರಿಸಿ ಜೆಡಿಎಸ್ ಹಾಗೂಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಹಲವು ಮಹತ್ತರ ಯೋಜನೆಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಐಟಿ ಕ್ಷೇತ್ರದ ದಿಗ್ಗಜ ನಾರಾಯಣಮೂರ್ತಿ ಅವರ ಈ ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ.

12 ಭಯೋತ್ಪಾದಕರು ದೇಶದೊಳಗೆ ನುಗ್ಗಿರುವ ಹಿನ್ನಲೆಯಲ್ಲಿ ಹೈ-ಅಲರ್ಟ್

ನವದೆಹಲಿ: ಜಮ್ಮು-ಕಾಶ್ಮೀರದ ಗಡಿ ನುಸುಳಿ 12 ಭಯೋತ್ಪಾದಕರು ದೇಶದೊಳಗೆ ನುಗ್ಗಿರುವ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ಜಮ್ಮು-ಕಾಶ್ಮೀರನಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ. ದೇಶದಲ್ಲಿ ದೊಡ್ಡ ದಾಳಿ ನಡೆಸುವ ಸಂಚು ರೂಪಿಸಿರುವ ಜೈಶ್-ಎ-ಮೊಹಮದ್ ಸಂಘಟನೆಯ 12 ಉಗ್ರರು ಜಮ್ಮು-ಕಾಶ್ಮೀರದ ಮೂಲಕ ಒಳ ಪ್ರವೇಶಿಸಿದ್ದಾರೆ ಎನ್ನಲಾಗಿದೆ. ದೇಶದ ಒಳಗಡೆ ಈಗಾಗಲೇ ಕಾಲಿಟ್ಟಿರುವ ಈ ಭಯೋತ್ಪಾದಕರು ವಿವಿಧ ತಂಡಗಳಾಗಿ ವಿಗಂಡಣೆಗೊಂಡಿದ್ದು, ಮುಂದಿನ ಎರಡು-ಮೂರು ದಿನಗಳಲ್ಲಿ ಪ್ರತ್ಯೇಕ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆ ಹಿರಿಯ ಅಧಿಕಾರಿಗಳು ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಕೇಂದ್ರದ ಗೃಹ ಇಲಾಖೆ ವಿವಿಧ ಸ್ಥಳಗಳಲ್ಲಿ ಹೈ-ಅಲರ್ಟ್ ಘೋಷಿಸಿದ್ದು, ವ ಅನುಮಾನಾಸ್ಪದ ವ್ಯಕ್ತಿಗಳನ್ನು ತಪಾಸಣೆಗೊಳಪಡಿಸಲು ಸೂಚಿಸಿದೆ. ಇದೇ ವೇಳೆ ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಸಿಆರ್ಪಿಎಫ್ ಯೋಧರ ವಾಹನ ಮೇಲೆ ಗ್ರೆನೇಡ್ ಮತ್ತು ಗುಂಡಿನ ದಾಳಿ ನಡೆಸಿದ್ದಾರೆ. ಆದರೆ ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಹೆಚ್ಚಿನ ಶೋಧ ಕಾರ್ಯವನ್ನು ಭದ್ರತಾ ಸಿಬ್ಬಂದಿ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಬ್ಸಿಡಿ ರಹಿತ ಅಡುಗೆ ಅನಿಲ ಬೆಲೆಯಲ್ಲಿ ಭಾರಿ ಏರಿಕೆ

ನವದೆಹಲಿ: ಪೆಟ್ರೋಲ್ ಹಾಗೂ ಡಿಸೇಲ್ ದರ ಎರಿಕೆಯಾದ ಬೆನ್ನಲ್ಲೇ ಇದೀಗ ಸಬ್ಸಿಡಿ ರಹಿತ ಅಡುಗೆ ಅನಿಲ ಬೆಲೆಯಲ್ಲಿ ಭಾರಿ ಏರಿಕೆ ಆಗಿರುವುದು ಜನಸಾಮಾನ್ಯರನ್ನು ತತ್ತರಿಸುವಂತೆ ಮಾಡಿದೆ. ಹೌದು ಸಬ್ಸಿಡಿ ಎಲ್ಪಿಜಿ ದರ 2.34 ರೂಪಾಯಿ ಎರಿಕೆ ಆಗಿದ್ದರೆ ಹಾಗೂ ಸಬ್ಸಿಡಿ ರಹಿತ ಎಲ್ಪಿಜಿ ದರ 48 ರೂಪಾಯಿಗೆ ಏರಿಕೆಯಾಗಿದೆ. ಇದರಿಂದಾಗಿ ನವದೆಹಲಿಯಲ್ಲಿ 14 ಕೆಜಿ ಸಬ್ಸಿಡಿ ಸಿಲಿಂಡರ್ ಬೆಲೆ 493.55 ರೂಪಾಯಿಯಾಗಿದ್ದರೆ, ಸಬ್ಸಿಡಿ ರಹಿತ ಸಿಲಿಂಡರ್ ದರ 698.50 ರೂಪಾಯಿಗೆ ಎರಿಕೆ ಆದಂತಾಗಿದೆ. ಇನ್ನೂಳಿದಂತೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಸಬ್ಸಿಡಿ ಸಿಲಿಂಡರ್ ಬೆಲೆ ಕ್ರಮವಾಗಿ 481.84 ರೂ., 491.31 ರೂ ಹಾಗೂ 496.65 ರೂಪಾಯಿಗೆ ಎರಿಕೆ ಆದಂತಾಗಿದೆ. ಒಟ್ಟಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಬೆಲೆ ಏರಿಕೆ ಯಿಂದ ಕಂಗಲಾಗಿದ್ದ ದೇಶದ ಜನತೆಗೆ ಕೇಂದ್ರದ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರ ಮತ್ತೊಂದು ಶಾಕಿಂಗ್ ನ್ಯೂಸ್ ನೀಡಿದೆ ಎಂದರೆ ತಪ್ಪಾಗಲಾರದು.

ಗುಪ್ತಾಂಗಕ್ಕೆ ಹೊಡೆದು ವ್ಯಕ್ತಿಯ ಕೊಲೆ

ಚಿಕ್ಕೋಡಿ: ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿಹಾಕಿ, ಗುಪ್ತಾಂಗಕ್ಕೆ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ನಡೆದಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೌಜಲಗಿ ಗ್ರಾಮದ ದುಂಡಪ್ಪ ಪುಂಡಲೀಕ ಹೊಸಮನಿ (28) ಎಂಬಾಂತನೇ ಸಾವನ್ನಪ್ಪಿದ ರ್ದುದೈವಿಯಾಗಿದ್ದಾನೆ. ದುಂಡಪ್ಪನ ಸಾವಿಗೆ ಗ್ರಾಮದ ಅಶೋಕ ಲಕ್ಷ್ಮಣ ಹೊಸಮನಿ, ಶಿವಲಿಂಗ ಲಕ್ಷ್ಮಣ ಹೊಸಮನಿ, ಲಕ್ಷ್ಮಣ ದುಂಡಪ್ಪ ಹೊಸಮನಿ, ರೇವತಿ ಅಶೋಕ ಹೊಸಮನಿ ಹಾಗೂ ರುಕ್ಮವ್ವ ಲಕ್ಷ್ಮಣ ಹೊಸಮನಿ ಅವರೇ ಕಾರಣ ಎಂದು ಆರೋಪಿಸಿ ಪತ್ನಿ ಸಿದ್ದವ್ವ ಅವರು ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಕುಲಗೋಡ ಪೊಲೀಸ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ ಎಂದು ತಿಳಿದುಬಂದಿದೆ.

ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರದ ಖಾತೆ ಹಂಚಿಕೆಗೆ ಇಂದು ಅಂತಿಮ ತೆರೆ

ಬೆಂಗಳೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದ ಖಾತೆ ಹಂಚಿಕೆಗೆ ಇಂದು ಅಂತಿಮ ತೆರೆ ಬೀಳು ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರು ಇಂದು ಮಧ್ಯಾಹ್ನ ರಾಜ್ಯಪಾಲ ವಜುಬಾಯ್ ವಾಲಾ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ. ಹೀಗಾಗಿ ಇಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮನೆಯಲ್ಲಿ ಕೊನೆ ಸುತ್ತಿನ ಕಸರತ್ತು ನಡೆದಿದೆ ಎಂದು ತಿಳಿದುಬಂದಿದೆ. ಯಾವುದೇ ಗೊಂದಲವಿಲ್ಲದೆ ಸಂಪುಟ ರಚನೆ ಆಗಲಿದೆ ಎಂದು ಉಭಯ ಪಕ್ಷಗಳ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದು, ಈ ಕುರಿತಂತೆ ಸಂಜೆ ವೇಳೆಗೆ ಸಿಎಂ ಹಾಗೂ ಡಿಸಿಎಂ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಬಂಧನ ಭೀತಿ ಹಿನ್ನಲೆಯಲ್ಲಿ ತಲೆ ಮರೆಸಿಕೊಂಡ ದುನಿಯಾ ವಿಜಯ್

ಬೆಂಗಳೂರು : ಮಾಸ್ತಿಗುಡಿ ಚಿತ್ರ ನಿರ್ಮಾಪಕ ಸುಂದರ್ ಗೌಡ ನನ್ನು ಪರಾರಿಯಾಗಲು ಸಹಾಯ ಮಾಡಿದ್ದ ಆರೋಪದ ಮೇರೆಗೆ ನಟ ದುನಿಯಾ ವಿಜಯ್ಗೆ ಈಗ ಬಂಧನ ಭೀತಿ ಎದುರಾದ ಬೆನ್ನಲ್ಲೇ ತಲೆ ಮರೆಸಿಕೊಂಡಿದ್ದಾರೆ. ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ನಿನ್ನೆಯಷ್ಟೇ ದುನಿಯಾ ವಿಜಯ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ತಮ್ಮ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ವಿಜಯ್ ಯಾರ ಸಂಪರ್ಕಕ್ಕೂ ಸಿಗದೆ ತಲೆ ಮೆರೆಸಿಕೊಂಡಿದ್ದಾರೆ. ಪೊಲೀಸರು ವಿಜಯ್ ಅವರ ಮೊಬೈಲ್ ಆಧಾರದ ಮೇಲೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಶೋಧ ಕಾರ್ಯ ಮುಂದುವರೆದಿದೆ. 'ಮಾಸ್ತಿಗುಡಿ' ಸಿನಿಮಾ ಚಿತ್ರೀಕರಣದ ವೇಳೆ ಇಬ್ಬರು ಖಳನಟರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸುಂದರ್ ಗೌಡ ವಿರುದ್ಧ ರಾಮನಗರದ ಜೆಎಂಎಫ್ಸಿ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಆ ವೇಳೆ ಸುಂದರ್ನನ್ನು ಬಂಧಿಸಲು ತಾವರೆಕೆರೆ ಪೊಲೀಸರು ಬಂದಾಗ ದುನಿಯಾ ವಿಜಯ್ ಮಧ್ಯ ಪ್ರವೇಶಿಸಿದಾಗ ಸುಂದರ್ ಗೌಡ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದರು. ಈ ಸಂಬಂಧ ತಾವರೆಕೆರೆ ಪೊಲೀಸರು ನೀಡಿದ ದೂರಿನ ಆಧಾರದ ಮೇಲೆ ದುನಿಯಾ ವಿಜಯ್ ವಿರುದ್ಧ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಾಗಿದನ್ನು ಇಲ್ಲಿ ಸ್ಮರಿಸಬಹುದು.

ಜೆಡಿಎಸ್ ಸಮ್ಮೀಶ್ರಸರಕಾರದಲ್ಲಿ ಕೆಂಪಯ್ಯಗೆ ಗೇಟ್ ಪಾಸ್ ?

ಬೆಂಗಳೂರು: ರಾಜ್ಯದ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಗೃಹ ಇಲಾಖೆ ಸಲಹೆಗಾರರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯಗೆ ಗೇಟ್ ಪಾಸ್ ನೀಡಲು ಚಿಂತನೆ ನಡೆದಿದೆ. ಅವರನ್ನು ಸಲಹೆಗಾರ ಹುದ್ದೆಯಲ್ಲಿ ಮುಂದುವರೆಸಲು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಹಮತ್ಯ ವ್ಯಕ್ತಪಡಿಸಿಲ್ಲ ಎಂದು ಉನ್ನತ ಮೂಲಗಳು ಖಚಿತ ಪಡಿಸಿವೆ. ನೂತನ ಸರ್ಕಾರದಲ್ಲಿ ಗೃಹ ಇಲಾಖೆಯ ಸಲಹೆಗಾರರಾಗಿ ಮುಂದುವರೆಯಲು ಕೆಂಪಯ್ಯ ಯತ್ನಿಸಿದ್ದ ಬೆನ್ನಲ್ಲೇ ಕುಮಾರಸ್ವಾಮಿ ಅವರು ಗೃಹ ಇಲಾಖೆಗೆ ಸಲಹೆಗಾರರ ಅಗತ್ಯವಿಲ್ಲ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ ಎನ್ನಲಾಗಿದೆ. ನಿನ್ನೇಯಷ್ಟೇ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ, ಪೊಲೀಸ್ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇರುವುದಿಲ್ಲ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಿ ಎಂದು ಖಡಕ್ ಸಂದೇಶ ರವಾನಿಸಿದ್ದ ಬೆನ್ನಲ್ಲೇ ಈ ಮಾಹಿತಿ ಹೊರಬಿದ್ದಿದೆ. ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಆಪ್ತ ಕೆಂಪಯ್ಯ ಗೆ ಇರಿಸುಮುರಿಸು ತಂದಿದೆ. ಮುಂದೆ ಯಾವ ರೀತಿ ತಿರುವು ಪಡೆಯಲಿದೆ ಎಂಬುದು ಇನ್ನಷ್ಟೇ ಕಾದುನೋಡಬೇಕಿದೆ.

ಭೀಕರ ರಸ್ತೆ ಅಪಘಾತದಲ್ಲಿ 10 ಜನ ಸಾವು

ಮುಂಬೈ: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತವೊಂದರಲ್ಲಿ ಹತ್ತು ಜನ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದಲ್ಲಿ ಸಂಭವಿಸಿದೆ. ಕಾರು ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 10 ಜನ ಸಾವಿಗೀಡಾಗಿದ್ದಾರೆ. ಯವತ್ಮಾಲ್ನ ಅರ್ನಿ ಬಳಿ ಶುಕ್ರವಾರ ಬೆಳಗಿನ ಜಾವ ಈ ದುರಂತ ನಡೆದಿದ್ದು, ಈ ಘಟನೆಯಲ್ಲಿ 10 ಜನರು ಮೃತಪಟ್ಟರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ಮುಂದುವರೆದಿದೆ.

ಉತ್ತರ ಪ್ರದೇಶದ ಉಪಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಗೆ ಭಾರಿ ಹಿನ್ನಡೆ

ನವದೆಹಲಿ: ಉತ್ತರ ಪ್ರದೇಶದ ಉಪಚುನಾವಣೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಗೆ ಭಾರಿ ಹಿನ್ನಡೆಯಾಗಿದೆ. ಪ್ರತಿಪಕ್ಷಗಳು ಮತ್ತೆ ಒಂದಾಗಿ ಹೋರಾಟ ನಡೆಸಿದ ಪರಿಣಾಮ ಕೇಸರಿಯ ಭಾರೀ ಓಟಕ್ಕೆ ಬ್ರೇಕ್ ಬಿದ್ದಂತಾಗಿದೆ. ಬಿಜೆಪಿಯಿಂದ ತೆರವಾದ ಮೂರು ಸ್ಥಾನಗಳಿಗೆ ನಡೆದ ಲೋಕಸಭೆ ಉಪಚುನಾವಣೆಯಲ್ಲಿ 2 ಕ್ಷೇತ್ರ ಕಳೆದುಕೊಂಡ ಬಿಜೆಪಿ ಕೇವಲ ಪಲ್ಘಾರ್ ಲೋಕಸಭಾ ಕ್ಷೇತ್ರವೊಂದನ್ನು ಮಾತ್ರ ಉಳಿಸಿಕೊಳ್ಳಲು ಯಶಸ್ವಿಯಾಗಿದೆ. ಉತ್ತರಪ್ರದೇಶದ ಕೈರಾನಾ ಲೋಕಸಭೆ ಕ್ಷೇತ್ರದಲ್ಲಿ ಆರ್ಎಲ್ಡಿ ಗೆಲುವಿನ ನಗೆ ಬೀರಿದರೆ, ನೂಪುರ ವಿಧಾನಸಭೆ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ಜಯಭೇರಿ ಬಾರಿಸಿದೆ. ಇದೇ ವೇಳೆ ಮಹಾರಾಷ್ಟ್ರದಲ್ಲಿ ಕೂಡ ಒಂದು ಸೀಟ್ ಉಳಿಸಿಕೊಂಡಿದ್ದು ಮತ್ತೊಂದು ಕ್ಷೇತ್ರವನ್ನು ಕಳೆದುಕೊಂಡಿದೆ. ಭಂದಾರಾ- ಗೊಂಡಿಯಾ ಲೋಕಸಭೆ ಕ್ಷೇತ್ರದಲ್ಲಿ ಪ್ರತಿಪಕ್ಷ ಎನ್ಸಿಪಿ ಗೆಲುವಿನ ನಗೆ ಬೀರಿದ್ದು, ಆಡಳಿತರೂಢ ಬಿಜೆಪಿಗೆ ಭಾರಿ ಹಿನ್ನಡೆಯನ್ನುಂಟು ಮಾಡಿದೆ. Twitter Ads info and privacy ಬಿಹಾರದ ಜೋಕಿತ್ ವಿಧಾನಸಭೆ ಚುನಾವಣೆಯಲ್ಲಿ ಆರ್ಜೆಡಿ ಅಭ್ಯರ್ಥಿ 41 ಸಾವಿರ ಮತಗಳ ಭಾರೀ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಆಡಳಿತಾರೂಢ ನಿತೀಶ್ ಕುಮಾರ್ ಅವರ ಪಕ್ಷಕ್ಕೆ ತಿರುಗೇಟು ನೀಡಿದೆ. ಇದೇ ವೇಳೆ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಮಾತನಾಡಿ, ಮುಂದಿನ ದಿನಗಳಲ್ಲಿ ಎಸ್ಪಿ, ಬಿಎಸ್ಪಿ ಜತೆ ಮೈತ್ರಿ ಮಾಡಿಕೊಂಡು ಜೆಡಿಯು-ಬಿಜೆಪಿ ಮೈತ್ರಿಕೂಟಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಗುಡುಗಿದ್ದಾರೆ. ಮೇಘಾಲಯದಲ್ಲಿ ಇತ್ತೀಚೆಗೆಷ್ಟೇ ಅಧಿಕಾರದ ಗದ್ದುಗೆ ಏರಿದ್ದ ಬಿಜೆಪಿಗೆ ಕಾಂಗ್ರೆಸ್ ಬಿಗ್ ಶಾಕ್ ಕೊಟ್ಟಿದೆ. ಆಮ್ಪತಿ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕೇರಳದಲ್ಲಿ ಸಿಪಿಎಂ ತನ್ನ ಸ್ಥಾನವನ್ನು ಉಳಿಸಿಕೊಂಡರೆ, ಪಂಜಾಬ್ನಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಅದೇ ರೀತಿ ಜಾರ್ಖಂಡ್ನಲ್ಲಿ ಜೆಎಂಎಂ ತನ್ನ ಎರಡೂ ಸ್ಥಾನಗಳನ್ನು ಉಳಿಸಿಕೊಂಡಿದೆ. ಒಟ್ಟಿನಲ್ಲಿ ಈ ಉಪ ಚುನಾವಣೆಯಲ್ಲಿ ಪ್ರತಿಪಕ್ಷಗಳು ಬಿಜೆಪಿಗೆ ಬಹುತೇಕ ಕಡೆ ಸೋಲಿನ ರುಚಿ ತೋರಿಸಿದ್ದು, ಮುಂಬರುವ ಲೋಕಸಭೆ ಚುನಾವಣೆಗೆ ಈಗಿನಿಂದಲೇ ತಾಲೀಮು ಆರಂಭಿಸಿವೆ. ಇದು ಯಾವ ರೀತಿ ಫಲಕೊಡಲಿದೆ ಎಂಬುದು ಕಾದು ನೋಡಬೇಕಿದೆ.

200 ಅಡಿ ಆಳದ ಪ್ರಪಾತಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಜೋಡಿಹಕ್ಕಿಗಳು

ತಿರುವನಂತಪುರಂ: 200 ಅಡಿ ಆಳದ ಪ್ರಪಾತಕ್ಕೆ ಬಿದ್ದುಯುವಜೋಡಿಯೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕಣ್ಣೂರಿನಲ್ಲಿ ಬೆಳಕಿಗೆ ಬಂದಿದೆ. ಕಂಜಿರಕೊಳ್ಳಿ ಶಶಿಪಾರಾದ ಪ್ರವಾಸಿತಾಣದಲ್ಲಿಈ ಘಟನೆ ನಡೆದಿದ್ದು, ಕಮಲ್ ಕುಮಾರ್(22) ಹಾಗೂ ಅಶ್ವತಿ(20) ಆತ್ಮಹತ್ಯೆ ಮಾಡಿಕೊಂಡ ಜೋಡಿಹಕ್ಕಿಗಳಾಗಿದ್ದಾರೆ. ಇಬ್ಬರೂ ಪಾಪಿನಿಸೆರಿ ನಿವಾಸಿಗಳಾಗಿದ್ದು, ಕಮಲ್ ಹಾಗೂ ಅಶ್ವತಿ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಇವರ ಮದುವೆಗೆ ಕುಟುಂಬದವರು ನಿರಾಕರಿಸಿದ್ದರು ಎನ್ನಲಾಗಿದೆ. ಹೀಗಾಗಿ ಮನನೊಂದ ಈ ಜೋಡಿ ವೇಲ್ ನಲ್ಲಿ ಪರಸ್ಪರ ಕಟ್ಟಿಕೊಂಡು ಪ್ರಪಾತಕ್ಕೆ ಹಾರಿ ತಮ್ಮ ಪ್ರಾಣ ಬಿಟ್ಟಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ ಮಧ್ಯಾಹ್ನ ಕೆಎಲ್ 13ಎಡಿ 6338 ನಂಬರ್ ನ ಬಜಾಜ್ ಪಲ್ಸರ್ ಬೈಕ್ ಕಂಡುಬಂದಿತ್ತು. ಬೈಕ್ ನೋಡಿದ ಸ್ಥಳೀಯರು ಅಕ್ಕಪಕ್ಕ ಹುಡುಕಾಟ ನಡೆಸಿದಾಗ ಶಶಿಪಾರಾದ ಪ್ರವಾಸಿತಾಣದ 200 ಅಡಿ ಆಳದಲ್ಲಿ ಪ್ರೇಮಿಗಳ ಮೃತದೇಹ ಪತ್ತೆಯಾಗಿದೆ. ಈ ಕುರಿತು ಪಯ್ಯವೂರ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿ.ಕೆ. ಶಿವಕುಮಾರ್ ಆಪ್ತರ ಮನೆ ಮೇಲೆ ಸಿಬಿಐ ದಾಳಿ

ಬೆಂಗಳೂರು: ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅವರ ಆಪ್ತರ ಮನೆ ಮೇಲೆ ಗುರುವಾರ ಮಧ್ಯಾಹ್ನ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ, ತಪಾಸಣೆ ಆರಂಭಿಸಿದ್ದಾರೆ. ನಿನ್ನಯಷ್ಟೇ ಡಿಕೆಶಿ ಆಪ್ತರ ಮನೆ ಮೇಲೆ ದಾಳಿ ನಡೆಸಲು ಬೆಂಗಳೂರಿನ ಸಿಬಿಐ ನ್ಯಾಯಾಲಯದಲ್ಲಿ ಅನುಮತಿ ಕೋರಿದ್ದ ಅಧಿಕಾರಿಗಳ ಮನವಿಗೆ ಸ್ಪಂದಿಸಿದ್ದ ನ್ಯಾಯಾಲಯ ಹನ್ನೊಂದು ಜನರ ಮನೆಗಳನ್ನು ಶೋಧ ನಡೆಸಲು ಸರ್ಚ್ ವಾರಂಟ್ ಜಾರಿಗೊಳಿಸಿತ್ತು. ಸಿಬಿಐನ 82 ನೇ ಕೋರ್ಟ್ನ ನ್ಯಾಯಾಧೀಶೆ ಪುಷ್ಪಾಂಜಲಿದೇವಿ ಅವರು ಈ ಆದೇಶ ಹೊರಡಿಸಿದ್ದರು. ಈ ಹಿನ್ನಲೆಯಲ್ಲಿ ವಿಧಾನ ಪರಿಷತ್ ಸದಸ್ಯ ರವಿ, ಪಾಲುದಾರ ಸಚಿನ್ ನಾರಾಯಣ ಸೇರಿದಂತೆ ಅನೇಕ ಆಪ್ತರ ಮನೆ ಮೇಲೆ ದಾಳಿ ಮುಂದುವರೆದಿದೆ. ವಿಶೇಷವೆಂದರೆ ಈ ಹನ್ನೊಂದರ ಪೈಕಿ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರ ಮನೆಗಳ ಹೆಸರು ಇಲ್ಲದಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಡಿಕೆಶಿಗೆ ಕರೆ ಮಾಡಿ ಮಾತನಾಡಿದ್ದ ಅಮಿತ್ ಶಾ : ಹೊಸ ಬಾಂಬ್ ಸಿಡಿಸಿದ ಸಿಎಂ ಲಿಂಗಪ್ಪ

ಬೆಂಗಳೂರು : ಗುಜರಾತ್ ನ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಡಿ.ಕೆ. ಶಿವಕುಮಾರ ಅವರಿಗೆ ಕರೆ ಮಾಡಿ ಆಮಿಷ ಒಡ್ಡಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. ಅವರು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಆರೋಪ ಮಾಡಿದ್ದಾರೆ. ಅಮಿತ್ ಶಾ ಅವರು ಕರೆ ಡಿ.ಕೆ. ಶಿವಕುಮಾರ್ ಅವರಿಗೆ ಮಾತನಾಡಿದರು. 38 ಶಾಸಕರು ನೀನು ಇಟ್ಟಕೋ, ನನಗೆ ನಾಲ್ಕು ಜನ ಕೊಡು, ನಾನು ನಿನಗೆ ದೊಡ್ಡ ಉಪಕಾರ ಮಾಡ್ತಿನಿ ಎಂದು ಹೇಳಿದ್ದರು. ಆದರೆ ಇದಕ್ಕೆ ಡಿಕೆಶಿ ನಿರಾಕರಿಸಿದ್ದರು.ಅಲ್ಲದೆ, ನಾನು ಕಾಂಗ್ರೆಸ್ಸಿಗ ಎಂದು ಅಮಿತ್ ಶಾ ಅವರಿಗೆ ಹೇಳಿದ್ದರು. ಆದರೂ ಸ್ಪಲ್ಪ ಯೋಚಿಸಿ ಎಂದು ಸಲಹೆ ನೀಡಿದ್ದರು. ಇದಲ್ಲದೆ, ಕಾಂಗ್ರೆಸ್ ರಕ್ತ ನನ್ನ ಮೈಯಲ್ಲಿ ಹರಿಯುತ್ತಿದೆ ಎಂದು ಹೇಳಿದ್ದರು ರಾಜಕೀಯ ವಲಯದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ. ಸಿಬಿಐ ದಾಳಿ ನಡೆಸಿರುವ ಸಂದರ್ಭದಲ್ಲಿ ಇಂತಹ ಗಂಭೀರ ಆರೋಪ ಮಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ರಾಜರಾಜೇಶ್ವರಿಯಲ್ಲಿ ಕಾಂಗ್ರೆಸ್- ಜೆಡಿಎಸ್ ಒಳ ಒಪ್ಪಂದ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡು ಬಿಜೆಪಿಯನ್ನು ಸೋಲಿಸಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ. ಅವರು ಗುರುವಾರ ಡಾಲರ್ಸ್ ಕಾಲೋನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಣ ಬಲದ ಮುಂದೆ ಏನೂ ನಡೆಯುವುದಿಲ್ಲ ಎನ್ನುವ ವಾತಾವರಣ ಸೃಷ್ಠಿಯಾಗಿದೆ ಎನ್ನುವುದಕ್ಕೆ ಫಲಿತಾಂಶ ನಿದರ್ಶನ ವಾಗಿದೆ ಎಂದರು. ಇದೇ ವೇಳೆ ಬಿಜೆಪಿ ಅಭ್ಯರ್ಥಿ ಮುನಿರಾಜುಗೌಡ ಅವರ ಸೋಲಿಗೆ ತೀವ್ರ ಬೇಸರ ವ್ಯಕ್ತಪಡಿಸಿದ ಯಡಿಯೂರಪ್ಪ ಅವರು ಮೈತ್ರಿ ಸರ್ಕಾರದ ಒಳ ಒಪ್ಪಂದದ ಬಹಿರಂಗ ಚರ್ಚೆ ಮಾಡುವ ಅಗತ್ಯವಿಲ್ಲ, ಇದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರು.

ಆರ್ ಆರ್ ನಗರ ಫಲಿತಾಂಶ ನಿರೀಕ್ಷಿತ ಎಂದ ಕುಮಾರಸ್ವಾಮಿ

ಬೆಂಗಳೂರು : ಜೆಡಿಎಸ್-ಕಾಂಗ್ರೆಸ್ ಸಮ್ಮೀಶ್ರ ಸರಕಾರ ರಚನೆ ನಂತರ ನಡೆದ ರಾಜರಾಜೇಶ್ವರಿ ನಗರದ ಮೊದಲ ಚುನಾವಣೆಯ ಫಲಿತಾಂಶ ನಿರೀಕ್ಷಿತವಾಗಿತ್ತು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಅವರು ಗುರುವಾರ ಫಲಿತಾಂಶ ಪ್ರಕಟಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಜಯಭೇರಿ ಬಾರಿಸಬಾರದು ಎಂದು ಪಣತೊಡಲಾಗಿತ್ತು. ಅದೇ ರೀತಿ ಫಲಿತಾಂಶ ಬಂದಿರುವುದು ಸಮಾಧಾನ ತಂದಿದೆ ಎಂದರು. ಕಾಂಗ್ರೆಸ್ ಜೆಡಿಎಸ್ ನಡುವಿನ ಭಿನ್ನಾಭಿಪ್ರಾಯದ ಲಾಭ ಪಡೆದು ಬಿಜೆಪಿ ಜಯಭೇರಿ ಬಾರಿಸಲು ಹುನ್ನಾರನಡೆಸಿತ್ತು. ಆದರೆ ಅದು ಸಫಲವಾಗಲಿಲ್ಲ ಎಂದು ಕುಮಾರಸ್ವಾಮಿ ಕುಟುಕಿದರು.

ಮಗನ ಕೊಂದು ಆತ್ಮಹತ್ಯೆಗೆ ಯತ್ನಿಸಿದ ನಿರೂಪಕ ಚಂದನ್ ಪತ್ನಿ ಮೀನಾ

ಬೆಂಗಳೂರು : ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದ ನಿರೂಪಕ ಚಂದನ್ ಪತ್ನಿ ಮೀನಾ ಮಗ ತುಷಾರ್ ಕತ್ತು ಕೊಯ್ದು ಕೊಲೆ ಮಾಡಿ ಆನಂತರ ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ 13 ವರ್ಷದ ಮಗ ತುಷಾರ್ ನನ್ನು ಕತ್ತು ಕೊಯ್ದು ಕೊಲೆ ಮಾಡಿ ಆನಂತರ ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದರಿಂದಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಮೀನಾ ಅವರನ್ನುಕೂಡಲೇ ದೊಡ್ಡಬಳ್ಳಾಪುರದ ಕೋಲಾಂಬಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವೈದ್ಯರು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಅವರ ಪರಿಸ್ಥಿತಿ ಗಂಭೀರವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿ ಮತ್ತೇ ಕೈ ಹಿಡಿದ ಮತದಾರರು

ಬೆಂಗಳೂರು : ತೀವ್ರ ಕುತೂಹಲ ಕೆರಳಿಸಿದ್ದ ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರ ಕೈ ಹಿಡಿದಿದ್ದಾರೆ. ಮುನಿರತ್ನ ಅವರು ಸತತ ಮುನ್ನಡೆ ಸಾಧಿಸಿಕೊಳ್ಳುವ ಮೂಲಕ 43 ಸಾವಿರ ಮತಗಳ ಭಾರೀ ಗೆಲುವಿನ ಅಂತರ ಸಾಧಿಸಿದ್ದಾರೆ. ಇನ್ನೂ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಗೌಡ ದ್ವಿತೀಯ ಸ್ಥಾನದಲ್ಲಿದ್ದರೆ, ನಟಿ ಅಮೂಲ್ಯ ಮಾವ ಹಾಗೂ ಜೆಡಿಎಸ್ ಅಭ್ಯರ್ಥಿ ಜಿ.ಎಚ್. ರಾಮಚಂದ್ರ ಅವರು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇದೇ ವೇಳೆ ಚಪ್ಪಲಿ ಚಿಹ್ನೆ ಪಡೆದಿದ್ದ ಪಕ್ಷೇತರ ಅಭ್ಯರ್ಥಿ ಹುಚ್ಚ ವೆಂಕಟ ಅವರು ನೋಟಾ ಕ್ಕಿಂತ ಕಡಿಮೆ ಮತಗಳನ್ನು ಪಡೆದಿರುವುದು ವಿಶೇಷವಾಗಿದೆ. 9 ಸಾವಿರಕ್ಕಿಂತ ಹೆಚ್ಚಿನ ನಕಲಿ ಗುರುತಿನ ಚೀಟಿಯಿಂದಾಗಿ ಆರ್ ಆರ್ ನಗರ ವಿಧಾನ ಸಭಾ ಚುನಾವಣೆ ಮುಂದೂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಮಾಡಿದ ದುನಿಯಾ ವಿಜಯ್

ಬೆಂಗಳೂರು : ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿದ ಹಿನ್ನಲೆಯಲ್ಲಿ ನಟ ದುನಿಯಾ ವಿಜಯ್ ವಿರುದ್ಧ ಪ್ರಕರಣ ದಾಖಲಾಗಿದೆ. ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ನನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇರೆಗೆ ಪೊಲೀಸರು ದುನಿಯಾ ವಿಜಯ್ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ಹಾಗೂ ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಗೌಡನನ್ನು ಮನೆಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದ ಖಳ ನಟರಾದ ಅನಿಲ್ ಹಾಗೂ ಉದಯ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಂದರ್ ಗೌಡ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ರಾಮನಗರ ಜೆಎಂಎಫ್ಸಿ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ಈ ಹಿನ್ನಲೆಯಲ್ಲಿ ಸುಂದರ್ನನ್ನು ಬಂಧಿಸಲು ಬಂದಿದ್ದ ತಾವರೆಕೆರೆ ಪೊಲೀಸರಿಗೆ ನಾನೇ ಪೊಲೀಸ್ ಠಾಣೆಗೆ ಕರೆತರುತ್ತೇನೆ ಎಂದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು, ಆಗ ಬಟ್ಟೆ ಬದಲಿಸಿಕೊಂಡು ಬರುವುದಾಗಿ ಹೇಳಿ ಅಲ್ಲಿಂದ ಸುಂದರ್ ಪರಾರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಗೌರಿ ಲಂಕೇಶ್ ಪ್ರಕರಣದ ಚಾರ್ಜಶೀಟ್ ಸಲ್ಲಿಸಿದ ಪೊಲೀಸರು

ಬೆಂಗಳೂರು : ಹಿರಿಯಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆಸಂಬಂಧಿಸಿದಂತೆ ರಾಜರಾಜೇಶ್ವರಿ ಪೊಲೀಸ್ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 2017ರ ಸೆಪ್ಟೆಂಬರ್ 05ರಂದು ರಾತ್ರಿ 8ಗಂಟೆ ಸುಮಾರಿಗೆ ಐಡಿಯಲ್ ಹೋಂ ಬಡಾವಣೆಯ 15ನೇ ಕ್ರಾಸ್ ನಲ್ಲಿರುವ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಶೂಟ್ ಮಾಡಿ ಹತ್ಯೆಮಾಡಿದ್ದ ಪ್ರಕರಣದ ತನಿಖೆ ವಿಶೇಷ ತನಿಖಾ ತಂಡಕ್ಕೆ ವಹಿಸಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ವಿಶೇಷ ತನಿಖಾ ತಂಡವು ಮಹತ್ವದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಕೆ.ಟಿ. ನವೀನ್ ಕುಮಾರ ನನ್ನು ಬಂಧಿಸಲಾಗಿದೆ. ನವೀನ್ ಜೊತೆಗೆ ಪ್ರವೀಣ್ ಹಾಗೂ ಇನ್ನೂ ಹಲವು ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ತಿಳಿದುಬಂದಿದೆ. ಸಾಕಷ್ಟು ಸಾಕ್ಷ್ಯಾಧಾರಗಳು ದೊರೆತ ಹಿನ್ನಲೆಯಲ್ಲಿ ಅವರ ಮೇಲೆ 302, 114, 118, 120(ಬಿ), 35 ಐಪಿಸಿ ಜೊತೆಗೆ 3, 25 ಶಸ್ತ್ರಾಸ್ತ ಕಾಯ್ದೆಯಂತೆ ಮೂರನೇ ಎಸಿಎಂ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ.

ಕೇಂದ್ರದ ಬಿಜೆಪಿ ಸರ್ಕಾರದಿಂದ ನಮ್ಮ ಕುಟುಂಬಕ್ಕೆ ಚಿತ್ರಹಿಂಸೆ

ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರವು ರಾಜಕೀಯ ಕಾರಣಗಳಿಂದ ನಮ್ಮ ಕುಟುಂಬಕ್ಕೆ ಚಿತ್ರಹಿಂಸೆ ನೀಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಅವರು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಗುರುವಾರ ತುರ್ತು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು. ಬಿಜೆಪಿ ನಾಯಕರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಉದ್ದೇಶಪೂರ್ವಕವಾಗಿ ಹಿಂಸೆ ನೀಡುತ್ತಿದ್ದು, ಡಿ.ಕೆ. ಸುರೇಶ್ ಸೇರಿದಂತೆ 11 ಆಪ್ತರ ಮನೆಯ ಸರ್ಚ್ ವಾರಂಟ್ ಹೊರಬಿದ್ದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದಕ್ಕೆ ಕಾನೂನು ವೇದಿಕೆಯಲ್ಲೇ ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಸಿದ ಅವರು ಬಿಜೆಪಿಯ ಇಂತಹ ಗೊಡ್ಡು ಬೆದರಿಕೆಯ ರಾಜಕಾರಣಕ್ಕೆ ನಾವು ಬಗ್ಗಲ್ಲ ಎಂದು ಗುಡುಗಿದರು.

ಕೇಂದ್ರ ಸರಕಾರದಿಂದ ಐಟಿ, ಸಿಬಿಐ ದುರ್ಬಳಕೆ

ಬೆಂಗಳೂರು : ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿರುವ ಐಟಿ, ಇಡಿ, ಸಿಬಿಐಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ಷಾ ಅವರು ನೇರವಾಗಿ ನಮ್ಮ ಹಾಗೂ ನಮ್ಮ ಕುಟುಂಬ ಸದಸ್ಯರು, ಸಂಬಂಧಿಗಳು, ಸ್ನೇಹಿತರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿಯ ವಿರುದ್ಧ ಧ್ವನಿ ಎತ್ತುವವರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆಪಾದಿಸಿದ ಅವರು 11 ಕಡೆ ಸಿಬಿಐ ದಾಳಿ ಸಂಚು ರೂಪಿಸಲಾಗಿದೆ ಎಂದ ಅಂಶ ಬೆಳಕಿಗೆ ಬಂದಿದೆ ಎಂದು ಕಿಡಿಕಾರಿದರು. ಈ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಎಲ್ಲವನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದರು.

ಮಹಾರಾಷ್ಟ್ರದ ಕೃಷಿ ಸಚಿವ ಪಾಂಡುರಂಗ ಫುಂಡ್ಕರ್ ಇನ್ನಿಲ್ಲ

ಮುಂಬೈ: ಮಹಾರಾಷ್ಟ್ರದ ಬಿಜೆಪಿ ಹಿರಿಯ ನಾಯಕ ಹಾಗೂ ಕೃಷಿ ಸಚಿವ ಪಾಂಡುರಂಗ ಫುಂಡ್ಕರ್ (67) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರು ಇತ್ತೀಚೆಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಗುರುವಾರ ಬೆಳಗಿನ ಜಾವ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಯಲ್ಲೇ ಇಹಲೋಕ ತ್ಯಜಿಸಿದ್ದಾರೆ. ಖಾಮ್ಗಾಂವ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗುವ ಮೂಲಕ ದೇವೇಂದ್ರ ಫಡ್ನಾವಿಸ್ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಆಯ್ಕೆಯಾಗಿದ್ದರು. ಪಾಂಡುರಂಗ ಫುಂಡ್ಕರ್ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿ, ಮೂರು ಬಾರಿ ಸಂಸದರಾಗಿ ಹಾಗೂ ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 1 ರೂಪಾಯಿ ಕಡಿತಗೊಳಿಸಿದ ಕೇರಳ ಸರ್ಕಾರ

ತಿರುವನಂತಪುರಂ: ಕೇರಳ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ 1 ರೂಪಾಯಿ ಕಡಿತಗೊಳಿಸಿ, ತನ್ನ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದೆ. ನಿರಂತರ ದರ ಏರಿಕೆಯಿಂದ ಕಂಗಾಲಾದ ಜನತೆಗೆ ಕೇರಳದ ಸಿಪಿಐಎಂ ನ ಪಿಣರಾಯಿ ವಿಜಯನ್ ಅವರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ಗೆ 1 ರೂಪಾಯಿ ಕಡಿತಗೊಳಿಸಿ ಆದೇಶ ಹೊರಡಿಸಿದೆ. ಈ ಆದೇಶವೂ ನಾಳೆಯಿಂದ ಅಂದರೆ ಜೂನ್ 1ರಿಂದ ಜಾರಿಗೆ ಬರಲಿದ್ದು, ಈ ಮಹತ್ವದ ನಿರ್ಧಾರವನ್ನು ರಾಜ್ಯದ ಜನತೆ ಮುಕ್ತ ಕಂಠದಿಂದ ಪ್ರಶಂಸಿದೆ. ಇದೇ ವೇಳೆ ಕೇಂದ್ರ ಸರ್ಕಾರವು ಕೇರಳ ಸರಕಾರದ ಕ್ರಮವನ್ನು ಸ್ವಾಗತಿಸಿದೆ. ಕೇರಳ ಸರ್ಕಾರದ ಈ ಮಹತ್ವದ ನಿರ್ಧಾರಕ್ಕೆ ಅಭಿನಂದಿಸುತ್ತದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಕೇರಳ ಸರಕಾರದ ಕ್ರಮಕ್ಕೆ ವ್ಯಾಪಕ ಸ್ವಾಗತ ವ್ಯಕ್ತವಾಗಿದ್ದು, ಉಳಿದ ರಾಜ್ಯಗಳು ಕೂಡ ಈ ನಿಟ್ಟಿನಲ್ಲಿ ಹೆಜ್ಜೆ ಹಾಕಲಿವೆಯೇ ಎಂಬುದು ಕಾದು ನೋಡಬೇಕಿದೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೂಡ ಅಂತಿಮ

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೂಡ ಅಂತಿಮಗೊಂಡಿದೆ. ಬಿಜೆಪಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಈ ಕುರಿತು ಅಧಿಕೃತವಾಗಿ ಹೆಸರುಗಳನ್ನು ಪ್ರಕಟಿಸಿದ್ದು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡ, ಮಾಜಿ ಸಂಸದೆ ತೇಜಸ್ವಿನಿ ರಮೇಶ್, ಕೆ.ಪಿ.ನಂಜುಂಡಿ ಹಾಗೂ ರಘುನಾಥ್ ಮಲ್ಕಾಪುರೆ ಅವರನ್ನು ಅಂತಿಮಗೊಳಿಸಿದೆ. ಈ ಕುರಿತಂತೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದ ಬಳಿಕ 128ಕ್ಕೂ ಹೆಚ್ಚು ಆಕಾಂಕ್ಷಿಗಳ ಹೆಸರನ್ನು ಹೈಕಮಾಂಡ್ಗೆ ಶಿಫಾರಸ್ಸು ಮಾಡಲಾಗಿತ್ತು. ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸಲಹೆ ಮೇರೆಗೆ ಐವರ ಹೆಸರನ್ನು ಅಖೈರುಗೊಳಿಸಿದೆ. ಆ ಮೂಲಕ ಕಳೆದ ಹಲವು ದಿನಗಳಿಂದ ನಡೆದ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ.

ಬಗೆಹರಿದ ಸಂಪುಟ ಬಿಕ್ಕಟ್ಟು

ಬೆಂಗಳೂರು : ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮೀಶ್ರ ಸರಕಾರದ ಸಚಿವ ಸಂಪುಟದ ಬಿಕ್ಕಟ್ಟು ಕೊನೆಗೂ ಬಗೆಹರಿದಿದೆ. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಪದ್ಮನಾಭನಗರದ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಚಿವ ಸ್ಥಾನಗಳ ಹಂಚಿಕೆಗೆ ತೆರೆ ಎಳೆಯಲಾಗಿದೆ ಎಂದು ತಿಳಿದುಬಂದಿದೆ. ನಿರೀಕ್ಷೆಯಂತೆ ಕೊನೆಗೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಬಳಿಯಲ್ಲಿಯೇ ಹಣಕಾಸು ಖಾತೆ ಉಳಿಯಲಿದೆ. ಇನ್ನೂಳಿದಂತೆ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರಿಗೆ ಗೃಹ ಖಾತೆ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಇದಲ್ಲದೆ, ಕಾಂಗ್ರೆಸ್ ಪಕ್ಷಕ್ಕೆ ಜಲಸಂಪನ್ಮೂಲ, ಇಂಧನ, ಬೆಂಗಳೂರು ಅಭಿವೃದ್ಧಿ, ಸಮಾಜಕಲ್ಯಾಣ ಖಾತೆಗಳನ್ನು ನೀಡಲು ಸಮ್ಮತಿ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಜೂನ್ 2ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ತೀರ್ಮಾನ ಹೊರಬೀಳಲಿದೆ ಎನ್ನಲಾಗಿದೆ.

ಮನನೊಂದು ಯುವತಿ ಆತ್ಮಹತ್ಯೆ

ಧಾರವಾಡ : ಮನನೊಂದು ಯುವತಿಯೊಬ್ಬಳು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ. ಇಲ್ಲಿನ ಹಳೇ ಡಿಎಸ್ಪಿ ಕಚೇರಿ ಬಳಿಯ ನಾಯಕ ಚಾಳ್‌ನಲ್ಲಿ ಬುಧವಾರ ಈ ಘಟನೆ ಬೆಳಕಿಗೆ ಬಂದಿದ್ದು, ನಗರದ ಹಳ್ಳಿಕೇರಿ ಚಾಳ ನಿವಾಸಿ ಶೋಭಾ ಕಿತ್ತೂರ (೨೯) ಎಂಬುವರೇ ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದಾಳೆ. ತಮಗೆ ತಕ್ಕುದಾದ ವರ ಸಿಗಲಿಲ್ಲ ಎಂದು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಉಪ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯೇ ಅವರು ಬಾವಿಗೆ ಬಿದ್ದಿದ್ದು ಬುಧವಾರ ಬೆಳಿಗ್ಗೆ ಮೃತ ಶರೀರ ತೇಲುತ್ತಿದ್ದಾಗ ಸ್ಥಳೀಯರಿಗೆ ಈ ಮಾಹಿತಿ ಗೊತ್ತಾಗಿದೆ. ಕೂಡಲೇ ಉಪ ನಗರ ಠಾಣೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಇನಸ್ಪೆಕ್ಟರ್ ಮಹಾಂತೇಶ ಬಸಾಪೂರ ಅವರು ಸ್ಥಳಕ್ಕೆ ಆಗಮಿಸಿ ಬಾವಿಯಲ್ಲಿನ ಮೃತ ದೇಹವನ್ನು ಬಾವಿಯಿಂದ ಹೊರಕ್ಕೆ ತೆಗೆಯಿಸಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಕರಿಗೆ ಪ್ರಾರ್ಥಿವ ಶರೀರವನ್ನು ಹಸ್ತಾಂತರಿಸಿದ್ದಾರೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ರಾಹಿಂ, ಗೋವಿಂದರಾಜು, ಅರವಿಂದ ಅರಳಿ ಸೇರಿ ನಾಲ್ವರ ಹೆಸರು ಅಂತಿಮಗೊಳಿಸಿದ ಕಾಂಗ್ರೆಸ್

ನವದೆಹಲಿ : ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಜೂನ್ 11 ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಂದ ತೆರವಾಗಿರುವ ನಾಲ್ಕು ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷವೂ ಅಳಿದು ತೂಗಿ ನಾಲ್ವರ ಹೆಸರು ಅಂತಿಮಗೊಳಿಸಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಒಪ್ಪಿಗೆ ಮೇರೆಗೆ ಸಿ.ಎಂ. ಇಬ್ರಾಹಿಂ. ಕೆ. ಗೋವಿಂದರಾಜ್, ಅರವಿಂದಕುಮಾರ ಅರಳಿ ಹಾಗೂ ಕೆ. ಹರೀಶಕುಮಾರ ಅವರನ್ನು ನಾಮನಿರ್ದೇಶನಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಕೇಂದ್ರ ಚುನಾವಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸನೀಕ್ ತಿಳಿಸಿದ್ದಾರೆ. ನಾಮನಿರ್ದೇಶನ ಮಾಡಲು ನಿರ್ಧರಿಸಲಾಗಿರುವ ನಾಲ್ವರು ಅಭ್ಯರ್ಥಿಗಳ ಪೈಕಿ ಮುಸ್ಲಿಂ ಸಮುದಾಯದಿಂದ ಕೇಂದ್ರದ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯರಾಗಿದ್ದ ಸಿ.ಎಂ. ಇಬ್ರಾಹಿಂ ಅವರಿಗೆ ಮತ್ತೇ ಮಣೆ ಹಾಕಲಾಗಿದೆ. ಅದೇ ರೀತಿ ಈಡಿಗ ಸಮುದಾಯದಿಂದ ಮಾಜಿ ವಿಧಾನ ಪರಿಷತ್ ಸದಸ್ಯ ಕೆ. ಗೋವಿಂದರಾಜು ಅವರಿಗೆ ಮನ್ನಣೆ ನೀಡಲಾಗಿದೆ. ಇವರಿಬ್ಬರು ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವುದು ವಿಶೇಷವಾಗಿದೆ. ಇನ್ನೂ ಬೀದರನಿಂದ ಕಾಂಗ್ರೆಸ್ ಮುಖಂಡ ಅರವಿಂದಕುಮಾರ ಅರಳಿ ಅವರನ್ನು ವಿಧಾನಪರಿಷತ್ ಗೆ ನೇಮಿಸಲು ಹೆಸರು ಶಿಫಾರಸು ಮಾಡಿರುವುದು ವಿಶೇಷವಾಗಿದೆ. ಇವರು ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪರಮಾಪ್ತರಾಗಿದ್ದು, ಪರಿಶಿಷ್ಟ ಜಾತಿಗೆ ಸೇರಿದ ಮುಖಂಡರಾಗಿದ್ದಾರೆ. ಕಳೆದ ಹಲವು ದಶಕಗಳಿಂದ ಇವರು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. ಇದೇ ವೇಳೆ ಮಂಗಳೂರಿನಿಂದ ಕೆ ಹರೀಶಕುಮಾರ ಅವರಿಗೆ ನಾಲ್ಕು ಭಾಗಗಳಿಂದ ಅಳಿದು ತೂಗಿ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.

ಮಹ್ಮದ್ ನಲಪಾಡ್ ಜಾಮೀನು ಅರ್ಜಿ ವಜಾ

ಬೆಂಗಳೂರು : ಬೆಂಗಳೂರಿನ ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ಮಾಡಿದ್ದ ಶಾಂತಿ ನಗರ ಶಾಸಕ ಎನ್.ಎ. ಹ್ಯಾರೀಸ್ ಪುತ್ರ ಮಹ್ಮದ್ ನಲಪಾಡ್ ಜಾಮೀನು ಅರ್ಜಿ ವಜಾ ಮಾಡಿ ಸೆಶನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ. ಬುಧವಾರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಸೆಶನ್ಸ್ ನ್ಯಾಯಾಲಯ ನ್ಯಾಯಾಧೀಶರು ಈ ಆದೇಶ ಹೊರಡಿಸಿದ್ದಾರೆ. ಆರೋಪಿ ಪ್ರಭಾವಿಯಾಗಿರುವುದರಿಂದ ಸಾಕ್ಷಿಗಳನ್ನು ನಾಶ ಮಾಡುವ ಸಾಧ್ಯತೆಯಿದೆ. ಅಲ್ಲದೆ, ರಾಜಕೀಯ ಪ್ರಭಾವವಿರುವುದರಿಂದ ಜಾಮೀನು ನೀಡದಂತೆ ವಿದ್ವತ್ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ಎರಡು ಪ್ರಮುಖ ಕಾರಣಗಳನ್ನು ಪರಿಗಣಿಸಿ ಜಾಮೀನು ಅರ್ಜಿ ವಜಾಗೊಳಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ಶ್ಯಾಮಸುಂದರ್, ವಿದ್ವತ್ ಮೇಲಿನ ಹಲ್ಲೆಯಿಂದ ಇಡೀ ಬೆಂಗಳೂರು ಬೆಚ್ಚಿ ಬಿದ್ದಿದೆ. ಬಳಿಕ ಮಲ್ಯ ಹಾಸ್ಪೆಟಲ್ ನಲ್ಲಿ ನಡೆದ ಬೆದರಿಕೆ ಪ್ರಕರಣಕ್ಕೆ ಹನ್ನೊಂದು ಜನರ ಸಾಕ್ಷಿಯಿದೆ. ಹೀಗಾಗಿ ಜಾಮೀನು ನೀಡದಂತೆ ಮನವಿ ಮಾಡಲಾಗಿದೆ. ಮೊದಲ ಬಾರಿಗೆ ಚಾರ್ಜಶೀಟ್ ಸಲ್ಲಿಕೆಯಾಗುವ ಮುನ್ನವೂ ಜಾಮೀನು ನಿರಾಕರಿಸಲಾಗಿತ್ತು. ಇದೀಗ ಚಾರ್ಜಶೀಟ್ ಸಲ್ಲಿಕೆಯಾದ ಬಳಿಕ ಎರಡನೇ ಬಾರಿಗೆ ಜಾಮೀನು ಕೋರಲಾಗಿತ್ತು, ಸಾಕ್ಷಿಗಳಿಗೆ ಬೆದರಿಕೆ ಇರುವುದರಿಂದ ನ್ಯಾಯಾಲಯವು ಜಾಮೀನು ಅರ್ಜಿಯ ವಿಚಾರಣೆ ನಡೆಸಿ ಈ ನಿರ್ಧಾರ ಪ್ರಕಟಿಸಿದೆ ಎಂದರು.

ಡಿ.ಕೆ.ಶಿ- ರೇವಣ್ಣ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ

ಹುಬ್ಬಳ್ಳಿ : . ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ ಹಾಗೂ ಜೆಡಿಎಸ್ ಮುಖಂಡ ಹೆಚ್.ಡಿ. ರೇವಣ್ಣ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಬಿಜೆಪಿಯವರು ಅರಬಿ ಹಾವು ಬಿಡ್ತಾ ಇದ್ದಾರೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಅವರು ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮವರು ಆಗಲಿ, ಕಾಂಗ್ರೆಸ್ನವರಾಗಲಿ ಪಕ್ಷ ಬಿಟ್ಟು ಎಲ್ಲೂ ಹೋಗುವುದಿಲ್ಲ.ಹೊಸಬರಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವುದು ಬೇಡಿಕೆ ಇದೆ ಎಂದರು. ಇನ್ನೂ ಕಾಂಗ್ರೆಸ್ನವರು ಸಚಿವ ಸ್ಥಾನಕ್ಕೆ ಕಚ್ಚಾಟ ಮಾಡಬಾರದು. ಆ ರೀತಿ ಮಾಡಿದ್ರೆ ನಾವು ರಾಜ್ಯದ ಜನರ ವಿಶ್ವಾಸವನ್ನ ಕಳೆದುಕೊಳ್ಳುತ್ತೇವೆ ಎಂದು ಹೇಳಿದರು. ಎರಡೂ ಪಕ್ಷಗಳು ಸೇರಿ ಐದು ವರ್ಷ ಒಳ್ಳೆಯ ಸರ್ಕಾರ ನೀಡಬೇಕು ಎನ್ನುವುದು ನನ್ನ ಆಸೆಯಾಗಿದೆ. ಕಾಂಗ್ರೆಸ್ನವರು ಇದನ್ನು ಅರ್ಥ ಮಾಡಿಕೊಳ್ಳಬೇಕು.ನಾವು ಒಂದು ಗೂಡಬೇಕು ಒಂದು ವೇಳೆ ಒಂದು ಗೂಡದಿದ್ದರೆ, ಈ ಹಿಂದೆ ನಡೆದ ಘಟನೆ ಮತ್ತೆ ಮರಕಳಿಸುತ್ತದೆ ಎಂದು ಎಚ್ಚರಿಸಿದರು. ಮುಖ್ಯಮಂತ್ರಿಗಳಿಗೆ ಹಣಕಾಸು ಖಾತೆ ನೀಡಬೇಕು. . ಹಣಕಾಸು ಖಾತೆ ನಮಗೆ ಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದರೆ ಅದು ಆಗುವುದಿಲ್ಲ.ನಾನು ಎಲ್ಲರಿಗೂ ಹೇಳುವುದು ಒಂದೆ ಯಾರೂ ಪಟ್ಟು ಹಿಡಿಯಬಾರದು, ಈ ಬಗ್ಗೆ ಇವತ್ತು ಇಲ್ಲವೇ ನಾಳೆ ನಿರ್ಧಾರ ಹೊರಬಿಳುತ್ತದೆ ಎಂದರು. ನನ್ನ ತಿಳಿವಳಿಕೆ ಪ್ರಕಾರ ಬಿಜೆಪಿಯವರು ನಮ್ಮ ಸರ್ಕಾರ ಯಾವಾಗ ಬಿಳುತ್ತೆ ಅಂತಾ ನೋಡ್ತಾ ಇದ್ದಾರೆ ಎಂದು ಟೀಕಿಸಿದರು.

ಲಿಂಗಾಯತ ಧರ್ಮದ ಮರು ಶಿಪಾರಸ್ಸು ಮಾಡಲು ಹೇಳಿರವುದುಕೇಂದ್ರದ ಷಡ್ಯಂತ್ರ

ಹುಬ್ಬಳ್ಳಿ : ಕೇಂದ್ರದ ಬಿಜೆಪಿ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮದ ಮರು ಶಿಪಾರಸ್ಸು ಮಾಡುವಂತೆ ಹೇಳಿರುವ ಹಿಂದೆ ದೊಡ್ಡ ಷಡ್ಯಂತ್ರ ಇದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಪಾದಿಸಿದ್ದಾರೆ. ಅವರು ಬುಧವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದು.ನಮ್ಮಲ್ಲಿ ನಮ್ಮಲ್ಲಿ ಜಗಳ ಹಚ್ಚಲು ಕೇಂದ್ರದಪಿತೂರಿಯಾಗಿದೆ ಎಂದರು. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಯಾವುತ್ತು ನಿಲ್ಲುವುದಿಲ್ಲ. ನಾವು ಕಾನೂನು ಹೋರಾಟ ಮಾಡುತ್ತೆವೆ. ನಾವು ಇನ್ನು ಮುಂದೆ ಯಾವುದೇ ರ್ಯಾಲಿ ಮಾಡುವುದಿಲ್ಲ.ಏನೆ ಇದ್ದರೂ ಕಾನೂನು ಹೋರಾಟ ಮಾಡತ್ತೇವೆ ಎಂದರು. ಸಮ್ಮೀಶ್ರ ಸರಕಾರದಲ್ಲಿ ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಒಂದು ವೇಳೆ ಮುಖ್ಯಮಂತ್ರಿಗಳು ನನಗೆ ಸಚಿವ ಸ್ಥಾನ ನೀಡಿದ್ರೆ ಅದನ್ನ ನಿಭಾಯಿಸಲು ನಾನು ಸಿದ್ದನಿದ್ದೇನೆ ಎಂದ ಅವರು ಮಹಾದಾಯಿ, ಕಳಸಾ-ಬಂಡೂರಿ ಸಲುವಾಗಿ ಹಗಲಿರುಳು ಹೋರಾಟ ನಡೆಸಿದ ನವಲಗುಂದ ಶಾಸಕ ಎನ್.ಹೆಚ್.ಕೊನರೆಡ್ಡಿ ಅಂತವರನ್ನು ಜನ ಸೋಲಿಸಿರುವುದು ನೋವು ತಂದಿದೆ ಎಂದು ಹೇಳಿದರು.

ಬಿಜೆಪಿ ನಾಯಕರಿಗೆ ಈಗ ಹಸಿರು ಶಾಲು ನೆನಪಾಗಿದೆ ಎಂದ ಹೊರಟ್ಟಿ

ಹುಬ್ಬಳ್ಳಿ : ಬಿಜೆಪಿ ನಾಯಕರು ಇಷ್ಟು ದಿನ ಕೇಸರಿ ಶಾಲು ಹಾಕುತ್ತಿದ್ದರು, ಈಗ ಅವರಿಗೆ ಹಸಿರು ಶಾಲು ನೆನಪಾಗಿದೆ. ಮುಂದೆ ಮತ್ತೆ ಯಾವ ಶಾಲು ಹಾಕುತ್ತಾರೆಂಬುದು ಗೊತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಕುಟುಕಿದ್ದಾರೆ. ಅವರು ಬುಧವಾರ ಹುಬ್ಬಳ್ಳಿಯಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಬಿಜೆಪಿಯವರು ಕೊಟ್ಟ ಮಾತನ್ನು ಎಲ್ಲಿ ಉಳಿಸಿಕೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದರು. ಕುಮಾರಸ್ವಾಮಿ ಸಾಲ ಮನ್ನಾ ಮಾಡಲಿದ್ದಾರೆ. ಇದು ನೂರಕ್ಕೆ ನೂರರಷ್ಟು ಸತ್ಯವಾಗಿದ್ದು ಇದಕ್ಕೆ ಕಾಂಗ್ರೆಸ್ನವರ ವಿರೋಧ ಇಲ್ಲಾ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಮಾಡಲು ಸಹಮತ ಇದೆ ಎಂದರು. ರೈತರ ಸಾಲ ಮನ್ನಾ ವಿಚಾರ ಕುರಿತಂತೆ ಕುಮಾರಸ್ವಾಮಿ ಕರೆದ ಸಾಲ ಮನ್ನಾ ಸಭೆಗೆ ಯಡಿಯೂರಪ್ಪ ಹೋಗಬೇಕಿತ್ತು.ವಿನಾಕಾರಣ ನೆಪ ಹೇಳಿ ಸಭೆಗೆ ಗೈರು ಆಗಿದ್ದಾರೆ, ರೈತರ ಬಗ್ಗೆ ಕಾಳಜಿ ಇದ್ದವರು ಸಭೆಗೆ ಏಕೆ ಹೋಗಲಿಲ್ಲ ಎಂದು ಪ್ರಶ್ನೆ ಮಾಡಿದ್ರು. ಬಿಜೆಪಿಯವರು ಕಾಂಗ್ರೆಸ್ ಮುಕ್ತ ಮಾಡಲು ಹೊರಟ್ಟಿದ್ದರೂ ಹೀಗಾಗಿ ಯಾವುದೇ ರೀತಿ ಚರ್ಚೆಯಾಗದೆ ಸರ್ಕಾರ ಮಾಡಲು ದೇವೆಗೌಡರು ಒಪ್ಪಿಕೊಂಡಿದ್ದಾರೆ.ನಮ್ಮಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.

ಕುಮಾರಸ್ವಾಮಿಯಿಂದ ರಾಜ್ಯದ ರೈತರಿಗೆ ದ್ರೋಹ

ಬೆಂಗಳೂರು : ರಾಜ್ಯದ ಕೇವಲ ಸಣ್ಣ ಹಾಗೂ ಮಧ್ಯಮ ರೈತರ ಸಾಲಮನ್ನಾ ಮಾಡಲು ನೀವೆ ಬೇಕಾ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಅವರು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ಅವರು ಬುಧವಾರ ಮಧ್ಯಾಹ್ನ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ದಿನಕೊಂದು ಗೊಂದಲದ ಹೇಳಿಕೆ ನೀಡಿ, ರೈತರ ದಾರಿ ತಪ್ಪಿಸುತ್ತಿದ್ದಾರೆ. ಇದು ಅವರು ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಂಡು ಕುಳಿತಿರುವುದು ತೋರಿಸುತ್ತದೆ ಎಂದು ಗುಡುಗಿದ್ದಾರೆ. ಕುಮಾರಸ್ವಾಮಿ ರೈತರಿಗೆ ನಂಬಿಕೆ ದ್ರೋಹ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಜೊತೆಗೆ ಚರ್ಚೆ ಮಾಡಲು ನೀವ್ಯಾಕೆ ಸಿಎಂ ಆಗಬೇಕು. ಚುನಾವಣೆ ಮುನ್ನ ಹೇಳಿದಂತೆ ನಡೆದುಕೊಳ್ಳಿ, 53 ಸಾವಿರ ಕೋಟಿ ಸಾಲಮನ್ನಾ ಮಾಡದಿದ್ದರೆ ನಿಮಗೆ ರಾಜ್ಯದ ರೈತರು ನಿಮ್ಮನ್ನು ನಂಬುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಲಮನ್ನಾ ಹೆಸರಿನಲ್ಲಿ ಕೋಟಿಗಟ್ಟಲೇ ಹಣ ವಸೂಲಿ ಮಾಡಿದ ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು : ಕಳೆದ ಸರಕಾರದ ಅವಧಿಯಲ್ಲಿ ರೈತರ ಸಾಲಮನ್ನಾ ಮಾಡಿಸುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ಅವರು ರೈತರಿಂದ ಕೋಟ್ಯಾಂತರ ರೂಪಾಯಿ ವಸೂಲಿ ಮಾಡಿದ್ದಾರೆ ರೈತ ಮುಖಂಡ ನಾಗರಾಜ್ ಆರೋಪಿಸಿದ್ದಾರೆ. ಅವರು ಕುಮಾರಸ್ವಾಮಿ ಅವರು ಕರೆದಿದ್ದ ರಾಜ್ಯದ ರೈತರ ಸಭೆಯಲ್ಲಿ ತಮ್ಮ ಅಸಮಾಧಾನ ಹೊರಹಾಕಿದರು. ಅವರು ವಸೂಲಿ ಮಾಡಿರುವ ಹಣವನ್ನು ರಾಜ್ಯದ ರೈತರಿಗೆ ಹಿಂತಿರುಗಿಸಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಭೆಯಲ್ಲಿ ಹಾಜರಿದ್ದ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ ಕೂಡ ಹಾಜರಿದ್ದದ್ದು ವಿಶೇಷವಾಗಿದೆ. ಆದರೆ ಈ ಬಗ್ಗೆ ಅವರು ಸಭೆಯಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಹದಿನೈದು ದಿನಗಳಲ್ಲಿ ರಾಹುಲ್ ಗಾಂಧಿ ಜೊತೆಗೆ ಚರ್ಚಿಸಿ ಸಾಲಮನ್ನಾ

ಬೆಂಗಳೂರು : ರಾಜ್ಯದ ರೈತರ ಸಾಲಮನ್ನಾ ಕುರಿತಂತೆ ಹದಿನೈದು ದಿನಗಳ ಒಳಗೆ ರಾಹುಲ್ ಗಾಂಧಿ ಅವರ ಜೊತೆಗೆ ಚರ್ಚೆ ಮಾಡಿ ಅವರ ಸಹಮತ ಪಡೆದು, ವಿಶ್ವಾಸಕ್ಕೆ ತೆಗೆದುಕೊಂಡು ಸಂಪೂರ್ಣ ಚಿತ್ರಣ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಅವರು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರೆದಿದ್ದ ರೈತರ ಸಭೆಯ ಅಧ್ಯಕ್ಷತೆಯ ವಹಿಸಿ ಮಾತನಾಡಿದರು. 10 -15 ದಿನಗಳಲ್ಲಿ ಕಾಲವಕಾಶ ನೀಡುತ್ತೇವೆ. ಅದನ್ನು ಪರಿಶೀಲನೆ ನಡೆಸಿ ಋಣಮುಕ್ತ ಪತ್ರ ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತೇವೆ ಎಂದು ಅಭಯ ನೀಡಿದರು. ಸಣ್ಣ ಹಾಗೂ ಮಧ್ಯಮ ರೈತರ 1ಲಕ್ಷದಿಂದ 1.50 ಲಕ್ಷದವರೆಗೆ ಸಾಲಮನ್ನಾಮಾಡಲಾಗುವುದು ಎಂದು ಪ್ರಕಟಿಸಿದ ಕುಮಾರಸ್ವಾಮಿ ಅವರು 1-04-2009ರಿಂದ 2018ರವರೆಗೆ ಪಡೆದಿದ್ದ ಸಾಲಮನ್ನಾ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ನಾಲ್ಕು ಲಕ್ಷ ತೆರಿಗೆ ಕಟ್ಟಿದವರಿಗೆ ಇದರಲ್ಲಿ ಸೇರ್ಪಡೆ ಮಾಡಬೇಕಾ ಬೇಡವೇ ಎಂದ ಅವರು ಸಾಲ ತೆಗೆದುಕೊಂಡು ಬೇರೆ ಕಡೆ ಬಂಡವಾಳ ಹೂಡಿದವರಿಗೆ ಸಾಲಮನ್ನಾ ವ್ಯಾಪ್ತಿಗೆ ತರಬೇಕಾ, ಎಂಪಿ, ಎಂಎಲ್ಎಗಳು, ಕೈಗಾರಿಕೆಗಳು ಕೃಷಿ ಹೆಸರಿನಲ್ಲಿ ಮಾಡಿರುವ ಸಾಲಮನ್ನಾ ಮಾಡಬೇಕಾ ಎಂದು ಸಲಹೆ ಕೇಳಿದರು. ಮೊದಲ ಹಂತದಲ್ಲಿ ಯಾವ ರೀತಿ ಸಾಲ ಮನ್ನಾ ಮಾಡಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಿದ್ದೇನೆ. ನೋಡೆಲ್ ಅಧಿಕಾರಿಯಾಗಿ ಜಿಲ್ಲಾಧಿಕಾರಿ ನೇಮಕ ಮಾಡಿ ರೈತರಿಂದ ಸಾಲದ ಪ್ರಮಾಣ, ಯಾವ ಕಾರಣಕ್ಕೆ ಸಾಲ ಎಂಬುದರ ಕುರಿತು ವಿವರ ಪಡೆದು ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಕೊಳವೆ ಬಾವಿ ಸಾಲ, ತೋಟಗಾರಿಕೆ, ಟ್ರ್ಯಾಕ್ಟರ್ ಸಾಲ ಎರಡನೇ ಹಂತದಲ್ಲಿ ಮಾಡಲು ಚಿಂತನೆ ನಡೆದಿದೆ ಎಂದರು. ಈ ಕುರಿತು ಶೀಘ್ರದಲ್ಲಿಯೇ ರಾಷ್ಟ್ರೀಕೃತ ಬ್ಯಾಂಕ್ ಗಳ ಸಭೆ ಕರೆದು ಮಾಹಿತಿ ಪಡೆಯುತ್ತೇವೆ. ಬಡ್ಡಿ ಹಾಗೂ ಅಸಲು ಯಾವ ರೀತಿ ಮನ್ನಾ ಮಾಡುತ್ತಾರೆ ಎಂಬುದು ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದ ಅವರು ಎರಡು ಲಕ್ಷ ಕೋಟಿ ಬಜೆಟ್ ಮಂಡಿಸುವ ನಿರೀಕ್ಷೆ ಇದ್ದು ಅದರಲ್ಲಿ ಶಿಕ್ಷಣ, ಸಮಾಜ ಕಲ್ಯಾಣ, ನೀರಾವರಿ , ಆರೋಗ್ಯ ಸೌಲಭ್ಯಕ್ಕೆ ಅನುದಾನ ಬೇಕು ಎಂದರು. ಪ್ರತಿ ತಿಂಗಳು ರೈತರ ಸಭೆ ಕರೆದು ಸರಕಾರದ ಯೋಜನೆಗಳಿಂದ ಬದಲಾವಣೆ ಸಲಹೆ ಪಡೆದು ಮುಂದಿನ ಹೆಜ್ಜೆ ಇಡುತ್ತೇವೆ. ರೈತರ ಸಲಹೆ ಮೇರೆಗೆ ಸರಕಾರ ನಡೆಸುತ್ತೇವೆ. ಸರಾಸರಿ ಮಳೆ ವರದಿ ಆಧರಿಸಿ, ಜಲಾಶಯದ ವರದಿ ಇಸ್ರೇಲ್ ಮಾದರಿ ಯಾವ ಮಳೆಗೆ ಯಾವ ಬೆಳೆ ಬೆಳೆಯಬೇಕು ಎಂಬ ಸಲಹೆ ನೀಡಲಾಗುವುದು ಎಂದರು. ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ವಿರೋಧ ಪಕ್ಷದ ನಾಯಕ ಗೋವಿಂದ ಕಾರಜೋಳ, ಶಾಸಕರಾದ ಬಂಡೆಪ್ಪಾ ಕಾಶೆಂಪೂರ, ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಪಾಲ್ಗೊಂಡಿದ್ದರು.

ಕರಾವಳಿ ಮಹಾಮಳೆಗೆ ಮತ್ತೊಂದು ಬಲಿ

ಮಂಗಳೂರು : ಮಂಗಳೂರಿನ ಮಹಾ ಮಳೆಗೆ ಮೂರನೇ ಮಹಾಬಲಿಯಾಗಿದೆ. ಕನಸು ಚಿತ್ರದ ನಿರ್ದೇಶಕ ಸಂತೋಷ ಶೆಟ್ಟಿ ಬೆಳ್ತಂಗಡಿ ಜಲಪಾತದ ಪಡೀಲ್ ಬಳಿ ಇರುವ ಫಾಲ್ಸ್ ನಲ್ಲಿ ಚಿತ್ರೀಕರಣದ ಶೂಟಿಂಗ್ ಮಾಡುವಾಗ ಕಾಲುಜಾರಿ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ. ಸಂತೋಷ ಶೆಟ್ಟಿ ಕಾಲು ಜಾರಿ ಬಿದ್ದು ಮೃತಪಟ್ಟ ನಿರ್ದೇಶಕರಾಗಿದ್ದಾರೆ. ಚಿತ್ರತಂಡ ಸಾಕಷ್ಟು ಎಚ್ಚರಿಕೆ ವಹಿಸಿಲ್ಲ. ಈ ದುರಂತದ ಬಗ್ಗೆ ಸ್ಥಳೀಯರು ಮುನ್ನಚ್ಚರಿಕೆ ನೀಡಿದ್ದರೂ ಇಡೀ ಪ್ರಕರಣದ ವಹಿಸದ ಪರಿಣಾಮ ಈ ದುರಂತ ಜರುಗಿದೆ ಎಂದು ಮಂಗಳೂರು ಎಸ್ಪಿ ರವಿಕಾಂತೇಗೌಡ ತಿಳಿಸಿದ್ದಾರೆ. ಚಿತ್ರ ಶೂಟಿಂಗ್ ಮಾಡುವಾಗ ಈ ಘಟನೆ ನಡೆದಿದೆ. ಪರವಾನಿಗೆ ತೆಗೆದುಕೊಂಡಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಅವರು ವಿವರಿಸಿದ್ದಾರೆ. ಮಂಗಳೂರು ಮಹಾಮಳೆಗೆ ನಿನ್ನೇ ನಿಧಿ ಆಚಾರ್ಯ ನೀರಿನಲ್ಲಿ ಕೊಚ್ಚಿ ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಮ್ಮೀಶ್ರ ಸರಕಾರದಿಂದ ಸಾಲಮನ್ನಾ ಘೋಷಣೆ ?

ಬೆಂಗಳೂರು : ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮೀಶ್ರ ಸರಕಾರ ರೈತರ ಸಾಲಮನ್ನಾ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಈ ಬಗ್ಗೆ ಯಾವುದೇ ಅನುಮಾನ, ಆತಂಕ ಬೇಡ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಭಯ ನೀಡಿದ್ದಾರೆ. ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಪ್ರಗತಿಪರ ಕೃಷಿಕರ ಸಭೆಯಲ್ಲಿ ರೈತರ ಸಾಲ ಮನ್ನಾ, ಆತ್ಮಹತ್ಯೆ ತಡೆಗಟ್ಟಲು ಹಾಗೂ ಕೃಷಿಕರ ಇತರ ಸಮಸ್ಯೆಗಳ ಕುರಿತು ಚರ್ಚಿಸಲು ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತರನ್ನು ಯಾವ ರೀತಿ ಉಳಿಸಿಕೊಳ್ಳಬೇಕಿದೆಎಂಬುದು ಗೊತ್ತಿದೆ. ಸಾಲಮನ್ನಾ ವಿಷಯದಲ್ಲಿ ಹಿಂದೇಟು ಹಾಕುವ ಪ್ರಶ್ನೇಯೇ ಇಲ್ಲ.ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕೆಂಬ ಉದ್ದೇಶದಿಂದ ಸಭೆ ಕರೆಯಲಾಗಿದೆ.ಉಪಯುಕ್ತ ಸಲಹೆ ನೀಡಿ ಎಂದು ನವಿಮಾಡಿದರು. ಕುಮಾರಸ್ವಾಮಿ ಅವರು ಕರೆದ ಮೊದಲ ಸಭೆಗೆ ನಿರೀಕ್ಷಗೂ ಮೀರಿ ಸ್ಪಂದನೆ ದೊರೆತಿದೆ. ರಾಜ್ಯದ ಮೂವತ್ತು ಜಿಲ್ಲೆಗಳಿಂದ ನೂರಾರು ರೈತ ಮುಖಂಡರು, ವಿವಿಧ ರೈತ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಹೋರಾಟಗಾರರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ, ಮಾರುತಿ ಮಾನ್ಪಡೆ, ಸುನಂದಾ ಜಯರಾಂ, ಚಾಮರಸ ಪಾಟೀಲ, ಸಚಿನ್ ಮೀಗಾ, ಬಸವರಾಜಪ್ಪ, ಬೈಯಾರಡ್ಡಿ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ. ಇದಕ್ಕೂ ಮುನ್ನ ಸಭೆಯಲ್ಲಿ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೂರುವರೆ ಸಾವಿರ ರೈತರ ಆತ್ಮಹತ್ಯೆಗೆ ಶಾಂತಿ ಕೋರಲಾಯಿತು. ಕೇಂದ್ರ ಸರಕಾರ ಸಾಲಮನ್ನಾ ಹೊರಲು ಸಿದ್ಧವಾಗದಿದ್ದರೆ ಹೋರಾಟ ಮಾಡೋಣ. ದೆಹಲಿಗೆ ಹೋಗೊಣ ಎಂದೆಲ್ಲಾ ಹೇಳಿದರು.

ಗೋಂದಲದ ಗೂಡಾದ ರೈತರ ಸಭೆ

ಬೆಂಗಳೂರು : ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತರ ಸಾಲ ಮನ್ನಾ, ಆತ್ಮಹತ್ಯೆ ತಡೆಗಟ್ಟಲು ಹಾಗೂ ಕೃಷಿಕರ ಇತರ ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕರೆದಿದ್ದ ಸಭೆ ಕೆಲ ಕಾಲಗೊಂದಲದ ಗೂಡಾಗಿತ್ತು. ಈ ಹಿನ್ನಲೆಯಲ್ಲಿ ಮಧ್ಯಪ್ರವೇಶಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ತಾಳ್ಮೆಯಿಂದ ಇರಲು ಮನವಿ ಮಾಡಿದ ಸಿಎಂ ಎಲ್ಲರ ಮಾತನ್ನು ಕೇಳಿ, ಅವರ ಹೇಳಿಕೆಗೆ ವಿರೋಧ ಮಾಡಬೇಡಿ, ಅವರ ಭಾವನೆಗಳಿಗೆ ಗೌರವಕೊಡಿ, ಗದ್ದಲ ಮಾಡುವುದಾದರೆ ಕಬ್ಬನ್ ಪಾರ್ಕ್ ಗೆ ಹೋಗಿ ಎಂದು ನೋವಿನಿಂದ ಹೇಳಿದರು. ನಾವು ನಮ್ಮ ಬದ್ಧತೆಯನ್ನು ಪ್ರದರ್ಶನ ಮಾಡಲು ಸಭೆ ಕರೆದಿದ್ದೇನೆ. ಯಾವ ರೀತಿಯ ಸಾಲ ಮನ್ನಾ ಮಾಡಬೇಕು ಎಂಬುದು ಸಲಹೆ ಕೇಳಲು ಕರೆದಿದ್ದೇನೆ. ರಾಜ್ಯ ಸರಕಾರಕ್ಕೆ ಇತಿಮಿತಿ ಇದೆ. ಅದನ್ನು ನಾವು ಅರ್ಥಮಾಡಿಕೊಂಡು ರೈತರ ಉಳಿಸಲು ಹಂತ ಹಂತವಾಗಿ ಕ್ರಮ ಉತ್ತಮ ಸಲಹೆ ಕೊಡಿ, ಪ್ರಾಯೋಗಿಕವಾಗಿ ಯಾವ ರೀತಿ ನಡೆದುಕೊಳ್ಳಬೇಕು. ಸರಕಾರದ ನಿಲುವು ತೋರಿಸಬೇಕಿದೆ. ಪಲಾಯನವಾದ ಮಾಡಲು ಸಿದ್ಧನಿದ್ದೇನೆ. ಭೂಮಿ ಇಲ್ಲದ ಕೃಷಿ ಕೂಲಿ ಕಾರ್ಮಿಕನ ಬಗ್ಗೆಯೂ ಚಿಂತನೆ ಇದೆ. ನಿಮಗೆ ಬೀದಿಗಿಳಿಸಿ ಹೋರಾಟ ಮಾಡಲುನಾನು ಸಿದ್ಧನಿಲ್ಲ. ಋಣಮುಕ್ತನಾಗಿ ಮಾಡಲು ಚಿಂತನೆ ನಡೆದಿದೆ. ನಾನು ನನ್ನ ಯೋಜನೆಗಳನ್ನು ಸಿದ್ಧಪಡಿಸಿದ್ದೇನೆ. ನೀವು ಅವಕಾಶ ಕೊಡಿ ಎಂದು ಹೇಳಿದರು.

ಯಶಸ್ವಿನಿ ಯೋಜನೆ ಮುಂದುವರೆಸಿದ ಕುಮಾರಸ್ವಾಮಿ

ಬೆಂಗಳೂರು: ರೈತ ಸಮುದಾಯದ ಬಹುನಿರೀಕ್ಷಿತ ಯೋಜನೆಯಾದ ಯಶಸ್ವಿನಿಯನ್ನು ಮುಂದುವರೆಸಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ. ಮೇ 31 ಕ್ಕೆ ಯೋಜನೆ ಅವಧಿ ಪೂರ್ಣಗೊಂಡ ಬೆನ್ನಲ್ಲೇ ಅದು ಆರೋಗ್ಯ ಕರ್ನಾಟಕದಲ್ಲಿ ವಿಲೀನವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಅದರ ಸಾಧಕ ಬಾಧಕ ಕುರಿತು ಅಧೀಕಾರಿಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಅದನ್ನು ಮುಂದುವರೆಸಲು ಸೂಚಿಸಿದ್ದಾರೆ. ಯಶಸ್ವಿನಿ ಯೋಜನೆ ಬಗ್ಗೆ ರೈತರಿಗೆ ಯಾವುದೇ ಆತಂಕ ಬೇಡ ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ತೆಂಗಿನ ಮರವೇರಿ ಬಿದ್ದ ಕೈದಿ ಸಾವು

ದಾವಣಗೆರೆ : ಮೂವತ್ತು ಅಡಿ ಎತ್ತರದ ತೆಂಗಿನ ಮರವೇರಿ ಕುಳಿತಿದ್ದ ಕೈದಿಯೊಬ್ಬ ಕಾಲು ಜಾರಿ ಕೆಳಕ್ಕೆ ಬಿದ್ದ ಪರಿಣಾಮ ಆತ ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲಾ ಕಾರಾಗೃಹ ದಲ್ಲಿ ನಡೆದಿದೆ. ಮರದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಕೈದಿಯನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿಸಿದ್ದಾನೆ. ಇದಕ್ಕೂ ಮುನ್ನ ಕೆಳಗೆ ಇಳಿಸಲು ಎಷ್ಟು ಪ್ರಯತ್ನ ಪಟ್ಟರು ಆತ ಇಳಿದಿರಲಿಲ್ಲ. ಮರದಿಂದ ಕೆಳಗಿಳಿಸಲು ಪೊಲೀಸರ ಹರ ಸಾಹಸಪಡಬೇಕಾಯಿತು. ಎಷ್ಟೇ ಒತ್ತಾಯ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬೆಳಿಗ್ಗೆ ಯಿಂದ ಮರದಲ್ಲೇ ಕುಳಿತಿದ್ದ ಕೈದಿ ಬಳ್ಳಾರಿ ಜಿಲ್ಲೆಯ ಹೊಳಲು ಗ್ರಾಮದ ಹನುಮಂತಪ್ಪ. ಕೊಲೆಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದ. 2 ತಿಂಗಳಿನಿಂದ ಜೈಲಿನಲ್ಲಿದ್ದ. ಜೂನ್ 1ರಂದು ಅಂತಿಮ ತೀರ್ಪು ಪ್ರಕಟವಾಗಬೇಕಿತ್ತು. ಕೊಲೆಯತ್ನ ಸಾಬೀತಾಗುವ ಹಿನ್ನಲೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಎಂದು ತಿಳಿದುಬಂದಿದೆ.

ಜಯನಗರದಲ್ಲಿ ಹಲವು ಅಕ್ರಮ ಎಸಗಲು ಮೂರು ಪಕ್ಷ ಸಿದ್ಧಗೊಂಡಿವೆ ಎಂದ ರವಿಕೃಷ್ಣಾರಡ್ಡಿ

ಬೆಂಗಳೂರು: ಜಯನಗರ ವಿಧಾನ ಸಭಾ ಕ್ಷೇತ್ರ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದ್ದು, ಹಲವು ಅಕ್ರಮಗಳನ್ನು ಎಸಗಲು ಸಿದ್ಧಗೊಂಡಿವೆ ಎಂದು ಜಯನಗರ ಪಕ್ಷೇತರ ಅಭ್ಯರ್ಥಿ ರವಿ ಕೃಷ್ಣಾ ರೆಡ್ಡಿ ಆರೋಪಿಸಿದರು. ಅವರು ಜಯನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಈಗಾಗಲೇ ಕ್ಷೇತ್ರದಲ್ಲಿ ಹಣ ಹಂಚಲು ಆರಂಭಿಸಿದ್ದಾರೆ. ಹೀಗಾಗಿ, ನಾವು ಒಂದು ವೋಟಿಗೆ 2888 ರೂ., ಸೀರೆ, ಕುಕ್ಕರ್, ಸಾರಾಯಿ ಕೊಡ್ತೀವಿ. ನಮಗೆ ಅಧಿಕೃತ ಪರವಾನಿಗೆ ಕೊಡಿ ಎಂದು ಕೇಂದ್ರ ಚುನಾವಣಾ ಆಯೋಗ ಹಾಗೂ ರಾಜ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದೇನೆ ಎಂದರು. ಶುಕ್ರವಾರದ ಸಂಜೆ ವರೆಗೂ ಕಾಯುತ್ತೇವೆ. ಅವರಿಂದ ಪ್ರತಿಕ್ರಿಯೆ ಬಂದಿಲ್ಲವಾದರೆ, ಮೌನಂ ಸಮ್ಮತಿ ಲಕ್ಷಣಂ ಎಂದು ತಿಳ್ಕೋಂಡು ಮುಂದಿನ ಶನಿವಾರ 11 ಗಂಟೆಗೆ ನಾವು ಕೊಡ್ತೇವೆ ಎಂದು ಬಹಿರಂಗ ಸವಾಲು ಹಾಕಿದರು. ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಯಾಗುತ್ತಾ ಎಂದು ಪ್ರಶ್ನೆ ಮಾಡಿದ್ದೇವೆ. ಚುನಾವಣಾ ಆಯೋಗ ಅಕ್ರಮಗಳನ್ನು ತಡೆಗಟ್ಟುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಒಬ್ಬ ಅಭ್ಯರ್ಥಿಗೆ 28 ಲಕ್ಷ ಖರ್ಚು ಮಾಡಲು ಅವಕಾಶ ಕಲ್ಪಿಸಲಾಗಿತ್ತು ಆದ್ರೆ ಒಬ್ಬ ಅಭ್ಯರ್ಥಿ ಕನಿಷ್ಟ 50 ಕೋಟಿ ಹಣವನ್ನು ವ್ಯಯ ಮಾಡಿ ಚುನಾವಣೆ ಎದುರಿಸಿದ್ದಾನೆ ಎಂದು ರವಿಕೃಷ್ಣಾ ರೆಡ್ಡಿ ದೂರಿದರು.

ಜೂನ್ ಅಂತ್ಯಕ್ಕೆ ಗೋವಾಕ್ಕೆ ಮರಳಲಿರುವ ಸಿಎಂ ಮನೋಹರ್

ಪಣಜಿ:ಕಳೆದ ಹಲವು ತಿಂಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಗೋವಾ ಸಿಎಂ ಮನೋಹರ್ ಪರಿಕ್ಕರ್ ಜೂನ್ ಅಂತ್ಯಕ್ಕೆ ಗೋವಾಕ್ಕೆ ಮರಳಲಿದ್ದಾರೆ ಎಂದು ಗೋವಾ ಸಾರಿಗೆ ಸಚಿವ ಸುದಿನ್ ಧಾವಾಲಿಕರ್ ಹೇಳಿದ್ದಾರೆ. ಅವರು ಕಳೆದ ಮಾರ್ಚ್ 7 ರಿಂದ ಅಮೆರಿಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಚೇತರಿಸಿಕೊಂಡಿದ್ದಾರೆ ಎಂದು ಪರಿಕ್ಕರ್ ಆರೋಗ್ಯದ ಮಾಹಿತಿ ನೀಡಿದರು. ಸಿಎಂ ಮನೋಹರ್ ಪರಿಕ್ಕರ್ ನೇತೃತ್ವದ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ. ಪರಿಕ್ಕರ್ ಅವರೇ ನಮ್ಮ ನಾಯಕರಾಗಿರಲಿದ್ದಾರೆ ಎಂದರು. ಮನೋಹರ್ ಪರಿಕ್ಕರ್ ಅನಾರೋಗ್ಯದ ಹಿನ್ನೆಲೆಯಲ್ಲಿ ಸರ್ಕಾರ ಸುಗಮವಾಗಿ ಸಾಗಲು ಮೂವರು ಸಚಿವರ ಸಲಹಾ ಸಮಿತಿ ರಚಿಸಲಾಗಿದ್ದು, ಸಚಿವರ ಸಲಹಾ ಸಮಿತಿಯಿಂದಲೇ ಗೋವಾ ಸರ್ಕಾರ ಸಾಗುತ್ತಿದೆ. ಈ ಸಮಿತಿಯಲ್ಲಿ ಸಚಿವರಾದ ಫ್ರಾನ್ಸಿಸ್ ಡಿಸೋಜಾ, ವಿಜಯ್ ಸರ್ದೇಸಾಯಿ ಇರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ರೈತರಸಾಲ ಮನ್ನಾಕುರಿತಂತೆ ಚರ್ಚಿಸಲು ಮೇ 30ರಂದು ರೈತ ಸಂಘಟನೆಗಳ ಸಭೆ ಕರೆದ ಸಿಎಂ

ಬೆಂಗಳೂರು: ರೈತರ ಸಾಲ ಮನ್ನಾ, ಆತ್ಮಹತ್ಯೆ ತಡೆಗಟ್ಟಲು ಹಾಗೂ ಕೃಷಿಕರ ಇತರ ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮೇ 30 ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಪ್ರಗತಿಪರ ಕೃಷಿಕರ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಕೂಡ ಪಾಲ್ಗೊಳ್ಳಲಿದ್ದು,ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಸಹ ಆಹ್ವಾನಿಸಿರುವುದು ವಿಶೇಷವಾಗಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಈ ಸಭೆ ಏರ್ಪಡಿಸುವ ಬಗ್ಗೆ ಮಂಗಳವಾರ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭ, ಆರ್ಥಿಕ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಡಿ.ವಿ. ಪ್ರಸಾದ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ ಅವರೊಂದಿಗೆ ಚರ್ಚೆ ನಡೆಸಿ, ಅಗತ್ಯ ಮಾಹಿತಿ ಪಡೆದರು,

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಹ: ದೋಣಿ ಮೂಲಕ ಶಾಲಾ ಮಕ್ಕಳ ನ್ನು ಕರೆತಂದ ಅಗ್ನಿಶಾಮಕ ದಳ

ಮಂಗಳೂರು: ಮಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಅಲ್ಲಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಮಂಗಳೂರಿನ ಅಳಕೆಯಲ್ಲಿಯೂ ಕೃತಕ ನೆರೆ ಉಂಟಾಗಿದ್ದು, ಶಾಲಾ ಮಕ್ಕಳು ಕೆಲ ಕಾಲ ಅಕ್ಷರಶಃ ಪರದಾಡಿದರು. ಕೃತಕ ನೆರೆಯಿಂದ ಶಾಲೆಯಿಂದ ಹೊರಬರಲು ಅಸಾಧ್ಯವಾಗಿತ್ತು. ಹೀಗಾಗಿ ಕೂಡಲೇ ಕಾರ್ಯಪ್ರವೃತ್ತವಾದ ಮಂಗಳೂರಿನ ಅಗ್ನಿಶಾಮಕದಳದ ಸಿಬ್ಬಂದಿ ದೋಣಿ ಮೂಲಕ ಶಾಲಾ ಮಕ್ಕಳನ್ನು ಕರೆತಂದರು. ಮಾಹಿತಿ ಪಡೆದ ಸಿಎಂ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದರು. ಪ್ರವಾಹದಿಂದ ಸಾರ್ವಜನಿಕರನ್ನು ರಕ್ಷಿಸಲು ಅಗತ್ಯವಿದ್ದಲ್ಲಿ ಕೋಸ್ಟ್ ಗಾರ್ಡ್ ನೆರವು ಪಡೆಯುವಂತೆ ಹಾಗೂ ಹೆಚ್ಚಿನ ಅನಾಹುತಗಳಾಗದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಯಶಸ್ವಿನಿ, ಆರೋಗ್ಯ ಯೋಜನೆ ಕುರಿತು ಚರ್ಚೆ ಮಾಡಿದ ಸಿಎಂ

ಬೆಂಗಳೂರು : ಯಶಸ್ವಿನಿ ಯೋಜನೆ ಹಾಗೂ ಕಳೆದ ಸರಕಾರದ ಅವಧಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜಾರಿಗೊಳಿಸಿದ್ದ ಆರೋಗ್ಯ ಕರ್ನಾಟಕ ಯೋಜನೆ ಕುರಿತು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಯೋಜನೆಗಳಿಂದ ಬಡವರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಕುರಿತು ಎಲ್ಲ ಅಂಶಗಳನ್ನು ಕೂಲಂಕುಶವಾಗಿ ಪರಿಶೀಲಿಸಿ, ಮಾಹಿತಿಯೊಂದಿಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವಂತೆ ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಜಯ್ ಸೇಠ್ ಅವರಿಗೆ ಕುಮಾರಸ್ವಾನು ಸೂಚಿಸಿದರು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಸರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್, ಡಿಸೇಲ್ ಬೆಲೆ

ನವದೆಹಲಿ: ಕಳೆದ ಮೂರು ವಾರಗಳಿಂದ ಪೆಟ್ರೋಲ್ - ಡೀಸೆಲ್ ಬೆಲೆ ಗಗನದತ್ತ ಮುಖ ಮಾಡಿದೆ. ಮಂಗಳವಾರ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ಗೆ 78.43ರೂ.ಇದ್ದರೆ ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 86.24 ರೂ.ಗೆ ಏರಿಕೆ ಆಗಿದೆ. ಇದು ಸರ್ವಕಾಲಿಕ ದಾಖಲೆ ಎನ್ನಲಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ 80 ಡಾಲರ್ನಿಂದ 60 ಅಮೆರಿಕನ್ ಡಾಲರ್ಗೆ ಇಳಿಕೆಯಾಗಿದೆ. ಆದರೆ ತೈಲ ಕಂಪನಿಗಳು ಮಾತ್ರ ಕಳೆದ ಮೂರು ವಾರಗಳಿಂದ ಪೆಟ್ರೋಲ್ ಡೀಸೆಲ್ ಬೆಲೆಯನ್ನ ಏರಿಕೆ ಮಾಡುತ್ತಲೇ ಇವೆ. ಇದರಿಂದಾಗಿ ಮುಂಬೈನಲ್ಲಿ ಲೀಟರ್ ಡೀಸೆಲ್ ಬೆಲೆ 73.79 ರೂ ದಾಟಿದೆ. ಇಂಧನ ಬೆಲೆ ಏರಿಕೆ ಕುರಿತಂತೆ ಕೇಂದ್ರ ಸರ್ಕಾರ ದೇಶದ ಜನರ ದಿಕ್ಕು ತಪ್ಪಿಸಿದ್ದು, ದರ ನಿಯಂತ್ರಣಕ್ಕೆ ಹೊಸ ಯೋಚನೆ ಮಾಡುವತ್ತ ಕೇಂದ್ರ ಸರ್ಕಾರ ಗಮನ ಹರಿಸುತ್ತಾ ಕಾದು ನೋಡಬೇಕಿದೆ.

ಜೂನ್ 11ರಂದು ವಿಧಾನ ಪರಿಷತ್ ಚುನಾವಣೆ : ಚುನಾವಣಾಧಿಕಾರಿಯಾಗಿ ಎಂ.ಎಸ್.ಕುಮಾರಸ್ವಾಮಿ

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಜೂನ್ 11ರಂದು ನಡೆಯುವ ಚುನಾವಣೆಗೆ ಚುನಾವಣಾಧಿಕಾರಿಯಾಗಿ ವಿಧಾನಸಭೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಂ.ಎಸ್.ಕುಮಾರಸ್ವಾಮಿ ಅವರನ್ನು ನೇಮಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಸಾಮಾನ್ಯವಾಗಿ ವಿಧಾನಸಭೆ ಕಾರ್ಯದರ್ಶಿಯನ್ನೇ ವಿಧಾನಸಭೆಯಿಂದ ವಿಧಾನ ಪರಿಷತ್ ಚುನಾವಣೆಗೆ ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗುತ್ತದೆ.ಆದರೆ ಎಸ್.ಮೂರ್ತಿಯನ್ನು ಬದಲಾವಣೆ ಮಾಡಿರುವ ಚುನಾವಣಾ ಆಯೋಗ ಅವರ ಜಾಗಕ್ಕೆ ಜಂಟಿ ಕಾರ್ಯದರ್ಶಿ ಎಂ.ಎಸ್.ಕುಮಾರಸ್ವಾಮಿ ಅವರನ್ನು ನೇಮಿಸಿದೆ. ಕಳೆದ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾಧಿಕಾರಿಯಾಗಿದ್ದ ಎಸ್.ಮೂರ್ತಿ ಶಾಸಕರಿಗೆ ಹೆಚ್ಚುವರಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟು ಯಡವಟ್ಟು ಮಾಡಿಕೊಂಡಿದ್ದರು. ಇದರಿಂದಾಗಿ ಕಾಗೋಡು ತಿಮ್ಮಪ್ಪ ಹಾಗೂ ಬಾಬುರಾವ್ ಚಿಂಚನಸೂರ್ ಅವರಿಗೆ ಹೆಚ್ಚುವರಿಯಾಗಿ ಎರಡು ಮತ ಪತ್ರಗಳನ್ನು ನೀಡಿದ್ದರಿಂದ ಗೊಂದಲ ಉಂಟಾಗಿತ್ತು. ಇದು ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ದಕ್ಷಿಣ ಕನ್ನಡ, ಉಡುಪಿಯಲ್ಲಿ ಭಾರಿ ಮಳೆ : ನಾಳೆ ಶಾಲಾ ಕಾಲೇಜುಗಳಿಗೆ ರಜೆ

ಮಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಈ ಹಿನ್ನಲೆಯಲ್ಲಿ ಎರಡೂ ಜಿಲ್ಲೆಗಳಲ್ಲಿ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ರಜೆ ಘೋಷಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಘೋಷಣೆ ಮಾಡಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಎರಡು ದಿನ ರಜೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮುಂಗಾರು ಮಳೆ ರಾಜ್ಯದ ಕರಾವಳಿ ಪ್ರದೇಶವನ್ನು ಪ್ರವೇಶಿಸಿದ್ದು,ಭಾರೀ ಸದ್ದು ಮಾಡುತ್ತಿದೆ.

ಚಾಮುಂಡೇಶ್ವರಿ, ಸುತ್ತೂರು ಸೇರಿ ವಿವಿಧೆಡೆ ಭೇಟಿ ನೀಡಿದ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ವರುಣಾ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಅವರು ಮಂಗಳವಾರ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ತಮ್ಮ ಹರಕೆ ಸಲ್ಲಿಸಿದರು. ಬಳಿಕ ಚಾಮುಂಡಿ ಬೆಟ್ಟದ ಸುತ್ತೂರು ಶಾಖಾ ಮಠಕ್ಕೆ ತೆರಳಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಆನಂತರ ತಮ್ಮ ಹುಟ್ಟೂರಾದ ಸಿದ್ದರಾಮನಹುಂಡಿಗೆ ತೆರಳಿ ಸಿದ್ದರಾಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ಗ್ರಾಮ ಹಾಗೂ ಕ್ಷೇತ್ರದ ಕೆಲವು ಹಳ್ಳಿಗಳಿಗೆ ಭೇಟಿ ಕೊಟ್ಟು ಮತದಾರರರಿಗೆ ಕೃತಜ್ಞತೆ ಅರ್ಪಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನಗೆ ಯಾವುದೇ ಸಚಿವ ಸ್ಥಾನ ನೀಡಬೇಕೆಂದು ನಾನಾಗಲಿ ತಮ್ಮ ತಂದೆಯವರಾಗಲಿ ಯಾರ ಮೇಲೂ ಒತ್ತಡ ಹಾಕಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದರು. ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಮೂಲಕ ಜನರು ಇಟ್ಟಿರುವ ಪ್ರೀತಿ, ನಂಬಿಕೆ ಹಾಗೂ ವಿಶ್ವಾಸ ಉಳಿಸಿಕೊಳ್ಳುತ್ತೇವೆ ಎಂದು ಹೇಳಿದರು.

ರೈಲು ಬೋಗಿಯೊಂದರಲ್ಲಿ ಅಗ್ನಿ ಅವಘಡ

ಮುಂಬೈ: ರೈಲು ಬೋಗಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಕೆಲಕಾಲ ಆತಂಕ ಉಂಟಾಗಿದ್ದ ಘಟನೆ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಸಿಎಸ್ಟಿಯಲ್ಲಿ ರೈಲು ನಿಲ್ಲಿಸಿದ್ದ ವೇಳೆ ಬೋಗಿವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಹರಡಿತ್ತು. ತಕ್ಷಣವೇ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದರು. ಬೆಂಕಿ ಬೇರೆ ಕೋಚ್ಗಳಿಗೂ ಹರಡಿತ್ತು ಆದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಕೂಡಲೇ ಸ್ಥಳದಿಂದ ಪ್ರಯಾಣಿಕರನ್ನು ಖಾಲಿ ಮಾಡಿಸಿ ಭಾರೀ ಅನಾಹುತವೊಂದರಿಂದ ಪಾರು ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಪತ್ನಿ, ಮಗಳನ್ನು ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಪೊಲೀಸರ ವಶಕ್ಕೆ

ಮೈಸೂರು: ಪತ್ನಿ ಹಾಗೂ ಮಗಳನ್ನು ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿಯನ್ನು ಕೊನೆಗೂ ವಶಕ್ಕೆ ಪಡೆಯುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಇಲ್ಲಿಯ ವಿಜಯನಗರದ ನಾಲ್ಕನೇ ಹಂತದ ನಿವಾಸಿಯಾಗಿದ್ದ ಟೆಕ್ಕಿ ಆರ್.ಪ್ರಜ್ವಲ್, ಮೇ. 23ರಂದು ಪತ್ನಿ ಸವಿತಾ ಹಾಗೂ ಮಗಳು ಸಿಂಚನಾಳ ಕತ್ತು ಕೊಯ್ದು ಹತ್ಯೆ ಮಾಡಿದ್ದ. ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಆತನನ್ನು ಪೋಷಕರು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.ಇದೀಗ ಆಸ್ಪತ್ರೆಯಲ್ಲಿ ಚೇತರಿಸಿಕೊಂಡ ಆರ್.ಪ್ರಜ್ವಲ್ ನನ್ನು ಆಸ್ಪತ್ರೆಗೆ ತೆರಳಿ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಎಸ್ಕೆ ತಂಡ 145 ಸಿಕ್ಸರ್ ಸಿಡಿಸಿ ಹೊಸ ದಾಖಲೆ

ಮುಂಬೈ: ಈ ಬಾರಿಯ ಐಪಿಎಲ್ನಲ್ಲಿ ಸಿಎಸ್ಕೆ ತಂಡ 145 ಸಿಕ್ಸರ್ ಸಿಡಿಸಿ ಹೊಸ ದಾಖಲೆ ನಿರ್ಮಿಸಿದೆ.ಈ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಸಿಎಸ್ಕೆ ತಂಡ ಲೀಗ್ ಉದ್ದಕ್ಕೂ ಭರ್ಜರಿ ಪ್ರದರ್ಶನ ನೀಡಿ, ಹಲವಾರು ಪಂದ್ಯಗಳಲ್ಲಿ ಕೊನೆ ಓವರ್ನಲ್ಲಿಯೇ ಜಯ ಸಾಧಿಸಿರುವುದು ವಿಶೇಷವಾಗಿತ್ತು. 2014ರಲ್ಲಿ ಕಿಂಗ್ಸ್ಇಲೆವೆನ್ ಪಂಜಾಬ್ ತಂಡದ ಆಟಗಾರರು 127 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರೆ, 2015ರಲ್ಲಿ ಮುಂಬೈ ಇಂಡಿಯನ್ಸ್ ತಂಡ120 ಸಿಕ್ಸರ್ ಹೊಡೆದಿದ್ದರು. 2016ರಲ್ಲಿ ಆರ್ಸಿಬಿ ತಂಡ 142 ಸಿಕ್ಸರ್ ಬಾರಿಸಿ ಲೀಗ್ ಒಂದರಲ್ಲಿ ಅತಿಹೆಚ್ಚು ಸಿಕ್ಸ್ ಸಿಡಿಸಿದ ದಾಖಲೆ ಬರೆದಿತ್ತು. ಈಗ 2018ರ ಐಪಿಎಲ್ನಲ್ಲಿ 872 ಸಿಕ್ಸರ್ ದಾಖಲಾಗಿದ್ದು ಚೆನ್ನೈ ಪರ 145, ಕೆಕೆಆರ್ 130, ಡೆಲ್ಲಿ 115, ಮುಂಬೈ 107, ಆರ್ಸಿಬಿ 106, ಪಂಜಾಬ್ 104, ಹೈದರಬಾದ್ 88, ರಾಜಸ್ಥಾನ್ 77 ಸಿಕ್ಸರ್ ದಾಖಲಿಸಿದೆ. ಇದು ಹೊಸ ದಾಖಲೆಯಾಗಿದೆ ಎಂದು ಕ್ರಿಕೆಟ್ ತಜ್ಞರು ವಿಶ್ಲೇಷಿಸಿದ್ದಾರೆ.

500ಕ್ಕೆ 499 ಅಂಕ ಪಡೆದು ನಾಲ್ವರೂ ಟಾಪ

ನವದೆಹಲಿ: 10ನೇ ತರಗತಿ ಸಿಬಿಎಸ್ಇ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ನಾಲ್ವರೂ ವಿದ್ಯಾರ್ಥಿಗಳು 500ಕ್ಕೆ 499 ಅಂಕಗಳನ್ನು ಪಡೆದು, ಟಾಪರ್ಗಳಾಗಿ ಹೊರ ಹೊಮ್ಮಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ಈಗಾಗಲೇ ಸಿಬಿಎಸ್ಇ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ್ದು, ಗುರುಗ್ರಾಮ್ನ ಪ್ರಖಾರ್ ಮಿತ್ತಲ್, ಬಿಜ್ನೋರ್ನ ರಿಮ್ಜೀಮ್ ಅಗರ್ವಾಲ್, ಶಾಮ್ಲಿಯ ನಂದಿನಿ ಗರ್ಗ್ ಮತ್ತು ಕೊಚ್ಚಿಯ ಶ್ರೀಲಕ್ಷ್ಮಿ.ಜಿ 500ಕ್ಕೆ 499 ಅಂಕಗಳನ್ನು ಗಳಿಸಿದ್ದಾರೆ. ಪ್ರಸ್ತುತ ಸಾಲಿನಲ್ಲಿ ಒಟ್ಟು 16,38,420 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ದೇಶಾದ್ಯಂತ 4,453 ಮತ್ತು ವಿದೇಶದ 78 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಹಾಗೂ ಪೋಷಕರ ಮುಖದಲ್ಲಿ ಈ ಫಲಿತಾಂಶ ಮಂದಹಾಸ ಮೂಡಿಸಿದೆ. www.cbseresults.nic.in, www.cbse.nic.in ಮತ್ತು www.results.nic.in ವೆಬ್‌ಸೈಟ್‌ಗಳಲ್ಲಿ ಫಲಿತಾಂಶವನ್ನು ವಿದ್ಯಾರ್ಥಿಗಳು ನೋಡಬಹುದು.

ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಮತ್ತೇ ಅಸಮಾಧಾನ ?

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ವಿಧಾನ ಪರಿಷತ್ ಗೆ ನಾಮನಿರ್ದೇಶನ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಅದರಲ್ಲೂ ವಿಶೇಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮತ್ತೇ ಸಿಡಿಮಿಡಿಗೊಂಡಿದ್ದಾರೆ. ಶಿವಮೊಗ್ಗದ ಬಿಜೆಪಿ ಮುಖಂಡ ರುದ್ರೇಗೌಡರನ್ನು ವಿಧಾನ ಪರಿಷತ್ಗೆ ನೇಮಕ ಮಾಡುವ ವಿಷಯದಲ್ಲಿ ಈ ಭಿನ್ನಮತ ಸ್ಪೋಟಗೊಂಡಿದೆ. ರುದ್ರೇಗೌಡರನ್ನು ಪರಿಷತ್ಗೆ ಆಯ್ಕೆ ಮಾಡಲು ಈಶ್ವರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಯಡಿಯೂರಪ್ಪ ಖ್ಯಾರೆ ಎಂದಿಲ್ಲ. ಹೀಗಾಗಿ ಯಡಿಯೂರಪ್ಪ ನಿಲುವನ್ನು ಖಂಡಿಸಿ ಮಂಗಳವಾರ ಸಂಜೆ 6 ಗಂಟೆಗೆ ನಡೆಯುವ ಬಿಜೆಪಿ ಕೋರ್ ಕಮಿಟಿ ಸಭೆಗೆ ಈಶ್ವರಪ್ಪ ಗೈರಾಗಿ ತಮ್ಮ ಅಸಮಧಾನ ಹೊರಹಾಕಲಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿಯ ಬಿ.ಜೆ. ಪುಟ್ಟಸ್ವಾಮಿ, ಡಿ.ಎಸ್. ವೀರಯ್ಯ, ರಘುನಾಥ್ ಮಲ್ಕಾಪುರೆ, ಎಂ.ಬಿ. ಭಾನುಪ್ರಕಾಶ್ ಅವರ ವಿಧಾನ ಪರಿಷತ್ ಜಾಗಕ್ಕೆ ಹಲವು ಮುಖಂಡರು ರೇಸ್ ನಲ್ಲಿರುವುದರಿಂದ ಭಿನ್ನಮತ ಸ್ಪೋಟಗೊಂಡಿದೆ. ಇದಕ್ಕೆ ಮುಖಂಡರು ಯಾವ ರೀತಿ ತೇಪೆ ಹಾಕುತ್ತಾರೆ ಕಾದು ನೋಡಬೇಕಿದೆ.

ಬಿಜೆಪಿ ಹಿರಿಯ ನಾಯಕಿ ಮಾಯಾ ಸಿಂಗ್ ಮೇಲೆ ಮಾರಣಾಂತಿಕ ದಾಳಿ

ಭೋಪಾಲ್: ಮಧ್ಯಪ್ರದೇಶದ ಬಿಜೆಪಿ ಹಿರಿಯ ನಾಯಕಿ ಹಾಗೂ ರಾಜ್ಯಸಭೆ ಸದಸ್ಯೆ ಆಗಿರುವ ಮಾಯಾ ಸಿಂಗ್ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ದಾಳಿ ನಡೆಸಿದ್ದಾರೆ. ಇದರಿಂದಾಗಿ ಮಾಯಾ ಸಿಂಗ್ ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೇವಾ ಜಿಲ್ಲೆಯ ರಾಯ್ಪುರ್ ಕರ್ಚುಲಿಯಾನ್ ಪೊಲೀಸ್ ಠಾಣಾ ವ್ಯಾಪ್ತಿಯ ಟೋಲ್ಗೇಟ್ನಲ್ಲಿ ಈ ದಾಳಿ ನಡೆದಿದೆ. ರೈತರೊಬ್ಬರ ಅಂತ್ಯಸಂಸ್ಕಾರಕ್ಕೆ ಮಾಯಾ ಸಿಂಗ್ ಕುಟುಂಬದೊಂದಿಗೆ ತೆರಳಿದ್ದರು. ಅಂತ್ಯಕ್ರಿಯೆ ಮುಗಿಸಿಕೊಂಡು ಕಾರಿನಲ್ಲಿ ವಾಪಸ್ ಬರುತ್ತಿದ್ದಾಗ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಹಲ್ಲೆ ಕೋರರು ಮಾಯಾ ಸಿಂಗ್ ಕಾರಿನತ್ತ ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ಗುಂಡು ಕಾರಿನ ಗ್ಲಾಸ್ಗೆ ತಾಗಿದ್ದು, ಘಟನೆಯಲ್ಲಿ ಮಾಯಾಸಿಂಗ್ ಗಾಯಗೊಂಡಿದ್ದಾರೆ. ಸಂಸದ ಜನಾರ್ದನ ಮಿಶ್ರಾ ಮತ್ತಿತರ ಬಿಜೆಪಿ ನಾಯಕರು, ಆಸ್ಪತ್ರೆಗೆ ಭೇಟಿ ನೀಡಿ ಮಾಯಾ ಸಿಂಗ್ ಆರೋಗ್ಯ ವಿಚಾರಿಸಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

ಮೂರು ರಾಜ್ಯಗಳಲ್ಲಿ ಒಂದೇ ದಿನ 40 ಮಂದಿ ಬಲಿ

ನವದೆಹಲಿ: ಮುಂಗಾರು ಪ್ರವೇಶದ ಬೆನ್ನಲ್ಲೇ ಉತ್ತರ ಪ್ರದೇಶ, ಜಾರ್ಖಂಡ್ ಹಾಗೂ ಬಿಹಾರ ರಾಜ್ಯದಲ್ಲಿ ಸೋಮವಾರ ಸುರಿದ ಭಾರೀ ಗುಡುಗು, ಸಿಡಿಲು ಸಹಿತ ಮಳೆಗೆ 40 ಮಂದಿ ಬಲಿಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಸುಮಾರು 9 ಜನ ಸಾವಿಗೀಡಾಗಿದ್ದರೆ, ಸುಮಾರು 6 ಮಂದಿ ಗಾಯಗೊಂಡಿದ್ದಾರೆ. ಜಾರ್ಖಂಡ್ನಲ್ಲಿ 13 ಜನ ಸಾವನ್ನಪ್ಪಿದ್ದು, 28ಕ್ಕೂ ಅಧಿಕ ಜನ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಹಾಗೂ ಬಿಹಾರದಲ್ಲಿ 18 ಜನ ಸಾವನ್ನಪ್ಪಿದ್ದು, ಗಯಾ, ಮುಂಗೇರ್, ಔರಂಗಾಬಾದ್, ನವಾಡಾಗಳಲ್ಲಿ ಸಿಡಿಲು ಬಡಿದು ಇಷ್ಟೊಂದು ಸಾವು ಸಂಭವಿಸಿದೆ. ಇದರಲ್ಲಿ ಒಂದೇ ಕುಟುಂಬದ ಮೂವರು ಸೇರಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.

ಸಿದ್ದು ನ್ಯಾಮಗೌಡ ಅಂತಿಮ ದರ್ಶನ ಪಡೆದ ಸಿದ್ದರಾಮಯ್ಯ, ಪರಮೇಶ್ವರ

ಬಾಗಲಕೋಟೆ: ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ, ಜೆಡಿಎಸ್ ಕಾರ್ಯಾಧ್ಯಕ್ಷ ಬಸವರಾಜ ಹೊರಟ್ಟಿ, ಮಾಜಿ ಸಚಿವ ಎಂ.ಬಿ.ಪಾಟೀಲ ಸೇರಿದಂತೆ ಅನೇಕ ಗಣ್ಯರು ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಿದ್ದು ನ್ಯಾಮಗೌಡ ಸಾವು ದೊಡ್ಡ ಆಘಾತ ತಂದಿದೆ. ಜನಪರ ಕೆಲಸದ ಮೂಲಕ ಇಡೀ ಸಮಾಜ ಸ್ಮರಿಸುವಂತಹ ಕೆಲಸ ಮಾಡಿದ್ದ ಅವರು ಯಾವಾಗಲು ಸ್ಥಿರಸ್ಥಾಯಿಯಾಗಿ ಉಳಿಯುತ್ತಾರೆ. ಸಮ್ಮಿಶ್ರ ಸರ್ಕಾರದಲ್ಲಿ ಜನಸೇವೆ ಮಾಡಲು ಅವಕಾಶ ಕೇಳಿದ್ದರು ಎಂದು ಕಂಬನಿ ಮಿಡಿದರು. ಬ್ಯಾರೇಜ್ ಸಿದ್ದು ಅಂಥ ಪ್ರಸಿದ್ಧರಾಗಿದ್ದ ಅವರು ಎರಡು ಸಲ ನನ್ನನ್ನು ಬ್ಯಾರೇಜ್ಗೆ ಕರೆದುಕೊಂಡು ಹೋಗಿದ್ದರು. ನನ್ನ ಸರ್ಕಾರದ ಅವಧಿಯಲ್ಲಿ ಯಾವಾಗಲೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಿದ್ದರು. ವೈಯಕ್ತಿಕ ಕೆಲಸಕ್ಕೆ ಎಂದೂ ಭೇಟಿ ಮಾಡಿರಲಿಲ್ಲ ಎಂದು ಸ್ಮರಿಸಿದರು. ಇದೇ ವೇಳೆ ಮಾತನಾಡಿದ ಡಿಸಿಎಂ ಡಾ. ಜಿ. ಪರಮೇಶ್ವರ, 48 ಗಂಟೆಯ ಹಿಂದೆ ದೆಹಲಿಯಲ್ಲಿ ಭೇಟಿ ಮಾಡಿ ಸಂಪುಟದಲ್ಲಿ ಅವಕಾಶ ಕೋರಿದ್ದರು. ನಾವೆಲ್ಲ ಇದ್ದೇವೆ ಅಂಥ ಹೇಳಿದ್ದರಿಂದ ಅಲ್ಲಿಂದ ವಾಪಸ್ ಬರುವಾಗ ವಿಧಿಆಟ ನಡೆಯಿತು ಎಂದು ಕಂಬನಿ ಮಿಡಿದರು. ಅಲ್ಲದೆ, ಇತ್ತೀಚಿಗಷ್ಟೇ ರಾಹುಲ್ ಗಾಂಧಿ ಅವರನ್ನು ಕರೆದುಕೊಂಡು ಬಂದು ಬ್ಯಾರೇಜ್ ತೋರಿಸಿದ್ದರು. ನಮಗೆ ಮತ್ತೊಬ್ಬ ಸಿದ್ದು ನ್ಯಾಮಗೌಡ ಸಿಗಲ್ಲ. ಸಿದ್ದು ನ್ಯಾಮಗೌಡ ನಿಧನಕ್ಕೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಸಂತಾಪ ತಿಳಿಸಿದ್ದಾರೆ ಎಂದರು.

ಕಾಂಗ್ರೆಸ್ ನಡೆಗೆ ಸಿಎಂ ಕುಮಾರಸ್ವಾಮಿ ಅಸಮಾಧಾನ...?

ಬೆಂಗಳೂರು : ವಾರ ಕಳೆದರೂ ಸಚಿವ ವಿಸ್ತರಣೆಗೆ ಅಡ್ಡಿ ಆಗಿರುವ ಕಾಂಗ್ರೆಸ್ ನಾಯಕರ ನಡೆಗೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಮೊದಲು ಕಾಂಗ್ರೆಸ್ ನವರೇ ಬಂದು ನಮಗೆ ಬೇಷರತ್ ಬೆಂಬಲ ನೀಡುವುದಾಗಿ ಘೋಷಿಸಿದ್ದರು. ಅಲ್ಲದೆ, ಸರಿ ಸಮಾನವಾಗಿ ಸಚಿವ ಸ್ಥಾನಗಳನ್ನು ಕೂಡ ಹಂಚಿಕೊಳ್ಳುವ ಬಗ್ಗೆ ಮಾತನಾಡಿದ್ದರು. ಆದರೆ, ಇದೀಗ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಕಾಂಗ್ರೆಸ್ ನಾಯಕರು ಈ ಮೊದಲು ನೀಡಿದ ಹೇಳಿಕೆಗಳಿಗೆ ಬದ್ಧವಾಗಿ ನಡೆದುಕೊಳ್ಳದೆ, ತಮ್ಮ ವರಸೆ ಬದಲಾಯಿಸಿದ್ದಾರೆ ಎಂದು ಕುಮಾರಸ್ವಾಮಿ ಅವರು ತಮ್ಮ ಆಪ್ತರ ಬಳಿ ನೋವು ತೋಡಿಕೊಂಡಿದ್ದಾರೆ ಎನ್ನಲಾಗಿದೆ. . ಇಷ್ಟೆಲ್ಲಾ ಬೆಳವಣಿಗೆಗಳು ನಡೆದರೂ ರಾಜ್ಯ ಕಾಂಗ್ರೆಸ್ ನಾಯಕರು ಮಾತ್ರ ತಮಗೆ ಪ್ರಮುಖ ಖಾತೆಗಳು ಬೇಕು ಎಂಬ ಹಠಕ್ಕೆ ಬಿದ್ದಿರುವುದರಿಂದ ಸಚಿವ ಸಂಪುಟ ವಿಸ್ತರಣೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳಿವೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸದಲ್ಲಿರುವುದರಿಂದ ಖಾತೆಗಳ ಹಂಚಿಕೆ ಪ್ರಕ್ರಿಯೆಗೆ ಇನ್ನೂ ಮೂರು-ನಾಲ್ಕು ದಿನಗಳ ಕಾಲಾವಕಾಶ ಅಗತ್ಯವಿದೆ ಎನ್ನಲಾಗಿದೆ.

ವಾರ ಕಳೆದರೂ ಆಗದ ಸಚಿವ ಸಂಪುಟ ವಿಸ್ತರಣೆ

ನವದೆಹಲಿ: ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮೀಶ್ರ ಸರ್ಕಾರ ರಚನೆಯಾಗಿ ವಾರ ಕಳೆದಿದೆ. ಆದರೆ ಈವರೆಗೆ ಸಚಿವ ಸಂಪುಟ ವಿಸ್ತರಣೆ ಆಗದಿರುವುದು ಕಾಂಗ್ರೆಸ್ ನಾಯಕರಿಗೆ ಇರಿಸುಮುರಿಸು ಉಂಟಾಗಿದೆ. ಕಳೆದ ಬುಧವಾರವೇ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಪ್ರಮಾಣವಚನ ಸ್ವೀಕರಿಸಿದ್ದರು. ಕಾಂಗ್ರೆಸ್ನ ಹಿರಿಯ ಶಾಸಕರು ಪ್ರಮುಖ ಖಾತೆಗಳಿಗೆ ಪಟ್ಟು ಹಿಡಿದಿರುವುದರಿಂದ ಕಾಂಗ್ರೆಸ್ ನಾಯಕರ ಈ ಧೋರಣೆಗೆ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹಾಗೂ ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಹಣಕಾಸು ಖಾತೆ ಬಿಟ್ಟು ಬೇರೆ ಖಾತೆಗಳಿಗೆ ಯಾವುದೇ ಪಟ್ಟು ಹಿಡಿದಿಲ್ಲ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ ಹಣಕಾಸು ಇಲಾಖೆ ತಮಗೆ ಬೇಕೇ ಬೇಕು ಎಂದು ಪಟ್ಟು ಹಿಡಿದಿರುವುದರಿಂದ ಬಿಕ್ಕಟ್ಟು ಉಲ್ಬಣಗೊಂಡಿದೆ ಎಂದು ಮೂಲಗಳು ತಿಳಿಸಿವೆ. ತಮ್ಮ ಆಪ್ತರಿಗೆ ಈ ಖಾತೆ ಕೊಡಿಸಬೇಕೆಂಬ ಕಾರಣಕ್ಕೆ ಸಿದ್ದರಾಮಯ್ಯ ಅವರು ಬಿಗಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರ ಈ ನಡೆಗೆ ಕೋಪಗೊಂಡಿರುವ ಗುಲಾಂ ನಬಿ ಆಜಾದ್, ಮೊದಲು ಬೇಷರತ್ತ ಬೆಂಬಲ ನೀಡಿ, ಈಗ ಕ್ಯಾತೆ ತೆಗೆಯುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಸಿಎಂ ಕುಮಾರಸ್ವಾಮಿ ಭೇಟಿ ಮಾಡಿದ ಡಿಜಿ, ಎಡಿಜಿಪಿ

ಬೆಂಗಳೂರು :ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಹಾಗೂ ಗುಪ್ತಚರ ಇಲಾಖೆ ಎಡಿಜಿಪಿ ಅಮರ್ಕುಮಾರ್ ಪಾಂಡೆ ಮಂಗಳವಾರ ಬೆಳಗ್ಗೆ ಭೇಟಿ ಮಾಡಿ ಚರ್ಚಿಸಿದರು. ಸಿಎಂ ಕುಮಾರಸ್ವಾಮಿ ಇನ್ನೂ ತಮ್ಮಅಧಿಕೃತ ನಿವಾಸಕ್ಕೆ ಶಿಫ್ಟ್ ಆಗದ ಹಿನ್ನಲೆಯಲ್ಲಿ ಅವರ ಜೆ.ಪಿ. ನಗರದ ನಿವಾಸಕ್ಕೆ ಆಗಮಿಸಿಯೇ ಚರ್ಚೆ ನಡೆಸುತ್ತಿದ್ದಾರೆ. ವಾಸ್ತವ್ಯಕ್ಕೆ ಸರ್ಕಾರಿ ನಿವಾಸವನ್ನು ಪಡೆದಿಲ್ಲ. ಇದರಿಂದ ಇದು ದೈನಂದಿನ ಭೇಟಿಯಾಗಿದ್ದು, ಸಿಎಂ ಜೊತೆಗಿನ ಈ ಭೇಟಿ ದೈನಂದಿನ ಭೇಟಿಯಾಗಿದ್ದು ರಾಜ್ಯದ ವಿವಿಧಡೆ ನಡೆಯುವ ಪ್ರಮುಖ ವಿದ್ಯಾಮಾನಗಳು, ಸೂಕ್ತ ಭದ್ರತೆ ಸೇರಿದಂತೆ ಹಲವು ವಿಚಾರಗಳ ಕುರಿತು ಈ ಸಂದರ್ಭದಲ್ಲಿ ಚರ್ಚೆ ನಡೆಯಿತು. ಸುಮಾರು ಒಂದು ಗಂಟೆಗೂ ಅಧಿಕ ಕಾಲ ಈ ಇಬ್ಬರು ಹಿರಿಯ ಅಧಿಕಾರಿಗಳು ಸಿಎಂ ಜೊತೆಗೆ ಮಾತುಕತೆ ನಡೆಸಿದರು.

ಸಿಬಿಎಸ್ಇ 10ನೇ ತರಗತಿಯ ಫಲಿತಾಂಶ ಇಂದು

ನವದೆಹಲಿ: 10ನೇ ತರಗತಿಯ ಸಿಬಿಎಸ್ಇ ಪರೀಕ್ಷಾ ಫಲಿತಾಂಶ ಇಂದು (ಮಂಗಳವಾರ )ಸಂಜೆ 4 ಗಂಟಗೆ ಪ್ರಕಟಗೊಳ್ಳಲಿದೆ. ಸಿಬಿಎಸ್ಇ ವೆಬ್ಸೈಟ್ಗಳಾದ www.cbseresults.nic.in, www.cbse.nic.in ಮತ್ತು www.results.nic.in ನಲ್ಲಿ ಪರೀಕ್ಷಾ ಫಲಿತಾಂಶ ಪ್ರಕಟಗೊಳ್ಳಲಿದೆ. ಪ್ರಸಕ್ತ ಸಾಲಿನಲ್ಲಿ ದೇಶಾದ್ಯಂತ 16,38,420 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಮಾರ್ಚ್ 5ರಿಂದ ಎಪ್ರಿಲ್ 25ರವರೆಗೆ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಗಳು ನಡೆದಿದ್ದವು. ಈ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ ತೀವ್ರ ವಿವಾದ ಸೃಷ್ಟಿಸಿತ್ತು. ಕಳೆದ ವರ್ಷದ 10ನೇ ತರಗತಿ ಪರೀಕ್ಷಾ ಫಲಿತಾಂಶ ಜೂನ್ ಮೊದಲ ವಾರದಲ್ಲಿ ಪ್ರಕಟವಾಗಿದನ್ನು ಇಲ್ಲಿ ಸ್ಮರಿಸಬಹುದು.

ದೇವೇಗೌಡರು ಯಾರನ್ನುನೆಮ್ಮದಿಯಾಗಿರಲು ಬಿಡಲ್ಲ

ತುಮಕೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಯಾರನ್ನು ನೆಮ್ಮದಿಯಾಗಿರಲು ಬಿಡಲ್ಲ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ನೆಮ್ಮದಿಯಾಗಿ ಆಡಳಿತ ನಡೆಸಲು ಬಿಡಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ನಾನೂ ಕೂಡ ಅವರ ಗರಡಿಯಲ್ಲಿಯೇ ಪಳಗಿದ್ದೇನೆ. ನನಗೆ ಅವರ ರಾಜಕೀಯ ಹೆಜ್ಜೆ ಗುರುತುಗಳು ಗುರುತಿದೆ. ಹೀಗಾಗಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಆಡಳಿತ ಅಷ್ಟೋಂದು ಸುಲಭವಲ್ಲ ಎಂದರು. ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು ದೇವೇಗೌಡರ ಜೊತೆಗೆ ಸೇರಿ ಕಾಂಗ್ರೆಸ್ ನಿರಾಯುಧವಾಗಿದೆ. ಬಿಎಸ್ ವೈ ಅವರನ್ನು ಸೋಲಿಸಲು ಅವರ ಬಳಿ ಯಾವುದೇ ಅಸ್ತ್ರಗಳಿಲ್ಲ ಎಂದು ಛೇಡಿಸಿದರು.

ಹಿರಿಯ ನಟ ಅಂಬಿಗೆ 66ರ ಸಂಭ್ರಮ

ಬೆಂಗಳೂರು : ಮಂಡ್ಯದ ಗಂಡು ಹಾಗೂ ಹಿರಿಯ ನಟ, ರಾಜಕಾರಣಿಯಾಗಿರುವ ಅಂಬರೀಷ್ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಅವರ ಸಾವಿರಾರು ಅಭಿಮಾನಿಗಳು ರಾತ್ರಿಯಿಂದಲೇ ಅವರ ಮನೆ ಮುಂದೆ ನಿಂತು ಕೇಕ್ ಕತ್ತರಿಸಿ, ಬೃಹತ್ ಮಾಲೆಗಳನ್ನು ಹಾಕಿ ಸಂಭ್ರಮಿಸಿದರು. ಅಭಿಮಾನಿಗಳ ಒತ್ತಾಸೆಗೆ ಮಣಿದು ಕೇಕ್ ತಿಂದ ಅಂಬಿ, ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡರು. ಇದೇ ವೇಳೆ ಯೋಗರಾಜ್ ಭಟ್ ಕೂಡ ಅಂಬರೀಷಣ್ಣ ಗೆ ವಯಸ್ಸು ಇನ್ನು ಹದಿನಾರು ಎಂದು ಹಾಡು ಬರೆದು ಶುಭ ಕೋರಿದ್ದಾರೆ.

ಅಂಬಿ ಹುಟ್ಟುಹಬ್ಬದ ದಿನದಂದು ಸೆಟ್ಟೇರಿದ ಮಗನ ಚಿತ್ರ

ಬೆಂಗಳೂರು : ಹಿರಿಯ ನಟರಾದ ಅಂಬರೀಷ್ ಹಾಗೂ ಸುಮಲತಾ ದಂಪತಿಯ ಪುತ್ರ ಅಭಿಷೇಕ್ ಅವರ ಸಿನಿಮಾ ಅಂಬಿಯ ಹುಟ್ಟುಹಬ್ಬದ ದಿನದಂದೇ ಸೇಟ್ಟೆರುತ್ತಿದೆ. ಹೌದು ಕಳೆದ ಒಂದು ವರ್ಷದಿಂದ ಅಮರ್ ಚಿತ್ರಕ್ಕಾಗಿ ಸಾಕಷ್ಟು ವರ್ಕ ಔಟ್ ಮಾಡುತ್ತಿದ್ದ ಅಭಿಷೇಕ್ ದೇಹವನ್ನು ದಂಡಿಸಿ ಸ್ಲೀಮ್ ಕೂಡ ಆಗಿದ್ದಾರೆ. ಅಗತ್ಯ ತಯಾರಿ ಮಾಡಿಕೊಂಡು ಚಿತ್ರಕ್ಕೆ ಮುನ್ನಡಿ ಬರೆಯಲು ಸಜ್ಜಾಗಿರುವ ಮಗ ಅಭಿಷೇಕ್ ಚಿತ್ರದ ಬಗ್ಗೆ ಹಲವು ಕನಸು ಕಂಡಿರುವ ಹಿರಿಯ ನಟ-ನಟಿಯರಾಗಿರುವ ತಂದೆ-ತಾಯಿ ಇಬ್ಬರು ಉತ್ಸುಕರಾಗಿದ್ದರು. ಇಬ್ಬರು ಕಳೆದ ಐದು ದಶಕಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ಪಳಗಿರುವುದರಿಂದ ಮಗನ ಮೇಲೆ ಭರವಸೆಯ ಮಹಾಪೂರವನ್ನೇ ಇಟ್ಟುಕೊಂಡಿದ್ದಾರೆ. ಅಭಿಷೇಕ್ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ಶುಭ ಗಳಿಗೆ ಅವರನ್ನು ತಂದೆಯಷ್ಟೇ ಎತ್ತರ ಸ್ಥಾನಕ್ಕೆ ಕೊಂಡೈಯಲಿ ಎಂದು ನಾವು ಕೂಡ ಶುಭ ಹಾರೈಸೋಣ.

ಸತ್ಯನಾರಾಯಣ ಪೂಜೆಯಲ್ಲಿ ಭಾಗಿಯಾದ ಕುಮಾರಸ್ವಾಮಿ

ಬೆಂಗಳೂರು : ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೇಗೌಡರ ಪದ್ಮಾನಾಭ ನಗರದಲ್ಲಿರುವ ನಿವಾಸ ಅಮೋಘದಲ್ಲಿ ಮಂಗಳವಾರ ಸತ್ಯನಾರಾಯಣ ಪೂಜೆ ನಡೆಯಿತು. ಈ ಪೂಜೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಈಗಾಗಲೇ ಕಳೆದ ಹಲವು ದಿನಗಳಿಂದ ನಾಡಿನ ವಿವಿಧ ಮಠ ಮಾನ್ಯಗಳನ್ನು ಸುತ್ತಿ, ದೇವರ ದರ್ಶನ ಆರ್ಶೀವಾದ ಪಡೆದ ಬೆನ್ನಲ್ಲೇ ಇದೀಗ ತಂದೆ ದೇವೇಗೌಡರು ಹಮ್ಮಿಕೊಂಡಿರುವ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದ ಬಳಿಕ ದೇವೇಗೌಡರ ಮನೆಯಲ್ಲಿ ಇದು ಮೊದಲ ವಿಶೇಷ ಪೂಜೆಯಾಗಿದೆ. ದೇವೇಗೌಡರ ಕುಟುಂಬದ ಬಹುತೇಕ ಸದಸ್ಯರು ಈ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ಬಿಜೆಪಿಯಿಂದ ರುದ್ರೇಶ, ರವಿಕುಮಾರ, ತವನಪ್ಪ ಅಷ್ಟಗಿ ಮೇಲ್ಮನೆಗೆ ?

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮೂವರಿಗೆ ವಿಧಾನ ಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ನಾಮನಿರ್ದೇಶನ ಮಾಡಲು ತಯಾರಿ ನಡೆದಿದೆ ಎನ್ನಲಾಗಿದೆ. ಶಿವಮೊಗ್ಗದ ಬಿಜೆಪಿ ಮುಖಂಡ ರುದ್ರೇಶ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹಾಗೂ ಉತ್ತರ ಕರ್ನಾಟಕ ಭಾಗದಿಂದ ಅಲ್ಪಸಂಖ್ಯಾತರ ಕೋಟಾದಲ್ಲಿ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ ಅವರಿಗೆ ಈ ಸ್ಥಾನ ನೀಡಲು ಪಕ್ಷದ ವರಿಷ್ಟರು ತೀರ್ಮಾನಿಸಿದ್ದಾರೆ. ಈಗಾಗಲೇ ಇದಕ್ಕೆ ಯಡಿಯೂರಪ್ಪ ಅವರು ಮನಸು ಮಾಡಿದ್ದು, ಈ ಮೂವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನಗಳು ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಹಿಂದೆ ಕೆಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ರುದ್ರೇಶ, ತವನಪ್ಪ ಅಷ್ಟಗಿ ಅವರು ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರೆ, ಎನ್.ರವಿಕುಮಾರ ಸಂಘ ಪರಿವಾರದ ಹಿನ್ನಲೆಯಿಂದ ಬಂದವರಾಗಿದ್ದಾರೆ. ಇದಲ್ಲದೆ, ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ತವನಪ್ಪ ಅಷ್ಟಗಿ ಸೇರಿ ಈ ಮೂವರು ನಾಯಕರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಿಸುವ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಯಾವುದಕ್ಕೂ ಈ ಕುರಿತ ಅಂತಿಮ ತೀರ್ಮಾನ ಶೀಘ್ರದಲ್ಲಿಯೇ ಹೊರಬೀಳುವ ಸಾಧ್ಯತೆಯಿದೆ ಎಂದು ಪಕ್ಷದ ಉನ್ನತ ಮೂಲಗಳು ಪ್ರಜಾಕಿರಣಕ್ಕೆ ತಿಳಿಸಿವೆ.

ತವನಪ್ಪ ಅಷ್ಟಗಿಗೆ ಮೇಲ್ಮ,ನೆಗೆ ನಾಮ ನಿರ್ದೇಶನ ಮಾಡಲು ಒತ್ತಾಯ

ಧಾರವಾಡ: ಧಾರವಾಡ ವಿಧಾನ ಸಭಾ ಕ್ಷೇತ್ರ-71ರ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಬೇಕೆಂದು ಬಿಜೆಪಿ ಮುಖಂಡರು ಧಾರವಾಡ ಸಂಸದ ಪ್ರಲ್ಹಾದ ಜೋಶೀ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ಮನವಿ ಸಲ್ಲಿಸಿದರು. ಧಾರವಾಡ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಮಹೇಶ ಯಲಿಗಾರ, ಬಿಜೆಪಿ ಧಾರವಾಡ ತಾಲೂಕು ಅಧ್ಯಕ್ಷ ನಾಗಪ್ಪ ಗಾಣಗೇರ, ಧಾರವಾಡ ಎಪಿಎಂಸಿ ಸದಸ್ಯ ಬಸವರಾಜ ಹೋಸೂರ ಸೇರಿದಂತೆ ಅನೇಕ ಮುಖಂಡರು ಸೋಮವಾರ ಹುಬ್ಬಳ್ಳಿಗೆ ತೆರಳಿ ಮನವಿ ಸಲ್ಲಿಸಿದರು. ತವನಪ್ಪ ಅಷ್ಟಗಿ ಅವರು ಇತ್ತೀಚೆಗೆ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ-೭೧ ಕ್ಷೇತ್ರದ ಬಿಜೆಪಿ ಟಿಕೆಟ್ನ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಪಕ್ಷದ ಟಿಕೇಟ್ ಸಿಗದಿದ್ದರೂ ಯಾವುದೇ ರೀತಿಯಲ್ಲಿ ಅಸಮಾಧಾನ ವ್ಯಕ್ತಪಡಿಸದೇ ಪಕ್ಷದ ತೀರ್ಮಾನವನ್ನು ಗೌರವಿಸಿ, ಅಮೃತ ದೇಸಾಯಿಯವರ ಗೆಲುವಿಗೆ ಹಗಲಿರಳು ಶ್ರಮಿಸಿದ್ದಾರೆ ಎಂದು ಗಮನ ಸೆಳೆದರು. ಈ ಸಂದರ್ಭದಲ್ಲಿ ಶಂಕರ ಕೋಮಾರದೇಸಾಯಿ, ಮಂಜುನಾಥ ಸಾದರ, ನೀಲಪ್ಪ ಮುಮ್ಮಿಗಟ್ಟಿ, ಮಲ್ಲಿಕಾರ್ಜುನ ಕೆಂಪಬಸಣ್ಣವರ, ಸುರೇಶ ಕರ್ಜೂರ, ವಿಜಯ ಚಬ್ಬಿ, ಮಲ್ಲಿಕಾರ್ಜುನ ಮಡಿವಾಳರ, ನಿಜಗುಣಿ ಮುಗಳಿ, ಬಸಪ್ಪ ಸಂಗೊಳ್ಳಿ ಮತ್ತಿತರರು ಮನವಿ ಸಲ್ಲಿಸಿದರು.

ಕೋನರಡ್ಡಿ ಪುನರ್ ಆಯ್ಕೆ ಆಗಿದ್ದರೆ ಸಚಿವರಾಗುತ್ತಿದ್ದರು ಎಂದು ಭಾವುಕರಾದ ಜೆಡಿಎಸ್ ಮುಖಂಡರು

ನವಲಗುಂದ : ನವಲಗುಂದ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಪುನರ್ ಆಯ್ಕೆ ಆಗಿದ್ದರೆ ಸಮ್ಮಿಶ್ರ ಸರಕಾರದಲ್ಲಿ ಖಂಡಿತಾ ಸಚಿವರಾಗುತ್ತಿದ್ದರು ಎಂದು ನವಲಗುಂದ ತಾಲೂಕು ಜೆಡಿಎಸ್ ಅಧ್ಯಕ್ಷ ವೀರಣ್ಣ ನೀರಲಗಿ, ಹುಬ್ಬಳ್ಳಿ ತಾಲೂಕು ಜೆಡಿಎಸ್ ಅಧ್ಯಕ್ಷ ಶಿವಣ್ಣ ಹುಬ್ಬಳ್ಳಿ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಬಿ. ಗಂಗಾಧರಮಠ ಭಾವುಕರಾದರು. ಅವರು ಸೋಮವಾರ ಜೆಡಿಎಸ್ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿ,. ಕುಮಾರಸ್ವಾಮಿ ಅವರು ಕುಮಾರಪರ್ವದಲ್ಲಿಯೇ ಈ ಬಗ್ಗೆ ಭರವಸೆ ನೀಡಿದ್ದರು. ಆದರೆ ಅವರ ಸೋಲಿನಿಂದ ನವಲಗುಂದ ಕ್ಷೇತ್ರಕ್ಕೆ ಭಾರೀ ಹಿನ್ನಡೆ ಆಗಿದೆ. ಇದು ಕೋನರಡ್ಡಿ ಅವರ ಸೋಲಲ್ಲ. ನಮ್ಮ ಸೋಲು ಎಂದು ನೋವು ಹಂಚಿಕೊಂಡರು. ದಿನದ ೨೪ ಗಂಟೆಗಳ ಕಾಲ ನವಲಗುಂದ ಕ್ಷೇತ್ರಕ್ಕಾಗಿ ಮೀಸಲಿಟ್ಟು, ಹಗಲಿರುಳು ಎನ್ನದೇ ಹೋರಾಟ ನಡೆಸಿದ, ಜನರ ಪ್ರತಿಯೊಂದು ಕಷ್ಟ ನಷ್ಟದಲ್ಲಿ ಭಾಗಿಯಾದ ಹಾಗೂ ಜನಸಾಮಾನ್ಯರ ಶಾಸಕರೆಂದೆ ನಾಡಿನ ಮನೆ ಮಾತಾಗಿದ್ದ ಸರಳ ಸಜ್ಜನಿಕೆಯ ಶಾಸಕರೊಬ್ಬರು ಹೀಗೆ ಸೋಲು ಅನುಭವಿಸಿರುವುದು ನವಲಗುಂದ ಕ್ಷೇತ್ರಕ್ಕೆ ಅಷ್ಟೆ ಅಲ್ಲ ಇಡೀ ರಾಜ್ಯದ ಜನತೆ. ವಿಶೇಷವಾಗಿ ಉತ್ತರ ಕರ್ನಾಟಕದ ಜನತೆ ಮರುಕ ಪಡುತ್ತಿದೆ. ಈ ಬಗ್ಗೆ ಜೆಡಿಎಸ್ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು. ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನೂ ಗ್ರಾಮಮಟ್ಟದಲ್ಲಿ ಇನ್ನಷ್ಟು ಬಲಪಡಿಸಬೇಕು. ಆ ಮೂಲಕ ಪ್ರತಿಯೊಂದು ಹಳ್ಳಿಗಳ ಜನರ ಕಷ್ಟನಷ್ಟ, ಸಮಸ್ಯೆಗಳನ್ನು ನಮ್ಮೆಲ್ಲರ ನೆಚ್ಚಿನ ನಾಯಕರಾದ ಎನ್.ಹೆಚ್. ಕೋನರಡ್ಡಿ ಅವರ ಗಮನಕ್ಕೆ ತಂದು ಸಿಎಂ ಕುಮಾರಸ್ವಾಮಿ ಅವರ ಮೂಲಕ ಬಗೆಹರಿಸಿಕೊಳ್ಳಲು ಪ್ರಮಾಣಿಕ ಪ್ರಯತ್ನ ಮಾಡೋಣ ಎಂದು ಮನವಿ ಮಾಡಿದರು. ಇದಕ್ಕೂ ಮುನ್ನ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಅವರ ಅಕಾಲಿಕ ನಿಧನಕ್ಕೆ ಸಭೆಯಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಿ ಸಂತಾಪ ಸೂಚಿಸಲಾಯಿತು. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಶ್ರೀಶೈಲಯ್ಯ ಮೂಲಿಮನಿ, ಅಬ್ಬಾಸ ದೇವರುಡು, ಎಪಿಎಂಸಿ ಸದಸ್ಯರಾದ ದ್ಯಾಮಣ್ಣ ಹೊನಕುದರಿ, ಪುರಸಭೆ ಸದಸ್ಯರಾದ ಜೀವನ ಪವಾರ ಹಸನಸಾಬ ಗೂಡುನಾಯ್ಕರ, ಕಾಶೀಂಸಾಬ ಅಲ್ಲಿಬಾಯಿ, ರೈತ ಘಟಕದ ಅಧ್ಯಕ್ಷ ಶಿವಶಂಕರ ಕಲ್ಲೂರ, ಎಂ.ಎಸ್. ರೋಣದ, ವಿ.ಎಸ್. ಶಿರಗುಪ್ಪಿ, ನಾರಾಯಣ ಮಾಡೊಳ್ಳಿ,ಡಿ.ವಿ. ಕುರಬೆಟ್ಟ, ಮಲ್ಲಪ್ಪ ಕುರಹಟ್ಟಿ, ದೇವೇಂದ್ರಪ್ಪ ಹಳ್ಳದ, ಅಶೋಕ ಮೇಟಿ, ಕುಮಾರ ಮಂಕಣಿ, ಶಂಕರು ಗಾಣಿಗೇರ, ಪ್ರಭು ರಾಯನಗೌಡರ, ಸಿದ್ದಲಿಂಗಪ್ಪ ಅಂಗಡಿ, ಶರಣು ಹಿರೇಮಠ, ಮಲ್ಲಿಕಾರ್ಜುನ ಕಾಲವಾಡ, ಆನಂದ ಹವಳಕೊಡ, ಆರೂಢಪ್ಪ ಕಾತರಕಿ, ಸುರೇಶ ರಾಯರಡ್ಡಿ, ಸಿದ್ದಲಿಂಗಪ್ಪ ಮದ್ನೂರ, ಹಟೇಲ್ ಸಾಬ ಗಾಡಗೋಳಿ, ಹಸನಸಾಬ ಗಡ್ಡದ, ನಾಗಪ್ಪ ನೆಲಗುಡ್ಡದ, ಶ್ರೀಕಾಂತ ಕೋಳಿವಾಡ, ವೆಂಕಣ್ಣ ಹೊನ್ನನಾಯ್ಕರ, ಶೀವಲೀಲಾ ಬೋರಶೆಟ್ಟರ, ಸೈಪೂದ್ದಿನ್ ಅವರಾದಿ, ಪ್ರದೀಪ ಲೆಂಕನಗೌಡರ, ಪರಮೇಶ್ವರ ಯಡ್ರಾವಿ, ವಿ.ಕೆ. ಕುರಡಗಿ, ಚಂದುಸಾಬ ನದಾಫ್, ಲಕ್ಷ್ಮಣ ಬೆಂತೂರ, ಮಲ್ಲಿಕಾರ್ಜುನ ಬೆಳವಟಗಿ, ಭಗವಂತಪ್ಪ ಪುಟ್ಟಣ್ಣವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ರೈತರ ಸಾಲಮನ್ನಾ ಬಗ್ಗೆ ವಿರೋಧ ಪಕ್ಷಗಳಿಗಿಂತ ನಮಗೆ ಹೆಚ್ಚಿನ ಅರಿವಿದೆ ಎಂದ ಕೋನರಡ್ಡಿ

ನವಲಗುಂದ : ಬಿಜೆಪಿಯೂ ರೈತರ ಸಾಲಮನ್ನಾ ವಿಷಯದಲ್ಲಿ ಅನಗತ್ಯವಾಗಿ ರಾಜಕೀಯ ಮಾಡುತ್ತಿದೆ. ಇದು ಸರಿಯಾದ ಬೆಳವಣಿಗೆ ಅಲ್ಲ. ರೈತರ ಸಾಲಮನ್ನಾ ಬಗ್ಗೆ ವಿರೋಧ ಪಕ್ಷಗಳಿಗಿಂತ ಹೆಚ್ಚಿನ ಅರಿವು ನಮಗಿದೆ ಎಂದು ನವಲಗುಂದ ಮಾಜಿ ಶಾಸಕ ಹಾಗೂ ರಾಜ್ಯ ಜೆಡಿಎಸ್ ಹಿರಿಯ ಉಪಾಧ್ಯಕ್ಷರಾದ ಎನ್.ಹೆಚ್. ಕೋನರಡ್ಡಿ ಅವರು ಹೇಳಿದರು. ಅವರು ಸೋಮವಾರ ಸಂಜೆ ನಗರದಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ಮತದಾರರಿಗೆ, ಜೆಡಿಎಸ್ ಕಾರ್ಯಕರ್ತರಿಗೆ ಹಾಗೂ ಹಿರಿಯರಿಗೆ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದರು. ವಿರೋಧ ಪಕ್ಷವಾದ ಬಿಜೆಪಿಯೂ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದು ಸರಿಯಲ್ಲ. ಸಾಲಮನ್ನಾದಿಂದ ಜೆಡಿಎಸ್ ಪಕ್ಷವೂ ಹಿಂದೆ ಸರಿಯುವ ಪ್ರಶ್ನೇಯೇ ಇಲ್ಲ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ವಲ್ಪ ಸಮಯಾವಕಾಶ ಬೇಕು ಎಂದು ಹೇಳಿದ್ದಾರೆ. ಆದರೂ ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ರಾಜ್ಯ ಬಂದ್ ಮಾಡಿದ ಬಿಜೆಪಿಗೆ ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ರೈತ ಸಂಘಗಳು ಬಂದ್ ಗೆ ಸಹಕಾರ ನೀಡದೆ ವಿರೋಧ ವ್ಯಕ್ತಪಡಿಸಿ ತಿರುಗೇಟು ನೀಡಿವೆ. ಈಗಲಾದರೂ ಬಿಜೆಪಿ ನಾಯಕರು ಈ ವಿಷಯದಲ್ಲಿ ರಾಜಕೀಯ ಮಾಡುವುದನ್ನು ಬಿಡಬೇಕು. ಇಲ್ಲದಿದ್ದರೆ ರಾಜ್ಯದ ಜನತೆಯೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ನವಲಗುಂದ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹುಬ್ಬಳ್ಳಿ, ಅಣ್ಣಿಗೇರಿ ಹಾಗೂ ನವಲಗುಂದ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಜೆಡಿಎಸ್‌ಗೆ ಉತ್ತಮ ಬೆಂಬಲ ದೊರೆತಿದೆ ಕ್ಷೇತ್ರದ ಮತದಾರರಿಗೆ ನಾನು ಚಿರಋಣಿಯಾಗಿದ್ದೇನೆ. ಮುಂದಿನ ದಿನಗಳಲ್ಲಿಯೂ ಕ್ಷೇತ್ರದ ಜನರ ಪ್ರತಿಯೊಂದು ಕಷ್ಟ ನಷ್ಟದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದರು.

ಮುಖ್ಯ ಶಿಕ್ಷಕಿ ಎಂ.ಎಂ.ದೊಡ್ಡಮನಿ ಅಮಾನತು

ಧಾರವಾಡ : ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಹಿರಿಯ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಎಂ.ಎಂ.ದೊಡ್ಡಮನಿ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ ಆದೇಶ ಹೊರಡಿಸಿದ್ದಾರೆ. ಮುಖ್ಯ ಶಿಕ್ಷಕರ ಮೇಲೆ ಹಣಕಾಸು ದುರಪಯೋಗದ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಈ ಕುರಿತು ತನಿಖೆ ನಡೆಸಿದಾಗ ಮೇಲ್ನೋಟಕ್ಕೆ ಕೆಲವು ಆರೋಪಗಳು ಸಾಬೀತಾದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಮಾನಿತ್ತಿನ ಅವಧಿಯಲ್ಲಿ ಮುಖ್ಯ ಶಿಕ್ಷಕರು ಕೇಂದ್ರ ಸ್ಥಾನ ಬಿಟ್ಟು ತೆರಳುವಂತಿಲ್ಲ ಹಾಗೂ ನಿಯಮಾನುಸಾರವಾಗಿ ಜೀವನಾಂಶ ಭತ್ಯೆಗೆ ಅರ್ಹರಿರುತ್ತಾರೆ ಎಂದು ಎನ್.ಹೆಚ್. ನಾಗೂರ ತಿಳಿಸಿದ್ದಾರೆ.

ಜೂನ್ ೧ರಿಂದ ೩೦ರವರೆಗೆ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ

ಧಾರವಾಡ : ಕೇಂದ್ರ ಪುರಸ್ಕೃತ ಕಾಲುಬಾಯಿ ರೋಗ ನಿಯಂತ್ರಣ ಕಾರ್ಯಕ್ರಮದಡಿ ೧೪ನೇ ಸುತ್ತಿನ ಲಸಿಕಾ ಕಾರ್ಯಕ್ರಮ ಜಿಲ್ಲೆಯಾದ್ಯಂತ ಜೂನ್ ೧ರಿಂದ ೩೦ರವರೆಗೆ ನಡೆಯಲಿದೆ. ೨.೩ ಲಕ್ಷ ದನ ಕರುಗಳಿಗೆ ಲಸಿಕೆ ಹಾಕಲು ೩೯ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು. ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಾಲುಬಾಯಿ ರೋಗ ನಿಯಂತ್ರಣ ಲಸಿಕಾ ಕಾರ್ಯಕ್ರಮದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಂದು ಗ್ರಾಮಗಳಲ್ಲಿ ಲಸಿಕೆ ಕಾರ್ಯಕ್ರಮಗಳು ನಡೆಯಲಿದ್ದು, ದೇಶದಿಂದ ಈ ವೈರಾಣುವನ್ನು ನಿರ್ಮೂಲನೆ ಮಾಡಲು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ಸರಕಾರದ ಇತರ ಇಲಾಖೆಗಳ ಸಹಕಾರದೊಂದಿಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು. ಲಸಿಕಾ ಕಾರ್ಯಕ್ರಮದ ಕುರಿತು ಹಳ್ಳಿಗಳಲ್ಲಿ ಲಸಿಕೆ ಹಾಕುವ ದಿನ ಹಾಗೂ ಸಮಯವನ್ನು ಮುಂಚಿತವಾಗಿ ತಿಳಿಸಿ ಡಂಗುರದ ಮೂಲಕ ಗ್ರಾಮಸ್ಥರಿಗೆ ಮಾಹಿತಿ ಒದಗಿಸಬೇಕು. ದೇಶದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಪಶು ಸಂಪತ್ತು ಇದೆ. ಅದನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದ ಅವರು ಜಿಲ್ಲೆಯ ೧೧೩ ಪಶು ಚಿಕಿತ್ಸಾ ಘಟಕಗಳಲ್ಲಿ ಕಳೆದ ವರ್ಷ ಹಾಕಲಾದ ಲಸಿಕೆ, ಲಸಿಕೆ ನಂತರ ಜಾನುವಾರುಗಳ ಆರೋಗ್ಯದ ಸ್ಥಿತಿ ಕುರಿತು ವಿವರವಾದ ವರದಿ ತಯಾರಿಸಬೇಕು. ರೋಗಕ್ಕೆ ಈಡಾದ ಪ್ರಾಣಿಗಳ ಆರೋಗ್ಯದ ಹಿನ್ನೆಲೆ ಮತ್ತು ಕಾರಣಗಳನ್ನು ನಿಖರವಾಗಿ ಗುರುತಿಸಿದರೆ ರೋಗದ ಸಂಪೂರ್ಣ ನಿರ್ಮೂಲನೆ ಮಾಡಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಪಶುವೈದ್ಯಾಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಸೂಚಿಸಿದರು. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ವಿಶಾಲ್ ಅಡಹಳ್ಳಿಕರ ಮಾತನಾಡಿ, ಪ್ರತಿ ತಂಡದಿಂದ ದಿನವೊಂದಕ್ಕೆ ೧೨೦ ಪ್ರಾಣಿಗಳಿಗೆ ಲಸಿಕೆ ಹಾಕಲಾಗುವುದು. ಇಲಾಖೆಯ ೫ ಹಾಗೂ ಕೆಎಂಎಫ್ನ ೩೯ ವಾಹನಗಳು ಸೇರಿ ಒಟ್ಟು ೪೪ ವಾಹನಗಳು ಸಿದ್ಧವಾಗಿವೆ. ಪ್ರಚಾರಕ್ಕಾಗಿ ಅವುಗಳಿಗೆ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ. ಎಲ್ಲ ಅಗತ್ಯ ಔಷಧಿ, ಸಿರಿಂಜ್‌ಗಳು ಹಾಗೂ ಐಸ್‌ಪ್ಯಾಕ್ಗಳ ದಾಸ್ತಾನು ಸರಕಾರದಿಂದ ಪೂರೈಕೆಯಾಗಿದೆ ಎಂದು ವಿವರಿಸಿದರು. ಡಾ.ಎಸ್.ವಿ.ಸಂತಿ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಸಹಾಯಕ ನಿರ್ದೇಶಕರು, ಪಶು ವೈದ್ಯಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಮಹದಾಯಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ ಕುಮಾರಸ್ವಾಮಿ

ನವದೆಹಲಿ : ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿರುವ ಹೆಚ್.ಡಿ. ಕುಮಾರಸ್ವಾಮಿ ಸೋಮವಾರ ಸಂಜೆ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಯಾದ ಮಹದಾಯಿ, ಕಳಸಾ-ಬಂಡೂರಿಯನ್ನು ನ್ಯಾಯಾಧೀಕರಣದ ಹೊರಗಡೆಯೇ ಮಾತುಕತೆ ಮೂಲಕ ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಪ್ರಧಾನಿಗೆ ಅಭಿನಂದಿಸಿದ ಕುಮಾರಸ್ವಾಮಿ

ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ರಾಜ್ಯದ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಹಾಡಿ ಹೊಗಳಿದ್ದಾರೆ. ಅವರು ಸೋಮವಾರ ಸಂಜೆ ನವದೆಹಲಿಯಲ್ಲಿ ಸೌಹಾರ್ದ ಭೇಟಿ ಮಾಡಿ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯ ಹಾಗೂ ಕೇಂದ್ರ ಸರಕಾರ ಎರಡು ಜೊತೆಗೆ ಹೋಗಬೇಕಿದೆ. ಹೀಗಾಗಿ ಅವರಿಂದ ನನಗೆ ಭೇಟಿ ವೇಳೆ ಉತ್ತಮ ಸಹಕಾರ ಸಿಕ್ಕಿದೆ. ಅನೇಕ ಸಲಹೆ ಕೂಡ ನೀಡಿದ್ದಾರೆ. ಅವರ ಅನುಭವ ನನಗೆ ಧಾರೆ ಎರೆದಿದ್ದಾರೆ. ಹೀಗಾಗಿ ನಾನು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ವಿಶೇಷವಾಗಿ ಮೂರು ಪವರ್ ಪ್ಲಾಂಟಗಳಾದ ರಾಯಚೂರು, ಯರಮರಸ್ ಹಾಗೂ ಬಳ್ಳಾರಿಗೆ ಕಲ್ಲಿದ್ದಲು ಸಂಗ್ರಹ ಕೊರತೆ ನಿವಾರಣೆಗೆ ಮನವಿ ಮಾಡಿದ್ದೇನೆ ಎಂದರು.

ಸಾಲಮನ್ನಾ ಕುರಿತು ಬುಧವಾರ ನಿರ್ಧಾರ ಪ್ರಕಟ

ನವದೆಹಲಿ : ರಾಜ್ಯದ ರೈತರ ಸಾಲಮನ್ನಾ ಕುರಿತು ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದ್ದು, ಬುಧವಾರ ಈ ಬಗ್ಗೆ ನಾಡಿನ ಜನತೆ ಮುಂದಿಡುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ. ಅವರು ಸೋಮವಾರ ಸಂಜೆ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಷಯ ಪ್ರಕಟಿಸಿದ್ದಾರೆ. ಈಗಾಗಲೇ ನಾನು ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದು ಸಿದ್ಧಪಡಿಸಿಕೊಂಡಿದ್ದೇನೆ. ಈ ಸಮ್ಮೀಶ್ರ ಸರಕಾರ ಜನಪರವಾಗಿದೆ. ನಾಡಿನ ಆರೂವರೆ ಕೋಟಿ ಕನ್ನಡಿಗರ ಸರಕಾರ. ಸಾಲಮನ್ನಾ ಒಂದೇ ವಿಷಯವಲ್ಲ. ಹಲವಾರು ತೋಂದರೆ ನಿವಾರಣೆ ಮಾಡ್ತೀನಿ ಎಂದರು. ಬಿಜೆಪಿ ನಾಯಕರಿಂದ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದ ಅವರು ನಾನು ಅವರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಹೇಳಿದ ಅವರು ನಾನು ನೋವಿನಿಂದ ಹೇಳಿದ ಮಾತನ್ನು ತಿರುಚಲಾಗಿದೆ. ಜನರಿಗೆ ಬದಲಾವಣೆ ಮಾಡಲು ಕೆಲವೊಂದು ಮಾತುಗಳನ್ನು ಹೇಳಿದ್ದೇನೆ. ನಾನು ಕನ್ನಡಿಗರ ಹೆಸರಿನಲ್ಲಿ ಪ್ರಮಾಣ ವಚನ ಮಾಡಿದ್ದೇನೆ. ನಾನು ಬಹಳ ಸೂಕ್ಷ್ಮ ಇದ್ದೇನೆ. ಒಂದು ವೇಳೆ ನಾನು ನುಡಿದಂತೆನಡೆಯಲು ಆಗದಿದ್ದರೆ ನಾನೇ ಆ ಹುದ್ದೆಯಲ್ಲಿ ಮುಂದುವರೆಯಲ್ಲ ಎಂದು ಸ್ಪಷ್ಟಪಡಿಸಿದರು.

ಭೀಕರವಾಗಿ ಕೊಲೆಯಾದ ರೌಡಿಶೀಟರ್

ಬೆಂಗಳೂರ: ರೌಡಿ ಶೀಟರ್ ನೊಬ್ಬನನ್ನು ಭೀಕರವಾಗಿ ಕೊಲೆಗೈದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವಸಂತ ನಗರದಲ್ಲಿ ಮೇ 18 ರಂದು ಸಂಜೆ ಸುಮಾರಿಗೆ ನಡೆದ ಘಟನೆ ಇದಾಗಿದ್ದು, ದುಷ್ಕರ್ಮಿಗಳ ಗುಂಪು ಜಾಕಿಯನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಜಾಕಿ ಎಂಬಾತನೇ ಬರ್ಬರವಾಗಿ ಕೊಲೆಯಾಗಿರುವ ರೌಡಿ ಶೀಟರ್ ಆಗಿದ್ದಾನೆ. ಈತ ಕುಖ್ಯಾತ ರೌಡಿ ಕವಳನ ಸಂಬಂಧಿಯಾಗಿದ್ದು, ಅಕ್ರಮ ಸಂಬಂಧದ ಹಿನ್ನಲೆಯಲ್ಲಿ ಈ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಸಿಸಿ ಟಿವಿ ದೃಶ್ಯಗಳ ಆಧಾರದ ಮೇಲೆ ಈಗಾಗಲೇ ಆರೋಪಿಗಳನ್ನು ಬಂಧಿಸುವಲ್ಲಿ ಹೈಗ್ರೌಂಡ್ಸ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಎಸಿಬಿ ಕುರಿತು ಹೊಸ ಸರಕಾರದ ನಿಲುವು ಪ್ರಕರಣ : ಜೂನ್ 1ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು : ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ನೂತನ ಸರಕಾರ ಎಸಿಬಿ ವಿಚಾರ ಕುರಿತು ಹೊಂದಿರುವ ನಿಲುವು ಏನೂ ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸೋಮವಾರ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆಯಿತು. ಈ ಬಗ್ಗೆ ಸರಕಾರದ ಪರ ವಾದ ಮಂಡಿಸಿದ ಸಹಾಯಕ ಅಡ್ವೋಕೇಟ್ ಜನರಲ್ ಪೋನ್ನಣ್ಣ ಅವರು, ರಾಜ್ಯ ಸರಕಾರದೊಂದಿಗೆ ಚರ್ಚಿಸಿ ತಮ್ಮ ನಿಲುವು ಪ್ರಕಟಿಸಲಾಗುವುದು. ಹೀಗಾಗಿ ಕಾಲಾವಕಾಶ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಹೀಗಾಗಿ ಮಾನ್ಯ ನ್ಯಾಯಾಲಯವು ಪೋನ್ನಣ್ಣ ಅವರಿಗೆ ಜೂನ್ ಒಂದರವರೆಗೆ ಕಾಲಾವಕಾಶ ನೀಡಿ ವಿಚಾರಣೆಯನ್ನು ಮುಂದೂಡಿತು. ಜೆಡಿಎಸ್ ಪಕ್ಷವೂ ತನ್ನ ಪ್ರಣಾಳಿಕೆಯಲ್ಲಿ ಲೋಕಾಯುಕ್ತವನ್ನು ಬಲಪಡಿಸುವ ಅಂಶ ಪ್ರಕಟಿಸಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರದ ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ. ಆದರೆ ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಸರ್ಕಾರ. ಹೀಗಾಗಿ ಇದಕ್ಕೆ ಕಾಂಗ್ರೆಸ್ ಒಪ್ಪುತ್ತಾ ಅಥವಾ ಇದನ್ನು ಕೈ ಬಿಡುತ್ತಾ ಎಂಬುದು ಕಾದು ನೋಡಬೇಕಿದೆ.

ಖಾತೆಗಳ ಹಂಚಿಕೆಗೆ ಸಂಬಂಧ ಜೆಡಿಎಸ್ –ಕಾಂಗ್ರೆಸ್ ನಡುವೆ ಬಿಕ್ಕಟ್ಟು ಉಲ್ಬಣ

ನವದೆಹಲಿ : ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮೀಶ್ರ ಸರಕಾರದಲ್ಲಿ ಖಾತೆಗಳ ಹಂಚಿಕೆಗೆ ಸಂಬಂಧ ಎರಡು ಪಕ್ಷಗಳ ನಾಯಕರ ನಡುವೆ ಬಿಕ್ಕಟ್ಟು ಉಲ್ಬಣಗೊಂಡಿದೆ. ಹಲವು ಪ್ರಮುಖ ಖಾತೆಗಳಿಗಾಗಿ ತೀವ್ರ ಕಸರತ್ತು ನಡೆಸಿರುವ ಕಾಂಗ್ರೆಸ್ ಮುಖಂಡರು ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ಇಂಧನ, ಹಣಕಾಸು ಮತ್ತು ಗೃಹ ಖಾತೆಗಳನ್ನು ಪಡೆಯಲು ಪಟ್ಟುಹಿಡಿದಿದ್ದಾರೆ. ಆದರೆ ಇದಕ್ಕೆ ಸಹಮತ ವ್ಯಕ್ತಪಡಿಸದ ಜೆಡಿಎಸ್ ವರಿಷ್ಟರು ತಮಗೆ ಹಣಕಾಸು ಬೇಕೆ ಬೇಕು ಎಂದು ಪಟ್ಟು ಹಿಡಿದಿದೆ. ಇದರಿಂದಾಗಿ ಎರಡು ಪಕ್ಷಗಳ ನಡುವೆ ಸಮನ್ವಯ ಕೊರತೆ ಎದ್ದು ಕಾಣುತ್ತಿದೆ. ಪ್ರಮುಖರ ನಡುವೆ ಪೈಪೋಟಿ ನಡೆದಿರುವುದನ್ನು ಮನಗೊಂಡ ಕಾಂಗ್ರೆಸ್ ಹಿರಿಯ ನಾಯಕರಾದ ಗುಲಾಂ ನಬೀ ಆಜಾದ್ ಅವರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದಿದೆ. ಇದರಿಂದ ಎರಡು ಪಕ್ಷಗಳ ನಡುವೆ ಸಮನ್ವಯ ಕಾಯ್ದುಕೊಳ್ಳಲು ಹಿರಿಯ ಕಾಂಗ್ರೆಸ್ ನಾಯಕರು ಪ್ರಯತ್ನ ಆರಂಭಿಸಿದ್ದಾರೆ. ಆದರೆ ಇಬ್ಬರು ಮುಖಂಡರು ಬಿಗಿ ಪಟ್ಟು ಹಿಡಿದಿರುವುದರಿಂದ ಮುಂದಿನ ನಡೆ ಕುರಿತು ತೀವ್ರ ಕುತೂಹಲ ಕೆರಳಿಸಿದೆ.

ಕುಮಾರಸ್ವಾಮಿ ಪಲಾಯನವಾದಿ ಸಿಎಂ

ಹುಬ್ಬಳ್ಳಿ : ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪಲಾಯನವಾದಿಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಿಡಿ ಕಾರಿದ್ದಾರೆ. ಅವರು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಸಾಲಮನ್ನಾ ಮಾಡ್ತೀನಿ ಅಂತ ಹೇಳಿ ಇದೀಗ ಯೂ ಟರ್ನ ಹೊಡೆದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕುಮಾರಸ್ವಾಮಿ ಚುನಾವಣೆ ಬಂದಾಗ ರೈತರ ಹಾಗೂ ಜನರ ವೋಟು ಪಡೆಯಲು ಸಾಲಮನ್ನಾದ ಆಮಿಷ ಒಡ್ಡಿದ್ದರು. ಈಗ ನಾನು ಆರುವರೆ ಕೋಟಿ ಕನ್ನಡಿಗರ ಮರ್ಜಿಯಲ್ಲಿಲ್ಲ. ಕಾಂಗ್ರೆಸ್ ಮರ್ಜಿಯಲ್ಲಿದ್ದೇನೆ ಎಂದು ಹೇಳಿರುವುದು ಆಘಾತಕಾರಿ ಸಂಗತಿಯಾಗಿದೆ ಎಂದು ಗುಡುಗಿದರು. ಇದು ಯಾವ ನೈತಿಕತೆ ಎಂದು ತಿರುಗೇಟು ನೀಡಿದ ಜಗದೀಶ ಶೆಟ್ಟರ್ ಒಂದು ವಾರದಲ್ಲಿ ಸಾಲಮನ್ನಾ ಮಾಡದಿದ್ದರೆ ರಾಜೀನಾಮೆ ನೀಡಿಹೊರ ಬರುತ್ತೇನೆ ಎಂದು ಹೇಳುತ್ತಿರುವುದು ನೋಡಿದರೆ ಅವರ ಹತಾಶ ಮನೋಭಾವನೆ ತೋರಿಸುತ್ತದೆ ಎಂದು ಕುಟುಕಿದರು.

ಹಣಕಾಸು ಖಾತೆ ನೀಡಲು ಡಿಕೆಶಿ ಮನವಿ

ನವದೆಹಲಿ : ಕಾಂಗ್ರೆಸ್ ಜೆಡಿಎಸ್ ಸಮ್ಮೀಶ್ರ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್ ನ ಹಿರಿಯಮುಖಂಡ ಹಾಗೂ ಮಾಜಿ ಇಂಧನ ಸಚಿವ ಡಿ.ಕೆ. ಶಿವಕುಮಾರ ತಮಗೆ ಈ ಬಾರಿ ಹಣಕಾಸು ಖಾತೆ ನೀಡುವಂತೆ ಮನವಿ ಮಾಡಿದ್ದಾರೆ. ಡಿಸಿಎಂ ಹುದ್ದೆ ಮೇಲೆ ಕಣ್ಣೀಟ್ಟಿದ್ದ ಅವರು ಕೊನೆಗೆ ಅದು ಸಿಗದಿದ್ದಾಗ ಅದರಿಂದ ನಿರಾಸೆಗೊಂಡಿದ್ದ ಅವರು ಪ್ರಮುಖ ಖಾತೆ ತಮಗೆ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರಿರುವ ಅವರು ಗುಲಾಂನಬೀ ಆಜಾದ್ ಅವರನ್ನು ಭೇಟಿಯಾಗಿ ವಾಸ್ತವಾಂಶವನ್ನು ಮುಂದಿಟ್ಟಿದ್ದಾರೆ. ಆದರೆ ಜೆಡಿಎಸ್ ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಲು ಹಣಕಾಸು ಇಲಾಖೆ ತಮಗೆ ಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಈ ಹಣಕಾಸು ಖಾತೆ ಕಾಂಗ್ರೆಸ್ ಪಾಲಾಗಿದೆಯಾ ಅಥವಾ ಜೆಡಿಎಸ್ ಗೆ ದಕ್ಕಲಿದೆಯಾ ಎಂಬುದು ಕುತೂಹಲ ಕೆರಳಿಸಿದೆ.

ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಬಿಎಸ್ ವೈ

ಬೆಂಗಳೂರು : ರೈತರ ಸಾಲಮನ್ನಾ ಕುರಿತು ಸ್ಪಷ್ಟ ನಡೆ ಪಡೆಯದೆ ಅಧಿಕಾರಕ್ಕಾಗಿ ಕಾಂಗ್ರೆಸ್ ಜೊತೆಗೆ ಹೋದ ಕುಮಾರಸ್ವಾಮಿ ನಡೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ವಾಗ್ದಾಳಿ ನಡೆಸಿದರು. ಅವರು ನಗರದಲ್ಲಿ ಸಂಜೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನಾನು ಸಾಂದರ್ಭಿಕ ಶಿಶು ಎಂದು ಹೇಳಿರುವುದು ಸರಿಯಲ್ಲ ಎಂದು ತರಾಟೆ ತೆಗೆದುಕೊಂಢರು. ಇದೇ ವೇಳೆ ನಾನು ಕಾಂಗ್ರೆಸ್ ಮುಲಾಜಿನಲ್ಲಿದೆ. ಕನ್ನಡಿಗರ ಮುಲಾಜಿನಲ್ಲಿ ಇಲ್ಲ ಎಂದು ಹೇಳಿರುವುದು ಅವರ ಹತಾಶ ಮನೋಭಾವನೆ ತೋರಿಸುತ್ತದೆ. ಇದನ್ನು ನಾನು ಕಟುವಾಗಿ ಖಂಡಿಸುತ್ತೇನೆ. ಅವರು ಈ ಬಗ್ಗೆ ರಾಜ್ಯದ ಜನರ ಬಹಿರಂಗ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು. ರಾಜ್ಯದ ಯಾವೊಬ್ಬ ಮುಖ್ಯಮಂತ್ರಿ ಇಂತಹ ಹೇಳಿಕೆ ನೀಡಿರಲಿಲ್ಲ. ಇದು ರಾಜ್ಯದ ಜನರ ಅಪಮಾನ ಮಾಡಿದಂತೆ ಇದನ್ನು ನಾವು ಸಹಿಸುವುದಿಲ್ಲ ಎಂದು ಗುಡುಗಿದರು.

ಧಾರವಾಡ-ಬಂದ್ ಬಹುತೇಕ ಯಶಸ್ವಿ : ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ ಸೇರಿ ಹಲವರು ಭಾಗಿ

ಧಾರವಾಡ: ರೈತರ ಸಾಲಮನ್ನಾಕ್ಕೆ ಒತ್ತಾಯಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಧಾರವಾಡದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆಯಿಂದ ಅಂಗಡಿಮುಗ್ಗಟ್ಟುಗಳು ಬಂದ್ ಗೆ ಬೆಂಬಲಿಸಿ ತಮ್ಮ ಅಂಗಡಿಗಳನ್ನು ಬಂದ್ ಮಾಡಿದ್ದರು. ನಗರದ ಪ್ರಮುಖ ರಸ್ತೆಯಲ್ಲಿ ಯಾವುದೇ ಅಂಗಡಿಗಳು ಸಂಜೆವರೆಗೆ ತೆರೆದಿರಲಿಲ್ಲ. ಧಾರವಾಡ ಪಶ್ಚಿಮ ಕ್ಷೇತ್ರ ಶಾಸಕರಾದ ಅರವಿಂದ ಬೆಲ್ಲದ, ಧಾರವಾಡ ವಿಧಾನ ಸಭಾ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬೈಕ್ ಮೇಲೆ ಸಂಚರಿಸಿ ಬಂದ್ ಗೆ ಸಹಕರಿಸುವಂತೆ ಮನವಿ ಮಾಡಿದರು. ಅಲ್ಲದೆ, ಬಂದ್ ನಾಯಕತ್ವ ವಹಿಸಿ ಮಾತನಾಡಿದ ಇಬ್ಬರು ಶಾಸಕರು ಕುಮಾರಸ್ವಾಮಿ ನಡೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಅರವಿಂದ ಏಗನಗೌಡರ, ಈರಣ್ಞ ಹಪ್ಪಳಿ,ಮೋಹನ ರಾಮದುರ್ಗ, ಅನಸೂಯಾ ಹಿರೇಮಠ, ಶರಣು ಅಂಗಡಿ, ಶಿವು ಹಿರೇಮಠ,ಸಂಜಯ ಕಪಟಕರ ,ವಿಜಯಾನಂದಶೆಟ್ಟಿ,ಮಂಜುಳಾ ಅಕ್ಕೂರ,ಬಸವರಾಜ ಮುತ್ತಳ್ಳಿ,ಉದಯ ಲಾಡ್, ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ನಗರದಲ್ಲಿ ಬಂದ್ ಹಿನ್ನಲ್ಲೆಯಲ್ಲಿ ಯೂವುದೇ ಅಹಿತಕರ ಘಟನೆ ನಡೆಯದಂತೆ ಪೂಲೀಸಬಂದೋಬಸ್ತ್ ಕ್ಯೆಗೂಳ್ಳಲಾಗಿತ್ತು.

ಸಿದ್ದು ನ್ಯಾಮಗೌಡ ಅಕಾಲಿಕ ನಿಧನಕ್ಕೆ ಶಾಸಕ ಅರವಿಂದ ಬೆಲ್ಲದ ಕಂಬನಿ

ಧಾರವಾಡ : ಜಮಖಂಡಿ ಶಾಸಕರಾಗಿದ್ದ ಸಿದ್ದು ನ್ಯಾಮಗೌಡ ಅಕಾಲಿಕ ನಿಧನಕ್ಕೆ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಕಂಬನಿ ಮಿಡಿದಿದ್ದಾರೆ. ಸರಳ ಸಜ್ಜನ ರಾಜಕಾರಣಿಗಳಾಗಿದ್ದ ಅವರು ರೈತ ಪರ ಹೋರಾಟದ ಮೂಲಕವಾಗಿ ಹಂತ ಹಂತವಾಗಿ ಬೆಳೆದು ರಾಜಕೀಯ ರಂಗಕ್ಕೆ ಪ್ರವೇಶಿಸಿದ್ದರು. ೧೯೯೧ ರಲ್ಲಿ ಬಾಗಲಕೋಟೆಯಿಂದ ಲೋಕಸಭೆಗೆ ಆಯ್ಕೆಯಾಗಿ ಕೇಂದ್ರ ಸರ್ಕಾರದಲ್ಲಿ ಕಲ್ಲಿದ್ದಲು ಸಚಿವರಾಗಿ ಉತ್ತಮ ಪ್ರಗತಿಪರ ಸೇವೆಯನ್ನು ಸಲ್ಲಿಸಿದ್ದು ಹಾಗೂ ಜಮಖಂಡಿ ಶಾಸಕರಾಗಿ ಆಯ್ಕೆಯಾಗಿ ಈ ಭಾಗದಲ್ಲಿ ಅನೇಕ ರೈತಪರ ಸಂಘಟನೆಗಳ ಹೋರಾಟದಿಂದಾಗಿ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಇವರು ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿಯಲ್ಲಿ ಬ್ಯಾರೇಜ್ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಬ್ಯಾರೇಜ್ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬ್ಯಾರೇಜ್ ನಿರ್ಮಾಣ ಮಾಡಿರುವುದರಿಂದ ಈ ಭಾಗದ ಸಾವಿರಾರು ರೈತಾಪಿ ವರ್ಗದ ಜನರಿಗೆ ನೀರಾವರಿ ಸೌಲಭ್ಯದಿಂದಾಗಿ ಸಾಕಷ್ಟು ಅನುಕೂಲವಾಗಿದೆ. ಇಂತಹ ಒಳ್ಳೆಯ ಸರಳ ಸಜ್ಜನ ರಾಜಕಾರಣಿಯನ್ನು ಕಳೆದುಕೊಂಡಿದ್ದು ನಮಗೆಲ್ಲ ದು:ಖದ ಸಂಗತಿ. ಇವರ ಅಗಲಿಕೆಯ ನೋವನ್ನು ಅವರ ಕುಟುಂಬ ಸದಸ್ಯರಿಗೆ ತಡೆದು ಕೊಳ್ಳುವ ಶಕ್ತಿಯನ್ನು ಆ ಭಗವಂತನು ನೀಡಲೆಂದು ಹಾಗೂ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಶಾಸಕ ಅರವಿಂದ ಕಂಬನಿ ಪ್ರಾರ್ಥಿಸಿದ್ದಾರೆ.

ಸಿದ್ದು ನ್ಯಾಮಗೌಡ ನಿಧನಕ್ಕೆ ಎನ್.ಹೆಚ್. ಕೋನರಡ್ಡಿ ಕಂಬನಿ

ಹುಬ್ಬಳ್ಳಿ : ಜಮಖಂಡಿ ಶಾಸಕ ಹಾಗೂ ಕೇಂದ್ರದ ಮಾಜಿ ಸಚಿವರಾಗಿದ್ದ ಸಿದ್ದು ನ್ಯಾಮಗೌಡ ಅವರ ಅಕಾಲಿಕ ನಿಧನ ಉತ್ತರ ಕರ್ನಾಟಕ ಭಾಗಕ್ಕೆ ಅದರಲ್ಲೂ ವಿಶೇಷವಾಗಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ ಎಂದು ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷರು ಆಗಿರುವ ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ತೀವ್ರ ಕಂಬನಿ ಮಿಡಿದಿದ್ದಾರೆ. ಚಿಕ್ಕಪಡಸಲಗಿ ಬ್ಯಾರೇಜ್ ನಿರ್ಮಾಣ ಮಾಡಿ ರಾಜ್ಯಕ್ಕೆ ಮಾದರಿಯಾಗಿದ್ದರು. ಎರಡು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾರೇಜ್ ನಿರ್ಮಾಣ ಮಾಡುವ ಮೂಲಕ ಜನಾನುರಾಗಿಯಾಗಿದ್ದರು. ಇದಲ್ಲದೆ, ಮಹದಾಯಿ ಕಳಸಾ-ಬಂಡೂರಿ ಯೋಜನೆಯ ಸಂದರ್ಭದಲ್ಲಿ ಬೆಳಗಾವಿ ಅಧಿವೇಶನದಲ್ಲಿ ನನ್ನ ಹೋರಾಟಕ್ಕೆ ಬೆಂಬಲಿಸಿ ಅರ್ಧ ಗಂಟೆಗೂ ಅಧಿಕ ಕಾಲ ಮಾತನಾಡಿದ್ದು ಅವಿಸ್ಮರಣೀಯ ಕ್ಷಣವಾಗಿದೆ. ಅಂತಹ ಗಟ್ಟಿಧ್ವನಿ ಮೊಳಗಿಸಿದ್ದ ಸಿದ್ದು ನ್ಯಾಮಗೌಡ ಅವರ ಅಗಲಿಕೆ ತುಂಬಾ ನೋವು ತಂದಿದೆ. ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಹಾಗೂ ಅಪಾರ ಅಭಿಮಾನಿಗಳಿಗೆ ಆ ಭಗವಂತ ನೀಡಲಿ ಎಂದು ಈ ಮೂಲಕ ಪ್ರಾರ್ಥಿಸುತ್ತೆÃನೆ ಎಂದು ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷರಾದ ಎನ್.ಹೆಚ್. ಕೋನರಡ್ಡಿ ಅವರು ಸಂತಾಪ ಸೂಚಿಸಿದ್ದಾರೆ.

ಅಪಾರ್ಟಮೆಂಟ್ ನಲ್ಲಿ ಬಿರುಕು : ಆತಂಕಗೊಂಡು ಮನೆ ಖಾಲಿ ಮಾಡಿದ ನಿವಾಸಿಗಳು

ಅಪಾರ್ಟಮೆಂಟ್ ನಲ್ಲಿ ಪಿಲ್ಲರ್ ಗಳಿಗೆ ಬಿರುಕು : ಆತಂಕಗೊಂಡು ಮನೆ ಖಾಲಿ ಮಾಡಿದ ನಿವಾಸಿಗಳು ಧಾರವಾಡ: ಅಪಾರ್ಟಮೆಂಟ್ ವೊಂದರ ಎರಡು ಪಿಲ್ಲರ್ ಗಳು ಬಿರುಕುಗೊಂಡ ಪರಿಣಾಮ ಆತಂಕಗೊಂಡು ಅಲ್ಲಿಯ ನಿವಾಸಿಗಳು ಮನೆ ಖಾಲಿ ಮಾಡಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ. ಇಲ್ಲಿಯ ಉಳವಿ ಬಸವೇಶ್ವರ ದೇವಸ್ಥಾನ ಎದುರಿನ ಶ್ರೀರಾಮ ರೆಸಿಡೆನ್ಸಿ ಅಪಾರ್ಟಮೆಂಟ್ ನ ನೆಲಮಹಡಿಯಲ್ಲಿರುವ ಎರಡು ಆಧಾರ ಸ್ಥಂಬಗಳು ಸಂಪೂರ್ಣವಾಗಿ ಬಿರುಕುಗೊಂಡಿವೆ. ಕುಸಿಯುವ ಹಂತದಲ್ಲಿರುವ ಎರಡು ಪಿಲ್ಲರ್ ಗಳನ್ನು ಕಂಡು ಕಂಗಾಲಾದ ಅದರಲ್ಲಿನ 16 ಕುಟುಂಬಗಳು ತರಾತುರಿಯಲ್ಲಿ ಮನೆ ಮಾಡಿದ್ದಾರೆ. ಈ ಅಪಾರ್ಟಮೆಂಟ್ ನಲ್ಲಿ ಮನೆ ಖರೀದಿಸಿದ್ದ ಅನೇಕರು ಮಾಲೀಕರ ವಿರುದ್ಧ ಹಿಡಿಶಾಪ ಹಾಕಿದ್ದು, ಅವರ ದುಃಖದ ಕಟ್ಟೆ ಒಡೆದಿದ್ದು, ಆಕ್ರಂದನ ಗೋಳಾಟ ಮುಗಿಲು ಮುಟ್ಟಿದೆ. ಇದು ಅಧೀತಿ ಉಗಮಚಂದ್ರ ಜೈನ ಮಾಲೀಕತ್ವದ ಮನೆಯಾಗಿದ್ದು, ವಾಸುದೇವ ಮೇಸ್ತ್ರಿ ಇದರ ಬಿಲ್ಡರ್ ಆಗಿದ್ದಾರೆ. ಈಗಾಗಲೇ ಅಲ್ಲಿನ ನಿವಾಸಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಮನೆ ತೆರವುಗೊಳಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಗೋಡೆ ಕುಸಿಯದಂತೆ ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಲ್ಲಿಯ ಕೆಲಸ ನಿರ್ವಹಿಸುತ್ತಿದ್ದ ಇಂಜಿನಿಯರ್ ಗಳು ಪ್ರಜಾಕಿರಣಕ್ಕೆ ತಿಳಿಸಿದ್ದಾರೆ. ಅಪಾರ್ಟಮೆಂಟ್ ಬಿರುಕು ಮಾಹಿತಿ ಪಡೆದ ಶಾಸಕ ಅರವಿಂದ ಬೆಲ್ಲದ, ವಿದ್ಯಾಗಿರಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಮಹಾಂತೇಶ ಹೊಸಪೇಟೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನೂ ಸ್ಥಳೀಯರು ಹಾಗೂ ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಜನ ಸಾಗರೋಪಾದಿಯಲ್ಲಿ ಹರಿದುಬಂದು ಕಟ್ಟಡ ದುಸ್ಥಿತಿ ಕಂಡು ಮಮ್ಮಲ ಮರಗುತ್ತಿದ್ದಾರೆ.

ಆರ್ ಆರ್ ನಗರದಲ್ಲಿ ಹಕ್ಕು ಚಲಾಯಿಸಿದ ನಟಿ ಅಮೂಲ್ಯ

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ರಾಜರಾಜೇಶ್ವರಿ ನಗರದ ವಿಧಾನ ಸಭಾ ಚುನಾವಣೆಯಲ್ಲಿ ನಟಿ ಅಮೂಲ್ಯ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಈ ಕ್ಷೇತ್ರದಲ್ಲಿ ತಮ್ಮ ಮಾಮ ರಾಮಚಂದ್ರ ಜೆಡಿಎಸ್ ಅಭ್ಯರ್ಥಿಯಾಗಿರುವುದು ಇಲ್ಲಿ ವಿಶೇಷವಾಗಿದೆ. ನಟಿ ಅಮೂಲ್ಯ ಬಿ.ಇ.ಟಿ.ಕಾನ್ವೆಂಟ್ ಸ್ಕೂಲ್ ನಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಆರ್.ಆರ್. ನಗರದಲ್ಲಿ ಮೊದಲ ಬಾರಿ ಮತದಾನ ಮಾಡಿದ್ದೇನೆ. ಈ ಹಿಂದೆ ಮಲ್ಲೇಶ್ವರಂರಲ್ಲಿ ಮತದಾನ ಮಾಡಿದ್ದೆ. ಈ ಚುನಾವಣೆಯಲ್ಲಿ ನಮ್ಮ ಮಾವ ರಾಮಚಂದ್ರಪ್ಪ ಅವರು ಗೆಲ್ಲುವ ವಿಶ್ವಾಸ ಇದೆ. ಮತದಾನ ಪ್ರತಿಯೊಬ್ಬರ ಹಕ್ಕು. ಎಲ್ಲರೂ ತಮ್ಮ ಹಕ್ಕು ಚಲಾಯಿಸಬೇಕು ಮನವಿ ಮಾಡಿದರು. ಕ್ಷೇತ್ರದಲ್ಲಿ ಮತದಾನದ ಹಿನ್ನಲೆಯಲ್ಲಿ ರಜೆ ನೀಡಿದ್ದು, ಮತದಾನ ಮಾಡಲು ಮತದಾರರು ಆಸಕ್ತಿ ತೋರಬೇಕು. ಹಾಗೂ ಬೇರೆಯವರಿಗೆ ದುರುಪಯೋಗ ಮಾಡಿಕೊಡದ್ದಂತೆ ಮತದಾನ ಮಾಡಿ ಅಂತ ತಿಳಿಸಿದರು.

ಧಾರವಾಡದಲ್ಲಿ ಬಂದ್ ಗೆ ಉತ್ತಮ ಬೆಂಬಲ

ಧಾರವಾಡ : ರೈತರ ಸಾಲಮನ್ನಾಕ್ಕೆ ಒತ್ತಾಯಿಸಿ ಕರೆ ನೀಡುರುವ ಕರ್ನಾಟಕ ಬಂದ್ ಗೆ ಧಾರವಾಡದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಬೆಳಗ್ಗೆಯಿಂದಲೇ ಧಾರವಾಡದಲ್ಲಿ ಸಾರಿಗೆ ಬಸ್ ಗಳ ಸಂಚಾರಕ್ಕೆ ಅವಕಾಶ ನೀಡದ ಬಿಜೆಪಿಕಾರ್ಯಕರ್ತರು . ಆಲೂರು ವೆಂಕಟರಾವ್ ವೃತ್ತದಲ್ಲಿ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಪೆಟ್ರೋಲ್ ಸುರಿದು ಟೈರ್ ಗೆ ಬೆಂಕಿ ಹಚ್ಚುವ ವೇಳೆ ಪ್ರತಿಭಟನಾಕಾರನ ಚಪ್ಪಲಿಗೆ ಬೆಂಕಿ ತಗುಲಿತ್ತು. ಆದರೆ, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಲಿಲ್ಲ. ಬಂದ್ ಹಿನ್ನಲೆಯಲ್ಲಿ ಧಾರವಾಡದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ನಗರದ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಮಧ್ಯಾಹ್ನದ ನಂತರ ಈ ಪ್ರತಿಭಟನೆ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.

ಬಂದ್ಗೆ ಹುಬ್ಬಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ

ಹುಬ್ಬಳ್ಳಿ: ರೈತರ ಸಾಲಮನ್ನಾ ಮಾಡುವಂತೆ ಆಗ್ರಹಿಸಿ ಕರೆ ನೀಡಿರುವ ಕರ್ನಾಟಕ ಬಂದ್ಗೆ ಹುಬ್ಬಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ನಲ್ಲಿ ಜಮಾಯಿಸಿದ ನೂರಾರು ಬಿಜೆಪಿ ಕಾರ್ಯಕರ್ತರು ಟೈರ್ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪೆಟ್ರೋಲ್ ಬಂಕ್, ಹೋಟೆಲ್ ಹಾಗೂ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಮನವಿ ಮಾಡಿದರು. ಬಂದ್ಗೆ ಒತ್ತಾಯಿಸದಂತೆ ಪ್ರತಿಭಟನಾಕಾರನ್ನು ಪೊಲೀಸರು ತಡೆದ ಪರಿಣಾಮ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನಚಕಮಕಿ ನಡೆಯಿತು. ಬೆಂಕಿ ಹೊತ್ತಿದ ಟೈರ್ಗೆ ಪೊಲೀಸರು ನೀರು ಹಾಕಿ ನಂದಿಸಲು ಮುಂದಾಗಿದ್ದರಿಂದ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ನಾಗೇಶ ಕಲಬುರ್ಗಿ ಹಾಗೂ ಪೊಲೀಸರ ಮಧ್ಯ ವಾಗ್ವಾದ ನಡೆಯಿತು. ಕೊನೆಗೂ ಪೊಲೀಸರು ನೀರು ಹಾಕಿ ಅದನ್ನು ಆರಿಸಿದರು. ಬಂದ್ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬಸ್ ಹಾಗೂ ವಾಹನ ಸಂಚಾರ ಎಂದಿನಂತಿದೆ. ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ನೀಡಿಲ್ಲ.

ದೇಶದ 10 ರಾಜ್ಯಗಳಲ್ಲಿ ಉಪಚುನಾವಣೆ ಕಾವು

ನವದೆಹಲಿ: ದೇಶದ 10 ರಾಜ್ಯಗಳಲ್ಲಿ ಇಂದು ಉಪಚುನಾವಣೆ ನಡೆಯುತ್ತಿದ್ದು,ಅದರಲ್ಲಿ 4 ಲೋಕಸಭಾ ಕ್ಷೇತ್ರ ಹಾಗೂ 10 ವಿಧಾನಸಭೆ ಕ್ಷೇತ್ರಗಳಿಗೆ ಕಾದಾಟ ಜೋರಾಗಿ ಸಾಗಿದೆ. ದೇಶದ ವಿವಿಧ ರಾಜ್ಯಗಳಾದ ಉತ್ತರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಬಿಹಾರ, ಕೇರಳ, ಮೇಘಾಲಯ, ಜಾರ್ಖಂಡ್, ಉತ್ತರಾಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಉಪಚುನಾವಣೆ ಕಾವು ಜೋರಾಗಿದ್ದು, ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದೆ. ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಇದೇ ಮೇ 31ರಂದು ಫಲಿತಾಂಶ ಪ್ರಕಟಗೊಳ್ಳಲಿದ್ದು, ಎಲ್ಲಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ

ಬೆಂಗಳೂರು : ರೈತರ ಸಾಲಮನ್ನಾಕ್ಕೆ ಒತ್ತಾಯಿಸಿ ಕರೆ ನೀಡಿರುವ ಸ್ವಯಂ ಪ್ರೇರಿತ ಕರ್ನಾಟಕ ಬಂದ್ ಗೆ ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಧಾರವಾಡ, ಕೊಪ್ಪಳ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಉಡುಪಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಂದ್ ಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನೂಕೆಲವು ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಬಲವಂತವಾಗಿ ಅಂಗಡಿಗಳನ್ನು ಬಂದ್ ಮಾಡಿಸುವ ಮೂಲಕ ಬಂದ್ ಗೆ ಬೆಂಬಲ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ವಿವಿಧ ಸಂಘಟನೆಗಳು ಈಗಾಗಲೇ ಬಂದ್ ಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಅಷ್ಟೊಂದು ಬೆಂಬಲ ವ್ಯಕ್ತವಾಗಿಲ್ಲ. ಆದರೂ ಬಂದ್ ಗೆ ಬೆಂಬಲ ಘೋಷಿಸಿರುವ ಬಿಜೆಪಿ ಕಾರ್ಯಕರ್ತರು ಹಲವಡೆ ಪ್ರತಿಭಟನೆಗೆ ಮಾತ್ರ ಸೀಮಿತಗೊಂಡಿದ್ದಾರೆ. ಮಧ್ಯಾಹ್ನದ ವೇಳೆಗೆ ಬಂದ್ ಗೆ ಯಾವ ರೀತಿ ಪ್ರತಿಕ್ರಿಯೆ ದೊರೆಯುತ್ತದೆ ಎಂಬುದು ಕಾದು ನೋಡಬೇಕಿದೆ.

ರಾಜರಾಜೇಶ್ವರಿ ನಗರದಲ್ಲಿ ಮತದಾನ ಆರಂಭ

ಬೆಂಗಳೂರು: ನಕಲಿ ಗುರುತಿನ ಚೀಟಿಯಿಂದಾಗಿ ಮುಂದೂಡಲ್ಪಟ್ಟ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತದಾನ ಆರಂಭವಾಗಿದೆ. ಬೆಳಗ್ಗೆ 7 ಆರಂಭಗೊಂಡಿರುವ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆ ವರೆಗೆ ನಡೆಯಲಿದೆ. ಕ್ಷೇತ್ರದಲ್ಲಿ 421 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಿಗೆ ಬಿಗಿ ಪೊಲೀಸ್ ಬಂದೂಬಸ್ತ್ ಕಲ್ಪಿಸಲಾಗಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ನ ಮುನಿರತ್ನ, ಜೆಡಿಎಸ್ನ ರಾಮಚಂದ್ರ ಮತ್ತು ಬಿಜೆಪಿಯ ತುಳಸಿ ಮುನಿರಾಜು ನಡುವೆ ತೀವ್ರ ಪೈಪೋಟಿ ನಡೆದಿದೆ. ಈ ಕ್ಷೇತ್ರದ ಚುನಾವಣಾ ಕಣದಲ್ಲಿ ಹುಚ್ಚ ವೆಂಕಟ್ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವುದು ವಿಶೇಷವಾಗಿದೆ. ಕ್ಷೇತ್ರದಲ್ಲಿ 454901 ಮತದಾರರಿದ್ದು, ಅದರಲ್ಲಿ 238015 ಪುರುಷ ಹಾಗೂ ಮಹಿಳಾ 216821 ಮಹಿಳಾ ಮತದಾರರಿದ್ದಾರೆ. ಮೇ 31ರಂದುಈ ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ.

ರಸ್ತೆ ಅಪಘಾತದಲ್ಲಿ ಶಾಸಕ ಸಿದ್ದು ನ್ಯಾಮಗೌಡ ನಿಧನ

ಬಾಗಲಕೋಟೆ: ಜಮಖಂಡಿ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅವರು ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಸೋಮವಾರ ಬೆಳಗಿನ ಜಾವ ಕಾರಿನಲ್ಲಿ ಗೋವಾದಿಂದ ಬರುತ್ತಿದ್ದಾಗ ಕಾರಿನ ಟೈರ್ ಬ್ಲಾಸ್ಟ್ ಆಗಿ ಈ ಅಪಘಾತ ಸಂಭವಿಸಿದೆ. ಬಾಗಲಕೋಟೆಯ ಕಲಾದಗಿ ಗ್ರಾಮದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಶಾಸಕ ಸಿದ್ದು ನ್ಯಾಮಗೌಡರು ಅವರು ಗಂಭೀರವಾಗಿ ಗಾಯಗೊಂಡಿದ್ದರು. ಎದೆಗೆ ಪೆಟ್ಟಾಗಿತ್ತು. ತಕ್ಷಣವೇ ಅವರನ್ನು ಬಾಗಲಕೋಟೆ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ಜಮಖಂಡಿ ಕ್ಷೇತ್ರದಿಂದ ಸಿದ್ದು ನ್ಯಾಮಗೌಡರು ಎರಡನೇ ಅವಧಿಗೆ ಆಯ್ಕೆ ಆಗಿ ಶಾಸಕರಾಗಿದ್ದರು. ಅವರ ಸಾವಿನಿಂದ ಜಮಖಂಡಿ ಕ್ಷೇತ್ರಕ್ಕೆ ಹಾಗೂ ವಿಶೇಷವಾಗಿ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ.

ರಾಜ್ಯ ಬಂದ್ ಅತ್ಯಂತ ಖೇದಕರ ಸಂಗತಿ

ಧಾರವಾಡ : ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು, ಸೋಮವಾರದೊಳಗೆ ಸಾಲ ಮನ್ನಾ ಮಾಡದಿದ್ದರೆ ರಾಜ್ಯ ಬಂದ್ ನಡೆಸುವುದಾಗಿ ಪ್ರಕಟಿಸಿರುವುದು ಅತ್ಯಂತ ಖೇದಕರ ಸಂಗತಿ ಎಂದು ಕಾಂಗ್ರೆಸ್ ಮುಖಂಡ ಪಿ.ಎಚ್. ನೀರಲಕೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಜಾಕಿರಣದೊಂದಿಗೆ ಮಾತನಾಡಿದ ಅವರು, ಹಿರಿಯ ಮತ್ತು ಅನುಭವಿ ರಾಜಕಾರಣಿ ಆದ ಯಡಿಯೂರಪ್ಪ ಕೂಡಾ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಿದವರು. ಆಡಳಿತ ಮತ್ತು ಪ್ರಮುಖ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಅದರ ಸಾಧಕ-ಬಾಧಕಗಳನ್ನು ಆಧರಿಸಿ ಸರ್ಕಾರ ತೀರ್ಮಾನ ಕೈಕೊಳ್ಳಬೇಕಾಗುತ್ತದೆ. ಅಲ್ಲದೇ, ಈಗ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಕೂಲಂಕುಷವಾಗಿ ಚರ್ಚಿಸಿ, ಒಟ್ಟಾಭಿಪ್ರಾಯಕ್ಕೆ ಬರಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ರೈತರ ಸಾಲ ಮನ್ನಾ ವಿಷಯ ಮುಂದಿಟ್ಟು ಬಂದ್ ಕರೆ ನೀಡುವುದು ಸರಿಯಾದ ಕ್ರಮವಲ್ಲ. ರೈತರನ್ನು ಎತ್ತಿಕಟ್ಟಿ ಸರ್ಕಾರಕ್ಕೆ ಮುಜುಗರ ತರಿಸುವ ಬಿಜೆಪಿಯ ಈ ನಡೆ ಖಂಡನಾರ್ಹ ಎಂದು ತಿಳಿಸಿದ್ದಾರೆ. ಸರ್ಕಾರಕ್ಕೆ ಇನ್ನೂ ನಿಯಮಾನುಸಾರ ತೀರ್ಮಾನ ಕೈಕೊಳ್ಳಲು ಕಾಲಾವಕಾಶ ನೀಡಬೇಕು. ಸಾಲ ಮನ್ನಾ ಮಾಡುವ ದಿಸೆಯಲ್ಲಿ ಸರ್ಕಾರಕ್ಕೆ ಪೂರಕ ಸಲಹೆ-ಸೂಚನೆ ಕೊಟ್ಟು, ರಾಜ್ಯದ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿರುವ ಅವರು ಬಿಜೆಪಿ ತನ್ನ ನಿರ್ಧಾರವನ್ನು ಬದಲಿಸಬೇಕು. ಒಂದು ವೇಳೆ ಮುಖ್ಯಮಂತ್ರಿಗಳು ರೈತರಿಗೆ ತಾವು ನೀಡಿದ್ದ ಭರವಸೆಯನ್ನು ಈಡೇರಿಸದಿದ್ದರೆ, ಪಕ್ಷಾತೀತವಾಗಿ ಯಡಿಯೂರಪ್ಪನವರು ಯಾವುದೇ ತರಹದ ಹೋರಾಟ ಮಾಡಿದರೆ ಎಲ್ಲರೂ ಸಹಕರಿಸುತ್ತಾರೆ. ಈ ವಾಸ್ತವತೆನ್ನು ಅರಿತು ವಿರೋಧ ಪಕ್ಷ ಮುನ್ನಡೆಯಬೇಕು ಎಂದು ಪಿ.ಎಚ್. ನೀರಲಕೇರಿ ಸಲಹೆ ಮಾಡಿದ್ದಾರೆ.

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಹಾವೇರಿ : ಸಾಲಬಾಧೆ ತಾಳಲಾರದೆ ರೈತನೊಬ್ಬ ವಿಷಸೇವಿಸಿ ಆತ್ಮಹತ್ಯೆಮಾಡಿಕೊಂಡ ಘಟನೆ ಹಾವೇರಿ ತಾಲೂಕಿನ ಕಳ್ಳಿಹಾಳ ಗ್ರಾಮದಲ್ಲಿ ನಡೆದಿದೆ. ನಾಗಪ್ಪ ಕೋರಿ (55) ಮೃತ ರೈತನಾಗಿದ್ದಾನೆ. ಒಂದೂವರೆ ಎಕರೆ ಜಮೀನು ಹೊಂದಿದ್ದ ರೈತ ನಾಗಪ್ಪ ಅವರು ಕೈಸಾಲ ಅಂತ 4 ಲಕ್ಷ ರುಪಾಯಿ ಸಾಲ ಮಾಡಿಕೊಂಡಿದ್ದರು. ಇದಲ್ಲದೆ ಕಳೆದೆರಡು ವರ್ಷಗಳಿಂದ ಹತ್ತಿ ಬೆಳೆ ಹಾನಿ ಅನುಭವಿಸಿದ್ದ ರೈತ ಬೆಳೆ ಬಾರದೇ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಹಾವೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈತರ ಭಾವನೆ ಜೊತೆಗೆ ಕುಮಾರಸ್ವಾಮಿ ಚೆಲ್ಲಾಟ

ಹುಬ್ಬಳ್ಳಿ : ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಚುನಾವಣಾ ಪ್ರಣಾಳಿಕೆಯಲ್ಲಿ ರೈತರ ಸಾಲಮನ್ನಾ ಮಾಡುವ ಭರವಸೆ ನೀಡಿದ್ದರು.ಆದರೆ ಈಗ ಯು ಟರ್ನ್ ತೆಗೆದುಕೊಂಡು ರೈತರ ಭಾವನೆ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಮಾಜಿ ಸಿಎಮ್ ಜಗದೀಶ ಶೆಟ್ಟರ್ ಆಪಾದಿಸಿದ್ದಾರೆ. ಅವರು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರೈತರು ಮಾಡುತ್ತಿರುವ ಬಂದ್ಗೆ ನಮ್ಮ ಸಂಪೂರ್ಣ ಬೆಂಬಲವಿದೆ.ನಾಳೆ ನಡೆಯುವ ಕರ್ನಾಟಕ ಬಂದ್ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕುಮಾರಸ್ವಾಮಿ ಅವರು ಸುಳ್ಳುಹೇಳಿಕೆಗಳನ್ನು ನೀಡಿ ರೈತರನ್ನು ವಂಚಿಸಿದ್ದಾರೆ.ಕುಮಾರಸ್ವಾಮಿಯವರ ವಿರುದ್ಧ ಜನರಲ್ಲಿ ಆಕ್ರೋಶವಿದೆ. ರೈತರ ಓಟಿಗಾಗಿ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರೇ ಅಂತಿಮ ನ್ಯಾಯಾಲಯ, ಜನರೇ ತೀರ್ಪು ಕೊಡುತ್ತಾರೆ ಎಂದ ಅವರು ಸುಳ್ಳು ಹೇಳುತ್ತಿದ್ದ ಸಿದ್ದರಾಮಯ್ಯನವರನ್ನು ಜನರೇ ಮನೆಗೆ ಕಳಿಸಿದ್ದಾರೆ ಎಂದು ಗುಡುಗಿದರು.

ಮರಗಳು ಬಿದ್ದು ಹಲವು ಕಾರ್ ಗಳು ಜಖಂ

ಹುಬ್ಬಳ್ಳಿ: ನಿನ್ನೆ ರಾತ್ರಿ ಸುರಿದ ಅಕಾಲಿಕ ಮಳೆಯಿಂದಾಗಿ ಹುಬ್ಬಳ್ಳಿಯಲ್ಲಿ ಹಲವು ಮರಗಳು ಧರೆಗೆ ಉರುಳಿವೆ. ಇದರಿಂದಾಗಿ ವಿಕಾಸ ನಗರದಲ್ಲಿ ಮರಬಿದ್ದು ಎರಡು ಕಾರು ಜಖಂಗೊಂಡಿವೆ. ಬೇರು ಸಮೇತ ಮರ ಉರುಳಿಬಿದ್ದ ಪರಿಣಾಮ ಕಾರು ನುಗ್ಗು ಗುಜ್ಜಾಗಿವೆ. ಇದರಿಂದಾಗಿ ಸ್ವಲ್ಪದರಲ್ಲೇ ಬಾರಿ ಅನಾಹುತವೊಂದು ತಪ್ಪಿದಂತಾಗಿದೆ. ಈ ರ್ದುಘಟನೆಯಲ್ಲಿ ಇಂಡಿಕಾ ಕಾರು ಹಾಗೂ ಹುಂಡೈ ಐ ೨೦ ಕಾರು ಜಖಂಗೊಂಡಿದೆ. ಹುಬ್ಬಳ್ಳಿಯ ಹೊಸುರ ವೃತ್ತದ ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕಾರು ಜಖಂಗೊಂಡಿದೆ. ವಿಶ್ವನಾಥ ಉಪ್ಪಲದಿನ್ನಿ ಎಂಬುವರಿಗೆ ಸೇರಿದ ಕಾರು ಹಾಳಾಗಿದೆ. ಅದೃಷ್ಟವಶಾತ್ ಕಾರಿನಲ್ಲಿ ಯಾರು ಇರಲಿಲ್ಲಇದಲ್ಲದೆ, ನಗರದ ಹಲವೆಡೆ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಇದರಿಂದಾಗಿ ಅವಳಿನಗರದ ಹಲವಡೆ ವಿದ್ಯುತ್ ಕಡಿತಗೊಂಡ ಪರಿಣಾಮ ಸಾರ್ವಜನಿಕರ ಪರದಾಟ ನಡೆಸಿದರು. ಅದೇ ರೀತಿ ಧಾರವಾಡದ ಹೊಸಯಲ್ಲಾಪೂರ ರಸ್ತೆಯಲ್ಲಿರುವ ಹಿರೇಮಠ ಕಾಲೋನಿ ಯಲ್ಲಿ ಕಾರ್ ಮೇಲೆ ಮರವೊಂದು ಬಿದ್ದ ಪರಿಣಾಮ ಕಿರಣ ಯರಗಟ್ಟಿ ಅವರ ಮಾರುತಿ ಅಲ್ಟೋ ಕಾರ್ ಸಂಪೂರ್ಣ ಜಖಂಗೊಂಡಿದೆ. ಘಟನೆ ಬಗ್ಗೆ ಕಾರ್ ಮಾಲೀಕರು ಹಾಗೂ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹೆಸ್ಕಾಂ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿರುದ್ಧ ಕಿಡಿ ಕಾರಿದ್ದಾರೆ.

ಕರ್ನಾಟಕ ಬಂದ್ ಗೆ ಹುಬ್ಬಳ್ಳಿಯಲ್ಲೂ ವ್ಯಾಪಕ ಬೆಂಬಲ

ಹುಬ್ಬಳ್ಳಿ : ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಹುಬ್ಬಳ್ಳಿಯಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬಿಜೆಪಿ ಪಕ್ಷ ದಿಂದ ಬೆಳಿಗ್ಗೆ 6. ಗಂಟೆ ಯಿಂದ ಬಂದ್ ಆರಂಭವಾಗಲಿದ್ದು, ಬಂದ್ ಗೆ ಹೊಟೇಲ್ ಸಂಘಟನೆ ,ಆಟೋ ಮೊಬೈಲ್ಸ್ ಜವಳಿ ವರ್ತಕರು ,ಬಾರ್ ಅಸೋಸಿಯೇಷನ್ ಸೇರಿದಂತೆ ಹಲವು ಸಂಘಟನೆಗಳಿಂದ ಬೆಂಬಲ ದೊರೆತಿದೆ. ಬಿಜೆಪಿಯ ಮಹಾನಗರ ಅಧ್ಯಕ್ಷ ನಾಗೇಶ ಕಲಬುರಗಿ ಅವರು ಈಗಾಗಲೇ ಬಂದ್ ಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ತಿಳಿಸಿದ್ದಾರೆ. ನಾಳೆ ಬೆಳಗ್ಗೆ ಯಾವ ರೀತಿ ಬಂದ್ ನಡೆಯುತ್ತದೆ ಎಂಬುದು ಕಾದುನೊಡಬೇಕಿದೆ.

ಬಂದ್ ಮಾಡೇ ಮಾಡ್ತೀವಿ ಎಂದ ಶ್ರೀರಾಮುಲು

ರಾಯಚೂರು : ನಾವು ರೈತರ ಸಾಲಮನ್ನಾಕ್ಕಾಗಿ ಕರ್ನಾಟಕ ಬಂದ್ ಗೆ ಕರೆ ನೀಡಿದ್ದೀವಿ. ಅದನ್ನು ಮಾಡೇ ಮಾಡ್ತಿವಿ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ, ಅವರು ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನಮ್ಮ ಪ್ರತಿಭಟನೆಗೆ ಅಡ್ಡಿ ಮಾಡ್ತಾರಾ, ಏನ್ ಅರೆಸ್ಟ್ ಮಾಡ್ಸ್ತಾರಾ. ಇದೇನ್ ತುರ್ತುಪರಿಸ್ಥಿತಿ ನಾ ನಮ್ಮನ್ನ ಜೈಲಿಗೆ ಹಾಕ್ತಿರಾ, ಪೊಲೀಸ್ ರಿಂದ ಹೊಡೆಸ್ತಾರೆಯೇ ಹೊಡಿಸಲಿ ಎಂದು ಸವಾಲು ಹಾಕಿದ್ದಾರೆ. ಬಿಜೆಪಿ ಆರಂಭದಿಂದಲೂ ಹೋರಾಟ ಮಾಡುತ್ತಲೇ ಬಂದಿದೆ. ನಮ್ಮ ಹೋರಾಟವನ್ನು ಹತ್ತಿಕ್ಕಲೂ ಯಾರಿಂದಲೂ ಸಾಧ್ಯವಿಲ್ಲ ಎಂದು ಗುಡುಗಿದರು. ರೈತರ ಸಾಲಮನ್ನಾಕ್ಕಾಗಿ ಕರೆ ನೀಡಿರುವ ಕರ್ನಾಟಕ ಬಂದ್ ಗೆ ರಾಜ್ಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿದರು.

ಕರ್ನಾಟಕ ಬಂದ್ ಬಿಜೆಪಿಯ ಡೊಂಗಿತನದ್ದು

ಬೆಂಗಳೂರು : ರೈತರ ಹೆಸರಿನಲ್ಲಿ ಕರ್ನಾಟಕ ಬಂದ್ ಗೆ ಕರೆ ನೀಡಿರುವ ಬಿಜೆಪಿ ಡೋಂಗಿತನ ಮಾಡುತ್ತಿದೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪೂರ ಆರೋಪಿಸಿದ್ದಾರೆ. ಅವರು ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಕುಮಾರಸ್ವಾಮಿಯವರು ಸಾಲಮನ್ನಾ ಮಾಡುವ ಕುರಿತು ಪ್ರತಿಕ್ರಿಯಿಸಿದ್ದಾರೆ. ಎಂಟು ದಿನಗಳಲ್ಲಿ ಈ ಬಗ್ಗೆ ಅವರು ಸ್ಪಷ್ಟ ನಿರ್ಧಾರ ಪ್ರಕಟಿಸಲಿದ್ದಾರೆ. ಅಲ್ಲಿಯವರೆಗೆ ಅವರಿಗೆ ಕಾಯಲು ತಾಳ್ಮೆಇಲ್ಲವೇ ಎಂದು ಪ್ರಶ್ನಿಸಿದರು. ಕುಮಾರಸ್ವಾಮಿಯವರು ಸಾಲಮನ್ನಾ ಮಾಡಲು ಆಗಲ್ಲ ಎಂದು ಹೇಳಿಲ್ಲ. ಆದರೂ ಬಿಜೆಪಿಯವರು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಎರಡು ಸಾವಿರ ವರ್ಷಗಳಿಂದ ಧರ್ಮದ ಚರ್ಚೆ

ಧಾರವಾಡ : ಎರಡು ಸಾವಿರ ವರ್ಷಗಳಿಂದ ಧರ್ಮದ ಚರ್ಚೆ ನಡೆದಿದೆ. ಹಿಂದೂ ಧರ್ಮ ಅನ್ನೋದು ಈ ಮೊದಲು ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರಲಿಲ್ಲ. ಬ್ರಿಟಿಷರು ಇಲ್ಲಿಗೆ ಬಂದಾಗ ಅವರಿಗೆ ಕ್ರಿಶ್ಚಿಯನ್ ಧರ್ಮ ಇದ್ದಂತೆ ನಮಗೂ ಧರ್ಮ ಇರಲಿ ಎಂದು ಹಿಂದೂ ಧರ್ಮವನ್ನು ಚಾಲ್ತಿಗೆ ತರಲಾಯಿತು. ಈ ಮೊದಲು ಹಿಂದೂ ಅನ್ನೋದು ಧಾರ್ಮಿಕ ಹಿನ್ನೆಲೆಯಲ್ಲಿ ಬಳಸಲಾಗುತ್ತಿರಲಿಲ್ಲ. ಪ್ರದೇಶಕ್ಕೆ ಸಂಬಂಧಪಟ್ಟಂತೆ ಬಳಕೆಯಾಗುತ್ತಿತ್ತು ಎಂದು ಹಿರಿಯ ಸಾಹಿತಿ ಎಚ್.ಎಸ್. ಶಿವಪ್ರಕಾಶ ಹೇಳಿದರು. ಅವರು ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಂಡಿದ್ದ ಮೇ ಸಾಹಿತ್ಯ ಮೇಳದಲ್ಲಿ ಧಾರ್ಮಿಕ ಬಹುತ್ವದ ಮೇಲೆ ಮಾತನಾಡಿದರು. ಎಷ್ಟೋ ಪಂಥಗಳಿವೆಯೋ ಅಷ್ಟು ಮತಗಳಿವೆ. ನಾನು ಬ್ರಹ್ಮಸೂತ್ರವನ್ನು ಓದಿಲ್ಲ. ನಾನು ಹೆಚ್ಚಾಗಿ ವೈದಿಕೇತರ ಪರಂಪರೆಗಳನ್ನು. ಶರಣ, ನಾಥ ಶಾಖ್ಯ, ಸೂಫಿ, ಪಂಥಗಳನ್ನು ಅಧ್ಯಯನ ಮಾಡಿದ್ದೇನೆ. ಇವುಗಳ್ಯಾವವು ಏಕತ್ವವನ್ನು ಹೇರುವುದಿಲ್ಲ. ಮಧ್ಯಯುಗಿನದಲ್ಲಿ ನಡೆದ, ಭಕ್ತಿ, ಶಾಖ್ಯ, ದಾಸ, ನಾಥ, ಶರಣ ಇವೆಲ್ಲವೂ ಕೂಡ ಅನೇಕತೆಯಲ್ಲಿ ಏಕತೆಯನ್ನು ಹುಡುಕುವ ಪಂಥಗಳಾಗಿವೆ. ಜೈನರಲ್ಲಿ ಅನೇಕಾಂತವಾದ ಅನ್ನೋ ಶಬ್ದ ಬಳಕೆಯಲ್ಲಿದೆ. ಅವರವರ ಅನುಭವಗಳಿಗೆ ತಕ್ಕಂತೆ ಅವರ ಧರ್ಮ ರೂಪಗೊಳ್ಳುತ್ತದೆ ಎಂದರು. ಯಾವ ಧರ್ಮವನ್ನು ಹಿಂದೂ ಧರ್ಮ ಅಂಥ ಹೇಳ್ತಿದ್ದಾರೆ ಅದರ ಆಧಾರ ಕೇವಲ ನಂಬಿಕೆ. ಆದರೆ, ಪ್ರಾಚೀನಕಾಲದಲ್ಲಿ ಹುಟ್ಟಿಕೊಂಡಿದ್ದ ಅನೇಕ ಪಂಥಗಳ ಆಧಾರ ಅವರವರ ಅನುಭವ. ತಥಾಗತ ಹೇಳಿದ್ದನ್ನು ತಥಾಗತ ಹೇಳಿದ್ದ ಎಂದು ನಂಬಬೇಡಿ. ಎಲ್ಲವನ್ನು ಪರೀಕ್ಷಿಸಿ ಒಪ್ಪಿಕೊಳ್ಳಿ. ಇದನ್ನು ಬುದ್ಧ ಹೇಳಿದ್ದು. ಪಾಶ್ಚಿಮಾತ್ಯ ಚಿಂತನೆ ಗ್ರಂಥಗಳಿಗೆ. , ಜಂಗಮರಿಗೆ, ವಚನಕಾರರಿಗೆ ಧರ್ಮಗ್ರಂಥಗಳು ಸ್ವಾನುಭವ. ಅನುಭವಕ್ಕೆ ದಕ್ಕಿದ್ದು ಮಾತ್ರ ಬುದ್ಧ ಮತ್ತು ವಚನಕಾರರು ಪ್ರತಿಪಾದಿಸಿದರು ಎಂದರು. ಲಿಂಗಾಯತ ಆತ್ಮಸೂಚಕ, ವೀರಶೈವ ಆಚರಣೆಯ ಸೂಚಕ. ಶರಣ ಸಮುದಾಯ ಸೂಚಕ. ಶರಣ ಎಂಬ ವಚನಗಳಲ್ಲಿ ನಾಲ್ಕು ಸಾವಿರ ಸಲ ಬಳಕೆಯಾಗಿದೆ. ಹಿಂದೂ ಎಂಬ ಪದ ಒಮ್ಮೆಯೂ ಬಳಕೆಯಾಗಿಲ್ಲ. ಹಾಗಾಗಿ ಅಲ್ಲಿ ಹಿಂದೂ ಧರ್ಮದ ಪುನರುತ್ಥಾನದ ಪ್ರಶ್ನೆಯೇ ಉದ್ಭವಿಸಿಲ್ಲ. ೪೦ ವರ್ಷದ ಅವಧಿಯಲ್ಲಿ ವಚನಗಳು ರಚನೆಯಾದವು. ಹಲವು ಬಗೆಯ ವಚನಕಾರರು, ಹಲವು ಸಮುದಾಯಗಳ, ಅನೇಕ ವೃತ್ತಿಯ ಜನ ಆಗ ಬರೆದರು. ಈ ಬಗೆಯ ಅಕ್ಷರ ಲೋಕಕ್ಕೆ ಅನೇಕ ಸಮುದಾಯಗಳು ತೆರೆದು ಕೊಂಡದ್ದು ಜಗತ್ತಿನ ಯಾವ ದೇಶದ , ಯಾವ ಬಗೆಯ ಸಾಹಿತ್ಯದಲ್ಲೂ ನಡೆದಿಲ್ಲ. ಅದು ಕರ್ನಾಟಕದ ನೆಲದಲ್ಲಿ ನಡೆಯಿತು ವಚನ ಸಂಗ್ರಹದಲ್ಲಿ ಅಸಮಾನತೆಗಳು ಕೆಲಸ ಮಾಡಿವೆ. ಅಲ್ಲಮ ಕೇಂದ್ರಿತ ಮತ್ತು ಬಸವ ಕೇಂದ್ರಿತ ಸಂಪಾದನೆಗಳು ನಡೆದವು. ಅಲ್ಲಿನ ಮಹಿಳಾ ಬರಹಗಾರ್ತಿಯರನ್ನು ಕಡೆಗಣಿಸಲಾಯಿತು ಎಂದ ಅವರು ನಾವು ಸಮಾನತೆ ಮತ್ತು ಸಹಬಾಳ್ವೆ ಮರೆತಿದ್ದೇವೆ. ಪ್ರಭುತ್ವ ನಿರಸನ ಸಮಾಜ ಮಾರ್ಕ್ಸ್ ಹೇಳಿದ್ದು. ಆದರೆ ಈಗ ಕಾರ್ಪೊರೇಟ್ ಶಕ್ತಿಗಳು ಆಳುತ್ತಿವೆ. ನಾವೀಗ ಬಹುತ್ವ ಮತ್ತು ಏಕತ್ವವನ್ನು ಪುನರ್ ರಚಿಸಬೇಕಿದೆ ಎಂದು ಎಚ್.ಎಸ್.ಶಿವಪ್ರಕಾಶ್ ಅಭಿಪ್ರಾಯಪಟ್ಟರು.

ಪೊಲೀಸರಿಗೆ ಆತ್ಮಸ್ಥ್ಯೆರ್ಯ ತುಂಬುವ ಕೆಲಸ ಆಗಲಿ

ಧಾರವಾಡ: ಪೊಲೀಸರಿಗೆ ಆತ್ಮಸ್ಥ್ಯೆರ್ಯ ತುಂಬುವ ಕೆಲಸ ಸಾರ್ವಜನಿಕರಿಂದ ಆಗಬೇಕು. ಆಗ ಪೊಲೀಸರು ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಡಿಸಿಪಿ ಬಿ.ಎಸ್.ನೇಮಗೌಡ ಹೇಳಿದರು. ಅವರು ನಗರದ ಕಡಪಾ ಮೈದಾನದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಅಂಗವಾಗಿ ಹುಬ್ಬಳ್ಳಿಯಿಂದ ಧಾರವಾಡದವರೆಗೆ ಹಮ್ಮಿಕೊಂಡಿದ್ದ ಸೈಕ್ಲಿಂಗ್ ಮತ್ತು ಸ್ಕೇಟಿಂಗ್ ಜಾಥಾದ ಸಮಾರೋಪದಲ್ಲಿ ಮಾತನಾಡಿದರು. ಹು-ಧಾ ಅವಳಿನಗರದಲ್ಲಿನ ಸಂಚಾರ ವ್ಯವಸ್ಥೆ ಸುಧಾರಣೆಗೆ ಪೊಲೀಸರು ನಿರಂತರ ಪ್ರಯತ್ನಿಸುತ್ತಿದ್ದಾರೆ. ಈ ಹಂತದಲ್ಲಿ ಸಾರ್ವಜನಿಕರು ಕೂಡಾ ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಅಗತ್ಯ ಸಹಕಾರ ನೀಡಬೇಕು. ಸಾರ್ವಜನಿಕರು ಕೂಡಾ ಇಲಾಖೆಯ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಪೊಲೀಸರಿಗೆ ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರೇರಣೆಯಾಗುತ್ತದೆ. ಈ ದಿಸೆಯಲ್ಲಿ ವಿವಿಧ ಸಂಘಟನೆಗಳು ಕೂಡಿ ರಸ್ತೆ ಸುರಕ್ಷತಾ ಜಾಗೃತಿ ಅಂಗವಾಗಿ ಸೈಕ್ಲಿಂಗ್ ಮತ್ತು ಸ್ಕೇಟಿಂಗ್ ಜಾಥಾ ಹಮ್ಮಿಕೊಂಡಿದ್ದು ಶ್ಲಾಘನೀಯ. ಸ್ವಯಂ ಸೇವಾ ಸಂಸ್ಥೆಗಳ ಇಂತಹ ಕಾರ್ಯಕ್ರಮಗಳಿಂದ ಇಲಾಖೆ ಇನ್ನೂ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದರು. ಇದೇ ಸಂರ್ಭದಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಮಿಂಚಿದ ಕ್ರೀಡಾ ಪ್ರತಿಭೆಗಳನ್ನು ಗೌರವಿಸಲಾಯಿತು. ಹುಬ್ಬಳ್ಳಿಯಿಂದ ಧಾರವಾಡದವರೆಗೆ ಧಾರವಾಡ ಬಾಂಡ್, ಹುಬ್ಬಳ್ಳಿ ಸೈಕಲ್ ಕ್ಲಬ್, ಡೆಕಥ್ಲಾನ್ ಹುಬ್ಬಳ್ಳಿ, ನೇಚರ್ ಫಸ್ಟ್, ಗೋ ಗ್ರೀನ್, ಶೇಯಾ ಕಾಲೇಜ್ ಆಫ್ ಪ್ಯಾರಮೆಡಿಕಲ್ ಸೈನ್ಸ್, ವಿಕಾಸ ಏರಿಯಲ್ ಸಿಟಿ, ಮಮ್ಮಾಜ್ ಲಂಚ್ ಬಾಕ್ಸ್, ಇವಾಲ್ಫ್ ಲೈವ್ಸ್ ಮತ್ತಿತರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸೈಕ್ಲಿಂಗ್ ಮತ್ತು ಸ್ಕೇಟಿಂಗ್ ಜಾಥಾದಲ್ಲಿ ಅನೇಕ ಕ್ರೀಡಾಪಟುಗಳು ಮತ್ತು ಮಕ್ಕಳು ಭಾಗವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ನ್ಯಾಯವಾದಿ ಪಿ.ಎಚ್.ನೀರಲಕೇರಿ, ಡಾ.ಸತೀಶ ಇರಕಲ್ಲ, ಎಸಿಪಿ ಎನ್.ಬಿ.ನಾಗನೂರ, ಸಿಪಿಐ ಮುರಘೇಶ ಚನ್ನಣ್ಣವರ, ಪಿಎಸ್ಐ ಕೃಷ್ಣವೇಣಿ ಪಿ.ಜೆ., ರೂಪಾಲಿ ಜಾಧವ, ಅಸ್ಲಂ ಅಬ್ಬಿಹಾಳ ಇದ್ದರು.

ಭಕ್ತ ಗಣ ಜೊತೆ ಮಾತಾಡೋದು ಕಷ್ಟ ಎಂದ ದಿನೇಶ್ ಅಮೀನ್ ಮಟ್ಟು

ಧಾರವಾಡ : ಬಿಜೆಪಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಭಕ್ತ ಗಣ ಜೊತೆ ಮಾತಾಡೋದು ಕಷ್ಟ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಕಿಡಿಕಾರಿದ್ದಾರೆ. ಅವರು ಧಾರವಾಡದಲ್ಲಿ ಎರಡನೇ ದಿನದ ಸಾಹಿತ್ಯಮೇಳದಲ್ಲಿ ಬಹುತ್ವ ಭಾರತ ಇಂದು ಮತ್ತು ನಾಳೆ ವಿಷಯದ ಮೇಲೆ ನಡೆದ ವಿದ್ಯಾರ್ಥಿ ಚಳುವಳಿಯ ಗೋಷ್ಠಿಯಲ್ಲಿ ಮಾತನಾಡಿದರು. ಅವರು ಸಾಹಿತ್ಯ, ಇತಿಹಾಸವನ್ನು ಓದಿದವರಲ್ಲಾ, ಅವರಿಗೆ ಸರಕಾರದ ಬಗ್ಗೆ ಮಾತಾಡೋದು ಇಷ್ಟವಿಲ್ಲ ಆದರೆ ಸರ್ವಾಧೀಕಾರದ ಮೇಲೆ ನಂಬಿಕೆಯಿದೆ. ಇದಕ್ಕೆ ಜ್ವಲಂತ ನಿರ್ದಶನವೆಂದರೆ ಪೆಟ್ರೋಲ್ ಬೆಲೆ ಹೆಚ್ಚಾದರೂ ಅದನ್ನು ಬೆಂಬಲಿಸುವ ವಿದ್ಯಾರ್ಥಿಗಳಿದ್ದಾರೆ ಎಂದು ಕುಟುಕಿದ ಅವರು ಮೋದಿ ನೋಡಿ ವೋಟು ಹಾಕ್ತಾರೆ ಈ ರೀತಿ ಮನಃಸ್ಥಿತಿಯನ್ನು ಅವರು ತಯಾರು ಮಾಡಿದ್ದಾರೆ ಎಂದರು. ವಿದ್ಯಾರ್ಥಿಗಳಿಗೆ ಸಮಸ್ಯೆಯಿದೆ ಅದೇನೆಂದರೆ ಅವರು ಇತಿಹಾಸವನ್ನು ಓದೋದಿಲ್ಲ, ರೋಹಿತ್ ವೇಮುಲಾ ರವರದ್ದು ಆತ್ಮಹತ್ಯೆ ಅಲ್ಲ ಆತ್ಮಾಹುತಿ ಎನ್ನಬೇಕು ಏಕೆಂದರೆ ಆದಾದ ನಂತರ ವಿದ್ಯಾರ್ಥಿ ಚಳುವಳಿ ಬೆಳೆಯಿತು, ವಿದ್ಯಾರ್ಥಿ ಚಳುವಳಿ ಒಂದು ಪ್ರಕ್ರಿಯೆ ಆಗಬೇಕು, ಸಂಘಟನೆಯ ಆಯ್ಕೆಯಲ್ಲಿ ವಿದ್ಯಾರ್ಥಿಗಳು ಎಡವುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು ಅದಾಗಬಾರದು ಆಯ್ಕೆಯಲ್ಲಿ ಎಚ್ಚರ ವಹಿಸಬೇಕಾಗಿದೆ ಇಂತಹ ಚಿಂತನೆಗಳು ಮೂಡಿಬರಲಿ ಎಂದು ಆಶಿಸುತ್ತೇನೆ ಎಂದು ಇತಿಹಾಸದ ಪುಟಗಳನ್ನು ತೆರೆದಿಟ್ಟರು.

ತಪ್ಪಾಗಿದ್ದರೆ ಕ್ಷ್ಮಮಿಸಿ ಎಂದು ಕೈ ಮುಗಿದ ಮಾಜಿ ಸಚಿವ ವಿನಯ ಕುಲಕರ್ಣಿ

ಧಾರವಾಡ: ನನಗೆ ಗೋತ್ತಾಗದೆ ತಪ್ಪಾಗಿದ್ದರೆ, ದಯವಿಟ್ಟು ಕ್ಷಮಿಸಿ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಕೈ ಮುಗಿದು ಪ್ರಾರ್ಥಿಸಿದ ಘಟನೆ ಭಾನುವಾರ ಧಾರವಾಡದಲ್ಲಿ ನಡೆದಿದೆ. ಅವರು ನಗರದ ರಪಾಟಿ ಕಲ್ಯಾಣಮಂಟಪದಲ್ಲಿಭಾನುವಾರ ಧಾರವಾಡ ವಿಧಾನಸಭಾ ಕ್ಷೇತ್ರ-71ರ ಮತದಾರರಿಗೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭದಲ್ಲಿ ಇಂತಹ ಭಾವುಕ ಘಟನೆ ಜರುಗಿತು. ನಾನು ಸೋತಿದ್ದೇನೆ. ಇದು ಮತದಾರರ ತೀರ್ಪು. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ನಾನು ಸೋತಿರಬಹುದು, ಆದರೆ, ಜನಸೇವೆಯಿಂದ ವಿಮುಖನಾಗುವುದಿಲ್ಲಎಂದು ಅಭಯ ನೀಡಿದ ಅವರು ಕ್ಷೇತ್ರದಲ್ಲಿ ಇದ್ದು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ಯಾಕೆ ಸೋತೆ ಎಂಬುದು ಪರಾಮರ್ಶೆ ನಡೆಸಬೇಕಿದೆ. ಯಾರ ವಿರುದ್ದವೂ ನಾನು ಆರೋಪ ಮಾಡಲ್ಲ. ಚುನಾವಣೆ ಸಮಯದಲ್ಲಿ ನನ್ನಿಂದ ಏನು ತಪ್ಪು ಆಗುತ್ತಿದೆ ಎಂಬುದನ್ನು ನಮ್ಮವರೇ ನನಗೆ ತಿಳಿಸಲಿಲ್ಲ, ಎಚ್ಚರಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ವಿನಯ ಕುಲಕರ್ಣಿ ಮಂತ್ರಿ ಆಗಿದ್ದಾನೆ, ಸಾಕಷ್ಟು ದುಡ್ಡು ಮಾಡಿದ್ದಾನೆ ಎಂಬ ಭಾವನೆ ನಮ್ಮ ನಮ್ಮವರಲ್ಲೇ ಇತ್ತು, ಆದರೆ, ನಾನು ಈ ಬಾರಿ ಸಾಲ ಮಾಡಿಕೊಂಡು ಚುನಾವಣೆ ಮಾಡಿದ್ದೇನೆ. ಯಾವುದೇ ಜಾತಿ ಭೇದ ಮಾಡಿಲ್ಲ, ಆದರೆ, ವಿರೋಧ ಪಕ್ಷಗಳು ಜಾತಿ ಆಧಾರದ ಮೇಲೆ ಚುನಾವಣೆ ಮಾಡಿದವು ಎಂದು ಆರೋಪಿಸಿದರು. ನನ್ನ ಕೆಲಸ ಕಮ್ಮಿಯಾದರೆ, ಸಿದ್ದರಾಮಯ್ಯ ಅವರ ಕೆಲಸ ಏನು ಕಡಿಮೆಯಾಗಿತ್ತು? ಎಂದು ಪ್ರಶ್ನಿಸಿದ ಅವರು ನಾನು ಸೋತಿದ್ದು, ನನಗೆ ಬೇಸರ ತರಿಸಿಲ್ಲ, ಆದರೆ, ಸಿದ್ದರಾಮಯ್ಯ ಸೋತಿದ್ದು, ತೀವ್ರ ಬೇಸರ ತರಿಸಿದೆ. ಸೋತಿದ್ದಕ್ಕೆ ಕಾರ್ಯಕರ್ತರು ಪರಾಮರ್ಶೆ ಮಾಡಿಕೋಬೇಕು, ಬಿಜೆಪಿ ಕಾರ್ಯಕರ್ತರ ಹಾಗೇ ಕೆಲಸ ಮಾಡಬೇಕಿತ್ತು ಎಂದು ಸಲಹೆ ನೀಡಿದರು. ಇದಲ್ಲದೆ, ನನಗೆ ಯಾವುದೇ ಸ್ಥಾನಮಾನಗಳು ಬೇಡ, ವಿಧಾನ ಪರಿಷತ್ ಸದಸ್ಯ ಸ್ಥಾನವೂ ಬೇಡ, ಸೋಲಿಗೆ ಬೆನ್ನು ಮಾಡುವನಲ್ಲ ನಾ. ನೇರವಾಗಿ ಕೆಲಸ ಮಾಡುತ್ತೇನೆ. ನನ್ನಿಂದ ಏನಾದರೂ ತಪ್ಪುಗಳು ಆಗಿದ್ದರೆ ಕ್ಷಮಿಸಿ ಎಂದು ಭಾವುಕರಾಗಿ ಮಾಜಿ ಸಚಿವ ವಿನಯ ಕುಲಕರ್ಣಿ ತಮ್ಮ ಭಾಷಣ ಮೊಟಕುಗೊಳಿಸಿದರು. ಇದರಿಂದಾಗಿ ಸಭೆಯ ವೇದಿಕೆಯಲ್ಲಿದ್ದ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಕೂಡ ಕೆಲ ಕಾಲ ಭಾವುಕರಾಗಿ ಮೌನಕ್ಕೆ ಶರಣಾದರು.

ಸ್ವಯಂ ಪ್ರೇರಿತ ಕರ್ನಾಟಕ ಬಂದ್ ಗೆ ಭಾರತೀಯ ಜನತಾ ಪಕ್ಷದ ಬೆಂಬಲ

ಧಾರವಾಡ : ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯಿಸಿ ಕರೆ ನೀಡಿರುವ ಸ್ವಯಂ ಪ್ರೇರಿತ ಕರ್ನಾಟಕ ಬಂದ್ ಗೆ ಭಾರತೀಯ ಜನತಾ ಪಕ್ಷದ ಬೆಂಬಲವಿದೆ ಎಂದು ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ತಿಳಿಸಿದರು. ಅವರು ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ವಿವಿಧ ಸಂಘ ಸಂಸ್ಥೆಗಳು ಕರೆ ನೀಡಿರುವ ಬಂದ್ ಗೆ ಹುಬ್ಬಳ್ಳಿಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಅವಳಿ ನಗರದ ವರ್ತಕರ ಸಂಘ, ವಿವಿಧ ಕನ್ನಡ ಪರ ಸಂಘಟನೆಗಳು ಬೆಂಬಲ ನೀಡಿವೆ ಎಂದರು. ಇಸ್ಮಾಯಿಲ್ ತಮಟಗಾರ ಅವರು ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರ. ಎಸ್ಎಂಎಸ್ ಗೂ ನಮಗೂ ಯಾವುದೇ ಸಂಬಂಧವಿಲ್ಲ. ರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯ. ಸೋಲಿನಿಂದ ಹತಾಶರಾಗಿ ಮನಬಂದತೆ ಮಾತನಾಡುತ್ತಿದ್ದಾರೆ ಎಂದು ಸ್ಪಷ್ಟ ಪಡಿಸಿದರು. ಡ್ರಗ್ಸ್, ಗಾಂಜಾ, ಆಫೀಮು, ಇಸ್ಪೀಟು ಕ್ಲಬ್, ಮೀಟರ್ ಬಡ್ಡಿ, ಭೂ ಮಾಫಿಯಾ ಜೊತೆಗೆ ಕಡಿವಾಣ ಹಾಕಲು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ, ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರೆಲ್ಲ ಸೇರಿ ಪೊಲೀಸ್ ಆಯುಕ್ತರೊಂದಿಗೆ ಚರ್ಚೆ ಮಾಡಲಾಗುವುದು. ಕಾಲಮೀತಿಯೊಳಗೆ ಅವರು ಕಡಿವಾಣ ಹಾಕದಿದ್ದರೆ ಪೊಲೀಸ್ ಇಲಾಖೆಯ ವಿರುದ್ದವೇ ರಸ್ತೆಗಿಳಿದು ಹೋರಾಟ ನಡೆಸುವುದು ಅನಿವಾರ್ಯ ವಾಗಲಿದೆ ಎಂದರು. ಇವಿಎಂ ಯಂತ್ರಗಳ ಲೋಪದೋಷ ಕಂಡು ಬಂದಿದೆ ಎಂಬುದು ಸುಳ್ಳು. ಈ ಬಗ್ಗೆ ಯಾರೋಬ್ಬರು ಸವಾಲ್ ಸ್ವೀಕರಿಸಿಲ್ಲ. ಆಯೋಗ ಕೂಡ ಗಂಭೀರವಾಗಿ ಪರಿಗಣಿಸಿದೆ ಎಂದರು. ಈ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಶಹರ ಘಟಕದ ಅಧ್ಯಕ್ಷ ಯಲ್ಲಪ್ಪ ಅರವಾಳದ, ಪಾಲಿಕೆ ಸದಸ್ಯರಾದ ಸಂಜಯ ಕಪಟಕರ್, ವಿಜಯಾನಂದ ಶೆಟ್ಟಿ, ಬಸವರಾಜ ಮುತ್ತಳ್ಳಿ, ಬಲರಾಮ್ ಕುಸುಗಲ್, ಮಂಜುಳಾ ಅಕ್ಕೂರ, ಶಿವಣ್ಣ ಬಡವಣ್ಣವರ, ಮೋಹನ ರಾಮದುರ್ಗ, ದೇವರಾಜ ಶಹಪೂರ ಉಪಸ್ಥಿತರಿದ್ದರು.

ನಮ್ಮ ಸರಕಾರ ಜನಮತದ ಮೂಲಕ ನಡೆಯುತ್ತಿದೆ

ಕಟಕ್ : ನಮ್ಮ ಸರಕಾರ ಕಾಂಗ್ರೆಸ್ ನಾಯಕರ ಜನ್ಪಥ್ನಿಂದ ನಡೆಯುವುದಿಲ್ಲ. ಬದಲಿಗೆ ಜನಮತದ ಮೂಲಕ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅವರು ಬಿಜೆಪಿ ಸರ್ಕಾರ ಯಶಸ್ವಿಯಾಗಿ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಟಕ್ನಲ್ಲಿ ಭಾಷಣ ಮಾಡಿದರು. ಭ್ರಷ್ಟ ಪಕ್ಷಗಳು ಒಂದಾಗಿ ಒಕ್ಕೂಟ ರಚನೆಗೆ ಮುಂದಾಗಿವೆ ಎಂದು ಗುಡುಗಿದ ಅವರು 2014ರ ವರೆಗೆ ದೇಶದ ಬಡವರು ಬಡವರಾಗಿಯೇ ಉಳಿದಿದ್ದರು. ಸರಕಾರದ ಯಾವುದೇ ಯೋಜನೆಗಳು ಜನರಿಗೆ ತಲುಪುತ್ತಿರಲಿಲ್ಲ. ಚುನಾವಣೆಯ ಸಂದರ್ಭ ಬಂದಾಗ ಮಾತ್ರ ಸರಕಾರದ ಯೋಜನೆಗಳು ಹಂಚಿಕೆಯಾಗುತ್ತಿದ್ದವು. ಆದರೆ ಈಗ ಎಲ್ಲವೂ ಬದಲಾಗಿದೆ. ಬಡವರು, ಮಧ್ಯಮ ವರ್ಗ ಸೇರಿದಂತೆ ದೇಶದ ನಾಗರಿಕರ ಜೀವನ ಮಟ್ಟ ಸುಧಾರಣೆಯಾಗಿದೆ ಎಂದರು. ಕೇಂದ್ರ ಸರಕಾರ ಒಡಿಶಾದ ಮಹಾನದಿ ನದಿ ನೀರು ಹಂಚಿಕೆ ಸಮಸ್ಯೆ ಬಗೆಹರಿಸಲು ಬದ್ಧವಾಗಿದೆ. ಒಡಿಶಾ ಸರಕಾರದೊಂದಿಗೆ ಅನೇಕ ಬಾರಿ ಮಾತುಕತೆಗೆ ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆ ಹರಿಸಲಾಗುವುದು ಎಂದು ಅಭಯ ನೀಡಿದರು. ಇದಲ್ಲದೆ, ಕಟಕ್ ಜನರ ಮುಂದೆ ತಮ್ಮ ನಾಲ್ಕು ವರ್ಷಗಳ ಸಾಧನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಧಾನಸೌಧಕ್ಕೆ ಮಾತ್ರ ಸೀಮಿತ

ಬೆಂಗಳೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಕೇವಲ ವಿಧಾನಸೌಧಕ್ಕೆ ಮಾತ್ರ ಸೀಮಿತ ಎಂದು ಜೆಡಿಎಸ್ ವರಿಷ್ಟ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದರು. ಅವರು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು. ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ ಉಳಿಸುವುದು ನನ್ನ ಜವಾಬ್ದಾರಿಯಾಗಿದೆ. ಯಾರ ದಾಕ್ಷಿಣ್ಯದಲ್ಲಿ ಜೆಡಿಎಸ್ ಪಕ್ಷ ಇಲ್ಲ. ಪಕ್ಷವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕಾರ್ಯಕರ್ತರಿಗಿದೆ ಎಂದರು. ಈ ಹಿಂದೆಯೂ ಕಾಂಗ್ರೆಸ್ನೊಂದಿಗೆ ಮೈತ್ರಿ ಸರ್ಕಾರ ಮಾಡಲಾಗಿತ್ತು. ಮೈತ್ರಿ ಸರ್ಕಾರದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂಬ ಕಾರಣಕ್ಕೆ ಸರ್ಕಾರಕ್ಕೆ ಅಡ್ಡಿ ತರಲು ಪ್ರಚಾರಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ ದೇವೇಗೌಡರು, ಕಾಂಗ್ರೆಸ್ ಅಭ್ಯರ್ಥಿ ಏನು ಮಾಡಿದ್ದಾರೆ ಎಂಬುದು ಚುನಾವಣಾ ಆಯೋಗದ ಮುಂದಿದೆ ಎಂದರು. ಅಪ್ಪ-ಮಗನ ಬಗ್ಗೆ ಮಾತನಾಡುವರಿಗೆ ಉತ್ತರಿಸುವ ಕಾಲ ಹತ್ತಿರವಿದೆ ಎಂದ ಅವರು ಪರೋಕ್ಷವಾಗಿಯೇ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಗುಡುಗಿದರು. ಯಾರು ಏನು ಮಾಡಿದ್ದಾರೆ ಎಂಬುದು ಗೊತ್ತಿದ್ದು, ನಮಗೆ ಅವರ ಸರ್ಟಿಫಿಕೇಟ್ ಬೇಕಿಲ್ಲ ಎಂದು ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ, ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು, ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರೆಡ್ಡಿ , ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಆತ್ಮಹತ್ಯೆಗೆ ಶರಣಾಗಬೇಡಿ ಎಂದ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಶೀಘ್ರದಲ್ಲಿಯೇ ರೈತರ ಬೆಳೆ ಸಾಲ ಮನ್ನಾ ಮಾಡುವುದಲ್ಲದೆ, ರೈತರ ಸಮಸ್ಯೆ ನೀಗಿಸಲು ಮೊದಲ ಆದ್ಯತೆ ನೀಡಲಾಗುವುದು. ಹೀಗಾಗಿ ಯಾವುದೇ ರೈತರು ಆತ್ಮಹತ್ಯೆಯ ದಾರಿ ತುಳಿಯಬಾರದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಅವರು ಶನಿವಾರ ನಗರದಲ್ಲಿ ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ ರೈತರ ಹಾಗೂ ಜನರ ಸಂಕಷ್ಟಗಳಿಗೆ ಸದಾ ಸ್ಪಂದಿಸುವ ಸರಕಾರ ಇದಾಗಿದ್ದು, ಸಾಲ ಮನ್ನಾ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದ ಅವರು ಈ ಬಗ್ಗೆ ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ನಡೆಸಿ, ರೈತರ ಸಾಲ ಮನ್ನಾ ಮಾಡುವ ಬಗ್ಗೆ ನಿರ್ಧಾರ ಪ್ರಕಟಿಸಲಾಗುವುದು ಎಂದರು. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ನಂತರ ಸಾಲ ಮನ್ನಾ ಮಾಡಲಾಗುವುದು. ಯಾರಿಗೂ ತೆರಿಗೆ ಹೊರೆಯಾಗದಂತೆ ಸಾಲ ಮನ್ನಾ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದರು.

ಬಸ್ ಲಾರಿ ಡಿಕ್ಕಿಯಲ್ಲಿ 11 ಪ್ರಯಾಣಿಕರು ಸಾವು

ಸಿದ್ದಿಪೇಟೆ : ತೆಲಂಗಾಣ ಸಾರಿಗೆ ಸಂಸ್ಥೆಯ ಬಸ್ವೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ 11 ಪ್ರಯಾಣಿಕರು ಸಾವನ್ನಪ್ಪಿದ್ದ ಹೃದಯ ವಿದ್ರಾವಕ ಘಟನೆ ಗಜ್ವೆಲ್ ಮಂಡಲ್ನ ಪ್ರಜ್ಯಾಪುರಂ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಶನಿವಾರ ಸಂಜೆ ಈ ರ್ದುಘಟನೆ ನಡೆದಿದ್ದು, ತೆಲಂಗಾಣ ಸಾರಿಗೆ ಬಸ್ ಸಿದ್ದಿಪೇಟ್ಯಿಂದ ಹೈದರಾಬಾದ್ಗೆ ತೆರಳುತ್ತಿತ್ತು. ಆಗ ಬಸ್ ಡಿಕ್ಕಿ ಹೊಡೆದ ಪರಿಣಾಮ ಲಾರಿ ರಸ್ತೆ ಮಧ್ಯದಲ್ಲಿನ ಡಿವೈಡರ್ ಗೆ ತಗುಲಿ ಇನ್ನೆರಡು ವಾಹನಗಳು ಅಪಘಾತಕ್ಕೀಡಾಗಿವೆ. ಈ ಅಪಘಾತದಲ್ಲಿ 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನೀರಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ ರೈತ

ದಾವಣಗೆರೆ : ನೀರಲ್ಲಿ ರೈತನೊಬ್ಬ ಕೊಚ್ಚಿ ಹೋಗಿ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕ್ ಲಕ್ಷ್ಮೀಸಾಗರದ ಬಳಿ ನಡೆದಿದೆ. ಜಮೀನಿನಿಂದ ಮನೆಗೆ ಮರಳಿ ವಾಪಸ್ಸಾಗುವಾಗ ಈ ಘಟನೆ ನಡೆದಿದ್ದು, ಬಸಪ್ಪ ಸಣ್ಣಪ್ಪ (58) ಎಂಬ ರೈತನೇ ನೀರಲ್ಲಿ ಕೊಚ್ಚಿ ಹೋದ ಅನ್ನದಾತ. ನಿನ್ನೆ ಸೇತುವೆ ದಾಟುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ. ಮತ್ತೊಬ್ಬ ರೈತ ಈಜಿ ಬಸಪ್ಪನನ್ನು ರಕ್ಷಿಸಲು ಪ್ರಯತ್ನಪಟ್ಟರೂ ಯಾವುದೇ ಪ್ರಯೋಜನ ಆಗಲಿಲ್ಲ. ನಿನ್ನೆ ಸಂಜೆ ನೀರಿನಲ್ಲಿ ಕೊಚ್ವಿ ಹೋದ ರೈತನ ಶವ ಶನಿವಾರ ಸಂಜೆ ದೊರತಿದೆ. ಈ ಕುರಿತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂತ್ರಿಗಿರಿಗಾಗಿ ತೀವ್ರ ಕಸರತ್ತು ನಡೆಸುತ್ತಿರುವ ನಾಯಕರು

ನವದೆಹಲಿ : ನವದೆಹಲಿಯಲ್ಲಿ ಬೀಡು ಬಿಟ್ಟಿರುವ ರಾಜ್ಯ ಕಾಂಗ್ರೆಸ್ ನಾಯಕರು ಮಂತ್ರಿ ಸ್ಥಾನಕ್ಕಾಗಿ ತಮ್ಮ ನಾಯಕರ ಮೂಲಕ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಶ್ಯಾಮನೂರ ಶಿವಶಂಕ್ರಪ್ಪ, ಆರ.ವಿ. ದೇಶಪಾಂಡೆ, ಎಂಬಿ. ಪಾಟೀಲ, ರೋಷನ್ ಬೇಗ್, ಹೆಚ್. ಕೆ. ಪಾಟೀಲ, ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ , ಕೃಷ್ಣ ಬೈರೇಗೌಡ, ರಾಜಶೇಖರ ಪಾಟೀಲ ಹುಮ್ನಾಬಾದ್, ಆನಂದ್ ಸಿಂಗ್, ಈಶ್ವರ ಖಂಡ್ರೆ ಸೇರಿದಂತೆ ಅನೇಕರು ಸಚಿವ ಸ್ಥಾನದ ಲಾಬಿ ನಡೆಸಿದ್ದಾರೆ. ಜಾತಿ, ಪ್ರಾದೇಶಿಕ, ಹಿರಿತನ ಆಧಾರದ ಮೇಲೆ ಕೆಲವರು ಹೈಕಮಾಂಡ್ ಬಳಿಯೇ ಲಾಬಿ ನಡೆಸುತ್ತಿದ್ದರೆ, ಇನ್ನೂ ಕೆಲವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಲಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಲೋಕಸಭೆ ಶಾಸಕಾಂಗ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕ ಒತ್ತಡ ಹೇರುತ್ತಿದ್ದಾರೆ. ದೆಹಲಿಯಲ್ಲಿ ಬೀಡು ಬಿಟ್ಟಿರುವ ಬಹುತೇಕ ಶಾಸಕರ ದಂಡು ಮಂತ್ರಿ ಪದವಿ ಕೊಡಿಸುವಂತೆ ಗಂಟು ಬಿದ್ದಿದ್ದಾರೆ. ಯಾರಿಗೆಲ್ಲಾ ಅದೃಷ್ಟ ಖುಲಾಯಿಸುತ್ತದೆ ಕಾದು ನೋಡಬೇಕಿದೆ.

ಕಾಂಗ್ರೆಸ್ ಖಾತೆ ಹಂಚಿಕೆ ದೆಹಲಿಗೆ ಶೀಫ್ಟ್

ಬೆಂಗಳೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮೀಶ್ರ ಸರಕಾರ ರಚನೆ ಬೆನ್ನಲ್ಲೇ ಸಚಿವ ಸಂಪುಟ ರಚನೆ ಕಸರತ್ತು ಜೋರಾಗಿತ್ತು. ಕಾಂಗ್ರೆಸ್ ನಾಯಕರು ಖಾತೆ ಹಂಚಿಕೆ ಸಂಬಂಧ ದೆಹಲಿಗೆ ದೌಡಾಯಿಸಿದ್ದಾರೆ. ಈಗಾಗಲೇ ಡಿಸಿಎಂ ಹುದ್ದೆಗೇರಿರುವ ಡಾ. ಜಿ.ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಚಿವರ ಪಟ್ಟಿಯೊಂದಿಗೆ ಕಾಂಗ್ರೆಸ್ ಅಧೀನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜತೆ ಚರ್ಚೆ ನಡೆಸಲಿದ್ದಾರೆ. ಅವರ ಅಣತಿ ಮೇರೆಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. 22 ಸಚಿವ ಸ್ಥಾನ ಕಾಂಗ್ರೆಸ್ಗೆ, 12 ಸ್ಥಾನ ಜೆಡಿಎಸ್ಗೆ ಒಲಿದಿರುವ ಹಿನ್ನಲೆಯಲ್ಲಿ ಮಂತ್ರಿ ಸ್ಥಾನದ ಮೇಲೆ ಕಣ್ಣೀಟ್ಟಿರುವ ಕೈ ನಾಯಕರು ತೀವ್ರ ಪೈಪೋಟಿ ಆರಂಭಿಸಿದ್ದಾರೆ. ಯಾವ ನಾಯಕರಿಗೆ ಯಾರ ಕೃಪಾಕಟಾಕ್ಷ ದೊರೆಯಲಿದ್ದು, ಯಾವ ಸ್ಥಾನ ಒಲಿಯದಿದೆ ಎಂಬುದು ಕಾದು ನೋಡಬೇಕಿದೆ.

ಕೇಂದ್ರ ಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿದ ನಾಗಲಕ್ಷ್ಮಿಬಾಯಿ

ಬೆಂಗಳೂರು: ಕೇಂದ್ರ ಕಾರಾಗೃಹಕ್ಕೆ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ನಾಗ ಲಕ್ಷ್ಮಿಬಾಯಿ ಅವರು ಶನಿವಾರ ದಿಢೀರ್ ಭೇಟಿ ನೀಡಿ ಮಹೀಳೆ ಖೈದಿಗಳ ಜತೆ ಸಮಾಲೋಚನೆ ನಡೆಸಿದರು. ಮಹಿಳಾ ಖೈದಿಗಳ ಸಮಸ್ಯೆ ಬಗ್ಗೆ ಖೈದಿಗಳ ಜೊತೆ ಆಪ್ತ ಸಮಾಲೋಚನೆ ನಡೆಸಿದ ಅವರು ಬಳಿಕ ಜೈಲಿನ ಹಿರಿಯ ಅಧಿಕಾರಿಗಳ ಜೊತೆಗೆ ಕೆಲ ಕಾಲ ಚರ್ಚಿಸಿದರು. ಜೈಲಿನಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡಿದರು.

ಭಾರತ ಹಿಂದುತ್ವದತ್ತ ವಾಲುತ್ತಿರುವುದು ಆತಂಕಕಾರಿ

ಧಾರವಾಡ : ಬಹುತ್ವ ಭಾರತ ದಿನೇ ದಿನೇ ಅಳಿಸಿ. ಹಿಂದೂತ್ವ ಭಾರತ ಮುನ್ನೆಲೆಗೆ ಬರುತ್ತಿರುವುದು ಆತಂಕಕಾರಿಯಾಗಿದೆ ಎಂದು ಹೆಸರಾಂತ ತೆಲಗು ಸಾಹಿತಿ ಓಲ್ಗಾ ಹೇಳಿದರು. ಅವರು ಶನಿವಾರ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮೇ ಸಾಹಿತ್ಯ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತ ಎಂಬುದೇ ಒಂದು ಮೂಲತಃ ಬಹುವಚನದ ಪರಿಕಲ್ಪನೆ. ನೇಷನ್ ಎಂಬ ಪದಕ್ಕೆ ಯಾವುದೇ ಭಾಷೆಯಲ್ಲಿಯೂ ಸಮನಾರ್ಥ ಪದವಿಲ್ಲ. ನೇಷನ್ ಎಂಬ ಪರಿಕಲ್ಪನೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಳಕೆಗೆ ಬಂದಿತು. ಇಂದಿನ ಸೃಜನ ಶೀಲ ಬರಹಗಾರರು ರಾಷ್ಟ್ರೀಯವಾದಿಗಳ ಹಾಗೂ ದೇಶಭಕ್ತರ ಮೂಲಕ ಅಪಾಯವನ್ನು ಎದುರಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ನಮ್ಮ ಧಾರ್ಮಿಕ ಸಿದ್ದಾಂತಗಳನ್ನು ಒಪ್ಪದ ಇತರ ಧರ್ಮಿಯರನ್ನು ದೇಶದ್ರೋಹಿಗಳಂತೆ ಬಿಂಬಿಸುತ್ತಿರುವ ಅಪಾಯಕಾರಿ ಬೆಳವಣಿಗೆಗಳು ಇಂದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಆತಂಕಗೊಳಿಸಿದೆ. ಈ ಕಾರಾಣಕ್ಕಾಗಿಯೇ ಸ್ವಾತಂತ್ರ್ಯ ಪೂರ್ವದಲ್ಲಿನ ಬಹುತ್ವ ಭಾರತ ಇದೀಗ ಹಿಂದೂತ್ವ ಭಾರತವಾಗಿ ಬದಲಾಗಿದೆ ಎಂದ ಅವರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಅಪರಾಧ ಕೃತ್ಯಗಳನ್ನೇ ಮಾಡುವವರು. ಅವರು ಸದ್ದಿಲ್ಲದೇ ರಾಷ್ಟ್ರದಲ್ಲಿ ಅಪರಾದ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ಆರೋಪಿಸಿದರು. ಜಸ್ಟೀಸ್ ಎಚ್. ನಾಗಮೋಹನದಾಸ, ಪ್ರಕಾಶ ಉಡಿಕೇರಿ, ಸಂಜೀವ ಕುಲಕರ್ಣಿ, ಕೆ.ಪಿ.ಸುರೇಶ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಮೇ ೨೮ರಂದು ಜೆಡಿಎಸ್ ಆತ್ಮಾವಲೋಕನ ಸಭೆ

ನವಲಗುಂದ : ನವಲಗುಂದ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹುಬ್ಬಳ್ಳಿ, ಅಣ್ಣಿಗೇರಿ ಹಾಗೂ ನವಲಗುಂದ ತಾಲೂಕಿನ ಜೆಡಿಎಸ್ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಆತ್ಮಾವಲೋಕನ ಸಭೆ ಹಾಗೂ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಮಾರಂಭ ಮೇ ೨೮ರಂದು ಸೋಮವಾರ ಸಂಜೆ ೪ ಗಂಟೆಗೆ ಪಟ್ಟಣದ ದ್ಯಾವಮ್ಮನ ಗುಡಿ ಹತ್ತಿರವಿರುವ ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಅವರ ನಿವಾಸದಲ್ಲಿ ನಡೆಯಲಿದೆ ಎಂದು ನವಲಗುಂದ ತಾಲೂಕು ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರದೀಪ ಲೆಂಕನಗೌಡರ ತಿಳಿಸಿದ್ದಾರೆ. ಈ ಕುರಿತು ಪ್ರಜಾಕಿರಣದೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಅವರ ನೇತೃತ್ವದಲ್ಲಿ ನಡೆಯುವ ಈ ಸಭೆಯ ಅಧ್ಯಕ್ಷತೆಯನ್ನು ನವಲಗುಂದ ತಾಲೂಕು ಜೆಡಿಎಸ್ ಅಧ್ಯಕ್ಷ ವೀರಣ್ಣ ನೀರಲಗಿ ವಹಿಸಲಿದ್ದಾರೆ. ಸಭೆಯಲ್ಲಿ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಎಸ್.ಹೊರಟ್ಟಿ, ಜಿಲ್ಲಾ ಅಧ್ಯಕ್ಷ ಮುಜಾಹಿದ್ ಕಾಂಟ್ಯಾಕ್ಟರ್, ಮಹಾನಗರ ಅಧ್ಯಕ್ಷ ರಾಜಣ್ಣ ಕೊರವಿ, ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಬಿ. ಗಂಗಾಧರಮಠ, ಹುಬ್ಬಳ್ಳಿ ತಾಲೂಕು ಅಧ್ಯಕ್ಷ ಶಿವಣ್ಣ ಹುಬ್ಬಳ್ಳಿ, ರೈತ ಘಟಕದ ಅಧ್ಯಕ್ಷ ಶಿವಶಂಕರ ಕಲ್ಲೂರ, ಜೆಡಿಎಸ್ ಮುಖಂಡ ಅಬ್ಬಾಸ ದೇವರಡು ಸೇರಿದಂತೆ ವಿವಿಧ ಮುಖಂಡರು ಭಾಗವಹಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿನ ಮೂರು ತಾಲೂಕಿನ ಎಲ್ಲ ಹಳ್ಳಿಗಳ ಮುಖಂಡರು ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಆಗಮಿಸಬೇಕು ಎಂದು ನವಲಗುಂದ ತಾಲೂಕಿನ ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರದೀಪ ಲೆಂಕನಗೌಡರ ಮನವಿ ಮಾಡಿದ್ದಾರೆ.

ನಮೋ ಸರಕಾರಕ್ಕೆ ಐದನೇ ವರ್ಷದ ಸಂಭ್ರಮ

ನವದೆಹಲಿ : ದೇಶದ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರಕ್ಕೆ ಇಂದು ಐದನೇ ವರ್ಷದ ಸಂಭ್ರಮ. ಯಶಸ್ವಿಯಾಗಿ ನಾಲ್ಕು ವರ್ಷಗಳ ಕಾಲ ಅಧಿಕಾರ ಪೂರೈಸಿದ ನರೇಂದ್ರ ಮೋದಿಯವರು 1 ಲಕ್ಷ ಸಾಧಕರನ್ನು ಮಾತನಾಡಿಸುವ ಗುರಿ ಹೊಂದಿದ್ದಾರೆ. ಅಲ್ಲದೆ, ಮೋದಿ ಸರಕಾರ ಕೈಗೊಂಡ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ನಿರ್ಧರಿಸಲಾಗಿದೆ. ಇಂದು ಐದನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನಲ್ಲೆಯಲ್ಲಿ ದೇಶದ್ಯಾಂತ ಬಿಜೆಪಿ ಕಾರ್ಯಕರ್ತರು ಸಡಗರ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್ ನಿಂದ ವಿಶ್ವಾಸ ಘಾತಕ ದಿನ ಆಚರಣೆ

ನವದೆಹಲಿ : ನರೇಂದ್ರ ಮೋದಿ ಸರಕಾರ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಜನರಿಗೆ ವಿಶ್ವಾಸಘಾತಕ ಮಾಡಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶೋಕ ಗೆಹ್ಲೋಟ್ ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ದೇಶದ್ಯಾಂತ ಕಾಂಗ್ರೆಸ್ ಪಕ್ಷದ ವತಿಯಿಂದ ವಿಶ್ವಾಸಘಾತಕದಿನ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ನರೇಂದ್ರ ಮೋದಿ ಅವರು ಈಗಲಾದರೂ ವಿದೇಶ ಸುತ್ತುವುದು ಬಿಟ್ಟು ದೇಶ ಸುತ್ತಲಿ, ದೇಶದ ಜನರ ಸಂಕಷ್ಟಗಳಿಗೆ ಸ್ಪಂದಿಸಲು ಮುಂದಾಗಲಿ ಎಂದು ಸಲಹೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವೂ ಬಿಜೆಪಿ ನೇತೃತ್ವದ ಎನ್ ಡಿ ಎ ಸರಕಾರದ ವಿಶ್ವಾಸಘಾತಕಗಳ ಪಟ್ಟಿಯನ್ನು ಜನರ ಮುಂದೂಡಲಿದೆ . ಆ ಮೂಲಕ ಅವರ ಬಣ್ಣ ಬಯಲು ಮಾಡಲಿದೆ ಎಂದು ತಿಳಿಸಿದರು.

ಆಹಾರ ಅರಸಿ ನಾಡಿಗೆ ಬಂದ ಚಿರತೆ

ರಾಮನಗರ : ಆಹಾರ ಅರಸಿ ಚಿರತೆಯೊಂದು ಕಾಡಿನಿಂದ ನಾಡಿಗೆ ಬಂದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಬೇಲಿಕೋತ್ತನೂರು ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ತಡರಾತ್ರಿ ಜಗದೀಶ ಅವರ ಮನೆಯ ಮುಂಭಾಗದಲ್ಲಿರುವ ರೇಷ್ಮೇ ಗೂಡಿಗೆ ಚಿರತೆ ನುಗಿತ್ತು. ಆಗ ಅಲ್ಲಿದ್ದ ಕೆಲಸಗಾರ ತಮ್ಮಯ್ಯ ಗಂಭೀರ ಗಾಯಗೊಂಡಿದ್ದಾನೆ. ತಕ್ಷಣವೇ ಆತನನ್ನು ರಕ್ಷಿಸಿ , ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಚಿರತೆ ನೋಡಲು ಬಂದ ಸಾಗರ ಎಂಬ ಯುವಕನ ಮೇಲೆ ಚಿರತೆ ದಾಳಿ ನಡೆಸಿದೆ. ಆತನ ಕಿವಿಗೆ ಗಾಯವಾಗಿದೆ. ಕೂಡಲೇ ಮಾಹಿತಿ ಅರಿತ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಗ್ರಾಮಕ್ಕೆ ದೌಡಾಯಿಸಿದ್ದಾರೆ. ಚಿರತೆ ನೋಡಲು ಜನ ಕೂಡ ಹರಿದು ಬರುತ್ತಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಗ್ರಾಮದಲ್ಲಿ ಆತಂಕದ ವಾತವರಣ ನಿರ್ಮಾಣವಾಗಿದೆ.

ರೋಡ್ ರೋಲರ್ ಗೆ ಬಾಲಕ ಬಲಿ

ಬೆಂಗಳೂರು : ರೋಡ್ ರೋಲರ್ ಹರಿದು ಬಾಲಕನೊಬ್ಬ ಮೃತಪಟ್ಟ ಘಟನೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ನಂ 198ರಲ್ಲಿ ನಡೆದಿದೆ. ಹನ್ನೊಂದು ವರ್ಷದ ಮಗು ಮನು ಸೈಕಲ್ ತೆಗೆದುಕೊಂಡು ಹೋಗುವಾಗ ಬಾಲಕ ಬಲಿಯಾಗಿದ್ದಾನೆ. ಕೂಡಲೇ ರೋಡ್ ರೋಲರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಗೆ ಬಿಬಿಎಂಪಿ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ಮೇಯರ್ ಸಂಪತ್ ರಾಜ್ ಮಾತನಾಡಿ, ಘಟನೆಗೆ ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ನೀಡಲು ಕೂಡ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ವಿದ್ಯುತ್ ಪ್ರವಾಹಕ್ಕೆ ಯುವಕ ಬಲಿ

ಹಾವೇರಿ:ಬೋರವೆಲ್ನಲ್ಲಿ ವಿದ್ಯುತ್ ಪ್ರವಾಹ ಸಂಭವಿಸಿದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ. ಸುರೇಶ ಸುಂಕದ (22) ಮೃತ ಯುವಕನಾಗಿದ್ದು, ಯುವಕನ ಸಾವಿಗೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸ್ಥಳೀಯರು ಪುರಸಭೆ ಎದುರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಶಾಸಕರಿಗೆ ಹೋಟೆಲ್ ನಿಂದ ಬಿಡುಗಡೆ ಭಾಗ್ಯ

ಬೆಂಗಳೂರು: ಜೆಡಿಎಸ್- ಕಾಂಗ್ರೆಸ್ ಸಮ್ಮೀಶ್ರ ಸರಕಾರ ರಚನೆಯ ಬಹುಮತ ಸಾಬೀತಾದ ಬಳಿಕ ವಿವಿಧ ಹೋಟೆಲ್ ಹಾಗೂ ರೇಸಾರ್ಟ್ ಗಳಲ್ಲಿ ತಂಗಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಆಪರೇಷನ್ ಕಮಲದ ಭೀತಿಯಿಂದಾಗಿ ಕಳೆದ 10 ದಿನಗಳಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಪ್ರತ್ಯೇಕ ಹೋಟೆಲ್ ಹಾಗೂ ರೇಸಾರ್ಟ್ ಗಳಲ್ಲಿ ತಂಗಿದ್ದರು. ಬಿಜೆಪಿಯ ನಾಯಕರು ತಮ್ಮ ಶಾಸಕರನ್ನು ಸೆಳೆಯುವ ಭೀತಿಯಿಂದ ಕಂಗಾಲಾಗಿದ್ದ ಉಭಯ ಪಕ್ಷಗಳ ನಾಯಕರು ತಮ್ಮ ಶಾಸಕರೊಂದಿಗೆ ಹೋಟೆಲ್, ರೆಸಾರ್ಟ್ನಲ್ಲಿ ಬೀಡುಬಿಟ್ಟಿದ್ದರು. 104 ಸಂಖ್ಯಾಬಲ ಹೊಂದಿದ್ದ ಬಿಜೆಪಿ ಪಕ್ಷವೂ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮೀಶ್ರ ಸರಕಾರವನ್ನು ಅಸ್ಥಿರಗೊಳಿಸುವ ಯತ್ನದಲ್ಲಿದೆ ಎಂದು ಹೇಳಿಕೊಂಡು ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ಅಕ್ಷರಶಃ ನಲುಗಿ ಹೋಗಿದ್ದರು ಹೆಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ವಿಧಾನ ಸಭೆಯಲ್ಲಿ ವಿಶ್ವಾಸ ಮತಯಾಚಿಸಿದ ಬೆನ್ನಲ್ಲೇ ಶಾಸಕರು ನಿಟ್ಟುಸಿರು ಬಿಟ್ಟಿದ್ದು, ಊರುಗಳತ್ತ ಮುಖ ಮಾಡಿದ್ದಾರೆ. ಶನಿವಾರ ಹಾಗೂ ಭಾನುವಾರ ಕ್ಷೇತ್ರವೆಲ್ಲಾ ಸುತ್ತಾಡಿ, ಕಾರ್ಯಕರ್ತರೊಂದಿಗೆ ಹಾಗೂ ಮನೆಯವರೊಂದಿಗೆ ಕಾಲ ಕಳೆಯಲಿದ್ದಾರೆ. ಗೆಲುವು ಸಾಧಿಸಿದ ನಂತರ ಕ್ಷೇತ್ರಗಳತ್ತ ಮುಖ ಮಾಡದ ಶಾಸಕರು ತಮ್ಮ ಕುಟುಂಬಸ್ಥರನ್ನು ಬಿಟ್ಟು ಕಂಗಾಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಅನುಮಾನಾಸ್ಪದ ರೀತಿಯಲ್ಲಿನವ ವಿವಾಹಿತೆ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ನವ ವಿವಾಹಿತೆಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ಮೂಲದ ಸಂಧ್ಯಾ (೨೪) ಮೃತ ಗೃಹಿಣಿಯಾಗಿದ್ದು, ಕಳೆದ ಹಲವು ದಿನಗಳಿಂದ ಗಂಡನ ಜತೆ ಸಣ್ಣಪುಟ್ಟ ಜಗಳವಾಗಿದ್ದವು ಎನ್ನಲಾಗಿದೆ. ಆದ್ರೆ ಪ್ರಶಾಂತನಗರದಲ್ಲಿ ಶುಕ್ರವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾಗಳಿಗೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಬಳ್ಳಾಪುರ ನಗರ ಪೊಲೀಸರು ಪರಿಶೀಲನೆ ನಡೆಸಿ, ಸಂಧ್ಯಾ ಪತಿ ನರಸಿಂಹಮೂರ್ತಿಯನ್ನ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.

ಯಡಿಯೂರಪ್ಪ ಬ್ಲ್ಯಾಕ್ ಮೇಲ್ ಗೆ ಹೆದರಲ್ಲ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಾಲ ಮನ್ನಾ ವಿಚಾರವಾಗಿ ರಾಜ್ಯ ಸರಕಾರಕ್ಕೆ ಡೆಡ್ಲೈನ್ ನೀಡುವ ಮೂಲಕ ಬ್ಲ್ಯಾಕ್ ಮೇಲ್ ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ ಕಿಡಿಕಾರಿದ್ದಾರೆ. ಅವರು ಶುಕ್ರವಾರ ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರೈತರು ಸಾಲಮನ್ನಾ ವಿಷಯದಲ್ಲಿ ಸಂಯಮ ಕಳೆದುಕೊಳ್ಳದೆ, ಶಾಂತಿಯುತವಾಗಿ ವರ್ತಿಸಬೇಕು ಎಂದು ಮನವಿ ಮಾಡಿದರು. ಯಡಿಯೂರಪ್ಪಗೆ ಸಿಎಂ ಆಗಲು ಅಡ್ಡಿಯಾಗಿದ್ದು, ಕಾಂಗ್ರೆಸ್ ಶಕ್ತಿಯೇ ಹೊರತು ನನ್ನಿಂದ ಮಾತ್ರ ಅದು ಆಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು ನಮಗೆ ಡೆಡ್ ಲೈನ್ ಕೊಡಲು ಸಾಧ್ಯವಿಲ್ಲ. ಬಹುಮತ ಸಾಬೀತು ವೇಳೆ ಬಿಜೆಪಿ ಸದಸ್ಯರು ವಾಕ್ ಔಟ್ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಮಾನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಯಡಿಯೂರಪ್ಪ ಅವರು ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಹೇಳುವ ಮೂಲಕ ಕೆಟ್ಟ ಸಂಸದೀಯ ವ್ಯವಹಾರ ಆರಂಭಿಸಿದ್ದಾರೆ. ಇದು ಅವರಿಗೆ ಶೋಭೆ ನೀಡುವುದಿಲ್ಲ. ಅವರು ಹೇಳಿದಂತೆ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಗುಡುಗಿದರು.

ಆರ್ ಆರ್ ನಗರ ವಿಧಾನಸಭಾ ಚುನಾವಣೆಗಿಲ್ಲ ದೋಸ್ತಿ

ಬೆಂಗಳೂರು: 9 ಸಾವಿರಕ್ಕೂ ಹೆಚ್ಚು ನಕಲಿ ಚುನಾವಣೆ ಗುರುತಿನ ಚೀಟಿ ದೊರೆತ ಪರಿಣಾಮ ಮುಂದೂಡಲಾಗಿದ್ದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮತ್ತೇ ಎದುರಾಳಿಗಳಾಗಿವೆ . ಕಾಂಗ್ರೆಸ್ ಮತ್ತು ಜೆಡಿಎಸ್ನ ಚುನಾವಣಾ ಪೂರ್ವ ಮೈತ್ರಿ ಮುರಿದು ಬಿದ್ದ ಹಿನ್ನೆಲೆಯಲ್ಲಿ ಚುನಾವಣೆ ರಂಗೇರಿದ್ದು, ಕಾಂಗ್ರೆಸ್ನಿಂದ ಮುನಿರತ್ನ, ಬಿಜೆಪಿಯಿಂದ ತುಳಸಿ ಮುನಿರಾಜುಗೌಡ ಹಾಗೂ ಜೆಡಿಎಸ್ ನಿಂದ ಜಿ.ಎಚ್.ರಾಮಚಂದ್ರ ಅಖಾಡಕ್ಕೀಳಿದಿದ್ದಾರೆ. ಮೂವರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದ್ದು, ಮೇ 28ರಂದು ಸೋಮವಾರ ನಡೆಯಲಿರುವ ಚುನಾವಣೆಯಲ್ಲಿ ಮೂರು ಪಕ್ಷಗಳ ಬಲಾಬಲ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ. ಜೆಡಿಎಸ್ ಕಾಂಗ್ರಸ್ ಸಮ್ಮೀಶ್ರ ಸರ್ಕಾರ ರಚನೆಯಾದ ಬಳಿಕ ಮೊದಲ ಚುನಾವಣೆ ಇದಾಗಿದ್ದು, ಮತದಾರ ಪ್ರಭು ಯಾರ ಕೈ ಹಿಡಿಯಲಿದ್ದಾರೆ. ಯಾರಿಗೆ ಕೈ ಕೊಡಲಿದ್ದಾನೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿಯನ್ನು ಕಟ್ಟಿ ಹಾಕಬೇಕೆಂಬ ಉದ್ದೇಶದಿಂದ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ಮುಂದಾಗಿದ್ದವು. ಆದರೆ, ಉಭಯ ಪಕ್ಷಗಳ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯಲು ನಿರಾಕರಿಸಿದ ಪರಿಣಾಮ ಜಂಗಿಕುಸ್ತಿಗೆ ಭಾರೀ ಮಹತ್ವ ಬಂದಿದೆ. ಮೇ 31ರಂದು ಈ ಕ್ಷೇತ್ರದ ಜನರು ಭವಿಷ್ಯ ಬರೆಯಲಿದ್ದಾರೆ.

ಹಣ ದುರುಪಯೋಗ ಮಾಡಿಕೊಂಡ 6 ಗ್ರಾ.ಪಂ.ಗಳ ಮೇಲೆ ಪ್ರಕರಣ ದಾಖಲು

ಮಂಗಳೂರು : ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಹಣ ದುರುಪಯೋಗದ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ 6 ಗ್ರಾಮ ಪಂಚಾಯತ್‍ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸ್ವಚ್ಛತಾ ಆಂದೋಲನದ ಜಿಲ್ಲಾ ನೋಡಲ್ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಿಸಿದೆ. ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮ ಪಂಚಾಯತಿನಲ್ಲಿ 2015-16ನೇ ಸಾಲಿನಲ್ಲಿ ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಹಣ ದುರುಪಯೋಗದ ಪ್ರಕರಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಸಂಧ್ಯಾ ರಾಮಚಂದ್ರ, ನಿವೃತ್ತ ಪಂಚಾಯತ್ ಅಭಿವೃದ್ದಿ ಅಧಿಕಾರಿ ದಾಮೋದರ ಗೌಡ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಸಂಪೂರ್ಣ ಸ್ವಚ್ಚತಾ ಅಂದೋಲನ ನೋಡಲ್ ಅಧಿಕಾರಿ ಆಗಿದ್ದ ರೋಹಿತ್ ಎ.ಆರ್. ಮೇಲೆ ಪ್ರಕರಣ ದಾಖಲಾಗಿದೆ. ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮ ಪಂಚಾಯತಿನಲ್ಲಿ 2015-16ನೇ ಸಾಲಿನಲ್ಲಿ ಆದ ದುರುಪಯೋಗದ ಪ್ರಕರಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಎಸ್. ನಾಯಕ್, ಪಿಡಿಓ ಶೀನ. ಎ, ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಸಂಪೂರ್ಣ ಸ್ವಚ್ಚತಾ ಅಂದೋಲನಾದ ನೋಡಲ್ ಅಧಿಕಾರಿ ಆಗಿದ್ದ ರೋಹಿತ್ ಎ.ಆರ್. ಮೇಲೆ ಪ್ರಕರಣ ದಾಖಲಾಗಿದೆ. ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯತಿನಲ್ಲಿ 2015-16ನೇ ಸಾಲಿನಲ್ಲಿ ಆದ ದುರುಪಯೋಗದ ಪ್ರಕರಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಗೀತಾ ಪಿಡಿಓ ಜಗದೀಶ್, ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಸಂಪೂರ್ಣ ಸ್ವಚ್ಚತಾ ಅಂದೋಲನ ನೋಡಲ್ ಅಧಿಕಾರಿ ಆಗಿದ್ದ ರೋಹಿತ್ ಎ.ಆರ್. ರವರ ಮೇಲೆ ಪ್ರಕರಣ ದಾಖಲಾಗಿದೆ. ಪುತ್ತೂರು ತಾಲೂಕಿನ ಬಿಳಿನೆಲೆ ಗ್ರಾಮ ಪಂಚಾಯತಿನಲ್ಲಿ 2015-16ನೇ ಸಾಲಿನಲ್ಲಿ ಆದ ದುರುಪಯೋಗದ ಪ್ರಕರಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶಾರದಾ.ಟಿ, ಪಿ.ಡಿ.ಓ ಸರೋಜಾ, (ಹಾಲಿ: ಕನಕ ಮಜಲು ಗ್ರಾಮ ಪಂಚಾಯತ್), ಗ್ರಾ.ಪಂ. ಕಾರ್ಯದರ್ಶಿ ರಮೇಶ.ಪಿ (ಹಾಲಿ: ಮಂಡೆಕೋಲು ಗ್ರಾಮ ಪಂಚಾಯತ್) ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಸಂಪೂರ್ಣ ಸ್ವಚ್ಚತಾ ಅಂದೋಲನದ ನೋಡಲ್ ಅಧಿಕಾರಿಯಾಗಿದ್ದ ರೋಹಿತ್ ಎ.ಆರ್ ಮೇಲೆ ಪ್ರಕರಣ ದಾಖಲಾಗಿರುತ್ತದೆ. ಪುತ್ತೂರು ತಾಲೂಕಿನ ಕೋಳ್ಅಯ ಗ್ರಾಮ ಪಂಚಾಯತಿನಲ್ಲಿ 2015-16ನೇ ಸಾಲಿನಲ್ಲಿ ಆದ ದುರುಪಯೋಗದ ಪ್ರಕರಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ. ಬಿ, ಪಿ.ಡಿ.ಓ. ಚಿತ್ರಾವತಿ, (ಹಾಲಿ: ಪಿಡಿಓ ಕೊೈಲ ಗ್ರಾಮ ಪಂಚಾಯತ್) ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಸಂಪೂರ್ಣ ಸ್ವಚ್ಚತಾ ಅಂದೋಲನಾದ ನೋಡಲ್ ಅಧಿಕಾರಿ ಆಗಿದ್ದ ರೋಹಿತ್ ಎ.ಆರ್. ಮೇಲೆ ಪ್ರಕರಣ ದಾಖಲಾಗಿದೆ. ಪುತ್ತೂರು ತಾಲೂಕಿನ ಪೆರಾಬೆ ಗ್ರಾಮ ಪಂಚಾಯತಿನಲ್ಲಿ 2015-16ನೇ ಸಾಲಿನಲ್ಲಿ ಆದ ದುರುಪಯೋಗದ ಪ್ರಕರಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಬೇಬಿ.ಸಿ ಪಾಟಾಳಿ, ಪಿ.ಡಿ.ಓ. ಜಿ.ಡಿ ಲಲಿತಾ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ಸಂಪೂರ್ಣ ಸ್ವಚ್ಚತಾ ಆಂದೋಲನಾದ ನೋಡಲ್ ಅಧಿಕಾರಿ ಆಗಿದ್ದ ರೋಹಿತ್ ಎ.ಆರ್. ಮೇಲೆ ಪ್ರಕರಣ ದಾಖಲಾಗಿದೆ. ಈ ಎಲ್ಲಾ ಆರು ಪ್ರಕರಣಗಳನ್ನು ಭ್ರಷ್ಟಾಚಾರ ನಿಗ್ರಹ ದಳ ಪಶ್ಚಿಮ ವಲಯದ ಆರಕ್ಷಕ ಅಧೀಕ್ಷಕಿ ಶ್ರುತಿ ಎನ್.ಎಸ್. ಮಾರ್ಗದರ್ಶನದಲ್ಲಿ, ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‍ಪಿ ಸುಧೀರ್ ಹೆಗಡೆ ದಾಖಲಿಸಿದ್ದು, ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ಕೊಟ್ಟಾರಿ ತನಿಖೆ ನಡೆಸಿರುತ್ತಾರೆ. ಈ ಹಿಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಯೋಗೀಶ್ ಕುಮಾರ್ ಈ ಪ್ರಕರಣಗಳ ವಿಚಾರಣೆ ನಡೆಸಿದ್ದರು. ಎಂದು ಎಸಿಬಿ ತಿಳಿಸಿದೆ.

೧೨ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾಲತಿ ಪಟ್ಟಣಶೆಟ್ಟಿ ಆಯ್ಕೆ

ಧಾರವಾಡ : ಧಾರವಾಡ ಜಿಲ್ಲಾ ೧೨ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಪ್ರೊ ಮಾಲತಿ ಪಟ್ಟಣಶೆಟ್ಟಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಜಿಲ್ಲಾಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ ಅವರ ನೇತೃತ್ವದಲ್ಲಿ ಜಿಲ್ಲಾ ಮತ್ತು ತಾಲೂಕು ಹಾಗೂ ಸಾಹಿತ್ಯ ಆಸಕ್ತರೊಂದಿಗೆ ಮಾಲತಿ ಪಟ್ಟಣಶೆಟ್ಟಿ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿ ಗೌರವಿಸಲಾಯಿತು. ಜೂನ ೨೯-೩೦ ರಂದು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಲಾಗಿರುವ ಈ ಸಮ್ಮೇಳನದಲ್ಲಿ ಯುವಕರನ್ನು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು. ಔಚಿತ್ಯಪೂರ್ಣವಾದ ಗೋಷ್ಠಿಗಳನ್ನು ಆಯೋಜಿಸಲು ತಿಳಿಸಿದರು. ಈ ಸಂದರ್ಭದಲ್ಲಿ ಡಾ. ಜಿನದತ್ತ ಹಡಗಲಿ, ಪ್ರೊ|| ಕೆ.ಎಸ್. ಕೌಜಲಗಿ, ಪ್ರೊ|| ಎಸ್.ಎಸ್ ದೊಡ್ಡಮನಿ, ಸಿ.ಎಮ್. ಚನ್ನಬಸಪ್ಪ, ಎಫ್.ಬಿ. ಕಣವಿ, ವಿಶ್ವೆÃಶ್ವರಿ ಹಿರೇಮಠ, ಶಂಕರ ಕುಂಬಿ, ಪ್ರೊ|| ಎಸ್.ಎನ್. ಭಟ್, ಪ್ರೊ|| ಜಿ.ಜಿ.ನೇಹಲಾನಿ, ಪ್ರೊ|| ಶಂಕರಗೌಡ ಸಾತ್ಮಾರ, ಶ್ರಿÃಧರ ಕುಲಕರ್ಣಿ, ಕೆ.ಎಚ್ ನಾಯಕ, ಸಿ.ಎಮ್. ಕೆಂಗಾರ, ಮುಂತಾದವರು ಉಪಸ್ಥಿತರಿದ್ದರು.

ರಾಜ್ಯ ಮಟ್ಟದ ಸಾಧಕ ಪ್ರಶಸ್ತಿ ಪಡೆದ ಧಾರವಾಡ

ಧರ್ಮಸ್ಥಳ : ೨೦೧೭-೧೮ ನೇ ಸಾಲಿನ ಆರ್ಥಿಕ ವರ್ಷದಲ್ಲಿ ಶ್ರೀಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಟಾನಿಸಿದ ಕೀರ್ತಿಗೆ ಧಾರವಾಡ ಜಿಲ್ಲೆ ಭಾಜನವಾಗಿದೆ. ಸರ್ವಶ್ರೆÃಷ್ಟ ಸಾಧನೆ ಗೈದು ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ಸಾಧಕ ಪ್ರಶಸ್ತಿಯನ್ನುಮುಡಿಗೇರಿಸಿಕೊಂಡ ಜಿಲ್ಲೆಯ ನಿರ್ದೇಶಕ ದಿನೇಶ್ ಎಂ ಅವರಿಗೆ ಧರ್ಮಸ್ಥಳದ ಧರ್ಮಾಧೀಕಾರಿ ಪರಮ ಪೂಜ್ಯ ರಾಜರ್ಷಿ ಡಾ. ಡಿ.ವಿರೇಂದ್ರ ಹೆಗ್ಗಡೆಯವರು ಮತ್ತು ಮಾತೋಶ್ರಿÃ ಹೇಮಾವತಿ ಅಮ್ಮನವರು ವಿತರಿಸಿ, ಆರ್ಶೀವಚಿಸಿದರು. ಈ ಸಂದರ್ಭದಲ್ಲಿ ಕಾರ್ಯನಿರ್ವಹಕ ನಿರ್ದೇಶಕ ಡಾ. ಎಲ್.ಎಚ್.ಮಂಜುನಾಥ್, ಪ್ರಾದೇಶಿಕ ನಿರ್ದೇಶಕ ಎನ್.ಜಯಶಂಕರ ಶರ್ಮಾ ಹಾಗೂ ವಿವಿಧ ಪ್ರಾದೇಶಿಕ ನಿರ್ದೇಶಕರು, ಜಿಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ೧೦೨ ಕೋಟಿ ಲಾಭ

ಧಾರವಾಡ : ಸತತ ಬರಗಾಲದ ಮಧ್ಯೆಯೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ೧೦೨ ಕೋಟಿ ಲಾಭ ಗಳಿಸಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಎಸ್. ರವೀಂದ್ರನ್ ಹೇಳಿದರು. ಅವರು ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬ್ಯಾಂಕಿನ ನಿವ್ಹಳ ಸಂಪತ್ತು ೧೫೯೧ ಕೋಟಿಯಿಂದ ೧೬೯೩ ಕೋಟಿಗೆ ಹೆಚ್ಚಿದೆ ಎಂದರು. ಪ್ರಸಕ್ತವಾಗಿ ೯ ಜಿಲ್ಲೆಯಲ್ಲಿ ೬೩೬ ಶಾಖೆಗಳನ್ನು ಹೊಂದಿದ್ದು, ೭೯ ಲಕ್ಷ ಸಂತೃಪ್ತ ಗ್ರಾಹಕರನ್ನು ಹೊಂದಿದೆ ಎಂದ ಅವರು ೫೪೦೧ ಕೋಟಿ ಸಾಲ ವಿತರಿಸಿದೆ.ಅದರಲ್ಲಿ ರೈತರಿಗೆ ೨೯೬೯ ಕೋಟಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗೆ ೧೪೭೪ ಕೋಟಿ, ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿವ ೫೭೭೩೦ ಉದ್ಯೋಕಾಂಕ್ಷಿಗಳಿಗೆ ೮೦೬ ಕೋಟಿ ಸಾಲ ವಿತರಿಸಲಾಗಿದೆ ಎಂದು ವಿವರಿಸಿದರು. ಒಂಬತ್ತು ಜಿಲ್ಲೆಯಲ್ಲಿ ೪೩ ಗ್ರಾಮಗಳನ್ನು ಡಿಜಿಟಲ್ ಗ್ರಾಮಗಳಾಗಿ ಪರಿವರ್ತಿಸಿದೆ. ಅದನ್ನು ವರ್ಷ ದ ಅಂತ್ಯಕ್ಕೆ ೧೫೦ ಗ್ರಾಮಗಳಿಗೆ ವಿಸ್ತರಿಸುವ ಯೋಜನೆ ಹೊಂದಿದೆ. ೬೫ ಸಾವಿರ ಆಪ್ ಡೌನ್ ಲೋಡ್ ಆಗಿದೆ. ಬ್ಯಾಂಕ್ ೫ ಪುರಸ್ಕಾರಕ್ಕೆ ಪಾತ್ರವಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಮಹಾಪ್ರಬಂಧಕರಾದ ಎಸ್.ಎಂ. ಗೋರಬಾಳ, ಐ.ಜಿ. ಕುಮಾರಗೌಡ, ಸಹಾಯಕ ಮಹಾ ಪ್ರಬಂಧಕ ಶ್ರೀಕಾಂತ ಹೆಗಡೆ, ಕೃಷ್ಣರಾಜ ಅಡಿಗ, ಸಾರ್ವಜನಿಕ ಸಂಪರ್ಕಾಧಿಕಾರಿ ಉಲ್ಲಾಸ ಗುನಗಾ ಉಪಸ್ಥಿತರಿದ್ದರು.

ಕಾಂಗ್ರೆಸ್ ನೊಂದಿಗೆ ಚರ್ಚಿಸಿ ಸಾಲಮನ್ನಾ ಘೋಷಣೆ

ಬೆಂಗಳೂರು : ರೈತರ ಸಾಲ ಮನ್ನಾ ವಿಚಾರವಾಗಿ ನಾನು ಯಡಿಯೂರಪ್ಪ ಅವರಂತೆ ಆತುರದ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದ್ದರೆ ತಕ್ಷಣವೇ ಸಾಲ ಮನ್ನಾ ಪ್ರಕಟಿಸುತ್ತಿದ್ದೆ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಏಕಪಕ್ಷೀಯ ನಿರ್ಧಾರ ಸಾಧುವಲ್ಲ. ಹೀಗಾಗಿ ಕಾಂಗ್ರೆಸ್ ನೊಂದಿಗೆ ಚರ್ಚಿಸಿ ಘೋಷಣೆ ಮಾಡಲಾಗುವುದು ಎಂದರು. ಈಗಾಗಲೇ ಆರ್ಥಿಕ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದು, ಹಣಕಾಸಿನ ಸ್ಥಿತಿಗತಿ ಕುರಿತು ಮಾಹಿತಿ ಕೇಳಿದ್ದೇನೆ. ರೈತರ ವಿಷಯದಲ್ಲಿ ನಾನು ಯಾರಿಂದಲೂ ಹೇಳಿಸಿಕೊಳ್ಳಲು ಸಿದ್ಧನಿಲ್ಲ. ಅವರ ಕಷ್ಟ ಏನೆಂಬುದು ನನಗೆ ಗೊತ್ತು. ಯಡಿಯೂರಪ್ಪನವರು ಸಿಎಂ ಆಗಿ 58 ಗಂಟೆ ಅಧಿಕಾರ ವಹಿಸಿಕೊಂಡು ಏನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರು. ಇದೇ ವೇಳೆ ಸಾಣಿಹಳ್ಳಿ ಮಠದ ಸ್ವಾಮೀಜಿ ಅವರ ಪತ್ರ ನನಗೆ ತಲುಪಿಲ್ಲ. ನಾನು ಎಲ್ಲ ಸ್ವಾಮೀಜಿಗಳ ಮೇಲೆ ಅಪಾರ ಗೌರವ ಹೊಂದಿದ್ದೇನೆ. ನಾನು ಯಾರನ್ನೂ ಲಘುವಾಗಿ ಪರಿಗಣಿಸಿಲ್ಲ. ನನ್ನಿಂದ ಯಾರಿಗಾದರೂ ನೋವಾಗಿದ್ದರೆ. ನನ್ನ ತಪ್ಪಿದ್ದರೆ ಕ್ಷಮೆ ಕೇಳಲು ಸಿದ್ಧ. ಆದರೆ ಈವರೆಗೆ ನನಗೆ ಅವರ ಪತ್ರ ತಲುಪಿಲ್ಲ ಎಂದು ಹೇಳಿದ್ದಾರೆ.

ರೈತರ ಸಾಲಮನ್ನಾ ಘೋಷಣೆ ಮಾಡದ್ದಲ್ಲಿ ಕರ್ನಾಟಕ ಬಂದ್

ಬೆಂಗಳೂರು: ರೈತರ ಸಾಲಮನ್ನಾ ಘೋಷಣೆ ಮಾಡದೇ ಇದ್ದಲ್ಲಿ ಸೋಮವಾರ ಕರ್ನಾಟಕ ಬಂದ್ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಎಚ್ಚರಿಸಿದ್ದಾರೆ. ಶುಕ್ರವಾರ ವಿಶ್ವಾಸ ಮತ ಯಾಚನೆ ವೇಳೆಯಲ್ಲಿ ಸದನದಲ್ಲಿ ಮಾತನಾಡಿದ ಅವರು, ರೈತರ 53 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದೀರಿ. ಸಂಜೆಯೊಳಗೆ ನಿಮ್ಮ ಪ್ರಣಾಳಿಕೆಯಂತೆ ಸಾಲಮನ್ನಾ ಘೋಷಣೆ ಮಾಡದೇ ಇದ್ದರೆ ಸೋಮವಾರ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಸದನದಲ್ಲೇ ಘೋಷಿಸಿ ಎಂದು ಪಟ್ಟು ಹಿಡಿದರು. ವಿಧಾನಸಭೆಯಲ್ಲಿ ಕುಮಾರಸ್ವಾಮಿ ಭಾಷಣಕ್ಕೆ ಪ್ರತಿಯಾಗಿ ಭಾಷಣ ಮಾಡಿದ ಯಡಿಯೂರಪ್ಪ, 2006 ರಲ್ಲಿ ಕುಮಾರಸ್ವಾಮಿ ಜೊತೆ ಕೈ ಜೋಡಿಸಿ ಸರ್ಕಾರ ಮಾಡಿದ್ದು ನನ್ನ ಜೀವನದಲ್ಲಿ ನಾನು ಮಾಡಿದ ದೊಡ್ಡ ಅಪರಾಧ. ಇದಕ್ಕಾಗಿ ನಾಡಿನ ಜನತೆಯ ಕ್ಷಮೆಯಾಚನೆ ಮಾಡುತ್ತಿದ್ದೇನೆ ಎಂದರು. ಸಿದ್ದರಾಮಯ್ಯನವರೇ ನಿಮ್ಮ ವಿರುದ್ಧ ಜಿ.ಟಿ ದೇವೇಗೌಡರನ್ನು ನಿಲ್ಲಿಸಿ ನಿಮ್ಮನ್ನು ಸೋಲಿಸಿ ಅಪಹಾಸ್ಯ ಮಾಡಲಿಲ್ಲವೇ? ಎಂದು ಪ್ರಶ್ನಿಸಿದ ಅವರು ಡಿ.ಕೆ ಶಿವಕುಮಾರ್ ಅವರೇ ನೀವು ಯಾರೂ ಮಾಡದ ಅಪರಾಧ ಮಾಡಿದಿರಿ, ಸಿಎಂ ಆಗಲು ನೀವು ಸಹಕಾರ ಮಾಡಿದಿರಿ. ಆದರೆ ಕುಮಾರಸ್ವಾಮಿಯವರ ಮುಳುಗುವ ದೋಣಿಯಲ್ಲಿ ನೀವು ಮುಳುಗುವುದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಡಿಕೆಶಿಗೆ ಟಾಂಗ್ ನೀಡಿದರು. ಬಳಿಕ ಯಡಿಯೂರಪ್ಪ ಸದನದಿಂದ ವಾಕ್ ಔಟ್ ಮಾಡಿದರು. ಅದಕ್ಕೆ ಬಿಜೆಪಿ ಸದಸ್ಯರು ಸಹ ಕೈಜೋಡಿಸಿ ಅವರ ಹಿಂದೆಯೇ ಹೆಜ್ಜೆ ಹಾಕಿ ಸಭಾತ್ಯಾಗ ಮಾಡಿದರು.

ನಮ್ಮ ತಾಯಿ ಹೆಸರನ್ನು ಎಳೆದು ತರಬೇಡಿ

ಬೆಂಗಳೂರು : ರಾಜಕೀಯ ವಿಷಯದಲ್ಲಿ ದಯವಿಟ್ಟು ನಮ್ಮ ತಾಯಿ ಹೆಸರನ್ನು ಎಳೆದು ತರಬೇಡಿ ಎಂದು ಸಿಎಂ ಹೆಚ್. ಡಿ. ಕುಮಾರಸ್ವಾಮಿ ಹೇಳಿದರು. ಅವರು ಶುಕ್ರವಾರ ಗೃಹ ಕಚೇರಿಯಲ್ಲಿ ಜೆಡಿಎಸ್ ಶಾಸಕ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಅವರು ಎಂದಿಗೂ ಯಾವುದೇ ಪ್ರಚಾರ ಬಯಸಿದವರಲ್ಲ.ಅವರನ್ನು ಅನಗತ್ಯವಾಗಿ ಮಾಧ್ಯಮಗಳು ಬಳಸಿಕೊಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕ್ಷಮಿಸಲು ನಾನ್ಯಾರು ಎಂದು ತಾಯಿಯವರು ಹೇಳಿದನ್ನೇ ಕೆಲವು ಮಾಧ್ಯಮಗಳು ಅವರನ್ನು ನಾನು ಯಾವತ್ತೂ ಕ್ಷಮಿಸಲ್ಲ ಎಂದು ಬರೆದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಮಾಧ್ಯಮಗಳ ವರದಿಯಿಂದ ನನ್ನ ತಾಯಿ ಚೆನ್ನಮ್ಮಾಜಿ ಅವರು ಬಹಳಷ್ಟು ನೊಂದುಕೊಂಡಿದ್ದಾರೆ. ನನ್ನ ಬಳಿ ಅವರು ಈ ಬಗ್ಗೆ ತಮ್ಮ ನೋವು ತೋಡಿಕೊಂಡಿದ್ದಾರೆ. ನನ್ನ ತಾಯಿ ನನಗೆ ಜನ್ಮ ಕೊಟ್ಟಿದ್ದಾರೆ. ಅವರಿಗೆ ಗೌರವ ಕೊಡುವುದು ಮಕ್ಕಳ ಕರ್ತವ್ಯ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರದ ಕಲಾಪ ನಿಭಾಯಿಸುವುದು ಕಷ್ಟಕರ

ಬೆಂಗಳೂರು : ಸಮ್ಮಿಶ್ರ ಸರ್ಕಾರದ ಕಲಾಪ ನಿಭಾಯಿಸುವುದು ಕಷ್ಟಕರ ಕೆಲಸ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು, ಅವರು ಶುಕ್ರವಾರ ವಿಧಾನಸಭೆಯಲ್ಲಿ ನೂತನ ಸ್ಪೀಕರ್ ರಮೇಶ್ ಕುಮಾರ್ಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಈ ಸವಾಲುಗಳನ್ನು ರಮೇಶಕುಮಾರ ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸ ಇದೆ. ಪ್ರತಿಪಕ್ಷ ಸಾಕಷ್ಟು ಬಲಾಡ್ಯವಾಗಿದೆ. ಈ ಸವಾಲು ಯಶಸ್ವಿಯಾಗಿ ನಿಭಾಯಿಸುತ್ತೀರಿ ಎಂದು ಶ್ಲಾಘಿಸಿದರು. ಸದನದಲ್ಲಿ ಚರ್ಚಾ ಸಮಯ ಕಡಿಮೆ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಅದು ಹೆಚ್ಚಾಗಬೇಕು. ಅಭಿವೃದ್ಧಿ ವಿಚಾರವಾಗಿ ಹೆಚ್ಚು ಚರ್ಚೆ ಆಗಬೇಕು. ಹೊಸಬರಿಗೆ ಮಾತನಾಡಲು ಹೆಚ್ಚಿನ ಸಮಯಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಧ್ವನಿಮತದೊಂದಿಗೆ ವಿಶ್ವಾಸಮತ ಸಾಬೀತುಪಡಿಸಿದ ಹೆಚ್ಡಿಕೆ

ಬೆಂಗಳೂರು : ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸಮ್ಮೀಶ್ರ ಸರಕಾರ ಧ್ವನಿಮತದ ಮೂಲಕ ತನ್ನ ವಿಶ್ವಾತಮತ ಸಾಬೀತು ಪಡಿಸಿದೆ. ವಿಶ್ವಾಸಮತ ಗಳಿಸುವಲ್ಲಿ ನೂತನ ಸಿಎಂ ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ ಯಶಸ್ವಿಯಾದರು. ಕುಮಾರಸ್ವಾಮಿಯವರ ಪ್ರಸ್ತಾವನೆ ಅಂಗೀಕರಿಸಲ್ಪಟ್ಟಿದೆ ಹಾಗೂ ಅದನ್ನು ಧ್ವನಿಮತಕ್ಕೆ ಹಾಕಲಾಗಿದೆ ಎಂದು ಸ್ಪೀಕರ್ ರಮೇಶಕುಮಾರ ಘೋಷಣೆ ಮಾಡುತ್ತಿದ್ಧಂತೆ ಎಲ್ಲರೂ ಹೌದು ಪ್ರಸ್ತಾವನೆ ಅಂಗೀಕರಿಸಲಾಗಿದೆ ಎಂದರು. ಬಳಿಕ ಕಲಾಪ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ , ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ನಾಯಕರು ಜೈಲಿಗೆ ಹೋಗ್ತಾರೆ ಎಂಬ ಭಯದಿಂದ ಜೆಡಿಎಸ್ ಗೆ ಬೆಂಬಲ ನೀಡಿದ್ದಾರೆ ಎಂದು ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಇದು ಬಿಜೆಪಿ ರಾಜಕೀಯ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು. ಇದೇ ವೇಳೆಮಾಜಿಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಭಾಷಣಕ್ಕೂ ಕುಮಾರಸ್ವಾಮಿ ಪ್ರತ್ಯುತ್ತರ ನೀಡಿದರು. ಬಿಎಸ್ವೈ ಬಳಸಿದ ಭಾಷೆ ಸರಿಯಿಲ್ಲ. ಅವರು ಇನ್ನು ಮುಂದೆ ಅಧಿಕಾರಕ್ಕೆ ಬರಲ್ಲ. ಹಾಗಾಗಿಯೇ ಅವರು ಇವತ್ತು ಬಯಲು ರಂಗದ ಆಟಕ್ಕೆ ರಿಹರ್ಸಲ್ ಮಾಡ್ತಿದ್ದಾರೆ ಎಂದು ಕುಟುಕಿದರು.

ಸ್ಪೀಕರ್ ಚುನಾವಣೆಗೂ ಬಿಜೆಪಿ ಸ್ಪರ್ಧೆ

ಬೆಂಗಳೂರು : ಸ್ಪೀಕರ್ ಸ್ಥಾನ ಗೆಲ್ಲಲು ಮತಗಳ ಕೊರತೆ ಎದುರಿಸುತ್ತಿರುವ ಬಿಜೆಪಿಯೂ ಮಾಜಿ ಸಚಿವ ಸುರೇಶಕುಮಾರ ಅವರನ್ನು ತನ್ನ ಸ್ಪೀಕರ್ ಅಭ್ಯರ್ಥಿಯಾಗಿ ಕಣಕ್ಕೀಳಿಸಿದೆ. 104 ಶಾಸಕರ ಬಲ ಹೊಂದಿರುವ ಬಿಜೆಪಿಯೂ ಬಹುಮತ ಇಲ್ಲದಿದ್ದರೂ 118 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ತನ್ನ ಅಭ್ಯರ್ಥೀಯನ್ನು ಕಣಕ್ಕಿಳಿಯುವ ಮೂಲಕ ಶೆಡ್ಡು ಹೊಡೆದಿದೆ. ಇದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಳೇಯಕ್ಕೆ ಆತಂಕ ತಂದಿದ್ದು, ಎಲ್ಲಿ ತಮ್ಮ ಶಾಸಕರು ಅವರಿಗೆ ಮತ ಚಲಾಯಿಸುತ್ತಾರೋಎಂಬ ಭೀತಿ ಎದುರಾಗಿದೆ. ಈಗಾಗಲೇ ಕಾಂಗ್ರೆಸ್ ನಿಂದ ಮಾಜಿ ಸಚಿವ ರಮೇಶಕುಮಾರ ಸ್ಪರ್ಧಿಸುವುದು ಖಚಿತವಾಗಿದೆ. ಒಟ್ಟಿನಲ್ಲಿ ಸ್ಪೀಕರ್ ಚುನಾವಣೆಗೂ ಬಿಜೆಪಿ ಸ್ಪರ್ಧಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಮಠಗಳ ಭೇಟಿ ಮುಂದುವರೆಸಿದ ನೂತನ ಸಿಎಂ ಹೆಚ್ಡಿಕೆ

ಬೆಂಗಳೂರು : ಜೆಡಿಎಸ್ ಕಾಂಗ್ರೆಸ್ ಸರಕಾರದ ನೂತನ ಸಿಎಂ ಹೆಚ್ ಡಿ. ಕುಮಾರಸ್ವಾಮಿ ಮಠ ಮಂದಿರಗಳ ಭೇಟಿ ಇಂದು ಕೂಡ ಮುಂದುವರೆಸಿದ್ದಾರೆ. ಬೆಳ್ಳಂ ಬೆಳಗ್ಗೆ ಒಕ್ಕಲಿಗ ಸಮುದಾಯದ ಸ್ವಾಮೀಜಿ ನಂಜಾವಧೂತ ಸ್ವಾಮೀಜಿ ಅವರನ್ನು ಭೇಟಿಯಾಗಿ ಆರ್ಶೀವಾದ ಪಡೆದರು. ಬಳಿಕ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠಕ್ಕೆ ಪ್ರಯಾಣ ಬೆಳೆಸಿ ಅಲ್ಲಿ ಶತಾಯುಷಿ, ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಕೆಲ ಕಾಲ ಶ್ರೀಗಳೊಂದಿಗೆ ಹೆಚ್ ಡಿ ಕೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಸಿದ್ಧಗಂಗಾ ಮಠದ ಕಿರಿಯ ಶ್ರೀ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನಿಂತ ಲಾರಿಗೆ ಕಾರ್ ಡಿಕ್ಕಿ ಹೊಡೆದು ನಿರೂಪಕ ಚಂದ್ರಶೇಖರ ಸಾವು

ದಾವಣಗೆರೆ : ನಿಂತ ಲಾರಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಘಟನೆಯಲ್ಲಿ ರಾಮು ಮತ್ತು ಸುನೀತಾ ಎಂಬುವರಿಗೆ ಗಂಭೀರ ಗಾಯಳಾಗಿದ್ದು, ದಾವಣಗೆರೆ ಖಾಸಗಿ ಆಸ್ಪತ್ರೆ ಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಾವನ್ನಪ್ಪಿದವರನ್ನು ಖಾಸಗಿ ವಾಹಿನಿ ಕಾರ್ಯಕ್ರಮ ನಿರೂಪಕ ಚಂದ್ರಶೇಖರ (೩೪) ಹಾಗೂ ಸಂತೋಷಿ (೨೪) ಎಂದು ಗುರುತಿಸಲಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಈ ಘಟನೆ ಸಂಭವಿಸಿದೆ. ಬೆಂಗಳೂರು ಕಡೆಯಿಂದ ಹುಬ್ಬಳ್ಳಿಗೆ ಹೋಗುತ್ತಿದ್ದರು. ರಸ್ತೆ ಪಕ್ಕಕ್ಕೆ ನಿಂತ ಲಾರಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಈ ಕುರಿತು ಹರಿಹರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಲಿಕೆಯ ಆಯುಕ್ತರ ವಿರುದ್ದ ಪ್ರತಿಭಟನೆ

ಹುಬ್ಬಳ್ಳಿ : ದಲಿತ ಪೌರ ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ವಿರುದ್ದ ಗುರುವಾರ ವಿಭಿನ್ನ ಪ್ರತಿಭಟನೆ ನಡೆಯಿತು. ಕಳೆದ ಎರಡು ತಿಂಗಳಿನಿಂದ ಸರಿಯಾದ ವೇತನ ನೀಡದೆ ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪಾಲಿಕೆಯ ಮುಂದೆ ಧರಣಿ ಕುಳಿತು ಹೋರಾಟ ನಡೆಸಿದ ಪ್ರತಿಭಟನಾಕಾರರು ಮುಖ್ಯ ಧ್ವಾರದ ಮುಂದೆ ಬಾಯಿ ಬಾಯಿ ಬಡಿದುಕೊಂಡು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಕೂಡಲೇ ಬೇಡಿಕೆ ಈಡೇರಿಸುವಂತೆ ಮೇಯರ್ ಗೆ ಮನವಿ ಮಾಡಿದ ಪೌರ ಕಾರ್ಮಿಕರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಇಬ್ರಾಹೀಂ ಮೈಗೂರ ವಿರುದ್ದ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಿಂದ ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ಸ್ಪರ್ಧೆ

ಬೆಂಗಳೂರು : ಸ್ಪೀಕರ್ ಸ್ಥಾನಕ್ಕೆ ರಮೇಶ್ ಕುಮಾರ್ ಅವರನ್ನ ಕಾಂಗ್ರೆಸ್ ಪಕ್ಷದ ವತಿಯಿಂದ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ,ಪರಮೇಶ್ವರ್ ಸೂಚಿಸಿ ಅನುಮೋದನೆ ಮಾಡಿದ್ದೇವೆ. ಇವರು ಒಮ್ಮತದ ಅಭ್ಯರ್ಥಿ ಆಗಿರೋದ್ರಿಂದ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯ ಸುರೇಶಕುಮಾರ ಅವರು ನಾಮಪತ್ರ ವಾಪಸ್ ತಗೋತಾರೆ ಅನ್ಕೊಂಡಿದೀನಿ ಎಂದರು. ೧೯೯ರಿಂದ೧೯೯೯ ರ ವರೆಗೆ ಸಭಾಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಇದೆ. ಉತ್ತಮ ಸ್ಪೀಕರ್ ಅಂತ ಹೆಸರು ಪಡೆದುಕೊಂಡಿದ್ದಾರೆ. ಅಲ್ಲದೆ, ಅವರಿಗೆ ಕಾನೂನು ಜ್ಞಾನ ಇದೆ ಎಂದರು. ರಮೇಶ್ ಕುಮಾರ್ ಗೆ ಸಚಿವ ಸ್ಥಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ಸ್ಪೀಕರ್ ಸ್ಥಾನ ಮೊದಲು ಬರೋದು ಆಮೇಲೆ ಸಚಿವ ಸ್ಥಾನ. ಹೀಗಾಗಿ ಹಿರಿಯರು ಅನುಭವಿಗಳು ಆಗಿರೋದ್ರಿಂದ ಅವರನ್ನ ಸಭಾಧ್ಯಕ್ಷರ ಸ್ಥಾನಕ್ಕೆ ಸೂಚಿಸಲಾಗಿದೆ ಎಂದರು. ಕಾಂಗ್ರೆಸ್-ಜೆಡಿಎಸ್ ಸಮ್ಮೀಶ್ರ ಸರಕಾರ ಐದು ವರ್ಷ ಚೆನ್ನಾಗಿ ನಡೆಯುತ್ತದೆ ಅನ್ನೋ ವಿಶ್ವಾಸ ಇದೆ ಎಂದು ಹೇಳಿದರು.

ಮಮತಾ ಬ್ಯಾನರ್ಜಿಗೆ ಭದ್ರತಾ ಲೋಪ : ಮಾಹಿತಿ ಕೇಳಿದ ನೂತನ ಸಿಎಂ ಹೆಚ್ ಡಿಕೆ

ಬೆಂಗಳೂರು : ಕಾಂಗ್ರೆಸ್ –ಜೆಡಿಎಸ್ ಸಮ್ಮೀಶ್ರ ಸರಕಾರ ರಚನೆ ವೇಳೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರ ಆಗಮನದ ವೇಳೆ ಭದ್ರತಾ ಲೋಪ ಸಂಭವಿಸಿದೆ. ಅದರಿಂದಾಗಿ ಅವರಿಗೆ ಬೆಂಗಳೂರಿನ ಟ್ರಾಫೀಕ್ ಬಿಸಿ ತಗುಲಿತ್ತು. ಚಾಲುಕ್ಯ ವೃತ್ತದಿಂದ ವಿಧಾನ ಸೌಧಕ್ಕೆ ಆಗಮಿಸುವ ವೇಳೆ ಪೊಲೀಸ್ ಭದ್ರತೆ ಒದಗಿಸುವಲ್ಲಿ ವಿಫಲವಾಗಿತ್ತು. ಈ ಸಂಬಂಧ ಅವರು ನೂತನ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರ ಎದುರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಒಂದು ರೀತಿಯಲ್ಲಿ ಇದರಿಂದ ತೀವ್ರ ಮುಜುಗರಕ್ಕೊಳಗಾದ ನೂತನ ಸಿಎಂ ಹೆಚ್ ಡಿ. ಕುಮಾರಸ್ವಾಮಿ ಈ ಸಂಬಂಧ ಡಿಜಿ ಐಜಿ ಜೊತೆಗೆ ಚರ್ಚೆ ನಡೆಸಿ, ಮಾಹಿತಿ ಕೇಳಿದ್ದಾರೆ. ಭದ್ರತಾ ಲೋಪವೆಸಗಿದ ಅಧಿಕಾರಿಗಳಿಗೆ ಕಠಿಣ ಸಂದೇಶ ರವಾನಿಸಿದ್ದಾರೆ.

ಎಚ್. ಕೆ. ಪಾಟೀಲ ಶಾಸಕ ಸ್ಥಾನಕ್ಕೆ ಕಂಟಕ ?

ಬೆಂಗಳೂರು : ನಕಲಿ ಮತದಾನ, ಸತ್ತವರ ಹೆಸರಿನಲ್ಲಿ ಮತದಾನ ಸೇರಿದಂತೆ ವಿವಿಧ ಅಕ್ರಮಗಳ ಮೂಲಕ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಗದಗ ಶಾಸಕ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ ಎಚ್.ಕೆ. ಪಾಟೀಲ ಅವರ ಶಾಸಕ ಸ್ಥಾನಕ್ಕೆ ಇದೀಗ ಕಂಟಕ ಎದುರಾಗಿದೆ. ಗದಗನ ಬಿಜೆಪಿಯ ಪರಾಜಿತ ಅಭ್ಯರ್ಥಿ ಅನೀಲ್ ಮೆಣಸಿನಕಾಯಿ ಅವರು ಸಲ್ಲಿಸಿರುವ ಲಿಖಿತ ದೂರನ್ನು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ರವಾನೆಯಾಗಿದೆ. ಗದಗ ಜಿಲ್ಲಾಧಿಕಾರಿ ಮನೋಜ ಜೈನ್ ಈ ದೂರನ್ನು ರವಾನಿಸಿದ್ದಾರೆ. ಮೇ 22ರಂದು ಅನೀಲ್ ಮೆಣಸಿನಕಾಯಿ ಈ ದೂರನ್ನು ಗದಗ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಅದನ್ನು ಚುನಾವಣಾ ಆಯೋಗಕ್ಕೆ ಗದಗ ಜಿಲ್ಲಾಡಳಿತ ರವಾನಿಸಿದೆ. ಈ ದೂರಿನಲ್ಲಿ ಎಚ್.ಕೆ. ಪಾಟೀಲ ಶಾಸಕತ್ವ ಸ್ಥಾನದಿಂದ ಅನರ್ಹಗೊಳಿಸುವಂತೆ ಮನವಿ ಮಾಡಲಾಗಿದೆ. ಚುನಾವಣಾ ಅಕ್ರಮ ನಡೆದಿದ್ದು, ಅದಕ್ಕೆ ಸಂಭಂದಿಸಿದ ದಾಖಲೆಗಳು ನಮ್ಮ ಬಳಿ ಇವೆ ಎಂದು ಬಿಜೆಪಿ ಹೇಳಿಕೊಂಡಿದೆ. ಇದನ್ನು ಚುನಾವಣಾ ಆಯೋಗ ಯಾವ ರೀತಿ ಪರಿಗಣಿಸುತ್ತದೆ ಎಂಬುದು ಎಲ್ಲರಿಗೂ ತೀವ್ರ ಕುತೂಹಲ ಕೆರಳಿಸಿದೆ.

ಮಕ್ಕಳ ಕಳ್ಳನೆಂದು ಭಾವಿಸಿ ಮನಬಂದಂತೆ ಥಳಿಸಿದ 9 ಜನರ ಬಂಧನ

ಬೆಂಗಳೂರು : ಮಕ್ಕಳ ಕಳ್ಳನೆಂದು ಭಾವಿಸಿ ಮನಬಂದಂತೆ ಥಳಿಸಿದ ಪರಿಣಾಮ ಉತ್ತರ ಪ್ರದೇಶ ಮೂಲದ ಕಾಲೂರಾಮ್ (26) ಎಂಬಾತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ. ಚಾಮರಾಜಪೇಟೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆತನನ್ನು ಸ್ಥಳೀಯರು ಮಕ್ಕಳ ಕಳ್ಳನೆಂದು ಭಾವಿಸಿ, ಬ್ಯಾಟ್, ಕೋಲು, ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಚಾಮರಾಜಪೇಟೆ ಪೊಲೀಸರು 9 ಜನರನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ. ಸ್ಥಳದಲ್ಲಿದ್ದವರ ಮೇಲೆ ಪ್ರಕರಣ ದಾಖಲಿಸಿ, ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಮಕ್ಕಳ ಕಳ್ಳರ ಹೆಸರಿನಲ್ಲಿ ಅಮಾಯಕರು ಹಲ್ಲೆಗೊಳಗಾಗುತ್ತಿರುವ ಘಟನೆಗಳು ರಾಜ್ಯದ ಹಲವಡೆ ವರದಿಯಾಗಿವೆ. ಆದರೂ ಪೊಲೀಸ್ ಇಲಾಖೆ ಮಾತ್ರ ಸುಳ್ಳು ವದಂತಿಗಳಿಗೆ ಜನರು ಕಿವಿಗೊಡಬಾರದು ಎಂದು ಮನವಿ ಮಾಡಿದೆ. ಅಲ್ಲದೆ, ಪ್ರಕರಣ ಸಂಬಂಧ ತನಿಖೆ ನಡೆದಿದೆ ಎಂದು ರಾಜ್ಯಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ತಿಳಿಸಿದ್ದಾರೆ.

ಗದಗ ಜಿಲ್ಲೆಗೂ ಕಾಲಿಟ್ಟ ಬಾವಲಿ ಜ್ವರ ?

ಗದಗ : ಕಳೆದ ಆರು ತಿಂಗಳಿಂದ ಕೇರಳದಲ್ಲಿ ಕೆಲಸ ಮಾಡುತ್ತಿದ್ದ ಗದಗ ಮೂಲದ ವ್ಯಕ್ತಿಯೊಬ್ಬ ಕೆಮ್ಮು ಜ್ವರದಿಂದ ನರಳುತ್ತಿದ್ದ ಹಿನ್ನಲೆಯಲ್ಲಿ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆತನಿಗೆ ಬಾವಲಿ ಜ್ವರ (ನಿಫಾ ವೈರಸ್ ) ತಗುಲಿರುವ ಶಂಕೆ ವ್ಯಕ್ತಪಡಿಸಿರುವ ವೈದ್ಯರು ಆತನ ರಕ್ತದ ಮಾದರಿಯನ್ನು ಪೂನಾಕ್ಕೆ ರವಾನಿಸಿದೆ. ಈಗಾಗಲೇ ರಾಜ್ಯದೆಲ್ಲಡೆ ಕಟ್ಟೆಚ್ಚರ ವಹಿಸಲಾಗಿದ್ದರೂ ಬಾವಲಿ ಜ್ವರ ಗದಗ ಜಿಲ್ಲೆಗೂ ಕಾಲಿಟ್ಟದೆ ಎಂಬ ಶಂಕೆ ವ್ಯಕ್ತವಾಗಿರುವ ಬೆನ್ನ ಹಿಂದೆಯೇ ಜನ ಮತ್ತೇ ಕಂಗಾಲಾಗಿದ್ದಾರೆ. ಬಾವಲಿ ಜ್ವರದ ಹಿನ್ನಲೆಯಲ್ಲಿ ಹಣ್ಣಿನ ವಹಿವಾಟು ಗಣನೀಯವಾಗಿ ಕುಸಿದಿದ್ದು, ವ್ಯಾಪಾರಸ್ಥರು ತತ್ತರಿಸಿ ಹೋಗಿದ್ದಾರೆ.

ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ

ಬೆಂಗಳೂರು : ಯಾವ ಅನೈತಿಕ, ಯಾರು ನೈತಿಕ ಉಳಿಸಿಕೊಂಡಿದ್ದಾರೆ. ನಮಗೂ ಉತ್ತರ ಸಿಗಲ್ಲ. ಅವರಿಗೂ ಉತ್ತರ ಸಿಗಲ್ಲ. ಅವರ ಎದುರು ಉತ್ತರ ಕೊಡುತ್ತೇನೆ. ಹೊಂದಾಣಿಕೆ ಸರಿ ಅನಿಸುವಂತೆ ಮುಂದಿನ ದಿನಗಳಲ್ಲಿ ನಡೆದುಕೊಳ್ಳುತ್ತೇವೆ ಎಂದು ನೂತನ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ನಡೆಸಿದ ಮೊದಲ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಸಮ್ಮೀಶ್ರ ಸರಕಾರ ಸದೃಢವಾಗಿ ನಡೆಯುತ್ತದೆ. ನಾಡಿನ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವ ಆಡಳಿತ ನೀಡುತ್ತೇವೆ. ಸಂಪೂರ್ಣ ಬಹುಮತ ಬರದಿದ್ದರೆ ವಿರೋಧ ಪಕ್ಷಗಳ ಸಾಲಿನಲ್ಲಿ ಕುಳಿತುಕೊಳ್ಳುತ್ತೇವೆ ಎಂದು ಹೇಳಿದ್ದೆ. ಇಂದು ಅಧಿಕಾರದ ಆಸೆಯಿಂದ ನಾನು ಕೈ ಜೋಡಿಸಿಲ್ಲ. ನಾನು ಒಂದು ರೀತಿಯಲ್ಲಿ ಪರಿಸ್ಥಿತಿಯ ಕೂಸಾಗಿದ್ದೇನೆ. ಒಂದು ಹೆಜ್ಜೆ ಇಡಬೇಕಾದರೂ ಸೂಕ್ಷ್ಮವಾಗಿ ಇಡಬೇಕಾಗುತ್ತದೆ ಎಂದರು. ದೇಶಕ್ಕೆ ಮಾದರಿ ಸಮ್ಮೀಶ್ರ ಸರಕಾರ ಕೊಡುತ್ತೇನೆ. ನನ್ನ ಪ್ರಣಾಳಿಕೆ ಬಗ್ಗೆ ಅನೇಕ ಅನುಮಾನಗಳಿವೆ.ರೈತರಿಗೆ, ನಿರುದ್ಯೋಗ, ಹಿರಿಯ ನಾಗರಿಕ ವೇತನ, ಶಿಕ್ಷಣ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರಕಾರದ ಪ್ರಣಾಳಿಕೆ ನೋಡಿ ಹೊಸ ಬಜೆಟ್ ಘೋಷಣೆ ಮಾಡುವನಿದ್ದೇನೆ. ಸಾಲಮನ್ನಾ ಆಗಲ್ಲ ಎಂದು ಹೇಳಿಲ್ಲ. ಆದರೂ ಕೆಲವರು ಅಪಪ್ರಚಾರ ಮಾಡಿದ್ದಾರೆ. ನಮ್ಮದು ಸಮ್ಮೀಶ್ರ ಸರಕಾರ, ಏಕಾಂಗಿಯಾಗಿ ತೀರ್ಮಾನ ಕೈಗೊಳ್ಳಲು ಆಗಲ್ಲ. ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದರು. ವಿರೋಧ ಪಕ್ಷಗಳಿಗೆ ಬೀದಿಗಿಳಿದು ಹೋರಾಟ ಮಾಡಲು ಅವಕಾಶ ನೀಡಲ್ಲ. ನಾನು ಅವರಿಗೆ ಯಾವುದೇ ಅಸ್ತ್ರ ಕೊಡಲ್ಲ. ರೈತರ ಹೆಸರಿನಲ್ಲಿ ಚೈತನ್ಯ ಯಾತ್ರೆ, ಪರಿವರ್ತನೆ ಯಾತ್ರೆ ಮಾಡಿದ್ದೀರಿ. ಈಗ ವಿಶ್ವಾಸಮತ ಯಾಚನೆ ಮಾಡಿದ ನಂತರವೇ ನಮ್ಮ ಸರಕಾರದ ಕಾರ್ಯ ಆರಂಭವಾಗುತ್ತದೆ ಎಂದರು. ರೈತರ ಸಾಲಮನ್ನಾ ಯಾವ ರೀತಿ ಮಾಡಬೇಕು ಎಂಬ ಬ್ಲೂಪ್ರಿಂಟ್ ರೆಡಿಯಾಗಿದೆ. ಆರ್ಥಿಕ ತಜ್ಞರ ಲೆಕ್ಕಚಾರದ ಪ್ರಚಾರ ಹೆಜ್ಜೆ ಹಾಕುತ್ತೇನೆ. ಸರಕಾರ ದಾರಿ ತಪ್ಪಿದೆ ಎಂಬ ಅಭಿಪ್ರಾಯ ಬರಬಾರದು. ಆ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇನೆ. ಪಲಾಯನವಾದ ಮಾಡಲ್ಲ. ಕಾಂಗ್ರೆಸ್ ಅನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ಹೆಜ್ಜೆ ಇಡುತ್ತೇನೆ. ರಾಜಕೀಯ ಬದಿಗಿಟ್ಟು ಕೆಲಸ ಮಾಡುತ್ತೇವೆ ಎಂದು ನೂತನ ಸಿಎಂ ಕುಮಾರಸ್ವಾಮಿ ಪ್ರಕಟಿಸಿದರು.

ಬಿಜೆಪಿಯ ಆಪರೇಶನ್ ಕಮಲ ಆತಂಕ ಇನ್ನೂ ಇದೆ

ಬೆಂಗಳೂರು : ಜನರ ಭರವಸೆ, ನಿರೀಕ್ಷೆಗಳು ಹುಸಿಯಾಗಲು ನಾವು ಎಂದಿಗೂ ಬಿಡಲ್ಲ. ಆದರೆ ನಮಗೆ ಇನ್ನೂ ಬಿಜೆಪಿಯ ಆಪರೇಶನ್ ಕಮಲ ಆತಂಕ ಇದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನ ಹಾಲಿ ಶಾಸಕ ಕೃಷ್ಣ ಭೈರೇಗೌಡ ಅವರ ಅನಿಸಿಕೆಯಾಗಿದೆ. ಅವರು ಬುಧವಾರ ಸಂಜೆ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮೀಶ್ರ ಸರಕಾರ ರಚನೆ ಬೆನ್ನಲ್ಲೇ ಎರಡು ಬಸ್ ಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಮರಳಿ ಹೋಟೆಲ್ ಹಿಲ್ಟನ್ ನತ್ತ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.. ಶುಕ್ರವಾರದ ಬಹುಮತ ಸಾಬೀತು ಆಗುವರೆಗೆ ಕಾಂಗ್ರೆಸ್ ನಾಯಕರಿಗೆ ಆಪರೇಶನ್ ಕಮಲದ ಭೀತಿಯಿದ್ದು, ಅವರಿಂದ ತಮ್ಮ ಶಾಸಕರನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲು ಆಗಿದೆ ಎಂದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್, ನಾವು ದ್ವೇಷ, ಅಸೂಯೆ, ಅಸಹನೀಯತೆ ವಿರುದ್ಧ ಹೋರಾಟ ನಡೆಸಬೇಕಿದೆ. ಬಿಜೆಪಿ ವಿರುದ್ಧ ಇರುವ ಎಲ್ಲ ಪಕ್ಷಗಳು ಒಂದಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ನಾವು ಬಿಜೆಪಿಯನ್ನು ಸೋಲಿಸಬೇಕಾದರೆ ಎಲ್ಲರೂ ಒಂದಾಗಬೇಕು. ಎಲ್ಲ ಪ್ರಗತಿಪರ ಶಕ್ತಿಗಳು ಒಂದೂಗೂಡ್ತಾವೆ. ಅದು ನಮ್ಮ ಸಮ್ಮೀಶ್ರ ಸರಕಾರ ರಚನೆಯಿಂದ ಆರಂಭವಾಗಿದೆ. ದೇಶದ ಪರಿಸ್ಥಿತಿ ಸುಧಾರಣೆಗೆ ಮುನ್ಸೂಚನೆ ಇದಾಗಿದೆ ಎಂದರು.

ಚಹಾಕೂಟದಲ್ಲಿ ಮುಖಾಮುಖಿಯಾದ ನಾಯಕರು

ಬೆಂಗಳೂರು : ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮೀಶ್ರ ಸರಕಾರದ ಪ್ರಮಾಣ ವಚನ ಸಮಾರಂಭಕ್ಕೆ ಸಾಕ್ಷಿಯಾದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ದೇಶದ ನಾನಾ ಭಾಗಗಳ ನಾಯಕರು ಚಹಾಕೂಟದಲ್ಲಿ ಮುಖಾಮುಖಿಯಾದರು. ವಿಧಾನ ಸೌಧದ ಬಾಂಕ್ವೇಟ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಚಹಾಕೂಟದಲ್ಲಿ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ, ತೃಣಮೂಲ ಕಾಂಗ್ರೆಸ್ ನಾಯಕಿ ಹಾಗೂ ಪಶ್ಚಿಮ ಬಂಗಾಲ್ ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇರಳ ಸಿಎಂ ಪಿಣರಾಯಿ ವಿಜಯನ್, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಪುದುಚೇರಿ ಸಿಎಂ ನಾರಾಯಣಸ್ವಾಮಿ, ಬಿಹಾರದ ಜೆಡಿಯೂ ನಾಯಕ ಶರದ್ ಯಾದವ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ, ಲಾಲೂ ಪ್ರಸಾದ ಪುತ್ರ ತೇಜ್ ಪ್ರತಾಪ ಯಾದವ, ಲೋಕಸಭೆ ಶಾಸಕಾಂಗ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಡಪಕ್ಷಗಳ ನಾಯಕ ಸೀತಾರಾಂ ಯಚೂರಿ, ಹೇಮಂತ್ ಸೂರೇನ್, ಕಮಲ್ ಹಾಸನ್, ಎನ್ ಸಿಪಿ ನಾಯಕ ಶರದ್ ಪವಾರ, ಸೇರಿದಂತೆ ಅನೇಕರು ಉಭಯ ಕುಶಲೋಪರಿ ನಡೆಸಿ, ಮುಂದಿನ ನಡೆ ಕುರಿತು ಸೂಕ್ಷ್ಮವಾಗಿ ಅವಲೋಕಿಸಿದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದ ದೂರ ಉಳಿದ ಬಿಜೆಪಿ

ಬೆಂಗಳೂರು : ಘಟಾನುಘಟಿ ನಾಯಕರ ಸಮಾಗಮದ ಮೂಲಕ ದೇಶದ ಗಮನ ಸೆಳೆದ ಜೆಡಿಎಸ್ ಕಾಂಗ್ರೆಸ್ ಸಮ್ಮೀಶ್ರ ಸರಕಾರದ ಪ್ರಮಾಣ ವಚನ ಸಮಾರಂಭದಿಂದ ಬಿಜೆಪಿ ನಾಯಕರು ದೂರ ಉಳಿದಿದ್ದಾರೆ. ಬಿಜೆಪಿಯ ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ರಾಜ್ಯದ ಬಿಜೆಪಿ ಶಾಸಕರು, ಮುಖಂಡರು ಅವರೊಂದಿಗೆ ವೇದಿಕೆ ಹಂಚಿಕೊಳ್ಳದೆ ಅಂತರ ಕಾಯ್ದುಕೊಂಡಿದ್ದಾರೆ. ಆ ಮೂಲಕ ಪರೋಕ್ಷ ಸಂದೇಶ ಸಾರುವ ಕೆಲಸ ಭಾರತೀಯ ಜನತಾ ಪಕ್ಷದ ನಾಯಕರು ಮಾಡಿದ್ದಾರೆ. ಬಿಜೆಪಿಯ ವಿರುದ್ಧ ಬಹಿರಂಗ ಸಮರ ಸಾರಿರುವ ದೇಶದ ಎಲ್ಲ ಪ್ರಮುಖ ಪಕ್ಷಗಳು, ಅದರಲ್ಲೂ ವಿಶೇಷವಾಗಿ ವಿವಿಧ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ನಾಯಕರು ಕಾಂಗ್ರೆಸ- ಜೆಡಿಎಸ್ ನಾಯಕರ ಜೊತೆಗೆ ಹೆಜ್ಜೆ ಹಾಕುವ ಮೂಲಕ ನಿಮ್ಮೋಂದಿಗೆ ನಾವಿದ್ದೇವೆ ಎಂಬ ಸಂದೇಶ ಸಾರಿದ್ದು ವಿಶೇಷವಾಗಿತ್ತು.

ತೃತೀಯ ರಂಗಕ್ಕೆ ಸಾಕ್ಷಿಯಾದ ಬೃಹತ್ ವೇದಿಕೆ

ಬೆಂಗಳೂರು : ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಬಿಎಸ್ಪಿ ನಾಯಕಿ ಮಾಯಾವತಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಕೇರಳ ಸಿಎಂ ಪಿಣರಾಯಿ ವಿಜಯನ್, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಪುದುಚೇರಿ ಸಿಎಂ ನಾರಾಯಣ, ಬಿಹಾರದ ಜೆಡಿಯೂ ನಾಯಕ ಶರದ್ ಯಾದವ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ, ಲಾಲೂ ಪ್ರಸಾದ ಪುತ್ರ ತೇಜ್ ಪ್ರತಾಪ ಯಾದವ, ಲೋಕಸಭೆ ಶಾಸಕಾಂಗ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಡಪಕ್ಷಗಳ ನಾಯಕ ಸೀತಾರಾಂ ಯಚೂರಿ ಸೇರಿದಂತೆ ಅನೇಕರು ಸಾಕ್ಷಿಯಾದರು.

ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪರಮೇಶ್ವರ

ಬೆಂಗಳೂರು : ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರು ರಾಜ್ಯದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ದೇವರ ಹೆಸರಿನಲ್ಲಿ ಡಾ. ಜಿ. ಪರಮೇಶ್ವರ ಅವರು ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ದೇಶದ ನಾನಾ ಭಾಗಗಳ ಘಟಾನುಘಟಿ ನಾಯಕರು ಈ ಪ್ರಮಾಣ ವಚನ ಸಮಾರಂಭಕ್ಕೆ ಸಾಕ್ಷಿಯಾದರು.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹೆಚ್ಡಿಕೆ

ಬೆಂಗಳೂರು : ರಾಜ್ಯದ 25ನೇ ಮುಖ್ಯಮಂತ್ರಿ ಮಣ್ಣಿನ ಮಗ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರ ಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದರು. ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ ಎಂಬ ಹೆಸರಿನವನಾದ ನಾನು ದೇವರ ಹೆಸರಿನಲ್ಲಿ ಹಾಗೂ ಕನ್ನಡ ನಾಡಿನ ಜನರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದು ಹೇಳಿದರು. ಈ ದೇಶದ ಸಾಂವಿಧಾನದ ಗೌರವಕ್ಕೆ ಧಕ್ಕೆ ತರದ ಹಾಗೆ, ಯಾವುದೇ ಪಕ್ಷ ಪಾತ, ರಾಗ ದ್ವೇಷವಿಲ್ಲದೆ, ಕಾರ್ಯನಿರ್ವಹಿಸುತ್ತೇನೆಎಂದು ಪ್ರಮಾಣ ವಚನ ಸ್ವೀಕರಿಸಿದರು.

ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಕಿಡಿ ಕಾರಿದ ಡಿಕೆ ಸುರೇಶ

ಬೆಂಗಳೂರು : ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ ಅವರಿಗೆ ಡಿಸಿಎಂ ಹುದ್ದೆ ನೀಡದಿರುವ ಹೈ ಕಮಾಂಡ್ ನಿರ್ಧಾರಕ್ಕೆ ಸಂಸದ ಹಾಗೂ ಡಿಕೆಶಿ ಸಹೋದರ ಡಿ.ಕೆ ಸುರೇಶ ಕಿಡಿ ಕಾರಿದ್ದಾರೆ. ಕಳೆದ ಕೆಲವು ದಿನಗಳಿಂದ ಹೋಟೆಲ್ ಗಳಲ್ಲಿ ತಮ್ಮ ಅಪಾರ ಬೆಂಬಲಿಂಗರೊಂದಿಗೆ ತಂಗಿದ್ದ ಅವರು ದಿಢೀರ್ ಆಗಿ ಕೋಣೆಗಳನ್ನು ತೆರವು ಮಾಡಿಕೊಂಡು ತೆರಳಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಉಸ್ತುವಾರಿ ಅವರನ್ನು ಸಾಕಷ್ಟು ಸಮಾಧಾನ ಪಡಿಸಿದರೂ ಕ್ಯಾರೆ ಎನ್ನದೆ ಅವರು ಅಲ್ಲಿಂದ ನಿರ್ಗಮಿಸಿದ್ದಾರೆ ಎನ್ನಲಾಗಿದೆ. ತಮ್ಮ ಸಹೋದರ ಹಾಗೂ ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ ಜೆಡಿಎಸ್ ಕಾಂಗ್ರೆಸ್ ಸಮ್ಮೀಶ್ರ ಸರಕಾರ ರಚನೆಗೆ ಮುಂಚೂಣಿ ಪಾತ್ರವಹಿಸಿದ್ದರು. ಅಲ್ಲದೆ, ಶಾಸಕರು ಆಪರೇಶನ್ ಕಮಲಕ್ಕೆ ಬಲಿಯಾಗದಂತೆ ತಡೆಹಿಡಿದಿದ್ದರು. ಇಷ್ಟಾದರೂ ಡಿಸಿಎಂ ಹುದ್ದೆ ನೀಡದಿರುವುದಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.

ವಿಘ್ನ ವಿನಾಯಕನ ದರ್ಶನ ಪಡೆದ ಡಿಸಿಎಂ ಪರಮೇಶ್ವರ

ಬೆಂಗಳೂರು : ಕಾಂಗ್ರೆಸ್ ಜೆಡಿಎಸ್ ಸಮ್ಮೀಶ್ರ ಸರಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಿರುವ ಡಾ. ಜಿ. ಪರಮೇಶ್ವರ ಅವರು ಪತ್ನಿ ಜೊತೆಗೆ ವಿನಾಯಕನ ದೇವಸ್ಥಾನಕ್ಕೆ ತೆರಳಿ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಆರ್ ಟಿ ನಗರದಲ್ಲಿರುವ ವಿಘ್ನ ವಿನಾಯಕನ ದರ್ಶನ ಪಡೆದ ಅವರು ದಂಪತಿ ಕೆಲ ಕಾಲ ದೇವರ ಮೊರೆ ಹೋದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಹುದ್ದೆ ಅಲಂಕರಿಸುತ್ತಿರುವುದರಿಂದ ಶೀಘ್ರದಲ್ಲಿಯೇ ಕೆಪಿಸಿಸಿಗೆ ನೂತನ ಸಾರಥಿ ಆಗಮಿಸಲಿದ್ದಾರೆ. ಈಗಾಗಲೇ ಹೈ ಕಮಾಂಡ್ ಹುದ್ದೆ ತ್ಯಜಿಸುವಂತೆ ಸೂಚನೆ ನೀಡಿದೆ. ನನಗಿಂತ ಸಮರ್ಥ ಅಧ್ಯಕ್ಷರು ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಿಂದ ರಾಜ್ಯಾದ್ಯಂತ ಕರಾಳ ದಿನ

ಬೆಂಗಳೂರು : ಜೆಡಿಎಸ್ ಕಾಂಗ್ರೆಸ್ ಸಮ್ಮೀಶ್ರ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಜನಮತ ವಿರೋಧಿ ದಿನವಾಗಿ ಆಚರಿಸುತ್ತಿದೆ. ಬೆಂಗಳೂರಿನ ಆನಂದ ಸರ್ಕಲ್ ನಲ್ಲಿಮಾಜಿಸಿಎಂ ಯಡಿಯೂರಪ್ಪ ಹಾಗೂ ಆರ್ ಅಶೋಕ,ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಅನೇಕರು ಭಾಗವಹಿಸಿದ್ದು ಕಪ್ಪು ಪಟ್ಟಿ ಧರಿಸಿ ಆಚರಣೆ ಮಾಡಿದರು. ಇದೇ ವೇಳೆ ಬಿಜೆಪಿಯ ಶಾಸಕರು ಹಾಗೂ ಮುಖಂಡರು ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯದ ಜನಾದೇಶದ ವಿರುದ್ಧ ಕಾಂಗ್ರೆಸ್ ಜೆಡಿಎಸ್ ಜೊತೆಗೆ ಸೇರಿ ಅಧಿಕಾರ ಹಿಡಿದಿದೆ ಎಂದು ಆರೋಪಿಸಿದೆ. ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದಲ್ಲೂ ಪ್ರತಿಭಟನೆ ಕಾವು ಜೋರಾಗಿದೆ.

ಕುಮಾರಸ್ವಾಮಿ ಅಧಿಕಾರ ಸ್ವೀಕಾರಕ್ಕೆ ಕ್ಷಣಗಣನೆ

ಬೆಂಗಳೂರು : ಜೆಡಿಎಸ್ ಕಾಂಗ್ರೆಸ್ ಸಮ್ಮೀಶ್ರ ಸರಕಾರದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ವಿಧಾನ ಸೌಧದ ಪೂರ್ವ ಬಾಗಿಲಿನಲ್ಲಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಇದಕ್ಕಾಗಿ ಭವ್ಯ ವೇದಿಕೆ ಸಜ್ಜುಗೊಂಡಿದೆ. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೆಗೌಡರು ಅಂತಿಮ ಕ್ಷಣದ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು. ಅಲ್ಲದೆ, ದೇಶದ ನಾನಾ ಭಾಗಗಳಿಂದ ಆಗಮಿಸಲಿರುವ ಮುಖ್ಯಮಂತ್ರಿಗಳು, ವಿರೋಧಪಕ್ಷಗಳ ನಾಯಕ ಆಗಮನಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಿರುವುದನ್ನು ಖುದ್ಧಾಗಿ ವೀಕ್ಷಣೆ ಮಾಡಿದರು. ಯಾವುದೇ ಕುಂದುಕೊರತೆ ಆಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ಏರುಪೇರು ಆಗದಂತೆ ನೋಡಿ ಮುಂದಿನ ನಡೆ

ಮೈಸೂರು : . ರಾಜ್ಯದ ಆರ್ಥಿಕ ಪರಿಸ್ಥಿತಿ ಏರುಪೇರು ಆಗದಂತೆ ನೋಡಿಕೊಂಡು ಮುಂದಿನ ನಡೆ ಇರಿಸಲಾಗುವುದು. ರೈತರ ಸಾಲಮನ್ನಾ ಕುರಿತು ಯಾರು ಏನೇ ಮಾತನಾಡಿದರೆ ಚಿಂತಿಸಬೇಡಿ. ನನ್ನ ಮೇಲೆ ಯಾವುದೇ ಅನುಮಾನ ಬೇಡ ಎಂದು ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಭಯ ನೀಡಿದ್ದಾರೆ. ಅವರು ಚಾಮುಂಡಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತಾಯಿ ಚಾಮುಂಡೇಶ್ವರಿ ಹಾಗೂ ಶಾರದಾಂಬೆಯ ಆಶೀರ್ವಾದದಿಂದ ಸಮ್ಮೀಶ್ರ ಸರಕಾರ ಅಧಿಕಾರಕ್ಕೆ ಬರುತ್ತಿದೆ. ದೈವ ಪ್ರೇರಣೆಯಿಂದ ಕಾಂಗ್ರೆಸ್ ನಾಯಕರು ಸಮ್ಮೀಶ್ರ ಸರಕಾರ ರಚನೆಗೆ ಅವಕಾಶ ಕಲ್ಪಿಸಿದ್ದಾರೆ ಎಂದರು. ಅವರು ಜವಾಬ್ದಾರಿ ನಿರ್ವಹಣೆ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಅವರಿಗೆ ನಾನು ಆಭಾರಿಯಾಗಿದ್ದೇನೆ. ನಾಡ ದೇವತೆ ಆಶೀರ್ವಾದದಿಂದ ಯಾವುದೇ ಆತಂಕ ಬೇಡ ಎಂದ ಅವರು ರಾಜ್ಯದ ಸಕಲ ಅಭಿವೃದ್ಧಿಗೆ ಕಂಕಣ ಬದ್ಧನಾಗಿದ್ದೇನೆ. ನನ್ನ ಎಲ್ಲ ಕಲ್ಪನೆಗಳ ಸಾಕಾರ ಮಾಡುವ ಜೊತೆಗೆ ಹಿಂದಿನ ಜನಪ್ರಿಯ ಯೋಜನೆಗಳನ್ನು ಮುಂದುವರೆಸುತ್ತೇನೆ. ಕಾಂಗ್ರೆಸ್ ಸರಕಾರದೊಂದಿಗೆ ಕೆಲಸ ನಿರ್ವಹಣೆ ಮಾಡುವಾಗ, ಹೊಂದಾಣಿಕೆ ಅಗತ್ಯ ನಾನು ಯಾವಾಗಲೂ ಅಧಿಕಾರಕ್ಕೆ ಹಪಾಹಪಿ ಪಟ್ಟಿಲ್ಲ ಎಂದರು.

ಚಾಮುಂಡಿಶ್ವೇರಿ ದರ್ಶನ ಪಡೆದ ಹೆಚ್ ಡಿ ಕೆ

ಮೈಸೂರು : ರಾಜ್ಯದ ಜೆಡಿಎಸ್ ಕಾಂಗ್ರೆಸ್ ಸರಕಾರದ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದರು. ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಪತ್ನಿ ಅನಿತಾ ಕುಮಾರಸ್ವಾಮಿ ಸಮೇತ ವಿಶೇಷ ಪೂಜೆ ಸಲ್ಲಿಸಿದ ದೇವಿಯ ಸನ್ನಿಧಿಯಲ್ಲಿ ಕೆಲಕಾಲ ಕಳೆದರು. ಅವರು ತಾಯಿ ಚಾಮುಂಡೇಶ್ವರಿಗೆ ನಮನ ಸಲ್ಲಿಸಿದರು. ಇದಕ್ಕೂ ಮುನ್ನ ಅವರಿಗೆ ದೇವಸ್ಥಾನ ಆಡಳಿತ ಮಂಡಳಿಯ ವತಿಯಿಂದ ವಾದ್ಯ ಘೋಷಗಳೊಂದಿಗೆ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.

ರಾಜ್ಯಕ್ಕೂ ಬಾವಲಿ ಜ್ವರದ ಆತಂಕ

ಮಂಗಳೂರು/ ಮೈಸೂರು : ಈಗಾಗಲೇ ಕೇರಳದಲ್ಲಿ ಭಾರೀ ಆತಂಕ ಸೃಷ್ಟಿಸಿದ ಬಾವಲಿ ಜ್ವರ ರಾಜ್ಯಕ್ಕೂ ಕಾಲಿಡುವ ಆತಂಕ ಈಗಾಗಲೇ ಶುರುವಾಗಿದೆ‌‌. ಈ ನಿಟ್ಟಿನಲ್ಲಿ ಮಂಗಳೂರು ಹಾಗೂ ಮೈಸೂರು ಭಾಗದಲ್ಲಿ ಆರೋಗ್ಯ ಜಾಗೃತಿ ಅಭಿಯಾನ ಆರಂಭಿಸಲಾಗಿದೆ. ಅಧಿಕಾರಿಗಳು ಈ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿದ್ದು, ಜಾಗೂರುಕತೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಕೇರಳದಲ್ಲಿ ನಿಫಾ ಹಿನ್ನೆಲೆಯಲ್ಲಿ ಹೆಚ್. ಡಿ ಕೋಟೆ ತಾಲೂಕಿನ ಗಡಿ ಭಾಗದ ಹಳ್ಳಿಯಲ್ಲಿ ಆರೋಗ್ಯಾಧಿಕಾರಿ ಉದಯಕುಮಾರ್ ಅರಿವು ಮೂಡಿಸಿದ್ದಾರೆ.

ಜೆಡಿಎಸ್ - ಕಾಂಗ್ರೆಸ್ ಸರ್ಕಾರಕ್ಕೆ ಸಾಲಮನ್ನಾ ಸಂಕಷ್ಟ

ಬೆಂಗಳೂರು : ರಾಜ್ಯದಲ್ಲಿ ನಾಳೆಯಿಂದ ಅಧಿಕಾರಕ್ಕೆ ಬರಲಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಸಮ್ಮಿಶ್ರ ಸರ್ಕಾರ ಕ್ಕೆ ಸಾಲಮನ್ನಾ ಸಂಕಷ್ಟ ಎದುರಾಗಿದೆ. ಹೆಚ್.ಡಿ. ಕುಮಾರಸ್ವಾಮಿ ಜೆಡಿಎಸ್ ಅಧಿಕಾರಕ್ಕೆ ಬಂದ ೨೪ ಗಂಟೆಗಳಲ್ಲಿ ರೈತರ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದರು. ೫೨ ಸಾವಿರ ಕೋಟಿ ಮನ್ನಾ ಮಾಡುವ ಭರವಸೆ ನೀಡಿದ್ದರು. ಆದರೆ ಇದೀಗ ಯೂ ಟರ್ನ್ ಹೊಡೆದಿರುವ ಹೆಚ್. ಡಿ ಕುಮಾರಸ್ವಾಮಿ ಬಹುಮತ ಪಡೆದಿದ್ದರೆ ಮಾಡುವುದಾಗಿ ಹೇಳಿದ್ದೆ. ಆದರೂ ಈ ನಿಟ್ಟಿನಲ್ಲಿ ಗಂಭೀರವಾಗಿ ಪರಿಗಣಿಸಿ ಸಾಧ್ಯವಾದಷ್ಟು ಮಟ್ಟಿಗೆ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಬಿಜೆಪಿಯ ನಾಯಕರು ಕುಮಾರಸ್ವಾಮಿ ಹೇಳಿಕೆಗೆ ಮುಗಿ ಬಿದ್ದಿದ್ದು, ಪ್ರಣಾಳಿಕೆ ಬೋಗಸ್ಸಾ, ಹಾಗೂ ನಿಜವಾದ ಬಣ್ಣ ಬಯಲಾಗಿದೆ ಎಂದು ಈಶ್ವರಪ್ಪ ಟೀಕಿಸಿದ್ದಾರೆ.

ಮಾಜಿ ಸಚಿವ ಎಚ್.ಕೆ.ಪಾಟೀಲ್ ತಮ್ಮ ಜಾತಿ ಸ್ಪಷ್ಟ ಪಡಿಸಲಿ

ಹುಬ್ಬಳ್ಳಿ : ಮಾಜಿ ಸಚಿವ ಎಚ್.ಕೆ.ಪಾಟೀಲ್ ತಮ್ಮ ಜಾತಿ ಯಾವುದು ಎಂಬುದು ಸ್ಪಷ್ಟ ಪಡಿಸಬೇಕು. ಅವರು ಈವರೆಗೆ ತಮ್ನ ಜಾತಿಯನ್ನು ಬಹಿರಂಗ ಪಡಿಸಿಲ್ಲ. ಅವರು ಈ ಬಾರಿ ತಿನಕಾಡಿ ಗೆದ್ದಿದ್ದಾರೆ, ಅವರದು ಗೆಲುವು ಅಲ್ಲಾ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಅವರು ಹುಬ್ಬಳ್ಳಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕದ ಅನೇಕ ಕ್ಷೇತ್ರದಲ್ಲಿ ಕಡಿಮೆ ಅಂತರದಲ್ಲಿ ನಮ್ಮ ಅಭ್ಯರ್ಥಿಗಳು ಸೋತಿದ್ದಾರೆ.ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನ ಜನರು ತಿರಸ್ಕಾರ ಮಾಡಿದ್ದಾರೆ. ಆದರೆ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲಾ ಅಂತಾರೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಎಂದು ಕಿಡಿಕಾರಿದರು. ಇನ್ನೂ ಡಿ.ಕೆ.ಶಿ ಹೈಕಮಾಂಡ ಮೇಲೆ ಒತ್ತಡ ಹೇರುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಒಳ ಕುದಿ ಇದೆ. ಇನ್ನೂ ಕೆಲವು ದಿನಗಳಲ್ಲಿ ಅದು ಹೊರಬರಲಿದೆ ಎಂದರು. ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ, ಅದು ಸೋಲು ಕಂಡು ಜೆಡಿಎಸ್ ಮುಂದೆ ಮಂಡಿ ಊರಿದೆ. ಕಾಂಗ್ರೆಸ್ ಹಂತ ಹಂತವಾಗಿ ಅಸ್ತಿತ್ವ ಕಳೆದಕೊಳ್ಳುವದನ್ನು ಬಿಟ್ಟು ಜೆಡಿಎಸ್ ಪಕ್ಷದೊಂದಿಗೆ ವಿಲೀನ ಆಗಬೇಕೆಂದರು. ಇನ್ನೂ ವಿಜಯಪುರ ಜಿಲ್ಲೆಯಲ್ಲಿ ಸಿಕ್ಕ ವಿವಿಪ್ಯಾಟ್ ಬಗ್ಗೆ ಕೂಲಂಕುಷವಾಗಿ ವಿಚಾರಣೆ ಆಗಬೇಕು.ವಿವಿಪ್ಯಾಟ್ ಸಿಕ್ಕ ಬಗ್ಗೆ ಸಿಬಿಐ ತನಿಖೆಯಾಗಬೇಕೆಂದು ಜಗದೀಶ್ ಶೆಟ್ಟರ್ ಒತ್ತಾಯಿಸಿದ್ರು. ಇನ್ನೂ ಕುಮಾರಸ್ವಾಮಿ ಅಧಿಕಾರಕ್ಕೆ ಬಂದ್ರೆ ರೈತರ ಸಾಲ ಮನ್ನಾ ಮಾಡ್ತೆನೆ ಎಂದಿದ್ದರು.ಈಗ ಬಹುಮತ ಬಂದ್ರೆ ಮಾಡ್ತಾ ಇದ್ದೆ ಎಂದು ಯೂ ಟರ್ನ್ ಹೊಡೆದಿದ್ದಾರೆ.ಈ ಸರ್ಕಾರ ಬಹಳ ದಿನ ಹೋಗುವುದಿಲ್ಲ ನಮ್ಮ ಸರ್ಕಾರ ಬಂದಿದ್ದರೆ ಅವಳಿ ನಗರದ ಮಹಾನಗರ ಪಾಲಿಕೆಗೆ ಬರುವ 130 ಕೋಟಿ ಹಣ ಬಿಡುಗಡೆ ಮಾಡಸ್ತಾ ಇದ್ದಿವಿ, ಈಗಲೂ ನಾವು ಸರ್ಕಾರಕ್ಕೆ ಒತ್ತಡ ಹಾಕುತ್ತೆನೆ.ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಶಾಸಕರನ್ನ ಪೈವ್‌ಸ್ಟಾರ್ ಜೈಲಿನಲ್ಲಿ ಇಟ್ಟಿದ್ದಾರೆಂದರು. ಇನ್ನೂ ಅಖಂಡ ಧಾರವಾಡ ಜಿಲ್ಲೆಯ 17 ಕ್ಷೇತ್ರಗಳಲ್ಲಿ 12 ಕ್ಷೇತ್ರದಲ್ಲಿ ಬಿಜೆಪಿ ಗೆಲವು ಸಾಧಿಸಿದ್ದು ಇದು ಉತ್ತಮವಾದ ಸಾಧನೆಯಾಗಿದೆ ಎಂದರು.

ಕೇಂದ್ರ ಸರ್ಕಾರದ ವಿರುದ್ದ ಕ್ರೈಸ್ತ ಗುರು ಸಮರ

ನವದೆಹಲಿ: ಕೇಂದ್ರದ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕ್ರೈಸ್ತ ಗುರುವೊಬ್ಬರು ಸಮರ ಸಾರಿದ್ದಾರೆ.ದೆಹಲಿಯ ಆರ್ಚ್‌ಬಿಷಪ್ ಅನಿಲ್ ಕೌಟೋ ಅವರು, ಈ ಸಮರ ಆರಂಭಿಸಿದ್ದು, ಲೋಕಸಭೆ ಚುನಾವಣೆವರೆಗೆ ಪ್ರಾರ್ಥನಾ ಆಂದೋಲನ ಹಾಗೂ ಶುಕ್ರವಾರದಂದು ಉಪವಾಸಗಳನ್ನು ಆರಂಭಿಸುವುದಾಗಿ ಘೋಷಣೆ ಮಾಡಿದ್ದಾರೆ. ಧಾರ್ಮಿಕ ಹಾಗೂ ಜನಾಂಗೀಯ ಅಲ್ಪಸಂಖ್ಯಾತರ ಹಿತವನ್ನು ಕಡೆಗಣಿಸಿರುವ ಮೋದಿಯ ಬಿಜೆಪಿ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಕ್ರೈಸ್ತರ ಮೇಲಿನ ದಾಳಿಗಳು ಹೆಚ್ಚಾಗಿವೆ. 2017 ರಲ್ಲಿ ಕ್ರೈಸ್ತರ ಮೇಲೆ 736 ದಾಳಿಯಾಗಿವೆ ಎಂದು ಆರೋಪಿಸಿದ್ದಾರೆ. ದೇಶದ ಎಲ್ಲಡೆ ಸರ್ಕಾರದ ವಿರುದ್ಧ ಪ್ರಾರ್ಥನಾ ಸಭೆಗೆ ಕರೆ ನೀಡಿರುವ ಅವರ ಹೇಳಿಕೆಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಗತೊಡಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ದೇಶದ ಪ್ರಜಾ ಸತ್ತೆಗೇ ಅಪಾಯವಿದೆ ಎಂದು ಅವರು ಹೇಳಿರುವ ಅವರು ನಾವು 2019 ರತ್ತ ನೋಟ ಹರಿಸಬೇಕು. ನಾವು ಹೊಸ ಸರ್ಕಾರ ಹೊಂದ ಬೇಕು. ದೇಶಕ್ಕಾಗಿ ಪ್ರಾರ್ಥನೆ ಆರಂಭಿಸಿ ಎಂದು ಬಿಷಪ್ ಅವರು ಕರೆ ನೀಡಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಐದು ವರ್ಷಗಳ ಅವಧಿ 2019 ರ ಮೇನಲ್ಲಿ ಪೂರ್ಣಗೊಳ್ಳಲಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ನಾಳೆ, ನಾಡಿದ್ದು ಇದೆ ಕಾದು ನೋಡಿ ಎಂದ ಬಿಜೆಪಿ ಉಸ್ತುವಾರಿ

ಬೆಂಗಳೂರು : ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಸರಕಾರಕ್ಕೆ ಕಂಟಕ ಕಾದಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಈ ಬಗ್ಗೆ ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಅವರು ಇನ್ನೂ ಇದೆ, ಕಾದು ನೋಡಿ, ನಾಳೆ, ನಾಡಿದ್ದು ಎಂದು ಹೇಳಿರುವುದು ಭಾರೀ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ. ಅವರು ಆ ರೀತಿ ಏಕೆ ಹೇಳಿದ್ದಾರೆ. ಇದರಲ್ಲಿ ಏನಾದರೂ ಮಹತ್ವದ ಬೆಳವಣಿಗೆ ಕಾದಿದೆಯಾ ಎಂಬ ಮಾತುಗಳು ಚರ್ಚೆಗೆ ಗ್ರಾಸವಾಗಿದೆ. ಅವರ ಮಾತುಗಳ ಹಿಂದಿನ ಮರ್ಮವೇನು ಎಂಬುದು ರಾಜಕೀಯ ವಿಶ್ಲೇಷಕರರು ಲೆಕ್ಕಹಾಕುತ್ತಿದ್ದಾರೆ. ಏನೆಲ್ಲಾ ಬೆಳವಣಿಗೆ ಆಗುತ್ತದೆಕಾದು ನೊಡಬೇಕಿದೆ.

ಅಸಮಾಧಾನ ಹೊರ ಹಾಕಿದ ಕೈ ಶಾಸಕರು

ಬೆಂಗಳೂರು : 5 ಲಿಂಗಾಯತ ಶಾಸಕರಿಗೆ ಸಚಿವ ಸ್ಥಾನ ಹಾಗೂ ಒಂದು ಡಿಸಿಎಂ ಹುದ್ದೆ ನೀಡಲು ಪಟ್ಟು ಹಿಡಿದಿರುವ ವೀರಶೈವ ಹಾಗೂ ಲಿಂಗಾಯತ ಶಾಸಕರು ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ನಿನ್ನೇ ರಾತ್ರಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಅಸಮಾಧಾನ ಹೊರ ಹಾಕಿದ ಶಾಸಕರು ನಮಗೆ ಹುದ್ದೆ ಕೊಡದಿದ್ದರೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂದು ಗುಟುರು ಹಾಕಿದ್ದಾರೆ ಎನ್ನಲಾಗಿದೆ. ಅವರನ್ನು ಸಮಾಧಾನ ಪಡಿಸಿರುವ ಸಿದ್ದರಾಮಯ್ಯ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಲಾಗುವುದು. ಅಲ್ಲಿಯವರೆಗೆ ಸಮಾಧಾನದಿಂದ ಕಾಯುವಂತೆ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಹಿರಿಯ ಕಾಂಗ್ರೆಸ್ ನಾಯಕರು ನಿರಾಕರಿಸಿದ್ದಾರೆ. ಸಚಿವ ಸಂಪುಟ ರಚನೆ ಬಗ್ಗೆ ಈವರೆಗೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಚಿವ ಸ್ಥಾನ ಹಂಚಿಕೆ ಕಾಂಗ್ರೆಸ್ ಗೆ ಬಿಟ್ಟದ್ದು ಎಂದ ದೊಡ್ಡ ಗೌಡರು

ಬೆಂಗಳೂರು : ಸಚಿವ ಸ್ಥಾನ ಹಂಚಿಕೆ ಕಾಂಗ್ರೆಸ್ ನಾಯಕರಿಗೆ ಬಿಟ್ಟದ್ದು. ಅದರಲ್ಲಿ ನಾನು ಹಸ್ತಕ್ಷೇಪ ಮಾಡಲ್ಲ ಎಂದು ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೆಗೌಡ ಸ್ಪಷ್ಟಪಡಿಸಿದ್ದಾರೆ. ಅವರು ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಡಿ.ಕೆ. ಶಿವಕುಮಾರಗೆ ಡಿಸಿಎಂ ಸ್ಥಾನ ಬೇಡ ಎಂದಿಲ್ಲ. ಅದು ನನಗೆ ಸಂಬಂಧಿಸಿದ ವಿಷಯವಲ್ಲ. ಅದರಲ್ಲಿ ನಾನು ಭಾಗವಹಿಸುವುದಿಲ್ಲ ಎಂದರು. ನನಗೆ ಸರಕಾರ ಸುಭದ್ರವಾಗಿ ಐದು ವರ್ಷ ನಡೆಸುವುದಷ್ಟೇ ಮುಖ್ಯ. ಅದು ಬಿಟ್ಟು ನಾನು ಯಾವುದೇ ವಿಷಯದಲ್ಲಿ ಮಧ್ಯಪ್ರವೇಶಮಾಡುವುದಿಲ್ಲ. ಅದರಲ್ಲಿ ನನಗೆ ಉತ್ಸಾಹವೂ ಇಲ್ಲ ಎಂದರು. ಇದೇ ವೇಳೆ ನನ್ನ ಪದ್ಮನಾಭನಗರದ ಮನೆಗೆ ಹಿರಿಯ ಅಧಿಕಾರಿಗಳನ್ನು ಕರೆಸಿಕೊಂಡು ನಾನು ಮಾತನಾಡಿಲ್ಲ. ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರು ಅಧಿಕಾರ ಸ್ವೀಕಾರ ಮಾಡಿದ ನಂತರ ಕಂಡಿರಲಿಲ್ಲ. ಹೀಗಾಗಿ ಬಂದು ಮಾತನಾಡಿ ಹೋಗಿದ್ದಾರೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ಅದಕ್ಕೆ ರಾಜಕೀಯ ಬಣ್ಣ ಹಚ್ಚುವುದು ಸರಿಯಲ್ಲ ಎಂದರು.

ಆನಂದ್ ಸಿಂಗ್ ಗೆ ಧೈರ್ಯ ತುಂಬಿದ ಡಿಕೆಶಿ

ಬೆಂಗಳೂರು : ವಿಶ್ವಾಸ ಮತ ಯಾಚನೆ ವೇಳೆ ಬಿಜೆಪಿ ಪರ ವಾಲಿದ್ದ ಹೊಸಪೇಟೆ ಶಾಸಕ ಆನಂದ್ ಸಿಂಗ್ ಅವರನ್ನು ಮಂಗಳವಾರ ಹೊಟೇಲ್ ವೊಂದರಲ್ಲಿ ಪ್ರತ್ಯೇಕವಾಗಿ ಭೇಟಿ ಮಾಡಿದ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ ಮನವೊಲಿಸಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಜೊತೆಗೆ ಹೋಗದಿರಿ. ನಾನು ನಿಮ್ಮೋಂದಿಗೆ ಇದ್ದೇನೆ. ಯಾವ ಐಟಿ ದಾಳಿಗೂ ಹೆದರುವ ಅಗತ್ಯವಿಲ್ಲ. ನಾನು ಅದಕ್ಕೆ ಹೆದರಿ ಸುಮ್ಮನೇ ಕುಳಿತಿಲ್ಲ. ಧೃತಿಗೇಡದಿರಿ. ನಿಮ್ಮೊಂದಿಗೆ ಇಡೀ ಪಕ್ಷವಿದೆ. ನಿಮಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಧೈರ್ಯ ತುಂಬಿದ್ದಾರೆ. ಇದಕ್ಕೆ ಶಾಸಕ ಆನಂದ ಸಿಂಗ್ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಅವರು ಮಾಧ್ಯಮಗಳಿಗೆ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಾಂಗ್ರೆಸ್ –ಜೆಡಿಎಸ್ ಮೈತ್ರಿ ನೈತಿಕ-ಅನೈತಿಕ ಪ್ರಶ್ನೆ ಅಲ್ಲ

ಧರ್ಮಸ್ಥಳ : ಕಾಂಗ್ರೆಸ್-ಜೆಡಿಎಸ್ ಮೈತ್ರಿಸರಕಾರವನ್ನು ಅನೇಕರು ಅನೈತಿಕ ಎನ್ನುತ್ತಿದ್ದಾರೆ. ಇದು ನೈತಿಕ-ಅನೈತಿಕ ಪ್ರಶ್ನೆ ಅಲ್ಲ. ಇದು ಸಂಖ್ಯಾಬಲದ ಆಧಾರದ ಮೇಲೆ ರಚನೆ ಆಗಲಿರುವ ಸರಕಾರ ಎಂದು ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ. ಅವರು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದೇವರ ಅನುಗ್ರಹವಿದ್ದರೆ ನಾಡಿಗೆ ಒಳ್ಳೇಯದಾಗುತ್ತದೆ. ನಾಡಿನಲ್ಲಿ ಮಳೆ ಬೆಳೆ ಸರಿಯಾಗಿ ಆಗಬೇಕು. ರೈತರು ಸುಭಿಕ್ಷೆಯಿಂದ ಬದುಕಬೇಕು ಎಂದು ಪ್ರಾರ್ಥನೆ ಸಲ್ಲಿಸಿದ್ದೆನೆ ಎಂದರು. ಇದೇ ವೇಳೆ ರೈತರ ಸಂಪೂರ್ಣ ಸಾಲಮನ್ನಾ ಕುರಿತಂತೆ ಮಾತನಾಡಿದ ಅವರು, ನಾನು ಜೆಡಿಎಸ್ ಗೆ ಸಂಪೂರ್ಣ ಬಹುಮತ ಬಂದರೆ ಸಾಲಮನ್ನಾ ಮಾಡುವುದಾಗಿ ಹೇಳಿದ್ದೆ. ಆದರೆ ರಾಜ್ಯದ ಜನ ನಮಗೆ ಬಹುಮತ ನೀಡಿಲ್ಲ. ಆದರೂ ರೈತರು ಹೆದರುವ ಅಗತ್ಯವಿಲ್ಲ. ನಾನು ಅವರಿಗಾಗಿ ವಿಶೇಷ ಯೋಜನೆ ಜಾರಿಗೊಳಿಸುತ್ತೇನೆ ಎಂದು ಯೂ ಟರ್ನ್ ಹೊಡೆದರು. ಎತ್ತಿನ ಹೊಳೆ ಯೋಜನೆಗೆ ಸಂಬಂಧಿಸಿದಂತೆ ಕೂಡ ದಂದ್ವ ಹೇಳಿಕೆಯನ್ನು ನೀಡಿದ ಹೆಚ್ ಡಿ ಕೆ ಅದನ್ನು ತಡೆ ಹಿಡಿಯುತ್ತೇನೆ ಎಂದು ಹೇಳಿಲ್ಲ. ಪರಿಸರ ನಾಶ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಧರ್ಮಸ್ಥಳ, ಶೃಂಗೇರಿಗೆ ಭೇಟಿ ನೀಡಿದ ಹೆಚ್ಡಿಕೆ

ಧರ್ಮಸ್ಥಳ/ಶೃಂಗೇರಿ : ನಿಯೋಜಿತ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಮಂಗಳವಾರ ಬೆಳಗ್ಗೆ ಧರ್ಮಸ್ಥಳದ ಮಂಜುನಾಥನಿಗೆ ಹಾಗೂ ಶೃಂಗೇರಿಯ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ದಂಪತಿ ಸಮೇತ ದೇಗುಲ ಭೇಟಿ ನೀಡಿದ ಅವರು ಎರಡು ಸುಕ್ಷೇತ್ರಗಳಲ್ಲಿ ಕೆಲ ಕಾಲ ಪ್ರಾರ್ಥಿಸಿದರು. ಈ ವೇಳೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆ ನಿಯೋಜಿತ ಮುಖ್ಯಮಂತ್ರಿ ಹೆಚ್ ಡಿ. ಕೆ ಅವರಿಗೆ ಆಡಳಿತ ಮಂಡಳಿ ವತಿಯಿಂದ ಅದ್ಧೂರಿ ಸ್ವಾಗತ ಕೋರಿದರು. ಬಳಿಕ ಧರ್ಮಾಧೀಕಾರಿಗಳನ್ನು ದಂಪತಿ ಸನ್ಮಾನಿಸಿ ಗೌರವಿಸಿದರು. ಹೆಚ.ಡಿ. ಕೆ ಅವರಿಗೆ ತಂದೆ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡ,ತಾಯಿ ಚನ್ನಮ್ಮ, ಪತ್ನಿ ಅನಿತಾ ಕುಮಾರಸ್ವಾಮಿ, ಸಹೋದರ ಹೆಚ್.ಡಿ. ರೇವಣ್ಣ, ಸೇರಿದಂತೆ ಅನೇಕರು ಸಾಥ್ ನೀಡಿದರು.

ಅಧಿಕಾರಿಯನ್ನ ಏಕವಚನದಲ್ಲಿ ತರಾಟೆ ತೆಗೆದುಕೊಂಡ ಮಾಜಿ ಮೇಯರ್

ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಸದ ಹಿನ್ನೆಲೆಯಲ್ಲಿ ಜಲಮಂಡಳಿ ವಿರುದ್ಧ ಬಿಜೆಪಿಯವರು ಪ್ರತಿಭಟನೆ ನಡೆಸಿದರು ಧಾರವಾಡದ ಜಲಮಂಡಳಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ, ಮಾಜಿ ಮೇಯರ್ ಶಿವು ಹಿರೇಮಠ ಪಾಲ್ಗೊಂಡಿದ್ದರು. ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳಿಗೆ ಮಾಜಿ ಮೇಯರ್ ಶಿವು ಹಿರೇಮಠ ತರಾಟೆ ತೆಗೆದುಕೊಂಡರು. ಸರ್ಕಾರ ನಿಮಗೆ ಸಂಬಳ ನೀಡುತ್ತದೆ. ಆದ್ರೆ ನೀವು ಸರಿಯಾಗಿ ವಾರ್ಡ್‌ಗೆ ಭೇಟಿ ನೀಡುವುದಿಲ್ಲ ಯಾಕೆ? ಎಂದು ಪ್ರಶ್ನಿಸಿದ ಅವರು ದೂರವಾಣಿ ಕರೆ ಮಾಡಿದ್ರೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಅಧಿಕಾರಿಯನ್ನು ಏಕವಚನದಲ್ಲಿ ತರಾಟೆ ತೆಗೆದುಕೊಂಡರು. ಒದ್ದು ಹೊರ ಹಾಕಬೇಕು ಇವನ್ನನ್ನು. ಇವನು ಕೆಲಸ ಮಾಡೋಲ್ಲ ಯಾವನ್ರೀ ಇವನು ಎಂದು ತರಾಟೆಗೆ ತೆಗೆದುಕೊಂಡ ಮಾಜಿ‌ ಮೇಯರ್ ಶಿವು ಹಿರೇಮಠ ಕಿಡಿ ಕಾರಿದರು. ಯುಜಿಡಿ ವರ್ಕ್ ಯಾವುದೂ‌ ಸರಿಯಾಗಿ ಕೆಲಸ ಆಗಿಲ್ಲ ಬದ್ಮಾಶ್ ಇರುವ ಈ ಅಧಿಕಾರಿಯನ್ನು ತೆಗೆದು ಹಾಕಿ ಎಂದು ಪಟ್ಟು ಹಿಡಿದ ಅವರು ಎಲ್ಲಿಂದೋ ಬಂದು ಇಲ್ಲಿ ಈ ರೀತಿ ಮಾಡಿದ್ರೆ ಸರಿ ಇರೋಲ್ಲ. ಹುಬ್ಬಳ್ಳಿ ಜನ ಹೊರಗೆ ಹಾಕ್ತಾರೆ ಎಂದು ಎಚ್ಚರಿಸಿದರು. ಮಾಜಿ ಮೇಯರ್ ಶಿವು ಹಿರೇಮಠ ಅಧಿಕಾರಿಗಳ ನೀರು ಇಳಿಸಿದರು.

ಕೃಷ್ಣಾ ನದಿ ನೀರು ಕಡಿಮೆಯಾಗಿರುವುದರಿಂದ ಮೋಸಳೆ ಪ್ರತ್ಯಕ್ಷ

ಬೆಳಗಾವಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝಂಜರವಾಡ ಗ್ರಾಮದ ಕೃಷ್ಣಾ ನದಿಯಲ್ಲಿ ನೀರು ಕಡಿಮೆಯಾಗಿರುವುದರಿಂದ ಮೋಸಳೆಯೊಂದು ಪ್ರತ್ಯಕ್ಷವಾಗಿದೆ. ಗ್ರಾಮದ ಕುರನಗಂಡಿ ಸಮೀಪದ ಪಾಯಪ್ಪ ರೊಡ್ಡನವರ ತೋಟದ ನದಿತೀರದಲ್ಲಿ ಮೊಸಳೆ ಪ್ರತ್ಯಕ್ಷ ವಾಗಿತ್ತು. ಕೃಷ್ಣಾ ನದಿ ಬೇಸಿಗೆಯಲ್ಲಿ ನೀರಿಲ್ಲದೆ ತತ್ತರಿಸಿದ್ದರಿಂದ ಜಲಚರಗಳು ಹೊರಗಡೆ ಬರುವುದು ಸಾಮಾನ್ಯ ವಾಗಿದೆ. ಈ ವಾರದಲ್ಲಿ ಮೂರು ಮೊಸಳೆಗಳು ಪ್ರತ್ಯಕ್ಷವಾಗಿವೆ ಇದರಿಂದ ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದೆ. ಆತಂಕ ಗೊಂಡ ಗ್ರಾಮಸ್ಥರೆಲ್ಲರು ಸೇರಿ ಮೊಸಳೆ ಯನ್ನು ಸೆರೆ ಹಿಡಿದು ನಿಟ್ಟುಸಿರು ಬಿಟ್ಟಿದ್ದಾರೆ. ಪ್ರತಿ ಬಾರಿಯೂ ತಾಲೂಕಿನ ಅರಣ್ಯ ಇಲಾಖೆ ಸ್ಥಳಕ್ಕೆ ಆಗಮಿಸಲು ವಿಳಂಬ ಧೋರಣೆ ತೋರಿಸುವುದರಿಂದ ಅಧಿಕಾರಿಗಳ ವಿರುದ್ಧ ವಿರುದ್ಧ ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿದ್ದಾರೆ.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಭೇಟಿ ಮಾಡಿದ ಹೆಚ್.ಡಿ. ಕೆ

ನವದೆಹಲಿ : ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನವದೆಹಲಿ ಯಲ್ಲಿ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದರು. ಬುಧವಾರ ನಡೆಯುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ಅಧಿಕೃತ ಆಹ್ವಾನ ನೀಡಿದ ಅವರು ಬೇಷರತ್ತಾಗಿ ಬೆಂಬಲ ನೀಡಿ ಸರಕಾರ ರಚಿಸಲು ಸಹಕಾರ ನೀಡಿದ್ದಕ್ಕೆ ತುಂಬು ಹೃದಯದ ಅಭಿನಂದನೆ ಸಲ್ಲಿಸಿದರು. ಬಳಿಕ ಕೆಲ ಕಾಲ ಚರ್ಚೆ ನಡೆಸಿದ ಉಭಯ ನಾಯಕರು ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ನಡೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಮಾಲೋಚನೆ ನಡೆಸಿದರು. ಅವರಿಗೆ ರಾಜ್ಯ ಉಸ್ತುವಾರಿ ಕೆ.ಸಿ‌. ವೇಣುಗೋಪಾಲ ಸೇರಿದಂತೆ ಅನೇಕ ನಾಯಕರು ಸಾಥ್ ನೀಡಿದರು. ಇದೇವೇಳೆ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರನ್ನು ಕೂಡ ಕುಮಾರಸ್ವಾಮಿ ಭೇಟಿ ಮಾಡಿ ಸಹಕಾರ ನೀಡಿದಕ್ಕೆ ಅಭಿನಂದನೆ ಸಲ್ಲಿಸಿ, ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿದರು.

ಬಿಜೆಪಿ ನನಗೆ ಸಚಿವ ಸ್ಥಾನದ ಭರವಸೆ ನೀಡಿತ್ತು ಎಂದ ಬಿ.ಸಿ. ಪಾಟೀಲ

ಬೆಂಗಳೂರು: ರಾಜ್ಯ ಬಿಜೆಪಿ ನಾಯಕರು ನನಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿ, ತಮ್ಮ ಪಕ್ಷದೊಂದಿಗೆ ಬರಲು ಹೇಳಿದ್ದರು ಎಂದು ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ್ ಆರೋಪಿಸಿದ್ದಾರೆ. ಅವರು ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮೊಳಕಾಲ್ಮೂರು ಬಿಜೆಪಿ ಶಾಸಕ ಬಿ. ಶ್ರೀರಾಮುಲು ಅವರು ನನ್ನೊಂದಿಗೆ ಮಾತುಕತೆ ನಡೆಸಿರುವುದು ಸತ್ಯ ಎಂದಿದ್ದಾರೆ. ಆದರೆ ನಾನು ಅವರ ಆಸೆ ಆಮಿಷಕ್ಕೆ ಬಲಿಯಾಗಲಿಲ್ಲ ಎಂದ ಅವರು ನನಗೆ ಈ ಹಿಂದೆ ಸೋಲಿಸುವಾಗ ನಾನು ಲಿಂಗಾಯತ ಎಂಬುದು ನೆನಪಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಕೆಲ ದಿನಗಳ ಹಿಂದೆ ಕಾಂಗ್ರೆಸ್ ವಕ್ತಾರ ವಿ.ಎಸ್. ಉಗ್ರಪ್ಪ ಅವರು ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಅವರೊಂದಿಗೆ ಬಿಜೆಪಿ ನಾಯಕರು ನಡೆಸಿದ ಸಂಭಾಷಣೆಯ ಧ್ವನಿ ಸುರಳಿ ಬಿಡುಗಡೆ ಮಾಡಿ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಪಾಕ್ ಪರ ಜೈಕಾರ

ಮಂಗಳೂರು: ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ದಿನ ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಪಾಕಿಸ್ತಾನ ಪರ ಜೈಕಾರ ಹಾಕಿರುವುದು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ. ಸಂಭ್ರಮಾಚರಣೆ ವೇಳೆ ಪಾಕ್ ಪರ ಘೋಷಣೆ ಮೊಳಗಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೋ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಪೊಲೀಸ್ ಕಮೀಷನರ್ಗೆ ದೂರು ನೀಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾಜಿ ಶಾಸಕ ಜೆ.ಆರ್. ಲೋಬೋ ಅವರು, ಅಂದು ಸಂಭ್ರಮಾಚರಣೆ ವೇಳೆ ಮಾಧ್ಯಮ ಮಿತ್ರರು ಹಾಗೂ ಪೊಲೀಸ ಕೂಡ ಇದ್ದರು. ಅಂದು ಕಾಂಗ್ರೆಸ್ ಪಕ್ಷಕ್ಕೆ ಜೈಕಾರ ಹಾಕಲಾಗಿತ್ತು. ದೇಶದ್ರೋಹದ ಕೆಲಸ ಕಾಂಗ್ರೆಸ್ ಕಾರ್ಯಕರ್ತರು ಮಾಡುವುದಿಲ್ಲ ಎಂದು ಸಮರ್ಥಿಸಿಕೊಂಡರು. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ ಬಳಿಕವಷ್ಟೇ ಸತ್ಯಾಂಶ ಹೊರ ಬರಲಿದೆ.

ಯಾವ ಸಮಯದಲ್ಲಿ ಬೇಕಾದರೂ ಚುನಾವಣೆ ಬರಬಹುದು

ಸಂತೆಬೆನ್ನೂರ : ರಾಜ್ಯದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆ ಬರಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ. ಅವರು ದಾವಣಗೆರೆ ಜಿಲ್ಲೆಯ ಸಂತೆ ಬೆನ್ನೂರನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ ಜನತೆಗೆ ಸೋಲಿನ ಕಾರಣ ತಿಳಿಸುತ್ತೇನೆ. ನಾನು ಮತ್ತೇ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಈಗಾಗಲೇ ನಾವು 104 ಸೀಟ್ ಗೆದ್ದಿದ್ದೇವೆ. ಕೇವಲ 8 ಸೀಟು ಕಡಿಮೆ ಇದೆ ಎಂಬುದನ್ನು ಮನವರಿಕೆ ಮಾಡಿ ಮತ್ತೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸರಕಾರ ಎಷ್ಟು ದಿನ ಇರುತ್ತೇದೆ ಗೊತ್ತಿಲ್ಲ. ನೀವು ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ. ನಿಮ್ಮೋಂದಿಗೆ ನಾನಿದ್ದೇನೆ ಎಂದು ಬಿಜೆಪಿಯ ಅಭಿಮಾನಿಗಳಿಗೆ ಹಾಗೂ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ.

ಕಾಂಗ್ರೆಸ್ –ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ

ನವದೆಹಲಿ : ಕಾಂಗ್ರೆಸ್ ವಿರುದ್ಧ ಕೆಲವು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಜೆಡಿಎಸ್, ಜೆಡಿಎಸ್ ವಿರುದ್ಧ ಕಾಂಗ್ರೆಸ್ ಕೂಡ ಕೆಲವು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇದು ಯಾವ ಸಂದೇಶ ಸಾರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಿಡಿ ಕಾರಿದ್ದಾರೆ. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಸ್ಪರ ಕಚ್ಚಾಡಿ, ವಾಗ್ದಾಳಿ ನಡೆಸಿ ಇಂದು ಸರಕಾರ ರಚನೆ ಮಾಡಿಕೊಂಡು ಮೈತ್ರಿ ಸರಕಾರ ನಡೆಸುವ ಸ್ಥಿತಿ ಬಂದಿರುವುದು ಇದು ಜನರ ಗೆಲುವು ಅಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಗೆಲುವಲ್ಲ ಎಂದು ಗುಡುಗಿದರು. ಆ ಎರಡು ಪಕ್ಷಗಳ ನಾಯಕರು ನಾಡಿನೆಲ್ಲಡೆ ವಿಜಯೋತ್ಸವ ಆಚರಿಸುತ್ತಿರುವುದು ಏಕೆ. ಅವರ ಸಚಿವರು, ಮುಖ್ಯಮಂತ್ರಿಗಳು ಸೋಲು ಅನುಭವಿಸಿದ್ದಕ್ಕೆ ಸಂಭ್ರಮಾಚರಣೆ ಮಾಡುತ್ತಿದ್ದಾರೆಯೇ ಎಂದು ಕುಟುಕಿದರು. ಜೆಡಿಎಸ್ ಕೆಲವು ಕಡೆ ಠೇವಣಿ ಕಳೆದುಕೊಂಡಿದೆ. ಅದಕ್ಕಾಗಿ ಸಡಗರನಾ ಎಂದು ಪ್ರಶ್ನಿಸಿದರು. ಜನರ ಮುಂದೆ ತಮ್ಮ ಸ್ಪಷ್ಟ ನಿಲುವು ತಿಳಿಸಬೇಕು. ಚುನಾವಣೆಯ ಮುನ್ನವೇ ಎರಡು ಪಕ್ಷಗಳಿಗೆ ಸೋಲಿನ ಭೀತಿ ಇತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೂ ಭಾಷಾ, ಕನ್ನಡ ಬಾವುಟ, ಲಿಂಗಾಯತ ಧರ್ಮ ಒಡೆಯುವ ಕೆಲಸ, ಧನ, ಜಾತಿ ಬಳಸಿಕೊಳ್ಳಲಾಗಿದೆ. ಚುನಾವಣೆಯಲ್ಲಿ ಅವರು ಯಾವ ರೀತಿ ಗೆದ್ದಿದ್ದಾರೆ ಎಂಬುದು ಅಪಹಾಸ್ಯದ ಸಂಗತಿಯಾಗಿದೆ ಎಂದು ವಾಗ್ದಾಳಿ ನಡೆಸಿದ ಅವರು ಜೆಡಿಎಸ್ ಕಾಂಗ್ರೆಸ್ ಹೊಂದಾಣಿಕೆಯನ್ನು ಅನೈತಿಕ ಸಂಬಂಧ ಎಂದು ಜರಿದಿದ್ದಾರೆ.

ಲಿಂಗೈಕ್ಯ ಮಹಾಂತಪ್ಪ ಶ್ರೀಗಳಿಗೆ ಬಿಎಸ್ ವೈ ಅಂತಿಮ ನಮನ

ಬಾಗಲಕೋಟೆ: ಇಳಕಲ್ ನ ಮಹಾಂತ ಮಠದ ಲಿಂಗೈಕ್ಯ ಶ್ರೀ ಮಹಾಂತಪ್ಪ ಅವರ ಪಾರ್ಥಿವ ಶರೀರಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸೋಮವಾರ ಅಂತಿಮ ನಮನ ಸಲ್ಲಿಸಿದರು. ಸಕಲ ಸರ್ಕಾರಿ ಗೌರವದೊಂದಿಗೆ ಮಹಾಂತಪ್ಪ ಶ್ರೀಗಳ ಅಂತ್ಯಕ್ರಿಯೆ ನೆರವೇರಿಸಲಾಯಿತು. ಬಿಎಸ್ವೈ ಸಮ್ಮುಖದಲ್ಲಿ ಜಿಲ್ಲಾಡಳಿತದಿಂದ ಸರ್ಕಾರಿ ಗೌರವ ಸಲ್ಲಿಸಲಾಯಿತು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಪರಮ ಪೂಜ್ಯ ಮಹಾಂತಪ್ಪಗಳಿಗೆ ಗೌರವ ನಮನ ಸಲ್ಲಿಸಲಾಯಿತು. ಅವರಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕ ಬಿಜೆಪಿ ನಾಯಕರು, ನಾಡಿನ ಹರಗುರುಚರಮೂರ್ತಿಗಳು ಸಾಥ್ ನೀಡಿದರು. ಬಳಿಕ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಭ್ರಷ್ಟ ಮಂತ್ರಿಗಳು ಸೋತಿರುವುದು ಸ್ವಾಗತಾರ್ಹ

ಧಾರವಾಡ : ರಾಜ್ಯದ ಹದಿನಾರು ಭ್ರಷ್ಟ ಮಂತ್ರಿಗಳನ್ನು ಪ್ರಜ್ಞಾವಂತ ಮತದಾರರು ಸೋಲಿಸಿರುವುದು ಸ್ವಾಗತಾರ್ಹ ಎಂದು ಎಸ್.ಆರ್. ಹಿರೇಮಠ ಬಣ್ಣಿಸಿದ್ದಾರೆ. ಅವರು ಧಾರವಾಡದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿನಯ ಕುಲಕರ್ಣಿ ಅಂತಹ ವ್ಯಕ್ತಿ ಮಂತ್ರಿ ಅಲ್ಲ ಶಾಸಕ ನಾಗಲೂ ಕೂಡ ಯೋಗ್ಯನಲ್ಲ, ಅವರ ಜೊತೆಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ವೇದಿಕೆ ಹಂಚಿಕೊಳ್ಳಲು ಹಿಂದೇಟು ಹಾಕಿದರು ಎಂದು ಗುಡುಗಿದರು. ಇದೇ ವೇಳೆ ಸಂತೋಷ ಲಾಡ್ ಸಿ ಕೆಟಗಿರಿ ಮೈನಿಂಗ್ ನಲ್ಲಿ ಗಣಿ ಲೂಟಿ ಮಾಡಿದ್ದಾರೆ. ಅವರು ಸಚಿವನಾಗಲೂ ನಾಲಾಯಕ್. ಆದರೂ ಸೋನಿಯಾ ಗಾಂಧಿ ಮನವೊಲಿಸಿ ಮತ್ತೆ ಸಚಿವ ನಾದ ಎಂದು ಕಿಡಿ ಕಾರಿದ ಅವರು ಹೆಚ್. ಸಿ. ಮಹದೇವಪ್ಪ ಮರಳು ಮಾಫಿಯಾದ ಕಿಂಗ್ ಪಿನ್, ಅವರ ಮಗ ಬೋಸ್ ಕೂಡ ಶಾಮೀಲು ಆಗಿದ್ದರು. ಅದೇ ರೀತಿ ಸೊಕ್ಕಿನ ಸ್ವಭಾವದ ಮತ್ತು ಅಧಿಕಾರ ದುರುಪಯೋಗ ಮಾಡಿಕೊಂಡ ಕೆ.ಬಿ. ಕೋಳಿವಾಡ ಕೂಡ ತುಂಗಭದ್ರಾ ಒಡಲು ಬರಿದು ಮಾಡಿದ ದುರಂಹಕಾರಿ ಎಂದು ಆರೋಪಿಸಿದರು. ಅದೇ ರೀತಿ ಸಮಾಜ ಕಲ್ಯಾಣ ಇಲಾಖೆ ಹಾಳು ಮಾಡಿದ ಭ್ರಷ್ಟ ಮಂತ್ರಿ ಆಂಜನೇಯ ಸೋಲು ಅನುಭವಿಸಿರುವುದು ಸಮಾಧಾನ ತಂದಿದೆ ಎಂದರು. ಇದೇ ವೇಳೆ ಬಿಜೆಪಿಯ ಹಿಂದಿರುವ ದುಷ್ಟ ಶಕ್ತಿ ನರೇಂದ್ರ ಮೋದಿಯವರು ಅಮಿತ್ ಶಾ ಅವರು ನಾವು ಹೇಗಾದರೂ ಗೆಲುವು ಸಾಧಿಸುತ್ತೇವೆ ಎಂಬ ದುರಂಹಕಾರ ಇತ್ತು. ಅವರು ೧೦೪ ಕ್ಕೆ ನಿಂತಿರುವುದು ಸರಿಯಾಗಿದೆ ಎಂದರು. ಪ್ರಧಾನ ಮಂತ್ರಿ ಸರಿಯಾಗಿ ಮಾತನಾಡಬೇಕು. ಆ ಸ್ಥಾನಕ್ಕೆ ಅಗೌರವ ತಂದ ಅವರು. ದೇಶದ ಕೆಟ್ಟ ಗಂಡಾತರ ಗಳಿಗೆ ತಂದಿಟ್ಟಿದೆ ಮೋದಿ ಸರಕಾರ ಎಂದ ಅವರು ವಾರ್ ತರಹ ಅಂತ ಹೇಳಿ ಕಪ್ಪು ಹಣ, ಭ್ರಷ್ಟರಾದ ಮಾಜಿ ಸಚಿವ ರಡ್ಡಿ ಸಹೋದರರ ಜೊತೆಗೆ ಕೈ ಜೋಡಿಸಿರುವುದು ನಾಚಿಕೆಗೇಡಿನ ಸಂಗತಿ.ಅವರ ಸಹೋದರ ನ್ಯಾಯಾಧೀಶರಿಗೆ ಹಣದ ಆಮಿಷ ಒಡ್ಡಿದ ಸೋಮಶೇಖರ ರಡ್ಡಿ ಸುರೇಶ ಬಾಬು ಜೊತೆಗೆ ಜೊತೆಗೆ ವೇದಿಕೆ ಹಂಚಿಕೊಂಡ ಮೋದಿ, ಅಮಿತ್ ಶಾ ನಡೆ ದುರಂತದ ಸಂಗತಿ ಎಂದು ಎಸ್ ಆರ್ ಹಿರೇಮಠ ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ನೇತೃತ್ವದ ಹೊಸ ಸರಕಾರ ಗಣಿ ಹಣ ವಸೂಲಿ ಮಾಡಲಿ

ಧಾರವಾಡ : ಹಿಂದಿನ ಸಿದ್ದರಾಮಯ್ಯ ನೇತತ್ವದ ಕಾಂಗ್ರೆಸ್ ಸರಕಾರ ಒಂದು ಲಕ್ಷ ಕೋಟಿ ರಿಕವರಿ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಹೀಗಾಗಿ ಈಗಿನ ಕುಮಾರಸ್ವಾಮಿ ನೇತೃತ್ವದ ಹೊಸ ಸರಕಾರ ಅದನ್ನು ವಸೂಲಿ ಮಾಡಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಒತ್ತಾಯಿಸಿದರು. ಅವರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹದಿಮೂರು ಸಾವಿರ ಕೋಟಿಯನ್ನು ಸುಪ್ರೀಂ ಕೋರ್ಟ್ ವಸೂಲಿ ಮಾಡಿ ಕೊಟ್ಟಿದೆ. ಅದನ್ನು ಅಲ್ಲಿನ ಜನರ ಆರೋಗ್ಯ ಸುಧಾರಣೆ, ಪರಿಸರ ಸುಧಾರಣೆಗೆ ಬಳಸಿಕೊಳ್ಳಲಾಗಿದೆ ಎಂದರು. ಈ ಹಿಂದೆ ಸಚಿವ ಹೆಚ್.ಕೆ ಪಾಟೀಲ ನೇತೃತ್ವದ ಸಮಿತಿ ಯಾವುದೇ ನಿರೀಕ್ಷಿತ ಕೆಲಸ ಕಾರ್ಯ ಮಾಡಲಿಲ್ಲ. ಹಾಗೂ ಸಿದ್ದರಾಮಯ್ಯ ಏನೂ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ರಾಹುಲ್ ಗಾಂಧಿಯವರಿಗೆ ಸಹ ಪತ್ರ ಬರೆಯಲಾಗಿದೆ. ಈಗಲೂ ಕಾಲ ಮಿಂಚಿಲ್ಲ. ಈಗಲಾದರೂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಕ್ರಮ ಕೈಗೊಳ್ಳಲು ಸಹಮತ ವ್ಯಕ್ತಪಡಿಸಬೇಕು ಎಂದರು. ಇದರೊಂದಿಗೆ ಬಲಹೀನಗೊಂಡಿರುವ ಲೋಕಾಯುಕ್ತ ವನ್ನು ಶಕ್ತಿಯುತ ಮಾಡಬೇಕು ಎಂದು ಹೇಳಿದ ಎಸ್.ಆರ್. ಹಿರೇಮಠ ಅವರು ಬಿಜೆಪಿ ಮುಕ್ತ ಆರ್ ಎಸ್ ಎಸ್ ಮುಕ್ತ ಭಾರತ ಆದರೆ ಹೆಚ್ಚು ಸಂತಸ ಆಗುತ್ತದೆ. ಅದರಲ್ಲೂ ಕಾಂಗ್ರೆಸ್ ಮುಕ್ತ ಭಾರತಕ್ಕೆ ನಮ್ಮದು ತಕರಾರು ಇಲ್ಲಎಂದರು. ಪ್ರಧಾನಿ ಮೋದಿ ನಡವಳಿಕೆ, ಸರಿಯಲ್ಲ. ಅವರು ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ. ಕಾರ್ತಿ ಚಿದಂಬರಂ ಮಾದರಿಯಲ್ಲಿಯೇ ಎಸ್.ಎಂ. ಕೃಷ್ಣ ಯಡ್ಡಿ, ರಡ್ಡಿನ ಬಿಡಬಾರದು ಎಂದು ಗುಡುಗಿದರು. ಕುಮಾರಸ್ವಾಮಿ ಸರಕಾರಕ್ಕೆ ಜಾಗೃತಿಯಿಂದ ಹಾಗೂ ಸಂಕೋಚದಿಂದ ಸ್ವಾಗತಿಸುತ್ತೇವೆ. ತಪ್ಪು ಮಾಡಿದ್ದನ್ನು ತಿದ್ದುಕೊಂಡು ನಾಡಿನ ಜನರ ಮುಂದೆ ನಿಮ್ಮ ಇಡಬೇಕು. ಹೊಸ ಸರಕಾರ ಗಣಿ ಹಗರಣದ ಹಣ ಲೂಟಿ ಮಾಡಿದವರಿಂದ ಪೈಸಾ ಪೈಸಾ ವಸೂಲಿ ಮಾಡಬೇಕು. ಸಿದ್ದರಾಮಯ್ಯ ಇದಕ್ಕೆ ಅಗತ್ಯ ಸಹಕಾರ ನೀಡಬೇಕು. ಇಲ್ಲದಿದ್ದರೆ ತಟಸ್ಥ ಉಳಿಯಬೇಕು. ಜೊತೆಗೆ ಸಂತೋಷ ಹೆಗ್ಡೆಯವರು ನೀಡಿದ ವರದಿ ಜಾರಿಗೊಳಿಸಲು ಹಿರೇಮಠ ಒತ್ತಾಯ ಮಾಡಿದರು.

ಆಪರೇಶನ್ ಕಮಲ ವಿಡಿಯೋ ಟೇಪ್ ತನಿಖೆಗೆ ಒತ್ತಾಯ

ಧಾರವಾಡ : ಆಪರೇಶನ್ ಕಮಲ ವಿಡಿಯೋ ಟೇಪ್ ಹಿಂದೆ ಯಾರು ಇದ್ದಾರೆ ಎಂಬುದು ತನಿಖೆಯಾಗಲೇ ಬೇಕು. ಇದು ಗಂಭೀರವಾದ ಪ್ರಕರಣ, ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿದೆ ಎಂದು ಹಿರಿಯ ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಆಪಾದಿಸಿದ್ದಾರೆ. ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅವುಗಳ ಪರಿಶೀಲನೆ ನಡೆಸಿ ಅದಕ್ಕೆ ತಾತ್ವಿಕ ಅಂತ್ಯಕ್ಕೆ ಒಯ್ಯಬೇಕು. ನ್ಯಾಯಾಧೀಶರ ಮೂಲಕ ನಾಲ್ಕು ಧ್ವನಿ ಮುದ್ರಣ ತನಿಖೆ ನಡೆಸಲು ಒತ್ತಾಯ ಮಾಡಿದರು. ಇದೇ ವೇಳೆ ರಾಜ್ಯಪಾಲ ವಜುಬಾಯಿ ವಾಲಾ ವಿರುದ್ಧ ಕಿಡಿ ಕಾರಿದ ಅವರು ಅವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲದ ಹಾಗೆ ಕಾಣುತ್ತಿದೆ. ಒಬ್ಬ ಬಿಜೆಪಿಯ ಕಾರ್ಯಕರ್ತರ ಹಾಗೆ ವರ್ತಿಸುವ ಮೂಲಕ ಹುದ್ದೆ ಗೌರವ ಹರಾಜು ಹಾಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅವರು ತಮ್ಮ ಸ್ಥಾನಕ್ಕೇ ತಾವಾಗಿಯೇ ರಾಜೀನಾಮೆ ನೀಡಿ ಹೋಗಬೇಕು ಇಲ್ಲದಿದ್ದರೆ ರಾಷ್ಟ್ರಪತಿ ಅವರನ್ನು ವಜಾಗೊಳಿಸಬೇಕು. ಅವರು ಸಂವಿಧಾನದ ಗೌರವ ಕಳಚಿದ್ದಾರೆ. ಹೀಗಾಗಿ ನಾವೆಲ್ಲ ಹೋರಾಟ ನಡೆಸಬೇಕು ಎಂದು ಹೇಳಿದರು.

ಮೇ ೨೬, ೨೭ರಂದು ಎರಡು ದಿನಗಳ ಕಾಲ ಮೇ ಸಾಹಿತ್ಯ ಮೇಳ

ಧಾರವಾಡ : ಗದಗದ ಲಡಾಯಿ ಪ್ರಕಾಶನ, ಕವಲಕ್ಕಿಯ ಕವಿ ಪ್ರಕಾಶನ ಹಾಗೂ ಧಾರವಾಡದ ಚಿತ್ತಾರ ಕಲಾ ಬಳಗದ ವತಿಯಿಂದ ಮೇ ೨೬ ರಿಂದ ಎರಡು ದಿನಗಳ ಕಾಲ ಬಹುತ್ವ ಭಾರತ ಇಂದು ಮತ್ತು ನಾಳೆ ವಿಷಯದ ಮೇಲೆ ಮೇ ಸಾಹಿತ್ಯ ಮೇಳ ಆಯೋಜಿಸಲಾಗಿದೆ ಎಂದು ಲಡಾಯಿ ಪ್ರಕಾಶನದ ಬಸವರಾಜ ಸೂಳೀಬಾವಿ ತಿಳಿಸಿದರು. ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೇ ೨೬ ರಂದು ಬೆಳಿಗ್ಗೆ ೧೦ ಗಂಟೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ತೆಲಂಗಾಣದ ಲೇಖಕಿ ಓಲ್ಗಾ ಅವರು ಮೇಳಕ್ಕೆ ಚಾಲನೆ ನೀಡಲಿದ್ದಾರೆ. ನಟ ಪ್ರಕಾಶ ರೈ ದಿಕ್ಸೂಚಿ ಭಾಷಣ ಮಾಡಲಿದ್ದು, ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಎರಡು ದಿನಗಳ ಈ ಮೇಳದಲ್ಲಿ ೨೬ ಪುಸ್ತಕ ಬಿಡುಗಡೆಗೊಳ್ಳಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಸ್.ಜಿ.ಸಿದ್ದರಾಮಯ್ಯ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಇನ್ನೂ ಸಂವಿಧಾನದ ಸವಾಲುಗಳು, ಸಾಹಿತಿ-ಸಾಹಿತ್ಯ-ಸಿದ್ದಾಂತ ಸೇರಿದಂತೆ ವಿವಿಧ ವಿಷಯಗಳ ಕುರಿತು ಗೋಷ್ಠಿಗಳು, ಕವಿ ಗೋಷ್ಠಿ ನಡೆಯಲಿವೆ ಎಂದರು. ಮೇ ೨೭ ರಂದು ಸಂಜೆ ಜರುಗುವ ಮೇಳದ ಸಮಾರೋಪ ಸಮಾರಂಭದಲ್ಲಿ ಯುವ ಕವಿ ಲಕ್ಮೀನಾರಾಯಣ ಸ್ವಾಮಿ ಅವರಿಗೆ ವಿಭಾ ಸಾಹಿತ್ಯ ಪ್ರಶಸ್ತಿ ಹಾಗೂ ಕಲಬುರಗಿಯ ಕೆ.ನೀಲಾ ಅವರಿಗೆ ಬಂಡ್ರಿ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಎರಡೂ ಪ್ರಶಸ್ತಿಗಳು ೫೦೦೦ ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ತಿಳಿಸಿದರು. ಈ ಎರಡು ದಿನಗಳ ಕಾಲ ವಿವಿಧ ವಿಷಯಗಳ ಮೇಲೆ ಸಂವಾದ, ನಡೆಯಲಿದೆ. ದೆಹಲಿಯಿಂದ ಶಿವಪ್ರಕಾಶ್, ಅನೀಲ್ ಬನ್ ಭಟ್ಟಾಚಾರ್ಯ, ತಮಿಳುನಾಡಿನ ಕಣ್ವಂ ಸುಂದರನ್, ಮಹಾರಾಷ್ಟ್ರದ ರಾಮ್ ಕುಮಾರ, ಸೇರಿದಂತೆ ದಕ್ಷಿಣ ಭಾರತದ ಪ್ರಗತಿ ಪರ ಸಂಘಟನೆಯ ಮುಖಂಡರು, ಚಿಂತಕರು, ಹೋರಾಟಗಾರರು ಆಗಮಿಸಲಿದ್ದಾರೆ, ಪ್ರತಿನಿಧಿಗಳು ಈಗಾಗಲೇ ನೂರಾರು ಪ್ರತಿನಿಧೀಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದರು. ಮೇ ೨೭ರಂದು ನಾಡಿನ ವಿವಿಧ ಕಲಾವಿದರು ರಚಿಸಿದ ಬಹುತ್ವದ ಭಾರತದ ಚಿತ್ರ ಕಲಾ ಪ್ರದರ್ಶನ ನಡೆಯಲಿದೆ ಎಂದು ಮೇ ಸಾಹಿತ್ಯ ಮೇಳದ ಸಂಘಟಕ ಬಸವರಾಜ ಸೂಳಿಬಾವಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ರಂಜಾನ್ ದರ್ಗಾ, ಸಾಹಿತಿಗಳಾದ ಮಾಲತಿ ಪಟ್ಟಣಶೆಟ್ಟಿ, ವಕೀಲ ಪಿ.ಎಚ್. ನೀರಲಕೇರಿ, ಶಂಕರಗೌಡ ಸಾತ್ಮಾರ, ವಿಶ್ವನಾಥ ಚಿಂತಾಮಣಿ, ಕೆ.ಎಚ್. ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

5 ವರ್ಷ ಸುಭದ್ರ ಆಡಳಿತ ನೀಡಲು ಸಂಕಲ್ಪ

ಹಾಸನ : 5 ವರ್ಷ ಸುಭದ್ರ ಆಡಳಿತ ನೀಡಲು ಸಂಕಲ್ಪ ಮಾಡಿದ್ದೇನೆ, ಇದಕ್ಕೆ ಎಲ್ಲರ ಸಹಕಾರ ಬೇಕಿದೆ ಎಂದು ನಿಯೋಜಿತ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ಅವರು ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಮನೆ ದೇವರ ದರ್ಶನ ಪಡೆಯುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಬಾರಿ ಸಿಎಂ ಹುದ್ದೆ ನಿಭಾಯಿಸುವುದು ದೊಡ್ಡ ಸವಾಲು ಎಂಬುದು ನನಗೆ ಗೊತ್ತಿದೆ. ಎಲ್ಲರ ಅಭಿಪ್ರಾಯಗಳನ್ನು ನಾನು ಗಮನಿಸುತ್ತಿದ್ಸೇನೆ ಎಂದ ಅವರು ಯಾರೂ ನನ್ನನ್ನು ನಿದ್ರೆಗೆಡಿಸಲು ಆಗಲ್ಲ ಎಂದು ಶ್ರೀರಾಮುಲುಗೆ ತಿರುಗೇಟು ನೀಡಿದರು. ದೇವರ ಅನುಗ್ರಹ, ಹೆತ್ತವರ ಆಶೀರ್ವಾದ ದಿಂದ ನಾಡಿನ ಜನರ ಸೇವೆ ಮಾಡೋ ಅವಕಾಶ ಸಿಕ್ಕಿದೆ. ಹೀಗಾಗಿ ನಾನು ಹುಟ್ಟಿ ಬೆಳೆದ ಊರಿನ ಹೊಳೆ ನರಸೀಪುರ ದ ಲಕ್ಷ್ಮಿ ನರಸಿಂಹ ಸ್ವಾಮಿ, ಸ್ಹಗ್ರಾಮ ಹರದನಹಳ್ಳಿ ಶಿವನ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದರು. ಮಧ್ಯಾಹ್ನ ದೆಹಲಿಗೆ ಹೋಗಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮಾಯಾವತಿ ಭೇಟಿ ಮಾಡುವೆ ಎಂದರು. ನನಗೆ ಬೆಂಬಲ ನೀಡಿರುವ ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆ ಮಾಡುವೆ ಎಂದು ತಿಳಿಸಿದ್ದಾರೆ.

ಭೀಕರ ಅಪಘಾತದಲ್ಲಿ 7 ಜನ ಸಾವು

ತುಮಕೂರು : ಬೆಳಗಿನ ಜಾವ ನಡೆದ ಭೀಕರ ಅಪಘಾತದಲ್ಲಿ 7 ಜನ ಸಾವನ್ನಪ್ಪಿದ ಘಟನೆ ಹಿರಿಯೂರು-ಶಿರಾ ತುಮಕೂರು ಮಾರ್ಗದ ಎನ್.ಹೆಚ್-48 ರಸ್ತೆ ಜೈಹಿಂದ್ ಡಾಬಾ ಬಳಿ ನಡೆದಿದೆ. ಲಾರಿಗೆ ಹನುಮಾನ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿದ್ದ ಅನುಷ (7 ) ಸವಿತಾ ಕೋಂ. ಸೋಮಶೇಖರ್, (೨೧), ರತ್ನಮ್ಮ ಕೋಂ. ಕುಮಾರ್, (38 ) ಸುಮಲತ ಕೋಂ. ಲಿಂಗರಾಜು,( 21), ಗಿರಿಜಮ್ಮ ಕೋಂ. ದೇವರಾಜು,( 5೦) ಶಂಕರ ಬಿನ್ ಈಶ್ವರಪ್ಪ, (35) ಅಶ್ವಥನಾರಾಯಣ ಬಿನ್ ಸುಬ್ಬರಾಯಪ್ಪ,( 40 ) ಮೃತಪಟ್ಟಿದ್ದಾರೆ. 10 ಕ್ಕೂ ಹೆಚ್ಚು ಮಂದಿ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಇನ್ನು ಜಾಸ್ತಿಯಾಗುವ ಸಂಭವ ಹೆಚ್ಚಾಗಿದೆ. ತುಮಕೂರು ಸಾವ೯ಜನಿಕ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರನ್ನು ತುಮಕೂರು ಹಾಗು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಿಗಂಧೂರು ಚೌಡೇಶ್ವರಿ ದೇವಸ್ಥಾನಕ್ಕೆ ಹೋಗಿ ವಾಪಸ್ ಊರಿಗೆ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ. ಈ ಬಗ್ಗೆ ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಜಿಲ್ಲಾ ಫೋಲಿಸ್ ವರಿಷ್ಟಾದಿಕಾರಿ ಡಾ ದಿವ್ಯ ಗೋಪಿನಾಥ್,ಹೆಚ್ಚುವರಿ ಫೋಲಿಸ್ ವರಿಷ್ಟಾದಿಕಾರಿ ಡಾ.ಶೋಭಾ ರಾಣಿ. ಡಿವೈ ಎಸ್ಪಿ ವೆಂಕಟೇಶ್ ನಾಯ್ಡು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯಪುರದಲ್ಲಿ 8 ವಿವಿ ಪ್ಯಾಟ್ ಪತ್ತೆ

ವಿಜಯಪುರ : ವಿಜಯಪುರ ಜಿಲ್ಲೆಯ ಮನಗೂಳಿ ಗ್ರಾಮದ ಶೆಡ್ ವೊಂದರಲ್ಲಿ 2017ರ 8 ವಿವಿ ಪ್ಯಾಟ್ಗಳು ಪತ್ತೆಯಾಗಿವೆ. ಇದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದು, ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಮಾಹಿತಿ ಅರಿತು ಸ್ಥಳಕ್ಕೆ ದೌಡಾಯಿಸಿದ ವಿಜಯಪುರ ಜಿಲ್ಲಾಧಿಕಾರಿ ಎಸ್. ಬಿ ಶೆಟ್ಟಣ್ಣವರ ಅವರಿಗೆ ಗ್ರಾಮಸ್ಥರು ಘೇರಾವ್ ಹಾಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಬಬಲೇಶ್ವರ ಬಿಜೆಪಿ ಪರಾಜಿತ ಅಭ್ಯರ್ಥಿ ವಿಜು ಪಾಟೀಲ ಹಾಗೂ ಮೂರು ಕ್ಷೇತ್ರಗಳ ಪರಾಜಿತ ಅಭ್ಯರ್ಥಿಗಳು ಇದರ ಹಿಂದೆ ಗೋಲ್ ಮಾಲ್ ಇದೆ ಎಂದು ಆರೋಪ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೂಡ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. 8 ವಿವಿ ಪ್ಯಾಟ್ ಪತ್ತೆಯಾಗಿರುವುದರಿಂದ ಚುನಾವಣೆಯಲ್ಲಿ ಭಾರೀ ಗೋಲ್ ಮಾಲ್ ಆರೋಪ ಕೇಳಿ ಬಂದಿದೆ.

ಗಂಗಾವತಿಯಲ್ಲಿ ಅನ್ಸಾರಿ ಬೆಂಬಲಿಗರಿಂದ ದಾಂದಲೆ

ಕೊಪ್ಪಳ : ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಬಿಜೆಪಿ ಬೆಂಬಲಿತರಾದ ಸಂಜೀವ ಗೌಳಿ ಹಾಗೂ ಬಾಳಪ್ಪ ಗೌಳಿ ಅವರ ಮೇಲೆ ಮಾಜಿ ಸಚಿವ ಇಕ್ಬಾಲ್ ಇನ್ಸಾರಿ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಇದರಿಂದ ಗಾಯಗೊಂಡ ಇಬ್ಬರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಈ ಇಬ್ಬರು ಸಹೋದರರ ಮೇಲೆ ಸೋಲಿನಿಂದ ಕಂಗಲಾದ ಇಕ್ಬಾಲ್ ಅನ್ಸಾರಿ ಬೆಂಬಲಿಗರು ಹಲ್ಲೆ ಮಾಡಿ ಗುಂಡಾಗಿರಿ, ನಡೆಸಿದ್ದಾರೆ. ಗುಂಡಪ್ಪ ಕ್ಯಾಂಪ್ನಲ್ಲಿ ಈ ಘಟನೆ ನಡೆದಿದ್ದು ಬಿಜೆಪಿ ಅರ್ಭ್ಯರ್ಥಿ ಪರಣ್ಣ ಮುನವಳ್ಳಿಗೆ ಮತ ಹಾಕಿದ್ದರಿಂದ ಗಂಗಾವತಿಯೂ ಬೂದಿ ಮುಚ್ಚಿದ ಕೆಂಡದಂತಿದೆ ಎನ್ನಲಾಗಿದೆ.

ಖಾತೆ ಹಂಚಿಕೆಯ ಬಗ್ಗೆ ಚರ್ಚೆಯಾಗಿಲ್ಲ ಎಂದ ಸಿದ್ದರಾಮಯ್ಯ

ಬೆಂಗಳೂರು : ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮೀಶ್ರ ಸರಕಾರದ ರಚನೆ ಆಗುವರೆಗೆ ಯಾವುದೇ ಖಾತೆ ಹಂಚಿಕೆ ಪ್ರಶ್ನೇಯೇ ಇಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈವರೆಗೆ ಸಚಿವ ಸಂಪುಟದ ಖಾತೆ ಹಂಚಿಕೆಯ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಮಾತುಕತೆ ನಡೆಸಿ ಮುಂದಿನ ಹೆಜ್ಜೆ ಇರಿಸಲಾಗುವುದು. ಮೊದಲು ಸರಕಾರ ರಚನೆಯಷ್ಟೇ ಆದ್ಯತೆಯಿದೆ. ಈಬಗ್ಗೆ ಗೊಂದಲಗಳಿಲ್ಲ ಎಂದರು. ಇದಕ್ಕೆ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಜಗುಚಂದ್ರ ಕೂಡ್ಲ ದತ್ತಿ ನಿಧಿ ಸ್ಥಾಪನೆ

ಧಾರವಾಡ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ರಂಗಕರ್ಮಿ ಜಗುಚಂದ್ರ ಕೂಡ್ಲ ಅಭಿಮಾನಿ ಬಳಗದಿಂದ ೭೦ ಸಾವಿರ ರೂ ದತ್ತಿ ನಿಧಿ ಸ್ಥಾಪಿಸಲಾಯಿತು. ಜಗುಚಂದ್ರ ಕೂಡ್ಲ ಅಭಿಮಾನಿಗಳ ಬಳಗದ ಶಂಕರ ಕುಂಬಿ ಡಿಡಿ ಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿಯವರಿಗೆ ಹಸ್ತಾಂತರಿಸಿದರು. ಈ ಹಣದಿಂದ ಬರುವ ಬಡ್ಡಿ ಹಣದಲ್ಲಿ ಪ್ರತಿವರ್ಷ ಅವರ ಪುಣ್ಯಸ್ಮರಣೆ ಅಂಗವಾಗಿ ಪ್ರತಿವರ್ಷ ಏಪ್ರಿಲ್ ೧೨ ರಂದು ‘ರಂಗ ದಿನೋತ್ಸವದ’ ನೆನಪಿಗಾಗಿ ರಂಗಕ್ಷೆÃತ್ರದಲ್ಲಿ ಸಾಧನೆಗೈದವರನ್ನು ಗುರುತಿಸಿ, ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅವರ ಸ್ಮರಣಾರ್ಥ ನಾಟಕ, ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗುವುದು ಎಂದು ಲಿಂಗರಾಜ ಅಂಗಡಿ ಹೇಳಿದರು. ಅಭಿನಯ ಭಾರತಿಯ ಅರವಿಂದ ಕುಲಕರ್ಣಿ ಮಾತನಾಡಿ, ಪ್ರತಿ ವರ್ಷ ಜಗುಚಂದ್ರ ಕೂಡ್ಲ ಅವರ ಜನ್ಮದಿನ ಜುಲೈ ೨೮ ರಂದು ನಾಟಕ ಪ್ರದರ್ಶನ ಕೈಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಜಾನಪದ ಕಲಾವಿದರಾದ ಬಸವಲಿಂಗಯ್ಯ ಹಿರೇಮಠ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕೆ.ಎಸ್. ಕೌಜಲಗಿ, ವಿಶ್ವೆÃಶ್ವರಿ ಹಿರೇಮಠ, ಎಸ್.ಎಸ್.ದೊಡಮನಿ, ಕೆ.ಎಚ್. ನಾಯಕ, ಪ್ರಮೀಳಾ ಜಕ್ಕಣ್ಣವರ, ಲತಾ ಮುಳ್ಳೂರ, ಬಿ. ಮಾರುತಿ, ಕುಸುಮಾ ಹರಿಹರ, ಎಫ್.ಬಿ.ಕಣವಿ, ಬಿ.ಆಯ್. ಈಳಿಗೇರ, ಬಸವರಾಜ ವಾಸನದ, ರಾಜಶೇಖರ ಹೊನ್ನಪ್ಪನವರ, ಪ್ರಭು ಹಂಚಿನಾಳ, ಅನಿತಾ ಮಹಾಜನಶೆಟ್ಟರ, ಚಂದ್ರಶೇಖರ ಕುಂಬಾರ, ಕೆ.ಎ. ದೊಡಮನಿ, ಪ್ರಕಾಶ ಅಂಗಡಿ, ಎಸ್.ಎನ್. ಅರಳಿಕಟ್ಟಿ ಉಪಸ್ಥಿತರಿದ್ದರು.

ಪಕ್ಷ ದ್ರೋಹ ಮಾಡಿದವರು ಹುಳಾ ಬಿದ್ದು ಸಾಯ್ತಾರೆ

ಧಾರವಾಡ : ಮಾಜಿ ಸಚಿವ ಎಸ್.ಆರ್. ಮೋರೆ ವಿರುದ್ಧ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ನ ಪರಾಜಿತ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ ಪರೋಕ್ಷ ವಾಗ್ದಾಳಿ ನಡೆಸಿದರು. ಅವರು ಭಾನುವಾರ ನಡೆದ ಕೃತಜ್ಞತಾ ಸಭೆಯಲ್ಲಿ ನೆರೆದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿ ಭಾವುಕರಾದರು. ಅವರ ಹೆಸರನ್ನು ಪ್ರಸ್ತಾಪಿಸಿದೆ ಕಿಡಿ ಕಾರಿದರು. ಕೆಲವರು ನಾನು ಸೋಲು ಅನುಭವಿಸಿದ್ದಕ್ಕೆ ಪೇಡೆ ಹಂಚಿದರು. ಕಾಂಗ್ರೆಸ್ ಪಕ್ಷ ತಾಯಿ ಇದ್ದಂಗೆ. ತಾಯಿಗೆ ದ್ರೋಹ ಮಾಡ್ತಿರಾ. ಮಾನ ಹರಾಜ ಮಾಡಿದ್ದೀರಿ. ನೀಮ್ಮ ತಾಯಿ ಕೂಡ ಮೇಲೆ ನಿಂತು ನೋಡಿದರೆ ಎತ್ತ ಮಗನನ್ನು ಹೆತ್ತಿದ್ದೇನೆ ಎಂದು ಮರುಕ ಪಡುತ್ತಾರೆ ಎಂದು ಕುಟುಕಿದರು. ಪಕ್ಷ ನಿಮಗೆ ಪಾಲಿಕೆ ಸದಸ್ಯ ಮಾಡಿದೆ. ಶಾಸಕ ಮಾಡಿದೆ. ಮಿನಿಸ್ಟರ್ ಹುದ್ದೆ ಕೊಟ್ಟಿದೆ. ಆದರೂ ನಾನು ಸೋತಿದ್ದಕ್ಕೆ ಸಂತೋಷ ಪಟ್ಟು ಪೇಡೆ ಹಂಚಿತ್ತೀರಾ ಎಂದು ಕಿಡಿ ಕಾರಿದರು. ನಾನು ಇನ್ನೂ ಆರು ಸಲ ಎಲೆಕ್ಚನ್ ಮಾಡ್ತಿನಿ ಎಂದ ಅವರು ನಿಮಗೆ ಸಾಯೋ ವಯಸೋ ಆಗಿದೆ. ಇಂತಹ ಕೆಲಸ ಮಾಡ್ತಿರಿ, ಪಕ್ಷ ವಿರೋಧಿ ಕೆಲಸ ಮಾಡಿದವರ ವಿರುದ್ಧ ಈಗಾಗಲೇ ಪತ್ರ ಬರೆಯಲಾಗಿದೆ. ಅವರನ್ನು ಪಕ್ಷದಿಂದ ಹೊರಗೆ ಹಾಕಿರಿ ಎಂದು ಪಕ್ಷದ ಅಧ್ಯಕ್ಷರನ್ನು ಒತ್ತಾಯಿಸಿದರು. ಅಲ್ಲದೆ, ಮುಂದುವರೆದು ವಾಗ್ದಾಳಿ ನಡೆಸಿದ ಅವರು ನೀವು ಸುಮ್ಮನೇ ಸಾಯಲ್ಲ. ಹುಳಾ ಬಿದ್ದು ಸಾಯ್ತಿರಿ ನೋಡಿ. ಬೇಕಿದ್ದರೆ ಎಂದು ಗುಡುಗಿದರು.

ನೀಚ ರಾಜಕಾರಣಿ ಜೊತೆಗೆ ಬೆಲ್ಲದ ಕೈ ಜೋಡಣೆ : ಇಸ್ಮಾಯಿಲ್ ತಮಟಗಾರ ಆರೋಪ

ಧಾರವಾಡ : ಸರಳ, ಸಜ್ಜನ ರಾಜಕಾರಣಿ ಎಂದು ಹೇಳಿಕೊಳ್ಳುವ ಶಾಸಕ ಅರವಿಂದ ಬೆಲ್ಲದ ನೀಚ ರಾಜಕಾರಣಿ ಜೊತೆಗೆ ಕೈ ಜೋಡಿಸಿ, ನನ್ನ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡಿಸಿದ್ದಾರೆ ಎಂದು ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ನ ಪರಾಜಿತ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ ಆರೋಪಿಸಿದರು. ಅವರು ಭಾನುವಾರ ನಗರದ ಮಾರ್ಡನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭದಲ್ಲಿಮಾತನಾಡಿದರು. ಬೆಲ್ಲದ ಅವರಿಗೆ ಕೆಲವು ಕಾಂಗ್ರೆಸ್ ನಾಯಕರು ಅವರ ಜೊತೆಗೆ ಕೈ ಜೋಡಿಸಿದರು. ಹೀಗಾಗಿ ನಾನು ಸೋತಿದ್ದೇನೆ. ಹಿಂದು ಹಾಗೂ ಮುಸ್ಲಿಂ ಹೆಸರಿನಲ್ಲಿ ಜಾತಿ ಎತ್ತಿ ಕಟ್ಟುವ ಕೆಲಸ ಮಾಡಿದ್ದಾರೆ. ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿಸಿದರು. ಅಲ್ಲದೆ, ಕೆಲವು ಮುಸ್ಲಿಂರನ್ನು ಎತ್ತಿ ಕಟ್ಟಿ ಅವರ ಕೈಯಿಂದ ದಾಖಲೆಗಳನ್ನು ಬಿಡುಗಡೆಗೊಳಿಸಿದರು. ಸಾಮಾಜಿಕ ಜಾಲತಾಣದ ಮೂಲಕ ಆರೋಪ ಮಾಡಿಸಿದರು ಎಂದು ದೂರಿದರು. ನನ್ನ ಮೊಬೈಲ್ ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಹೇಗಾದರೂ ಮಾಡಿ ಅವರು ಜಗಳ ತೆಗೆಯಬೇಕು. ನಾನು ಹೋಗಿ ಅವರಿಗೆ ಹೊಡೆಯಬೇಕು ಎಂದು ಪೀಡಿಸಿದರು. ಆದರೂ ನಾನು ತಾಳ್ಮೆ ಕಳೆದುಕೊಳ್ಳದೆ, ಅವರು ಏನೂ ಬೈದರೂ ಶಾಂತವಾಗಿ ಕೇಳಿಸಿಕೊಂಡಿದ್ದೇನೆ. ದೇವರು ಎಲ್ಲವನ್ನು ನೊಡಿಕೊಳ್ಳುತ್ತಾರೆ ಎಂದು ಎಚ್ಚರಿಸಿದರು.

ಸಮ್ಮೀಶ್ರ ಸರಕಾರದ ಸಚಿವ ಸ್ಥಾನಕ್ಕೆ ಲಾಭಿ ಶುರು

ಹುಬ್ಬಳ್ಳಿ /ರಾಯಚೂರು : ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮೀಶ್ರ ಸರಕಾರ ರಚನೆ ಆಗುವುದು ಖಚಿತವಾಗುತ್ತಿದ್ದಂತೆ ಸಚಿವ ಸ್ಥಾನಕ್ಕೆ ಲಾಭೀ ಶುರುವಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರಿನ ಶಾಸಕ ವೆಂಕಟರಾವ ನಾಡಗೌಡ ಪರ ಅವರ ಅಭಿಮಾನಿಗಳು ಹಾಗೂ ಜಿಲ್ಲೆಯ ಜೆಡಿಎಸ್ ಮುಖಂಡರು ಲಾಭೀ ನಡೆಸಿದ್ದು, ಸಚಿವ ಸ್ಥಾನ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯೂ ಸಚಿವ ಸ್ಥಾನದಿಂದ ವಂಚಿತಗೊಂಢಿದ್ದು, ಹಿರಿಯ ಶಾಸಕ ವೆಂಕಟರಾವ್ ನಾಡಗೌಡ ಅವರಿಗೆ ಮನ್ನಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಪಾಳೇಯದಲ್ಲಿ ಕೂಡ ಸಚಿವ ಸ್ಥಾನಕ್ಕೆ ಲಾಭಿ ಆರಂಭಗೊಂಡಿದ್ದು, ಹುಬ್ಬಳ್ಳಿಯ ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ ಗೆ ಸಚಿವ ಸ್ಥಾನ ನಿಡುವಂತೆ ಒತ್ತಾಯಿಸಿ ಭಾನುವಾರ ಅಬ್ಬಯ್ಯ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಹೀಗೆ ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಕಾದು ನೋಡಬೇಕಿದೆ.

ಶ್ರೀರಂಗಂ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಹೆಚ್ ಡಿ ಕೆ

ಬೆಂಗಳೂರು : ಕೇರಳದ ತಿರುಚ್ಚಿಯಲ್ಲಿರುವ ಶ್ರೀರಂಗಂ ದೇವಸ್ಥಾನಕ್ಕೆ ಭಾನುವಾರ ಮಧ್ಯಾಹ್ನ ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ. ಹಾಗಂತ ಸ್ವತಃ ಹೆಚ್ ಡಿ. ಕೆ ಸುದ್ದಿಗಾರರೊಂದಿಗೆ ತಿಳಿಸಿದ್ದು, ತಿರುಚ್ಚಿಯಲ್ಲಿರುವ ಶ್ರೀರಂಗಂ ದೇವಾಲಯಕ್ಕೆ ಹೋಗುವುದು ವಾಡಿಕೆ. ಸಹೋದರ ಹೆಚ್.ಡಿ. ರೇವಣ್ಣ ಜೊತೆಗೆ ತೆರಳುತ್ತಿರುವುದಾಗಿ ವಿವರಿಸಿದ್ದಾರೆ. ಇದು ಹೊಸತೇನಲ್ಲ. ಯಾವಾಗಲೂ ಅಲ್ಲಿಗೆ ಹೋಗಿ ಆಶೀರ್ವಾದ ಪಡೆಯುತ್ತಿರುತ್ತೇನೆ. ಅದೇ ರೀತಿ ಈಗಲೂ ಹೋಗುತ್ತಿದ್ದೇನೆ ಎಂದು ಹೇಳಿದರು.

ಮೇ 23 ರಂದು ಸೋತ ಬಿಜೆಪಿ ಅಭ್ಯರ್ಥಿಗಳೊಂದಿಗೆ ಸಭೆ

ಬೆಂಗಳೂರು : ಮೇ 23ರಂದು ಬುಧವಾರ ಸಂಜೆ 5 ಗಂಟೆಗೆ ರಾಜ್ಯದ ವಿವಿಧೆಡೆ ಸೋತ ಬಿಜೆಪಿ ಅಭ್ಯರ್ಥಿಗಳ ಜೊತೆಗೆ ಮಾತುಕತೆ ನಡೆಸುತ್ತೇನೆ. ನಂತರ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು. ಅವರು ಭಾನುವಾರ ಬೆಳಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸಮ್ಮೀಶ್ರ ಸರಕಾರದ ಸಚಿವ ಸಂಪುಟ ರಚನೆ ಪ್ರಕ್ರಿಯೆ ಮುಗಿಯಲಿ ಆನಂತರ ಆ ಬಗ್ಗೆ ಮಾತನಾಡುತ್ತೇನೆ ಎಂದರು. ಮೊದಲು ಸಮ್ಮೀಶ್ರ ಸರಕಾರ ರಚನೆ ಆಗಲಿ, ಅವರು ಏನೂ ಮಾಡ್ತೋರೋ ನೋಡಿ ಆನಂತರ ನಾನು ಮಾತನಾಡುತ್ತೇನೆ. ಅಲ್ಲಿಯವರೆಗೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು.

ಹೆಚ್ಡಿಕೆ ಐದು ವರ್ಷ ಸಿಎಂ : ಪುಟ್ಟರಾಜು

ಬೆಂಗಳೂರು : ಐದು ವರ್ಷಗಳ ಕಾಲ ಹೆಚ್.ಡಿ. ಕುಮಾರಸ್ವಾಮಿ ಅವರೇ ಸಿಎಂ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮೇಲೂಕೋಟೆ ಜೆಡಿಎಸ್ ಶಾಸಕ ಸಿ.ಎಸ್. ಪುಟ್ಟರಾಜು ಹೇಳಿದ್ದಾರೆ. ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸಿಎಂ ಸ್ಥಾನ ಹಂಚಿಕೆ ಆಗಿದೆ ಎನ್ನುವುದು ಊಹಾಪೋಹ ಎಂದು ಸ್ಪಷ್ಟಪಡಿಸಿದರು. ಹೆಚ್.ಡಿ.ಕುಮಾರಸ್ವಾಮಿಯವರೇ ಐದು ವರ್ಷ ಸಿಎಂ ಎಂದು ನಿರ್ಧಾರವಾಗಿದೆ. ಹಂಚಿಕೆ ಬಗ್ಗೆ ಯಾರು ಪ್ರಸ್ತಾಪ ಮಾಡಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ನಾನೇ ಮಂಡ್ಯ ಉಸ್ತುವಾರಿ ಸಚಿವ ಎಂದಿರುವ ಈ ಬಗ್ಗೆ ಖುದ್ದು ದೇವೇಗೌಡರು ಹಾಗೂ ಕುಮಾರಸ್ವಾಮಿ ಹೇಳಿದ್ದಾರೆ ಎಂದರು.

ನಿಯೋಜಿತ ಮುಖ್ಯಮಂತ್ರಿ ಭೇಟಿ ಮಾಡಿದ ಹಿರಿಯ ಅಧಿಕಾರಿಗಳು

ಬೆಂಗಳೂರು : ಕಾಂಗ್ರೆಸ್ ಜೆಡಿಎಸ್ ಸಮ್ಮೀಶ್ರ ಸರಕಾರ ರಚನೆಯಾಗುವುದು ಖಚಿತವಾಗುತ್ತಿದ್ದಂತೆ ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ರಾಜ್ಯದ ಹಿರಿಯ ಅಧಿಕಾರಿಗಳು ಭೇಟಿ ಮಾಡಿ ಮಾತುಕತೆ ನಡೆಸಿದರು. ಜೆ.ಪಿ.ನಗರದ ಹೆಚ್ ಡಿ ಕೆ ನಿವಾಸಕ್ಕೆ ಭಾನುವಾರ ಭೇಟಿ ನೀಡಿ ಮೇ 23ರಂದು ಬುಧವಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಿದ್ಧತೆ ಹಾಗೂ ಅಗತ್ಯ ಭದ್ರತೆ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಭೇಟಿ ನೀಡಿ ಸಮಾಲೋಚನೆ ನಡೆಸಿದರು. ಈ ಬಗ್ಗೆ ಕುಮಾರಸ್ವಾಮಿ ಅವರು ಅಧಿಕಾರಿಗಳೊಂದಿಗೆ ಮುಂದಿನ ಸಿದ್ಧತೆ ಕುರಿತು ಕೆಲವು ಸೂಚನೆಗಳನ್ನು ನೀಡಿದರು ಎನ್ನಲಾಗಿದೆ.

ಪಿಎಸ್ಐಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ಧಾರವಾಡ : ಪಿಎಸ್ ಐಯೊಬ್ಬರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಧಾರವಾಡ ತಾಲೂಕಿನ ಲಕಮಾಪೂರದಲ್ಲಿ ನಡೆದಿದೆ. ಗರಗ ಪೊಲೀಸ್ ಠಾಣೆಯ ಪಿಎಸ್ಐ ಸಂಗಮೇಶ ಪಾಲಬಾವಿ ಅವರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ್ದರು. ಲಕಮಾಪೂರ ಗ್ರಾಮದಲ್ಲಿ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ತಿಕ್ಕಾಟ ನಡೆದ ಮಾಹಿತಿ ಅರಿತು ಗ್ರಾಮಕ್ಕೆ ಭೇಟಿ ನೀಡಿದ್ದ ಅವರು ಲಘು ಲಾಠಿ ಪ್ರಹಾರ ನಡೆಸಿ, ಜನರನ್ನು ಚದುರಿಸಿದ್ದರು. ಈ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಉದ್ದೇಶಪೂರ್ವಕವಾಗಿ ಬಿಜೆಪಿ ಕಾರ್ಯಕರ್ತರನ್ನು ಗುರಿ ಮಾಡಲಾಗಿದೆಎಂದು ದೂರಿದರು. ಅಲ್ಲದೆ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ಕೊನೆಗೆ ಮಧ್ಯರಾತ್ರಿ ವೇಳೆ ಲಕಮಾಪೂರ ಗ್ರಾಮಕ್ಕೆ ಭೇಟಿ ನೀಡಿದ ಸಿಪಿಐ ಪ್ರಶಾಂತ ನಾಯ್ಕ, ಡಿಎಸ್ಪಿ ಬಿ.ಪಿ. ಚಂದ್ರಶೇಖರ ಅವರು, ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಿರುವುದರಿಂದ ಗುಂಪು ಚದುರಿಸಿದ್ದಾರೆ. ಇದರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪ್ರಶ್ನೆಯಿಲ್ಲ. ನಾವು ಯಾವುದೇ ಪಕ್ಷಪಾತ ಮಾಡುವ ಪ್ರಶ್ನೆಯಿಲ್ಲ. ತಿಳಿಯದೆಮಾಡಿದ ತಪ್ಪನ್ನು ಮನ್ನಿಸಬೇಕು ಎಂದು ಗ್ರಾಮಸ್ಥರಿಗೆ ವಸ್ತು ಸ್ಥಿತಿ ಮನವರಿಕೆ ಮಾಡಿಕೊಟ್ಟು ಪರಿಸ್ಥಿತಿ ತಿಳಿಗೊಳಿಸಿದರು. ಆನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ

ಹುಬ್ಬಳ್ಳಿ : ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದ ಪರಿಣಾಮ ಇಬ್ಬರಿಗೆ ಗಾಯಗಳಾಗಿರುವ ಘಟನೆ ನವಲಗುಂದ ತಾಲೂಕಿನ ಆರೇಕುರಹಟ್ಟಿ ಗ್ರಾಮದಲ್ಲಿ ನಡೆದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದರಿಂದ ಗಲಾಟೆ ಸಂಭವಿಸಿದೆ. ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಹಚ್ಚಿದ ಸಮಯದಲ್ಲಿ ಈ ಗಲಾಟೆ ನಡೆದು ಇಬ್ಬರಿಗೆ ಗಾಯಗಳಾಗಿವೆ. ಇಬ್ಬರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಅಕ್ಬರಭಾಷಾ ಖುದ್ದಣ್ಣವರ, ಇಮಾಮಸಾಬ ಕರ್ನಾಚಿ ಅವರನ್ನು ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ನವಲಗುಂದ ಪೊಲೀಸರ ಭೇಟಿ ನೀಡಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಗಡಿಗೆ ನುಗ್ಗಿದ ನೀರು

ಕೊಪ್ಪಳ: ನಿನ್ನೆ ತಡರಾತ್ರಿ ಸುರಿದ ಭಾರೀ ಮಳೆಯಿಂದ ಅಂಗಡಿಗಳಿಗೆ ನೀರು ಹೊಕ್ಕು ಬಾರಿ ನಷ್ಟ ಉಂಟು ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. . ಕೊಪ್ಪಳ ಜಿಲ್ಲಾ ಕೇಂದ್ರದ ಗಡಿಯಾರ ಕಂಬದ ಬಳಿಯಿರುವ ಎಲ್ಲಾ ಅಂಗಡಿಗಳು ಸಂಪೂರ್ಣ ನೀರಿನಿಂದ ಆವೃತಗೊಂಡಿವೆ. ಹಲವು ಅಂಗಡಿ ಒಳಗೆ ನುಗ್ಗಿದ ಮಳೆ ನೀರು, ಟಿವಿ, ಪೋಟೋ ಸ್ಟುಡಿಯೋ, ಗ್ಯಾಸ್ ಏಜನ್ಸಿ ಸೇರಿದಂತೆ ಅನೇಕ ಅಂಗಡಿಗಳು ನೀರಿನಲ್ಲಿ ಮುಳುಗಡೆ ಆಗಿವೆ. ಇದರಿಂದಾಗಿ ಅಂಗಡಿ ಮಾಲೀಕರಿಗೆ ಲಕ್ಷಾಂತರ ರೂಪಾಯಿ ಹಾನಿ ಆಗಿವೆ. ವ್ಯಾಪಾರಸ್ಥರು ಕಂಗಾಲಾಗಿದ್ದು, ದಿಕ್ಕು ತೋಚದಂತಾಗಿದ್ದಾರೆ. ಕೊಪ್ಪಳ ನಗರ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಜೆಡಿಎಸ್ ಕಾಂಗ್ರೆಸ್ ವಿಜಯೋತ್ಸವಕ್ಕೆ ಕಲ್ಲು ತೂರಿದ ಬಿಜೆಪಿ ಕಾರ್ಯಕರ್ತರು

ಕೊಪ್ಪಳ: ಜೆಡಿಎಸ್-ಕಾಂಗ್ರೆಸ್ ವಿಜಯೋತ್ಸವಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿ ತೋರಿದಲ್ಲದೆ, ಕಲ್ಲು ತೂರಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ. ಯಡಿಯೂರಪ್ಪ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಯಲ್ಲಿ ಜೆಡಿಎಸ್- ಕಾಂಗ್ರೆಸ್ ವಿಜಯೋತ್ಸವದ ವೇಳೆ ಬಿಜೆಪಿ ಕಾರ್ಯಕರ್ತರ ಗಲಾಟೆ ಮಾಡಿದ್ದಾರೆ. ಬೈಕ್ ರ್ಯಾಲಿ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದರಿಂದ ಗಲಾಟೆ ಯಲ್ಲಿ ಯುಸೂಫ್, ರಾಜವಲಿ ತಲೆಗೆ ಗಂಭೀರ ಗಾಯವಾಗಿದೆ. ಇದರಿಂದಾಗಿ ಯೂಸೂಫ್ ಸೇರಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದರಿಂದಾಗಿ ಸದ್ಯ ಗಂಗಾವತಿ ನಗರದಲ್ಲಿ ಬೂದಿಮುಚ್ಚಿದ ಕೆಂಡದಂತಿದೆ. ಗುಂಪು ಗುಂಪಾಗಿ ನಿಂತ ಜನರನ್ನು ಚದುರಿಸಿದ ಪೊಲೀಸರು ಪರಿಸ್ಥಿತಿ ಹತೋಟಿಗೆ ತರಲು ಹರಸಾಹಸ ಪಡಬೇಕಾಯಿತು. ಎಸ್ಪಿ ಡಾ.ಅನುಪಶೆಟ್ಟಿ , ಸ್ವತಃ ಲಾಠಿ ಹಿಡಿದು ರಸ್ತೆಗಿಳಿದರು. ಅಲ್ಲದೆ, ಅಂಗಡಿ ಮುಂಗಟ್ಟುಗಳು ಬಲವಂತವಾಗಿ ಬಂದ್ ಮಾಡಿ ಗಂಗಾವತಿಯ ಆಯಕಟ್ಟಿನ ಸ್ಥಳದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ರಾಜ್ಯಪಾಲರು ಆರ್ ಎಸ್ ಎಸ್ ಕಾರ್ಯಕರ್ತರಂತೆ ವರ್ತಿಸದಿರಲಿ ಎಂದ ಕಪಿಲ್ ಸಿಬಲ್

ನವದೆಹಲಿ : ರಾಜ್ಯದ ರಾಜ್ಯಪಾಲರು ಆರ್ ಎಸ್ ಎಸ್ ಕಾರ್ಯಕರ್ತರಂತೆ ಕಾರ್ಯನಿರ್ವಹಿಸಬಾರದು. ಅದರಲ್ಲೂ ವಿಶೇಷವಾಗಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಣತಿಯಂತೆ ಕಾರ್ಯ ನಿರ್ವಹಿಸದಿರಿ ಎಂದು ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಸಲಹೆ ಮಾಡಿದ್ದಾರೆ. ಅವರು ನವದೆಹಲಿಯಲ್ಲಿ ಶನಿವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಪಾಲರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರು. ಹೀಗಾಗಿ ನಾವು ಸುಪ್ರೀಂ ಕೋರ್ಟ್ ಮೆಟ್ಟಲು ಹತ್ತಬೇಕಾಯಿತು. ಅವರು ಸರಿಯಾಗಿ ನಡೆದುಕೊಂಡಿದ್ದರೇ ಇದು ಬರುತ್ತಿರಲಿಲ್ಲ. ರಾಜ್ಯಪಾಲರ ಮೇಲೆ ಒತ್ತಡ ಹೇರಿದ್ದರಿಂದ ಕರ್ನಾಟಕದಲ್ಲಿ ಇಂತಹ ದುರ್ಗತಿ ಬಂದಿದೆಎಂದು ತಿವಿದರು. ಈ ಬಗ್ಗೆ ಸುಪ್ರೀಂಕೋರ್ಟ್ ಮುಂಬರುವ ದಿನಗಳಲ್ಲಿ ವಿಚಾರಣೆ ನಡೆಸಲಿದೆ. ರಾಜ್ಯಪಾಲರ ಕ್ರಮ ಕುರಿತು ತ್ರಿಸದಸ್ಯ ಪೀಠದಲ್ಲಿ ವಿಸ್ಕೃತ ವಿಚಾರಣೆ ನಡೆಯಲಿದೆ ಎಂದು ಹೇಳಿದರು.

ರಾಜ್ಯಪಾಲರ ಮೇಲೆ ಒತ್ತಡ ಹೇರಿ ಬಿಜೆಪಿ ಅಧಿಕಾರ ಹಿಡಿಯಲು ಯತ್ನ

ಉತ್ತರ ಪ್ರದೇಶ : ಹಲವು ರಾಜ್ಯದಲ್ಲಿ ರಾಜ್ಯಪಾಲರ ಮೇಲೆ ಒತ್ತಡ ಹೇರಿ ಬಿಜೆಪಿ ಅಧಿಕಾರ ಹಿಡಿಯಲು ಯತ್ನಿಸಿದೆ. ಆದರೆ ಅದು ಕರ್ನಾಟಕದಲ್ಲಿ ಸಫಲವಾಗಲಿಲ್ಲ ಎಂದು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಆರೋಪಿಸಿದ್ದಾರೆ. ಅವರು ಲಖ್ನೋದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸುಪ್ರೀಂಕೋರ್ಟ್ ಮೊರೆ ಹೋದ ಹಿನ್ನಲೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಿದೆ ಎಂದು ಗುಡುಗಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಒಂದಾಗುವ ಮೂಲಕ ಬಿಜೆಪಿಯ ಆಡಳಿತಕ್ಕೆ ಬ್ರೇಕ್ ಹಾಕಿವೆ. ಇದನ್ನು ತಡೆಗಟ್ಟಲು ಯಶಸ್ವಿಯಾಗಿರುವುದಕ್ಕೆ ಅವರಿಗೆ ನಾನು ಅಭಿನಂದಿಸುತ್ತೇನೆ ಎಂದು ಮಾಯಾವತಿ ಹೇಳಿದ್ದಾರೆ.

ಕುಮಾರ ಸ್ವಾಮಿಗೆ ತಾಕತ್ ಇದ್ದರೆ ಕಾಂಗ್ರೆಸ್ ಅಕ್ರಮಗಳ ತನಿಖೆ ಮಾಡಲಿ

ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿ ಆಗಲಿರುವ ಹೆಚ್. ಡಿ. ಕುಮಾರಸ್ವಾಮಿ ಅವರಿಗೆ ತಾಕತ್ ಇದ್ದರೆ ಕಾಂಗ್ರೆಸ್ ನ ಅಕ್ರಮ, ಅನೈತಿಕ ಚಟುವಟಿಕೆಯನ್ನು ತನಿಖೆ ಮಾಡಲು ಮುಂದಾಗಲಿ ಎಂದು ಕೇಂದ್ರ ಸಚಿವ ಪ್ರಕಾಶ ಜಾವೇಡೆಕರ್ ಸವಾಲ್ ಹಾಕಿದ್ದಾರೆ. ಅವರು ಬಿಜೆಪಿಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷವೂ ಜೆಡಿಎಸ್ ಮುಂದೆ ಸಂಪೂರ್ಣ ಶರಣಾಗತಿ ಆಗಿದೆ ಎಂದು ಕಿಡಿ ಕಾರಿದರು. ಬಿಜೆಪಿ ಸರಕಾರ ಪತನವಾಗಿರುವುದು ಜನರ ಮನಸ್ಸಿಗೆ ಮರ್ಮಾಘಾತವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಆರೋಪಗಳು ನಾಡಿನ ಜನತೆ ಕೇಳಿದ್ದಾರೆ. ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅನ್ನು ಸೋಲಿಸಿದೆ. ಹೊರತು ಅವರು ನಮಗೆ ಸೋಲಿಸಿಲ್ಲ. ನಾವು 40ರಿಂದ 104ಕ್ಕೆ ಬಂದಿದ್ದೇವೆ. ಸಿದ್ದರಾಮಯ್ಯ ಒಂದು ಕ್ಷೇತ್ರದಲ್ಲಿ ಸೋಲು ಅನುಭವಿಸಿ ಇನ್ನೊಂದು ಕ್ಷೇತ್ರದಲ್ಲಿ ಕೆಲವೇ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. 14 ಜನ ಸಚಿವರು ಹೀನಾಯ ಸೋಲು ಕಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಉಗುಳುವುದು ಓಡುವುದು ರೂಢಿಸಿಕೊಂಡಿದೆ. ಫೇಕ್ ಸಿಡಿ, ನಕಲಿ ಮತದಾರರ ಚೀಟಿ, ನಕಲಿ ಆಡಿಯೋಗಳನ್ನು ಸೃಷ್ಟಿಸಿ ಜನಾದೇಶವನ್ನು ಧಿಕ್ಕರಿಸಿದೆ. ಇದು ನಾಚಿಕೇಗೇಡಿನ ಸಂಗತಿ. ಪರಸ್ಪರ ಕಾಲೆದುಕೊಂಡಿರುವುದು ನಾಡಿನ ಜನತೆಗೆ ಗೊತ್ತಿದ್ದರೂ. ಅಂತಹ ಅನೈತಿಕ ಮೈತ್ರಿಯನ್ನು ಇಂದು ಅಧಿಕಾರಕ್ಕಾಗಿ ಮಾಡಿಕೊಂಡಿರುವುದು ತಲೆ ತಗ್ಗಿಸುವಂತೆ ಇದೆ. ಇದು ಅವರ ಹೊಂದಾಣಿಕೆಯಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ವಿರುದ್ಧವೂ ವಾಗ್ದಾಳಿ ನಡೆಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಜಾವಡೆಕರ್ ಜೆಡಿಎಸ್ ಪಕ್ಷವನ್ನೂ ಕಾಂಗ್ರೆಸ್ ನ ಬಿ ಟೀಂ ಎಂದು ಜರಿದರು.

ರಾಜ್ಯಾದ್ಯಂತ ಸಂಭ್ರಮಾಚರಣೆ ಮಾಡಿದ ಜೆಡಿಎಸ್-ಕಾಂಗ್ರೆಸ್ ಸಚಿವರು

ಬೆಂಗಳೂರು : ರಾಜ್ಯದ ಬಿಜೆಪಿ ಸರಕಾರದ ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಧಾನ ಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಕುಣಿದು ಕುಪ್ಪಳಿಸಿದರು. ಬೆಂಗಳೂರು, ಹುಬ್ಬಳ್ಳಿ-ಧಾರವಾಡ,ಗದಗ, ಶಿವಮೊಗ್ಗ, ಬಾಗಲಕೋಟೆ, ನೆಲಮಂಗಲ, ಕಾರವಾರ, ಮಂಡ್ಯ ಸೇರಿದಂತೆ ಬಹುತೇಕ ಜಿಲ್ಲೆಯಲ್ಲಿ ಜೆಡಿಎಸ್ ಹಾಗೂಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತ್ಯೇಕವಾಗಿ ವಿಜಯೋತ್ಸವ ಆಚರಿಸಿದರು.

ಮೇ ೨೦ರವರೆಗೆ ನಿಷೇಧಾಜ್ಞೆ ಜಾರಿ

ಧಾರವಾಡ : ಕರ್ನಾಟಕ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾದ ಬಿ.ಎಸ್. ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಧಾರವಾಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಧಾರವಾಡ ಜಿಲ್ಲೆಯಾದ್ಯಂತ ಹುಬ್ಬಳ್ಳಿ ಧಾರವಾಡ ಮಹಾನಗರ ವ್ಯಾಪ್ತಿ ಹೊರತು ಪಡಿಸಿ ಮೇ ೧೯ರಿಂದ ಮೇ ೨೦ ರ ಬೆಳಿಗ್ಗೆ ೮ ಗಂಟೆಯವರೆಗೆ ಸಿಆರ್ಪಿಸಿ ೧೯೭೩ರ ಕಲಂ ೧೪೪ರ ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಈ ಆದೇಶ ಜಾರಿ ಮಾಡಿದ್ದು, ನಿಷೇಧಾಜ್ಞೆ ಜಾರಿಯಿರುವುದರಿಂದ ಈ ಸಮಯದಲ್ಲಿ ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ೫ ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ, ಸಮಾರಂಭ ಜರುಗಿಸುವುದನ್ನು ನಿಷೇಧಿಸಿದೆ. ಯಾವುದೇ ಮಾರಾಕಾಸ್ತ ತೆಗೆದುಕೊಂಡು ಹೋಗುವುದನ್ನು ಪ್ರತಿಬಂಧಿಸಲಾಗಿದೆ. ನಿಷೇಧಾಜ್ಞೆ ಅನ್ವಯ ನಿಷೇಧಿಸಿ ನಿರ್ಬಂಧಿಸಲಾಗಿರುವ ವಸ್ತು, ಕೃತ್ಯಗಳಲ್ಲಿ ಭಾಗವಹಿಸುವ ವ್ಯಕ್ತಿಗಳ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದಿರುವ ಅವರು ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ ಸದರಿ ನಿಷೇಧಾಜ್ಞೆ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ ೧೮೮ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ದೇಶಕ್ಕಿಂತ ಪ್ರಧಾನಮಂತ್ರಿ ನರೇಂದ್ರ ಮೋದಿ ದೊಡ್ಡವರಲ್ಲ

ನವದೆಹಲಿ : ಆರ್ ಎಸ್ ಎಸ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರು ಜನರ ಆದೇಶವನ್ನು ತಿರಸ್ಕರಿಸಿ, ಗೋವಾ, ಮಣಿಪುರ ಹಾಗೂ ಕರ್ನಾಟಕದಲ್ಲಿ ಕೂಡ ಅಧಿಕಾರದ ಚುಕ್ಕಾಣಿ ಹಿಡಿದರು. ಈಗ ಅವರಿಗೆ ದೊಡ್ಡ ಮುಖಭಂಗವಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು. ಅವರು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ನಾಯಕರು ವಿಧಾನ ಸಭೆಯ ಕಲಾಪ ಮುಗಿಯುವ ಸಂದರ್ಭದಲ್ಲಿ ರಾಷ್ಟ್ರಿಯ ಗೀತೆಗೆ ಅವಮಾನ ಮಾಡಿದ್ದಾರೆ. ಅವರು ಎಂದಿಗೂ ಯಾರಿಗೂ ಗೌರವ ಕೊಟ್ಟಿಲ್ಲ. ಬಿಜೆಪಿ ನಾಯಕರು ಯಾರಿಗೂ ಗೌರವ ಕೊಡಲ್ಲ ಜನಾದೇಶವನ್ನು ತಿರಸ್ಕರಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹೊರಟಿದ್ದ ಅವರಿಗೆ ಹಿಂದೇಟು ಆಗಿದೆ ಎಂದು ಕಿಡಿ ಕಾರಿದರು. ಜನರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಕರುನಾಡಲ್ಲಿ ಮಾಜಿ ಪ್ರಧಾನಿ ದೇವೆಗೌಡರು ಹಾಗೂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದಿದ್ದಾರೆ. ಹೀಗಾಗಿ ಅವರಿಗೆ ನಾವು ಅಭಾರಿಯಾಗಿದ್ದೇವೆ. ನೇತಾರರು ಕೆಲವು ನಿರ್ಭಂದಗಳಿವೆ ಎಂಬುದನ್ನು ಅರಿತುಕೊಳ್ಳಲಿ ಎಂದು ಗುಡುಗಿದರು. ಶಾಸಕರನ್ನು ಖರೀದಿಸಲು ಹುನ್ನಾರ ನಡೆದಿದ್ದು, ಇದು ಭ್ರಷ್ಟಚಾರವಲ್ಲವೇ, ಪ್ರಧಾನಮಂತ್ರಿಯಾಗಿ ಇದು ಶೋಭೆ ತರುತ್ತದೆಯೇ ಎಂದು ಕಿಡಿಕಾರಿದರು. ಜನರ ಗೆಲುವು ಆಗಿದೆ. ಹಣಕ್ಕಿಂತ ಕಾನೂನು ದೊಡ್ಡದು. ದೇಶಕ್ಕಿಂತ ಪ್ರಧಾನಮಂತ್ರಿ ನರೇಂದ್ರ ಮೋದಿ ದೊಡ್ಡವರಲ್ಲ ಎಂದು ತಿರುಗೇಟು ನೀಡಿದರು.

ಬಿಜೆಪಿಯಿಂದ ರಾಜ್ಯದಲ್ಲಿ ಅರಾಜಕತೆ

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ರಾಜಕೀಯ ಅರಾಜಕತೆ ಸೃಷ್ಟಿ ಮಾಡಿತ್ತು ಎಂದು ಕಾಂಗ್ರೆಸ್ ವಕ್ತಾರ ವಿ.ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ. ಅವರು ಬಿಜೆಪಿ ಸರಕಾರ ಪತನಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮೀಶ್ರ ಸರಕಾರ ರಚನೆ ಮಾಡಲು ಯತ್ನ ಮಾಡಿದ್ದನ್ನು ಬಿ.ಎಸ್. ಯಡಿಯೂರಪ್ಪ, ಪ್ರಧಾನ ಮೋದಿ, ಅಮಿತ್ ಶಾ ರಾಜಕೀಯ ಸಂಚು ರೂಪಿಸಿ, ನಮಗೆ ಮೋಸ ಮಾಡಿದರು ಎಂದು ಕಿಡಿಕಾರಿದರು. ಹೀಗಾಗಿ ಯಡಿಯೂರಪ್ಪ ಇಂದು ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದಾರೆ. ಇದು ಪ್ರಜಾಪ್ರಭುತ್ವದ ಜಯವಾಗಿದೆ. ಇದು ರಾಜ್ಯದ ಜಯವಲ್ಲ. ಇಡೀ ದೇಶದ ಜಯ. ಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ರಾಜ್ಯಪಾಲರ ನಡೆ ವಿರುದ್ಧ ಗುಲಾಂನಬಿ ಆಜಾದ ವಾಗ್ದಾಳಿ

ಬೆಂಗಳೂರು : ರಾಜ್ಯಪಾಲರು ನಮ್ಮ ಸಂಖ್ಯಾಬಲ ಹೆಚ್ಚಿಗೆ ಇದ್ದರೂ ಬಿಜೆಪಿಗೆ ಅವಕಾಶ ನೀಡುವ ಮೂಲಕ ಕುದುರೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬೀ ಆಜಾದ್ ವಾಗ್ದಾಳಿ ನಡೆಸಿದರು. ಅವರು ಬಿಜೆಪಿ ಸರಕಾರದ ಪತನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಶಾಸಕರಿಗೆ ಆಸೆ, ಆಮಿಷ ಒಡ್ಡಿ ಪಕ್ಷ ಹಾಳು ಮಾಡಲು ಯತ್ನಿಸಿದರು. ಆದರೆ ಅದು ಸಫಲವಾಗಲಿಲ್ಲ ಎಂದು ಕಿಡಿ ಕಾರಿದರು.

ನರೇಂದ್ರ ಮೋದಿಯನ್ನು ಹಿಟ್ಲರ್ ಎಂದ ಸಿದ್ದರಾಮಯ್ಯ

ಐತಿಹಾಸಿಕ ಗೆಲುವು ಸಾಧಿಸಿದ ಪ್ರಜಾಪ್ರಭುತ್ವ ಎಂದ ಸಿದ್ದರಾಮಯ್ಯ ಬೆಂಗಳೂರು : ಭಾರತದ ಮತ್ತು ಕರುನಾಡ ರಾಜಕಾರಣದಲ್ಲಿ ಇದು ಐತಿಹಾಸಿಕ ಗೆಲುವು ಸಾಧಿಸಿದೆ. ಯಡಿಯೂರಪ್ಪ ವಿಧಾನ ಸಭೆಯಲ್ಲಿ ಬಹುಮತ ಸಾಬೀತು ಪಡಿಸುವುದಾಗಿ ಹೇಳಿ ಅಸಮರ್ಥರಾಗಿ ಪಲಾಯನವಾದ ಮಾಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಿಕ್ಕ ಜಯ ಸಂವೀಧಾನದ ವಿಜಯ. ಕಾನೂನಿನ ವಿಜಯ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಾಖ್ಯಾನ ಮಾಡಿದರು. ಸುಪ್ರೀಂಕೋರ್ಟ್ ತೀರ್ಪು ವಿರುದ್ಧವಾಗಿದ್ದರೂ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಯಡಿಯೂರಪ್ಪ ಅವರಿಗೆ ಸರಕಾರ ರಚನೆ ಮಾಡಲು ರಾಜ್ಯಪಾಲರು ಅವಕಾಶ ಕೊಟ್ಟಿದ್ದು ಪ್ರಜಾಪ್ರಭುತ್ವದ ಕಗ್ಗೊಲೆ. ಜನರು ಕೊಟ್ಟ ತೀರ್ಪನ್ನು ಒಪ್ಪಿಕೊಳ್ಳಬೇಕಾಗಿರುವುದು ಎಲ್ಲ ಪ್ರಜಾಪ್ರಭುತ್ವವಾದಿಗಳ ಕರ್ತವ್ಯ ಹಾಗೂ ಜವಾಬ್ದಾರಿ. ನರೇಂದ್ರ ಮೊದಿ, ಅಮಿತ್ ಶಾ ಹಾಗೂ ಕೇಂದ್ರದ ಕೆಲವು ಸಚಿವರು ನಡೆದುಕೊಂಡಿರುವ ರೀತಿ ಖಂಡನೀಯ ಎಂದು ಗುಡುಗಿದರು. ಇದರೊಂದಿಗೆ ಯಡಿಯೂರಪ್ಪ ನಡೆ ಸರಿಯಲ್ಲ ಪ್ರಮಾಣ ವಚನ ತೆಗೆದುಕೊಂಡ ಮೇಲೆ ಹದಿನೈದು ದಿನ ರಾಜ್ಯಪಾಲರು ಕೊಟ್ಟಿದ್ದರು. ಆದರೆ ಯಡಿಯೂರಪ್ಪ ಅವರು ಒಂದು ವಾರ ಕೇಳಿದ್ದರು. ನರೇಂದ್ರ ಮೋದಿ ಇದರ ಹಿಂದೆ ಇದ್ದಾರೆ. ದೇಶದ ಪ್ರಧಾನಮಂತ್ರಿಯಾಗಿ ಅತಂತ್ರಪರಿಸ್ಥಿತಿ ಇದ್ದರೂ ಕೂಡ ಬೇರೆಯವರಿಗೆ ಸರಕಾರ ಮಾಡಲು ಬಿಡಲ್ಲ ಎಂದು ಹೇಳಿರುವುದು ಖಂಡನೀಯ. ರಾಜ್ಯಪಾಲರ ಮೇಲೆ ಒತ್ತಡ ಹೇರಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು. ನರೇಂದ್ರ ಮೋದಿಯನ್ನು ಹಿಟ್ಲರ್ ಎಂದ ಸಿದ್ದರಾಮಯ್ಯ ಅಮಿತ್ ಶಾ ಅವರನ್ನು ಬೋಬೆಲ್ಸ್ ಗೆ ಹೋಲಿಸಿದರು. ಇಬ್ಬರದ್ದು ಬರೀ ಡೋಂಗಿ ರಾಜಕಾರಣ ಮಾಡುತ್ತ, ಸುಳ್ಳು ಹೇಳುತ್ತಾ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ ಎಂದು ಜರಿದರು.

ಮೂರನೇ ದಿನಕ್ಕೆ ರಾಜೀನಾಮೆ ಸಲ್ಲಿಸಿದ ನೂತನ ಸಿಎಂ ಯಡಿಯೂರಪ್ಪ

ಬೆಂಗಳೂರು : ರಾಜ್ಯ ವಿಧಾನ ಸಭೆಯ ಕಲಾಪದಲ್ಲಿ ವಿಶ್ವಾಸ ಮತ ಯಾಚನೆ ಮಾಡದೆ ಭಾಷಣ ಮುಗಿಸಿ ನೇರವಾಗಿ ರಾಜ್ಯಪಾಲರ ಕಚೇರಿಗೆ ಆಗಮಿಸಿದ ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಮೂರು ದಿನಗಳ ಆಡಳಿತಕ್ಕೆ ಯಡಿಯೂರಪ್ಪ ರಾಜೀನಾಮೆ ಸಲ್ಲಿಸುವ ಮೂಲಕ ಬಿಜೆಪಿ ಸರಕಾರಕ್ಕೆ ತೆರೆಬಿದ್ದಂತಾಗಿದೆ. ಅವರಿಗೆ ಕೇಂದ್ರ ಸಚಿವ ಅನಂತಕುಮಾರ, ಶೋಭಾ ಕರಂದ್ಲಾಜೆ ಸಾಥ್ ನೀಡಿದರು.

ವಿಶ್ವಾಸಮತಯಾಚನೆ ಮಾಡದೆ ರಾಜೀನಾಮೆ ನೀಡಿದ ಯಡಿಯೂರಪ್ಪ

ಬೆಂಗಳೂರು : ವಿಶ್ವಾಸಮತಯಾಚನೆ ಮಾಡದೆ ರಾಜೀನಾಮೆ ನೀಡಿದ ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ಹೊಗಿ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರು. ಮತ್ತೇ ಜನಾದೇಶವನ್ನು ಸಾಕಾರಗೊಳಿಸಲು ಅಭಿವೃದ್ಧಿ ಮಾಡಲು ಆತ್ಮಸಾಕ್ಷಿಯಾಗಿ ಮತ ನೀಡಲು ಮನವಿ ಮಾಡುವುದಿಲ್ಲ. ಕುಟುಂಬದವರ ಜೊತೆಗೆ ಮಾತನಾಡಲು ಅವಕಾಶ ನೀಡಲಿಲ್ಲ. ಅವರನ್ನು ಒಂದು ತರಹ ಕೂಡಿ ಹಾಕಿ ದೌರ್ಜನ್ಯ ವೆಸಗಿದ್ದೀರಿ. ಹೀಗಾಗಿ ಅವರು ಭಯಭೀತರಾಗಿದ್ದಾರೆ. ಅವರಿಗೆ ನಾನು ಮತ ಹಾಕಿ ಎಂದು ಕೇಳಲ್ಲ. ರಾಜ್ಯಪಾಲರಿಗೆ ಹೋಗಿ ರಾಜೀನಾಮೆ ಕೊಡುತ್ತೇನೆ ಎಂದು ಯಡಿಯೂರಪ್ಪ ಘೋಷಿಸಿದರು. ಕಾಂಗ್ರೆಸ್ ಕುತಂತ್ರದಿಂದ ಜನಾದೇಶಕ್ಕೆ ಹಿನ್ನಡೆಯಾಗಿದೆ. ರಾಜ್ಯದ ಜನ 113 ಸ್ಥಾನ ಕೊಟ್ಟಿದ್ದರೆ ಅಭಿವೃದ್ಧಿ ಚಿತ್ರಣ ಬದಲಾಗುತ್ತಿತ್ತು. ಆದರೆ ನನಗೆ ಅಷ್ಟು ಸ್ಥಾನ ಬಂದಿಲ್ಲ. ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಚಿಂತನೆ ಮಾಡೋಣ ಆದರೆ ನಾಳೆ ಲೋಕಸಭೆಯಲ್ಲಿ 28 ಸ್ಥಾನ ಗೆದ್ದು ಪ್ರಧಾನಿಗೆ ಕೊಡುಗೆ ನೀಡುತ್ತೇನೆ. ಎರಡು ವರ್ಷಗಳ ಕಾಲ 150 ಸ್ಥಾನಗಳನ್ನು ಗೆದ್ದು ರಾಜ್ಯದ ಉದ್ದಗಲಕ್ಕೂ ಸಂಚಾರ ಮಾಡುತ್ತೇನೆ ಎಂದು ಪ್ರಕಟಿಸಿದರು.

ವಿಶ್ವಾಸ ಮತ ಪ್ರಸ್ತಾವನೆ ಸಲ್ಲಿಸಿ, ಭಾಷಣ ಆರಂಭಿಸಿದ ಯಡಿಯೂರಪ್ಪ

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಧಾನ ಸಭೆಯಲ್ಲಿ ವಿಶ್ವಾಸ ಮತ ಪ್ರಸ್ತಾವನೆ ಸಲ್ಲಿಸಿದರು. 104 ಶಾಸಕರನ್ನು ಆರಿಸಿ ನಮಗೆ ಅತಿಹೆಚ್ಚು ಸ್ಥಾನಗಳನ್ನು ನೀಡಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಅನ್ನು ತಿರಸ್ಕರಿಸಿದ್ದಾರೆ. ಜನಾದೇಶ ಸಿಕ್ಕಿಲ್ಲ. ಆರೋಪ, ಪ್ರತ್ಯಾರೋಪ ಮಾಡಿದ ಎರಡು ಪಕ್ಷಗಳ ನಾಯಕರು ಇಂದು ತರಾತುರಿಯಲ್ಲಿ ಒಂದಾಗಿದ್ದಾರೆ. ಎರಡು ಪಕ್ಷಗಳು ಜನಾದೇಶದ ವಿರುದ್ಧ ಅವಕಾಶವಾದಿ ರಾಜಕಾರಣ ಮಾಡುತ್ತಿವೆ. ಏಕೈಕ ದೊಡ್ಡ ಪಕ್ಷವಾದ ಬಿಜೆಪಿಯನ್ನ ರಾಜ್ಯಪಾಲರು ಕರೆದು ಸರಕಾರ ರಚನೆಗೆ ಆಮಂತ್ರಣ ಕೊಟ್ಟಿದ್ದಾರೆ. ದುಃಖ ತರುವ ಸಂಗತಿಯಾಗಿದೆ. ಅನ್ನದಾತ, ಕೃಷಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. 35 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆಂದಬೆಂದ ರೈತ ಸಮುದಾಯಕ್ಕೆ ನೆಮ್ಮದಿಯಿಂದ ಸ್ವಾಭೀಮಾನಕ್ಕೆ ಬದುಕಲು ಬಿಡಬೇಕು. ಬದುಕಿನ ಕೊನೆ ಉಸಿರು ಇರುವ ತನಕ ರೈತರು ನೆಮ್ಮದಿ, ಗೌರವ, ಸ್ವಾಭಿಮಾನದಿಂದ ಬದುಕಬೇಕಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನನಗೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿರುವುದಕ್ಕೆ ನಾನುಇಬ್ಬರಿಗೂ ಋಣಿಯಾಗಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಆಕ್ರೋಶ ಗೊಂಡಿದ್ದಾರೆ. ಇಬ್ಬರು ಶಾಸಕರಿಂದ ಹಿಡಿದು ಈವರೆಗೆ ಹೋರಾಟದ ಮೂಲಕ ನಡೆದು ಬಂದಿದ್ದೇನೆ. ನಾಡಿನ ಆರೂವರೆ ಕೋಟಿ ಕನ್ನಡಿಗರು ನನಗೆ ಹಗಲು ರಾತ್ರಿ ಎನ್ನದೆ ತೋರಿದ ಪ್ರೀತಿ, ವಿಶ್ವಾಸಕ್ಕೆ ನಾನು ಸದಾ ಋಣಿಯಾಗಿಡುತ್ತೇನೆ. ರೈತ ಸಮೂಹಕ್ಕಾಗಿ ನನ್ನ ಜೀವನ ಮೀಸಲು. ಮುಡುಪಾಗಿಡುತ್ತೆನೆ. ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲಮನ್ನಾ, ನೇಕಾರರ ಸಾಲಮನ್ನಾ ಮಾಡಬೇಕು ಎಂದು ಅಂದುಕೋಂಡಿದ್ದೇನೆ. ಹೀಗೆ ತಮ್ಮ ಪ್ರಣಾಳಿಕೆಯ ವಿವರ ಬಿಚ್ಚಿಟ್ಟರು.

ಮಧ್ಯಾಹ್ನ 3.30ಕ್ಕೆ ಮುಂದೂಡಿದ ವಿಧಾನ ಸಭೆ ಕಾರ್ಯಕಲಾಪ

ಬೆಂಗಳೂರು : ರಾಜ್ಯದ 221 ಶಾಸಕರ ಪೈಕಿ ಈವರೆಗೆ 195 ಶಾಸಕರು ಈವರೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು. ಈಗಾಗಲೇ ಎಲ್ಲ ಶಾಸಕರ ಪ್ರಮಾಣ ಸ್ವೀಕಾರ ಸಮಾರಂಭ ಪೂರ್ಣಗೊಳ್ಳುತ್ತಿದ್ದಂತೆ ವಿಧಾನ ಸಭೆಯ ಕಾರ್ಯ ಕಲಾಪವನ್ನು ಸ್ಪೀಕರ್ ಕೆ.ಜಿ. ಬೋಪಯ್ಯ ಅವರು ಮಧ್ಯಾಹ್ನ 3.30ಕ್ಕೆ ಮುಂದೂಡಿದ್ದು, ಇದೀಗ ಎಲ್ಲರೂ ಊಟಕ್ಕೆ ತೆರಳಿದ್ದಾರೆ. ಊಟದ ವಿರಾಮದ ನಂತರ ಮತ್ತೇ ಎಲ್ಲರೂ ಕಲಾಪಕ್ಕೆ ಆಗಮಿಸಿದ ನಂತರ ವಿಶ್ವಾಸ ಮತಯಾಚನೆ ಮಾಡಲಿದ್ದಾರೆಯೇ ಅಥವಾ ವಿಶ್ವಾಸ ಮತ ಯಾಚನೆ ಮಾಡದೆ ನೇರವಾಗಿ ಯಡಿಯೂರಪ್ಪ ಅವರು ತಮ್ಮ ಸಂಖ್ಯಾಬಲ ಸರಿ ಹೋಗದಿರುವ ಹಿನ್ನಲೆಯಲ್ಲಿ ತಮ್ಮ ರಾಜೀನಾಮೆ ನೀಡಲಿದ್ದಾರೆಯೇ ಎಂಬುದು ಕಾದು ನೋಡಬೇಕಿದೆ.

ರಾಜೀನಾಮೆಗೆ ಸಿದ್ಧಗೊಂಡರಾ ಯಡಿಯೂರಪ್ಪ ?

ಬೆಂಗಳೂರು : ವಿಶ್ವಾಸ ಮತ ಯಾಚನೆಗೆ ಸಂಖ್ಯಾಬಲ ಕೈಗೂಡದ ಹಿನ್ನಲೆಯಲ್ಲಿ ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ನೀಡಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆಪರೇಶನ್ ಕಮಲಕ್ಕೆ ಈವರೆಗೆ ಇಬ್ಬರು ಶಾಸಕರು ಹೊರತು ಪಡಿಸಿ ಯಾರೊಬ್ಬರು ಬಲಿಯಾಗದಿರುವ ಕುರಿತು ಈಗಾಗಲೇ ವರಿಷ್ಠರ ಗಮನಕ್ಕೆ ತಂದಿರುವ ಬಿಜೆಪಿ ನಾಯಕರು ವಿಧಾನಸಭೆಯಲ್ಲಿ 13 ಪುಟಗಳ ಒಂದು ಗಂಟೆಯ ಭಾಷಣವನ್ನು ಮಾಡಿದ ನಂತರ ಸೀದಾ ರಾಜ್ಯಪಾಲರ ಬಳಿ ತೆರಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ವರಿಷ್ಟರುಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರ ಸಲಹೆ ಮೇರೆಗೆ ಯಡಿಯೂರಪ್ಪ ಅವರು ಮುಂದಿನ ಹೆಜ್ಜೆ ಇಡುವ ಸಾಧ್ಯತೆಯಿದೆ. ಏನೂಗತ್ತೋ ಎನೋ ಕಾದು ನೋಡಬೇಕಿದೆ.

ಸೋಮಶೇಖರ ರಡ್ಡಿ ಜೊತೆಗೆ ಕಾಣಿಸಿಕೊಂಡ ಪ್ರತಾಪಗೌಡ

ಬೆಂಗಳೂರು : ಮಸ್ಕಿ ಶಾಸಕ ಪ್ರತಾಪ ಗೌಡ ಪಾಟೀಲ ಅವರು ಬಳ್ಳಾರಿ ನಗರ ಶಾಸಕ ಸೋಮಶೇಖರರಡ್ಡಿ ಅವರ ಜೊತೆಗೆ ಇಂದು ಪ್ರತ್ಯಕ್ಷವಾಗಿದ್ದಾರೆ. ಬೆಂಗಳೂರಿನ ಗೋಲ್ಡ್ ಪಿಂಚ್ ಹೋಟೆಲ್ ನಲ್ಲಿ ಇದ್ದ ಶಾಸಕರಿಗೆ ಮಾಜಿ ಸಚಿವ ಹೆಚ್.ಎಂ. ರೇವಣ್ಣ ಹಾಗೂ ಸಂಸದ ಡಿ.ಕೆ. ಸುರೇಶ ಅವರು ಪಕ್ಷದ ವಿಪ್ ನೀಡಲು ತೆರಳಿದ್ದರು. ಈ ವೇಳೆ ಅವರು ಇವರೊಂದಿಗೆ ಮಾತನಾಡಬೇಕು ಎಂದು ಕೊಂಡಿರುವಾಗಲೇ ಸ್ಥಳಕ್ಕೆ ಆಗಮಿಸಿದ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ನೀಲಮಣಿರಾಜು ಹಾಗೂ ಬೆಂಗಳೂರು ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ ಅವರು ಬಂದರು. ಇದರಿಂದಾಗಿ ಅವರಿ ಗೆ ವಿಪ್ ನೀಡಲು ಆಗಲಿಲ್ಲ. ಹೀಗಾಗಿ ಬರಿಗೈಯಲ್ಲಿ ಕಾಂಗ್ರೆಸ್ ನಾಯಕರು ಅಲ್ಲಿಂದ ಬರಿಗೈಯಲ್ಲಿ ತೆರಳಿದರು. ಪೊಲೀಸ್ ಭದ್ರತೆ ನೀಡಲು ಶಾಸಕರು ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಬಿ.ಸಿ. ಪಾಟೀಲ ಗೆ ಆಮಿಷ ಒಡ್ಡಿದ ಯಡಿಯೂರಪ್ಪ

ಬೆಂಗಳೂರು : ಹಿರೇಕೆರೂರ ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ ಅವರಿಗೆ ಸ್ವತಃ ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಮಿಷ ಒಡ್ಡಿರುವ ಆಡಿಯೋ ಧ್ವನಿ ಸುರಳಿ ಬಿಡುಗಡೆಗೊಳಿಸಿದ್ದಾರೆ. ಈ ಆಡಿಯೋ ರಾಜ್ಯ ರಾಜಕಾರಣದಲ್ಲಿ ಭಾರೀ ಬಿರುಗಾಳಿ ಸೃಷ್ಟಿಸಿದೆ. ಇದನ್ನು ಫಾರೇನ್ ಸಿಕ್ ಲ್ಯಾಬ್ ಗೆ ಕಳುಹಿಸಿದ ನಂತರ ಇದರ ಸತ್ಯಾಸತ್ಯತೆ ಬಯಲಿಗೆ ಬರಲಿದೆ. ಬಿ.ಸಿ. ಪಾಟೀಲ ಜೊತೆಗೆ ಮೊಬೈಲ್ ನಲ್ಲಿ ಮಾತನಾಡಿರುವ ಯಡಿಯೂರಪ್ಪ ಅವರು ಎಲ್ಲಿದ್ದಿಯಾ, ನೀನು ಕೊಚ್ಚಿನ್ ಗೆ ಹೋಗಕೂಡದು. ಬೇಗ ಬಂದು ಬಿಡು. ನನ್ನ ಮೇಲೆ ಭರವಸೆ ಇದೆ ತಾನೇ. ನಾನು ನೀನಗೆ ಕೈ ಬಿಡುವುದಿಲ್ಲ. ಮಂತ್ರಿ ಸ್ಥಾನ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ಆಮಿಷ ಒಡ್ಡಿರುವುದು ಸಂಭಾಷಣೆಯಲ್ಲಿ ದಾಖಲಾಗಿದೆ. ನಿನ್ನೆಯಿಂದ ಇದು ಮೂರನೇ ಆಡಿಯೋ ಬಿಡುಗಡೆ ಯಾಗಿದ್ದು, ಬಿಜೆಪಿ ಇದನ್ನು ತಳ್ಳಿ ಹಾಕಿದೆ. ಕಾಂಗ್ರೆಸ್ ಪಿತೂರಿ ನಡೆಸಿ, ಮಿಮಿಕ್ರಿ ಆರ್ಟಿಸ್ಟ್ ಗಳನ್ನು ಮುಂದಿಟ್ಟುಕೊಂಡು ಆಟವಾಡುತ್ತಿದೆ ಎಂದು ದೂರಿದೆ.

ಯಡಿಯೂರಪ್ಪ ವಿಜಯಶಾಲಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದ ಜ್ಯೋತಿರ್ವಿಜ್ಞಾನಿ

ಉಡುಪಿ : ವಿಶ್ವಾಸಮತ ಯಾಚನೆಯಲ್ಲಿ ಬಿ.ಎಸ್. ಯಡಿಯೂರಪ್ಪ ವಿಜಯಶಾಲಿಯಾಗಲಿದ್ದಾರೆ ಎಂದು ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ. ಈ ಕುರಿತು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಬರೆದುಕೊಂಡಿರುವ ಅವರು, ಯಡಿಯೂರಪ್ಪ ನವರ ರಾಶಿಯಲ್ಲಿ ಚಂದ್ರನಿಗೆ ಇಂದು ನೀಚಭಂಗ ಯೋಗವಿದೆ. ಇದರಿಂದ ಬಿ.ಎಸ್ ಯಡಿಯೂರಪ್ಪನವರಿಗೆ ರಾಜಯೋಗವಿದೆ ಎಂದು ಲೆಕ್ಕಾಚಾರ ಹಾಕಿದ್ದಾರೆ. ಯಡಿಯೂರಪ್ಪ ಅವರ ಏಕಾದಶ ಸ್ಥಾನದಲ್ಲಿ ಗುರುಬಲ ಇದೆ. ಇಂದಿನ ದಿನವೂ ಚೆನ್ನಾಗಿದೆ. ಹೀಗಾಗಿ ಸಂಜೆ 4.30 ರ ಒಳಗೆ ವಿಶ್ವಾಸಮತ ಯಾಚನೆ ಮಾಡಬೇಕು. ಸಂಜೆ 5 ಗಂಟೆ ನಂತರ ಗಳಿಗೆಗಳು ಸರಿಯಿಲ್ಲ. ಬಿ.ಎಸ್ ವೈಯವರದ್ದು ಹೋರಾಟವೇ ಜೀವನ. ಇವತ್ತು ಕೂಡಾ, ಹೋರಾಟ ನಡೆಸಿಯೇ ಗೆಲ್ಲುತ್ತಾರೆ ಎಂದು ಪ್ರಕಾಶ ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ.

ಯುವ ಪತ್ರಕರ್ತ ನೇಣಿಗೆ ಶರಣು

ವಿಜಯಪುರ: ಯುವ ಪತ್ರಕರ್ತನೊಬ್ಬ ನೇಣಿಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ. 35 ವರ್ಷದ ವೀರೇಶ ಮಠ ಆತ್ಮಹತ್ಯೆ ಮಾಡಿಕೊಂಡ ಯುವ ಪತ್ರಕರ್ತರಾಗಿದ್ದಾರೆ. ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಪತ್ರಕರ್ತ ವೀರೇಶ ಕೌಟುಂಬಿಕ ಸಮಸ್ಯೆ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ಈ ಹಿಂದೆ ವೀರೇಶ ತಂದೆ-ತಾಯಿ ಸಾವನ್ನಪ್ಪಿದ್ದರು. ಸದ್ಯ ಪತ್ನಿ, ಪುತ್ರ, ಇಬ್ಬರು ಅಣ್ಣಂದಿರು, ಇಬ್ಬರು ಅಕ್ಕಂದಿರನ್ನು ಅಗಲಿರುವ ವಿರೇಶ ಮಠ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ 2007ರ ಹಳೆಯ ವಿದ್ಯಾರ್ಥಿಯಾಗಿದ್ದರು. ಶನಿವಾರ ಸಂಜೆ 6 ಗಂಟೆ ಸುಮಾರಿಗೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬೂದಿಹಾಳ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ವೀರೇಶ ನಿಧನಕ್ಕೆ ವಿಜಯಪುರ ಜಿಲ್ಲೆಯ ಪತ್ರಕರ್ತರು ಕಂಬನಿ ಮಿಡಿದಿದ್ದಾರೆ.

ಹಾವು ಕಚ್ಚಿ ಬಾಬಾಸಾಬ ಪಾಟೀಲ ನಿಧನ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಳ್ಯಾಳ ಗ್ರಾಮದ ಪಂಚಮಸಾಲಿ ಸಮಾಜದ ಮುಖಂಡರು ಹಾಗೂ ಶಿವಶಕ್ತಿ ಜಗದ್ಗುರು ವಿದ್ಯಾ ಸಂಸ್ಥೆಯ ಅಧ್ಯಕ್ಷರಾಗಿದ್ದ ಬಾಬಾಸಾಬ ರಾಚಗೌಡ. ಪಾಟೀಲ (೪೬) ನಿಧನರಾಗಿದ್ದಾರೆ. ಅವರು ಶುಕ್ರವಾರ ಸಂಜೆ ತೋಟದಲ್ಲಿ ತೀರುಗಾಡುವಾಗ ಹಾವು ಕಚ್ಚಿತು ನಂತರ ಬಾಯಿಯಲ್ಲಿ ನೋರೆ ಬರುತ್ತಿದೆ ಎಂದು ಗೊತ್ತಾದಾಗ ಅವರನ್ನು ತಕ್ಷಣ ಆಸ್ಪತ್ರೇಗೆ ಕರೆದುಕೊಂಡು ಹೋಗಲಾಯಿತು. ಆದರೆ ದಾರಿಯಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಶನಿವಾರ ಮುಂಜಾನೆ ತೋಟದಲ್ಲಿ ನೆರವೇರಿಸಲಾಯಿತು. ಅವರಿಗೆ ತಾಯಿ, ಸಹೋದರ, ಪತ್ನಿ, ಪುತ್ರ ಪುತ್ರಿ ಸೇರಿದಂತೆ ಅನೇಕ ಬಳಗ ಇದ್ದಾರೆ.

ಶಾಸಕ ಎಚ್ ಕೆ ಪಾಟೀಲ್ ಗೆ ವಿಶ್ವಾಸ ಮತಕ್ಕೆ ಅವಕಾಶ ನೀಡದಂತೆ ಪತ್ರ

ಗದಗ : ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್ ಕೆ ಪಾಟೀಲ್ ಗೆ ವಿಶ್ವಾಸ ಮತಕ್ಕೆ ಅವಕಾಶ ನೀಡದಂತೆ ಸಭಾಪತಿ ಕೆ ಜಿ ಬೋಪಯ್ಯ ಗೆ ಫ್ಯಾಕ್ಸ್ ಮೂಲಕ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ದೂರು ನೀಡಿದ್ದಾರೆ. ಗದಗ ಕ್ಷೇತ್ರದಲ್ಲಿ ನಡೆದ ಚುನಾವಣಾ ಅಕ್ರಮ ಕುರಿತು ಪತ್ರ ಬರೆದಿರುವ ಅನಿಲ್ ಮೆಣಸಿನಕಾಯಿ ಅವರು ಸ್ಪೀಕರ್ ಕೆ.ಜಿ.ಬೋಪಯ್ಯ ಗೆ ಫ್ಯಾಕ್ಸ್ ಮಾಡಿದ್ದಾರೆ. ಅನಿಲ್ ಮೆಣಸಿನಕಾಯಿ ಗದಗನ ಬಿಜೆಪಿ ಪರಾಜಿತ ಅಭ್ಯರ್ಥಿಯಾಗಿದ್ದಾರೆ. ಎಚ್.ಕೆ. ಪಾಟೀಲ್ ಅವರ ಪುತ್ರ ಕೃಷ್ಣೇಗೌಡ ಪಾಟೀಲರಿಂದ ಎರಡು ಕಡೆ ಮತದಾನವಾಗಿದೆ. ಹುಲಕೋಟಿಯಲ್ಲಿ ಎರಡು ಕಡೆ ಮತದಾನ ಮಾಡಿದ ಕೃಷ್ಣೇಗೌಡ ಪಾಟೀಲ ಅವರು ಬೇರೆ ಬೇರೆ ಮನೆ ಸಂಖ್ಯೆ ನೀಡಿ ಎರಡು ಮತದಾನ ಹೊಂದಿರುವ ಎಚ್ಕೆ ಪಾಟೀಲ ಪುತ್ರ. ಇದು ಕಾನೂನು ಬಾಹಿರ ಕ್ರಮ ಎಂದು ಅನಿಲ್ ಮೆಣಸಿನಕಾಯಿ ಗಂಭೀರ ಆರೋಪ ಮಾಡಿದ್ದಾರೆ. ನಕಲಿ ಮತದಾನ, ಎರಡು ಕಡೆ ಮತದಾನ, ಮರಣ ಹೊಂದಿದವರ ಮತದಾನ ಕುರಿತು ಸ್ಪೀಕರ್ ಗೆ ಫ್ಯಾಕ್ಸ್ ಮಾಡಲಾಗಿದೆ. ಹೀಗಾಗಿ ಎಚ್.ಕೆ. ಪಾಟೀಲರ ಶಾಸಕತ್ವ ತಡೆ ಹಿಡಿಯಬೇಕೆಂದು ಮನವಿ ಮಾಡಿದ್ದಾರೆ. ಇದನ್ನು ಸ್ಪೀಕರ್ ತಡೆ ಹಿಡಿಯುತ್ತಾರೆಯೇ ಇಲ್ಲವೇ ಕಾದು ನೋಡಬೇಕಿದೆ.

ಶಾಸಕರ ಪತ್ನಿಗೆ 15 ಕೋಟಿ ಆಮಿಷ ಒಡ್ಡಿದ ಯಡಿಯೂರಪ್ಪ ಪುತ್ರ ವಿಜಯೇಂದ್ರ

ಬೆಂಗಳೂರು : ಕಾಂಗ್ರೆಸ್ ಶಾಸಕರೊಬ್ಬರ ಪತ್ನಿಗೆ ಕರೆ ಮಾಡಿದ ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು 15 ಕೋಟಿ ಆಮಿಷ ಒಡ್ಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಆರೋಪಿಸಿದ್ದಾರೆ. ಈ ಕುರಿತು ಆಡಿಯೋ ಬಿಡುಗಡೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿ ಸ್ಥಾನ ಹಾಗೂ ಐದು ಕೋಟಿ ನಗದು, ಇಲ್ಲವೇ ಮಂತ್ರಿ ಬೇಡ ಎಂದರೆ 15 ಕೋಟಿ ನೀಡುವ ಭರವಸೆ ನೀಡಿದ ಆಡಿಯೋ ಇದಾಗಿದೆ ಎಂದು ದೂರಿದರು. ಇದಲ್ಲದೆ, ಯಡಿಯೂರಪ್ಪ ಅವರ ಆಪ್ತ ಹಾಗೂ ಬಿಜೆಪಿಯ ಹಿಂದುಳಿದ ವರ್ಗಗಳ ಘಟಕ ರಾಜ್ಯಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಅವರು ಕೂಡ ಇಂತಹದೆ ಆಫರ್ ನೀಡಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ವಿಜಯೇಂದ್ರ ನೀಡಿದ ಆಫರ್ ಗೆ ನಮ್ಮ ಸಹಮತವಿದೆ ಎಂದು ಯಡಿಯೂರಪ್ಪ ಪುತ್ರ ಸಹಮತ ವ್ಯಕ್ತಪಡಿಸಿದ ಆಡಿಯೋ ಇದಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಮಾಣ ವಚನಕ್ಕೆ ಗೈರು ಹಾಜರಾದ ಪ್ರತಾಪ ಗೌಡ, ಆನಂದ್ ಸಿಂಗ್

ಬೆಂಗಳೂರು: ವಿಧಾನಸಭೆಯ ಕಾರ್ಯ ಕಲಾಪದ ವೇಳೆ ಹೊಸಪೇಟೆಯ ಶಾಸಕ ಆನಂದ್ ಸಿಂಗ್ ಹಾಗೂ ಮಸ್ಕಿ ಶಾಸಕ ಪ್ರತಾಪ್ ಗೌಡ ಅವರು ಗೈರು ಹಾಜರಾಗಿದ್ದಾರೆ. ಹಂಗಾಮಿ ಸ್ಪೀಕರ್ ಕೆ.ಜಿ. ಬೋಪಯ್ಯ ಅವರ ಸೂಚನೆ ಮೇರೆಗೆ ವಿಧಾನ ಸಭೆ ಕಾರ್ಯದರ್ಶಿ ಎಸ್. ಮೂರ್ತಿ ಇಬ್ಬರು ಶಾಸಕರ ಹೆಸರನ್ನು ಕೂಗಿದರು. ಆದರೆ ಪ್ರಮಾಣ ವಚನ ಸ್ವೀಕಾರ ವೇಳೆ ಅವರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಈ ಹಿನ್ನಲೆಯಲ್ಲಿ 112 ಕ್ಕೆ ಇದ್ದ ಮ್ಯಾಜಿಕ್ ಸಂಖ್ಯೆ 110ಕ್ಕೆ ಇಳಿದಿದಂತಾಗಿದೆ.

ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿ 221 ಶಾಸಕರ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು : ವಿಧಾನ ಸಭೆಯ ಕಾರ್ಯಕಲಾಪಗಳು ಆರಂಭಗೊಂಡಿದ್ದು, ಮೊದಲಿಗೆ ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶಾಸಕರಾಗಿ ಪ್ರಮಾಣ ವಚನ ಸ್ಪೀಕರಿಸಿದರು. ಆನಂತರ ತಲಾ ಐದು ಶಾಸಕರಂತೆ ಪ್ರಮಾಣ ವಚನ ಸ್ವೀಕಾರ ಆರಂಭಗೊಂಡಿದೆ. ಇನ್ನುಳಿದಂತೆ ಹೊಸಪೇಟೆಯ ಶಾಸಕ ಆನಂದ ಸಿಂಗ್ ಹಾಗೂ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ಮಾತ್ರ ಈವರೆಗೆ ವಿಧಾನ ಸಭೆಗೆ ಗೈರು ಹಾಜರಾಗಿದ್ದಾರೆ. ಮಧ್ಯಾಹ್ನದ ನಂತರ ಅಂದರೆ ಸಂಜೆ ನಾಲ್ಕು ಗಂಟೆಯ ಒಳಗೆ ವಿಧಾನ ಸಭೆಯ ಕಾರ್ಯ ಕಲಾಪಕ್ಕೆ ಆಗಮಿಸಬಹುದು ಇಲ್ಲವೇ ಕಲಾಪದಿಂದವೇ ದೂರ ಉಳಿಯಬಹುದು.

ಇಳಕಲ್ ನ ಡಾ. ಮಹಾಂತಪ್ಪಗಳು ಲಿಂಗೈಕ್ಯ

ಬೆಳಗಾವಿ : ಉತ್ತರ ಕರ್ನಾಟಕ ಭಾಗದ ಲಕ್ಷಾಂತರ ಭಕ್ತ ಸಮೂಹವನ್ನು ಹೊಂದಿದ್ದ ಚಿತ್ತರಗಿ ಮಹಾ ಸಂಸ್ಥಾನದ ಪರಮ ಪೂಜ್ಯ ಇಳಕಲ್ ನ ಡಾ. ಮಹಾಂತಪ್ಪ ಗಳು ಲಿಂಗೈಕ್ಯರಾಗಿದ್ದಾರೆ. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನ ಬೆಳಗಾವಿಯ ಕೆ ಎಲ್ ಇ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶನಿವಾರ ಬೆಳಗ್ಗೆ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ. ಕಿಡ್ನಿ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಅವರ ಅಗಲಿಕೆಗೆ ಭಕ್ತ ಸಮೂಹಕ್ಕೆ ಹಾಗೂ ವಿಶೇಷವಾಗಿ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಇಳಕಲ್ ನ ಮಹಾಂತಪ್ಪನವರು ತಮ್ಮ ಭಕ್ತ ಸಮೂಹದ ಉದ್ದಾರಕ್ಕಾಗಿ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿ ಅವುಗಳನ್ನು ಬಿಡಿರಿ ಎಂಬ ಸಂದೇಶ ಸಾರಲು ಮಹಾಂತ ಜೋಳಿಗೆ ಅಭಿಯಾನ ಆರಂಭಿಸುವ ಮೂಲಕ ನಾಡಿನ ಮನೆ ಮಾತಾಗಿದ್ದರು. ಇದರಿಂಗಾಗಿ ಅನೇಕ ಭಕ್ತರು ಗುಟ್ಕಾ, ಮದ್ಯಪಾನ ಮುಕ್ತರನ್ನಾಗಿ ಮಾಡುವ ಮೂಲಕ ಇಂದಿಗೂ ಅವರ ಮನದಲ್ಲಿ ಹಚ್ಚ ಹಸಿರಾಗಿದ್ದಾರೆ. ಆ ಅಭಿಯಾನ ಆರಂಭಿಸಿದ ನಂತರ ಮಹಾಂತ ಜೋಳಿಗೆಯ ಮಾದರಿಯಲ್ಲಿಯೇ ಅನೇಕ ಮಠಾಧೀಶರು ಇದನ್ನು ಅನುಸರಿಸಿದ್ದರು. ಮಹಾಂತ ಜೋಳಿಗೆಯ ಹರಿಕಾರರಾಗಿದ್ದ ಇಳಕಲ್ ಮಹಾಂತಪ್ಪ ಅಗಲಿಕೆಗೆ ಭಕ್ತ ಸಮೂಹ ಕಂಬನಿ ಮಿಡಿದಿದೆ.

ಬೋಪಯ್ಯ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ನವದೆಹಲಿ : ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿರುವ ಕೆ.ಜಿ. ಬೋಪಯ್ಯ ಅವರ ನೇಮಕಾತಿಯನ್ನು ಸುಪ್ರಿಂಕೋರ್ಟ್ ಎತ್ತಿ ಹಿಡಿದಿದೆ. ಕಾಂಗ್ರೆಸ್ ಪಕ್ಷದ ಪರವಾಗಿ ಸಲ್ಲಿಸಿದ ಹಿರಿಯ ವಕೀಲ ಕಪಿಲ್ ಸೀಬಲ್ ಅವರ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಹಿರಿಯ ವಕೀಲರಾದ ಕಪಿಲ್ ಸೀಬಲ್ ಅವರು ಸುಪ್ರೀಂಕೋರ್ಟ್ ಮುಂದೆ ಬೋಪಯ್ಯ ಅವರು ಪಕ್ಷಪಾತಿಯಾಗಿದ್ದು, ಅವರ ನಡೆಯ ಮೇಲೆ ನಮಗೆ ಅನೇಕ ಅನುಮಾನಗಳಿವೆ. ಅವರು ಹಿರಿಯ ಶಾಸಕರಲ್ಲ. ಅವರೊಬ್ಬ ಕಿರಿಯ ಶಾಸಕರು. ಶಾಸಕರಿಗೆ ಪ್ರಮಾಣ ವಚನ ಭೋದಿಸುವುದು ಸರಿ. ಆದರೆ ಮೇಲ್ವಿಚಾರಣೆ ಸರಿಯಲ್ಲ ಎಂದು ವಾದ ಮಂಡಿಸಿದರು. ಇದಕ್ಕೆ ಬಿಜೆಪಿಯ ವಕೀಲ ಮುಕುಲ್ ರೋಹಟಗಿ ಅವರು ಕೂಡ ಸಹಮತ ವ್ಯಕ್ತಪಡಿಸಿದರು. ಮೂವರು ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಅಶೋಕ್ ಭೂಷಣ್ ಮತ್ತು ಶರತ್ ಬೊಬ್ಡೆಯವರ ತ್ರಿಸದಸ್ಯ ಪೀಠವು ನಿನ್ನೆ ನಾವು ನೀಡಿದ ಆದೇಶದ ವಿರುದ್ಧವಾಗಲಿದೆ. ಹೀಗಾಗಿ ಅವರೇ ಮುಂದುವರೆಯಲಿ ಎಂದು ಅಭಿಪ್ರಾಯಪಟ್ಟಿತು.

ಹಂಗಾಮಿ ಸ್ಪೀಕರ್ ನೇಮಕ ಕುರಿತು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಆರಂಭ

ನವದೆಹಲಿ : ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿರುವ ಕೆ.ಜಿ. ಬೋಪಯ್ಯ ಅವರ ನೇಮಕಾತಿಯನ್ನು ಪ್ರಶ್ನಿಸಿ ಸುಪ್ರಿಂಕೋರ್ಟ್ ಮೆಟ್ಟಿಲು ಹತ್ತಿರುವ ಕಾಂಗ್ರೆಸ್ ಪಕ್ಷದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ. ಹಿರಿಯ ವಕೀಲರಾದ ಕಪಿಲ್ ಸೀಬಲ್ ಅವರು ಸುಪ್ರೀಂಕೋರ್ಟ್ ಮುಂದೆ ಬೋಪಯ್ಯ ಅವರು ಪಕ್ಷಪಾತಿಯಾಗಿದ್ದು, ಅವರ ನಡೆಯ ಮೇಲೆ ನಮಗೆ ಅನೇಕ ಅನುಮಾನಗಳಿವೆ. ಅವರು ಹಿರಿಯ ಶಾಸಕರಲ್ಲ. ಅವರೊಬ್ಬ ಕಿರಿಯ ಶಾಸಕರು. ಶಾಸಕರಿಗೆ ಪ್ರಮಾಣ ವಚನ ಭೋದಿಸುವುದು ಸರಿ. ಆದರೆ ಮೇಲ್ವಿಚಾರಣೆ ಸರಿಯಲ್ಲ ಎಂದು ವಾದ ಮಂಡಿಸಿದರು. ಮೂವರು ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಅಶೋಕ್ ಭೂಷಣ್ ಮತ್ತು ಶರತ್ ಬೊಬ್ಡೆಯವರ ತ್ರಿಸದಸ್ಯ ಪೀಠದ ಮುಂದೆ ವಾದ ಮಂಡಿಸುತ್ತಿದ್ದಾರೆ.

ವಿಧಾನಸೌಧ ತಲುಪಿದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು

ಬೆಂಗಳೂರು : ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿಶ್ವಾಸ ಮತ ಯಾಚನೆ ಹಿನ್ನಲೆಯಲ್ಲಿ ವಿವಿಧ ಹೋಟೆಲ್ ಗಳಲ್ಲಿ ತಂಗಿದ್ದ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ವಿಧಾನ ಸೌಧ ತಲುಪಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಆಗಮಿಸಿದ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಒಂದಡೆಯಾದರೆ, ಬಿಜೆಪಿ ಶಾಸಕರು ಕೂಡ ಹೋಟೆಲ್ ಶಾಂಗ್ರಿಲಾದಿಂದ ವಿಧಾನ ಸೌಧದ ವರೆಗೆ ಬಸ್ ನಲ್ಲಿಯೇ ಆಗಮಿಸಿದ್ದುವಿಶೇಷವಾಗಿತ್ತು. ಮೂರು ನಾಲ್ಕು ಪ್ರತ್ಯೇಕ ಬಸ್ ಗಳಲ್ಲಿ ಹೊರಟ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಶಾಸಕರು ವಿಧಾನ ಸೌಧದಲ್ಲಿ ನಡೆದ ಎಲ್ಲ ತಪಾಸಣೆಗೆ ಸಹಕರಿಸಿದರು. ಗುರುತಿನ ಚೀಟಿ ಹಾಗೂ ನೂತನ ಶಾಸಕರಾಗಿ ಆಯ್ಕೆಯಾದ ಪ್ರಮಾಣಪತ್ರಗಳನ್ನು ಹೊಂದಿರುವ ಶಾಸಕರಿಗಷ್ಟೇ ಒಳಗಡೆ ಪ್ರವೇಶವಕಾಶ ಕಲ್ಪಿಸಲಾಗಿದೆ. ವಿಶ್ವಾಸ ಮತ ಯಾಚನೆಯಲ್ಲಿ ಯಡಿಯೂರಪ್ಪ ಗೆದ್ದು ಬರ್ತಾರಾ ಅಥವಾ ಇಲ್ಲವೇ ಎಂಬುದು ಸಂಜೆ 4 ಗಂಟೆಯ ವೇಳೆಗೆ ಸ್ಪಷ್ಟವಾಗಲಿದೆ.

ದೇವರ ಮೊರೆ ಹೋದ ಯಡಿಯೂರಪ್ಪ ಪುತ್ರಿ, ಅಭಿಮಾನಿಗಳು

ತುಮಕೂರ/ಮೈಸೂರ : ವಿಶ್ವಾಸ ಮತ ಯಾಚನೆಯಲ್ಲಿ ಯಶಸ್ವಿಯಾಗಲಿ, ಮತ್ತೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂದು ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರಿ ಪುತ್ರಿ ಉಮಾದೇವಿ ಅವರು ತುಮಕೂರಿನ ಯಡಿಯೂರು ಸಿದ್ದಲಿಂಗೇಶ್ವರನ ಸನ್ನಿಧೀಯಲ್ಲಿ ರುದ್ರಾಭಿಷೇಕ ಮಾಡಿಸಿದರು. ಅಲ್ಲದೆ, ದಿನವೀಡಿ ಅಲ್ಲಿಯೇ ಇದ್ದು ಪೂಜೆ, ಪುನಸ್ಕಾರ ನಡೆಸಲಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಯಡಿಯೂರು ಸಿದ್ದಲಿಂಗೇಶ್ವರ ಯಡಿಯೂರಪ್ಪ ಅವರ ಮನೆ ದೇವರು ಆಗಿರುವುದರಿಂದ ಈ ಪೂಜೆ, ಪ್ರಾರ್ಥನೆ ಭಾರೀ ಮಹತ್ವ ಪಡೆದುಕೊಂಡಿದೆ. ಅದೇ ರೀತಿ ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಚಾಮುಂಡೇಶ್ವರಿ ಬೆಟ್ಟವನ್ನು ನಡೆದುಕೊಂಡು ಹತ್ತುವ ಜೊತೆಗೆ ತಾಯಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಪುನಸ್ಕಾರಕ್ಕೆ ಮೊರೆ ಹೋಗಿದ್ದಾರೆ. ಇದಲ್ಲದೆ, ನಾಡಿನ ವಿವಿಧೆಡೆ ಯಡಿಯೂರಪ್ಪ ಅಭಿಮಾನಿಗಳು ವಿವಿಧ ದೇವಸ್ಥಾನಗಳಲ್ಲಿ ಪೂಜೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ವಿಧಾನ ಸಭೆಗೆ ಆಗಮಿಸಿ ಸಿದ್ಧತೆ ಪರಿಶೀಲನೆ ನಡೆಸಿದ ಹಂಗಾಮಿ ಸ್ಪೀಕರ್

ಬೆಂಗಳೂರು : ತೀವ್ರ ಕುತೂಹಲ ಕೆರಳಿಸಿರುವ ಹಂಗಾಮಿ ಸ್ಪೀಕರ್ ಕೆ.ಜಿ. ಬೋಪಯ್ಯ ಅವರ ನೇಮಕ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿರುವ ಬೆನ್ನ ಹಿಂದೆಯೇ ಬೋಪಯ್ಯ ಅವರು ಶನಿವಾರ ಬೆಳಗ್ಗೆ ವಿಧಾನಸೌಧಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು. ಅವರಿಗೆ ವಿಧಾನ ಸಭೆ ಕಾರ್ಯದರ್ಶಿ ಎಸ್. ಮೂರ್ತಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿರುವ ಕುರಿತು ಮಾಹಿತಿ ನೀಡಿದರು. ವಿಧಾನ ಸಭೆಯ ಕಾರ್ಯ ಕಲಾಪ ಸುಗಮವಾಗಿ ನಡೆಸಲು ಬೇಕಿರುವ ಸಿಬ್ಬಂದಿ, ವಿಧಾನಸೌಧದ ಒಳಗಡೆ ಹಾಗೂ ಹೊರಗಡೆ ಪೊಲೀಸ್ ಭದ್ರತೆ ಸೇರಿದಂತೆ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಜಿ. ಬೋಪಯ್ಯ ಅವರು ವಿಧಾನಸಭೆಯ ವಿಶ್ವಾಸ ಮತ ಯಾಚನೆ ಕಾರ್ಯ ಕಲಾಪವನ್ನು ಸುಲಭವಾಗಿ ನಡೆಸಲಾಗುವುದು ಎಂದು ಹೇಳಿದರು.

ಬೆಂಗಳೂರು ತಲುಪಿದ ಕಾಂಗ್ರೆಸ್-ಜೆಡಿಎಸ್ ಶಾಸಕರು

ಬೆಂಗಳೂರು : ಆಪರೇಶನ ಕಮಲದಿಂದ ಅಂತರ ಕಾಯ್ದುಕೊಳ್ಳಲು ಹೈದ್ರಾಬಾದ್ ಗೆ ತೆರಳಿದ್ದ ರಾಜ್ಯದ 78 ಕಾಂಗ್ರೆಸ್ ಶಾಸಕರು, 37 ಜೆಡಿಎಸ್ ಶಾಸಕರು ಹಾಗೂ ಇಬ್ಬರು ಪಕ್ಷೇತರ ಶಾಸಕರು ಶನಿವಾರ ಬೆಳಗ್ಗೆ ಬೆಂಗಳೂರಿಗೆ ಬಂದು ತಲುಪಿದರು. ಬೆಂಗಳೂರಿನ ಲೀ ಮೇರಿಡಿಯೇನ್ ಹೊಟೇಲ್ ಗೆ ಆಗಮಿಸಿದ ಎಲ್ಲ ಶಾಸಕರು ಬೆಳಗ್ಗೆ ಉಪಹಾರ ಸೇವಿಸಿ ವಿಧಾನ ಸೌಧಕ್ಕೆ ತೆರಳಲಿದ್ದಾರೆ. ಸುಪ್ರೀಂಕೋರ್ಟ್ ಸೂಚನೆ ಹಿನ್ನಲೆಯಲ್ಲಿ ಅವರಿಗೆ ಬೆಂಗಳೂರಿನ ಗಡಿ ಭಾಗದಿಂದ ರಾಜ್ಯದ ಪೊಲೀಸರು ಬಿಗಿ ಪೊಲೀಸ್ ಬಂದೊಬಸ್ತ್ ನೀಡಿದ್ದರು. ಕಾಂಗ್ರೆಸ್ ನ ಇಬ್ಬರು ಶಾಸಕರಾದ ಆನಂದ ಸಿಂಗ್ ಹಾಗೂ ಪ್ರತಾಪಗೌಡ ಪಾಟೀಲ ಈವರೆಗೆ ಬಿಜೆಪಿ ಪರನಾ ಅಥವಾ ಕಾಂಗ್ರೆಸ್ ಪರನಾ ಎಂಬುದು ಈವರೆಗೆ ಬಹಿರಂಗಗೊಂಡಿಲ್ಲ. ಅವರು ಯಾರ ಪರ ಇದ್ದಾರೆ ಎಂಬುದು ಸಂಜೆ ವೇಳೆಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.

ನಾಳೆ ಸಾಲಮನ್ನಾ ಆದೇಶ ಮಾಡುವ ಭರವಸೆ ನೀಡಿದ ಯಡಿಯೂರಪ್ಪ

ಬೆಂಗಳೂರು : ವಿಶ್ವಾಸಮತ ಯಾಚನೆ ಸಂಕಷ್ಟಕ್ಕೆ ಸಿಲುಕಿರುವ ನೂತನಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಹುಮತ ಸಾಬೀತು ಪಡಿಸಿ,ಗೆದ್ದು ಬರುವುದಾಗಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸಂಜೆ ನಾಲ್ಕುಗಂಟೆಗೆ ವಿಧಾನಸೌಧದಲ್ಲಿ ನಡೆಯುವ ವಿಶ್ವಾಸ ಮತ ಯಾಚನೆ ಶಾಂತವಾಗಿ ನಡೆಯಲಿದೆ. ನಾವು ನಮ್ಮ ಸಂಖ್ಯಾಬಲವನ್ನು ಸಾಬೀತು ಪಡಿಸಿ ಅಧಿಕಾರದ ಗದ್ದುಗೆ ಹಿಡಿಯುತ್ತೇವೆ ಎಂದರು. ನಮಗೆ ಯಾವುದೇ ಅಳುಕಿಲ್ಲ. ನಾವು ಇದರಲ್ಲಿ ಗೆದ್ದು ಬರುತ್ತೇವೆ. ಜೊತೆಗೆ ಸುಪ್ರೀಂಕೋರ್ಟ್ ಆದೇಶದಂತೆಯೇ ಬಹುಮತ ಸಾಬಿತು ಪಡಿಸಿದ ನಂತರ ನಾಳೆಯೇ ರಾಜ್ಯದ ರೈತರ ರಾಷ್ಟ್ರಿಕೃತ ಬ್ಯಾಂಕ್ ಗಳಲ್ಲಿನ ಒಂದು ಲಕ್ಷ ರೂಪಾಯಿ ವರೆಗಿನ ಸಾಲಮನ್ನಾ, ನೇಕಾರರ ಸಾಲಮನ್ನಾ ಹಾಗೂ ಪ್ರಣಾಳಿಕೆಯಲ್ಲಿನ ಕೆಲವು ಭರವಸೆ ಗಳನ್ನು ಈಡೇರಿಸಲು ನಾಳೆ ಕ್ಯಾಬಿನೇಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.

ಹಂಗಾಮಿ ಸ್ಪೀಕರ್ ನೇಮಕವೂ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ

ನವದೆಹಲಿ : ರಾಜ್ಯದ ಹಂಗಾಮಿ ಸ್ಪೀಕರ್ ನೇಮಕ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ. ಕಾಂಗ್ರೆಸ್ ಪಕ್ಷವೂ ಹಂಗಾಮಿ ಸ್ಪೀಕರ್ ಕೆ.ಜಿ. ಬೋಪಯ್ಯ ಅವರ ನೇಮಕಾತಿ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದು, ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸಲ್ಲಿಸಿರುವ ಈ ಅರ್ಜಿಯನ್ನು ಸಲ್ಲಿಸಿದ್ದರು. ಮೇ 19ರಂದು ಶನಿವಾರ ಬೆಳಗ್ಗೆ ೧೦.೩೦ಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ಸಿಜೆಐ ದೀಪಕ ಮೀಶ್ರಾ ಅವರು ಇದನ್ನು ಕೈಗೆತ್ತಿಕೊಳ್ಳಲು ಸಮ್ಮತಿ ಸೂಚಿಸಿರುವುದರಿಂದ ತ್ರೀಸದಸ್ಯ ಪೀಠವು ವಿಚಾರಣೆ ನಡೆಸಿ, ಮುಂದಿನ ನಡೆ ಕುರಿತು ಸೂಚನೆ ನೀಡಲಿದೆ. ರಾಜ್ಯಪಾಲ ವಜುಬಾಯಿ ವಾಲಾ ಅವರು ಅನೇಕ ಹಿರಿಯ ಶಾಸಕರನ್ನು ಕಡೆಗಣಿಸಿ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಭಾವಕ್ಕೆ ಒಳಗಾಗಿ ಕೆ.ಜಿ. ಬೋಪಯ್ಯ ಅವರನ್ನು ನೇಮಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಸುಪ್ರೀಂಕೋರ್ಟ್ ಇದನ್ನು ಯಾವ ರೀತಿ ಪರಿಗಣಿಸಲಿದೆ ಎಂಬುದು ಎಲ್ಲರಿಗೂ ಕುತೂಹಲಕೆರಳಿಸಿದೆ.

ಹೈದ್ರಾಬಾದ್ ನಿಂದ ಬೆಂಗಳೂರಿಗೆ ಹೊರಟ ಕಾಂಗ್ರೆಸ್-ಜೆಡಿಎಸ್ ಶಾಸಕರು

ಹೈದ್ರಾಬಾದ : ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಠಿಸಿರುವ ವಿಶ್ವಾಸ ಮತ ಯಾಚನೆ ಹಿನ್ನಲೆಯಲ್ಲಿ ಮೂರು ಬಸ್ ಗಳಲ್ಲಿ ರಾಜ್ಯದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಹೈದ್ರಾಬಾದ ನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಶುಕ್ರವಾರ ಬೆಳಗ್ಗೆಯಷ್ಟೇ ಹೈದ್ರಾಬಾದ ತಲುಪಿದ್ದ ಎರಡು ಪಕ್ಷಗಳ ಶಾಸಕರು ಊಟ ಮುಗಿಸಿಕೊಂಡು ಬಸ್ ಹತ್ತಿದ್ದಾರೆ. ಬಂದ ಬಸ್ ನಲ್ಲಿಯೇ ಮರು ಪ್ರಯಾಣ ಬೆಳೆಸಿದ್ದಾರೆ. ಸುಪ್ರೀಂ ಕೋರ್ಟ ಎಲ್ಲ ಶಾಸಕರಿಗೆ ಸೂಕ್ತ ಬಂದೋಬಸ್ತ್ ಒದಗಿಸುವಂತೆ ಸೂಚಿಸಿದ ಹಿನ್ನಲೆಯಲ್ಲಿ ಆಂಧ್ರದಲ್ಲಿ ಅಲ್ಲಿಯ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರೆ, ರಾಜ್ಯಕ್ಕೆ ನಾಳೆ ಬೆಳಗ್ಗೆ ಆಗಮಿಸುವುದರಿಂದ ಕರ್ನಾಟಕ ಪೊಲೀಸ್ ಅವರಿಗೆ ಸೂಕ್ತ ಬಂದೋಬಸ್ತ್ ಒದಗಿಸಲಿದೆ. ನಾಳೆ ಬೆಳಗ್ಗೆ ಅವರು ಬೆಂಗಳೂರಿಗೆ ಬಂದು ತಲುಪಲಿದ್ದಾರೆ.

ವಿಧಾನಸೌಧದ ಸುತ್ತ ಎರಡು ಕಿ.ಮೀ ನಿಷೇಧಾಜ್ಞೆ

ಬೆಂಗಳೂರು : ವಿಶ್ವಾಸ ಮತ ಯಾಚನೆ ಹಿನ್ನಲೆಯಲ್ಲಿ ರಾಜ್ಯ ವಿಧಾನಸೌಧದ ಸುತ್ತಮುತ್ತ ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮೇ. 19ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಙೆ ಹೊರಡಿಸಿ ಬೆಂಗಳೂರು ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ ಈ ಆದೇಶ ಹೊರಡಿಸಿದ್ದಾರೆ. ವಿಶ್ವಾಸ ಮತ ಯಾಚನೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆಯಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಪ್ರತಿಭಟನೆ ನಡೆಸುವ ಮಾಹಿತಿ ಇರುವುದರಿಂದ ಗುಪ್ತಚರ ಇಲಾಖೆ ಸಲಹೆ ಮೇರೆಗೆ 144 ಕಲಂ ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ನಾಳೆಯ ವಿಶ್ವಾಸ ಮತ ಯಾಚನೆ ರಣಾಂಗಣವಾಗುವ ಸಾಧ್ಯತೆ ಇರುವುದರಿಂದ ವಿಧಾನ ಸೌಧದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇದಕ್ಕೆ ಎಲ್ಲರ ಸಹಕರಿಸಬೇಕು ಎಂದು ಪೊಲೀಸ್ ಆಯುಕ್ತ ಟಿ. ಸುನೀಲಕುಮಾರ ವಿವರಿಸಿದ್ದಾರೆ.

ಯಡಿಯೂರಪ್ಪ ಬಹುಮತ ಸಾಬೀತು ಪಡಿಸಲು ಸಾಧ್ಯವಿಲ್ಲ ಎಂದ ಹೆಚ್ ಡಿ ಕೆ

ಹೈದ್ರಾಬಾದ್ : ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಾಳೆ ವಿಧಾನ ಸಭೆಯ ಕಲಾಪದಲ್ಲಿ ಸ್ಪಷ್ಟ ಬಹುಮತ ಸಾಬೀತು ಪಡಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ಶಾಸಕಾಂಗ ಸಭೆಯ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ವಿಶ್ವಾಸವ್ಯಕ್ತಪಡಿಸಿದರು. ಅವರು ಬೆಂಗಳೂರಿಗೆ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯ ಕಾರ್ಯತಂತ್ರ ವಿಧಾನ ಸಭೆಯಲ್ಲಿ ವಿಫಲವಾಗಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಅದನ್ನು ಯಶಸ್ವಿಯಾಗಲು ಬಿಡುವುದಿಲ್ಲ. ನಮಗೆ ನಮ್ಮ ಶಾಸಕರ ಮೇಲೆ ಇದೆ ಎಂದು ಹೇಳಿದರು. ಬಿಜೆಪಿಯ ನಾಯಕರು ಹಾಗೂ ಮಾಜಿ ಸಚಿವ ಗಾಲಿ ಜನಾರ್ಧನರಡ್ಡಿ ಅವರ ಆಪರೇಶನ್ ಕಮಲ ಯಶಸ್ವಿಯಾಗುವದಿಲ್ಲ. ಕೇವಲ ಗಾಳಿ ಸುದ್ದಿಯನ್ನು ಅವರು ಹರಡಿಸುತ್ತಿದ್ದಾರೆ. ಅದನ್ನು ನೀವು ನಂಬಬೇಡಿ. ಕಾಂಗ್ರೆಸ್ ನ ಇಬ್ಬರು ಶಾಸಕರು ಮರಳಿ ಬರಲಿದ್ದಾರೆ ಎಂದು ಹೇಳಿದ ಅವರು ಹಂಗಾಮಿ ಸ್ಪೀಕರ್ ಕೆ.ಜೆ. ಬೋಪಯ್ಯ ನೇಮಕದಲ್ಲಿ ಯಡಿಯೂರಪ್ಪ ಅವರು ರಾಜ್ಯಪಾಲರ ಮೇಲೆ ಪ್ರಭಾವ ಬೀರಿದ್ದಾರೆ. ಹೀಗಾಗಿ ಅವರನ್ನು ನೇಮಕ ಮಾಡಲಾಗಿದೆ ಎಂದು ಆಪಾದಿಸಿದರು. ಕೆಲ ಬಿಜೆಪಿ ಶಾಸಕರು ಕೂಡ ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಕುದುರೆ ವ್ಯಾಪಾರ ಮಾಡಿದರೆ ನಾವು ಕೂಡ ಅವರ ಶಾಸಕರನ್ನು ಮುಟ್ಟಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿಗೆ ಸೆಡ್ಡು ಹೊಡೆಯಲು ಸಜ್ಜಾದ ಸಿದ್ದರಾಮಯ್ಯ

ಹೈದ್ರಾಬಾದ್ : ಹಂಗಾಮಿ ಸ್ಪೀಕರ್ ಕೆ.ಜಿ. ಬೋಪಯ್ಯ ಅವರಿಗೆ ಕಾನೂನಾತ್ಮಕವಾಗಿ ಎದುರಿಸಲು ಕಾನೂನು ಪದವೀಧರ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಜ್ಜಾಗಿದ್ದಾರೆ. ನಾಳೆಯ ವಿಧಾನ ಸಭೆಯ ಕಲಾಪವನ್ನು ಸಮರ್ಥವಾಗಿ ಮತ್ತು ಖಡಕ್ ಆಗಿ ಎದುರಿಸಲುಸಜ್ಜುಗೊಂಡಿದ್ದಾರೆ. ವಾಕ್ ಚಾತುರ್ಯ ಹೊಂದಿರುವ ಸಿದ್ದರಾಮಯ್ಯ ಅವರಿಗೆ ಎಲ್ಲ ಶಾಸಕರು ಬಲವಂತವಾಗಿ ಈ ಪಟ್ಟ ಹೇರಿದ್ದಾರೆ. ಶಾಸಕಾಂಗ ಸಭೆಯ ನಾಯಕನಾಗಲು ಡಾ. ಜಿ. ಪರಮೇಶ್ವರ ಹಾಗೂ ಡಿ.ಕೆ. ಶಿವಕುಮಾರ ಅವರು ರೇಸ್ ನಲ್ಲಿದ್ದರೂ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿ ಅವರಿಗೆ ಈ ಪಟ್ಟ ಕಟ್ಟಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ವಿಧಾನ ಸಭೆಯ ವಿಶ್ವಾಸ ಮತ ಯಾಚನೆಯಲ್ಲಿ ಏನಾದರೂ ಸ್ವಲ್ಪವೂ ಹೆಚ್ಚು ಕಡಿಮೆ ಆದರೂ ಕೂಡ ಅವರ ಖದರ್ ನೋಡಲು ರಾಜ್ಯದ ಜನತೆಗೆ ಮತ್ತೋಮ್ಮೇ ಸಿಗಲಿದೆ.

ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕನಾಗಿ ಆಯ್ಕೆಯಾದ ಸಿದ್ದರಾಮಯ್ಯ

ಹೈದ್ರಾಬಾದ್ : ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯ್ಕೆಯಾಗಿದ್ದಾರೆ. ಅವರು ಶುಕ್ರವಾರ ರಾತ್ರಿ ತಾಜ್ ಕೃಷ್ಣದಲ್ಲಿ ನಡೆದ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಈ ಆಯ್ಕೆ ಪ್ರಕಟಿಸಲಾಗಿದೆ. ಬದಲಾದ ರಾಜ್ಯ ರಾಜಕೀಯದ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಬೇಕಾದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರನ್ನು ನೇಮಿಸಲಾಗಿದೆ ಎನ್ನಲಾಗುತ್ತಿದೆ. ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಳೆಯ ವಿಶ್ವಾಸಮತವನ್ನು ಗಟ್ಟಿಧ್ವನಿಯಲ್ಲಿ ಎದುರಿಸಲು ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಈಗಾಗಲೇ ಜೆಡಿಎಸ್ ಶಾಸಕಾಂಗ ಸಭೆಯ ನಾಯಕರಾಗಿ ಮಾಜಿಸಿಎಂ ಕುಮಾರಸ್ವಾಮಿ ಆಯ್ಕೆಯಾಗಿದ್ದು, ಇದು ವಿಧಾನ ಸಭೆಯಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಎಲ್ಲರಿಗೂ ಕೂತುಹಲ ಕೆರಳಿಸಿದೆ.

ಜೆಡಿಎಸ್ ಗೆ ಹೋಗಲ್ಲ ಎಂದ ಶಾಸಕ ಪ್ರೀತಂಗೌಡ

ಬೆಂಗಳೂರು : ಜೆಡಿಎಸ್ ನ ಭದ್ರಕೋಟೆ ಭೇದಿಸಿರುವ ಹಾಸನ ಶಾಸಕ ಪ್ರೀತಂಗೌಡ ಅವರು ಬಿಜೆಪಿಗೆ ಬೈ ಹೇಳಿ ಜೆಡಿಎಸ್ ಗೆ ಹೋಗುತ್ತಾರೆ ಎನ್ನುವ ವದಂತಿಯನ್ನು ಸ್ವತಃ ಪ್ರೀತಂಗೌಡ ತಳ್ಳಿಹಾಕಿದ್ದಾರೆ. ಅವರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಜೆಡಿಎಸ್ ಗೆ ಹೋಗುವ ಪ್ರಶ್ನೇಯೇ ಇಲ್ಲ. ನಾನೇ ಸ್ವತಃ ಅನೇಕರನ್ನು ಸಂಪರ್ಕ ಮಾಡಿ ಬಿಜೆಪಿಗೆ ಆಹ್ವಾನಿಸಿದ್ದೇನೆ. ನನ್ನ ಕೈಲಾದ ಪ್ರಯತ್ನವನ್ನು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವ ಪ್ರಶ್ನೇಯೇ ಇಲ್ಲ. ಇದೆಲ್ಲಾ ಮಾಧ್ಯಮ ಸೃಷ್ಠಿ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಶಾಸಕ ನಾಪತ್ತೇ ?

ಹೈದ್ರಾಬಾದ್ : ಹೈದ್ರಾಬಾದನ ತಾಜ್ ಕೃಷ್ಣ ಹೋಟೆಲ್ ನಲ್ಲಿ ತಂಗಿದ್ದ ಶಾಸಕರೊಬ್ಬರು ನಾಪತ್ತೇ ಆಗಿದ್ದಾರೆ ಎನ್ನಲಾಗಿದೆ. ಕೆಲ ಕ್ಷಣಗಳ ಹಿಂದೆ ಅಪರಿಚಿತ ವ್ಯಕ್ತಿ ಬಂದಿದ್ದರು. ಅವರ ಜೊತೆಗೆ ಆ ಶಾಸಕ ಹೋಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಸ್ಪಷ್ಟತೆ ಸಿಗಬೇಕಿದೆ. ಅವರೊಬ್ಬರು ಹೋದರಾ ಅಥವಾ ಅವರ ಜೊತೆಗೆ ಇನ್ಯಾರು ಹೋದರಾ ಎಂಬುದು ಈವರೆಗೆ ಸ್ಪಷ್ಟ ಚಿತ್ರಣ ತಿಳಿಯುತ್ತಿಲ್ಲ. ಈ ಬಗ್ಗೆ ಕಾಂಗ್ರೆಸ್ ನಾಯಕರು ತಲೆ ಎಣಿಸಿದ ಮೇಲಷ್ಟೇ ಎಷ್ಟು ಜನ ಶಾಸಕರು ನಾಪತ್ತೆಯಾಗಿದ್ದಾರೆ. ಎಲ್ಲಿಗೆ ಹೋಗಿದ್ದಾರೆ. ಯಾರ ಜೊತೆಗೆ ಹೋಗಿದ್ದಾರೆ ಎಂಬುದು ತಿಳಿಯಲಿದೆ.

ಅಧಿಕಾರದ ಆಮಿಷಕ್ಕೆ ಬಲಿಯಾಗದಿರಲು ಸಿದ್ದರಾಮಯ್ಯ ಮನವಿ

ಹೈದ್ರಾಬಾದ್ : ಬಿಜೆಪಿಯ ಯಾವುದೇ ಆಮಿಷಗಳಿಗೆ ಬಲಿಯಾಗಬಾರದು ಎಂದು ಕಾಂಗ್ರೆಸ್ ಶಾಸಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯಮನವಿ ಮಾಡಿದ್ದಾರೆ. ಅವರು ಹೈದ್ರಾಬಾದ ನ ತಾಜ್ ಕೃಷ್ಣ ಹೋಟೆಲ್ ನಲ್ಲಿ ಕಾಂಗ್ರೆಸ್ ಶಾಸಕರ ಸಭೆ ನಡೆಸಿ, ನಾಳೆಯ ದಿನ ಯಾವ ರೀತಿ ಕಾಂಗ್ರೆಸ್ ಶಾಸಕರು ನಡೆದುಕೊಳ್ಳ ಬೇಕು ಎಂಬುದರ ಕುರಿತುಪಾಠ ಮಾಡಿದ್ದಾರೆ. ನಾವೇ 5 ವರ್ಷ ಸರಕಾರ ರಚನೆ ಮಾಡುತ್ತೇವೆ. ಜೆಡಿಎಸ್ ಜೊತೆಗೆ ಇರೋಣ. ಯಾವುದೇ ಕಾರಣಕ್ಕೂ ಆತ್ಮ ವಿಶ್ವಾಸ ಕಳೇದುಕೊಳ್ಳಬೇಡಿ. ಎದೆಗುಂದಬೇಡಿ. ನಿಮ್ಮೊಂದಿಗೆ ನಾವಿದ್ದೇವೆ. ಅಧಿಕಾರ, ಹಣದ ಆಸೆಗೆ ನಿಮ್ಮನ್ನು ನೀವು ಕಳೆದುಕೊಳ್ಳಬೇಡಿ. ಬಿಜೆಪಿಗೆ ತಿರುಗೇಟು ನೀಡುವ ಮೂಲಕ ನಮ್ಮತನವನ್ನು ಉಳಿಸಿಕೊಳ್ಳೊಣ ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ ಇನ್ನೊಬ್ಬ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ ಅವರು ಕೂಡ ಮಾತನಾಡಿ, ಎಲ್ಲ ಶಾಸಕರಿಗೆ ಧೈರ್ಯ ತುಂಬಿದಿದ್ದಾರೆ. ಈ ವೇಳೆ ಅನೇಕ ಶಾಸಕರು ತಮಗೆ ಒಡ್ಡಿರುವ ಆಸೆ, ಆಮಿಷಗಳ ಕುರಿತು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪಕ್ಷಗಳ ನಂಬರ್ ಗೇಮ್ ಹೇಗಿದೆ ?

ಬೆಂಗಳೂರು : ರಾಜ್ಯದಲ್ಲಿ ಬಹುಮತ ಸಾಬೀತು ಪಡಿಸಲು 112 ಶಾಸಕರ ಸಂಖ್ಯಾಬಲ ಅಗತ್ಯವಿದೆ. ಈ ಪೈಕಿ 104 ಬಿಜೆಪಿ ಸ್ಥಾನಗಳಿದ್ದರೆ, ಕಾಂಗ್ರೆಸ್ ಬಳಿ 78 ಸ್ಥಾನಗಳಿವೆ. ಅದರಲ್ಲಿ ಇಬ್ಬರು ಈವರೆಗೆ ಮಿಸ್ಸಿಂಗ್ ಆಗಿದ್ದಾರೆ. ಹೊಸಪೇಟೆ ಶಾಸಕ ಆನಂದ್ ಸಿಂಗ್ ಹಾಗೂ ಮಸ್ಕಿ ಶಾಸಕ ಪ್ರತಾಪ ಗೌಡ ಪಾಟೀಲ ಈವರೆಗೆ ಸಂಪರ್ಕಕ್ಕೆ ಸಿಕ್ಕಿಲ್ಲ. ಆದರೆ ಇಬ್ಬರು ಪಕ್ಷೇತರ ಶಾಸಕರಾದ ರಾಣೇಬೆನ್ನೂರಿನ ಆರ್. ಶಂಕರ್ ಹಾಗೂ ಮುಳಬಾಗಿಲದ ನಾಗೇಶ ಅವರು ಕಾಂಗ್ರೆಸಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಜೆಡಿಎಸ್ ನಲ್ಲಿ 38 ಶಾಸಕರು ಇದ್ದಾರೆ. ಆದರೆ ಮತಗಳು ಮಾತ್ರ 37, ಕುಮಾರಸ್ವಾಮಿ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರಿಂದ ಅವರು ಕೇವಲ ಒಂದುಮತ ಚಲಾವಣೆಗೆ ಸೀಮಿತಗೊಳ್ಳಲಿದೆ. ಈವರೆಗೆ ಜೆಡಿಎಸ್ ಶಾಸಕರು ಒಟ್ಟಾಗಿದ್ದಾರೆ. ಬಿಜೆಪಿಯ 104 ಸಂಖ್ಯಾಬಲ ಮ್ಯಾಜಿಕ್ ನಂಬರ್ 112 ತಲುಪುತ್ತಾ ಅಥವಾ ಇಲ್ಲವಾ ಎಂಬುದು ನಾಳೆಯವರೆಗೆ ಕಾಯಲೇಬೇಕಿದೆ.

ಕಾಂಗ್ರೆಸ್ ಶಾಸಕನಿಗೆ 150 ಕೋಟಿ ಆಮಿಷ ಒಡ್ಡಿದ ಗಾಲಿ ಜನಾರ್ಧನ ರಡ್ಡಿ

ಬೆಂಗಳೂರು : ರಾಯಚೂರು ಗ್ರಾಮಾಂತರ ಕಾಂಗ್ರೆಸ್ ಶಾಸಕ ಬಸನಗೌಡ ರಡ್ಡಿ ಅವರಿಗೆ ಮಾಜಿ ಸಚಿವ ಗಾಲಿ ಜನಾರ್ಧನ ರಡ್ಡಿ 150 ಕೋಟಿ ಆಮಿಷ ಒಡ್ಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ವಿ.ಎಸ್. ಉಗ್ರಪ್ಪ ಆರೋಪಿಸಿದ್ದಾರೆ. ಅವರು ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ದೂರವಾಣಿ ಕರೆ ಮಾಡಿ ಬಿಜೆಪಿಗೆ ಬರುವಂತೆ ಆಫರ್ ನೀಡಿದ ಧ್ವನಿ ಸಂಭಾಷಣೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಬಿಜೆಪಿಗೆ ಬಂದರೆ, ಸಚಿವ ಸ್ಥಾನ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸೇರಿದಂತೆ 150 ಕೋಟಿ ನೀಡುವುದಾಗಿ ಆಮಿಷ ಒಡ್ಡಿದ್ದಾರೆ. ಇದರಿಂದ ನಮಗೆ ದೊಡ್ಡ ಆತಂಕ ಶುರುವಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಬಿಜೆಪಿ ಪಾಳೇಯದಲ್ಲಿ ಈವರೆಗೆ ಗುರುತಿಸಿಕೊಳ್ಳದ ರಡ್ಡಿ ಸಹೋದರರು ದಿಢೀರ್ ಆಗಿ ಆಪರೇಶನ್ ಕಮಲಕ್ಕೆ ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ವಿ.ಎಸ್. ಉಗ್ರಪ್ಪ ಕಿಡಿ ಕಾರಿದರು.

ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಶೋಭಾ ಕರ್ಲಂದಾಜೆ

ಬೆಂಗಳೂರು : ರಾಜ್ಯ ವಿಧಾನ ಸಭೆಯ ಹಂಗಾಮಿ ಸ್ಪೀಕರ್ ಆಗಿ ಕೆ.ಜಿ. ಬೋಪಯ್ಯ ಅವರನ್ನು ನೇಮಕ ಮಾಡಿರುವ ಕ್ರಮಕ್ಕೆ ಕಾಂಗ್ರೆಸ್ ಆಕ್ಷೇಪವ್ಯಕ್ತಪಡಿಸಿರುವುದಕ್ಕೆ ಸಂಸದೆ ಶೋಭಾ ಕರ್ಲಂದಾಜೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಹತಾಶೆ, ಭಯದಲ್ಲಿದೆ. ಜೆಡಿಎಸ್ ನಾಯಕರ ನಡೆ ಮೇಲೆ ಅವರಿಗೆ ಅನುಮಾನವಿದೆ. ಹೀಗಾಗಿ ಕೆ.ಜಿ. ಬೋಪಯ್ಯ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಶೋಭಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 120ಕ್ಕೂ ಹೆಚ್ಚುಶಾಸಕರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ. ಬೋಪಯ್ಯ ಅವರು ಸದನವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಗುಡುಗಿದ ಅವರು ಕಾಂಗ್ರೆಸ್ ದುರಂಹಕಾರಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಬಗ್ಗೆ ಮಾತನಾಡುವ ಯೋಗ್ಯತೆಯೂ ಕೂಡ ಇಲ್ಲ ಎಂದು ಹರಿಹಾಯ್ದರು. ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ 22 ರಾಜ್ಯಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್ ದೇಶದಲ್ಲಿ ಮೂಲೆಗುಂಪಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧವೂ ಕಿಡಿ ಕಾರಿದ ಅವರು ವಿಶ್ವಾಸ ಮತಯಾಚನೆಯಲ್ಲಿ ಬಿಜೆಪಿ ಜಯ ಗಳಿಸಲಿದೆ ಎಂದರು.

ಕೆ.ಜಿ. ಬೋಪಯ್ಯ ನೇಮಕಕ್ಕೆ ಕಾಂಗ್ರೆಸ್ ತೀವ್ರ ವಿರೋಧ

ಬೆಂಗಳೂರು : ರಾಜ್ಯ ವಿಧಾನ ಸಭೆಯ ಹಂಗಾಮಿ ಸ್ಪೀಕರ್ ಆಗಿ ಕೆ.ಜಿ. ಬೋಪಯ್ಯ ಅವರನ್ನು ನೇಮಕ ಮಾಡಿರುವ ರಾಜ್ಯಪಾಲ ವಜುಬಾಯಿ ವಾಲಾ ಅವರ ಕ್ರಮಕ್ಕೆ ರಾಜ್ಯಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದು ರಾಜ್ಯ ಬಿಜೆಪಿಯ ಕುತಂತ್ರವಾಗಿದ್ದು, ಶಾಸಕರ ಹಿರಿತನವನ್ನು ಕಡೆಗಣಿಸಿ ಬಿಜೆಪಿ ಇಂತಹ ಆಯ್ಕೆ ಮಾಡಿರುವದನ್ನು ಖಂಡಿಸಿ, ಮತ್ತೇ ಸುಪ್ರೀಂಕೋರ್ಟ್ ಮೋರೆ ಹೋಗಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ. ಕಾಂಗ್ರೆಸ್ ನ ಹಿರಿಯ ವಕೀಲ ಅಭಿಷೇಕ ಮನು ಸಿಂಗ್ವಿ ಅವರು ಈ ನಿಟ್ಟಿನಲ್ಲಿ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜ್ಯಪಾಲ ವಜುಬಾಯಿ ವಾಲಾ ಅವರು ಎರಡನೇ ಬಾರಿಗೆ ಇಂತಹ ತಪ್ಪು ಮಾಡಿದ್ದಾರೆ. ಸದನದ ಸಂಪ್ರದಾಯವನ್ನು ರಾಜ್ಯಪಾಲರು ಮುರಿದಿದ್ದಾರೆ. ಆರ್.ವಿ. ದೇಶಪಾಂಡೆ ಅವರು ಎಂಟು ಬಾರಿ ಆಯ್ಕೆಯಾಗಿರುವ ಹಿರಿಯ ಶಾಸಕರಾಗಿದ್ದಾರೆ. ಆದರೆ ಅವರನ್ನು ಬಿಟ್ಟು ಕೇವಲ ಮೂರು ಬಾರಿ ಶಾಸಕರಾಗಿರುವ ಬೋಪಯ್ಯ ಅವರನ್ನು ನೇಮಿಸಿರುವುದು ಸರಿಯಾದ ಬೆಳವಣಿಗೆ ಅಲ್ಲ ಎಂದು ಆಪಾದಿಸಿದ್ದಾರೆ. ಈ ಹಿಂದೆ ಕೆ.ಜೆ. ಬೋಪಯ್ಯ ಅವರು ಕೆಲ ಶಾಸಕರನ್ನು ಅನರ್ಹಗೊಳಿಸಿದ್ದನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಬೋಪಯ್ಯ ಅವರು ಪಕ್ಷಪಾತ ಆರೋಪ ಎದುರಿಸುತ್ತಿರುವ ಹಿನ್ನಲೆಯಲ್ಲಿ ಅವರು ಆ ಹುದ್ದೆಯಲ್ಲಿ ಮುಂದುವರೆಯುತ್ತಾರೆಯೇ ಅಥವಾ ಇಲ್ಲವೇ ಎನ್ನುವುದು ಸುಪ್ರೀಂಕೋರ್ಟ್ ಅಂಗಳದಲ್ಲಿ ನಿರ್ಧಾರವಾಗಲಿದೆ.

ಹಂಗಾಮಿ ಸ್ಪೀಕರ್ ಆಗಿ ಕೆ.ಜಿ. ಬೋಪಯ್ಯ ನೇಮಕ

ಬೆಂಗಳೂರು : ರಾಜ್ಯದ ಹಂಗಾಮಿ ಸ್ಪೀಕರ್ ಆಗಿ ಕೆ.ಜಿ. ಬೋಪಯ್ಯ ಅವರು ನೇಮಕ ಗೊಂಡಿದ್ದಾರೆ. ರಾಜ್ಯಪಾಲ ವಜುಬಾಯಿ ವಾಲಾ ಅವರು ಬೋಪಯ್ಯ ಅವರಿಗೆ ಈಗಾಗಲೇ ರಾಜಭವನದಲ್ಲಿ ಪ್ರಮಾಣ ವಚನ ಬೋಧಿಸಿದ್ದಾರೆ. ಪ್ರತಿಜ್ಞಾ ವೀಧಿ ಸ್ವೀಕರಿಸಿರುವ ಕೆ.ಜೆ. ಬೋಪಯ್ಯ ಅವರು ನಾಳೆ ವಿಧಾನ ಸಭೆಯಲ್ಲಿ ಎಲ್ಲ ಶಾಸಕರಿಗೆ ಪ್ರಮಾಣ ವಚನ ಬೋಧನೆ ಹಾಗೂ ಆನಂತರ ವಿಶ್ವಾಸ ಮತ ಯಾಚನೆ ಮಾಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಹೊಣೆ ಅವರ ಮೇಲೆ ಇದೆ. ಇನ್ನೂ ಹಂಗಾಮಿ ಸ್ಪೀಕರ್ ಹುದ್ದೆಗೆ ಹಿರಿಯ ಶಾಸಕರಾದ ಆರ್. ವಿ. ದೇಶಪಾಂಡೆ, ಉಮೇಶ ಕತ್ತಿ ಅವರ ಹೆಸರು ಕೂಡ ಕೇಳಿ ಬರುತ್ತಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಬಿಜೆಪಿಯ ಹಿರಿಯ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಹದಿನೈದು ದಿನ ಕಾಲಾವಕಾಶ ಕೊಟ್ಟಿದ್ದು ತಪ್ಪು ಎಂದ ಸಂತೋಷ ಹೆಗಡೆ

ಮೈಸೂರು : ರಾಜ್ಯಪಾಲ ವಜುಬಾಯಿ ಅವರು ಬಿಜೆಪಿಗೆ ಬಹುಮತ ಸಾಬೀತು ಪಡಿಸಲು ಹದಿನೈದು ಕಾಲಾವಕಾಶ ನೀಡಿದ್ದು ತಪ್ಪು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಹೇಳಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಅತಿದೊಡ್ಡ ಪಕ್ಷವಾದ ಬಿಜೆಪಿಗೆ ಅವಕಾಶ ನೀಡಿರುವುದು ಸರಿಯಷ್ಟೇ. ಆದರೆ ಅಷ್ಟು ಕಾಲಾವಕಾಶ ನೀಡಿರುವ ಅಗತ್ಯವಿರಲಿಲ್ಲ ಎಂದು ಹೇಳಿದರು. ಇದೇ ವೇಳೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿರುವ ಸಂತೋಷ ಹೆಗಡೆ ಅವರು ಕುದೆರೆ ವ್ಯಾಪಾರ ತಡೆಗಟ್ಟಲು ಇದು ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪ ಬರೀ ಬಂಡಲ್ ಬಿಡುತ್ತಿದ್ದಾರೆ ಎಂದ ಹೆಚ್ ಡಿಕೆ

ಬೆಂಗಳೂರು: ನಾಳೆ ಸದನದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಬಿಜೆಪಿ ವಿರುದ್ಧ ಮತ ಚಲಾಯಿಸಲಿದ್ದೇವೆ. ಯಡಿಯೂರಪ್ಪ ಬರೀ ಬಂಡಲ್ ಬಿಡುತ್ತಿದ್ದಾರೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್. ಡಿ. ಕುಮಾರಸ್ವಾಮಿ ಗುಡುಗಿದ್ದಾರೆ. ನಾವು ಕಾಂಗ್ರೆಸ್ ಬೆಂಬಲ ಪಡೆದುಕೊಂಡಿದ್ದೇವೆ, ನಮ್ಮ ಶಾಸಕರು ಬಿಜೆಪಿ ಕಡೆ ಹೋಗುವ ಮಾತು ಬರೀ ಸುಳ್ಳು ಎಂದು ತಿರುಗೇಟು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರ ನಡೆಸೋದು ಸಾಧ್ಯವಿಲ್ಲ. ನಾಳೆ ಬಿಜೆಪಿ ಸರ್ಕಾರ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು.

ಯಡಿಯೂರಪ್ಪ ಭವಿಷ್ಯ ಏನಾಗುತ್ತೋ ಏನೋ ?

ಬೆಂಗಳೂರು : ವಿಶ್ವಾಸಮತ ಯಾಚನೆಗೆ ಸುಪ್ರೀಂಕೋರ್ಟ್ ಸೂಚಿಸಿರುವ ಹಿನ್ನಲೆಯಲ್ಲಿ ಬಿಜೆಪಿ ನಾಯಕ ಹಾಗೂ ನೂತನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಭವಿಷ್ಯ ಏನಾಗುತ್ತೋ ಏನೋ ಎಂಬ ಆತಂಕ ರಾಜ್ಯದ ಜನತೆಯಲ್ಲಿ ಮನೆ ಮಾಡಿದೆ. ಇಂತಹದೊಂದು ಗಂಭೀರ ಚಿಂತನೆ ಎಲ್ಲರಲ್ಲೂ ಅಡಗಿದ್ದು, ಏನಾಗಬಹುದು ಎಂಬುದರ ಕುರಿತು ಲೆಕ್ಕಚಾರ ಹಾಕತೊಡಗಿದ್ದಾರೆ. ರಾಜಕೀಯ ವಿಶ್ಲೇಷಕರು ಕೂಡ ಈ ಬಗ್ಗೆ ತಮ್ಮ ವಿಚಾರ ಮಂಡನೆ ಮಾಡುತ್ತಿದ್ದು, ಶನಿವಾರ ಸಂಜೆ ನಾಲ್ಕು ಗಂಟೆಯವರೆಗೆ ವಿಧಾನ ಸಭೆಯಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಏನೂ ಬೇಕಾದರೂ ಆಗಬಹುದು. ಬಿಜೆಪಿಯ ವಿಶ್ವಾಸ ಮತ ಸಾಬೀತು ಆಗಬಹುದು. ಇಲ್ಲವೇ ವಿಫಲವೂ ಆಗಬಹುದು.

ಸುಪ್ರೀಂ ಕೋರ್ಟ್ ಆದೇಶ ಪಾಲಿಸುವುದಾಗಿ ಹೇಳಿದ ಯಡಿಯೂರಪ್ಪ

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಸಾಬೀತು ಪಡಿಸಲು ಸುಪ್ರೀಂಕೋರ್ಟ್ ಸೂಚಿಸಿರುವುದನ್ನು ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವಾಗತಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಕ್ಷಣವೇ ಕ್ಯಾಬಿನೇಟ್ ಸಭೆ ಕರೆದು ನಾಳೆಯೇ ಕಲಾಪ ಕರೆಯುತ್ತೇನೆ ಎಂದರು. ಸುಪ್ರೀಂಕೋರ್ಟ್ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳುವುದಾಗಿ ಹೇಳಿದ ಅವರು ನಮಗೆ ಬಹುಮತ ಸಾಬೀತಿಗೆ ಅಗತ್ಯ ಸಂಖ್ಯಾ ಬಲ ವಿದ್ದು, ಅದರಲ್ಲಿ ನಾವು ಜಯಗಳಿಸುತ್ತೇವೆ ಎಂದು ಹೇಳಿದರು.

ಸುಪ್ರೀಂಕೋರ್ಟ್ ಆದೇಶ ಸ್ವಾಗತಿಸಿದ ಅಭಿಷೇಕ್ ಸಿಂಗ್ವಿ

ನವದೆಹಲಿ : ಸುಪ್ರೀಂ ಕೋರ್ಟ್ ಐತಿಹಾಸಿಕ ಆಂತರಿಕ ಆದೇಶ ನೀಡಿದೆ ಎಂದು ಸುಪ್ರೀಂ ಕೋರ್ಟ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಅಭಿಷೇಕ್ ಸಿಂಗ್ವಿ ಹೇಳಿದ್ದಾರೆ. ಅವರು ಸುಪ್ರೀಂಕೋರ್ಟ್ ಆವರಣದಲ್ಲಿ ವಾದ ಮಂಡನೆ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾಳೆಯೇ ಎಲ್ಲ ಶಾಸಕರಿಗೆ ವಿಧಾನ ಸಭೆಯಲ್ಲಿ ಪ್ರಮಾಣ ವಚನ ಬೋಧಿಸಬೇಕು. ಆನಂತರ ಹಂಗಾಮಿ ಸ್ಪೀಕರ್ ಅವರು ವಿಶ್ವಾಸ ಮತ ಯಾಚನೆ ಯಾವ ರೀತಿ ಮಾಡಬೇಕು ಎಂಬುದು ಕೈಗೊಳ್ಳಬೇಕು ಎಂಬುದು ನಿರ್ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಬಹುಮತ ಸಾಬೀತು ಪಡಿಸುವರೆಗೆ ಯಾವುದೇ ನಿರ್ಧಾರ ಕೈಗೊಳ್ಳಲು ಬರುವುದಿಲ್ಲ. ನಾಳೆ ವಿಶ್ವಾಸ ಮತ ಸಾಬೀತಿಗೆ ಅವಕಾಶ ನೀಡಿದೆ. ಇದನ್ನು ಸ್ವಾಗತಿಸುತ್ತೇವೆ ಎಂದ ಅವರು ರಾಜ್ಯಪಾಲರ ಆದೇಶದ ಕುರಿತು ಹತ್ತು ವಾರಗಳ ನಂತರ ಪರಾಮರ್ಶೆ ಮಾಡುವುದಾಗಿ ಹೇಳಿದೆ. ಯಡಿಯೂರಪ್ಪ ಅವರು ನಿಡಿದ ಪತ್ರದಲ್ಲಿ ಸಂಖ್ಯಾಬಲದ ಕುರಿತು ಯಾವ ಆಧಾರವಿರಲಿಲ್ಲ. ಬಹುಮತ ಇಲ್ಲದಿದ್ದರೂ ರಾಜ್ಯಪಾಲರು ಅವರಿಗೆ ಅವಕಾಶ ನೀಡಿರುವ ಕುರಿತು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ ಎಂದರು.

120ಕ್ಕೂಹೆಚ್ಚು ಶಾಸಕರ ಬೆಂಬಲವಿದೆ ಎಂದ ಶೋಭಾ ಕರ್ಲಂದಾಜೆ

ನವದೆಹಲಿ : ನಾವು ಸುಪ್ರೀಂಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇವೆ. ನಮಗೆ 120ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ಸಂಸದೆ ಶೋಭಾ ಕರ್ಲಂದಾಜೆ ತಿಳಿಸಿದರು. ಅವರು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ವಿಶ್ವಾಸ ಮತ ಯಾಚನೆಯಲ್ಲಿ ಯಶಸ್ವಿಯಾಗುತ್ತೇವೆ ಎಂದು ಹೇಳಿದರು. ನಮಗೆ ಈಗಾಗಲೇ ಕಾಂಗ್ರೆಸ್ ಹಾಗೂಜೆಡಿಎಸ್ ಶಾಸಕರು ಬೆಂಬಲ ಸೂಚಿಸಿದ್ದಾರೆ. ಅವರ ಸಹಕಾರದ ಮೇರೆಗೆ ನಾವು ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂದರು.

ಮೇ 19ರಂದು ಸಂಜೆ 4 ಗಂಟೆಗೆ ವಿಶ್ವಾಸ ಮತ ಯಾಚನೆಗೆ ಸುಪ್ರೀಂಕೋರ್ಟ್ ಸೂಚನೆ

ನವದೆಹಲಿ : ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೇ 19ರಂದು ಸಂಜೆ ನಾಲ್ಕು ಗಂಟೆಗೆ ಬಹುಮತ ಸಾಬೀತು ಪಡಿಸುವಂತೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಸೂಚಿಸಿದೆ. ರಾಜ್ಯದ 221 ಶಾಸಕರು ಈ ವಿಶ್ವಾಸ ಮತ ಯಾಚನೆಗೆ ಹಾಜರಿರಬೇಕು ಎಂದು ಸೂಚಿಸಿದ್ದು, ಎಲ್ಲ ಶಾಸಕರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಆದೇಶಿಸಿದೆ. ಹಂಗಾಮಿ ಸ್ಪೀಕರ್ ನೇಮಕ ಮಾಡಿಕೊಂಡು ವಿಶ್ವಾಸ ಮತ ಯಾಚನೆ ಹೇಗೆ ಮಾಡಬೇಕು ಎಂಬುದನ್ನು ಅವರೇ ನಿರ್ಧರಿಸಲಿ ಎಂದು ಸೂಚಿಸಿದೆ. ಕಾಂಗ್ರೇಸ್ಸಿನ ಪರವಾಗಿ ಹಿರಿಯ ನಾಯಕ ಅಭಿಷೇಕ್ ಸಿಂಗ್ವಿಯವರು ವಾದ ಮಂಡಿಸಿದರೆ, ಬಿಜೆಪಿಯ ಪರ ಮುಕುಲ್ ರೋಹಟಗಿ ಹಾಗೂಜೆಡಿಎಸ್ ಪರ ಕಪಿಲ್ ಸಿಬಲ್ ಪ್ರತಿವಾದ ಮಂಡಿಸಿದರು. ಮೂವರು ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಅಶೋಕ್ ಭೂಷಣ್ ಮತ್ತು ಶರತ್ ಬೊಬ್ಡೆಯವರು ಈ ಆದೇಶ ಹೊರಡಿಸಿದ್ದಾರೆ.

ಸುಪ್ರೀಂಕೋರ್ಟ್ ತ್ರಿ ಸದಸ್ಯ ಪೀಠದ ಮುಂದೆ ವಾದ-ಪ್ರತಿವಾದ ಆರಂಭ

ನವದೆಹಲಿ : ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತಿಗೆ ಹದಿನೈದು ದಿನ ಅವಕಾಶ ನೀಡಿರುವ ರಾಜ್ಯಪಾಲ ವಜುಬಾಯಿ ವಾಲಾ ಅವರ ಕ್ರಮ ಕುರಿತು ಶುಕ್ರವಾರ ಸುಪ್ರಿಂ ಕೋರ್ಟ್ ನಲ್ಲಿ ವಾದ-ಪ್ರತಿವಾದ ನಡೆಯಿತು. ಕಾಂಗ್ರೇಸ್ಸಿನ ಪರವಾಗಿ ಹಿರಿಯ ನಾಯಕ ಅಭಿಷೇಕ್ ಸಿಂಗ್ವಿಯವರು ವಾದ ಮಂಡಿಸಿದರೆ, ಬಿಜೆಪಿಯ ಪರ ಮುಕುಲ್ ರೋಹಟಗಿ ಹಾಗೂಜೆಡಿಎಸ್ ಪರ ಕಪಿಲ್ ಸಿಬಲ್ ಪ್ರತಿವಾದ ಮಂಡಿಸಿದರು. ಗೋವಾ ಹಾಗೂ ಮಣಿಪುರದಲ್ಲಿ ಬಹುಮತ ಸಾಬೀತಿಗೆ ಕೇವಲ ಎರಡು ದಿನ ಕಾಲಾವಕಾಶ ನೀಡಿದನ್ನು ನಮೂದಿಸಿ, ಕರ್ನಾಟಕಕ್ಕೆ ಏಕೆ ಹದಿನೈದು ದಿನ ಎಂಬ ವಾದವನ್ನು ಕಾಂಗ್ರೆಸ್ ನ ಅಭಿಷೇಕ್ ಸಿಂಗ್ವಿ ಮಂಡಿಸಿದರೆ, ಮುಕುಲ್ ರೋಹಟಗಿ ಅವರು ಎಲ್ಲ ಶಾಸಕರು ಲಿಖಿತ ಹೇಳಿಕೆ ನೀಡಿಲ್ಲ. ಅವರನ್ನು ಬಲವಂತವಾಗಿ ಕರೆದೊಯ್ದು ಒತ್ತಡ ಹೇರಲಾಗಿದೆ ಎಂದು ಆರೋಪಿಸಿದರು. ಅಲ್ಲದೆ, ಶಾಸಕ ಆನಂದ ಸಿಂಗ್ ಸಹಿ ಇಲ್ಲ ಎಂದು ನ್ಯಾಯಾಲಯದ ಗಮನ ಸೆಳೆದರು. ಮೂವರು ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಅಶೋಕ್ ಭೂಷಣ್ ಮತ್ತು ಶರತ್ ಬೊಬ್ಡೆಯವರಿಂದ ಅರ್ಜಿ ವಿಚಾರಣೆ ನಡೆಸಿದರು. ವಾದ ಪ್ರತಿವಾದ ತೀವ್ರ ಕುತೂಹಲ ಕೆರಳಿಸಿದೆ. ನ್ಯಾಯಾಲಯ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುದು ಕಾದು ನೋಡಬೇಕಿದೆ.

ಎಲ್ಲರ ಚಿತ್ತ ಸುಪ್ರೀಂಕೋರ್ಟ್ ನತ್ತ

ನವದೆಹಲಿ : ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತಿಗೆ ಹದಿನೈದು ದಿನ ಅವಕಾಶ ನೀಡಿರುವ ರಾಜ್ಯಪಾಲ ವಜುಬಾಯಿ ವಾಲಾ ಅವರ ಕ್ರಮ ಕುರಿತು ಇಂದು ಸುಪ್ರಿಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ಕೇಂದ್ರ ಸರಕಾರವೇ ಇಂದು ರಾಜ್ಯಪಾಲರ ಪರ ವಕಾಲತ್ತು ವಹಿಸಲಿದ್ದು, ತನ್ನ ನಿಲುವನ್ನು ಕೋರ್ಟ್ ನಲ್ಲಿ ಮಂಡಿಸಲಿದೆ. ಇದೇ ವೇಳೆ ಗೋವಾ ಹಾಗೂ ಮಣಿಪುರದಲ್ಲಿ ಬಹುಮತ ಸಾಬೀತಿಗೆ ಕೇವಲ ಎರಡು ದಿನ ಕಾಲಾವಕಾಶ ನೀಡಿದನ್ನು ನಮೂದಿಸಿ, ಕರ್ನಾಟಕಕ್ಕೆ ಏಕೆ ಹದಿನೈದು ದಿನ ಎಂಬ ವಾದ ಮಂಡಿಸಲು ಕಾಂಗ್ರೆಸ್ ನ ಅಭಿಷೇಕ್ ಸಿಂಗ್ವಿ ಹಾಗೂ ಅವರ ತಂಡ ಸಜ್ಜುಗೊಂಡಿದೆ. ಅಲ್ಲದೆ, ತಮಗೆ ಸುಪ್ರೀಂಕೋರ್ಟ್ ನಲ್ಲಿ ನ್ಯಾಯ ಸಿಗುವ ವಿಶ್ವಾಸ ವಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ನೂತನ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ತಂಡ ಕೂಡ ಸುಪ್ರೀಂಕೋರ್ಟ್ ಆದೇಶದತ್ತ ಕಣ್ಣು ನೆಟ್ಟಿದ್ದಾರೆ. ಸುಪ್ರೀಂಕೋರ್ಟ್ ಅಂಗಳದಲ್ಲಿ ಶುಕ್ರವಾರ ಯಾರಿಗೆ ಶುಭವಾಗುತ್ತೋ ಯಾರಿಗೋ ಅಶುಭವಾಗುತ್ತೋ ಕಾದು ನೋಡಬೇಕಿದೆ.

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಮಾಜಿ ಪ್ರಧಾನಿ

ತಿರುಪತಿ : ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡ ಅವರು ಶುಕ್ರವಾರ ಬೆಳ್ಳಂ ಬೆಳಗ್ಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು. ಪತ್ನಿ ಚೆನ್ನಮ್ಮ ಸಮೇತ ದೇಗುಲಕ್ಕೆ ಭೇಟಿ ನೀಡಿದ ದೇವೆಗೌಡರು ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ದೇವೆಗೌಡರು ಕೆಲ ಕಾಲ ಅಲ್ಲಿಯೇ ಕುಳಿತು ದೇವರ ನಾಮ ಸ್ಮರಣೆ ನಡೆಸಿದರು. ದೇವೆಗೌಡರ ಭೇಟಿ ವೇಳೆ ರಾಜ್ಯದ ಜೆಡಿಎಸ್ ನಾಯಕರುಕೂಡ ಸಾಥ್ ನೀಡಿದರು. ಮಾಜಿಪ್ರಧಾನಿ ಭೇಟಿ ಹಿನ್ನಲೆಯಲ್ಲಿ ಆಂಧ್ರದ ಪೊಲೀಸರು ಅವರಿಗೆ ಬಿಗಿ ಬಂದೋಬಸ್ತ್ ಒದಗಿಸಿದ್ದರು.

ಹೈದ್ರಾಬಾದ್ ಗೆ ಶೀಫ್ಟ್ ಆದ ಕಾಂಗ್ರೆಸ್ ಜೆಡಿಎಸ್ ಶಾಸಕರು

ಹೈದ್ರಾಬಾದ್ : ಕಳೆದ ಎರಡು ದಿನಗಳಿಂದ ಬೆಂಗಳೂರಿನ ಈಗಲ್ ಟನ್ ರೇಸಾರ್ಟ್ ಹಾಗೂ ಶಾಂಗ್ರಿಲಾ ಹೋಟೆಲ್ ನಲ್ಲಿ ತಂಗಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಹೈದ್ರಾಬಾದ್ ಗೆ ಶೀಫ್ಟ್ ಮಾಡಲಾಗಿದೆ. ಖಾಸಗಿ ಬಸ್ ಗಳಲ್ಲಿ ಅವರನ್ನು ಹೈದ್ರಾಬಾದ್ ಗೆ ಕರೆದುಕೊಂಡು ಹೋದ ನಾಯಕರು ಅವರನ್ನು ಬಂಜಾರ್ ಹಿಲ್ಸ್ ನಲ್ಲಿರುವ ಪಾರ್ಕ ಹಯಾತ್ ರೇಸಾರ್ಟ್ ಗೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಹೈದ್ರಾಬಾದ ತಲುಪಿದ ಎಲ್ಲ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ರೇಸಾರ್ಟ್ ಸುತ್ತಮುತ್ತ ಆಂಧ್ರ ಪೊಲೀಸರು ಬಂದೋಬಸ್ತ್ ಒದಗಿಸಿದ್ದಾರೆ. ನಿನ್ನೇಯಷ್ಟೇ ಯಡಿಯೂರಪ್ಪ ಈಗಲ್ ಟನ್ ರೇಸಾರ್ಟ್ ಗೆ ಒದಗಿಸಿದ್ದ ಬಂದೋಬಸ್ತ್ ತೆರವುಗೊಳಿಸಿದ್ದರಿಂದ ಕಾಂಗ್ರೆಸ್ ನಾಯಕರು ಕಂಗಾಲಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಕಾಂಗ್ರೆಸ್ ಶಾಸಕರ ರಕ್ಷಣೆ ಗೆ ಬೌನ್ಸರ್ಸ್ ನೇಮಕ

ಬೆಂಗಳೂರು : ಆಪರೇಷನ್ ಕಮಲದಿಂದ ಕಂಗಾಲಾದ ಕಾಂಗ್ರೆಸ್ ನಾಯಕರು ತಮ್ಮ ಶಾಸಕರ ರಕ್ಷಣೇಗೆ ಬೌನ್ಸರ್ಸ್ ನೇಮಕ ಮಾಡಲಾಗಿದೆ. ಕಾಂಗ್ರೆಸ್ ನಾಯಕರಾದ ಡಿ.ಕೆ. ಶಿವಕುಮಾರ ಅವರ ಸಾರಥ್ಯದಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಖಾಸಗಿ ಗನ್ ಮೆನ್ ಹಾಗೂ ಪಳಗಿದ ಬೌನ್ಸರ್ಸ್ ಗಳನ್ನು ಕರೆ ತಂದಿದ್ದಾರೆ. ಶಾಸಕರ ಮೇಲೆ ನಿಗಾ ಇಡುವದರ ಜೊತೆಗೆ ಅವರನ್ನು ಯಾರೊಬ್ಬರು ಹೈ ಜಾಕ್ ಮಾಡದಂತೆ ನೋಡಿಕೊಳ್ಳವ ಜವಾಬ್ದಾರಿನೀಡಲಾಗಿದೆ. ಅಲ್ಲದೆ, ಅವರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ಸೂಚಿಸಲಾಗಿದೆಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಬಿಜೆಪಿ ಬಹುಮತ ಸಾಬೀತು ಪಡಿಸುವರೆಗೆ ತಮ್ಮ ಶಾಸಕರನ್ನುರಕ್ಷಣೆ ಮಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ.

ಪ್ರಭುಲಿಂಗ ನಾವದಗಿ ನೂತನ ಅಡ್ವೊಕೇಟ್ ಜನರಲ್

ಬೆಂಗಳೂರು: ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರನ್ನು ರಾಜ್ಯದ ನೂತನ ಅಡ್ವೊಕೇಟ್ ಜನರಲ್ ಆಗಿ ನೇಮಕ ಮಾಡಿ ರಾಜ್ಯಪಾಲ ವಜುಭಾಯ್ ವಾಲಾ ಗುರುವಾರ ಸಂಜೆ ಆದೇಶ ಹೊರಡಿಸಿದ್ದಾರೆ. ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಈ ಹೊಸ ಆದೇಶ ಹೊರಬಿದ್ದಿರುವುದು ಭಾರೀ ಕುತೂಹಲ ಕೆರಳಿಸಿದೆ. ಮಧುಸೂದನ್ ನಾಯಕ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಆ ಸ್ಥಾನಕ್ಕೆ ನೂತನ ಸಿಎಂ ಯಡಿಯೂರಪ್ಪ ಅವರ ಶಿಫಾರಸಿನ ಮೇರೆಗೆ ಪ್ರಭುಲಿಂಗ ನಾವದಗಿ ಅವರನ್ನು ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಈವರೆಗೆ ಖಾಲಿ ಇದ್ದ ರಾಜ್ಯದ ಅಡ್ವೊಕೇಟ್ ಜನರಲ್ ಹುದ್ದೆಯನ್ನು ಪ್ರಭುಲಿಂಗ ನಾವದಗಿ ಅವರನ್ನು ನೇಮಿಸುವ ಮೂಲಕ ಭರ್ತಿ ಮಾಡಿದಂತಾಗಿದೆ. ಇನ್ನೂ ಈ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು ಯಡಿಯೂರಪ್ಪ ಈ ಹಿಂದೆ ಜೈಲಿಗೆ ಹೋಗಿದ್ದ ವೇಳೆ ಲೋಕಾಯುಕ್ತ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ನಲ್ಲಿ ಇವರ ಪರ ವಾದ ಮಂಡಿಸಿ, ಕ್ಲೀನ್ ಚೀಟ್ ಕೊಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೆಲ ಕಾಂಗ್ರೆಸ್ ಶಾಸಕರ ಸಹಿ ಪೋರ್ಜರಿ

ಬೆಂಗಳೂರು : ರಾಜ್ಯದ ಕೆಲ ಕಾಂಗ್ರೆಸ್ ಶಾಸಕರ ಸಹಿಯನ್ನು ಆ ಪಕ್ಷದ ನಾಯಕರು ಪೋರ್ಜರಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಹೊಸ ಬಾಂಬ್ ಸಿಡಿಸಿದ್ದಾರೆ. ಕಾಂಗ್ರೆಸ್ ಅಂದ್ರೆ ಪೋರ್ಜರಿ ಪಕ್ಷ ಎಂದು ಟೀಕಿಸಿದ ಅವರು ಶಾಸಕರನ್ನು ರೆಸಾರ್ಟ್ನಲ್ಲಿ ಕೂಡಿ ಹಾಕಿ, ಫೋನ್ ಕೂಡ ಕೊಡದೇ ಕುಟುಂಬದಿಂದ ದೂರ ಇಡಲಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ತಮ್ಮ ಶಾಸಕರ ಬಗ್ಗೆಯೇ ವಿಶ್ವಾಸ ಕಳೆದುಕೊಂಡಿವೆ ಎಂದು ದೂರಿದರು. ರಾಜ್ಯದಲ್ಲಿ ನಾವು ಸಂವಿಧಾನ ಬದ್ಧ ಸರ್ಕಾರ ರಚನೆ ಮಾಡಿದ್ದು, ರಾಜ್ಯಪಾಲರು ಅತಿ ದೊಡ್ಡ ಪಕ್ಷವಾದ ನಮಗೆ ಆಹ್ವಾನ ನೀಡಿದ್ದರು. ಅದರಂತೆ ನಾವು ಸರ್ಕಾರ ರಚಿಸಿದ್ದು ಬಹುಮತವನ್ನು ಸಾಬೀತುಪಡಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯ ಕೆಲ ಶಾಸಕರನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಸಂಪರ್ಕ ಮಾಡಿ ಸೆಳೆಯಲು ಯತ್ನಿಸುತ್ತಿದ್ದಾರೆ ಎನ್ನುವುದು ಕೇವಲ ವದಂತಿ. ನಮ್ಮ ಶಾಸಕರು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗುವುದಿಲ್ಲ ಎಂದು ಪ್ರಕಾಶ್ ಜಾವಡೇಕರ್ ತಿಳಿಸಿದರು.

ಸಂವಿಧಾನಕ್ಕೆ ಅವಮಾನ ಮಾಡಿದ ಕಾಂಗ್ರೆಸ್ ಪಕ್ಷ

ಬೆಂಗಳೂರು: ಗೋವಾ ಹಾಗೂ ಮಣಿಪುರದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಲು ಹಕ್ಕು ಮಂಡನೆ ಮಾಡುತ್ತಿರುವುದು ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಆರೋಪಿಸಿದ್ದಾರೆ. ಅವರು ಗುರುವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದರು. ಗೋವಾದಲ್ಲಿ ಬಿಜೆಪಿಯ ಸುಭದ್ರ ಸರ್ಕಾರವಿದ್ದರೂ ಅತಿ ದೊಡ್ಡ ಪಕ್ಷ ಎಂದು ಸರ್ಕಾರ ರಚಿಸಲು ಅವಕಾಶ ನೀಡಲು ರಾಜ್ಯಪಾಲರಿಗೆ ಮನವಿ ಮಾಡಿದೆ, ಅದೇ ರೀತಿ ಮಣಿಪುರದಲ್ಲಿ ಕೂಡ ಮಿತ್ರ ಪಕ್ಷ ಎಂಪಿಪಿ ಬೆಂಬಲ ನೀಡಿದೆ ಎಂದು ಹಕ್ಕು ಮಂಡಿಸಿರುವುದು ದುರಂತದ ಸಂಗತಿ ಎಂದು ಕಿಡಿಕಾರಿದ್ದಾರೆ. ಸರ್ಕಾರ ರಚನೆಯಾಗಿ 500 ದಿನದ ನಂತರ ಸರ್ಕಾರ ರಚನೆಯ ಹಕ್ಕು ಮಂಡಿಸುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ ಅವರು ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿ ಎಂದು ಸವಾಲ್ ಹಾಕಿದರು.

ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ನಿವಾಸದ ಮುಂದೆ ಪ್ರತಿಭಟನೆ

ರಾಯ ಚೂರು: ಕಾಂಗ್ರೆಸ್ ಪಕ್ಷಕ್ಕೆ ಕೈ ಕೊಟ್ಟು ಯಾರ ಕೈಗೂ ಸಿಗದೆ ಕಾಣೆಯಾಗಿರುವ ರಾಯಚೂರು ಜಿಲ್ಲೆಯ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಅವರ ಮಸ್ಕಿಯ ನಿವಾಸದ ಮುಂದೆ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಣ್ಣ ಇರಬಗೇರಾ ಎಚ್ಚರಿಸಿದ್ದಾರೆ. ಅವರು ಗುರುವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರೋಗ್ಯ ಸರಿಯಿಲ್ಲದಿದ್ದರೆ ಪಕ್ಷದ ನಾಯಕರಿಗೆ ಮಾಹಿತಿ ನೀಡಬೇಕಾಗಿತ್ತು. ಅದನ್ನು ಮಾಡದಿರುವ ಅವರ ನಿಲುವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೀಗಾಗಿ ಅವರ ಮನೆ ಮುಂದೆ ಸಂಸದ ಬಿ.ವಿ.ನಾಯಕ, ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದರು. ಶಾಸಕಾಂಗ ಸಭೆಯಲ್ಲಿ ಪಾಲ್ಗೊಂಡ ನಂತರ ಸಂಜೆ 4ರಿಂದ ಪ್ರತಾಪಗೌಡ ಪಾಟೀಲ್ ಈವರೆಗೆ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಅವರ ಆತ್ಮೀಯರ ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷ ಅವರಿಗೆ ಟಿಕೆಟ್ ನೀಡಿದ್ದು, ಪಕ್ಷದ ಕಾರ್ಯಕರ್ತರ ಶ್ರಮದಿಂದ ಅವರು ಗೆಲುವು ಸಾಧಿಸಿದ್ದಾರೆ. ಸುಸಂಸ್ಕೃತ ವ್ಯಕ್ತಿಯಾಗಿರುವ ಅವರು ಯಾವುದೇ ಆಸೆ, ಆಮಿಷಕ್ಕೆ ಬಲಿಯಾಗದೆ ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದರು.

ಸಿದ್ದಗಂಗಾ ಮಠಕ್ಕೆ ಆಗಮಿಸಿ ಆಶೀರ್ವಾದ ಪಡೆದ ನೂತನ ಮುಖ್ಯಮಂತ್ರಿ

ತುಮಕೂರು: ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನವೇ ಬಿ.ಎಸ್.ಯಡಿಯೂರಪ್ಪ ಅವರು ತುಮಕೂರಿನ ಸಿದ್ದಗಂಗಾ ಮಠಕ್ಕೆ ಆಗಮಿಸಿ ನಡೆದಾಡುವ ದೇವರು ಹಾಗೂ ಶತಾಯುಷಿಗಳಾದ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ಅವರು, ಶ್ರೀಗಳ ಆಶೀರ್ವಾದ, ಜನರ ಪ್ರೀತಿ ವಿಶ್ವಾಸದಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಗಳಿಸಲು ಸಾಧ್ಯವಾಗಿದೆ. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಲಾಗುವುದು ಎಂದರು. ಇನ್ನು 12 ದಿನದಲ್ಲಿ ರಾಜ್ಯ ವಿಧಾನ ಸಭೆಯ ಅಧಿವೇಶನ ಕರೆದು ಬಹುಮತ ಸಾಬೀತು ಪಡಿಸುತ್ತೇನೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಸೆಯಂತೆ 'ಸಬ್ ಕಾ ಸಾತ್ ಸಬ್ ಕಾ ವಿಕಾಸ್' ಆಗಬೇಕು. ಕಾಂಗ್ರೆಸ್ ಮುಕ್ತ ಭಾರತ ಮಾಡಲು ದೇಶದ ಜನ ತೀರ್ಮಾನಿಸಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೂ ಜೆಡಿಎಸ್ ಜೊತೆಗೆ ಅಪವಿತ್ರ ಮೈತ್ರಿ ಮಾಡಿಕೊಳ್ಳುವ ಮೂಲಕ ಹಿಂಬಾಗಿಲ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.

ರಾಜ್ಯಪಾಲರ ಕ್ರಮ ಖಂಡಿಸಿ ರಾಷ್ಟ್ರಪತಿ ಮೊರೆ ಹೋದ ಪ್ರಗತಿಪರರು

ಧಾರವಾಡ : ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ಮಾಡಲು ಅವಕಾಶ ನೀಡಿದ ರಾಜ್ಯಪಾಲ ವಜುಬಾಯಿ ವಾಲಾ ಅವರ ಕ್ರಮ ಖಂಡಿಸಿ ಕರ್ನಾಟಕ ಥಿಂಕರ್ಸ್ ಪೋರಂ ಪದಾಧಿಕಾರಿಗಳು ರಾಷ್ಟ್ರಪತಿಗಳಿಗೆ ದೂರು ಸಲ್ಲಿಸಿದ್ದಾರೆ. ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಮಹಾತ್ಮ ಗಾಂಧಿಯವರ ಪುತ್ಥಳಿ ಎದುರು ಕೆಲ ಕಾಲ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುವ ಮೂಲಕ ತಮ್ಮ ಸಾತ್ವಿಕ ಆಕ್ರೋಶ ಹೊರಹಾಕಿದರು. ಆನಂತರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು. ರಾಜ್ಯಪಾಲರು ಸುಪ್ರೀಂ ಕೋರ್ಟ್ ನ ಆದೇಶವನ್ನು ಸಹ ಪರಿಗಣನೆಗೆ ತೆಗೆದುಕೊಳ್ಳದೆ ಬಿಜೆಪಿ ಗೆ ಅವಕಾಶ ಕಲ್ಪಿಸುವ ಮೂಲಕ ಪಕ್ಷಪಾತ ಮಾಡಿದ್ದಾರೆ. ಹೀಗಾಗಿ ತಾವುಗಳು ಕೂಡಲೇ ಮಧ್ಯ ಪ್ರವೇಶ ಮಾಡುವ ಮೂಲಕ ಸಾಂವಿಧಾನಿಕ ಬಿಕ್ಕಟ್ಟು ನಿವಾರಣೆ ಗೆ ಮುಂದಾಗಬೇಕು ಎಂದು ಆಗ್ರಹಿಸಿದರು. ಈ ಪ್ರತಿಭಟನೆಯಲ್ಲಿ ಹಿರಿಯ ವಕೀಲ ಪಾಂಡುರಂಗ ನೀರಲಕೇರಿ, ಬಿ.ಎನ್. ಪೂಜಾರ, ರಾಘವೇಂದ್ರ ಆಯಿ, ಎ.ಎಂ. ಖಾನ್, ಕೆ.ಬಿ. ಗೋನಾಳ, ಬಸವರಾಜ ಸೂಳಿಬಾವಿ, ಮಹೇಶ ಪತ್ತಾರ, ಮನಸೂರಿನ ರೇವಣಸಿದ್ದೇಶ್ವರ ಮಠದ ಬಸವರಾಜ ದೇವರು ಸೇರಿದಂತೆ ಹಲವಾರು ಪ್ರಗತಿಪರ ಚಿಂತಕರು ಪಾಲ್ಗೊಂಡಿದ್ದರು.

ಸಿಡಿಲು ಬಡಿದು ಯುವಕ ಸಾವು

ಗದಗ : ಸಿಡಿಲು ಬಡಿದು ಯುವಕನೊಬ್ಬ ಸಾವನ್ನಪ್ಪಿದ ಘಟನೆ ಜಿಲ್ಲೆಯ ರೋಣ ಪಟ್ಟಣದ ಹೊರವಲಯದ ಹೊಲದಲ್ಲಿ ನಡೆದಿದೆ. ಸೋಮಶೇಖರ ಕೊಳ್ಳಿ(24) ಮೃತ ಯುವಕನಾಗಿದ್ದು, ರೋಣ ಪಟ್ಟಣದ ಹಕಾರಿ ಓಣಿಯ ನಿವಾಸಿಯಾಗಿದ್ದ ಈತ ಜಕ್ಕಲಿ ರಸ್ತೆಯಲ್ಲಿ ಆಡು ಮೇಹಿಸಿಕೊಂಡು ಮರಳಿ ಮನೆಗೆ ಬರುತ್ತಿದ್ದಾಗ ಸಂಜೆ ಈ ರ್ದುಘಟನೆ ಸಂಭವಿಸಿದೆ. ಇದೇ ವೇಳೆ ಸಿಡಿಲು ಬಡಿಲು 4 ಕುರಿ 4 ಆಡು ಸಾವನ್ನಪ್ಪಿದ ಘಟನೆ ಜಿಲ್ಲೆಯ ರೋಣ ತಾಲೂಕಿನ ಕಲ್ಲಿಗನೂರ ಗ್ರಾಮದ ಸಮೀಪ ನಡೆದಿದೆ. ಕಾಟಿಯವರ ಹೊಲದ ಬದುವಿನಲ್ಲಿ ನಿಂತಿದ್ದ ಆಡು, ಕುರಿ ಸಿಡಿಲಿಗೆ ಬಲಿಯಾಗಿವೆ. ಕಲ್ಲಿಗನೂರ ಗ್ರಾಮದ ಮಹೇಶ ಮಾದರ ಎಂಬುವರಿಗೆ ಸೇರಿದ ಆಡು, ಕುರಿ ಎಂದು ತಿಳಿದು ಬಂದಿದೆ.

ಮುಂದುವರೆದ ಅಧಿಕಾರಿಗಳ ವರ್ಗಾವಣೆ ಪರ್ವ

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. ಇದೀಗ ಮತ್ತೇ ಕೆಲವರನ್ನು ತಮಗೆ ಬೇಕಾದ ಸ್ಥಳದಲ್ಲಿ ನಿಯೋಜಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಅಧಿಕಾರ ಚಲಾಯಿಸಿದ್ದಾರೆ. ಚಿಕ್ಕಮಗಳೂರು ಎಸ್ಪಿಆಗಿದ್ದ ಖಡಕ್ ಪೊಲೀಸ್ ಅಧಿಕಾರಿ ಎಂದೇ ಖ್ಯಾತಿ ಗಳಿಸಿದ್ದ ಅಣ್ಣಾಮಲೈ ಅವರನ್ನೂಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ ಅವರ ತವರು ಜಿಲ್ಲೆ ರಾಮನಗರ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡುವ ಮೂಲಕ ಹೆಚ್ ಡಿ. ಕೆ ಹಾಗೂ ಡಿಕೆಶಿ ವಿರುದ್ಧ ಚದುರಂಗದಾಟಕ್ಕೆ ಯಡಿಯೂರಪ್ಪ ಮುನ್ನುಡಿ ಬರೆದಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಅವರನ್ನು ಎತ್ತಂಗಡಿ ಮಾಡಿ ಅವರ ಸ್ಥಾನಕ್ಕೆ ಲೋಕಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಯಾಗಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಐಎಎಸ್ ಅಧಿಕಾರಿ ಎಂ.ಲಕ್ಷ್ಮಿನಾರಾಯಣ್ ಅವರನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಆಯಾ ಕಟ್ಟಿನ ಸ್ಥಾನದಲ್ಲಿ ತಮಗೆ ಬೇಕಾದವರನ್ನು ಯಡಿಯೂರಪ್ಪ ಅವರು ಪ್ರತಿಷ್ಠಾನ ಮಾಡುವ ಮೂಲಕ ತಮ್ಮ ವಿರೋಧಿಗಳಿಗೆ ಕಠಿಣ ಸಂದೇಶ ರವಾನಿಸುತ್ತಿದ್ದಾರೆ.

ಮೂರುಸಾವಿರ ವಿರಕ್ತಮಠಕ್ಕೆ ಮಾಜಿ ಶಾಸಕ ಎ.ಬಿ.ದೇಸಾಯಿ ಭೇಟಿ

ಧಾರವಾಡ : ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿಯ ಮೂರುಸಾವಿರ ವಿರಕ್ತಮಠಕ್ಕೆ ಮಾಜಿ ಶಾಸಕ ಎ.ಬಿ.ದೇಸಾಯಿ ಅವರು ಭೇಟಿ ನೀಡಿ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿಯವರ ಆಶೀರ್ವಾದ ಪಡೆದರು. ತಮ್ಮ ಪುತ್ರ ಅಮೃತ ದೇಸಾಯಿ ಧಾರವಾಡ ಗ್ರಾಮೀಣ ಕ್ಷೇತ್ರದ ಬಿಜೆಪಿಯ ಶಾಸಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಶ್ರೀಮಠಕ್ಕೆ ಭೇಟಿ ನೀಡಿದರು. ಈ ವೇಳೆ ಮಾಜಿ ಶಾಸಕ ಎ.ಬಿ.ದೇಸಾಯಿ ಅವರನ್ನು ಶ್ರೀಗಳು ಮಠದ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಬಳಿಕ ಮಾತನಾಡಿದ ಕುಮಾರ ವಿರೂಪಾಕ್ಷ ಸ್ವಾಮೀಜಿ ಅವರು, ನಮ್ಮ ಭಾಗದ ಅಮೃತ ದೇಸಾಯಿ ಶಾಸಕರಾಗಿ ಆಯ್ಕೆಯಾಗಿದ್ದು ನಮ್ಮೆಲ್ಲರ ಸುದೈವ. ಅಮೃತ ದೇಸಾಯಿ ಜನರ ಆಶಯದಂತೆ ಕ್ಷೇತ್ರದಲ್ಲಿ ಉತ್ತಮವಾದ ಆಡಳಿತ ನೀಡುವುದರೊಂದಿಗೆ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡು ಜನಪರ ಕಾರ್ಯಗಳನ್ನು ಮಾಡಬೇಕು ಎಂದರು. ಮಾಜಿ ಶಾಸಕ ಎ.ಬಿ.ದೇಸಾಯಿ ಮಾತನಾಡಿ, ಕ್ಷೇತ್ರದ ಜನ ನಮ್ಮ ಮೇಲೆ ನಂಬಿಕೆ ಇಟ್ಟು ನನ್ನ ಮಗ ಅಮೃತ ದೇಸಾಯಿ ಅವರನ್ನು ಗೆಲ್ಲಿಸಿದ್ದಕ್ಕೆ ನಾನು ಚಿರ ಋಣಿಯಾಗಿದ್ದೇನೆ. ಕುಡಿಯುವ ನೀರಿನ ಸಮಸ್ಯೆಯಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಅದಕ್ಕೆ ಮೊದಲು ಆದ್ಯತೆ ಕೊಟ್ಟು ನಂತರ ಹಂತ ಹಂತವಾಗಿ ಜನರ ಎಲ್ಲ ಕಾರ್ಯಗಳನ್ನು ಮಾಡಲು ಅಮೃತಗೆ ತಿಳಿಸಲಾಗುವುದು ಎಂದರು. ಈ ವೇಳೆ ಶಂಕ್ರಯ್ಯ ಇಂಚಗೇರಿಮಠ, ಕಲ್ಲಯ್ಯ ವಿಭೂತಿಮಠ, ಧರಣೇಂದ್ರ ಅಷ್ಟಗಿ, ಕೃಷ್ಣಾ ಬುದ್ನಿ, ಈರಪ್ಪ ಬಡ್ಡೂರ, ಮಡಿವಾಳಪ್ಪ ಕೋಟೂರ, ವಿರೂಪಾಕ್ಷಪ್ಪ ಬೆಳವಡಿ, ಬಸವರಾಜ ಕಬ್ಬೂರ, ರುದ್ರಪ್ಪ ಬಡ್ಡೂರ, ದುಂಡಪ್ಪ ಪಟ್ಟಣಶೆಟ್ಟಿ, ರಾಮಣ್ಣ ಬುದ್ನಿ, ಕಲ್ಲಪ್ಪ ಮುಳಕನವರ ಸಾಥ್ ನೀಡಿದರು.

ಗಾಂಧಿ ಪ್ರತಿಮೆ ಎದುರು ಪ್ರತಿಭಟಿಸಿದ ಕಾಂಗ್ರೆಸಿಗ್ಗರು

ಧಾರವಾಡ : ರಾಜ್ಯ ರಾಜಕೀಯದಲ್ಲಿ ಹೈಡ್ರಾಮ ನಡೆಸುತ್ತಿರುವ ಬಿಜೆಪಿ ನಡೆಯನ್ನು ತೀವ್ರವಾಗಿ ಖಂಡಿಸಿ ಜಿಲ್ಲಾ ಕೇಂದ್ರದಲ್ಲೂ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಗುರುವಾರ ಸಂಜೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುವ ಮೂಲಕ ಬಿಜೆಪಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬಹುಮತ ಇಲ್ಲದಿದ್ದರೂ ರಾಜ್ಯಪಾಲರ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ವಿರುದ್ಧ ಘೋಷಣೆ ಕೂಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ, ಹುಡಾ ಮಾಜಿ ಅಧ್ಯಕ್ಷ ದಾನಪ್ಪ ಕಬ್ಬೇರ, ಕೆಪಿಸಿಸಿ ಸದಸ್ಯರಾದ ಪ್ರಕಾಶ ಘಾಟಗೆ, ರಾಬರ್ಟ ದದ್ದಾಪುರಿ, ಪಾಲಿಕೆ ಸದಸ್ಯ ಸುಭಾಸ ಶಿಂಧೆ, ನಾಗರಾಜ ಗುರಿಕಾರ, ಆನಂದ ಜಾಧವ, ವಸಂತ ಅರ್ಕಾಚಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಬಹುಮತ ಸಾಬೀತು ಪಡಿಸದೆ ಅಧಿಕಾರ ಚಲಾವಣೆ ಕಾನೂನು ಬಾಹಿರ

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸದೆ ಅಧಿಕಾರ ಚಲಾವಣೆ ಮಾಡುತ್ತಿರುವುದು ಕಾನೂನು ಬಾಹಿರ ಎಂದು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಅವರು ಗುರುವಾರ ಸಂಜೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಅದರಲ್ಲೂ ಇಂಟಲಿಜೆನ್ಸ್ ವಿಭಾಗದ ಎಡಿಜಿಪಿಯನ್ನೇ ವರ್ಗಾವಣೆ ಮಾಡಿರುವುದು ನೋಡಿದರೆ ಬಿಜೆಪಿಯವರು ಹಿರಿಯ ಐಪಿಎಸ್ ಅಧಿಕಾರಿಗಳೊಂದಿಗೆ ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುವುದು ತಿಳಿಯುತ್ತದೆ ಎಂದರು. ನಾವು ನಮ್ಮ117 ಶಾಸಕರನ್ನು ನಮ್ಮೊಂದಿಗೆ ಉಳಿಸಿಕೊಳ್ಳಬೇಕಾಗಿದೆ. ನಮ್ಮ ಶಾಸಕರು ಎಲ್ಲಿಯೂ ವಿಭಜನೆಗೊಂಡಿಲ್ಲ. ಅವರ ನಿಯಂತ್ರಣವನ್ನು ನಾನು ಖುದ್ದಾಗಿ ಮಾಡುತ್ತಿದ್ದೇನೆ. ಅದೇ ರೀತಿ ಕಾಂಗ್ರೆಸ್ ಕೂಡ ತಮ್ಮ ಶಾಸಕರ ಭದ್ರತೆಗೆ ಕ್ರಮ ಕೈಗೊಂಡಿದ್ದಾರೆ. ಇದಕ್ಕಾಗಿ ಯೋಜನೆ ರೂಪಿಸುತ್ತಿದ್ದೇವೆ.ನಮಗೆ ನಮ್ಮ ಶಾಸಕರ ಬಗ್ಗೆ ವಿಶ್ವಾಸ ಇದೆ ಎಂದರು.

77 ಶಾಸಕರು ಕಾಂಗ್ರೆಸ್ ನೊಂದಿಗೆ ಇದ್ದಾರೆ ಎಂದ ಡಿಕೆಶಿ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಆರಿಸಿ ಬಂದ 78 ಶಾಸಕರ ಪೈಕಿ ಎಲ್ಲ 77 ಶಾಸಕರು ನಮ್ಮ ಜೊತೆಗೆ ಇದ್ದಾರೆ. ಯಾರೊಬ್ಬರೂ ನಮಗೆ ಕೈ ಕೊಡಲ್ಲ. ಎಲ್ಲರೂ ನಮ್ಮ ಕೈ ಹಿಡಿತಾರೆ ಎಂದು ಕಾಂಗ್ರೆಸನ ಹಿರಿಯ ಶಾಸಕ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ಗುರುವಾರ ಬೆಂಗಳೂರಿನ ಅಶೋಕ ಹೋಟೆಲ್ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದರು. ಈವರೆಗೆ ಸಂಪರ್ಕಕ್ಕೆ ಸಿಗದಿರುವ ಹೊಸಪೇಟೆ ಶಾಸಕ ಆನಂದ ಸಿಂಗ್ ಅವರ ಬಗ್ಗೆ ಸದ್ಯಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಅವರು ನಮ್ಮೊಂದಿಗೆ ಇಲ್ಲ. ಆದರೆ ನಮ್ಮ ಸಂಪರ್ಕದಲ್ಲಿದ್ದಾರೆ ಎಂದರು. ನಮ್ಮ ಕಾಂಗ್ರೆಸ್ ಪಕ್ಷದ ಒಬ್ಬರೇ ಒಬ್ಬ ಶಾಸಕರು ಕೂಡ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಅಗತ್ಯ ಸಂದರ್ಭ ಬಂದಾಗ ನಾವು ನಮ್ಮ ಬಲವನ್ನು ತೋರಿಸುತ್ತೇವೆ. ನಾವು ನಮ್ಮ ನಡೆಯನ್ನು ಸದ್ಯಕ್ಕೆ ಬಿಟ್ಟುಕೊಡಲ್ಲ ಸಮಯ ಬಂದಾಗ ನಿಮಗೇ ತಿಳಿಯುತ್ತದೆ ಎಂದರು.

ನಮ್ಮ ಶಾಸಕರ ರಕ್ಷಣೆಗೆ ಯಡಿಯೂರಪ್ಪ ಬೇಕಿಲ್ಲ

ಬೆಂಗಳೂರು : ಬೆಂಗಳೂರಿನ ಹೊರವಲಯದಲ್ಲಿರುವ ಈಗಲ್ ಟನ್ ರೇಸಾರ್ಟ ನಲ್ಲಿ ತಂಗಿರುವ ಕಾಂಗ್ರೆಸ್ ಶಾಸಕರ ರಕ್ಷಣೆಗೆ ನಿಯೋಜಿಸಿದ್ದ ಪೊಲೀಸ್ ಭದ್ರತೆಯನ್ನು ವಾಪಸ್ ಪಡೆದಿರುವ ಬಿಜೆಪಿ ಸರಕಾರದ ನಡೆಗೆ ಕಾಂಗ್ರೆಸ್ ಹಿರಿಯ ಮುಖಂಡ ಡಿ.ಕೆ. ಶಿವಕುಮಾರ ತೀಕ್ಷ್ಮವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನಮಗೆ ನಮ್ಮ ಶಾಸಕರನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬುದು ಗೊತ್ತಿದೆ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅದಕ್ಕೆ ನಮಗೆ ಯಡಿಯೂರಪ್ಪ ಸರಕಾರದ ರಕ್ಷಣೆಯ ಅಗತ್ಯವಿಲ್ಲ ಎಂದು ಕುಟುಕಿದರು. ಸಂವಿಧಾನ ಬಾಹಿರವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಯಡಿಯೂರಪ್ಪ ಅವರಿಗೆ ಯಾವುದೇ ಸಂವಿಧಾನದತ್ತ ಅಧಿಕಾರ ಇಲ್ಲ. ಆದರೂ ಅವರು ಈಗಾಗಲೇ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅವರು ಬಹಳ ಅವಸರದಲ್ಲಿ ಇದ್ದಂತೆ ಕಾಣುತ್ತಿದೆಎಂದು ಟೀಕಿಸಿದ ಅವರು ನಮ್ಮ ಶಾಸಕರಿಗೆ ರಕ್ಷಣೆ ನೀಡಲಾಗದವರು, ರಾಜ್ಯದ ಜನಸಾಮಾನ್ಯರಿಗೆ ಹೇಗೆ ರಕ್ಷಣೆ ನೀಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಕೆಲ ಹಿರಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಆ ಸ್ಥಳದಲ್ಲಿ ತಮಗೆ ಬೇಕಾದವರನ್ನು ನೇಮಿಸಿಕೊಂಡಿರುವದು ಸರಿಯಾದ ಬೆಳವಣಿಗೆ ಅಲ್ಲ ಎಂದು ಕಿಡಿಕಾರಿದರು.

ಜೆಡಿಎಸ್ ಕಾಂಗ್ರೆಸ್ ನಾಯಕರ ಗೂಂಡಾಗಿರಿ ನಡೆಯಲು ಬಿಡಲ್ಲ : ಬಿಎಸ್ ವೈ ಖಡಕ್ ಎಚ್ಚರಿಕೆ

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಗುಂಡಾಗಿರಿ ನಡೆಯಲು ಬಿಡಲ್ಲ ಎಂದು ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಅವರು ಮಲ್ಲೇಶ್ವರಂನಲ್ಲಿರುವ ಬಿಜೆಪಿಯ ಕಚೇರಿಯಲ್ಲಿ ಪಕ್ಷದ ಸನ್ಮಾನ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಖಡಕ್ ಎಚ್ಚರಿಕೆ ನೀಡಿದರು. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ವೀರಶೈವ ಲಿಂಗಾಯತ ಹೆಸರಿನಲ್ಲಿ ಜಾತಿಯ ವಿಷಬೀಜ ಬಿತ್ತುವ ಪ್ರಯತ್ನ ಮಾಡಿದ್ದರು. ಆದರೆ ಬಿಜೆಪಿಯ ಅಲೆಯ ಎದುರು ಅದು ನಿಲ್ಲಲಿಲ್ಲ. ಇದೀಗ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಅದು ಕೂಡ ಸಫಲವಾಗಲಿಲ್ಲ. ಹೀಗಾಗಿ ಜೆಡಿಎಸ್ ಕಾಂಗ್ರೆಸ್ ನಾಯಕರು ಕಂಗಾಲಾಗಿದ್ದಾರೆ. ತಮ್ಮ ಶಾಸಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಅವರ ಕುಟುಂಬ ವರ್ಗದವರು ನಮ್ಮ ಮೊರೆಗೆ ಬಂದಿದ್ದಾರೆ ಎಂದು ತಿರುಗೇಟು ನೀಡಿದರು. ಯಾವುದೇ ಕಾರಣಕ್ಕೂ ನಾವು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಗೂಂಡಾಗಿರಿ ನಡೆಯಲು ಬಿಡಲ್ಲ. ಅವರು ಆ ಮೂಲಕ ಏನಾದರೂ ಸಾಧಿಸುತ್ತೇವೆ ಎಂದು ಅಂದುಕೊಂಡಿದ್ದೀರೆ ಅದನ್ನು ನಡೆಯಲು ಬಿಡುವುದಿಲ್ಲ. ಎಲ್ಲ ಷಡ್ಯಂತ್ರಗಳನ್ನು ಮೀರಿ ನಾವು ಗಟ್ಟಿಯಾಗಿ ನಿಲ್ಲೋಣ. ಸಮರ್ಥವಾಗಿ ಎದುರಿಸೋಣ. ರೈತರ ಆತ್ಮಹತ್ಯೆ ತಡೆಗಟ್ಟಲು ನಾವು ಪಣ ತೋಡೋಣ ಎಂದು ತಮ್ಮ ಶಾಸಕರಿಗೆ ಕರೆ ನೀಡಿದರು.

ಶಾಸಕರ ಮೇಲೆ ದೌರ್ಜನ್ಯವೆಸಗುತ್ತಿರುವ ಕಾಂಗ್ರೆಸ್-ಜೆಡಿಎಸ್ ವಿರುದ್ಧ ಗುಡುಗಿದ ಬಿಎಸ್ ವೈ

ಬೆಂಗಳೂರು : ರಾಜ್ಯದ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಶಾಸಕರಿಗೆ ರೇಸಾರ್ಟ್ ನಲ್ಲಿ ಹಿಂಸೆ, ದೌರ್ಜನ್ಯ ನೀಡಲಾಗುತ್ತಿದೆ. ಒಂದು ರೀತಿ ಗೂಂಡಾಗಿರಿ ನಡೆಯುತ್ತಿದೆ ಎಂದು ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗಂಭೀರ ಆರೋಪ ಮಾಡಿದ್ದಾರೆ. ಅವರು ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕರಿಗೆ ಅವರ ಮನೆಯವರಿಗೂ ಕೂಡ ಮಾತನಾಡಲು ಅವಕಾಶ ನೀಡುತ್ತಿಲ್ಲ. ಈ ರೀತಿ ಕೆಳಮಟ್ಟದ ರಾಜಕಾರಣ ಅಗತ್ಯವಿರಲಿಲ್ಲ ಎಂದು ಕಿಡಿ ಕಾರಿದ ಬಿ. ಎಸ್ ವೈ. ಕಾಂಗ್ರೆಸ್ ಮುಕ್ತ ಕರ್ನಾಟಕ ಹಾಗೂ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸು ಕಂಡಿದ್ದಾರೆ. ಅವರ ಕನಸು ನನಸು ಮಾಡೋಣ ಎಂದರು. ಅಲ್ಲದೆ, ಈ ಚುನಾವಣೆ ದೇಶದ ಚುನಾವಣೆಯಾಗಿತ್ತು. ಸಿದ್ದರಾಮಯ್ಯಗೆ ಚಾಮುಂಡೇಶ್ವರಿಯಲ್ಲಿ ಆದ ಗತಿಯೇ ಬಾದಾಮಿಯಲ್ಲೂ ಆಗುತ್ತಿತ್ತು.ಆದರೆ ಸ್ವಲ್ಪದರಲ್ಲಿಯೇ ಮಿಸ್ ಆಗಿದೆ. ನಮ್ಮ ಕೆಲವು ಹಿರಿಯ ನಾಯಕರಿಗೆ ಹಿಂದೇಟು ಆಗಿದೆ. ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು. ಬಹುಮತ ಸಾಬೀತಿಗೆ ಹದಿನೈದು ದಿನ ಕಾಲಾವಕಾಶ ನೀಡಿದ್ದಾರೆ. ಆದಷ್ಟು ಬೇಗ ನಮ್ಮ ಬಹುಮತ ಸಾಬೀತು ಮಾಡಿ ಮುಂದಿನ ಹೆಜ್ಜೆ ಇಡಬೇಕಾಗಿದೆ. ಅಧಿವೇಶನ ತುರ್ತಾಗಿ ಕರೆಯಬಹುದು. ಸಭೆ ಕರೆದ ಎರಡು ಮೂರು ಗಂಟೆಗಳಲ್ಲಿ ಪ್ರತಿಯೊಬ್ಬರು ಅಧಿವೇಶನಕ್ಕೆ ಹಾಜರಾಗಬೇಕು ಎಂದು ಮನವಿ ಮಾಡಿದ ಅವರು ನಾವು ಬಹುಮತ ಸಾಬೀತು ಪಡಿಸುವ ಮೂಲಕ ಅವರಿಗೆ ಶಕ್ತಿ ತುಂಬೋಣ. ಬಹುಮತದ ಬಗ್ಗೆ ಯಾವುದೇ ಅನುಮಾನ ಪಡುವ ಅಗತ್ಯವಿಲ್ಲ ಎಂದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ನೂತನ ಮುಖ್ಯಮಂತ್ರಿಗೆ ಸನ್ಮಾನ

ಬೆಂಗಳೂರು : ರಾಜ್ಯ ಬಿಜೆಪಿ ಕಚೇರಿಗೆ ನೂತನ ಮುಖ್ಯಮಂತ್ರಿಗಳಾದ ಬಳಿಕ ಮೊದಲ ಬಾರಿಗೆ ಆಗಮಿಸಿದ ಬಿ.ಎಸ್. ಯಡಿಯೂರಪ್ಪ ಅವರನ್ನು ಪಕ್ಷದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಭಾರತೀಯ ಜನತಾ ಪಕ್ಷದ ವತಿಯಿಂದ ಯಡಿಯೂರಪ್ಪ ಅವರಿಗೆ ಶಾಲು ಹೊದಿಸಿ, ಪೇಟ ತೊಡಿಸಿ, ಯಾಲಕ್ಕಿ ಹಾರ ಹಾಕಿ , ಸಿಹಿ ತಿನಿಸಿ ಸನ್ಮಾನಿಸಲಾಯಿತು. ಈ ಸಮಾರಂಭಕ್ಕೆ ಕೇಂದ್ರ ಸಚಿವರಾದ ಪ್ರಕಾಶ ಜಾವೇಡಕರ್, ಧಮೇಂದ್ರ ಪ್ರಧಾನ, ಅನಂತಕುಮಾರ. ಡಿ.ವಿ. ಸದಾನಂದಗೌಡ, ಸೇರಿದಂತೆ ನೂತನ ಶಾಸಕರು. ಪಕ್ಷದ ಪದಾಧಿಕಾರಿಗಳು ಸಾಕ್ಷಿಯಾದರು.

ಈಗಲ್ ಟನ್ ರೇಸಾರ್ಟ್ ಪೊಲೀಸ್ ಬಂದೋಬಸ್ತ್ ವಾಪಾಸ್ ಪಡೆದ ಬಿಜೆಪಿ ಸರಕಾರ

ಬೆಂಗಳೂರು : ರಾಜ್ಯದ 78 ಕಾಂಗ್ರೆಸ್ ಶಾಸಕರು ತಂಗಿದ್ದ ಈಗಲ್ ಟನ್ ರೇಸಾರ್ಟ್ ಗೆ ನಿಯೋಜಿಸಿದ್ದ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಬಿಜೆಪಿ ಸರಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂದಕ್ಕೆ ಪಡೆದಿದೆ. ಅಲ್ಲಿ ಪೊಲೀಸರನ್ನು ನಿಯೋಜಿಸಿರುವುದು ಸರಿಯಲ್ಲ. ಅಲ್ಲಿಗೆ ಪೊಲೀಸರನ್ನು ನಿಯೋಜಿಸುವ ಅಗತ್ಯವಿದೆಯೇ. ಅಲ್ಲಿಗೆ ಪೊಲೀಸರನ್ನು ಹಾಕಿದ್ದು ಯಾರು. ಯಾಕೆ ಹಾಕಿದ್ದೀರಿ. ಯಾರ ಕೋರಿಕೆ ಮೇರೆಗೆ ಹಾಕಲಾಗಿದೆ ಎಂಬಂತಾದಿ ಮಾಹಿತಿಗಳನ್ನು ಕಲೆ ಹಾಕಿರುವ ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ. ಇನ್ನೂ ಮುಂದೆ ಇಂತಹ ಅಚಾತುರ್ಯ ನಡೆಯದಂತೆ ನೋಡಿಕೊಳ್ಳಬೇಕು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.

ರಾಜಕೀಯ ಹೈಡ್ರಾಮಾಕ್ಕೆ ನಟ ಪ್ರಕಾಶ್ ರೈ ಬೇಸರ

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಉಂಟಾಗಿರುವ ಹೈಡ್ರಾಮಾಕ್ಕೆ ನಟ ಪ್ರಕಾಶ್ ರೈ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗುರುವಾರ ಬೆಳಗ್ಗೆಯಿಂದ ಸರಣಿ ಟ್ವೀಟ್ಗಳ ಮೂಲಕ ತಮ್ಮ ಬೇಸರ ಹೊರಹಾಕಿರುವ ಅವರು ರಾಜ್ಯ ರಾಜಕಾರಣವನ್ನು ಕಟುವಾಗಿ ಅಣುಕಿಸಿ ಟ್ವೀಟ್ ಮಾಡಿದ್ದಾರೆ. ಪ್ರಕಾಶ್ ರೈ ಅವರು ಮಾಡಿರುವ ಟ್ವೀಟ್ ನೋಡಿದರೆ ನಿಮಗೂ ಅದೇ ರೀತಿ ಅನಿಸಬಹುದು. ಅರೇ ಅಂತಹದೇನಿದೆ ಅವರ ಟ್ವೀಟ್ ನಲ್ಲಿ ಅಂತಿರಾ ಹಾಗಿದ್ರೆ ನೀವು ಕೂಡ ಆ ಟ್ವೀಟ್ ನೋಡಿ, '' ಸರ್ಕಾರ ರಚಿಸಲು ಹಾಲಿಡೇ ರೆಸಾರ್ಟ್ ಮ್ಯಾನೇಜರ್ ಮುಂದಾಗಿದ್ದಾರೆ. ಯಾಕಂದ್ರೆ ಅವರ ಬಳಿ 116 ಶಾಸಕರಿದ್ದಾರೆ. ನಿಜವಾದ ಗೇಮ್ ಈಗ ಪ್ರಾರಂಭವಾಗಿದೆ. ಎಲ್ಲರೂ ರಾಜಕೀಯ ಆಶ್ರಯಿಸುತ್ತಿದ್ದಾರೆ'' ಎಂದು ಪ್ರಕಾಶ್ ರೈ ಕುಟುಕಿದ್ದಾರೆ.

ನಾಲ್ವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ಯಡಿಯೂರಪ್ಪ

ಬೆಂಗಳೂರು : ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ನೂತನ ಮುಖ್ಯಮಂತ್ರಿ ಆದ ಬೆನ್ನಲ್ಲೇ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿಗಳಾದ ಅಮರ್ ಕುಮಾರ ಪಾಂಡೆ ಅವರನ್ನು ರಾಜ್ಯ ಗುಪ್ತ ದಳದ ಎಡಿಜಿಪಿಯಾಗಿ, ಸಂದೀಪ ಪಾಟೀಲ ಅವರನ್ನು ಗುಪ್ತದಳದ ಡಿಐಜಿ ಆಗಿ, ಎಸ್. ಗಿರೀಶ್ ಅವರನ್ನು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಆಗಿ ಮತ್ತು ಡಿ. ದೇವರಾಜ ಅವರನ್ನು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಆಗಿ ನಿಯೋಜಿಸಿ ಆದೇಶ ಹೊರಡಿಸಿದ್ದಾರೆ. ಆದರೆ ಈ ಹಿಂದೆ ಆ ಸ್ಥಳದಲ್ಲಿದ್ದ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈವರೆಗೆ ಬೇರೆ ಸ್ಥಾ,ನಗಳಿಗೆ ಸ್ಥಳ ತೋರಿಸಿಲ್ಲ. ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಈ ಆದೇಶ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಠಿಸಿದೆ.

ಮರು ಚುನಾವಣೆ ನಡೆಸಲು ಇಸ್ಮಾಯಿಲ್ ತಮಟಗಾರ ಒತ್ತಾಯ

ಧಾರವಾಡ: ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಫಲಿತಾಂಶ ಏರುಪೇರಾಗಿರುವ ಸಂಶಯವಿದ್ದು, ಈ ಹಿನ್ನೆಲೆಯಲ್ಲಿ ಮರು ಚುನಾವಣೆ ಮಾಡಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ ಆಗ್ರಹಿಸಿದರು. ಅವರು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ನಿನ್ನೆ ಚುನಾವಣಾ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದರು. ಕ್ಷೇತ್ರದಲ್ಲಿ ತಮಗೆ ಮತ ನೀಡಿದ ಬಡಾವಣೆಗಳಲ್ಲಿನ ಮತ ಯಂತ್ರಗಳು ಮತ್ತು ವಿವಿ ಪ್ಯಾಟ್ಗಳಲ್ಲಿ ಹೊಂದಾಣಿಕೆ ಆಗದಿರುವುದು ಕಂಡು ಬಂದಿದೆ ಎಂದ ದೂರಿದ ಅವರು ಸರಳ ಮತ್ತು ಸಜ್ಜನ ವ್ಯಕ್ತಿ ಎಂದೇ ಹೆಸರುವಾಸಿಯಾಗಿರುವ ಅರವಿಂದ ಬೆಲ್ಲದ ಅವರು ಕೆಲವು ವ್ಯಕ್ತಿಗಳನ್ನು ಬಳಸಿಕೊಂಡು ತಮ್ಮ ತೇಜೋವಧೆ ಮಾಡುವ ಮೂಲಕ ಕ್ಷುಲ್ಲಕ ರಾಜಕಾರಣ ಮಾಡಿದ್ದಾರೆ ಎಂದು ಆರೋಪಿಸಿದರು. ಜೆಡಿಯು ಅಭ್ಯರ್ಥಿ ಜಾವೀದ ಬೆಳಗಾಂವಕರ ಮನೆಯ ಮೇಲೆ ತಾವಾಗಲಿ, ನಮ್ಮ ಬೆಂಬಲಿಗರಾಗಲಿ ಕಲ್ಲು ತೂರುವುದು ಅಥವಾ ಬೆದರಿಕೆ ಹಾಕಿರಲಿಲ್ಲ. ಆದಾಗ್ಯೂ ಜಾವೀದ ಬೆಳಗಾಂವಕರ ಮೂಲಕ ತಮ್ಮ ವಿರುದ್ಧ ದೂರು ದಾಖಲಿಸುವ ಕೆಲಸವನ್ನು ಅರವಿಂದ ಬೆಲ್ಲದ ಮಾಡಿದ್ದಾರೆ. ತಮ್ಮ ಮೇಲೆ ಯಾವುದೇ ಗಂಭೀರ ಆರೋಪದ ಪ್ರಕರಣಗಳಿಲ್ಲ. ಸಾರ್ವಜನಿಕ ಹೋರಾಟದಲ್ಲಿನ ಒಂದು ಪ್ರಕರಣದ ವಿಚಾರಣೆ ಹೈಕೋರ್ಟ್ನಲ್ಲಿದೆ. ಆದಾಗ್ಯೂ ನನ್ನನ್ನು ಅಪರಾಧಿ ಎನ್ನುವ ಮಟ್ಟಿಗೆ ಬೆಲ್ಲದ ಅವರು ಬಿಂಬಿಸಿದ್ದು ಸರಿಯಲ್ಲ. ಅಲ್ಲದೇ ಮತದಾರರ ಮೋಬೈಲ್ಗಳಿಗೆ ಬಿಜೆಪಿಯವರೇ ಸಂದೇಶ ರವಾನಿಸಿ ಜಾತಿ ರಾಜಕಾರಣ ಮಾಡುವ ಮಟ್ಟಿಗೆ ನನ್ನ ತೇಜೋವಧೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದು, ತನಿಖೆಯಿಂದ ಸತ್ಯಾಸತ್ಯತೆ ಹೊರಬೀಳಲಿದೆ ಎಂದರು. ಜನರ ಒಡನಾಟ, ಅಭಿವೃದ್ಧಿ ಕಾರ್ಯ ಮತ್ತಿತರ ಅಂಶಗಳ ಆಧಾರದ ಮೇಲೆ ಚುನಾವಣಾ ರಾಜಕಾರಣ ನಡೆಯಬೇಕಿತ್ತು. ಆದರೆ ಬೆಲ್ಲದ ಅವರು ಜಾತಿ ರಾಜಕಾರಣ ಮಾಡುವ ಮುಖಾಂತರ ಗೆಲುವು ಸಾಧಿಸಿರುವುದು ಬೇಸರದ ಸಂಗತಿ ಎಂದರು. ಕ್ಷೇತ್ರದಲ್ಲಿ ಬಿಜೆಪಿ ಗಾಳಿ ಇದ್ದು, ತಾವು ಸೋಲುವುದು ಖಚಿತ ಎಂದು ತಿಳಿದಿತ್ತು. ಆದರೆ ಎಲೆಕ್ಟ್ರಾನಿಕ್ ಮತ ಯಂತ್ರಗಳು ಮತ್ತು ವಿವಿ ಪ್ಯಾಟ್ಗಳ ಹೊಂದಾಣಿಕೆಯಲ್ಲಿನ ಲೋಪ ಹಾಗೂ ಅರವಿಂದ ಬೆಲ್ಲದ ಅವರ ಜಾತಿ ರಾಜಕಾರಣ ಮತಗಳ ಅಂತರ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ ದಾನಪ್ಪ ಕಬ್ಬೇರ, ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ, ಪಾಲಿಕೆ ಸದಸ್ಯ ಸುಭಾಸ ಶಿಂಧೆ, ಮುಖಂಡರಾದ ಆನಂದ ಮುಶಣ್ಣವರ, ಬುರಾನ ಗವಳಿ, ಗ್ರೇಗರಿ ಝೇವಿಯರ್, ನ್ಯಾಯವಾದಿ ಆರ್.ಎಂ.ಜಾವೀದ ಇದ್ದರು.

ರಾಜ್ಯಪಾಲರ ಕ್ರಮ ಖಂಡಿಸಿ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

ಹುಬ್ಬಳ್ಳಿ/ಧಾರವಾಡ : ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ಹುಬ್ಬಳ್ಳಿ-ಧಾರವಾಡದಲ್ಲಿ ಜೆಡಿಎಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿಯ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ಜಮಾಯಿಸಿದ ಜೆಡಿಎಸ್ ನ ನೂರಾರು ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿದರು. ಬಹುಮತವಿಲ್ಲದಿದ್ದರೂ ಬಿಜೆಪಿಗೆ ಸರಕಾರ ರಚನೆ ಮಾಡಲು ಅವಕಾಶ ನೀಡುವ ಮೂಲಕ ರಾಜ್ಯಪಾಲರು ಪಕ್ಷಪಾತವೆಸಗಿದ್ದಾರೆ ಎಂದು ಆರೋಪ ಮಾಡಿದರು. ಇದೇ ವೇಳೆ ರಾಜ್ಯಪಾಲ ವಜೂಭಾಯಿ ವಾಲಾ ಅವರ ಪ್ರತಿಕೃತಿ ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಧಾರವಾಡದಲ್ಲೂ ಕೂಡ ಪ್ರತಿಭಟನೆ ನಡೆಯಿತು. ನಗರದ ಅಂಬೇಡ್ಕರ್ ಪುತ್ಥಳಿ ಬಳಿ ಸೇರಿದ ಜೆಡಿಎಸ್ ಮುಖಂಡರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ರಾಜ್ಯಪಾಲರ ನಡೆಯನ್ನು ಖಂಡಿಸಿದರು. ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಗುರುರಾಜ ಹುಣಸಿಮರದ, ಪ್ರಧಾನ ಕಾರ್ಯದರ್ಶಿ ಡಾ. ಎನ್.ಬಿ. ಶೂರಪಾಲಿ, ಪಾಲಿಕೆ ಸದಸ್ಯ ರಾಜು ಅಂಬೋರೆ, ಮುಖಂಡರಾದ ಭೀಮಪ್ಪ ಕಸಾಯಿ, ವೆಂಕಟೇಶ ಸಗಬಲ್, ಐ.ಎಂ. ನದಾಫ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಹತ್ತಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ರಾಜ್ಯಪಾಲ ವಜುಬಾಯಿ ವಾಲಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಿಧಾನಸೌಧದ ಪಶ್ಚಿ‌ಮ ಗೇಟನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ೧೦ ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ‌. ಬೆಳಿಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರಿಗೆ ಸ್ಥಳದಿಂದ ತೆರಳಲು ಪೊಲೀಸರು ಹಲವು ಬಾರಿ ಸೂಚಿಸಿದರೂ ಅದಕ್ಕೆ ನಿರಾಕರಿಸಿ ಪ್ರತಿಭಟನೆ ತೀವ್ರಗೊಳಿಸಿದ ಪರಿಣಾಮ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಿಎಂಟಿಸಿ ಬಸ್ಸಿನಲ್ಲಿ ಕಾರ್ಯಕರ್ತರನ್ನು ಕರೆದೊಯ್ದರು.

ಅನೈತಿಕ ಮೈತ್ರಿ ಯಿಂದ ಅಧಿಕಾರ ಕಬಳಿಸಲು ಕಾಂಗ್ರೆಸ್ - ಜೆಡಿಎಸ್ ಹುನ್ನಾರ

ಬೆಂಗಳೂರು : ರಾಜ್ಯದ ಜನರ ಬೆಂಬಲ ಬಿಜೆಪಿ ಪರ ಇದ್ದರೂ ಕೂಡ ಕಾಂಗ್ರೆಸ್ ಹಾಗೂ ಜೆಡಿಎಸ್ ಅನೈತಿಕ ಮೈತ್ರಿ ಮಾಡಿಕೊಂಡು ಅಧಿಕಾರ ಕಬಳಿಸಲು ಹುನ್ನಾರ ಮಾಡಿದ್ದಾರೆ ಎಂದು ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ. ಅವರು ಬೆಂಗಳೂರಿನ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಚಿವ ಸಂಪುಟದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನಗೆ ಆರೂವರೆ ಕೋಟಿ ಜನರ ಬೆಂಬಲವಿದೆ. ಇದರಲ್ಲಿ ನಾನು ನೂರಕ್ಕೆ ನೂರು ಯಶ ಕಾಣುತ್ತೇನೆ ಎಂದು ಹೇಳಿದರು. ಬಿಜೆಪಿ ಸರಕಾರ ರಚನೆ ಮಾಡುವ ಕೆಲಸಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಬೆಂಬಲ ಕೊಡುತ್ತಾರೆ. ಅವರು ನನ್ನ ಪರ ಇದ್ದಾರೆ. ಈ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಪ್ರಕರಣವಿರುವುದರಿಂದ ನಾನು ಹೆಚ್ಚು ಮಾತನಾಡಲ್ಲ ಎಂದರು. ರಾಷ್ಟ್ರೀಕೃತ ಬ್ಯಾಂಕ್ ಗಳ ಒಂದು ಲಕ್ಷದ ವರೆಗೆ ಸಾಲಮನ್ನಾ, ನೇಕಾರರ ಸಾಲಮನ್ನಾ, ಸಹಕಾರಿ ಬ್ಯಾಂಕ್ ಗಳ ಬೆಳೆಸಾಲ ಮನ್ನಾ ಮಾಡುವ ನಿರ್ಧಾರ ಮಾಡಿದ್ದೇನೆ. ಈ ಬಗ್ಗೆ ಈಗಾಗಲೇ ಮುಖ್ಯಕಾರ್ಯದರ್ಶಿ ಜೊತೆಗೆ ಚರ್ಚಿಸಿದ್ದೇನೆ. ಅಂಕಿ ಅಂಶಗಳು ಬಂದ ನಂತರ ನಾಳೆ ಸಂಜೆಯವರೆಗೆ ಈ ಬಗ್ಗೆ ಕ್ರಮ ಕೈಗೊಂಡು ರೈತರಿಗೆ ಹಾಗೂ ನಾಡಿನ ಜನರಿಗೆ ನೀಡಿದ ಭರವಸೆ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು. ಇದೇ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ ಅವರು ರಾಜ್ಯದ ಜನತೆ ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ. ಅವರ ಆರ್ಶೀವಾದದ ಫಲವಾಗಿ ನಾನು ಇಂದು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ ಎಂದರು.

ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಆರಂಭಿಸಿದ ಮಾಜಿ ಪ್ರಧಾನಿ ದೇವೆಗೌಡ

ಬೆಂಗಳೂರು : ರಾಜ್ಯದಲ್ಲಿ ಸರಕಾರ ರಚನೆ ಮಾಡಲು ಅಗತ್ಯ ಬಹುಮತ ಇಲ್ಲದಿದ್ದರೂ ಬಿಜೆಪಿಯೂ ವಾಮಾಮಾರ್ಗದಿಂದ ಅಧಿಕಾರದ ಚುಕ್ಕಾಣಿ ಹಿಡಿದಿರುವುದನ್ನುಖಂಡಿಸಿ ಕಾಂಗ್ರೆಸ್ ನಾಯಕರು ಆರಂಭಿಸಿರುವ ಪ್ರತಿಭಟನೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಕೂಡ ಸಾಥ್ ನೀಡಿದ್ದಾರೆ. ಬೆಂಗಳೂರಿನ ವಿಧಾನ ಸೌಧದ ಎದುರು ಇರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆ ಎದುರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಧರಣಿ ಸತ್ಯಾಗ್ರಹ ಆರಂಭಿಸಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಮತ್ತು ಹಿರಿಯ ನಾಯಕರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಮೊಳಗಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ಕಾವು ಕ್ಷಣದಿಂದ ಕ್ಷಣಕ್ಕೆ ಹೆಚ್ಚುತಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಪಕ್ಕದಲ್ಲಿ ಆಸೀನರಾಗಿ ಪ್ರತಿಭಟನೆಗೆ ಮೆರಗುನೀಡಿದರೆ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಲೋಕಸಭೆಯ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪಕ್ಕದಲ್ಲಿ ಕುಳಿತುಕೊಂಡು ಪ್ರತಿಭಟನೆ ನಡೆಸುತ್ತಿರುವುದು ವಿಶೇಷವಾಗಿದೆ.

ದೇಶದ ವಿವಿಧ ಮುಖ್ಯಮಂತ್ರಿಗಳ ನೆರವು ಕೋರಿದ ಹೆಚ್ ಡಿ ಕೆ

ಬೆಂಗಳೂರು : ಕೇಂದ್ರ ಸರಕಾರದ ಅಧಿಕಾರ ದುರುಪಯೋಗದ ವಿರುದ್ಧಹೋರಾಟನಡೆಸಲು ದೇಶದವಿವಿಧ ರಾಜಕೀಯ ಪಕ್ಷಗಳ ನೆರವನ್ನು ಕೇಳಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಅವರು ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ನಾನು ಪಶ್ಚಿಮ ಬಂಗಾಲದ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ಕೆ.ಸಿ. ಚಂದ್ರಶೇಖರ ರಾವ್, ಬಿಎಸ್ ಪಿ ನಾಯಕಿ ಮಾಯಾವತಿ ಅವರನ್ನು ಮನವಿ ಮಾಡಿದ್ದೇವೆ ಎಂದರು. ಎಲ್ಲ ಪ್ರಾದೇಶಿಕ ಪಕ್ಷಗಳು ಕೇಂದ್ರದವಿರುದ್ಧ ಒಟ್ಟಾಗಿಹೋರಾಟ ನಡೆಸುವ ಅನಿವಾರ್ಯತೆ ಇದೆ. ಇದುಬಿಟ್ಟು ಬೇರೆ ದಾರಿಯೇ ಇಲ್ಲ. ರಾಜ್ಯದ ಜನರುಕೂಡ ಸ್ವಯಂ ಪ್ರೇರಿತವಾಗಿ ಬೀದಿಗಿಳಿದು ಬಿಜೆಪಿಯ ದುರಾಡಳಿತದ ವಿರುದ್ಧ ಹೋರಾಟ ನಡೆಸಬೇಕು ಎಂದು ಮನವಿ ಮಾಡಿದರು.

ಶಾಸಕ ಆನಂದ ಸಿಂಗ್ ಮೇಲೆ ಜಾರಿ ನಿರ್ದೇಶನಾಲಯದ ಒತ್ತಡ

ಬೆಂಗಳೂರು : ಬಿಜೆಪಿಯ ಕೇಂದ್ರ ಸರಕಾರ ಈಗಾಗಲೇ ಹೊಸಪೇಟೆ ಶಾಸಕ ಆನಂದ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೂಲಕ ಒತ್ತಡ ಹೇರಿ ಅವರನ್ನು ಏಳೆಯಲು ಕುತಂತ್ರ ನಡೆಸಿದೆ. ಇದನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಆನಂದ ಸಿಂಗ್ ಅವರನ್ನು ವಿಶೇಷ ವಿಮಾನದಲ್ಲಿ ನವದೆಹಲಿಗೆ ಕರೆದು ಕೊಂಡು ಹೋಗಿದ್ದು ಏಕೆ ಎಂದು ಪ್ರಶ್ನಿಸಿದ ಅವರು ಕೇಂದ್ರದ ಸರಕಾರಿ ಸ್ವಾಮ್ಯದ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಸೇರಿದಂತೆ ವಿವಿಧ ಕಚೇರಿಗಳನ್ನು ದುರುಪಯೋಗ ಮಾಡಿಕೊಂಡು ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವದ ಅವನತಿಯನ್ನು ಮಾಡುತ್ತಿದೆ ಎಂದು ಆರೋಪಿಸಿದರು. ನಮಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಹೇಗೆ ಉಳಿಸಿಕೊಳ್ಳಬೇಕುಎಂಬುದು ನಮಗೆ ಗೊತ್ತಿದೆ . ಇವರ ಆಟ ನಮ್ಮ ಎದುರು ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಬೆಂಗಳೂರು : ಕರ್ನಾಟಕ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ ಬೆನ್ನ ಹಿಂದೆಯೇ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ವಿಶೇಷವಾಗಿ ಯಡಿಯೂರಪ್ಪ ಅವರ ಜನ್ಮ ಭೂಮಿ ಮಂಡ್ಯ ಹಾಗೂ ಕರ್ಮಭೂಮಿ ಶಿವಮೊಗ್ಗ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಕುಣಿದು ಕುಪ್ಪಳಿಸಿದರು. ನೂತನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಪ್ರಧಾನಮಂತ್ರಿ ನರೇಂದ್ರಮೋದಿ ಪರ ಜೈಕಾರ ಮುಗಿಲು ಮುಟ್ಟಿದೆ. ಧಾರವಾಡ, ಕೊಪ್ಪಳ, ಹಾಸನ, ಹೀಗೆ ಬಿಜೆಪಿಯ ಕಾರ್ಯಕರ್ತರು ಎಲ್ಲ ಜಿಲ್ಲೆಯಲ್ಲಿ ಸಂಭ್ರಮಿಸಿದರು.

ವಿಧಾನ ಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿದ ಯಡಿಯೂರಪ್ಪ

ಬೆಂಗಳೂರು : ರಾಜ್ಯದ 24ನೇ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ಬೆಳಗ್ಗೆ ವಿಧಾನ ಸೌಧಕ್ಕೆ ಕಾಲಿಡುವ ಮುನ್ನ ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ಒಳಗಡೆ ಕಾಲಿಟ್ಟರು. ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಒಳಪ್ರವೇಶಿಸಿದ ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ವಿಧಾನಸೌಧದಲ್ಲಿ ಹಿರಿಯ ಐಎಎಸ್ ಅಧಿಕಾರಿಗಳು ಹಾಗೂ ವಿಧಾನ ಸೌಧದ ಕಾರ್ಯದರ್ಶಿಗಳು ಅದ್ದೂರಿ ಸ್ವಾಗತ ಕೋರಿದರು. ಹೂ ಗುಚ್ಛ ನೀಡಿ ಯಡಿಯೂರಪ್ಪ ಅವರನ್ನು ಬರಮಾಡಿಕೊಂಡರು. ಈ ವೇಳೆ ಯಡಿಯೂರಪ್ಪ ಅವರಿಗೆ ರಾಜ್ಯದ ಬಿಜೆಪಿ ಘಟಾನು ಘಟಿ ನಾಯಕರು, ನೂತನ ಶಾಸಕರು ಸಾಥ್ ನೀಡಿದರು.

ಗಾಂಧಿ ಪುತ್ಥಳಿ ಎದುರು ಕಾಂಗ್ರೆಸ್ ನಿಂದ ಪ್ರತಿಭಟನೆ ಆರಂಭ

ಬೆಂಗಳೂರು : ಕೊನೆಗೂ ಅಧಿಕಾರದಿಂದ ವಂಚಿತರಾಗಿರುವ ರಾಜ್ಯ ಕಾಂಗ್ರೆಸ್ ನಾಯಕರು ಶಕ್ತಿ ಸೌಧದ ಮುಂದೆ ಇರುವ ಮಹಾತ್ಮ ಗಾಂಧಿ ಪುತ್ಥಳಿ ಎದುರು ಪ್ರತಿಭಟನೆ ಆರಂಭಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ಕೆ.ಸಿ. ವೇಣುಗೋಪಾಲ, ಕೇಂದ್ರದ ಮಾಜಿ ಸಚಿವ ಗುಲಾಂ ನಬೀ ಆಜಾದ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ, ಪರಮೇಶ್ವರ, ಮಾಜಿ ಸಚಿವರಾದ ಈಶ್ವರ ಖಂಡ್ರೆ, ಚಾಮರಾಜ ಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಸೇರಿದಂತೆ ಅನೇಕರು ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ಬಿಜೆಪಿಯ ನೀತಿಯನ್ನು ಖಂಡಿಸಿ ಬೀದಿಗಿಳಿದಿರುವ ಕಾಂಗ್ರೆಸ್ ನಾಯಕರ ಹೋರಾಟದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ನ ಬಹುತೇಕ ಶಾಸಕರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಇದು ಮಧ್ಯಾಹ್ನದ ವೇಳೆಗೆ ಭಾರೀ ತಿರುವು ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ

ಬೆಂಗಳೂರು : ಯಡಿಯೂರಪ್ಪ ಅವರು ಯಾವ ಆಧಾರದ ಮೇಲೆ ನೂತನ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರು ಗುರುವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಬಿಜೆಪಿಗೆ ವಿಶ್ವಾಸವಿಲ್ಲ . ಇದು ಪ್ರಜಾಪ್ರಭುತ್ವದ ವಿರೋಧಿ ಎಂದು ಕಿಡಿ ಕಾರಿದರು. ಯಡಿಯೂರಪ್ಪ ಅವರು ಮೊದಲು ತಮ್ಮ ಶಾಸಕರ ಹೆಸರನ್ನು ಪ್ರಕಟಿಸಬೇಕು ಎಂದು ಸವಾಲ್ ಹಾಕಿದ ಸಿದ್ದರಾಮಯ್ಯ ಅವರು ನಮಗೆ ಇಷ್ಟು ಸಂಖ್ಯಾಬೆಲೆ ಇದ್ದರೂ ರಾಜ್ಯಪಾಲರು ಅವಕಾಶ ನೀಡಿಲ್ಲ. ಆದರೆ ಬಿಜೆಪಿಗೆ ಅವಕಾಶ ನೀಡಿರುವುದು ಇದು ಕಗ್ಗೋಲೆ ಎಂದು ಖಂಡಿಸಿದರು. ಇದೇ ವೇಳೆ ಬಾದಾಮಿಯ ಮತದಾರರನ್ನು ಅಭಿನಂದಿಸಿದ ಅವರು ಕ್ಷೇತ್ರದ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.

ವಿಧಾನಸೌಧದಲ್ಲಿ ಯಡಿಯೂರಪ್ಪ

ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅವರು ರಾಜಭವನದಲ್ಲಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ವಿಧಾನಸೌಧದಲ್ಲಿ ಅಳವಡಿಸಿದ್ದ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಮಫಲಕವನ್ನು ವಿಧಾನಸೌಧದ ಸಿಬ್ಭಂದಿ ತೆರವುಗೊಳಿಸಿದರು. ಸಿದ್ದರಾಮಯ್ಯ ಅವರ ಜಾಗಕ್ಕೆ ಯಡಿಯೂರಪ್ಪ ಅವರ ಹೆಸರು ಬರೆದಿದ್ದ ನಾಮಫಲಕವನ್ನು ತೂಗು ಹಾಕಲಾಯಿತು. ಆ ಮೂಲಕ ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕದಲ್ಲಿ ಎರಡನೇ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಂತಾಗಿದೆ. ರಾಜಭವನದಿಂದ ನೇರವಾಗಿ ವಿಧಾನಸೌಧಕ್ಕೆ ಆಗಮಿಸಲಿರುವ ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳ ಸಭೆ ನಡೆಸಿ ರಾಜ್ಯದ ಸ್ಥಿತಿಗತಿ ಕುರಿತು ಮಾಹಿತಿ ಪಡೆಯಲಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ

ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ 104 ಸ್ಥಾನಗಳನ್ನು ಪಡೆಯುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಶಾಸಕಾಂಗ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ಬೆಳಗ್ಗೆ 9 ಗಂಟೆಗೆ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ವೇದಿಕೆಗೆ ಕರೆದರು. ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ವೇದಿಕೆಗೆ ಕರೆದರು. ರಾಜ್ಯಪಾಲ ವಜುಬಾಯಿ ವಾಲಾ ಅವರು ಯಡಿಯೂರಪ್ಪ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಮನೆಯಿಂದ ಆಗಮಿಸುವ ವೇಳೆಯಲ್ಲಿಯೇ ಹೆಗಲ ಮೇಲೆ ಹಸಿರು ಶಾಲು ಹೊತ್ತು ಬಂದ ಯಡಿಯೂರಪ್ಪ ಅವರು ದೇವರ ಮತ್ತು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಐತಿಹಾಸಿಕ ಸಮಾರಂಭಕ್ಕೆ ರಾಜ್ಯ ಉಸ್ತುವಾರಿ ಮುರಳೀಧರ ರಾವ್. ಕೇಂದ್ರ ಸಚಿವರಾದ ಪ್ರಕಾಶ ಜಾವಡೇಕರ, ಧಮೇಂದ್ರ ಪ್ರಧಾನ್, ಡಿ.ವಿ. ಸದಾನಂದ ಗೌಡ, ಅನಂತಕುಮಾರ, ಪುತ್ರ ವಿಜಯೇಂದ್ರ, ಸಂಸದೆ ಶೋಭಾ ಕರ್ಲಂದಾಜೆ, ಮಾಜಿ ಮುಖ್ಮಮಂತ್ರಿ ಜಗದೀಶ ಶೆಟ್ಟರ್, ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಸಿ.ಟಿ. ರವಿ ಸೇರಿದಂತೆ ರಾಜ್ಯದ ಬಿಜೆಪಿ ಶಾಸಕರು, ಮುಖಂಡರು ಸಾಕ್ಷಿಯಾದರು.

ಯಡಿಯೂರಪ್ಪ ಅವರಿಂದ 5 ವರ್ಷದ ಸುಭದ್ರ ಸರಕಾರ

ಬೆಂಗಳೂರು : ರಾಜ್ಯದ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಬಿಜೆಪಿ ಸರಕಾರ ರಚನೆ ಮಾಡಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಸೆಳೆಯಲು ಈಗಾಗಲೇ ಪ್ರಯತ್ನ ನಡೆದಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೇಳಿದ್ದಾರೆ. ಅವರು ರಾಜ್ಯ ಭವನದ ಎದುರು ಸುದ್ದಿಗಾರರೊಂದಿಗೆ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಸಮರ್ಥ, ಸದೃಢ ಹಾಗೂ ಸುಭದ್ರ ಸರಕಾರ ರಚನೆ ಮಾಡುತ್ತೆವೆ. ಕಾಂಗ್ರೆಸ್ ಪಕ್ಷವೂ 22 ರಾಜ್ಯಗಳಲ್ಲಿ ಈಗಾಗಲೇ ತಿರಸ್ಕಾರಗೊಂಡಿದೆ ಎಂದು ಕಿಡಿ ಕಾರಿದರು. ಸಿದ್ದರಾಮಯ್ಯ ಅವರನ್ನು ರಾಜ್ಯದ ಜನತೆ ಸೋಲಿಸಿದ್ದಾರೆ. ಆದರೂ ಅವರು ಜೆಡಿಎಸ್ ಜೊತೆಗೆ ಕೈ ಜೋಡಿಸಿ, ಅನೈತಿಕ ಸಂಬಂಧದ ಮೂಲಕ ರಾಜ್ಯವನ್ನು ಹಾಳು ಮಾಡಲು ಹೊರಟಿದ್ದಾರೆ. ಅದನ್ನು ನಾವು ನಡೆಯಲು ಬಿಡುವುದಿಲ್ಲ. ಸಂಖ್ಯಾಬಲದ ಆಧಾರದ ಮೇಲೆ ಭಾರತದಲ್ಲಿ ಕಳೆದ 70 ವರ್ಷದಲ್ಲಿ ಬಹುದೊಡ್ಡ ಪಕ್ಷಗಳನ್ನು ಕರೆದು ಅಧಿಕಾರ ಕೊಡಲಾಗಿದೆ. ಹಾಗೆಯೇ ನಾವು ಕೂಡ ವಿಧಾನ ಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸಿ, ಅಧಿಕಾರದ ಚುಕ್ಕಾಣಿ ಹಿಡಿದು 5 ವರ್ಷಗಳ ಕಾಲ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ ವಿಶ್ವಾಸ ವ್ಯಕ್ತಪಡಿಸಿದರು.

ರಾಧಾ ಕೃಷ್ಣನ ದರ್ಶನ ಪಡೆದ ಯಡಿಯೂರಪ್ಪ

ಬೆಂಗಳೂರು : ರಾಜ್ಯದ24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ನೇರವಾಗಿ ಸಂಜಯ ನಗರದಲ್ಲಿರುವ ರಾಧಾ ಕೃಷ್ಣ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ದೇಗುಲದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಯಡಿಯೂರಪ್ಪ ಅವರಿಗೆ ಕೇಂದ್ರ ಸಚಿವ ಸದಾನಂದನ ಗೌಡ, ಶಾಸಕ ರಾಜುಗೌಡ, ಕಟ್ಟಾ ಸುಬ್ರಮಣ್ಯ ನಾಯ್ಡು ಸೇರಿದಂತೆ ನೂರಾರು ಬಿಜೆಪಿ ಮುಖಂಡರು ಸಾಥ್ ನೀಡಿದರು. ಆನಂತರ ನೇರವಾಗಿ ರಾಜಭವನಕ್ಕೆ ತೆರಳಿದ ಯಡಿಯೂರಪ್ಪ ಗುರುವಾರ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕಾಗಿ ವಿಧಾನಸೌಧದಲ್ಲೂ ಭರ್ಜರಿ ಸಿದ್ಧತೆಗಳು ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಕೊಠಡಿ ಸಂಖ್ಯೆ 323 ಅನ್ನು ಅಲಂಕರಿಸಲಾಗಿದ್ದು, ನಾಮಫಲಕ ಕೂಡ ರೆಡಿ ಆಗಿದೆ. ಇದಲ್ಲದೆ, ಕ್ಯಾಬಿನೇಟ್ ಹಾಲ್ ಕೂಡ ಸಜ್ಜುಗೊಂಡಿದೆ. ಈಗಾಗಲೇ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದೆ.

ರಾಜ್ಯ ಭವನ, ಬಿ.ಎಸ್ ವೈ ನಿವಾಸದ ಮುಂದೆ ಬಿಗಿ ಪೊಲೀಸ್ ಭದ್ರತೆ

ಬೆಂಗಳೂರು : ರಾಜ್ಯದ ಮುಖ್ಯಮಂತ್ರಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಲು ಕ್ಷಣಗಣನೇ ಆರಂಭವಾದ ಬೆನ್ನಲ್ಲೇ ರಾಜ್ಯ ಭವನ ಹಾಗೂ ಡಾಲರ್ಸ್ ಕಾಲೋನಿಯ ಬಿ.ಎಸ್ ವೈ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಈಗಾಗಲೇ ಡೊಳ್ಳು ಕುಣಿತ ತಂಡ ಆಗಮಿಸಿದ್ದು, ಯಡಿಯೂರಪ್ಪ ಅವರ ಪ್ರಮಾಣ ವಚನಕ್ಕೆ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವೇದಿಕೆಗೆ ಹೂವಿನ ಅಲಂಕಾರ ಮಾಡಲಾಗಿದ್ದು, ರಾಜಭವನದ ಆವರಣದಲ್ಲಿ ಸಾವಿರ ಕುರ್ಚಿಗಳನ್ನು ಹಾಕಲಾಗಿದೆ. ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರಿಗೆ ಆಸನದ ವ್ಯವಸ್ಥೆಕಲ್ಪಿಸಲಾಗಿದೆ. ರಾಜಭವನದ ಗಾಜಿನ ಮನೆಯಲ್ಲಿ ಗುರುವಾರ ಬೆಳಗ್ಗೆ 9 ಗಂಟೆಗೆ ಯಡಿಯೂರಪ್ಪ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅದಕ್ಕಾಗಿ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ಮಧ್ಯ ರಾತ್ರಿ ಸುಪ್ರೀಂ ಕೋರ್ಟ್ನಲ್ಲಿ ಹೈ ಡ್ರಾಮಾ

ನವದೆಹಲಿ : ಅತಿಹೆಚ್ಚಿನ ಸ್ಥಾನ ಪಡೆದಿರುವ ಬಿಜೆಪಿಗೆ ಸರಕಾರ ರಚನೆ ಮಾಡಲು ಅವಕಾಶ ನೀಡಿರುವ ರಾಜ್ಯಪಾಲ ವಜುಬಾಯಿ ವಾಲಾ ಅವರ ಕ್ರಮವಾದ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ರಾಜ್ಯಪಾಲರ ಕ್ರಮ ವಿರೋಧಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮಧ್ಯರಾತ್ರಿ ಸುಪ್ರೀಮ್ ಕೋರ್ಟ್‌ ಮೆಟ್ಟಿಲು ಹತ್ತಿದ್ದರು. ಮೂವರು ನ್ಯಾಯಮೂರ್ತಿಗಳ ವಿಶೇಷ ತಂಡದಿಂದ ಅರ್ಜಿ ವಿಚಾರಣೆ ನಡೆದಿದ್ದು, ನ್ಯಾಯಮೂರ್ತಿ ಎ.ಕೆ. ಸಿಕ್ರಿ, ಅಶೋಕ್ ಭೂಷಣ್ ಮತ್ತು ಶರತ್ ಬೊಬ್ಡೆಯವರಿಂದ ಅರ್ಜಿ ಪರಿಶೀಲನೆ ನಡೆಯಿತು. ಕಾಂಗ್ರೇಸ್ಸಿನ ಹಿರಿಯ ನಾಯಕ ಅಭಿಷೇಕ್ ಸಿಂಗ್ವಿಯವರು ಅರ್ಜಿ ಸಲ್ಲಿಸಿದ್ದರು. ಮಧ್ಯರಾತ್ರಿ 1 ಗಂಟೆಗೆ ಮುಖ್ಯ *ನ್ಯಾಯಮೂರ್ತಿ ದೀಪಕ್‌ ಮಿಶ್ರಾ* ಅವರಿಂದ ತ್ರಿಸದಸ್ಯ ಪೀಠ ರಚನೆ ಮಾಡಲಾಯಿತು. ಆ ಬಳಿಕ ಮಧ್ಯರಾತ್ರಿ 1.45ಕ್ಕೆ ತ್ರಿ ಸದಸ್ಯ ಪೀಠದಿಂದ ಕಾಂಗ್ರೆಸ್‌ - ಜೆ.ಡಿ.ಎಸ್‌. ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪ್ರಾರಂಭವಾಯಿತು. 4.45ರ ಸುಮಾರಿಗೆ ಅರ್ಜಿಯ ಮೇಲಿನ ಪರ-ವಿರೋಧ ಚರ್ಚೆ ಅಂತ್ಯಗೊಂಡು 5.30ಕ್ಕೆ ತ್ರಿಸದಸ್ಯ ಪೀಠದಿಂದ ಮಹತ್ವದ ತೀರ್ಪು ಪ್ರಕಟಗೊಂಡಿತು.

ಬಿಎಸ್ ಯಡಿಯೂರಪ್ಪ ಪ್ರಮಾಣ ವಚನಕ್ಕೆ ಗ್ರೀನ್‌ ಸಿಗ್ನಲ್‌ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ : ರಾಜ್ಯಪಾಲ ವಜುಬಾಯಿ ವಾಲಾ ಅವರು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲು ಬಿ.ಎಸ್ ಯಡಿಯೂರಪ್ಪ ಅವರಿಗೆ ನೀಡಿದ ಅವಕಾಶವನ್ನು ಎತ್ತಿ ಹಿಡಿದಿದೆ. 15 ದಿನಗಳ ಬದಲಿಗೆ 7 ದಿನಗಳೊಳಗಾಗಿ ಬಹುಮತ ಸಾಬೀತು ಪಡಿಸುತ್ತೇವೆ ಎಂದು ನ್ಯಾಯಾಲಯಕ್ಕೆ ಬಿ.ಜೆ.ಪಿ. ಪರ ವಕೀಲರು ಮನವರಿಕೆ ಮಾಡಿಕೊಟ್ಟರು. ಹೀಗಾಗಿ ರಾಜ್ಯಪಾಲರ ಆದೇಶಕ್ಕೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರಿಂ ಕೋರ್ಟ್‌ ತ್ರಿಸದಸ್ಯ ಪೀಠ ಅಭಿಪ್ರಾಯ ಪಟ್ಟಿತು. ರಾಷ್ಟ್ರಪತಿ ಅಥವಾ ರಾಜ್ಯಪಾಲರ ಆದೇಶವನ್ನು ತಡೆಯುವ ಅಧಿಕಾರ ಕೋರ್ಟ್‌ ಗಿಲ್ಲ ಎಂಬ ಅಭಿಪ್ರಾಯವನ್ನು ತ್ರಿಸದಸ್ಯ ಪೀಠ ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ವ್ಯಕ್ತಪಡಿಸಿತು. ಆದೇಶವನ್ನು ಪ್ರಶ್ನಿಸುವ ಅಧಿಕಾರವಿದ್ದರೂ ಅದನ್ನ ತಡೆಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿದರು. ತುರ್ತು ಅರ್ಜಿಯ ವಿಚಾರಣೆ ನಡೆಸಿದ ಜಸ್ಟೀಸ್‌ ಸಿಕ್ರಿ, ಜಸ್ಟೀಸ್‌ ಭೂಷಣ್‌, ಜಸ್ಟೀಸ್‌ ಬೋಬ್ದೆ ಇವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದ ಈ ಆದೇಶದಂತೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಗುರುವಾರ ಬೆಳಗ್ಗೆ ೯ ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಕುಮಾರಸ್ವಾಮಿ ಎದುರು ಕಣ್ಣೀರು ಹಾಕಿದ ಕೋನರಡ್ಡಿ

ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ನವಲಗುಂದ ವಿಧಾನ ಸಭಾ ಕ್ಷೇತ್ರದಿಂದ ಜೆಡಿಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಕಣ್ಣೀರು ಹಾಕಿದ್ದಾರೆ. ಕೋನರಡ್ಡಿ ಅವರು ಗಳಗಳನೇ ಅತ್ತಿದ್ದನ್ನು ಕಂಡು ಭಾವುಕರಾದ ಹೆಚ್.ಡಿ. ಕೆ ಅವರು ಕೂಡ ಕೆಲ ಕಾಲ ಕಣ್ಣಿರು ಸುರಿಸಿದರು. ಅಲ್ಲದೆ, ಬಳಿಕ ಚೇತರಿಸಿಕೊಂಡ ಅವರು ಕೋನರಡ್ಡಿ ಅವರಿಗೆ ಸಮಾಧಾನ ಪಡಿಸಿ, ಧೃತಿಗೇಡದಂತೆ ಧೈರ್ಯ ತುಂಬಿದರು. ಈ ಹಿಂದೆ ನವಲಗುಂದ ಪಟ್ಟಣದಲ್ಲಿ ನಡೆದ ಕುಮಾರಪರ್ವದಲ್ಲಿ ಹೆಚ್.ಡಿ. ಕೆ ಅವರು ನವಲಗುಂದ ವಿಧಾನ ಸಭಾ ಕ್ಷೇತ್ರದಿಂದ ಎನ್.ಹೆಚ್. ಕೋನರಡ್ಡಿ ಅವರನ್ನು ಆರಿಸಿ ಕಳುಹಿಸಿದರೆ ಜೆಡಿಎಸ್ ಸರಕಾರದಲ್ಲಿ ಸಚಿವರನ್ನಾಗಿ ಮಾಡಲಾಗುವುದು ಎಂದು ಘೋಷಿಸಿದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿರುವ ಜೆಡಿಎಸ್ ಕಾಂಗ್ರೆಸ್ ಸಮ್ಮೀಶ್ರ ಸರಕಾರದ ರಚನೆ ವೇಳೆ ಕೋನರಡ್ಡಿ ಅವರು ಗೆಲುವು ಸಾಧಿಸುವ ಬದಲು ಸೋತಿರುವುದು ಅವರ ಅಪಾರ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಕೋನರಡ್ಡಿ ಅವರ ಸಾವಿರಾರು ಅಭಿಮಾನಿಗಳು ಈ ಬಗ್ಗೆ ಬಹಿರಂಗವಾಗಿಯೇ ಕಣ್ಣೀರು ಹಾಕುವ ಜೊತೆಗೆ ವಾಟ್ಸಪ್ ಹಾಗೂ ಫೇಸ್ ಬುಕ್ ಗಳಲ್ಲಿ ತಮ್ಮ ನೋವು ತೋಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಿಜೆಪಿಗೆ ಸದನದಲ್ಲಿಯೇ ತಿರುಗೇಟು ನೀಡಲು ಮುಂದಾದ ಜೆಡಿಎಸ್, ಕಾಂಗ್ರೆಸ್

ಬೆಂಗಳೂರು : ಬಹುಮತ ಸಾಬೀತು ಪಡಿಸಲು ಮುಂದಾಗಿರುವ ರಾಜ್ಯ ಬಿಜೆಪಿಗೆ ವಿಧಾನ ಸಭೆಯ ಸದನದಲ್ಲಿಯೇ ಉತ್ತರ ನೀಡಲು ರಾಜ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ. ಬಹುಮತ ಸಾಬೀತಿಗೆ ಬೇಕಾಗಿರುವ ಸಭಾಧ್ಯಕ್ಷರ ಹುದ್ದೆ ಚುನಾವಣೆಯಲ್ಲಿಯೇ ಎರಡು ಪಕ್ಷಗಳು ಒಟ್ಟಾಗಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಮೂಲಕ ತಿರುಮಂತ್ರ ಹಾಕುಲು ಯೋಜನೆ ರೂಪಿಸಿದೆ. ಆ ಮೂಲಕ ಬಿಜೆಪಿಗೆ ಮುಜುಗರ ನೀಡುವ ತಂತ್ರ ಹೆಣೆದಿದೆ. ಅಲ್ಲಿಯವರೆಗೆ ಹಂಗಾಮಿ ಸ್ಪೀಕರ್ ಆಗಿ ಶಾಸಕರಿಗೆ ಯಾರು ಪ್ರಮಾಣ ವಚನ ಬೋಧಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಗುಜರಾತಿಗಳ ವ್ಯಾಪಾರ ನಡೆಯಲು ಬಿಡಲ್ಲ ಎಂದು ಗುಡುಗಿದ ಕುಮಾರಸ್ವಾಮಿ

ಬೆಂಗಳೂರು : ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ನಾವು ಗುಜರಾತಿ ವ್ಯಾಪಾರ ನಡೆಯಲು ಬಿಡಲ್ಲ ಎಂದು ಜೆಡಿಎಸ್ ಶಾಸಕಾಂಗ ಸಭೆಯ ನಾಯಕ ಹೆಚ್. ಡಿ. ಕುಮಾರಸ್ವಾಮಿ ಗುಡುಗಿದ್ದಾರೆ. ಬುಧವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂವರು ಗುಜರಾತಿ ವ್ಯಾಪಾರಿಗಳು ಆಟ ಆಡಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ. ಇದನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದು ಎಚ್ಚರಿಸಿದರು. ರಾಜ್ಯವನ್ನು ಲೂಟಿ ಮಾಡಿರುವ ಬಿಜೆಪಿಗೆ ಯಾವ ನೈತಿಕ ಆಧಾರದ ಮೇಲೆ ನಾವು ಅವರಿಗೆ ಬೆಂಬಲ ಕೊಡಬೇಕು ಎಂದು ಪ್ರಶ್ನಿಸಿದ ಹೆಚ್.ಡಿ. ಕೆ. ರಾಜ್ಯಪಾಲರು ಬಿಜೆಪಿಗೆ ಹದಿನೈದು ದಿನ ಅವಕಾಶ ನೀಡಿರುವುದು ಸರಿಯಲ್ಲ ಎಂದು ತರಾಟೆ ತೆಗೆದುಕೊಂಡರು. ಈ ಹಿಂದೆ ಹಣ ಲೂಟಿ ಮಾಡಿದ ರಡ್ಡಿ ಬ್ರದರ್ಸ್ , ಶ್ರೀರಾಮುಲು ಅವರು ಇಂದು ಏನೂ ಮಾಡುತ್ತಿದ್ದಾರೆ. ಶಾಸಕರನ್ನು ಹೈ ಜಾಕ್ ಮಾಡಲು ಯಾವ ರೀತಿ ಆಮಿಷ, ಆಸೆ ಒಡ್ಡಿದ್ದಾರೆ ಎಂದು ಕಿಡಿ ಕಾರಿದ ಅವರು ಇಂತಹ ಪಾಪದ ಕಾರ್ಯಗಳನ್ನು ಮಾಡಿದ ಇವರಿಗೆ ಬೆಂಬಲ ಕೊಡಬೇಕಾ ಎಂದು ಪ್ರಶ್ನಿಸಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶಕ್ಕೆ ಉಪದೇಶ ನಿಡುವುದು ಬಿಟ್ಟು ಇಂತಹ ಕುತಂತ್ರ ರಾಜಕೀಯ ಮಾಡುವುದನ್ನು ನಿಲ್ಲಿಸಲಿ ಎಂದು ಸವಾಲ್ ಹಾಕಿದರು. ಮೂವರು ಗುಜರಾತಿಗಳು ರಾಜ್ಯದಲ್ಲಿ ಅಂಗಡಿ ಓಪನ್ ಮಾಡಲು ಬಿಡಲು ಬಿಡಲ್ಲ ಎಂದು ಗುಡುಗಿದ ಅವರು ಅಧಿಕಾರ ಸ್ವೀಕರಿಸಿದ 24 ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿರುವ ಯಡಿಯೂರಪ್ಪ ಮೊದಲು ಬಹುಮತ ಸಾಬೀತು ಪಡಿಸಲಿ ಎಂದು ಸವಾಲ್ ಹಾಕಿದರು. ಇದನ್ನು ನಾವು ಸಮರ್ಥವಾಗಿ ಎದುರಿಸುತ್ತೇವೆ ಎಂದು ಕುಮಾರಸ್ವಾಮಿ ಗುಡುಗಿದರು.

ಕಾಂಗ್ರೆಸ್-ಜೆಡಿಎಸ್ ಅನೈತಿಕ ಮೈತ್ರಿ ವಿರುದ್ಧ ಕಿಡಿ ಕಾರಿದ ಬಿಜೆಪಿ ನಾಯಕರು

ಬೆಂಗಳೂರು : ಕಾಂಗ್ರೆಸ್ ಪಕ್ಷವೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜೆಡಿಎಸ್ ನೊಂದಿಗೆ ಕೈ ಜೋಡಿಸುವ ಮೂಲಕ ಅನೈತಿಕ ರಾಜಕೀಯ ಮಾಡಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಅವರು ಕಿಡಿ ಕಾರಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಲವು ವರ್ಷಗಳ ಕಾಲ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಪಕ್ಷವು ಚುನಾವಣೆ ಮುನ್ನ ಯಾವುದೇ ಮೈತ್ರಿ ಮಾಡಿಕೊಳ್ಳದೆ, ಚುನಾವಣೆಯ ಫಲಿತಾಂಶ ನೋಡಿ ಕಂಗಾಲಾಗಿದೆ. ಬಿಜೆಪಿಯೂ ಅತ್ಯಧೀಕ ಸ್ಥಾನಗಳನ್ನು ಗಳಿಸಿರುವುದನ್ನು ಕಂಡು ಹಿಂಬಾಗಿಲ ರಾಜಕೀಯ ಮಾಡುತ್ತಿದೆ. ಇದು ಯಾವ ನೈತಿಕ ಸಂದೇಶ ಸಾರುತ್ತದೆ ಎಂದು ವಾಗ್ದಾಳಿ ನಡೆಸಿದರು. ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಹಾಗೂ ಜೆಡಿಎಸ್ ಆಟ ನಡೆಯಲು ಬಿಡಲ್ಲ. ಸರಕಾರ ರಚನೆ ಮಾಡಿ ನಮ್ಮ ಸಂಖ್ಯಾಬಲವನ್ನು ಸಾಬೀತು ಪಡಿಸುತ್ತೇವೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಬಹುಮತ ಸಾಬೀತು ಪಡಿಸಲು ಹದಿನೈದು ದಿನ ಅವಕಾಶ ನೀಡಿದ ವಜುಬಾಯಿವಾಲಾ

ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ 104 ಸ್ಥಾನಗಳನ್ನು ಪಡೆದು ಅತ್ಯಧಿಕ ಸ್ಥಾನ ಗಳಿಸಿರುವ ಪಕ್ಷವಾಗಿ ಹೊರ ಹೊಮ್ಮಿರುವ ಬಿಜೆಪಿಗೆ ಸರಕಾರ ರಚನೆ ಮಾಡಲು ರಾಜ್ಯಪಾಲ ವಜುಬಾಯಿ ವಾಲಾ ಅವರು ಬಿ.ಎಸ್. ಯಡಿಯೂರಪ್ಪ ಅವರಿಗೆ ಅವಕಾಶ ಕಲ್ಪಿಸಿ, ಅಧಿಕೃತ ಆಹ್ವಾನ ನೀಡಿದ್ದಾರೆ. ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಅವರು ನಾಳೆ ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರ ಕಚೇರಿ ಆವರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪ್ರಕಟಿಸಿದರು. ಸಚಿವ ಸಂಪುಟದ ಸದಸ್ಯರೊಂದಿಗೆ ಬಿಎಸ್ ವೈ ಪ್ರಮಾಣ ವಚನ ಸ್ವೀಕರಿಸಲಿದ್ದು, ಬಹುಮತ ಸಾಬೀತು ಪಡಿಸಲು ಹದಿನೈದು ದಿನಗಳ ಕಾಲಾವಕಾಶ ನೀಡಿದ್ದಾರೆ. ಅವರ ನಾಯಕತ್ವದಲ್ಲಿ ಬಿಜೆಪಿ ಬಹುಮತ ಸಾಬೀತು ಪಡಿಸಲಿದೆಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ, ರಾಜ್ಯಪಾಲರ ನಿರ್ಧಾರವನ್ನುಮುಕ್ತ ಕಂಠದಿಂದ ಸ್ವಾಗತಿಸಿರುವ ಮುರಳೀಧರ್ ರಾವ್ ಅವರು ಹಲವು ಪ್ರಕರಣದಲ್ಲಿ ಅತಿ ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿಗೆ ಅವಕಾಶ ಕಲ್ಪಿಸಿರುವುದುಪ್ರಜಾತಂತ್ರದ ವ್ಯವಸ್ಥೆಯನ್ನು ಎತ್ತಿಹಿಡಿದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪೊಲೀಸ್ ಮಹಾನಿರ್ದೇಶಕರ ಹೆಸರಿನಲ್ಲಿ ನಕಲಿ ಆದೇಶ ಪತ್ರ

ಬೆಂಗಳೂರು : ನಾಳೆ ಬಿಜೆಪಿ ಸರಕಾರ ರಚನೆ ಮಾಡುತ್ತದೆ. ಹೀಗಾಗಿ ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿರಾಜು ಅವರು ಹೊರಡಿಸಿರುವ ನಕಲಿ ಆದೇಶ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿರಾಜು ಆದೇಶ ನೀಡಿದ್ದಾರೆ. ಅಲ್ಲದೆ ಈವರೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸರಕಾರ ರಚನೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕುಮಾರಸ್ವಾಮಿ ನಾಳೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದ ನಟಿ ರಮ್ಯಾ

ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ 78 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷವು 38 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಜೆಡಿಎಸ್ ಗೆ ಬೇಷರತ್ ಆಗಿ ಬೆಂಬಲ ಸೂಚಿಸಿದ ಬೆನ್ನಲ್ಲೇ ಸರಕಾರ ರಚನೆಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿರುವ ನಡುವೆಯೇ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಹಾಗೂ ನಟಿ ರಮ್ಯಾ ಅವರು ನಾಳೆ ಕುಮಾರಸ್ವಾಮಿ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ರಮ್ಯ ಟ್ವೀಟ್ ನಿಜವಾಗುತ್ತಾ ಅಥವಾ ಇಲ್ಲವಾ ಎಂಬ ವಿಷಯ ಎಲ್ಲರಿಗೂ ಕುತೂಹಲ ಕೆರಳಿಸಿದೆ. ರಮ್ಯ ಅವರು ಯಾವ ಆಧಾರದ ಮೇಲೆ ಟ್ವೀಟ್ ಮಾಡಿದ್ದಾರೆ ಎಂಬುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ನಾಳೆ ಬಿಎಸ್ ವೈ ಸಿಎಂ ಆಗಿ ಪ್ರಮಾಣ ವಚನ ?

ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ 104 ಸ್ಥಾನಗಳನ್ನು ಪಡೆಯುವ ಮೂಲಕ ಅತ್ಯಧಿಕ ಸ್ಥಾನ ಗಳಿಸಿರುವ ಬಿಜೆಪಿ ಅಧಿಕಾರ ಹಿಡಿಯಲು ಸರ್ಕಸ್ ನಡೆಸಿರುವ ಬೆನ್ನ ಹಿಂದೆಯೇ ನಾಳೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಈವರೆಗೆ ರಾಜ್ಯಪಾಲರ ಕಚೇರಿಯಿಂದ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲವಾದರೂ ಮಾಜಿ ಸಚಿವ ಸುರೇಶ ಕುಮಾರ ಅವರು ಬಿ.ಎಸ್. ಯಡಿಯೂರಪ್ಪ ಅವರು ನಾಳೆ ಬೆಳಗ್ಗೆ 9.30ಕ್ಕೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಮ್ಮ ಫೇಸ್ ಬುಕ್ ಹಾಗೂ ಟ್ವೀಟರ್ ನಲ್ಲಿ ಬರೆದುಕೊಂಡಿದ್ದರು. ಆದರೆ ಕೆಲವು ನಿಮಿಷಗಳ ನಂತರ ಅದನ್ನು ಡಿಲೀಟ್ ಮಾಡಿದ್ದಾರೆ. ಹೀಗಾಗಿ ಇದು ಸಾಧ್ಯನಾ ಎಂಬ ಪ್ರಶ್ನೆ ಎಲ್ಲರಿಗೂ ಉದ್ಭವವಾಗಿದೆ.

ಈಗಲ್ ಟರ್ನ ರೆಸಾರ್ಟ್ ಗೆ ಶಿಫ್ಟ್ ಆದ ಕಾಂಗ್ರೆಸ್ ಶಾಸಕರು

ಬೆಂಗಳೂರು : ರಾಜ್ಯದಲ್ಲಿ ಶತಾಯ ಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲೆ ಬೇಕು ಎಂದು ಪಣ ತೊಟ್ಟಿರುವ ಬಿಜೆಪಿ ನಾಯಕರಿಗೆ ಶೆಡ್ಡು ಹೊಡೆಲು ಹಾಗೂ ಆಪರೇಶನ್ ಕಮಲದಿಂದ ಕಂಗಲಾದ ರಾಜ್ಯ ಕಾಂಗ್ರೆಸ್ ನಾಯಕರು ಎಲ್ಲ ಶಾಸಕರನ್ನು ಈಗಲ್ ಟರ್ನ ರೆಸಾರ್ಟ್ ಗೆ ಶಿಫ್ಟ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ 78 ಶಾಸಕರ ಪೈಕಿ 77 ಶಾಸಕರನ್ನು ಖಾಸಗಿ ಬಸ್ ನಲ್ಲಿ ಕರೆದುಕೊಂಡು ಒಳಗಡೆ ಕರೆದುಕೊಂಡು ಹೋಗಲಾಗಿದೆ. ಇದರ ಸಾರಥ್ಯವನ್ನು ಮಾಜಿ ಸಚಿವ ಡಿ.ಕೆ. ಶಿವಕುಮಾರ ಹಾಗೂ ಸಂಸದ ಡಿ.ಕೆ. ಸುರೇಶ ಅವರಿಗೆ ವಹಿಸಲಾಗಿದೆ. ಹೊಸಪೇಟೆ ಶಾಸಕ ಆನಂದ ಸಿಂಗ್ ಒಬ್ಬರನ್ನು ಹೊರತು ಪಡಿಸಿ ಉಳಿದೆಲ್ಲಾ ಶಾಸಕರು ಕಾಂಗ್ರೆಸ್ ಪಕ್ಷದೊಂದಿಗೆ ಇದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈವರೆಗೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ದೊರೆತಿಲ್ಲ.

ರಾಜ್ಯಪಾಲರ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಲು ಮುಂದಾದ ಕಾಂಗ್ರೆಸ್ ?

ನವದೆಹಲಿ : ಬಿಜೆಪಿಗೆ ಸರಕಾರ ರಚನೆ ಮಾಡಲು ಅವಕಾಶ ನೀಡಿದ ರಾಜ್ಯಪಾಲರ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಕೇಂದ್ರದ ಮಾಜಿ ಸಚಿವರಾದ ಪಿ.ಚಿದಂಬರಂ, ಕಪಿಲ್ ಸಿಬಲ್ ಹಾಗೂ ಇತರ ಕಾಂಗ್ರೆಸ್ ನಾಯಕರು ಎಚ್ಚರಿಸಿದ್ದಾರೆ. ಈಕುರಿತು ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ಇಂದು ರಾತ್ರಿಯೇ ಸುಪ್ರೀಂಕೋರ್ಟ್ ಸಿಜೆಐ ದೀಪಕ ಮಿಶ್ರಾ ಅವರನ್ನು ಭೇಟಿ ಮಾಡಿ ವಸ್ತುಸ್ಥಿತಿಯಕುರಿತು ಚಿತ್ರಣ ನೀಡಲಾಗುವುದು ಎಂದು ತಿಳಿಸಿದ್ದಾರೆ. ನಾವು ಬಹುಮತ ಹೊಂದಿದ್ದು, ನಮ್ಮ ಬಳಿ 117 ಸಂಖ್ಯಾಬಲ ಇದೆ. ಹೀಗಾಗಿ ರಾಜ್ಯಪಾಲರು ಬಿಜೆಪಿಗೆ ಅವಕಾಶ ನೀಡಿದರೆ ನಾವು ಅವರ ವಿರುದ್ಧಕಾನೂನು ಸಮರ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು. ರಾಜ್ಯಪಾಲರ ನಡೆಯ ಮೇಲೆ ನಮಗೆ ಬಹಳಷ್ಟು ಅನುಮಾನವಿದ್ದು, ಅವರು ರಾಜ್ಯಪಾಲರ ಕಚೇರಿಯನ್ನುದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ವಿಜಯೋತ್ಸವಕ್ಕೆ ಅಡ್ಡಿ ಪಡಿಸಿದ ನಾಲ್ವರ ಬಂಧನ

ಧಾರವಾಡ : ಬಿಜೆಪಿ ವಿಜಯೋತ್ಸವಕ್ಕೆ ಅಡ್ಡಿ ಪಡಿಸಿದ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ ಘಟನೆ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ನಡೆದಿದೆ‌. ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ-೭೧ರ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬಿಜೆಪಿ ಶಾಸಕ ಅಮೃತ ದೇಸಾಯಿ ಅವರ ತವರೂರಾದ ಹಂಗರಕಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಬಿಜೆಪಿ ಮುಖಂಡ ಶಿವನಗೌಡ ನಾಗನಗೌಡ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಗರಗ ಪೊಲೀಸರು ಈ ಸಂಬಂಧ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರಾದ ಕಲ್ಲಪ್ಪ, ಸುರೇಶ, ಶಂಕ್ರಯ್ಯ ಹಾಗೂ ಮಹದೇವ ಅವರನ್ನು ಬಂಧಿಸಲಾಗಿದೆ ಎಂದು ಗರಗ ಪೊಲೀಸ್ ಠಾಣೆ ಪಿಎಸ್ಐ ಅವರು ಪ್ರಜಾಕಿರಣಕ್ಕೆ ತಿಳಿಸಿದ್ದಾರೆ.

ದೊಡ್ಡ ಗೌಡರ ಮೇಲೆ ಸೇಡು ತೀರಿಸಿಕೊಳ್ತಾರಾ ರಾಜ್ಯ "ವಾಲಾ" ..?

ಬೆಂಗಳೂರು : 22 ವರ್ಷಗಳ ಹಿಂದೆ ಗುಜರಾತ್​ ಬಿಜೆಪಿ ಅಧ್ಯಕ್ಷರಾಗಿದ್ದ ವಜುಬಾಯಿ ವಾಲಾ ಅವರು ಅಲ್ಲಿನ ಬಿಜೆಪಿ ಸರಕಾರದಿಂದ ಬಂಡಾಯವೆದ್ದ ಕೆಲವು ಮುಖಂಡರು ಕಾಂಗ್ರೆಸ್​ ಜೊತೆ ಸೇರಿ ಸರಕಾರ ಬೀಳಿಸಲು ಯತ್ನಿಸಿದ್ದರು. ಆದರೆ, ಬಹುಮತ ಸಾಬೀತು ಪರೀಕ್ಷೆಯಲ್ಲಿ ಪಕ್ಷ ಗೆದ್ದಿತ್ತು. ಇದನ್ನು ವಿರೋಧಿಸಿ ಬಿಜೆಪಿ ಬಂಡಾಯ ಹಾಗೂ ಕಾಂಗ್ರೆಸ್​ ಮುಖಂಡರು ವಿಧಾನಸಭೆಯಲ್ಲೇ ದಾಂಧಲೆ ನಡೆಸಿದ್ದರು. ಆಗ ಕಾಂಗ್ರೆಸ್ ಮೂಲದ ಅಲ್ಲಿನ ರಾಜ್ಯಪಾಲರು ಬಹುಮತ ಸಾಬೀತು ಪ್ರಕ್ರಿಯೆ ಅಸಾಂವಿಧಾನಿಕವೆಂದು, ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದರು. ಈ ಶಿಫಾರಸು ಕಳುಹಿಸಿದ ಕೆಲವೇ ನಿಮಿಷಗಳಲ್ಲಿ ಅಂದಿನ ಪ್ರಧಾನಿಯಾಗಿದ್ದ ಎಚ್.ಡಿ.ದೇವೇಗೌಡರು ಗುಜರಾತ್‌ನಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಆದೇಶಿಸಿದ್ದರು. ಬಹುಮತ ಸಾಬೀತುಪಡಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದರೂ, ದೇವೇಗೌಡರು ಸರಕಾರವನ್ನು ಕಿತ್ತೆಸೆದಿದ್ದರು. ಆಗ ಗುಜರಾತ್ ಬಿಜೆಪಿ ಅಧ್ಯಕ್ಷರಾಗಿದ್ದ ವಜುಬಾಯಿ ವಾಲಾ ಅವರು ಈಗ ಕರ್ನಾಟಕದ ರಾಜ್ಯಪಾಲರಾಗಿದ್ದಾರೆ. ಇದೀಗ ದೇವೇಗೌಡರ ಮೇಲೆ ಅವರು ಹಳೆಯ ಸೇಡು ತೀರಿಸಿಕೊಳ್ಳತ್ತಾರಾಯೇ ಎಂಬುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ‌.

ವಿವಿಧ ದೇವಸ್ಥಾನಗಳಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಿಜೆಪಿ ಶಾಸಕ ಅಮೃತ ದೇಸಾಯಿ

ಧಾರವಾಡ : ಧಾರವಾಡ ವಿಧಾನ ಸಭಾ ಕ್ಷೇತ್ರ-೭೧ರಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಬಿಜೆಪಿ ಶಾಸಕ ಅಮೃತ ದೇಸಾಯಿ ಅವರು ಕ್ಷೇತ್ರದ ವಿವಿಧೆಡೆ ತೆರಳಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಇತಿಹಾಸ ಪ್ರಸಿದ್ಧ ಹಾಗೂ ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಗರಗದ ಮಡಿವಾಳೇಶ್ವರ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಶಾಸಕ ಅಮೃತ ದೇಸಾಯಿ ಅವರು ಬಳಿಕ ಶಿವಳ್ಳಿಯ ದುರ್ಗಾದೇವಿ ದೇವಸ್ಥಾನ, ಹೆಬ್ಬಳ್ಳಿಯ ಮೂಗಬಸವೇಶ್ವರ ದೇವಸ್ಥಾನ ಹಾಗೂ ಧಾರವಾಡದ ಮುರುಘಾ ಮಠಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಈ ವೇಳೆ ಶಾಸಕ ಅಮೃತ ದೇಸಾಯಿ ಅವರಿಗೆ ಮುರುಘಾ ಮಠದ ಪೀಠಾಧೀಪತಿ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಶಾಲು ಹೊದಿಸಿ ಸನ್ಮಾನಿಸಿದರು. ಈ ವಿಜಯೋತ್ಸವಕ್ಕೆ ಧಾರವಾಡ ಸಂಸದ ಪ್ರಲ್ಹಾದ ಜೋಶಿ, ಬಿಜೆಪಿ ಮುಖಂಡರಾದ ತವನಪ್ಪ ಅಷ್ಟಗಿ, ಗುರುನಾಥ ಗೌಡರ, ಸಹದೇವ ಹಾವೇರಿ, ಬಸವರಾಜ ತಂಬಾಕದ. ಶಂಕರ ಮುಗದ ಸೇರಿದಂತೆ ಅನೇಕರು ಸಾಕ್ಷಿಯಾದರು.

ಮತ ಯಂತ್ರಗಳ ದುರ್ಬಳಕೆ ಖಂಡಿಸಿ ಮೋದಿ ಪ್ರತಿಕೃತಿ ಸುಟ್ಟ ಕಾಂಗ್ರೆಸ್ ಕಾರ್ಯಕರ್ತರು

ಧಾರವಾಡ: ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳ ದುರ್ಬಳಕೆ ಆಗಿದೆ ಎಂದು ಆರೋಪಿಸಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಎಲೆಕ್ಟ್ರಾನಿಕ್ ಮತ ಯಂತ್ರಗಳ ಮೂಲಕ ಮತಚಲಾವಣೆಯಲ್ಲಿ ಭಾರೀ ಗೋಲಮಾಲ್‌ ಆಗಿದೆ. ವಿವಿ ಪ್ಯಾಟ್‌ಗಳಲ್ಲಿ ಮತದಾನದ ಸಮರ್ಪಕ ಪ್ರದರ್ಶನವಾಗಿಲ್ಲ. ಅಲ್ಲದೇ ಮತ ಎಣಿಕೆಯಲ್ಲಿಯೂ ಪಾರದರ್ಶಕತೆ ಕಾಯ್ದುಕೊಂಡಿಲ್ಲ. ಇದರಿಂದಾಗಿ ಫಲಿತಾಂಶದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಆರೋಪಿಸಿದರು. ಗುಜರಾತ್ ಹಾಗೂ ರಾಜಸ್ಥಾನಗಳಿಂದ ತರಿಸಿರುವ ಎಲೆಕ್ಟ್ರಾನಿಕ್ ಮತ ಯಂತ್ರಗಳ ಮೂಲಕ ಬಿಜೆಪಿ ಮತದಾನ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ವ್ಯವಸ್ಥಿತ ಕುತಂತ್ರ ನಡೆಸಿದೆ. ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ತನಗೆ ಇಷ್ಟವಾದ ರೀತಿಯಲ್ಲಿ ಫಲಿತಾಂಶ ಪಡೆಯುವ ಹುನ್ನಾರ ನಡೆಸಿದೆ ಎಂದು ದೂರಿದರು. ಆದ್ದರಿಂದ ಚುನಾವಣಾ ಆಯೋಗ ಮರು ಮತದಾನ ನಡೆಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿ ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಜಿಲ್ಲಾಧ್ಯಕ್ಷರಾದ ಅನೀಲ ಪಾಟೀಲ, ಅಲ್ತಾಫ್ ಹಳ್ಳೂರ, ಜಿಪಂ ಸದಸ್ಯ ಚನಬಸಪ್ಪ ಮಟ್ಟಿ, ಮುಖಂಡರಾದ ಡಾ.ಮಹೇಶ ನಾಲವಾಡ, ಸುನೀತಾ ಹುರಕಡ್ಲಿ, ದೀಪಕ ಚಿಂಚೋರೆ, ಯಾಸೀನ್ ಹಾವೇರಿಪೇಟ್ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.

ಜಗದೀಶ್ ಶೆಟ್ಟರ್ ಗೆ ತಾಕತ್ ಇದ್ದರೆ ಮರು ಚುನಾವಣೆ ಎದುರಿಸಲಿ

ಧಾರವಾಡ : ೨೫ ವರ್ಷ ಎಲ್ಲಾ ರೀತಿಯ ಅಧಿಕಾರ ಅನುಭವಿಸಿ, ವಾಮಾ ಮಾರ್ಗ ಅನುಸರಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಜಗದೀಶ್ ಶೆಟ್ಟರ್ ಗೆ ತಾಕತ್ ಇದ್ದರೆ ಇನ್ನೊಮ್ಮೆ ಚುನಾವಣೆ ಎದುರಿಸಲಿ ಎಂದು ಡಾ‌. ಮಹೇಶ ನಾಲವಾಡ ಸವಾಲ್ ಹಾಕಿದರು. ಅವರು ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೪೨ ಮತಗಳು ಬಂದರೆ, ೨೦೪ ಮತ ತೋರಿಸಿದ್ದಾರೆ. ಇದು ಹೇಗೆ ಸಾಧ್ಯವೆಂದು ಪ್ರಶ್ನಿಸಿದರು. ಜಗದೀಶ್ ಶೆಟ್ಟರ್ ಜೊತೆಗೆ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿ ಒಳ ಮಿಲಾಪಿ ಆಗಿದ್ದಾರೆ ಎಂದು ದೂರಿದರು. ಮತಗಟ್ಟೆ ಸಂಖ್ಯೆ ೭೯ ರಲ್ಲಿ ಸರಿ ಬಂದಿದೆ. ಇನ್ನೊಂದು ಕಡೆ ವ್ಯತ್ಯಾಸ ಬಂದಿದೆ. ಅದು ಶೇಕಡ ೫೦ರಷ್ಟು ಲೋಪದೋಷವಾಗಿದೆ. ಈ ಬಗ್ಗೆ ಕೇಂದ್ರ ಚುನಾವಣೆ ಆಯೋಗದ ಮೊರೆ ಹೋಗಲಾಗಿದೆ. ಅವರ ಪ್ರತಿಕ್ರಿಯೆ ನೋಡಿ ಮುಂದಿನ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಎಲ್ಲಾ ಮತಗಟ್ಟೆಗಳ ಮತಯಂತ್ರಗಳಲ್ಲಿ ಲೋಪ ದೋಷವಿರುವುದು ಸಾಬೀತಾಗಿದೆ. ಹೀಗಾಗಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದಲ್ಲಿ ಮರು ಚುನಾವಣೆಯನ್ನು ಬ್ಯಾಲೇಟ್ ಪೇಪರ್ ಮೂಲಕ ನಡೆಸಬೇಕು ಎಂದು ಆಗ್ರಹಿಸಿದರು.ಜನರ ಒಲುವು ಕಾಂಗ್ರೆಸ್ ಪಕ್ಷದ ಪರವಾಗಿ ಕಂಡು ಬಂದಿದೆ. ಮುಸ್ಲಿಂ ಮತದಾರರು ಹೆಚ್ಚಿರುವ ವಾರ್ಡಗಳಲ್ಲಿ ಕೂಡ ಬಿಜೆಪಿ ಮತಗಳನ್ನು ಪಡೆದಿರುವುದು ಹಲವು ಅನುಮಾನಗಳಿವೆ ಎಂದರು. ವಿವಿ ಪ್ಯಾಟ್ ನಲ್ಲಿ ಒಂಬತ್ತು ಮತಗಳು ಹೆಚ್ಚಿವೆ. ಅಲ್ಲದೆ, ೪೦೦ ಮತಗಳು ಹೆಚ್ಚಿದ್ದವು. ಅದು ಯಾವ ೫೫ ವ್ಯತ್ಯಾಸ ಬಂದಿವೆ. ೨೦೪ ಮತಗಳು ಯಾರಿಗೆ ಸೇರಿವೆ ಎಂಬುದು ಈವರೆಗೆ ಸ್ಪಷ್ಟವಾಗಿ ಹೇಳಿಲ್ಲ. ಸಂಶಯವೇನೆಂದರೆ ಒಂದು ಯಂತ್ರದಲ್ಲಿ ಇಷ್ಟು ಕಂಡು ಬಂದಿದೆ. ಇನ್ನೂಳಿದ ಯಂತ್ರಗಳಲ್ಲಿ ಎಷ್ಟು ಗೋಲ್ ಮಾಲ್ ಆಗಿದೆ ಎಂಬುದು ತಿಳಿಯಲು ಕಾನೂನು ಹೋರಾಟ ನಡೆಸುವುದು ಶತಸಿದ್ದ ಎಂದರು. ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಸದಸ್ಯ ದೀಪಕ್ ಚಿಂಚೋರೆ, ಯಾಶೀನ್ ಹಾವೇರಿಪೇಟ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಜೆಡಿಎಸ್ ಶಾಸಕರಿಗೆ ನೂರು ಕೋಟಿ ಆಮಿಷ

ಬೆಂಗಳೂರು : ಬಿಜೆಪಿಯವರು ಕುದುರೆ ವ್ಯಾಪಾರ ಆರಂಭಿಸಿದ್ದು, ಒಬ್ಬ ಜೆಡಿಎಸ್ ಶಾಸಕರಿಗೆ ನೂರು ಕೋಟಿ ಆಮಿಷ ಒಡ್ಡಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಜೆಡಿ ಎಸ್ ಶಾಸಕಾಂಗ ಸಭೆಯ ನಾಯಕ ಹೆಚ್. ಡಿ‌ ಕುಮಾರಸ್ವಾಮಿ ಗಂಭೀರವಾದ ಆರೋಪ ಮಾಡಿದರು. ಅವರು ಬುಧವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಬೆಂಬಲ ಕೋಡ್ತಿನಿ ಅಂದ್ರು ನಾವು ಅವರ ಜೊತೆಗೆ ಹೋಗಲ್ಲ. ಇದಕ್ಕೆ ಮಾಜಿ ಪ್ರಧಾನಿ ಹೆಚ್‌ಡಿ ದೇವೆಗೌಡರ ಸಹಮತವಿಲ್ಲ. ಅಲ್ಲದೆ, ದೇಶದ ಹಲವು ಪಕ್ಷಗಳ ನಾಯಕರು ಸಹ ಕರೆ ಮಾಡಿ ದುಡಕಬೇಡಿ ಎಂದು ಸಲಹೆ ನೀಡಿದ್ದಾರೆ ಎಂದರು. ಬಿಜೆಪಿಯ ಆಸ್ವಮೇಧ ಕುದುರೆಯನ್ನು ಕಟ್ಟಿ ಹಾಕಲು ಜೆಡಿಎಸ್ ಗೆ ಮಾತ್ರ ಸಾಧ್ಯ ಎಂದ ಅವರು ಬಿಜೆಪಿ ಜೊತೆಗೆ ಮೈತ್ರಿಯನ್ನು ಮಾಡಿಕೊಳ್ಳುವ ಪ್ರಶ್ನೆ ಇಲ್ಲ ಎಂದರು. ಅಮಿತ್ ಶಾ ವಿರುದ್ದ ಗುಡುಗಿದ ಹೆಚ್ ಡಿ ಕೆ ಬಿಜೆಪಿಯ ೧೦-೧೫ ಶಾಸಕರು ನಮ್ಮ ಜೊತೆಗೆ ಸಂಪರ್ಕಕ್ಕೆ ಬಂದಿದ್ದಾರೆ. ನಾವು ನಿಮ್ಮ ಹಾಗೆಯೇ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಎಚ್ಚರಿಸಿದರು. ಆಪರೇಷನ್ ಕಮಲಕ್ಕೆ ಕೈ ಹಾಕಿದರೆ ತಿರುಗು ಬಾಣವಾಗಲಿದೆ ಎಂದು ತಿರುಗೇಟು ನೀಡಿದರು.

ಮೋದಿ ಅಧಿಕಾರದ ದುರುಪಯೋಗ : ಕುಮಾರಸ್ವಾಮಿ

ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ೩೮ ಸ್ಥಾನ ಗಳಿಸಿರುವ ಜೆಡಿ ಎಸ್ ಶಾಸಕಾಂಗ ಸಭೆಯ ನಾಯಕರಾಗಿ ಮಾಜಿ ಸಿಎಂ ಕುಮಾರಸ್ವಾಮಿ ಪುನರ್ ಆಯ್ಕೆ ಮಾಡಲಾಯಿತು. ನಗರದ ಶಾಂಗ್ರಿಲಾ ಹೊಟೇಲ್ ನಲ್ಲಿ ನಡೆದ ಸಭೆಯಲ್ಲಿ ಜೆ.ಟಿ. ದೇವೆಗೌಡ, ಹೆಚ್. ವಿಶ್ವನಾಥ, ಬಂಡೆಪ್ಪ ಕಾಂಶೆಪೂರ ಸೇರಿದಂತೆ ಹಲವಾರು ಮುಖಂಡರು ಹೂ ಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್. ಡಿ ಕೆ, ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲದಿದ್ದರೂ ಸರಕಾರ ರಚನೆಗೆ ಅವಕಾಶ ನೀಡಿರುವುದು ಸರಿಯಲ್ಲ. ಮೋದಿ ಅಧಿಕಾರದ ದುರುಪಯೋಗ ಪಡಿಸಿಕೊಳ್ಳುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ದೂರಿದರು. ಚುನಾವಣಾತ್ತೋರ ಕಾಂಗ್ರೆಸ್ ಜೆಡಿಎಸ್ ಮೈತ್ರಿಗೆ ಬಿಡುವುದಿಲ್ಲ ಎಂದು ಮೋದಿಯವರು ಹೇಳುತ್ತಾರೆ. ಬಿಜೆಪಿಯವರು ಅಧಿಕಾರ ಹಿಡಿಯಲು ವೇಗವಾಗಿ ಹೊರಟಿದ್ದಾರೆ. ಕೆಲವರು ಜೆಡಿಎಸ್ ಮುಗಿಸಲು ಹಾಗೂ ಬಿಜೆಪಿಗೆ ಲಾಭ ತರಲು ಹೊರಟಿದ್ದಾರೆ. ನಾನು ಸದ್ಯ ಯಾರನ್ನು ದೂಷಿಸುವುದಿಲ್ಲ. ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಗೆ ಅವಕಾಶ ಕಲ್ಪಿಸಿದ ರಾಜ್ಯಪಾಲರು ?

ಬೆಂಗಳೂರು : ರಾಜ್ಯದಲ್ಲಿ ಸರಕಾರ ರಚನೆ ಮಾಡಲು ಬಿಜೆಪಿ ಗೆ ರಾಜ್ಯಪಾಲ ವಜುಬಾಯಿ ವಾಲಾ ಅವರು ಅವಕಾಶ ಕಲ್ಪಿಸಿದ್ದಾರೆ. ಮೇ ೨೭ರವೆರೆಗೆ ಬಹುಮತ ಸಾಬೀತು ಪಡಿಸಲು ಕಾಲಾವಕಾಶ ನೀಡಿದ್ದಾರೆ. ರಾಜ್ಯಪಾಲರನ್ನು ಭೇಟಿ ಮಾಡಿ ನಗು ಮುಖದೊಂದಿಗೆ ಹೊರಬಂದ ಯಡಿಯೂರಪ್ಪ ಅವರು ನಾಯಕನ್ನಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಮೇ. ೧೭ ರಂದು ಗುರುವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಬಿಜೆಪಿಯ ಉನ್ನತ ಮೂಲ ಗಳು ಖಚಿತ ಪಡಿಸುವೆ.

ಯಡಿಯೂರಪ್ಪ ಸಿಎಂ ಆಗೇ ಆಗ್ತಾರೆ ಎಂದ ಈಶ್ವರಪ್ಪ

ಬೆಂಗಳೂರು : ರಾಜ್ಯದ ಜನತೆಗೆ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ನೀಡಿದ್ದಾರೆ. ಹೀಗಾಗಿ ಯಾರೇ ಏನೂ ಮಾಡಿದರು ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗೇ ಆಗ್ತಾರೆ ಎಂದು ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಅವರು ಬಿಎಸ್ ವೈ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್.ಜೆಡಿಎಸ್ ಹಿಂಬಾಗಿಲ ಆಡಳಿತಕ್ಕೆ ಜನ ಮೆಚ್ಚಲ್ಲ ಎಂದು ವಾಗ್ದಾಳಿ ನಡೆಸಿದರು. ಅನೇಕ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಅನೈತಿಕ ಮೈತ್ರಿಗೆ ಬೇಸರ ವ್ಯಕ್ತಪಡಿಸಿ, ಅವರೇ ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು. ನಾವೇನು ಆಪರೇಶನ ಕಮಲ ಮಾಡುವ ಅಗತ್ಯವಿಲ್ಲ. ಶಾಸಕರು ಅವರಾಗಿಯೇ ಮುಂದೆ ಬಂದು ಮೋದಿ, ಅಮಿತ್ ಶಾ ಹಾಗೂ ಯಡಿಯೂರಪ್ಪ ಅವರ ನಾಯಕತ್ವಕ್ಕೆ ಮೆಚ್ಚಿ ಬೆಂಬಲ ನೀಡಲು ಮುಂದೆ ಬರಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ಮಾಡುವುದು ಶತಸಿದ್ಧ ಎಂದು ಹೇಳಿದರು.

ಬಿಜೆಪಿ ವಿರುದ್ಧ ಕಿಡಿ ಕಾರಿದ ದಿನೇಶ ಗುಂಡೂರಾವ್

ಬೆಂಗಳೂರು : ಬಿಜೆಪಿಯಂತಹ ಭ್ರಷ್ಟ ಬಂಡ ರಾಜಕೀಯ ಪಕ್ಷ ಈ ದೇಶದಲ್ಲಿಯೇ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್ ಕಿಡಿ ಕಾರಿದ್ದಾರೆ.ಅವರು ಆಪರೇಶನ್ ಕಮಲ ಮಾಡುವುದರಲ್ಲಿ ನಿಸ್ಸೀಮರು. ಹೀಗಾಗಿ ನಾವು ರೇಸಾರ್ಟ್ ಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯಪಾಲರು ನಮ್ಮನ್ನು ಸರಕಾರ ರಚಿಸುವುದಕ್ಕೆ ಕರೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ ಬೆಂಬಲ ಘೋಷಿಸಿದ ಪಕ್ಷೇತರ ಶಾಸಕ ಆರ್. ಶಂಕರ್

ಬೆಂಗಳೂರು : ಕೆಪಿಜೆಪಿ ಪಕ್ಷದಿಂದ ಸ್ಪರ್ಧಿಸಿ ರಾಣೆಬೆನ್ನೂರ ಶಾಸಕರಾಗಿ ಆಯ್ಕೆಯಾಗಿದ್ದ ಆರ್ ಶಂಕರ್ ಅವರು ಬುಧವಾರ ಬೆಳಗ್ಗೆ ದಿಢೀರ್ ಆಗಿ ಡಾಲರ್ಸ್ ಕಾಲನಿಯ ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಕೆ.ಎಸ್. ಈಶ್ವರಪ್ಪ ಜೊತೆಗೆ ಆಗಮಿಸಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು. ನಿನ್ನೆಯಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರು ಪಕ್ಷೇತರ ಶಾಸಕರು ನಮ್ಮ ಜೊತೆಗೆ ಇದ್ದಾರೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಹೈ ಕಮಾಂಡ್ ಕೈ ಗೆ ಸಿಗದ ನಾಲ್ವರು ಕಾಂಗ್ರೆಸ್ ಶಾಸಕರು

ಬೆಂಗಳೂರು : ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಯ ಬೆನ್ನಲ್ಲೇ ಬಿಜೆಪಿಗೆ ಕೈ ಕೊಟ್ಟು ಕಾಂಗ್ರೆಸ್ ಸೇರಿದ್ದ ನಾಲ್ವರು ಶಾಸಕರು ಹೈಕಮಾಂಡ್ ಕೈ ಗೆ ಸಿಗದಿರುವುದು ಕಾಂಗ್ರೆಸ್ ಪಕ್ಷದ ವರಿಷ್ಟರಿಗೆ ತಲೆನೋವಾಗಿದೆ. ಕೊನೆ ಕ್ಷಣದಲ್ಲಿ ಬಿಜೆಪಿ ಸೇರದೆ ಕಾಂಗ್ರೆಸ್ ನಿಂದಲೇ ಸ್ಪರ್ಧಿಸಿದ್ದ ಹುಮ್ನಾಬಾದ್ ಶಾಸಕ ರಾಜಶೇಖರ ಪಾಟೀಲ್, ಬಿಜೆಪಿ ತೊರೆದು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದ ಕೂಡ್ಲಗಿ ಶಾಸಕ ನಾಗೇಂದ್ರ ಕೂಡ್ಲಗಿ, ಹೊಸಪೇಟೆ ಶಾಸಕ ಆನಂದ ಸಿಂಗ್, ಹಾಗೂ ಬಿಜೆಪಿ ಟಿಕೇಟ್ ದೊರೆಯದೆ ಕಾಂಗ್ರೆಸ್ ನಿಂದ ಮಾಲಿಕಯ್ಯ ಗುತ್ತೇದಾರ ವಿರುದ್ಧ ಸ್ಪರ್ಧಿಸಿದ್ದ ಅಫಜಲ್ಪೂರ ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ ಅವರು ಕಾಂಗ್ರೆಸ್ ಕೈ ಕಮಾಂಡ್ ಗೆ ಚಳ್ಳೆ ಹಣ್ಣು ತಿನ್ನಿಸಿ ಆಪರೇಶನ್ ಕಮಲಕ್ಕೆ ಬಲಿಯಾದರಾ ಎಂಬ ಶಂಕೆ ಕಾಂಗ್ರೆಸ್ ಪಾಳೇಯದಲ್ಲಿ ಮೂಡಿದೆ. ಈ ಬಗ್ಗೆ ಮಧ್ಯಾಹ್ನದ ನಂತರ ಇನ್ನಷ್ಟು ಸ್ಪಷ್ಟ ಚಿತ್ರಣ ದೊರೆಯಲಿದೆ.

ಮತ್ತೇ ರೇಸಾರ್ಟ್ ರಾಜಕೀಯ ಆರಂಭ

ಬೆಂಗಳೂರು : ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಬೆನ್ನಲ್ಲೇ ಆಪರೇಶನ್ ಕಮಲ ಭೀತಿಯ ಹಿನ್ನಲೆಯಲ್ಲಿ ರೇಸಾರ್ಟ್ ರಾಜಕೀಯ ಆರಂಭವಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಹನ್ನೊಂದು ಗಂಟೆಗೆ ಶಾಸಕಾಂಗ ಸಭೆಯ ನಂತರ ಕೇರಳದ ಕೊಚ್ಚಿಗೆ ಶೀಫ್ಟ್ ಆಗುವ ಸಾಧ್ಯತೆಗಳಿವೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಶಾಸಕಾಂಗ ಸಭೆಯ ನಾಯಕರನ್ನಾಗಿ ಘೋಷಣೆ ಮಾಡಿದ ನಂತರ ಮುಂದಿನ ನಿರ್ಧಾರಕ್ಕೆ ಬರಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.

ಕಲ್ಲೂ ತೂರಾಟ, ಬೈಕ್ ಗೆ ಬೆಂಕಿ

ಬೆಳಗಾವಿ : ಬೆಳಗಾವಿಯ ಮಾಜಿ ಶಾಸಕ ಫಿರೋಜ್ ಸೇಟ್ ಸೋಲು ಕಂಡ ಹಿನ್ನಲೆಯಲ್ಲಿ ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬಿಜೆಪಿಯ ಕಾರ್ಯಕರ್ತರ ಮೇಲೆ ಕಲ್ಲೂತೂರಿದ ಕಾಂಗ್ರೆಸ್ ಕಾರ್ಯಕರ್ತರು ಅವರಿಗೆ ಸೇರಿದ ಬೈಕ್ ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕಲ್ಲೂ ತೂರಾಟದ ಪರಿಣಾಮ ಪೊಲೀಸ್ ಜೀಪ್ ಕೂಡ ಜಖಂಗೊಂಡಿದೆ. ಅನೇಕರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಬೆಳಗಾವಿಯಲ್ಲಿ ಬೂದಿ ಮುಚ್ಚಿದ ಕೆಂಡದ ವಾತವರಣವಿದ್ದು, ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಮಧ್ಯ ರಾತ್ರಿ ಜಗದೀಶ ಶೆಟ್ಟರ್ ಫಲಿತಾಂಶ ಪ್ರಕಟ

ಧಾರವಾಡ : ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಇವಿಎಂ ಗೊಂದಲಕ್ಕೆ ತೆರೆ ಎಳೆದ ಬಳಿಕ ಮಧ್ಯ ರಾತ್ರಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಫಲಿತಾಂಶ ಪ್ರಕಟಗೊಳಿಸಲಾಯಿತು. ಹು-ಧಾ ಸೆಂಟ್ರಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಆಯ್ಕೆಯನ್ನು ಘೋಷಿಸಲಾಯಿತು. ಜಗದೀಶ ಶೆಟ್ಟರ್ 75,591 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಮಹೇಶ ನಾಲವಾಡ 54,321 ಮತ ಪಡೆದಿದ್ದಾರೆ. ಹೀಗಾಗಿ ಜಗದೀಶ್ ಶೆಟ್ಟರ್ 2,1270.ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಘೋಷಿಸಿದರು. ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ಫಲಿತಾಂಶ ಪ್ರಕಟಗೊಂಡಿತು.

ಬಿಜೆಪಿ ಕಾರ್ಯಕರ್ತರಿಗೆ ತಲವಾರಿನಿಂದ ದಾಳಿ

ಮಂಗಳೂರು : ಬಿಜೆಪಿ ವಿಜಯೋತ್ಸವ ವೇಳೆ ಕಲ್ಲುತೂರಾಟ ನಡೆದ ಘಟನೆ ಮಂಗಳೂರು ಹೊರವಲಯದ ಅಡ್ಯಾರ್ ಪದವು ಪ್ರಾರ್ಥನಾ ಮಂದಿರದ ಬಳಿ ನಡೆದಿದೆ. ಭಿನ್ನಕೋಮಿನ ಯುವಕರಿಂದ ಬಿಜೆಪಿ ಕಾರ್ಯಕರ್ತರಿಗೆ ತಲವಾರಿನಿಂದ ದಾಳಿ ಮಾಡಲಾಗಿದ್ದು, ಇದರಿಂದ ನಾಲ್ವರು ಬಿಜೆಪಿ ಕಾರ್ಯಕರ್ತರಿಗೆ ‌ಗಂಭೀರ ಗಾಯಗಳಾಗಿವೆ. ಸುಮಾರು 50ಕ್ಕೂ ಅಧಿಕ ಯುವಕರಿಂದ ದಾಳಿ ನಡೆದಿದ್ದು, ಘಟನೆಯಲ್ಲಿ ಹಿಂದೂ ಧಾರ್ಮಿಕ ಕೇಂದ್ರಕ್ಕೂ ಕಲ್ಲು ತೂರಾಟ ಮಾಡಲಾಗಿದೆ. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಸಚಿವ ವಿನಯ ಕುಲಕರ್ಣಿ ಬೆಂಬಲಿಗರಿಂದ ಪ್ರತಿಭಟನೆ

ಧಾರವಾಡ : ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ವೇಳೆಯಲ್ಲಿ ಧಾರವಾಡ ವಿಧಾನ ಸಭಾ ಕ್ಷೇತ್ರ-71 ರಲ್ಲಿ ತಾಂತ್ರಿಕ ಲೋಷದೋಷವಾಗಿದೆ ಎಂದು ಆರೋಪಿಸಿ, ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಚಿವ ವಿನಯ ಕುಲಕರ್ಣಿ ಅವರ ಬೆಂಬಲಿಗರು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಅವರು ಮರು ಚುನಾವಣೆ ನಡೆಸುವಂತೆ ಪಟ್ಟು ಹಿಡಿದರು. ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಳ್ಳಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ದೂರು ಸಲ್ಲಿಸಿದ ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಬಳಿಕ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೊದಲು ಸುತ್ತಿನಿಂದ ಕೊನೆಯ ಸುತ್ತಿನ ವರೆಗೆ ಲೀಡ್ ಬಂದಿರುವುದು ನೋಡಿದರೆ ಈ ಬಗ್ಗೆ ಮೊದಲಿನಿಂದಲೂ ನಮಗೆ ಅನುಮಾನವಿತ್ತು. ಇದು ಜನರ ತೀರ್ಪು ಅಂತ ಭಾವಿಸಿದ್ದೆ. ಆದರೆ ಇವಿಎಂನಲ್ಲಿ ಮೋಸ ಮಾಡುವ ಮೂಲಕ ನಮಗೆ ಸೋಲಿಸಿದ್ದಾರೆ. ಇದರ ಹಿಂದೆ ಸಂಸದ ಪ್ರಲ್ಹಾದ ಜೋಶಿ ಕೈವಾಡವಿದೆ ಎಂದು ಆರೋಪಿಸಿದರು.

ಮರು ಚುನಾವಣೆ ನಡೆಸಲು ಎನ್.ಹೆಚ್. ಕೋನರಡ್ಡಿ ಒತ್ತಾಯ

ಧಾರವಾಡ : ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೆÃತ್ರ-೭೩ರಲ್ಲಿ ಇವಿಎಂ ಪ್ಯಾಟ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವುದು ಮೇಲ್ನೊÃಟಕ್ಕೆ ಸಾಬೀತಾಗಿದೆ. ಮತದಾನ ಮಾಡಿದ ಪ್ರಮಾಣಕ್ಕಿಂತ ಹೆಚ್ಚಿನ ಮತಗಳು ಚಲಾವಣೆ ಆಗಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ನವಲಗುಂದ ವಿಧಾನ ಸಭಾ ಕ್ಷೆÃತ್ರದಲ್ಲೂ ಇದೇ ರೀತಿಯ ತಾಂತ್ರಿಕ ದೋಷಗಳು ಕಂಡು ಬಂದಿರುವುದರಿಂದ ಮರು ಚುನಾವಣೆ ನಡೆಸುವಂತೆ ಒತ್ತಾಯಿಸಿ ಜೆಡಿಎಸ್ ಅಭ್ಯರ್ಥಿ ಎನ್.ಹೆಚ್. ಕೋನರಡ್ಡಿ ಅವರು ಜಿಲ್ಲಾ ಚುನಾವಣಾಧಿಕಾರಿಗಳ ಮುಖಾಂತರ ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದರು. ಅವರು ಮಂಗಳವಾರ ರಾತ್ರಿ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಹಾಗೂ ಅಪಾರ ಬೆಂಬಲಿಗರೊಂದಿಗೆ ಕೃಷಿ ವಿಶ್ವವಿದ್ಯಾಲಯದ ಆವರಣಕ್ಕೆ ತೆರಳಿ ಜಿಲ್ಲಾಧಿಕಾರಿ ಹಾಗೂ ಚುನಾವಣಾ ವೀಕ್ಷಕರನ್ನು ಖುದ್ದು ಭೇಟಿ ಮಾಡಿ ವಾಸ್ತವಾಂಶಗಳ ಕುರಿತು ಮನವರಿಕೆ ಮಾಡಿದರು. ನವಲಗುಂದ ತಾಲೂಕಿನ ಬ್ಯಾಲಾಳ ಮತಗಟ್ಟೆ ಸಂಖ್ಯೆ ೭ರಲ್ಲಿ ಒಟ್ಟು ೬೬೧ ಮತಗಳು ಚಲಾವಣೆಯಾಗಿವೆ. ಆದರೆ ಅಲ್ಲಿ ೬೬೮ ಮತಗಳು ಚಲಾವಣೆಯಾಗಿದೆ ಎಂದು ಮತಯಂತ್ರ ತೋರಿಸಿದೆ. ಅದೇ ರೀತಿ ನವಲಗುಂದ ಪಟ್ಟಣದ ಮತಗಟ್ಟೆ ಸಂಖ್ಯೆ ೯೧ರಲ್ಲಿ ಒಟ್ಟು ೬೦೦ರಿಂದ ೭೦೦ ಮತಗಳಿವೆ. ಆದರೆ ಅದರಲ್ಲಿ ೮೦೦ಕ್ಕಿಂತ ಹೆಚ್ಚಿನ ಮತ ಚಲಾವಣೆಯಾಗಿವೆ. ಇದಲ್ಲದೆ, ಒಟ್ಟು ಮತದಾನದ ಎಣಿಕೆಯಲ್ಲೂ ಕೂಡ ಅಂಕಿ ಅಂಶಗಳ ಏರುಪೇರು ಆಗಿವೆ. ಇದರಿಂದಾಗಿ ನವಲಗುಂದ ವಿಧಾನ ಸಭಾ ಕ್ಷೆÃತ್ರ-೬೯ರಲ್ಲಿ ಮೇಲ್ನೊÃಟಕ್ಕೆ ಅಕ್ರಮವಾಗಿರುವುದು ಕಂಡು ಬಂದಿದೆ. ಇಂತಹ ಪ್ರಕರಣಗಳು ವಿವಿಧ ಮತಗಟ್ಟೆಗಳಲ್ಲಿ ವರದಿಯಾಗಿವೆ ಎಂದು ನಮ್ಮ ಪಕ್ಷದ ನೂರಾರು ಕಾರ್ಯಕರ್ತರು ತಮ್ಮ ಅಳಲನ್ನು ನಮ್ಮ ಎದುರು ತೋಡಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ರಾಜಸ್ಥಾನ ಹಾಗೂ ಗುಜರಾತ್‌ದಿಂದ ತರಿಸಿದ ಇವಿಎಂ ಮಶೀನ್‌ಗಳು ತಾಂತ್ರಿಕ ದೋಷಗಳಿಂದ ಕೂಡಿರುವುದು ಸಾಬೀತಾಗುತ್ತದೆ. ಅಲ್ಲದೆ, ನವಲಗುಂದ ವಿಧಾನ ಸಭಾ ಕ್ಷೆÃತ್ರದ ಅರೇ ಕುರಹಟ್ಟಿ, ನವಲಗುಂದ, ಹಳ್ಳಿಕೇರಿ, ಅಣ್ಣಿಗೇರಿ, ಹೆಬಸೂರ, ಬ್ಯಾಹಟ್ಟಿ, ಚಿಲಕವಾಡ, ಹಳ್ಯಾಳ ಸೇರಿದಂತೆ ವಿವಿಧ ಕಡೆ ಮಶೀನ್‌ಗಳಲ್ಲಿ ತಾಂತ್ರಿಕ ದೋಷದಿಂದ ಮತದಾನ ಪ್ರಮಾಣದಲ್ಲಿ ಗಣನೀಯವಾಗಿ ಹೆಚ್ಚಳವಾಗಿರುವ ಅನುಮಾನಗಳು ಬಲವಾಗಿವೆ ಎಂದು ಆಪಾದನೆ ಮಾಡಿದರು. ಈ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ನವಲಗುಂದ ವಿಧಾನ ಸಭಾ ಕ್ಷೆÃತ್ರದ-೬೯ರಲ್ಲಿ ಮರು ಚುನಾವಣೆಯನ್ನು ಹಳೆಯ ಪದ್ಧತಿಯಂತೆ ಬ್ಯಾಲೆಟ್ ಪೇಪರ್ ನಲ್ಲಿಯೇ ಮತದಾನ ಮಾಡುವ ಪದ್ಧತಿಯಂತೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು. ಮನವಿ ಸ್ವಿÃಕರಿಸಿದ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಳ್ಳಿ ಅವರು ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಸಂಖ್ಯಾಬಲದ ಮೇಲೆ ಅಧಿಕಾರಕ್ಕೆ ಕಾಂಗ್ರೆಸ್ ಜೆಡಿಎಸ್ ವಿಶ್ವಾಸ

ಬೆಂಗಳೂರು : ರಾಜ್ಯಪಾಲರನ್ನು ಭೇಟಿ ಮಾಡಿದ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಸಂಖ್ಯಾಬಲದ ಮೇಲೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾವು ಬೇಷರತ್ ಆಗಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿದ್ದೇವೆ. ಯಾವುದೇ ಷರತ್ತು ವಿಧಿಸಿಲ್ಲ. ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲದ ಮೇಲೆ ರಾಜ್ಯಪಾಲರು ನಮ್ಮನ್ನು ಕರೆದು ಅಧಿಕಾರ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.ಕಾಂಗ್ರೆಸ್ ಪಕ್ಷವೂ 78 ಸ್ಥಾನಗಳನ್ನು ಪಡೆದಿದ್ದರೆ, ಜೆಡಿಎಸ್ ಪಕ್ಷವೂ 38 ಸ್ಥಾನಗಳನ್ನು ಪಡೆದಿದೆ. ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಸೇರಿ ನಮ್ಮದು 118 ಸಂಖ್ಯಾಬಲವಾಗಿದೆ. ಹೀಗಾಗಿ ನಾವೇ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂದು ಹೇಳಿದರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್. ಡಿ. ಕುಮಾರಸ್ವಾಮಿ ಅವರು, ಬಿಜೆಪಿ ನಾಯಕರು ಆಪರೇಶನ್ ಕಮಲ ಫಲ ಮಾಡುವುದರಲ್ಲಿ ನಿಸ್ಸೀಮರು. ಆದರೆ ಅವರ ತಂತ್ರ ಈ ಬಾರಿ ಫಲಿಸದು. 2008ರಲ್ಲಿ ಕೂಡ ಬಿಜೆಪಿಯೂ ಆಪರೇಶನ್ ಕಮಲ ಮಾಡಿದ್ದು ಇಡೀ ದೇಶಕ್ಕೆ ಗೊತ್ತಿದೆ. ನಾವು ಒಟ್ಟಾಗಿ ಸಂಖ್ಯಾಬಲದ ಆಧಾರದ ಮೇಲೆ ಸರಕಾರ ರಚಿಸುವ ವಿಶ್ವಾಸವಿದೆ ಎಂದರು. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಮಾತನಾಡಿ, ನಾವು ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಲು ನಿರ್ಧರಿಸಿದ್ದೇವೆ. ಈ ಬಗ್ಗೆ ಯಾವುದೇ ಗೊಂದಲವಿಲ್ಲ. ಎಲ್ಲ ಮುಖಂಡರು ಸೇರಿ ಒಮ್ಮತದ ನಿರ್ಣಯ ಕೈಗೊಂಡಿದ್ದೇವೆ ಎಂದರು.

ರಾಜ್ಯಪಾಲರಿಗೆ ಮನವರಿಕೆ ಮಾಡಿದ ಜೆಡಿಎಸ್, ಕಾಂಗ್ರೆಸ್ ನಾಯಕರು

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಬಿಜೆಪಿ ರಾಜ್ಯಪಾಲರನ್ನು ಭೇಟಿ ಮಾಡಿದ ಬೆನ್ನಲ್ಲೇ ರಾಜ್ಯಪಾಲರನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಕೂಡ ಭೇಟಿ ಮಾಡಿದ ಬೆಳವಣಿಗೆ ನಡೆದಿದೆ. ಹಲವು ನಿಮಿಷಗಳ ಕಾಲ ಸರಕಾರ ರಚನೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದ ಕಾಂಗ್ರೆಸ್ ಹಾಗೂ ಜೆಡಿಎಸ್ ನಿಯೋಗ ಸಂಖ್ಯಾಬಲವನ್ನು ಪರಿಗಣಿಸುವಂತೆ ಕೋರಿದೆ. ರಾಜ್ಯಪಾಲರ ಭೇಟಿಯ ಸಂದರ್ಭದಲ್ಲಿ ಗುಲಾಂ ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಸೇರಿದಂತೆ ಅನೇಕ ನಾಯಕರು ಸಾಥ್ ನೀಡಿದರು.

ಎರಡು ದಿನಗಳ ಕಾಲಾವಕಾಶ ಕೋರಿದ ಬಿಜೆಪಿ

ಬೆಂಗಳೂರು : ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಕೂಡ ತನ್ನ ಹಕ್ಕೋತ್ತಾಯ ಮಂಡಿಸಿದೆ. ಈ ಕುರಿತು ರಾಜ್ಯಪಾಲರನ್ನು ಭೇಟಿ ಮಾಡಿದ ರಾಜ್ಯ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ನಿಯೋಗ ನಮ್ಮ ಪಕ್ಷವೇ ಅತಿ ಹೆಚ್ಚು ಸ್ಥಾನಗಳು ಪಡೆದಿದ್ದು, 104 ಸಂಖ್ಯಾಬಲವನ್ನು ನಾವು ಹೊಂದಿದ್ದೇವೆ. ಹೀಗಾಗಿ ನಮಗೆ ಮೊದಲ ಆದ್ಯತೆ ನೀಡಬೇಕು. ನಾವು ಸರಕಾರ ರಚನೆಗೆ ಸಿದ್ಧವಾಗಿದ್ದು, ತಾವು ಅವಕಾಶ ಕೊಟ್ಟರೆ 113 ಸಂಖ್ಯಾಬಲವನ್ನು ಪ್ರದರ್ಶನ ಮಾಡುವವಿಶ್ವಾಸ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್. ಯಡಿಯೂರಪ್ಪ ಅವರು, ರಾಜ್ಯಪಾಲರಿಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ನಮಗೆ ರಾಜ್ಯಪಾಲರು ಸರಕಾರ ಸರಕಾರ ರಚನೆ ಮಾಡಲು ಅವಕಾಶ ನೀಡುವ ವಿಶ್ವಾಸವಿದೆ ಎಂದು ಹೇಳಿದರು.

ಗೆಲುವಿನ ನಗೆ ಬೀರಿದ ಶಾಸಕರು

1 - ನಿಪ್ಪಾಣಿ - ಬಿಜೆಪಿ - ಶಶಿಕಲಾ ಜೊಲ್ಲೆ 2 - ಚಿಕ್ಕೋಡಿ ಸದಲಗಾ - ಕಾಂಗ್ರೆಸ್ - ಗಣೇಶ್ ಹುಕ್ಕೇರಿ 4 - ಕಾಗವಾಡ - ಕಾಂಗ್ರೆಸ್ -ಶ್ರೀಮಂತ ಪಾಟೀಲ್ 5 - ಕುಡಚಿ - ಬಿಜೆಪಿ - ಪಿ. ರಾಜೀವ್ 6 - ರಾಯಭಾಗ - ಬಿಜೆಪಿ -ದುರ್ಯೋಧನ ಐಹೊಳೆ 7 - ಹುಕ್ಕೇರಿ - ಕಾಂಗ್ರೆಸ್ - ಉಮೇಶ್ ಕತ್ತಿ 11 - ಬೆಳಗಾವಿ ಉತ್ತರ - ಬಿಜೆಪಿ - ಅನಿಲ್ ಬೆನಕೆ 12 - ಬೆಳಗಾವಿ ದಕ್ಷಿಣ - ಬಿಜೆಪಿ - ಅಭಯ್ ಪಾಟೀಲ್ 13 - ಬೆಳಗಾವಿ ಗ್ರಾಮೀಣ - ಕಾಂಗ್ರೆಸ್ - ಲಕ್ಷ್ಮೀ ಹೆಬ್ಬಾಳ್ಕರ್ 15 - ಕಿತ್ತೂರು - ಬಿಜೆಪಿ - ಮಹಾಂತೇಶ್ ದೊಡ್ಡಗೌಡರ್ 17 - ಸವದತ್ತಿ ಯಲ್ಲಪ್ಪ - ಬಿಜೆಪಿ - ಆನಂದ್ ವಿಶ್ವನಾಥ್ ಮಾಮನಿ 19- ಮುಧೋಳ - ಬಿಜೆಪಿ - ಗೋವಿಂದ ಕಾರಜೋಳ 20 - ತೇರದಾಳ - ಬಿಜೆಪಿ - ಸಿದ್ದು ಸವದಿ 21 - ಜಮಖಂಡಿ - ಕಾಂಗ್ರೆಸ್ - ಸಿದ್ದು ನ್ಯಾಮಗೌಡ 23 - ಬಾದಾಮಿ - ಕಾಂಗ್ರೆಸ್ - ಸಿದ್ದರಾಮಯ್ಯ 24 - ಬಾಗಲಕೋಟೆ - ಬಿಜೆಪಿ - ವೀರಣ್ಣ ಚರಂತಿಮಠ್ 25 - ಹುನಗುಂದ - ಬಿಜೆಪಿ - ದೊಡ್ಡನಗೌಡ ಪಾಟೀಲ್ 26 - ಮುದ್ದೇಬಿಹಾಳ - ಬಿಜೆಪಿ - ಎ.ಎಸ್. ಪಾಟೀಲ್ ನಡಹಳ್ಳಿ 29 - ಬಬಲೇಶ್ವರ - ಕಾಂಗ್ರೆಸ್ - ಎಂ.ಬಿ. ಪಾಟೀಲ್ 34 - ಅಫಜಲ್ಪುರ - ಕಾಂಗ್ರೆಸ್ - ಎಂ.ವೈ. ಪಾಟೀಲ್ 35 - ಜೇವರ್ಗಿ - ಕಾಂಗ್ರೆಸ್ - ಅಜಯ್ ಸಿಂಗ್ 40 - ಚಿತ್ತಾಪುರ - ಕಾಂಗ್ರೆಸ್ - ಪ್ರಿಯಾಂಕ್ ಖರ್ಗೆ 41 - ಸೇಡಂ - ಬಿಜೆಪಿ - ರಾಜಕುಮಾರ್ ಪಾಟೀಲ್ ತೆಲ್ಕೂರ್ 43 - ಕಲಬುರಗಿ ಗ್ರಾಮಾಂತರ - ಬಿಜೆಪಿ - ಬಸವರಾಜ್ ಮುತ್ತಿಮೂಡ್ 48 - ಹುಮ್ನಾಬಾದ್ - ಕಾಂಗ್ರೆಸ್ - ರಾಜಶೇಖರ್ ಪಾಟೀಲ್ 49 - ಬೀದರ್ ದಕ್ಷಿಣ - ಜೆಡಿಎಸ್ - ಬಂಡೆಪ್ಪ ಖಾಶೆಂಪುರ್ 52 - ಔರಾದ್ - ಬಿಜೆಪಿ - ಪ್ರಭು ಚವಾಣ್ 54 - ರಾಯಚೂರು - ಬಿಜೆಪಿ - ಡಾ. ಶಿವರಾಜ್ ಪಾಟೀಲ್ 59 - ಮಸ್ಕಿ - ಕಾಂಗ್ರೆಸ್ - ಪ್ರತಾಪ್ ಗೌಡ ಪಾಟೀಲ್ 62 - ಗಂಗಾವತಿ - ಬಿಜೆಪಿ - ಪರಣ್ಣ ಮುನುವಳ್ಳಿ 64 - ಕೊಪ್ಪಳ - ಕಾಂಗ್ರೆಸ್ - ರಾಘವೇಂದ್ರ ಹಿಟ್ನಾಳ್ 65 - ಶಿರಹಟ್ಟಿ - ಬಿಜೆಪಿ - ರಾಮಣ್ಣ ಲಮಾಣಿ 66 - ಗದಗ - ಕಾಂಗ್ರೆಸ್ - ಎಚ್.ಕೆ. ಪಾಟೀಲ್ 69 - ನವಲಗುಂದ - ಬಿಜೆಪಿ - ಶಂಕರ ಪಾಟೀಲ್ 70 - ಕುಂದಗೋಳ - ಕಾಂಗ್ರೆಸ್ - ಸಿ.ಎಸ್. ಶಿವಳ್ಳಿ 71 - ಧಾರವಾಡ - ಬಿಜೆಪಿ - ಅಮೃತ್ ದೇಸಾಯಿ 73 - ಹುಬ್ಬಳ್ಳಿ ಧಾರವಾಡ ಕೇಂದ್ರ - ಬಿಜೆಪಿ - ಜಗದೀಶ್ ಶೆಟ್ಟರ್ 75 - ಕಲಘಟಗಿ - ಬಿಜೆಪಿ - ಸಿ.ಎಂ. ನಿಬ್ಬಣ್ಣನವರ್ 76 - ಹಳಿಯಾಳ - ಕಾಂಗ್ರೆಸ್ - ಆರ್.ವಿ. ದೇಶಪಾಂಡೆ 77 - ಕಾರವಾರ - ಬಿಜೆಪಿ - ರೂಪಾಲಿ ನಾಯಕ್ 78 - ಕುಮಟಾ - ಬಿಜೆಪಿ - ದಿನಕರ್ ಶೆಟ್ಟಿ 80 - ಶಿರಸಿ - ಬಿಜೆಪಿ - ವಿಶ್ವೇಶ್ವರ ಹೆಗಡೆ ಕಾಗೇರಿ 81 - ಯಲ್ಲಾಪುರ - ಕಾಂಗ್ರೆಸ್ - ಅರೆಬೈಲ್ ಶಿವರಾಮ್ ಹೆಬ್ಬಾರ್ 82 - ಹಾನಗಲ್ - ಬಿಜೆಪಿ - ಸಿ.ಎಂ. ಉದಾಸಿ 84 - ಹಾವೇರಿ - ಬಿಜೆಪಿ -ನೆಹರು ಓಲೆಕಾರ್ 85 - ಬ್ಯಾಡಗಿ - ಬಿಜೆಪಿ - ವಿರೂಪಾಕ್ಷಪ್ಪ ಬಳ್ಳಾರಿ 87 - ರಾಣೆಬೆನ್ನೂರು - ಕೆಪಿಜೆಪಿ - ಆರ್. ಶಂಕರ್ 88 - ಹೂವನಹಡಗಲಿ - ಕಾಂಗ್ರೆಸ್ - ಪಿ.ಟಿ. ಪರಮೇಶ್ವರ್ ನಾಯ್ಕ 89 - ಹಗರಿಬೊಮ್ಮನಹಳ್ಳಿ - ಕಾಂಗ್ರೆಸ್ - ಭೀಮಾನಾಯಕ್ 90 - ವಿಜಯನಗರ - ಬಿಜೆಪಿ - ಆನಂದ್ ಸಿಂಗ್ 91 - ಕಂಪ್ಲಿ - ಕಾಂಗ್ರೆಸ್ - ಜೆ.ಎನ್. ಗಣೇಶ್ ಕಾಂಗ್ರೆಸ್ 92 - ಸಿರಗುಪ್ಪ - ಬಿಜೆಪಿ - ಸೋಮಲಿಂಗಪ್ಪ94 - ಬಳ್ಳಾರಿ ನಗರ - ಬಿಜೆಪಿ - ಸೋಮಶೇಖರ್ ರೆಡ್ಡಿ 95 - ಸಂಡೂರು - ಕಾಂಗ್ರೆಸ್ - ಇ ತುಕರಾಮ್ 96 - ಕೂಡ್ಲಿಗಿ - ಬಿಜೆಪಿ - ಎನ್.ವೈ. ಗೋಪಾಲಕೃಷ್ಣ 97 - ಮೊಳಕಾಲ್ಮೂರು - ಬಿಜೆಪಿ - ಶ್ರೀರಾಮುಲು 98 - ಚಳ್ಳಕೆರೆ- ಕಾಂಗ್ರೆಸ್ - ರಘು ಮೂರ್ತಿ 99 - ಚಿತ್ರದುರ್ಗ ನಗರ - ಬಿಜೆಪಿ - ತಿಪ್ಪಾರೆಡ್ಡಿ 100 - ಹಿರಿಯೂರು - ಬಿಜೆಪಿ - ಪೂರ್ಣಿಮಾ ಶ್ರೀನಿವಾಸ್ 101 - ಹೊಸದುರ್ಗ - ಬಿಜೆಪಿ - ಗೂಳಿಹಟ್ಟಿ ಶೇಖರ್ 102 - ಹೊಳಲ್ಕೆರೆ - ಬಿಜೆಪಿ - ಎಂ. ಚಂದ್ರಪ್ಪ 104 - ಹರಪ್ಪನಹಳ್ಳಿ - ಬಿಜೆಪಿ - ಕರುಣಾಕರ ರೆಡ್ಡಿ 106 - ದಾವಣಗೆರೆ ಉತ್ತರ - ಬಿಜೆಪಿ - ಎಸ್.ಎ. ರವೀಂದ್ರನಾಥ್ 107 - ದಾವಣಗೆರೆ ದಕ್ಷಿಣ - ಕಾಂಗ್ರೆಸ್ - ಶಾಮನೂರು ಶಿವಶಂಕರಪ್ಪ 108 - ಮಾಯಕೊಂಡ - ಬಿಜೆಪಿ - ಪ್ರೋ. ಲಿಂಗಣ್ಣ 109 - ಚನ್ನಗಿರಿ - ಬಿಜೆಪಿ - ಮಾಡಾಳ್ ವಿರೂಪಾಕ್ಷಪ್ಪ 110 - ಹೊನ್ನಾಳಿ - ಬಿಜೆಪಿ - ರೇಣುಕಾಚಾರ್ಯ 112 - ಭದ್ರಾವತಿ - ಕಾಂಗ್ರೆಸ್ - ಬಿ.ಕೆ. ಸಂಗಮೇಶ್ 113 - ಶಿವಮೊಗ್ಗ - ಬಿಜೆಪಿ - ಕೆ.ಎಸ್. ಈಶ್ವರಪ್ಪ 114 - ತೀರ್ಥಹಳ್ಳಿ - ಬಿಜೆಪಿ - ಆರಗ ಜ್ಞಾನೇಂದ್ರ 116 - ಸೊರಬ - ಬಿಜೆಪಿ - ಕುಮಾರ್ ಬಂಗಾರಪ್ಪ 117 - ಸಾಗರ - ಬಿಜೆಪಿ - ಹರತಾಳು ಹಾಲಪ್ಪ 118 - ಬೈಂದೂರು - ಬಿಜೆಪಿ - ಬಿ. ಸುಕುಮಾರ್ ಶೆಟ್ಟಿ ಗೆಲುವು 119 - ಕುಂದಾಪುರ - ಬಿಜೆಪಿ - ಹಾಲಾಡಿ ಶ್ರೀನಿವಾಸ ಶೆಟ್ಟಿ 120 - ಉಡುಪಿ - ಬಿಜೆಪಿ - ರಘುಪತಿ ಭಟ್ 121 - ಕಾಪು - ಬಿಜೆಪಿ - ಲಾಲಾಜಿ ಮೆಂಡನ್ 122 - ಕಾರ್ಕಳ - ಬಿಜೆಪಿ - ವಿ. ಸುನಿಲ್ ಕುಮಾರ್ 123 - ಶೃಂಗೇರಿ - ಕಾಂಗ್ರೆಸ್ - ಟಿ.ಡಿ. ರಾಜೇಗೌಡ 124 - ಮೂಡಿಗೆರೆ - ಬಿಜೆಪಿ - ಎಂ.ಪಿ. ಕುಮಾರಸ್ವಾಮಿ 125 - ಚಿಕ್ಕಮಗಳೂರು - ಬಿಜೆಪಿ - ಸಿಟಿ ರವಿ 126 - ತರೀಕೆರೆ - ಬಿಜೆಪಿ - ಡಿ.ಎಸ್. ಸುರೇಶ್ 127 - ಕಡೂರು - ಬಿಜೆಪಿ - ಬೆಳ್ಳಿಪ್ರಕಾಶ್ 129 - ತಿಪಟೂರು - ಬಿಜೆಪಿ - ಬಿ.ಸಿ. ನಾಗೇಶ್ 132 - ತುಮಕೂರು - ಬಿಜೆಪಿ - ಜ್ಯೋತಿ ಗಣೇಶ್ 133 - ತುಮಕೂರು ಗ್ರಾಮಾಂತರ - ಜೆಡಿಎಸ್ - ಗೌರಿ ಶಂಕರ್ 134 - ಕೊರಟಗೆರೆ - ಕಾಂಗ್ರೆಸ್ - ಜಿ. ಪರಮೇಶ್ವರ್ 140 - ಬಾಗೇಪಲ್ಲಿ - ಕಾಂಗ್ರೆಸ್ - ಎಸ್.ಎನ್. ಸುಬ್ಬಾರೆಡ್ಡಿ 141 - ಚಿಕ್ಕಬಳ್ಳಾಪುರ - ಕಾಂಗ್ರೆಸ್ - ಡಾ. ಸುಧಾಕರ್ 142 - ಶಿಡ್ಲಘಟ್ಟ - ಕಾಂಗ್ರೆಸ್ - ವಿ. ಮುನಿಯಪ್ಪ 143 - ಚಿಂತಾಮಣಿ - ಜೆಡಿಎಸ್ - ಜಿ.ಕೆ. ಕೃಷ್ಣಾರೆಡ್ಡಿ 144 - ಶ್ರೀನಿವಾಸಪುರ - ಕಾಂಗ್ರೆಸ್ - ಕೆ. ರಮೇಶ್ ಕುಮಾರ್ 145 - ಮುಳಬಾಗಿಲು - ಪಕ್ಷೇತರ - ಎಚ್. ನಾಗೇಶ್ 148 - ಕೋಲಾರ - ಜೆಡಿಎಸ್ - ಕೆ. ಶ್ರೀನಿವಾಸ ಗೌಡ 151 - ಕೆ.ಆರ್.ಪುರಂ - ಕಾಂಗ್ರೆಸ್ - ಭೈರತಿ ಬಸವರಾಜ್ 152 - ಬ್ಯಾಟರಾಯನಪುರ - ಕಾಂಗ್ರೆಸ್ - ಕೃಷ್ಣ ಬೈರೇಗೌಡ 153 - ಯಶವಂತಪುರ - ಕಾಂಗ್ರೆಸ್ - ಎಚ್.ಟಿ. ಸೋಮಶೇಖರ್ 156 - ಮಹಾಲಕ್ಷ್ಮೀ ಲೇಔಟ್ - ಜೆಡಿಎಸ್ - ಕೆ. ಗೋಪಾಲಯ್ಯ 157 - ಮಲ್ಲೇಶ್ವರಂ - ಬಿಜೆಪಿ - ಡಾ. ಸಿಎನ್ ಅಶ್ವರ್ಥ ನಾರಾಯಣ 158 - ಹೆಬ್ಬಾಳ - ಕಾಂಗ್ರೆಸ್ - ಭೈರತಿ ಸುರೇಶ್ 159 - ಪುಲಕೇಶಿನಗರ - ಕಾಂಗ್ರೆಸ್ - ಅಖಂಡ ಶ್ರೀನಿವಾಸಮೂರ್ತಿ 162 - ಶಿವಾಜಿನಗರ - ಕಾಂಗ್ರೆಸ್ - ರೋಷನ್ ಬೇಗ್ 164 - ಗಾಂಧಿನಗರ - ಕಾಂಗ್ರೆಸ್ - ದಿನೇಶ್ ಗುಂಡೂರಾವ್ 165 - ರಾಜಾಜಿನಗರ - ಬಿಜೆಪಿ - ಸುರೇಶ್ ಕುಮಾರ್ 166 - ಗೋವಿಂದರಾಜನಗರ - ಬಿಜೆಪಿ - ವಿ. ಸೋಮಣ್ಣ 167 - ವಿಜಯನಗರ - ಕಾಂಗ್ರೆಸ್ - ಎಂ. ಕೃಷ್ಣಪ್ಪ 170 - ಬಸವನಗುಡಿ -ಬಿಜೆಪಿ - ರವಿಸುಬ್ರಮಣ್ಯ 171 - ಪದ್ಮನಾಭನಗರ - ಬಿಜೆಪಿ - ಆರ್. ಅಶೋಕ್ 172 - ಬಿಟಿಎಂ ಲೇಔಟ್ - ಕಾಂಗ್ರೆಸ್ - ರಾಮಲಿಂಗಾ ರೆಡ್ಡಿ 174 - ಮಹದೇವಪುರ - ಬಿಜೆಪಿ - ಅರವಿಂದ ಲಿಂಬಾವಳಿ 175 - ಬೊಮ್ಮನಹಳ್ಳಿ - ಬಿಜೆಪಿ - ಸತೀಶ್ ರೆಡ್ಡಿ 177 - ಆನೆಕಲ್ - ಕಾಂಗ್ರೆಸ್ - ಶಿವಣ್ಣ 179 - ದೇವನಹಳ್ಳಿ - ಜೆಡಿಎಸ್ - ನಿಸರ್ಗ ನಾರಾಯಣಸ್ವಾಮಿ 180 - ದೊಡ್ಡಬಳ್ಳಾಪುರ - ಕಾಂಗ್ರೆಸ್ - ವೆಂಕಟರಮಣಯ್ಯ 181 - ನೆಲಮಂಗಲ - ಜೆಡಿಎಸ್ - ಡಾ. ಶ್ರೀನಿವಾಸಮೂರ್ತಿ 183 - ರಾಮನಗರ - ಜೆಡಿಎಸ್ - ಎಚ್.ಡಿ. ಕುಮಾರಸ್ವಾಮಿ 184 - ಕನಕಪುರ - ಕಾಂಗ್ರೆಸ್ - ಡಿ.ಕೆ. ಶಿವಕುಮಾರ್ 185 - ಚನ್ನಪಟ್ಟಣ - ಜೆಡಿಎಸ್ - ಎಚ್.ಡಿ. ಕುಮಾರಸ್ವಾಮಿ 186 - ಮಳವಳ್ಳಿ - ಜೆಡಿಎಸ್ - ಡಾ. ಕೆ. ಅನ್ನದಾನಿ 187 - ಮದ್ದೂರು - ಜೆಡಿಎಸ್ - ಡಿಸಿ ತಮ್ಮಣ್ಣ 191 - ನಾಗಮಂಗಲ - ಬಿಜೆಪಿ - ಸುರೇಶ್ ಗೌಡ 192 - ಕೆ.ಆರ್.ಪೇಟೆ - ಜೆಡಿಎಸ್ - ನಾರಾಯಣಗೌಡ 193 - ಶ್ರವಣಬೆಳಗೊಳ - ಕಾಂಗ್ರೆಸ್ - ಸಿ.ಎನ್. ಬಾಲಕೃಷ್ಣ 195 - ಬೇಲೂರು - ಜೆಡಿಎಸ್ - ಲಿಂಗೇಶ್ 196 - ಹಾಸನ - ಬಿಜೆಪಿ - ಪ್ರೀತಂಗೌಡ 197 - ಹೊಳೆನರಸೀಪುರ - ಜೆಡಿಎಸ್ - ಎಚ್.ಡಿ. ರೇವಣ್ಣ 199 - ಸಕಲೇಶಪುರ - ಜೆಡಿಎಸ್ - ಎಚ್.ಕೆ. ಕುಮಾರಸ್ವಾಮಿ 200 - ಬೆಳ್ತಂಗಡಿ - ಬಿಜೆಪಿ - ಹರೀಶ್ ಪೂಂಜ 201 - ಮೂಡಬಿದ್ರೆ - ಬಿಜೆಪಿ - ಉಮಾನಾಥ ಕೋಟ್ಯಾನ್ 202 - ಮಂಗಳೂರು ಉತ್ತರ - ಬಿಜೆಪಿ - ಡಾ. ಭರತ್ ಶೆಟ್ಟಿ 204 - ಮಂಗಳೂರು - ಕಾಂಗ್ರೆಸ್ - ಯು.ಟಿ. ಖಾದರ್ 206 - ಪುತ್ತೂರು - ಬಿಜೆಪಿ - ಸಂಜೀವ ಮಠಂದೂರು 207 - ಸುಳ್ಯ - ಬಿಜೆಪಿ -ಎಸ್. ಅಂಗಾರ 209 - ವಿರಾಜಪೇಟೆ - ಬಿಜೆಪಿ - ಕೆ.ಜಿ. ಬೋಪಯ್ಯ 212 - ಹುಣಸೂರು - ಜೆಡಿಎಸ್ - ಎಚ್. ವಿಶ್ವನಾಥ್ 215 - ಚಾಮುಂಡೇಶ್ವರಿ - ಜೆಡಿಎಸ್ - ಜಿಟಿ ದೇವೇಗೌಡ 218 - ನರಸಿಂಹರಾಜ - ಕಾಂಗ್ರೆಸ್ - ತನ್ವೀರ್ ಸೇಠ್ 219 - ವರುಣಾ - ಕಾಂಗ್ರೆಸ್ - ಡಾ. ಯತೀಂದ್ರ 221 - ಹನೂರು - ಕಾಂಗ್ರೆಸ್ - ಆರ್. ನರೇಂದ್ರ 222 - ಕೊಳ್ಳೇಗಾಲ - ಬಿಎಸ್ಪಿ - ಎನ್ ಮಹೇಶ್ 224 - ಗುಂಡ್ಲುಪೇಟೆ - ಬಿಜೆಪಿ - ಸಿ.ಎಸ್. ನಿರಂಜನ್ ಕುಮಾರ್

ಗಾಂಜಾ, ಮಟ್ಕಾ, ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಮೊದಲ ಆದ್ಯತೆ

ಧಾರವಾಡ : ವಿದ್ಯಾನಗರಿ ಧಾರವಾಡದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗಾಂಜಾ ಹಾವಳಿ, ಇಸ್ಪೀಟ್ ಕ್ಲಬ್, ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಮೊದಲ ಆದ್ಯತೆ ನೀಡುವುದಾಗಿ ಧಾರವಾಡ ಶಾಸಕ ಅರವಿಂದ ಬೆಲ್ಲದ ಹೇಳಿದರು. ಅವರು ಮಂಗಳವಾರ ಕೃಷಿ ವಿಶ್ವವಿದ್ಯಾಲಯದಲ್ಲಿ41 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಹಿಂದೆ ಪೊಲೀಸ ಆಯುಕ್ತರಿಗೆ ನೀಡಿದ ರೌಡಿಶೀಟರ್, ಗುಂಡಾಗಳನ್ನು ಮಟ್ಟ ಹಾಕಲು ಕೂಡ ಅಗತ್ಯ ಒತ್ತಡ ಹೇರಲಾಗುವುದು. ಅದರೊಂದಿಗೆ ನಮ್ಮ ದೇಶಿಯ ಸಂಸ್ಕೃತಿ ಪ್ರತೀಕವಾದ ತಿಲಕ ಹಾಗೂ ಕೇಸರಿ ಅಭಿಯಾನ ಮುಂದುವರೆಸಲಾಗುವುದು ಎಂದರು. ಅಭಿವೃದ್ಧಿ ಕೆಲಸಗಳೇ ನನಗೆ ಕೈ ಹಿಡಿದಿದ್ದು, ಇನ್ನಷ್ಟು ಅಭಿವೃದ್ಧಿಕೆಲಸಗಳಿಗೆ ಒತ್ತು ನೀಡಲಾಗುವುದು ಎಂದ ಅವರು ಬಡವರಿಗೆ ಸೂರು, ಪೂರ್ವ ಪ್ರಾಥಮಿಕ ಶಾಲೆಗಳ ಆರಂಭವನ್ನು ರಾಜ್ಯದೆಲ್ಲಡೆ ವಿಸ್ತರಿಸಲು ಪ್ರಯತ್ನ ಮಾಡುವುದಾಗಿ ಹೇಳಿದರು.

ಧಾರವಾಡ ಜಿಲ್ಲೆಯ ವಿವಿಧ ಅಭ್ಯರ್ಥಿಗಳ ಗೆಲುವಿನ ವಿವರ

ನವಲಗುಂದ ಬಿಜೆಪಿ ಅಭ್ಯರ್ಥಿ ಶಂಕರ ಪಾಟೀಲ ಮುನೇನಕೊಪ್ಪ 65718 ಜೆಡಿಎಸ್ ಅಭ್ಯರ್ಥಿ ಎನ್.ಹೆಚ್. ಕೋನರಡ್ಡಿ 45197 ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ 38906 20521 ಮತಗಳ ಅಂತರದಿಂದ ಬಿಜೆಪಿ ಗೆಲುವು ಕುಂದಗೋಳ ಕಾಂಗ್ರೆಸ್ ನ ಸಿ.ಎಸ್. ಶಿವಳ್ಳಿ 64871 ಬಿಜೆಪಿಯ ಎಸ್.ಐ. ಚಿಕ್ಕನಗೌಡರ 64237 ಜೆಡಿಎಸ್ ನ ಎಂ.ಎಸ್. ಅಕ್ಕಿ 6280 634 ಮತಗಳಿಂದ ಶಾಸಕ ಶಿವಳ್ಳಿ ಗೆಲುವು ಧಾರವಾಡ ಗ್ರಾಮೀಣ ಬಿಜೆಪಿಯ ಅಮೃತ ದೇಸಾಯಿ 85123 ಕಾಂಗ್ರೆಸ್ ನ ವಿನಯ ಕುಲಕರ್ಣಿ 64783 20340 ಮತಗಳಿಂದ ಸಚಿವ ವಿನಯ ಕುಲಕರ್ಣಿ ಸೋಲು ಕಲಘಟಗಿ ಬಿಜೆಪಿಯ ಸಿಎಂ ನಿಂಬಣ್ಣವರ 83267 ಕಾಂಗ್ರೆಸ್ ನ ಸಂತೋಷ ಲಾಡ್ 57270 ಜೆಡಿಎಸ್. ಶಿವಾನಂದ ಅಂಬಡಗಟ್ಟಿ 1174 25997 ಮತಗಳಿಂದ ಸಚಿವ ಸಂತೋಷ ಲಾಡ್ ಹೀನಾಯ ಸೋಲು

ಬಿಜೆಪಿ ಕಾರ್ಯಕರ್ತರ ಮೇಲೆ ಕಲ್ಲು ತೂರಿದ ಕಾಂಗ್ರೆಸ್ಸಿಗರು !

ಧಾರವಾಡ : ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಡಿಕೊಂಡಿದ್ದಾರೆ. ಜಿಲ್ಲೆಯ ಎಳು ವಿಧಾನ ಸಭಾ ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದ ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್ ಕಾರ್ಯಕರ್ತರು ಕಲ್ಲು ತೂರಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ತದನಂತರ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು ಕೂಡ ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದು ಧಾರವಾಡ ಹೊರ ವಲಯದಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿದ್ದು, ಕಲ್ಲು ತೂರಿದ ಬೆನ್ನಲ್ಲೇ ಅವರ ಬೆನ್ನಟ್ಟಿದ್ದ ಬಿಜೆಪಿ ಮುಖಂಡರು ಅವರನ್ನುಅಲ್ಲಿಂದ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆನಂತರ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಧ್ವಜ ಸುಟ್ಟು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಘಟನೆ ಮಾಹಿತಿ ಅರಿತ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸುವಲ್ಲಿ ಯಶಸ್ವಿಯಾದರು. ಈ ಘಟನೆ ಕುರಿತು ಪಾಲಿಕೆ ಸದಸ್ಯ ಶಂಕರ ಶಳಕೆ ಪ್ರಜಾಕಿರಣದೊಂದಿಗೆ ಮಾತನಾಡಿ, ಹುಬ್ಬಳ್ಳಿ ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ ಬೆಂಬಲಿಗರು ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದರು.

ಹೀನಾಯ ಸೋಲು ಕಂಡ ಸಚಿವರು

ಬೆಂಗಳೂರು : ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸಚಿವ ವಿನಯ ಕುಲಕರ್ಣಿ, ಟೀ ನರಸಿಪುರದಿಂದ ಹೆಚ್. ಸಿ. ಮಹದೇವಪ್ಪ, ಕಲಘಟಗಿಯಿಂದ ಸಂತೋಷ ಲಾಡ್, ತೇರದಾಳ ಕ್ಷೇತ್ರದಿಂದ ಉಮಾಶ್ರೀ , ಗುಂಡ್ಲುಪೇಟೆಯಿಂದ ಗೀತಾ ಮಹದೇವ ಪ್ರಸಾದ್, ಬಂಟ್ವಾಳದಿಂದ ರಮಾನಾಥ ರೈ, ಸೇಡಂ ವಿಧಾನ ಸಭಾ ಕ್ಷೇತ್ರದಿಂದ ಶರಣ ಪ್ರಕಾಶ ಪಾಟೀಲ್, ಯಲಬುರ್ಗಾದಿಂದ ಬಸವರಾಜ ರಾಯರಡ್ಡಿ, ಹೊಳಲ್ಕೆರೆಯಿಂದ ಹೆಚ್. ಆಂಜನೇಯ ಸೋಲು ಕಂಡಿದ್ದಾರೆ. ಮಂಕಾಳ ವೈದ್ಯ, ವರ್ತೂರ ಪ್ರಕಾಶ ಸೋಲಿನ ರುಚಿ ಕಂಡಿದ್ದಾರೆ. ರಾಸಲೀಲೆಯ ಖ್ಯಾತಿಯ ಮಾಜಿ ಸಚಿವ ಹೆಚ್.ವೈ. ಮೇಟಿ ಸೋಲಿನ ರುಚಿ ಕಂಡಿದ್ದಾರೆ.

ಗೆದ್ದ ಹಾಲಿ, ಮಾಜಿ ಸಿಎಂಗಳು

ಬೆಂಗಳೂರು : ಹಾಲಿ ಸಿಎಂ ಸಿದ್ದರಾಮಯ್ಯನವರು ಚಾಮುಂಡೇಶ್ವರಿಯಲ್ಲಿ ಹೀನಾಯ ಸೋಲು ಅನುಭವಿಸಿದ್ದರೆ, ಬಾದಾಮಿಯಲ್ಲಿ ಗೆಲುವು ದಾಖಲಿಸಿದ್ದಾರೆ. ಅದೇ ರೀತಿ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್. ಡಿ. ಕುಮಾರ ಸ್ವಾಮಿ, ಶಿಕಾರಿಪುರದಲ್ಲಿ ಬಿ.ಎಸ್. ಯಡಿಯೂರಪ್ಪ ಗೆಲುವು ಸಾಧಿಸಿದ್ದಾರೆ. ಗಣೇಶ ಹುಕ್ಕೇರಿ, ಮಾಜಿ ಗೃಹ ಸಚಿವ ರಾಮಲಿಂಗಾರಡ್ಡಿ,ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡುರಾವ್, ಬಸವಕಲ್ಯಾಣದಿಂದ ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ, ಮಾಜಿ ಸಚಿವ ಕೆ.ಹೆಚ್. ಮುನಿಯಪ್ಪ ಪುತ್ರಿ ರೂಪಾ ಶಶಿಧರ್, ಹೊಳೆನರಸಿಪುರದ ಜೆಡಿಎಸ್ ಅಭ್ಯರ್ಥಿ ಹೆಚ್. ಡಿ ರೇವಣ್ಣ ಗೆದ್ದರೆ, ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ವರುಣಾದಿಂದ ಹಾಗೂ ಗುಂಡ್ಲುಪೇಟೆಯಿಂದ ನಿರಂಜನ್ ಕುಮಾರ, ಬೀಳಗಿಯಿಂದ ಮುರುಗೇಶ ನಿರಾಣಿ ಗೆಲವು ದಾಖಲಿಸಿದ್ದಾರೆ.

ಅಮೃತ ದೇಸಾಯಿ, ಅರವಿಂದ ಬೆಲ್ಲದ ಗೆಲುವು

ಧಾರವಾಡ : ತೀವ್ರ ಕುತೂಹಲ ಕೆರಳಿಸಿದ್ದ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಯಾಗಿದ್ದ ಹಾಲಿ ಶಾಸಕ ಅರವಿಂದ ಬೆಲ್ಲದ ಹಾಗೂ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಗೆಲುವು ಸಾಧಿಸಿದ್ದಾರೆ. ಅದೇ ರೀತಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಶಾಸಕ ಕಾಂಗ್ರೆಸನ ಪ್ರಸಾದ ಅಬ್ಬಯ್ಯ ಗೆಲುವು ದಾಖಲಿಸಿದ್ದಾರೆ. 16 ಸಾವಿರ ಮತಗಳ ಅಂತರದಿಂದ ಪ್ರಸಾದ ಅಬ್ಬಯ್ಯ ಗೆಲುವಿನ ನಗೆ ಬೀರಿದರೆ, ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ 16 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ದಾಖಲಿಸಿದ್ದಾರೆ. ಅದೇ ರೀತಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ ಅವರು 21 ಸಾವಿರ ಮತಗಳಿಂದ ಗೆಲುವಿನ ನಗೆ ಬೀರಿದಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ಮುನ್ನಡೆ

ಧಾರವಾಡ : ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಧಾರವಾಡ ಪೂರ್ವ ಪ್ರಸಾದ ಅಬ್ಬಯ್ಯ ಲೀಡ್ ಅವರು ಒಟ್ಟು 5832 ಮತಗಳನ್ನು ಪಡೆದರೆ ಬಿಜೆಪಿಯ ಚಂದ್ರಶೇಖರ ಗೋಕಾಕ ಅವರು ಕೇವಲ 2135 ಮತಗಳನ್ನು ಪಡೆದಿದ್ದಾರೆ. ಅದೇ ರೀತಿ ನವಲಗುಂದ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಶಂಕರ ಪಾಟೀಲ ಮುನೇನಕೊಪ್ಪ 4133 ಮತಗಳನ್ನು ಪಡೆದರೆ ಕಾಂಗ್ರೆಸ್ ನ ವಿನೋದ ಅಸೂಟಿ 2235 ಹಾಗೂ ಜೆಡಿಎಸ್ ಶಾಸಕ ಎನ್.ಹೆಚ್. ಕೋನರಡ್ಡಿ ಅವರು 1935 ಮತಗಳನ್ನು ಪಡೆದಿದ್ದಾರೆ. ನವಲಗುಂದ ಕ್ಷೇತ್ರದಲ್ಲಿ ಮೊದಲ ಸುತ್ತಿನಲ್ಲಿ 1898 ಬಿಜೆಪಿ ಮುನ್ನಡೆ ಸಾಧಿಸಿದೆ. ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕ ಅರವಿಂದ ಬೆಲ್ಲದ ಅವರು 6352 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥೀ ಇಸ್ಮಾಯಿಲ್ ತಮಟಗಾರ ಅವರು 1909 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ಅರವಿಂದ ಬೆಲ್ಲದ ಅವರು 4043 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಎರಡನೇ ಸುತ್ತನಲ್ಲಿ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರು 1847 ಗಳನ್ನು ಪಡೆದರೆ, ಕಾಂಗ್ರೆಸ್ ನ ಸಚಿವವಿನಯ ಕುಲಕರ್ಣಿ ಅವರು 890 ಮತಗಳನ್ನು ಪಡೆದಿದ್ದಾರೆ. ಎರಡನೇ ಸುತ್ತಿನಲ್ಲಿ ಕೂಡ ಸಚಿವ ವಿನಯ ಕುಲಕರ್ಣಿ ಹಿನ್ನಡೆ ಅನುಭವಿಸಿದ್ದು, ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರು 2737 ಲೀಡ ಸಾಧಿಸಿದ್ದಾರೆ.

ಪ್ರಸಾದ ಅಬ್ಬಯ್ಯ, ನೆಹರು ಓಲೆಕಾರ ಮುನ್ನಡೆ

ಧಾರವಾಡ : ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ ಅಬ್ಬಯ್ಯ ಮುನ್ನಡೆ ಸಾಧಿಸಿದ್ದಾರೆ. ಅದೇ ರೀತಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕ ಅರವಿಂದ ಬೆಲ್ಲದ ಮುನ್ನಡೆ ಸಾಧಿಸಿದ್ದಾರೆ. ಹಾವೇರಿಯಲ್ಲಿ ನೆಹರು ಓಲೇಕಾರ ಮುನ್ನಡೆ ಸಾಧಿಸಿದರೆ, ಸಚಿವ ರುದ್ರಪ್ಪ ಲಮಾಣಿಗೆ ಹಿನ್ನಡೆ ಆಗಿದೆ. ಲಕ್ಷ್ಮಿ ಹೆಬ್ಬಾಳಕರ್, ಡಿ.ಕೆ. ಶಿವಕುಮಾರ ಮುನ್ನಡೆ, ಆನಂದ ಸಿಂಗ್ ಮುನ್ನಡೆ ಸಾಧಿಸಿದ್ದಾರೆ ಆರ್. ಅಶೋಕ, ಆರ್. ವಿ. ದೇಶಪಾಂಡೆ, ಉಮೇಶ ಕತ್ತಿ, ಎಂ.ಬಿ. ಪಾಟೀಲ, ಎನ್.ಎ. ಹ್ಯಾರಿಶ್, ಹೆಚ್. ಕೆ. ಪಾಟೀಲ, ಕಾಗೋಡು ತಿಮ್ಮಪ್ಪ ಮುನ್ನಡೆ ಸಾಧಿಸಿದರೆ, ಹೆಚ್. ಆಂಜನೇಯ ಹೆಚ್.ಎಂ. ರೇವಣ್ಣ ಹಿನ್ನಡೆ ಸಾಧಿಸಿದ್ದಾರೆ

ಸಚಿವ ವಿನಯ ಕುಲಕರ್ಣಿ ಮೊದಲ ಸುತ್ತಿನಲ್ಲಿ ಹಿನ್ನಡೆ

ಧಾರವಾಡ : ರಾಜ್ಯದ ಗಮನ ಸೆಳೆದಿರುವ ಧಾರವಾಡ ವಿಧಾನ ಸಭಾ ಕ್ಷೇತ್ರ-71ರಲ್ಲಿ ಸಚಿವ ವಿನಯ ಕುಲಕರ್ಣಿ ಅವರು ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರಿಗಿಂತ ಹಿನ್ನಡೆ ಸಾಧಿಸಿದ್ದಾರೆ. ಅಮೃತ ದೇಸಾಯಿ ಅವರು ಮೊದಲ ಸುತ್ತಿನಲ್ಲಿ 1847 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಇಬ್ಬರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿತ್ತು. ಈ ಕ್ಷೇತ್ರವು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತಾರಕಕ್ಕೇರಿತ್ತು. ಕದನ ಕುತೂಹಲ ಕೆರಳಿಸಿದೆ.

ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯಗೆ ಹಿನ್ನಡೆ

ಚಾಮುಂಡೇಶ್ವರಿ : ರಾಜ್ಯದ ಪ್ರತಿಷ್ಟಿತ ಕಣಗಳಲ್ಲಿ ಒಂದಾಗಿರುವ ಸಿಎಂ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ ತೀವ್ರ ಹಿನ್ನಡೆ ಎದರುರಿಸುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ಜಿ.ಟಿ. ದೇವೆಗೌಡ ಅವರು 3485 ಮತಗಳಿಂದ ಮುನ್ನಡೆ ಸಾಧಿಸಿದ್ದರೆ,ಸಿಎಂ ಸಿದ್ದರಾಮಯ್ಯ 6500 ಮತಗಳಿಂದ ಹಿನ್ನಡೆ ಎದುರಿಸುತ್ತಿದ್ದಾರೆ. ಈ ಚುನಾವಣೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಿನ ಪ್ರತಿಷ್ಠಿತ ಕದನವಾಗಿದೆ. ಕ್ಷೇತ್ರದ ಮತದಾರರು ಯಾರಿಗೆ ಕೈ ಹಿಡಯುತ್ತಾರೆ. ಯಾರಿಗೆ ಕೈ ಕೊಡುತ್ತಾರೆ ಎಂಬುದು ಕಾದು ನೋಡಬೇಕಿದೆ.

ದೇವಿಯ ಮೊರೆ ಹೋದ ಸಚಿವ ವಿನಯ ಕುಲಕರ್ಣಿ, ಶಾಸಕ ಕೋನರಡ್ಡಿ

ಧಾರವಾಡ : ಮತ ಎಣಿಕೆಗೆ ಕ್ಷಣ ಗಣನೆ ಆರಂಭವಾಗಿರುವ ಬೆನ್ನ ಹಿಂದೆಯೇ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಗೂ ಧಾರವಾಡ ಜಿಲ್ಲೆಯ ಉಸ್ತುವಾರಿ ಮಂತ್ರಿ ವಿನಯ ಕುಲಕರ್ಣಿ, ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಅವರು ದೇವಿಯ ಮೊರೆ ಹೋಗಿದ್ದಾರೆ. ಇಲ್ಲಿಯ ಶಾಂತಿ ನಿಕೇತನ ನಗರದಲ್ಲಿರುವ ಇತಿಹಾಸ ಪ್ರಸಿದ್ಧ ಕರಿಯಮ್ಮ ದೇವಿಯ ದೇವಸ್ಥಾನದಲ್ಲಿ ಇಬ್ಬರು ಸಂಕಲ್ಪ ಪೂಜೆ ಸಲ್ಲಿಸಿ, ಪ್ರಾರ್ಥನೆ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಶಾಲು ಹಾಕಿ ಸನ್ಮಾನ ಮಾಡಿ ಗೌರವಿಸಲಾಯಿತು. ಮಹಾವೀರ ಉಪಾಧ್ಯೆ, ಕೆ.ಎನ್. ಕುರಕುರಿ, ವಿಶ್ವನಾಥ ಯಲಿಗಾರ, ಸಿ‌ಜೆ. ಸಾಣಿಕೊಪ್ಪ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಸತೀಶ ಸೈಲ್ ವಿರುದ್ದ ಐಟಿ ಅಧಿಕಾರಿ ದೂರು

ಅಂಕೋಲಾ : ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸತೀಲ್ ಸೈಲ್ ಅವರ ವಿರುದ್ಧ ಗೋವಾ ಐಟಿ ಅಧಿಕಾರಿ ಬಾಬಾ ಸಾಹೇಬ್ ನಾರ್ವೆ ಅವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸರಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಜೀವ ಬೆದರಿಕೆ ದೂರು ನೀಡಿರುವ ಅವರು ಉದ್ಯಮಿ ಮಂಗಲದಾಸ್ ಕಾಮತ್ ಮನೆ ಮೇಲೆ ಐಟಿ ದಾಳಿ ವೇಳೆ ಶಾಸಕ ಸತೀಶ್ ಸೈಲ್ ತಮಗೆ ದಮ್ಕಿ ಹಾಕಿದ್ದಾರೆ. ಅವರ ಕಾರು ತಪಾಸಣೆಗೆ ಅಡ್ಡಿ ಮಾಡಿದಲ್ಲದೆ, ಕಾರನ್ನು ನಿಲ್ಲಿಸದೆ ತಪಾಸಣೆಗೆ ಸಹಕರಿಸಿಲ್ಲ. ಅಲ್ಲದೆ, ಕಾರು ನಿಲ್ಲಿಸದೆ ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಶಾಸಕ ಸತೀಶ ಸೈಲ್ ಸಂಪರ್ಕಕ್ಕೆ ದೊರೆತಿಲ್ಲ.

ಶಶಿ ತರೂರ್ ವಿರುದ್ದ ಚಾರ್ಜ್ ಶೀಟ್

ದೆಹಲಿ : ಸುನಂದಾ ಪುಷ್ಕರ್ ಸಾವಿನ ಹಿಂದೆ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಕೈವಾಡವಿದೆ ಎಂದು ಕೊನೆಗೂ ದೆಹಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಸುನಂದಾ ಸಾವಿಗೆ ಪತಿ ಶಶಿ ತರೂರ್ ಅವರ ಕೌಟುಂಬಿಕ ದೌರ್ಜನ್ಯ, ಕಿರುಕುಳವೇ ಕಾರಣ ಎಂದು ಆಪಾದನೆ ಹೊರಿಸಲಾಗಿದೆ. ಈ ಸಂಬಂಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿರುವ ಪೊಲೀಸರು ಶಶಿ ತರೂರ್ ಅವರಿಗೆ ಸಂಕಷ್ಟ ತಂದು ಒಡ್ಡಿದ್ದಾರೆ. ಸುನಂದಾ ಪುಷ್ಕರ್ ಸಾವು ರಾಷ್ಟ್ರಾದ್ಯಂತ ತಲ್ಲಣ ಸೃಷ್ಟಿಸಿದ್ದು ಇಲ್ಲಿ ಸ್ಮರಿಸಬಹುದು.

ಲಂಚ ಕೇಳಿದ ಪ್ರಾಚಾರ್ಯರ ಬಂಧನ

ಹುಬ್ಬಳ್ಳಿ : ಶಾಲೆಯಲ್ಲಿ ಪ್ರವೇಶ ನೀಡಲು 40 ಸಾವಿರ ರೂಪಾಯಿ ಲಂಚ ಕೇಳಿದ ಪ್ರಾಚಾರ್ಯರರನ್ನೇ ಪೊಲೀಸರು ಬಂಧಿಸಿದ ಘಟನೆ ಹುಬ್ಬಳ್ಳಿ ಯಲ್ಲಿ ನಡೆದಿದೆ. ಹೌದು ಇಂತಹ ಘಟನೆ ಹುಬ್ಬಳ್ಳಿಯ ಕೇಂದ್ರಿಯ ವಿದ್ಯಾಲಯದಲ್ಲಿ ನಡೆದಿದ್ದು, ಈ ಸಂಬಂಧ ಶಾಲೆಯ ಪ್ರಾಚಾರ್ಯರನ್ನು ಬಂಧಿಸಲಾಗಿದೆ. ನಗರದ ರಾಜನಗರದ ಕೇಂದ್ರಿಯ ವಿದ್ಯಾಲಯದ ನಂ 1 ಶಾಲೆಯ ಎಸ್ ಟಿ ಮೇತ್ರಿ ಬಂಧಿತ ಪ್ರಾಚಾರ್ಯರಾಗಿದ್ದಾರೆ. ಹುಬ್ಬಳ್ಳಿಯ‌ ಕೇಂದ್ರಿಯ ವಿದ್ಯಾಲಯದ ಪ್ರಾಂಶುಪಾಲ ಸಿದ್ಧಾರೂಢ ಮೇತ್ರೆ ಅವರು ನಾಲ್ಕನೇಯ ತರಗತಿಗೆ ಪ್ರವೇಶ ನೀಡಲು ಬಸವರಾಜ ಎಂಬುವರ ಬಳಿ 50 ಸಾವಿರ ರೂಪಾಯಿ ಡಿಮ್ಯಾಂಡ್ ಮಾಡಿದ್ದರು. ಹೀಗಾಗಿ ಬಸವರಾಜ್ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ದೂರಿನ ಹಿನ್ನಲೆಯಲ್ಲಿ ಕಾರ್ಯಾಚರಣೆ ಮಾಡಿದ ಸಿಬಿಐ ಅಧಿಕಾರಿಗಳು ಲಂಚ ಕೇಳಿದ್ದ ಪ್ರಾಚಾರ್ಯನನ್ನು ಬಂಧಿಸಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆ 7ರ ಅಡಿಯಲ್ಸಿ ಮೇತ್ರೆ ವಿರುದ್ದ ದೂರು ದಾಖಲಿಸಿಕೊಂಡ ಸಿಬಿಐ. ಹುಬ್ಬಳ್ಳಿಯ ರಾಜನಗರದಲ್ಲಿರುವ ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯರನ್ನು ತನಿಖೆಗೆ ಒಳಪಡಿಸಿದ್ದಾರೆ.

ಮತ ಎಣಿಕೆ ಕಾರ್ಯಕ್ಕೆ ಕೃಷಿ ವಿವಿಯಲ್ಲಿ ಅಗತ್ಯ ಸಿದ್ದತೆ

ಧಾರವಾಡ : ವಿದ್ಯಾನಗರಿ ಧಾರವಾಡ ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯಕ್ಕೆ ಕೃಷಿ ವಿವಿಯಲ್ಲಿ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ಅವರು ಸೋಮವಾರ ಸಂಜೆ ಸಿದ್ದತಾ ಕಾರ್ಯಗಳನ್ನು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮತ ಎಣಿಕೆಗೆ ಸರ್ವ ಸಿದ್ದತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ೨೭೨ ಸಿಬ್ಬಂದಿಗಳು ರೆಡಿ ಆಗಿದ್ದಾರೆ. ಮತ ಎಣಿಕೆ ಕೇಂದ್ರಗಳಲ್ಲಿ ವೆಬ್ ಕ್ಯಾಮೆರಾಗಳನ್ನು ಹಾಕಲಾಗಿದೆ ಎಂದು ಹೇಳಿದರು. ಮೊದಲು ಪೋಸ್ಟಲ್ ಮತಗಳ ಗಣನೆ, ನಂತರ ಇವಿಎಂ ಮತಗಳ ಗಣನೆ ನಂತರ ಮತ ಎಣಿಕೆ ನಡೆಸಲಾಗುವುದು ಎಂದ ಅವರು ಕೌಂಟಿಂಗ್ ಸೆಂಟರ್ ನಲ್ಲಿ ಮೊಬೈಲ್ ಗಳಿಗೆ ಅವಕಾಶ ಇಲ್ಲ. ಮತ ಎಣಿಕೆಗೆ ಗೊಂದಲ ಆಗದಂತೆ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಮತ ಎಣಿಕೆ ಮುಗಿದ ಮೇಲೆ ಪ್ರತಿ ವಿಧಾನಸಭಾ ಕ್ಷೇತ್ರಗಳ ಒಂದು ವಿವಿ ಪ್ಯಾಟ್ ಪರಿಶೀಲನೆ ನಡೆಸಲಾಗುವುದು ಎಂದರು.

ಬಿಜೆಪಿ ನಾಯಕರ ವಿರುದ್ದ ಗುಡುಗಿದ ಮುನಿರತ್ನ

ಬೆಂಗಳೂರು : ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಬಿಜೆಪಿ ನಾಯಕರ ವಿರುದ್ದ ಗುಡುಗಿದ್ದಾರೆ‌. ನಕಲಿ ಮತದಾರರ ಚೀಟಿ ಸೃಷ್ಟಿ ಹಿಂದೆ ಬಿಜೆಪಿಯ ರಾಕೇಶ್ ಹಾಗೂ ತುಳಸಿ ಮುನಿರಾಜು ಕೈವಾಡವಿದ್ದು, ನನ್ನ ವಿರುದ್ದ ವ್ಯವಸ್ಥಿತ ಪಿತೂರಿ ನಡೆದಿದೆ. ತನಿಖೆಯಲ್ಲಿ ಎಲ್ಲವೂ ಬಯಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ನನ್ನನ್ನು ಎದುರಿಸಲಾಗದೆ, ಕಣದಿಂದಲೇ ಹಿಂದೆ ಸರಿಯುವಂತಹ ಷಡ್ಯಂತ್ರ ಮಾಡುತ್ತಿದ್ದಾರೆ. ಇದಕ್ಕೆ ನಾನು ಹೆದರುವುದಿಲ್ಲ ಎಂದು ಕಣ್ಣೀರು ಹಾಕಿದ ಮುನಿರತ್ನ ರಾಜರಾಜೇಶ್ವರಿ ತಾಯಿ ಎಲ್ಲ ನೋಡುತ್ತಿದ್ದಾಳೆ. ಅವಳು ನನ್ನ ಕೈ ಬಿಡುವುದಿಲ್ಲ. ನಾನು ಒಂದೇ ಒಂದು ಭ್ರಷ್ಟಾಚಾರ, ಒತ್ತುವರಿ, ಅಕ್ರಮ ಅನ್ಯಾಯ ವೆಸಗಿಲ್ಲ. ನನ್ನ ಹದಿನೆಂಟನೇ ವಯಸ್ಸಿನಲ್ಲಿ ತೆರಿಗೆ ಕಟ್ಟಲು ಆರಂಭಿಸಿದ್ದೇನೆ ಎಂದು ಮನದಾಳವನ್ನು ತೋಡಿಕೊಂಡಿದ್ದಾರೆ.

ಸಂಸದ ಪುಟ್ಟರಾಜು ಮೇಲೆ ದೂರು

ಮಂಡ್ಯ : ರೈತ ಸಂಘದ ಕಾರ್ಯಕರ್ತ ದಿಕ್ಷೀತ್ ಮೇಲೆ ಹಲ್ಲೆ ನಡೆಸಿದ ಮಂಡ್ಯ ಸಂಸದ ಪುಟ್ಟರಾಜು ಮೇಲೆ ದೂರು ದಾಖಲಾಗಿದೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಪ್ರತಿ ದೂರು ದಾಖಲಿಸಿರುವ ಸಂಸದ ಪುಟ್ಟರಾಜು ಗನ್ ಮೆನ್ ಕಾರು ಅಡ್ಡಗಟ್ಟಲು ಯತ್ನಿಸಿದ್ದಾರೆ ಎಂದು ಪ್ರಕರಣ ದಾಖಲಿಸಿದ ಪ್ರಸಂಗ ನಡೆದಿದೆ.

ಕಾಂಗ್ರೆಸ್ -ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾರಾಮಾರಿ

ಗದಗ/ಹಾವೇರಿ : ರಾಜ್ಯ ವಿಧಾನ ಸಭಾ ಚುನಾವಣೆ ಮುಗಿದರೂ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಿಂತಿಲ್ಲ. ಗದಗ ಹಾಗೂ ಹಾವೇರಿ ಜಿಲ್ಲೆಯ ವಿವಿಧೆಡೆ ನಡೆದಿವೆ. ಹಾವೇರಿಯ ಹಾವನೂರು ಗ್ರಾಮದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಇದರಿಂದಾಗಿ ನಾಲ್ವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಅದೇ ರೀತಿ ಗದಗ ನಗರದಲ್ಲಿ ಕೂಡ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದೀಗ ಎರಡು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿವೆ.

ಮಕ್ಕಳ ಕಳ್ಳರ ವದಂತಿಗೆ ಬೆಚ್ಚಿದ ಜನತೆ

ತುಮಕೂರು : ಜಿಲ್ಲೆಯ ಪಾವಗಡ ತಾಲೂಕಿನ ಅನೇಕ ಹಳ್ಳಿಯಲ್ಲಿ ಮಕ್ಕಳ ಕಳ್ಳರ ವದಂತಿ ಹರಡಿದೆ. ಇದತಿಂದಾಗಿ ಅನೇಕ ಪೋಷಕರು ಬೆಚ್ಚಿ ಬಿದ್ದಿದ್ದಾರೆ. ರಾತ್ರಿಯೀಡಿ ಜನತೆ ಮಲಗದೆ ಮಕ್ಕಳನ್ನು ಕಾಯುತ್ತಾ ಕುಳಿತಿದ್ದಾರೆ. ಮಕ್ಕಳ ಅಂಗಾಂಗಗಳನ್ನು ಕತ್ತರಿಸಿ ಮಾರಾಟ ಮಾಡಲು ಯತ್ನಿಸಿದ ಜಾಲ ಆಂಧ್ರದಲ್ಲಿ ಕಾರ್ಯ ಪ್ರವೃತ್ತವಾಗಿದೆ. ದೊಡ್ಡಹಳ್ಳಿಯ ಹದಿನೆಂಟು ವರ್ಷ ವಯಸ್ಸಿನ ಹುಡುಗನನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಕುರಿತು ಪೊಲೀಸರು ಕೂಡ ಶೋಧ ಕಾರ್ಯಾಚರಣೆ ನಡೆಸಿದರು.ಎಸ್ಪಿ ದಿವ್ಯಾ ಗೋಪಿನಾಥ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ವದಂತಿಗಳನ್ನು ನಂಬಬೇಡಿ. ಜನರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. ಆಂಧ್ರಪ್ರದೇಶದ ಪೊಲೀಸರ ಜೊತೆಗೆ ಮಾತನಾಡಿ ಸ್ಪಷ್ಟ ಚಿತ್ರಣ ಪಡೆಯಲಾಗುವುದು ಎಂದರು.

ಮೇ ೧೬ರಂದು ಜೆಮ್ಸ್ ಸ್ಕೂಲ್ ನಲ್ಲಿ ಶಿಕ್ಷಕರ ಹುದ್ದೆಗೆ ನೇರಸಂದರ್ಶನ

ಧಾರವಾಡ : ವಿದ್ಯಾನಗರಿ ಧಾರವಾಡದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಗಂಗಾ0ಬಿಕಾ ಮೇಮೋರಿಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಧಾರವಾಡದಲ್ಲಿ ಖಾಲಿಯಿರುವ ವಿವಿಧ ಶಿಕ್ಷಕರ ಹುದ್ದೆಗೆ ಮೇ ೧೬ರಂದು ಬೆಳಗ್ಗೆ ೧೧ರಿಂದ ೪ ಗಂಟೆಯವರೆಗೆ ನೇರ ಸಂದರ್ಶನ ಕರೆಯಲಾಗಿದೆ. ಹೆಚ್ ಎಂ ಹುದ್ದೆಗೆ ಒಂದು, ಇಂಗ್ಲೀಷ್‌ ಶಿಕ್ಷಕರ ಮೂರು ಹುದ್ದೆ, ವಿಜ್ಞಾನ ಮೂರು, ಎಸ್ ಎಸ್ ಎರಡು, ಗಣಿತ ಎರಡು, ಹಿಂದಿ ಒಂದು, ಕನ್ನಡ ಎರಡು ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಎಸ್.ಬಿ. ಜೇರ್ಲಿ , ಆಡಳಿತಾಧಿಕಾರಿಗಳು, ಜೆಮ್ಸ್ ಸ್ಕೂಲ್ , ಭಾರತಿ ನಗರ, ಮೂರನೇ ಅಡ್ಡ ರಸ್ತೆ, ನೀರಿನ ಟ್ಯಾಂಕ್ ಹತ್ತಿರ, ಧಾರವಾಡ ಇಲ್ಲವೇ ಮೊ.ಸಂ. ೭೭೯೫೩೨೯೯೭೦ಗೆವಸಂರ್ಪಕಿಸಬಹುದು.

ರಾಜ್ಯದಲ್ಲಿ ಅತಂತ್ರ ಸರಕಾರ ಖಚಿತ ?

ಬೆಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಅತಂತ್ರ ಸರಕಾರದ ಸುಳಿವು ದೊರೆತಿದೆ. ಹೌದು.., ಇದು ಅಚ್ಚರಿಯಾದ್ರೂ ಜನರ ತೀರ್ಪು ಇವಿಎಂ ಪೆಟ್ಟಿಗೆಯಲ್ಲಿರುವುದರಿಂದ ಮೇ 15ರಂದು ಸ್ಪಷ್ಟ ಚಿತ್ರಣ ದೊರೆಯಲಿದೆ. ಅಲ್ಲಿಯವರೆಗೆ ರಾಜಕೀಯ ಪಕ್ಷಗಳು ಕಾಯಲೇ ಬೇಕಿದೆ. ಸಮೀಕ್ಷೆಗಳು ನೋಡಿದರೆ ಅತಂತ್ರ ಸ್ಥಿತಿಯೇ ನಿರ್ಮಾಣ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೀಗಾಗಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವವರು ಸರ್ಕಾರ ರಚಿಸಲು ಕಸರತ್ತು ನಡೆಸಲೇ ಬೇಕಾದ ಅನಿವಾರ್ಯತೆ ಎದುರಾಗಲಿದೆ. ಬಿಜೆಪಿ ನಾಯಕರೊಂದಿಗೆ ಕೈ ಜೋಡಿಸಿದರೆ ಕುಮಾರಸ್ವಾಮಿಯನ್ನು ಮನೆಯಿಂದ ಹೊರಹಾಕುವುದಾಗಿ ಗುಡುಗಿದ್ದ ದೇವೇಗೌಡರ ನಡೆ ಮೇಲೆಯೇಎಲ್ಲರ ಚಿತ್ರ ನೆಟ್ಟಿದೆ. ಆದರೂ ಜೆಡಿಎಸ್ ಸೆಳೆಯಲು ಬಿಜೆಪಿ ನಾಯಕರು ಪ್ರಯತ್ನ ಮುಂದುವರೆಸಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ದಲಿತ ಸಿಎಂ ಭರವಸೆ ಮುಂದಿಟ್ಟು ಕಾಂಗ್ರೆಸ್ ಸಹ ಅಖಾಡಕ್ಕಿಳಿದಿರುವುದು ತೀವ್ರ ಕುತೂಹಲ ಕೆರಳಿಸಿದೆ.

ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕನ ಮೇಲೆ ಹಲ್ಲೆ

(www.prajakiran.com) ಹುಬ್ಬಳ್ಳಿ : ಪ್ರಯಾಣಿಕನ ಮೇಲೆ ಹಲ್ಲೆ ನಡೆದ ಘಟನೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ರೈಲು ಹತ್ತುವಾಗ ಬೆನ್ನಿಗೆ ಬ್ಲೇಡ್ ನಿಂದ ಹರಿದು ಗಾಯಗೊಳಿಸಲಾಗಿದೆ. ಇದರಿಂದಾಗಿ ಸುರೇಶ್ ಎಂಬ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದಾನೆ. ದಾಳಿ ಬಳಿಕ ಸ್ಥಳಿಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾದ ಗಾಯಾಳು ಸುರೇಶ ಯಾರು ದಾಳಿ ಮಾಡಿದ್ದಾರೆ, ಯಾವ ಉದ್ದೇಶಕ್ಕೆ ದಾಳಿ ನಡೆಸಲಾಗಿದೆ ಎಂಬುದು ತಿಳಿದಿಲ್ಲ ಎಂದು ದೂರಿದರು. ಘಟನಾ ಸ್ಥಳಕ್ಕೆ ರೇಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮನ್ನೆರಾಳ ಗ್ರಾಮದಲ್ಲಿ ಮರುಮತದಾನ ಆರಂಭ

(www.prajakiran.com) ಕೊಪ್ಪಳ: ಕೊಪ್ಪಳದ ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮನ್ನೆರಾಳ ಗ್ರಾಮದಲ್ಲಿ ಮರುಮತದಾನ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ 144 ಸೆಕ್ಸನ್ ಅಡಿ ಜಾರಿ ಮಾಡಲಾಗಿದ್ದು, ಮತಗಟ್ಟೆ ಸಂಖ್ಯೆ 20 ಹಾಗೂ 21 ರಲ್ಲಿ ಮರುಮತದಾನ ನಡೆಯುತ್ತಿದೆ. ಈ ಎರಡು ಮತಗಟ್ಟೆಗಳಲ್ಲಿ ಶೇಕಡಾ 100% ಕ್ಕಿಂತ ಹೆಚ್ಚು ಮತದಾನವಾಗಿದ್ದರಿಂದ ಜಿಲ್ಲಾಧಿಕಾರಿ ಕನಗವಲ್ಲಿ ಮರುಮತದಾನಕ್ಕೆ ಆದೇಶಿಸಿದ್ದರು. ಬೂತ್ ನಂಬರ್ 21 ರ ಮತದಾರರು 20 ರಲ್ಲಿ ಮತದಾನ ಮಾಡಿದ್ದರಿಂದ ಮರುಮತದಾನ ನಡೆಸಲಾಗುತ್ತಿದೆ. ಬೆಳಗ್ಗೆ 7 ಗಂಟೆ ಯಿಂದಲೇ ಶಾಂತಿಯುತವಾಗಿ ಮತದಾನ ನಡೆಯತ್ತಿದೆ.

ಮಾಜಿ ಸಚಿವ ಕೆ.ಹೆಚ್. ಹನುಮೇಗೌಡ ನಿಧನ

ಹಾಸನ : ಹಾಸನ ಜಿಲ್ಲೆಯ ಹಿರಿಯ ರಾಜಕಾರಣಿ, ೪ ಬಾರಿ ಶಾಸಕರಾಗಿ, ಸಚಿವರಾಗಿದ್ದಂತಹ ಸರಳ,ಸಜ್ಜನಿಕೆಯ ವ್ಯಕ್ತಿತ್ವದ ಕೆ.ಹೆಚ್.ಹನುಮೇಗೌಡರು ಭಾನುವಾರ ರಾತ್ರಿ ನಿಧನ ಹೊಂದಿದ್ದಾರೆ. ಅವರು ಅನಾರೋಗ್ಯದ ಕಾರಣ ಹಾಸನದ ಸಂಜೀವಿನಿ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಕೊನೆ ಉಸಿರು ಎಳೆದಿದ್ದಾರೆ. ಕುವೆಂಪು ನಗರದ ಅರವಿಂದ ಶಾಲೆ ಸಮೀಪದ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಜಾಗಿ ಇಡಲಾಗಿದೆ. ೪ ನಾಲ್ಕು ಬಾರಿ ಶಾಸಕರಾಗಿದ್ದ ಅವರು ೧೯೯೪ ರಲ್ಲಿ ವೀರಪ್ಪ ಮೊಯ್ಲಿ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕಾಡಾ ಸಚಿವರಾಗಿದ್ದರು. ಹಾಸನ ತಾಲ್ಲೂಕಿನ ಕೆ.ಬ್ಯಾಡರಹಳ್ಳಿಯ ಹನುಮೇಗೌಡರು ರಾಜಕೀಯ ಜೀವನ ಆರಂಭಿಸಿದ್ದು ೧೯೭೨ ರಲ್ಲಿ ಸಂಸ್ಥಾ ಕಾಂಗ್ರೆಸ್‌ ನಿಂದ. ನಂತರ ಕಾಂಗ್ರೆಸ್ ನಿಂದ ಶಾಸಕರಾಗಿದ್ದ ಹನುಮೇಗೌಡರು, ಮಾಜಿ ಸಚಿವ ದಿ.ಶ್ರೀಕಂಠಯ್ಯ, ಜಿ.ಪುಟ್ಟಸ್ವಾಮಿಗೌಡ ಅವರೊಂದಿಗೆ ಸಂಘರ್ಷ ಸಾರಿ ಬಿಜೆಪಿ ಗೆ ಸೇರ್ಪಡೆ ಯಾಗಿ ೧೯೯೯ರಲ್ಲಿ ಆ ಪಕ್ಷದಿಂದ ಶಾಸಕರಾಗಿದ್ದರು. ಮಾಜಿ ಪ್ರಧಾನಿ ಹೆಚ್. ಡಿ. ದೇವೆಗೌಡರ ಕಡು ವಿರೋಧಿಯಾಗಿದ್ದ ಅವರು ಬಿಜೆಪಿಯಿಂದ ಲೋಕಸಭೆಗೂ ಸ್ಪರ್ಧಿಸಿದ್ದರು. ಅವರು ಮೂವರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ‌. ಮೇ ೧೪ರಂದು ಸೋಮವಾರ ಕೆ.ಬ್ಯಾಡರಹಳ್ಳಿಯ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಉದ್ಯಾನ ವನಕ್ಕೆ ನೀರು ಬಿಟ್ಟ ಶಾಸಕ ಅರವಿಂದ ಬೆಲ್ಲದ

ಧಾರವಾಡ : ತೀವ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದ ಧಾರವಾಡ ಪಶ್ಚಿಮ ವಿಧಾನ ಸಭಾ ಮತಕ್ಷೆÃತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಅರವಿಂದ ಬೆಲ್ಲದ ಭಾನುವಾರ ಮನೆಯಲ್ಲಿಯೇ ಕಾಲ ಕಳೆದರು. ಎಲ್ಲಡೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಮನೆಯಲ್ಲಿನ ಉದ್ಯಾನ ವನಕ್ಕೆ ನೀರು ಹರಿ ಬಿಡುವ ಮೂಲಕ ಸಂತಸ ಪಟ್ಟರು. ಕುಟುಂಬದವರೊಂದಿಗೆ ಕೆಲ ಕಾಲ ಕಳೇದ ಅವರು ಕ್ಷೆÃತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರೊಂದಿಗೆ ಬೆರತು ಕ್ಷೆÃತ್ರದಲ್ಲಿನ ಚುನಾವಣೆ ಕುರಿತು ಮಾಹಿತಿ ಸಂಗ್ರಹಿಸಿದರು. ಬಳಿಕ ಪ್ರಜಾಕಿರಣದೊಂದಿಗೆ ಮಾತನಾಡಿದ ಅವರು, ಈ ಬಾರಿಯೂ ಪುನರ್ ಆಯ್ಕೆಯಾಗಲು ಕ್ಷೆÃತ್ರದ ಮತದಾರರು ಆರ್ಶೀವಾದ ಮಾಡಿದ್ದಾರೆ. ಹೀಗಾಗಿ ಗೆಲುವಿನ ನಗೆ ಬಿರುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕ್ಷೆÃತ್ರದ ಮತದಾರರು ಸರಕಾರ ಬದಲಿಸಿ, ಬಿಜೆಪಿ ಗೆಲ್ಲಿಸಲು ಹಾಗೂ ವಿಶೇಷವಾಗಿ ಶಾಂತ ಧಾರವಾಡ, ಕಾನೂನು ಪಾಲನೆಗೆ ಬದ್ಧ ಎಂದು ಘೋಷಣೆ ಮಾಡಿರುವ ಸುಸಂಸ್ಕೃತ ಕುಟುಂಬದ ಹಿನ್ನಲೆಯುಳ್ಳ ತಮ್ಮ ಪರ ಒಲುವು ಹೊಂದಿರುವುದು ಕ್ಷೆÃತ್ರದೆಲ್ಲಡೆ ಕಂಡು ಬಂದಿದೆ ಎಂದರು.

ಕುಟುಂಬದವರೊಂದಿಗೆ ಕಾಲ ಕಳೆದ ಅಮೃತ ದೇಸಾಯಿ

ಧಾರವಾಡ : ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೆÃತ್ರದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರು ಭಾನುವಾರ ಮನೆಯಲ್ಲಿಯೇ ಕಾಲ ಕಳೆದರು. ಬೆಳಗ್ಗೆಯಿಂದಲೇ ಮನೆಗೆ ಆಗಮಿಸಿದ್ದ ನೂರಾರು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಕ್ಷೆÃತ್ರದಲ್ಲಿನ ಮತದಾನ ಹಾಗೂ ರಾಜಕೀಯ ಚಟುವಟಿಕೆ ಕುರಿತು ಮಾಹಿತಿ ಪಡೆದರು. ಬಳಿಕ ತಂದೆ ಹಾಗೂ ಮಾಜಿ ಶಾಸಕರಾದ ಎ.ಬಿ. ದೇಸಾಯಿ ಹಾಗೂ ಪತ್ನಿ ಪ್ರಿಯಾ ದೇಸಾಯಿ ಅವರೊಂದಿಗೆ ಉಪಹಾರ ಸವಿದರು. ನಂತರ ಪ್ರಜಾಕಿರಣದೊಂದಿಗೆ ಮಾತನಾಡಿದ ಅವರು, ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಕಮಲ ಅರಳುವುದು ನಿಶ್ಚಿತ. ಕಾಂಗ್ರೆಸ್ ಮುಕ್ತ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೆÃತ್ರಕ್ಕಾಗಿ ಬಿಜೆಪಿಯ ಕಾರ್ಯಕರ್ತರು ಹಗಲಿರಳು ಎನ್ನದೆ ಶ್ರಮಿಸಿದ್ದಾರೆ. ಅವರಿಗೆ ನಾನು ಋಣಿಯಾಗಿದ್ದೆÃನೆ. ಕನಿಷ್ಟ ೨೫ ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು. ಸೋಲು ಗೆಲುವಿನ ಕುರಿತು ಯಾರು ಏನೇ ಲೆಕ್ಕಚಾರದ ಹಾಕಿದರೂ ಗೆಲುವು ನಮ್ಮದೇ ಎಂದರು.

ಡೈರಿಯಲ್ಲಿ ಕಾಲ ಕಳೆದ ಸಚಿವ ವಿನಯ ಕುಲಕರ್ಣಿ

ಧಾರವಾಡ : ಕಳೆದ ೨೦ ದಿನಗಳಿಂದ ರಾಜ್ಯ ವಿಧಾನ ಸಭಾ ಚುನಾವಣೆಯ ಬಹಿರಂಗ ಪ್ರಚಾರ, ಬಿರುಸಿನ ರಾಜಕೀಯ ಚಟುವಟಿಕೆಯಲ್ಲಿ ತೊಡಗಿದ್ದ ಸಚಿವ ವಿನಯ ಕುಲಕರ್ಣಿ ಮತದಾನ ಮುಗಿದ ಬಳಿಕ ರಿಲ್ಯಾಕ್ಸ್ ಮೂಡಿನಲ್ಲಿದ್ದರು. ಭಾನುವಾರ ಬೆಳಗ್ಗೆ ಮನೆಗೆ ಬಂದ ನೂರಾರು ಕಾರ್ಯಕರ್ತರೊಂದಿಗೆ ಉಭಯ ಕುಶಲೋಪರಿ ನಡೆಸಿ, ಡೈರಿಯತ್ತ ಮುಖ ಮಾಡಿದರು. ಡೈರಿಯಲ್ಲಿ ಸುತ್ತಾಡಿ, ಎಮ್ಮೆ, ಆಕಳಗಳ ಆರೋಗ್ಯ ವಿಚಾರಣೆ ನಡೆಸಿ, ಸಿಬ್ಬಂದಿಯಿಂದ ಮಾಹಿತಿ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಡೈರಿಗೆ ಆಗಮಿಸಿದ್ದೆ. ಮತ್ತೆÃ ಮತದಾನ ಮುಗಿದ ಬಳಿಕ ಡೈರಿಗೆ ಕಾಲಿಟ್ಟಿದ್ದೆÃನೆ. ಇಲ್ಲಿಗೆ ಬಂದರೆ ಒಂದು ರೀತಿಯಲ್ಲಿ ಸಂತೋಷ, ಸಮಾಧಾನ ಆಗುತ್ತದೆ. ಹೀಗಾಗಿ ಇಂದು ಡೈರಿಯಲ್ಲಿ ಕಾಲ ಕಳೆಯುತ್ತಿದ್ದೆÃನೆ. ಗೆಲುವು ತಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಈ ಬಾರಿಯ ಚುನಾವಣೆ ವಿನಯ ಕುಲಕರ್ಣಿ ವರ್ಸೆಸ್ ಬಿಜೆಪಿ ಆಗಿತ್ತು. ಈ ಹಿಂದೆ ಈ ರೀತಿ ಆಗಿರಲಿಲ್ಲ. ಆದರೆ, ನಾನು ಇದನ್ನು ವೈಯಕ್ತಿಕವಾಗಿ ತೆಗೆದುಕೊಂಡಿಲ್ಲ. ಎಲ್ಲ ಕಡೆ ಮತದಾರರಿಂದ ಉತ್ತಮ ಸ್ಪಂದನೆ ದೊರೆತಿದೆ. ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿರುವುದುಖುಷಿ ಕೊಟ್ಟಿದೆ ಎಂದು ಸಚಿವ ವಿನಯ ಕುಲಕರ್ಣಿ ವಿವರಿಸಿದರು.

ಸಿಎಂ ಸಿದ್ದುಗೆ ಗುದ್ದು ನೀಡಿದ ಬಿಜೆಪಿ ನಾಯಕರು

ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಮತ್ತೋಮ್ಮೇ ಅಧಿಕಾರದ ಚುಕ್ಕಾಣಿ ಹಿಡಿಯುವುದಾಗಿ ಬಿಗುತ್ತಿದ್ದ ಸಿಎಂ ಸಿದ್ದರಾಮಯ್ಯ ಇದೀಗ ಅತಂತ್ರ ವಿಧಾನ ಸಭೆಯ ಮಾಹಿತಿ ಅರಿತು ಯೂ ಟರ್ನ್ ಹೊಡೆದಿದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯಗೆ ಗುದ್ದು ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂಹಾಗೂ ಕೇಂದ್ರದ ಸಚಿವ ಡಿ.ವಿ. ಸದಾನಂದಗೌಡ ಅವರು ಸಿಎಂ ಸಿದ್ದರಾಮಯ್ಯಗೆ ಸೋಲಿಯ ಭಯ ಕಾಡುತ್ತಿದೆ. ಹೀಗಾಗಿ ಅವರು ದಲಿತ ಸಿಎಂ ರಾಗಾ ಹಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ. ಇದೇ ವೇಳೆ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಕೂಡ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರು ಬಾದಾಮಿ ಹಾಗೂ ಚಾಮುಂಡೇಶ್ವರಿಯಲ್ಲಿ ಸೋಲಲಿದ್ದಾರೆ. ಹೀಗಾಗಿ ಅವರು ದಲಿತರ ಪರ ಕಾಳಜಿ ತೋರಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಕಳೆದ ಬಾರಿಗಿಂತ ಈ ಬಾರಿ ಮತದಾನ ಪ್ರಮಾಣ ಹೆಚ್ಚಳ

ಧಾರವಾಡ : ಮೇ ೧೨ ರಂದು ಒಟ್ಟಾರೆ ಜಿಲ್ಲೆಯಲ್ಲಿ ಶೇ.೭೦.೯೯ ರಷ್ಟು ಮತದಾನ ದಾಖಲಾಗಿದೆ. ೨೦೧೩ ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇ.೩.೮೯ ರಷ್ಟು ಹೆಚ್ಚಳವಾಗಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಅಂತಿಮವಾಗಿ ೭೦.೯೯ ರಷ್ಟು ಮತದಾನವಾಗಿದೆ. ಹಿಂದಿನ ೨೦೧೩ ರ ವಿಧಾನಸಭಾ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಸುಮಾರು ಶೇ.೪ ರಷ್ಟು ಮತದಾನ ಹೆಚ್ಚಳವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಮತದಾನವಾಗಿದೆ. ಹುಬ್ಬಳ್ಳಿ ಧಾರವಾಡ ಅವಳಿ ನಗರ ಪ್ರದೇಶಗಳಲ್ಲಿ ಸುಮಾರು ಶೇ.೬೦ ರಷ್ಟು ಮತದಾನಾಗಿದೆ. ಮಹಿಳಾ ಮತದಾನ ಪ್ರಮಾಣದಲ್ಲಿ ಶೇ.೪ ರಷ್ಟು ಮತ್ತು ಪುರುಷ ಮತದಾನ ಪ್ರಮಾಣದಲ್ಲಿ ಶೇ.೨.೭೫ ರಷ್ಟು ಹೆಚ್ಚಳವಾಗಿದೆ ಎಂದು ಜಿಲ್ಲಾ ಸ್ವಿಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿ.ಪಂ.ಸಿಇಓ ಆರ್.ಸ್ನೇಹಲ್ ತಿಳಿಸಿದ್ದಾರೆ.

ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಂಡ ಚುನಾವಣಾ ಆಯೋಗ

ಬೆಂಗಳೂರು : ರಾಜ್ಯಾದ್ಯಂತ ಮೇ 12ರಂದು ನಡೆದ ರಾಜ್ಯ ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆಗಳನ್ನು ರಾಜ್ಯ ಚುನಾವಣಾ ಆಯೋಗ ಮಾಡಿಕೊಂಡಿದೆ. ಈಗಾಗಲೇ ಎಲ್ಲ ಜಿಲ್ಲೆಗಳಜಿಲ್ಲಾಡಳಿತಗಳಿಗೆ ಈ ನಿಟ್ಟಿನಲ್ಲಿ ಅಗತ್ಯ ಸೂಚನೆ ನೀಡಿರುವ ಆಯೋಗವು ಮತ ಎಣಿಕೆ ಕಾರ್ಯವು ಮೇ.೧೫ ರಂದು ಬೆಳಿಗ್ಗೆ ೮ ಗಂಟೆಗೆ ಆರಂಭವಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ. ಮೊದಲಿಗೆ ಅಂಚೆ ಮತಪತ್ರಗಳ ಎಣಿಕೆ ಕಾರ್ಯ ನಡೆಯುತ್ತದೆ. ನಂತರ ಮತಯಂತ್ರಗಳಲ್ಲಿ ದಾಖಲಾಗಿರುವ ಮತಗಳ ಎಣಿಕೆ ನಡೆಯುವದು. ಪ್ರತಿ ಸುತ್ತಿನಲ್ಲಿ ೧೪ ಮತಗಟ್ಟೆಗಳ ಎಣಿಕೆ ಕಾರ್ಯ ಕೈಗೊಳ್ಳಲು ೧೪ ಟೇಬಲ್‌ಗಳನ್ನು ವ್ಯವಸ್ಥೆ ಪ್ರತಿ ವಿಧಾನಸಭಾ ಕ್ಷೇತ್ರಗಳ ಮತಗಳ ಎಣಿಕೆ ಕಾರ್ಯವು ೧೫ ರಿಂದ ೨೦ ಸುತ್ತುಗಳಲ್ಲಿ ನಡೆಯುತ್ತದೆ. ಮತಗಳ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಮೈಕ್ರೊ ಆರ್ಬ್ಸ್ವರ್‌ಗಳು ,ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಮತ ಎಣಿಕೆ ದಿನದಂದು ಬೆಳಿಗ್ಗೆ ೫.೩೦ ಕ್ಕೆ ಎಣಿಕೆ ಕೇಂದ್ರದಲ್ಲಿ ಹಾಜರಿರಲು ಈಗಾಗಲೇ ಸೂಚಿಸಲಾಗಿದೆ.

ಮತಯಂತ್ರಗಳಿಗೆ ಬಿಗಿಭದ್ರತೆ

ಧಾರವಾಡ : ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಡಿಮಸ್ಟರಿಂಗ್ ಕೇಂದ್ರಗಳಿಂದ ಬಂದ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಮತ ಎಣಿಕೆ ಕೇಂದ್ರದಲ್ಲಿ ರವಿವಾರ ಬೆಳಗಿನ ಜಾವದವರೆಗೂ ಸ್ವೀಕರಿಸಿ,ಅಭ್ಯರ್ಥಿಗಳು ಮತ್ತು ಅವರ ಚುನಾವಣಾ ಏಜೆಂಟರುಗಳ ಸಮ್ಮುಖದಲ್ಲಿ ಭದ್ರತಾ ಕೊಠಡಿಯಲ್ಲಿರಿಸಿ ಸೀಲ್ ಮಾಡಲಾಯಿತು. ಚುನಾವಣಾ ವೀಕ್ಷಕರು ಹಾಗೂ ಚುನಾವಣಾಧಿಕಾರಿಗಳು ಮತಯಂತ್ರಗಳ ಭದ್ರತಾ ಕೊಠಡಿಗಳಿಗೆ ಬೀಗ ಹಾಕಿ ಮೊಹರು ಹಾಕುವ ಕಾರ್ಯ ರವಿವಾರ ಬೆಳಗಿನ ಜಾವದವರೆಗೂ ನಡೆಯಿತು. ಮೊದಲು ಎಲ್ಲ ಮತಯಂತ್ರಗಳು ಹಾಗೂ ದಾಖಲೆಗಳನ್ನು ದೃಢಪಡಿಸಿಕೊಂಡು ನಿರ್ದಿಷ್ಟ ಭದ್ರತಾ ಕೊಠಡಿಯಲ್ಲಿ ಚುನಾವಣಾಧಿಕಾರಿಗಳು ಸಹಿ ಮಾಡಿದ ಪ್ರಮಾಣ ಪತ್ರವನ್ನು ಬಾಗಿಲಿಗೆ ಅಂಟಿಸಿ ಸೀಲ್ ಮಾಡಲಾಯಿತು. ಕೇಂದ್ರದ ಚುನಾವಣಾ ವೀಕ್ಷಕ,ಹಿರಿಯ ಐಎಎಸ್ ಅಧಿಕಾರಿ ಪ್ರಕಾಶಚಂದ್ ಪವನ್ ,ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ,ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ , ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶಮೂರ್ತಿ ಸೇರಿದಂತೆ ಕೇಂದ್ರ ಅರೆಸೇನಾ ಪಡೆಗಳ ಹಿರಿಯ ಅಧಿಕಾರಿಗಳು ಹಾಗೂ ಅಭ್ಯರ್ಥಿಗಳ ಸಮ್ಮುಖದಲ್ಲಿ ಭದ್ರತಾ ಕೊಠಡಿಯನ್ನು ಸೀಲ್ ಮಾಡಲಾಯಿತು. ಅಭ್ಯರ್ಥಿಗಳ ಭವಿಷ್ಯ ದಾಖಲಾಗಿರುವ ಮತಯಂತ್ರಗಳಿಗೆ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ.ಕೇಂದ್ರ ಅರೆಸೇನಾ ಪಡೆಗಳ ಯೋಧರನ್ನು ಮತಯಂತ್ರಗಳ ಕಾವಲಿಗೆ ನೇಮಿಸಲಾಗಿದೆ.

ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ನಾಪತ್ತೆ ?

ಬೆಂಗಳೂರು : ನಕಲಿ ವೋಟರ್ ಐಡಿ ಪತ್ತೆ ನಂತರ ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಅವರು ಬಂಧನ ಭೀತಿಯಿಂದ ತಲೆಮೆರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು, ವಕೀಲರ ಮೊರೆ ಹೋಗಿರುವ ಅವರು ಜಾಮೀನಿಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಎಸ್ ಎಲ್ ವಿ ಅಪಾರ್ಟಮೆಂಟ್ ನಲ್ಲಿ 9ಸಾವಿರಕ್ಕೂ ಅಧಿಕ ನಕಲಿ ವೋಟರ್ ಐಡಿ ಪತ್ತೆಯಾದ ಹಿನ್ನಲೆಯಲ್ಲಿ ಅವರನ್ನು ಈ ಪ್ರಕರಣದಲ್ಲಿ 14 ನೇ ಆರೋಪಿಯನ್ನಾಗಿ ಮಾಡಲಾಗಿದೆ. ಇದರಿಂದ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿರುವ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಯಾರ ಸಂಪರ್ಕಕ್ಕೂಸಿಗದೆ ಇರುವುದು ಅವರ ಬೆಂಬಲಿಗರಿಗೆ ಕಳವಳವುಂಟು ಮಾಡಿದೆ.

ಖರ್ಗೆ ದಂಪತಿಗೆ 50 ನೇ ಮದುವೆ ವಾರ್ಷಿಕೋತ್ಸವ ಸಂಭ್ರಮ

ಕಲಬುರಗಿ: ಕಾಂಗ್ರೆಸನ ಹಿರಿಯ ಮುಖಂಡ ಹಾಗೂ ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ದಂಪತಿಗೆ ಭಾನುವಾರ 50 ನೇ ಮದುವೆ ವಾರ್ಷಿಕೋತ್ಸವ ಸಂಭ್ರಮ. ಈ ಹಿನ್ನಲೆಯಲ್ಲಿ ಅವರ ಸಂಬಂಧಿಕರು, ಅಭಿಮಾನಿಗಳು, ಶಿಷ್ಯಂದಿರು ಕಲಬುರಗಿ ನಿವಾಸಕ್ಕೆ ದೌಡಾಯಿಸಿ ದಂಪತಿಗಳಿಗೆ ಶುಭ ಹಾರೈಸಿದರು. ಅನೇಕರು ದಂಪತಿಗಳಿಗೆ ಆರತಿ ಬೆಳಗಿ ಹೂವು ಹಣ್ಣು ನೀಡುವ ಮೂಲಕ ಮದುವೆ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಇದೇ ವೇಳೆ ಖರ್ಗೆ ದಂಪತಿ ಪರಸ್ಪರ ಉಂಗುರ ಹಾಗೂ ಹಾರ ಬದಲಿಸಿಕೊಂಡು ಖುಷಿಯನ್ನು ಇಮ್ಮಡಿಗೊಳಿಸಿದರು. ಕುಟುಂಬಸ್ಥರು ಇಬ್ಬರಿಗೂ ಅಕ್ಷತೆ ಹಾಕಿ ಶುಭ ಕೋರಿದರು. ಇದಕ್ಕೆ ಖರ್ಗೆ ಅವರ ನೂರಾರು ಅಭಿಮಾನಿಗಳು ಸಾಕ್ಷಿಯಾದರು.

ನನ್ನ ಸೋಲಿಸಲು ಅಧಿಕಾರಿಗಳ ಹುನ್ನಾರ : ಜಗದೀಶ ಶೆಟ್ಟರ ಆರೋಪ

ಹುಬ್ಬಳ್ಳಿ : ಹುಬ್ಬಳ್ಳಿ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದಲ್ಲಿ ಅಧಿಕಾರಿಗಳು ನನ್ನನ್ನೂ ಸೋಲಿಸಲು ವಾಮಮಾರ್ಗ ಅನುಸರಿಸಿದ್ದಾರೆ ಎಂದು ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ. ಅವರು ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮತದಾರರ ಪಟ್ಟಿಯಿಂದ ಸಾವಿರಾರು ಜನರ ಹೆಸರು ಉದ್ದೇಶಪೂರ್ವಕವಾಗಿಯೇ ಕೈ ಬಿಟ್ಟಿದ್ದಾರೆ ಎಂದು ಗಂಭೀರ ಆಪಾದನೆ ಮಾಡಿದ್ದಾರೆ. ಇದರಿಂದಾಗಿ ನನ್ನ ಕ್ಷೇತ್ರದ ಅನೇಕ ಜನರು ಮತದಾನದಿಂದ ವಂಚಿತರಾಗಿದ್ದಾರೆ. ಹೀಗಾಗಿ ಜಿಲ್ಲೆಯಲ್ಲೇ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೆತ್ರದಲ್ಲಿ ಶೇ. ೬೦℅ ಮತದಾನವಾಗುವ ಮೂಲಕ ಅತೀ ಕಡಿಮೆ ಮತದಾನ ಆದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಇದಲ್ಲದೆ, ನನ್ನ ಕ್ಷೇತ್ರದಲ್ಲಿ ಹಲವಾರು ಗೋಲಮಾಲ್ ನಡೆದಿವೆ. ಅನೇಕ ಕಡೆ ಇವಿಎಂ ಮಶೀನ್ ಅದಲು ಬದಲು ಮಾಡಿದ್ದಾರೆ. ಆದ್ರೂ ನಾನೇ ಗೆಲುವು ಸಾಧಿಸಲಿದ್ದು, ಸಿಕ್ಸರ್ ಬಾರಿಸುವುದು ಶತಸಿದ್ದ ಎಂದ ಅವರು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ. ಅತಂತ್ರ ಪ್ರಶ್ನೆಯೇ ಇಲ್ಲ ಎಂದು ಶೆಟ್ಟರ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷ, ಅಭ್ಯರ್ಥಿಗಳ ಮೇಲೆ ಬೆಟ್ಟಿಂಗ್ ಶುರು

ಧಾರವಾಡ : ರಾಜ್ಯ ವಿಧಾನ ಸಭಾ ಚುನಾವಣೆಗೆ ಬಿರುಸಿನ ಮತದಾನ ಮುಗಿದ ಬೆನ್ನಲ್ಲೇ ಅವರ ಅಭಿಮಾನಿಗಳು, ಪಕ್ಷದ ಮುಖಂಡರು ಹಾಗೂ ರಾಜಕೀಯ ಲೆಕ್ಕಾಚಾರ ಹಾಕುವ ಕುಳಗಳು ಅವರ ಹೆಸರಿನಲ್ಲಿ ಭರ್ಜರಿ ಬೆಟ್ಟಿಂಗ್ ಶುರು ಮಾಡಿದ್ದಾರೆ. ಅಭ್ಯರ್ಥಿಗಳ ಹೆಸರಿನ ಮೇಲೆ ಹಾಗೂ ಪಕ್ಷದ ಮೇಲೆಗೆ ಸೋಲು ಗೆಲುವಿನ ಲೆಕ್ಕಾಚಾರದ ಮೇಲೆ ಹಣವನ್ನು ಪಣಕ್ಕೆ ಇಡುತ್ತಿದ್ದಾರೆ. ಅದರಲ್ಲೂ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಬೆಟ್ಟಿಂಗ್ ಜೋರಾಗಿ ಸಾಗಿದೆ. ಚಾಮುಂಡೇಶ್ವರಿ, ವರುಣಾ, ಬಾದಾಮಿ, ಧಾರವಾಡ ಗ್ರಾಮೀಣ, ಹುಬ್ಬಳ್ಳಿ ಸೆಂಟ್ರಲ್, ಧಾರವಾಡ ಪಶ್ಚಿಮದಲ್ಲಿ ಬೆಟ್ಟಿಂಗ್ ಜೋರಾಗಿದೆ. ಒಂದಕ್ಕೂ ಎರಡು ಮೂರು ಪಟ್ಟು ಹಣವನ್ನು ಕಟ್ಟಿಕೊಳ್ಳಲಾಗುತ್ತಿದೆ. ಶನಿವಾರ ಸಂಜೆಯಿಂದಲೇ ಬೆಟ್ಟಿಂಗ್ ಶುರವಾಗಿದ್ದು, ಮೇ 15 ರ ಬೆಳಗ್ಗೆ ವರೆಗೆ ಬೆಟ್ಟಿಂಗ್ ನಡೆಯಲಿದೆ. ಈ ರಾಜಕೀಯ ಬೆಟ್ಟಿಂಗ್ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಕಂಡು ಬರುತ್ತಿದ್ದು,ಕೋಟ್ಯಾಂತರ ರೂಪಾಯಿ ಹರಿದಾಡುತ್ತಿದೆ. ಒಟ್ಟಿನಲ್ಲಿ ಯಾರ ಸೋಲು ಯಾರ ಗೆಲವು ಯಾರಿಗೆ ವರದಾನವಾಗಲಿದೆ ಎಂಬುದು ಮೇ 15ರ ಮತ ಎಣಿಕೆಯ ನಂತರವೇ ಗೊತ್ತಾಗಲಿದೆ.

ಮತ್ತೇ ಮುನ್ನಲೇಗೆ ಬಂದ ದಲಿತ ಸಿಎಂ ವಿಚಾರ

ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಕಾಂಗ್ರೆಸ್ ಪಾಳೆಯದಲ್ಲಿಮತ್ತೇ ದಲಿತ ಸಿಎಂ ವಿಚಾರ ಮುನ್ನಲೇಗೆ ಬಂದಿದೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಸಹಮತ ವ್ಯಕ್ತಪಡಿಸಿದ್ದು, ಹೈಕಮಾಂಡ್ ಹೇಳಿದರೆ ಸಿಎಂ ಸ್ಥಾನ ಬಿಟ್ಟುಕೊಡಲು ಸಿದ್ಧ ಎಂದು ಹೇಳಿದ್ದಾರೆ. ದಲಿತ ಮುಖ್ಯಮಂತ್ರಿ ಆಯ್ಕೆಗೆ ಮುಂದಾದರೆ ತಮ್ಮ ಸಹಮತವಿದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರು ಈ ಬಗ್ಗೆ ಶಾಸಕಾಂಗ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಕಳೆದ ಬಾರಿ ಕೂಡ ಎಲ್ಲ ಶಾಸಕರು ಒಮ್ಮತದ ನಿರ್ಣಯ ಕೈಗೊಂಡಂತೆ ಈ ಬಾರಿಯೂ ಸಭೆ ಸೇರಿ ಮುಂದಿನ ಹೆಜ್ಜೆ ಇರಿಸಲಾಗುವುದು ಎಂದು ಹೇಳಿದ್ದಾರೆ. ಇನ್ನೂ ಇದಕ್ಕೆ ಪ್ರತಿಕ್ರಿಯೆ ನೀಡಿರುವ ದಲಿತ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಹುದ್ದೆ ಬಂದಾಗ ಬರುತ್ತೇ, ಹೋದಾಗ ಹೋಗುತ್ತೇ, ಸುಮ್ಮನೇ ಮಾತನಾಡುವುದರಲ್ಲಿ ಯಾವುದೆ ಅರ್ಥವಿಲ್ಲ. ನಾನೊಬ್ಬ ಕಾರ್ಯಕರ್ತ, ಕಾರ್ಯಕರ್ತನಿಗೆ ಯಾರು ಸಿಎಂ ಹುದ್ದೆ ಕೊಡುತ್ತಾರೆ ಎಂದು ಹೇಳಿದ್ದಾರೆ. ನಿನ್ನೇಯಷ್ಟೇ ಸಿಎಂ ಸಿದ್ದರಾಮಯ್ಯ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿದ್ದರು. ಇದೀಗ ಯೂಟರ್ನ್ ಹೊಡೆದಿರುವುದು ನೋಡಿದರೆ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಬಗ್ಗೆ ಮೇ 15ರ ನಂತರ ಇನ್ನಷ್ಟು ಸ್ಪಷ್ಟ ಚಿತ್ರಣ ಕಂಡು ಬರಲಿದೆ.

ಧಾರವಾಡ ಜಿಲ್ಲೆಯಲ್ಲಿ ಮಹಿಳಾ ಹಾಗೂ ಪುರುಷ ಮತದಾರರಿಂದ ಉತ್ತಮ ಸ್ಪಂದನೆ

ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ಮಹಿಳಾ ಹಾಗೂ ಪುರುಷ ಮತದಾರರಿಂದ ಉತ್ತಮ ಸ್ಪಂದನೆ ದೊರೆತಿದೆ. ಕ್ಷೇತ್ರವಾರು ಮತದಾರರು ಚಲಾವಣೆ ಮಾಡಿದ ಮತದಾನದ ವಿವರ ಇಂತಿದೆ. 1) ನವಲಗುಂದ- 84480- ಪುರುಷ, 74412- ಮಹಿಳಾ ಹಾಗೂ ಒಟ್ಟು 158892 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ. 77.97%ರಷ್ಟು ಮತದಾನವಾಗಿದೆ. 2)ಕುಂದಗೋಳ 77663- ಪುರುಷ 69113-ಮಹಿಳಾ ಹಾಗೂ ಒಟ್ಟು 146776 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ. 78.27% ರಷ್ಟು ಮತದಾನವಾಗಿದೆ. 3) ಧಾರವಾಡ 81124- ಪುರುಷ 73598- ಮಹಿಳಾ ಹಾಗೂ ಒಟ್ಟು 154724- ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ. 74.87% ರಷ್ಟು ಮತದಾನವಾಗಿದೆ. 4) ಹುಬ್ಬಳ್ಳಿ ಧಾರವಾಡ (ಪೂರ್ವ) 70032- ಪುರುಷ 63729 ಮಹಿಳಾ ಹಾಗೂ ಒಟ್ಟು 133761- ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ. 68.88% ರಷ್ಟು ಮತದಾನವಾಗಿದೆ. 5) ಹುಬ್ಬಳ್ಳಿ ಧಾರವಾಡ ( ಸೆಂಟ್ರಲ್) 76188- - ಪುರುಷ 70744- ಮಹಿಳಾ ಹಾಗೂ ಒಟ್ಟು 146932- ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ. 60.17% ರಷ್ಟು ಮತದಾನವಾಗಿದೆ. 6) ಹುಬ್ಬಳ್ಳಿ ಧಾರವಾಡ ( ಪಶ್ಚಿಮ) 80610 - ಪುರುಷ 75820- ಮಹಿಳಾ ಹಾಗೂ ಒಟ್ಟು 156430- ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ. 61.31% ರಷ್ಟು ಮತದಾನವಾಗಿದೆ. 7) ಕಲಘಟಗಿ 78753 ಪುರುಷ 70629- ಮಹಿಳಾ ಹಾಗೂ ಒಟ್ಟು 149382- - ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ. 78.87% ರಷ್ಟು ಮತದಾನವಾಗಿದೆ. ಒಟ್ಟು ಜಿಲ್ಲೆಯಾದ್ಯಂತ 70.70% ರಷ್ಟು ಮತದಾನವಾಗಿದೆ.

ರಾಜ್ಯಾದ್ಯಂತ ಶೇ. 70ರಷ್ಟು ಮತದಾನ

ರಾಜ್ಯಾದ್ಯಂತ ಶೇ. 70ರಷ್ಟು ಮತದಾನ ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಶನಿವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ರಾಜ್ಯಾದ್ಯಂತ ನಿರೀಕ್ಷೆಯಂತೆ ಉತ್ತಮ ಮತದಾನವಾಗಿದೆ. ಕೊಡಗು ಶೇ. 75, ದಾವಣಗೆರೆ ಶೇ. 69, ಯಾದಗಿರಿ 66, ಚಾಮರಾಜನಗರ ಶೇ 76.29, ಗದಗ ಜಿಲ್ಲೆಯಲ್ಲಿ ಶೇ. 74.46ರಷ್ಟು, ಧಾರವಾಡ ಶೇ 71ರಷ್ಟು, ಚಿಕ್ಕಮಗಳೂರು ಶೇ. 78.12, ಉಡುಪಿ ಶೇ. 78.57, ಬಾಗಲಕೋಟೆ 72.05. ಹಾವೇರಿ 78.32ರಷ್ಟು ಮತದಾನವಾಗಿದೆ. • ಬೆಳಗಾವಿ ಶೇ.72 • • ವಿಜಯಪುರ ಶೇ.63 • ಕಲಬುರಗಿ ಶೇ.56 • ಬೀದರ್ ಶೇ.59 • ರಾಯಚೂರು ಶೇ.60 • ಕೊಪ್ಪಳ ಶೇ.71 ಉತ್ತರ ಕನ್ನಡ ಶೇ.72 • ಬಳ್ಳಾರಿ ಶೇ.66 • ಚಿತ್ರದುರ್ಗ ಶೇ.74 • ಶಿವಮೊಗ್ಗ ಶೇ.71 ತುಮಕೂರು ಶೇ.74 • ಚಿಕ್ಕಬಳ್ಳಾಪುರ ಶೇ.78 • ಕೊಲಾರ ಶೇ.76 • ಬೆಂಗಳೂರು ಗ್ರಾಮಾಂತರ ಶೇ.77 • ರಾಮನಗರ ಶೇ.80 • ಮಂಡ್ಯ ಶೇ.77, • ಹಾಸನ ಶೇ.76 • ದಕ್ಷಿಣ ಕನ್ನಡ ಶೇ.70, • ಮೈಸೂರು ಶೇ.59 • ಬಿಬಿಎಂಪಿ ಕೇಂದ್ರ ಶೇ.51, • ಬಿಬಿಎಂಪಿ ಉತ್ತರ ಶೇ.49 • ಬಿಬಿಎಂಪಿ ದಕ್ಷಿಣ ಶೇ.49, • ಬೆಂಗಳೂರು ನಗರ ಶೇ.50ಮತದಾನವಾಗಿದೆ. ಒಟ್ಟಿನಲ್ಲಿ ರಾಜ್ಯಾದ್ಯಂತ ಉತ್ತಮ ಮತದಾನವಾಗಿದೆ. ಮತದಾರ ಪ್ರಭು ಯಾವ ಪಕ್ಷಗಳಿಗೆ ಮಣೆ ಹಾಕಲಿದ್ದಾನೆ ಎಂಬುದು ಮೇ 15ರಂದು ಬಹಿರಂಗಗೊಳ್ಳಲಿದೆ.

ವಿದ್ಯಾನಗರಿ ಧಾರವಾಡದಲ್ಲಿ ಶೇ. 70.64 ಮತದಾನ

ಧಾರವಾಡ : ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರುವ ಸಚಿವ ವಿನಯ ಕುಲಕರ್ಣಿ ಅವರ ತವರು ಜಿಲ್ಲೆ ಧಾರವಾಡದಲ್ಲೂ ಉತ್ತಮ ಮತದಾನವಾಗಿದೆ. ಜಿಲ್ಲೆಯಾದ್ಯಂತ ಒಟ್ಟು 70.64 ಮತದಾನವಾಗಿದ್ದು, ಸಚಿವ ವಿನಯ ಕುಲಕರ್ಣಿ ಹಾಗೂ ಬಿಜೆಪಿಯ ಅಮೃತ ದೇಸಾಯಿ ಅವರು ಪ್ರತಿನಿಧಿಸಿದ್ದ ಧಾರವಾಡ ವಿಧಾನ ಸಭಾ ಕ್ಷೇತ್ರ-71ರಲ್ಲಿ 74.85 ಪ್ರತಿಶತ ಮತದಾನವಾದರೆ, ಶಾಸಕ ಅರವಿಂದ ಬೆಲ್ಲದ ಹಾಗೂ ಇಸ್ಮಾಯಿಲ್ ತಮಟಗಾರ ನಡುವೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದಲ್ಲಿ ಶ್ರೇ 61.31 ಜಗದೀಶ ಶೆಟ್ಟರ್ ಹಾಗೂ ಮಹೇಶ ನಾಲವಾಡನಡುವಿನ ಕದನ ಕುತೂಹಲಕ್ಕೆ ಕಾರಣವಾಗಿದ್ದ ಹುಬ್ಬಳ್ಳಿ ಸೆಂಟ್ರಲ್ ವಿಧಾನ ಕ್ಷೇತ್ರದಲ್ಲಿ ಶೇ. 60.17ರಷ್ಟು ಮತದಾನವಾಗುವ ಮೂಲಕ ಜಿಲ್ಲೆಯ ಕನಿಷ್ಟ ಮತದಾನವಾದ ಕ್ಷೇತ್ರವಾಗಿದೆ. ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಪ್ರತಿನಿಧಿಸುವ ನವಲಗುಂದ ವಿಧಾನ ಸಭಾಕ್ಷೇತ್ರದಲ್ಲಿ ಶೇ 77.97 ರಷ್ಟು ಮತದಾನವಾಗಿದೆ. ಇನ್ನೂ ಸಚಿವ ಸಂತೋಷ ಲಾಡ್ ಅವರು ಪ್ರತಿನಿಧಿಸುವ ಕ್ಷೇತ್ರ ಕಲಘಟಗಿಯಲ್ಲಿ ಶೇ 78.87 ರಷ್ಟು ಮತದಾನವಾಗುವ ಮೂಲಕ ಜಿಲ್ಲೆಯ ಅತಿಹೆಚ್ಚು ಮತದಾನವಾದ ಕೇಂದ್ರವಾಗಿದೆ. ಹುಬ್ಬಳ್ಳಿ ಪೂರ್ವ ವಿಧಾನ ಸಭಾ ಕ್ಷೇತ್ರದಲ್ಲಿ ಶೇ 68.59ರಷ್ಟು ಮತದಾನವಾಗಿದೆ. ಇನ್ನೂ ಕುಂದಗೋಳವಿಧಾನ ಸಭಾ ಕ್ಷೇತ್ರದಲ್ಲಿ 78.27 ಮತದಾನವಾಗಿದೆ.

ಮತದಾನಕ್ಕೆ ಸಾಕ್ಷಿಯಾದ ಯುವ ಜೋಡಿಗಳು, ಮೊದಲ ಮತದಾನ ಮಾಡಿದ ಯುವಕ,ಯುವತಿಯರು

ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಶನಿವಾರ ನಡೆದ ಮತದಾನಕ್ಕೆ ರಾಜ್ಯಾದ್ಯಂತ ವಿಶಿಷ್ಟ ಘಟನೆಗಳು ಸಾಕ್ಷಿಯಾದವು. ಅನೇಕರು ಮದುವೆ ಮನೆಯಿಂದ ಬಂದು ಮತದಾನ ಮಾಡಿದರೆ, ಕೆಲವರು ಸೂತಕದ ನಡುವೆಯೂ ತಮ್ಮ ಹಕ್ಕು ಚಲಾಯಿಸಿದ್ದಾರೆ. ಯುವಕ, ಯುವತಿಯರು ಮೊದಲ ಬಾರಿಗೆ ತಮ್ಮ ಮತ ಚಲಾವಣೆ ಮಾಡಿದರೆ, ಅನೇಕ ಹಿರಿಯ ನಾಗರಿಕರು ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಇತರರ ಸಹಾಯದಿಂದ ತಮ್ಮ ವಯಸ್ಸುನ್ನು ಮರೆತು ಮತಗಟ್ಟೆಗಳತ್ತ ಹೆಜ್ಜೆ ಹಾಕಿ ಹಕ್ಕು ಚಲಾಯಿಸಿದ್ದು ವಿಶೇಷವಾಗಿತ್ತು. ಧಾರವಾಡ ಕೆ. ಇ. ಬೋರ್ಡ ಶಾಲೆಯಲ್ಲಿ ಮದುಮಗಳೊಬ್ಬರು ಮದುವೆ ಮನೆಯಿಂದ ಬಂದು ಮತದಾನದಲ್ಲಿ ಪಾಲ್ಗೊಂಡರೆ ಹೆಬ್ಬಳ್ಳಿಯ ಇಬ್ಬರು ಸಹೋದರರು ಮದುವೆಯ ನಂತರ ಬಂದು ತಮ್ಮ ಹಕ್ಕನ್ನು ಚಲಾಯಿಸಿ ಎಲ್ಲರ ಗಮನ ಸೆಳೆದರು. ಅನೇಕ ಕಡೆ ಶತಾಯುಷಿಗಳು, ಶತಮಾನಕ್ಕೆ ಸಮೀಪಿಸುತ್ತಿರುವ ಹಲವರು ಮತಕೇಂದ್ರಗಳಿಗೆ ಬಂದು ಮತ ಚಲಾವಣೆ ಮಾಡಿದರು.

ತುಂಬು ಗರ್ಭಿಣಿಯ ಸ್ವಯಂ ಪ್ರೆರಿತ ಸೇವೆ

ಧಾರವಾಡ : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲಬಾರಿಗೆ ಮಹಿಳಾ ಮತದಾರರನ್ನು ಪ್ರೊತ್ಸಾಹಿಸಲು ಸ್ಥಾಪಿಸಲಾಗಿರುವ ಸಖಿ/ಗುಲಾಬಿ ಮತಗಟ್ಟೆಗಳು ಈ ಬಾರಿಯ ಚುನಾವಣೆಯ ಆಕರ್ಷಣೆಯೆನಿಸಿದವು. ಧಾರವಾಡದ ಸಾಧನಕೇರಿಯ ಬೇಂದ್ರೆ ಭವನದ ಪಿಂಕ್ ಮತಗಟ್ಟೆಯಲ್ಲಿ ೯ ತಿಂಗಳ ತುಂಬು ಗರ್ಭಿಣಿಯಾಗಿರುವ ಆಶಾ ಕಾರ್ಯಕರ್ತೆಯೊಬ್ಬರು ಸ್ವಯಂಪ್ರೆÃರಿತರಾಗಿ ಚುನಾವಣಾ ಕರ್ತವ್ಯ ನಿರ್ವಹಿಸಿದ್ದು ಎಲ್ಲರಿಗೂ ಮಾದರಿಯೆನಿಸಿತು. ಬೇಂದ್ರೆ ಭವನದ ಮತಗಟ್ಟೆ ಸಮೀಪ ಸ್ಥಾಪಿಸಲಾಗಿದ್ದ ಮತದಾರರ ಸಹಾಯಕೇಂದ್ರದಲ್ಲಿ ಪೂಜಾ ಚೊಳ್ಳಿ ಎಂಬ ೯ ತಿಂಗಳ ಗರ್ಭಿಣಿ ಉತ್ಸಾಹದಿಂದ ಕೆಲಸ ನಿರ್ವಹಿಸುತ್ತಿದ್ದುದನ್ನು ಗಮನಿಸಿದ ಜಿಲ್ಲಾ ಸ್ವಿÃಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ. ಸಿಇಓ ಆರ್.ಸ್ನೆÃಹಲ್ ಅವರು ಚುನಾವಣೆ ಕರ್ತವ್ಯದಿಂದ ವಿನಾಯತಿ ಪಡೆಯಬಹುದಿತ್ತಲ್ಲವೆ ಎಂದು ಪ್ರಶ್ನಿಸಿದಾಗ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಈ ಮಹತ್ವದ ಕಾರ್ಯದಲ್ಲಿ ಭಾಗಿಯಾಗುವ ಅವಕಾಶ ಮಹತ್ವದ್ದು ಅದಕ್ಕಾಗಿ ಅಭಿಮಾನದಿಂದ ಭಾಗವಹಿಸಿದ್ದೆÃನೆ. ಕರ್ತವ್ಯ ನಿರ್ವಹಣೆಯನ್ನು ಪ್ರಯಾಸವಿಲ್ಲದೆ ಸಂತಸದಿಂದ ಮಾಡಿದ್ದೆÃನೆ ಎಂದು ಹೇಳಿದರು. ಹೆರಿಗೆಗೆ ಕೇವಲ ೨ ವಾರ ಉಳಿದಿರುವಾಗ ಪೂಜಾ ಚೊಳ್ಳಿಯವರು ಚುನಾವಣಾ ಕೆಲಸದಲ್ಲಿ ತೊಡಗಿಸಿಕೊಂಡಿರುವದು ಮಹಿಳೆಯರ ಸಾಮರ್ಥ್ಯ ಮತ್ತು ಪ್ರಜಾಪ್ರಭುತ್ವದ ಮೇಲೆ ಅವರು ಹೊಂದಿರುವ ಪ್ರಿÃತಿಯ ದ್ಯೊÃತಕವಾಗಿದೆ. ಜಿಲ್ಲೆಯ ಎಲ್ಲ ೧೫ ಪಿಂಕ್/ಸಖಿ ಮತಗಟ್ಟೆಗಳಲ್ಲಿ ಮಹಿಳೆಯರೆ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಾಗಿ ನೇಮಕ ಮಾಡಲಾಗಿತ್ತು. ಯಾರಿಗೂ ಕಡಿಮೆ ಇಲ್ಲದಂತೆ ಅವರು ನಿರ್ವಹಿಸಿದ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಜಿಲ್ಲಾ ಸ್ವಿÃಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ. ಸಿಇಓ ಆರ್.ಸ್ನೆಹಲ್ ಅವರು ಸಂತಸ ವ್ಯಕ್ತಪಡಿಸಿದರು.

ಶಾಂತಿಯುತ ಮತದಾನಕ್ಕೆ ಜಿಲ್ಲಾಧಿಕಾರಿ ಸಂತಸ

ಧಾರವಾಡ : ಕರ್ನಾಟಕ ವಿಧಾನಸಭೆ ಚುನಾವಣೆ-೨೦೧೮ಕ್ಕೆ ಜಿಲ್ಲೆಯ ೧೬೨೮ ಮತಗಟ್ಟೆಗಳಲ್ಲಿ ಶನಿವಾರ ನಡೆದ ಮತದಾನ ಶಾಂತಿಯುತವಾಗಿತ್ತು. ಮತದಾನ ಸಿಬ್ಬಂದಿ ಹಾಗೂ ಮತದಾರರ ಉತ್ಸಾಹ ಕಂಡು ಸಂತಸವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹರ್ಷವ್ಯಕ್ತಪಡಿಸಿದ್ದಾರೆ. ಬೆಳಿಗ್ಗೆಯಿಂದಲೇ ಧಾರವಾಡದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಮತಗಟ್ಟೆಗಳ ಸಿದ್ದತೆ, ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಒದಗಿಸಲಾಗಿರುವ ಸೌಲಭ್ಯಗಳು, ಮತಗಟ್ಟೆ ಸುತ್ತಮುತ್ತ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಏಜೆಂಟರುಗಳ ಚಟುವಟಿಕೆಗಳನ್ನು ಪರಿಶೀಲಿಸಿದರು. ಈ ಬಾರಿ ಇ.ವಿ.ಎಂ. ಯಂತ್ರಗಳೊಂದಿಗೆ ವಿ.ವಿ.ಪ್ಯಾಟ್ ಯಂತ್ರಗಳನ್ನು ಬಳಸುತ್ತಿರುವುದು ಮತದಾರರ ಖಾತ್ರಿಗೆ ಅನುಕೂಲವಾಗಿದೆ. ಕಳೆದ ೩ ತಿಂಗಳಿಂದ ಜಿಲ್ಲೆಯಾದ್ಯಂತ ವ್ಯಾಪಕ ಜಾಗೃತಿ ಚಟುವಟಿಕೆಗಳನ್ನು ನಡೆಸಲಾಗಿದೆ. ಮತದಾನದ ಆರಂಭದ ವೇಳೆ ಕೆಲವೆಡೆ ತಾಂತ್ರಿಕ ತೊಂದರೆಗಳು ಕಂಡುಬಂದಿದ್ದವು ಪರಿಣಿತ ಇಂಜಿನೀಯರಗಳು ಯಾವುದೇ ವಿಳಂಬಮಾಡದೇ ಸರಿಪಡಿಸಿದ್ದಾರೆ. ಅಗತ್ಯವಿರುವೆಡೆ ಹಿರಿಯ ನಾಗರೀಕರು ಮತ್ತು ವಿಕಲಚೇತನರಿಗಾಗಿ ಜಿಲ್ಲೆಯಲ್ಲಿ ೩೩೨ ಗಾಲಿ ಕುರ್ಚಿಗಳನ್ನು ಪೂರೈಸಿರುವುದು ಅವರಿಗೆ ಅನುಕೂಲವಾಗಿದೆ ಎಂದು ಜಿಲ್ಲಾಧಿಕಾರಿಗಳು ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಬೆಂಗಳೂರಿನ ಮಹಾಲಕ್ಷಿö್ಮÃ ಲೇಔಟ್ ಮತಕ್ಷೆÃತ್ರದ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇರುವುದರಿಂದ ಅಂಚೆ ಮೂಲಕ ನನ್ನ ಮತವನ್ನು ಚಲಾಯಿಸಿದ್ದೆÃನೆ ಎಂದು ಸಂತಸದಿಂದ ಹೇಳಿದ ಅವರು ಧಾರವಾಡದಲ್ಲಿ ಮತ ಚಲಾಯಿಸಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸ್ವಯಂ ಪ್ರೆÃರಿತರಾಗಿ ಕೆ.ಇ.ಬೋರ್ಡ ಶಾಲೆಯ ಮತಗಟ್ಟೆಯ ಬಳಿ ಫೋಟೋ ತೆಗೆದುಕೊಂಡಿದ್ದು ವಿಶೇಷವಾಗಿತ್ತು.

ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡ ಜನತೆ

ಹುಬ್ಬಳ್ಳಿ : ೨೦೧೮ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಶನಿವಾರ ನಡೆದ ಮತದಾನದಲ್ಲಿ ಮತದಾರರು ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಿದರು. ಮತಗಟ್ಟೆಗಳಲ್ಲಿ ಮುಂಜಾನೆ ೭ ರಿಂದಲೇ ಮತದಾನ ಪ್ರಾರಂಭವಾಯಿತು. ಬೇಸಿಗೆಯ ದಿನಗಳಾಗಿರುವದರಿಂದ ಜನರು ಬೆಳಗಿನ ಅವಧಿಯಲ್ಲಿಯೇ ಮತದಾನ ಮಾಡುವ ಉತ್ಸಾಹ ತೋರಿದರು. ನವಲಗುಂದ ಕುಂದಗೋಳ ಹಾಗೂ ಕಲಘಟಗಿ ಮತ ಕ್ಷೆÃತ್ರದ ವ್ಯಾಪ್ತಿಯಲ್ಲಿ ಬುರುವ ಭಂಡಿವಾಡ, ಯರಗುಪ್ಪಿ, ಹಿರೇನರ್ತಿ, ಬೆನಕನಹಳ್ಳಿ, ಕುಂದಗೋಳ ಪಟ್ಟಣ ಪಂಚಾಯತಿ, ಸಂಶಿ, ಹಾಗೂ ಮಿಶ್ರಿಕೋಟಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿ ದೃಶ್ಯಗಳು ಕಂಡು ಬಂದವು.

ಮಹಿಳೆಯರ ಮನೆಗೆದ್ದ ಪಿಂಕ್ ಮತಗಟ್ಟೆ

ಹುಬ್ಬಳ್ಳಿ : ಚುನಾವಣಾ ಆಯೋಗದಿಂದ ಇದೇ ಮೊದಲ ಬಾರಿ ಸ್ಥಾಪಿಸಲಾಗಿರುವ ಪಿಂಕ್ /ಮಹಿಳಾ ಸ್ನೆÃಹಿ ಸಖಿ ಮತಗಟ್ಟೆಗಳು ಮಹಿಳೆಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿವೆ. ಕುಂದಗೋಳ ಪಟ್ಟಣ ಪಂಚಾಯಿತಿಯ ೩೯ನೇ ಮತಗಟ್ಟೆಯನ್ನು ಚುನಾವಣಾ ಆಯೋಗ ಪಿಂಕ್ ಮತಗಟ್ಟೆಯನ್ನಾಗಿ ಗುರುತಿಸಿದ್ದು. ಮತಗಟ್ಟೆಯನ್ನು ಮದುವೆಯ ಮನೆಯಂತೆ ಸಿಂಗರಿಸಿದ್ದು ಕಂಡು ಬಂತುಗಿಡೀ ಮತಗಟ್ಟೆಯಲ್ಲಿ ಗುಲಾಬಿ ಬಣ್ಣದ ಉಡುಪು ಧರಿಸಿದ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸ ನಿರ್ವಹಿಸಿದರು.ರಕ್ಷಣಾ ಸಿಬ್ಬಂದಿಯೂ ಸಹ ಮಹಿಳೆಯರೇ ಆಗಿದ್ದರು. ಈ ಮತಗಟ್ಟೆಗೆ ಸಂಬಂಧಿಸಿದಂತೆ ಒಟ್ಟು ೭೮೯ ಮತದಾರರಿಂದ್ದು, ಇದರಲ್ಲಿ ೪೧೩ ಮಹಿಳಾ ಮತದಾರರಿರುವುದು ವಿಶೇಷವಾಗಿದೆ. ಮಧ್ಯಾಹ್ನ ೧೨ ಗಂಟೆವರೆಗೆ ಜರುಗಿದ ಮತದಾನದಲ್ಲಿ ಒಟ್ಟು ೧೮೩ ಮಹಿಳೆಯರು ಹಾಗೂ ೧೩೭ ಪುರುಷರು ಮತ ಚಲಾಯಿಸಿದ್ದು ಕಂಡು ಬಂತು. ಪುರುಷರಿಗಿಂತ ಮಹಿಳೆಯರು ಮತದಾನ ಪ್ರಮಾಣ ಹೆಚ್ಚಿರುವುದು ಪಿಂಕ್ ಮತಗಟ್ಟೆಯ ಮಹಿಳೆಯರ ಮನಗೆದ್ದಿರುವುದಕ್ಕೆ ಸಾಕ್ಷಿಯಾಗಿದೆ. ಚುನಾವಣಾ ಆಯೋಗಿದಂದ ಈ ಬಾರಿ ವಿಕಲಚೇತನರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ವೀಲ್ ಚೇರ್‌ಗಳ ಸೌಲಭ್ಯ ಒದಗಿಸಲಾಗಿತ್ತು. ಸಂಶಿ ಗ್ರಾಮದ ವಿಶೇಷಚೇತನ ಯುವತಿ ಮಲ್ಲವ್ವ ಗಂಜಿ ವೀಲ್‌ಚೇರ್‌ನಲ್ಲಿ ತನ್ನ ತಾಯಿಯೊಂದಿಗೆ ಬಂದು ೧೨೪ ಮತಗಟ್ಟೆಯಲ್ಲಿ ಮೊದಲಬಾರಿ ಸಂತಸದಿಂದ ಮತ ಚಲಾಯಿಸಿದರು

ಮತಕೇಂದ್ರಗಳ ಎದುರು ಝಣ ಝಣ ಕಾಂಚಾಣ

ಮತಕೇಂದ್ರಗಳ ಎದುರು ಝಣ ಝಣ ಕಾಂಚಾಣ ಬೆಂಗಳೂರು : ಬೆಂಗಳೂರಿನ ಬ್ಯಾಟರಾಯಪೂರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಬಹಿರಂಗವಾಗಿ ಹಣ ಹಂಚುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಂದು ವೋಟಿಗೆ ಮುನ್ನೂರು, ಐದು ನೂರು ರೂಪಾಯಿ ಗೆ ಹಂಚಿಕೆ ಮಾಡಲಾಗಿದೆ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸ್ಪರ್ಧಿಸಿರುವ ವರುಣಾ ಕೇತ್ರದಲ್ಲಿ ಮತದಾರರಿಗೆ ಕವರ್ ನಲ್ಲಿ ಹಣ ಹಂಚಿಕೆ ಮಾಡಲಾಗಿದೆ. ಕವರ್ ನಲ್ಲಿ ಮಂಜುನಾಥಸ್ವಾಮಿಯ ಭಾವಚಿತ್ರವಿಟ್ಟು, ಐದುನೂರರ ಎರಡು ನೋಟಿಗಳಿಡಲಾಗಿದ್ದು, ಯಾರು ತೆಗೆದುಕೊಳ್ಳದಿದ್ದರೂ ಬಲವಂತವಾಗಿ ಮನೆಯ ಒಳಗೆ ಹಾಕಿ ಹೋಗಲಾಗಿದೆ. ಹೀಗೆ ರಾಜ್ಯಾದ್ಯಂತ ವಿವಿಧ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳು ಜಿದ್ದಿಗೆ ಬಿದ್ದವರಂತೆ ಹಣ ಹಂಚುತ್ತಿದ್ದು, ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ಜಾಣಕುರುಡು ತೋರಿಸಿದ್ದಾರೆ. ಎಲ್ಲವೂ ಕುಲ್ಲಂಕುಲ್ಲಾ ನಡೆಯುತ್ತಿದ್ದರೂ ಅಸಹಾಯಕರಂತೆ ವರ್ತಿಸುತ್ತಿರುವುದು ಮಾತ್ರ ದುರಂತದ ಸಂಗತಿಯಾಗಿದೆ ಎಂದು ಪ್ರಜ್ಞಾವಂತ ಮತದಾರರು ಆಕ್ರೋಶ ವ್ಯಕ್ತಪಡಿಸಿದರು.

ಸೂತಕದ ನಡುವೆ ಮತ ಚಲಾವಣೆ ಮಾಡಿದ ಕುಟುಂಬ

ಯಾದಗಿರಿ/ ಹಾಸನ: ಯಾದಗಿರಿ ಜಿಲ್ಲೆಯ ಶಹಪೂರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನಗನೂರ ಗ್ರಾಮದ ಸೋಮಣ್ಣ ಅವರ ತಾಯಿ ನಿಧನರಾಗಿದ್ದರು. ಆದರೆ ತಾಯಿಯ ನಿಧನದ ನಡುವೆಯೂ ಮತದಾನ ಮಾಡಿ ಆನಂತರ ಅಂತ್ಯಕ್ರಿಯೆ ನೆರವೇರಿಸಿದ ಸೋಮಣ್ಣ ಕುಟುಂಬ ಸಾವಿನ ನೋವಿನ ನಡುವೆಯೇ ಮನೆಯಿಂದ ಕೆಲವು ಕಿಲೋ ಮೀಟರ್ ದೂರದಲ್ಲಿದ್ದ ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಿ, ಇತರರಿಗೆ ಮಾದರಿಯಾದರು. ಇದೇ ವೇಳೆ ಮತ ಚಲಾವಣೇ ಮಾಡಲು ಹೊರಟಿದ್ದ ಶಾರದಮ್ಮ ಹಾಗೂ ಕಮಲಮ್ಮ ಸೇರಿ ಹನ್ನೊಂದು ಜನ ತೆರಳುತ್ತಿದ್ದ ಆಟೋ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಹಾಸನ ಜಿಲ್ಲೆಯ ಬೇಲೂರ ತಾಲೂಕಿನ ರಾಮೇನಹಳ್ಳಿ ಬಳಿ ಸಂಭವಿಸಿದೆ. ಇದರಿಂದಾಗಿ ಇಬ್ಬರು ಸಾವನ್ನಪ್ಪಿದ್ದು, 11 ಜನರಿಗೆ ಗಾಯಗಳಾಗಿವೆ. ಇಬ್ಬರು ಮಹಿಳೆಯರು ಮತ ಚಲಾವಣೆ ಮಾಡುವ ಮುನ್ನವೇ ಸಾವನ್ನಪ್ಪಿದ್ದಾರೆ. ಇನ್ನುಳಿದ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆರು ಗಂಟೆಯವರೆಗೆ ಮಾತ್ರ ಮತದಾನಕ್ಕೆ ಅವಕಾಶ

ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆಗೆ ಮತ ಚಲಾವಣೆ ಮಾಡಲು ಕೇವಲ ಆರು ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದೆ ಎಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. 6.30ರವರೆಗೆ ಸಮಯಾವಕಾಶವಿಲ್ಲ. ಇದು ತಪ್ಪು ಸಂದೇಶವಾಗಿದ್ದು, ಅಂತಹ ಆದೇಶ ಚುನಾವಣಾ ಆಯೋಗದಿಂದ ಹೊರಬಿದ್ದಿಲ್ಲ. ಹೀಗಾಗಿ ಮತದಾರರು ಈ ಬಗ್ಗೆ ತಪ್ಪು ತಿಳಿದುಕೊಳ್ಳಬಾರದು. ಸಂಜೆ ಆರು ಗಂಟೆಯ ಒಳಗಡೆಯೇ ಮತಕೇಂದ್ರದ ಎದುರು ನಿಂತು ಮತಚಲಾವಣೆ ಮಾಡಬೇಕು. ಆರು ಗಂಟೆಯೊಳಗೆ ಮತಕೇಂದ್ರದ ಎದುರು ನಿಂತವರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದೆ. ಹೀಗಾಗಿ ಮತದಾರರು ಈ ಬಗ್ಗೆ ವಿಳಂಬ ಮಾಡದೆ ಮತದಾನ ಕೇಂದ್ರದತ್ತ ದಾಪುಗಾಲು ಹಾಕಬೇಕು ಎಂದು ಮನವಿ ಮಾಡಿದೆ. ಈಗಾಗಲೇ ರಾಜ್ಯಾದ್ಯಂತ ವಿವಿದೆಢೆ ವರುಣನ ಅಬ್ಬರ ಜೋರಾಗಿದ್ದು, ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.

ರಾಜ್ಯಾದ್ಯಂತ ಶೇ. 56ರಷ್ಟು ಮತದಾನ

ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆಗೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 222 ವಿಧಾನ ಸಭಾ ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶೇ. 56ರಷ್ಟು ಮತದಾನವಾಗಿದೆ. ಬೆಳಗ್ಗೆ 7ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ಚುರುಕು ಪಡೆದಿದ್ದ ಮತದಾನ ಪ್ರಕ್ರಿಯೆ ಮಧ್ಯಾಹ್ನ ಸ್ವಲ್ಪ ಮಂದಗತಿ ಪಡೆದಿತ್ತು. ಮತ್ತೇ ಮೂರು ಗಂಟೆಯಿಂದ ವೇಗ ಪಡೆದಿದ್ದು, ಕರಾವಳಿಯ ಪ್ರದೇಶವಾದ ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 60 ದಾಟಿದೆ. ಉತ್ತರ ಕರ್ನಾಟಕ ಭಾಗದಲ್ಲಂತೂ ಮತದಾರರು ಬಿರು ಬಿಸಲನ್ನು ಲೆಕ್ಕಿಸದೆ ಮತ ಚಲಾಯಿಸುತ್ತಿದ್ದಾರೆ. ರಾಜ್ಯದ ರಾಜಧಾನಿಯಾಗಿರುವ ಬೆಂಗಳೂರಿನ ಹಲವಡೆ ನಿರಸ ಪ್ರತಿಕ್ರಿಯೆ ಕಂಡು ಬಂದಿದೆ. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಕೇವಲ ಶೇ. 35 ರಷ್ಟು ಆಗಿದೆ. ಸಂಜೆ ವೇಳೆಗೆ ಇನ್ನಷ್ಟು ಚುರುಕುಗೊಳ್ಳುವ ಸಾಧ್ಯತೆಯಿದ್ದು, ಈ ಬಾರಿ ಒಂದೂವರೆ ಗಂಟೆ ಹೆಚ್ಚಿನ ಅವಕಾಶವಿರುದರಿಂದ ಶೇ. 70ಕ್ಕಿಂತ ಹೆಚ್ಚು ಪ್ರತಿಶತ ದಾಟುವ ಸಾಧ್ಯತೆಯಿದೆ

ನಡೆದಾಡುವ ದೇವರು, ಧರ್ಮಾಧೀಕಾರಿ ಸೇರಿ ಹಲವರಿಂದ ಮತದಾನ

ತುಮಕೂರ/ಧರ್ಮಸ್ಥಳ : ನಡೆದಾಡುವ ದೇವರೆಂದೆ ಖ್ಯಾತಿ ಪಡೆದಿರುವ ಶತಾಯುಷಿ ಹಾಗೂ 111 ವರ್ಷದ ಶ್ರೀ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ತಮ್ಮಹಕ್ಕನ್ನು ಚಲಾಯಿಸಿದರು. ಕಿರಿಯ ಸಿದ್ಧಗಂಗಾ ಶ್ರೀಗಳು ಹಿರಿಯ ಸ್ವಾಮೀಜಿಗೆ ಸಾಥ್ ನೀಡಿದರು. ಇದೇ ವೇಳೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದಲ್ಲಿ ಮತ ಚಲಾವಣೆ ಮಾಡಿದರು. ಸಿಎಂ ಸಿದ್ದರಾಮಯ್ಯ ಅವರು ಪುತ್ರ ಯತೀಂದ್ರ ಜೊತೆಗೆ ಸಿದ್ದರಾಮನಹುಂಡಿಯಲ್ಲಿ ಮತಚಲಾವಣೆ ಮಾಡಿದರು. ಬೆಂಗಳೂರಿನಲ್ಲಿ ವರನಟ ಡಾ. ರಾಜಕುಮಾರ್ ಪುತ್ರರಾದ ಶಿವರಾಜ್ ಕುಮಾರ, ಪುನೀತ್, ರಾಘವೇಂದ್ರರಾಜ್ ಕುಮಾರ ಅವರು ಕುಟುಂಬ ಸಮೇತ ಆಗಮಿಸಿ ಮತಚಲಾವಣೆ ಮಾಡಿದರು. ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ ತಮ್ಮ ಪೋಷಕರೊಂದಿಗೆ ಆಗಮಿಸಿ ಮತದಾನ ಮಾಡಿದರೆ, ಇದೇ ವೇಳೆ ಹಿರಿಯ ನಟ ಹಾಗೂ ಮಾಜಿ ಸಚಿವ ಅನಂತಕುಮಾರ ಕೂಡ ಮತದಾನ ಮಾಡಿದರು.

ರಾಜ್ಯಾದ್ಯಂತ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ

ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆಗೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಂತೂ ಮತದಾರರು ಬಿರು ಬಿಸಲನ್ನು ಲೆಕ್ಕಿಸದೆ ಮತ ಚಲಾಯಿಸಿದರು. ಮಧ್ಯಾಹ್ನ 1.30ರವರೆಗೆ ಗದಗ 43, ಹಾವೇರಿ 43.33 ಬಾಗಲಕೋಟೆ 40 ಧಾರವಾಡ 40, ಬೆಳಗಾವಿ ಹೀಗೆ ಎಲ್ಲಡೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ರಾಜ್ಯದ ರಾಜಧಾನಿಯಾಗಿರುವ ಬೆಂಗಳೂರಿನ ಹಲವಡೆ ನಿರಸ ಪ್ರತಿಕ್ರಿಯೆ ಕಂಡು ಬಂದಿದೆ. ಸಂಜೆ ವೇಳೆಗೆ ಇನ್ನಷ್ಟು ಚುರುಕುಗೊಳ್ಳುವ ಸಾಧ್ಯತೆಯಿದ್ದು, ಶೇ. 70ಕ್ಕಿಂತ ಹೆಚ್ಚು ಪ್ರತಿಶತ ದಾಟುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇನ್ನೂಳಿದಂತೆ ಮಂಗಳೂರು, ಉಡುಪಿ, ಮೈಸೂರು, ರಾಮನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರ, ಚಿತ್ರದುರ್ಗ, ದಾವಣೆಗೆರೆ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕಲಬುರಗಿ, ಯಾದಗಿರಿ, ಬೀದರ, ಕೊಪ್ಪಳ, ರಾಯಚೂರ, ಬಳ್ಳಾರಿ ಜಿಲ್ಲೆಯಲ್ಲೂ ಮತದಾನಕ್ಕೆ ಮತದಾರರು ಉತ್ತಮ ಸ್ಪಂದನೆ ನೀಡಿದ್ದು, ಸಂಜೆ ವೇಳೆಗೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ರಾಜ್ಯದಲ್ಲಿ ಕಾಂಗ್ರೆಸ್ 125 ಸೀಟ್ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಪರ ಅಲೆಯಿದ್ದು, ನಾವು 125 ಸೀಟಗಳನ್ನು ದಾಟುತ್ತೇವೆ. ಮತ್ತೇ ಅಧಿಕಾರಕ್ಕೆ ಬರುತ್ತವೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಅವರು ಶನಿವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. ಬಿಜೆಪಿ 70 ದಾಟಲ್ಲ ಜೆಡಿಎಸ್ 20-25ಗೆ ತೃಪ್ತಿಪಟ್ಟುಕೊಳ್ಳುತ್ತಿದೆ ಎಂದು ಭವಿಷ್ಯ ನುಡಿದರು. ಕೇಂದ್ರ ಸರ್ಕಾರ ಐಟಿ ಇಲಾಖೆಯನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೊದಿ ಹಾಗೂ ಅಮಿತ್ ಶಾ ಅವರ ಅಣತಿಯಂತೆ ಆದಾಯ ತೆರಿಗೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಇದು ಸರಿಯಾದ ಬೆಳವಣಿಗೆಯಲ್ಲ ಎಂದು ಕಿಡಿಕಾರಿದರು.

ಬಿಜೆಪಿ-ಕಾಂಗ್ರೆಸ್ ನಡುವೆ ಪರಸ್ಪರ ಮಾತಿನ ಚಕಮಕಿ

ಬೆಂಗಳೂರು : ರಾಜ್ಯದ ಪ್ರತಿಷ್ಠಿತ ಕಣವಾಗಿರುವ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಗಲಾಟೆ ಸಂಭವಿಸಿದೆ. ಅಜಾದ್ ನಗರ ಬೂತ್ ನಲ್ಲಿ ಕಾಂಗ್ರೆಸನ ಅಭ್ಯರ್ಥಿ ಜಮೀರ್ ಅಹ್ಮದ ಅವರು ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಸಂಬಂಧ ಸ್ಥಳಕ್ಕೆ ದೌಡಾಯಿಸಿದ ಬಿಜೆಪಿ ಅಭ್ಯರ್ಥಿ ಲಕ್ಷ್ಮೀ ನಾರಾಯಣ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿನಾರಾಯಣ ನಡುವೆ ವಾಗ್ವಾದ ನಡೆದಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಚುನಾವಣಾಧಿಕಾರಿಗಳು ಹಾಗೂ ಅರೆಸೇನಾ ಪಡೆ ಪರಿಸ್ಥಿತಿ ತಿಳಿಗೊಳಿಸಿದರು. ಹಣ ಹಂಚುತ್ತಿದ್ದ ಜಮೀರ್ ಅಹ್ಮದ ಖಾನ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಬಿಜೆಪಿ ಆಗ್ರಹಿಸಿದೆ. ಈ ವೇಳೆ ಜಮಾಯಿಸಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿಗರು ಪರಸ್ಪರ ತಮ್ಮ ಅಭ್ಯರ್ಥಿಗಳಿಗೆ ಜೈಕಾರ ಹಾಕುವ ಮೂಲಕ ಶಕ್ತಿ ಪ್ರದರ್ಶನ ನಡೆಸಿದರು.

ಮತ ಚಲಾಯಿಸಿದ ದಿಗ್ಗಜರು

ಬೆಂಗಳೂರು : ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ನಾಡಿನೆಲ್ಲಡೆ ಮತದಾನ ಪ್ರಕ್ರಿಯೆಗೆ ಅಭೂತ ಪೂರ್ವ ಬೆಂಬಲ ದೊರೆಯುತ್ತಿದೆ. ಇದೇ ವೇಳೆ ನಟ, ನಟಿಯರು, ಸಿನಿ ದಿಗ್ಗಜರು, ಕ್ರಿಕೆಟ್ ತಾರೆಯರು ಸೇರಿದಂತೆ ಸಂಸದರು, ಸಚಿವರು, ಶಾಸಕರು ಹಾಗೂ ಮಾಜಿ ಸಚಿವರು ಮತಚಲಾವಣೆಯಲ್ಲಿ ಪಾಲ್ಗೊಂಡರು. ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯೆ ಹಾಗೂ ಹಿರಿಯ ನಟಿ ಜಯಮಾಲಾ, ಸಿನಿರಂಗದ ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡ ತಮ್ಮ ಹಕ್ಕು ಚಲಾಯಿಸಿದರು. ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ ಅವರು ಕುಟುಂಬ ಸಮೇತ ಆಗಮಿಸಿ ಬೆಂಗಳೂರಿನ ಬಸವನಗುಡಿಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತಚಲಾವಣೆ ಮಾಡಿದರು. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರು ಕುಟುಂಬ ಸಮೇತ ಆಗಮಿಸಿ ಮತಚಲಾಯಿಸಿದರು. ಬಬಲೇಶ್ವರದಲ್ಲಿ ಸಚಿವ ಎಂ.ಬಿ. ಪಾಟೀಲ ಅವರು ಮತ ಚಲಾವಣೆ ಮಾಡಿದರೆ, ಹಾನಗಲ್ ನಲ್ಲಿ ಪುತ್ರ ಸಂಸದ ಶಿವಕುಮಾರ ಉದಾಸಿ ಜೊತೆಗೆ ಸಿ.ಎಂ. ಉದಾಸಿ ತಮ್ಮ ಹಕ್ಕು ಚಲಾಯಿಸಿದರು. ಧಾರವಾಡದಲ್ಲಿ ಸಚಿವ ವಿನಯ ಕುಲಕರ್ಣಿ ಅವರು ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಮತಚಲಾವಣೆ ಮಾಡಿದರು. ಧಾರವಾಡ ಗ್ರಾಮೀಣ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರು ಹಂಗರಕಿ ಗ್ರಾಮದಲ್ಲಿ ಮತದಾನ ಮಾಡಿದರು. ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕ ಅರವಿಂದ ಬೆಲ್ಲದ ಅವರು ಸರದಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದರು. ದಾವಣಗೆರೆಯಲ್ಲಿ ಜಿಎಂ ಸಿದ್ದೇಶ ಮತ ಚಲಾವಣೆ ಮಾಡುವ ವೇಳೆ ನಾನು ಯಾರು ಅಂತ ಗೊತ್ತಾ ಎಂದು ಕೇಳಿದರೆ, ಆದರೆ ಸಿಬ್ಬಂದಿ ಮಾತ್ರ ನೀವು ಕಾರ್ಡ್ ತೋರಿಸಿ ಅಂತ ಕೇಳಿದ್ದಕ್ಕೆ ಗರಂ ಆದರು. ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ, ಹೊಸಪೇಟೆಯಲ್ಲಿ ಆನಂದಸಿಂಗ್ ಕುಟುಂಬ ಸಮೇತ ಮತಚಲಾವಣೆ ಮಾಡಿದರು.

ಮತಗಟ್ಟೆ ಅಧಿಕಾರಿಗೆ ಅವಾಜ್ ಹಾಕಿದ ಮಾಜಿ ಸಚಿವ

ನರಗುಂದ : ನರಗುಂದ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿರುವ ಮಾಜಿ ಸಚಿವ ಸಿಸಿ ಪಾಟೀಲ ಅವರು ಗರಂ ಆದ ಘಟನೆ ನಡೆದಿದೆ. ಮತಗಟ್ಟೆಯಲ್ಲಿ ಸಿಬ್ಬಂದಿ ಅವರು ಮತಯಂತ್ರದ ಪಕ್ಕದಲ್ಲಿ ನಿಂತಿದ್ದರು. ಇದನ್ನು ಕಂಡು ಕೆಂಡಾಮಂಡಲವಾದ ಅವರು ಸಿಬ್ಬಂದಿ ಮೇಲೆ ದರ್ಪ ತೋರಿದ್ದಾರೆ ಎಂದು ದೂರು ಕೇಳಿಬಂದಿದೆ. ಈ ಸಂಬಂಧ ಗಲಿಬಿಲಿಗೊಂಡ ಚುನಾವಣಾಧಿಕಾರಿಗಳು ಕೂಡಲೇ ಸಮಾಧಾನ ಪಡಿಸಿದರು.

ಮತಯಂತ್ರ ಅಸ್ತವ್ಯಸ್ತಕ್ಕೆ ಜಗದೀಶ ಶೆಟ್ಟರ್ ಅಸಮಾಧಾನ

ಹುಬ್ಬಳ್ಳಿ : ರಾಜ್ಯದ ಗಮನ ಸೆಳೆದಿರುವ ಹುಬ್ಬಳ್ಳಿ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಮತಗಟ್ಟೆ ಅಧಿಕಾರಿಗಳು ಮತಯಂತ್ರವನ್ನು ಸರಿಯಾಗಿ ಇಡದ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಈ ಕ್ಷೇತ್ರದಲ್ಲಿ 23 ಅಭ್ಯರ್ಥಿಗಳು ಕಣದಲ್ಲಿದ್ದು, ,ಮತಯಂತ್ರಗಳನ್ನು ಕ್ರಮವಾಗಿ ಇಟ್ಟಿರಲಿಲ್ಲ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು ಕ್ರಮಬದ್ಧವಾಗಿ ಇಡುವಂತೆ ಸೂಚಿಸಿದರು. ಕೂಡಲೇ ಎಚ್ಚೆತ್ತ ಅಧಿಕಾರಿಗಳು ಅದನ್ನು ಸರಿಪಡಿಸಿದರು. ಆನಂತರ ಜಗದೀಶ ಶೆಟ್ಟರ ಅವರು ತಮ್ಮ ಕುಟುಂಬ ಸಮೇತ ಮತಚಲಾವಣೆ ಮಾಡಿದರು.

ಒಂದು ವೋಟಿಗೆ ಒಂದು ಸಾವಿರ ರೂಪಾಯಿ !

ವರುಣಾ : ಒಂದು ವೋಟಿಗೆ ಒಂದು ಸಾವಿರ ನಂತೆ ಹಣ ಹಂಚಿದ ಘಟನೆ ವರುಣಾ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದಿದೆ. ಹಣ ಹಂಚುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಇದಕ್ಕೆ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಅಲ್ಲಿಂದ ಕಾಂಗ್ರೆಸ್ ಮುಖಂಡರು ಕಾಲುಕಿತ್ತಿದ್ದಾರೆ. ಈ ಸಂಬಂಧ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ತಿಕ್ಕಾಟ ನಡೆದು ಕೆಲ ಕಾಲ ಮಾತಿನ ಚಕಮಕಿ ನಡೆದಿದೆ. ಈ ಬಗ್ಗೆ ಚುನಾವಣಾಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರುಣಾ ಜನತೆ ಆರೋಪಿಸಿದೆ. ಇಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಕಾಂಗ್ರೆಸ್ ಅಭ್ಯರ್ಥಿ ಯಾಗಿರುವುದು ಇಲ್ಲಿ ಸ್ಮರಿಸಬಹುದು.

ಮತಯಂತ್ರಗಳು ಕೈ ಕೊಟ್ಟಿದ್ದರಿಂದ ಪರದಾಡಿದ ಜನತೆ

ಬೆಂಗಳೂರು : ನಾಡಿನ ವಿವಿಧೆಡೆ ಮತದಾನ ಪ್ರಕ್ರಿಯೆ ಬೆಳಗ್ಗೆ 7 ಗಂಟೆಯಿಂದಲೇ ಆರಂಭಗೊಂಡಿದೆ. ಈ ವೇಳೆ ಕೆಲವು ಮತಕೇಂದ್ರಗಳಲ್ಲಿ ಮತಯಂತ್ರಗಳು ಕೈ ಕೊಟ್ಟ ಹಿನ್ನಲೆಯಲ್ಲಿ ಮತದಾರರು ಪರದಾಡಿದ ಘಟನೆ ವರದಿಯಾಗಿದೆ. ಧಾರವಾಡದ ಗುಲಗಂಜಿಕೊಪ್ಪ ಬಡಾವಣೆಯಲ್ಲಿರುವ ಸರಕಾರಿ ಉರ್ದು ಪ್ರಾಥಮಿಕ ಶಾಲೆಯ ಮತಗಟ್ಟೆ ಬೂತ್ ನಂ 156ರಲ್ಲಿ ಒಂದು ಗಂಟೆಗಳ ಕಾಲ ಜನತೆ ಪರದಾಡಬೇಕಾಯಿತು. ಸರದಿ ಸಾಲಿನಲ್ಲಿ ನಿಂತಿದ್ದ ಜನತೆ ಹಿಡಿಶಾಪ ಹಾಕಿದರು. ಅದೇ ರೀತಿ ಬೆಂಗಳೂರಿನ ಹೊಸಕೋಟೆ, ವಿಜಯಪುರ ಜಿಲ್ಲೆಯ ಜಮಖಂಡಿ ತಾಲೂಕಿನ ಮತಗಟ್ಟೆಗಳಲ್ಲಿ ಮತಯಂತ್ರಗಳು ಕೈ ಕೊಟ್ಟಿವೆ. ಕೂಡಲೇ ಮತಯಂತ್ರಗಳನ್ನು ಬದಲಾಯಿಸಲು ಚುನಾವಣಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಮತದಾನದಲ್ಲಿ ಭಾಗಿಯಾದ ಸ್ವಾಮೀಜಿಗಳು

ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ನಾಡಿನ್ಯಾದ್ಯಂತ ಅನೇಕ ಮಠ ಮಾನ್ಯಗಳ ಹಿರಿಯ ಹಾಗೂ ಕಿರಿಯ ಸ್ವಾಮೀಜಿಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗಿ ತಮ್ಮ ಹಕ್ಕು ಚಲಾಯಿಸಿದರು. ಬಾಳೆಹೊನ್ನುರು ರಂಭಾಪುರಿ ಪೀಠದ ಜಗದ್ಗುರು ವೀರಸೋಮೇಶ್ವರಶಿವಾಚಾರ್ಯ ಸ್ವಾಮಿಜಿ ಅವರು ಬಾಳೆಹೊನ್ನುರಿನ ಬ.ಕಣಬೂರಿ ಮತಗಟ್ಟೆ ಸಂಖ್ಯೆ 203 ರಲ್ಲಿ ಮತದಾನ ಕೇಂದ್ರದಲ್ಲಿ ಮೊದಲನೆಯವರಾಗಿ ಮತ ಚಲಾವಣೆ ಮಾಡಿದರು. ಸ್ವಾಮೀಜಿ ಮತದಾನ ಮಾಡಿದ ನಂತರ ಉಳಿದವರಿಂದ ಮತದಾನ ಆರಂಭವಾಯಿತು. ಸ್ವಾಮೀಜಿ ಗಳ ಜೊತೆ ಸ್ಥಳೀಯ ರು ಭಾಗಿಯಾಗಿದ್ದರು. ಮೈಸೂರಿನಲ್ಲಿ ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ರಾಜೇಂದ್ರ ಮಹಾಸ್ವಾಮೀಜಿ ಅವರು ತಮ್ಮ ಹಕ್ಕು ಚಲಾವಣೆ ಮಾಡಿದರು. ಅದೇರೀತಿ ದಾವಣಗೆರೆಯಲ್ಲಿ ಚಿತ್ರದುರ್ಗದ ಮುರುಘಾಮಠದ ದಾವಣಗೆರೆ ಶಾಖಾ ಮಠದ ಸ್ವಾಮೀಜಿ ಕೂಡ ತಮ್ಮ ಹಕ್ಕು ಚಲಾಯಿಸಿದರು. ಹೀಗೆ ನಾಡಿನ ವಿವಿಧಡೆ ಇರುವ ಮಠ ಮಾನ್ಯಗಳ ಸ್ವಾಮೀಜಿಗಳು ಬೆಳಗ್ಗೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿದೆ.

ಸರದಿಯಲ್ಲಿ ನಿಂತು ನಟ, ನಟಿಯರಿಂದ ಮತ ಚಲಾವಣೆ

ಬೆಂಗಳೂರು : ರಾಜ್ಯ ವಿಧಾನ ಸಭೆ ಚುನಾವಣೆಗೆ ಕನ್ನಡ ಸಿನೀಮಾ ರಂಗದಿಂದ ಕೂಡ ಉತ್ತಮ ಸ್ಪಂದನೆ ದೊರೆತಿದೆ. ನಟ ಹಾಗೂ ಬಿಜೆಪಿಯ ಯಶವಂತಪುರ ಅಭ್ಯರ್ಥಿ ಜಗ್ಗೇಶ್, ಅರವಿಂದ, ಹಿರಿಯ ನಟಿ ಲೀಲಾವತಿ, ಪುತ್ರ ವಿನೋದ್ ರಾಜ್, ನಟಿ ಪ್ರಣೀತಾ ಸೇರಿದಂತೆ ಸಿನಿ ರಂಗದ ಹಿರಿಯ ಹಾಗೂ ಕಿರಿಯ ನಟ ನಟಿಯರು ಬೆಳ್ಳಂ ಬೆಳಗ್ಗೆ ಮತ ಚಲಾಯಿಸಿದರು. ಜನರ ಜೊತೆಗೆ ಸರದಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿರುವುದು ವಿಶೇಷವಾಗಿದೆ. ಮತ ಚಲಾವಣೆ ಮಾಡಿದ ನಂತರ ಮಾತನಾಡಿದ ಅವರು ಪ್ರತಿಯೊಬ್ಬರು ಮತ ಚಲಾವಣೆ ಮಾಡುವಂತೆ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದರು.

ಮತದಾರರಿಗೆ ಅವಾಜ್ ಹಾಕಿದ ಬಿಜೆಪಿ ಕಾರ್ಯಕರ್ತನ ಬಂಧನ

ಬೆಂಗಳೂರು : ಮತಾದರರಿಗೆ ಹಾಕಿದ ಬಿಜೆಪಿ ಕಾರ್ಯಕರ್ತನ ಬಂಧನ ಮಾಡಿದ ಘಟನೆ ಬೆಂಗಳೂರಿನ ಹೆಬ್ಬಾಳನಲ್ಲಿ ನಡೆದಿದೆ. 6.45ಕ್ಕೆ ಬಂದು ಮತಗಟ್ಟೆ ಬಳಿ ಸರದಿ ಸಾಲಿನಲ್ಲಿ ಕಾಯುತ್ತಿದ್ದರೂ, ಶಾಸಕರು ಬಂದು ಮತದಾನ ಮಾಡುವರೆಗೆ ಕಾಯುವಂತೆ ಅವಾಜ್ ಹಾಕಿದ್ದರಿಂದ ರೊಚ್ಚಿಗೆದ್ದ ಮತದಾರ ಬಿಜೆಪಿ ಕಾರ್ಯಕರ್ತನನ್ನು ತರಾಟೆ ತೆಗೆದುಕೊಂಡಿದ್ದಾನೆ. ಇದನ್ನು ವೀಕ್ಷಿಸಿದ ಹಿರಿಯ ಐಎಎಸ್ ಅಧಿಕಾರಿ ಮಹೇಶಕುಮಾರ ಮತದಾರರಿಗೆ ಅವಾಜ್ ಬಿಜೆಪಿ ಕಾರ್ಯಕರ್ತನ ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದಪೊಲೀಸರು ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ರಾಜ್ಯದ ಹಲವಡೆ ಬಿರುಸಿನ ಮತದಾನ

ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಬಿರುಸಿನ ಮತದಾನ ಆರಂಭಗೊಂಡಿದೆ. ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಮಾಜಿ ಸಚಿವ ಸುರೇಶ ಕುಮಾರ, ಕೊಪ್ಪಳ ಜಿಲ್ಲಾಧಿಕಾರಿ ಸೇರಿದಂತೆ ಅನೇಕರು ಮತದಾನ ಮಾಡಿದರು. ಉಡುಪಿಯಲ್ಲಿ ಕಾಂಗ್ರೆಸ್ ನ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಪತ್ನಿ ಸಮೇತ ಬಂದು ಮತದಾನ ಮಾಡಿದರು.ಬಂಟ್ವಾಳದಲ್ಲಿ ಮಾಜಿ ಕೇಂದ್ರ ಸಚಿವ ಜರ್ನಾಧನ ಪೂಜಾರಿ, ಉಳ್ಳಾಲದಲ್ಲಿ ಸಚಿವ ಯು.ಟಿ. ಖಾದರ್ ಮತದಾನ ಮಾಡಿದರು.ಬಳ್ಳಾರಿಯ ಸಂಗನಕಲ್ಲು ಗ್ರಾಮದಲ್ಲಿ ಗ್ರಾಮಸ್ಥರು ಮತಕೇಂದ್ರಕ್ಕೆ ಪೂಜೆ ಮಾಡಿ ಟೆಂಗಿನ ಕಾಯಿ ಒಡೆದು ಮತದಾನ ಪ್ರಕ್ರಿಯೆಗೆ ಚಾಲನೆನೀಡಿದರು. ಪಿಂಕ್ ಮತಗಟ್ಟೆಗಳತ್ತ ಮಹಿಳಾ ಮತದಾರರು ಹರಿದು ಬರುತ್ತಿದ್ದಾರೆ. ಆದರೆ ರಾಜರಾಜೇಶ್ವರಿನಗರದಲ್ಲಿ ಮತದಾರರು ಸೂಕ್ತ ಮಾಹಿತಿ ಇಲ್ಲದೆ ಮತದಾರರು ಮತಕೇಂದ್ರಗಳಿಗೆ ಬಂದು ವಾಪಾಸ್ ಆಗುತ್ತಿದ್ದಾರೆ. ನಕಲಿ ಮತದಾರರ ಚೀಟಿ ದೊರೆತ ಹಿನ್ನಲೆಯಲ್ಲಿ ಚುನಾವಣೆ ಮುಂದೂಡಿದ್ದಕ್ಕಾಗಿ ಮತದಾರರು ವಾಪಾಸ್ಸಿಗುತ್ತಿದ್ದಾರೆ.

ರಾಜ್ಯದ ಹಲವಡೆ ಕತ್ತಲ ರಾತ್ರಿಯ ಕರಾಮತ್ತು

ಬೆಂಗಳೂರ : ರಾಜ್ಯ ವಿಧಾನ ಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೇ ಆರಂಭವಾದ ಬೆನ್ನಲ್ಲೇ ಕತ್ತಲ ರಾತ್ರಿಯ ಕರಾಮತ್ತು ಜೋರಾಗಿದೆ. ರಾಜ್ಯದ ಮೂಲೆ, ಮೂಲೆಗಳಲ್ಲಿ ಕುರುಡು ಕಾಂಚಾಣ, ಮದ್ಯ, ಸೀರೆ, ಕುಕ್ಕರ್ ಸೇರಿದಂತೆ ಕೋಟ್ಯಾಂತರ ರೂಪಾಯಿ ಹರಿದಾಡಿದೆ‌. ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಹಣವನ್ನು ಹಲವಡೆ ಅಧಿಕಾರಿಗಳು ದಾಳಿ ನಡೆಸಿ ಹಣವನ್ನು ವಶಕ್ಕೆ ತೆಗೆದುಕೊಂಡರು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ೧೫ ಲಕ್ಷ, ದೇವನಹಳ್ಳಿ ಯಲ್ಲಿ ೧೭ ಲಕ್ಷ, ಬಾಗಲಕೋಟೆ ಯಲ್ಲಿ ೨೦ ಲಕ್ಷ, ಬೆಳಗಾವಿಯಲ್ಲಿ ೧ ಲಕ್ಷ,, ಮೊಳಕಾಲ್ಮೂರ ಕ್ಷೇತ್ರದಲ್ಲಿ ಮಾಜಿ ಸಚಿವ ಗಾಲಿ ಜನಾರ್ಧನ ರಡ್ಡಿ ಅವರಿಗೆ ಸೇರಿದೆ ಎನ್ನಲಾದ ೨ ಕೋಟಿ ಹಣ ಪೊಲೀಸರು ಜಪ್ತಿ ಮಾಡಿದ್ದಾರೆ. ಇದಲ್ಲದೆ, ಕುಕ್ಕರ, ಸೀರೆಗಳನ್ನು ಕೂಡ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಕುರುಡು ಕಾಂಚಾಣದ ಹೊಳೆ ಹರಿದ್ದಿದ್ದು ಸುಳ್ಳಲ್ಲ.

ರಾಜ್ಯದ ಹಲವಡೆ ಮುಂದುವರಿದ ಐಟಿ ದಾಳಿ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯ ಬೆನ್ನಲ್ಲೇ ರಾಜ್ಯದ ಹಲವಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ದಿಢೀರ್ ದಾಳಿ ನಡೆಸಿ ಹಲವರಿಗೆ ಶಾಕ್ ನೀಡಿದೆ. ಬೆಳ್ಳಗ್ಗೆಯಿಂದ ಸಂಜೆಯವರೆಗೆ ನಡೆದ ಐಟಿ ರೇಡ್ ನಲ್ಲಿ ಕೋಟ್ಯಾಂತರ ರೂಪಾಯಿ, ಅಪಾರ ಪ್ರಮಾಣದ ಆಸ್ತಿಯ ದಾಖಲೆ ಪತ್ತೆಯಾಗಿವೆ. ಬೀದರ ಉತ್ತರ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಖೇಣಿ ಮನೆ ತಪಾಸಣೆ ನಡೆದಿದೆ. ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ದಾಖಲೆ ಪರಿಶೀಲನೆ ನಡೆಸಿದೆ. ಇದೇ ವೇಳೆ ಧಾರವಾಡದ ಸಚಿವ ವಿನಯ ಕುಲಕರ್ಣಿ ಅವರ ಆಪ್ತ ಕಾರ್ಯದರ್ಶಿ ಪ್ರಶಾಂತ ಕೇಕರೆ, ಕಾರವಾರದ ಉದ್ಯಮಿ ಮಂಗಲ್ ದಾಸ್ ಕಾಮತ್ ಮನೆ ಮೇಲೆ ದಾಳಿ ನಡೆದಿದೆ. ಇದಲ್ಲದೆ ಮಂಗಳೂರು ವೈದ್ಯರೊಬ್ಬರಿಗೆ ಐಟಿ ಬಿಸಿ ತಟ್ಟಿದೆ. ಒಟ್ಟಿನಲ್ಲಿ ಎಲ್ಲ ರಾಜಕೀಯ ಚದುರಂಗದ ಆಟ ಶುರುವಾಗಿದೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ತಿಳಿಯುತ್ತಿಲ್ಲ

ಹಿರಿಯ ಸಾಹಿತಿ ಗಿರಡ್ಡಿ ಗೋವಿಂದರಾಜ ಇನ್ನಿಲ್ಲ

ಧಾರವಾಡ : ಹಿರಿಯ ವಿಮರ್ಶಕರು ಹಾಗೂ ಧಾರವಾಡ ಸಾಹಿತ್ಯ ಸಂಭ್ರಮದ ರೂವಾರಿಗಳಲ್ಲಿ ಒಬ್ಬರಾಗಿದ್ದ ಗಿರಡ್ಡಿ ಗೋವಿಂದರಾಜ ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಧಾರವಾಡದಲ್ಲಿ ಕಲ್ಯಾಣ ನಗರದಲ್ಲಿರುವ ಅವರ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು. ಕುಸಿದು ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸೇರಿಸುವಾಗ ಮಾರ್ಗಮಧ್ಯಯೇ ಸಾವನ್ನಪ್ಪಿದರು. ಅವರು ೧೯೩೯ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ಜನಿಸಿದ ಅವರು ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರೈಸಿ, ಪ್ರೌಢ ಶಿಕ್ಷಣ ಹಾಗೂ ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಆಗಮಿಸಿದ್ದರು. ಧಾರವಾಡದ ಕರ್ನಾಟಕ ಕಾಲೇಜ್ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಲ್ಲಿಯೇ ಶಿಕ್ಷಣ ಪಡೆದು ಅಲ್ಲಿಯೇ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಅನಂತರ ಮುಖ್ಯಸ್ಥರಾಗಿ ಸೇವೆಯಿಂದ ನಿವೃತ್ತಿಯಾಗಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದ ಅವರು ಐವತ್ತು ವರ್ಷಗಳ ಕಾಲ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದರು. ಅವರ ಅಕಾಲಿಕ ನಿಧನ ಕನ್ನಡ ಸ್ವಾರಸತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ಮೇ ೧೫ ರಂದು ನಿಷೇಧಾಜ್ಞೆ ಜಾರಿ

ಧಾರವಾಡ : ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮತ ಎಣಿಕೆ ದಿನವಾದ ಮೇ ೧೫ ರ ಬೆಳಿಗ್ಗೆ ೬ ರಿಂದ ೧೬ ರ ಬೆಳಿಗ್ಗೆ ೬ ಗಂಟೆಯವರೆಗೆ ಸಿ.ಆರ್.ಪಿ.ಸಿ ೧೯೭೩ ರ ಕಲಂ ೧೪೪ ರ ಮೇರೆಗೆ ಪ್ರತಿಬಂಧಕಾಜ್ಞೆಯನ್ನು ವಿಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಡಾ: ಎಸ್.ಬಿ.ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ. ಮೆರವಣಿಗೆ ಅಥವಾ ೫ ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ,ಸಾರ್ವಜನಿಕ ಸಭೆ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಬಂದೂಕು, ಚೂರಿ, ಲಾಠಿ, ಡೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತçವನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ. ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೆÃಕಕಾರಿ ಹಾಡುಗಳು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕರ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ. ಈ ಆದೇಶವು ಅಂತ್ಯಕ್ರಿಯೆ ಮೆರವಣಿಗೆ ಮತ್ತು ಇನ್ನಿತರ ಕಾರಣಗಳಿಗಾಗಿ ಅನುಮತಿ ಪಡೆದು ನಡೆಸಿದ ಮೆರವಣಿಗೆಗಳಿಗೆ ಅನ್ವಯಿಸುವುದಿಲ್ಲ. ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ.೧೮೮ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ವಿವರಿಸಿದ್ದಾರೆ.

ಅರೇಸೇನಾ ಪಡೆ, ಪೊಲೀಸ ಸಿಬ್ಬಂದಿ ನಿಯೋಜನೆ

ಧಾರವಾಡ : ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಧಾರವಾಡ ಅವಳಿ ನಗರ ಪ್ರದೇಶದಲ್ಲಿ ೮೨೦ ಮತಗಟ್ಟೆಗಳಿದ್ದು, ಅವು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಗೆ ಒಳಪಟ್ಟರೆ ಉಳಿದ ೮೦೮ ಮತಗಟ್ಟೆಗಳು ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿವೆ. ಇವುಗಳಲ್ಲಿ ಒಟ್ಟು ೪೦೭ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಹುಬ್ಬಳ್ಳಿ ಧಾರವಾಡ ಅವಳಿ ನಗರ ವ್ಯಾಪ್ತಿಯಲ್ಲಿ ೧೦ ಕೇಂದ್ರ ಅರೆ ಸೇನಾ ಪಡೆಗಳ ತುಕಡಿಗಳು, ೧೨ ಕೆಎಸ್ಆರ್ಪಿ ಸೆಕ್ಷನ್ಗಳು, ಅವಳಿ ನಗರಗಳ ೨೫೦೦ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಹೊರ ಜಿಲ್ಲೆಯ ೫೦೦ ಜನ ಅಧಿಕಾರಿಗಳು ಮತ್ತು ಸಿಬ್ಬಂದಿ, ಹೊರ ರಾಜ್ಯದ ೧೦೦೦ ಸಿಬ್ಬಂದಿ ಹಾಗೂ ೫೦೦ ಗೃಹ ರಕ್ಷಕ ದಳದ ಸಿಬ್ಬಂದಿ ನಿಯೋಜಿಸಲ್ಪಟ್ಟಿದ್ದಾರೆ. ಉಳಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿರುವ ೮೦೮ ಮತಗಟ್ಟೆಗಳ ವ್ಯಾಪ್ತಿಯಲ್ಲಿ ೧೮೨ ಕೇಂದ್ರ ಅರೆಸೇನಾ ಪಡೆಗಳ ಸಿಬ್ಬಂದಿ, ಎಫ್ ಎಸ್ ಟಿ ಮತ್ತು ಎಸ್ ಎಸ್ ಟಿ ಗಳಿಗೆ ನಿಯೋಜಿಸಲ್ಪಟ್ಟಿರುವ ಸಿಬ್ಬಂದಿ ಸೇರಿ ಒಟ್ಟು ೯೧೫ ಜನರು ರಕ್ಷಣಾ ಕಾರ್ಯದಲ್ಲಿದ್ದಾರೆ. ೫ ಜನ ಡಿವೈಎಸ್ಪಿಗಳು, ೧೧ ಜನ ಪೊಲೀಸ್ ಇನ್ಸಪೆಕ್ಟರ್ಗಳು, ೨೨ ಜನ ಪಿಎಸ್ಐಗಳು, ೪೩ ಜನ ಸೆಕ್ಟರ್ ಸಂಚಾರಿ ಪೊಲೀಸ್ ಅಧಿಕಾರಿಗಳು, ೧೧೩ ಎಎಸ್ಐಗಳು ಇದರಲ್ಲಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಧಾರವಾಡ ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರಗಳ ವಿವರ

ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ಎಳು ವಿಧಾನ ಸಭಾ ಕ್ಷೇತ್ರಗಳಿದ್ದು, ಪ್ರತಿ ಪ್ರತಿಷ್ಠಿತ ಕಣಗಳಿವೆ. ಅವುಗಳ ಕ್ಷೇತ್ರವಾರು ವಿವರ ಇಂತಿದೆ. 69-ನವಲಗುಂದ ವಿಧಾನ ಸಭಾ ಕ್ಷೇತ್ರದಲ್ಲಿ ೧೩ ಅಭ್ಯರ್ಥಿಗಳು ಕಣದಲ್ಲಿದ್ದು, ೧೦೪೨೦೦ ಪುರುಷ, ೯೯೫೭೦ ಮಹಿಳೆಯರು, ಇತರೆ ೭ ಸೇರಿ ಒಟ್ಟು ೨೦೩೭೭೭ ಮತದಾರರಿದ್ದಾರೆ. ೨೩೧ ಮತಗಟ್ಟೆಗಳು ಈ ಕ್ಷೇತ್ರದಲ್ಲಿವೆ. ಈ ಮತಗಟ್ಟೆಗಳಿಗೆ ೨೭೮ ಕಂಟ್ರೋಲ್ ಯುನಿಟ್ , ೩೧೭ ಬ್ಯಾಲೆಟ್ ಯುನಿಟ್, ೨೭೮ ವಿವಿಪ್ಯಾಟ್ ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ. ೭೦-ಕುಂದಗೋಳ ವಿಧಾನ ಸಭಾ ಕ್ಷೇತ್ರದಲ್ಲಿ ೧೨ ಅಭ್ಯರ್ಥಿಗಳು ಕಣದಲ್ಲಿದ್ದು, ೯೬೯೨೩ ಪುರುಷ, ೯೦೫೯೦ ಮಹಿಳೆಯರು ಸೇರಿ ಒಟ್ಟು ೧೮೭೫೧೩ ಮತದಾರರಿದ್ದಾರೆ. ೨೧೩ ಮತಗಟ್ಟೆಗಳು ಈ ಕ್ಷೆÃತ್ರದಲ್ಲಿವೆ. ಈ ಮತಗಟ್ಟೆಗಳಿಗೆ ೨೫೬ ಕಂಟ್ರೋಲ್ ಯುನಿಟ್ , ೨೮೮ ಬ್ಯಾಲೆಟ್ ಯುನಿಟ್, ೨೫೬ ವಿವಿಪ್ಯಾಟ್ ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ. ೭೧-ಧಾರವಾಡ ವಿಧಾನ ಸಭಾ ಕ್ಷೇತ್ರದಲ್ಲಿ ೧೦ ಅಭ್ಯರ್ಥಿಗಳು ಕಣದಲ್ಲಿದ್ದು, ೧೦೪೬೪೬ ಪುರುಷ, ೧೦೨೦೫೧ ಮಹಿಳೆಯರು, ಇತರೆ ೧೪ ಸೇರಿ ಒಟ್ಟು ೨೦೬೭೧೧ ಮತದಾರರಿದ್ದಾರೆ. ೨೩೧ ಮತಗಟ್ಟೆಗಳು ಈ ಕ್ಷೇತ್ರದಲ್ಲಿವೆ. ಈ ಮತಗಟ್ಟೆಗಳಿಗೆ ೨೮೭ ಕಂಟ್ರೋಲ್ ಯುನಿಟ್, ೩೧೩ ಬ್ಯಾಲೆಟ್ ಯುನಿಟ್, ೨೮೦ ವಿವಿಪ್ಯಾಟ್ ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ. ೭೨-ಹುಬ್ಬಳ್ಳಿ-ಧಾರವಾಡ (ಪೂರ್ವ) ವಿಧಾನ ಸಭಾ ಕ್ಷೇತ್ರದಲ್ಲಿ ೮ ಅಭ್ಯರ್ಥಿಗಳು ಕಣದಲ್ಲಿದ್ದು, ೯೭೯೨೬ ಪುರುಷ, ೯೬೨೬೪ ಮಹಿಳೆಯರು, ಇತರೆ ೧೧ ಸೇರಿ ಒಟ್ಟು ೧೯೪೨೦೧ ಮತದಾರರಿದ್ದಾರೆ. ೨೧೦ ಮತಗಟ್ಟೆಗಳು ಈ ಕ್ಷೇತ್ರದಲ್ಲಿವೆ. ಈ ಮತಗಟ್ಟೆಗಳಿಗೆ ೨೫೩ ಕಂಟ್ರೋಲ್ ಯುನಿಟ್ , ೨೮೪ ಬ್ಯಾಲೆಟ್ ಯುನಿಟ್, ೨೫೩ ವಿವಿಪ್ಯಾಟ್ ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ. ೭೩-ಹುಬ್ಬಳ್ಳಿ-ಧಾರವಾಡ (ಕೇಂದ್ರ) ವಿಧಾನ ಸಭಾ ಕ್ಷೇತ್ರದಲ್ಲಿ ೨೬ ಅಭ್ಯರ್ಥಿಗಳು ಕಣದಲ್ಲಿದ್ದು, ೧೨೧೬೯೫ ಪುರುಷ, ೧೨೦೯೭೨ ಮಹಿಳೆಯರು, ಇತರೆ ೩೩ ಸೇರಿ ಒಟ್ಟು ೨೪೨೭೦೦ ಮತದಾರರಿದ್ದಾರೆ. ೨೫೩ ಮತಗಟ್ಟೆಗಳು ಈ ಕ್ಷೇತ್ರದಲ್ಲಿವೆ. ಈ ಮತಗಟ್ಟೆಗಳಿಗೆ ೩೧೭ ಕಂಟ್ರೋಲ್ ಯುನಿಟ್ , ೬೭೪ ಬ್ಯಾಲೆಟ್ ಯುನಿಟ್, ೩೭೦ ವಿವಿಪ್ಯಾಟ್ ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ. ಈ ಕ್ಷೇತ್ರದಲ್ಲಿ ೨೬ ಅಭ್ಯರ್ಥಿಗಳು ಇರುವುದರಿಂದ ಪ್ರತಿ ಮತಗಟ್ಟೆಗೆ ೨ ಇವಿಎಂ ಮತಯಂತ್ರಗಳನ್ನು ಬಳಸಲಾಗುತ್ತಿದೆ. ೭೪-ಹುಬ್ಬಳ್ಳಿ-ಧಾರವಾಡ (ಪಶ್ಚಿಮ) ವಿಧಾನ ಸಭಾ ಕ್ಷೇತ್ರದಲ್ಲಿ ೧೪ ಅಭ್ಯರ್ಥಿಗಳು ಕಣದಲ್ಲಿದ್ದು, ೧೨೭೨೪೮ ಪುರುಷ, ೧೨೭೮೭೯ ಮಹಿಳೆಯರು, ಇತರೆ ೨೭ ಸೇರಿ ಒಟ್ಟು ೨೫೫೧೫೪ ಮತದಾರರಿದ್ದಾರೆ. ೨೬೫ ಮತಗಟ್ಟೆಗಳು ಈ ಕ್ಷೇತ್ರದಲ್ಲಿವೆ. ಈ ಮತಗಟ್ಟೆಗಳಿಗೆ ೩೧೯ ಕಂಟ್ರೋಲ್ ಯುನಿಟ್ , ೩೫೯ ಬ್ಯಾಲೆಟ್ ಯುನಿಟ್, ೩೧೯ ವಿವಿಪ್ಯಾಟ್ ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ. ೭೫-ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ೧೫ ಅಭ್ಯರ್ಥಿಗಳು ಕಣದಲ್ಲಿದ್ದು, ೯೭೯೯೮ ಪುರುಷ, ೯೧೩೮೮ ಮಹಿಳೆಯರು, ಇತರೆ ೦೮ ಸೇರಿ ಒಟ್ಟು ೧೮೯೩೯೪ ಮತದಾರರಿದ್ದಾರೆ. ೨೨೫ ಮತಗಟ್ಟೆಗಳು ಈ ಕ್ಷೇತ್ರದಲ್ಲಿವೆ. ಈ ಮತಗಟ್ಟೆಗಳಿಗೆ ೨೭೧ ಕಂಟ್ರೋಲ್ ಯುನಿಟ್, ೩೦೫ ಬ್ಯಾಲೆಟ್ ಯುನಿಟ್, ೨೭೧ ವಿವಿಪ್ಯಾಟ್ ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ. ಸೂಕ್ಷ್ಮ ಮತಗಟ್ಟೆಗಳಿಗೆ ೩೦೩ ಮೈಕ್ರೋ ಆಬ್ಸರ್ವರ್ಗಳನ್ನು ನೇಮಿಸಲಾಗಿದೆ. ಜಿಲ್ಲೆಯ ೮೦ ಮತಗಟ್ಟೆಗಳಿಗೆ ವೆಬ್ಕಾಸ್ಟಿಂಗ್ ಸೌಲಭ್ಯ ಒದಗಿಸಲಾಗಿದೆ. ಅದರ ಮೂಲಕ ನವದೆಹಲಿಯ ಭಾರತ ಚುನಾವಣಾ ಆಯೋಗ, ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನೇರ ವೀಕ್ಷಣೆ ಮಾಡಬಹುದಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ಮತದಾರರ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ.

ರಾಜರಾಜೇಶ್ವರಿ ನಗರದ ಚುನಾವಣೆ ಮುಂದೂಡಿಕೆ

ಬೆಂಗಳೂರು : ನಕಲಿ ವೋಟರ್ ಐಡಿ ಪತ್ತೇಯಾದ ಹಿನ್ನಲೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಚುನಾವಣೆಯನ್ನು ಮೇ 28ಕ್ಕೆ ಮುಂದೂಡಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ಕುರಿತು ಶುಕ್ರವಾರ ಸಂಜೆ ತುರ್ತು ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಚುನಾವಣಾ ಆಯೋಗದ ಮುಖ್ಯ ಅಧಿಕಾರಿ ಸಂಜೀವಕುಮಾರ ಅವರು ಮಾತನಾಡಿ, 9 ಸಾವಿರಕ್ಕೂ ಅಧಿಕ ನಕಲಿಮತದಾರರ ಗುರುತಿನ ಚೀಟಿಗಳು ಲಭ್ಯವಾಗಿರುವುದರಿಂದ ಈ ಚುನಾವಣೆಯನ್ನು ಮುಂದೂಡಲಾಗಿದೆ. ಪ್ರಕರಣದ ಕುರಿತು ತನಿಖೆ ನಡೆಸಲು ಸಾಕಷ್ಟ ಸಮಯಾವಕಾಶ ಸಿಗಲಿದೆ ಎಂದು ಅವರು ವಿವರಿಸಿದ್ದಾರೆ. ಆರ್ ಆರ್ ನಗರ ಫಲಿತಾಂಶ ಮೇ 31ರಂದು ಪ್ರಕಟವಾಗಲಿದೆ ಎಂದು ಹೇಳಿದ ಅವರು ಈ ಪ್ರಕರಣದಲ್ಲಿ ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಶಾಸಕ ಮುನಿರತ್ನ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಪ್ರಕರಣದಲ್ಲಿ ಶಾಮೀಲು ಆಗಿರುವ ಆರೋಪಗಳನ್ನು ಕೇಳಿ ಬಂದಿದ್ದು, ಪ್ರಕರಣದ ಸತ್ಯಾ ಸತ್ಯತೆ ತನಿಖೆ ನಂತರ ಬಯಲಿಗೆ ಬರಲಿದೆ ಎಂದು ತಿಳಿಸಿದರು.

೧೬೨೮ ಮತಗಟ್ಟೆಗೆ ೯೭೮೦ ಮತದಾನ ಸಿಬ್ಬಂದಿ ನಿಯೋಜನೆ

ಧಾರವಾಡ : ಕರ್ನಾಟಕದ ೧೫ನೇ ವಿಧಾನಸಭೆ ರಚನೆಗೆ ಮೇ ೧೨ರಂದು ಬೆಳಿಗ್ಗೆ ೭ ರಿಂದ ಸಂಜೆ ೬ ಗಂಟೆಯವರೆಗೆ ಮತದಾನ ನಡೆಯಲಿದೆ. ಧಾರವಾಡ ಜಿಲ್ಲೆಯ ೭ ವಿಧಾನಸಭಾ ಕ್ಷೇತ್ರಗಳಲ್ಲಿ ೧೪,೭೯,೪೫೦ ಮತದಾರರಿದ್ದು, ೧೬೨೮ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನಕ್ಕೆ ನಿಯೋಜನೆಗೊಂಡಿರುವ ೯೭೮೦ ಸಿಬ್ಬಂದಿ ಆಯಾ ವಿಧಾನಸಭಾ ಕ್ಷೇತ್ರದ ಕೇಂದ್ರಸ್ಥಾನಗಳ ಮಸ್ಟರಿಂಗ್ ಕೇಂದ್ರಗಳಿಂದ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ತೆಗೆದುಕೊಂಡು ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿರುವ ಮತಗಟ್ಟೆಗಳಿಗೆ ತೆರಳಿದರು. ನವಲಗುಂದದ ಶಂಕರ ಕಲಾ ಮಹಾವಿದ್ಯಾಲಯ, ಕುಂದಗೋಳದ ಹರಭಟ್ಟ ಸಂಯುಕ್ತ ಪದವಿ ಪೂರ್ವ ಕಾಲೇಜು, ಧಾರವಾಡದ ಬಾಸೆಲ್ ಮಿಷನ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಆರ್ ಎಲ್ ಎಸ್ ಕಾಲೇಜು, ಕಲಘಟಗಿಯ ಸರಕಾರಿ ಕೇಂದ್ರಿಯ ಮಾದರಿಯ ಶಾಲೆ, ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆ ಹಾಗೂ ಮಹಿಳಾ ವಿದ್ಯಾಪೀಠ ಕಾಲೇಜುಗಳ ಆವರಣಗಳಲ್ಲಿ, ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಇಂದು ಬೆಳಿಗ್ಗೆಯೇ ಕರ್ತವ್ಯಕ್ಕೆ ವರದಿ ಮಾಡಿಕೊಂಡರು. ಜಿಲ್ಲೆಯ ಎಲ್ಲ ೭ ವಿಧಾನಸಭಾ ಕ್ಷೇತ್ರಗಳಿಗೆ ೧೯೮೧ ಕಂಟ್ರೋಲ್ ಯುನಿಟ್ಗಳು, ೨೫೪೦ ಬ್ಯಾಲೆಟ್ ಯುನಿಟ್ಗಳು ಹಾಗೂ ೨೦೨೭ ವಿವಿಪ್ಯಾಟ್ ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ. ೯೭೮೦ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಹಾಗೂ ಮತದಾನ ಅಧಿಕಾರಿಗಳನ್ನು ನೇಮಿಸಿ ತರಬೇತಿ ನೀಡಲಾಗಿದೆ.

ಸಚಿವ ವಿನಯ ಕುಲಕರ್ಣಿ ಆಪ್ತ ಕಾರ್ಯದರ್ಶಿ ಮನೆ ಮೇಲಿನ ಐಟಿ ದಾಳಿ ಮುಕ್ತಾಯ

ಧಾರವಾಡ : ನಿನ್ನೆಯಿಂದ ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಸಚಿವ ವಿನಯ ಕುಲಕರ್ಣಿ ಆಪ್ತ ಕಾರ್ಯದರ್ಶಿ ಮನೆ ಮೇಲಿನ ಐಟಿ ದಾಳಿ ಕೊನೆಗೂ ಮುಗಿದಿದೆ. ಧಾರವಾಡದ ಸಪ್ತಾಪೂರದಲ್ಲಿರುವ ಸಚಿವ ವಿನಯ ಕುಲಕರ್ಣಿ ಆಪ್ತ ಕಾರ್ಯದರ್ಶಿ ಪ್ರಶಾಂತ ಕೇಕರೆ ಅವರ ಮನೆಯಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ಸಂಜೆಯವರೆಗೆ ತೀವ್ರ ತಪಾಸಣೆ ನಡೆಸಿದರು. ಸತತ 18 ಗಂಟೆಗಳಿಗೂ ಅಧಿಕ ಕಾಲ ತೀವ್ರ ತಪಾಸಣೆ ನಡೆಸಿದ ಐಟಿ ಅಧಿಕಾರಿಗಳು ಕೆಲವು ಮಹತ್ತರ ದಾಖಲೆಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದು, ಅದಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳ ಸಮೇತ ಲೆಕ್ಕ ಪತ್ರ ನೀಡುವಂತೆ ಸೂಚಿಸಿದ್ದಾರೆ. ಇದೇ ವೇಳೆ ಸಚಿವ ವಿನಯ ಕುಲಕರ್ಣಿ ಅವರ ಆಪ್ತರಾಗಿದ್ದ ವೆಂಕಟೇಶ ಹಿರೇಮಠ ಹಾಗೂ ಸಲೀಂ ಅವರ ಬಳಿ ದೊರೆತ ಕೆಲವು ಮಹತ್ತರ ದಾಖಲೆಗಳು ಹಾಗೂ ಕೋಟ್ಯಾಂತರ ರೂಪಾಯಿಗೆ ಲೆಕ್ಕ ಪತ್ರ ನೀಡುವಂತೆ ಸೂಚಿಸಿದ್ದಾರೆ. ಆದರೆ ಶ್ರೀಪತಿ ಪಾಟೀಲ ಹಾಗೂ ಮುತ್ತು ಬಳ್ಳಾರಿಯವರ ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ಯಾವುದೇ ಹಣವಾಗಲಿ ದಾಖಲೆಗಳಾಗಲಿ ಲಭ್ಯವಾಗಿಲ್ಲ ಎಂದು ಪ್ರಜಾಕಿರಣಕ್ಕೆ ಉನ್ನತ ಮೂಲಗಳು ಮಾಹಿತಿ ನೀಡಿವೆ.

ರಾಜ್ಯಾದ್ಯಂತ ಸಖಿ ಮತಗಟ್ಟೆಗಳ ಸ್ಥಾಪನೆ

ಬೆಂಗಳೂರು : ಮೇ ೧೨ ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಪ್ರಮಾಣದ ಮತದಾನ ದಾಖಲಿಸಲು ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ನಿರಂತರವಾಗಿ ಶ್ರಮಿಸುತ್ತಿದೆ. ಈ ಬಾರಿ ವಿಶೇಷ ಹಾಗೂ ವೈವಿಧ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಮತದಾರರನ್ನು ಸೆಳೆದಿದೆ. ಈ ಬಾರಿ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮಹಿಳಾ ಮತದಾರರ ಸಂಖ್ಯೆ ಅಧಿಕವಾಗಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತ್ಯೇಕ ಮತಗಟ್ಟೆಗಳನ್ನು ಸ್ಥಾಪಿಸಿದೆ. ಆ ಮತಗಟ್ಟೆಗಳಲ್ಲಿ ಎಲ್ಲವೂ ಮಹಿಳೆಯರದ್ದೇ ಜವಾಬ್ದಾರಿಯಾಗಲಿದೆ. ಅದಕ್ಕಾಗಿಯೇ ಪಿಂಕ್ ಬೂತ್ ಎಂದು ಎಲ್ಲವೂ ಗುಲಾಬಿ ಮಯವಾಗಿ ಮಾಡಿದೆ. ಈ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿವರ್ಗ ಮಹಿಳೆಯರೇ ಆಗಿರುತ್ತಾರೆ. ಎಲ್ಲ ಸಿಬ್ಬಂದಿಯೂ ಗುಲಾಬಿ ಬಣ್ಣದ ಉಡುಪು ಧರಿಸಿರುತ್ತಾರೆ. ಮತದಾನ ಕೇಂದ್ರವನ್ನೂ ಸಹ ಸಂಪೂರ್ಣವಾಗಿ ಗುಲಾಬಿ ಬಣ್ಣದಿಂದಲೇ ಅಲಂಕರಿಸಲಾಗಿರುತ್ತದೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೂ ಸಹ ಅವರ ಏಜೆಂಟರನ್ನಾಗಿ ಮಹಿಳೆಯರನ್ನೇ ನೇಮಿಸಲು ಕೋರಲಾಗಿದೆ. ಮಹಿಳೆಯರು ಸ್ವವಿವೇಚನೆಯಿಂದ ಮತ ಚಲಾಯಿಸಿದರೆ ಸಮಾಜದಲ್ಲಿ ಹೆಚ್ಚು ಜಾಗೃತಿ ಮೂಡಿಸಲು ಸಾಧ್ಯ ಎಂಬುದು ಆಯೋಗದ ಚಿಂತನೆಯಾಗಿದೆ. ಇದಕ್ಕೆ ಮಹಿಳೆಯರಿಂದ ಭಾರೀ ಸ್ಪಂದನೆ ದೊರೆತಿದ್ದು,ಹೆಚ್ಚಿನ ಮತ ಚಲಾವಣೆಯಾಗುವ ಸಾಧ್ಯತೆಗಳಿವೆ.

ಎಪಿಕ್ ಕಾರ್ಡ ಇರದಿದ್ದರೂ ಮತ ಚಲಾಯಿಸಿ

ಬೆಂಗಳೂರು : ನೋಂದಾಯಿತ ಮತದಾರರು ತಮ್ಮ ಬಳಿ ಮತದಾರರ ಗುರುತಿನ ಚೀಟಿ ಇರದಿದ್ದರೂ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಯಾಕೆಂದರೆ ಮತದಾನ ಮಾಡಲು ಮತದಾರರು ಮತದಾರರ ಗುರುತಿನ ಚೀಟಿ ಬದಲಾಗಿ ಪಾಸ್ಪೋರ್ಟ, ಚಾಲನಾ ಪರವಾನಿಗೆ, ಸೇವಾ ಗುರುತಿನ ಚೀಟಿ, ಭಾವಚಿತ್ರವಿರುವ ಬ್ಯಾಂಕ್ ಅಥವಾ ಅಂಚೆ ಕಚೇರಿ ಪಾಸ್ಬುಕ್, ಪಾನ್ ಕಾರ್ಡ, ಸ್ಮಾರ್ಟ್ ಕಾರ್ಡ್ , ಜಾಬ್ ಕಾರ್ಡ್, ಕಾರ್ಮಿಕ ಇಲಾಕೆ ನೀಡಿದ ಆರೋಗ್ಯ ವಿಮಾ ಕಾರ್ಡ, ಫೋಟೊ ಇರುವ ಪಿಂಚಣಿ ದಾಖಲೆ, ಭಾವಚಿತ್ರವಿರುವ ಮತದಾರರ ಪಟ್ಟಿಯಲ್ಲಿನ ಪ್ರತಿ, ಸಂಸದರು, ಶಾಸಕರಿಗೆ ವಿತರಿಸಲ್ಪಟ್ಟ ಗುರುತಿನ ಚೀಟಿ, ಆಧಾರ ಕಾರ್ಡ ದಾಖಲೆಗಳಿಂದ ಸಹ ಮತದಾನ ಮಾಡಬಹುದಾಗಿದೆ. ಜೊತೆಗೆ ಚುನಾವಣಾ ಆಯೋಗವು ಈ ಬಾರಿ ಮತದಾರರ ಭಾವಚಿತ್ರವಿರುವ ವೋಟರ್ ಸ್ಲೀಪ್ಗಳನ್ನು ವಿತರಿಸುತ್ತಿದೆ. ಇದನ್ನು ಸಹ ಗುರುತಿನ ಚೀಟಿಯಾಗಿ ಪರಿಗಣಿಸಲಾಗುತ್ತಿದೆ ಎಂದು ರಾಜ್ಯ ಚುನಾವಣಾ ಆಯೋಗ ಸೂಚಿಸಿದೆ.

ಪಂಚಮಸಾಲಿ ಸ್ವಾಮೀಜಿ ನಡೆಗೆ ಬಿಜೆಪಿ ಆಕ್ರೋಶ

ಧಾರವಾಡ : ಸಚಿವ ವಿನಯ್ ಕುಲಕರ್ಣಿಗೆ ಮತ ಹಾಕುವಂತೆ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮನವಿ ಮಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಮುಂದಾಳತ್ವ ವಹಸಿದ್ದ ಸಚಿವ ವಿನಯ್ ಕುಲಕರ್ಣಿ ಅವರು ರಾಷ್ಟ್ರೀಯ ಬಸವ ಸೇನೆಯ ಅಧ್ಯಕ್ಷರು ಹಾಗೂ ಪಂಚಮಸಾಲಿ ಸಮಾಜದ ಧುರೀಣರು ಆಗಿದ್ದಾರೆ. ಹೀಗಾಗಿ ಅವರನ್ನು ಈ ಬಾರಿ ಗೆಲ್ಲಿಸುವಂತೆ ಸಚಿವ ವಿನಯ ಕುಲಕರ್ಣಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದು ಬಿಜೆಪಿಯವರ ಕೆಂಗಣ್ಣಿಗೆ ಗುರಿಯಾಗಿದ್ದು, ಸ್ವಾಮೀಜಿ ನಡೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ವಿನಯ ಕುಲಕರ್ಣಿ ಅವರ ಪರ ವಕಾಲತ್ತು ವಹಿಸಿರುವುದನ್ನು ಬಿಜೆಪಿಯ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಪ್ರಜಾಕಿರಣದೊಂದಿಗೆ ಮಾತನಾಡಿದ ಅವರು ಅವರೊಬ್ಬ ಸ್ವಯಂ ಘೋಷಿತ ಸ್ವಾಮಿಯಾಗಿದ್ದು, ಸಮಾಜದ ಜನರ ನಂಬಿಕೆ ಕಳೆದುಕೊಂಡಿರುವ ಅವರು ಕೆಲವರ ವಕ್ತಾರರಂತೆ ವರ್ತಿಸುತ್ತಿರುವುದು ಸರಿಯಲ್ಲ. ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರು ಕೂಡ ಲಿಂಗಾಯತರಾಗಿದ್ದಾರೆ‌. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ನಮ್ಮ ಲಿಂಗಾಯತ ಸಮಾಜದ ದೊಡ್ಡ ಆಸ್ತಿ. ಸ್ವಾಮೀಜಿಯಾದವರು ಧರ್ಮ ಕಾರ್ಯ ಮಾಡಬೇಕೆ ಹೊರೆತು ಇಂತಹ ರಾಜಕೀಯ ಕೆಲಸಕ್ಕೆ ಕೈ ಹಾಕಬಾರದು. ಅವರು ಕೂಡಲೇ ಇದನ್ನು ನಿಲ್ಲಿಸಬೇಕು.‌ ಇಲ್ಲದಿದ್ದರೆ ಅವರಿಗೆ ಪಂಚಮಸಾಲಿ ಸಮಾಜವು ಬರುವ ದಿನಗಳಲ್ಲಿ ಸರಿಯಾದ ಪಾಠ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಚಿವ ವಿನಯ ಕುಲಕರ್ಣಿ ಆಪ್ತ ಕಾರ್ಯದರ್ಶಿ ಗೆ ಐಟಿ ಬಿಸಿ

ಧಾರವಾಡ : ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ವಿನಯ ಕುಲಕರ್ಣಿ ಆಪ್ತ ಕಾರ್ಯದರ್ಶಿ ಪ್ರಶಾಂತ ಕೇಕರೆ ಮನೆ ಮೇಲೆ ಐಟಿ ದಾಳಿ ನಡೆದಿದೆ. ಗುರುವಾರ ರಾತ್ರಿಯಿಂದ ತಪಾಸಣೆ ಮುಂದುವರೆದಿದ್ದು, ಶುಕ್ರವಾರ ಮಧ್ಯಹ್ನಾದವರಿಗೆ ತಪಾಸಣೆ ಮುಂದುವರೆದಿದೆ. ಮುಂಬೈ ಹಾಗೂ ಗೋವಾದ ಐದು ಅಧಿಕಾರಿಗಳ ತಂಡ ಪರಿಶೀಲನೆ ಮುಂದುವರೆಸಿದೆ. ದಾಳಿ ವೇಳೆ ಮಹತ್ತರ ಕಡತಗಳು ಲಭ್ಯವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದೇ ವೇಳೆ ಸಚಿವರ ಆಪ್ತರಾದ ಸಿದ್ದು ಪಾಟೀಲ, ಮೇಘರಾಜ ಹಿರೇಮಠ, ಮುತ್ತು ಬಳ್ಳಾರಿ ಅವರ ಮನೆಯ ಮೇಲೆ ಐಟಿ ದಾಳಿ ನಡೆದಿದೆ. ಅವರ ಮನೆಯಲ್ಲೂ ತಪಾಸಣೆ ನಡೆಸಿದ ಅಧಿಕಾರಿಗಳಿಗೆ ಕೆಲವು ದಾಖಲೆ ದೊರೆತಿವೆ

ಮತದಾನದ ಅವಧಿ ಮತ್ತೆ ಅರ್ಧ ಗಂಟೆ ಹೆಚ್ಚಳ

ನವದೆಹಲಿ : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಮತದಾನದ ಪ್ರಮಾಣ ಹೆಚ್ಚಿಸಲೇಬೇಕು ಎಂದು ಪಣತೊಟ್ಟಿರುವ ಕೇಂದ್ರ ಚುನಾವಣಾ ಆಯೋಗವು ಮತದಾನದ ಸಮಯವನ್ನು ಮತ್ತೆ ಅರ್ಧ ಗಂಟೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಈ ಹಿಂದೆ ಬೆಳಗ್ಗೆ ೭ರಿಂದ ಸಂಜೆ ೫ರವೆಗೆ ಮಾತ್ರ ಅವಕಾಶವಿತ್ತು. ಅದನ್ನು ಒಂದು ಗಂಟೆ ಹೆಚ್ಚಳ ಮಾಡಿ ಆರು ಗಂಟೆಯವರೆಗೆ ವಿಸ್ತರಿಸಿತ್ತು. ಇದೀಗ ಮತ್ತೆ ಅರ್ಧ ಗಂಟೆ ಹೆಚ್ಚಳ ಮಾಡುವ ಮೂಲಕ ಬೆಳಗ್ಗೆ ೭ ಗಂಟೆಯಿಂದ ಸಂಜೆ ೬.೩೦ರ ವೆರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ಮತದಾರರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಮನವಿ ಮಾಡಿದೆ.

ಸಿಡಿಲು ಬಡಿದು ಒಬ್ಬ ಸಾವು, ಆರು ಜನರಿಗೆ ಗಾಯ

ಹುಬ್ಬಳ್ಳಿ : ಸಿಡಿಲು ಬಡಿದು ಒಬ್ಬ ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ನಡೆದಿದೆ. ಚುನಾವಣಾ ಪ್ರಚಾರ ತಂದ ಅವಾಂತರ ಇದಾಗಿದೆ. ಪ್ರಚಾರಕ್ಕೆ ಬಂದಿದ್ದ ಒಬ್ಬ ವ್ಯಕ್ತಿ ಸಿಡಿಲು ಬಡಿದು ದುರ್ಮರಣವನ್ನಿಪ್ಪಿದ್ದಾನೆ. ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನ ಸಭಾ ಕ್ಷೇತ್ರದ ಪ್ರಚಾರಕ್ಕೆ ಬಂದಿದ್ದ ಮೂವರು ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ನೂಲ್ವಿ ಬಸ್ ನಿಲ್ದಾಣದ ಬಳಿ ನಿಂತಿದ್ದಾಗ ಸಿಡಿಲು ಅಪ್ಪಳಿಸಿದೆ. ಸಿಡಿಲು ಬಡಿದ ಆಘಾತಕ್ಕೆ ಸ್ಥಳದಲ್ಲೇ ಒಬ್ಬ ವ್ಯಕ್ತಿ ಮೃತಪಟ್ಟರೆ, ಆರು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳು ಕಿಮ್ಸ್ ಮತ್ತು ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹರ್ಲಾಪುರ ಗ್ರಾಮದ ಬಸವರಾಜ್ ಕಟ್ಟಿಮನಿ ಸಾವನ್ನಪ್ಪಿದ ರ್ದುದೈವಿಯಾಗಿದ್ದಾನೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತದಾರರಿಗೆ ಹಂಚಲು ಒಯ್ಯುತ್ತಿದ್ದ ಅಕ್ರಮ ಮದ್ಯ ವಶ

ಗದಗ : ಮತದಾರರಿಗೆ ಹಂಚಲು ಒಯ್ಯುತ್ತಿದ್ದ ಅಕ್ರಮ ಮದ್ಯ ವಶಪಡಿಸಿಕೊಂಡ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಬಳಿ ನಡೆದಿದೆ. ಈ ಸಂಬಂಧ ಮಾಜಿ ಗ್ರಾ.ಪಂ. ಅಧ್ಯಕ್ಷನ ಮಗ ಸಿದ್ದನಗೌಡ ಸೇರಿದಂತೆ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮದ್ಯ ಎನ್ನಲಾಗುತ್ತಿದೆ. ಅಬಕಾರಿ ಡಿವೈಎಸ್ಪಿ ಮೋತಿಲಾಲ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಈ ದಾಳಿ ನಡೆಸಿದ್ದು, ೧೨ ಸಾವಿರ ಮೌಲ್ಯದ ಮದ್ಯ ಎಂದು ಅಂದಾಜಿಸಲಾಗಿದೆ.

ಶಾ, ಮೋದಿ ಪ್ರವಾಸದಿಂದ ಬಿಜೆಪಿಗೆ ಹೊಸ ಶಕ್ತಿ

ಹುಬ್ಬಳ್ಳಿ: ರಾಜ್ಯದಲ್ಲಿ ಅಮಿತ ಶಾ, ನರೇಂದ್ರ ಮೋದಿ ಅವರ ಪ್ರವಾಸದಿಂದ ಬಿಜೆಪಿಗೆ ಒಂದು ಹೊಸ ಶಕ್ತಿ ಬಂದಂತಾಗಿದೆ. ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು. ಅವರು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಭ್ರಷ್ಟಾಚಾರ ಮೀತಿ ಮೀರಿದೆ, ರೈತರ ಆತ್ಮಹತ್ಯೆ ಹೆಚ್ಚುತ್ತಿದ್ದು,ಸಿದ್ದರಾಮಯ್ಯ ಉತ್ತರ ಕರ್ನಾಟಕ ವನ್ನ ಸಂಪೂರ್ಣ ಕಡೆಗಣಿಸಿದ್ದಾರೆ. ನೀರಾವರಿ ಯೋಜನೆಗಳಿಗೆ ಅನುಧಾನ ಖರ್ಚು ಮಾಡಿಲ್ಲ ಎಂದ ಅವರು ಹೈಕಮಾಂಡ್ ಪ್ಲಿಸ್ ಮಾಡಲು, ಸಿದ್ದರಾಮಯ್ಯ ಬಿಜೆಪಿ ಟಿಕಿಸುವುದರಲ್ಲೇ ಕಾಲಕಳೆದರು. ಕೇಂದ್ರದ ಜೊತೆ ಉತ್ತಮ ಸಂಬಂದ ಇಟ್ಟುಕೊಂಡು ಕೇಂದ್ರದಿಂದ ಇನ್ನೂ ಹೆಚ್ಚಿನ ಅನುಧಾನ ತರಬಹುದಿತ್ತು ಎಂದರು. ಕೇಂದ್ರದ ಸಹಕಾರದಿಂದ ರಾಜ್ಯ ಅಭಿವೃದ್ಧಿ ಮಾಡಬಹುದಿತ್ತು. ಆದ್ರೇ ಸಿದ್ದರಾಮಯ್ಯ ರಾಜಕಾರಣ ಮಾಡಿ ರಾಜ್ಯದ ಅಭಿವೃದ್ಧಿ ಕಡೆಗಣಿಸಿದರು ಎಂದು ಆರೋಪಿಸಿದರು. ಕಳೆದ ಮೂರು ವರ್ಷದಿಂದ ಹುಬ್ಬಳ್ಳಿ ಧಾರವಾಡ ಕ್ಕೆ ನಯಾ ಪೈಸೆ ಅನುಧಾನ ನೀಡಿಲ್ಲ. ೧೩೮ ಕೋಟಿ ಪಾಲಿಕೆ ನಿವೃತ್ತ ನೌಕರರ ಪಿಂಚಣಿ ಹಣ ಬಿಡುಗಡೆ ಮಾಡಲಿಲ್ಲ ಎಂದು ದೂರಿದರು.

ಬಿಜೆಪಿ, ಕಾಂಗ್ರೆಸನ ಮೋಸದಾಟಕ್ಕೆ ಬಲಿಯಾಗಬೇಡಿ : ಶಾಸಕ ಕೋನರಡ್ಡಿ

ನವಲಗುಂದ : ರಾಜ್ಯ ವಿಧಾನ ಸಭಾ ಚುನಾವಣೆಯ ಬಹಿರಂಗ ಪ್ರಚಾರದ ಕೊನೆ ದಿನ ನವಲಗುಂದ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯೂ ಆಗಿರುವ ಶಾಸಕ ಎನ್.ಹೆಚ. ಕೋನರಡ್ಡಿ ಅವರು ಗುರುವಾರ ನವಲಗುಂದ ಪಟ್ಟಣದಲ್ಲಿ ಜೆಡಿ ಎಸ್ ನ ಬೃಹತ್ ರೋಡ್ ಶೋ ನಡೆಸಿ, ಮತಯಾಚನೆ ಮಾಡಿದರು. ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಎನ್.ಹೆಚ್. ಕೋನರಡ್ಡಿ ಅವರ ನೇತೃತ್ವದಲ್ಲಿ ಮಂಜುನಾಥ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಮಾರುಕಟ್ಟೆ ಮೂಲಕ, ನಾಶಿಪುಡಿ ಓಣಿ, ಹುಗ್ಗೆÃರ ಓಣಿ, ಹಿರೇಮಠ ಮೂಲಕ ದ್ಯಾಮವ್ವ ಗುಡಿ ಓಣಿ ಕಳ್ಳಿಮಠ ಮೂಲಕ, ಲಿಂಗರಾಜ್ ಸರ್ಕಲ್‌ನಲ್ಲಿರುವ ಜೆಡಿಎಸ್ ಪಕ್ಷದ ಕಚೇರಿ ಬಳಿ ಸಮಾಪ್ತಿಗೊಂಡಿತು ಬೃಹತ್ ಮೆರವಣಿಗೆ ನವಲಗುಂದಪಟ್ಟಣದ ಓಣಿ ಓಣಿಗಳಲ್ಲಿ ಸಂಚರಿಸಿ ಮಿಂಚಿನ ಸಂಚಲನ ಸೃಷ್ಟಿಸಿತು. ಈ ವೇಳೆ ಮತದಾರರಿಗೆ ಕೈ ಮುಗಿದು, ಮತಯಾಚನೆ ಮಾಡಿದ ಶಾಸಕ ಕೋನರಡ್ಡಿ ಅವರಿಗೆ ಜೆಡಿಎಸ್ ಪಕ್ಷದ ಮುಖಂಡರು ಸಾವಿರಾರು ರೈತರು, ಮಹಿಳೆಯರು, ಯುವಕರು ಸಾಥ್ ನೀಡಿದರು. ರೋಡ್ ಶೋ ದಲ್ಲಿ ಪಾಲ್ಗೊಂಡು ಹತ್ತಾರು ಚಕ್ಕಡಿ ಬಂಡಿಗಳು ಮೆರವಣಿಗೆಯ ಮೆರಗನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದರೆ, ಅದಕ್ಕೆ ಮಹಿಳಾ ಡೊಳ್ಳು ಕುಣಿತದ ತಂಡ, ಮೌಲಾಲಿ ಬ್ಯಾಂಡ್, ಗುರುನಾಥ ಮಾಸ್ತರ್ ನೇತೃತ್ವದ ಭಜನಾ ತಂಡ ಹಾಗೂ ಝಾಂಜ್ ಮೇಳ ಕಳೆ ಕಟ್ಟುವಂತೆ ಮಾಡಿದವು. ಮೆರವಣಿಗೆಯ ಉದ್ದಕ್ಕೂ ಅಪಾರ ಜನಸ್ತೊÃಮ ಪಾಲ್ಗೊಂಡು ಶಾಸಕ ಎನ್.ಹೆಚ್. ಕೋನರಡ್ಡಿ ಪರ ಘೋಷಣೆ ಮೋಳಗಿ ಸಂಭ್ರಮಿಸಿದರು. ಜೆಡಿಎಸ್ ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟಿತ್ತು. ಸಾವಿರಾರು ಜೆಡಿಎಸ್ ಕಾರ್ಯಕರ್ತರು ಪಕ್ಷದ ಬಾವುಟ, ಕೊರಳ ಪಟ್ಟಿ ಹಾಗೂ ತೆಲೆಗೆ ಟೋಪಿ ಧರಿಸಿ ಜೆಡಿಎಸ್ ಲಾಂಛನವನ್ನು ಮಿನುಗುವಂತೆ ಮಾಡಿದರು. ಬಳಿಕ ಬೃಹತ್ ಜನಸ್ತೊÃಮವನ್ನು ಉದ್ದೆÃಶಿಸಿ ಮಾತನಾಡಿದ ಶಾಸಕ ಎನ್.ಹೆಚ್. ಕೋನರಡ್ಡಿ, ಬಿಜೆಪಿ ಹಾಗೂ ಕಾಂಗ್ರೆಸನ ಮೋಸದಾಟಕ್ಕೆ ನವಲಗುಂದ ಕ್ಷೇತ್ರದ ಜನತೆ ಬಲಿಯಾಗಬಾರದು. ಅವರು ಜೆಡಿಎಸನ ಜನಪ್ರಿಯತೆಯನ್ನು ಕಂಡು ಕಂಗಲಾಗಿದ್ದಾರೆ. ಸುಳ್ಳು ಸುದ್ದಿ ಹರಿಡಿಸಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇನ್ನೊಮ್ಮೆÃ ಕ್ಷೆÃತ್ರದ ಸಮಗ್ರ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷದ ಹೊರೆ ಹೊತ್ತ ಮಹಿಳಾ ಚಿಹ್ನೆಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಬೇಕು ಎಂದು ಮನವಿ ಮಾಡಿದರು. ಇತಿಹಾಸದಲ್ಲಿ ಕಂಡರಿಯದಷ್ಟು ಅಭಿವೃದ್ಧಿಯನ್ನು ಕಳೆದ ಐದು ವರ್ಷಗಳಲ್ಲಿ ಮಾಡಿದ್ದು, ಮೂರೂ ಸಾವಿರ ಕೋಟಿ ಅನುದಾನ ತಂದು ಎಲ್ಲ ಜಾತಿ ಜನಾಂಗದವರಿಗೆ ಸರಿಸಮನಾಗಿ ಹಂಚಿ ಕ್ಷೆÃತ್ರದ ಸಮಗ್ರ ಅಭಿವೃದ್ಧಿಗೆ ಹಗಲು ರಾತ್ರಿಯನ್ನದೆ ಓಡಾಡಿದ್ದೆÃನೆ. ನಿಮ್ಮ ಮನೆಯ ಮಗನಾಗಿ, ಜೀತದಾಳಿನಂತೆ ದುಡಿದಿದ್ದೆÃನೆ, ನೀವು ನನಗೆ ಅದಕ್ಕೆ ಕೂಲಿ ನೀಡುವ ಮೂಲಕ ಇನ್ನೊÃಮ್ಮೆÃ ವಿಧಾನ ಸೌಧಕ್ಕೆ ಕಳುಹಿಸಿಕೊಡಬೇಕು. ಆ ಮೂಲಕ ಉತ್ತರ ಕರ್ನಾಟಕದ ಗಂಡು ಮೆಟ್ಟಿನ ಬಂಡಾಯದ ನೆಲ ನವಲಗುಂದದ ಕೀರ್ತಿ ಪತಾಕೆಯನ್ನು ಹೆಚ್ಚಿಸುವಂತೆ ಮಾಡಬೇಕು ಎಂದು ಹೇಳಿದರು. ಕಳೆದ ಬಾರಿಗಿಂತ ಈ ಬಾರಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಜನರು ತಮ್ಮ ಉತ್ತಮ ಜನ ಸೇವಕನನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ. ಆ ಆಯ್ಕೆಯೂ ಎನ್.ಹೆಚ. ಕೋನರಡ್ಡಿ ಆಗಲಿದ್ದು, ಈ ಗೆಲುವು ನನ್ನದಲ್ಲ, ಜನರ ಗೆಲುವು ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಮುಸ್ಲಿಂ ಸಮಾಜದ ಮುಖಂಡರು ಕಾಂಗ್ರೆಸ್ ಪಕ್ಷವೂ ಕೇವಲ ತಮ್ಮನ್ನು ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿದೆ. ಸಮಾಜಕ್ಕೆ ಯಾವುದೇ ಸ್ಥಾನ ಮಾನನೀಡದೆ ನಿರ್ಲಕ್ಷಿö್ಯಸಿದೆ. ಆದರೆ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ತಮ್ಮ ಐದು ವರ್ಷಗಳ ಅವಧಿಯಲ್ಲಿ ನವಲಗುಂದ ವಿಧಾನ ಸಭಾ ಕ್ಷೆÃತ್ರದ ಅನೇಕ ಕಡೆ ಶಾದಿ ಮಹಲ್ ನಿರ್ಮಾಣಕ್ಕೆ ಕೋಟ್ಯಾಂತರ ರೂಪಾಯಿ ಅನುದಾನ ನೀಡಿದ್ದಾರೆ. ಅಲ್ಲದೆ, ಮಸೂತಿ ನಿರ್ಮಾಣಕ್ಕೆ ಆದ್ಯತೆ ನೀಡಿದ್ದಾರೆ. ಹೀಗಾಗಿ ಈ ಬಾರಿ ಸಂಪೂರ್ಣ ಮುಸ್ಲಿಂ ಸಮಾಜವು ಜೆಡಿಎಸ್ ಪಕ್ಷಕ್ಕೆ ಹಾಗೂ ವಿಶೇಷವಾಗಿ ಶಾಸಕ ಎನ್.ಹೆಚ್. ಕೋನರಡ್ಡಿ ಅವರಿಗೆ ಬೆಂಬಲ ಘೋಷಿಸಿದೆ ಎಂದು ಅಂಜುಮನ್ ಅಧ್ಯಕ್ಷ ಅಬ್ಬಾಸ ದೇವರಡು ತಿಳಿಸಿದರು. ಈ ವೇಳೆ ಅವರೊಂದಿಗೆ ಅಂಜುಮನ್ ಕಾರ್ಯಾಧ್ಯಕ್ಷ ಸೈಪೂದ್ಧಿÃನ್ ಅವರಾದಿ, ಮೆಹಬೂಬ್ ಸಾಬ ಯರಗುಪ್ಪಿ, ಬಿಲಾಲ್ ಖಾಜಿ, ಎಂ.ಎಂ. ಗದಗ, ಸಲೀಂ ಹಾಸೀಂನಾಳ, ಸಲೀಂ ಅಗಸಿಬಾಗಲ ಸೇರಿದಂತೆ ಅನೇಕ ಮುಖಂಡರು ಸಾಕ್ಷಿಯಾದರು. ಈ ಸಂದರ್ಭದಲ್ಲಿ ವೀರಣ್ಣ ನೀರಲಗಿ, ಶ್ರೀಶೈಲಯ್ಯ ಮೂಲಿಮನಿ, ಶರಣು ಯಮನೂರ, ಬಸವರಾಜ ಶಾನವಾಡ, ಬಾಬಣ್ಣ ಹಿರೇಗೌಡರ, ವಿ.ಡಿ. ಅಂದಾನಿಗೌಡರ, ಆನಂದ ನವಲಕೊಡ, ದ್ಯಾವಣ್ಣ ಹೊನಕುದರಿ, ಸತ್ಯಣ್ಣ ಹೆಬಸೂರ, ದೇವೆಂದ್ರಪ್ಪ ಹಳ್ಳದ, ಎಂ.ಎಸ್. ರೋಣದ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ದೇಸಾಯಿ ಮನೆತನಕ್ಕೆ ಭೂಮಿ ದಾನ ಮಾಡಿ ಗೊತ್ತಿದೆ : ಅಮೃತ ದೇಸಾಯಿ ತಿರುಗೇಟು

ಧಾರವಾಡ : ಹಂಗರಕಿ ದೇಸಾಯಿ ಮನೆತನಕ್ಕೆ ಭೂಮಿ ದಾನ ಮಾಡಿ ಗೊತ್ತಿದೆ ಹೊರತು. ಬೇರೆಯವರ ಭೂಮಿಯಲ್ಲಿ ಕೈ ಹಾಕಿದ್ದು ಗೊತ್ತಿಲ್ಲ. ನಿಮ್ಮಂತಹ ಕುಲಕರ್ಣಿ ಅವರು ನಮ್ಮ ಮನ್ಯಾಗ ಲೆಕ್ಕ ಬರೆಯುವರು ಇದ್ದರು. ಬಾಯಿ ಬಿಗಿ ಹಿಡಿದು ಮಾತನಾಡು ಎಂದು ತಿರುಗೇಟು ನೀಡಿದರು, ಅವರು ಮಂಗಳಗಟ್ಟಿ ಹಾಗೂ ತಡಕೋಡ ಗ್ರಾಮದಲ್ಲಿ ರೋಡ ಶೋ ಮೂಲಕ ಮತಯಾಚನೆ ಮಾಡಿ ನೆರೆದ ಅಪಾರ ಜನಸ್ತೊÃಮವನ್ನು ಉದ್ದೆÃಶಿಸಿ ಮಾತನಾಡಿದರು. ನಾವು ಸುಮ್ಮನ ಇದ್ದಿÃವಿ ಅಂದರ ಸಾಧು ಸಂತರಲ್ಲ. ನಾವು ಮನುಷ್ಯರಿದ್ದಿÃವಿ. ನೀನು ಹಿಂಗೆ ಮುಂದುವರೆದರೆ ನಾವು ನಮ್ಮ ಬುದ್ದಿ ತೋರಿಸಬೇಕಾತಗದ ಎಂದು ಗುಡುಗಿದ ಅವರು ನಾನೇನು ಹುಲಿ ಅಲ್ಲ, ಕರಡಿ ಅಲ್ಲ, ಬಾಸ್‌ನೂ ಅಲ್ಲ. ನಾನು ನಿಮ್ಮ ಪ್ರಾಮಾಣಿಕ ಸೇವಕ ಎಂದು ಕೈ ಮುಗಿದರು. ನೀವು ಇಷ್ಟೊಂದು ಸಂಖ್ಯೆಯಲ್ಲಿ ಸ್ವಯಂಪ್ರೆÃರಿತರಾಗಿ ಸೇರಿರುವುದು ನೋಡಿ, ನಿಮಗೆ ಅಭಿನಂದನೆ ಸಲ್ಲಿಸುತ್ತೆÃನೆ. ನಿನ್ನೆ ಬುದ್ದಿಗೇಡಿ ಮಿನಿಸ್ಟರ್ ನಿಮ್ಮೂರಿಗೆ ಬಂದು ಬಹಳ ಮಾತ್ಯಾಡಾನ. ಬಹಳ ಬಹಳ ಅಭಿವೃದ್ಧಿ ಮಾಡಿನಿ ಅಂತ ಭಾಷಣ ಹೊಡೆದಾನ. ಜನ ಬೆಂಬಲವಿಲ್ಲದೆ ಬುದ್ದಿಗೇಡಿ ಆಗಿ ಅಡ್ಡಾಡಕತ್ತಾನ. ಆ ಸಚಿವನ ಬಗ್ಗೆ ಬಹಳ ಮಾತನಾಡುವ ಅಗತ್ಯವಿಲ್ಲ. ಆತನ ಕಥೆ ಮುಗಿತು. ಅವನ ಅಂತ್ಯ ಸಂಸ್ಕಾರ ಮೇ ೧೨ರಂದು ನಡೆಯಲಿದೆ ಎಂದು ಕುಟುಕಿದರು. ಶೇ. ೮೦ ರಷ್ಟು ಮತ ಬಿಜೆಪಿಗೆ ಹಾಕುವ ಮೂಲಕ ಕನಿಷ್ಟ ೨೫ ಸಾವಿರ ಅಂತರಗಳ ಮತದಿಂದ ಗೆಲ್ಲಿಸುವ ಮೂಲಕ ನಿಮ್ಮ ಶಕ್ತಿ ಪ್ರದರ್ಶನ ತೋರಿಸಬೇಕು ಎಂದು ಕರೆ ನೀಡಿದರು. ಬಳಿಕ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ ಅಮೃತ ದೇಸಾಯಿ ಅವರಿಗೆ ಭಾರೀ ಬೆಂಬಲ ಸೂಚಿಸಿದ ಗ್ರಾಮದ ಜನತೆ, ಬಿಜೆಪಿ ಕಾರ್ಯಕರ್ತರು ಅವರನ್ನು ಮಾಲಾರ್ಪಣೆ ಮಡುವ ಮೂಲಕ ಬರ ಮಾಡಿಕೊಂಡರು. ನಂತರ ತಡಕೋಡ ಗ್ರಾಮದಲ್ಲಿ ರೋಡ್ ಮೂಲಕ ಮತಯಾಚನೆ ಮಾಡಿದರು. ಅವರಿಗೆ ಅನೇಕ ಬಿಜೆಪಿ ಮುಖಂಡರು ಸಾಥ್ ನೀಡಿದರು.

ಇಸ್ಮಾಯಿಲ್ ತಮಟಗಾರಗೆ ಕುರುಬ ಸಮುದಾಯದ ಬೆಂಬಲ

ಧಾರವಾಡ : ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಮತ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ ಅವರಿಗೆ ನವಲೂರ ಗ್ರಾಮದಲ್ಲಿಗುರುವಾರ ಕುರುಬ ಸಮುದಾಯದ ವತಿಯಿಂದ ಬೃಹತ್ ಬೆಂಬಲ ನೀಡಲಾಯಿತು. ಈ ಸಮಾರಂಭದಲ್ಲಿ ಭಾಗವಹಿಸಿದ್ದ ಇಸ್ಮಾಯಿಲ್ ತಮಟಗಾರ ಅವರಿಗೆ ಕುರಬ ಸಮಾಜದ ಹಿರಿಯರು ಸನ್ಮಾನ್ ಮಾಡಿ ಕುರುಬರ ಸಾಂಕೇತಿಕವಾಗಿ ಕುರಿ ಮರಿಯನ್ನು ನೀಡಿ, ಕಂಬಳಿ ಹೊದಿಸಿ ಗೌರವಿಸಿದರು ಇಸ್ಮಾಯಿಲ್ ತಮಾಟಗಾರ್ ಮಾತನಾಡಿ, ಗೌರವ ಸೂಚಿಸಿದ ಕುರಬ ಸಮುದಾಯದ ಎಲ್ಲ ಹಿರಿಯರಿಗೂ ಅಭಿನಂದನೆ ಸಲ್ಲಿಸಿದರು. ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಯಲ್ಲಿ ನೀಡಿದ ಎಲ್ಲ ಭರವಸೆಯನ್ನು ಪೂರೈಸಿದೆ. ಹೀಗಾಗಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕೈ ಅವಕಾಶ ನೀಡಿ ಎಂದು ಕೇಳಿಕೊಂಡರು. ನಾನೂ ಗೆದ್ದರೆ ನಿಮ್ಮ ಮನೆ ಮಗ ಗೆದ್ದಹಾಗೆ ಅರವಿಂದ ಬೆಲ್ಲದ ಗೆದ್ದರೆ ಮತ್ತೆ ಶಾಸಕರ ಮಗ ಗೆದ್ದಹಾಗೆ ಅವರಿಗೆ 25 ವರ್ಷ್ ಅವಕಾಶ ನೀಡಿದ್ದಿರಾ ನನಗೆ ಒಂದು ಬಾರಿ ಅವಕಾಶ ಕೊಡಿ ಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿ ಮಾಡಿ ಮಾದರಿ ಕ್ಷೇತ್ರವನಾಗಿ ಮಾಡುವೆ ಎಂದು ಹೇಳಿದರು ಈ ಸಂದರ್ಭದಲ್ಲಿ ಸುಭಾಶ್ ಶಿಂದೆ, ಈರಣ್ಣ ಕಿತ್ತೂರ, ಪ್ರತಾಪ್ ಚವ್ಹಾಣ್ , ಮಹಾವೀರ ಜೈನ,ಮಹಾವೀರ ಶಿವಣ್ಣವರ್,ಮನೋಹರ್ ಮೊರೆ, ರೈ ನಾಯ್ಕರ, ಮಂಜುನಾಥ್ ಭೋವಿ, ವಿನಾಯಕ ಬಡಿಗೇರ ಉಪಸ್ಥಿತರಿದ್ದರು.

ಅಕ್ರಮ ಗಣಿಗಾರಿಕೆ, ಭೂ ಒತ್ತುವರಿ ಮಾಡಿದವರನ್ನು ತಿರಸ್ಕರಿಸಿ

ಧಾರವಾಡ: ‘ಅಕ್ರಮ ಗಣಿಗಾರಿಕೆ ಹಾಗೂ ಭೂ ಒತ್ತುವರಿಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳನ್ನು ಜನತೆ ತಿರಸ್ಕರಿಸಬೇಕು. ಭ್ರಷ್ಟಾಚಾರದ ವಿರುದ್ಧ ಸಮರ ಸಾರಲು ಇದೊಂದು ದೊಡ್ಡ ಅವಕಾಶ’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ತಿಳಿಸಿದರು. ಅವರು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು. ‘ಚುನಾವಣೆಯಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೇ ಜನರು ಮತ ಚಲಾಯಿಸಬೇಕು. ಅಕ್ರಮ ಗಣಿಗಾರಿಕೆಯಲ್ಲಿ ಗಾಲಿ ಜನರಾರ್ಧನ ರೆಡ್ಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾರೆ. ಇಂಥವರ ನೆರವು ಪಡೆಯಲು ಹೊರಟಿರುವ ಬಿಜೆಪಿ ನಡೆಯನ್ನು ಜನಸಂಗ್ರಾಮ ಪರಿಷತ್ ಮತ್ತು ಜನಾಂದೋಲನ ಮಹಾಮೈತ್ರಿ ಖಂಡಿಸುತ್ತದೆ’ ಎಂದರು. ‘ಬೆಂಗಳೂರಿನಲ್ಲಿ ಮತಚೀಟಿ ಸಿಕ್ಕಿರುವುದನ್ನು ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಿ, ಚುನಾವಣೆಯನ್ನು ಮುಂದೂಡಬೇಕು. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ರಾಷ್ಟ್ರೀಯ ಪಕ್ಷಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹೈಜಾಕ್ ಮಾಡುತ್ತಿವೆ. ಪರಸ್ಪರ ಒಬ್ಬರ ಮೇಲೆ ಒಬ್ಬರು ಆರೋಪ ಮತ್ತು ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಬಂಧಿಸಲು ಬಿಜೆಪಿ ಒತ್ತಾಯ

ಧಾರವಾಡ: ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಇಸ್ಮಾಯಿಲ್ ತಮಟಗಾರ ಅವರನ್ನು ಬಂಧಿಸಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾ. ನಾಗರಾಜ ಒತ್ತಾಯಿಸಿದರು. ಅವರು ಗುರುವಾರ ಸಂಜೆ ನಗರದಲ್ಲಿ ಪತ್ರಿಕಾಗೋಷ್ಠೀಯನ್ನುದ್ದೇಶಿಸಿ ಮಾತನಾಡಿ, ಈ ಕುರಿತು ಈಗಾಗಲೇ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದ್ದು, ಅವರ ಮೇಲೆ ಸಾಕಷ್ಟು ಪ್ರಕರಣಗಳಿವೆ. ಅಲ್ಲದೆ, ಇತ್ತೀಚೆಗೆಷ್ಟೇ ಅವರು ಜೆಡಿಯುನಿಂದ ಸ್ಪರ್ಧೆ ಮಾಡಿದ ಮುಸ್ಲಿಂ ಅಭ್ಯರ್ಥಿ ಮೇಲೆಯೇ ಹಲ್ಲೆ ಮಾಡಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆಮಾಡಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಹಲವು ದಿನಗಳು ಕಳೆದರೂ ಈವರೆಗೆ ಪೊಲೀಸರು ಅವರನ್ನು ಬಂಧಿಸಿಲ್ಲ. ಅದು ಜಾಮೀನು ರಹಿತ ಪ್ರಕರಣವಾಗಿದೆ ಎಂದ ಅವರು ಇಂತಹ ಅಭ್ಯರ್ಥಿ ಸುಸಂಸ್ಕೃತ ಧಾರವಾಡ ನಗರಕ್ಕೆ ಬೇಕೆ ಎಂದುಪ್ರಶ್ನಿಸಿದರು. ಅಭಿವೃದ್ಧಿಯ ಚಿಂತಕ ಮತ್ತು ಕ್ರಿಯಾಶೀಲ ವ್ಯಕ್ತಿಯಾಗಿರುವ ಅರವಿಂದ ಬೆಲ್ಲದ ರಾಜ್ಯದಲ್ಲಿಯೇ ಮಾದರಿ ಶಾಸಕರಾಗಿದ್ದಾರೆ. ಅಂತಹ ವ್ಯಕ್ತಿಗಳನ್ನು ಆಯ್ಕೆ ಮಾಡುವ ಮೂಲಕ ಹೆಚ್ಚಿನ ಅಭಿವೃದ್ಧಿಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಮತದಾನದ ದಿನದಂದು ನಗರದ ಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾರರನ್ನು ಮತ್ತು ಅಧಿಕಾರಿಗಳನ್ನು ಹೆದರಿಸುವ ಆತಂಕ ಎಲ್ಲರಲ್ಲಿ ಮನೆ ಮಾಡಿದ್ದು, ಅಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಮತಗಟ್ಟೆ ಬಳಿ ಗೂಂಡಾ ಶಕ್ತಿಗಳು ಉದ್ದೇಶಪೂರ್ವಕವಾಗಿ ಸರತಿ ಸಾಲು ಹೆಚ್ಚಿಸಲು ಬೂತ ಬಳಿ ನಿಲ್ಲುವ ಸಂಭವವಿದ್ದು, ಸಂಬಂಧಪಡದ ಮತ್ತು ಮತದಾನ ಮಾಡಿದ ಜನರನ್ನು ಮತಗಟ್ಟೆಯಿಂದ ತಕ್ಷಣ ಹೊರಗಡೆ ಕಳುಹಿಸಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಸಂಜಯ ಕಪಟಕರ, ಬಸವರಾಜ ಮುತ್ತಳ್ಳಿ, ಹುಡಾ ಹಿಂದಿನ ಅಧ್ಯಕ್ಷ ಲಿಂಗರಾಜ ಪಾಟೀಲ, ಪ್ರಕಾಶ ಗೋಡಬೊಲೆ, ಮೋಹನ ರಾಮದುರ್ಗ ಇದ್ದರು.

ಬಿಜೆಪಿ ಕಾರ್ಯಕರ್ತರ ಮೇಲೆ ಸಚಿವ ಸಂತೋಷ ಲಾಡ್ ಬೆಂಬಲಿಗರ ಹಲ್ಲೆ

ಅಳ್ನಾವರ : ಬಿಜೆಪಿ ಕಾರ್ಯಕರ್ತರ ಮೇಲೆ ಕಾರ್ಮಿಕ ಸಚಿವ ಸಂತೋಷ ಲಾಡ್ ಬೆಂಬಲಿಗರು ಹಲ್ಲೆ ಮಾಡಿದ ಘಟನೆ ಅಳ್ನಾವರದಲ್ಲಿ ನಡೆದಿದೆ. ಬುಧವಾರ ರಾತ್ರಿ ಸಚಿವ ಸಂತೋಷ ಲಾಡ್ ಅವರು ವಾಹನದಲ್ಲಿ ತೆರಳುತ್ತಿದ್ದಾಗ ನೂರಾರು ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಮೊಳಗಿಸಿದ್ದಾರೆ. ಇದರಿಂದಾಗಿ ವಿಚಲಿತರಾದ ಸಚಿವ ಸಂತೋಷ ಲಾಡ್ ಬೆಂಬಲಿಗ ಆನಂದ ಕಲಾಲ್ ಹಾಗೂ ಸಂಗಡಿಗರು ಬಿಜೆಪಿಯವರ ಮೇಲೆ ಮುಗಿಬಿದ್ದು, ಥಳಿಸಿದ್ದಾರೆ ಎಂದು ಬಿಜೆಪಿಯವರು ಆರೋಪಿಸಿದ್ದಾರೆ. ಕಾಂಗ್ರೆಸ್ ಮುಖಂಡ ಆನಂದ ಕಲಾಲ್ ಮೂಲತಃ ಅಳ್ನಾವರದವರಾಗಿರುವುದರಿಂದ ಪ್ರಕರಣವನ್ನು ರಾಜೀ ಸಂಧಾನದಲ್ಲಿ ಅಂತ್ಯಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಈವರೆಗೆ ಅಳ್ನಾವರ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ಸಿಸಿ ಕ್ಯಾಮರಾ ಅಳವಡಿಸಲು ಶಾಸಕ ಕೋನರಡ್ಡಿ ಒತ್ತಾಯ

ಹುಬ್ಬಳ್ಳಿ : ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅಮರಗೋಳ ಗ್ರಾಮದ ೩ ಬೂತ್ ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಜೆಡಿಎಸ್ ಅಭ್ಯರ್ಥಿ ಹಾಗೂ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಚುನಾವಣಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಈ ಕುರಿತು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಅವರು, ಕಳೆದ ಬಾರಿ ಅಮರಗೋಳದ ಬೂತ್ ಗಳಾದ ೨೧, ೨೨,೨೩ ರಲ್ಲಿ ಏಕಪಕ್ಷೀಯವಾಗಿ ಬಿಜೆಪಿ ಅಭ್ಯರ್ಥಿಗೆ ಶೇ. ೯೧.೨೩ರಷ್ಟು ಮತದಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಬಿಜೆಪಿ ಅಭ್ಯರ್ಥಿ ಇದೇ ಗ್ರಾಮದವರಾಗಿರುವದರಿಂದ ಮತದಾರರ ಮೇಲೆ ಪ್ರಭಾವ ಬೀರುತ್ತಿರುವ ಸಂಶಯವಿದೆ. ಇದರಿಂದಾಗಿ ನಮಗೆ ದೊರೆಯಬೇಕಾದ ಮತಗಳು ದೊರೆಯುತ್ತಿಲ್ಲ. ಮತದಾರರು ನಿಷ್ಪಕ್ಷಪಾತವಾದ ಮತ ಚಲಾವಣೆ ಮಾಡಬೇಕಾದಲ್ಲಿ ಅಮರಗೋಳದ ಎಲ್ಲ ಮೂರು ಬೂತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಶಾಸಕ ಎನ್.ಹೆಚ್. ಕೋನರಡ್ಡಿ ಮನವಿ ಮಾಡಿದ್ದಾರೆ.

ಕಾಂಗ್ರೆಸ್ -ಜೆಡಿಎಸ್ ಕಾರ್ಯಕರ್ತರ ಹೊಡೆದಾಟ

ಮೈಸೂರು : ಕೆ.ಆರ್. ನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾಮೇನಹಳ್ಳಿಯಲ್ಲಿ ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದರಿಂದಾಗಿ ಇಬ್ಬರು ಜೆಡಿಎಸ್ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ, ಇದರಿಂದ ರೊಚ್ಚಿಗೆದ್ದ ಜೆಡಿಎಸ್ ಕಾರ್ಯಕರ್ತರು ದಿಢೀರ್ ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪರಸ್ಪರ ಜೈಕಾರ ಹಾಕಿದ ಪರಿಣಾಮ ಮಾತಿನ ಚಕಮಕಿ ನಡೆದು ಕೈ ಮಿಲಾಯಿಸಿದ್ದಾರೆ. ಇದರಿಂದಾಗಿ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಮೇಲೆ ಮುಗಿ ಬಿದ್ದಿದ್ದಾರೆ ಎನ್ನಲಾಗಿದೆ. ಈ ಕುರಿತು ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಸ್ಥಳದಲ್ಲಿ ಬಿಗಿ ಪೊಲೀಸ ಬಂದೋಬಸ್ತ್ ನಿಯೋಜಿಸಲಾಗಿದೆ.

ಹೆಚ್. ವಿಶ್ವನಾಥಗೆ ಕಂಬಳಿ, ಕುರಿ ಗಿಪ್ಟ್ ನೀಡಿ ಸಿಎಂಗೆ ತಿರುಗೇಟು

ಮೈಸೂರು : ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇತ್ತೀಚೆಗೆಷ್ಟೇ ಸಿಎಂ ಸಿದ್ದರಾಮಯ್ಯ ಅವರಿಗೆ ಕುರಿ ಹಾಗೂ ಕಂಬಳಿ ಗಿಫ್ಟ್ ನೀಡಿ ಕುರುಬ ಸಮಾಜದ ಬೆಂಬಲ ಘೋಷಿಸಲಾಗಿತ್ತು. ಇದಕ್ಕೆ ತಿರುಗೇಟು ನೀಡಿದ ಜೆಡಿಎಸ್ ಯುವ ಕಾರ್ಯಕರ್ತರ ಪಡೆ ಕುರುಬ ಸಮಾಜದ ಇನ್ನೊಬ್ಬ ಮುಖಂಡ ಹಾಗೂ ಮಾಜಿ ಸಚಿವ ಹೆಚ್. ವಿಶ್ವನಾಥ ಅವರಿಗೆ ಸಾಂಪ್ರಾದಾಯಿಕ ಸ್ವಾಗತ ನೀಡಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. ವಿಶ್ವನಾಥ ಅವರಿಗೆ ಕುರಿ ಹಾಗೂ ಕಂಬಳಿ ನೀಡಿ ಗೌರವಿಸುವ ಮೂಲಕ ಕುರುಬ ಸಮುದಾಯ ನಿಮ್ಮೊಂದಿಗಿದೆ ಎಂದು ಘೋಷಿಸಿದರು. ಜೈಕಾರ ಮುಗಿಲು ಮುಟ್ಟಿದ್ದು ಕಂಡು ವಿಶ್ವನಾಥ ಪುಳಕಿತಗೊಂಡರು.ಇತ್ತೀಚೆಗೆಷ್ಟೇ ಸಿಎಂ ಸಿದ್ದರಾಮಯ್ಯ ಜೊತೆಗೆ ಮುನಿಸಿಕೊಂಡು ಹೆಚ್. ವಿಶ್ವನಾಥ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿರುವುದು ಇಲ್ಲಿ ಸ್ಮರಿಸಬಹುದು.

ಪ್ರಧಾನಿಯಂತೆ ಕೆಳಮಟ್ಟಕ್ಕೆ ಇಳಿದು ಪ್ರತಿಕ್ರಿಯೆ ನೀಡಲ್ಲ ಎಂದ ಸಿದ್ದರಾಮಯ್ಯ

ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಸಂಬಂಧಪಟ್ಟ ವಿಚಾರಗಳ ಮೇಲೆ ಮಾತನಾಡಿಲ್ಲ. ಕೇವಲ ವೈಯಕ್ತಿಕ ವಿಚಾರಗಳ ಮೇಲೆ ಆಧಾರ ರಹಿತ ದಾಳಿ ಮಾಡಿರುವುದು ಸರಿಯಲ್ಲ. ನಾನು ಅವರ ಹಾಗೆ ಕೆಳಮಟ್ಟಕ್ಕೆ ಇಳಿದು ಪ್ರತಿಕ್ರಿಯೆ ನೀಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಅವರು ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮಸಂವಾದದಲ್ಲಿ ಮಾತನಾಡಿ, ಪ್ರಧಾನಿ ಆಧಾರ ರಹಿತ ಹೇಳಿಕೆ ನೀಡುವುದು ಸರಿಯಲ್ಲ. ಇದರಿಂದಾಗಿ ಪಿಎಂ ಘನತೆ ಕಡಿಮೆ ಆಗಿದೆ. ಒಂದು ತರಹ ಕಾಮಿಡಿ ಶೋ ನಡೆಯುತ್ತಿದೆ ಎಂದು ಕುಟುಕಿದರು. ನನಗೆ ಪ್ರಧಾನಮಂತ್ರಿಯ ಕುರ್ಚಿ ಮೇಲೆ ಗೌರವ ಇದೆ. ಆದರೆ ಅವರ ಹಾಗೆ ಕಠಿಣ ಶಬ್ದಗಳ ಪ್ರತಿಕ್ರಿಯೆ ನೀಡಿಲ್ಲ. ವೈಯಕ್ತಿಕ ಆರೋಪ ಮಾಡಿಲ್ಲ. ರಾಜ್ಯ ಬಿಜೆಪಿ ನಾಯಕರು ರಾಜ್ಯಮಟ್ಟದ ಚುನಾವಣೆಗೆ ಯಾವುದಕ್ಕೆ ಮಹತ್ವ ನೀಡಬೇಕಾಗುತ್ತೋ ಅದಕ್ಕೆ ನೀಡಿಲ್ಲ. ಪ್ರಧಾನಮಂತ್ರಿ ಈ ಮಟ್ಟಕ್ಕೆ ಇಳಿಯಬಾರದು. ಅವರ ತತ್ವ ಸಿದ್ಧಾಂತಗಳ ಮೇಲೆ ಮತ ಕೇಳಲಿ ಎಂದು ಸವಾಲ್ ಹಾಕಿದ ಅವರು ಈ ಬಗ್ಗೆ ರಾಜ್ಯದ ಜನರು ಸರಿಯಾದ ತೀರ್ಪು ನೀಡಲಿದ್ದಾರೆ. ನಮ್ಮ ಸರಕಾರದ ಮೇಲೆ ಯಾವುದೇ ಪ್ರಭುತ್ವದ ವಿರೋಧಿ ಅಲೆ ಇಲ್ಲ. ಜನಗಳು ನಮ್ಮ ಪರವಾಗಿದ್ದಾರೆ. ನಮ್ಮ ನಡವಳಿಕೆ, ಕಾರ್ಯಕ್ರಮಗಳು ಜನರಿಗೆ ಸಂತೃಪ್ತಿ ತಂದಿವೆ. ನಮ್ಮದು ಎಲ್ಲ ಜಾತಿ, ಧರ್ಮ ವರ್ಗದ ಜನರಿಗೆ ತಲುಪಿವೆ. ಜನರಿಗೆ ನಮ್ಮ ಮೇಲೆ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ್ತೇ ಅಧಿಕಾರಕ್ಕೆ ಬರುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಧಾನಮಂತ್ರಿಯ ವಿರುದ್ಧ ಕಿಡಿ ಕಾರಿದ ರಾಹುಲ್ ಗಾಂಧಿ

ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ವಾಗ್ದಾಳಿನಡೆಸಿದರು. ಅವರು ಗುರುವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಯುಪಿಎ ಗಿಂತ ಹೆಚ್ಚಿನ ಡೀಲ್ ನರೇಂದ್ರ ಮೋದಿ ಅವರ ಸರಕಾರ ಮಾಡಿದೆ. ಅವರು ತಮ್ಮ ಮಿತ್ರರಿಗಾಗಿ ಡೀಲ್ ಮಾಡಿದ್ದಾರೆ. 700 ಕೋಟಿ ವಿಮಾನ ಖರಿದಿಗೆ 1500 ಕೋಟಿ ನೀಡಿದ್ದಾರೆ. ಇದು ಉದ್ಯಮಿಗಳಿಗೆ ಲಾಭ ಆಗಿದೆ. ಹೊರತುದೇಶಕ್ಕಲ್ಲ ಎಂದು ಗುಡುಗಿದರು. ಧಾರ್ಮಿಕ ಸಂಸ್ಥೆಗಳಿಗೆವೈಯಕ್ತಿಕ ಭೇಟಿನೀಡಿಲ್ಲ. ಸಮಾಜ ಒಡೆಯುವ ಕೆಲಸಕ್ಕೆ ನಾವುನಿರತರಾಗಿಲ್ಲ. ನಾವುಎಲ್ಲರನ್ನುಕರೆದುಕೊಂಡು ಹೋಗುತ್ತಿದ್ದೇವೆ. ಅವರು ಒಡೆದು ಹಾಳುಮಾಡುತ್ತಿದ್ದಾರೆ. ನಾವು ಜೋಡಿಸಲು ಕೂಡಿಸಲುಪ್ರಯತ್ನಿಸುತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಜನರಿಗೆ ಯಾವುದೇ ಹೊಸ ಭರವಸೆ ನೀಡಿಲ್ಲ. ಕೇವಲ ನನ್ನ ಬಗ್ಗೆ ಮಾತನಾಡುವುದು ಅವರ ಬಳಿ ಯಾವುದೇ ಹೊಸ ಅಸ್ತ್ರಗಳಿಲ್ಲ ಎಂಬುದು ತೋರಿಸುತ್ತದೆ ಎಂದು ತಿರುಗೇಟು ನೀಡಿದರು.

ಬಿಜೆಪಿಗೆ ಅಜೆಂಡಾಗಳಿಲ್ಲ ಕೇವಲ ಟೀಕಿಸುವುದು ಕೆಲಸವಾಗಿದೆ : ರಾಹುಲ್ ಗಾಂಧಿ

ಬೆಂಗಳೂರು: ವಿದೇಶಾಂಗ ನೀತಿ ತಿರುಚಲಾಗಿದೆ. ಯಾವುದೇ ದೇಶಕ್ಕೆ ಹೋದರು ವೈಯಕ್ತಿಕ ಭೇಟಿ ಮಾತುಕತೆಮಾಡುತ್ತಾರೆ. ಇದರ ಹಿಂದೆ ದೊಡ್ಡ ಕೈವಾಡವಿದೆ. ಪ್ರಧಾನಮಂತ್ರಿ ಅವರು ತಮ್ಮ ಕಚೇರಿಯ ಸಿಬ್ಬಂದಿಯನ್ನು ಕರೆದುಕೊಂಡು ಹೋಗದೆ ಒನ್ ಮ್ಯಾನ್ ಶೋ ನಡೆಯುತ್ತಿದೆ ಎಂದು ಆರೋಪಿಸಿದರು. ಚೀನಾ ಭೇಟಿ ವೇಳೆ ಯಾವುದೇ ನಿರೀಕ್ಷಿತ ಬೆಳವಣಿಗೆಗಳಿಲ್ಲ. ಈ ದೇಶದಲ್ಲಿ ದಲಿತರಿಗೆ ಹೊಡೆಯಲಾಗುತ್ತಿದೆ. ಶಿಕ್ಷಿಸಲಾಗುತ್ತಿದೆ. ಮೋದಿ ಆ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ. ನಾವು ಅವರ ಪರ ಇದ್ದೇವೆ ಎಂದು ನರೇಂದ್ರ ಮೋದಿಯವರು ಹೇಳದಿರುವುದು ನೋಡಿದರೆ ಅವರು ದಲಿತ ವಿರೋಧಿ ಇದ್ದಾರೆ ಎಂಬುದು ಗೊತ್ತಾಗುತ್ತದೆ. ರೋಹಿತ್ ಮೇಮುಲ್ ಕೊಲೆ ಮಾಡಿದ್ದಾರೆ. ಪುಣೆಯ ಗಲಾಟೆ ಬಗ್ಗೆ ಮಾತನಾಡಿಲ್ಲ. ದಲಿತ ಆದಿವಾಸಿಗಳ ಬಗ್ಗೆ ಮಾತನಾಡಿಲ್ಲ. ರಾಜ್ಯ ಸರಕಾರ ಕೊಟ್ಟಷ್ಟು ಕೇಂದ್ರ ಅನುದಾನ ಕೊಟ್ಟಿಲ್ಲ. ಇದು ನಾಚಿಕೆಗೇಡಿನ ಸಂಗತಿ. ಮಹಿಳೆಯರಿಗೆ ರಕ್ಷಣೆ ನೀಡುವುದು ನಮ್ಮ ಜವಾಬ್ದಾರಿ. ಈ ಬಗ್ಗೆ ಚರ್ಚೆ ಮಾಡಬೇಕು. ಮೂಲ ಸೌಲಭ್ಯಗಳ ಬಗ್ಗೆ ಮಾತನಾಡಬೇಕು. ರೈತರಿಗೆ ಎಷ್ಟು ಕೊಟ್ಟಿದ್ದಾರೆ ಎಂಬುದು ಬಹಿರಂಗಪಡಿಸಬೇಕು. ಹದಿನೈದು ಉದ್ಯಮಿಗಳಿಗೆ ಕೊಟ್ಟಷ್ಟು ರಾಜ್ಯದ ರೈತರಿಗೆ ಕೊಟ್ಟಿಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದ ಅವರು ಮಹದಾಯಿ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲಾಗುವುದು ಎಂದು ಹೇಳಿದರು.

ಆದಿಚುಂಚನಗಿರಿಯ ನಿರ್ಮಲಾನಂದ ಶ್ರೀ ಭೇಟಿ ನೀಡಿದ ಅಮಿತ್ ಶಾ

ಬೆಂಗಳೂರು : ಇಲ್ಲಿಯ ವಿಜಯನಗರದಲ್ಲಿರುವ ಆದಿಚುಂಚನಗಿರಿಯ ಶಾಖಾ ಮಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಗುರುವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಮಠದಲ್ಲಿದ್ದ ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರೊಂದಿಗೆ ಗೌಪ್ಯ ಮಾತುಕತೆ ನಡೆಸಿದರು. ಶ್ರೀಗಳೊಂದಿಗೆ ಕೆಲ ಕಾಲ ರಹಸ್ಯ ಮಾತುಕತೆ ನಡೆಸಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಆದರೆ ಈ ವೇಳೆ ರಾಜ್ಯ ಬಿಜೆಪಿಯ ನಾಯಕರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಅಮಿತ ಶಾ ಅವರಿಗೆ ಕೆಲ ಒಕ್ಕಲಿಗ ಮುಖಂಡರು ಸಾಥ್ ನೀಡಿರುವುದು ವಿಶೇಷವಾಗಿದೆ.

ಆಸ್ಪತ್ರೆಯಲ್ಲೂ ಹೊಡೆದಾಡಿಕೊಂಡ ಬಿಜೆಪಿ -ಕಾಂಗ್ರೆಸ್ ಕಾರ್ಯಕರ್ತರು

ಗೋಣಿಕೊಪ್ಪಲು : ರಾಜ್ಯ ವಿಧಾನ ಸಭಾ ಚುನಾವಣೆಗೆ ಇನ್ನೆರಡು ದಿನಗಳು ಬಾಕಿಯಿರುವಾಗಲೇ ಕಾಂಗ್ರೆಸ್ ಬಿಜೆಪಿ ಗಲಾಟೆ ಗೋಣಿಕೊಪ್ಪಲುವಿನಲ್ಲಿ ತಾರಕಕ್ಕೆರಿದೆ. ವಿರಾಜಪೇಟೆಯ ವ್ಯಾಪ್ತಿಯಲ್ಲಿರುವ ಗೋಣಿಕೊಪ್ಪಲಿನಲ್ಲಿ ನಿನ್ನೆ ಸಂಜೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕೈ ಕೈ ಮಿಲಾಸಿದ್ದರಿಂದ ಗಾಯಗೊಂಡ ಕೆಲವರನ್ನು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆಯೂ ದೊಣ್ಣೆ, ಕಬ್ಬಿಣದ ರಾಡು ತೆಗೆದುಕೊಂಡು ಹೊಡೆದಾಡಿಕೊಂಡಿದ್ದಾರೆ. ಇದರಿಂದಾಗಿ ಆಸ್ಪತ್ರೆಯ ಕುಡಿಯುವ ನೀರಿನ ಘಟಕ, ಆಸ್ಪತ್ರೆಯ ಕಿಟಕಿಯ ಗ್ಲಾಸ್ ಗಳು ಪುಡಿ ಪುಡಿಯಾಗಿವೆ. ಇದರಿಂದಾಗಿ ಆಸ್ಪತ್ರೆ ಸಿಬ್ಬಂದಿ ಹಾಗೂ ಪೊಲೀಸರು ಕಕ್ಕಾಬಿಕ್ಕಿಯಾಗಿದ್ದಾರೆ. ಹೆಚ್ಚಿನ ಗಾಯಗೊಂಡವರನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಭ್ಯರ್ಥಿ ಅರುಣ ಮಾಚಯ್ಯ ಬಿಜೆಪಿಯ ಗಲಾಟೆಗೆ ತೀವ್ರ ಆಕ್ರೊÃಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ತಾರತಮ್ಯ ಮಾಡಿದ್ದಾರೆ. ಸರಕಾರಿ ಆಸ್ಪತ್ರೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿಗೆ ಸೋಲು ಖಚಿತ ಎಂದು ಮನಗೊಂಡು ಇಂತಹ ಕುತಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ವಿರಾಜಪೇಟೆ ವಿಧಾನ ಸಭಾ ಕ್ಷೆತ್ರ ಮಾಜಿ ಸ್ಪಿಕರ್ ಕೆ.ಜಿ. ಭೂಪಯ್ಯ ಅವರು ಪ್ರತಿನಿಧಿಸುವ ಕ್ಷೆತ್ರವಾಗಿರುವುದು ಇಲ್ಲಿ ಸ್ಮರಿಸಬಹುದು.

ಅಮೃತ ದೇಸಾಯಿ ಪರ ಚಿತ್ರ ನಟಿ ಶೃತಿ ಬಿರುಸಿನ ಪ್ರಚಾರ

ಧಾರವಾಡ : ಧಾರವಾಡ ವಿಧಾನ ಸಭಾ ಕ್ಷೆÃತ್ರ-೭೧ರ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರ ಚಿತ್ರ ನಟಿ ಶೃತಿ ಬಿರುಸಿನ ಪ್ರಚಾರ ನಡೆಸಿದರು. ಗರಗ ಗ್ರಾಮದಲ್ಲಿ ಬೃಹತ್ ರೋಡ್ ಶೋ ನಡೆಸಿದ ಅವರು ಅಭಿಮಾನಿಗಳತ್ತ ಕೈ ಬೀಸಿ ಮತಯಾಚಿಸಿದರು. ಅವರಿಗೆ ಅಭ್ಯರ್ಥಿ ಅಮೃತ ದೇಸಾಯಿ, ಅವರ ಪತ್ನಿ ಪ್ರಿಯಾ ದೇಸಾಯಿ, ಜಿಪಂ ಮಾಜಿ ಸದಸ್ಯ ಪ್ರೆÃಮಾಕೋಮಾರ ದೇಸಾಯಿ ಸಾಥ್ ನೀಡಿದರು. ನಟಿ ಶೃತಿ ಅವರ ರೋಡ್ ಗೆ ಅಪಾರ ಜನ ಸಾಗರ ಸೇರಿತ್ತು. ನೂರಾರು ಯುವಕರು ಅವರಿಗೆ ಬೈಕ್ ಮೆರವಣಿಗೆ ಮೂಲಕ ಅದ್ಧೂರಿ ಸ್ವಾಗತ ಕೋರಿದರು. ಇದರಿಂದಾಗಿ ಗರಗ ಗ್ರಾಮವೂ ಸಂಪೂರ್ಣವಾಗಿ ಕೇಸರಿಮಯವಾಗಿತ್ತು. ಅನೇಕರು ನಟಿ ಶೃತಿ ಅವರ ಕೈ ಕುಲುಕಿ ಸಂಭ್ರಮಿಸಿದರು. ಅವರಿಗೆ ಅನೇಕ ಬಿಜೆಪಿ ಮುಖಂಡರು ಸಾಥ್ ನೀಡಿದರು.

ಅಣ್ಣಿಗೇರಿಯಲ್ಲಿ ಶಾಸಕ ಕೋನರಡ್ಡಿ ಬೃಹತ್ ರೋಡ್ ಶೋ

ಅಣ್ಣಿಗೇರಿ : ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಣ್ಣಿಗೇರಿ ಪಟ್ಟಣದಲ್ಲಿ ಬುಧವಾರ ಸಂಜೆ ಜೆಡಿ ಎಸ್ ನ ಬೃಹತ್ ಶಕ್ತಿ ಪ್ರದರ್ಶನ ನಡೆಯಿತು. ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಎನ್.ಹೆಚ್. ಕೋನರಡ್ಡಿ ಅವರ ನೇತೃತ್ವದಲ್ಲಿ ಬಸ್ ನಿಲ್ದಾಣದಿಂದ ಆರಂಭಗೊಂಡ ಬೃಹತ್ ರೋಡ್ ಶೋ ಪಟ್ಟಣದ ಓಣಿ ಓಣಿಗಳಲ್ಲಿ ಸಂಚರಿಸಿ ಶಾದಿಮಹಲ್ ಬಳಿ ಸಮಾಪ್ತಿಗೊಂಡಿತು. ಈ ವೇಳೆ ಮತದಾರರಿಗೆ ಕೈ ಮುಗಿದು, ಶಾಸಕ ಕೋನರಡ್ಡಿ ಮತಯಾಚನೆ ಮಾಡಿದರು. ರೋಡ್ ಶೋಗೆ ಮಹಿಳಾ ಡೊಳ್ಳು ಕುಣಿತದ ತಂಡ, ಝಾಂಜ್ ಮೇಳದ ಮೆರಗು ನೀಡಿದವು. ಸಾವಿರಾರು ಜೆಡಿಎಸ್ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಹೆಜ್ಜೆ ಹಾಕಿದರೆ,ಅವರಿಗೆ ಹೂವಿನ ಸುರಿಮಳೆ ಹರಿಸಿ ಅಣ್ಣಿಗೇರಿ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿ ಶುಭ ಹಾರೈಸಿದರು. ಬಳಿಕ ಶಾದಿಮಹಲ್ ಬಳಿ ನಡೆದ ಬೃಹತ್ ಸಮಾವೇಶವನ್ನು ಉದ್ದೆÃಶಿಸಿ ವಿಧಾನ ಪರಿಷತ್ ಹಿರಿಯ ಸದಸ್ಯ ಹಾಗೂ ಜೆಡಿಎಸ್ ಕಾರ್ಯಾಧ್ಯಕ್ಷ ಬಸವರಾಜ ಹೊರಟ್ಟಿ ಮಾತನಾಡಿ, ನಿಮಗೆ ಯೋಗ್ಯ ವ್ಯಕ್ತಿ ಬೇಕೋ ಅಥವಾ ಅವಾಗ ಇವಾಗ ಬಂದ ಹೋಗೋ ನಾಯಕ ಬೇಕು ವಿಚಾರ ಮಾಡಿ, ಕೋನರಡ್ಡಿ ಅಂತಹ ಸರಳ, ಸಜ್ಜನ ಶಾಸಕ ರಾಜ್ಯದ ೨೨೪ ಕ್ಷೆÃತ್ರಗಳಲ್ಲಿ ಯಾರು ಸಿಗಲ್ಲ. ಹೀಗಾಗಿ ಅವರನ್ನು ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಬಳಿಕ ಶಾಸಕ ಎನ್.ಹೆಚ್. ಕೋನರಡ್ಡಿ ಮಾತನಾಡಿ, ಕುಮಾರಸ್ವಾಮಿ ಅವರು ನವಲಗುಂದಕ್ಕೆ ಕುಮಾರಪರ್ವಕ್ಕೆ ಆಗಮಿಸಿದ ವೇಳೆಯೂ ಮಳೆಯಾಗಿದೆ. ಇಂದು ಅಣ್ಣಿಗೇರಿಯ ಈ ಐತಿಹಾಸಿಕ ಕಾರ್ಯಕ್ರಮ್ಕಕೆ ಹತ್ತು ಸಾವಿರಕ್ಕಿÃಂತ ಹೆಚ್ಚಿನ ಜನ ಪಾಲ್ಗೊಂಡಿದ್ದಾರೆ. ಇಂದು ಮತ್ತೆà ಮಳೆ ಬಂದಿರುವುದು ಶುಭ ಸೂಚಕ. ಕಾಲ ಕಾಲಕ್ಕೆ ಮಳೆಯಾದರೆ ಮಾತ್ರ ರೈತರ ಬದುಕು ಹಸನಾಗುತ್ತದೆ ಎಂದರು. ಈ ಚುನಾವಣೆಯನ್ನು ಜೆಡಿಎಸ್‌ನ ಪ್ರತಿಯೊಬ್ಬ ಕಾರ್ಯಕರ್ತರು ಸವಾಲ್ ಆಗಿ ಸ್ವೀಕಾರ ಮಾಡಿ, ಕುಮಾರಸ್ವಾಮಿ ಅವರ ಕೈ ಬಲ ಪಡಿಸಲು ಜೆಡಿಎಸ್‌ನ ಹೊರೆ ಹೊತ್ತ ಮಹಿಳೆಯ ಚಿಹ್ನೆಗೆ ಮತ ನೀಡಿ ಎಂದು ಮನವಿ ಮಾಡಿದರು. ಬಿಜೆಪಿ ಹಾಗೂ ಕಾಂಗ್ರೆಸ್ ಸಾಲಮನ್ನಾ ಮಾಡುವುದಾಗಿ ಹೇಳಿವೆ. ಆದರೆ ಅದು ಸಂಪೂರ್ಣ ಸಾಲಮನ್ನಾ ಅಲ್ಲ. ನಮ್ಮದು ಎಲ್ಲ ಕೃಷಿ ಸಾಲ, ಬೆಳೆ ಸಾಲ, ಟ್ರಾö್ಯಕ್ಟರ್ ಸಾಲ, ನೇಕಾರರ, ಮಹಿಳೆಯರ ಸ್ತಿçà ಶಕ್ತಿ ಸಂಘಗಳ ಸಾಲಮನ್ನಾ ಆಗಲಿದೆ ಎಂದರು. ಅಣ್ಣಿಗೇರಿಯನ್ನು ಹುಬ್ಬಳ್ಳಿ-ಧಾರವಾಡ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದ್ದೆÃವೆ. ಆದರೆ ನಮ್ಮ ಜನಪ್ರಿಯತೆ, ವ್ಯಾಪಕ ಜನ ಬೆಂಬಲ ಕಂಡು ಬಿಜೆಪಿಯವರು ಪಿತೂರಿ ಮಾಡುತ್ತಿದ್ದಾರೆ. ಮುಸ್ಲಿಂ ಸಮುದಾಯದ ಜನರ ದಾರಿ ತಪ್ಪಿಸಲು ಹುನ್ನಾರ ನಡೆಸಿದ್ದಾರೆ. ಅದಕ್ಕೆ ಕಿವಿಗೊಡದೆ ಮತಚಲಾಯಿಸಿ. ನಾವು ಕಳೆದ ಐದು ವರ್ಷಗಳ ಅವಧಿಯಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಅಷ್ಟೇ ಅಲ್ಲ ಎಲ್ಲ ಜನಾಂಗದ ಜನರನ್ನು ವಿಶ್ವಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದೆÃನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತರ ಘಟಕದ ಸಂಘಟನೆ ಕಾರ್ಯದರ್ಶಿ ಸಾಹೀನ್ ಕೌಸರ್, ಅಲ್ಲಂಪ್ರಭು ದಿಡ್ಡಿ, ಹನುಮಂತ ಚಲವಾದಿ, ಭಗವಂತ ಪುಟ್ಟಣವರ, ಹಸನಸಾಬ ಗುಡುನಾಯ್ಕರ, ಜಟ್ಟಪ್ಪ ಕಲ್ಲವಡ್ಡರ, ಬಾಸುಸಾಬ ನವಲಗುಂದ, ದಾವಲಸಾಬ ದರವಾನಿ, ರಾಜೇಸಾಬ ನಡಕಟ್ಟಿನ, ಐ.ಜಿ. ಸಮುದ್ರಿ, ಜೆಡಿಎಸ್ ಜಿಲ್ಲಾಧ್ಯಕ್ಷ ಮುಜಾಹಿದ್ ಕಾಂಟ್ರ‍್ಯಾಕ್ಟರ, ಶಿವಶಂಕರ ಕಲ್ಲೂರ, ಶ್ರೀಶೈಲಯ್ಯ ಮೂಲಿಮನಿ, ವೀರಣ್ಣ ನೀರಲಗಿ, ಗಂಗಾಧರ ಪಾಟೀಲ ಕುಲಕರ್ಣಿ, ಶಾಂತವೀರ ಬೆಟಗೇರಿ, ದೇವರಾಜ ಕಂಬಳಿ, ಹಸನನಾಯ್ಕ ನಾಯ್ಕವಾಡಿ, ಬಾಸು ಸಾಬ ಹುಲಕೋಟಿ, ಕಳಕಪ್ಪ ಅಕ್ಕಿ, ಹಟೇಲ ಸಾಬ ದಾರಗೋಳಿ, ಎಫ್. ಎಂ. ಶೇಖಸನದಿ, ಹಬೀದ್ ಅಲಿ ಹಾಸೀಂನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಡಾನ್ ಬೇಕಾ ಡೆವಲಪ್‌ಮೆಂಟ್ ಬೇಕಾ ಎಂದ ಕೇಂದ್ರ ಸಚಿವ ಅನಂತಕುಮಾರ

ಧಾರವಾಡ : ಧಾರವಾಡ ವಿಧಾನ ಸಭಾ ಕ್ಷೇತ್ರ-71ರ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರ ಕೇಂದ್ರ ಸಚಿವ ಅನಂತಕುಮಾರ ದೊಡ್ಡನಾಯಕನಕೊಪ್ಪದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಈ ವೇಳೆ ನೆರೆದಿದ್ದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಚಿವ ವಿನಯ ಕುಲಕರ್ಣಿ ಅವರು ಮುಂಜಾನೆ ನಾವು ಮಾಡಿದ ಪೂಜಾಗಳಿಗೆ ಪೂಜೆ ಮಾಡಿದರೆ ಅವರು ಸಂಜೆ ಓಸಿ, ಇಸ್ಪಿಟ್, ನಂಬರ್ ೨ ದಂಧೆ ಮಾಡುವರಿಗೆ ಮಾರ್ಗದರ್ಶನ ಮಾಡುವ ಜಿಲ್ಲಾ ಮಂತ್ರಿ ಧಾರವಾಡದಂತಹ ಸುಸಂಸ್ಕೃತ ಕ್ಷೇತ್ರಕ್ಕೆ ಬೇಕಾ ಎಂದು ಪ್ರಶ್ನಿಸಿದರು. ಒಂಬರ್ ಒನ್ ಬೇಕಾ ಟೂ ಬೇಕಾ ನೀವೆ ನಿರ್ಧರಿಸಿ ಎಂದ ಅವರು ಸಚಿವ ವಿನಯ ಕುಲಕರ್ಣಿ ವಿರುದ್ಧ ವಾಗ್ದಾಳಿ ನಡೆಸಿದರು. ಒಂಬರ್ ಒನ್ ಬೇಕು. ಹಾಗೂ ನಂಬರ್ ೨ ದಂಧೆ ಬಂದ್ ಆಗಬೇಕು. ಅನೈತಿಕ ಚಟುವಟಿಕೆ, ಕ್ರಿಮಿನಲ್ ಪ್ರಕರಣಗಳ ಹಬ್ ಆಗಬಾರದು ಅಂದ್ರೆ ಜಿಲ್ಲಾ ಮಂತ್ರಿಗಳನ್ನು ಮನೆಗೆ ಕಳುಹಿಸಿ, ಸಜ್ಜನರ, ಅಭಿವೃದ್ಧಿಗೆ ಆದ್ಯತೆ ನೀಡುವ ಅಮೃತ ದೇಸಾಯಿ ಅವರನ್ನು ಆರಿಸಿ ಕಳುಹಿಸಿ ಎಂದರ. ಪ್ರತಿಯೊಬ್ಬ ನಾಗರಿಕರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಬೇಕೆಂದ್ರೆ ನಮಗೆ ಡಾನ್ ಬೇಕಾಗಿಲ್ಲ ಅಭಿವೃದ್ಧಿ ಬೇಕಾಗಿದೆ ಎಂಬುದನ್ನು ಪ್ರತಿ ಹಳ್ಳಿಗೆ ಹೋಗಿ ಕೇಳಿ ಗೂಂಡಾಗಿರಿ ಬೇಕಾ ಅಭಿವೃದ್ಧಿ ಬೇಕಾ ಕೇಳಿ, ಡಾನ್ ಬೇಕಾ ಡೆವಲಪ್‌ಮೆಂಟ್ ಬೇಕಾ ಕೇಳಿ ಎಂದು ಮನವಿ ಮಾಡಿದರು. ನಮ್ಮ ದೇಶದ ಸಲುವಾಗಿ ತಾಯಿಂದಿರ, ಅಕ್ಕತಂಗಿಯವರ ಸಲುವಾಗಿ ದಿನದ ೧೮ ಗಂಟೆ ಕೆಲಸಮಾಡುವ ಪ್ರಧಾನಮಂತ್ರಿ ಒಂದಡೆಯಾದರೆ ೧೮ ತಾಸ ನಿದ್ದೆ ಮಾಡುವ ಸಿಎಂ ಸಿದ್ದರಾಮಯ್ಯ ಇನ್ನೊಂದು ಕಡೆ. ನೂರಾರು ಕಾರ್ಯಕ್ರಮಗಳಲ್ಲಿನಿದ್ದೆ ಮಾಡುವುದೆ ದೊಡ್ಡ ಕೆಲಸ ಆಗಿದೆ. ಅದು ಕಾವೇರಿ, ಕೃಷ್ಣ ನೀರಿನ ಸಮಸ್ಯೆಯ ಸಭೆಯ ಇರಲಿ, ಯಾವುದೇ ಸಭೆ ಸಮಾರಂಭ ಇರಲಿ ಎಲ್ಲ ಸಭೆಯಲ್ಲಿ ನಿದ್ದೆ ಮಾಡಿದ ಕೀರ್ತಿ ಸಿದ್ದರಾಮಯ್ಯ ಅವರ ಸಿದ್ದ ಸರಕಾರಕ್ಜೆ ಸಲ್ಲುತ್ತದೆ. ಅಲ್ಲದೆ, ಯೋಗೀಶಗೌಡರ ಕಗ್ಗೊಲೆಗೆ ನ್ಯಾಯ ಸಿಗಲೇಬೇಕು ಎಂದ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ. ಕೆ.ಜೆ. ಜಾರ್ಜ್ ಹಾಗೂ ಗಣಪತಿ, ವಿನಯ ಕುಲಕರ್ಣಿ ಹಾಗೂ ಯೋಗೀಶಗೌಡ, ಶಾಸಕ ಹ್ಯಾರೀಸ್ ಕನಸು ಬಿಳುತ್ತವೆ ಎಂದು ವಾಗ್ದಾಳಿ ನಡೆಸಿದರು.

ರಾಯರ ಆಶೀರ್ವಾದ ಪಡೆದ ಇಸ್ಮಾಯಿಲ್ ತಮಟಗಾರ

ಧಾರವಾಡ : ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಮತ ಕ್ಷೇತ್ರ74 ರ ಕಾಂಗ್ರೆಸ್ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರಅವರು ಕೆಲಗೇರಿಯಲ್ಲಿ ಮತ ಯಾಚಿಸಿದರು. ನಂತರ ಅಲ್ಲಿಂದ ಮಾಳಮಡ್ಡಿಯ ಶ್ರೀ ರಾಘವೇಂದ್ರ ದೇವಸ್ಥಾನದಲ್ಲಿ ರಾಯರ ಆಶೀರ್ವಾದ ಪಡೆದು ಗವಳಿಗಲ್ಲಿ ಯಲ್ಲಿ ಮತ ಯಾಚಿಸಿದರು. ನಂತರ ಸೈದಾಪುರ, ಮರಾಠಾ ಕಾಲೋನಿ, ಕೊಂಡವಾದ ಓಣಿ ಯಲ್ಲಿ ಮತ ಯಾಚಿಸಿದರು ಬಳಿಕ ಕಿಲ್ಲಾ ವಿಠಲ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ಸಹಸ್ರಾರು ಮತದಾರರಲ್ಲಿ ಮಾತ ಯಾಚಿಸಿದರು. ಈ ಸಂದರ್ಭದಲ್ಲಿ ದಾನಪ್ಪ ಕಬ್ಬೆರ,ಪ್ರತಾಪ್ ಚವ್ಹಾಣ್, ರುದ್ರಗೌಡ ಪಾಟೀಲ, ಬಸವರಾಜ ಮಟ್ಟಿ, ಆನಂದ ಜಾಧವ್, ಬುರಾನ ಗವಳಿ, ದಿಲಾವರ ದೇಸಾಯಿ, ಬಾಬು ಗವಳಿ, ಅಕ್ಷಯ ಪಾಟೀಲ,ಆಸಿಶ ಅಗ್ನಿಹೊತ್ರಿ, ಸುನೀಲ್ ಶಿಂದೆ, ಗಣೇಶ್ ಪೂಜಾರ್, ವಾಸಿಮ ಖಾಜಿ,ಅಬ್ದುಲ ದೇಸಾಯಿ, ಫೇರೊಜ್ ಪಠಾಣ್,ವಿನಾಯಕ ಬಡಿಗೇರ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಶಾಸಕ ಬೆಲ್ಲದಗೆ ಅರ್ಚಕ ಪುರೋಹಿತರ ಸಂಘದಿಂದ ಬೆಂಬಲ

ಧಾರವಾಡ : ಶಾಸಕ ಹಾಗೂ ಭಾಜಪ ಅಭ್ಯರ್ಥಿ ಅರವಿಂದ ಬೆಲ್ಲದ ಅವರಿಗೆ ಹುಬ್ಬಳ್ಳಿ ಧಾರವಾಡ ಜಂಗಮ ಅರ್ಚಕ ಪುರೋಹಿತ ಸಂಘದವರು ಬೆಂಬಲ ಸೂಚಿಸಿದರು. ಶಹರದಲ್ಲಿರುವ ಎಲ್ಲಾ ದೇವಸ್ಥಾನಗಳ ಪೂಜಾರಿ ಮತ್ತು ಅರ್ಚಕರು ಒಂದೆಡೆ ಸೇರಿ ಸಂಘದಿಂದ ಅರವಿಂದ ಬೆಲ್ಲದರವರಿಗೆ ಸಂಪೂರ್ಣ ಬೆಂಬಲ ಸೂಚಿಸಿ ಶಾಸಕರಾಗಿ ಬಿಜೆಪಿ ಸರ್ಕಾರ ಬಂದು ಮಂತ್ರಿಗಳಾಗಲಿ ಎಂದು ಪ್ರಾರ್ಥನೆ ಮಾಡಿ, ಶುಭ ಹಾರೈಸಿದರು. ಮೇ. ೧೨ ರಂದು ಎಲ್ಲ ದೇವಸ್ಥಾನಗಳಲ್ಲಿ ಅರವಿಂದ ಬೆಲ್ಲದ ಅವರ ಹೆಸರಿನ ಮೇಲೆ ಅರ್ಚನೆ ಹಾಗೂ ಅಭಿಷೇಕ ನಡೆಸುವುದಾಗಿ ತಿಳಿಸಿದರು. ನಂತರ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಕಳೆದ ೫ ವರ್ಷದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ನನಗೆ ಆಶಿರ್ವಾದ ಮಾಡಿರುವುದಕ್ಕೆ ಚಿರಋಣಿಯಾಗಿರುತ್ತೇನೆ ಎಂದು ಹೇಳಿದ ಶಾಸಕರು ಸಾತ್ವಿಕ ಸಮಾಜವನ್ನು ಕಾಪಾಡಲು ನಿಮ್ಮೆಲ್ಲರ ಆಶಿರ್ವಾದದ ಮತ ನನಗೆ ಶಕ್ತಿ ತುಂಬಲಿದೆ ಎಂದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ವೇದಮೂರ್ತಿ ಬಸಯ್ಯ ಶಾಸ್ತಿಗಳು,ತಿಪ್ಪಯ್ಯಜ್ಜ ಯರಗಂಬಳಿಮಠ,ರೇವಣಸಿದ್ದಯ್ಯ ಹಿರೇಮಠ, ಬಸಯ್ಯಶಾಸ್ತಿ ಕಲ್ಯಾಣಮಠ, ಸಂಗಯ್ಯ ಶಾಸ್ತಿಗಳು, ದಾನಯ್ಯ ಶಾಸ್ತಿಗಳು, ಶಿವಾನಂದ ಶಾಸ್ತಿಗಳು, ರಾಜಶೇಖರ ಹಿರೇಮಠ, ಚೆನ್ನವೀರಯ್ಯ ಹಿರೇಮಠ, ಗಂಗಾಧರ ಕಣ್ಣೂರುಮಠ, ವೀರಯ್ಯ ಶಾಸ್ತಿಗಳು, ವೀರಯ್ಯ ಶಾಸ್ತಿಗಳು,ವೀರಭದ್ರಯ್ಯ ಹಿರೇಮಠ ಉಪಸ್ಥಿತರಿದ್ದರು.

ಆಟೋ ಚಾಲಕರ ಅಭಿವೃದ್ಧಿ ಸಂಘದಿಂದ ಶಾಸಕ ಅರವಿಂದ ಬೆಲ್ಲದಗೆ ಬೆಂಬಲ

ಧಾರವಾಡ : ನಗರದಲ್ಲಿ ಕಾಂಕ್ರೀಟ ರಸ್ತೆಗಳ ನಿರ್ಮಾಣ, ಬಡವರಿಗೆ ಮನೆ, ಅಭಿವೃದ್ಧಿ ಪರ ರಾಜಕಾರಣದಲ್ಲಿರುವ ಅರವಿಂದ ಬೆಲ್ಲದ ಅವರಿಗೆ ಆಟೋ ಚಾಲಕರ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಬೆಂಬಲ ನೀಡಿದರು. ರಾಜ್ಯದಲ್ಲಿಯೇ ಉತ್ತಮ ರಸ್ತೆ , ಒಳಚರಂಡಿ ನಿರ್ಮಾಣದಲ್ಲಿ, ದಾಖಲೆಯಂತೆ ಕೆಲಸ ಮಾಡಿರುವ ಶಾಸಕ ಅರವಿಂದ ಬೆಲ್ಲದರವರಿಗೆ ಕೃತಜ್ಙತೆ ಸಲ್ಲಿಸಿ ಮುಂದಿನ ದಿನದಲ್ಲಿ ನಗರಾದ್ಯಂತ ರಸ್ತೆ ನಿರ್ಮಾಣದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಾರಿಗೆ ಸಂಪರ್ಕಕ್ಕೆ ಸೇವೆ ನೀಡಬಹುದು ಎಂದು ಹೇಳಿದರು. ದೇಶದಲ್ಲಿ ಮೊದಲ ಬಾರಿಗೆ ಬಡವರಿಗೆ ೨೫೦೦ ಅತ್ಯತ್ತಮ ಮನೆಗಳನ್ನು ಗುಂಪು ವಸತಿ ಯೋಜನೆಗಳಡಿ ನಿರ್ಮಾಣ ಮಾಡಿರುವ ಅರವಿಂದ ಬೆಲ್ಲದ ಅವರು ಅಟೋ ಚಾಲಕರಿಗೂ ಮನೆಗಳನ್ನು ನೀಡಬೇಕೆಂದು ಮನವಿ ಮಾಡಿದರು. ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಎಲ್ಲ ಚಾಲಕರ ಪರವಾಗಿ ಈ ಬಾರಿ ಅರವಿಂದ ಬೆಲ್ಲದ ಅವರಿಗೆ ಸಂಪೂರ್ಣವಾಗಿ ಜಾತಿ ಮತ ಬೇಧ ಭಾವವಿಲ್ಲದೆ ಬೆಂಬಲಿಸುವುದಾಗಿ ಘೋಷಿಸಿದರು ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಮುಂದಿನ ಅವಧಿಯಲ್ಲಿ ೧೦,೦೦೦ ಗೃಹ ನಿರ್ಮಾಣಕ್ಕೆ ಈಗಾಗಲೇ ಜಾಗ ಹುಡುಕಿದ್ದು ಮೋದಿಯವರ ಇಚ್ಛೆಯಂತೆ ಬಡವರಿಗೆ ಸೂರು ಕೊಡಿಸುವುದು ತಮ್ಮ ಗು.ರಿಯಾಗಿದೆ ಎಂದು ತಿಳಿಸಿದರು. ಆಟೋ ಚಾಲಕರಿಗೆ ಆಟೋ ಕಾರ್ಡ ಮಾಡಿ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದರು. . ಈ ಸಂದರ್ಭದಲ್ಲಿ ಭಾಜಪ ನಗರಾಧ್ಯಕ್ಷ ಯಲ್ಲಪ ಅರವಾಳದ, ಜೀವನ ಉತ್ಕರಿ, ವಿ.ಬಿ.ಸಂಜೀವಪ್ಪನವರ,ಲಕ್ಷಣ ಜಮನಾಳ, ಪ್ರಕಾಶ ಮುಳಗುಂದ, ಮಾರುತಿ ಪ್ರಭಾಕರ,ದೇವದಾನ ಅಮರಾವತಿ, ನಾಗರಾಜ ಕಂದಾರೆ, ಅಣ್ಣಪ್ಪ ಹೆಬಸೂರ, ವಾಸುದೇವ ಶಿಂಧೆ, ಸ್ಯಾಂದರ್ಲಿಬಾಯಿ, ರವಿ ಸಂತಾಭನವರ , ಲಿಂಗರಾಜ ಕರಿಗಾರ, ಬಸವರಾಜ ಕಮತಗಿ, ಮುನ್ನಾ ನದಾಫ, ವೀರಪ್ಪ ಹೂಲಿ, ಸುರೇಶ ರಾಠೋಡ, ತಾಜುದ್ದೀನ ಹವ್ವಲದಾರ, ಮಂಜುನಾಥ ಮಾದರ,ನಾಗರಾಜ ಆರೇರ ಮೆಹಬೂಬಸಾಬ ನದಾಫ, ರಾಜ ಅಲ್ಲಾಪುರ , ವಿಠ್ಠಲ ಮಾದರ, ಮಹಮ್ಮದ ರಫೀಕಶೇಖ, ಖಾಸೀಮ ಶೇಖ, ಯಲ್ಲಪ್ಪ ಹನುಮಯ್ಯನವರ, ಶಬ್ಬಿರ ಮಸೂತಿ, ಹೋಳಿಯಪ್ಪ ಜಾಲಸಿಗಿಡದ, ರಂಗೇಶ ಹನುಮಯ್ಯನವರ ಕುಮಾರ ಮುದಕನವರ ಉಪಸ್ಥಿತರಿದ್ದರು.

ಮದುವೆ ಮನೆಯಲ್ಲಿ ಕನ್ನಕ್ಕೆ ಯತ್ನ ಸಾರ್ವಜನಿಕರಿಂದ ಗೂಸಾ

ಧಾರವಾಡ : ಮದುವೆ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಒಬ್ಬನನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ವಿದ್ಯಾನಗರಿ ಧಾರವಾಡದಿಂದ ನಡೆದಿದೆ. ಇಲ್ಲಿನ ಸರಸ್ವತಿ ನಿಕೇತನದಲ್ಲಿ ನಡೆಯುತ್ತಿದ್ದ ಮದುವೆ ಮನೆಗೆ ನುಗ್ಗಿದ್ದ ಮೂರು ಒಂದು ಉಂಗುರ, ಒಂದು ಸರ ಸೇರಿದಂತೆ ನಗದು ಹಣ ದೋಚಿ ಪರಾರಿಯಾಗುವ ಸಂದರ್ಭದಲ್ಲಿ ಸಿಕ್ಜಿ ಬಿದ್ದಿದ್ದಾರೆ. ಕೂಡಲೇ ಇಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ. ಒಬ್ಬ ಮಾತ್ರ ಸಿಕ್ಕಿ ಬಿದ್ದಿದ್ದ. ಆತನನ್ನು ಉಪನಗರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿತ್ತು ಆದರೆ, ಆತ ಅಪ್ರಾಪ್ತನಾಗಿದ್ದರಿಂದ ಪೋಷಕರಿಗೆ ಕರೆಸಿ, ತಿಳಿ ಹೇಳಿ ಕಳುಹಿಸಲಾಗಿದೆ ಎಂದು ಪೊಲೀಸರು ಪ್ರಜಾಕಿರಣ ಕ್ಕೆ ತಿಳಿಸಿದ್ದಾರೆ.

ಮೇ ೧೦ ಸಂಜೆ ೬ಗಂಟೆಗೆ ಬಹಿರಂಗ ಪ್ರಚಾರ ಅಂತ್ಯ

ಧಾರವಾಡ : ಕರ್ನಾಟಕ ವಿಧಾನಸಭಾ ಚುನಾವಣೆಯ ಬಹಿರಂಗ ಮತ ಪ್ರಚಾರ ಮೇ೧೦ ರಂದು ಸಂಜೆ ೬ ಗಂಟೆಗೆ ಕೊನೆಗೊಳ್ಳಲಿದೆ. ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳಿಗೆ ಗರಿಷ್ಠ ೧೦ ಜನರ ಗುಂಪಿನೊಂದಿಗೆ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಚುನಾವಣಾ ಅಕ್ರಮ ಹಾಗೂ ಇತರ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಪ್ರಕರಣಗಳ ಕುರಿತು ಎಣಿಕೆ ವೀಕ್ಷಕರು, ಚುನಾವಣಾ ವೀಕ್ಷಕರು, ವೆಚ್ಚ ವೀಕ್ಷಕರು, ಪೊಲೀಸ್ ವೀಕ್ಷಕರನ್ನು ಆಯಾ ಚುನಾವಣಾ ಅಧಿಕಾರಿಗಳಿಗೆ ಸಂಪರ್ಕಿಸಿ ಮಾಹಿತಿ ನೀಡಬಹುದು. ನವಲಗುಂದ ವಿಧಾನಸಭಾ ಮತಕ್ಷೇತ್ರದ ಸಾಮಾನ್ಯ ವೀಕ್ಷಕ ಡಾ.ಸಂಜಯ ಸಿನ್ಹಾ ಅವರನ್ನು ಧಾರವಾಡದ ಕೃಷಿ ವಿವಿಯ ಅಂತರಾಷ್ಟಿಯ ಅತಿಥಿ ಗೃಹದ ಶಾಲ್ಮಲಾ ಕೋಣೆಯಲ್ಲಿ ಬೆಳಿಗ್ಗೆ ೧೦ ರಿಂದ ೧೧ ರವರೆಗೆ ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ ೦೮೩೬-೨೪೪೪೪೫೮ ಮೋಬೈಲ್ ಸಂಖ್ಯೆ ೯೪೪೯೮೪೭೬೩೯ ಕರೆ ಮಾಡಿ ಮಾಹಿತಿ ನೀಡಬಹುದು. ಕುಂದಗೋಳ ವಿಧಾನಸಭಾ ಮತಕ್ಷೇತ್ರದ ಸಾಮಾನ್ಯ ವೀಕ್ಷಕ ರೂಪಕ್ ಮಜೂಂದಾರ್ ಅವರನ್ನು ನ್ಯೂ ಸರ್ಕಿಟ್ ಹೌಸ್ ರೂಮ್ ನಂಬರ್ ೪ ಡಿಸಿ ಕಂಪೌಂಡ್ ಧಾರವಾಡದಲ್ಲಿ ಬೆಳಿಗ್ಗೆ ೯:೩೦ ರಿಂದ ೧೦:೩೦ ರವರೆಗೆ ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ ೦೮೩೬-೨೪೪೫೫೧೩ ಮೊಬೈಲ್ ಸಂಖ್ಯೆ ೯೪೪೯೮೪೭೬೪೦ ಕರೆ ಮಾಡಿ ಮಾಹಿತಿ ನೀಡಬಹುದು. ಧಾರವಾಡ ವಿಧಾನಸಭಾ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾದ ರಾಜೇಶ ಬಹುಗುಣ ಅವರನ್ನು ಧಾರವಾಡದ ಕೃಷಿ ವಿವಿಯ ಅಂತರಾಷ್ಟ್ರೀಯ ಅತಿಥಿ ಗೃಹದ ತುಂಗಭದ್ರಾ ಕೋಣೆಯಲ್ಲಿ ಬೆಳಿಗ್ಗೆ ೯ ರಿಂದ ೧೧ ರವರೆಗೆ ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ ೦೮೩೬-೨೪೪೪೪೪೨ ಮೊಬೈಲ್ ಸಂಖ್ಯೆ ೯೪೪೯೮೪೭೬೪೧ ಕರೆ ಮಾಡಿ ಮಾಹಿತಿ ನೀಡಬಹುದು ಹುಬ್ಬಳ್ಳಿ - ಧಾರವಾಡ (ಪೂರ್ವ ) ವಿಧಾನಸಭಾ ಮತಕ್ಷೇತ್ರ ಹಾಗೂ ಹುಬ್ಬಳ್ಳಿ - ಧಾರವಾಡ (ಪಶ್ಚಿಮ ) ವಿಧಾನಸಭಾ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಪ್ರಕಾಶ ಚಂದ ಪವನ ಅವರನ್ನು ನ್ಯೂ ಸರ್ಕಿಟ್ ಹೌಸ್ ರೂಮ್ ನಂಬರ್ ೨ ದೇಶಪಾಂಡೆನಗರ, ಹುಬ್ಬಳ್ಳಿಯಲ್ಲಿ ಬೆಳಿಗ್ಗೆ ೧೦ ರಿಂದ ೧೧ ರವರೆಗೆ ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ ೦೮೩೬-೨೨೫೫೦೨೫ ಮೊಬೈಲ್ ಸಂಖ್ಯೆ ೯೪೪೯೮೪೭೬೪೨ ಕರೆ ಮಾಡಿ ಮಾಹಿತಿ ನೀಡಬಹುದು ಹುಬ್ಬಳ್ಳಿ - ಧಾರವಾಡ (ಕೇಂದ್ರ ) ವಿಧಾನಸಭಾ ಮತಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಭಾನು ಪ್ರಕಾಶ ಯತೂರು ಅವರನ್ನು ನ್ಯೂ ಸರ್ಕಿಟ್ ಹೌಸ್ ರೂಮ್ ನಂಬರ್ ೩ ದೇಶಪಾಂಡೆನಗರ, ಹುಬ್ಬಳ್ಳಿಯಲ್ಲಿ ಬೆಳಿಗ್ಗೆ ೧೦ ರಿಂದ ೧೧ ರವರೆಗೆ ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ ೦೮೩೬-೨೨೫೫೦೨೪ ಮೊಬೈಲ್ ಸಂಖ್ಯೆ ೯೪೪೯೮೪೭೬೪೩ ಕರೆ ಮಾಡಿ ಮಾಹಿತಿ ನೀಡಬಹುದು ಕಲಘಟಗಿ ವಿಧಾನಸಭಾ ಮತಕ್ಷೇತ್ರದ ಸಾಮಾನ್ಯ ವೀಕ್ಷಕ ಸಂಜಯ್ ಗುಪ್ತಾ ಅವರನ್ನು ಧಾರವಾಡದ ಕೃಷಿ ವಿವಿಯ ಅಂತರಾಷ್ಟ್ರೀಯ ಅತಿಥಿ ಗೃಹದ ಮಲಪ್ರಭಾ ಕೋಣೆಯಲ್ಲಿ ಬೆಳಿಗ್ಗೆ ೧೦ ರಿಂದ ೧೧ ರವರೆಗೆ ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ ೦೮೩೬-೨೪೪೪೪೩೭ ಮೊಬೈಲ್ ಸಂಖ್ಯೆ ೯೪೪೯೮೪೭೬೪೪ ಕರೆ ಮಾಡಿ ಮಾಹಿತಿ ನೀಡಬಹುದು. ಧಾರವಾಡ ಜಿಲ್ಲೆಯ ಎಲ್ಲಾ ವಿಧಾನಸಭಾ ಮತಕ್ಷೇತ್ರಗಳ ಮಾಹಿತಿಯನ್ನು ಸಾಮಾನ್ಯ ವೀಕ್ಷಕ ಸಚಿನ್ ಪಾಟೀಲ್ ಅವರನ್ನು ನ್ಯೂ ಸರ್ಕಿಟ್ ಹೌಸ್ ರೂಮ್ ನಂಬರ್ ೩ ಡಿಸಿ ಕಂಪೌಂಡ್ ಧಾರವಾಡದಲ್ಲಿ ಬೆಳಿಗ್ಗೆ ೯:೩೦ ರಿಂದ ೧೦:೩೦ರವರೆಗೆ ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ ೦೮೩೬-೨೪೪೫೫೧೨ ಮೊಬೈಲ್ ಸಂಖ್ಯೆ ೯೪೪೯೮೪೭೬೪೫ ಕರೆ ಮಾಡಿ ಮಾಹಿತಿ ನೀಡಬಹುದು. ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.

ಕೃಷಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ

ಧಾರವಾಡ : ಕೃಷಿ ವಿಶ್ವವಿದ್ಯಾಲಯದಲ್ಲಿ ಜಿಲ್ಲೆಯ ಎಲ್ಲ ಏಳೂ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು. ಈಗಾಗಲೇ ಮತ ಎಣಿಕೆ ಕೇಂದ್ರ ಸಜ್ಜುಗೊಂಡಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗಾಗಿ ಪ್ರತ್ಯೇಕ ಕೊಠಡಿಗಳನ್ನು ನಿಗದಿಪಡಿಸಲಾಗಿದೆ. ಅಲ್ಲದೆ ಇವಿಎಂ ಸ್ಟ್ರಾಂಗ್ ರೂಮ್ಗಳನ್ನು ಸ್ಥಾಪಿಸಲಾಗಿದೆ. ಮತ ಎಣಿಕಾ ಕೇಂದ್ರದಲ್ಲಿ ಮೀಡಿಯಾ ಸೆಂಟರ್, ಪೊಲೀಸ್ ವೇಟಿಂಗ್ ರೂಮ್, ವೀಕ್ಷಕರ ಕೊಠಡಿ ಹಾಗೂ ಡಿ.ಇ.ಓ ರೂಮ್ಗಳನ್ನು ಸಹ ನಿಗದಿಪಡಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮತ ಎಣಿಕೆಗಾಗಿ ೧೪ ಟೇಬಲ್ನಂತೆ ವ್ಯವಸ್ಥೆ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಅಂದಾಜು ೧೫ ರಿಂದ ೨೦ ಸುತ್ತುಗಳಲ್ಲಿ ನಡೆಯಲಿದೆ. ಮತ ಎಣಿಕೆ ಕಾರ್ಯವು ಸುಗಮವಾಗಿ ನಡೆಯಬೇಕಾಗಿದ್ದು, ಮತ ಎಣಿಕಾ ಕಾರ್ಯಕ್ಕಾಗಿ ನಿಯೋಜಿಸಲಾದ ಅಧಿಕಾರಿಗಳು ಮೇ. ೧೫ ರಂದು ಬೆಳಿಗ್ಗೆ ೫.೩೦ ಗಂಟೆಗೆ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಿ, ವರದಿ ಮಾಡಿಕೊಳ್ಳಬೇಕು. ತಮಗೆ ಹಂಚಿಕೆಯಾದ ವಿಧಾನಸಭಾ ಕ್ಷೇತ್ರ ಹಾಗೂ ಟೇಬಲ್ ಸಂಖ್ಯೆಯನ್ನು ತಿಳಿದುಕೊಳ್ಳಬೇಕು. ಮತಯಂತ್ರಗಳ ಪ್ರಕಾರ ದಾಖಲಾದ ಮತಗಳ ಸಂಖ್ಯೆ, ಚಲಾವಣೆಯಾದ ಮತಗಳು ಇತ್ಯಾದಿಗಳ ವಿವರವನ್ನು ಪಡೆಯಬೇಕು. ಮೊದಲಿಗೆ ಬೆಳಿಗ್ಗೆ ೦೮ ಗಂಟೆಗೆ ಸರಿಯಾಗಿ ಪೋಸ್ಟಲ್ ಮತಗಳ ಎಣಿಕೆಯನ್ನು ಕ್ಷೇತ್ರ ಚುನಾವಣಾಧಿಕಾರಿಗಳ ಟೇಬಲ್ನಲ್ಲಿ ಪ್ರಾರಂಭಗೊಂಡು, ಉಳಿದಂತೆ ಮತಗಟ್ಟೆಗಳಲ್ಲಿ ಇವಿಎಂ ಮೂಲಕ ದಾಖಲಾದ ಮತಗಳ ಎಣಿಕೆ ಕಾರ್ಯ ಪ್ರಾರಂಭವಾಗುತ್ತದೆ. ಮತ ಎಣಿಕೆ ಕಾರ್ಯದಲ್ಲಿ ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿಯನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ತೊಂದರೆ ಉಂಟಾದಲ್ಲಿ ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು .ಅಭ್ಯರ್ಥಿಗಳ ಭವಿಷ್ಯವನ್ನು ಅಂತಿಮವಾಗಿ ಘೋಷಿಸುವ ಈ ಮಹತ್ವದ ಕಾರ್ಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ನಿಷ್ಪಕ್ಷಪಾತವಾಗಿ, ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ಕೆಲಸ ಮಾಡಬೇಕು. ಅಭ್ಯರ್ಥಿಗಳಿಗೆ ಅವರ ಪ್ರತಿನಿಧಿಗಳಿಗೆ ಒಟ್ಟಾರೆ ಪ್ರಕ್ರಿಯೆಯಲ್ಲಿ ಸಂಪೂರ್ಣ ವಿಶ್ವಾಸ ಸಿಗುವಂತೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಹೇಳಿದರು. ಉಪವಿಭಾಗಾಧಿಕಾರಿ ಪಿ.ಜಯಮಾಧವ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಪ್ರೊಬೆಷನರಿ ಉಪವಿಭಾಗಾಧಿಕಾರಿ ಶೇಖರ್ ಉಪಸ್ಥಿತರಿದ್ದರು.

ಮತ ಎಣಿಕೆ ಕಾರ್ಯದಲ್ಲಿ ಎಚ್ಚರಿಕೆ ವಹಿಸಿ : ರೂಪಕ್ ಮಜುಂದಾರ್

ಧಾರವಾಡ : ವಿಧಾನಸಭಾ ಚುನಾವಣೆಯ ಅಂಗವಾಗಿ ಮೇ.೧೫ ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆಗಾಗಿ ನಿಯೋಜಿಸಲಾದ ಅಧಿಕಾರಿಗಳು, ಆಯೋಗ ನೀಡಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಚುನಾವಣಾ ವೀಕ್ಷಕ, ಹಿರಿಯ ಐಎಎಸ್ ಅಧಿಕಾರಿ ರೂಪಕ್ ಕೆ ಆರ್ ಮಜುಂದಾರ್ ಹೇಳಿದರು. ಸೆಕ್ಟರ್ ಅಧಿಕಾರಿಗಳು, ಮತ ಎಣಿಕೆ ಮೇಲ್ವಿಚಾರಕರು ಹಾಗೂ ಮತ ಎಣಿಕೆ ಸಹಾಯಕ ಅಧಿಕಾರಿಗಳಿಗೆ ಮತ ಎಣಿಕೆ ಕಾರ್ಯದ ಕುರಿತು ಧಾರವಾಡದ ಆಲೂರು ವೆಂಕಟರಾವ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಇದುವರೆಗೆ ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ. ಮತ ಎಣಿಕೆ ಕಾರ್ಯವೂ ಸಹ ಸಮರ್ಪಕವಾಗಿ ನಡೆಯುವಂತೆ ಎಚ್ಚರವಹಿಸಬೇಕು. ಯಾವುದೇ ಒತ್ತಡಗಳಿಗೆ ಒಳಗಾಗದೇ, ಎಲ್ಲವನ್ನೂ ಸರಿಯಾಗಿ ಅರ್ಥ ಮಾಡಿಕೊಂಡು ನಿಯಮಾನುಸಾರ ಕರ್ತವ್ಯ ನಿರ್ವಹಿಸಬೇಕು. ಪ್ರತಿ ಸುತ್ತಿನ ನಂತರ ಅಭ್ಯರ್ಥಿಯ ಪ್ರತಿನಿಧಿಗಳ ಸಹಿ ಪಡೆಯಬೇಕು ಎಂದರು.

ಯಡಿಯೂರಪ್ಪನನ್ನು ಮುಖ್ಯಮಂತ್ರಿ ಮಾಡಲು ಹೊರಟಿರುವುದು ನಾಚಿಗೇಡಿನ ಸಂಗತಿ ಎಂದ ವಿನಯ ಕುಲಕರ್ಣಿ

ಧಾರವಾಡ : ಜೈಲು ಹೊಕ್ಕು ಬಂದಿರುವ ಯಡಿಯೂರಪ್ಪನವರನ್ನು ಬಿಜೆಪಿ ನಾಯಕರು ರಾಜ್ಯದ ಮುಖ್ಯಮಂತ್ರಿಯನ್ನಾಗಿಸಲು ಹೊರಟಿರುವುದು ತೀರಾ ನಾಚಿಗೇಡಿನ ಸಂಗತಿಯಾಗಿದೆ ಎಂದು ಧಾರವಾಡ ವಿಧಾನಸಭಾ ಕ್ಷೇತ್ರ-೭೧ರ ಅಭ್ಯರ್ಥಿ ಹಾಗೂ ಸಚಿವ ವಿನಯ ಕುಲಕರ್ಣಿ ವ್ಯಂಗ್ಯವಾಡಿದರು. ಅವರು ತಾಲೂಕಿನ ನೀರಲಕಟ್ಟಿ, ತಡಕೋಡ ಹಾಗೂ ಗರಗ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಸಭೆ ಸಮಾರಂಭಗಳಲ್ಲಿ ಮಾತೆತ್ತಿದರೆ ಸಾಕು ನನ್ನನ್ನು ಗುಂಡಾ ಎನ್ನುತ್ತಿರುವ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರ ನಡೆ ಸರಿಯಾದುದಲ್ಲ. ನನ್ನದು ಗುಂಡಾ ಪ್ರವೃತ್ತಿ ಎನ್ನುವುದಿದ್ದರೆ ಆ ಕುರಿತು ಅವರು ದಾಖಲೆ ಸಮೇತ ತೋರಿಸಲಿ ಎಂದು ಸವಾಲ್ ಹಾಕಿದರು. ನನ್ನ ಕ್ಷೇತ್ರದ ಜನತೆಗೆ ಅನ್ಯಾಯವಾದರೆ ನಾನು ಸಹಿಸುವುದಿಲ್ಲ. ನಾನು ಒಳ್ಳೆಯವರ ಪಾಲಿಗೆ ಒಳ್ಳೆಯವನಾಗಿದ್ದು, ಅನ್ಯಾಯ ಮಾಡುವವರ ವಿರುದ್ಧ ನನ್ನ ಹೋರಾಟ ಸದಾಕಾಲ ಇದ್ದೇ ಇರುತ್ತದೆ ಎಂದು ತಿರುಗೇಟು ನೀಡಿದರು. ಬಿಜೆಪಿ ನಾಯಕರು ಅಧಿಕಾರದ ಆಸೆಗಾಗಿ ಮತ್ತು ಲಿಂಗಾಯತರ ಮತಗಳಿಕೆಗಾಗಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ನೇಮಕ ಮಾಡಿದ್ದಾರೆ ಹೊರತು ನಿಜವಾಗಿಯೂ ಅಲ್ಲ. ಅಷ್ಟಕ್ಕೂ ಅವರು ಜೈಲು ಸೇರಲು ಅವರೇ ನಂಬಿಕೆಯಿಟ್ಟಿದ್ದ ನಾಯಕರೆ ಹೊರತು ಬೇರೆ ಯಾರು ಕಾರಣವಲ್ಲ. ನನ್ನನ್ನು ಗುಂಡಾ ಎನ್ನುತ್ತಿರುವ ಬಿಜೆಪಿ ನಾಯಕರು ಇದೀಗ ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಅಮೃತ ದೇಸಾಯಿ ಜೊತೆಗೆ ಪ್ರಚಾರ ಕಾರ್ಯದಲ್ಲಿರುವ ನಿಜವಾದ ಗುಂಡಾಗಳನ್ನು ಮರೆತಂತಿದೆ ಎಂದು ತರಾಟೆ ತೆಗೆದು ಕೊಂಡರು. ರೌಡಿ ಶೀಟರಗಳನ್ನು ಬೆನ್ನು ಹಚ್ಚಿಕೊಂಡು ತಿರಾಗುಡುತ್ತಿದ್ದಾರಲ್ಲ. ಒಂದು ಸಾರಿ ಅವರ ಹಿಂದಿನ ಇತಿಹಾಸವನ್ನು ತೆಗೆದು ನೋಡಿ ಎಂದ ಅವರು ಸುಳ್ಳನ್ನೆ ತಮ್ಮ ಮನೆ ದೇವರನ್ನಾಗಿಸಿಕೊಂಡಿರುವ ಈ ಭಾಗದ ಸಂಸದ ಜೋಶಿಯವರು ಚುನಾವಣೆಯ ಸಂದರ್ಭದಲ್ಲಿ ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದು ತಮ್ಮ ೧೪ ವರ್ಷಗಳ ಅವಧಿಯಲ್ಲಿ ತಮ್ಮ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆಂಬುದನ್ನು ಸ್ಪಷ್ಟ ಪಡಿಸಲಿ. ನಮ್ಮದೇ ರಾಜ್ಯ ಸರ್ಕಾರದ ಕೆಲವು ಮಹತ್ತರ ಯೋಜನೆಗಳನ್ನು ಕೇಂದ್ರ ಸರ್ಕಾರದ್ದು ಎಂದು ಸುಳ್ಳು ಹೇಳುತ್ತ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಭಾಗದ ಜನರು ಪ್ರಜ್ಣಾವಂತರಿದ್ದು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇನ್ನಾದರೂ ಬೆಂಕಿ ಹಚ್ಚುವ ಕೆಲಸವನ್ನು ಬಿಟ್ಟು ಅಭಿವೃದ್ದಿ ಕಡೆ ಗಮನ ಹರಿಸುವುದು ಒಳ್ಳೆಯದು.ಇಲ್ಲವಾದಲ್ಲಿ ಮುಂಬರುವ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದರು. ಬಳಿಕ ಗರಗ್ ಗ್ರಾಮದಲ್ಲಿ ಭರ್ಜರಿ ರೋಡ್ ಶೋ ನಡೆಸಿ, ಮತಯಾಚಿಸಿದರು.

ಸಿದ್ದರಾಮಯ್ಯಗೆ ಎರಡು ಸವಾಲ್ ಹಾಕಿದ ಅನಂತ್ ಕುಮಾರ್

ಉತ್ತರ ಕನ್ನಡ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಅನಂತ್ ಕುಮಾರ್ ಎರಡು ಸವಾಲು ಹಾಕಿದ್ದಾರೆ. ಶಿರಸಿಯಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ರೋಡ್ ಶೋ ನಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಕಟ್ಟಿರುವ ವಾಚ್ ನ ಕಸ್ಟಮ್ ಡ್ಯೂಟಿ ಕಟ್ಟಿದ್ದೀರಾ? ಪಾವತಿಸಿದ್ರೆ ಅದಕ್ಕೆ ಸಂಬಂಧಿಸಿದ ದಾಖಲೆ ನೀಡಿ. 24 ಗಂಟೆಯೊಳಗೆ ಸಿದ್ದರಾಮಯ್ಯ ಉತ್ತರಿಸಬೇಕು. ಉತ್ತರಿಸದೇ ಇದ್ದಲ್ಲಿ ತಾವು ಸುಳ್ಳು ಪ್ರಚಾರ ಮಾಡುತ್ತಿದ್ದೇವೆ ಎಂದು ಕಣದಿಂದ ಹಿಂದೆ ಸರಿಯಲಿ ಎಂದು ಸವಾಲು ಹಾಕಿದರು. ಕುಮಾರ್ ಸ್ವಾಮಿ ಮತ್ತು ಅಮಿತ್ ಷಾ ಒಂದೇ ಪ್ಲೈಟ್ ನಲ್ಲಿ ದೆಹಲಿಗೆ ಹೋದ್ರು ಎನ್ನುವುದಕ್ಕೆ ಸಾಕ್ಷಿಯನ್ನು ರಾಜ್ಯದ ಜನತೆ ಎದುರು ಬಿಡುಗಡೆ ಮಾಡಲು ನೇರ ಸವಾಲು ಹಾಕಿದ ಕೇಂದ್ರ ಸಚಿವ ಅನಂತಕುಮಾರ ಇದು ಕೇವಲ ಒಂದು ಕ್ಷೇತ್ರದ ಭವಿಷ್ಯವಲ್ಲ, ಇಡೀ ರಾಜ್ಯದ ಭವಿಷ್ಯ ನಿರ್ಧರಿಸುವ ಚುನಾವಣೆ ಸಿದ್ಧರಾಮಯ್ಯನಿಗೆ ಗಂಟೆಗೊಂದು ಕನಸು ಬೀಳುತ್ತದೆ ಅದೂ ಹಗಲುಗನಸು ಬೀಳುತ್ತದೆ. ಸಿದ್ಧರಾಮಯ್ಯ ಆಶ್ವಾಸನೆ ರೈತರಿಗೆ ಮೀಟರ್ ಬಡ್ಡಿ. ಕ್ಷೇತ್ರದ ಯುವಕರಿಗೋಸ್ಕರ ಇಲ್ಲೇ ಐಟಿ ಪಾರ್ಕ್ ನಿರ್ಮಾಣ ಮಾಡೋಣ. ಸಿದ್ಧರಾಮಯ್ಯ ಸರ್ಕಾರ ರೇತಿ ಮಾಫಿಯಾ, ಲಿಕ್ಕರ್ ಮಾಫಿಯಾ ಕೊಡುತ್ತಿದೆ ಎಂದು ಆರೋಪಿಸಿದರು. ಕಾಗೇರಿ ಪುಣ್ಯಕೋಟಿ ಇದ್ದಂತೆ. ನಿಮ್ಗೆ ಪುಣ್ಯಕೋಟಿ ಬೇಕಾ ಅಥವಾ ಹೆಬ್ಬುಲಿ ಬೇಕಾ? ಈ ಮಾಫಿಯಗಳನ್ನು ಮಟ್ಟ ಹಾಕಲು ಕಾಗೇರಿಯವರಿಗೆ ಮತ್ತೊಮ್ಮೆ ಅಧಿಕಾರ ನೀಡಿ. ಬೆಳಗ್ಗೆ ಸಿದ್ಧರಾಮಯ್ಯ ಟ್ವೀಟ್, ಮಧ್ಯಾಹ್ನ ರಾಹುಲ್ ಟ್ವೀಟ್, ಸಂಜೆ ರಮ್ಯಾ ಟ್ವೀಟ್. ಕಾಂಗ್ರೆಸ್ ದು ಬರೀ ಟ್ವೀಟ್ ಪ್ರಚಾರವೇ ಆಗಿದೆ. ಏಕಂದ್ರೆ ರಾಹುಲ್ ಏಳೋದೇ ಮಧ್ಯಾಹ್ನ. ಬೆಂಗಳೂರಲ್ಲಿ ದೋಸ್ತಿ, ಶಿರಸಿಯಲ್ಲಿ ಕುಸ್ತಿ ನಡೆಯೊಲ್ಲ ಎಂದು ಕುಟುಕಿದರು.

ಕಾಂಗ್ರೆಸ್ ಅಲೆಯ ಎದುರು ಮೋದಿ, ಅಮಿತ್ ಷಾ ಆಟ ನಡೆಯಲ್ಲ

ಮೈಸೂರು : ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ಈ ಅಲೆಯ ಎದುರು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಆಟ ನಡೆಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು. ಅವರು ಮೈಸೂರು ಜಿಲ್ಲೆಯ ಚಾಮರಾಜ ಕ್ಷೇತ್ರದಲ್ಲಿ ಶಾಸಕ ವಾಸು ಪರವಾಗಿ ಪ್ರಚಾರ ಮಾಡಿ ಮಾತನಾಡಿದರು. ಅವ್ರು ಕರ್ನಾಟಕದ ಜನತೆಗೆ , ರೈತರಿಗೆ ಏನು ಸಹಾಯ ಮಾಡಿಲ್ಲ, ಅವರ ಮಾತಿನಿಂದ ಬಡವರ, ರೈತರ, ನಿರುದ್ಯೋಗದಿಂದ ಬಳಲುವವರ ಹೊಟ್ಟೆ ತುಂಬಲ್ಲ, ಬಡವರ ಪರವಾಗಿ ಸ್ಷಂದಿಸುವ ಹೃದಯ ಅವರಿಗಿಲ್ಲ ಎಂದರು. ದೇವರಾಜ ಅರಸು ಅವರ ನಂತರ ೫ ವರ್ಷ ಆಡಳಿತ ನಡೆಸಿದ್ದು ನಾನೊಬ್ಬನೇ. ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದ ಅವರು ಗಾಳಿ ಮಾತಿಗೆ ತಲೆಕೊಡಬೇಡಿ ಕರ್ನಾಟಕದ ದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ‌. ಡಿಸೆಂಬರ್ ನಿಂದ ಎಲ್ಲ ಕ್ಷೇತ್ರಗಳಲ್ಲೂ ಪ್ರಚಾರ ಮಾಡಲಾಗುತ್ತಿದ್ದು ,೧೮೦ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ನಡೆಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ವಾಸು, ಸೇರಿದಂತೆ ಹಲವಾರು ಪ್ರಮುಖ ಮುಖಂಡರು ಭಾಗವಹಿಸಿದ್ದರು.

ರಾಹುಲ್ ಗಾಂಧಿ ಅಪ್ರಬುದ್ಧರಂತೆ ವರ್ತನೆ : ಶಿವರಾಜ್ ಸಿಂಗ್ ಚವ್ಹಾಣ

ಹುಬ್ಬಳ್ಳಿ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಪ್ರಬುದ್ಧರಂತೆ ವರ್ತಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಧರ್ಮವನ್ನ ಒಡೆಯುತ್ತಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜಸಿಂಗ್ ಚವ್ಹಾಣ ಹೇಳಿಕೆ ನೀಡಿದ್ದಾರೆ. ಅವರು ಬುಧವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕದಲ್ಲಿ ರಾಜಕೀಯ ತುಷ್ಟಿಕರಣ ಮಾಡಲಾಗುತ್ತಿದೆ. ಕೇವಲ ಒಂದು ಸಮುದಾಯದ ಓಲೈಕೆ ಮಾಡಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ. ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯಾವುದೇ ಚುನಾವಣೆ ಗೆಲ್ಲಲು ನಾಯಕತ್ವ, ಸಂಘಟನೆ, ವಿಚಾರಧಾರೆ ಈ ಮೂರು ಅಂಶಗಳು ಮುಖ್ಯವಾಗುತ್ತೆ. ಈ‌ ಮೂರು ಅಂಶಗಳು ಭಾರತೀಯ ಜನತಾ ಪಕ್ಷ ಹೊಂದಿದೆ. ಹೀಗಾಗಿ ಕರ್ನಾಟದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದ ಅವರು ಸ್ವಾಮಿ ವಿವೇಕಾನಂದರು, ಸರ್ದಾರ ವಲ್ಲಭಬಾಯಿ ಪಟೇಲ ಹಾಗೂ ಮಹಾತ್ಮಾ ಗಾಂಧಿ ಅವರ ಕನಸು ಸಾಕಾರ ಗೊಳಿಸುವ ಕಾರ್ಯ ಪ್ರಧಾನಿ ಮಾಡುತ್ತಿದ್ದಾರೆ ಎಂದರು. ಭಾರತದಲ್ಲಿ ಹೊಸ ಪರ್ವ ಪ್ರಾರಂಭವಾಗಿದೆ. ದೇಶ ಅಭಿವೃದ್ಧಿ ಪಥದಲ್ಲಿ ನಡೆಯುತ್ತಿದೆ ಎಂದ ಅವರು ಕಾಂಗ್ರೆಸ್ ಪಕ್ಷದವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ದಲಿತರ ವಿರುದ್ಧವಿದೆ ಎಂದು ಸುಳ್ಳು ಹೇಳಲಾಗುತ್ತಿದೆ. ಆದರೆ, ದಲಿತರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್ಸಿಗರೆ ಹೊರತು ಬಿಜೆಪಿ ಅಲ್ಲ. ಪ್ರಧಾನಿ ಮೋದಿ ಸರಕಾರ ಪ್ರತಿ ರಾಜ್ಯಕ್ಕೆ ತೆರಿಗೆಯಲ್ಲಿ ಶೇ.೧೦ ರಷ್ಟು ಅಧಿಕ ಲಾಭ‌ ನೀಡಿದೆ ಎಂದರು.

ಮಹಿಳಾ ಗಾರ್ಮೆಂಟ್ ನೌಕರರೊಂದಿಗೆ ರಾಹುಲ್ ಗಾಂಧಿ ಸಂವಾದ

ಬೆಂಗಳೂರು : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಮಹಿಳಾ ಗಾರ್ಮೆಂಟ್ ನೌಕರರೊಂದಿಗೆ ರಾಹುಲದ ಗಾಂಧಿ ಸಂವಾದ ನಡೆಸಿದರು. ರಾಜ್ಯದ ಕಾಂಗ್ರೆಸ್ ಸರಕಾರ ಅವರಿಗೆ ನೀಡಿದ ಸೌಲಭ್ಯಗಳು ತಲುಪಿವೆಯೇ ಎಂದು ಪ್ರಶ್ನಿಸಿದರು. ಸರಕಾರದ ಸಾಧನೆ ತೃಪ್ತಿ ತಂದಿದೆಯೇ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೌಲಭ್ಯ ಒದಗಿಸುವ ಭರವಸೆ ನೀಡಿದರು. ಅವರಿಗೆ ಸಿಎಂ ಸಿದ್ದರಾಮಯ್ಯ ಸಚಿವರಾದ ರಾಮಲಿಂಗಾರೆಡ್ಡಿ, ಡಿ‌.ಕೆ. ಶಿವಕುಮಾರ್ ಸೇರಿದಂತೆ ಹಲವಾರು ಮುಖಂಡರು ಸಾಥ್ ನೀಡಿದರು.

ಮತದಾರರಿಗೆ ಹಣ ಹಂಚುತ್ತಿದ್ದ ಇಬ್ಬರ ಬಂಧನ

ಬೀದರ್ : ಮತದಾರರಿಗೆ ಹಣ ಹಂಚುತ್ತಿದ್ದ ಇಬ್ಬರ ಬಂಧಿಸಿದ ಘಟನೆ ಬೀದರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರನ್ನೊಬ್ಬರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿರುವ ಪೊಲೀಸರು ಬಂಧಿತರಿಂದ ೧೦ ಲಕ್ಷ ೫೦ ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ವಶಕ್ಕೆ ಪಡೆದುಕೊಂಡವರನ್ನು ಅಬ್ದುಲ್ ಹಾಗೂ ಸಮಾದ್ ಎಂದು ಗುರುತಿಸಲಾಗಿದೆ. ಬೀದರ ಉತ್ತರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಹೀಂ ಖಾನ್ ಪರ ಹಣ ಹಂಚಿಕೆ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ಸಾವಿರಾರು ನಕಲಿ ವೋಟರ್ ಐಡಿ ಪತ್ತೆ

ಬೆಂಗಳೂರು : ಬೆಂಗಳೂರಿನ ಆರ್ ಆರ್ ನಗರದಲ್ಲಿ ಸಾವಿರಾರು ನಕಲಿ ವೋಟರ್ ಐಡಿಗಳು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿಚಾರಣೆ ಮುಂದುವರೆಸಲಾಗಿದೆ. ಡಿಸಿಪಿ ಚೇತನ್ ಸಿಂಗ್ ರಾಠೋಡ್ ನೇತೃತ್ವದಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಕುಕೃತ್ಯವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಕುಕ್ಕರ್ ವಿತರಣೆ ಸಂದರ್ಭದಲ್ಲಿ ಅವುಗಳನ್ನು ಸಂಗ್ರಹಿಸಲಾಗಿತ್ತು ಎಂದು ಬಂಧಿತರು ಬಾಯಿ ಬಿಟ್ಟಿದ್ದಾರೆ.

ಚಿನ್ನದ ನಾಡಿನಲ್ಲಿ ನರೇಂದ್ರ ಮೋದಿ ವಾಗ್ಣಾಣ

ಬಂಗಾರಪೇಟೆ : ವೀರಪ್ಪ ಮೋಯ್ಲಿ ಟಿಕೇಟ್ ಮಾರಾಟ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದರು. ಕಾಂಗ್ರೆಸ್ ಪಕ್ಷ ದೊಡ್ಡವರನ್ನು ಕಡೆಗಣಿಸಿದ ಹಾಗೆಯೇ ಇವರನ್ನು ನಿರ್ಲಕ್ಷ್ಯಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ವಾಗ್ಬಾಣ ಬಿಟ್ಟಿದ್ದಾರೆ‌. ಅವರು ಚಿನ್ನದ ನಾಡು ಬಂಗಾರಪೇಟೆಯಲ್ಲಿ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಮಾತನಾಡಿದರು. ಮೋಯ್ಲಿಯವರೇ ನೀವು ಮರೆತಿರಬಹುದು. ಆದರೆ ನಮ್ಮ ಜನ ಮರೆತಿಲ್ಲ. ಈ ಚುನಾವಣೆ ನಾಮ್ದಾರ ಹಾಗೂ ಕಾಮ್ ದಾರ ನಡುವಿನ ಹೋರಾಟ. ಇಂತಹ ಬೇಶರಂ ಸರಕಾರ. ಒಂದೇ ವಂಶದ ನಾಲ್ಕು ಜನರಿಗೆ ಭಾರತ ರತ್ನ ನೀಡಿದ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾವ್ ಅವರನ್ನು ಅವಮಾನಿಸಿದೆ. ಅದೇ ರೀತಿ ದಲಿತ ಮುಖ್ಯ ಮಂತ್ರಿಯಾಗಿ ಮಲ್ಲಿಕಾರ್ಜುನ ಖರ್ಗೆಯವನ್ನು ಕಡೆಗಣಿಸಿ ಗುತ್ತಿಗೆದಾರರ ಪರ ಇರುವ ಸಿದ್ದರಾಮಯ್ಯ ಅವರನ್ನು ಮುಖ್ಯ ಮಂತ್ರಿ ಯನ್ನಾಗಿ ಮಾಡಿ ದಲಿತರ ಅಪಮಾನ ಮಾಡಿದೆ ಎಂದು ಆರೋಪಿಸಿದರು.

ವಿನಯ್ ಕುಲಕರ್ಣಿ ಆಸ್ತಿ ಹೆಚ್ಚಗಿ ಮಾಡಿಕೊಂಡಿದ್ದಾರೆ : ಅಮೃತ ದೇಸಾಯಿ

ಧಾರವಾಡ : ಧಾರವಾಡ ೭೧ರಲ್ಲಿ ಬಿಜೆಪಿಯ ಬಿರುಗಾಳಿ ಎದ್ದಿದೆ. ಈ ಚುನಾವಣೆ ಇತಿಹಾಸ ನಿರ್ಮಾಣ ಮಾಡಲಿದೆ. ಬಂಡ ಶಾಸಕ ಜಿಲ್ಲಾ ಉಸ್ತುವಾರಿ ಸಚಿವ ಬಾಳ್ ಅಭಿವೃದ್ಧಿ ಮಾಡಿದ್ದಾರೆ ಬರೀ ಅವರ ಆಸ್ತಿ ಹೆಚ್ಚಗಿ ಮಾಡಿಕೊಂಡಿದ್ದಾರೆ ಎಂದು ಧಾರವಾಡ ವಿಧಾನ ಸಭಾ ಕ್ಷೆÃತ್ರ-೭೧ರ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಹೇಳಿದರು. ಅವರು ಮಂಗಳವಾರ ಸಂಜೆ ಉಪ್ಪಿನಬೆಟಗೇರಿ ಗ್ರಾಮದಲ್ಲಿ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಮಾತನಾಡಿದರು. ದೊಡ್ಡ ದೊಡ್ಡ ಭಾಷಣ ಮಾಡೋದು ಅವರಿಗೆ ಗೊತ್ತು. ವಿನಯ್ ಕುಲಕರ್ಣಿ ಅವರೇ ಡೇರಿಲಿ ದನ ಬಾಳ್ ಸಾಕಿದರಿ. ಆ ದನಗಳ ಸಾಕಲು ನಿಮ್ಮನ್ನ ಜನ ಕಳಿಸಲಿದ್ದಾರೆ ಎಂದು ಗುಡುಗಿದ ಅವರು ಇವತ್ತು ವಿನಯ್ ಕುಲಕರ್ಣಿಗೆ ಸೋಲಿನ ಭೀತಿ ಆರಂಭವಾಗಿದೆ. ದೇವರು ಬಾಯಿ ಕೊಟ್ಟಿದ್ದಾನೆಂದು ತೆಗಳಿದರೆ ನೀವು ನಾಯಕರಾಗುವುದಿಲ್ಲ. ನಮ್ಮ ನಾಯಕರಿಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದೀರಿ. ಇದು ಸರಿಯಲ್ಲ ಎಂದು ತಿರುಗೇಟು ನೀಡಿದರು. ಎಲ್ಲ ಸಮಾಜವನ್ನು ಒಂದುಗೂಡಿಸಿ ಅಭಿವೃದ್ಧಿ ಕೆಲಸ ಮಾಡಿದ್ದು ಯಡಿಯೂರಪ್ಪ ಅವರು ನುಡಿದಂತೆ ನಡೆದಿದ್ದೇವೆ ಅಂತಾರೆ. ಆದ್ರೆ ಈ ಗ್ರಾಮದಲ್ಲಿ ಅವರ ಯೋಜನೆಗಳು ಎಷ್ಟು ಪ್ರಯೋಜನ ಆಗಿವೆ. ರಾಜ್ಯದಲ್ಲಿ ಬಂಡ ಉತ್ತರ ನೀಡೋದೆ ಆಗಿದೆ. ಸಿಎಂ ಹಾಗೂ ಸಚಿವರು ಕೇವಲ ಅದರಲ್ಲಿ ನಿರತರಾಗಿದ್ದಾರೆ. ಯಾವಾಗ ಕಾಂಗ್ರೆಸ್ ಸರ್ಕಾರ ಬರೊತ್ತೆ ಅವಾಗ ಬರಗಾಲ ಬಿಳೊತ್ತೆ. ನಾನು ಬಾಸ್, ದಣಿ ಆಗಿ ಇರುವುದಿಲ್ಲ. ನಿಮ್ಮ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ಹಿಂದೆ ಬಿಜೆಪಿ ಯಿಂದ ಹೋರಾಟ ಮಾಡಿದ್ವಿ. ಮಲಪ್ರಭಾ ಕುಡಿಯುವ ನೀರಿಗಾಗಿ ಹೋರಾಟ ಮಾಡಿದ್ವಿ. ಆದ್ರೆ ಸಚಿವರಿಗೆ ಇಂತಹ ಯೋಚನೆ ಬರೊಲ್ಲ. ಇಂತಹದ್ದರ ಬಗ್ಗೆ ಚಿಂತನೆ ಮಾಡೋದಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ನಂತರ ನಾನು ಆ ಕೆಲಸ ಮೊದಲು ಮಾಡುತ್ತೇನೆ. ೧೫೦ ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ. ಕಮಲವನ್ನು ನೀವೆಲ್ಲ ಅರಳಿಸುತ್ತೀರಿ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ವಿನಯ್ ಕುಲಕರ್ಣಿ ಮನೆಗೆ ಕಳಿಸೋ ಕೆಲಸ ಮಾಡಿ : ಯಡಿಯೂರಪ್ಪ

ಧಾರವಾಡ : ಸಚಿವ ವಿನಯ್ ಕುಲಕರ್ಣಿ ಗೂಂಡಾಗಿರಿ ಮಾಡ್ತಾ ಇದಾರೆ. ಜಿಪಂ ಸದಸ್ಯನ ಕೊಲೆಗೆ ಪರೋಕ್ಷವಾಗಿ ಕಾರಣನಾಗಿದ್ದಾನೆ. ಹಣ ಹೆಂಡದಿಂದ ಗೆಲುವು ಸಾಧಿಸೋ ಕನಸು ಕಂಡಿದ್ದಾರೆ. ಹೀಗಾಗಿ ಅವರನ್ನು ಮನೆಗೆ ಕಳಿಸೋ ಕೆಲಸ ನೀವು ಮಾಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ,ಎಸ್. ಯಡಿಯೂರಪ್ಪ ಮನವಿಮಾಡಿದರು. ಅವರು ಮಂಗಳವಾರ ಸಂಜೆ ಉಪ್ಪಿನಬೆಟಗೇರಿ ಗ್ರಾಮದಲ್ಲಿ ಧಾರವಾಡ ವಿಧಾನ ಸಭಾ ಕ್ಷೆÃತ್ರ-೭೧ರ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರ ನಡೆದ ಬಿಜೆಪಿಯ ಬೃಹತ್ ಸಮಾವೇಶವನ್ನು ಉದ್ದೆÃಶಿಸಿ ಮಾತನಾಡಿದರು. ಮಂತ್ರಿ ಅನ್ನೋ ಸೊಕ್ಕಿನಿಂದ ವೀರಶೈವ, ಲಿಂಗಾಯತ ಅಂತಾ ಜಾತಿಯನ್ನು ಒಡೆಯುವ ಕೆಲಸ ಮಾಡ್ತಾ ಇದ್ದಾನೆ ಎಂದು ಎಕವಚನದಲ್ಲಿಯೇ ವಾಗ್ದಾಳಿ ನಡೆಸಿದ ಬಿ.ಎಸ್. ಯಡಿಯೂರಪ್ಪ ಅವರು ಈ ಚುನಾವಣೆಯಲ್ಲಿ ಸಚಿವ ವಿನಯ ಕುಲಕರ್ಣಿಗೆ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು. ಮೇ. ೧೨ ಕ್ಕೆ ಅಮೃತ ದೇಸಾಯಿ ಪರ ಯಾರು ವೋಟು ಕೊಡೊಲ್ವೋ ಅವರ ಕಾಲಿಗೆ ಬಿದ್ದು ಮತ ನೀಡಿಲು ಹೇಳಿ ಎಂದು ಕೈ ಜೋಡಿಸಿ ಬೇಡಿಕೊಂಡ ಯಡಿಯೂರಪ್ಪ ಅವರು ಮೊದಲನೇ ನಂಬರ್ ಅಮೃತ ಹೆಸರಿದೆ. ಅವರಿಗೆ ೨೫ ಸಾವಿರ ಅಂತರದಿಂದ ಗೆಲುವು ತಂದು ಕೊಡಬೇಕು ಎಂದರು. ಪ್ರಧಾನಿ ನರೇಂದ್ರ ಮೋದಿಯವರಿಗೆ ಯುವಕರ ಮೇಲೆ ತುಂಬಾ ವಿಶ್ವಾಸ ಇದೆ. ಯುವಕರು ಮನಸ್ಸು ಮಾಡಿದರೆ ಅಮೃತ ದೇಸಾಯಿ ಗೆಲ್ಲೋದು ಖಚಿತ. ವಿನಯ್ ಕುಲಕರ್ಣಿ ವಿರುದ್ಧದ ಆಕ್ರೋಶ ಇಷ್ಟು ಜನರು ಸೇರೋದಕ್ಕೆ ಕಾರಣ. ವಿನಯ್ ಕುಲಕರ್ಣಿ ಚುನಾವಣೆಯಲ್ಲಿ ಗೆಲ್ಲೋಕೆ ಬಿಡಬೇಡಿ. ಮನೆ ಮನೆಗೆ ಹೋಗಿ ಜನರಿಗೆ ಕಾಲಿಗೆ ಬಿದ್ದು ವೋಟು ಹಾಕಲು ಹೇಳಿ ಎಂದು ಮನವಿ ಮಾಡಿದರು. ಅಮ್ಮಿನಬಾವಿ, ಉಪ್ಪಿನಬೆಟಗೇರಿಯಲ್ಲಿ ಮಲಪ್ರಭಾ ಕಾಲುವೆ ಬೇಡಿಕೆ ಇದೆ. ಅದನ್ನು ಬರುವ ದಿನಗಳಲ್ಲಿ ಪರಿಗಣಿಸಲಾಗುವುದು ಎಂದು ಭರವಸೆನೀಡಿದ ಅವರು ಅನ್ನಭಾಗ್ಯ ಯಾರಪ್ಪಂದು ಅಲ್ಲ. ಪ್ರಧಾನಿ ನರೇಂದ್ರ ಮೋದಿ ನೀಡಿರೋ ಕೊಡುಗೆ ಅದು ಎಂದ ಅವರು ಸಿದ್ದರಾಮಯ್ಯ ಅವರೇ, ವಿನಯ್ ಕುಲಕರ್ಣಿ ಅವರೇ ೭ ಕೆ.ಜಿ ಅಕ್ಕಿ ಕೊಡ್ತಾ ಇದಿರಿ. ಚುನಾವಣೆಗೆ ಮುಂಚೆ ೪ ಕೆ.ಜಿ ಅಕ್ಕಿ ಎಲ್ಲಿಗೆ ಹೋಯ್ತು. ಇದೆಲ್ಲದರ ಬಗ್ಗೆ ತನಿಖೆ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದರು. ಬಿಪಿಎಲ್ ಕಾರ್ಡ್ ರದ್ದು ಮಾಡಿದ್ದು ನೀವು, ಆ ಎಲ್ಲ ಬಿಪಿಎಲ್ ಕಾರ್ಡ್ ಮತ್ತೆ ಮಾಡಿಸುತ್ತೇನೆ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್ ಸಾಲ ಮನ್ನಾ ಮಾಡುತ್ತೇನೆ. ೨೦ ಲಕ್ಷ ಕುಟುಂಬಗಳಿಗೆ ಬೇಸಾಯದ ಖರ್ಚಿಗೆ ನೀಡಲಾಗುತ್ತದೆ. , ರೈತರ ಪರವಾಗಿ ನಿಲ್ಲುತ್ತೆನೆ. ಭಾಗ್ಯಲಕ್ಲ್ಮೀ ಯೋಜನೆ ನಿಂತು ಹೋಗಿದೆ. ನಾನು ಅಧಿಕಾರಕ್ಕೆ ಬಂದ ನಂತರ ಮತ್ತೆ ಭಾಗ್ಯಲಕ್ಮ್ಮೀ ಆರಂಭ ಮಾಡುತ್ತೇನೆ ನಾನು ಬಹಳ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದೇನೆ. ತಾಯಿಯ ಕಳೆದುಕೊಂಡರೋ ನೋವು ನನಗಿದೆ. ತಾಯಂದಿರ ನೋವು ಏನು ಅನ್ನೋದು ಗೊತ್ತಿದೆ. ಹೀಗಾಗಿ ಅಧಿಕಾರಕ್ಕೆ ಬಂದ ನಂತರ ೧೨೦೦ ವೃದ್ಧಾಪ್ಯ ವೇತನ ಕೊಡುತ್ತೇನೆ. ಹೀಗೆ ಸಾರ್ವಜನಿಕರಿಗೆ ನ್ಯಾಯ ಒದಗಿಸುವ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಮುಖ್ಯಮಂತ್ರಿ ಇನ್ನು ಮೂರ್ನಾಲ್ಕು ದಿನ ಇರುತ್ತಾನೆ. ಬಾದಾಮಿಯಲ್ಲಿ ಶ್ರೀರಾಮಲು ಗೆಲುವು ಸಾಧಿಸಲಿದ್ದಾರೆ. ವಿನಯ್ ಕುಲಕರ್ಣಿ ನಾಲ್ಕು ದಿನ ನಾಲ್ಕು ತಾಸ್ ಅಧಿಕಾರದಲ್ಲಿರುತ್ತಾರೆ ಎಂದು ಗುಡುಗಿದರು. ಬಿಜೆಪಿ ರಾಜ್ಯದಲ್ಲಿ ೧೫೦ ಕ್ಷೇತ್ರ ಗೆದ್ದು ಅಧಿಕಾರ ಸ್ವೀಕಾರ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ಬಿ.ಎಸ್. ಯಡಿಯೂರಪ್ಪ ಅವರಿಗೆ ನೇಗಿಲು ನೀಡಿ ಕಂಬಳಿ ಹೊದಿಸಿ ಸಾಂಪ್ರದಾಯಿಕ ಸನ್ಮಾನ ನೀಡಿ ಗೌರವಿಸಿದರು. ಸಮಾವೇಶದಲ್ಲಿ ಹದಿನೈದು ಸಾವಿರಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು, ಬಿ.ಎಸ್. ಯಡಿಯೂರಪ್ಪ ಹಾಗೂ ಅಮೃತ ದೇಸಾಯಿ ಅಭಿಮಾನಿಗಳು ಪಾಲ್ಗೊಂಡು ತಮ್ಮ ಶಕ್ತಿ ಪ್ರದರ್ಶನ ನಡೆಸಿದರು. ಈ ಸಂದರ್ಭದಲ್ಲಿ ಧಾರವಾಡ ಸಂಸದ ಪ್ರಲ್ಹಾದ ಜೋಶಿ, ಜಿಲ್ಲಾಧ್ಯಕ್ಷ ಈರಣ್ಣ ಜಡಿ, ಮಾಜಿ ಶಾಸಕಿ ಸೀಮಾ ಮಸೂತಿ, ಬಿಜೆಪಿ ಮುಖಂಡರಾದ ತವನಪ್ಪ ಅಷ್ಟಗಿ, ಗುರುನಾಥಗೌಡ ಗೌಡರ, ಸವಿತಾ ಅಮರಶೆಟ್ಟಿ, ಪ್ರೆÃಮಾ ಕೋಮಾರ ದೇಸಾಯಿ, ಅಶೋಕ ದೇಸಾಯಿ, ವೀರೇಶ ಅಂಚಟಗೇರಿ, ಶಶಿ ಮೌಳಿ ಕುಲಕರ್ಣಿ, ನಿಜನಗೌಡ ಪಾಟೀಲ, ಸುನೀಲ ಗುಡಿ, ಲಿಂಗರಾಜ ಪಾಟೀಲ, ಶಿವಾನಂದ ಮುತ್ತಣ್ಣವರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಚಕ್ಕಡಿ ಮೇಲಿಂದ ಬಿದ್ದಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಿಕಿತ್ಸೆ ಫಲಿಸದೆ ಸಾವು

ಧಾರವಾಡ : ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಚಕ್ಕಡಿ ಮೇಲಿಂದ ಬಿದ್ದಿದ್ದ ಧಾರವಾಡ ಜಿಲ್ಲಾ ಅಧ್ಯಕ್ಷ ಹೆಚ್. ವಿ. ಮಾಡಳ್ಳಿ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅವರು ಮೇ 7ರಂದು ಸೋಮವಾರ ಸಂಜೆ ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಲವಡಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಪ್ರಚಾರ ನಡೆಸುವ ವೇಳೆ ಚಕ್ಕಡಿ ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಹುಬ್ಬಳ್ಳಿಯ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಬುಧವಾರ ಬೆಳಗಿನ ಜಾವ 3.30ಕ್ಕೆ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಬುಧವಾರ ಸಂಜೆ 5 ಗಂಟೆ ನವಲಗುಂದ ತಾಲೂಕಿನ ಹಳ್ಳಿಕೇರಿಯಲ್ಲಿ ಗ್ರಾಮದಲ್ಲಿ ನೆರವೇರಲಿದೆ. ಅವರು ಮೂವರು ಪುತ್ರಿಯರು ಹಾಗೂ ಒಬ್ಬ ಪುತ್ರ ವೆಂಕಟೇಶ ಸೇರಿ ಅಪಾರಬಂಧು ಬಳಗವನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರು ಕಂಬನಿ ಮಿಡಿದಿದ್ದಾರೆ.

ಮೇ ೧೦ ರ ಸಂಜೆಯಿಂದ ಮೇ ೧೩ ರವರೆಗೆ ನಿಷೇಧಾಜ್ಞೆ ಜಾರಿ

ಧಾರವಾಡ : ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶಾಂತಿ,ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮೇ ೧೦ ರಂದು ಸಾಯಂಕಾಲ ೬ ಗಂಟೆಯಿಂದ ೧೩ ರಂದು ಸಾ: ೬ ಗಂಟೆಯ ವರೆಗೆ ಕಲಂ ೧೪೪ ರ ಮೇರೆಗೆ ಪ್ರತಿಬಂಧಕಾಜ್ಞೆಯನ್ನು ವಿಧಿಸಿ ಜಿಲ್ಲಾಧಿಕಾರಿ ಡಾ: ಎಸ್.ಬಿ.ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ. ಮೆರವಣಿಗೆ ಅಥವಾ ೫ ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ,ಸಾರ್ವಜನಿಕ ಸಭೆ ಸಮಾರಂಭಗಳನ್ನು ನಿಷೇಧಿಸಲಾಗಿದೆ.ಅಭ್ಯರ್ಥಿಗಳು/ಬೆಂಬಲಿಗರು ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ಕೈಗೊಳ್ಳಬಹುದಾಗಿದ್ದು, ಅದರಲ್ಲಿ ೧೦ ಜನರಿಗಿಂತ ಹೆಚ್ಚಿನ ಸಂಖ್ಯೆಯ ಜನರು ಸೇರತಕ್ಕದ್ದಲ್ಲ. ಲಾಠಿ, ಡೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತçವನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ. ಈ ಆದೇಶವು ಅಂತ್ಯಕ್ರಿಯೆ ಮೆರವಣಿಗೆ ಮತ್ತು ಇನ್ನಿತರ ಕಾರಣಗಳಿಗಾಗಿ ಅನುಮತಿ ಪಡೆದು ನಡೆಸಿದ ಮೆರವಣಿಗೆಗಳಿಗೆ ಅನ್ವಯಿಸುವುದಿಲ್ಲ. ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ.೧೮೮ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ವಿವರಿಸಿದ್ದಾರೆ.

ಬಿಜೆಪಿಯವರು ಏನೂ ಕಡೆದು ಕಟ್ಟೆ ಹಾಕಿದ್ದಾರೆ : ಶಾಸಕ ಕೋನರಡ್ಡಿ

ನವಲಗುಂದ : ಬಿಜೆಪಿಯವರಿಗೆ ಈಗ ಚುನಾವಣೆ ಸಂದರ್ಭದಲ್ಲಿ ಮಹದಾಯಿ ನೆನಪಾಗಿದೆ. ಅವರು ಇಷ್ಟು ದಿನ ಎನು ಕಡೆದು ಕಟ್ಟೆ ಹಾಕಿದ್ದಾರೆ ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಪ್ರಶ್ನೆ ಮಾಡಿದರು. ಅವರು ನವಲಗುಂದ ತಾಲೂಕಿನ ಶಲವಡಿ, ತಿರ್ಲಾಪುರ, ಶಿರಕೋಳ ಹಾಗೂ ಮೊರಬ ಗ್ರಾಮದಲ್ಲಿಬಿರುಸಿನ ಪ್ರಚಾರನಡೆಸಿಮಾತನಾಡಿದರು. ಆಗಸ್ಟನಲ್ಲಿ ನ್ಯಾಯಾಧೀಕರಣ ತೀರ್ಪು ನಮ್ಮ ಪರ ಬರುತ್ತದೆ. ಹೀಗಾಗಿ ಸುಳ್ಳು ಹೇಳುವ ಬಿಜೆಪಿಯವರನ್ನು ನಂಬಬೇಡಿ ಎಂದು ಮನವಿ ಮಾಡಿದರು. . ಇಂದು ಯಡಿಯೂರಪ್ಪ ಅವರು ನವಲಗುಂದಗೆ ಮತ್ತೊಮ್ಮೆ ಸುಳ್ಳು ಹೇಳಕ್ಕೆ ಬಂದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ದುಡ್ಡು ಇರಬಹುದು. ಆದರೆ ನಮಗೆ ಜನ ಶಕ್ತಿಇದೆ. ಅದರ ಮುಂದೆ ಇದು ನಿಲ್ಲಲ್ಲ. ನಾವು ನೀವು ಐದು ವರ್ಷ ಕೂಡಿಬಾಳಬೇಕಿದೆ. ಹೀಗಾಗಿ ಅವರ ಸುಳ್ಳು ಮಾತಿಗೆ ಮರಳಾಗದೆ ಜೆಡಿಎಸ್ ಗೆ ಆರ್ಶೀವಾದ ಮಾಡಬೇಕು ಎಂದು ಮನವಿ ಮಾಡಿದರು. ನಾವು ತಿರ್ಲಾಪುರ ರಸ್ತೆಗೆ ೫.೯೦ ಕೋಟಿ ಅನುದಾನ, ಶಿರಕೋಳ ಗ್ರಾಮಕ್ಕೆ ಇಪ್ಪತ್ತು ಕೋಟಿ ಅನುದಾನ ನೀಡಿದ್ದೇವೆ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಿಲ್ಲ. ಅನೇಕ ಕಡೆ ಅಭಿವೃದ್ಧಿ ಮಾಡಿದರೆ ಕೋನರಡ್ಡಿಗೆ ಒಳ್ಳೆÃಯ ಹೆಸರು ಬರುತ್ತದೆ ಎಂದು ಪ್ಲಾಟ್ ರಸ್ತೆ ಅಭಿವೃದ್ಧಿಗೆ ಅಡ್ಡಗಾಲು ಹಾಕುವ ಕೆಲಸ ಮಾಡಿದ್ದಾರೆ. ಆದರೆ ನಾವು ಜನರ ಹೃದಯ ತಲುಪುವ ಕೆಲಸ ಮಾಡಿದ್ದೆÃವೆಕುಮಾರಸ್ವಾಮಿ ಅವರು ಸಿಎಂ ಆದರೆ ಅಧಿಕಾರಕ್ಕೆ ಬಂದ ೨೪ ಗಂಟೆಗಳಲ್ಲಿ ರೈತರ ೫೨ ಸಾವಿರ ಕೋಟಿ ರೈತರ ಸಾಲಮನ್ನಾ, ೪೮೦೦ ಕೋಟಿ ಮಹಿಳಾಸಂಘಗಳ ಸಾಲ, ನೇಕಾರರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದಾರೆ. ಅದೇ ರೀತಿ ಕೋನರಡ್ಡಿಯನ್ನ ಮಂತ್ರಿ ಮಾಡುತ್ತೇನೆ ಎಂದು ಹೇಳಿದ ಮೇಲೆ ನವಲಗುಂದ ರಾಜಕೀಯ ಪಕ್ಷಗಳಿಗೆ ನಡುಕ ಉಂಟಾಗಿದೆ. ನೀವು ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಅಧಿಕಾರ ಕೊಟ್ಟು ನೋಡಿರಿ. ಒಮ್ಮೆÃ ಜೆಡಿಎಸ್ ಪಕ್ಷಕ್ಕೆ ಅಧಿಕಾರ ಕೊಟ್ಟು ನೋಡಿ ಎಂದು ಮನವಿ ಮಾಡಿದರು. ನಾನು ವಿದ್ಯಾರ್ಥಿ ದೆಸೆಯಿಂದ ಶಾಸಕನಾಗುವರೆಗೆ ಹೋÃರಾಟ ಮಾಡಿದ್ದೆÃನೆ. ನನಗೆ ಕಾಂಗ್ರೆಸ್ ಲೆಕ್ಕಕ್ಕೆ ಇಲ್ಲ. ಸೋಲುವ ಕಾಂಗ್ರೆಸ್ ಪಕ್ಷವೂ ಮುಸ್ಲಿಂ ಸಮುದಾಯದ ಬಾಂಧವರು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ನಾವು ಮಾಡಿದ ಕೆಲಸನಾ ಬಿಜೆಪಿಯವರು ನಾವು ಮಾಡಿದ್ದೆÃವೆ ಅಂತ ಹೇಳ್ತಾರೆ ನಾಚಿಕೆ ಆಗಬೇಕು ನಿಮಗೆ ಎಂದು ತರಾಟೆಗೆ ತೆಗೆದುಕೊಂಡರು. ಜೆಡಿಎಸ್ ಮುಖಂಡರಾದ ಎಂಎಸ್. ರೋಣದ, ಹಾಸ್ಯ ಕಲಾವಿದ ಶರಣು ಯಮನೂರ, ಜೆಡಿಎಸ್ ಮುಖಂಡರಾದ ಗಂಗಾಧರ ಪಾಟೀಲ, ಶ್ರೀಶೈಲ ಮೂಲಿಮನಿ, ಶಿವಣ್ಣ ಹುಬ್ಬಳ್ಳಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬೈಕ್ ಮೇಲೆ ಸಂಚರಿಸಿದ ಸಚಿವ ವಿನಯ ಕುಲಕರ್ಣಿ

ಧಾರವಾಡ : ಗಣಿ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಮಂತ್ರಿ ವಿನಯ ಕುಲಕರ್ಣಿ ಅವರು ಮಂಗಳವಾರ ಬೈಕ್ ನಲ್ಲಿ ಸಂಚರಿಸಿ ಗಮನ ಸೆಳೆದರು. ಧಾರವಾಡ ವಿಧಾನ ಸಭಾ ಕ್ಷೇತ್ರ-71ರ ವ್ಯಾಪ್ತಿಯಲ್ಲಿ ಬರುವ ನರೇಂದ್ರ ಗ್ರಾಮದಲ್ಲಿ ಬೈಕ್ ಹಿಂಬದಿಯಲ್ಲಿ ಕುಳಿತು ಸಂಚರಿಸಿದರು. ಬಹಿರಂಗ ಪ್ರಚಾರಕ್ಕೆ ಕೇವಲ ಎರಡು ದಿನಗಳು ಬಾಕಿ ಉಳಿದ ಹಿನ್ನಲೆಯಲ್ಲಿ ಬಿರುಸಿನ ಪ್ರಚಾರದ ಮಧ್ಯೆ ಸಚಿವರು ಬೈಕ್ ಹಿಂಬದಿಯಲ್ಲಿ ಕುಳಿತು ಗ್ರಾಮದ ಹಲವಡೆ ಸಂಚರಿಸಿ ಸರಳತೆ ಮೆರೆದರು. ಕಾಂಗ್ರೆಸ್ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಸಚಿವರ ಈ ನಡೆದ ಖುಷಿಕೊಟ್ಟಿದೆ.

ಭರ್ಜರಿ ಸ್ಟೆಪ್ಸ್ ಹಾಕಿದ ನಟಿ ಪೂಜಾ ಗಾಂಧಿ

ನವಲಗುಂದ : ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ ಎನ್ನುವ ವಚನ ಹಾಡುವ ಮೂಲಕ ನಟಿ ಪೂಜಾ ಗಾಂಧಿ ಎಲ್ಲರ ಗಮನ ಸೆಳೆದ ಘಟನೆ ನವಲಗುಂದ ಜೆಡಿಎಸ್ ಪ್ರಚಾರ ಸಭೆಯಲ್ಲಿ ನಡೆದಿದೆ. ಶಿರಕೋಳದಲ್ಲಿ ಶಾಸಕ ಎನ್.ಹೆಚ್. ಕೋನರಡ್ಡಿ ಅವರ ಪರ ಮತಯಾಚನೆ ಮಾಡುವ ವೇಳಿ ಜನರಿಗೆ ಈ ವಚನ ಹೇಳುವ ಮೂಲಕ ಗಮನ ಸೆಳದ ಅವರು ಮೊರಬ ಗ್ರಾಮದಲ್ಲಿ ಇವನಾರವ ಇವನಾರವ ಎಂದಿನಸಬೇಡಯ್ಯ, ಇವ ನಮ್ಮವ, ಇವ ನಮ್ಮವ ಎಂದಿನಿಸಯ್ಯ ಎಂದು ಹೇಳಿದರು. ಅಲ್ಲದೆ, ಒಂದು ಪಕ್ಷಕ್ಕೆ ಬೂತ್ ಮ್ಯಾನೇಜರ್ ಇದ್ದರೆ, ಇನ್ನೊಂದು ಪಕ್ಷಕ್ಕೆ ಪೇಜ್ ಪ್ರಮುಖ ಇದ್ದಾರೆ. ಆದರೆ ನಮ್ಮ ಜೆಡಿಎಸ್ ಪಕ್ಷದಲ್ಲಿ ಪ್ರತಿ ಮನೆ ಮನೆಯಲ್ಲಿ ಕುಮಾರಸ್ವಾಮಿ, ಕೋನರಡ್ಡಿ ಇದ್ದಾರೆ. ಕರ್ನಾಟಕಕ್ಕೆ ಕುಮಾರಣ್ಣ, ನವಲಗುಂದಕ್ಕೆ ಕೋನರಡ್ಡಿ ಅಣ್ಣ ಎಂದು ಘೋಷಣೆ ಮೊಳಗಿಸಿದರು. ಇದಕ್ಕೂ ಮುನ್ನ ನಟಿ ಪೂಜಾ ಗಾಂಧಿ ಅವರು ಜೆಡಿಎಸ್‌ಗೆ ನಿಮ್ಮ ಮತ ಜೆಡಿಎಸ್ ಗೆ ಹಾಡಿಗೆ ವೇದಿಕೆ ಮೇಲೆ ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ಮತದಾರರ ಗಮನ ಸೆಳೆದರು. ಬಳಿಕ ತಮ್ಮ ಭಾಷಣದ ಕೊನೆಗೆ ಮುಂಗಾರು ಮಳೆಯ ಕುಣಿದು ಕುಣಿದು ಬಾರೆ ಹಾಡು ಹಾಡಿ ಎಲ್ಲರನ್ನು ರಂಜಿಸಿದರು.

ನೆಲ, ಜಲ, ಭಾಷೆಯ ಉಳಿವಿಗಾಗಿ ಜೆಡಿಎಸ್ ಆಡಳಿತ ಅಗತ್ಯ : ಪೂಜಾಗಾಂಧಿ

ನವಲಗುಂದ : ನಟಿ ಹಾಗೂ ಜೆಡಿಎಸ್ ಸ್ಟಾರ್ ಕ್ಯಾಂಪನೇರ್ ಪೂಜಾ ಗಾಂಧಿ ಅವರು ನವಲಗುಂದ ವಿಧಾನ ಸಭಾ ಕ್ಷೆÃತ್ರದ ಶಲವಡಿ, ದಾಟನಾಳ, ಶಿರಕೋಳ, ಮೊರಬ ಗ್ರಾಮದಲ್ಲಿ ಮಂಗಳವಾರ ಬಿರುಸಿನ ರೋಡ್ ಶೋ ನಡೆಸಿ, ನವಲಗುಂದ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಎನ್.ಹೆಚ್. ಕೋನರಡ್ಡಿ ಅವರ ಪರ ಮತಯಾಚನೆ ನಡೆಸಿದರು. ಬಳಿಕ ಶಿರಕೋಳ ಹಾಗೂ ಮೊರಬ ಗ್ರಾಮದಲ್ಲಿ ನೆರೆದಿದ್ದ ಅಪಾರ ಜನಸ್ತೊÃಮವನ್ನು ಉದ್ದೆÃಶಿಸಿ ಮಾತನಾಡಿದ ನಟಿ ಪೂಜಾಗಾಂಧಿ, ನವಲಗುಂದ ಕ್ಷೆÃತ್ರದೆಲ್ಲಡೆ ಜೆಡಿಎಸ್ ಪರ ಭಾರೀ ಅಲೆ ಕಂಡು ಖುಷಿಯಾಗುತ್ತಿದೆ. ಶಾಸಕ ಎನ್.ಹೆಚ್. ಕೋನರಡ್ಡಿ ಅವರ ಮೇಲೆ ಇರುವ ಪ್ರೀತಿ ವಿಶ್ವಾಸ ಕಂಡು ಸಂತಸವಾಗುತ್ತಿದೆ. ಇದು ಬದಲಾವಣೆ ತರುವ ಸಮಯ ಇದಾಗಿದ್ದು, ನಮ್ಮ ಸುತ್ತಮುತ್ತಲಿನ ರಾಜ್ಯ ನೋಡಿ ಎಲ್ಲಾ ಕಡೆ ಪ್ರಾದೇಶಿಕ ಪಕ್ಷ ಅಧಿಕಾರದಲ್ಲಿದೆ. ಅಲ್ಲಿನ ರಾಜ್ಯದ ನೀರಿನ ಸಮಸ್ಯೆ ಬಂದಾಗ ಆಂಧ್ರ, ತಮಿಳುನಾಡು ಹಾಗೂ ಗೋವಾ ಸರಕಾರ ಹೇಗೆ ಕೇಂದ್ರ ಸರಕಾರವನ್ನು ಆಟ ಆಡಿಸುತ್ತವೆ. ಆದರೆ ನಾವು ರಾಷ್ಟಿçÃಯ ಪಕ್ಷಗಳ ಕೈಯಲ್ಲಿ ಅಧಿಕಾರ ಕೊಟ್ಟು ಅದರಿಂದ ವಂಚಿತರಾಗಿದ್ದೇವೆ. ನಮಗೆ ಸರಿಯಾಗಿ ಅನುದಾನ ಕೂಡ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ನಮ್ಮ ರಾಜ್ಯದ ನೆಲ, ಜಲ, ಭಾಷೆಯ ಉಳಿವಿಗಾಗಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಹಾಗೂ ಕುಮಾರಣ್ಣ ಅವರನ್ನು ಮತ್ತೆà ಮುಖ್ಯಮಂತ್ರಿ ಮಾಡುವುದು ಅಗತ್ಯ ಎಂದು ಪ್ರತಿಪಾದಿಸಿದ ಅವರು ಎರಡು ರಾಷ್ಟ್ರೀಯ ಪಕ್ಷದ ನಾಯಕರು ಕಾಂಗ್ರೆಸ್ ಮುಕ್ತ ಹಾಗೂ ಬಿಜೆಪಿ ಮುಕ್ತ ಮಾಡುವ ಮತ್ತು ಅಧಿಕಾರಕ್ಕೆ ಬಂದರೆ ಜೈಲಿಗೆ ಕಳುಹಿಸುವ ಬಗ್ಗೆ ಮಾತನಾಡುತ್ತಾರೆ. ಆದರೆ ನಮ್ಮ ಕುಮಾರಣ್ಣ ಅವರು ರಾಜ್ಯದ ಅಭಿವೃದ್ಧಿ ರೈತರ, ಯುವಕರು ಮತ್ತು ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ. ನಾವು ಬಿಜೆಪಿ ಹಾಗೂ ಕಾಂಗ್ರೆಸ್ ಮುಕ್ತ ಅಲ್ಲ ಹಸಿವು ಮುಕ್ತ, ಬಡತನ ಮುಕ್ತ, ನಿರುದ್ಯೋಗ ಮುಕ್ತ ರಾಜ್ಯ ನಿರ್ಮಾಣ ಮಾಡುತ್ತೆÃವೆ ಎಂದು ಹೇಳಿದರು. ಮತ ಮತ್ತು ತಾಯಿ ಎರಡು ಒಂದೇ. ಹಣದ ಆಮಿಷಕ್ಕೆ ಬಲಿಯಾಗದೆ, ಮತವನ್ನು ಪ್ರಾಮಾಣಿಕವಾಗಿ ಮಾಡಿ, ನಿಮ್ಮ ಮನೆ ಮಗನಾಗಿ ಕೆಲಸ ಮಾಡಿದ ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಅವರಿಗೆ ಇನ್ನೊಮ್ಮೆà ಆರ್ಶೀವಾದ ಮಾಡಿ ಎಂದು ಮನವಿ ಮಾಡಿದರು. ನಿಮ್ಮ ಕಷ್ಟ, ದುಃಖದಲ್ಲಿ ಕುಮಾರಸ್ವಾಮಿ ಸದಾಕಾಲ ಭಾಗಿಯಾಗುತ್ತಾರೆ. ಎರಡು ರಾಷ್ಟಿçÃಯ ಪಕ್ಷಗಳು ಹಣ ಬಲದಿಂದ ಚುನಾವಣೆ ನಡೆಸಿದರೆ, ಜೆಡಿಎಸ್ ಪಕ್ಷ ಜನರಿಂದ ಚುನಾವಣೆ ನಡೆಸುತ್ತಿದೆ. ಹೀಗಾಗಿ ಕುಮಾರಸ್ವಾಮಿ ಸಿಎಂ ಆಗುವುದು ಹಾಗೂ ಕೋನರಡ್ಡಿ ಅವರು ಸಚಿವರಾಗುವುದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುಭದ್ರ, ಸ್ವಚ್ಛ ಆಡಳಿತಕ್ಕಾಗಿ ಬೆಂಬಲಿಸಿ : ಶಾಸಕ ಅರವಿಂದ ಬೆಲ್ಲದ

ಧಾರವಾಡ : ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ-೭೪ ರ ಶಾಸಕರಾದ ಅರವಿಂದ ಬೆಲ್ಲದ ಅವರು ವಾರ್ಡ ನಂ.೧೨ ರ ವ್ಯಾಪ್ತಿಯಲ್ಲಿ ಬರುವ ಗಾಂಧಿ ಚೌಕ, ಹಿರೇಮಠ ಓಣಿ, ತಾಲೂಕ ಕಚೇರಿ ಓಣಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳಿ ಪಾದಯಾತ್ರೆಯ ಮೂಲಕ ಮನೆ ಮನೆ ಭೇಟಿ ನೀಡಿ ಮತಯಾಚಿಸಿದರು. ಬಳಿಕ ಮಾತನಾಡಿದ ಅವರು, ಶಾಸಕನಾಗಿ ೫ ವರ್ಷದಲ್ಲಿ ಮಾಡಿದ ಸಾಧನೆ ಹಾಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡ ಅಭಿವೃದ್ದಿ ಕಾರ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿದರು. ಸುಭದ್ರ ಹಾಗೂ ಸ್ವಚ್ಛ ಆಡಳಿತವನ್ನು ನೀಡುವುದಾಗಿ ಭರವಸೆ ನೀಡಿದರು. ಹಳೆಯ ತಾಲೂಕ ಕಚೇರಿ ಓಣಿಯ ಬ್ರಾಹ್ಮಣ ಸಮಾಜದ ಪ್ರಮೂಖರೊಂದಿಗೆ ಚರ್ಚಿಸುವ ಮೂಲಕ ತಮ್ಮ ಸಮಾಜ ನನಗೆ ಆಶಿರ್ವಾದ ಮಾಡುವ ಮೂಲಕ ಮತ್ತೊಮ್ಮ ಅವಕಾಶ ಕೊಟ್ಟು ತಮ್ಮ ಸಮಾಜಕ್ಕೆ ನನ್ನ ಕೈಲಾದ ಸೇವೆ ಮಾಡುವ ಅವಕಾಶ ನೀಡುವಿರಿ ಎಂದು ನಂಬಿದ್ದೇನೆ ಎಂದು ಹೇಳಿದ ಅವರು ನಾನು ಜಾತಿ ಭೇಧ ಮರೆತು ಅಭಿವೃದ್ಧಿಗಾಗಿ ಜನರ ಸೇವಕನಾಗಿ ಕೆಲಸ ಮಾಡುವ ವ್ಯಕ್ಕಿಯಾಗಿದ್ದೇನೆ ಇದನ್ನು ಅರಿತು ತಾವೆಲ್ಲರೂ ನನಗೆ ಮತ್ತೊಮ್ಮೆ ಆಶೀರ್ವಾದ ಮಾಡಬೇಕೆಂದು ವಿನಂತಿಸಿದರು. ಮಹಾನಗರ ಪಾಲಿಕೆ ಸದಸ್ಯರಾದ ನಿರ್ಮಲಾ ಜವಳಿ ಮಾತನಾಡಿ, ಶಾಸಕ ಅರವಿಂದ ಬೆಲ್ಲದ ಸರಳ ಜೀವಿಗಳಾಗಿದ್ದು, ಸಜ್ಜನರಾದಂತಹ ಇವರನ್ನು ಈ ಬಾರಿಯು ಸಹ ಗೆಲ್ಲಿಸುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ, ಸಾರ್ವಜನಿಕರ ಸೇವೆ ಮಾಡಲು ಅವಕಾಶ ನೀಡಿ ಆಶೀರ್ವದಿಸಬೇಕು ಎಂದರು. ಈ ಸಂದರ್ಭದಲ್ಲಿ ಭಾಜಪ ಪ್ರಧಾನ ಕಾರ್ಯದರ್ಶಿ ಮೋಹನ ರಾಮದುರ್ಗ, ಮುಖಂಡರಾದ ಪ್ರಕಾಶ ಗೋಡಬೋಲೆ, ಶಕ್ತಿ ಹಿರೇಮಠ, ಸುಕುದ ಜೋಶಿ, ಉದಯ ಯಂಡಿಗೇರಿ, ಸುರೇಶ ಬೇಂದ್ರೆ, ಆದಿತ್ಯ, ಮಾಹಾಂತೇಶ ಹಿರೇಮಠ, ಶಂಕರ ಜಮದಾಳೆ, ಬಸವರಾಜ ಬೆಟಗೇರಿ, ಪ್ರಿತೇಶ ಜಾಧವ, ಕಿರಣ ತಬ್ಬಿ, ಅಮೃತ ಮೋಟೆ ಉಪಸ್ಥಿತರಿದ್ದರು.

ಮನೆ ಮನೆಗೆ ಹೋಗಿ ಕಾಲಿಗೆ ಬಿದ್ದು ತಿಳಿಸಿ ಎಂದ ಯಡಿಯೂರಪ್ಪ

ನವಲಗುಂದ : ಪ್ರಧಾನಮಂತ್ರಿ ಮೋದಿಯವರೇ ಹೇಳಿದ್ದಾರೆ, ಕಳಸಾ ಬಂಡೂರಿ ಜಾರಿಗೆ ಒಂದೇಡೆ ಕೂತು ಪರಿಹಾರ ಮಾಡುತ್ತೇವೆ, ಇದನ್ನು ಪರಿಹರಿಸುವುದು ನನ್ನ ಜವಾಬ್ದಾರಿ. ಹೀಗಾಗಿ ಮನೆ ಮನೆಗೆ ಹೋಗಿ ನಮ್ಮ ಕಾರ್ಯಕರ್ತರು ಕಾಲಿಗೆ ಬಿದ್ದು ತಿಳಿಸಿ ಮತ ಹಾಕಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದರು. ಅವರು ನವಲಗುಂದ ಬಿಜೆಪಿ ಅಭ್ಯರ್ಥಿ ಶಂಕರ್ ಪಾಟೀಲ ಮುನೇನಕೊಪ್ಪ ಪರ ಪ್ರಚಾರ ಸಭೆ ನಡೆಸಿ ಮಾತನಾಡಿದರು. ನಮ್ಮ ತಪ್ಪಿನಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ದೇವರ ದಯದಿಂದ ನಾವೆಲ್ಲ ಈಗ ಒಗ್ಗಟ್ಟಾಗಿದ್ದೇವೆ. ನಮ್ಮದು ಪ್ರಣಾಳಿಕೆ ಅಲ್ಲ, ನಾನು ಅಧಿಕಾರ ವಹಿಸಿಕೊಂಡು ನಂತರ ಮಂಡಿಸುವ ಬಜೆಟ್ ಎಂದರು. ಒಂದೂವರೆ ಲಕ್ಷ ಕೋಟಿ ರುಪಾಯಿ ನೀರಾವರಿಗೆ ಕೊಡುತ್ತೇವೆ. ಚಾಮುಂಡೇಶ್ವರಿ ಯಿಂದ ಬಾದಾಮಿಗೆ ಬಂದ ಸಿಎಂ, ಬಾದಾಮಿಯಿಂದ ಸೀದಾ ಮನೆಗೆ ಹೋಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಬೆದರಿಕೆ ಹಾಕಿದ್ದರಿಂದ ಪ್ರಚಾರ ನಡೆಸದ ಸ್ಥಿತಿ

ಧಾರವಾಡ : ಹುಬ್ಬಳ್ಳಿ ಧಾರವಾಡ ಪಶ್ವಿಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತಮಗೆ ಬೆದರಿಕೆ ಹಾಕಿದ್ದರಿಂದ ಪ್ರಚಾರ ನಡೆಸದ ಸ್ಥಿತಿ ಉದ್ಭವಿಸಿದೆ ಎಂದು ಜೆಡಿಯು ಅಭ್ಯರ್ಥಿ ಜಾವೇದ್‌ಅಹಮ್ಮದ್ ಬೆಳಗಾಂವಕರ ಆರೋಪಿಸಿದರು. ಅವರು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಮಪತ್ರ ಸಲ್ಲಿಸದಂತೆ ಕಾಂಗ್ರೆಸ್ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ, ಅವರ ಸಹೋದರ ಇಸಾಕ್ ತಮಟಗಾರ ಹಾಗೂ ಬೆಂಬಲಿಗರು ಜೀವ ಬೆದರಿಕೆ ಹಾಕಿದ್ದಲ್ಲದೇ, ಮನೆಗೆ ಹಾನಿ ಮಾಡಿದ್ದಾರೆ ಎಂದು ಗೋಳು ತೋಡಿಕೊಂಡರು. ಒಂದೇ ಸಮುದಾಯದಿಂದ ಇಬ್ಬರು ಕಣದಲ್ಲಿದ್ದರೆ ಮತಗಳ ವಿಭಜನೆಯಾಗುವ ಸಾಧ್ಯತೆ ಇದೆ ಎಂದು ನಾಮಪತ್ರ ಹಿಂಪಡೆಯುವಂತೆ ದುಂಬಾಲು ಬಿದ್ದಿದ್ದರು. ಇದೇ ಕಾರಣಕ್ಕೆ ಹುಬ್ಬಳ್ಳಿಯ ಅವರ ಸಂಬಂಧಿಕರ ಮನೆಗೆ ಕರೆಯಿಸಿ ಬೆದರಿಕೆ ಹಾಕಿದ್ದರು. ಆದರೆ ನಾನು ಭ್ರಷ್ಟಾಚಾರದ ವಿರುದ್ಧ ಸತತವಾಗಿ ಹೋರಾಟ ನಡೆಸುತ್ತಿರುವ ಕಾರಣ ಅವರ ಹೆದರಿಕೆಗೆ ತಲೆಕೆಡಿಸಿಕೊಳ್ಳದೇ ಕಣದಲ್ಲಿದ್ದೇನೆ ಎಂದರು. ಇಸ್ಮಾಯಿಲ್ ತಮಟಗಾರ ಅವರು ಬೆದರಿಕೆ ಹಾಕಿರುವ ಕುರಿತು ಚುನಾವಣೆ ಆಯೋಗ, ಪೊಲೀಸ ಆಯುಕ್ತರಿಗೆ ದೂರು ನೀಡಿದ್ದರಿಂದ ಉಪನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. ಜೀವ ಬೆದರಿಕೆಯಿಂದ ಪ್ರಚಾರ ನಡೆಸಲು ತೊಂದರೆಯಾಗಿದೆ. ರಕ್ಷಣೆ ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದು, ಅವರು ಸಹ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು. ಇನ್ನೆರಡು ದಿನಗಳಲ್ಲಿ ಮತ್ತೇ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ರಕ್ಷಣೆ ನೀಡುವಂತೆ ಮನವಿ ಮಾಡುತ್ತೆನೆ. ಸುಮುದಾಯದ ಕೆಲ ಜನರು ತಮಗೆ ಬೆಂಬಲ ನೀಡಲು ಮುಂದಾಗಿದ್ದು, ಶೀಘ್ರದಲ್ಲಿಯೇ ಅವರೊಂದಿಗೆ ಮಾತುಕತೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದರು.

ಕುಟುಂಬ ಒಡೆಯುವುದಕ್ಕೆ ಕಾಂಗ್ರೆಸ್ ಪಕ್ಷ ಹೆದರುವುದಿಲ್ಲ

ಕೊಪ್ಪಳ : ಅಧಿಕಾರಕ್ಕಾಗಿ ಜಾತಿ ಒಡೆಯುತ್ತಾರೆ, ಅಗತ್ಯ ಬಿದ್ದರೆ ಕುಟುಂಬ ಒಡೆಯುವುದಕ್ಕೆ ಕಾಂಗ್ರೆಸ್ ಪಕ್ಷ ಹೆದರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಆಪಾದಿಸಿದರು. ಅವರು ಮಂಗಳವಾರ ಕೊಪ್ಪಳ ನಗರದಲ್ಲಿ ಬಿಜೆಪಿಯ ಪರ ಬಿರುಸಿನ ಪ್ರಚಾರ ನಡೆಸಿ ವಾಗ್ದಾಳಿ ನಡೆಸಿದರು. ಪ್ರವಾಸಿ ತಾಣ ಅಭಿವೃದ್ಧಿ ಪಡಿಸುವಲ್ಲಿ ವಿಫಲ, ಕುತಂತ್ರ ಬುದ್ದಿ ಉಪಯೋಗಿಸುವ ಮೂಲಕ ಹೇಗಾದರೂ ಮಾಡಿ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಸರಕಾರ ಮಕ್ಕಳ ಮನಸ್ಸಿನಲ್ಲಿ ಕೂಡ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಾರೆ. ಇಂತಹ ಸರಕಾರ ಮನೆಗೆ ಕಳುಹಿಸಬೇಕು ಎಂದು ಕರೆ ನೀಡಿದರು. ಮತ್ತೆ ಎಂದಿನಂತೆ ಕಾಂಗ್ರೆಸ್ ಪಕ್ಷದ ವಿರುದ್ದ ತೀವ್ರ ವಾಗ್ದಾಳಿ ಮುಂದುವರೆಸಿದ ಮೋದಿಯವರು ಬಾಲಕಿ ಮಲ್ಲಮ್ಮ ಶೌಚಾಲಯದ ನಿರ್ಮಾಣಕ್ಕೆ ಪಟ್ಟು ಹಿಡಿದು ದೇಶದವಗಮನ ಸೆಳೆದದನ್ನು ಸ್ಮರಿಸಿದರು.

ವಿವಾದಾತ್ಮಕ ಹೇಳಿಕೆ ನೀಡಿದ್ದ ಮೌಲ್ವಿ ಕಾಂಗ್ರೆಸ್ ಪರ ಪ್ರಚಾರ

ಹುಬ್ಬಳ್ಳಿ : ಹುಬ್ಬಳ್ಳಿ ಪಾಕಿಸ್ತಾನದಂತೆ ಕಾಣುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮೌಲ್ವಿ ಕಾಂಗ್ರೆಸ್ ಪರ ಪ್ರಚಾರ ನಡೆಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಮನೆಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡುತ್ತಿರುವ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ ಅವರು ಈ ಹಿಂದೆ ಹುಬ್ಬಳ್ಳಿಯ ಗಣೇಶಪೇಟೆಯನ್ನು ಈದ್ ಮಿಲಾದ್ ಆಚರಣೆ ಸಂದರ್ಭದಲ್ಲಿ ಪಾಕಿಸ್ತಾನ ದಂತೆ ಕಂಗೋಳಿಸುತ್ತಿದೆ ಎಂದು ದೇಶದ್ರೋಹಿ ಹೇಳಿಕೆ ನೀಡಿದ್ದರು. ಎಸಿಪಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಹೇಳಿಕೆ ನೀಡಿ ಜೈಲುಸೇರಿದ್ದ ಅಬ್ದುಲ್ ಹಮೀದ್ ಖೈರಾತಿ ಇದೀಗ ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಅಬ್ಬಯ್ಯ ಪರ ಮತ ಯಾಚನೆ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಮೌಲ್ವಿಯ ಕಾಂಗ್ರೆಸ್‌ ಪ್ರಚಾರಕ್ಕೆ ಬಿಜೆಪಿ ಹಾಗೂ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿದೆ.

ಜೆಡಿಎಸ್ ಪರ ರೋಡ್ ಶೋ ನಡೆಸಿದ ನಟಿ ಪೂಜಾ ಗಾಂಧಿ

ನವಲಗುಂದ : ರಾಜ್ಯ ವಿಧಾನ ಸಭಾ ಚುನಾವಣೆ ಗೆ ಕೆಲವೇ ದಿನನಳು ಬಾಕಿ ಉಳಿದಿರುವ ಬೆನ್ನ ಹಿಂದೆಯೇ ಜೆಡಿಎಸ್ ಪರ ನಟಿ ಪೂಜಾ ಗಾಂಧಿ ಉತ್ತರ ಕರ್ನಾಟಕ ಭಾಗದಲ್ಲಿ ರೋಡ್ ಶೋ ನಡೆಸಿ, ಜೆಡಿಎಸ್ ಪರ ಪ್ರಚಾರ ನಡೆಸಿದರು. ನವಲಗುಂದ ತಾಲೂಕಿನ ಶಲವಡಿ ಗ್ರಾಮದಲ್ಲಿ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಎನ್.ಹೆಚ್. ಕೋನರಡ್ಡಿ ಅವರ ಪರವಾಗಿ ಮತಯಾಚಿಸಿದರು. ಚಿತ್ರನಟಿ ಪೂಜಾ ಗಾಂಧಿ ಅವರಿಗೆ ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ, ವೀರಣ್ಣ ನೀರಲಗಿ, ಶ್ರೀಶೈಲಯ್ಯ ಮೂಲಿಮನಿ ಸೇರಿದಂತೆ ಹಲವಾರು ಮುಖಂಡರು ಸಾಥ್ ನೀಡಿದರು.

ರೆಸಾರ್ಟ್ ದಾಳಿಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದ ಸಿದ್ದರಾಮಯ್ಯ

ಬೆಂಗಳೂರು : ರೆಸಾರ್ಟ್ ದಾಳಿಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟ ಪಡಿಸಿದರು. ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ಡಿಗಾರರೊಂದಿಗೆ ಮಾತನಾಡಿ, ನಾವು ಅತ್ಯಂತ ಬಹುಮತದಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಾದಾಮಿ ಯಲ್ಲಿ ಸಿಎಂ ಉಳಿದಿದ್ದ ರೆಸಾರ್ಟ್ ನಲ್ಲಿಯೇ ಆನಂದ್ ಸಿಂಗ್ ಅವರು ಉಳಿದಿದ್ದರು. ಆ ರೆಸಾರ್ಟ್ ಮೇಲೆಯೇ ಐಟಿ ದಾಳಿ ನಡೆದಿದೆ. ಆ ಪ್ರಕರಣಕ್ಕೂ ನನಗೆ ಯಾವುದೇ ಸಂಬಂಧ ಇಲ್ಲ ಎಂದರು. ಐಟಿ ಇಲಾಖೆ ಯನ್ನು ನರೇಂದ್ರ ಮೋದಿ ಹಾಗೂ ಅಮಿಶ್ ಶಾ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಗೆಲ್ಲುತದೆ ಎಂದು ಬಿಜೆಪಿ ಮಂದಿಗೆ ಗೊತ್ತಾಗಿದೆ. ಹೀಗಾಗಿ ವಾಮ ಮಾರ್ಗ ಅನುಸರಿಸುತ್ತಿದ್ದಾರೆ ಎಂದು ಗುಡುಗಿದರು. ರಾಜ್ಯದಲ್ಲಿ ಅತ್ಯಂತ ಬಹುಮತದ ಜೊತೆಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

ಜನಸಾಮಾನ್ಯರ, ಮಹಿಳೆಯರ, ರೈತರ ಕಲ್ಯಾಣಕ್ಕಾಗಿ ಜೆಡಿಎಸ್ ಗೆ ಆರ್ಶೀವದಿಸಿ : ಎನ್.ಹೆಚ್. ಕೋನರಡ್ಡಿ

ನವಲಗುಂದ : ರಾಜ್ಯದಲ್ಲಿ ಜನಸಾಮಾನ್ಯರು, ರೈತರು, ಮಹಿಳೆಯರ ಬದುಕು ಸಮೃದ್ಧಿಯಾಗಿ ಸ್ವಾಭಿಮಾನದಿಂದ ನೆಮ್ಮದಿಜೀವನ ನಡೆಸಲು ಈ ಬಾರಿ ಜೆಡಿಎಸ್ ಪಕ್ಷಕ್ಕೆ ಆರ್ಶೀವದಿಸಬೇಕು ಎಂದು ನವಲಗುಂದ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಎನ್.ಹೆಚ್. ಕೋನರಡ್ಡಿ ಅವರು ಮನವಿ ಮಾಡಿದರು. ಅವರು ಸೋಮವಾರ ರಾತ್ರಿ ನವಲಗುಂದ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹಳ್ಳಿಕೇರಿ, ಇಬ್ರಾಹಿಂಪೂರ, ನಾವಳ್ಳಿಯಲ್ಲಿ ಜೆಡಿಎಸ್ ಪರ ರೋಡ್ ಶೋ, ಪಾದಯಾತ್ರೆ ಹಾಗೂ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ ಬಳಿಕ ನೆರೆದಿದ್ದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು. ಕುಮಾರಣ್ಣ ಈ ನಾಡಿಗಾಗಿ ಹತ್ತಾರು ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಅವರ ಕನಸು ಸಾಕಾರಗೊಳಿಸಲು ಶತಾಯ ಗತಾಯ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬರಲೇಬೇಕಿದೆ. ಆ ನಿಟ್ಟಿನಲ್ಲಿ ಮತದಾರರು ಉತ್ತಮ ನಿರ್ಧಾರ ಕೈಗೊಳ್ಳುವ ಮೂಲಕ ಜನಸಾಮಾನ್ಯರ ಕೈಯಲ್ಲಿ ಅಧಿಕಾರ ಇರುವಂತೆನೋಡಿಕೊಳ್ಳುವುದು ನಿಮ್ಮೇಲ್ಲರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಎಲ್ಲಡೆ ಜೆಡಿಎಸ್ ಪರ ಉತ್ತಮವಾದ ವಾತವರಣ ನಿರ್ಮಾಣವಾಗಿದೆ. ಮೇ 12ರಂದು ಪ್ರತಿಯೊಬ್ಬರು ತಪ್ಪದೆ ಜೆಡಿಎಸ್‍ನ ಎರಡನೇ ಬಟನ್ ಒತ್ತುವ ಮೂಲಕ ಇನ್ನೋಮ್ಮೇ ವಿಧಾನಸೌಧಕ್ಕೆ ಕಳುಹಿಸಲು ಪಣತೊಡಬೇಕಿದೆ ಎಂದರು. ಇಬ್ರಾಹಿಂಪೂರ, ಹಳ್ಳಿಕೇರಿ ಹಾಗೂ ನಾವಳ್ಳಿ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ನೂರಾರು ಕೋಟಿ ಅನುದಾನ ತಂದು ಪ್ರತಿಯೊಂದು ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ, ಶುದ್ಧ ಕುಡಿಯುವ ನೀರು, ಚಕ್ಕಡಿ ರಸ್ತೆ, ಕೃಷಿ ಹೊಂಡ ಸೇರಿದಂತೆ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಬರುವ ದಿನಗಳಲ್ಲಿ ಯುವಕರಿಗೆ ಉದ್ಯೋಗ, ಹಿರಿಯರ ನಾಗರಿಕರಿಗೆ ಪ್ರತಿ ತಿಂಗಳು 5 ಸಾವಿರ ಮಾಸಾಶನ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುವ ಜೊತೆಗೆ ರೈತರ, ನೇಕಾರರ, ಸ್ತ್ರೀ ಶಕ್ತಿ ಸಂಘಗಳ ಎಲ್ಲ ಸಾಲಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ವೀರಣ್ಣ ನೀರಲಗಿ, ಪ್ರಚಾರ ಸಮಿತಿ ಅಧ್ಯಕ್ಷ ಶ್ರೀಶೈಲಯ್ಯ ಮೂಲಿಮನಿ, ಈಗಾಗಲೇ ನವಲಗುಂದ ವಿಧಾನ ಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಇಡೀ ರಾಜ್ಯಕ್ಕೆ ಎನ್.ಹೆಚ್. ಕೋನರಡ್ಡಿ ಮಾದರಿ ಶಾಸಕರಾಗಿದ್ದಾರೆ. ಜನಸಾಮಾನ್ಯರ ಕೈಗೆ ಸುಲಭವಾಗಿ ದಿನದ 24 ಗಂಟೆಗಳ ಕಾಲ ದೊರೆಯುವ ಏಕೈಕ ಶಾಸಕ ನಮ್ಮ ಎನ್.ಹೆಚ್. ಕೋನರಡ್ಡಿ ಅವರು. ಇಂತಹ ಅಪರೂಪದ ಜನಸಾಮಾನ್ಯರ ಶಾಸಕ ಹಾಗೂ ಅಭಿವೃದ್ಧೀಯ ಹರಿಕಾರರನ್ನು ಉಳಿಸಿಕೊಂಡು ಹೋಗುವ ಜವಬ್ದಾರಿ ಮತದಾರರ ಮೇಲೆ ಇದ್ದು, ಯಾವುದೇ ಕಾರಣಕ್ಕೂ ಬಿಜೆಪಿ ಹಾಗೂ ಕಾಂಗ್ರೆಸನ ಸುಳ್ಳು ಆಶ್ವಾಸನೆಗಳಿಗೆ ಮರಳಾಗದೆ ಜೆಡಿಎಸ್ ಅಭ್ಯರ್ಥಿಯಾಗಿರುವ ಎನ್.ಹೆಚ್. ಕೋನರಡ್ಡಿ ಅವರ ಹೊರೆ ಹೊತ್ತ ಮಹಿಳೆಯ ಚಿಹ್ನೆಯ ಎರಡನೇ ಬಟನ್ ಒತ್ತಬೇಕು ಎಂದು ಮನವಿ ಮಾಡಿದರು. ಇದಕ್ಕೂ ಮುನ್ನ ಜೆಡಿಎಸನ ನೂರಾರು ಯುವಕರು, ಮಹಿಳೆಯರು ಶಾಸಕ ಎನ್.ಹೆಚ್. ಕೋನರಡ್ಡಿ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು. ವಿವಿಧ ಗ್ರಾಮದಲ್ಲಿ ಜೆಡಿಎಸನ ಬೃಹತ್ ಶಕ್ತಿ ಪ್ರದರ್ಶನ ನಡೆಯುತ್ತಿದ್ದು, ಎಲ್ಲಡೆ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಇಸ್ಮಾಯಿಲ್ ತಮಟಗಾರ ಗೆ ಹೂವಿನ ಸುರಿಮಳೆ ಸುರಿಯುವ ಮೂಲಕ ಭರ್ಜರಿ ಸ್ವಾಗತ

ಧಾರವಾಡ : ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಮತ ಕ್ಷೇತ್ರ 74 ರ ಕಾಂಗ್ರೆಸ್ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ ಅವರು ರಾಮನಗರ ಮತ್ತು ಆದಿಜಾoಬವಂತ ನಗರಕ್ಕೆ ಭೇಟಿ ನೀಡಿದರು. ಅವರಿಗೆ ಹೂವಿನ ಸುರಿಮಳೆ ಸುರಿಯುವ ಮೂಲಕ ಭರ್ಜರಿ ಸ್ವಾಗತ ಕೋರಲಾಯಿತು. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಿರುಸಿನ ರೋಡ್ ಶೋ ನಡೆಸಿದರು. ಈ ವೇಳೆ ಮಾತನಾಡಿದ ಇಸ್ಮಾಯಿಲ್ ತಮಟಗಾರ, ನಾನು ಧಾರವಾಡದವನಾಗಿದ್ದು, ಇದೇ ನಗರದಲ್ಲಿ ವಾಸವಾಗಿದೆ ನನಗೆ ನಗರದ ಜನರ ನೋವು ಸುಖ ದುಃಖವನ್ನು ಅರಿತಿದ್ದೇನೇ. ನಿಮ್ಮ ಸುಖ ದುಃಖದಲ್ಲಿ ಸದಾ ನಿಮ್ಮ ಜೊತೆ ಇರುವೆ. ನನಗೆ ನಿಮ್ಮ ಆಶೀರ್ವಾದ ಪೂರ್ವಕ ಮತ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ವಸಂತ್ ಅರ್ಕಚಾರಿ, ದಾನಪ್ಪಾ ಕಬ್ಬೇರ, ನಾಗರಾಜ್ ಗುರಿಕಾರ, ರಾಬರ್ಟ್ ದದ್ದಾಪೂರಿ, ರಾಜೇಸಭ್ ಶಿಬಾರಗಟ್ಟಿ, ಅಹಮದ್ ಇನಂದಾರ್,ಎಸ್ ಜಿ ಸನಕ್ಕಿ, ಬಾಬು ಹಿರೆಹೋಳ್ಳಿ,ಬಸವರಾಜ್ ಕಂದಕೊರ ಹಾಗೂ ಕಾಂಗ್ರೆಸ್ ಮುಖಂಡರು, ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು.

ಉಪ್ಪಿನಬೆಟಗೇರಿ ಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಅಮೃತ ದೇಸಾಯಿ

ಧಾರವಾಡ: ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ 71 ರ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಅಮೃತ ದೇಸಾಯಿ ಅವರು ಸೋಮವಾರ ರಾತ್ರಿ ಉಪ್ಪಿನಬೆಟಗೇರಿ ಗ್ರಾಮದ ಹನುಮನಕೊಪ್ಪ ಓಣಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದರು. ಗ್ರಾಮದ ರೈತ ಬಾಳಪ್ಪಾ ಹೊಸಮನಿ ಅವರ ಮನೆಯಲ್ಲಿ ಗ್ರಾಮವಾಸ್ತವ್ಯ ಮಾಡಿದ ಅಮೃತ ದೇಸಾಯಿ ಅವರಿಗೆ ಬಿಜೆಪಿಯ ಮುಖಂಡ ತವನಪ್ಪಾ ಅಷ್ಟಗಿ ಹಾಗೂ ಭಾಜಪ ಮುಖಂಡರು ಹಾಗೂ ಕಾರ್ಯಕರ್ತರು ಸಾಥ್ ನೀಡಿದರು. ಮಹಿಳೆಯರು ಆರತಿ ಮಾಡುವುದರ ಮೂಲಕ ಅಮೃತ ದೇಸಾಯಿ ಮತ್ತು ತವನಪ್ಪ ಅಷ್ಟಗಿ ಅವರನ್ನು ಅದ್ಧೂರಿಯಾಗಿ ಸ್ವಾಗತ ಕೋರಿದರು. ಮಧ್ಯರಾತ್ರಿಯವರೆಗೆ ಗ್ರಾಮದಲ್ಲಿರುವ ಹಲವು ಸಮಸ್ಯೆಗಳನ್ನು ಆಲಿಸಿದರು. ಅಲ್ಲದೆ, ಮಂಗಳವಾರ ಬೆಳಗ್ಗೆ ಗ್ರಾಮದಲ್ಲಿ ಮಿಂಚಿನ ಸಂಚಾರ ನಡೆಸಿ ಮತಯಾಚನೆ ಮಾಡಿದರು. ಬಳಿಕ ಮಾತನಾಡಿದ ಅವರು ಈ ಬಾರಿ ಧಾರವಾಡ ವಿಧಾನ ಸಭಾ ಕ್ಷೇತ್ರ-71ರಲ್ಲಿ ಕಮಲ ಅರಳಿಸುವ ಮೂಲಕ ಕಾಂಗ್ರೆಸ್ ಮುಕ್ತ ಕ್ಷೇತ್ರ ನಿರ್ಮಾಣಕ್ಕೆ ಪ್ರತಿಯೊಬ್ಬರು ಪಣ ತೊಡಬೇಕು. ಆ ಮೂಲಕ ಕಾಂಗ್ರೆಸನ ಅಭ್ಯರ್ಥಿಯನ್ನು ಮನೆಗೆ ಕಳುಹಿಸುವ ಮೂಲಕ ಬಿಜೆಪಿಯ ಶಕ್ತಿ ಪ್ರದರ್ಶನ ಮಾಡಬೇಕಿದೆ ಎಂದು ಮನವಿ ಮಾಡಿದರು. ಇದೇ ವೇಳೆ ಅನೇಕ ಯುವಕರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ದುರ್ಗಪ್ಪ ಹೊಸಮನಿ, ಮಂಜುನಾಥ ದೊಡ್ಡಮನಿ, ವಸಂತ ಹೊಸಮನಿ, ಚನ್ನವ್ವ ಹೊಸಮನಿ, ಪ್ರಶಾಂತ ಹೊಸಮನಿ, ಸುಭಾಸ ಉಳ್ಳಿಗೇರಿ, ಮಂಜುನಾಥ ಬೇವಿನಗಿಡದ, ರಾಹುಲ ಅಷ್ಟಗಿ, ರೇಣುಕಾ ದೊಡ್ಡಮನಿ, ಬಸವರಾಜ ದಿವಟಗಿ, ಸಾಗರ ಅಷ್ಟಗಿ, ಆನಂದ ದಿವಟಗಿ, ವಿದ್ಯಾನಂದ ಅಡಕಿ, ಸಂಜು ದಿವಟಗಿ, ಬಸಪ್ಪ ನಾಯ್ಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಚಿವ ವಿನಯ ಕುಲಕರ್ಣಿ ವಿರುದ್ಧ ಗುಡುಗಿದ ಸಂಸದ ಪ್ರಲ್ಹಾದ ಜೋಶಿ

ಧಾರವಾಡ: ಒಬ್ಬ ಜನ ಪ್ರತಿನಿಧಿ ಆದವನು ಜನರ ಒಳಿತಿನ ಬಗ್ಗೆ ತಿಳಿದಿರ ಬೇಕೆ ಹೊರತು ವಕಿಲರಿಗೆ ಬೆದರಿಕೆ ಹಾಕುವುದು ಜನ ಪ್ರತಿನಿಧಿಯ ಕೆಲಸವಲ್ಲ ಎಂದು ಸಚಿವ ವಿನಯ ಕುಲಕರ್ಣಿ ಅವರ ವಿರುದ್ಧ ಧಾರವಾಡ ಸಂಸದ ಪ್ರಲ್ಹಾದ ಜೋಶಿ ತೀವ್ರ ವಾಗ್ದಾಳಿ ನಡೆಸಿದರು. ಅವರು ಧಾರವಾಡ ವಿಧಾನ ಸಭಾ ಕ್ಷೇತ್ರ-71ರಲ್ಲಿಬಿಜೆಪಿಯ ಅಭ್ಯರ್ಥಿ ಅಮೃತ ದೇಸಾಯಿ ಪರ ಸೋಮವಾರ ರಾತ್ರಿ ಕೋಟೂರ ಹಾಗೂ ತೇಗೂರ ಗ್ರಾಮಗಳಲ್ಲಿಬಿರುಸಿನ ಪ್ರಚಾರ ನಡೆಸಿ, ನೆರೆದಿದ್ದಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು. ಅದೇ ರೀತಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ ಗೌಡ ಪ್ರಕರಣವನ್ನು ಮುಚ್ಚಿ ಹಾಕಲು ಡಿಎಸ್‍ಪಿ ಅವರಿಂದ ರಾಜೀ ಸಂಧಾನ ಮಾಡಿಸೋಕೆ ಅಲ್ಲ ಎಂಬ ಕನಿಷ್ಟ ಜಾÐನ ಇಲ್ಲದ ಮಂತ್ರಿಯನ್ನ ಅಧಿಕಾರದಿಂದ ಕಿತ್ತೊಗಿಯಬೇಕು ಎಂದು ಮನವಿ ಮಾಡಿದರು. ನಮ್ಮ ಧಾರವಾಡದಲ್ಲಿ ರೌಡಿಸಂ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅದೇ ರೀತಿ ಕೊಲೆಗಳು ಸಾಕಷ್ಟು ಆಗುತ್ತಿವೆ. ಅದನ್ನ ಹತ್ತಿಕ್ಕಿ ರೌಡಿ ಮುಕ್ತ ರಾಜ್ಯವನ್ನು ಮಾಡುವ ಉದ್ದೇಶಕ್ಕಾಗಿ ಈ ಬಾರಿ ಬಿಜೆಪಿಯ ಅಭ್ಯರ್ಥಿ ಅಮೃತ ದೇಸಾಯಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದ ಅವರು 58 ಬಾರಿ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷ ಯಾವತ್ತು ಬಡವರಿಗೆ ಸಹಾಯ ಮಾಡಿಲ್ಲ. ಅವರಲ್ಲಿ ಪ್ರಾಮಾಣಿಕರಿಲ್ಲ, ಇಲ್ಲಿ ಎಲ್ಲ ಶಾಲೆ ರಸ್ತೆ ಗಳ ನಿರ್ಮಾಣ ಇಷ್ಟರಲ್ಲಿ ಆಗಬೇಕಿತ್ತು ಎಂದ ಅವರು ಕೊಳಿ ಕೊಂದ ತಿಂದರ ಚಿಕನ್ ಪಾರ್ಟಿ ಕುರಿ ಕೊಂದ ತಿಂದ್ರ ಮಟನ್ ಪಾರ್ಟಿ, ಬಡವರನ್ನ ಹೊಡದ ತಿಂದ್ರ ಕಾಂಗ್ರೆಸ್ ಪಾರ್ಟಿ " ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಹತ್ತು ಕೊಟಿ ಕುಟುಂಬಕ್ಕೆ ಗ್ಯಾಸ್ ನೀಡಿದ ಬಿಜೆಪಿ ಹೊಗೆ ಮುಕ್ತ ಅಡುಗೆ ಮನೆ ಮಾಡುವ ಗುರಿ ಹೊಂದಿದೆ. ಧಾರವಾಡಜಿಲ್ಲೆಯಲ್ಲಿ ಈವರೆಗೆ 3 ಲಕ್ಷ ಗ್ಯಾಸ್ ಗಳನ್ನ ಉಚಿತ ವಾಗಿಕೊಟ್ಟಿದ್ದೆವೆ, ಬಡವರು ಅರ್ಜಿ ನೀಡಿದವರಿಗೆಲ್ಲರಿಗೂ ಉಚಿತ ವಾಗಿ ಗ್ಯಾಸ್ ಕೊಡುತ್ತೆವೆ. ಆದರೆ ಕಾಂಗ್ರೆಸ್ ಕಾ ಹಾತ್ ಕಾಲಾ ದಂಧಾ ಮಾಡೊರ ಸಾತ್ ಎಂದು ಗುಡುಗಿದರು. ಎಲ್ ಇ ಡಿ ಬಲ್ಬಗಳು ನಾವು ಕಾಂಗ್ರೆಸ್‍ಗೆ 10 ರೊ ಗೆ ಒಂದರಂತೆ ಕೊಟ್ಟರೆ ಅವರು ಜನರಿಗೆ ಅದರಲ್ಲೊ ಮೊಸ ಮಾಡುತ್ತಿದ್ದಾರೆ, ನಾವು ಕೊಟ್ಟ ಬಲ್ಬನ್ನು ರಮ್ಯಾ ಅವರ ಹತ್ತಿರ ಕೊಟ್ಟು ಅವರಿಂದ ಪಬ್ಲಿಸಿಟಿ ತೆಗೆದು ಕೊಳ್ಳುತ್ತಿದ್ಸಾರೆ ಎಂದು ಟೀಕಿಸಿದರು. ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು 29 ರೂ. ಗೆ ಖರೀದಿ ಮಾಡಿ ನಾವು 3 ರೂಪಾಯಿಗೆ ಕೊಡುತ್ತೆವೆ ಆದರೆ ಅವರು ನಾವು ಮಾಡಿದ್ದೆವೆ ಎಂದು ಹೆಸರು ಮಾಡಿಕೊಳ್ಳುತ್ತಿದ್ದಾರೆ, ಅದರಲ್ಲೊ 5-10 ಕೆಜಿ ಅಕ್ಕಿ ಕೊಟ್ಟು ಅದರಲ್ಲೂ ಲೂಟಿ ಮಾಡುತ್ತಿದ್ದಾರೆ, ಕಾಂಗ್ರೆಸ್ ಪಾರ್ಟಿ ಯಾವಾಗಲೂ ಒಳ್ಳೆಯದನ್ನ ಮಾಡುವುದಿಲ್ಲಾ ಮಾಡುವುದಾಗಿದ್ದರೆ ನೀವು ಯಾರು ಬಡವರಾಗಿರುತ್ತಿದ್ದಿಲ್ಲ ಎಂದು ಕಾಂಗ್ರೆಸ್ ವಿರುದ್ದ ಆರೋಪಗಳ ಸುರಿಮಳೆ ಹರಿಸಿದರು. ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಮಾತನಾಡಿ, ನಮಗೆ ಗುಂಡಾ ರಾಜಕೀಯ ಬೇಡ. ಈ ಬಾರಿ ಬಿಜೆಪಿ ಗೆ ಮತ ನೀಡಿ ನಮ್ಮನ್ನು ಗೆಲ್ಲಿಸಿ ನಾವು ರಾಮರಾಜ್ಯವನ್ನಾಗಿಸುತ್ತೆವೆ. ಈ ಬಾರಿ ಸಚಿವರಿಗೆ ತಮ್ಮ ಸೊಲು ಖಚಿತ ಎಂದು ಮೊದಲೇ ಅರಿವಾಗಿದೆ. ಅದಕ್ಕೆ ಅವರು ಮುಂದಿನ ಎಂ.ಪಿ. ಎಲೆಕ್ಷನ್ ನಲ್ಲಿ ನಾವು ಖಾಲಿ ಇರುತ್ತೆವೆ ಬಿಜೆಪಿ ಅವರು ಏನು ಮಾಡುತ್ತಾರೆ ಅನ್ನೊದನ್ನ ನೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು. ಮಾಜಿ ಶಾಸಕಿ ಸೀಮಾ ಮಸೂತಿ ಮಾತನಾಡಿ, ಧಾರವಾಡ ತಾಲೂಕಿನ ಜನತೆ ನೆಮ್ಮದಿಯಿಂದಿರಲು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಇದಕ್ಕೂ ಮುನ್ನ ಧಾರವಾಡ ಗ್ರಾಮೀಣ 71 ವಿಧಾನ ಸಭಾಕ್ಷೇತ್ರ ಅಭ್ಯರ್ಥಿಯಾದ ಅಮೃತ ದೇಸಾಯಿಯವರಿಗೆ ಗ್ರಾಮಸ್ಥರು ಅಭೂತಪೂರ್ವ ಸ್ವಾಗತ ನೀಡಿದರು. ಕೋಟೂರಿನ ಸಾವಿರಾರು ಜನರು ಬಿಜೆಪಿಯ ಬೃಹತ್ ಮೆರವಣಿಗೆಗೆ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಹನುಮಂತ ಕೊಟಬಾಗಿ, ಪ್ರೇಮಾ ಕೋಮಾರ ದೇಸಾಯಿ, ನಾಗರಾಜ ಗಾಣಗೇರ, ಕೋಟೂರಿನ ಶಂಕರಯ್ಯಾ ಮಠಪತಿ, ಮಡಿವಾಳಪ್ಪಾ ಗಾಣಿಗೆರ, ಯಲ್ಲಪ್ಪ ಗೌಡಾ ಮರಿಗೌಡರ, ಮಲ್ಲವ್ವಾ ಹೊಸಮನಿ, ಶಿವಪ್ಪಾ ಬೆಳವಡಿ, ತೇಗೂರ ಗ್ರಾಮದ ನಾಗಪ್ಪಾ ಗಾಣಗೇರ, ಈರಯ್ಯ ಚಿಕ್ಕಮಠ, ಶಿವನಾಂದ ಗುಂಡಗೊವಿ, ನಾರಾಯಣ ಹಜೇರಿ, ಮಲ್ಲನಗೌಡಾ ಪಾಟೀಲ್, ಮೂಗಪ್ಪಾ ಗಾಣಿಗೇರ, ಮಲ್ಲಿಕಾರ್ಜುನ ಗೊಕಾವಿ,ಆನಂದ ಮಾದನಬಾವಿ, ಮಲ್ಲಮ್ಮಾ ಸಾವುಕಾರ, ಮಮತಾ ಅಂಕಲಗಿ, ತುಳಸವ್ವಾ ರಜಪೂತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನಗದು, ಸರಕು ಜಪ್ತಿ ಧಾರವಾಡಕ್ಕೆ 2ನೇ ಸ್ಥಾನ

ಧಾರವಾಡ : ಬೆಂಗಳೂರನ್ನು ಹೊರತುಪಡಿಸಿದರೆ ನಗದು ಹಾಗೂ ಸರಕು ಸಾಗಾಣಿಕೆ ಜಪ್ತಿ ಕಾರ್ಯದಲ್ಲಿ ಧಾರವಾಡ ಜಿಲ್ಲೆಯು ರಾಜ್ಯದಲ್ಲಿಯೇ 2ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಳ್ಳಿ ಹೇಳಿದರು. ಈವರೆಗೆ 7 ಕೆ.ಜಿ. 732 ಗ್ರಾಂ. ಬಂಗಾರ, 6 ಕೆ.ಜಿ. 465 ಗ್ರಾಂ. ಬೆಳ್ಳಿ, 1 ಕೋಟಿ 25 ಲಕ್ಷ ಮೌಲ್ಯದ ಮದ್ಯ, 28 ಲಕ್ಷಕ್ಕೂ ಹೆಚ್ಚು ಮೌಲ್ಯದ 1087 ಕುಕ್ಕರ್‍ಗಳು, 2 ಲಕ್ಷ ಮೌಲ್ಯದ ಟಿ-ಶರ್ಟಗಳು, 20 ಕಾರುಗಳು, 60 ದ್ವಿಚಕ್ರವಾಹನಗಳು, 2 ಲಾರಿಗಳು ಮತ್ತು 6 ಲಕ್ಷ ಮೌಲ್ಯದ 3840 ಸೀರೆಗಳನ್ನು ಮೇ 6ರ ವರೆಗೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಜಪ್ತ ಮಾಡಲಾಗಿದೆ ಎಂದು ವಿವರಿಸಿದರು. ನಿಷೇಧಾಜ್ಞೆ ಜಾರಿ: ಮತದಾನ ಕೊನೆಗೊಳ್ಳುವ 48 ಗಂಟೆಗಳ ಮುನ್ನ ಅಂದರೆ ಮೇ 10ರ ಸಂಜೆ 6 ಗಂಟೆಯಿಂದ ಮೇ 13ರ ಸಂಜೆ 6 ಗಂಟೆಯ ವರೆಗೆ ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗಾಗಿ ಅಪರಾಧ ದಂಡ ಸಂಹಿತೆ 144ನೇ ಕಲಂನಡಿ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ. ಆದರೆ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಗರಿಷ್ಟ 10 ಜನರೊಂದಿಗೆ ಮನೆ ಮನೆಗಳಿಗೆ ತೆರಳಿ ಮತಯಾಚನೆ ಮಾಡಬಹುದು. ಕ್ಷೇತ್ರದ ಮತದಾರರಲ್ಲದವರು ಮತದಾನದ 48 ಗಂಟೆಗಳ ಮುಂಚೆ ಕ್ಷೇತ್ರ ತೊರೆಯಬೇಕು ಎಂದು ಎಚ್ಚರಿಸಿದರು.

ಮೇ 12 ರ ಮತದಾನಕ್ಕೆ ಸರ್ವ ಸಿದ್ದತೆ: ಧಾರವಾಡ ಜಿಲ್ಲೆಯಲ್ಲಿ 14,79,450 ಮತದಾರರು, 1628 ಮತಗಟ್ಟೆಗಳು

ಧಾರವಾಡ : ಕರ್ನಾಟಕ ವಿಧಾನಸಭೆ ಚುನಾವಣೆಗೆ ಧಾರವಾಡ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಗೆ ಮೇ 12 ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯ ವರೆಗೆ ಮತದಾನ ನಡೆಯಲಿದೆ. ಜಿಲ್ಲೆಯಾದ್ಯಂತ 14,79,450 ಮತದಾರರಿದ್ದು, 1628 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು. ಧಾರವಾಡ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ 89 ಪುರುಷ ಹಾಗೂ 9 ಮಹಿಳಾ ಅಭ್ಯರ್ಥಿಗಳು ಸೇರಿ ಒಟ್ಟು 98 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಗರ ಪ್ರದೇಶದಲ್ಲಿ 908 ಹಾಗೂ ಗ್ರಾಮೀಣ ಪ್ರದೇಶದಲ್ಲಿ 720 ಸೇರಿ ಒಟ್ಟು 1628 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು. ನವಲಗುಂದ ವಿಧಾನ ಸಭಾ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು ಕಣದಲ್ಲಿದ್ದು, 104200 ಪುರುಷ, 99570 ಮಹಿಳೆಯರು, ಇತರೆ 7 ಸೇರಿ ಒಟ್ಟು 203777 ಮತದಾರರಿದ್ದಾರೆ. 231 ಮತಗಟ್ಟೆಗಳಿವೆ. ಕುಂದಗೋಳ ವಿಧಾನ ಸಭಾ ಕ್ಷೇತ್ರದಲ್ಲಿ 12 ಅಭ್ಯರ್ಥಿಗಳು ಕಣದಲ್ಲಿದ್ದು, 96923 ಪುರುಷ, 90590 ಮಹಿಳೆಯರು ಸೇರಿ ಒಟ್ಟು 187513 ಮತದಾರರಿದ್ದಾರೆ. 213 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಧಾರವಾಡ ವಿಧಾನ ಸಭಾ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ದು, 104646 ಪುರುಷ, 102051 ಮಹಿಳೆಯರು, ಇತರೆ 14 ಸೇರಿ ಒಟ್ಟು 206711 ಮತದಾರರಿದ್ದಾರೆ. 231 ಮತಗಟ್ಟೆಗಳಿವೆ ಎಂದರು. ಹುಬ್ಬಳ್ಳಿ-ಧಾರವಾಡ (ಪೂರ್ವ) ವಿಧಾನ ಸಭಾ ಕ್ಷೇತ್ರದಲ್ಲಿ 08 ಅಭ್ಯರ್ಥಿಗಳು ಕಣದಲ್ಲಿದ್ದು, 97926 ಪುರುಷ, 96264 ಮಹಿಳೆಯರು, ಇತರೆ 11 ಸೇರಿ ಒಟ್ಟು 194201 ಮತದಾರರಿದ್ದಾರೆ. 210 ಮತಗಟ್ಟೆಗಳು, ಹುಬ್ಬಳ್ಳಿ-ಧಾರವಾಡ (ಕೇಂದ್ರ) ವಿಧಾನ ಸಭಾ ಕ್ಷೇತ್ರದಲ್ಲಿ 26 ಅಭ್ಯರ್ಥಿಗಳು ಕಣದಲ್ಲಿದ್ದು, 121695 ಪುರುಷ, 120972 ಮಹಿಳೆಯರು, ಇತರೆ 33 ಸೇರಿ ಒಟ್ಟು 242700 ಮತದಾರರಿದ್ದಾರೆ. 253 ಮತಗಟ್ಟೆಗಳು, ಹುಬ್ಬಳ್ಳಿ-ಧಾರವಾಡ (ಪಶ್ಚಿಮ) ವಿಧಾನ ಸಭಾ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳು ಕಣದಲ್ಲಿದ್ದು, 127248 ಪುರುಷ, 127879 ಮಹಿಳೆಯರು, ಇತರೆ 27 ಸೇರಿ ಒಟ್ಟು 255154 ಮತದಾರರಿದ್ದಾರೆ. 265 ಮತಗಟ್ಟೆಗಳಿವೆ. ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ಕಣದಲ್ಲಿದ್ದು, 97998 ಪುರುಷ, 91388 ಮಹಿಳೆಯರು, ಇತರೆ 08 ಸೇರಿ ಒಟ್ಟು 189394 ಮತದಾರರಿದ್ದಾರೆ. 225 ಮತಗಟ್ಟೆಗಳಿವೆ ಎಂದು ವಿವರಿಸಿದರು. ಈ ಎಲ್ಲ 7 ವಿಧಾನಸಭಾ ಕ್ಷೇತ್ರಗಳಿಗೆ 1981 ಕಂಟ್ರೋಲ್ ಯುನಿಟ್‍ಗಳು, 2540 ಬ್ಯಾಲೆಟ್ ಯುನಿಟ್‍ಗಳು ಹಾಗೂ 2027 ವಿವಿಪ್ಯಾಟ್ ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ. 9780 ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಹಾಗೂ ಮತದಾನ ಅಧಿಕಾರಿಗಳನ್ನು ನೇಮಿಸಿ ತರಬೇತಿ ನೀಡಲಾಗಿದೆ ಎಂದರು. ಅಶಿಸ್ತು ತೋರಿದ 5 ಜನರನ್ನು ಅಮಾನತ್ತುಗೊಳಿಸಲಾಗಿದೆ, ಇಬ್ಬರ ಮೇಲೆ ಕ್ರೀಮಿನಲ್ ಮೊಕದ್ದಮೆ ಹೂಡಲಾಗಿದೆ. ಸೂಕ್ಷ್ಮ ಮತಗಟ್ಟೆಗಳಿಗೆ 303 ಮೈಕ್ರೋ ಆಬ್ಸರ್ವರ್‍ಗಳನ್ನು ನೇಮಿಸಲಾಗಿದೆ. ಇವರು ಕೇಂದ್ರ ಸರ್ಕಾರಿ ನೌಕರರಾಗಿದ್ದಾರೆ. ಜಿಲ್ಲೆಯ 80 ಮತಗಟ್ಟೆಗಳಿಗೆ ವೆಬ್‍ಕಾಸ್ಟಿಂಗ್ ಸೌಲಭ್ಯ ಒದಗಿಸಲಾಗಿದೆ. ಇದರ ಮೂಲಕ ನವದೆಹಲಿಯ ಭಾರತ ಚುನಾವಣಾ ಆಯೋಗ, ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿಗಳ ಕಛೇರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನೇರ ವೀಕ್ಷಣೆ ಮಾಡಬಹುದಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ಮತದಾರರ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ ಎಂದರು.

ಅಭಿವೃದ್ದಿ ನೋಡಿ ಭಾಜಪ ಗೆ ತಮ್ಮ ಮತ ನೀಡಿ : ಶಾಸಕ ಅರವಿಂದ ಬೆಲ್ಲದ

ಧಾರವಾಡ : ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ-74 ರ ಶಾಸಕರಾದ ಅರವಿಂದ ಬೆಲ್ಲದ ಅವರು ಸೋಮವಾರ ಧಾರವಾಡ-ಶಹರದ ಎಸ್.ಡಿ.ಎಮ್ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಮಹಾ ವಿದ್ಯಾಲಯದಲ್ಲಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಒಬ್ಬ ಜನಪ್ರತಿನಿಧಿಯಾಗಿ ಸುಧೀರ್ಘ ಹೋರಾಟ ನಡೆಸಿ ಹೆಮ್ಮೆಯ ಐಐಟಿ (ಇಂಡಿಯನ ಇನ್ಸ್ಟಿಟ್ಯುಟ್ ಆಫ್ ಟೆಕ್ನಾಲಜಿ) ತಂದಿದ್ದು, ತಡಸಿನಕೊಪ್ಪದಲ್ಲಿ ಐಐಐಟಿ(ಇಂಡಿಯನ ಇನ್ಸ್ಟಿಟ್ಯುಟ್ ಆಫ್ ಇನ್ ಫಾರ್ಮೆಶನ್ ಟೆಕ್ನಾಲಜಿ) ,ಉನ್ನತ ಶಿಕ್ಷಣ ಅಕಾಡೆಮಿ, ಪೋಲೀಸ್ ತರಬೇತಿ ಕೇಂದ್ರ ಪ್ರಾರಂಭ, ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಮಹಿಳಾ ಕಾಲೇಜ್ ಸ್ಥಾಪನೆ, ಬಡ ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ರಾಜ್ಯಕ್ಕೆ ಮಾದರಿಯಾಗಿ ಪ್ರಪ್ರಥಮವಾಗಿ ಸರ್ಕಾರಿ ಶಾಲೆಯಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳನ್ನು ಪ್ರಾರಂಭಿಸಿದ್ದು, ಹೀಗೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಗಳಿರಳು ಶ್ರಮಿಸುತೇನೆ. ಪ್ರಜ್ಞಾವಂತರು ಅಭಿವೃದ್ದಿ ನೋಡಿ ಭಾಜಪ ಗೆ ತಮ್ಮ ಮತ ನೀಡುವುದರ ಮೂಲಕ ಮತ್ತೋಮ್ಮೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಸದ ಪ್ರಲ್ಹಾದ ಜೋಶಿ,,ಪಕ್ಷದ ಮುಖಮಡರಾದ ಸುರೇಶ ಬೆಂದ್ರೆ, ಹು-ಧಾ ಮಹಾನಗರದ ಭಾಜಪ ದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶರಣು ಅಂಗಡಿ, ಯುವಮೋರ್ಚಾ ಸದಸ್ಯ ಅಮಿತ ಪಾಟೀಲ, ಪವನ, ವಿಜಯ ಸಾಬಳೆ, ದೇವರಾಜ ಶಹಾಪುರ ಹಾಗೂ ಅನೇಕ ಕಾರ್ಯಕರ್ತರು ಮತ್ತು ಯುವಮಿತ್ರರು ಉಪಸ್ಥಿತರಿದ್ದರು.

ಶಾಸಕ ಅರವಿಂದ ಬೆಲ್ಲದ ಸಮ್ಮುಖದಲ್ಲಿ ಕೈ ಬಿಟ್ಟು ಕಮಲ ಹಿಡಿದ ಕಾರ್ಯಕರ್ತರು

ಧಾರವಾಡ : ಧಾರವಾಡ ಪಶ್ಚಿಮ ವಿಧಾನ ಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಅರವಿಂದ ಬೆಲ್ಲದ ಅವರ ಸಮ್ಮುಖದಲ್ಲಿ ನೂರಾರು ಯುವಕರು ಕಾಂಗ್ರೇಸ್ ತೊರೆದ ಬಿಜೆಪಿಗೆ ಸೇರ್ಪಡೆಗೊಂಡರು. ಶಾಸಕರ ನಿವಾಸದಲ್ಲಿ ಸೋಮವಾರ ನೂರಾರು ಯುವಕರ ಪಡೆಯನ್ನು ಸ್ವಾಗತಿಸಿದ ಅರವಿಂದ ಬೆಲ್ಲದ ಮಾತನಾಡಿ, ಇಂದಿನ ಯುವಪಡೆ ಭಾರತೀಯ ಜನತಾ ಪಕ್ಷದ ತತ್ವ, ಸಿದ್ದಾಂತಗಳನ್ನು ಅರಿತು ಕಾಂಗ್ರೇಸನ ದುರಾಡಳಿತ ಕಂಡು, ಲವ್ ಜಿಹಾದನಂತಹ ಕೃತ್ಯಗಳಿಗೆ ಬೆಂಬಲಿಸುತ್ತಿರುವ ಕಾಂಗ್ರೇಸಿಗರ ನಡೆ, ಹಿಂದೂ ಧರ್ಮ ಒಡೆಯುವ ಹುನ್ನಾರ ಖಂಡಿಸಿ ಬಿಜೆಪಿ ಸೇರಿರುವುದು ಸಂತಸದ ಸಂಗತಿಯಾಗಿದೆ ಎಂದರು. ಈ ಹಿಂದೆ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ ಸರ್ಕಾರವು ದೇಶದ ಜನರನ್ನು ಕಂಪನಿಯ ಮೂಲಕ ಒಡೆದಾಳುವ ನೀತಿಯನ್ನು ಅನುಸರಿಸಿದಂತೆ ಕಾಂಗ್ರೇಸ್ ಸರಕಾರವು ಜಾತಿ ಮತ್ತು ಧರ್ಮದ ಆದಾರ ಮೇಲೆ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದು, ವಿದ್ಯಾಕಾಶಿ, ಸುಸಂಸ್ಕøತ ನಗರವಾದ ಧಾರವಾಡದ ಜನತೆ ಇವುಗಳಿಗೆ ನೀರೆರಿವುದಿಲ್ಲ ಅದಕಾಗಿ ಇಂದಿನ ಯುವ ಜನತೆ ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೇಸನ ನೀಚ ರಾಜಕಾರಣ ವನ್ನು ಖಂಡಿಸಿ ಬಿಜೆಪಿಗೆ ಸೇರಿರುವುದಾಗಿ ಹೇಳಿದರು. ಯುವಕರು ದೇಶದ ಸುಭದ್ರತೆಗಾಗಿ ಸ್ವಯಂ ಪ್ರೇರಣೆಯಿಂದ ಜಾತಿ ಮತ್ತು ಪಂಗಡ ಲೆಕ್ಕಿಸದೇ ಬಿಜೆಪಿಗೆ ಬಂದಿರುವುದು ಪಕ್ಷಕ್ಕೆ ಬಲ ತಂದುಕೊಟ್ಟಿದೆ, ನಿಮ್ಮ ಈ ಪ್ರೋತ್ಸಾಹ ನನಗೆ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಲು ಪ್ರೇರಣೆಯಾಗುತ್ತಿದೆ. ಧಾರವಾಡದ ಪ್ರಜ್ಞಾವಂತ ಜನರು ಕಾಂಗ್ರೇಸನ ಆಸೆ ಆಮಿಷಗಳಿಗೆ ಒಳಗಾಗದೆ ಭಾಜಪಗೆ ಮತದಾನ ಮಾಡುವ ಮೂಲಕ ಉತ್ತರ ಕೊಡಲು ಸನ್ನಧ್ದರಾಗಿದಾರೆ, ವಿಶ್ವದಲ್ಲಿ ಪ್ರಶಂಸೆಯನ್ನು ಪಡೆದ ಪ್ರಧಾನಿ ನರೇಂದ್ರ ಮೋದಿಜಿ ಯವರ ಕೈ ಬಲ ಪಡಿಸಲು ಯುವ ಜನತೆ ನಮ್ಮೊಂದಿಗೆ ಅಪಾರ ಪ್ರಮಾಣದಲ್ಲಿ ಬೆಂಬಲ ವ್ಯಕ್ತ ಪಡಿಸಿರುವುದಕ್ಕೆ ನಿನ್ನೆ ಹುಬ್ಬಳಿಯ ರೈಲ್ವೆ ಮೈದಾನದ ಆವರಣದಲ್ಲಿ ಸೇರಿದ ಅಪಾರ ಜನಸ್ತೋಮವೇ ಸಾಕ್ಷಿಯಾಗಿದೆ ಎಂದು ಹೇಳಿದರು. ಗುರುಪ್ರಸಾದ ಕರಡೆನ್ನವರ, ಶಿವುಕುಮಾರ, ಅನಿಕೇತ, ರಘು ಚವ್ಹಾನ, ಅವರ ನೇತೃತ್ವದಲ್ಲಿ ಶಿವುಕುಮಾರ ಕಸಳ್ಳಿ, ಗುರುಪ್ರಸಾದ, ಬಸು ಪಿಡೆಕ್ಕನವರ, ಕರೇಪ್ಪ ವಾಡೆಪ್ಪನವರ, ಭೀಮು ಕಟ್ಟಿಮನಿ, ಶಂಕರ ಚಿಕ್ಕಣ್ಣವರ, ಶಿವು ಇಂಗನಹಳ್ಳಿ, ರಮೇಶ ಸವಬೂರ, ಶಶಿಕುಮಾರ ಅಥಣಿ, ಶಿವು ತಡಸ, ರಮೇಶ ಸುಂಕದ, ಗಿರೀಶ ಚವ್ಹಾಣ, ಬಸವರಾಜ ಹಿರೇಮಠ, ಸೋಮು ಕಂಬಾರ,ನಾಗರಾಜ ತಳವಾರ,ನವೀನ ಆಶ್ರಯ ಕಾಲನಿ,ಮನದೇವ,ಶ್ರಿಶ್ಯೆಲ, ಮುರಘೇಶ, ಮಾರುತಿ ತಳವಾರ, ರಾಘು ಬ್ರಿಷ್ಟನ್ನರ,ಪುನೀತ ಪಾಟೀಲ,ಬಸು ರೆಡ್ಡಿ, ಸಚಿನ ರೆಡ್ಡಿ,ಚಂದ್ರು ಅಕ್ಕಿ, ರವಿ ಇಡಿಗೇರ, ಶರಣ ಕರಸ್ತಾಳ, ಮಂಜು, ಸಂಪತ್ತಕುಮಾರ,ಚೇತನ ಸವಲಗಿ,ಪ್ರವೀಣ ತಳವಾರ ಆಕಾಶ ಅಗಸಿಮನಿ,ಪ್ರವೀಣ ಕುಂಬಾರ,ಆತ್ಮಾನಂದ ಸತ್ತೂರ ವಿಲಾಸ ರಾಯರ ಹಾಗೂ ಅನೇಕ ಯುವಕರು ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಭಾಜಪ ಪಕ್ಷದ ಮುಖಂಡರಾದ ಸುರೇಶ ಬೇಂದ್ರೆ, ರಾಕೇಶ ನಾಝರೆ, ನಾಗರಾಜ ನಾಯಕ, ಓಂಕಾರ ರಾಯಚೂರ, ಬಸವರಾಜ ಹೊಸಳ್ಳಿ, ಮಂಜುನಾಥ ಹೊಂಗಲದ, ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಚಕ್ಕಡಿ ಪಲ್ಟಿಯಾಗಿ ಗಂಭೀರವಾಗಿ ಗಾಯಗೊಂಡ ಕಾಂಗ್ರೆಸ್ ಅಧ್ಯಕ್ಷ

ಧಾರವಾಡ : ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಚಕ್ಕಡಿ ಪಲ್ಟಿಯಾದ ಘಟನೆ ಸೋಮವಾರ ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಲವಡಿ ಗ್ರಾಮದಲ್ಲಿ ನಡೆದಿದೆ. ಇದರ ಪರಿಣಾಮ ಧಾರವಾಡ ಜಿಲ್ಲೆಯ ಗ್ರಾಮೀಣ ಅಧ್ಯಕ್ಷ ಹೆಚ್.ವಿ. ಮಾಡಳ್ಳಿ ಅವರು ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಆಸ್ಪತ್ರೆ ಸೇರಿದ್ದಾರೆ. ನವಲಗುಂದ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಶಲವಡಿ ಗ್ರಾಮದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದ ವೇಳೆ ಈ ರ್ದುಘಟನೆ ಸಂಭವಿಸಿದೆ. ಇದರಿಂದಾಗಿ ಧಾರವಾಡ ಜಿಲ್ಲೆಯ ಗ್ರಾಮೀಣ ಅಧ್ಯಕ್ಷ ಹೆಚ್. ವಿ ಮಾಡಳ್ಳಿ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಅವರನ್ನು ಹುಬ್ಬಳ್ಳಿಯ ಪೋರ್ಟೀಸ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ವಿನೋದ ಅಸೂಟಿಗೂ ಸ್ವಲ್ಪ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

50 ವರ್ಷಗಳಲ್ಲಿ ಕಾಣದ ಅಭಿವೃದ್ಧಿ ಕೋನರಡ್ಡಿ 5 ವರ್ಷಗಳಲ್ಲಿ ಮಾಡಿದ್ದಾರೆ : ವಿ.ಜಿ. ಅಂದಾನಗೌಡರ

ನವಲಗುಂದ : ನವಲಗುಂದ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಅನೇಕ ಹಳ್ಳಿಗಳು ಸರಿಯಾದ ರಸ್ತೆ, ನೀರು, ವಿದ್ಯುತ್ ದೀಪ ಇಲ್ಲದೆ ನಲಗುತ್ತಿದ್ದವು. 50 ವರ್ಷಗಳಲ್ಲಿ ಕಾಣದ ಅಭಿವೃದ್ಧಿಯನ್ನು ಜೆಡಿಎಸ್ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಕೇವಲ 5 ವರ್ಷಗಳಲ್ಲಿ ಸಾಧಿಸಿ ತೋರಿಸಿದ್ದಾರೆ ಎಂದು ಸಾಸ್ವಿಹಳ್ಳಿ ಮುಖಂಡ ವಿ.ಜಿ. ಅಂದಾನಿಗೌಡರ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಸೋಮವಾರ ನವಲಗುಂದ ತಾಲೂಕಿನ ಕೊಂಡಿಕೊಪ್ಪ, ಸಾಸ್ವಿಹಳ್ಳಿ, ಹಳ್ಳಿಕೇರಿ, ಅಡ್ನೂರ,ಯಲ್ಲಿ ಜೆಡಿಎಸ್ ಅಭ್ಯರ್ಥಿ ಹಾಗೂ ಶಾಸಕ ಎನ್.ಹೆಚ್. ಕೋನರಡ್ಡಿ ಅವರ ಪರ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದರು. ಸಾಸ್ವಿಹಳ್ಳಿ ಗ್ರಾಮವೂ ಸುಸಜ್ಜಿತ ರಸ್ತೆ, ಶುದ್ಧ ಕುಡಿಯುವ ನೀರು, ಸಂಪರ್ಕ ರಸ್ತೆ ಇಲ್ಲದೆ ನಲುಗುತ್ತಿತ್ತು. ಆದರೆ ಈಗ ಶಾಸಕ ಎನ್.ಹೆಚ್. ಕೋನರಡ್ಡಿ ಅವರ ಅವಿರತ ಶ್ರಮದಿಂದ ಸಾಸ್ವಿಹಳ್ಳಿ-ಶಾಗೋಟಿ ರಸ್ತೆ, ಸಾಸ್ವಿಹಳ್ಳಿ-ಅಣ್ಣಿಗೇರಿ ರೋಡ ಸಾಸ್ವಿಹಳ್ಳಿ ಸಮಗ್ರ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ಅನುದಾನ ನೀಡಿದಲ್ಲದೆ, ನೂತನ ಗ್ರಾಮ ಪಂಚಾಯತ್ ಮಂಜೂರು ಮಾಡುವ ಮೂಲಕ ಜನಾನುರಾಗಿಯಾಗಿದ್ದಾರೆ ಎಂದು ಶ್ಲಾಘಿಸಿದರು. ಇಂತಹ ಸರಳ, ಸಜ್ಜನಿಕೆಯ, ಅಭಿವೃದ್ಧಿಯ ಹರಿಕಾರ ಹಾಗೂ ಜನಸಾಮಾನ್ಯರ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಎರಡನೇ ಬಾರಿಗೆ ಆಯ್ಕೆ ಮಾಡಲು ಎರಡನೇ ಬಟನ್ ಒತ್ತಿ ಎಂದು ಮನವಿ ಮಾಡಿದರು. ಹಾಸ್ಯ ಕಲಾವಿದ ಶರಣು ಯಮನೂರ ಮಾತನಾಡಿ, ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಎಂಟೆದೆ ಬಂಟ. ಕಳೇದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಯಾವುದೇ ಒಂದು ಹಿಂದು ಮುಸ್ಲಿಂ ಗಲಾಟೆ ಇಲ್ಲದೆ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋದ ನಾಯಕನಾಗಿದ್ದು, ದಲಿತರ ಮನೆಯಲ್ಲಿ ಊಟ ಮಾಡಿ ಅಮೃತಕ್ಕೆ ಹೊಲಿಸಿದ ಸರಳ ಜೀವಿ. ಯಾವುದೇ ಪ್ರಚಾರ ಪಡೆಯದೆ ನೊಂದ ಜೀವಿಗಳಿಗೆ ಆಶಾಕಿರಣವಾಗಿದ್ದಾರೆ. ಅವರ ತಾಕತ್ ಎಂತಹದ್ದು ಎಂದರೆ ನಮ್ಮ ರೈತರಿಗಾಗಿ ಕಣ್ಣೀರು ಇಟ್ಟರು. ರೈತರಿಗೆ ಹೊಡೆಬೇಡಿ ಅಂತ ಪೊಲೀಸರಿಗೆ ಗಟ್ಟಿಯಾಗಿ ಹೇಳಿದವರು ಕೋನರಡ್ಡಿ, ರೈತರಿಗಾಗಿ ರೈತರಿಂದ ರೈತೃರಿಗೋಸ್ಕರ ಇರುವ ಏಕೈಕ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಅಭಿವೃದ್ಧಿಯ ಹರಿಕಾರರು ಆಗಿದ್ದಾರೆ ಎಂದು ಶ್ಲಾಘಿಸಿದರು. ಬಳಿಕ ಮಾತನಾಡಿದ ಶಾಸಕ ಎನ್.ಹೆಚ್. ಕೋನರಡ್ಡಿ, ಪ್ರತಿಯೊಂದು ಗ್ರಾಮಸ್ಥರು ಆರತಿ ಮಾಡಿ ಸ್ವಾಗತ ಕೋರುವ ಜೊತೆಗೆ ಪಾದಯಾತ್ರೆ ಮಾಡುವ ಮೂಲಕ ಆಶೀರ್ವಾದ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಬಿಎಸ್ಪಿ ಬೆಂಬಲ ನಮಗೆ ಆನೆಬಲ ತಂದಿದ್ದರೆ, ಬಿಜೆಪಿಯ ಅನೇಕ ಯುವ ನಾಯಕರು ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವುದು ನಮ್ಮ ಬಲವನ್ನು ಇಮ್ಮಡಿಗೊಳಿಸುತ್ತಿದೆ ಎಂದು ಹೇಳಿದರು. ಸಾಸ್ವಿಹಳ್ಳಿಗೆ ನೂತನ ಗ್ರಾಪಂ ಮಂಜೂರು, ಗ್ರಾಮಕ್ಕೆ ಶುದ್ದ ಕುಡಿಯುವ ನೀರು, ಅಣ್ಣಿಗೇರಿ- ಮದಗಾನೂರ ರಸ್ತೆ, ಸೇರಿದಂತೆ ಗ್ರಾಮದ ಅಭಿವೃದ್ಧಿಗೆ 21 ಕೋಟಿ ಅನುದಾನ ನೀಡಿ ಸಾಸ್ವಿಹಳ್ಳಿಯನ್ನು ಇತರ ಗ್ರಾಮಗಳಿಗೆ ಮಾದರಿಯನ್ನಾಗಿಸಲಾಗಿದೆ ಎಂದರು. ಇದೇ ವೇಳೆ ಸಾಸ್ವಿಹಳ್ಳಿ ಗ್ರಾಪಂ ಸದಸ್ಯ ದೊಡ್ಡ ಫಕೀರಪ್ಪ ಗಾಣಗೇರ, ಗ್ರಾಪಂ ಮಾಜಿ ಉಪಾಧ್ಯಕ್ಷ ಫಕೀರಪ್ಪ ಗಾಣಗೇರ, ವೆಂಕಣ್ಣ, ವೈ.ಎಸ್ ರಾಟಿಮನಿ ಸೇರಿದಂತೆ ಅನೇಕರು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದರು. ಶಾಸಕ ಎನ್.ಹೆಚ್. ಕೋನರಡ್ಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ವಿನಾಯಕ, ಜೆಡಿಎಸನ ಹತ್ತಾರು ಮುಖಂಡರು, ನೂರಾರು ಕಾರ್ಯಕರ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದ ಮೀರಾಕುಮಾರ

ಧಾರವಾಡ : ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದಲಿತರಿಗೆ ರಕ್ಷಣೆ ಇಲ್ಲದಂತಾಗಿದ್ದು, ಬೇಟಿ ಬಚಾವ್ ಬೇಟಿ ಪಡಾವೋ ಕೇವಲ ಬಾಯಿ ಮಾತಿನಲ್ಲಿ ನಡೆದಿದ್ದು ಕಾರ್ಯರೂಪಕ್ಕೆ ಬರುತ್ತಿಲ್ಲವೆಂದು ಲೋಕಸಭೆ ಮಾಜಿ ಸ್ಪೀಕರ್ ಮೀರಾಕುಮಾರ ವ್ಯಂಗವಾಡಿದರು. ಅವರು ಸೋಮವಾರ ಧಾರವಾಡ ತಾಲೂಕಿನ ಉಪ್ಪಿನಬೇಟಗೇರಿಯಲ್ಲಿ ಧಾರವಾಡ ಗ್ರಾಮೀಣ ೭೧ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಸಚಿವ ವಿನಯ ಕುಲಕರ್ಣಿ ಅವರ ಪರ ಮತಯಾಚಿಸಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ದಿನ ಕಳೆದಂತೆ ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗುತ್ತಿದೆ. ಈ ಚುನಾವಣೆಯು ಎರಡು ವಿಚಾರಧಾರೆಗಳ ಮಧ್ಯೆ ಸಂಘರ್ಷ ನಡೆಯುತ್ತಿದ್ದು ಧರ್ಮ ಜಾತಿ ಮೀರಿದ ಚುನಾವಣೆ ನಡೆಸಲು ರಾಜ್ಯದಲ್ಲಿ ಕಾಂಗ್ರೆಸ್ ಹೋರಾಡುತ್ತಿದೆ.ಇನ್ನೊಂದೆಡೆ ಜಾತಿಗಳ ಮಧ್ಯೆ ದ್ವೇಷ ಮೂಡಿಸುವ ಕೆಲಸವನ್ನು ಪ್ರತಿಪಕ್ಸಗಳು ಮಾಡುತ್ತಿವೆ.ಕಾರಣ ಈ ಬಾರಿ ರಾಜ್ಯದ ಜನ ಕಾಂಗ್ರೇಸಿಗೆ ಬೆಂಬಲಿಸುವುದು ಖಚಿತ ಎಂದು ವಿಶ್ಬಾಸ ವ್ಯಕ್ತ ಪಡಿಸಿದರು. ಮುಖ್ಯವಾಗಿ ಸಮಾಜವನ್ನು ಸುಸ್ಥಿರವನ್ನಾಗಿಸಬೇಕಾಗಿದ್ದು, ಅದರ ರಕ್ಷಣೆಯನ್ನು ಮಾಡುವವರಿಗೆ ಬೆಂಬಲಿಸಬೇಕಾದ ಕಾರಣ ಈ ಚುನಾವಣೆ ಕೋಮು ಶಕ್ತಿಗಳ ವಿರುದ್ಧ ನಡೆಯಬೇಕಿದೆ ಎಂದರು. ಕಳೆದ ಐದು ವರ್ಷಗಳಲ್ಲಿ ಸಿದ್ದರಾಮಯ್ಯನವರ ಸರ್ಕಾರ ಉತ್ತಮ ಜನಪರ ಯೋಜನೆಗಳನ್ನು ನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದೆ. ಆದರೆ ಈ ಹಿಂದೆ ಕೆಟ್ಟ ಆಡಳಿತ ನೀಡಿದ ಬಿಜೆಪಿಯು ಮೂರು ಮುಖ್ಯ ಮಂತ್ರಿಗಳನ್ನು ನೀಡಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸಚಿವ ವಿನಯ ಕುಲಕರ್ಣಿ , ಜಿಪಂ ಸದಸ್ಯ ಪುಡಕಲಕಟ್ಟಿ, ಕಾಂಗ್ರೆಸ್ ಮುಖಂಡ ಅಶೋಕ ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮಾರಡಗಿಯಲ್ಲಿ ಮತಯಾಚನೆ ಮಾಡಿದ ಅಮೃತ ದೇಸಾಯಿ

ಧಾರವಾಡ: ಧಾರವಾಡ ವಿಧಾನ ಸಭಾ ಮತ ಕ್ಷೇತ್ರ-71ರ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಅಮೃತ ದೇಸಾಯಿ ಅವರು ಧಾರವಾಡ ತಾಲೂಕಿನ ಮಾರಡಗಿ ಗ್ರಾಮದಲ್ಲಿ ಸೋಮವಾರ ಬಿರುಸಿನ ಪಾದಯಾತ್ರೆ ಹಾಗೂ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ತಮ್ಮ ಅಪಾರ ಪ್ರಮಾಣದ ಬೆಂಬಲಿಗರೊಂದಿಗೆ ಗ್ರಾಮದಲ್ಲಿ ಸಂಚರಿಸಿದ ಅವರು ಮಿಂಚಿನ ಸಂಚಲನ ಸೃಷ್ಟಿಸಿದರು. ಮಾರಡಗಿ ಗ್ರಾಮದ ಜನತೆ ಅವರಿಗೆ ಹೂವಿನ ಮಳೆ ಸುರಿಸಿ ಅಮೃತ ದೇಸಾಯಿ ಹಾಗೂ ಗುರನಾಥಗೌಡ ಗೌಡರ ಅವರನ್ನ ಬರಮಾಡಿಕೊಂಡರು. ಮಾರಡಗಿ ಗ್ರಾಮದಲ್ಲಿ ಉರಿ ಬಿಸಿಲಿನಲ್ಲೂ ಬಿರುಸಿನ ಪ್ರಚಾರ ನಡೆಸಿದ ಅವರು ಈ ಬಾರಿ ಕ್ಷೇತ್ರದಲ್ಲಿ ಕಮಲ ಅರಳಿಸುವಂತೆ ಮನವಿ ಮಾಡಿದರು. ಮಾರಡಗಿ ಗ್ರಾಮದಲ್ಲಿ ಮತಯಾಚನೆ ವೇಳೆ ಅಶೋಕ ಕಣಕಿಕೊಪ್ಪ, ಶೇಕಪ್ಪ ಕುಸುಗಲ್, ಗಂಗಾಧರ ಕುಸುಗಲ್, ರಾಜು ಹೆಬ್ಬಳ್ಳಿ, ಮುಕ್ತಾರ ಅಲಿ ಗೋಡಿ, ಮುರಗೇಶ ಹಂಪಣ್ಣವರ ಹಾಗೂ ಗ್ರಾಮದ ಮುಖ್ಯಸ್ಥರು, ಭಾಜಪ ಕಾರ್ಯಕರ್ತರು ಸಾಥ ನೀಡಿದರು.

ವಾಲ್ಮೀಕಿ ಗುರುಪೀಠದ ಸ್ವಾಮೀಜಿ ಆಶೀರ್ವಾದ ಪಡೆದ ತಮಟಗಾರ

ಧಾರವಾಡ : ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರ-74ರ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಶ್ರೀ ಇಸ್ಮಾಯಿಲ್ ತಮಟಗಾರ ಅವರು ವಾಲ್ಮೀಕಿ ಸಮಾಜದ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಬಳಿಕ ಶ್ರೀಗಳೊಂದಿಗೆ ಹಲವು ನಿಮಿಷಗಳ ಕಾಲ ಚರ್ಚೆ ನಡೆಸಿದ ಇಸ್ಮಾಯಿಲ್ ತಮಟಗಾರ ಅವರು ತಮಗೆ ಈಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಶ್ರೀರಕ್ಷೆ ನೀಡುವಂತೆ ಕೋರಿದರು. ಜನಸಾಮಾನ್ಯರ ನೋವಿಗೆ ಸದಾ ಸ್ಪಂದಿಸುವ ಹೊಸ ಆಶಾಕಿರಣವಾಗಿ, ಯುವ ನಾಯಕನಾಗಿ ಬೆಳೆಯುತ್ತಿರುವ ಜೊತೆಗೆ ಒಂದು ಶಿಕ್ಷಣ ಸಂಸ್ಥೆಯನ್ನು ಸಮರ್ಥವಾಗಿ ಮುನ್ನೇಡಿಸಿಕೊಂಡು ಹೋಗುತ್ತಿರುವ ತಮಗೆ ಒಳಿತಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮುಖಂಡರಾದ ಈರಣ್ಣ ಮಲ್ಲಿಗವಾಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸುಸಜ್ಜಿತ ಕ್ಲಾಸಿಕ್ ಪಿಯು ವಸತಿ ಕಾಲೇಜ್‍ ಗೆ ಪ್ರವೇಶ ಪ್ರಾರಂಭ

ಧಾರವಾಡ : ಉತ್ತರ ಕರ್ನಾಟಕ ಭಾಗದ ಮಕ್ಕಳ ಭವ್ಯ ಭವಿಷ್ಯ ರೂಪಿಸುವಲ್ಲಿ ನಿರತವಾಗಿರುವ ಕ್ಲಾಸಿಕ್ ಕೆ.ಎ.ಎಸ್. ಆಂಡ್ ಐಎಎಸ್ ಸ್ಟಡಿ ಸರ್ಕಲ್ ಮತ್ತು ಸ್ಪರ್ಧಾ ಸ್ಫೂರ್ತಿ ಮಾಸ ಪತ್ರಿಕೆಯ ಸಂಸ್ಥಾಪಕ ಲಕ್ಷ್ಮಣ ಎಸ್ ಉಪ್ಪಾರ ಅವರು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನೂತನ ಪದವಿ ಪೂರ್ವ ವಸತಿಯುತ ಮಹಾವಿದ್ಯಾಲಯ ಆರಂಭಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಅತ್ಯುತ್ತಮ ಗುಣಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ನೀಡುತ್ತಿರುವ ಕ್ಲಾಸಿಕ್ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್‍ನ ಹಚ್ಚ ಹಸಿರು ವಾತವರಣದಲ್ಲಿಯೇ ಮಕ್ಕಳು ಉನ್ನತ ಶಿಕ್ಷಣ ಕೂಡ ಪಡೆಯಲಿ ಎಂಬ ಸದಾಶಯದೊಂದಿಗೆ ಪದವಿ ಪೂರ್ವ ಕಾಲೇಜ್ ಆರಂಭಿಸಿದ್ದಾರೆ. ಇದಲ್ಲದೆ, ಪಿಯುಸಿ ಹಂತದಲ್ಲಿಯೇ ಮಕ್ಕಳಿಗೆ ಐಐಟಿ, ಜೆಇಇ, ಎನ್‍ಇಇಟಿ, ಸಿಎ ಹಾಗೂ ಸಿಎಸ್ ಫೌಂಡೇಶನ್ ಕೋರ್ಸ ಕಲಿಸುವ ಜೊತೆಗೆ ಅವರಿಗೆ ಕೆಎಎಸ್, ಐಎಎಸ್, ಪಿಎಸ್‍ಐ, ಬ್ಯಾಂಕ್ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಲು ಈ ಕಾಲೇಜ್‍ನ್ನು ಸಿದ್ಧಗೊಳಿಸಿದ್ದಾರೆ. ಇಂತಹ ಮಹೋನ್ನೋತ ಧ್ಯೇಯ ಹಾಗೂ ಉದ್ದೇಶ ಹೊಂದಿರುವ ಈ ಕಾಲೇಜ್ ನಲ್ಲಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಕ್ಕೆ ಪ್ರತ್ಯೇಕ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಆ ಮೂಲಕ ಮಕ್ಕಳ ಭವ್ಯ ಭವಿಷ್ಯಕ್ಕೆ ಮುನ್ನುಡಿ ಬರೆಯಲು ಅನುಭವಿ ಹಾಗೂ ನುರಿತ ಉಪನ್ಯಾಸಕರು ಸಜ್ಜಾಗಿದ್ದಾರೆ. ಪ್ರಾಥಮಿಕ ಶಿಕ್ಷಣದಿಂದ ಪದವಿ ಪೂರ್ವ ಶಿಕ್ಷಣದವರೆಗೆ ಒಂದೇ ಸೂರಿನಲ್ಲಿ ಮಕ್ಕಳಿಗೆ ಶಿಕ್ಷಣ ದೊರೆಯಲಿ ಎಂಬ ಸದಾಶಯದಿಂದ ಇದೀಗ ಕ್ಲಾಸಿಕ್ ಪಿಯು ರೆಸಿಡೆನ್ಸಿಯಲ್ ಕಾಲೇಜ್ ಆರಂಭಿಸಲಾಗಿದೆ ಎಂದು ಕ್ಲಾಸಿಕ್ ಕೆ.ಎ.ಎಸ್. ಆಂಡ್ ಐಎಎಸ್ ಸ್ಟಡಿ ಸರ್ಕಲ್ ಸಂಸ್ಥಾಪಕರಾದ ಲಕ್ಷ್ಮಣ ಉಪ್ಪಾರ ಅವರು ಪ್ರಜಾಕಿರಣ.ಕಾಮ್ ಗೆ ತಿಳಿಸಿದರು. ವಿದ್ಯಾರ್ಥಿಗಳ ಹಾಗೂ ಪಾಲಕರ ಒತ್ತಾಸೆ ಮೇರೆಗೆ ಪ್ರಸಕ್ತ ವರ್ಷದಿಂದ ಪಿಯು ಕಾಲೇಜ್ ಆರಂಭಿಸಲಾಗಿದ್ದು, ಮಕ್ಕಳ ವ್ಯಕ್ತಿತ್ವ ವಿಕಸನದ ಜೊತೆಗೆ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗವನ್ನು ಆರಂಭಿಸಲಾಗಿದೆ. ಅತ್ಯಾಧುನಿಕ ಸೌಲಭ್ಯಗಳುಳ್ಳ ವರ್ಗ ಕೋಣೆಗಳು, ಜೀವಶಾಸ್ತ್ರ, ರಸಾಯನ ಶಾಸ್ತ್ರ ಹಾಗೂ ಭೌತಶಾಸ್ತ್ರ ವಿಷಯಗಳಿಗೆ ಮೂರು ಪ್ರತ್ಯೇಕ ಲ್ಯಾಬ್‍ಗಳನ್ನು ಆರಂಭಿಸಲಾಗಿದೆ. ಇದರೊಂದಿಗೆ ಸುಸಜ್ಜಿತ ಗ್ರಂಥಾಲಯ, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯ ಸೌಲಭ್ಯ ಕಲ್ಪಿಸಲಾಗಿದೆ. ಈಗಾಗಲೇ ಪ್ರಥಮ ಪಿಯುಸಿಗೆ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಸ್ವಚ್ಛ ಸುಂದರ ಪರಿಸರದಲ್ಲಿ ನಿಮ್ಮ ಮಕ್ಕಳು ಓದಬೇಕೆ? ಹಾಗಿದ್ದರೆ ತಡ ಮಾಡದೆ ಕೂಡಲೇ ಸಂಪರ್ಕಿಸಿ ಮೊ.ಸಂ. 7624978157, ದೂ.ಸಂ. 0836-2449011/12ಗೆ ಕರೆ ಮಾಡಿ ಪ್ರವೇಶಾತಿಯನ್ನು ತಕ್ಷಣವೇ ಖಾತ್ರಿ ಪಡಿಸಿಕೊಳ್ಳಿ.

ಶೇ. 100ರಷ್ಟು ಫಲಿತಾಂಶ ಸಾಧಿಸಿದ ಬಿಜಿಎಸ್ ಪ್ರೌಢ ಶಾಲೆ

ಧಾರವಾಡ : ಇಲ್ಲಿಯ ವಿಕಾಸ ನಗರದಲ್ಲಿರುವ ಬಿಜಿಎಸ್ ಎಜುಕೇಷನ್ ಸೆಂಟರ್ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಸತತ 4 ವರ್ಷಗಳಿಂದಲೂ ಶೇ 100% ರಷ್ಟು ಫಲಿತಾಂಶವನ್ನು ಪಡೆದಿದೆ. 15 ವರ್ಷಗಳಿಂದ ಸತತವಾಗಿ ನಡೆಯುತ್ತಿರುವ ಈ ಶಾಲೆಯೂ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಅತ್ಯುತ್ತಮವಾದ ಶಿಕ್ಷಣ ನೀಡುತ್ತಿರುವುದು ಗಮನಾರ್ಹವಾದ ಸಂಗತಿಯಾಗಿದೆ. ಬಸವಪ್ರಭು ಎಂ ದಾಸ್ತಿಕೊಪ್ಪ 604, ಕಾರ್ತಿಕ್ ಎಸ್ ಕಾಮಣ್ಣನವರ್ 599, ಪ್ರಜ್ವಲ್ ಜೆ ನಿಡಗುಂದಿ 576, ಕುಬೇರ ವಿ ಪಡನಾಡ್ 564, ಸೌಜನ್ಯ ಎ.ಎಸ್ 562, ಮುಕುಂದ್ ವಿ.ಬಿ 562, ಈ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಶಾಲೆಯ ಹಿರಿಮೆಯನ್ನು ಹೆಚ್ಚಿಸಿದಕ್ಕೆ ಶಾಲಾ ಆಡಳಿತಮಂಡಳಿಯ ಜೆ.ಎನ್. ರಾಮಕೃಷ್ಣಗೌಡರು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

ಜನತಾ ದಳ ಸೆಕ್ಯೂಲರಾ -ಸಂಘ ಪರಿವಾರ ಅನ್ನೋದು ಸ್ಪಷ್ಟಪಡಿಸಿ

ಕೋಲಾರ : ಜನತಾ ದಳ ಸೆಕ್ಯೂಲರಾ ಅಥವಾ ಸಂಘಪರಿವಾರ ಅನ್ನೋದು ಸ್ಪಷ್ಟವಾಗಬೇಕಾಗಿದೆ ಎಂದು ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಗುಡುಗಿದ್ದಾರೆ. ಅವರು ರಾಜ್ಯದಲ್ಲಿ ಕಾಂಗ್ರೆಸ್ ಪರ ಬಿರುಸಿನ ಪ್ರಚಾರ ನಡೆಸಿ ಮಾತನಾಡುತ್ತ, ಜೆಡಿಎಸ್ ಯಾರ ಪರವಾಗಿದ್ದಾರೆ ಎಂದು ರಾಜ್ಯದ ಜನರಿಗೆ ಹೇಳಬೇಕಾಗಿದೆ ಎಂದ ಅವರು ಬಿಜೆಪಿ ಸಂವಿಧಾನ ವಿರೋಧಿ, ನರೇಂದ್ರ ಮೋದಿ ಅವರ ಸರ್ಕಾರ ಪ್ರತಿನಿತ್ಯ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಸಂವಿಧಾನ ಬದಲಾಯಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲಎಂದ ಅವರು ಬಿಜೆಪಿ ಆರ್ ಎಸ್ ಎಸ್ ನ ಸಿದ್ದಾಂತದಲ್ಲಿದೆ. ಆದರೆ ಕಾಂಗ್ರೆಸ್ ಬಸವಣ್ಣನ ಸಿದ್ದಾಂತದಲ್ಲಿದೆ ಎಂದು ೨೦ ನಿಮಿಷಗಳ ಭಾಷಣದುದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ದ ರಾಹುಲ್ ಗಾಂಧಿ ಗುಡುಗಿದರು.

ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ

ಕೋಲಾರ : ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಆದ್ರೆ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಅರೋಪಿಸುತ್ತಿರಾ ಎಂದು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ಅವರು ಕೋಲಾರದಲ್ಲಿ ಕಾಂಗ್ರೆಸ್ ಪರ ಬಿರುಸಿನ ಪ್ರಚಾರನಡೆಸಿ ತೀವ್ರ ವಾಗ್ದಾಳಿ ನಡೆಸಿದರು. ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಗಗನಕ್ಕೇರಿದೆ. ಇದನ್ನ ಜಿಎಸ್ ಟಿ ವ್ಯಾಪ್ತಿಗೆ ಏಕೆ ಒಳಪಡಿಸಿದ್ದಿರಿ. ಈ ವಿಧಾನ ಸಭೆ ಚುನಾವಣೆಯಲ್ಲಿ ಜನ ಬಿಜೆಪಿ ಗೆ ತಕ್ಕ ಉತ್ತರ ನೀಡಲಿದ್ದಾರೆ. ಬಡವರಿಗಾಗಿ ಬಿಜೆಪಿ ಬಿಡಿಗಾಸು ಕೊಟ್ಟಿಲ್ಲ, ರೈತರ ಸಾಲ ಮಾನ್ನ ಮಾಡಿಲ್ಲ. ರಾಜ್ಯದಲ್ಲಿ ರೈತರ ಸಾಲ ಮನ್ನಾ ಆಗಿದೆ. ಆದ್ರೆ ಕೇಂದ್ರದಲ್ಲಿ ಯಾಕೆ ಸಾಲ ಮನ್ನಾ ಮಾಡಿಲ್ಲ ಎಂದು ಪ್ರಶ್ನಿಸಿದರು. ಲೋಕಸಭೆ ಚುನಾವಣೆಗೆ ಒಂದು ವರ್ಷ ಉಳಿದಿದೆ . ಮುಂದೆ ನಮ್ಮ ಸರ್ಕಾರ ಬಂದಾಗ ಸಾಲ ಮನ್ನಾ ಮಾಡುತ್ತೇವೆ. ಗುಜರಾತ್ ನಲ್ಲಿ ನರೇಂದ್ರ ಮೋದಿ ಎಲ್ಲಾ ಸಂಸ್ಥೆಗಳನ್ನ ಖಾಸಗೀಕರಣ ಮಾಡಿದ್ದಾರೆ. ರಾಜ್ಯದಲ್ಲಿ ಉಚಿತ ಅಕ್ಕಿ, ಶಿಕ್ಷಣ, ಇಂದಿರಾ ಕ್ಯಾಂಟೀನ್ ಮೂಲಕ ಊಟ ನೀಡುತ್ತಿದ್ದೇವೆ. ಮೋದಿಯವರೆ ಯಾವುದಾದರೂ ಒಂದು ಬಡವರ ಪರವಾದ ಕಾರ್ಯಕ್ರಮ ಮಾಡಿದ್ದರೆ ಹೇಳಿ. ಎಂದ ರಾಹುಲ್ ಗಾಂಧಿ ರಾಜ್ಯದ ಬಿಜೆಪಿ ನಾಯಕ ಯಡಿಯೂರಪ್ಪ ಭ್ರಷ್ಟಾಚಾರದಲ್ಲಿ ತೊಡಗಿದ್ದವರು. ಯಾವ ಆಧಾರದ ಮೇಲೆ ಅವರನ್ನು ಮುಖ್ಯಮಂತ್ರಿ ಯನ್ನಾಗಿ ಘೋಷಣೆ ಮಾಡಿದ್ದೀರಿ. ರಾಜ್ಯದಲ್ಲಿ ಬಿಜೆಪಿ ಸೋಲುವುದು ಖಚಿತ ಎಂದು ಗುಡುಗಿದರು.

ಎತ್ತಿನ ಗಾಡಿ ಮೇಲೆ ನಿಂತು ಭಾಷಣ ಮಾಡಿದ ರಾಹುಲ್ ಗಾಂಧಿ

ಕೋಲಾರ : ರಾಜ್ಯ ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಮತ್ತೇ ರಾಜ್ಯಕ್ಕೆ ಆಗಮಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಪಟ್ಟಣದ ಬಾಲಾಜಿ ವೃತ್ತಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಭ್ಯರ್ಥೀ ಪರ ಎತ್ತಿನ ಗಾಡಿ ಮೇಲೆ ನಿಂತು ಭಾಷಣ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಅವರಿಗೆ ರಾಜ್ಯ ಉಸ್ತುವಾರಿ ವೃಣುಗೋಪಾಲ್, ಬಿ.ಕೆ.ಹರಿ ಪ್ರಸಾದ್, ಸಂಸದ ಕೆ.ಎಚ್.ಮುನಿಯಪ್ಪ, ಅಭ್ಯರ್ಥಿ ಕೆ.ವೈ.ನಂಜೃಗೌಡ ಸಾಥ್ ನೀಡಿದರು.

ಅಂಬ್ಯುಲೆನ್ಸ್ ನಲ್ಲಿ ಸಾಗಿಸುತ್ತಿದ್ದ ಸೀರೆ ವಶ

ಧಾರವಾಡ : ಮತದಾರರಿಗೆ ಹಂಚಲು ಅಂಬ್ಯುಲೆನ್ಸ್ ನಲ್ಲಿ ಸಾಗಿಸುತ್ತಿದ್ದ ಸೀರೆಗಳನ್ನು ವಶಪಡಿಸಿಕೊಂಡ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ. ಧಾರವಾಡ ತಾಲೂಕಿನ ತೇಗೂರು ಕ್ರಾಸ್ ಬಳಿ ಈ ಘಟನೆ ಜರುಗಿದ್ದು, ೯೦ ಸಾವಿರ ರೂ. ಮೌಲ್ಯದ ೧೮೦೦ ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಳಗಾವಿಯಿಂದ ಹಾವೇರಿ ಕಡೆಗೆ ಹೋಗುತ್ತಿದ್ದ ಅಂಬ್ಯುಲೆನ್ಸ್ ನಲ್ಲಿ ಸಾಗಾಟ ಮಾಡಲಾಗಿತ್ತಿತ್ತು. ಈ ಹಿನ್ನಲೆಯಲ್ಲಿ ಅಂಬ್ಯುಲೆನ್ಸ್ ನಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತರನ್ನು ಜೈಪಾಲ್ ಸಿಂಗ್, ಸೇರಿ ವಾಲ್ಮೀಕ ಪಾಟೀಲ ಚಾಲಕ, ರಾಜಕುಮಾರ್ ಪ್ರಮೋದ ಎಂದು ಗುರುತಿಸಲಾಗಿದೆ. ಹೊಸ ಅಂಬುಲೆನ್ಸ್ ವಾಹನ ಇದಾಗಿದ್ದು, ಯಾವುದೇ ಬಿಲ್ ಇಲ್ಲದೆ, ಮಾರಾಟ ಮಾಡಲು ಕಂಪನಿಯಿಂದ ಬರುತ್ತಿದ್ದ ವಾಹನದಲ್ಲಿ ತೆಗೆದುಕೊಂಡು ಬರುವ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ ಎಂದು ಗರಗ ಪೊಲೀಸ್ ಠಾಣೆ ಪಿಎಸ್ ಐ ಸಂಗಮೇಶ ಪಾಲಬಾವಿ ಪ್ರಜಾಕಿರಣಕ್ಕೆ ತಿಳಿಸಿದ್ದಾರೆ. . ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಐದು ಸ್ಥಾನ ಕುಸಿದ ವಿದ್ಯಾನಗರಿ ಧಾರವಾಡ

ಧಾರವಾಡ : ಕಳೆದ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಎಂಟನೇ ಸ್ಥಾನ ಪಡೆದ ವಿದ್ಯಾ ನಗರಿ ಧಾರವಾಡ ಈ ಬಾರಿ ಹದಿಮೂರನೇ ಸ್ಥಾನಕ್ಕೆ ಕುಸಿದಿದೆ. ಧಾರವಾಡ ಜಲ್ಲೆ ರಾಜ್ಯದಲ್ಲಿ ೧೩ನೇ ಸ್ಥಾನದಲ್ಲಿದೆ. ಕಳೆದ ವರ್ಷದ ಫಲಿತಾಂಶಕ್ಕಿಂತ ಐದು ಸ್ಥಾನ ಕುಸಿತ ಕಂಡಿರುವುದು ಪೋಷಕರು ಹಾಗೂ ಶಿಕ್ಷಣ ತಜ್ಞರಿಗೆ ಕಸಿವಿಸಿ ತಂದಿದೆ. ಇನ್ನೂ ಇದೇ ವೇಳೆ ಧಾರವಾಡ ಜಿಲ್ಲೆಗೆ ನಗರದ ಪವನ ಸ್ಕೂಲ್ ನ ವಿದ್ಯಾರ್ಥಿ ಅಮಿತ್ ತಳವಾರ ೯೯.೩೬ ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, ೬೨೫ಕ್ಕೆ ೬೨೧ ಅಂಕ ಪಡೆದು ಸಮಾಧಾನ ತಂದಿದ್ದಾರೆ.

ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ

ಧಾರವಾಡ: ನಿರೀಕ್ಷೆಯಂತೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದೆ. ೮ ಲಕ್ಷ ಮಕ್ಳ ಪೈಕಿ ಆರು ಲಕ್ಷ ಎಂಟನೂರ ಎಂಟು ಮಕ್ಕಳು ಪಾಸ್ ಆಗಿದ್ದಾರೆ ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ ಪ್ರಕಟಿಸಿದ್ದಾರೆ. ಅವರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉಡುಪಿ ಜಿಲ್ಲೆ ಪ್ರಥಮ ಉತ್ತರ ಕನ್ನಡ ದ್ವಿತೀಯ ಹಾಗೂ ಚಿಕ್ಕೊಡಿ ತೃತೀಯ ಸ್ಥಾನ ಪಡೆದರೆ, ಗದಗ, ಬೀದರ ಹಾಗೂ ಯಾದಗಿರಿ ಜಿಲ್ಲೆ ಕೊನೆಯ ಮೂರು ಸ್ಥಾನ ಪಡೆದಿವೆ ಎಂದು ವಿವರಿಸಿದರು.

ಜನಸಾಮಾನ್ಯನನ್ನು ಗೆಲ್ಲಿಸಿ ಎಂದ ಇಸ್ಮಾಯಿಲ್ ತಮಟಗಾರ

ಧಾರವಾಡ : ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಮತ ಕ್ಷೇತ್ರ 74 ರ ಕಾಂಗ್ರೆಸ್ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ ಅವರು ಕೆಲಗೇರಿಯ ಚರ್ಚಗೆ ಭೇಟಿ ನೀಡಿ ಮತ ಯಾಚಿಸಿದರು. ನಂತರ ಯಾಲಕ್ಕಿ ಶೆಟ್ಟರ್ ಕಾಲೋನಿ, ದಾನೇಶ್ವರ್ ನಗರದಲ್ಲಿ ಮತ ಯಾಚಿಸಿದರು. ಕೆಪಿಸಿಸಿ ಉಪಾಧ್ಯಕ್ಷರಾದ ಎ.ಎಮ್ ಹಿಂಡಸಗೇರಿ ಮಾತನಾಡಿ, ಬಿಜೆಪಿ ಸಮಾಜದಲ್ಲಿ ಕೋಮು ಸಾಮರಸ್ಯ ಕದಡುತ್ತಿದ್ದು, ಅದನ್ನು ಸೋಲಿಸದಿದ್ದರೆ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗಲಿದೆ. ಹೀಗಾಗಿ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್ ಅನ್ನು ಮತ್ತೋಮ್ಮೆ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು, ಇಸ್ಮಾಯಿಲ್ ತಮಟಗಾರ ಮಾತನಾಡಿ, ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರವೂ ಶಾಸಕ ಅರವಿಂದ ಬೆಲ್ಲದ ಅವರ ನಿರ್ಲಕ್ಷ್ಯದಿಂದಾಗಿ ಅಭಿವೃದ್ಧಿಯಿಂದ ವಂಚಿತಗೊಂಡಿದೆ. ತಮ್ಮ ಸ್ವಂತ ವ್ಯವಹಾರ ಹಾಗೂ ಉದ್ಯಮವನ್ನು ಬೆಳಸಿಕೊಳ್ಳಲು ಶಾಸಕರಾಗಿರುವ ಅರವಿಂದ ಬೆಲ್ಲದ ಜನ ಸಾಮಾನ್ಯರ ಕೈಗೆ ಸರಳವಾಗಿ ಸಿಗುವುದಿಲ್ಲ. ಅವರನ್ನು ಸೋಲಿಸಿ, ಜನಸಾಮಾನ್ಯನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸುಭಾಷ್ ಶಿಂದೆ, ಪ್ರತಾಪ್ ಚವ್ಹಾಣ್, ರಘುನಾಥ್ ಲಕ್ಕನವರ್, ಈರಣ್ಣ ಕಿತ್ತೂರ, ಹನುಮಂತ ಚಲವಾದಿ, ಆನಂದ ಮುಶಣ್ಣವರ್,ಚಂದ್ರು ಮಲ್ಲಿಗವಾದ, ಬಸವರಾಜ ಚಿಲೋರ, ಮುಜಾಮಿಲ ಪಠಾಣ್ ,ವಿನಾಯಕ ಬಡಿಗೇರ ಹಾಗೂ ಕಾಂಗ್ರೆಸ್ ಮುಖಂಡರು ಯುವಕರು ಸಹಸ್ರಾರು ಅಭಿಮಾನಿಗಳು ಉಪಸ್ಥಿತರಿದ್ದರು

ರೈತರ ಸಮಸ್ಯೆಗಳಿಗೆ ಸ್ಪಂದಿಸಿದ ಶಾಸಕ ಅರವಿಂದ ಬೆಲ್ಲದ

ಧಾರವಾಡ : ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರ-74ರ ಭಾಜಪ ಅಭ್ಯರ್ಥಿ, ಶಾಸಕ ಅರವಿಂದ ಬೆಲ್ಲದ ಧಾರವಾಡ ಶಹರದ ವಾರ್ಡ ನಂ.22ರಲ್ಲಿ ಜಗದಾಳೆ ಓಣಿ, ದೇಸಾಯಿ ಓಣಿ, ನೇಕಾರ ಓಣಿ, ಕುರುಬರ ಓಣಿ, ಬೆಂಗೇರಿ ಓಣಿ, ಕೆಳಗಿನ ಅಗಸಿ, ಮ್ಯಾಗೇರಿ ಓಣಿ, ಸುತ್ತಮುತ್ತಲಿನ ಭಾಗದಲ್ಲಿ ಪಾದಯಾತ್ರೆ ಮೂಲಕ ಮನೆ ಮನೆ ತೆರಳಿ ಮತಯಾಚನೆ ಮಾಡಿದರು. ನವಲೂರು ಗ್ರಾಮದ ರೈತರೊಂದಿಗೆ ದೀರ್ಘವಾಗಿ ಸಮಾಲೋಚನೆ ನಡೆಸಿ, ರೈತರ ಸಮಸ್ಯೆಗಳಿಗೆ ಶಾಸಕ ಅರವಿಂದ ಬೆಲ್ಲದ ಸ್ಪಂದಿಸಿದರು. ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ರೈತರಿಗಾಗಿ 10 ಕ್ಕೂ ಹೆಚ್ಚು ಚೆಕ್ ಡ್ಯಾಮಗಳ ನಿರ್ಮಾಣ ಮಾಡಿರುವುದಕ್ಕೆ ಸ್ಥಳೀಯ ಹಿರಿಯರು ರೈತರು, ಯುವಮಿತ್ರರು, ಬೆಂಬಲ ವ್ಯಕ್ತ ಪಡಿಸಿದರು. ಶಾಸಕ ಅರವಿಂದ ಬೆಲ್ಲದ ಮಾತನಾಡಿ, ನವಲೂರು ಪ್ರದೇಶದ ಭಾಗದಲ್ಲಿ ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿದ್ದು, ಈ ಭಾಗದಲ್ಲಿ ಒಳಚರಂಡಿ ಕಾಮಗಾರಿ ಸಂಪೂರ್ಣವಾಗಿದೆ, ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು ತುರ್ತಾಗಿ ಕಾಮಗಾರಿ ಕೈಗೊಳ್ಳಲು ಕ್ರಮವಹಿಸುವುದಾಗಿ ತಿಳಿಸಿದರು. ಈ ಭಾಗದಲ್ಲಿ ಇನ್ನು ಕೆಲವು ಅಭಿವೃದ್ದಿ ಕೆಲಸಗಳು ಆಗಬೇಕಾಗಿದೆ ಅವುಗಳನ್ನು ಮುಂಬರುವ ದಿನಗಳಲ್ಲಿ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಪಾರ ಜನ ಬೆಂಬಲವನ್ನು ಕಂಡು ಜನಪ್ರತಿನಿಧಿಯಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು ತಮಗೆ ಸಮಾಧಾನ ತಂದಿದೆ ಎಂದು ಭಾವಿಸಿದ್ದೇನೆ ಎಂದರು. ನನ್ನ ನಡೆ ಅಭಿವೃದ್ಧಿ ಕಡೆ ನನಗೆ ತಮ್ಮ ಆಶೀರ್ವಾದದ ಮತ ನೀಡಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹು-ಧಾ ಮಹಾನಗರ ಪಾಲಿಕೆಯ ಸದಸ್ಯ ಶಿವಣ್ಣ ಬಡವನ್ನವರ, ಪಕ್ಷದ ಹಿರಿಯ ಮುಖಂಡರಾದ ಶಂಕರಗೌಡ ಪಾಟೀಲ, ಚೆನ್ನಯ್ಯ ಹಿರೇಮಠ, ಶಿವಣ್ಣ ಅಂಗಡಿ, ನಾಗರಾಜ ಇಟಿಗಟ್ಟಿ, ಭರಮಪ್ಪ ಬಾನಿ, ಫಕೀರಪ್ಪ ಇಂಗಳೆ, ಬಿ.ಎಸ್.ಪಾಗದ, ರಾಮು ಕಿತ್ತೂರುÀ, ಹನುಮಂತ ಪೂಜಾರ, ಬಸವರಾಜ ಬಿರಕಿ, ನಾಗೇಶ ಶಿವಳ್ಳಿ, ಮಹಾವೀರ ನರೇಂದ್ರ, ಬಿ.ಎಮ್.ಬಳ್ಳೂರು, ಮಂಜುನಾಥ ಸರಪುರಿ, ಆನಂದ ಕಾಂಬಳೆ, ಪುಂಡಲೀಕ ತಳವಾರ, ಸುನೀಲ ವಾಡಕರ ನಾಗರಾಜ ಹುಣಸಿಕಟ್ಟಿ, ಪ್ರಮೋದ ಬಾಗಿಲದ, ವೀರಣ್ಣ ಈರೇಶ ಶೆಟ್ಟರ್, ರಾಜು ಅಸೂಂಡಿ,ರಾಜು ಘಾಟಗೆ ಹಾಗೂ ಅನೇಕ ಜನ ಸ್ಥಳೀಯ ಗುರು ಹಿರಿಯರು, ಯುವ ಮಿತ್ರರು ಉಪಸ್ಥಿತರಿದ್ದರು.

ಮಹದಾಯಿ ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ : ಶಾಸಕ ಕೋನರಡ್ಡಿ ಆರೋಪ

ನವಲಗುಂದ : ಮಹದಾಯಿ, ಕಳಸಾ-ಬಂಡೂರಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಅದನ್ನು ಪ್ರಾಮಾಣಿಕವಾಗಿ ಬಗೆಹರಿಸಬೇಕಾಗಿದ್ದ ಕೇಂದ್ರದ ಬಿಜೆಪಿ ಸರಕಾರ ಆ ವಿಷಯವನ್ನು ಉದ್ದೇಶ ಪೂರ್ವಕವಾಗಿ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ ಎಂದು ನವಲಗುಂದ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಎನ್.ಹೆಚ್. ಕೋನರಡ್ಡಿ ಆಪಾದಿಸಿದರು. ಅವರು ಭಾನುವಾರ ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ನವಲಗುಂಮದ ಪಡೇಸೂರ, ಶಾನವಾಡ, ಹಾಲ್ ಕುಸುಗಲ್, ತಿರ್ಲಾಪುರ ಗ್ರಾಮದಲ್ಲಿ ಜೆಡಿಎಸ್ ಪರ ಬಿರುಸಿನ ಪರ ಪ್ರಚಾರ ನಡೆಸಿ ಮಾತನಾಡಿದರು. ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಗೋವಾ ಸಿಎಂ ಮನೋಹರ ಪರಿಕರ್ ಬರೆದ ಪತ್ರವನ್ನು ಹುಬ್ಬಳ್ಳಿಯ ಬಿಜೆಪಿಯ ಸಮಾವೇಶದಲ್ಲಿ ಓದಿ ಜನರ ದಾರಿ ತಪ್ಪಿಸಿದ ಹಾಗೆಯೇ ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸವದತ್ತಿಯಲ್ಲಿ ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಬಗೆಹರಿಸುವುದಾಗಿ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕೇಂದ್ರ ಸರ್ಕಾರ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ಮನಸ್ಸು ಮಾಡಿದರೆ ಮೂರು ರಾಜ್ಯಗಳ ಸಿಎಂ ಸಭೆ ಕರೆದು ಒಂದು ದಿನದಲ್ಲಿ ಈ ಸಮಸ್ಯೆಯನ್ನು ಮಾತುಕತೆ ಮೂಲಕ ನ್ಯಾಯಾಧೀಕರಣದ ಹೊರಗಡೆಯೇ ಬಗೆಹರಿಸಬಹುದಾಗಿತ್ತು. ಆದರೆ ಅದನ್ನು ಮಾಡದೆ, ಇದೀಗ ಚುನಾವಣೆ ಹೊಸ್ತಿಲಿನಲ್ಲಿ ಈ ರೀತಿ ಗಿಮಿಕ್ ಮಾಡುವುದು ಸರಿಯಲ್ಲ. ಹುಬ್ಬಳ್ಳಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂರುವರ್ಷ ಯಾಕೆ ಬಾಯಿ ಬಿಡಲಿಲ್ಲ. ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ನಿಮ್ಮದೇ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಕೇಂದ್ರದಲ್ಲಿ ನೀವೆ ಪ್ರಧಾನಿ ಇದ್ದೀರಿ ಯಾಕ ಬಾಯಿ ಬಿಡಲಿಲ್ಲ. ಈಗ ಚುನಾವಣೆಯಲ್ಲಿ ಮಾತನಾಡುತ್ತಿರುವುದು ನಿಮಗೆ ಶೋಭೆ ನೀಡುತ್ತದೆಯೇ ಎಂದು ಪ್ರಶ್ನಿಸಿದರು. ಕ್ಷೇತ್ರದ ಜನತೆ ತಾವೇ ಕೋನರಡ್ಡಿ, ಕುಮಾರಸ್ವಾಮಿ ಆಗ್ಯಾರ, ಎರಡ ಸಲ ಸೋತು ಮೂರನೇ ಸಲ ಗೆದ್ದಿನಿ, ಕ್ಷೇತ್ರದಲ್ಲಿ ಈ ಬಾರಿ ಹದಿನೈದು ಸಾವಿರ ಜನ ಜೆಡಿಎಸ್ ಪಕ್ಷ ಸೇರ್ಪಡೆ ಆದರೆ ಐದು ಸಾವಿರ ಮಹಿಳೆಯರು ಪಕ್ಷಕ್ಕೆ ಬಂದಿದ್ದಾರೆ. ನವಲಗುಂದ ರೈತ ಬಂಡಾಯದ ನೆಲ. ಬಿಜೆಪಿ ಪ್ರಣಾಳಿಕೆ ನೋಡಿ ಜೆಡಿಎಸ್ ನೋಡಿ ವ್ಯತ್ಯಾಸ ಅರಿತುಕೊಂಡು ಮತದಾನ ಮಾಡಿ ಎಂದು ಮನವಿ ಮಾಡಿದರು. ಬಿಜೆಪಿಯವರು ಒಂದು ನೂರು ಸುಳ್ಳು ಹೇಳಿ ಒಂದು ಸತ್ಯ ಮಾಡೋರು ಬಿಜೆಪಿಯವರು ನವಲಗುಂದ ಅಭಿವೃದ್ಧೀ ಕಂಡು ಹೊಟ್ಟೆ ಕಿಚ್ಚು ಮಾಡಿಕೊಳ್ಳುತ್ತಿದ್ದಾರೆ. ಅವರದ್ದು ದುಡ್ಡು ನಮ್ಮದು ಜನಶಕ್ತಿ ಇವರೆಡರ ಪರೀಕ್ಷೆ ಇದೆ. ಹೀಗಾಗಿ ಜನತೆಗೆ ಕೈ ಮುಗಿದು ಪ್ರಾರ್ಥನೆ ಮಾಡ್ತನಿ ರೈತರ ಕಣ್ಣೀರು ಒರೆಸಿದವ ಕುಮಾರಸ್ವಾಮಿ, ಎಲ್ಲ ಸಮಾಜದ ಜನ ಮತ ನೀಡುವ ಮೂಲಕ ಇನ್ನೊಮ್ಮೇ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ಪಡೇಸುರ, ಶಾನವಾಡ, ಹಾಲ್ ಕುಸುಗಲ್ ಹಾಗೂ ತಿರ್ಲಾಪುರ ಗ್ರಾಮದಲ್ಲಿ ಜೆಡಿಎಸ್ ಕಲರವ ಕಂಡು ಬಂತು. ನವಲಗುಂದ ಕ್ಷೇತ್ರದಲ್ಲೆಡೆ ಜೆಡಿಎಸ್ ಅಭ್ಯರ್ಥಿ ಎನ್.ಹೆಚ್. ಕೋನರಡ್ಡಿ ಅವರಿಗೆ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ತಿರ್ಲಾಪುರ ಗ್ರಾಮದ ಜನತೆ ಶಾಸಕ ಎನ್.ಹೆಚ್. ಕೋನರಡ್ಡಿ ಅವರಿಗೆ ಅದ್ಧೂರಿ ಸ್ವಾಗತ ಕೊರಿದರು. ತಾಯಿಂದಿರು ಆರತಿ ಬೆಳಗಿ ಅಭೂತಪೂರ್ವ ಸ್ವಾಗತ ನೀಡಿದರು. ಈ ಸಂದರ್ಭದಲ್ಲಿ ರಮೇಶ ನವಲಗುಂದ, ಬಿ.ಸಿ. ಹೆಬಸೂರ, ಬಸವರಾಜ ಅಂಗಡಿ, ಶೇಕಯ್ಯ ಹೊಸಮಠ, ಫಕೀರಯ್ಯ ದೊಡಮನಿ, ನಿಂಗಪ್ಪ ಹಳ್ಳದ, ಯಲ್ಲಪ್ಪ ಹಳ್ಯಾಳ, ಚಂದ್ರಗೌಡ ಪಾಟೀಲ, ಸಿ.ಡಿ. ಅಣ್ಣಿಗೇರಿ, ಎಸ್.ಜಿ. ಲೋಕಾಪುರಮಠ, ಕೆ.ಆರ್. ಪಾಟೀಲ, ತಿರ್ಲಾಪುರ ಗ್ರಾಪಂ ಅಧ್ಯಕ್ಷ ಬಿ.ವಿ. ಅಣ್ಣಿಗೇರಿ, ಸಿದ್ದಲಿಂಗಪ್ಪ ಮದ್ನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಿದ್ಧಾರೂಡ ಶ್ರೀಗಳಿಗೆ ನಮಸ್ಕರಿಸಿದ ಮೋದಿ

ಹುಬ್ಬಳ್ಳಿ : ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂಜೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಭಾಷಣ ಆರಂಭಿಸುವ ಮುನ್ನ ಸದ್ಗುರು ಸಿದ್ಧಾರೂಡ ಶ್ರೀಗಳಿಗೆ ನಮಸ್ಕರಿಸಿದರು. ಆನಂತರ ಹಿಂದುಸ್ತಾನಿ ಸಂಗೀತದ ಗಾಯಕಿ ದಿ. ಗಂಗೂಬಾಯಿ ಹಾನಗಲ್, ಹುತಾತ್ಮ ಹನುಮಂತಪ್ಪ ಕೊಪ್ಪದ ಅವರಿಗೆ ಸ್ಮರಿಸಿ ಭಾಷಣ ಆರಂಭಿಸಿದರು. ಹುಬ್ಬಳ್ಳಿ ಮಣ್ಣಿನಲ್ಲಿ ದೇಶದ ತ್ರಿವರ್ಣ ದ್ವಜದ ಶಕ್ತಿ ಅಡಗಿದೆ. ಇಲ್ಲಿ ದೇಶದ ತ್ರಿವರ್ಣ ದ್ವಜ ನಿರ್ಮಾಣ ಮಾಡುವ ಖಾದಿ ಘಟಕವಿದೆ. ಧಾರವಾಡ ಪೇಡೆ ದೊಡ್ಡ ಪ್ರಸಿದ್ಧ ಹೊಂದಿದೆ. ಹುಬ್ಬಳ್ಳಿ-ಧಾರವಾಡ ಮಹೋದಯರೆ ಎಲ್ಲರೂ ಹೇಗಿದಿರಿ ಎಂದು ಉಭಯ ಕುಶಲೋಪರಿ ನಡೆಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಕೊನೆಯ ಮುಖ್ಯಮಂತ್ರಿ

ಹುಬ್ಬಳ್ಳಿ : ಈ ವಿಧಾನಸಭೆ ಚುನಾವಣೆ ಐತಿಹಾಸಿಕ ಚುನಾವಣೆ. ಈ ಚುನಾವಣೆ ಸುನಾಮಿ ಇದ್ದಹಾಗೆ., ಈ ಸುನಾಮಿಯಲ್ಲಿ ಕಾಂಗ್ರೆಸ್ ಹಡಗು ಸಂಪೂರ್ಣ ಮುಳುಗುತ್ತದೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಕೊನೆಯ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಅವರು ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ನಡೆದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಐದು ವರ್ಷಗಳಲ್ಲಿ ರಾಜ್ಯ ಬಡತನ ರಾಜ್ಯವಾಗಿದೆ. ರಾಜ್ಯದ ಪ್ರತಿಯೊಬ್ಬ ಪ್ರಜೆಯ ಮೇಲೆ ಸಾಲ ಮಾಡಿದೆ, ಸಾಲ ಮಾಡಿದ ಸಿದ್ದರಾಮಯ್ಯನವರನ್ನ ಮನೆಗೆ ಕಲಿಸಬೇಕು. ಈ ಸರ್ಕಾರ ನುಡಿದಂತೆ ನಡಿದಿಲ್ಲ, ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ಅಧಿಕಾರಕ್ಕೆ ಬಂದಾಗ ೩೦ ಕೆಜಿ ಅಕ್ಕಿ ಕೊಟ್ಟರು, ಈಗ ೭ ಕೆಜೆ ಅಕ್ಕಿ ಕೊಡ್ತಾ ಇದ್ದಾರೆ ಎಂದು ಆರೋಪಿಸಿದರು.

ಸಚಿವ ವಿನಯ ಕುಲಕರ್ಣಿ ವಿರುದ್ಧ ಪ್ರಧಾನಿ ಮೋದಿ ವಾಗ್ಬಾಣ

ಹುಬ್ಬಳ್ಳಿ : ಧಾರವಾಡದ ಮಂತ್ರಿಯೊಬ್ಬರು ವೈದ್ಯರನ್ನ ಹೊಡೆದು ದೌರ್ಜನ ಎಸಗಿದ್ದಾರೆ. ವೈದ್ಯರ ಮೇಲೆ ದೌರ್ಜನ್ಯ ಎಸಗುವ, ಇಂಥ ಜನನಾಯಕರು ಬೇಕಾ.? ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಚಿವ ವಿನಯ ಕುಲಕರ್ಣಿ ಅವರ ಹೆಸರು ಪ್ರಸ್ತಾಪಿಸದೆ ಪರೋಕ್ಷ ವಾಗ್ಬಾಣ ಬಿಟ್ಟಿದ್ದಾರೆ. ಅವರು ಹುಬ್ಬಳ್ಳಿಯನಲ್ಲಿ ನಡೆದ ಬಿಜೆಪಿಯ ಸಮಾವೇಶದಲ್ಲಿ ಪಾಲ್ಗೊಂಡು ನೆರೆದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿ, ಇವರಿಂದ ಜನ ಕಲ್ಯಾಣ ಅಸಾಧ್ಯ, ಕಾಂಗ್ರೆಸ್ಸಿಗರಿಗೆ ಯಾವ ಕಲ್ಪನೆ ಇದೆ. ಅವರು ಪರಿವಾರದ ಬಗ್ಗೆ ಮಾತ್ರ ಕಾಳಜಿ ಇದೆ. ಅವರು ಜಗತ್ತು ಪರಿವಾರದಿಂದ ಪ್ರಾರಂಭವಾಗಿ ಪರಿವಾದಿಂದ ಅಂತ್ಯವಾಗುತ್ತೆ. ಇವರ ಪರಿವಾರದ ರಾಜಕೀಯ ಕಿತ್ತೆಸೆಯುವ ಸಂಕಲ್ಪ ನಾವು ಮಾಡಿದ್ದೇವೆ ಎಂದು ಹೇಳಿದರು. ಕರ್ನಾಟಕದಲ್ಲಿ ಅಡಿಕೆ ಬೆಳೆಗೆರಾರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರ ವಿರುದ್ಧ, ಕೋರ್ಟಗೆ ಹೋದವರು ಕಾಂಗ್ರೆಸ್ ನವರು. ಇಂದು ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗ ಕಾಮಗಾರಿ ನಿಂತಿದ್ದು, ಕಾಂಗ್ರೆಸ್ ಸರ್ಕಾರದಿಂದ. ನಾವು ಹೊಸ ಭಾರತವನ್ನು ಬಯಸುತ್ತೇವೆ. ಶಿಕ್ಷಣ, ಉದ್ಯೋಗ, ವೈದ್ಯಕೀಯ ಭದ್ರತೆಯ ಹೊಸ ದೇಶ ಬೇಕಿದೆ. ನಮ್ಮ ಬಳಿ ಕನಸು ಇದೆ. ಅದನ್ನು ಪೂರ್ಣಗೊಳಿಸುವ ಶಕ್ತಿಯು ಇದೆ ಎಂದರು.

ರಾಹುಲ್, ಸೋನಿಯಾಗಾಂಧಿ ಮೇಲೆ 5 ಸಾವಿರ ಕೋಟಿ ಅಕ್ರಮ ಆರೋಪ

ಹುಬ್ಬಳ್ಳಿ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಅವರ ತಾಯಿ ಸೋನಿಯಾಗಾಂಧಿ ಮೇಲೆ 5 ಸಾವಿರ ಕೋಟಿ ಅಕ್ರಮದ ಆರೋಪವಿದೆ. ಅವರು ಜಾಮೀನಿನ ಮೇಲೆ ಓಡಾಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಅವರು ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿಯ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿ, ಅಂಥ ಭ್ರಷ್ಟರ ಪಕ್ಷದವರು ನಮ್ಮ ಪಕ್ಷದ ನಾಯಕರ ಮೇಲೆ ಯಾವ ಆಧಾರದ ಮೇಲೆ ಆರೋಪ ಮಾಡ್ತಾರೆ ಎಂದು ತರಾಟೆ ತೆಗೆದುಕೊಂಡರು. ಕಾಂಗ್ರೆಸ್ ನಾಯಕರು ಸಾರ್ವಜನಿಕರ ಮಾನ ಅಭಿಮಾನ ಮುರಿಯುತ್ತಿದ್ದಾರೆ. ಯಾವುದೇ ಆಧಾರವಿಲ್ಲದೇ ನಮ್ಮ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈಗಾಗಲೇ ಕೇಂದ್ರ ಸರ್ಕಾರ 800 ಕೋಟಿ ರೂ. ಅನುದಾನ ನೀಡಿದೆ. ಆದರೆ, ಈ ನಿದ್ರೆಯಲ್ಲಿರುವ ಕಾಂಗ್ರೆಸ್ ಸರ್ಕಾರ ಕೇವಲ ೧೨ ನೂರು ಕೋಟಿ ಹಣ ಮಾತ್ರ ಬಳಸಿದೆ ಎಂದು ಗುಡುಗಿದರು. ಬಾಕಿ ಹಣ ಹಾಗೆ ಉಳಿದಿದೆ. ಇದು ಕಮಿಷನ್ ಕೊಡದೇ ಇರುವ ಕಾರಣ ಈ ಹಣ ಅಭಿವೃದ್ಧಿಗೆ ಬಳಸಲಾಗಿಲ್ಲ ಎಂದು ಆರೋಪಿಸಿದ ಅವರು ರೈಲ್ವೆಯ ಏರ ಕಂಡಿಷನ್ ಬೋಗಿಯಲ್ಲಿ ಪ್ರಯಾಣಿಸುವ ವ್ಯಕ್ತಿ ಇಂದು ವಿಮಾನದಲ್ಲಿ ಓಡಾಡುತ್ತಿದ್ದಾರೆ. ಇಂದು ದೇಶ ಬದಲುತ್ತಿದೆ. ಬಡವರಿಗೆ, ಮಧ್ಯಮ ವರ್ಗದ ಜನರಿಗೆ ಸಾಕಷ್ಟು ಅನುಕೂಲ ಮಾಡಲಾಗಿದೆ. 100 ಕ್ಕೂ ಅಧಿಕ ವಿಮಾನ ನಿಲ್ದಾಣಗಳು ಅಭಿವೃದ್ಧಿ ಪಡಿಸಲಾಗುತ್ತಿದೆ. ಜನಧನ ಯೋಜನೆಯಡಿ 30 ಕೋಟಿ ಬ್ಯಾಂಕ್ ಖಾತೆ ತೆರೆಯಲಾಗಿದೆ. ದೇಶದ ಒಟ್ಟು 25ಕೋಟಿ ಕುಟುಂಬದಲ್ಲಿ, ನಾಲ್ಕು ಕೋಟಿ ಕುಟುಂಬಕ್ಕೆ ವಿದ್ಯುತ್ ಸಂಪರ್ಕವಿರಲಿಲ್ಲ. 18 ಸಾವಿರ ಹಳ್ಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ ಎಂದು ವಿವರಿಸಿದರು. ಮಹಾತ್ಮಾ ಗಾಂಧಿ ಅವರ 125ನೇ ಜಯಂತಿ ವೇಳೆಗೆ ಆ ನಾಲ್ಕು ಕೋಟಿ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಕೊಡಿವ ಸಂಕಲ್ಪ ಮಾಡಿದ್ದೇವೆ ಎಂದರು.

ಸಿದ್ದರಾಮಯ್ಯ ಜೇಬಲ್ಲಿ ಲಿಂಬು ಇಟ್ಟುಕೊಂಡು ಓಡಾತ್ತಾರೆ

ಹುಬ್ಬಳ್ಳಿ : ರಾಜ್ಯ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ಮುಂದುವರೆಸಿದ್ದಾರೆ. ಭಾನುವಾರ ಸಂಜೆ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ನಡೆದ ಬಿಜೆಪಿಯ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಕಾಗೆಗೆ ಹೆದರುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಕಾರ್ ಮೇಲೆ ಕಾಗೆ ಕುಳಿತ್ತಿದ್ದಕ್ಕೆ ಕಾರ್ ಬದಲಿಸುತ್ತಾರೆ ಎಂದು ಟೀಕಿಸಿದ ಅವರು ಸಿಎಂ ಸಿದ್ದರಾಮಯ್ಯರವರು ಮುಂದೆ ದಿನಗಳಲ್ಲಿ ಜೇಬಲ್ಲಿ ಲಿಂಬು ಇಟ್ಟುಕೊಂಡು ಓಡಾತ್ತಾರೆ ಎಂದು ವ್ಯಂಗ್ಯವಾಡಿದರು. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ದೇಶದಲ್ಲಿ ಕೇವಲ 2 ಮೊಬೈಲ್ ಕಂಪನಿಗಳು ಮಾತ್ರ ಇದ್ದವು ಈಗ 100ಕ್ಕೂ ಅಧಿಕ ಮೊಬೈಲ್ ಕಂಪನಿಗಳು ಮೊಬೈಲ್ ಉತ್ಪನ್ನ ಮಾಡುತ್ತಿವೆ. ಹೀಗಾಗಿ ದೇಶದಲ್ಲಿ ಉದ್ಯೋಗ ಹೆಚ್ಚಿನ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿವೆ ಎಂದು ಹೇಳಿದರು

ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿಗೆ ಸಿಹಿ ತಿನ್ನಿಸಿ ಶುಭ ಕೋರಿದ ಮತದಾರ

ಧಾರವಾಡ : ಧಾರವಾಡ ವಿಧಾನ ಸಭಾ ಮತ ಕ್ಷೇತ್ರ -೭೧ರ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರು ಭಾನುವಾರ ಬೆಳ್ಳಂಬೆಳಗ್ಗೆ ವಾರ್ಡ ನಂ ೩ರಲ್ಲಿ ಬಿರುಸಿನ ಪಾದಯಾತ್ರೆ ನಡೆಸಿ, ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಈ ವೇಳೆ ಅನೇಕ ಮತದಾರರು ಅಮೃತ ದೇಸಾಯಿ ಅವರಿಗೆ ಸಿಹಿ ತಿನಿಸಿ ವಿಜಯಶೀಲರಾಗಿ ಎಂದು ಶುಭ ಹಾರೈಸಿದರು. ಬಳಿಕ ಕುಮಾರೇಶ್ವರ ನಗರ, ದೇನಾ ಬ್ಯಾಂಕ ಕಾಲನಿ, ಕಾಮಾಕ್ಷಿ ಕಾಲನಿ, ಮೂಕಾಂಬಿಕಾ ನಗರ, ವೀರಭದ್ರೇಶ್ವರ ನಗರ ಹಾಗೂ ಬನಶಂಕರಿ ಬಡಾವಣೆಯಲ್ಲಿ ಮತಯಾಚನೆ ಮಾಡಿದರು. ಮತಯಾಚನೆ ವೇಳೆ ಅಮೃತ ದೇಸಾಯಿ ಅವರ ಜೊತೆಯಲ್ಲಿ ಸಂತೋಷ ದೇವರೆಡ್ಡಿ, ಹೇಮಂತ ನೀಲಣ್ಣವರ, ಅಶೋಕ ದೇಶಪಾಂಡೆ, ಅಭಿನವ ನಾಯಕ, ಜಗದೀಶ ತೋಟದ, ನಾರಾಯಣ ಚಳಗೇರಿ, ನವಿನ ಜಾಧವ, ಬಸವರಾಜ ರುದ್ರಾಪುರ, ಗೀತಾ ಕಿತ್ತೂರ, ಜಯತೀರ್ಥ ಮಳಗಿ, ಗುರುರಾಜ ಬಡಿಗೇರ, ಮಂಜುನಾಥ ಸಾಲುಂಕೆ, ಸಂತೋಷ ಕೋಟಿ, ಸತೀಶ ಮಲಕರಿ, ಜಯಶ್ರೀ ಪಾಟೀಲ, ರಾಜೇಶ್ವರಿ ಸಾಲಗಟ್ಟಿ ಹಾಗೂ ನೂರಾರು ಭಾಜಪಾ ಕಾರ್ಯಕರ್ತರು ಸಾಥ್ ನೀಡಿದರು.

ಅರವಿಂದ ಬೆಲ್ಲದ ರಾಜಕೀಯ ನಡೆ ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾದ ಸಿಖ್ ಬಾಂಧವರು

ಹುಬ್ಬಳ್ಳಿ : ಹುಬ್ಬಳ್ಳಿ ನಗರದ ವಾರ್ಡ ನಂಬರ 39ರ ಸುಭಾಸ ನಗರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹಾಗೂ ಶಾಸಕ ಅರವಿಂದ ಬೆಲ್ಲದ ಅವರ ಸಮ್ಮುಖದಲ್ಲಿ ಶಾಸಕರ ಅಭಿವೃಧ್ಧಿ ಕೆಲಸ ಮತ್ತು ಅವರ ಸರಳ ಸಜ್ಜನಿಕೆ ಸ್ವಭಾವ , ಪ್ರಾಮಾಣಿಕ ರಾಜಕೀಯ ವ್ಯಕ್ತಿತ್ವಯನ್ನು ಮೆಚ್ಛಿಕೊಂಡು ಸಮಸ್ತ ಸಿಖ್ ಸಮಾಜದ ಬಾಂಧವರೆಲ್ಲರೂ ಸ್ವಯಂ ಪ್ರೇರಣೆಯಿಂದ ಕಾಂಗ್ರೇಸ್ ಪಕ್ಷವನ್ನು ಕೊರೆದ ಬಿಜೆಪಿ ಸೇರ್ಪಡೆಗೊಂಡರು. ಅವರನ್ನು ಮಾಲಾರ್ಪಣೆ ಮಾಡುವುದರ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಸ್ವಾಗತಿಸಿದ ಶಾಸಕ ಅರವಿಂದ ಬೆಲ್ಲದ, ಬಳಿಕ ಮಾತನಾಡಿ, ಕ್ಷೇತ್ರದಲ್ಲಿ ಆದ ಅಭಿವೃದ್ಧಿ ಕೆಲಸಗಳನ್ನು ಕಂಡು ಸ್ವಯಂ ಪ್ರೇರಣೆಯಿಂದ ಜಾತಿ ಧರ್ಮ ಲೆಕ್ಕಿಸದೇ ಬಿಜೆಪಿಗೆ ಬೆಂಬಲಿಸುವ ದಿಟ್ಟ ನಿರ್ಧಾರ ತೆಗೆದುಕೊಂಡು ಪಕ್ಷಕ್ಕೆ ಬಂದಿದ್ದಕ್ಕಾಗಿ ಸಮಾಜದವರಿಗೆ ಚಿರ ಋಣಿಯಾಗಿರುತ್ತೇನೆ ಎಂದರು. ಎಲ್ಲ ಸಮುದಾಯದ ಮತದಾರರು ಬಿಜೆಪಿಯ ಪರವಾಗಿರುವುದು ಪಕ್ಷಕ್ಕೆ ಶಕ್ತಿಯನ್ನು ತಂದುಕೊಟ್ಟಿದೆ. ನಗರದ ಜನತೆಯು ಶಾಂತಿ ಹಾಗೂ ನೆಮ್ಮದಿಯಿಂದ ಬದುಕಲು ಒಳ್ಳೆಯ ವಾತಾವರಣ ನಿರ್ಮಿಸುವುದಾಗಿ ಭರವಸೆ ನೀಡಿದರು ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಮಹೇಶ ಘಾಟಗೆ, ಹನಮಂತ ಹರಿವಾಣ, ಶಂಕರ ಭುಜಂಗನವರ, ಸುಕಂದ ಭಾಫನಾ, ಮುರಗೇಶ ಹೊರಡಿ, ಅಕ್ಷಯ ಪಾಟಕ, ಸಿದ್ದು ಹಾಗೂ ಸ್ಥಳೀಯ ಹಿರಿಯರು, ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಆರು ತಿಂಗಳಲ್ಲಿ ಮಹದಾಯಿ ನೀರು : ಅಮಿತ್ ಷಾ ಭರವಸೆ

ಸವದತ್ತಿ : ಉತ್ತರ ಕರ್ನಾಟಕದ ಜೀವನಾಡಿಯಾಗಿರುವ ಮಹದಾಯಿ, ಕಳಸಾ-ಬಂಡೂರಿ ಸಮಸ್ಯೆಯನ್ನು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಬಗೆಹರಿಸುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭರವಸೆ ನೀಡಿದ್ದಾರೆ. ಅವರು ಭಾನುವಾರ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಹಮ್ಮಿಕೊಂಡಿದ್ದ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಸಮಸ್ಯೆ ಬಗೆಹರಿಸುವಂತೆ ಕಳೆದ ಹಲವು ದಶಕಗಳಿಂದ ಈ ಭಾಗದಲ್ಲಿ ಸಾಕಷ್ಟು ಹೋರಾಟ ನಡೆಸುತ್ತಿದ್ದಾರೆ. ಅಲ್ಲದೆ, ರೈತರು ಲಾಠಿ ರುಚಿ ಕಂಡು ಜೈಲಿಗೆ ಕೂಡ ಹೋಗಿ ಬಂದಿದ್ದರು. ಅಲ್ಲದೆ. ಕಳೆದ ಮೂರುವರೆ ವರ್ಷದಿಂದ ನಿರಂತರ ಹೋರಾಟ ನಡೆಸಿದರೂ ಈವರೆಗೆ ಕೇಂದ್ರ ಸರಕಾರ ಪ್ರಾಮಾಣಿಕವಾಗಿ ಸ್ಪಂದಿಸಿರಲಿಲ್ಲ. ಈಗ ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿ ಮತ್ತೊಮ್ಮೇ ಭರವಸೆಯ ಮಹಾಪೂರ ಹರಿಸಿದೆ. ಈ ಹಿಂದೆ ಬಿಜೆಪಿರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕೂಡ ಇದೇ ರೀತಿಯ ಭರವಸೆನೀಡಿ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡಿತ್ತು. ಇದೀಗ ಅಮಿತ್ ಶಾ ಅವರು ಹೊಸ ವರಸೆ ಆರಂಭಿಸಿರುವುದು ಯಾವ ತಿರುವು ಪಡೆಯಲಿದೆ ಎಂಬುದು ಕಾದು ನೋಡಬೇಕಿದೆ.

ರಾಜ್ಯದಲ್ಲಿ ಕುಮಾರಸ್ವಾಮಿ ಸರಕಾರ : ಮಾಯಾವತಿ ವಿಶ್ವಾಸ

ಕೋಲಾರ : ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ –ಬಿಎಸ್ಪಿ ಅಧಿಕಾರಕ್ಕೆ ಬರಲಿದೆ ಎಂದು ಬಿಎಸ್ಪಿ ಅಧ್ಯಕ್ಷ ಕು. ಮಾಯಾವತಿ ವಿಶ್ವಾಸ ವ್ಯಕ್ತಪಡಿಸಿದರು. ಅವರು ಕೋಲಾರದಲ್ಲಿ ಕುಮಾರಪರ್ವ ಸಮಾವೇಶದಲ್ಲಿನೆರೆದಿದ್ದ ಅಪಾರಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು. ಬಿಎಸ್ಪಿ-ಜೆಡಿಎಸ್ ಶಕ್ತಿ ಪ್ರದರ್ಶನದ ಚುನಾವಣೆ ಇದಾಗಿದೆ. ಇದನ್ನು ಸಮರ್ಥವಾಗಿ ಎದುರಿಸಬೇಕಿದೆ. ಸರ್ವ ಜನ ಸುಖಾಯ, ಸರ್ವಜನ ಹಿತಾಯ ನಮಗೆ ಮುಖ್ಯವಾಗಿದೆ. ಅಂತಹ ಅಧಿಕಾರ ನಡೆಸಲು ಕುಮಾರಸ್ವಾಮಿ ಸಮರ್ಥವಾಗಿದ್ದು, ಅವರು ಎಲ್ಲ ಜನರ ಹಿತ ಕಾಯಲಿದ್ದಾರೆಎಂದು ಹೇಳಿದರು. ದೇಶದಲ್ಲಿ ದಲಿತರ ಹಾಗೂ ಆದಿವಾಸಿಗಳ ವಿರುದ್ಧ ದಬ್ಬಾಳಿಕೆ, ದೌರ್ಜನ್ಯಕ್ಕೆ ಲೆಕ್ಕವಿಲ್ಲ. ಅಂತಹವರ ವಿರುದ್ಧ ಪ್ರಕರಣ ಕೂಡ ದಾಖಲು ಆಗಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲು ಪ್ರಾದೇಶಿಕ ಪಕ್ಷಗಳ ಕೈ ಯಲ್ಲಿ ಅಧಿಕಾರ ನೀಡುವುದು ಅಗತ್ಯವಾಗಿದೆ ಎಂದು ಹೇಳಿದರು.

ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಿಡಿಯೋ ಸಮರ

ನವದೆಹಲಿ : ರಾಜ್ಯ ವಿಧಾನ ಸಭಾ ಚುನಾವಣಾ ಸಮರ ತಾರಕಕ್ಕೆ ಏರಿದೆ. ರಾಜ್ಯ ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿಡಿಯೋವೊಂದನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್ಎಸ್ಎಸ್ ವಿರುದ್ಧ ರಾಹುಲ್ ಕಿಡಿಕಾರಿದ್ದಾರೆ. ದಲಿತರ ವಿರುದ್ಧ ಉಗ್ರ ಬಲಪಂಥೀಯ ಸಿದ್ಧಾಂತ ಹಾಗೂ ದಲಿತರು ಸಮಾಜದ ಕೆಳ ತುದಿಯಲ್ಲೇ ಇರಬೇಕೆಂಬುವುದು ಬಿಜೆಪಿ ಹಾಗೂ ಆರ್ಎಸ್ಎಸ್ ನಿಲುವು ಹೊಂದಿದೆ ಎಂದು ವಿಡಿಯೋದಲ್ಲಿ ಕಾಂಗ್ರೆಸ್ ಆರೋಪಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತುಮಕೂರಿನ ದಲಿತರ ಮನೆಯಲ್ಲೇ ಹೋಟೆಲ್ ಆಹಾರ ಸೇವಿಸಿದ್ದು, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯವರ ಸಂವಿಧಾನ ಬದಲಾಯಿಸುವ ಹೇಳಿಕೆಯನ್ನುವಿಡಿಯೋದಲ್ಲಿ ಬಳಸಿಕೊಳ್ಳಲಾಗಿದೆ.

ಅಮಿತ್ ಶಾ ಜೈಲಿಗೆ ಹೋಗಿರಲಿಲ್ಲವೇ : ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೈಲಿಗೆ ಹೋಗಿರಲಿಲ್ಲವೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಅವರು ಭಾನುವಾರ ನಗರದಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು. ಬಿಜೆಪಿ ಏನೇ ತಿಪ್ಪರಲಾಗ ಹಾಕಿದರೂ ಕರ್ನಾಟಕದಲ್ಲಿಆಡಳಿತಕ್ಕೆ ಬರಲು ಸಾಧ್ಯವಿಲ್ಲ . ಮತ್ತೇ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಐಟಿ ದಾಳಿಗೆ ಹೆದರಲ್ಲ. ಅದು ಇರುವುದೇ ದಾಳಿ ಮಾಡಲಿಕ್ಕೆ. ಆದರೆ ಚುನಾವಣೆ ಸಂದರ್ಭದಲ್ಲಿ ದಾಳಿ ಮಾಡಿರುವುದು ರಾಜಕೀಯ ಪ್ರೇರಿತವಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು. ಸಿಎಂ ಅಭ್ಯರ್ಥಿ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್ ತೆಕ್ಕೆಗೆ ಬರ್ತಾರಾ ನಟ ಅಂಬರೀಷ್ ?

ಹಾಸನ : ಕಾಂಗ್ರೆಸ್ ನಿಂದ ಮುನಿಸಿಕೊಂಡ ಬಳಿಕ ತಟಸ್ಥರಾಗಿ ಉಳಿದಿದ್ದ ನಟ ಅಂಬರೀಷ್ ಶೀಘ್ರದಲ್ಲಿಯೇ ಜೆಡಿಎಸ್ ಗೆ ಬೆಂಬಲ ಕೊಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಅಂಬರೀಷ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಮನವೊಲಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹಾಸನದಲ್ಲಿ ಪ್ರತಿಕ್ರಿಯೆ ನೀಡಿರುವ ಹೆಚ್.ಡಿ. ಕೆ. ನಟ ಅಂಬರೀಷ್ ಎರಡು ದಿನಗಳಲ್ಲಿ ತಮ್ಮ ನಿಲುವು ಬಹಿರಂಗ ಪಡಿಸ್ತಾರೆ. ಅವರೊಂದಿಗೆ ಮಾತುಕತೆ ನಡೆಸಿದ್ದು ನಿಜ. ಅವರೇ ತಮ್ಮ ನಿಲುವು ಹೇಳಲಿದ್ದಾರೆ ಎಂದು ಸುಳಿವು ನೀಡಿದ್ದಾರೆ. ಇನ್ನೂ ಈ ಬಗ್ಗೆ ರಾಯಚೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ವರಿಷ್ಟ ಹೆಚ್ .ಡಿ. ದೇವೆಗೌಡ ಅವರು ಅಂಬರೀಷ ಹೆಚ್ ಡಿಕೆ ಭೇಟಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಇಬ್ಬರು ಒಳ್ಳೇಯ ಸ್ನೇಹಿತರು. ಭೇಟಿ ಮಾಡಿರಬಹುದು. ಚರ್ಚೆ ಮಾಡಿರಬಹುದು. ಆದರೆ ಈ ಬಗ್ಗೆಮಾಹಿತಿ ಇಲ್ಲ ಎಂದರು.

ವೀರ ಮದಕರಿ ನಾಯಕ, ಒನಕೆ ಓಬಮ್ಮ ಮರೆತ ಕಾಂಗ್ರೆಸ್ ಸರಕಾರ

ಚಿತ್ರದುರ್ಗ : ಕೋಟೆನಾಡಿನ ವೀರ ಮದಕರಿ, ಒನಕೆ ಓಬಮ್ಮ ಅವರು ಸುಲ್ತಾನ್ ಗೆ ಹೇಗೆ ಟಕ್ಕರ್ ನೀಡಿದರು ಎಂಬುದು ಮದಕರಿ ನಾಡಿನ ಜನ ಮರೆತಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಆದರೆ ಅವರನ್ನು ರಾಜ್ಯ ಸರಕಾರ ಮರೆತಿದೆ. ಅವರ ಜಯಂತಿ ಆಚರಿಸುವ ಬದಲಿಗೆ ಕೆಲ ಮತಗಳ ಆಸೆಗಳಿಗಾಗಿ ಸುಲ್ತಾನ್ ಜಯಂತಿ ಆಚರಿಸುತ್ತಿದೆ ಎಂದು ಕಿಡಿ ಕಾರಿದರು. ದಲಿತ ತಾಯಿಯ ಮಕ್ಕಳಾದ ವೀರಾಂಜನೆ ಒನಕೆ ಓಬಮ್ಮ ಸದೆ ಬಡಿದ ಸಾಹಸ, ಧೈರ್ಯ ಎನೆಂಬುದು ನಮಗೆ ಕಲಿಸಿದ್ದಾರೆ. ಕಾಂಗ್ರೆಸ್ ಪಕ್ಷ ಇಂತಹ ಒಂದು ಪಕ್ಷ ಇದೆ, ಸಮಾಜ ಒಡೆಯುವುದಕ್ಕಾಗಿ ಜಾತಿ ಜನಾಂಗವನ್ನು ಬಳಸಿಕೊಳ್ಳುತ್ತಿದೆ. ಮತಬ್ಯಾಂಕ್ ಗಾಗಿ ಇತಿಹಾಸ ತಿರುಚಿದೆ. ಕಾಂಗ್ರೆಸ್ ನಡತೆ ನೋಡಿ ಯಾರ ಜಯಂತಿ ಮಾಡಬೇಕು ಎನ್ನುವುದು ಬಿಟ್ಟು ಯಾರ್ಯಾದೋ ಜಯಂತಿ ಮಾಡುತ್ತಿದೆ. ಆ ಮೂಲಕ ವೀರಮದಕರಿ, ಒನಕೆ ಓಬಮ್ಮ ಮರೆತಿದೆ. ಆ ಮೂಲಕ ಕರ್ನಾಟಕ ಹಾಗೂ ಚಿತ್ರದುರ್ಗದ ಜನತೆಯ ಅಪಮಾನ ಮಾಡಿದೆ. ಜನರ ಭಾವನೆಗಳ ಜತೆ ಆಟ ವಾಡಿದೆ ಎಂದು ಗುಡುಗಿದರು. ನಾಯಕ, ದಲಿತರ ಅಪಮಾನ ಮಾಡಿದ ಕಾಂಗ್ರೆಸ್ ಘೋರ ಅನ್ಯಾಯಕ್ಕೆ ತಕ್ಕ ಪಾಠ ಕಲಿಸಿ, ವೀರ ಮಕ್ಕಳ ಜೊತೆಗೆ ಚೆಲ್ಲಾಟ ವಾಡುತ್ತಿದೆ ಇಂತಹ ಅಕ್ಷಮ್ಯ ಅಪರಾಧ ಮಾಡುವುದು ಸರಿಯಲ್ಲ.ಇದು ವಿಶ್ವಾಸ ಘಾತ ಮಾಡಿದೆ ಎಂದು ಆರೋಪಿಸಿದರು.

ಕೋಟೆನಾಡಿನಲ್ಲಿ ಪ್ರಧಾನಿ ಮೋದಿ ಹವಾ

ಚಿತ್ರದುರ್ಗ : ಕೋಟೆಯ ನಾಡು ಚಿತ್ರದುರ್ಗದ ಜನತೆಗೆ ನನ್ನ ಮಹಾನಮಸ್ಕಾರಗಳು, ವೀರ ಮದಕರಿನಾಯಕ, ಒನಗೆ ಓಬವ್ವನಿಗೆ ಮುರುಘಾ ಶರಣರ ನೆನೆದ ಪ್ರಧಾನಿ ಕನ್ನಡದಲ್ಲಿಯೇ ಭಾಷಣ ಆರಂಭಿಸುವ ಮೂಲಕ ಜನಮನ ಸೊರೆಗೊಂಡರು, ನಿಮ್ಮ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ನಿಮ್ಮ ಈ ಆಶೀರ್ವಾದಕ್ಕೆ ನಾನು ಶಿರಬಾಗಿಸಿ ನಮಸ್ಕರಿಸಿ ನಿಮ್ಮನ್ನು ಅಭಿನಂದಿಸುತ್ತೇನೆ. ಎರಡು ಕಡೆ ಗೇಟ್ ಗಳಿಂದ ಜನ ಸಾಗರವೇ ಹರಿದು ಬರುತ್ತಿದೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು. ಜೈ ಜವಾನ್ ಜೈ ಕಿನಾನ್ ಜೈ ವಿಜ್ಞಾನ ಮಂತ್ರ ನಮಗೆ ಕೇಳಲು ಸಿಗುತ್ತಿದೆ. ನೂರು ವರ್ಷಗಳಲ್ಲಿ 70 ವರ್ಷ ಬರಗಾಲವಿದ್ದರೂ ಈ ಭಾಗದ ರೈತರು ಸಾಕಷ್ಟು ಕ್ರಾಂತಿಯನ್ನ ಮಾಡಿದ್ದಾರೆ. ಈ ಭಾಗದಲ್ಲಿ ವೀರ ಯೋಧರ ಪರಾಕ್ರಮ ಕೂಡ ಸಾಕಷ್ಟಿದೆ ಎಂದ ಅವರು ವಿಜ್ಞಾನದ ಭೂಮಿಯಾಗಿದೆ. ವೈಜ್ಞಾನಿಕ ನೆಲದ ಹಿನ್ನಲೆಯುಳ್ಳ ಚಳ್ಳಕೇರೆ ತಾಂತ್ರಿಕಸ್ಥಳವಾಗಿ ಮಾರ್ಪಟಾಗಲಿದೆ. ಇಸ್ರೋ ಡಿಆರ್ ಡಿಯೋ ಬಾರ್ಕ ಐಐಎಸ್ಸಿ, ವೈಜ್ಞಾನಿಕ ಪರಿಚಯ ಮಾಡಿಕೊಡಲಿವೆ ಎಂದರು. ಈ ಸಂದರ್ಭದಲ್ಲಿ ಶ್ರೀರಾಮುಲು ಕರುಣಾಕರರಡ್ಡಿ,ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಸಾಥ್ ನೀಡಿದರು.

ಅಕ್ರಮ ಗ್ಯಾಸ್ ರಿಪಿಲ್ಲಿಂಗ್ ಕಟ್ಟಡ ಕುಸಿತ

ಬೆಂಗಳೂರು : ಅಕ್ರಮವಾಗಿ ಗ್ಯಾಸ್ ರಿಪಿಲ್ಲಿಂಗ್ ಮಾಡುವಾಗ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಕಟ್ಟಡ ಕುಸಿತಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕಾಡಗೂಡಿನ ಅಕ್ರಮ ಗ್ಯಾಸ್ ರಿಪಿಲ್ಲಿಂಗ್ ಕಟ್ಟಡ ಕುಸಿದ ಪರಿಣಾಮ ಕಟ್ಟಡದ ಅವಶೇಷದಲ್ಲಿ ಮೂವರು ಸಿಲುಕಿರುವ ಮಾಹಿತಿ ಇದೆ. ಈಗಾಗಲೇ ಮೂವರ ರಕ್ಷಣೆ ಮಾಡಿರುವ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಇನ್ನೂಮೂವರನ್ನು ರಕ್ಷಿಸಲು ಹರಸಾಹಸ ನಡೆಸುತ್ತಿದ್ದಾರೆ.

ಕಾಂಗ್ರೆಸ್ ಅಂಬೇಡ್ಕರ್, ನಿಜಲಿಂಗಪ್ಪ ಅವರನ್ನು ಬಿಟ್ಟಿಲ್ಲ : ಮೋದಿ ವಾಗ್ದಾಳಿ

ಚಿತ್ರದುರ್ಗ : ಕಾಂಗ್ರೆಸ್ ಪಕ್ಷ ಮಹಾನ್ ನಾಯಕರಾದ ಎಸ್. ನಿಜಲಿಂಗಪ್ಪ, ಮಹಾನ್ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಕೂಡ ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದರು. ಅಂತಹ ಮಹಾನ್ ನಾಯಕರನ್ನುಸರಿಯಾಗಿ ನಡೆಸಿಕೊಳ್ಳದ ಕಾಂಗ್ರೆಸ್ ಪಕ್ಷದ ಇತಿಹಾಸವೇ ಅಂತಹದ್ದು. ಅವರ ಕೆಲಸವೇ ಅದು . ಇದು ಅವರ ಚರಿತ್ರೆಯಲ್ಲಿಯೇ ಬಂದಿದೆ. ಒಂದು ಕುಟುಂಬಕ್ಕಾಗಿ ನೂರಾರು ಮುಖಂಡರನ್ನು ಬಲಿ ಪಡೆದ ಇತಿಹಾಸ ಕಾಂಗ್ರೆಸ್ ಗಿದೆ ಎಂದು ಆರೋಪಿಸಿದರು. ಭ್ರಷ್ಟಾಚಾರದ ಕೂಪವಾಗಿರುವ ಕಾಂಗ್ರೆಸ್ ಪಕ್ಷದ ನಾಯಕರ ಹಾಸಿಗೆ ಕೆಳಗೂ ದುಡ್ಡು ಸಿಗುತ್ತದೆ.. ಹೀಗಾಗಿ ಮೇ 12ರಂದು ಕಾಂಗ್ರೆಸ್ ಮುಕ್ತ ಆಗಬೇಕು ಎಂದು ಕರೆ ನೀಡಿದರು.

ಸಿಎಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮೋದಿ

ಚಿತ್ರದುರ್ಗ : ಸಿಎಂ ಸಿದ್ದರಾಮುಯ್ಯ ಅವರ ವಿರುದ್ಧವೂ ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹರಿಹಾಯ್ದಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ತಮ್ಮ ಸಚಿವರ ಸಮರ್ಥನೆ ಮಾಡಿಕೊಳ್ಳುವ ಚಾಳಿಬೆಳೆಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಸಚಿವರ ವಿರುದ್ಧ ಯಾವಾಗ ದೂರು, ಆರೋಪ ಬಂದಾಗಲೆಲ್ಲಾ ಅವರಿಗೆ ಕ್ಲೀನ್ ಚೀಟ್ ಪ್ರಮಾಣಪತ್ರ ನೀಡಿ ಆರೋಪ ಮುಕ್ತ ಗೊಳಿಸುವ ಮೂಲಕ ಅವರನ್ನು ಬಚಾವ್ ಮಾಡುತ್ತಿದ್ದಾರೆ . ಹೀಗಾಗಿ ಅವರನ್ನು ಮನೆಗೆ ಕಳುಹಿಸುವ ಕಾಲ ಸನ್ನಿಹಿತವಾಗಿದೆ. ಅವರಿಗೆ ಅದ್ಭುತ ಬಿಳ್ಕೋಡುಗೆ ನೀಡಿ ಎಂದು ಕರೆ ನೀಡಿದರು.

ರೌಡಿಸಂ ಗೆ ಮಟ್ಟ ಹಾಕಲು ಬಿಜೆಪಿ ಬೆಂಬಲಿಸಿ ಎಂದ ಅಮೃತ ದೇಸಾಯಿ

ಧಾರವಾಡ: ಧಾರವಾಡ ಒಂದು ಸುಸಂಸ್ಕೃತ ನಗರ. ಆದರೆ ಕಳೆದ ೫ ವರ್ಷಗಳಿಂದ ರೌಡಿ ಸಂ, ಮಟ್ಕಾ ದಂಧೆ, ಕ್ರಿಕೇಟ್ ಬೆಟ್ಟಿಂಗ್ ಹಾಗೂ ಅನೇಕ ಅನೈತಿಕ ಚಟುವಟಿಕೆಗಳಿಂದ ಹಾಳಾಗಿದೆ. ಅವುಗಳನ್ನು ಮಟ್ಟ ಹಾಕಲು ಈ ಬಾರಿ ನನ್ನನ್ನು ಗೆಲ್ಲಿಸಿ ಎಂದು ಧಾರವಾಡ ವಿಧಾನ ಸಭಾ ಕ್ಷೇತ್ರ71ರ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಮನವಿ ಮಾಡಿದರು. ವಾರ್ಡ ನಂ. ೯ ರಲ್ಲಿ ಶನಿವಾರ ರಾತ್ರಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ ಬಳಿಕ ಹೊಸಯಲ್ಲಾಪುರ ಚಾವಣಿ ಓಣಿಯ ಸಭೆಯಲ್ಲಿ ನೆರೆದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು. ಧಾರವಾಡ ಗುಂಡಾ ಮುಕ್ತ ಹಾಗೂ ಎಲ್ಲ ಅನೈತಿಕ ಚಟುವಟಿಕೆಗಳಿಗೆ ಮುಕ್ತಾಯ ಹಾಡುತ್ತೆನೆ ಹಾಗೂ ಧಾರವಾಡದಲ್ಲಿ ಅಭಿವೃದ್ಧಿ ಮಾಡುತ್ತನೆ ಎಂದರು. ಇದಕ್ಕೂ ಮುನ್ನ ಅಮೃತ ದೇಸಾಯಿ ಅವರು ರವಿವಾರ ಪೇಟೆ, ಕುಂಬಾರ ಓಣಿ, ಕಳ್ಳಿ ಓಣಿ, ಉಡುಪಿ ಓಣಿ, ಕೋಳಿಕೇರಿ ಯಲ್ಲಿ ಬಿರುಸಿನ ಪಾದಯಾತ್ರೆ ಹಾಗೂ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ವೇದಿಕೆ ಮೇಲೆ ಹುಧಾ ಪಾಲಿಕೆ ಸದಸ್ಯ ಶಂಕರ್ ಶೇಳಕೆ, ವೀರೇಶ ಅಂಚಟಗೇರಿ, ಟಿ ಎಸ್ ಪಾಟೀಲ, ಮಾರುತಿ ಪವ್ವಾರ, ಸಂತೋಷ ಭಾಗಡೆ, ಪುಷ್ಪಾ ನವಲಗುಂದಮಠ, ಶ್ರೀನಿವಾಸ ಕೊಟ್ಯಾನ, ರಾಕೇಶ ನಾಜರೆ, ಶಫೀ ಬಿಜಾಪುರ, ಶಿವಾಜಿ ಘಾಟಗೆ, ಲಲಿತಾ ಭಂಡಾರಿ, ಈರಣ್ಣಾ ಮಲಕಾರಿ, ಗಂಗಮ್ಮ ಬಳಾರಿ , ಹನುಮಂತ ಕಾಳೆ, ಜಯಶ್ರೀ ಹಿರೇಮಠ, ಮಹೇಶ ನಿಲಗಾರ, ಗೀತಾ ನವಲೇ ಹಾಗೂ ಜಯಶ್ರೀ ಚಲ್ಲೂರ ಉಪಸ್ಥಿತರಿದ್ದರು.

ವಾಹನ ಡಿಕ್ಕಿ ರಭಸಕ್ಕೆ ದೇಹವೆಲ್ಲಾ ಪೀಸ್ ಪೀಸ್

ಧಾರವಾಡ: ಅಪರಿಚಿತ ವಾಹವನೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬ ಸ್ಥಳದಲ್ಲಿಯೇ ಸಾವನ್ನ್ಪಪ್ಪಿದ ಘಟನೆ ಧಾರವಾಡದಲ್ಲಿನಡೆದಿದೆ. ನಗರದ ಹೊರವಲಯದ ಸವದತ್ತಿ ರಸ್ತೆಯಲ್ಲಿ ಶನಿವಾರ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು ಮೃತ ದೇಹ ಗುರುತುಸಿಗದಷ್ಟು ಛೀದ್ರಗೊಂಡಿತ್ತು. ತುಂಡಾದ ಶರೀರ ನೋಡಲು ಆಗದಷ್ಟು ಪೀಸ್ ಫೀಸ್ ಆಗಿತ್ತು. ಆನಂತರ ಅನೇಕ ವಾಹನಗಳು ಮೃತ ದೇಹದ ಮೇಲೆ ಹರಿದು ಹೋಗಿದ್ದರಿಂದ ದೇಹ ಛೀದ್ರಗೊಂಡಿದೆ. ಮೃತ ವ್ಯಕ್ತಿಯನ್ನು ಮಣಕಿಲ್ಲಾ ಅಶೋಕ ಪವಾರ (65) ಎಂದು ಗುರುತಿಸಲಾಗಿದೆ ಎಂದು ಧಾರವಾಡ ಟ್ರಾಫೀಕ್ ಠಾಣೆ ಇನ್ಸ ಪೆಕ್ಟರ್ ಮುರುಗೇಶ ಚನ್ನಣ್ಣವರ ಪ್ರಜಾಕಿರಣಕ್ಕೆ ತಿಳಿಸಿದ್ದಾರೆ. ಈ ಕುರಿತು ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಸ್ಮಾಯಿಲ್ ತಮಟಗಾರ್ ಗೆ ಹೂವಿನ ಸುರಿಮಳೆ ಸುರಿದ ಮಹಿಳೆಯರು

ಧಾರವಾಡ : ಹುಬ್ಬಳ್ಳಿ-ಧಾರವಾಡ ವಿಧಾನಸಭಾ ಕ್ಷೇತ್ರ-74 ರ ಕಾಂಗ್ರೆಸ್ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ್ ದಾನೂನಗರ, ಅತ್ತಿಕೊಳ್ಳದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ನೂರಾರು ಮಹಿಳೆಯರು ಆರತಿ ಬೆಳಗಿ, ಹೂವಿನ ಸುರಿಮಳೆ ಸುರಿದರು. ಬಳಿಕ ನಗರದಲ್ಲಿ ಪಾದಯಾತ್ರೆಯ ಮೂಲಕ ಮನೆ ಮನೆಗೆ ತೆರಳಿ ಮತ ಯಾಚಿಸಿದರು ಬಳಿಕ ಮಾತನಾಡಿದ ಇಸ್ಮಾಯಿಲ್ ತಮಟಗಾರ ಅವರು ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ ಎಲ್ಲ ಭರವಸೆಯನ್ನು ಸಂಪೂರ್ಣ ನೆರವೇರಿಸಿದ್ದಾರೆ ನುಡಿದಂತೆ ನಡೆದ ನಮ್ಮ ಸರ್ಕಾರವನ್ನು ಮತೊಮ್ಮೆ ಬೆಂಬಲಿಸಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸುಭಾಶ್ ಶಿಂದೆ, ನಾಗರಾಜ್ ಗುರಿಕಾರ ,ದಾನಪ್ಪಾ ಕಬ್ಬೇರ, ಆನಂದ ಜಾಧವ್ ,ವಿನಾಯಕ ಬಡಿಗೇರ ವಾಸಿಮ ಕಿತ್ತೂರ, ಜೈಲಾನಿ ಜಾಲಿಗಾರ್, ಚಿದಾನಂದ ಬಜಂತ್ರಿ, ಈರಣ್ಣ ಕಿತ್ತೂರ, ನಗರದ ಗುರು ಹಿರಿಯರು ಮಹಿಳೆಯರು ಹಾಗೂ ಕಾಂಗ್ರೆಸ್ ಮುಖಂಡರು ಯುವಕರು ಉಪಸ್ಥಿತರಿದ್ದರು

ಜೆಡಿಎಸ್ ಅಭ್ಯರ್ಥಿ ಕೋನರಡ್ಡಿಗೆ ಅಭೂತಪೂರ್ವ ಸ್ವಾಗತ

ಹುಬ್ಬಳ್ಳಿ : ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಆಗಿರುವ ಶಾಸಕ ಎನ್. ಹೆಚ್. ಕೋನರಡ್ಡಿ ಅವರಿಗೆ ಶನಿವಾರ ರಾತ್ರಿ ಅಭೂತಪೂರ್ವ ಸ್ವಾಗತ ಕೋರಲಾಯಿತು. ಗ್ರಾಮದ ಕ್ರಾಸ್ ನಲ್ಲಿ ಆರತಿ ಬೆಳಗಿ ಸ್ವಾಗತ ಕೋರಿದ ಗ್ರಾಮಸ್ಥರು, ಝಾಂಜ್ , ಭಜನೆ ಮೂಲಕ ಗ್ರಾಮದಲ್ಲಿ ರೋಡ್ ಶೋ ನಡೆಸಿದರು. ಬಳಿಕ ಮಾತನಾಡಿದ ಶಾಸಕ ಎನ್.ಹೆಚ್. ಕೋನರಡ್ಡಿ, ನಿರೀಕ್ಷೆಯಂತೆ ಬಿಜೆಪಿ ಪ್ರಣಾಳಿಕೆ ಠುಸ್ ಆಗಿದೆ. ಕೇವಲ ಒಂದು ಲಕ್ಷ ಸಾಲ ಮನ್ನಾ ಮಾಡುವುದಾಗಿ ಬಿಜೆಪಿ ಹೇಳಿದೆ. ಆದರೆ ನಾವು ಮೂರು ವರ್ಷದ ಹಿಂದೆಯೇ ರೈತರ ಎಲ್ಲ ಕೃಷಿ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದೇವೆ. ಬಿಜೆಪಿಯವರಿಗೆ ಈಗ ಎಚ್ಚರವಾಗಿದೆ ಎಂದು ಲೇವಡಿ ಮಾಡಿದರು. ರೈತರ 52 ಸಾವಿರ ಕೋಟಿ ಸಾಲಮನ್ನಾ ಮಾಡುವ ಜೆಡಿಎಸ್ ಬೇಕೋ ಅಥವಾ 10 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಬಿಜೆಪಿ ಬೇಕೋ ಎಂಬುದನ್ನು ನಿರ್ಧರಿಸಿ ಎಂದ ಅವರ ನಾವು ಎಲ್ಲ ಸಾಲ ಕುಲ್ಲಾ ಮಾಡ್ತಿವಿ, ಟ್ಯಾಕ್ಟರ್ ಸಾಲ, ಬೆಳೆಸಾಲ, ಕೃಷಿಗಾಗಿ ತೆಗೆದುಕೊಂಡ ಎಷ್ಟೇ ಸಾಲ ಇರಲಿ ಯಾವುದಕ್ಕೂ ಹೆದರುವ ಅಗತ್ಯವಿಲ್ಲ ಎಂದು ಅಭಯ ನೀಡಿದರು. ಸಾಲಮನ್ನಾ ಮಾಡುವ ಕುರಿತು ರೈತರ ಅಭಿಪ್ರಾಯ ಸಂಗ್ರಹಿಸಲು ಹೊರಟರೆ ಬಿಜೆಪಿಯವರು ಹೆದರಿ ರಾಜಕೀಯ ಪ್ರೇರಿತ ದೂರು ನೀಡಿದ್ದಾರೆ. ಇದಕ್ಕೆ ರೈತರು ಹೆದರುವ ಅಗತ್ಯವಿಲ್ಲ. ಕುಮಾರಸ್ವಾಮಿ ಸಿಎಂ ಆದ ೨೪ ಗಂಟೆಗಳಲ್ಲಿ ಎಲ್ಲ ರೈತರ, ನೇಕಾರರ, ಮಹಿಳಾ ಸ್ರ್ತೀಸಹಾಯ ಸಂಘಗಳ ಸಾಲಮನ್ನಾ ಮಾಡುವ ಜೊತೆಗೆ ಗಭೀರ್ಣಿ ಮಹಿಳೆಯರಿಗೆ ಹೆರಿಗೆ ಭತ್ಯೆ ೩೬ ಸಾವಿರ, ನೀಡಲಾಗುವುದು ಎಂದರು. ಎಲ್ಲ ದೇವರ ಆಶೀರ್ವಾದದಿಂದಾಗಿ ಸಕಾಲಕ್ಕೆ ಮಳೆ ಬೆಳೆ ಆಗಬೇಕು, ಹುಬ್ಬಳ್ಳಿ ಧಾರವಾಡ ಮಾದರಿಯಲ್ಲಿ ನವಲಗುಂದ ವಿಧಾನ ಸಭಾಕ್ಷೇತ್ರದ ಎಲ್ಲ ಹಳ್ಳಿಗಳನ್ನು ಅಭಿವೃದ್ಧಿ ಮಾಡಲಾಗುವುದು. ಈಗಾಗಲೇ ಇಂಗಳಹಳ್ಳಿ ಶಿರಗುಪ್ಪಿಯಲ್ಲಿ ಎಲ್ಲಜಾತಿ ಜನಾಂಗದವರಿಗೆ ಸಮುದಾಯ ಭವನ, ಮಲಪ್ರಭಾ ಕಾಲುವೆ ಆಧುನೀಕರಣಕ್ಕಾಗಿ ಮೂವತ್ತು ವರ್ಷ ಹೋರಾಟ ನಡೆಸಿ ಕೊನೆಗೂ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಅದೇ ರೀತಿ ಮಂಟೂರ ಕಾಲುವೆಗೆ ಮೂವತ್ತು ಕೋಟಿ, ಶಿರಗುಪ್ಪಿ- ಇಂಗಳಹಳ್ಳಿ ರಸ್ತೆ ಅಭಿವೃದ್ಧಿ ಮಾಡಲಾಗಿದೆ ಎಂದು ವಿವರಿಸಿದರು. ಜೆಡಿಎಸನ ಯುವಪಡೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ, ಕೆಲಸ ಮಾಡಿ, ನಾನು ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ. ಬಿಜೆಪಿಯವರು ದೊಡ್ಡ ಭ್ರಮೆಯಲ್ಲಿದ್ದಾರೆ. ಅವರ ಬಳಿ ದುಡ್ಡು ಇರಬಹುದು ಆದರೆ ನಮ್ಮದು ಜನ ಶಕ್ತಿ ಇದೆ. ಆ ಜನಶಕ್ತಿ ಮುಂದೆ ಯಾವ ಶಕ್ತಿಯೂ ತಡಿಯುವುದಿಲ್ಲ ಎಂದರು. ಅಣ್ಣಿಗೇರಿ ಹಾಗೂ ನವಲಗುಂದ ನಲ್ಲಿ ಜಮೀರ್ ಅಹಮ್ಮದ್ ಅವರ ಪ್ರಚಾರಕ್ಕೆ ಮುಸ್ಲಿಂ ಬಾಂಧವರೇ ಅಡ್ಡಿ ಪಡಿಸಿ, ಜೆಡಿಎಸ್ ಪರ ಒಲವು ತೋರಿಸಿರುವುದು ನೋಡಿದರೆ, ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸನ ಆಟ ನಡೆಯುವುದಿಲ್ಲ ಎಂಬುದು ಸಾಬೀತಾಗಿದೆ. ಬಿಜೆಪಿ ಟೀಕೆಗೆ ತಲೆ ಕೆಡಿಸಿಕೊಳ್ಳಬೇಡಿ, ನಿಮ್ಮ ಸೇವಕ ಇಡೀ ರಾಜ್ಯಕ್ಕೆ ಮಾದರಿ ಕ್ಷೇತ್ರ ನಿರ್ಮಾಣ ಮಾಡುವ ಜವಬ್ದಾರಿ ನನ್ನದು ಎಂದರು. ಮೇ. 15ರ ಫಲಿತಾಂಶ ಜೆಡಿಎಸ್ ಪರವಾಗಿ ಬರಲಿದೆ. ಅದು ಜನರ ಗೆಲುವು ಹೊರತು ನನ್ನ ಗೆಲುವು ಅಲ್ಲ. ಎಲ್ಲ ಧರ್ಮದ ಜನರ ಸಹಾಯ, ಸಹಕಾರ, ಬೆಂಬಲ, ಹಿರಿಯರು, ಯುವಕರು, ಮಹಿಳೆಯರು ಸಂಪೂರ್ಣ ಆಶೀರ್ವಾದ ನೀಡಬೇಕು ಎಂದು ಮನವಿಮಾಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಶಿವಣ್ಣ ಹುಬ್ಬಳ್ಳಿ, ವೀರಣ್ಣ ನೀರಲಗಿ, ಎಂ.ಎಸ್. ರೋಣದ, ಶಿವಪುತ್ರಯ್ಯಾ ಹೊಸಮಠ, ಮಲ್ಲಪ್ಪಾ ಅಣ್ಣಿಗೆರಿ, ಚನ್ನಬಸಪ್ಪಾ ನೆಲಗುಡ್ಡ, ಎಲ್ಲನಗೌಡ ಕಾಶಪ್ಪಗೌಡರ, ಶರಣು ದೊಡ್ಡಲಿಂಗನಗೌಡರ್, ಬಸನಗೌಡ ಕಾಶಪ್ಪಗೌಡರ್. ಗುರನಗೌಡ ಬೆಳವಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಚಿವ ವಿನಯ ಕುಲಕರ್ಣಿ ಪರ ನಟ ಯಶ್ ರೋಡ್ ಶೋ

ಧಾರವಾಡ : ಗಣಿ ಸಚಿವ ವಿನಯ ಕುಲಕರ್ಣಿ ಪರ ನಟ ಯಶ್ ರೋಡ್ ಶೋ ನಡೆಸಿದರು. ಧಾರವಾಡ ತಾಲೂಕಿನ ಹೆಬ್ಬಳ್ಳಿ, ಅಮ್ಮನಿಬಾವಿ, ನರೇಂದ್ರ ಸೇರಿದಂತೆ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು. ಬಳಿಕ ಮಾತನಾಡಿದ ಯಶ್, ಎಲ್ಲರಿಗೂ ನಮಸ್ಕಾರ. ಇಲ್ಲಿಗೆ ತುಂಬಾ ವರ್ಷದ ಹಿಂದೆ ಬಂದಿದ್ದೆ. ನಾನು ಆವಾಗ ಸಿರಿಯಲ್ ನಲ್ಲೂ ಆ್ಯಕ್ಟ್ ಮಾಡಿರಲಿಲ್ಲ. ಇಲ್ಲಿನ‌ ಜನರನ್ನು ನೋಡಿ ತುಂಬಾ ಖುಷಿ ಆಗಿದೆ. ನಾನು ಇಲ್ಲಿ‌ ನಿಂತಿದಿನಿ ಅಂದ್ರೆ ಅದಕ್ಕೆ ಕಾರಣ ನಿಮ್ಮ ಅಭಿಮಾನ ಎಂದರು. ಯಶ್ ಯಾಕೆ ರಾಜಕೀಯ ಪಂಕ್ಷನ್ ಗಳಿಗೆ ಬರ್ತಿದಾರೆ ಅಂತಾ ಎಲ್ಲರೂ ಕೆಳ್ತಾ ಇದಾರೆ. ಅದಕ್ಕೆ ಕಾರಣ ಕೂಡ ಇದೆ. ಜನರ ಸಮಸ್ಯೆಗಳ ಬಗ್ಗೆ ನಾನು ಮಾಧ್ಯಮಗಳಲ್ಲಿ ನೋಡಿದ್ದೆ. ಕುಡಿಯುವ ನೀರಿನ ಸಮಸ್ಯೆ ತುಂಬ ಇದೆ. ಹೀಗಾಗಿ ಈಗಾಗಲೇ ಒಂದು ಕೆರೆ ಮಾಡಿದ್ದೇನೆ. ಒಂದೇ ಒಂದು ಕೆರೆ ನಿರ್ಮಾಣ ಮಾಡಿ ಮನೆಯಲ್ಲಿ ಕುಳಿತುಕೊಳ್ಳುವ ನಾನಲ್ಲ. ನಿಮ್ಮೆಲ್ಲರ ಋಣ ನಮ್ಮ ಮೇಲಿದೆ. ಎಲ್ಲರೂ ನಮಗೆ ಮುಖ್ಯ. ಕೆಲವು ಲೀಡರ್ಸ್ ಜೊತೆ ಇದ್ರೆ ಸಾಕಷ್ಟು ಪ್ರೊಜೆಕ್ಟ್ ಮಾಡಬಹುದು. ಹೀಗಾಗಿ ನನಗೆ ಪರಿಚಯ ಇದ್ದೋರ ಜೊತೆ ಪ್ರಚಾರ ಮಾಡ್ತಿದಿನಿ ಎಂದರು. ಸಚಿವ ವಿನಯ್ ಕುಲಕರ್ಣಿ ಗೆ ವೊಟ್ ಮಾಡಿ ಅಂತಾ ನಾನು ಹೇಳಲ್ಲ. ನಿಮ್ಮ ಪ್ರೀತಿ ನೋಡಿದ್ರೆ ನೀವು ಮತ ಹಾಕುತ್ತೀರಿ ಎಂದು ಡೈಲಾಗ್ ಹೇಳಿ ಸೇರಿದ್ದ ಜನರನ್ನು ರಂಜಿಸಿದರು.

ಸಿಎಂ ಸಿದ್ದರಾಮಯ್ಯಗೆ ಅವಮಾನ ಮಾಡಿದ ದೈಹಿಕ ಶಿಕ್ಷಕ ಅಮಾನತು

ಧಾರವಾಡ : ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದ ಸರಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಕ ನನ್ನು ಸೇವೆಯಿಂದ ಅಮಾನತು ಗೊಳಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವಮಾನ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಮಾಡಿ ಅವರನ್ನು ಅವಮಾನ ಮಾಡಲಾಗಿದೆ ಎಂದು ಕರುನಾಡು ಸೇನೆ ಉತ್ತರ ಕರ್ನಾಟಕ ಧಾರವಾಡ ಅಧ್ಯಕ್ಷ ನೀಡಿದ ದೂರಿನ ಮೇರೆಗೆ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಹೆಚ್. ನಾಗೂರ ಪ್ರಜಾಕಿರಣಕ್ಕೆ ತಿಳಿಸಿದ್ದಾರೆ. ತಮ್ಮ ವಾಟ್ಸಪ್ ಮೂಲಕ ಅವಮಾನ ಸಂದೇಶ ರವಾನಿಸುವ ಮೂಲಕ ತಪ್ಪೆಸಿಗಿದ್ದಾರೆ. ಹೀಗಾಗಿ ತಕ್ಷಣದಿಂದ ಜಾರಿಯಾಗುವಂತೆ ಅಮಾನತು ಕೈಗೊಳ್ಳಲಾಗಿದೆ ಎಂದು ನಾಗೂರ ವಿವರಿಸಿದ್ದಾರೆ.

ಡಾ. ಪಾಂಡುರಂಗಿಗೆ ಗೌರವ ಡಾಕ್ಟರೇಟ್ ಪ್ರದಾನ

ಧಾರವಾಡ : ಉತ್ತರ ಕರ್ನಾಟಕ ಭಾಗದ ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಅವರಿಗೆ ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಿದೆ. ಶನಿವಾರ ನಡೆದ 68ನೇ ಘಟಿಕೋತ್ಸವದಲ್ಲಿ ಪ್ರೊ. ವಿಜಯ ರಾಘವನ ಅವರು ಡಾ. ಆನಂದ ಪಾಂಡುರಂಗಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದರು. ಅವರಿಗೆ ಕವಿವಿ ಕುಲಪತಿ ಪ್ರೊ. ಪ್ರಮೋದ ಗಾಯಿ, ಕುಲಸಚಿವರಾದ ಮಲ್ಲಿಕಾರ್ಜುನ ಪಾಟೀಲ, ನಿಜಲಿಂಗಪ್ಪ ಮಟ್ಟಿಹಾಳ ಸಾಥ್ ನೀಡಿದರು. ಈ ಸಮಾರಂಭಕ್ಕೆ ಸಾವಿರಾರು ವಿದ್ಯಾರ್ಥಿಗಳು, ಪೋಷಕರು, ಗಣ್ಯರು ಸಾಕ್ಷಿಯಾದರು. ಡಾ. ಆನಂದ ಪಾಂಡುರಂಗಿ ಅವರು ಸಾವಿರಾರು ಮನೋರೋಗಿಗಳನ್ನು ಗುಣಪಡಿಸಿ, ಅವರ ಬಾಳಿನ ನಂದಾದೀಪವಾಗಿರುವುದು ಇಲ್ಲಿ ಸ್ಮರಿಸಬಹುದು.

ಅವಕಾಶ ಸದುಪಯೋಗ ಪಡಿಸಿಕೊಳ್ಳುವಲ್ಲಿ ಶಾಸಕ ಬೆಲ್ಲದ ವಿಫಲ

ಧಾರವಾಡ : ಹುಬ್ಬಳ್ಳಿ ಧಾರವಾಡದ ಪಶ್ಚಿಮ 74 ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರಿಗೆ ಕ್ಷೇತ್ರದ ಜನತೆ ಒಂದು ಅವಕಾಶ ಕೊಟ್ಟರೂ ಆ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸೇವೆ ಮಾಡುವಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ ಆರೋಪಿಸಿದ್ದಾರೆ. ಅವರು ಭಾವಿಕಟ್ಟಿ ಪ್ಲಾಟ್ ಶಕ್ತಿನಗರ್, ಕೃಷಿ ವಿಶ್ವವಿದ್ಯಾಲಯ,ಹಾಗೂ ಹುಬ್ಬಳ್ಳಿ ವಿಲಾಸ್ ನಗರ ,ತೇಜಸ್ವಿನಗರ, ಹಾಗೂ ಸರಸ್ವತಿಪೂರದಲ್ಲಿ ಮತ ಯಾಚಿಸಿ ಮಾತನಾಡಿದರು ಶಾಸಕರಾಗಿ 5 ವರ್ಷಗಳ ಕಾಲ ಅವರು ಮಾಡಿದ ಕೆಲಸ ಹೊರ ದೇಶ ಸುತ್ತುವುದು ಮತ್ತು ತಮ್ಮ ವ್ಯಾಪಾರ ಅಭಿವೃದ್ಧಿ ಮಾಡಿಕೊಳ್ಳುವುದು ಬಿಟ್ಟರೆ ಜನರಿಗೆ ಅನುಕೂಲವಾಗುವಂತಹ ಯಾವುದೇ ಜನಪರವಾದ ಕೆಲಸಗಳನ್ನು ಮಾಡಿಲ್ಲ ಮುಂದೆ ಅವರು ಮಾಡುವುದು ಇಲ್ಲ ಎಂದು ಆಪಾದಿಸಿದ್ದಾರೆ. ಅರವಿಂದ ಬೆಲ್ಲದ ಅವರಿಗೆ ಸ್ವಂತ ಯೋಚನೆ ಮತ್ತು ಯೋಜನೆ ಇಲ್ಲವೆ ಇಲ್ಲ ಹಾಗಾಗಿ ಈ ಬಾರಿ ಒಂದು ಅವಕಾಶ ನನಗೆ ಕೊಟ್ಟರೆ ಹು-ಧಾ ಪಶ್ಚಿಮ ಕ್ಷೇತ್ರವನ್ನು ಅಧ್ಬುತವಾದ ರೀತಿಯಲ್ಲಿ ಅಭಿವೃದ್ಧಿ ಪಡಿಸುತ್ತೇನೆ ಮತ್ತು ಆ ಕ್ಷೇತ್ರದ ಜನರ ಸಮಸ್ಯೆಗಳನ್ನು ಕೇವಲ 2 ವರ್ಷಗಳಲ್ಲಿ ಇಲ್ಲದಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು. ನನ್ನ ಜನಪ್ರಿಯತೆಯನ್ನು ಕಂಡು ಕಂಗಾಲಾದ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ ಅವರು ಮತ್ತು ಅವರ ಹಿಂದೆ ಬಕೆಟ್ ಹಿಡಿದು ಓಡಾಡುವ ಕೆಲವು ಬಕೆಟ್ ಹಿಡುಕರು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತಿದ್ದಾರೆ ಎಂದು ಗುಡುಗಿದರು. ನಾನು ಕೇವಲ ಒಂದು ಧರ್ಮಕ್ಕೆ ಒಂದು ಜಾತಿಗೆ ಮತ್ತು ಒಂದು ಸಮುದಾಯಕ್ಕೆ ಸಂಭಂದ ಪಟ್ಟವನಲ್ಲ ನನಗೆ ಎಲ್ಲರೂ ಬೇಕು ನಾನು ಯಾವುತ್ತಿಗೂ ಜಾತಿ ಧರ್ಮದ ಹೆಸರಲ್ಲಿ ರಾಜಕೀಯ ಮಾಡುವಂತಹ ಮನುಷ್ಯ ನಾನಲ್ಲ. ನಾನು ಬೆಲೆ ಕೊಡುವುದು ಮನುಷ್ಯತ್ವಕ್ಕೆ ಮತ್ತು ಮಾನವಿಯತೆಗೆ ಇವರ ಸುಳ್ಳು ಹೇಳುವ ಜಯಮಾನ ನನ್ನದಲ್ಲ ನನ್ನ ಜನಪ್ರಿಯತೆ ಕಂಡು ಕಂಗಾಲಾದ ಅರವಿಂದ ಬೆಲ್ಲದ ಅವರಿಗೆ ಈ ಬಾರಿ ಕಾರ್ ಶೋ ರೂಂ ದಾಗ ಕುಳಿತುಕೊಳ್ಳುವುದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅನ್ವರ ಮೋದೊಳ, ಅಲ್ತಾಫ್ ಕಿತ್ತೂರ, ಸುಭಾಶ್ ಶಿಂದೆ, ಪ್ರತಾಪ್ ಚವ್ಹಾಣ್,ಬಸವರಾಜ ಮಲಕಾರಿ, ನಾಗರಾಜ್ ಗುರಿಕಾರ, ಆನಂದ ಮುಶಣ್ಣವರ, ಆನಂದ ಜಾಧವ್, ಸಾಹಿಲ್ ಡಾಂಗೆ, ಈಶ್ವರ್ ಕಿತ್ತೂರ, ಬುರಾನ ಗವಳಿ,ವಸಂತ್ ಅರ್ಕಚರಿ, ಬಸವರಾಜ್ ಮಟ್ಟಿ ಸುನಿತಾ ವೀರಕರ್,ವಿನಾಯಕ ಬಡಿಗೇರ , ಮುಜಾಮಿಲ ಪಠಾಣ್, ಬಾಬು ಗವಳಿ, ಆಶಿಶ್ ಅಗ್ನಿಹೋತ್ರಿ ಅಬ್ದುಲ್ ದೇಸಾಯಿ ಉಪಸ್ಥಿತರಿದ್ದರು

ಹುಬ್ಬಳ್ಳಿಯಲ್ಲಿ ಶಾಸಕ ಅರವಿಂದ ಬೆಲ್ಲದ ಪಾದಯಾತ್ರೆ

ಹುಬ್ಬಳ್ಳಿ : ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಭಾಜಪ ಅಭ್ಯರ್ಥಿ ಹಾಗೂ ಶಾಸಕ ಅರವಿಂದ ಬೆಲ್ಲದ ಶನಿವಾರ ಹುಬ್ಬಳ್ಳಿ ಶಹರದ ವಾರ್ಡ ನಂ.39ರ ವಾಣಿ ಪ್ಲಾಟ್, ಮೇಘರಾಜ ನಗರ, ಮಲ್ಲೇಶ್ವರ ನಗರ, ಸುತ್ತಮುತ್ತಲಿನ ಬಾಗದಲ್ಲಿ ಪಾದಯಾತ್ರೆ ಮೂಲಕ ಮನೆ ಮನೆ ತೆರಳಿ ಮತಯಾಚನೆ ಮಾಡಿದರು. ಬಳಿಕ ಮಾತನಾಡಿದ ಶಾಸಕ ಅರವಿಂದ ಬೆಲ್ಲದ ಅವರು, ಕಳೆದ 5 ವರ್ಷದಲ್ಲಿ ಅಭಿವೃದ್ಧಿಯ ದೃಷ್ಟಿಯಲ್ಲಿ ಕ್ಷೇತ್ರದ ಚಿತ್ರಣವನ್ನೆ ಬದಲಿಸಿದ್ದೇನೆ, ಕ್ಷೇತ್ರದ ಜನತೆಯನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ಕಾಣುತ್ತಾ ಬಂದಿದ್ದು, ಅನೇಕ ಜನಪರ ಯೋಜನೆಗಳನ್ನು ಜಾರಿ ಮಾಡಿ ಕ್ಷೇತ್ರದ ಸಮಗ್ರ ಪ್ರಗತಿಗಾಗಿ ಶ್ರಮಿಸಿದ್ದೇನೆ ಎಂದರು. ಕ್ಷೇತ್ರಾದ್ಯಂತ ಮತದಾರರಲ್ಲಿ ಹೊಸ ಉತ್ಸಾಹ ಕಂಡು ಬರುತ್ತಿದೆ. ರಾಜಕೀಯ ಬದಲಾವಣೆಗೆ ಜನ ಬಯಸುತ್ತಿದ್ದಾರೆ. ಆಡಳಿತ ಪಕ್ಷವು ಜನರಿಗೆ ಮೂಲ ಸೌಕರ್ಯಗಳ ಕೊರತೆ ಉಂಟು ಮಾಡಿದೆ ಅದಕ್ಕಾಗಿ ಜನ ಬದಲಾವಣೆ ಬಯಸಿದ್ದಾರೆ, ವಿರೋಧ ಪಕ್ಷದಲ್ಲಿದ್ದು ನನ್ನ ಕ್ಷೇತ್ರದಲ್ಲಿ ಮಾಡಿರುವ ಅಬಿವೃದ್ಧಿಯನ್ನು ನೋಡಿ ಹಾಗೂ ಕ್ಷೇತ್ರದ ಕಲ್ಯಾಣ, ದಕ್ಷ ಆಡಳಿತ, ಕ್ಷೇತ್ರದ ಸುರಕ್ಷತೆಗಾಗಿ ಬಿಜೆಪಿಗೆ ಮತದಾನ ಮಾಡುವ ಮೂಲಕ ನನಗೆ ಆಶೀರ್ವದಿಸಿ ಎಂದು ಮನವಿ ಮಾಡಿದರು. ಈ ಭಾಗದಲ್ಲಿ ಇನ್ನು ಕೆಲವು ಅಭಿವೃದ್ದಿ ಕೆಲಸಗಳು ಆಗಬೇಕಾಗಿದೆ ಅವುಗಳನ್ನು ಮುಂಬರುವ ದಿನಗಳಲ್ಲಿ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಭಾಜಪ ಪ್ರಧಾನ ಕಾರ್ಯದರ್ಶಿ ಹನಮಂತ ಹರಿವಾನ, ಮಹಿಳಾ ಪ್ರಮುಖರಾದ ರತ್ನಾ ಗಬ್ಬೂರು, ಪಕ್ಷದ ಮುಖಂಡರಾದ ಅಶೋಕ ಗೂಳಪ್ಪನವರ, ಮುರಗೇಶ ಹೊರಡಿ, ರಾಜೇಸಾಬ್ ಅಣ್ಣಿಗೇರಿ, ಮುಸ್ತಕ ಬಾರುದ್ವಾಲೆ, ಮಕಬುಲ್ ಪಠಾಣ, ಶಂಕರ ಭುಜಂಗನವರ, ಝಾಕೀರ್, ಯಾಕುಬಸಾಬ ನದಾಫ್, ಅಸಪಾಕ ಬಸರಿ, ಅಹಮ್ಮದ ಕಲೆಗಾರ, ಸುಕಂದರಾಜ ಭಾಫನಾ, ಅಹಮ್ಮದ ಇಸ್ಮಾಯಿಲ್ ಕಲೆಗಾರ ಹಾಗೂ ಅನೆಕ ಜನ ಸ್ಥಳೀಯ ಗುರು ಹಿರಿಯರು,ಮಹಿಳೆಯರು ಉಪಸ್ಥಿತರಿದ್ದರು.

ಗುರುನಾಥ ಗೌಡ ಮನೆ ಮೇಲೆ ಚುನಾವಣಾಧಿಕಾರಿಗಳ ದಾಳಿ

ಧಾರವಾಡ : ಜಿಲ್ಲಾ ಪಂಚಾಯತ ಸದಸ್ಯ ದಿವಂಗತ ಯೋಗೀಶಗೌಡ ಸಹೋದರ ಗುರುನಾಥ ಗೌಡ ಅವರ ತೋಟದ ಮನೆಯ ಮೇಲೆ ಶನಿವಾರ ದಿಡೀರ್ ದಾಳಿ ನಡೆದಿದೆ. ಧಾರವಾಡ ತಾಲೂಕಿನ ಗೊವನಕೊಪ್ಪ ಗ್ರಾಮದಲ್ಲಿನ ಮನೆ ಮೇಲೆ ಚುನಾವಣಾ ಅಧಿಕಾರಿಗಳು, ಅಬಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಗಳ ತಂಡ ಈ ದಾಳಿ ನಡೆಸಿದೆ. ಗುರುನಾಥಗೌಡರ ಮನೆ ಮೇಲೆ ದಾಳಿ ನಡೆಸಿದ ತಂಡ ಎನೂ ಸಿಗದೆ ಬರಿಗೈ ಯಲ್ಲಿ ವಾಪಸ್ ಆಗಿದೆ. ಗುರುನಾಥ ಗೌಡ ಬಿಜೆಪಿ ಮುಖಂಡರಾಗಿದ್ದು, ಅವರು ಬಿಜೆಪಿಯ ಅಭ್ಯರ್ಥಿ ಅಮೃತ ದೇಸಾಯಿ ಪರ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ, ಪೊಲೀಸ್ ಅಧಿಕಾರಿ ವರ್ಗದವರು ಸಚಿವ ವಿನಯ ಕುಲಕರ್ಣಿ ಅವರ ಅಣತಿ ಮೇರೆಗೆ ತಮಗೆ ಎನ್ ಕೌಂಟರ್ ಭೀತಿ ಒಡ್ಡಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಜಿ.ಪಂ ಸದಸ್ಯ ಯೋಗಿಶಗೌಡರ ಸಹೋದರ ಗುರುನಾಥಗೌಡರ ಮನೆ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಈ ಕುರಿತು ಪ್ರಜಾಕಿರಣ ದೊಂದಿಗೆ ಮಾತನಾಎಇದ ಅವರು, ಕಾಂಗ್ರೆಸ್ ಸರಕಾರ ಸತತ ಅನ್ಯಾ ವೆಸಗುತ್ತಲೇ ಬಂದಿದೆ. ನಮಗೆ ಅವರಿಂದ ನ್ಯಾಯ ಸಿಗುವುದಿಲ್ಲ. ಹೀಗಾಗಿ ಸಚಿವರು ಸೋಲಿನ ಭೀತಿಯಿಂದ ನಮ್ಮ ಮನೆ ದಾಳಿ ಮಾಡಿಸುತ್ತಿದ್ದಾರೆ. ಗುರುನಾಥ ಗೌಡರನ್ಬು ಹತ್ತಿಕ್ಕಲು ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಯತ್ನ ಮಾಡಿದ್ದಾರೆ. ನಾನು ಇದಕ್ಕೆ ಜಗ್ಗುವ ಪ್ರಶ್ನೆ ಇಲ್ಲ ಎಂದು ಪ್ರತಿಕ್ರಿಯೆ ನೀಡಿದರು.

ಮಂಡ್ಯದಲ್ಲಿ ಕೋಳಿ ರಾಜಕೀಯ

ಮಂಡ್ಯ : ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮಂಡ್ಯ ಜಿಲ್ಲೆಯಲ್ಲಿ ನಾಟಿ ಕೋಳಿ ರಾಜಕೀಯ ಆರಂಭವಾಗಿದೆ. ನಾಗಮಂಗಲ ವಿಧಾನ ಸಭಾ ಕ್ಷೇತ್ರದ ಮಲ್ಲೇಗೌಡನ ಹಳ್ಳಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮತದಾರರಿಗೆ ಹಂಚಲು ತಂದಿದ್ದ ನೂರಾರು ಕೋಳಿಗಳನ್ನು ಚುನಾವಣಾಧೀಕಾರಿಗಳು ಹಾಗೂ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳುಕೋಳಿಗಳನ್ನು ಹಂಚುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ಈವರೆಗೆ ಅವು ಯಾರಿಗೆ ಸೇರಿದ್ದು ಎಂಬುದು ಗೊತ್ತಾಗಿಲ್ಲ. ಈ ಸಂಬಂಧ ಕೋಳಿ ವಿತರಣೆ ಮಾಡುತ್ತಿದ್ದ ಆಟೋ ಹಾಗೂ ನೂರಾರು ಕೋಳಿಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟಿನಲ್ಲಿ ಮಂಡ್ಯದಲ್ಲಿ ಕೋಳಿ ಜಗಳ ಆರಂಭವಾಗಿದೆ. ಮತದಾರರು ಮಾತ್ರ ಫೂಲ್ ಖುಷ್ ಆಗಿದ್ದಾರೆ.

ಮಹಾದಾಯಿ, ಕಳಸಾ ಬಂಡೂರಿ ವಿಷಯದಲ್ಲಿ ಕಾಂಗ್ರೆಸ್ ರಾಜಕಾರಣ

ಗದಗ: ಮಹಾದಾಯಿ, ಕಳಸಾ ಬಂಡೂರಿ ವಿಷಯದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು. ನೀರಿನ ಹಕ್ಕು ಎಲ್ಲರಿಗೂ ಇದೆ. ಹೀಗಾಗಿ ಮಹದಾಯಿ ಬಗ್ಗೆ ಒಂದು ಕಡೆ ಕುಳಿತು ಸಮಸ್ಯೆ ಬಗೆಹರಿಸುವುದಾಗಿ ಮೋದಿಜಿ ಹೇಳಿದರು. ಕರ್ನಾಟಕದ ಪ್ರಗತಿಗಾಗಿ ಕೇಂದ್ರ ಸರ್ಕಾರವು ಸಾಕಷ್ಟು ಹಣ ನೀಡಿದೆ. ನೀಡಲಿದೆ. ಗದಗ ವಾಡಿ ರೇಲ್ವೆಮಾರ್ಗಕ್ಕೆ ಕರ್ನಾಟಕದಲ್ಲಿ ನಿದ್ದೆ ಮಾಡುವ ಸರ್ಕಾರ ಭೂಮಿ ಕೊಡದೆ ಕಾಮಗಾರಿ ಕುಂಟಿತವಾಗಿದೆ ಎಂದು ಆರೋಪಿಸಿದರು. ಯಾಲಕ್ಕಿ, ಹತ್ತಿಗೆ ಉತ್ತೇಜನ ನೀಡಲು ಭಾರತ ಸರ್ಕಾರ ಕ್ರಮ ಕೈಗೊಳ್ಳಲಿದೆ. ಪವನಶಕ್ತಿ ವಿದ್ಯುತ್ ಗೆ ಉತ್ತೇಜನ, ಈ ಎಲ್ಲ ಕೆಲಸಗಳಿಗಾಗಿ ನಿದ್ದೆ ಮಾಡುವ ಕಾಂಗ್ರೆಸ್ ತಿರಸ್ಕರಿಸಿ ಬಿಜೆಪಿಗೆ ಮತ ನೀಡಬೇಕು ಎಂದು ಮೋದಿಜಿ ವಿನಂತಿಸಿದರು. ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ ಎಂದು ಜನರಿಂದ ಜಯಘೋಷಣೆ ಮಾಡಿಸಿ ತಮ್ಮ ಮಾತು ಮುಗಿಸಿದರು. ಸಮಾರಂಭದಲ್ಲಿ ಸಂಸದರಾದ ಶಿವಕುಮಾರ ಉದಾಸಿ, ಪ್ರಲ್ಹಾದ ಜೋಶಿ, ಅಭ್ಯರ್ಥಿ ಗಳಾದ ಅನಿಲ ಮೆಣಸಿನಕಾಯಿ, ಸಿ.ಸಿ.ಪಾಟೀಲ, ರಾಮಣ್ಣ ಲಮಾಣಿ, ಕಳಕಪ್ಪ ಬಂಡಿ ಮುಂತಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗು

ಶಿವಮೊಗ್ಗ: ಕಾಂಗ್ರೆಸ್ ಅಭಿವೃದ್ಧಿಯ ನೋಟ ನೋಡಿ ಐದು ವರ್ಷಗಳ ಹಿಂದೆ ಸಚಿವ ಆಸ್ತಿ ಎಂಟು ನೂರು ಕೋಟಿ ಹೆಚ್ಚಳವಾಗಿದೆ. ಐದು ವರ್ಷದಲ್ಲಿ ಹೇಗೆ ದ್ವಿಗುಣಗೊಂಡಿದೆ ಎಂಬುದನ್ನು ಬಹಿರಂಗ ಪಡಿಸಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಅವರು ಶಿವಮೊಗ್ಗದಲ್ಲಿ ಬಿಜೆಪಿ ಪರ ಬಹಿರಂಗ ಪ್ರಚಾರನಡೆಸಿ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದರು. ಸಿಎಂ ಸಿದ್ದರಾಮಯ್ಯ ಅವರಿಂದ ಹಿಡಿದು ಅನೇಕ ನಾಯಕರು ಹಣದ ರಾಶಿಯ ಮೇಲೆ ಕುಳಿತು ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಮೋದಿಯವರು ಎಷ್ಟೇ ಪ್ರಯತ್ನ ಮಾಡಿದರೂ ಕಳ್ಳರನ್ನು ನಾವು ಒಳಗೆ ಪ್ರವೇಶ ಮಾಡಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ಅವರ ಬಳಿಕಳೆದ ಚುನಾವಣೆಯಲ್ಲಿ ಎಷ್ಟು ಕಳ್ಳರಿದ್ದಾರೆ ಎಂಬುದು ಮೊದಲು ಹೇಳಿ ಎಂದು ಸವಾಲ್ ಹಾಕಿದರು. ಯಾರ್ಯಾರ ಮನೆಯಲ್ಲಿ ಎಷ್ಟು ಹಣ ಸಿಕ್ಕಿದೆ, ಬಾತ್ ರೂಂನಲ್ಲಿ, ಬೆಡ್ ರೂಂನಲ್ಲಿ ಎಷ್ಟು ಸಿಕ್ಕಿದೆ. ಬ್ಯೂರೂ, ಹಾಸಿಗೆ ಕೆಳಗೆ ಸಿಕ್ಕಿದೆಯೆಲ್ಲಾ ಅವರು ಯಾರು ಎಂಬುದು ಮೊದಲು ಬಹಿರಂಗಪಡಿಸಿ ಎಂದು ಗುಡುಗಿದ ಅವರು ಪ್ರೀತಿ ವಿಶ್ವಾಸ ತೋರಿಸುವ ನಾಯಕರ ಬಗ್ಗೆ ಜನರಿಗೆ ತಿಳಿಸಿ ಎಂದು ಒತ್ತಾಯಿಸಿದರು. ತುಂಗಾ ಪಾನಂ. ಗಂಗಾ ಸ್ನಾನಂ ಎಂಬ ನಾಣ್ಣುಡಿ ಇದೆ. ಆದರೆ ಕಾಂಗ್ರೆಸ್ ಸರಕಾರ ಎರಡಕ್ಕೂ ಗೌರವ ಕೊಡಲಿಲ್ಲ. ಕಾಂಗ್ರೆಸ್ ಮುಕ್ತ ಕರ್ನಾಟಕ ನಮ್ಮ ಗುರಿಯಿದ್ದು,ಎ ರಡು ಕನಸು ನನಸಾಗಲು ಮೇ. 15ರಂದು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಟಾರ್ ಗಳು ಹಣಕ್ಕಾಗಿ ಎಲ್ಲರ ಪರ ಪ್ರಚಾರ : ಹೆಚ್ ಡಿ ಕೆ ತಿರುಗೇಟು

ಕೊಪ್ಪಳ : ಸಿನಿಮಾ ನಟರು ಎಲ್ಲರ ಪರ ಪ್ರಚಾರ ಮಾಡುತ್ತಾರೆ. ಸಿದ್ದರಾಮಯ್ಯ ಅವರು ಜನರ ಮತ ಪಡೆಯುವುದಕ್ಕೆ ಸ್ಟಾರ್ ಗಳನ್ನು ಕರೆಸುತ್ತಿದ್ದಾರೆ. ಆದರೆ ಸ್ಟಾರ್ ಗಳು ಪ್ರಚಾರ ಮಾಡೊದರಿಂದ ಜನರು ಮತಗಳು ಹಾಕುವುದಿಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ಎಚ್ಚರಿಸಿದರು. ಅವರು ಕೊಪ್ಪಳದಲ್ಲಿ ಜೆಡಿಎಸ್ ಪರ ಪ್ರಚಾರ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಟಾರ್ ಗಳು ಹಣಕ್ಕಾಗಿ ಎಲ್ಲರೂ ಪರ ಪ್ರಚಾರ ಮಾಡುತ್ತಾರೆ. ಆದರೆ ಜನರ ಅಭಿವೃದ್ಧಿ ಪರ ಚಿಂತನೆ ಮಾಡುವವರಿಗೆ ಮತ ಹಾಕುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬದಾಮಿ ಟ್ರೆಂಡ್ ಜೆಡಿಎಸ್ ಪರವಿದೆ. ಅಲ್ಲಿಯ ರಿಪೋರ್ಟ್ ಬಗ್ಗೆ ನನ್ನ ಕಾಮೆಂಟ್ ಇಲ್ಲ ಆದ್ರ ಬಾದಾಮಿ ಯಲ್ಲಿ ಬೃಹತ್ ಸಭೆ ನಡೆದರೂ ಒಂದು ಲೈನ ಕೂಡ ಮಾಧ್ಯಮ ಗಳಲ್ಲಿ ಬರಲಿಲ್ಲ. ಹೀಗಾಗಿ ನಮ್ಮ ಮಿಡಿಯಾ ಮಾಲಿಕರ ಮೇಲೆ ನನಗೆ ಅಸಮಾಧಾನವಿದೆ.ಯಾರಪ್ಪನಾಣೆ ಮಾಡಿದರು ಜನರು ಮತ ಹಾಕುವುದಂತೂ ಜೆಡಿಎಸ್ ಗೆ ಅಂತ ಕುಮಾರಸ್ವಾಮಿ ಹೇಳಿದರು

ರಾಹುಲ್ ಗಾಂಧಿ, ನರೇಂದ್ರ ಮೋದಿ ವಿಧೂಷಕರು

ಕೊಪ್ಪಳ: ಕಾಂಗ್ರೆಸ ನ ರಾಹುಲ್ ಗಾಂಧಿ ಮತ್ತು ಬಿಜೆಪಿಯ ನರೇಂದ್ರ ಮೋದಿ ಇಬ್ಬರು ವಿಧೂಷಕರು ಎಂಬುದು ಅವರು ಮಾಡುವ ಪ್ರಚಾರ ಭಾಷಣದಿಂದ ಅರ್ಥ ವಾಗುತ್ತದೆಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರ ಸ್ವಾಮಿ ಟೀಕಿಸಿದರು. ಅವರು ಕೊಪ್ಪಳದ ಕುಕುನೂರಿನಲ್ಲಿ ಮಾತನಾಡಿದ ಅವರು, ಪ್ರಚಾರಕ್ಕಿಂತ ಮನರಂಜನೆ ನೀಡುವುದೇ ಅವರ ಕೆಲಸವಾಗಿದೆ ಎಂದು ಆರೋಪಿಸಿದರು. ಈ ಬಾರಿ ಜನರು ಜೆಡಿಎಸ್ ಗೆ ಸಂಪೂರ್ಣ ಆಶೀರ್ವಾದ ನೀಡುತ್ತಾರೆ. ಈ ಸಲ ಕಪ್ಪ್ ನಮ್ದೇ ಅಂದ ಹೆಚ್.ಡಿ.ಕೆ ಯಾರ ಆಟ ಯಾರ ಆಡಬೇಕು ಎನ್ನುವುದು ಜನರು ತೀರ್ಮಾನ ಮಾಡುತ್ತಾರೆ. ಇವ್ರು ಅಖಾಡ ಸಿದ್ದಮಾಡುವುದಲ್ಲ ಜನರು ಅಖಾಡ ತಯಾರಿಸುತ್ತಾರೆ. 12 ನೇ ತಾರೀಖು ಜನರು ಮತದಾನ ಮಾಡಿ ತೀರ್ಮಾನ ಮಾಡುತ್ತಾರೆ ಎಂದರು. ಒಂದು ಕಡೆ ದೇವಗೌಡರನ್ನ ಹೊಗುಳುತ್ತಾರೆ ಇನ್ನೊಂದು ಕಡೆ ಜೆಡಿಎಸ್ ಮೂರನೇ ಸ್ಥಾನಕ್ಕೆ ಬರುತ್ತೆ ಅಂತಾರೆ ಅವ್ರು ಯಾಕ ಅ ರೀತಿ ಹೊಗುಳುತ್ತಾರೆ ಎಂಬುದು ನರೇಂದ್ರ ಮೋದಿನ ನೀವೆ ಕೇಳಬೇಕು ಎಂದಅವರು ಇವರೆಲ್ಲ ಸಿಜನ್ ರಾಜಕಾರಣಿಗಳು.ಕೇವಲ ಅಧಿಕಾಕ್ಕಾಗಿ ಪ್ರಚಾರ ಮಾಡುತ್ತಾರೆ ಎಂದು ತಿರುಗೇಟು ನೀಡಿದರು. ಖರ್ಗೆ ಅವರು ಅನುಭವ ಇರುವಂತಹ ರಾಜಕಾರಣಿಗಳು. ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ಅವರಿಗೆ ಭಾಷಣ ಬರೆದು ಕೊಡುವವರಿದ್ದಾರೆ ಅದಕ್ಕೆ ಹೊಗಳುತ್ತಾರೆ ಎಂದರು.

ಸಿದ್ದರಾಮಯ್ಯ ಸರಕಾರಕ್ಕೆ ಸೋಲಿನ ಭೀತಿ

ಧಾರವಾಡ : ಸಿದ್ದರಾಮಯ್ಯ ಸರಕಾರಕ್ಕೆ ಸೋಲಿನ ಭೀತಿ ಆರಂಭವಾಗಿದೆ. ಹೀಗಾಗಿ ಅವರೇ ಸ್ವತಃ ಚಾಮುಂಡೇಶ್ವರಿ ಕ್ಷೇತ್ರದಿಂದ ಪಲಾಯನ ಆಗಿ ಬಾದಾಮಿ ಗೆ ಬಂದರು. ಅಲ್ಲಿಯೂ ಕೂಡ ಸೋಲು ಕಟ್ಟಿಟ್ಟ ಬುತ್ತಿ ಎಂದು ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ ಹೇಳಿದರು. ಅವರು ಧಾರವಾಡ ವಿಧಾನ ಸಭಾ ಕ್ಷೇತ್ರ-71ರ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದರು. ನಮ್ಮ ಯಡಿಯೂರಪ್ಪ ಸರಕಾರಕ್ಕೂ ಸಿದ್ದರಾಮಯ್ಯ ಸರಕಾರಕ್ಕೂ ಜನ ತುಲನೆ ಮಾಡುತ್ತಿದ್ದಾರೆ. ಇವರು ಐದು ವರ್ಷ ಜಾತಿ ಆಧಾರದ ಮೇಲೆ ಕೆಲವೊಂದು ಭಾಗ್ಯ ಮಾಡ್ಯಾರ. ಯಾವುದೇ ವಿಚಾರ ಮಾಡದೆ, ಅಧಿಕಾರದ ದರ್ಪದಿಂದ ಮೆರೆಯತ್ತಿದ್ದಾರೆ. ಕಾಂಗ್ರೆಸ್‍ನವರು ಕೆಜೆಪಿಯಿಂದಾಗಿ ಲಾಭ ಮಾಡಿಕೊಂಡು ಇಂದು ಭ್ರಷ್ಟಾಚಾರ, ಅನೈತಿಕ ಚಟುವಟಿಕೆಗೆ ಆರ್ಶೀವಾದ ಮಾಡುತ್ತಿದ್ದಾರೆ. ಅಲ್ಲದೆ, ಜಾತಿ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಮಾಜಿ ಶಾಸಕರಾದ ಎ.ಬಿ. ದೇಸಾಯಿ. ಪುಡಕಲಕಟ್ಟಿಯಂತಹ ಸಭ್ಯಸ್ಥ ಧಾರವಾಡ ಕ್ಷೇತ್ರ ಇಂದು ವಿನಯ ಕುಲಕರ್ಣಿಯವರಿಂದಾಗಿ ಹೆಸರು ಕೆಟ್ಟು ಹೋಗಿದೆ. ಆದರೆ ನಾವು ಇದೀಗ ಒಂದಾಗಿದ್ದು, ನಾವೆಲ್ಲ ಮಾಡಿದ ತಪ್ಪಿನಿಂದಾಗಿ ನೀವು ಐದು ವರ್ಷ ಶಾಸಕರಾಗಿದ್ದೀರಿ. ಇದನ್ನು ಮರೆತಿದ್ದೀರಿ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಕಾರ್ಯಕರ್ತರೇ ಸಿಗುತ್ತಿಲ್ಲ. ಬಿಜೆಪಿ ಕಾರ್ಯಕರ್ತರನ್ನು ಪೊಲೀಸ್ ಮೂಲಕ ಹೆದರಿಸುತ್ತಿದ್ದಾರೆ. ಅಣ್ಣವರ ಪರ ಕೆಲಸ ಮಾಡಕ್ಕ ಪೊಲೀಸ್ ಮೇಲಿಂದ ಒತ್ತಡ ಹಾಕಿಸುತ್ತಿದ್ದಾರೆ. ಇದಕ್ಕೆ ಮೇ 12ರಂದು ಜನತೆ ತಕ್ಕ ತೀರ್ಪು ನೀಡಬೇಕು ಎಂದು ಮನವಿ ಮಾಡಿದರು.

ಸಚಿವ ವಿನಯ ಕುಲಕರ್ಣಿ ವಿರುದ್ಧ ಮತ್ತೇ ಗುಡುಗಿದ ಅಮೃತ ದೇಸಾಯಿ

ಧಾರವಾಡ : ಧಾರವಾಡ ವಿಧಾನ ಸಭಾ ಕ್ಷೇತ್ರ-71ರ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರು ಶುಕ್ರವಾರ ರಾತ್ರಿ ಹೆಬ್ಬಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಚುನಾವಣಾ ಕಾವು ಇನ್ನಷ್ಟು ರಂಗೇರುವಂತೆ ಮಾಡಿದರು. ಹೆಬ್ಬಳ್ಳಿ ಗ್ರಾಮದ ರೈತ ಕುಟುಂಬವಾದ ಬಸವರಾಜ ಸಾಲಿಯವರ ಮನೆಯಲ್ಲಿ ಕೇಕ್ ಕತ್ತರಿಸಿ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದರು. ಬಳಿಕ ಉತ್ತರ ಕರ್ನಾಟಕ ಶೈಲಿಯ ಕಡಕ್ ರೊಟ್ಟಿ, ಎಣ್ಣಗಾಯಿ ಪಲ್ಯಸೇರಿದಂತೆ ವಿವಿಧ ಆಹಾರ ಸವಿದರು. ಬಳಿಕ ಬಿಜೆಪಿ ಕಾರ್ಯಕರ್ತರೊಂದಿಗೆ ಮಧ್ಯರಾತ್ರಿಯವರೆಗೆ ಸಮಾಲೋಚನೆ ನಡೆಸಿ, ಸಚಿವ ವಿನಯ ಕುಲಕರ್ಣಿ ಅವರಿಗೆ ಈ ಬಾರಿ ಶತಾಯ ಗತಾಯ ಸೋಲಿನ ರುಚಿ ತೊರಿಸಲೇ ಬೇಕು ಎಂದು ಮನವಿ ಮಾಡಿದರು. ಇದಕ್ಕೂ ಮುನ್ನ ಕಲ್ಲೂರಿನಲ್ಲಿ ನಡೆದ ಬಿಜೆಪ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಮೃತ ದೇಸಾಯಿ ಅವರು, ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರು ಎರಡು ಬಾರಿ ಶಾಸಕ, ಮತ್ತೇ ಸಚಿವರು ಆದರು. ಇವರು ಏನ್ ಅಭಿವೃದ್ಧಿ ಮಾಡ್ಯಾರ ಎಂಬುದು ನಾವು ನೀವು ಕಣ್ಯಾರೆ ನೋಡ್ಯಾವಿ. ಆದರೂ ಸೋಲಿನ ಹೆದರಿಕೆಯಿಂದ ಒಬ್ಬ ಜಿಲ್ಲಾಪಂಚಾಯತ್ ಸದಸ್ಯನೊಂದಿಗೆ ಹೊಲಿಸಿ ಮಾತನಾಡುತ್ತಿರುವುದು ನೋಡಿದರೆ ಅವರಿಗೆ ಭಯ ಹುಟ್ಟಿರುವುದು ಗೊತ್ತಾಗುತ್ತದೆ. ಜಿಲ್ಲಾ ಪಂಚಾಯತನ ಅಲ್ಪಸ್ವಲ್ಪ ಅನುದಾನ ಹಂಚಿಕೆ, ಮಾಡಿ ಕ್ಷೇತ್ರದಲ್ಲೆಡೆ ರಸ್ತೆ, ನೀರು, ಮಠಕ್ಕೆ ಅನುದಾನಕ್ಕೆ ದ್ಯಾಮವ್ವ ಗುಡಿಗೆ ಅನುದಾನ ನೀಡಿದ್ದೀನೆ. ಆದರೆ ಇವರು ಜಿಪಂ ಸದಸ್ಯನೊಂದಿಗೆ ಹೊಲಿಸಿಕೊಳ್ಳುವುದು ನೋಡಿದರೆ ಇವರ ಮಟ್ಟ ಎಂತಹದ್ದು ಎಂಬುದನ್ನು ಗೊತ್ತಾಗುತ್ತದೆ ಎಂದು ಗುಡುಗಿದರು. ಇದೇ ವೇಳೆ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿರುವ ರೈತರ ರಾಷ್ಟ್ರಿಕೃತ ಬ್ಯಾಂಕ್‍ಗಳಲ್ಲಿನ ಒಂದು ಲಕ್ಷ ರೂಪಾಯಿಯವರೆಗೆ ಸಾಲಮನ್ನಾ, ಬಡ ಹೆಣ್ಣುಮಕ್ಕಳಿಗೆ ಬಂಗಾರ ತಾಳಿ, ಅದು ಯಾವುದೇ ಜಾತಿಭೇದ ಗಳಿಲ್ಲದ ಸರಕಾರದಿಂದ ತಾಳಿ, ಸಾಕಷ್ಟು ಜನಪರ ಯೋಜನೆಗಳನ್ನು ಬಿಜೆಪಿ ಜಾರಿಗೆ ತರಲಿದ್ದಾರೆ ಎಂದ ಅವರು ಬಿಜೆಪಿ ಚಿಹ್ನೆಯಾದ ಕಮಲಕ್ಕೆ ಮತ ನೀಡಿ, ಆರ್ಶೀವಾದ ಮಾಡಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗುರುನಾಥಗೌಡ ಗೌಡರ, ಬಸವರಾಜ ಸಾಲಿ, ಗುಜ್ಜಪ್ಪ ಸಾಹುಕಾರ, ಸಹದೇವ ಹಾವೇರಿ, ಭೀಮಣ್ಣ ರಾಮದುರ್ಗ, ರಮೇಶ ದೊಡ್ಡಮನಿ, ಸಾವಿತ್ರಿ ಹುಬ್ಬಳ್ಳಿ, ನಿಂಗಪ್ಪ ಅಳಗವಾಡಿ, ನಿರ್ಮಲಾ ಹುಬ್ಬಳ್ಳಿ, ಶಾಂತವ್ವ ಕಿನ್ನಣ್ಣವರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶನಿವಾರ ಮುಂಜಾನೆ ಹೆಬ್ಬಳ್ಳಿಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಬಿರುಸಿನ ಪಾದಯಾತ್ರೆ ನಡೆಸಿ, ಮನೆಮನೆಗೆ ತೆರಳಿ ಮತಯಾಚನೆ ನಡೆಸಿದರು.

ಸದೃಢ ಕರ್ನಾಟಕ ನಿರ್ಮಾಣಕ್ಕೆ ಬಿಜೆಪಿ ಬೆಂಬಲಿಸಿ

ಧಾರವಾಡ : ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಿ ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತ, ಭಯ ರಹಿತ ಹಾಗೂ ಸದೃಢ ಕರ್ನಾಟಕ ನಿರ್ಮಿಸಲು ಈ ಬಾರಿ ಬಿಜೆಪಿ ಗೆಲ್ಲಿಸಬೇಕು ಎಂದು ಸಂಸದ ಪ್ರಹ್ಲಾದ ಜೋಶಿ ಪತ್ನಿ ಜ್ಯೋತಿ ಜೋಶಿ ಕರೆ ನೀಡಿದರು. ಅವರು ತಾಲೂಕಿನ ಅಮ್ಮಿನಭಾವಿಯಲ್ಲಿ ಧಾರವಾಡ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರ ಮತಯಾಚನೆ ಮಾಡಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಕಳೆದ ನಾಲ್ಕು ವರ್ಷದಲ್ಲಿ ಭಾರತದ ಹಿರಿಮೆಯನ್ನು ಜಗತ್ತಿನಾದ್ಯಂತ ಪರಿಚಯಿಸಿ ಭಾರತವನ್ನು ವಿಶ್ವಗುರುವಾಗಿಸಲು ಬಹುವಾಗಿ ಶ್ರಮಿಸಿದ್ದಾರೆ. ಅದೇ ರೀತಿ ಕರ್ನಾಟಕವನ್ನು ಸುಭದ್ರ, ಸುಭಿಕ್ಷ್ಷ ರಾಜ್ಯವನ್ನಾಗಿಸಲು ಈ ಬಾರಿ ಬಿಜೆಪಿ ಗೆಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ, ದೌರ್ಜನ್ಯ, ಹಿಂಸೆಯನ್ನು ತಡೆಗಟ್ಟಲು ಮತ್ತು ಭಯ ಮುಕ್ತ ವಾತಾವರಣ ನಿರ್ಮಿಸಲು ಬಿಜೆಪಿ ಬೆಂಬಲಿಸಬೇಕೆಂದು ಮನವಿ ಮಾಡಿದರು. ಇದಕ್ಕೂ ಪೂರ್ವದಲ್ಲಿ ಅಮ್ಮಿನಭಾವಿ ಮುಖ್ಯ ರಸ್ತೆ, ವಾಡೆದ ಓಣಿ, ಹುಲಿಯವರ ಓಣಿ, ನಾರಾಯಣದೇವರ ಗುಡಿ, ಈಶ್ವರದೇವರ ಗುಡಿ, ಮರಾಠ ಕಾಲೊನಿ, ದೊಡ್ಡ ಓಣಿ, ಗುಡಿ ಓಣಿಯಲ್ಲಿ ಮಹಿಳೆಯರೊಂದಿಗೆ ಪ್ರಚಾರ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಧಾರವಾಡ ಗ್ರಾಮೀಣ ಮತಕ್ಷೇತ್ರ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪತ್ನಿ ಪ್ರೀಯಾ ದೇಸಾಯಿ, ಮಾಜಿ ಶಾಸಕಿ ಸೀಮಾ ಮಸೂತಿ, ಜಿಪಂ ಮಾಜಿ ಸದಸ್ಯೆ ಪ್ರೇಮಾ ಕೋಮಾರದೇಸಾಯಿ, ಶೃತಿ ಬೆಳ್ಳುಬ್ಬಿ, ಕಲಂದರ್ ಮುಲ್ಲಾ, ರುದ್ರಪ್ಪ ಅರಿವಾಳದ, ನಾಗನಗೌಡ ಪಾಟೀಲ, ಎಂ.ಸಿ. ಹುಲ್ಲೂರ, ವಸಂತ ಪದಕಿ, ಚನ್ನಬಸಪ್ಪ ಪದಕಿ, ಜಗನ್ನಾಥ ಕುಸುಗಲ್, ನಿಂಗಪ್ಪ ದೊಡವಾಡ, ಯಲ್ಲಪ್ಪ ಜಾನಕೂನವರ, ಪ್ರೇಮಾ ಹುಲಿ, ಗೀತಾ ಮುರಗನವರ ಇತರರು ಇದ್ದರು.

ನವಲಗುಂದನಲ್ಲಿ ಶಾಸಕ ಕೋನರಡ್ಡಿ ಪರ ಮೌಲಾಲಿ ಬ್ಯಾಂಡ್ ಪ್ರಚಾರ

ನವಲಗುಂದ : ನವಲಗುಂದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಮೌಲಾಲಿ ಬ್ಯಾಂಡ ಕಂಪನಿ ಬಿರುಸಿನ ಪ್ರಚಾರ ನಡೆಸುತ್ತಿದೆ. ಶಾಸಕ ಎನ್,ಹೆಚ್. ಕೋನರಡ್ಡಿ ಅವರ ಮೇಲೆ ಹಾಡುಗಳನ್ನು ಕಟ್ಟಿ ಹಾಡುವ ಮೂಲಕ ಜನರ ಹತ್ತಿರವಾಗುತ್ತಿದೆ. ಇಸ್ಮಾಯಿಲ್ ಮುಲ್ಲಾ ಹಾಗೂ ಎಳು ಜನರ ತಂಡ ಮೌಲಾಲಿ ಬ್ಯಾಂಡ ಕಂಪನಿ ಮೂಲಕ ಕ್ಷೇತ್ರದ ಹಳ್ಳಿಗಳಲ್ಲಿ ಸಂಚರಿಸುತ್ತಿದೆ. ಈಗಾಗಲೇ ಮಣಕವಾಡ, ಬಲ್ಲರವಾಡ, ಬೆಳಹಾರ ಸೇರಿ ಹಲವಡೆ ಸಂಚರಿಸಿ ಜನರ ಗಮನ ಸೆಳೆದಿರುವ ಮೌಲಾಲಿ ಬ್ಯಾಂಡ್ ಕಟ್ಟಿ ಹಾಡುವ ಹಾಡುಗಳು ಕೂಡ ಜನರಿಗೆ ಖುಷಿ ಕೊಡುತ್ತಿವೆ. ಜನಸಾಗರವೇ ಇವರ ಹಾಡುಗಳನ್ನು ನಿಂತು ಗುನುಗುತ್ತಿದೆ. ಅವರ ಕೆಲವು ಹಾಡುಗಳು ಈ ರೀತಿ ಇವೆ. ಮರೆಬ್ಯಾಡ ಅಣ್ಣ. ಯವ್ವ ನಮ್ಮ ಕೋನರಡ್ಡಿ ಅಣ್ಣನ ನಮ್ಮ ಜೆಡಿಎಸ್ ಪಕ್ಷನಾ, ವೋಟ್ ಹಾಕ್ಯಾರಣ್ಣ ನಮ್ಮ ಜೆಡಿಎಸ್ ಪಕ್ಷಕ್ಕೆ ಧಾರವಾಡ ಜಿಲ್ಲೆಯು ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದಲ್ಲಿ ಹುಟ್ಟಿದ ಕೋನರಡ್ಡಿ ಬಡವರ ಬಂದುವಾಗಿ ವಿದ್ಯಾರ್ಥಿ ದಿಸೆ ಯಿಂದಲೇ ಹೋರಾಟ ಮಾಡುತ್ತಿರುವ ಎನ್.ಹೆಚ್. ಕೋನರಡ್ಡಿ ಜ್ಯಾತ್ಯಾತೀತ ಜನತಾದಳದ ಅಭ್ಯರ್ಥೀ ಪುಣ್ಯಕೋಟಿಯಂತಹವರು ನಮ್ಮ ಕೋನರಡ್ಡಿ ಸಾಹೇಬರು, ನವಲಗುಂದ ಕ್ಷೇತ್ರಕ್ಕಾಗಿ ಹಗಲಿರುಳು ದುಡಿಯುವರು ಮರೀ ಬ್ಯಾಡೋ ಅಣ್ಣ ನಮ್ಮ ಕೋನರಡ್ಡಿ ಅಣ್ಣನವರನ್ನ ಹೀಗೆ ಅನೇಕ ಹಾಡುಗಳನ್ನು ಹಾಡುವ ಮೂಲಕ ಜನಾನುರಾ್ಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಸುತ್ತಿದ್ದಾರೆ. ಒಟ್ಟಿನಲ್ಲಿ ನವಲಗುಂದ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅರ್ಭ್ಯರ್ಥಿ ಹಾಗು ಜನಸಾಮಾನ್ಯರ ಶಾಸಕ ಎಂದೇ ನಾಡಿನ ಮನೆ ಮಾತಾಗಿರುವ ಶಾಸಕ ಎನ್.ಹೆಚ್. ಕೋನರಡ್ಡಿ ಅವರ ಚುನಾವಣಾ ಪ್ರಚಾರ ಭರ್ಜರಿಯಾಗಿ ಸಾಗಿದೆ. ಮತದಾರರು ಕೂಡ ಫೂಲ್ ಖುಷ್ ಆಗಿ ಸ್ಪಂದಿಸುತ್ತಿದ್ದಾರೆ.

ಮಣ್ಣಿನ ಮಗ ದೇವೆಗೌಡ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿ

ತುಮಕೂರ : ರಾಜ್ಯ ಚುನಾವಣೆ ಹಿನ್ನಲೆಯಲ್ಲಿ ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗಷ್ಟೆ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರನ್ನು ಹೊಗಳಿ ವಿವಾದಕ್ಕೀಡಾದ ಬೆನ್ನಲ್ಲೇ ಶನಿವಾರ ತುಮಕೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಮಣ್ಣಿನ ಮಗ ದೇವೇಗೌಡ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ನನ್ನ ಸೋಲಿಸುವ ಮಾತನಾಡಿದ್ದರು. ಅಲ್ಲದೆ, ನಾನು ಗೆಲುವು ಸಾಧಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು. ಆದರೆ ನಾನು ಅವರಿಗೆ ಬಹಿರಂಗವಾಗಿಯೇ ಹೇಳಿದ್ದೆ. ನೀವು ಸಾಯುವುದು ಬೇಡ. ಇನ್ನೂ ನೂರು ವರ್ಷ ಬದುಕಿ. ಕರ್ನಾಟಕದಲ್ಲಿ ಜೆಡಿಎಸ್ ಬಿಜೆಪಿಯ ದೊಡ್ಡ ಪ್ರತಿಷ್ಟೆ ಇತ್ತು, ಆದರೂ ಅದನ್ನು ಲೆಕ್ಕಿಸದೆ ಮಾತನಾಡಬೇಡಿ ಎಂದುಹೇಳಿದ್ದೆ. ಆದರೆ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರು ದಿನ ಸುಳ್ಳು ಹೇಳ್ತಾರೆ. ಒಂದಕ್ಕಿಂತ ಹೆಚ್ಚು ಸುಳ್ಳು ಹೇಳ್ತಾರೆ ಎಂದು ಗುಡುಗಿದರು. ಅವರು ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಭಾಜಪದ ಸಮರ್ಥನೆ ಮಾಡುತ್ತಿಲ್ಲ. ಬದಲಿಗೆ ಕಾಂಗ್ರೆಸ್ ಜೊತೆಗೆ ಅಧಿಕಾರಕ್ಕೆ ಹೊಂದಾಣಿಕೆ ಮಾಡಿಕೊಂಡಿದೆ. ಅದು ಈ ಬಾರಿ ರಾಜ್ಯದಲ್ಲಿ ಮೂರಕ್ಕೆ ಇಳಿಯಲಿದೆ. ಜೆಡಿಎಸ್ ಯಾವುದೇ ಕಾರಣಕ್ಕೂ ಕಾಂಗ್ರೆಸ್ ನನ್ನು ಸೋಲಿಸಲು ಸಾಧ್ಯವಿಲ್ಲ. ಬಿಜೆಪಿ ಮಾತ್ರ ಕಾಂಗ್ರೆಸ್‍ನ್ನು ಸೊಲಿಸಲು ಸಾಧ್ಯ. ಜೆಡಿಎಸ್ ಸರ್ಕಾರ ಅಧಿಕಾರ ಮಾಡಲು ಸಾಧ್ಯವಿಲ್ಲ. ಈ ಮಾತನ್ನು ಯಾರು ತಳ್ಳಿ ಹಾಕಲ್ಲ ಎಂದು ಕಿಡಿ ಕಾರಿದರು. ಕಾಂಗ್ರೆಸ್-ಜೆಡಿಎಸ್ ನಡುವೆ ಒಳ ಒಪ್ಪಂದ ಆಗಿದೆ. ಇದಕ್ಕೆ ಬೆಂಗಳೂರು ಬಿಬಿಎಂಪಿ ಉತ್ತಮ ನಿರ್ದಶನ ಎಂದು ಛೇಡಿಸಿದರು. ರಾಜ್ಯದ ಜನರನ್ನ ಮುರ್ಖರನ್ನಾಗಿಸುವುದು ಬಿಡಬೇಕು. ಒಳ ಒಪ್ಪಂದದ ನಾಟಕ ನಿಲ್ಲಿಸಿ ಸತ್ಯಾಂಶವನ್ನು ಜನರ ಮುಂದೂಡಿಬೇಕು ಎಂದು ಆಗ್ರಹಿಸಿದರು.

ಇಂದಿರಾಗಾಂಧಿ ಕಾಲದಿಂದಲೂ ಬಡವರ ಕಣ್ಣಿಗೆ ಮಣ್ಣು ಎರಚುತ್ತಿರುವ ಕಾಂಗ್ರೆಸ್

ತುಮಕೂರ : ಕಾಂಗ್ರೆಸ್ ಸರ್ಕಾರವು ಇಂದಿರಾಗಾಂಧಿ ಅವರ ಕಾಲದಿಂದ ಬಡವರು, ಬಡತನದ ಹೆಸರಿನ ಮಂತ್ರ ಪಠಿಸುತ್ತಿದೆ. ಅವರ ಕಣ್ಣಿನಲ್ಲಿ ಮಣ್ಣನ್ನು ಎರಚಿ ಆಡಳಿತ ನಡೆಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಿಡಿ ಕಾರಿದ್ದಾರೆ. ಅವರು ತುಮಕೂರಿನಲ್ಲಿ ಬಿಜೆಪಿ ಪರ ಬಹಿರಂಗ ಪ್ರಚಾರ ನಡೆಸಿ ತೀವ್ರ ವಾಗ್ದಾಳಿ ನಡೆಸಿದರು. ಬಡವರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ನಂತರ ಬಡವರ ಬಗ್ಗೆ ಚಕಾರ ಎತ್ತದೆ ಮಾಯಾವಾಗುತ್ತಿದ್ದರು. ಆದರೆ ಬಡ ತಾಯಿಯ ಮಗ ಪ್ರಧಾನಮಂತ್ರಿಯಾದ ಮೇಲೆ ಬಡವರ ಬಗ್ಗೆ ಮಾತನಾಡಲು ಹೆದರುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಕಾಂಗ್ರೆಸ್ ಈಗ ಮೇಲಿಂದ ಕೆಳಗೆ ದೇಶಿ-ವಿದೇಶಿ, ಕೆಂಪು ಖಾರ, ಹಳದಿ ಖಾರ ಯಾವುದು ಅಂತ ಗೊತ್ತಿಲ್ಲ. ಆಲೂದಿಂದ ಚಿನ್ನ ತಯಾರಿಸುವ ಜನ ಈಗ ಹಗಲು ರಾತ್ರಿಯನ್ನದೆ ರೈತರ ಮಂತ್ರ ಜಪಿಸುತ್ತಿದ್ದಾರೆ ಎಂದು ಗುಡುಗಿದ ಅವರು ಕಡಲೆ ಕಾಳು ಗಿಡದ ಮೇಲೆ ಬೆಳೆಯುತ್ತದೆಯೋ ನೆಲದಲ್ಲಿ ಬೆಳೆಯುತ್ತದೆಯೋ ಗೊತ್ತಿಲ್ಲ ಅಂತಹವರು ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿ, ರಾಜಕೀಯ ಮಾಡುತ್ತಿದ್ದಾರೆ ಎಂದು ಕುಟುಕಿದರು. ಸ್ವಾತಂತ್ರ್ಯ ಬಂದು ಇಷ್ಟ ವರ್ಷ ಕಳೆದರೂ ರೈತರಿಗಾಗಿ ಎನ್ ಮಾಡಿದ್ದೀರಿ. ಸಾಲದ ಸುಳಿಯಲ್ಲಿ ಅವರು ಏಕೆ ಸಿಲುಕಿದ್ದಾರೆ. ಅವರು ಏಕೆ ಆತಹತ್ಯೆ ಮಾಡಿಕೊಳ್ಳುತಿತದ್ದಾರೆ ಎಂದು ಪ್ರಶ್ನಿಸಿದ ಅವರು ನೀವು ಮಾಡಿದ ಪಾಪ ತೊಳೆಯುವ ಪರಿಸ್ಥಿತಿ ನಮಗೆ ಬಂದಿದೆ. ನಾವು ಅಧಿಕಾರಕ್ಕೆ ಬಂದು ಇನ್ನೂ 50 ತಿಂಗಳು ಆಗಿಲ್ಲ. ನೀವು 50 -60ವರ್ಷಗಳ ಕಾಲ ಆಳಿದ್ದೀರಿ. ಕೇವಲ ರೈತರ ಹೊಲಗಳಿಗೆ ನೀರು ಹರಿಸಿದ್ದರೂ ಅವರು ಚಿನ್ನ ತಯಾರಿಸಿಕೊಡುತ್ತಿದ್ದರು ಎಂದು ತಿರುಗೇಟು ನೀಡಿದರು.

ಸುದೀಪ ಪ್ರಚಾರಕ್ಕೆ ಬರ್ತಾರೆ ಸಿಎಂ ವಿಶ್ವಾಸ

ಶಿವಮೊಗ್ಗ : ನಟ ಕಿಚ್ಚ ಸುದೀಪ ಅವರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮನೆಗೆ ಕ್ರಿಕೆಟ್ ಬಗ್ಗೆ ಆಹ್ವಾನ ನೀಡಲು ಬಂದಾಗ ಅವರು ಪ್ರಚಾರಕ್ಕೆ ಆಗಮಿಸುವ ಭರವಸೆ ನೀಡಿದ್ದಾರೆ. ಈಗಾಗಲೇ ನಟ ದರ್ಶನ ಅವರು ಕಾಂಗ್ರೆಸ್ ಪರ ಪ್ರಚಾರದಲ್ಲಿ ತೊಡಗಿದಿದ್ದಾರೆ. ಅದೇ ರೀತಿ ನಟ ಸುದೀಪ ಅವರು ಕೂಡ ಬಾದಾಮಿ ಕ್ಷೇತ್ರದಲ್ಲಿ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯ ಪರ ನಟ ಸುದೀಪ್ ಪ್ರಚಾರ ಅನುಮಾನ ?

ಯಾದಗಿರಿ : ನಟ ಕಿಚ್ಚ ಸುದೀಪ್ ಅವರು ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧಿಸಿರುವ ಚಾಮುಂಡೇಶ್ವರಿ ಹಾಗೂ ಬಾದಾಮಿ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುವುದು ಇನ್ನು ನಿರ್ಧಾರವಾಗಿಲ್ಲ. ಹಾಗಂತ ಸ್ವತಃ ನಟ ಸುದೀಪ ಅವರು ಯಾದಗಿರಿಯಲ್ಲಿ ಸುದ್ದಿಗಾರರಿಗೆ ಸ್ಪಷ್ಟ ಪಡಿಸಿದ್ದಾರೆ. ಕೆಲವು ಚಾನಲ್‍ಗಳು ಅವರಾಗಿಯೇ ನಾನು ಸಿಎಂ ಪರ ಪ್ರಚಾರ ಮಾಡುತ್ತೇನೆ ಎಂದು ಊಹಿಸಿ ಪ್ರಚಾರ ಮಾಡಿದ್ದಾರೆ. ಆದರೆ ನಾನು ನನ್ನ ಬಾಯಾರೆ ಎಲ್ಲಿಯೂ ಪ್ರಚಾರಕ್ಕೆ ಹೋಗುತ್ತೇನ ಎಂದು ಹೇಳಿಲ್ಲವೆಂದುಸ್ಪಷ್ಟಪಡಿಸಿದರು. ಬಾದಾಮಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಾಲ್ಮೀಕಿ ಸಮಾಜದ ಮುಖಂಡರು ಆಗಿರುವ ಬಿ. ಶ್ರೀರಾಮುಲು ಅವರು ನಟ ಸುದೀಪ್ ಅವರು ಯಾವುದೇ ಕಾರಣಕ್ಕೂ ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಆಗಮಿಸಬಾರದು ಎಂದು ಮನವಿ ಮಾಡಿರುವುದು ಇಲ್ಲಿ ಸ್ಮರಿಸಬಹುದಾಗಿದೆ.

ಚಾಮುಂಡೇಶ್ವರಿಯಲ್ಲಿ ಹಿಂದಿ ನಟ ರಾಜ್ ಬಬ್ಬರ್ ಪ್ರಚಾರ

ಚಾಮುಂಡೇಶ್ವರಿ : ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಟೆಯ ಕಣವಾದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಿಂದಿ ಚಲನಚಿತ್ರದ ರಂಗದ ಹಿರಿಯ ನಟ ಹಾಗೂ ರಾಜ್ಯಸಭಾ ಸದಸ್ಯ ರಾಜ್ ಬಬ್ಬರ್ ಕೂಡ ಬಿರುಸಿನ ಪ್ರಚಾರ ನಡೆಸಿದರು. ಚಾಮುಂಡೇಶ್ವರಿ ಕ್ಷೇತ್ರದ ವಿವಿಧ ಹಳ್ಳಿ ಹಳ್ಳಿಗಳಲ್ಲಿ ರೋಡ್ ಶೋ ನಡೆಸಿದರು. ಸಿಎಂ ಸಿದ್ದರಾಮಯ್ಯ ಅವರ ಪರ ಮತಯಾಚನೆ ಮಾಡಿದ ರಾಜ್ ಬಬ್ಬರ್ ಅವರು ಸಿಎಂ ಸಿದ್ದರಾಮಯ್ಯ ಅವರು ಕೇವಲ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಿಮಿತಗೊಳಿಸದೆ ಅವರನ್ನು ಮತ್ತೋಮ್ಮೇ ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು. ನಟ ರಾಜ್ ಬಬ್ಬರ್ ಗೆ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಸೇರಿದಂತೆ ಅನೇಕ ನಟ, ನಟಿಯರು ಸಾಥ್ ನೀಡಿದರು.

ಕಾಂಗ್ರೆಸ್ ಪರ ನಟ ದರ್ಶನ ಪ್ರಚಾರಕ್ಕೆ ಗ್ರಾಮಸ್ಥರ ಅಡ್ಡಿ

ಮೈಸೂರ : ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಆಗಮಿಸಿದ್ದ ನಟ ಚಾಲೆಂಜಿಗ್ ಸ್ಟಾರ್ ದರ್ಶನಗೆ ನಾಗನಹಳ್ಳಿ ಗ್ರಾಮಸ್ಥರು ಹಾಗೂ ಜೆಡಿಎಸ್ ಬೆಂಬಲಿಗರು ಬಿಸಿ ತಾಕಿಸಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಕೆಲ ಕಾಲ ಬಿಗುವಿನ ವಾತವರಣ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಹರಸಾಹಸ ನಡೆಸಿದರು. ಆದರೂ ಕ್ಯಾರೆ ಎನ್ನದ ಗ್ರಾಮಸ್ಥರು ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವ್ಯಕ್ತಪಡಿಸಿದರು. ಕಳೆದ ಹನ್ನೇರಡು ವರ್ಷಗಳಿಂದ ಸಿಎಂ ಸಿದ್ದರಾಮಯ್ಯ ಅವರು ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಅಲ್ಲದೆ, ನಟ ಅಂಬರೀಷ್ ಅವರನ್ನು ಸಚಿವ ಸ್ಥಾನದಿಂದ ಇಳಿಸಿದ್ದಾರೆ. ಹೀಗಾಗಿ ಅವರ ಪರ ಯಾವುದೇ ಕಾರಣಕ್ಕೂ ಪ್ರಚಾರ ಮಾಡಬಾರದು ಎಂದು ಒತ್ತಾಯಿಸಿದರು. ಗ್ರಾಮಸ್ಥರ ವಿರೋಧದ ಮಧ್ಯೆ ರೋಡ್ ಶೋ ನಡೆಸಿದ ನಟ ದರ್ಶನ, ಮೇ 12ರಂದು ಸಿಎಂ ಸಿದ್ದರಾಮಯ್ಯ ಅವರನ್ನು ಬಹುಮತದಿಂದ ಆರಿಸಿ ಮತ್ತೇ ವಿಧಾನಸೌಧಕ್ಕೆ ಕಳುಹಿಸಬೇಕು ಎಂದು ಮನವಿ ಮಾಡಿದರು.

ಜಯನಗರ ವಿಧಾನ ಸಭಾ ಚುನಾವಣೆ ಮುಂದೂಡಿಕೆ

ಬೆಂಗಳೂರು : ಬೆಂಗಳೂರಿನ ಬಿಜೆಪಿಯ ಜಯ ನಗರ ಶಾಸಕ ವಿಜಯಕುಮಾರ್ ಹಠಾತ್ ನಿಧನದಿಂದಾಗಿ ಜಯನಗರ ವಿಧಾನ ಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡಿ ಚುನಾವಣಾಧೀಕಾರಿ ಆದೇಶ ಹೊರಡಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿದ್ದ ವಿಜಯಕುಮಾರ ಅವರು ರಾಷ್ಟ್ರೀಯ ಪಕ್ಷವಾದ ಬಿಜೆಪಿಅಭ್ಯರ್ಥಿಯಾಗಿರುವುದರಿಂದ ಅವರ ಅಕಾಲಿಕ ನಿಧನದಿಂದಾಗಿ ಈ ಚುನಾವಣೆಯನ್ನು ಮುಂದೂಡಲಾಗಿದೆ. ದಿನಾಂಕವನ್ನು ಆನಂತರ ನಿಗದಿಗೊಳಿಸಲಾಗುವುದು. ಅಲ್ಲಿಯವರೆಗೆ ಜಯನಗರ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ದೂರು ದಾಖಲು

ಧಾರವಾಡ : ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ ವಿರುದ್ಧ ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೆಡಿಯು ಅಭ್ಯರ್ಥಿ ಜಾವೀದ್ ಬೆಳಗಾಂವಕರ್ ಅವರು ತಮಗೆ ಜೀವ ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ, ನಾಮಪತ್ರ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದ್ದಾರೆ. ಇದರಿಂದಾಗಿ ನಾನು ಜೀವಭಯದಿಂದ ಗೋವಾಕ್ಕೆ ಓಡಿ ಹೋಗಿದ್ದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಮಗೆ ಜೀವರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಉಪನಗರ ಪೊಲೀಸ್ ಠಾಣೆ ಪೊಲೀಸರು ತನಿಖೆ ಕೈ ಗೊಂಡಿದ್ದಾರೆ.

ಸಚಿವ ಸಂತೋಷ್ ಲಾಡ್ ಗೆ ಖಾಲಿ ಕೊಡ ತೋರಿಸಿದ ಮಹಿಳೆಯರು

ಧಾರವಾಡ: ಸಚಿವ ಸಂತೋಷ್ ಲಾಡ್ ಪ್ರಚಾರದ ವೇಳೆ ಖಾಲಿ ಕೊಡ ಪ್ರದರ್ಶಿಸಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಖಾಲಿ ಕೊಡಗಳ ಸಮೇತ ಪ್ರಚಾರದ ವಾಹನಕ್ಕೆ ಮುತ್ತಿಗೆ ಹಾಕಿ ಅಸಮಾಧಾನ ಹೊರ ಹಾಕಿದರು. ಲಾಡ್ ಪ್ರಚಾರದ ವಾಹನಕ್ಕೆ ಮುತ್ತಿಗೆ ಹಾಕಿದ ಮಹಿಳೆಯರು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸದಕ್ಕೆ ವಿರೋಧ ವ್ಯಕ್ತಪಡಿಸಿದರು. ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದ್ರೆ ಹೇಗೆ ಎಂದು ತರಾಟೆ ತೆಗೆದುಕೊಂಡ ಮಹಿಳೆಯರು ಶಾಸಕ ಸಂತೋಷ ಲಾಡ್ ಗೆ ಪ್ರಶ್ನೆಗಳ ಸುರಿಮಳೆ ಹರಿಸಿದರು. ಮಹಿಳೆಯರು ಮುತ್ತಿಗೆ ಹಾಕಿದ ಸಂದರ್ಭದಲ್ಲಿ ತಳ್ಳಾಟ ನೂಕಾಟ ನಡೆಯಿತು. ತಮ್ಮನ್ನು ಗುರಿಯಾಗಿಸಿ ತಳ್ಳಾಟ ನೂಕಾಟ ಮಾಡಲಾಗಿದೆ ಎಂದು ಮಹಿಳೆಯರು ಕಿಡಿ ಕಾರಿದರು. ಕಾಂಗ್ರೆಸ್ ಕಾರ್ಯಕರ್ತರು ತಳ್ಳಾಟ ಮಾಡಿದ್ದಾರೆಂದು ಆರೋಪ ಮಾಡಿದ ಮಹಿಳೆಯರು ಕಲಘಟಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅಲ್ಲದೆ, ತಮಗೆ ರಕ್ಷಣೆ ಒದಗಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಬಸವಣ್ಣನವರ ತತ್ವ ಪಾಲನೆ ಮಾಡದ ಮೋದಿ

ಗದಗ : ಪ್ರಧಾನಿ ನರೇಂದ್ರ ಮೋದಿ ಬಸವಣ್ಣನವರ ಮೂರ್ತಿಗೆ ಮಾಲೆ ಹಾಕಿ ಕೈಮುಗಿಯುತ್ತಾರೆ. ಆದರೆ ಬಸವಣ್ಣನವರ ತತ್ವಗಳನ್ನು ಮಾತ್ರ ಪಾಲನೆ ಮಾಡುತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಅವರು ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಕಾಂಗ್ರೆಸ್ ಪರ ಚುನಾವಣೆ ಪ್ರಚಾರಾರ್ಥವಾಗಿ ಸಾರ್ವಜನಿಕರನ್ನ ಉದ್ದೇಶಿಸಿ ಮಾತನಾಡಿದರು. ಬಸವಣ್ಣನವರು ನುಡಿದಂತೆ ನಡೆಯಬೇಕು ಸುಳ್ಳು ಹೇಳಬಾರದು ಎಂದು ಮಹತ್ವದ ಮಾತು ಹೇಳಿದ್ದರು. ಈ ಮಾತುಗಳು ಕರ್ನಾಟಕದ ಜನತೆಯ ರಕ್ತದ ಕಣಕಣದಲ್ಲಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಇಲ್ಲ ಎಂದು ರಾಹುಲ್ ಟೀಕಿಸಿದರು. ಇಡೀ ಭಾರತ ಕರ್ನಾಟಕವನ್ನು ಮಾರ್ಗದರ್ಶಿಯಾಗಿ ನೋಡುತ್ತದೆ ಎಂದು ಹೇಳಿದ ರಾಹುಲ್ , ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಭ್ರಷ್ಟಾಚಾರದಲ್ಲಿ ಜೈಲು ಕಂಡುಬಂದಿರುವ ಯಡಿಯೂರಪ್ಪನವರನ್ನು ಸಿಎಂ ಅಭ್ಯರ್ಥಿಯಾಗಿ ಲೂಟಿ ಹೊಡೆದ ರೆಡ್ಡಿ ಸಹೋದರರಿಗೆ ಟೀಕೆಟ್ ನೀಡಿದ್ದು ಯಾಕೆ ಎಂದು ಕರ್ನಾಟಕದ ಜನಕ್ಕೆ ಮೋದಿ ಉತ್ತರಿಸಬೇಕು ಎಂದರು.

ಸಿಡಿಲು ಬಡಿದು ಬಾಲಕ ಸಾವು

ಧಾರವಾಡ: ಸಿಡಿಲು ಬಡಿದು ಬಾಲಕ ಸಾವನ್ನಪ್ಪಿದ್ದ ಘಟನೆ ಧಾರವಾಡ ತಾಲೂಕಿನ ಮುಗದ ಗ್ರಾಮದಲ್ಲಿ ನಡೆದಿದೆ. ಹೊಲದಲ್ಲಿ ಆಕಳು ಮೇಯಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪ್ರದೀಪ್ ಬಸಪ್ಪ ನವಲಗುಂದ (14) ಮೃತ ಬಾಲಕನಾಗಿದ್ದಾನೆ. ಸಿಡಿಲಿನ ಹೊಡೆತಕ್ಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಲು ಜಾರಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಧಾರವಾಡ : ಹೆಲಿಕಾಪ್ಟರ್ ನಿಂದ ಇಳಿಯುವಾಗ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಾಲು ಜಾರಿದ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ನಡೆದಿದೆ. ನವಲಗುಂದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ ಸ್ಮೃತಿ ಇರಾನಿ ಅವರು ಹೆಲಿಕಾಪ್ಟರ್ ಏರುವಾಗ ಈ ಅವಘಡ ನಡೆದಿದೆ. ತಕ್ಷಣವೇ ನೆರವಿಗೆ ಧಾವಿಸಿದ ಪೈಲಟ್ ಅವರನ್ನು ಬೀಳದಂತೆ ತಡೆಹಿಡಿದರು. ಬಳಿಕ ಸುಧಾರಿಸಿಕೊಂಡ ಸ್ಮೃತಿ ಇರಾನಿ ತೆರಳಿದರು.

ಶಾಸಕ ಕೋನರಡ್ಡಿ ಗೆಲುವಿಗೆ ಪಣತೊಟ್ಟ ಯುವ ಸಮೂಹ

ಹುಬ್ಬಳ್ಳಿ : ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹುಬ್ಬಳ್ಳಿ,ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನ 72 ಹಳ್ಳಿಗಳ ಮತದಾರ ಬಾಂಧವರು ಜನ ಸಾಮಾನ್ಯರ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಆಗಿರುವ ಎನ್.ಹೆಚ್. ಕೋನರಡ್ಡಿ ಅವರಿಗೆ ಎಲ್ಲಿಲ್ಲದ ಭಾವನಾತ್ಮಕ ಹಾಗೂ ಪ್ರೀತಿ ಪೂರ್ವಕ ಸ್ವಾಗತ ಕೋರುತ್ತಿದ್ದಾರೆ. ಈ ಬಾರಿ ಅವರನ್ನು ಗೆಲ್ಲಿಸಲೇ ಬೇಕು ಎಂದು ಪಣತೊಟ್ಟಿರುವ ಯುವ ಸಮೂಹವಂತೂ ಟೊಂಕ ಕಟ್ಟಿ ನಿಂತಿದೆ. ಪ್ರತಿ ಹಳ್ಳಿ, ಗಲ್ಲಿಯಲ್ಲೂ ಕೋನರಡ್ಡಿ ಅವರನ್ನು ಇವ ನಮ್ಮವ, ಇವ ನಮ್ಮವ ಎನ್ನುವಂತೆ ಇಡೀ ನವಲಗುಂದ ಕ್ಷೇತ್ರವನ್ನು ನಾಡು ಹೆಮ್ಮೆಯಿಂದ ಕೊಂಡಾಡುವ ರೀತಿಯಲ್ಲಿ ಪರಿಚಯಿಸಿದ ಹುಟ್ಟು ಹೋರಾಟಗಾರ, ದಣಿವರಿಯದೆ ಸದಾ ಕಾಲ ಮುಗಳ್ನಗೆಯಿಂದಲೇ ಎಲ್ಲರನ್ನು ಬರಮಾಡಿಕೊಂಡು ಅಪ್ಪಿಕೊಳ್ಳುವ ಧೀಮಂತ ಜನನಾಯಕ ಎಂದು ಅಪ್ಪಿಕೊಳ್ಳುತ್ತಿದ್ದಾರೆ. ಹೌದು ಇಂತಹ ಅದ್ಧೂರಿ, ಮನದಾಳದ ಸ್ವಾಗತ ಶುಕ್ರವಾರ ನವಲಗುಂದ ತಾಲೂಕಿನ ಶಿರೂರ, ಗುಮ್ಮಗೋಳ, ಆಯಟ್ಟಿ ಗ್ರಾಮಗಳಲ್ಲಿ ಶಾಸಕ ಎನ್,ಹೆಚ್, ಕೋನರಡ್ಡಿ ಅವರಿಗೆ ದೊರಕಿತು. ಪ್ರತಿ ಮನೆಯಲ್ಲೂ ಕೋನರಡ್ಡಿ ಅರೇ ನೀವು ನಮ್ಮವರು, ನಿಮ್ಮಂತಹ ಸರಳ, ಸಜ್ಜನಿಕೆಯ ಜನನಾಯಕ ಸಿಗುವುದೇ ಅಪರೂಪ ಎಂದು ಮನಸಾರೆ ಹೊಗಳಿದರು. ಅಲ್ಲದೆ, ನಮ್ಮ ಆಶೀರ್ವಾದ, ಸದಾಕಾಲ ನಿಮ್ಮ ಮೇಲಿರಲಿದೆ. ನಮ್ಮೂರು ಅಭಿವೃದ್ಧಿ ಪಡಿಸಿದ ಅಭಿವೃದ್ಧಿಯ ಹರಿಕಾರ ಎಂಬ ಸಂತಸ ನಮಗಿದೆ ಎಂದು ಅಭೂತಪೂರ್ವ ಬೆಂಬಲ ನೀಡಿದರು. ಅದೇ ರೀತಿ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಕೂಡ ಪ್ರತಿ ಹಳ್ಳಿಯ ಜನರನ್ನು, ಜಾತಿ ಭೇದ ಮರೆತು ನನ್ನ ಹಳ್ಳಿ ಹಾಗೂ ನಮ್ಮವರು ಎಂದು ಗೌರವ ನೀಡುವ ಮೂಲಕ ಯುವಕರು, ಹಿರಿಯರು ಎಂದು ಎಲ್ಲರಿಗೂ ನಮಸ್ಕರಿಸುತ್ತಾ, ಜನಸಾಮಾನ್ಯರ ಜತೆಗೆ ಜನಸಾಮಾನ್ಯರ ಹಾಗೆ ಬೆರತು, ಜನ ಸೇವಕರೆಂದರೆ ಹೀಗಿರಬೇಕು ಎಂದು ಪ್ರತಿಯೊಬ್ಬರಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಲ್ಲಿಕಾರ್ಜುನ ಕಾಲವಾಡ ಅವರು ಮನಸಾರೆ ಕೊಂಡಾಡಿದರು. ಅವರಿಗೆ ಜೆಡಿಎಸನ ವಿವಿಧ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರ ಪಡೆ, ಅಭಿಮಾನಿಗಳು, ಯುವಕರಂತೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಣೆಯಿಂದ ಆಗಮಿಸಿ ವ್ಯಾಪಕ ಬೆಂಬಲ ನೀಡುತ್ತಿದ್ದಾರೆ. ಪ್ರತಿಹಳ್ಳಿಯಲ್ಲೂ ಪಾದಯಾತ್ರೆಗೆ ಅಪಾರ ಜನಸಾಗರವೇ ಹರಿದುಬರುತ್ತಿದೆ. ಅದರಲ್ಲೂ ವಿಶೇಷವಾಗಿ ನೂರಾರು ಮಹಿಳೆಯರು ಮುಂಚೂಣಿಯಲ್ಲಿ ನಿಂತು ಶಾಸಕ ಎನ್.ಹೆಚ್, ಕೋನರಡ್ಡಿ ಅವರ ಪರ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹಿರಿಯ ವಕೀಲರಾದ ಶಾಂತಾ ಚಿಕ್ಕನರಗುಂದ ಹಾಗೂ ಅನ್ನಪೂರ್ಣ ದೊಡ್ಡಮನಿ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಎನ್.ಹೆಚ್. ಕೋನರಡ್ಡಿ ಅವರ ಬಿರುಸಿನ ಪ್ರಚಾರಕ್ಕೆ ಜೆಡಿಎಸ್ ಮುಖಂಡರಾದ ವೀರಣ್ಣ ನೀರಲಗಿ, ಎಂ.ಎಸ್. ರೋಣದ, ಮಲ್ಲು ಹೊಸುರ, ಮಂಜು ಬಾಳಿ, ಮೌಲಾ ಗುಮ್ಮಗೋಳ, ಹನಮಂತಗೌಡ ಪಾಟೀಲ, ಬಾಪುಗೌಡ ಪಾಟೀಲ, ಮನೋಹರ ಅರ್ಕಸಾಲಿ, ಶಿವಲಿಂಗಯ್ಯ ಚಿಕ್ಕಮಠ, ಮಂಜು ಹುಲಮನಿ, ದೀಲಿಪ ಸಾಬ ನಧಾಪ್, ರಾಮನಗೌಡ ಪಾಟೀಲ, ಉಮೇಶ ಕಡೆಮನಿ, ಅಶೋಕ ಕಡೆಮನಿ ಸೇರಿದಂತೆ ಶಿರೂರ, ಗುಮ್ಮಗೋಳ, ಆಯಟ್ಟಿ ಗ್ರಾಮಗಳ ನೂರಾರು ಜನರು ಸಾಥ್ ನೀಡಿದರು.

ಶಾಸಕ ಅರವಿಂದ ಬೆಲ್ಲದರಿಂದ ತಿಲಕ ಅಭಿಯಾನಕ್ಕೆ ಚಾಲನೆ

ಧಾರವಾಡ : ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರ-74ರಲ್ಲಿ ಶುಕ್ರವಾರ ಲವ್ ಜಿಹಾದ್ ವಿರುದ್ಧ ತಿಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಇದರಿಂದಾಗಿ ಶಾಸಕರ ಧಾರವಾಡದ ನಿವಾಸ ಇಂದು ಅಕ್ಷರಶಃ ಕೇಸರಿ ಮಯವಾಗಿ ಕಂಗೊಳಿಸಿತು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಯುವಕರು ಈ ಅಭಿಯಾನದಲ್ಲಿ ಪಾಲ್ಗೊಂಡು ಮತದಾನ ಜಾಗೃತಿ ಮೂಡಿಸುವ, ಪ್ರತಿಜ್ಞೆಗೈದರು ಧಾರವಾಡ ಪಶ್ಚಿಮ ಕ್ಷೇತ್ರದ ಯುವಮೋರ್ಚಾ ಹಮ್ಮಿಕೊಂಡ ಈ ಅಭಿಯಾನಕ್ಕೆ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ತಿಲಕ ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ನಮ್ಮ ಪರಂಪರೆ ಸಂಪ್ರದಾಯವನ್ನು ಉಳಿಸಿಕೊಂಡುವುದು ಹೋಗುವ ಜವಾಬ್ದಾರಿ ನಮ್ಮ ಮೇಲೆ ಇದೆ. ಕ್ಷೇತ್ರದಲ್ಲಿ ಇರುವ ಯುವ ಜನಾಂಗಕ್ಕೆ ಸಾಮಾಜಿಕ ಜವಾಬ್ದಾರಿ ಹೆಚ್ಚಿದ್ದು, ಮತದಾನದ ಮಹತ್ವ ಕುರಿತು ಅರಿವು ಮೂಡಿಸುವ ಸಲುವಾಗಿ ಹಮ್ಮಿಕೊಂಡ ವಿನೂತನ ಕಾರ್ಯಕ್ರಮ ಇದಾಗಿದೆ ಎಂದರು. ಈ ಅಭಿಯಾನದಲ್ಲಿ ಅರುಣ್ ಜೋಶಿ, ಮಂಡಳದ ಅಧ್ಯಕ್ಷರಾದ ಯಲಪ್ಪ ಅರವಾಳದ, ಚುನಾವಣೆ ಸಂಚಾಲಕ ಉದಯ ಲಾಡ್, ವಿಜಯಾನಂದಶೆಟ್ಟಿ, ಮಲ್ಲಿಕಾರ್ಜನ್ ಹೂರಕೇರಿ ಯುವಮೋರ್ಚಾದ ಜಿಲ್ಲಾ ಅಧ್ಯಕ್ಷ ಶರಣುಅಂಗಡಿ, ಮಂಡಳದ ಯುವಮೋರ್ಚಾದ ಅಧ್ಯಕ್ಷ ಸಂತೋಷ ಸೋಗಿ ಪ್ರಧಾನ ಕಾರ್ಯದರ್ಶಿ ವಿಜಯ ಸಾಬಳೆ ಜಿಲ್ಲಾಉಪಾಧ್ಯಕ್ಷ ಅಮಿತ್ ಪಾಟೀಲ, ವಿವೇಕಾ ಬಂಡಿ, ಪವನ್ ಥಿಟ್ಟೆ ಹಾಗೂ ಕ್ಷೇತ್ರದ ಮಾಧ್ಯಮ ವಕ್ತಾರ ದೇವರಾಜ ಶಹಾಪುರ ಹಾಗೂ ಪಕ್ಷದ ಮುಖಂಡರು ಭಾಗ ವಹಿಸಿದ್ದರು.

ಸಾವಿನಲ್ಲೂ ಸಾರ್ಥಕತೆ ಮೆರೆದ ಜಯನಗರ ಶಾಸಕ ವಿಜಯ್ ಕುಮಾರ್

ಬೆಂಗಳೂರು : ಬೆಂಗಳೂರಿನ ಬಿಜೆಪಿಯ ಜಯ ನಗರ ಶಾಸಕ ವಿಜಯಕುಮಾರ್ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ವಿಜಯ್ ಕುಮಾರ್ ಅವರು ತಮ್ಮ ಕಣ್ಣುಗಳ ದಾನ ಮಾಡಿದ್ದು, ಅವರ ಆಸೆಯಂತೆ ಶ್ರದ್ಧಾ ಐ ಕೇರ್ ಗೆ ನೇತ್ರದಾನ ಮಾಡಲಾಯಿತು. ಆ ಮೂಲಕ ಸಾವಿನಲ್ಲೂ ಇತರರಿಗೆ ಶಾಸಕ ವಿಜಯಕುಮಾರ್ ಮಾದರಿಯಾಗಿದ್ದಾರೆ. ಇಬ್ಬರು ಅಂಧರ ಬಾಳಿಗೆ ಬೆಳಕಾಗಲಿದ್ದಾರೆ. ವಿಜಯಕುಮಾರ ಸಾವಿಗೆ ಗೃಹ ಸಚಿವ ರಾಮಲಿಂಗ ರೆಡ್ಡಿ ಸಂತಾಪ ಸೂಚಿಸಿದ್ದು, ಬಹು ಕಾಲದ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಕೆಲ ದಿನಗಳ ಹಿಂದೆ ಅಷ್ಟೇ ಅವರ ಜೊತೆ ಮಾತನಾಡಿದ್ದೆ ನಾವಿಬ್ಬರು ಬೇರೆ ಬೇರೆ ಪಕ್ಷ ಆದ್ರು, ಯಾವತ್ತೂ ವೈಯಕ್ತಿಕ ನಿಂದನೆ ಮಾಡುತ್ತಿರಲಿಲ್ಲ. ಪಕ್ಷದ ಕುರಿತಾಗಿ ಟೀಕೆ ಮಾಡುತ್ತಿದ್ವಿ ಹೊರತು ವಯಕ್ತಿಕ ಟೀಕೆ ಮಾಡುತ್ತಿರಲಿಲ್ಲ ಹೀಗಾಗಿ ಒಬ್ಬ ಒಳ್ಳೆಯ ವ್ಯಕ್ತಿಯನ್ನ ಕಳೆದುಕೊಂಡಿದ್ದೇವೆ ಎಂದು ಕಂಬನಿ ಮಿಡಿದಿದ್ದಾರೆ.

ಭಜನೆ ಮೂಲಕ ವಿಭಿನ್ನ ಪ್ರಚಾರದಲ್ಲಿ ತೊಡಗಿರುವ ಶಾಸಕ ಕೋನರಡ್ಡಿ ಅಭಿಮಾನಿಗಳು

ಹುಬ್ಬಳ್ಳಿ : ನವಲಗುಂದ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಜೆಡಿಎಸ ಅಭ್ಯರ್ಥಿಯಾಗಿರುವ ಶಾಸಕ ಎನ್.ಹೆಚ್. ಕೋನರಡ್ಡಿ ಅವರ ಗೆಲುವಿಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಜೆಡಿಎಸ್ ಅಭಿಮಾನಿಗಳು, ಕಾರ್ಯಕರ್ತರ ತಂಡ ಅವಿರತವಾಗಿ ಶ್ರಮಿಸುತ್ತಿದೆ. ಇದಕ್ಕಾಗಿಯೇ ಭಜನಾ ತಂಡವೊಂದು ಕ್ಷೇತ್ರದೆಲ್ಲಡೆ ಓಡಾಡಿ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಹನಸಿ ಗ್ರಾಮದ ಹನ್ನೋಂದು ಯುವಕರ ತಂಡ ಗುರುನಾಥ ಮಾಸ್ತರ್ ಹಾಗೂ ಅವರ ಸಾರಥ್ಯದಲ್ಲಿ ಭಜನೆ ಹಾಡುಗಳ ಮೂಲಕ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈಗಾಗಲೇ ನವಲಗುಂದ ವಿಧಾನ ಸಭಾ ಕ್ಷೇತ್ರದ ಜಾವೂರ, ಹೆಬ್ಬಾಳ, ಅಳಗವಾಡಿ, ನವಲಗುಂದ, ಗುಮ್ಮಗೋಳ, ಬ್ಯಾಲಾಳ, ಶಿರೂರ, ಆಯಟ್ಟಿ ಸೇರಿದಂತೆ ವಿವಿಧಡೆ ಸಂಚರಿಸಿ, ಹಾಡುಗಳನ್ನು ಕಟ್ಟು ಹಾಡುವ ಮೂಲಕ ಜನಮನ ಸೊರೆಗೊಳ್ಳುತ್ತಿದೆ. ಜೆಡಿಎಸ್ ಯುವ ಮುಖಂಡ ಮಂಜು ಜಕಾತಿ ಅವರ ಸಾರಥ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಭಜನಾ ತಂಡ ಡಿಫರೆಂಟ್ ಪ್ರಚಾರ ಮಾಡುವ ಮೂಲಕ ಜನರಿಗೆ ಹತ್ತಿರವಾಗಿ ಕಾರ್ಯನಿರ್ವಹಿಸುತ್ತಿದೆ. ಅವರ ಹಾಡುಗಳ ಕೆಲ ತುಣುಕುಗಳು ಈ ರೀತಿ ಇವೆ. ಬೇಕು ಬೇಕು ಕಳಸಾ ಬಂಡೂರಿ ನೀರ, ನೀರ ಕೊಡೊದಿಲ್ಲ ಅಂತಾದರೀ ಗೋವಾ ಸರಕಾರ, ಮಳೆ ಇಲ್ಲಿಲ್ಲ, ಬೆಳೆ ಇಲ್ಲಿಲ್ಲ ದುಡಿಯುವ ರೈತರಿಗೆ ನೆಲೆ ಇಲ್ಲ ಕಡಲೆ ರೇಟ್ ಇಲ್ಲ, ರೈತರಿಗೆಖುಷಿ ಇಲ್ಲ. ನವಲಗುಂದ ನರಗುಂದ ರೈತರ ಜೀವಕ್ಕೆ ಸುಖವಿಲ್ಲ , ಮಣ್ಣಿನ ಮಗ ಹೌದ್ರಿ ಕುಮಾರಣ್ಣ ರೈತರ ಸಾಲಮನ್ನಾ ಮಾಡ್ತಾನ, ರೈತರನ್ನ ಎತ್ತಿ ಹಿಡಿತ್ತಾನ, ಬಡವರಿಗಾಗಿ ಹಗಲು ಇರುಳು ದುಡಿತ್ತಾನ, ಕೋನರಡ್ಡಿ ಸಾಹೇಬರಂಗ ಯಾರಿಲ್ಕ, ರೈತರಿಗಾಗಿ ಹಗಲು ಇರುಳು ನಿತ್ಯ ದುಡಿಯುತ್ತಾರೆ. ಬಡವರ ಬಂಧು ಇವರ ನಮ್ನ ಕೋನರಡ್ಡಿ ಸಾಹೇಬರ. ಶಿರಕೋಳ, ಹನಸಿ ಮೊರಬ ಗ್ರಾಮಕ್ಕೆ ಅಭಿವೃದ್ಧಿ ಮಾಡ್ಯಾರ, ನೀರಾವರಿ ಯೋಜನೆ, ಕುಡಿಯುವ ನೀರು ತಂದಾರ ನಮ್ಮ ನವಲಗುಂದ ವಿಧಾನ ಸಭಾ ಕ್ಷೇತ್ರದ ಬದಲಾಯಿಸಿರ ಹೀಗೆ ಹಾಡುಗಳ ಪಟ್ಟಿ ಬೆಳೆಯುತ್ತಿದೆ. ಕ್ಷೇತ್ರದ ಯುವ ಮತದಾರ ಮಂಜುನಾಥ ಬ್ಯಾಳಿ ಈಬಗ್ಗೆ ಪ್ರತಿಕ್ರಿಯಿಸಿದ್ದು, ನವಲಗುಂದ ನೆಲ ರೈತ ಬಂಡಾಯದ ಗಂಡು ಮೆಟ್ಟಿನ ನೆಲ, ರೈತರಿಗಾಗಿ ಹಗಲು ರಾತ್ರಿ ಎನ್ನದೆ ದುಡಿಯುತ್ತಿರುವ ನಮ್ಮ ಶಾಸಕ ಎನ್.ಹೆಚ್. ಕೋನರಡ್ಡಿ ಅವರನ್ನು ಇನ್ನೊಮ್ಮೇ ಈ ಕ್ಷೇತ್ರದ ಶಾಸಕರನ್ನಾಗಿ ಮಾಡುವ ಮೂಲಕ ನಮ್ಮ ರೈತರ ಬಾಳು ಹಸನು ಮಾಡಲು ಶ್ರಮಿಸಬೇಕಿದೆ ಎಂದು ಹೇಳಿದರು.

ಕುಖ್ಯಾತ ಮಟಕಾ ಬುಕ್ಕಿ ಯುವರಾಜ ಕಲಾಲ ಸೇರಿ ನಾಲ್ವರ ಬಂಧನ

ಧಾರವಾಡ: ಕುಖ್ಯಾತ ಮಟಕಾ ಬುಕ್ಕಿ ಯುವರಾಜ ಕಲಾಲ ಸೇರಿದಂತೆ ಮಟಕಾ ದಂಧೆಯಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಮದಿಹಾಳ ಬಡಾವಣೆಯಲ್ಲಿನ ಗಾಯಕವಾಡ ಕಲ್ಯಾಣ ಮಂಟಪದ ಬಳಿಯ ಮನೆಯಲ್ಲಿ ಕಳೆದ ಕೆಲ ದಿನಗಳಿಂದ ಮಟಕಾ ದಂಧೆಯಲ್ಲಿ ತೊಡಗಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.ದಾಳಿ ವೇಳೆಯಲ್ಲಿ ಕುಖ್ಯಾತ ಮಟಕಾ ಬುಕ್ಕಿ ಯುವರಾಜ ಕಲಾಲ, ಬಸವರಾಜ ಜಂಗಣ್ಣವರ, ರಾಜು ಜನವಾಡಕರ, ಸಂಗಪ್ಪ ಕುಂಬಾರ ಸಿಕ್ಕುಬಿದ್ದಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ರಾಜು ಕಲಾಲ ಮತ್ತು ಸಚಿನ್ ಕಲಾಲ ತಪ್ಪಿಸಿಕೊಂಡಿದ್ದಾರೆ.ಬಂಧಿತರಿಂದ ೩೪೦೦ ನಗದು, ೧ ಬೈಕ್ ಮತ್ತು ೯ ಮೋಬೈಲ್ಗಳನ್ನು ಜಪ್ತಿ ಮಾಡಲಾಗಿದೆ. ಎಸಿಪಿ ಎಂ.ಎನ್.ರುದ್ರಪ್ಪ ಅವರ ಮಾರ್ಗದರ್ಶನದಲ್ಲಿ ಸಿಪಿಐ ಲಕ್ಷ್ಮೀಕಾಂತ ತಳವಾರ ನೇತೃತ್ವದಲ್ಲಿ ಎ.ಎಸ್.ಐ ಆರ್.ಎಚ್.ನದಾಫ್, ಸಿಬ್ಬಂದಿಗಳಾದ ಎಸ್.ಬಿ.ಪಾಟೀಲ, ಆರ್.ಸಿ.ಮುದಕನಗೌಡ್ರ, ಆರ್.ಎಚ್.ಭಿಸೆ, ಬಸವರಾಜ ಕಡಕೋಳ ದಾಳಿ ನಡೆಸಿದ್ದರು. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪತಿ ಪರ ಯಾಚಿಸಿದ ಪ್ರಿಯಾ ದೇಸಾಯಿ

ಧಾರವಾಡ: ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ ೭೧ರಬಿಜೆಪಿ ಅಭ್ಯರ್ಥಿಯಾದ ಅಮೃತ ದೇಸಾಯಿ ಪರ ಅವರ ಪತ್ನಿ ಪ್ರಿಯಾ ದೇಸಾಯಿ ಬಿರುಸಿನ ಪ್ರಚಾರ ನಡೆಸಿದರು. ವಾರ್ಡ ನಂ 7 ರ ಮೂರಸಾವಿರ ಮಠ ಓಣಿ, ಕೊಟ್ಟದ ಓಣಿ, ಮದಿಹಾಳ ಸೇರಿದಂತೆ ಅನೇಕ ಬಡಾವಣೆಯಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಬಳಿಕ ನೆರೆದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಧಾರವಾಡ ಕ್ಷೇತ್ರದಲ್ಲಿ ಕಮಲ ಅರಳುವುದು ಶತಸಿಧ್ಧ. ನಾವು ಎಲ್ಲ ಹಳ್ಳಿ-ಹಳ್ಳಿ ಗಳಿಗೆ ತೆರಳಿ ಮನೆಮನೆಗೆ ಮತಯಾಚನೆ ಮಾಡಿದ್ದೆವೆ. ಜನರಿಂದ ನಮಗೆ ಎಲ್ಲಡೆ ಅತ್ಯುತ್ತಮ ಬೆಂಬಲ ದೊರಕಿದೆ. ಎಲ್ಲಡೆ ಹಿರಿಯರು, ಯುವಕರು ಎಲ್ಲರೂ ಸೇರಿ ತಮ್ಮ ಬೆಂಬಲ ವ್ಯಕ್ತ ಪಡಿಸಿದ್ದು ಈ ಬಾರಿ ೭೧- ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳುವುದು ಶತ ಸಿಧ್ದ ಎಂದರು.

ರಾಜ್ಯದಲ್ಲಿ ಮಹಿಳಾ ಅಧಿಕಾರಿಗಳಿಗೆ ಸುರಕ್ಷತೆ ಇಲ್ಲ

ಹುಬ್ಬಳ್ಳಿ: ರಾಜ್ಯದಲ್ಲಿ ಮಹಿಳಾ ಅಧಿಕಾರಿಗಳಿಗೆ ಸುರಕ್ಷತೆ ಇಲ್ಲ. ಡಿವೈಎಸ್ಪಿ ಅನುಪಮಾ ಶಣೈ, ಐಎಎಸ್ ಅಧಿಕಾರಿ ಶಿಖಾ ಸೇರಿದಂತೆ ಅನೇಕರು ರಾಜ್ಯದ ಕಾಂಗ್ರೆಸ್ ಸರಕಾರದಲ್ಲಿ ನಿತ್ಯ ಕಿರುಕುಳ, ಹಿಂದೆ ಅನುಭವಿಸುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಪಾದಿಸಿದ್ದಾರೆ. ಅವರು ಶುಕ್ರವಾರ ಅಣ್ಣಿಗೇರಿ ಪಟ್ಟಣದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಐಎಎಸ್ ಐಪಿಎಸ್ ಅಧಿಕಾರಿಗಳ ಸ್ಥಿತಿಯೇ ಈ ರೀತಿ ಇರುವಾಗ, ಇನ್ನೂ ಸಾಮಾನ್ಯ ಮಹಿಳೆಯರ ಸ್ಥಿತಿ ಹೇಗಿರಬೇಡ ಎಂದು ಕುಟುಕಿದರು. ಜನರ ಆರ್ಶೀವಾದದಿಂದ ಕಮಲವಿಧಾನಸೌದ ತಲುಪಬೇಕು. ರಾಜ್ಯ ಸರ್ಕಾರ ಲೂಟಿ ಹೊಡೆದು, ಸಿದ್ದರಾಮಯ್ಯ ಸರಕಾರ ಈಗ ಸಿದ ರೂಪಯ್ಯ ಆಗಿದ್ದಾರೆ. ಕೇಂದ್ರ ಸರ್ಕಾರ ನೀಡಿದ ಅನುಧಾನ ಜನರ ಕಲ್ಯಾಣಕ್ಕೆ ಬಳಕೆಯಾಗಿಲ್ಲ. ಜನರ ಹಣ ಸಿದ್ದರಾಮಯ್ಯ ಲೂಟಿ ಹೊಡೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಲೂಟಿ ವಿಚಾರ ದೆಹಲಿಯ ರಾಜಕೀಯ ವಲಯದಲ್ಲಿ ಚೆರ್ಚೆ ಯಾಗುತ್ತಿದೆ. ಜಾತಿ, ಧರ್ಮ ಅಧಾರದ ಮೇಲೆ ಜನರನ್ನ ವಿಭಜಿಸಲಾಗುತ್ತಿದೆ ಎಂದು ಆಪಾದಿಸಿದರು. ವಂದೇ ಮಾತರಂ ಗೀತೆ ರಾಹುಲ್ ಅವಮಾನ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದರಿಂದ ಕೇಂದ್ರ ಮತ್ತು ರಾಜ್ಯದ ನಡುವೆ ವಿಕಾಸ್ ಸೇತುವೆ ನಿರ್ಮಣ ವಾಗಲಿದೆ ಎಂದರು.

ತಂದೆ-ಮಗ ಸಾಕು ಹೊಸ ಮುಖಕೈ ಅವಕಾಶ ನೀಡಿ

ಧಾರವಾಡ : ಹುಬ್ಬಳ್ಳಿ-ಧಾರವಾಡ 74 ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ್ ಅವರು ತಾರಿಹಳ, ರಾಮನಗರ, ಆಶ್ರಯ ಕಾಲೋನಿಯಲ್ಲಿ ತಮ್ಮ ಅಪಾರ ಬೆಂಬಲಿಗರು ಅಭಿಮಾನಿಗಳು ಮತ್ತು ಕಾರ್ಯಕರ್ತರೊಂದಿಗೆ ಬಿರುಸಿನ ಪ್ರಚಾರ ನಡೆಸಿದರು. ಬಳಿಕ ಮಾತನಾಡಿದ ಇಸ್ಮಾಯಿಲ್ ತಮಟಗರ್ ಅವರು, ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರವನ್ನು ತಂದೆ ಮಗನಿಗೆ ಗುತ್ತಿಗೆ ಕೊಟ್ಟಿದ್ದು ಸಾಕು ಹೊಸ ಮುಖಕೈ ಅವಕಾಶ ನೀಡಿ ಎಂದರು. ಈ ಜಯ ನನ್ನದಲ್ಲ ಜನಸಾಮಾನ್ಯರ ಜಯ. ಇದು ಬಡವ ಮತ್ತು ಶ್ರೀಮಂತರ ನಡುವಿನ ಹೋರಾಟವಾಗಿದ್ದು, ಜನಸಾಮಾನ್ಯರು ಈ ಬಾರಿ ಅವರನ್ನು ಸೋಲಿಸುವ ಮೂಲಕ ಜನಸಾಮಾನ್ಯರಿಗೆ ಜಯ ನೀಡಬೇಕು ಎಂಧರು. ಈ ಸಂದರ್ಭದಲ್ಲಿ ಸದಾನಂದ ಡಂಗನವರ್, ಶಂಕರ ಹೊಸಮನಿ, ರಾಜಶೇಖರ್ ಮೆಣಸಿನಕಾಯಿ, ಈಶ್ವರ್ ಕಿತ್ತೂರ, ಶೇಕಪ್ಪ ಮತಗಿ, ಬಸಪ್ಪ ಚಿಕ್ಕಣ್ಣನರ, ಪ್ರಕಾಶ್ ಘಾಟಗೆ, ಬುರಾನ ಗವಳಿ,ವಸಂತ್ ಅರ್ಕಾಚರಿ, ಬಸವರಾಜ್ ಮಟ್ಟಿ ,ವಿನಾಯಕ ಬಡಿಗೇರ ಹಾಗೂ ಕಾಂಗ್ರೆಸ್ ಮುಖಂಡರು ಯುವಕರು ಉಪಸ್ಥಿತರಿದ್ದರು

ಕಣ್ಣೀರು ಹಾಕಿದ ಅನಂತಕುಮಾರ್

ಬೆಂಗಳೂರು : ಜಯನಗರ ಶಾಸಕ ವಿಜಯ ಕುಮಾರ್ ಅವರ ಅಂತಿಮ ದರ್ಶನ ಪಡೆದು ಭಾವುಕರಾದ ಕೇಂದ್ರ ಸಚಿವ ಅನಂತಕುಮಾರ ಅವರು ಕಣ್ಣೀರು ಹಾಕಿದ ಘಟನೆ ನಡೆಯಿತು. ಪಾರ್ಥಿವ ಶರೀರ ಕಂಡು ದುಖಃತಪ್ತರಾದ ಅನಂತ್ ಕುಮಾರ್ ವಿಜಯಕುಮಾರ್ ಅವರನ್ನ ನೆನೆದು ಕಣ್ಣೀರಿಟ್ಟರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಕುಮಾರಸಾವಿನಿಂದ ನನಗೆ ಆಘಾತವಾಗಿದೆ ನನ್ನ ಆತ್ಮೀಯ ಗೆಳೆಯ, ಪ್ರಚಾರದ ವೇಳೆ ಕುಸಿದು ಬಿದ್ದಿದ್ದಾರೆ ತಕ್ಷಣವೇ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಕೊನೆ ಹಂತದ ವರೆಗೂ ಅವರನ್ನ ಉಳಿಸೋ ಯತ್ನ ನಡೀತು. ಆದ್ರೆ ಅದು ಫಲಕಾರಿಯಾಗಲಿಲ್ಲ. ಈ ವಿಚಾರ ಸಿಡಿಲು ಬಡಿದಂತಾಗಿದೆ ಬಾಲ್ಯದಿಂದಲೂ ಆರ್ ಎಸ್ ಎಸ್ ನಲ್ಲಿ ಗುರ್ತಿಸಿಕೊಂಡ ವಿಜಯಕುಮಾರ ಮದುವೆ ಮಾಡಿಕೊಳ್ಳದೇ ದೇಶ ಸೇವೆಗೆ ತೊಡಗಿಸಿಕೊಂಡಿದ್ದರು. ಎರಡು ಬಾರಿ ಶಾಸಕರಾಗಿ ಅತ್ಯುತ್ತಮ ಕೆಲ್ಸ ಮಾಡಿದ್ದಾರೆ ಇಡೀ ರಾಜ್ಯಕ್ಕೆ ಮಾದರಿ ಶಾಸಕರಾಗಿದ್ದರು ಎಂದು ಕಂಬನಿ ಮಿಡಿದಿದ್ದಾರೆ ೪೦ ವರ್ಷದ ಒಡನಾಟ ಅವರ ಜತೆಗಿತ್ತು. ಕುಟುಂಬದ ಸದಸ್ಯರ ರೀತಿ ನಾವೆಲ್ಲಾ ಇದ್ದೆವು ವಿಜಯಕುಮಾರ್ ಮತ್ತೆ ಹುಟ್ಟಿ ಬರಲಿ ಎನ್ನುವ ಆಶಯ ವ್ಯಕ್ತಪಡಿಸಿದ ಕೇಂದ್ರ ಸಚಿವ ಅನಂತಕುಮಾರ ಹೇಳಿದರು.

ಇಬ್ಬರು ಕುಖ್ಯಾತ ಕಳ್ಳರ ಬಂಧನ

ಹುಬ್ಬಳ್ಳಿ : ಚೈನ್ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಕಳ್ಳರ ಬಂಧನ ಮಾಡುವಲ್ಲಿ ಹುಬ್ಬಳ್ಳಿ ಶಹರ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳ್ಳತನ ಮಾಡಿದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸಿದ ಪೊಲೀಸರು ಮಹಿಳೆಯೊಬ್ಬರ ಬಂಗಾರದ ಸರವನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ. 55 ಗ್ರಾಂ ಬಂಗಾರದ ಎರಡು ಸರಗಳನ್ನು ಕಳ್ಳತನ ಮಾಡಿ, ರಾಜಗೋಪಾಲ ನಗರದ ಆಟೋ ನಿಲ್ದಾಣದ ರಸ್ತೆ ಬದಿ ಮಾರಾಟ ಮಾಡುತ್ತಿದ್ದಾಗ ಸಂಶಯಗೊಂಡು ವಿಚಾರಣೆ ಮಾಡಿದ ಪೊಲೀಸರಿಗೆ ವಂಚಕರ ಜಾಲ ಪತ್ತೆಯಾಗಿದೆ. ಮಂಜುನಾಥ ಹಳಿಯಾಳ ಮತ್ತು ವಿಕ್ಕಿ ಲೂಯಿಸ್ ರಾಜ್ ಬಂಧಿತ ಆರೋಪಿಗಳಾಗಿದ್ದು, ಬಂಧಿತರ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ. 1ಲಕ್ಷ 80 ಸಾವಿರ ಮೌಲ್ಯದ ಒಂದು ಲ್ಯಾಪ್ ಟಾಪ್ ಮತ್ತು ಎರಡು ಬಂಗಾರದ ಸರಗಳನ್ನು ವಶಕ್ಕೆ ಪಡೆದಿದ್ದಾರೆ. ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿದ ಪೊಲೀಸರಿಗೆ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ಹತ್ತು ಸಾವಿರ ಬಹುಮಾನ ಘೋಷಣೆ ಮಾಡಿದ್ದಾರೆ.

ಕ್ಯಾನ್ಸರ್ ಪೀಡಿತ ಬಸಯ್ಯ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಅಮೃತ ದೇಸಾಯಿ

ಧಾರವಾಡ: ಧಾರವಾಡದ ಗೊವನಕೊಪ್ಪ ಮತ್ತು ಸೊಮಾಪುರದಲ್ಲಿ ಧಾರವಾಡ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಬಿರುಸಿನ ಪ್ರಚಾರ ನಡೆಸಿದರು. ಇದೇ ವೇಳೆ ಸೋಮಾಪುರದಲ್ಲಿ ಕ್ಯಾನ್ಸರ್ ಪೀಡಿತ ಬಸಯ್ಯ ಹೊಸುರಮಠ ಅವರಿಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಅಲ್ಲದೆ, ಈ ಬಾರಿ ಕಮಲ ಬಂದರೆ ಸರ್ಕಾರದಿಂದ ಪರಿಹಾರ ಹಾಗೂ ಚಿಕಿತ್ಸೆ ಕೊಡಿಸುವುದಾಗಿ ಅಮೃತ ದೇಸಾಯಿ ಭರವಸೆ ನೀಡಿದರು. ಅಮೃತ ದೇಸಾಯಿ ಪರ ಬಿಜೆಪಿಯ ಮುಖಂಡ ಹಾಗೂ ಯೋಗೀಶಗೌಡ ಸಹೋದರ ಗುರುನಾಥಗೌಡ ಗೌಡರ ಮತಯಾಚನೆ ಮಾಡಿದರು. ಮನೆ, ಮನೆಗೆ ತೆರಳಿ ಎಲ್ಲರಲ್ಲಿ ಈ ಬಾರಿ ಕಮಲವನ್ನು ಅರಳಿಸಿ ಎಂದು ಕಳಕಳಿಯಿಂದ ಅಮೃತ ದೇಸಾಯಿ ವಿನಂತಿ ಮಾಡಿಕೊಂಡರು. ಇದಕ್ಕೆ ಸ್ಥಳಿಯರಿಂದ ಭಾರಿಪ್ರಮಾಣದ ಬೆಂಬಲ ದೊರೆಯಿತು. ಈ ಸಂದರ್ಭದಲ್ಲಿ ಸುನೀಲ ಶಿರಗುಪ್ಪಿ, ಶಿದ್ದಪ್ಪಾ ಮುತ್ತಗಿ, ತಿಪ್ಪನಗೌಡ ಪಾಟಿಲ,ಗುರನಗೌಡ ಪಾಟಿಲ, ಪಕ್ಕಿರ ಗೌಡ ಬಸನಗೌಡ ಪಾಟಿಲ ರುದ್ರಯ್ಯ ಹಿರೇಮಠ, ಮಹಾಂತೇಶ ಮುತ್ತಗಿ, ಗಂಗಮ್ಮಾ ಮಾಯಕರ, ಹರಣಪ್ಪಾ ಬಂಡ್ಯಾಡದ,ಪಾರವ್ವಾ ಮಲ್ನಾಡದ,ಶಿವನ ಗೌಡಾ ಪಾಟೀಲ, ಬಸವರಾಜ ಹೊರಟ್ಟಿ, ಸೇರಿದಂತೆ ಗೊವನ ಕೊಪ್ಪ ಹಾಗೊ ಸೊಮಾಪುರದ ಎಲ್ಲ ಭಾಜಪಾ ಕಾರ್ಯಕರ್ತರು ಸಾಥ್ ನೀಡಿದರು.

ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್ ನಿಧನ

ಬೆಂಗಳೂರು : ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್(60) ಚಿಕಿತ್ಸೆ ಫಲಕಾರಿಯಾಗದೇ ಜಯದೇವ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಸುದ್ದಿಗಾರರೊಂದಿಗೆ ಮಾತನಾಡಿ, ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಿಜಯ್ ಕುಮಾರ್ ಅವರುನಿನ್ನೆ ಚುನಾವಣೆ ಪ್ರಚಾರ ವೇಳೆ ಕುಸಿದು ಬಿದಿದ್ದರು. ಕೂಡಲೇ ಜಯದೇವ ಆಸ್ಪತ್ರೆಗೆ ದಾಖಲಿಸಿದ್ರು. ಆಸ್ಪತ್ರೆ ಕರೆತಂದಾಗಲೇ ಹೃದಯ ಬಡಿತ, ಬಿಪಿ ಕುಸಿತ ಕಂಡಿತ್ತು.ನಮ್ಮ ವೈದ್ಯರು ವಿಜಯ್ ಕುಮಾರ್ ಬದುಕಿಸಲು ಪ್ರಯತ್ನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 1 ಗಂಟೆಗೆ ವಿಜಯ್ ಕುಮಾರ್ ವಿಧಿ ವಶರಾಗಿದ್ದಾರೆ ಎಂದು ತಿಳಿಸಿದ್ದಾರೆ. ಜಯನಗರ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದ ವಿಜಯ್ ಕುಮಾರ್ ಚುನಾವಣೆಗೂ ಮುನ್ನ ಸಾವನ್ನಪ್ಪಿರುವುದು ಅವರ ಅಭಿಮಾನಿಗಳಿಗೆ ವಿಶೇಷವಾಗಿ ಬಿಜೆಪಿಗೆ ದೊಡ್ಡ ನಷ್ಟವಾಗಿದೆ.

ಪ್ರಧಾನಿ ಭೇಟಿ ಮಾಡಿದ ಪುನೀತ್ ರಾಜ್ಕುಮಾರ್

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರನ್ನು ಪವರ್ ಸ್ಟಾರ್ ಪುನೀತ್ ಭೇಟಿ ಮಾಡಿ ಅಭಿನಂದಿಸಿದ್ದಾರೆ. ದಂಪತಿ ಸಮೇತ ಮೋದಿಯವರನ್ನು ಭೇಟಿ ಮಾಡಿ ಸನ್ಮಾಸಿದ ಅವರು ಡಾ ರಾಜಕುಮಾರ ಅವರ ಭಾವಚಿತ್ರ ನೀಡಿ, ಶಾಲು ಹೊದಿಸಿ ಗೌರವಿಸಿದರು. ಡಾ ರಾಜಕುಮಾರ ಕುರಿತು ಮೋದಿಯವರು ಗುಣಗಾನ ಮಾಡಿದ್ದರು. ಇದರಿಂದಾಗಿ ಸ್ವಯಂ ಪ್ರೇರಿತರಾಗಿ ಪುನೀತ್ ರಾಜ್ಕುಮಾರ್ ಮೋದಿಯವರನ್ನು ಭೇಟಿ ಮಾಡಿ ಅಭಿನಂದಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ರಾಹುಲ್ ಗಾಂಧಿಗೆ ಹೆಚ್.ಡಿ ಕೆ ಟಾಂಗ್

ವಿಜಯಪುರ : ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನಿಡಗುಂದಿ ಗ್ರಾಮದ ಆಲಮಟ್ಟಿ ರಸ್ತೆಯ ಪಕ್ಕದ ರೇವಡಿ ಅವರ ಬಯಲು ಆವರಣದಲ್ಲಿ ಜೆಡಿಎಸ್ ಅಭ್ಯರ್ಥಿ ಸೋಮನಗೌಡ ಪಾಟೀಲ್( ಮನಗೂಳಿ) ಅವರ ಪರ ಹೆಚ್ ಡಿ ಕೆ ಬಹಿರಂಗ ಚುನಾವಣಾ ಪ್ರಚಾರ ಸಭೆ ನಡೆಸಿದರು. ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ರಾಹುಲ್ ಗಾಂಧಿ ಅವರು ಬಳ್ಳಾರಿಯಲ್ಲಿ ಎಚ್.ಡಿ. ದೇವೇಗೌಡರ್ ಯಾವ ಕಡೆ ಇದ್ದಾರೆ ಎಂದು ಕೇಳಿದ್ದಾರೆ. ಜೆಡಿಎಸ್ ಪಕ್ಷ ಕಾಂಗ್ರೆಸ್ ಕಡೆಗೂ ಇಲ್ಲಾ, ಬಿಜೆಪಿ ಕಡೆಗೂ ಇಲ್ಲಾ ಎಂದು ಟಾಂಗ್ ನೀಡಿದರು. ಅಲ್ಲದೆ, ಜೆಡಿಎಸ್ ಪಕ್ಷ ಕನ್ನಡಿಗರ ಪರ ಇದೆ. ನಾನು ಕಾಂಗ್ರೆಸ್ ಮತ್ತು ಬಿಜೆಪಿ ಗುಲಾಮನಲ್ಲ. ಏನಿದ್ದರೂ ಕನ್ನಡಿಗರ ಗುಲಾಮ ಎಂದು ಗುಡುಗಿದರು. [04/05, 08:44] ನಾಗರಾಜ ಕಿರಣಗಿ: ಬೆಂಗಳೂರು : ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್(60) ಚಿಕಿತ್ಸೆ ಫಲಕಾರಿಯಾಗದೇ ಜಯದೇವ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಸುದ್ದಿಗಾರರೊಂದಿಗೆ ಮಾತನಾಡಿ, ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಿಜಯ್ ಕುಮಾರ್ ಅವರುನಿನ್ನೆ ಚುನಾವಣೆ ಪ್ರಚಾರ ವೇಳೆ ಕುಸಿದು ಬಿದಿದ್ದರು. ಕೂಡಲೇ ಜಯದೇವ ಆಸ್ಪತ್ರೆಗೆ ದಾಖಲಿಸಿದ್ರು. ಆಸ್ಪತ್ರೆ ಕರೆತಂದಾಗಲೇ ಹೃದಯ ಬಡಿತ, ಬಿಪಿ ಕುಸಿತ ಕಂಡಿತ್ತು.ನಮ್ಮ ವೈದ್ಯರು ವಿಜಯ್ ಕುಮಾರ್ ಬದುಕಿಸಲು ಪ್ರಯತ್ನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 1 ಗಂಟೆಗೆ ವಿಜಯ್ ಕುಮಾರ್ ವಿಧಿ ವಶರಾಗಿದ್ದಾರೆ ಎಂದು ತಿಳಿಸಿದ್ದಾರೆ. ಜಯನಗರ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದ ವಿಜಯ್ ಕುಮಾರ್ ಚುನಾವಣೆಗೂ ಮುನ್ನ ಸಾವನ್ನಪ್ಪಿರುವುದು ಅವರ ಅಭಿಮಾನಿಗಳಿಗೆ ವಿಶೇಷವಾಗಿ ಬಿಜೆಪಿಗೆ ದೊಡ್ಡ ನಷ್ಟವಾಗಿದೆ.

ಜೆ.ಡಿ.ಎಸ್.ಗೆ ಸೇರ್ಪಡೆಯಾದ ಯುವಕರ ಪಡೆ

ಅಣ್ಣಿಗೇರಿ: ನಗರದ ವಿವಿಧ ಓಣಿಗಳಿಂದ ಆಗಮಿಸಿದ್ದ ನೂರಾರು ಯುವಕರು ಕಾಂಗ್ರೆಸ್ ಹಾಗೂ ಬಿಜೆಪಿ ತೊರೆದು ಶಾಸಕ ಎನ್.ಎಚ್.ಕೋನರಡ್ಡಿಯವರ ನೇತ್ರತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷಕ್ಕೆಯುವ ಮುಖಂಡರಾದ ಮುಕ್ತಾರ್ ಮುಳಗುಂದ, ಮುಸ್ತಾಕ ಧಾರವಾಡ, ಆಶೀಫ ಮಕಾಂದಾರ, ಅಮೀರ ಗುಡಗೇರಿ,ಬುಡ್ಡಾ ಸುಂಕದ, ಇಬ್ರಾಹಿಂ ಸುಂಕದ, ಜಮೀರ ವರವಿ,ಆಯ್.ಡಿ.ಧಾರವಾಡ, ದಾವಲಸಾಬ ಕುರ್ತಕೋಟಿ, ಮಾಬೂಲಿ ಜಂಡಲ್, ಮುನ್ನಾ ಮಕಾಂದಾರ, ಹಜ್ಜು ನಡಕಟ್ಟಿನ, ಬುಡ್ಡಾ ಕಿಂದರಿ,ಮೆಹಬೂಬ ಚೋಬಾರಿ, ಖ್ವಾಜಾಹುಸೇನ ಠಾಣೇದ,ಅಬ್ಬಾಸ ಧಾರವಾಡ, ನಜೀರ,ಶಫಿ ಅಬ್ದಲ್ ಹಳ್ಳಿಕೇರಿ,ಯಾಸೀನ,ಸಮದಾನಿ ಠಾಣೇದ, ಫಾರುಖ ಶಿರಗುಪ್ಪಿ, ಅಸ್ಲಂ ಜಂಗಲನಾಯ್ಕ,ಫಾರುಖ ಗುಳಗುಂದಿ, ಬುಡ್ಡಾ ಗುಡಗೇರಿ, ಅರ್ಸಫ್ ಗುಡಗೇರಿ ಮುಂತಾದವರು ಜೆಡಿಎಸ್ ಸೇರ್ಪಡೆಯಾದರು. ಎಲ್ಲರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಶಾಸಕ ಎನ್.ಹೆಚ್. ಕೋನರಡ್ಡಿ, 2018ರ ಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷಕ್ಕೆ ಬಹುಮತ ದೊರೆಯಲಿದ್ದು ಮುಂದಿನ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರು ಅಧಿಕಾರ ಸ್ವೀಕರಿಸಲಿದ್ದಾರೆ. ಯುವಕರಿಗೆ ಉದ್ಯೂಗ ಸೃಷ್ಟಿ, ದೂರ ದೃಷ್ಠಿಯ ಹೊಸ ಯೋಜನೆಗಳನ್ನು ಹಾಕಿ ನಾಡಿನ ಸಮಗ್ರ ಅಭಿವೃದ್ಧಿಗೆ ಪಕ್ಷ ಕಂಕಣ ಬದ್ಧವಾಗಿ ದುಡಿಯಲಿದೆ. ಅಲ್ಲದೆ, ಅಧಿಕಾರಕ್ಕೆ ಬಂದ ನಂತರ ಆ ಎಲ್ಲಾ ಯೋಜನೆಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರಲಾಗುವದು ಮುಖ್ಯವಾಗಿ ಯುವಕರು ವಾಸಿಸುವ ಪ್ರದೇಶಗಳಲ್ಲಿಯೇ ಉದ್ಯೂಗ ನೀಡುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸಲಾಗುವದು ಎಂದು ಹೇಳಿದರು. ಈ ಸಂದರ್ಬದಲ್ಲಿ ಅಣ್ಣಿಗೇರಿ ಪುರಸಭೆ ಸದಸ್ಯರಾದ ಹಸನಸಾಬ ಗುಡುನಾಯ್ಕರ, ಜೆಟ್ಟೆಪ್ಪ ಮುತ್ತಲಗೇರಿ, ಪಕ್ಷದ ಮುಖಂಡರಾದ ಖಾದರಬಾಷಾ ನವಲಗುಂದ, ಹಟೇಲಸಾಬ ಗಾಡಗೋಳಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಾಯಿ ಬಾಬಾ ದರ್ಶನ ಪಡೆದ ಇಸ್ಮಾಯಿಲ್ ತಮಟಗಾರ

ಧಾರವಾಡ : ಇಲ್ಲಿಯ ಕೆಲಗೇರಿ ರಸ್ತೆಯಲ್ಲಿರುವ ಸಾಯಿ ಬಾಬಾ ದೇವಸ್ಥಾನಕ್ಕೆ ಗುರುವಾರ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ ಪತ್ನಿ ಪೂರ್ಣಿಮಾ ತಮಟಗಾರ ಸಮೇತ ಭೇಟಿ ನೀಡಿ ಬಾಬಾನ ದರ್ಶನ ಪಡೆದರು. ಈ ವೇಳೆ ಸಾಯಿ ಬಾಬಾ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಹೇಶ ಶೆಟ್ಟಿ ಅವರು ಇಸ್ಮಾಯಿಲ್ ತಮಟಗಾರ ದಂಪತಿಯನ್ನು ಸನ್ಮಾನಿಸಿ ಗೌರವಿಸಿ, ಶುಭ ಕೋರಿದರು. ಬಳಿಕ ನೆರೆದಿದ್ದ ಮತದಾರರ ಬಾಂಧವರಲ್ಲಿ ಮತಯಾಚಿಸಿದರು. ಬಳಿಕ ಜಯನಗರ, ಸಪ್ತಾಪೂರ, ಮಿಸ್ಕಿನ್ ಕಂಪೌಂಡ್ ಮತ್ತು ಸುತ್ತಮುತ್ತ ನಗರದಲ್ಲಿ ಬಿರುಸಿನ ಪಾದಯಾತ್ರೆ ಹಾಗೂ ಮನೆ ಮನೆಗೆ ತೆರಳಿ ಮತಯಾಚಿಸಿದರು. ಅವರಿಗೆ ಕಾಂಗ್ರೆಸ್ ಮುಖಂಡರಾದ ಪ್ರಕಾಶ ಘಾಟಗೆ, ರಾಬರ್ಟ ದದ್ದಾಪುರಿ, ಪ್ರತಾಪ ಚವ್ಹಾಣ, ಆನಂದ ಜಾಧವ, ಚಂದನ ಸವಡಿ, ಬುರಾನ್ ಗೌವಳಿ, ಆನಂದ ಮುಶಣ್ಣವರ, ಈರಣ್ಣ ಕಿತ್ತೂರ, ಬಾಬು ಗವಳಿ, ಜಬ್ಬಾರ ನಿಪ್ಪಾಣಿ, ಮಜೀದ್ ದಾಸನಕೊಪ್ಪ, ಚಿದಾನಂದ ಮುನವಳ್ಳಿ, ಇಜಾಜಖಾನ ಸೌದಾಗರ್, ಚಂದ್ರು ದೊಡ್ಮನಿ, ಅಬ್ದುಲ ದೇಸಾಯಿ, ಶ್ರೀಧರ ಶೇಟ್, ಮಟ್ಟಿ ಸೇರಿದಂತೆ ಅನೇಕರು ಸಾಥ್ ನೀಡಿದರು.

ಲಿಡಕರ ಕಾಲನಿ, ಅಂಬೇಡ್ಕರ ನಗರದಲ್ಲಿ ಅರವಿಂದ ಬೆಲ್ಲದ ಪಾದಯಾತ್ರೆ

ಧಾರವಾಡ : ಅಭಿವೃದ್ಧಿಯ ದೃಷ್ಟಿಯಲ್ಲಿ ರಾಯಾಪುರ ಆಶ್ರಯ ಕಾಲನಿ ಅತಿ ಹೆಚ್ಚು ಅಭಿವೃದ್ಧಿ ಹೊಂದಿದ ಪ್ರದೇಶವಾಗಿದೆ ಎಂದು ಶಾಸಕ ಹಾಗೂ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥೀ ಅರವಿಂದ ಬೆಲ್ಲದ ಹೇಳಿದರು. ಅವರು ಗುರುವಾರ ನಗರದಲ್ಲಿ ವಾರ್ಡ ನಂಬರ 20 ಮತ್ತು 22ರ ಪ್ರದೇಶದಲ್ಲಿ ನೂರಾರು ಬೆಂಬಲಿಗರೊಂದಿಗೆ ಪಾದಯಾತ್ರೆಯ ಮೂಲಕ ಪ್ರಚಾರ ನಡೆಸಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ಕೊಳಚೆ ಪ್ರದೇಶಗಳನ್ನು ಸರ್ವಾಂಗೀಣ ಅಭಿವೃದ್ದಿ ಪಡಿಸುವುದು ಮುಖ್ಯ ಉದ್ದೇಶವಾಗಿದ್ದು ಅದರ ಅಂಗವಾಗಿ ಕೊಳಚೆ ಪ್ರದೇಶದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ನನ್ನ ಕ್ಷೇತ್ರದ ಈ ಪ್ರದೇಶಗಳನ್ನು ಅಭಿವೃದ್ದಿ ಪಡಿಸಿದ್ದು ನನಗೆ ಸಮಾದಾನ ತಂದು ಕೊಟ್ಟಿದೆ ಎಂದರು. ಜನರು ಬಯಸುತ್ತಿರುವ ಬದಲಾವಣೆ ತರುವುದಕ್ಕೆ, ಸ್ವಚ್ಛ ರಾಜಕೀಯ ಮತ್ತು ಉತ್ತಮ ಆಡಳಿತದ ಗುರಿಯನ್ನು ಸಾಧಿಸಲು ಮತ್ತೊಮ್ಮೆ ತಮ್ಮನ್ನ ಆರಿಸಿ ವಿಧಾನ ಸಭೆಗೆ ಕಳುಹಿಸುವಂತೆ ಜನರಲ್ಲಿ ಕಳಕಳಿಯಿಂದ ಮನವಿ ಮಾಡಿದರು. ಈ ಬಾರಿ ಅವಳಿ ನಗರವನ್ನು ಅತ್ಯಂತ ಉತ್ತಮ ವಾಸಯೋಗ್ಯ ನಗರವನ್ನಾಗಿ ಮಾಡುವ ಗುರಿಗೆ ಜನರಿಂದ ನಿರೀಕ್ಷೆಗೂ ಮೀರಿ ಬೆಂಬಲ ದೊರಕಿದೆ ಎಂದು ಹರ್ಷ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಮಂಜುಳಾ ಅಕ್ಕೂರು, ಮುಖಂಡರಾದ ಆನಂದ ಯಾವಗಲ,ಶರಣು ಬಿಷ್ಟನ್ನವರ, ಹಾಗೂ ಹಿರಿಯರು, ಮಹಿಳಾ ಪ್ರಮುಖರು, ಯುವ ಮಿತ್ರರು ಮತ್ತು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ಕೋನರಡ್ಡಿ ತಿರುಗೇಟು

ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ನವಲಗುಂದ ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿ ಜೆಡಿಎಸ್ ಒಳಒಪ್ಪಂದ ಕುರಿತು ಹೇಳಿಕೆ ನೀಡಿರುವುದು ಸರಿಯಲ್ಲ. ನಾವು ಎಂದಿಗೂ ಅಧಿಕಾರಕ್ಕಾಗಿ ಕಾಂಗ್ರೆಸ್ ತರಹ ಬಿಜೆಪಿಯವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ತಿರುಗೇಟು ನೀಡಿದರು. ಅವರು ನವಲಗುಂದ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸೈದಾಪುರ, ಮಜ್ಜಿಗುಡ್ಡ ಗ್ರಾಮಗಳಲ್ಲಿ ಬುಧವಾರ ರಾತ್ರಿ ಜೆಡಿಎಸ ಪರ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದರು. ನವಲಗುಂದ ತಾಲೂಕು ಪಂಚಾಯತ್ ನಲ್ಲಿಯೇ ಅಧಿಕಾರಕ್ಕಾಗಿ ಬಿಜೆಪಿ ಜೊತೆಗೆ ಕೈ ಜೋಡಿಸಿರುವ ಕಾಂಗ್ರೆಸ್ ಅಣ್ಣಿಗೇರಿ ಎಪಿಎಂಸಿಯಲ್ಲಿ ಕೂಡ ತನ್ನ ಅಧಿಕಾರಕ್ಕಾಗಿ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದೆ. ಅದೇ ರೀತಿ ರಾಜ್ಯದ ಹಲವಡೆ ಬಿಜೆಪಿ ಜೊತೆಗೆ ಕೈ ಜೋಡಿಸಿರುವ ಕಾಂಗ್ರೆಸ್ ವಿನಾ ಕಾರಣ ಬಿಜೆಪಿ ಜೊತೆಗೆ ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿದೆ ಎಂದು ಆಪಾದಿಸುತ್ತಿರುವುದು ಸರಿಯಲ್ಲ ಎಂದು ಗುಡುಗಿದ್ದಾರೆ. ಇದೇ ವೇಳೆ ಬಿಜೆಪಿಯವರು ವಿನಾಕಾರಣ ಜೆಡಿಎಸ್ ಯುವ ಮುಖಂಡರ ಮೇಲೆ ದೌರ್ಜನ್ಯ ಎಸಗುತ್ತಿರುವುದು ಸರಿಯಲ್ಲ. ಅವರ ಮೇಲೆ ದೂರು ನೀಡಬೇಡಿ. ನೈತಿಕತೆ ಇದ್ದರೆ ನಿಮ್ಮದೇ ಕೇಂದ್ರ ಸರ್ಕಾರದಿಂದ ಸಾಲಮನ್ನಾ ಮಾಡಿಸಿ ಎಂದು ಬಹಿರಂಗ ಸವಾಲ್ ಹಾಕಿದ ಕೋನರಡ್ಡಿ ಅವರು ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಋಣ ತಿರಿಸುವ ಕೆಲಸ ಮಾಡುತ್ತೇವೆ. ನಿಮಗೆ ತಾಕತ್ ಇದ್ದರೆ ಸಾಲಮನ್ನಾ ಮಾಡಿ, ನಾಚಿಕೆ, ಮಾನ, ಮರ್ಯಾದೆ ಇದ್ದರೆ, ದೂರು ಕೊಡುವ ಬದಲಿಗೆ ಸಾಲಮನ್ನಾ ಮಾಡಿ ತೋರಿಸಿ ಎಂದು ಗುಡುಗಿದರು. ನಾವು ಬಿಜೆಪಿಯ ಹಾಗೆ ಸುಳ್ಳು ಹೇಳುವುದಿಲ್ಲ. ಬದಲಿಗೆ ಅಧಿಕಾರಕ್ಕೆ ಬಂದರೆ ಹುಬ್ಬಳ್ಳಿ ಧಾರವಾಡ ಮಾದರಿಯಲ್ಲಿ ನಿರಂತರ ನೀರು, ಕೆರೆ ತುಂಬಿಸುವ ಯೋಜನೆ, ದೊಡ್ಡ ಪ್ರಮಾಣದ ಯೋಜನೆಗಳನ್ನು ತಂದು ಮಾದರಿ ನವಲಗುಂದ ವಿಧಾನ ಸಭಾ ಕ್ಷೇತ್ರ ನಿರ್ಮಾಣ ಮಾಡಲಾಗುವುದು ಎಂದರು. ಯುವಕರು ಕ್ಷೇತ್ರದಲ್ಲಡೆ, ಪಕ್ಷ ಸೇರ್ಪಡೆ ಮಾಡುತ್ತಿರುವುದು ಸಂತಸ ತಂದಿದೆ. ಕೋನರಡ್ಡಿ ಪರ ತಾವೇ ಯುದ್ದಕ್ಕೆ ಇಳಿದಿರುವುದು ಹೆಮ್ಮೆಯ ಸಂಗತಿಯಾಗಿದೆ. ಎಂದರು. ಅಣ್ಣಿಗೇರಿಯ ಮಾದರಿಯಲ್ಲಿ ಮಜ್ಜಿಗುಡ್ಡ, ಸೈದಾಪುರ ಅಭಿವೃದ್ಧಿ ಪಡಿಸಲಾಗುವುದ. ಬ್ರಿಜ್ ಕಂ ಬ್ಯಾರೇಜ ಒಂದು ಕೋಟಿ ಕಾಂಕ್ರೀಟ್, ಮಸೀದಿಗೆ ಐದು ಲಕ್ಷ, ವಾಲ್ಮೀಕಿ ಭವನಕ್ಕೆ ಅನುದಾನ ನೀಡಿದ್ದೇನೆ, ಅಭಿವೃದ್ಧಿಯಲ್ಲಿ ಯಾವುದೇ ಹಳ್ಳಿಗೂ ಕಡಿಮೆ ಮಾಡಿಲ್ಲ ಎಂದ ಅವರು ಯಾರ ಸಾಲ ಎಷ್ಟು ಇದೆ. ಎಲ್ಲಿದೆ ಎಂಬ ಮಾಹಿತಿ ಸಂಗ್ರಹಿಸಲು ಬಿಜೆಪಿ ಕಾಂಗ್ರೆಸ್ ಪಿತೂರಿ ಮಾಡುತ್ತಿವೆ. ನಮ್ಮ ಪ್ರಣಾಳಿಕೆ ಅಂಶವೇ ರೈತರ ಸಂಪೂರ್ಣ ಸಾಲಮನ್ನಾ ಇದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದರೂ ಸಾಲಮನ್ನಾ ಮಾಡಿಲ್ಲ ಎಂದು ಆರೋಪಿಸಿದರು. ಆದರೆ ರೈತರ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡಬೇಡಿ. ಮುಸ್ಲಿಂ ಸಮುದಾಯದ ಮತಗಳನ್ನು ಒಡೆಯುವ ಹುನ್ನಾರ ಬಿಜೆಪಿಯದ್ದು, ನಿಮ್ಮ ಕೈ ಮುಗಿದು ಕೇಳ್ತಿನಿ ಅವರ ಇವರ ಮಾತು ಕೇಳಬೇಡಿ. ನಿಮ್ಮ ಋಣ ತೀರಿಸುವ ಸಲುವಾಗಿ ನನ್ನ ಜೀವನ ಮುಡುಪು, ಜಾತಿ ಆಧಾರದ ಮೇಲೆ ಸಮಾಜ ಒಡೆಯುವುದು ಎಷ್ಟು ಸರಿ. ಇಷ್ಟು ವರ್ಷ ಮಲಗಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು. ಸಿಎಂ ಸಿದ್ದರಾಮಯ್ಯವೂ ಅಸಮಾಧಾನ ಹೊರ ಹಾಕಿದ ಅವರು, ಶಾಸಕನಾಗಿ ನಾನು ನನ್ನ ಹಕ್ಕು ಚಲಾಯಿಸಿದ್ದೇನೆ. ನೀವೇ ಅನುದಾನ ಕೊಡಬೇಕು. ದೇವೆಗೌಡ, ಕುಮಾರಸ್ವಾಮಿ ಅವರಿಗೆ ಅನುದಾನ ಕೊಡಕ್ಕ ಬರಲ್ಲ ನೀವು ಕೊಡಬೇಕಾಗಿದ್ದು ನಿಮ್ಮ ಕರ್ತವ್ಯ ಎಂದು ತಿರುಗೇಟು ನೀಡಿದ ಅವರು ಕೇಂದ್ರ ಸಚಿವ ಅನಂತಕುಮಾರಗೆ ಮಾನ ಮರ್ಯಾದೆ ಇದ್ದರೆ ಮಹದಾಯಿ ಕಳಸಾ ಬಂಡೂರಿ ಬಗ್ಗೆ ಮಾತನಾಡಿ, ನಿಮಗೆ ನೈತಿಕತೆ ಇದ್ದರೆ ಅದರ ಬಗ್ಗೆ ಚಕಾರ ಎತ್ತಿ. ಎಲ್ಲಿ ಹೇಂಗ ದುಡ್ಡು ತಂದೀರಿ ಅಂತ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಾರಿ ಸಿಎಂ ಕುಮಾರಸ್ವಾಮಿ ಆಗ್ತಾರೆ. ಅವರು ನಂಬಿದವರನ್ನು ಎಂದಿಗೂ ಕೈ ಬಿಡಲ್ಲ. ನೀವುನಮ್ಮ ಕೈ ಹಿಡಿರಿ ನಾನು ನಿಮ್ಮ ಕೆಲಸ ನನ್ನ ಕೆಲಸ ಎಂದು ಮಾಡಿಕೊಡುತ್ತೇನೆ. ನೀವೆ ಎಲ್ಲರೂ ಕೋನರಡ್ಡಿ ಆಗಿ ದುಡಿಯಿರಿ. ಮೇ 12 ರಂದು ಮಾಸ್ಟರ್ ರೀತಿಯಲ್ಲಿ ಅಂಕ ನೀಡಿ, ಐದು ವರ್ಷ ಜೀತದಾಳು ಆಗಿ ದುಡಿದಿದ್ದೇನೆ.ಅದರ ಶ್ರಮಕ್ಕೆ ಬೆಲೆ ನೀಡಿ, ಯಾರ ಮಾತು ಕೇಳಬೇಡಿ ಎರಡನೇ ಬಾರಿಗೆ ಎರಡನೇ ಬಟನ್ ಒತ್ತಿ ಆಶೀರ್ವಾದ ಮಾಡಿ ಎಂದರು. ಜೆಡಿಎಸ್ ಮುಖಂಡ ಎಂ.ಎಸ್. ರೋಣದ ಮಾತನಾಡಿ, ವಿರೋಧ ಪಕ್ಷದ ಶಾಸಕರಾಗಿ ಎನ್.ಹೆಚ್. ಕೋನರಡ್ಡಿ ಅವರು ಮೂರುವರೆ ಸಾವಿರ ಕೋಟಿ ಅನುದಾನ ತಂದಿದ್ದಾರೆ. ಅಲ್ಲದೆ, ಆಸರೆ ಯೋಜನೆ ಮಂಜೂರು, ಬಡವರ ಪರ, ರೈತರ ಪರ ಕೆಲಸ ಮಾಡಿದ್ದಾರೆ. ನವಲಗುಂದ,ಹುಬ್ಬಳ್ಳಿ ಹಾಗೂ ಅಣ್ಣಿಗೇರಿಯನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಿದ್ದಾರೆ. ಮೇ 12 ರಂದು ಪರೀಕ್ಷೆ ಇದೆ. ಅತ್ಯುತ್ತಮ ಅಂಕ ನೀಡುವ ಮೂಲಕ ಚುನಾವಣೆಯಲ್ಲಿ ಜಯ ಗಳಿಸುವಂತೆ ಮಾಡಬೇಕು ಎಂದರು. ಪಕ್ಷ ಸೇರ್ಪಡೆ ನಿರಂತರ ಪ್ರಕ್ರಿಯಾಗಿದ್ದು, ಚುನಾವಣೆ ನಂತರವೂ ಮರೆಯದೆ ನಿಮ್ಮ ಕೆಲಸ ಮಾಡುವ ಏಕೈಕ ಶಾಸಕ ಕೋನರಡ್ಡಿ ಎಂದರು. ಸೈದಾಪುರ ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ಮಿಥುನ್ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ. ನಮ್ಮ ಶಾಸಕರು ಇಡೀ ರಾಜ್ಯ ಕ್ಕೆ ಮಾದರಿ ಸದನದಲ್ಲಿ ಗಟ್ಟಿ ಧ್ವನಿ ಮೊಳಗಿಸಿದ ಉತ್ತರ ಕರ್ನಾಟಕ ಪ್ರತಿನಿಧಿಸುವ ಎಕೈಕ ಹೆಮ್ಮೆಯ ನಾಯಕ ಎನ್.ಹೆಚ್. ಕೋನರಡ್ಡಿ ಅವರು. ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಸಾಲಮನ್ನಾ, ಇಸ್ರೇಲ್ ಮಾದರಿ ಕೃಷಿ ಉತ್ತೇಜನ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಹೀಗಾಗಿ ನಾವು ಅವರನ್ನು ಕಳೆದುಕೊಂಡರ ಬಂಗಾರ ಮನುಷ್ಯ ಸಿಗಲ್ಲಎಂದರು. ನವಲಗುಂದದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಾತ್ರ ಕುಮಾರಸ್ವಾಮಿ ಅವರ ಕೈ ಬಲಪಡಿಸಿದ ಹಾಗೆ ಆಗಲಿದೆ ಎಂದರು. ಈ ಸಂದರ್ಭದಲ್ಲಿ ನೂರಾರು ಯುವಕರು ಜೆಡಿಎಸ್ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷ ವೀರಣ್ಣ ನೀರಲಗಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು

ಬಿಜೆಪಿ ಮುಖಂಡನಿಗೆ ಪೊಲೀಸ್ ಎನ್ಕೌಂಟರ್ ಬೆದರಿಕೆ

ಧಾರವಾಡ : ಧಾರವಾಡ ಪೊಲೀಸ್ ಇನ್ಸ್ ಪೆಕ್ಟರ್ ಪ್ರಶಾಂತ ನಾಯ್ಕ ಹಾಗೂ ಪಿಎಸ್ ಐ ಆನಂದ ಟಕ್ಕನವರ ಅವರು ಬಿಜೆಪಿಯ ಪರ ಪ್ರಚಾರ ಮಾಡಿದರೆ. ಎನ್ಕೌಂಟರ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಬಿಜೆಪಿ ಮುಖಂಡ ಗುರುನಾಥಗೌಡ ಆರೋಪಿಸಿದ್ದಾರೆ. ಅವರು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಐಜಿಪಿ ಬಂದ ಸಂದರ್ಭದಲ್ಲಿ ನನ್ನನ್ನೂ ಹೊರಗಡೆ ಕರೆದು ಈ ರೀತಿ ಸಚಿವರ ಅಣತಿಯಂತೆ ಹೇಳಿದ್ದಾರೆ. ಸಚಿವರ ಪರ ಕೆಲಸ ಮಾಡುವುದು ಸರಿಯಲ್ಲ. ಸಚಿವರಿಗೆ ಸೋಲಿನ ಭಯ ಉಂಟಾಗುತ್ತಿದೆ. ಆ ಭೀತಿಯಿಂದ ಅಧಿಕಾರಿಗಳನ್ನು ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕೇವಲ 107 ಕೇಸ್ ಹಾಕಿದರೆ ರೌಡಿ ಶೀಟರ್ ಆಗುತ್ತಿದೆ ಎಂದರು. ಅಧಿಕಾರಿಗಳು ಈ ರೀತಿ ಕೆಲಸ ಮಾಡುವುದು ಬಿಡಬೇಕು. ಕೂಡಲೇ ಅವರನ್ನು ಕ್ಷೇತ್ರದಿಂದ ವರ್ಗಾವಣೆ ಮಾಡಬೇಕು ಎಂದು ಒತ್ತಾಯ ಮಾಡಿದರು. ಈಗಾಗಲೇ ಸಹೋದರ ಯೋಗಿಶಗೌಡ ಸಾವಿಗೆ ನ್ಯಾಯ ಕೇಳಿ ನಾವು ಹೈಕೋರ್ಟ ಮೆಟ್ಟಿಲುಹತ್ತಿದ್ದೇವೆ. ಅಲ್ಲಿ ವಿಚಾರಣೆ ಹಂತದಲ್ಲಿದೆ. ಕ್ಷೇತ್ರದ ಜನರಿಗೆ ಸತ್ಯಾಂಶ ಗೊತ್ತಿದ್ದು, ಜನತೆ ಇದಕ್ಕೆ ತಕ್ಕ ನ್ಯಾಯ ನೀಡುವ ವಿಶ್ವಾಸವಿದೆ. ನನ್ನ ಪ್ರಾಣ ಹೋದರೂ ಪರವಾಗಿಲ್ಲ. ನಾನು ಸಚಿವ ವಿನಯ ಕುಲಕರ್ಣಿ ವಿರುದ್ಧ ಹೋರಾಟ ನಡೆಸುತ್ತೇನೆ. ಬಿಜೆಪಿಯನ್ನು ಗೆಲ್ಲಿಸುತ್ತೇನೆ ಎಂದು ಘೋಷಿಸಿದರು.

ಕಾಂಗ್ರೆಸ್ ಆಡಳಿತ ಇನ್ನು ಹನ್ನೇರಡು ದಿನ ಮಾತ್ರ ಬಾಕಿ

ಧಾರವಾಡ : ಕಾಂಗ್ರೆಸ್ ಆಡಳಿತ ಇನ್ನು ಹನ್ನೇರಡು ದಿನ ಮಾತ್ರ ಬಾಕಿ ಉಳಿದಿದೆ. ಪೊಲೀಸರೇ ನೀವು ಕಾಂಗ್ರೆಸ್ ಆಳುಗಳಲ್ಲ. ನಿಮ್ಮ ಅಂಗಿ ಚೊಣ್ಣ ನಮ್ಮ ಕನ್ನಡಿಗರ ಹಣದ್ದು ಎಂದು ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ ಹೇಳಿದರು. ಅವರು ಗುರುವಾರ ಧಾರವಾಡ ಜಿಲ್ಲಾಧೀಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪೊಲೀಸರು ನಾವು ಕೊಡುವ ಪಗಾರದಿಂದ ನೀವು ಬದುಕಿತ್ತಿದ್ದೀರಿ. ನೀವು ಆರೂವರೆ ಕೋಟಿ ಕನ್ನಡಿಗರ ಆಳುಗಳು. ಹೊರತು ಸಚಿವ ವಿನಯ ಕುಲಕರ್ಣಿ ಅವರ ಆಳಲ್ಲಎಂದರು. ಮೇ. 12ರ ನಂತರ ನಮ್ಮ ಮನೆ ಬಾಗಿಲು ಕಾಯಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು ನಿಮ್ಮ ನೌಕರಿ ನೀವು ಸರಿಯಾಗಿ ಮಾಡಿ. ಖಾಕಿ ಬಟ್ಟೆ, ಅಂಗೆ, ಚೊಣ್ಣ, ಟೋಪಿ, ಬೂಟು ಎಲ್ಲವೂ ನಮ್ಮ ತೆರಿಗೆ ಹಣ. ನಿಮಗೆ ನಿಜವಾಗಿಯೂ ಅವರ ಬಗ್ಗೆ ಕಾಳಜಿ ಇದ್ದರೆ ರಾಜೀನಾಮೆ ಕೊಟ್ಟು, ಬಟ್ಟೆ ಬಿಚ್ಚಿಟ್ಟು ರಾಜಕೀಯಕ್ಕೆ ಬನ್ನಿ, ಅನ್ನ ಉಂಡ ಮನೆಗೆ ದ್ರೋಹ ಬಗಿಬೇಡಿ. ಸರಕಾರದ ಕೆಲಸ ಮಾಡುವುದು ಬಿಟ್ಟು ಇಂತಹ ಕೆಲಸಕ್ಕೆ ಕೈ ಹಾಕಬೇಡಿ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ನಿರ್ಮಲಾ ಜವಳಿ, ಶಂಕರ ಶೆಳಕೆ, ದತ್ತಾ ಡೋರ್ಲೆ, ನಿಜನಗೌಡ ಪಾಟೀಲ, ಮಹೇಶ ಎಲಿಗಾರ, ಈರಣ್ಣ ಹಪ್ಪಳ್ಳಿ,ವೀರೇಶ ಅಂಚಟಗೇರಿ,ರಾಕೇಶ ನಾಜರೆ, ಮಂಜು ನಡಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪೊಲೀಸ್ ಇನ್ಸಪೆಕ್ಟರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು : ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಧಾರವಾಡ : ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಪ್ರಶಾಂತ ನಾಯ್ಕ, ಪಿಎಸ್ ಐ ಆನಂದ ಠಕ್ಕನವರ ವಿರುದ್ಧ ಗುರುವಾರ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಿಜೆಪಿವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಚುನಾವಣಾ ಆಯೋಗಕ್ಕೆ ಜಿಲ್ಲಾಧಿಕಾರಿಗಳ ಮುಖಾಂತರ ಇಬ್ಬರ ವಿರುದ್ಧ ದೂರು ಸಲ್ಲಿಸುವುದರ ಜೊತೆಗೆ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು. ಇದಲ್ಲದೆ, ಕಳೆದ ವಾರವಷ್ಟೇ ಧಾರವಾಡ ಡಿಎಸ್ಪಿ ಚಂದ್ರಶೇಖರ ಹಾಗೂ ಗರಗ ಪಿಎಸ್ಐ ಸಂಗಮೇಶ ಹಾಲಹಾವಿ ವಿರುದ್ಧವೂ ದೂರು ನೀಡಲಾಗಿದೆ. ಆದರೆ ಈವರೆಗೆ ಜಿಲ್ಲಾಡಳಿತ ಅವರನ್ನು ಸೇವೆಯಿಂದ ಹೊರಗಿಟ್ಟಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಸೋಲಿನಿಂದ ಕಂಗೆಟ್ಟಿದ್ದಾರೆ. ಸೋಲನ್ನು ಹೆಗಲ ಮೇಲೆ ಹೊತ್ತುಕೊಂಡು ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಹೀಗಾಗಿ ತಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಹುದ್ದೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕೆಲವರಿಗೆ ನೇರವಾಗಿ ಧಮ್ಕಿ ಹಾಕಿದರೆ,ಇನ್ನು ಕೆಲವರಿಗೆ ತಮ್ಮ ಚೇಲಾಗಳಿಂದ ಹಾಗೂ ಇಬ್ಬರಿಗೂ ಡೊಗ್ಗದಿದ್ದಾಗ ಪೊಲೀಸರ ಮೂಲಕ ಒತ್ತಡ ಹಾಕುವ ಕೆಲಸ ಮಾಡಿಸುತ್ತಿದ್ದಾರೆ. ಪೊಲೀಸರು ಸಚಿವರ ಚೇಲಾಗಳಂತೆ ಕಾರ್ಯನಿರ್ವಹಿಸುವುದು ಸರಿಯಲ್ಲ. ಅವರು ಸಚಿವ ವಿನಯ ಕುಲಕರ್ಣಿ ಅವರ ವಾಲೀಕಾರರಂತೆ ಕಾರ್ಯನಿರ್ವಹಿಸುವುದು ಸರಿಯಲ್ಲ. ಬಿಜೆಪಿಯ ಜನ ಬೆಂಬಲ ನೋಡಿ ಸಚಿವ ವಿನಯ ಕುಲಕರ್ಣಿ ದಿಕ್ಕು ತಪ್ಪಿದ್ದಾರೆ. ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರಿಗೆ ಧಮ್ಕಿ ಕೊಟ್ಟಿರುವುದು ನೋಡಿದರೆ, ಅವರು ಸೋಲಿನಿಂದ ಹತಾಶರಾಗಿ ಇಂತಹ ಕೆಟ್ಟ ಕೆಲಸಗಳಿಗೆ ಕೈ ಹಾಕಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಆರೋಪಿಸಿದರು. ಬಿಜೆಪಿಯ ಮುಖಂಡ ಗುರುನಾಥಗೌಡ ಅವರಿಗೆ ಪೊಲೀಸರು ಎನ್ ಕೌಂಟರ್ ಮಾಡುತ್ತೇವೆ ಎಂದು ಹೇಳಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇಷ್ಟಕ್ಕೆ ನಮ್ಮ ಗುರುನಾಥಗೌಡ ಅವರು ಹೆದರಿಲ್ಲ. ಜೀವ ಎಲ್ಲ ಹೋಗವುದು ಒಂದೇ ಸಲ. ಆದರೆ ಆ ದುಷ್ಟ ವಿನಯ ಕುಲಕರ್ಣಿ ಕ್ಷೇತ್ರದಿಂದ ಮನೆಗೆ ಹೋಗಬೇಕಿದೆ ಎಂಬ ನಿರ್ಧಾರದಿಂದ ಹೋರಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಡಿಎಸ್ಪಿ ಚಂದ್ರಶೇಖರ, ಗರಗ ಪಿಎಸ್ ಐ ಸಂಗಮೇಶ ಹಾಲಬಾವಿ ಅವರ ವಿರುದ್ಧ ಒಂದು ವಾರದ ಹಿಂದ ದೂರು ನೀಡಿದರೂ ಈವರೆಗೆ ಯಾವುದೇ ಉತ್ತರ ಸಿಕ್ಕಿಲ್ಲ. ಈಗ ಮತ್ತೇ ಧಾರವಾಡ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪ್ರಶಾಂತ ನಾಯ್ಕ, ಪಿಎಸ್ಐ ಆನಂದ ಠಕ್ಕನವರ ವಿರುದ್ದವೂ ದೂರು ನೀಡಿದ್ದೇವೆ. ಸಚಿವರ ಅಣತಿಯಂತೆ ಕೆಲಸ ಮಾಡುವುದನ್ನು ಬಿಡಬೇಕಿದೆ. ಬಿಜೆಪಿಯ ಗಟ್ಟಿ ಕಾರ್ಯಕರ್ತರನ್ನು ಅಲುಗಾಡಿಸುವ ಕೆಲಸ ಮಾಡುತ್ತಿದ್ದಾರೆ. ವಾರ್ಡನಂ 10ರಲ್ಲಿ ನೇರವಾಗಿ ಸಚಿವ ವಿನಯ ಕುಲಕರ್ಣಿ ಅವರು ನಮ್ಮ ಕಾರ್ಯಕರ್ತ ಶ್ರೀನಿವಾಸ ಕೋಟ್ಯಾನ ಅವರಿಗೆ ಬೆದರಿಕೆ ಹಾಕಿದ್ದರು. ಇನ್ನೊಬ್ಬ ಕಾರ್ಯಕರ್ತ ಸಚಿನ ಹಲಗೇರಿ ಅವರಿಗೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದೀಗ ಗುರುನಾಥ ಗೌಡ ಅವರಿಗೆ ಪೊಲೀಸ್ ಎನ್ಕೌಂಟರ್ ಮಾಡುತ್ತೀವಿ ಎಂದು ಹೇಳಿದ್ದು ನೋಡಿದರೆ ಇವರು ರಕ್ಷಣೆ ಮಾಡಕ್ಕ ಇದ್ದಾರೋ ಅಥವಾ ಕೊಲೆ ಮಾಡಕ್ಕ ಇದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಕಿಡಿ ಕಾರಿದರು. ಇವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬರುವ ದಿನಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಜಿಲ್ಲಾಧೀಕಾರಿ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ. ಪೊಲೀಸರು ವಾಲೀಕಾರಕ್ಕೀ ಮಾಡುವುದು ಬಿಟ್ಟು ಸರಕಾರದ ಕೆಲಸ ಮಾಡಿರಿ ಎಂದು ಎಚ್ಚರಿಸಿದರು.

ತಮಟಗಾರ ಕುರಿತು ದಾಖಲೆ ಬಿಡುಗಡೆ ಮಾಡಿ್ದ ವಕೀಲ ಚೌಧರಿ

ಧಾರವಾಡ : ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ ಮೇಲಿರುವ ಹಲವು ಪ್ರಕರಣಗಳ ದಾಖಲೆಗಳನ್ನು ಗುರುವಾರ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಎಂ.ಎಂ. ಚೌಧರಿ ಬಿಡುಗಡೆ ಮಾಡಿದರು. ಪ್ರಮುಖವಾಗಿ ಅವರ ಮೇಲೆ ಮಟ್ಕಾ, ಬೆಟ್ಟಿಂಗ್, ಜಾತಿನಿಂದನೆ, ಪೊಲೀಸ್ ಮೇಲೆ ಹಲ್ಲೆ ಸೇರಿದಂತೆ ಅನೇಕ ಕ್ರಿಮಿನಲ್ ಪ್ರಕರಣಗಳು ಇವೆ ಎಂದು ಅಪರಾಧಗಳ ಪಟ್ಟಿ ಮಾಧ್ಯಮಗಳಿಗೆ ತೋರಿಸಿದರು. ಬಳಿಕ ಮಾತನಾಡಿದ ಅವರು, ಮುಕ್ತಂ ಸೊಗಲದ ಮೇಲೆ ಒಂದೇ ಕೇಸ ಇದ್ದವರಿಗೆ ತಡಿಪಾರ್ ಗಡಿಪಾರ್ ಮಾಡ್ಯಾರ. ಲಿಸ್ಟರ್ ಪ್ರಕಾರ, ನೋಡಿದರೆ ಅವರಿಗಿಂತ ಹೆಚ್ಚು ಪ್ರಕರಣಗಳಿರುವ ಇವರನ್ನು ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಧಾರವಾಡದಲ್ಲಿ ನಡೆಯುತ್ತಿರುವ ಬೆಟ್ಟಿಂಗ್ ಧಂದೆಯ ರೂವಾರಿಯಿಂದಾಗಿ ಸಣ್ಣ ಹುಡುಗರು ಸುಸೈಡ್ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನನ್ನ ಮೇಲೆಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಇಂತಹ ಅಪರಾದ ಹಿನ್ನೆಲೆಯ ವ್ಯಕ್ತಿಯನ್ನು ಸಮಾಜದ ಹೆಸರಿನಲ್ಲಿ ಬೆಂಬಲಿಸುವುದು ಸರಿಯಲ್ಲ. ಈ ಹಿಂದಿನ ಚುನಾವಣೆಗಳಲ್ಲಿ ಯಾರ್ಯಾರ ಬಳಿ ಎಷ್ಟು ದುಡ್ಡು ಪಡೆದಿದ್ದಾರೆ ಎಂಬ ದಾಖಲೆಗಳನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಎಚ್ಚರಿಸಿದರು. ಇದೇ ವ್ಯಕ್ತಿ ಈ ಹಿಂದೆ ಜಬ್ಬಾರ ಖಾನ್ ಹೊನ್ನಳ್ಳಿ ಗೆ ಟಿಕೇಟ್ ಸಿಕ್ಕಾಗ ಅವರು ಮುಸ್ಲಿಂ ಸಮಾಜದವರು ಆಗಿರರಲಿಲ್ಲವೇ ಎಂದು ಪ್ರಶ್ನಿಸಿದ ಅವರು ಇದು ಯಾರ ಧರ್ಮ ಯಾರ ಯುದ್ದ ಅಲ್ಲ. ಧರ್ಮದ ಹೆಸರಿನಲ್ಲಿ ಮಸೂತಿಗಳ ದುರ್ಬಳಕೆ ಖಂಡನೀಯ ಎಂದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ವಕೀಲ ಎಂ.ಎಂ. ಜಮಾದಾರ್ ಉಪಸ್ಥಿತರಿದ್ದರು.

ಚುನಾವಣೆ ಹೆಸರಿನಲ್ಲಿ ಹಿಂದು-ಮುಸ್ಲಿಂರ ಧರ್ಮಯುದ್ದಸರಿಯಲ್ಲ

ಧಾರವಾಡ : ಧಾರವಾಡ ಶಹರ ವಿದ್ಯಾಕಾಶಿ, ಉತ್ತಮ ವಾತವರಣವಿದೆ. ಆದರೆ ಇದೀಗ ಚುನಾವಣೆ ಹೆಸರಿನಲ್ಲಿ ಹಿಂದು-ಮುಸ್ಲಿಂರ ಹೆಸರಿನಲ್ಲಿ ಧರ್ಮಯುದ್ದ ನಡೆದಿದೆ. ಇದು ಸರಿಯಾದ ಬೆಳವಣಿಗೆ ಅಲ್ಲ ಎಂದು ಉದ್ಯಮಿ ನಿಜಾಮೋದ್ದೀನ್ ಶೇಖ ಹೇಳಿದರು. ಅವರು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಇದು ರಾಜಕೀಯ. ರಾಜಕೀಯವನ್ನು ರಾಜಕೀಯವಾಗಿಯೇ ನೋಡಬೇಕು. ಧರ್ಮದ ಹೆಸರಿನಲ್ಲಿ ಪ್ರತಿಷ್ಠೆ ಕಣವನ್ನಾಗಿ ಮಾಡಲಾಗುತ್ತಿದೆ. ನಮಗೆ ಎಲ್ಲ ಸಮಾಜದ ಜನರು ಅಷ್ಟೇ ಎಂದರು. ಇದರಿಂದಾಗಿ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ ಎಂದು ಇಸ್ಮಾಯಿಲ್ ತಮಟಗಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕಿತ್ತೂರನನ್ನು ಹೆದರಿಸಿ, ಬೆದರಿಸಿ, ನಾಮಪತ್ರ ಹಿಂದಕ್ಕೆ ಪಡೆಯುವಂತೆ ಮಾಡಿದ ಕಾಂಗ್ರೆಸ್ ಅಭ್ಯರ್ಥಿಗೆ ನಮ್ಮ ಬೆಂಬಲವಿಲ್ಲ ಎಂದ ಅವರು ಅದೇ ರೀತಿ ಜೆಡಿಯು ಅಭ್ಯರ್ಥಿ ಜಾವೀದ್ ಬೆಳಗಾಂವಕರ್ ಅವರಿಗೆ ಕೊಲೆ ಬೆದರಿಕೆ ಹಾಕಿದಲ್ಲದೆ, ಮನೆಗೆ ಕಲ್ಲು ಹೊಡೆಸಿದ್ದಾರೆ. ನನಗೂ ಸಾಕಷ್ಟು ಬೆದರಿಕೆ ಕರೆ ಬಂದಿವೆ,. ಚುನಾವಣೆ ನಂತರ ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ರಾಜಕೀಯಕ್ಕಾಗಿ ಸಮಾಜದಲ್ಲಿನ ಒಳ್ಳೇಯ ವಾತವರಣ ಕೆಡಿಸಬೇಡಿ. ಇದು ಮುಸ್ಲಿಂ ಧರ್ಮ ಕೆಡಿಸಲು ಹುನ್ನಾರ ನಡೆದಿದೆ, ನಮ್ಮ ಸಮಾಜದಲ್ಲಿ ಕೂಡ ಸಾಕಷ್ಟು ಒಳ್ಳೆಯ ಜನ ಹೆದರಿದ್ದಾರೆ. ಮತದಾರರಿಗೆ ಎಲ್ಲರ ಇತಿಹಾಸ ಗೊತ್ತಿದೆ. ಮತದಾನ ಮಾಡುವ ಮೂಲಕ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದರು. ಇದೇ ವೇಳೆ ಮುಕ್ತುಂ ಸೊಗಲದಗೆ ನಮ್ಮ ಬೆಂಬಲವಿದ್ದು. ಇಸ್ಮಾಯಿಲ ತಮಟಗಾರ ಗೆ ಹೋಲಿಸಿದರೆ ಮುಕ್ತುಂ ಸೊಗಲದ ಅಪರಾದಗಳು ಕಡಿವೆ ಎಂದರು. ಮುಕ್ತಂ ಮೊದಲು ಪೇಂಟರ್ ಇದ್ದ ದುಡಿದು ತಿನ್ನುವುದು ಗೊತ್ತಿದೆ. ಆದರೆ ಇಸ್ಮಾಯಿಲ್ ತಮಟಗಾರಗೆ ಅದು ಗೊತ್ತಿಲ್ಲ. ಅಲ್ಲದೆ, ಅವರು ಈಗಾಗಲೇ ಒಂದು ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದಾರೆ ಎಂದು ದೂರಿದರು.

ಬಿಜೆಪಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ

ಧಾರವಾಡ : ಜಾತಿ, ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕುವ ಬಿಜೆಪಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ ಎಂದು ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ವೀರಣ್ಣ ಮತ್ತಿಗಟ್ಟಿ ಹೇಳಿದರು. ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ವ ಜನಾಂಗದ ಏಳ್ಗೆ ಬಯಸುವ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಜನ ಕೈ ಹಿಡಿಯುವ ಮೂಲಕ ಮತ್ತೊಮ್ಮೆ ಅಧಿಕಾರ ನೀಡಿ ಜನರ ಸೇವೆಗೆ ಅವಕಾಶ ನೀಡಲಿದ್ದಾರೆ ಎಂದರು. ಮಾತಿನ ಮೇಲೆಯೇ ಸಾಮ್ರಾಜ್ಯ ನಿರ್ಮಿಸುವ ಮೋದಿ ಹಾಗೂ ಅಮಿತ ಶಾ ಅವರಿಂದ ದೇಶದ ಅಭಿವೃದ್ಧಿ ಅಸಾಧ್ಯ. ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಇವರೆಲ್ಲ ಅದರ ಮೂಲಕವೇ ಅಧಿಕಾರಕ್ಕೆ ಬರಲು ನೋಡುತ್ತಾರೆ. ಆದರೆ ಕಾಂಗ್ರೆಸ್ ಪಕ್ಷ ಹಾಗಲ್ಲ. ಈ ಸಲವೂ ಜಯಭೇರಿ ಬಾರಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದೆ. ಇದು ಶತಸಿದ್ದ ಎಂದರು. ಈ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಆಗಲಿದೆ ಎಂಬ ಮಾಧ್ಯಮಗಳ ಸಮೀಕ್ಷೆ ಇದೆ. ಆದರೆ ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ೧೩೮ ರಿಂದ ೧೪೨ ಸ್ಥಾನಗಳು ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದು, ಬಹುಮತ ಸಿಗಲಿದೆ. ಎಂದರು. ರಾಜ್ಯದ ಜನತೆ ಬಿಜೆಪಿ ತಿರಸ್ಕಾರ ಮಾಡಲಿದ್ದು ಯಡಿಯೂರಪ್ಪ ಸಿಎಂ ಆಗೋದು ದೂರದ ಮಾತು. ಈ ಚುನಾವಣೆಯಲ್ಲಿ ಬಿಜೆಪಿ ೬೦ ಸ್ಥಾನ ಪಡೆಯೋದು ಅಸಾಧ್ಯ ಎಂಬಂತಾಗಿದೆ ಎಂದರು. ದಲಿತ ಸಿಎಂ ಬೇಡ ಅಂತ ನಾನೇನು ಹೇಳಿಲ್ಲ. ಚುನಾವಣೆ ಫಲಿತಾಂಶದ ಬಳಿಕ ಎಲ್ಲರ ಅಭಿಪ್ರಾಯ ಪಕ್ಷದ ವರಿಷ್ಠರು ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ. ಇನ್ನೂ ಸಿಎಂ ಸಿದ್ದರಾಮಯ್ಯ ಅವರು ಎರಡೂ ಸ್ಥಾನಗಳಲ್ಲಿ ಬಹು ಅಂತರಗಳ ಮತಗಳಿಂದ ಆಯ್ಕೆ ಆಗಲಿದ್ದಾರೆ ಎಂದರು. ಬೆಳಗಾವಿಯ ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಅವರು ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಅಸಮಾಧಾನಗೊಂಡು ಇಲ್ಲಸಲ್ಲದ, ಆರೋಪ ಮಾಡುತ್ತಿದ್ದಾರೆ. ಅವರ ಮಾತಿನಲ್ಲಿ ಯಾವುದೇ ಹುರುಳಿಲ್ಲ ಎಂದರು.

ಪೊಲೀಸ್ ಇನ್ಸ್‍ಪೆಕ್ಟರ್ ವಿರುದ್ಧ ದೂರು ನೀಡಿದ ಗುರುನಾಥಗೌಡ

ಧಾರವಾಡ : ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಪ್ರಶಾಂತ ನಾಯ್ಕ ಹಾಗೂ ಪಿಎಸ್‍ಐ ಆನಂದ ಠಕ್ಕಣ್ಣವರ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರ ಪ್ರಚಾರ ನಡೆಸದಂತೆ ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಸದಸ್ಯ ದಿ. ಯೋಗೀಶಗೌಡ ಗೌಡರ ಸಹೋದರ ಹಾಗೂ ಬಿಜೆಪಿ ಮುಖಂಡ ಗುರುನಾಥ ಗೌಡ ಗೌಡರ ಬೆಳಗಾವಿವಲಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ. ಬುಧವಾರ ಹಲವು ಪೊಲೀಸರನ್ನು ಮನೆಗೆ ಕಳುಹಿಸಿ, ಬಲವಂತವಾಗಿ ಠಾಣೆಗೆ ಕರೆಸಿಕೊಂಡ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಯಾವುದೇ ಕಾರಣಕ್ಕೂ ಇಲ್ಲದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ತಾಕೀತು ಮಾಡಿದ್ದಾರೆ. ಆದರೆ ಇದಕ್ಕೆ ಒಪ್ಪದಿದ್ದಾಗ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಗುರುನಾಥ ಗೌಡ ವಿವರಿಸಿದ್ದಾರೆ. ಈ ಕುರಿತು ಪ್ರಜಾಕಿರಣದೊಂದಿಗೆ ಮಾತನಾಡಿದ ಗುರುನಾಥಗೌಡ, ನಾನು ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದು, ನನ್ನ ಸಹೋದರ ಯೋಗೀಶಗೌಡ ಕೂಡ ಬಿಜೆಪಿಯ ಹೆಬ್ಬಳ್ಳಿಯ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು. ಅವರ ಕೊಲೆಗೆ ರಾಜಕೀಯ ಕಾರಣವಿದ್ದು, ಅವನ ಸಾವಿಗೆ ನ್ಯಾಯ ಕೊಡಿಸುವುದು ನನ್ನ ಜವಾಬ್ದಾರಿಯಾಗಿದೆ. ಹೀಗಾಗಿ ನಾನು ಕಳೆದ ಹಲವು ತಿಂಗಳಿಂದ ಬಿಜೆಪಿಯ ಪರ ಧಾರವಾಡ ವಿಧಾನ ಸಭಾ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರ ಮಾಡುತ್ತಿದ್ದೇನೆ. ಅದು ನನ್ನ ಹಕ್ಕು ಕೂಡ. ಅದನ್ನು ಮೊಟಕುಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಚಿವ ಸಂತೋಷ ಲಾಡ್ ನೀರಿಳಿಸಿದ ಗ್ರಾಮಸ್ಥರು

ಧಾರವಾಡ : ಕಲಘಟಗಿ ವಿಧಾನ ಸಭಾ ಕ್ಷೇತ್ರದ ಜನರ ಕೈಗೆ ಸಿಗದೆ ಐದು ವರ್ಷ ಪೂರೈಸಿದ್ದ ಕಾರ್ಮಿಕ ಸಚಿವ ಸಂತೋಷ ಲಾಡ್ ಗೆ ಸಲಕಿನಕೊಪ್ಪ ಗ್ರಾಮಸ್ಥರು ಸರಿಯಾಗಿ ನೀರಿಳಿಸಿದ್ದಾರೆ. ಗರಡಿ ಮನೆಗೆ ಅನುದಾನ ನೀಡದೆ ನಿರ್ಲಕ್ಷ್ಯ ತೋರಿದಲ್ಲದೆ, ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರ ಎಂ.ಎಂ. ಶಿಂಧೆ ಮೇಲೆ ಕ್ರಮ ಏಕೆ ಜರುಗಿಸಿಲ್ಲ ಎಂದು ತರಾಟೆ ತೆಗೆದುಕೊಂಡರು. ಹಲವು ಬಾರಿ ಅಲೆದಾಡಿದರೂ ಜನರ ಕೈಗೆ ಸಿಗದ ನೀವು ಈಗ ಚುನಾವಣೆ ಬಂದಾಗ ಎರಡು ಲಕ್ಷ ಕೊಡೊದು ಬೇಡ. ಬೇಕಿದ್ದರೆ ನಿಮಗೆ ಎರಡು ಲಕ್ಷ ಕೊಡ್ತಿನಿ ಹಾಗೇ ಹೇಳುವುದು ಬಿಡಿ ಎಂದು ಗುಡುಗಿದರು. ಈಗ ನಿಮಗೆ ಅನುದಾನ ಕೊಡಲು ಎಲ್ಲಿ ಅವಕಾಶ ಇದೆ ಎಂದು ಪ್ರಶ್ನಿಸಿ ತಬ್ಬಿಬ್ಬುಗೊಳಿಸಿದರು. ಆಗ ನಿಜವಾಗಿಯೂ ಸಹಾಯಕತೆ ತೋರಿದ ಸಚಿವ ಸಂತೋಷ ಲಾಡ್ ಗ್ರಾಮಸ್ಥರಿಗೆ ಆಯ್ತಾ ಅಣ್ಣ, ಗುತ್ತಿಗೆದಾರ ತಪ್ಪಿತಸ್ಥನಿದ್ದರೆ ಕ್ರಮ ಕೈಗೊಳ್ಳುತ್ತೇನೆ. ಈ ತರಹದ ಬೇಡಿಕೆ ಎಲ್ಲಕಡೆ ಇರುತ್ತವೆ. ಎಲ್ಲ ಕೆಲಸ ಮಾಡಲು ಆಗಲ್ಲ. ನಾನು ದೇವರಲ್ಲ. ದಯವಿಟ್ಟು ತಪ್ಪಾಗಿದೆ. ನಾನು ನಿಮ್ಮ ಕೆಲಸ ಮಾಡಿಕೊಡುತ್ತೇನೆ ಎಂದು ಅಂಗಲಾಚಿದರೂ, ಗ್ರಾಮಸ್ಥರು ಇದಕ್ಕೆ ಒಪ್ಪಲಿಲ್ಲ. ರೊಕ್ಕ ಕೊಡಲು ರೆಡಿ ಇದ್ದೇನೆ ಎಂದು ಹೇಳುವುದು ಅರ್ಹತೆ ಅಲ್ಲ ಎಂದು ಪಟ್ಟು ಹಿಡಿದರು. ಆಯ್ತು ತಪ್ಪಾಗಿದೆ ಕ್ಷಮಿಸಿ ಎಂದು ಅಲ್ಲಿಂದ ಸಚಿವ ಸಂತೋಷ ಲಾಡ್ ತೆರಳಿದರು.

ರೈತರ ಸ್ವಾಭಿಮಾನದ ಬದುಕಿಗಾಗಿ ಜೆಡಿಎಸ್ ಆರ್ಶೀವದಿಸಿ : ಶಾಸಕ ಕೋನರಡ್ಡಿ

ಹುಬ್ಬಳ್ಳಿ : ಇಡೀ ನಾಡಿನ ರೈತ ಕುಲದ ಸ್ವಾಭಿಮಾನದ ಬದುಕಿಗಾಗಿ ಈ ಬಾರಿ ಜೆಡಿಸ್ ಅನ್ನು ಬೆಂಬಲಿಸಬೇಕು. ಆ ಮೂಲಕ ಕುಮಾರಣ್ಣ ಸರ್ಕಾರ ರೈತರ ಕೈಯಲ್ಲಿ ಅಧಿಕಾರ ಸಾಬೀತು ಪಡಿಸಬೇಕು ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು. ಅವರು ಬುಧವಾರ ನವಲಗುಂದ ತಾಲೂಕಿನ ಕುಮಾರಗೊಪ್ಪ, ಯಮನೂರ, ಭದ್ರಾಪೂರದಲ್ಲಿ ಬಿರುಸಿನ ಪಾದಯಾತ್ರೆ ನಡೆಸಿ, ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದ ಬಳಿಕ ನೆರೆದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು. ಮಹದಾಯಿ, ಕಳಸಾ-ಬಂಡೂರಿ ರೈತ ಹೋರಾಟಗಾರರ ಮೇಲೆ ಪ್ರಕರಣ ಹಿಂದಕ್ಕೆ ಪಡೆಯುವಂತೆ ಜೆಡಿಎಸ್ ಮಾತ್ರ ಸದನದ ಬಾವಿಗಿಳಿದು ಹೋರಾಟ ನಡೆಸಿದೆ. ಬಿಜೆಪಿ ನಾಯಕರು ಈ ಬಗ್ಗೆ ಚಕಾರ ಎತ್ತದಿರವುದು ನೋಡಿದರೆ, ರೈತರ ಮೇಲಿನ ನಿಜವಾದ ಕಾಳಜಿ ಅರ್ಥವಾಗುತ್ತದೆ ಎಂದು ಟೀಕಿಸಿದರು. ರೈತರ, ಸ್ತ್ರೀ ಶಕ್ತಿ ಸಂಘಗಳ ಹಾಗೂ ನೇಕಾರರ ಸಂಪೂರ್ಣ ಸಾಲಮನ್ನಾ ಸೇರಿದಂತೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಜನ ಪರ ನೀತಿಗಳನ್ನು ಜಾರಿಗೊಳಿಸುವ ಮೂಲಕ ಪ್ರತಿಯೊಬ್ಬರ ಬದುಕನ್ನು ಹಸನುಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಸ ನವಲಗುಂದ ತಾಲೂಕು ಜೆಡಿಎಸ್ ಅಧ್ಯಕ್ಷ ವೀರಣ್ಣ ನೀರಲಗಿ, ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಮೇಗಳಮನಿ, ಅನ್ನಪೂರ್ಣ ದೊಡ್ಡಮನಿ, ನೀಲಕಂಠಪ್ಪ ಹಾವಿನ, ನಾಗಪ್ಪ ಗಾಣಗೇರ, ಶಂಕ್ರಪ್ಪ ವೀರಶೆಡ್ಡಿ, ಬಸವರಾಜ ಹಾವಿನ, ರಮೇಶ ಜಮಖಂಡಿ, ಮೈನೋದ್ದೀನ್ ದಖನಿ, ಮಕಬೂಲ್‍ಸಾಬ ಠಾಣೆದ, ದಾವಲಸಾಬ ನಲವಡಿ, ಅಮೀನಸಾಬ ನಾಯಕವಾಡಿ, ಯಮನೂರ ಜೆಡಿಎಸ್ ಮುಖಂಡರಾದ ಶರಣು ಯಮನೂರ, ಶ್ರೀಶೈಲ ಮೂಲಿಮನಿ, ಬಸನಗೌಡ ಪಾಟೀಲ, ಹೇಮರಡ್ಡಿ ನಿಂಗರಡ್ಡಿ, ಬಸಯ್ಯ ಕಂಬಿ, ಆಸೀಫ್ ಯಲಿಗಾರ, ಶರಣು ಗೊರಲೆಕೊಪ್ಪ, ಶಿವಣ್ಣಪ್ಪ ಮೊರಬದ, ಗುರು ಮೇಟಿ, ದ್ಯಾಮಣ್ಣ ಹೊನಕುದರಿ, ಮಹಾಂತೇಶ ಕುಲಕರ್ಣಿ, ಸಿದ್ದು ಕಡೇಮನಿ, ಸುರೇಶ ಮಾದರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಚುನಾವಣೆ ಆಯೋಗದ ನಿಯಮಗಳಂತೆ ಲೆಕ್ಕಪತ್ರ ನಿರ್ವಹಿಸಿ

ಧಾರವಾಡ : ಚುನಾವಣಾ ಆಯೋಗದ ನಿಯಮಗಳ ಅನುಸಾರವಾಗಿ ಅಭ್ಯರ್ಥಿಗಳು ಲೆಕ್ಕಪತ್ರಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು. ಯಾವುದೇ ರೀತಿಯಲ್ಲಿ ಸುಳ್ಳು ಮಾಹಿತಿ ಅಥವಾ ದಾಖಲೆಗಳನ್ನು ಸೃಷ್ಠಿಸಬಾರದು ಎಂದು ಚುನಾವಣಾ ಖರ್ಚು ವೆಚ್ಚಗಳ ವೀಕ್ಷಕರಾದ ಆನಂದಕುಮಾರ ಹೇಳಿದರು. ಅವರು ಬುಧವಾರ ಕರ್ನಾಟಕ ವಿಶ್ವವಿದ್ಯಾಲಯದ ಹೊಸ ಅತಿಥಿ ಗೃಹದಲ್ಲಿ ನಡೆದ 71 ಧಾರವಾಡ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಮತ್ತು ಅವರ ಅಧಿಕೃತ ಏಜೆಂಟರುಗಳ ಸಭೆಯಲ್ಲಿ ಮಾತನಾಡಿದರು. . ಅಭ್ಯರ್ಥಿಗಳು ತಮಗೆ ನಿಗದಿ ಪಡಿಸಿದ ಮಿತಿಯೊಳಗೆ ಚುನಾವಣಾ ಖರ್ಚು ವೆಚ್ಚ ನಿರ್ವಹಿಸಿ, ಪ್ರತಿದಿನ ವಿವರಗಳನ್ನು ಸಲ್ಲಿಸಬೇಕು. ಪ್ರತಿಯೊಂದು ದಾಖಲೆಯನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಲಾಗುತ್ತದೆ ಅಭ್ಯರ್ಥಿಗಳು ಕರಪತ್ರ, ಬ್ಯಾನರ್, ಇತರೆ ಖರ್ಚು, ವೆಚ್ಚಗಳ ವಿವರಗಳನ್ನು ನೀಡಬೇಕು. ಚುನಾವಣಾ ಆಯೋಗವು ಪ್ರತಿಯೊಬ್ಬ ಅಭ್ಯರ್ಥಿಗೆ 28 ಲಕ್ಷ ರೂ.ಗಳ ವೆಚ್ಚದ ಮಿತಿಯನ್ನು ನಿಗದಿಪಡಿಸಿದ್ದು, ಅದರ ಮಿತಿಯಲ್ಲಿ ಅಭ್ಯರ್ಥಿಗಳು ಖರ್ಚು, ವೆಚ್ಚಗಳನ್ನು ನಿರ್ವಹಿಸಬೇಕು. ಮೂರು ಹಂತಗಳಲ್ಲಿ ಚುನಾವಣೆ ವೆಚ್ಚ ಪರಿಶೀಲನೆ ಕಾರ್ಯ ನಡೆಯುತ್ತದೆ. ಪರಿಶೀಲನೆ ವೇಳೆ ತಪ್ಪದೇ ಹಾಜರಾಗಬೇಕು. ಲೆಕ್ಕ ವಹಿಗಳು, ಖರ್ಚಿನ ವೋಚರುಗಳು, ಬ್ಯಾಂಕ್ ಪಾಸ್ ಪುಸ್ತಕ, ಎಬಿಸಿ ರಜಿಸ್ಟರ್ ನಿರ್ವಹಿಸಿ ಪೂರ್ಣ ಮಾಹಿತಿ ಒದಗಿಸಬೇಕು ಎಂದರು. 71-ಧಾರವಾಡ ಕ್ಷೇತ್ರದ ಚುನಾವಣಾಧಿಕಾರಿ ಪಿ.ಜಯಮಾಧವ ಮಾತನಾಡಿ, ಸುಳ್ಳು ಮಾಹಿತಿ ನೀಡಿದರೇ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿಯಾಗಿರುವ ತಹಶೀಲ್ದಾರ ಪ್ರಕಾಶ ಕುದರಿ, ಸಹಾಯಕ ವೆಚ್ಚ ವೀಕ್ಷಕರಾದ ಆರ್.ಎನ್.ಈರೇಗೌಡ, ಎಸ್.ಎಂ.ಕೋಳೂರು, ವೀಕ್ಷಕರ ಲೇಸನಿಂಗ್ ಅಧಿಕಾರಿಯಾಗಿರುವ ಜಂಟಿ ಕೈಗಾರಿಕಾ ನಿರ್ದೇಶಕ ಪಿ.ನಾಗೇಶ ಸೇರಿದಂತೆ ವಿವಿಧ ಪಕ್ಷದ ಅಭ್ಯರ್ಥಿಗಳ ಏಜೆಂಟರುಗಳು ಪಾಲ್ಗೊಂಡಿದ್ದರು

ಹೊಸ ಯೋಜನೆ ಸಾಕಾರಗೊಳಿಸಲು ಅವಕಾಶ ನೀಡಿ : ಶಾಸಕ ಬೆಲ್ಲದ

ಧಾರವಾಡ : ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾಕ್ಷೇತ್ರ-74ರ ಶಾಸಕರಾದ ಅರವಿಂದ ಬೆಲ್ಲದ ಅವರು ಧಾರವಾಡ ಶಹರದ ವಾರ್ಡ ನಂಬರ 15ರ ವ್ಯಾಪ್ತಿಯಲ್ಲಿ ಬರುವ ಲೈನ ಬಜಾರ ಸೌದಾಗಾರ ಚಾಳ್, ಕಾಕರ ಓಣಿ, ಕೊರವರ ಓಣಿ, ವಡ್ಡರ ಓಣಿ, ಜಯಭೀಮ ನಗರ, ಶ್ರಿರಾಮ ನಗರ, ಚಪ್ಪರಬಂದ ಕಾಲನಿ, ಶಿವಾನಂದ ನಗರದಲ್ಲಿ ಬುಧವಾರ ಪಾದಯಾತ್ರೆಯ ಮೂಲಕ ಮನೆ ಮನೆ ಭೇಟಿ ನೀಡಿ ಮತಯಾಚನೆ ಮಾಡಿದರು. ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಶಾಸಕರ, ಸಂಸದರ ಹಾಗೂ ಮಹಾನಗರ ಪಾಲಿಕೆಯ ಸದಸ್ಯರ ಅನುದಾನದಡಿಯಲ್ಲಿ, ಅಭಿವೃದ್ಧಿಯನ್ನೇ ಕಾಣದಾಗಿದ್ದ ಮತ್ತು ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದ ವಾರ್ಡ ನಂಬರ 15ರಲ್ಲಿ 24*7 ಉಚಿತವಾಗಿ ಕುಡಿಯುವ ನೀರಿನ ಸೌಲಭ್ಯ ಸಂಪರ್ಕ, ತೆರೆದ ಚರಂಡಿಗಳ ನಿರ್ಮಾಣ, ರಸ್ತೆ ದುರಸ್ತಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ವಾಸಿಸುತಿರುವ ಪ್ರದೇಶಗಳಲ್ಲಿ ಸಿ.ಸಿ.ರೋಡ್ ನಿರ್ಮಾಣ, ಉದ್ಯಾನವನ ಅಭಿವ್ರಧ್ಧಿ ಹಾಗೂ ಇಂತಹ ಅನೇಕ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು ಕ್ಷೇತ್ರವನ್ನು ಮಾದರಿಯನ್ನಾಗಿ ರೂಪಿಸಿದ್ದು, ಇನ್ನಷ್ಟು ಹೊಸ ಯೋಜನೆಗಳನ್ನು ಸಾಕಾರಗೊಳಿಸಲು ಇನ್ನೊಮ್ಮೆ ಅವಕಾಶ ನೀಡಿ ಆಶೀರ್ವದಿಸುವಂತೆ ಮತದಾರರಲ್ಲಿ ಮನವಿ ಮಾಡಿದರು. ಈ ಸಮಯದಲ್ಲಿ ಕಳೆದ 5 ವರ್ಷದಲ್ಲಿ ಶಾಸಕರು ಕೈಗೊಂಡ ವಿವಿಧ ಅಭಿವೃದ್ದಿ ಕಾರ್ಯಗಳು, ನಡತೆ, ಸರಳ ಸಜ್ಜನ ಸ್ವಭಾವ ಈ ಎಲ್ಲವನ್ನು ಮನವರಿಕೆ ಮಾಡಿಕೊಂಡು ಕಾಂಗ್ರೇಸ ಪಕ್ಷದ ಮತ್ತು ಅಲ್ಫಸಂಖ್ಯಾತರ ಪ್ರಮುಖ ಮುಖಂಡರಾದ ಷರೀಪ ಬಳಬಟ್ಟಿ, ಕಲಂದರ ಹುಲ್ಲರ, ಷರೀಫ ಬಿಜಾಪುರ ಯವರು ಕಾಂಗ್ರೇಸ್ ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷಕ್ಕೆ ಅರವಿಂದ ಬೆಲ್ಲದ ರವರ ನೇತೃತ್ವದಲ್ಲಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಅನೂಪ ನೀಲನ್ನವರ, ಯಾದವಾಡ, ಸಂಜಯ ಚಲವಾದಿ, ಅಶೋಕ ಕಾಂಬಳೆ, ಪ್ರವೀಣ ಕುಲಕರ್ಣಿ,ಪವನ ಕುಲಕರ್ಣಿ, ಸಂತೋಷ ಪಾಟೀಲ, ಮಹಾದೇವ ಚೌಡಿ, ಲಕ್ಷ್ಮಿ ಸಿಂಧೆ, ರೇಣುಕಾ ಶಿರಗುಂಬಿ, ಸಂಗಮೇಶ ಬೂದಿಹಾಳ, ಅಕ್ಕಮ್ಮ ಮುಶನ್ನವರ, ನಾರಾಯಣ ಚಂದನಕರ, ಪ್ರಕಾಶ ಲೋಲಿ , ಗೀರಿಶ ಹೊಸಮಠ, ಮೊಹಮ್ಮದ ಚಪ್ಪರಬಂದ ಹಾಗೂ ಅನೇಕ ಜನ ಸ್ಥಳೀಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವಿವಿಧೆಡೆ ಪಾದಯಾತ್ರೆ ನಡೆಸಿದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ

ಧಾರವಾಡ : ಧಾರವಾಡ ವಿಧಾನ ಸಭಾ ಕ್ಷೇತ್ರ-71 ರ ವ್ಯಾಪ್ತಿಯಲ್ಲಿ ಬರುವ ಕೊಪ್ಪದ ಕೇರಿಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಅಮೃತ ದೇಸಾಯಿ ಅವರು ಬುಧವಾರ ಸಂಜೆ ಬಿರುಸಿನ ಪ್ರಚಾರ ನಡೆಸಿದರು. ವಿನಾಯಕನ ಮಂದಿರದಿಂದ ಆರಂಭಗೊಂಡ ಬೃಹತ್ ಮೆರವಣಿಗೆಯಲ್ಲಿ ಐದನೂರಕ್ಕೂ ಹೆಚ್ಚು ಮಹಿಳೆಯರು ಹಾಗೂ ಯುವಕರು, ಪಾಲ್ಗೊಂಡು ಬಿಜೆಪಿಯ ಬೃಹತ್ ಶಕ್ತಿ ಪ್ರದರ್ಶನ ನಡೆಸಿದರು. ಅಲ್ಲದೆ, ಕೆಲವಡೆ ಹೂವು ಚೆಲ್ಲಿ, ಅದ್ಧೂರಿ ಸ್ವಾಗತ ಕೋರಲಾಯಿತು. ಮನೆ ಮನೆಯಲ್ಲಿ ಆರತಿ ಬೆಳಗಿ, ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರಿಗೆ ಶುಭಕೋರಿದರು. ಕೆಲವರು ಸಿಹಿ ತಿನ್ನಿಸಿ ಈ ಬಾರಿಯ ಗೆಲುವು ನಿಮ್ಮದೇ ಎಂದು ಸಂತಸ ಪಟ್ಟರು. ಮಾರುತಿ ಯುವಕ ಮಂಡಳದ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಬಿಜೆಪಿಯ ಜಯಘೋಷ ಮೊಳಗಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ, ಮುಖಂಡರಾದ, ವಿರೇಶ ಅಂಚಟಗೇರಿ, ಈರಣ್ಣ ಹಪ್ಪಳಿ, ಸುರೇಶ ಧೂಳಪ್ಪನವರ, ರಾಜೇಶ್ವರಿ ಅಳಗವಾಡಿ, ಮಂಜುನಾಥ ಚೋಳಪ್ಪನವರ ಹಾಗೂ ಮಾರುತಿ ಯುವಕ ಮಂಡಳದ ಸದಸ್ಯರು ಪಾಲ್ಗೊಂಡಿದ್ದರು.

ಬಿಜೆಪಿ, ಕಾಂಗ್ರೆಸ್ ರಾಜಕೀಯ ಪ್ರೇರಿತ ದೂರಿಗೆ ಶಾಸಕ ಕೋನರಡ್ಡಿ ತಿರುಗೇಟು

ಹುಬ್ಬಳ್ಳಿ : ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವಾದ ಜ್ಯಾತ್ಯಾತೀತ ಜನತಾದಳವೂ ರಾಜ್ಯದಲ್ಲಿ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಘೋಷಿಸಿದೆ. ಆದರೆ ನವಲಗುಂದ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಈ ಕುರಿತು ನವಲಗುಂದ ವಿಧಾನ ಸಭಾ ಚುನಾವಣಾಧಿಕಾರಿಗೆ ದೂರು ನೀಡುವ ಮೂಲಕ ತಮ್ಮ ಸಣ್ಣತನವನ್ನು ತೋರಿಸಿವೆ ಎಂದು ನವಲಗುಂದ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಎನ್.ಹೆಚ್. ಕೋನರಡ್ಡಿ ತಿರುಗೇಟು ನೀಡಿದ್ದಾರೆ. ಅವರು ಬುಧವಾರ ನವಲಗುಂದ ತಾಲೂಕಿನ ಭದ್ರಾಪೂರ ಗ್ರಾಮದಲ್ಲಿ ಬಿರುಸಿನ ಪಾದಯಾತ್ರೆ ನಡೆಸಿದ ನಂತರ ಪ್ರಜಾಕಿರಣದೊಂದಿಗೆ ಮಾತನಾಡಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಘೋಷಣೆ ಮಾಡಿದಂತೆ ನಾವು ನವಲಗುಂದ ಕ್ಷೇತ್ರದ ರೈತ ಬಾಂಧವರಿಗೆ ರೈತರ ಸಂಪೂರ್ಣ ಸಾಲಮನ್ನಾದ ಭರವಸೆ ನೀಡುತ್ತಿದ್ದೇವೆ. ಅದನ್ನು ಒಂದು ಆಂದೋಲನದ ರೂಪದಲ್ಲಿ ತೆಗೆದುಕೊಂಡು ಹೋಗುವ ಉದ್ದೇಶದಿಂದ ಜನರ ಮನೆ ಮನೆಗೆ ತೆರಳಿ ಸಾಲಮನ್ನಾ ಕುರಿತಂತೆ ವಸ್ತು ಸ್ಥಿತಿ ಕುರಿತು ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದೇವೆ. ಅಲ್ಲದೆ, ಚುನಾವಣಾ ಪ್ರಮುಖ ಅಂಶಗಳನ್ನು ಜನರ ಮುಂದಿಡುವುದು ಕೂಡ ನಮ್ಮ ಕತ್ಯರ್ವವಾಗಿದೆ. ಅದರಂತೆ ನಾವು ರೈತರಿಗೆ ಸಾಲಮನ್ನಾದ ಭರವಸೆ ನೀಡುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಅಡಗಿಲ್ಲ ಎಂದರು. ಮಾಜಿ ಶಾಸಕ ಶಂಕರ ಪಾಟೀಲ ಅವರಿಗೆ ನಿಜವಾಗಿಯೂ ರೈತರ ಬಗ್ಗೆ ಇಚ್ಛಾಶಕ್ತಿ ಇದ್ದರೆ, ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಅವರದ್ದೆ ಇದೆ. ಅವರು ಬೇಕಿದ್ದರೆ ತಮ್ಮ ನಾಯಕರಾದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೇಲೆ ಒತ್ತಡ ಹೇರಿ ರೈತರ ಸಂಪೂರ್ಣ ಸಾಲಮನ್ನಾ ಮಾಡಿಸಲಿ ಎಂದು ಸವಾಲ್ ಹಾಕಿದರು. ನಾವು ಕಾನೂನು ಪ್ರಕಾರ ಚುನಾವಣೆ ಮಾಡುತ್ತಿದ್ದೇವೆ. ಅಲ್ಲದೆ, ಚುನಾವಣಾ ನಿಯಮದಂತೆ ಜಿಲ್ಲಾ ಚುನಾವಣಾಧೀಕಾರಿಗಳಿಗೆ ಒಂದು ಪ್ರತಿಯನ್ನು ನೀಡಿಯೇ ಅದರ ಪರವಾನಿಗೆ ಪಡೆದು ಕಾನೂನು ಪ್ರಕಾರ ಚುನಾವಣೆ ಮಾಡುತ್ತಿದ್ದೇವೆ. ಒಬ್ಬ ಜವಬ್ದಾರಿಯುತ ಮಾಜಿ ಶಾಸಕನಾಗಿ ಅವರಿಗೆ ಅಷ್ಟು ಸಾಮಾನ್ಯ ಜ್ಞಾನ ಇರದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಜನರ ಪ್ರೀತಿ, ವಿಶ್ವಾಸ ಹಾಗೂ ಕ್ಷೇತ್ರದಲ್ಲೆಡೆ ಜೆಡಿಎಸ್ ಪರ ಅಭೂತಪೂರ್ವ ಬೆಂಬಲ ಕಂಡು ಅದನ್ನು ಸಹಿಸದೆ ಜನರನ್ನು ಎತ್ತಿಕಟ್ಟುವ ಕೆಲಸಕ್ಕೆ ಕೈ ಹಾಕಿರುವುದು ಸರಿಯಲ್ಲ ಎಂದರು. ಚುನಾವಣಾಧಿಕಾರಿಗಳ ವಿರುದ್ಧವೇ ಆಪಾದನೆ ಮಾಡುತ್ತಿರುವುದು ನೋಡಿದರೆ ಅವರು ಸಂಪೂರ್ಣ ಹತಾಶರಾದಂತೆ ಕಂಡು ಬರುತ್ತಿದೆ ಎಂದು ಟೀಕಿಸಿದ ಶಾಸಕ ಕೋನರಡ್ಡಿ ಅವರು ಇಂತಹ ಕ್ಷುಲ್ಲಕ ರಾಜಕಾರಣ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಬಿಜೆಪಿ ಹಾಗೂ ಕಾಂಗ್ರೆಸನವರ ರಾಜಕೀಯ ಪ್ರೇರಿತ ದೂರಿಗೆ ಮಣಿದು ಚುನಾವಣಾಧಿಕಾರಿಗಳು ಒಂದು ವೇಳೆ ಜೆಡಿಎಸ್ ವಿರುದ್ಧ ಪ್ರಕರಣ ದಾಖಲಿಸಿದರೆ ನಾವು ರಾಜ್ಯ ಚುನಾವಣಾ ಆಯೋಗದ ಮೊರೆ ಹೋಗಬೇಕಾಗುತ್ತದೆ ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಎಚ್ಚರಿಸಿದರು. ನಾವು ಕಾನೂನು ಬದ್ಧವಾಗಿಯೇ ಪರವಾನಿಗೆ ಪಡೆದು ರೈತರ ಸಾಲಮನ್ನಾ ಕುರಿತು ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಇದರಲ್ಲಿ ಯಾವುದೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ತರಾಟೆ ತೆಗೆದುಕೊಂಡರು.

ಕಾಂಗ್ರೆಸ್ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ ಪರ ವೀರಣ್ಣ ಮತ್ತಿಕಟ್ಟಿ ಪ್ರಚಾರ

ಧಾರವಾಡ : ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ ಪರ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅವರು ಬುಧವಾರ ಬಿರುಸಿನ ಪ್ರಚಾರ ನಡೆಸಿದರು. ನಗರದ ಲಕ್ಷ್ಮೀಸಿಂಗನಕೇರಿ, ಅಮರಗೋಳ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಬಿರುಸಿನ ಪಾದಯಾತ್ರೆ ನಡೆಸಿ, ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧತೀವ್ರ ವಾಗ್ದಾಳಿ ನಡೆಸಿದರು. ಹಿಂದುತ್ವದ ಹೆಸರಿನಲ್ಲಿ ಜನರಲ್ಲಿ ಕೋಮು ಭಾವನೆ ಕೆರಳಿಸಿ, ಸಮಾಜದ ಶಾಂತಿ ಕದಡುವ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಇದು ಶ್ರೀಮಂತರ ಮತ್ತುಬಡವರ ನಡುವಿನ ಹಾಗೂ ಜನಸಾಮಾನ್ಯರ ಮತ್ತು ಉದ್ಯಮಿಗಳ ನಡುವಿನ ಚುನಾವಣೆಯಾಗಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ ಪಕ್ಷವನ್ನು ಗೆಲ್ಲಿಸುವ ಮೂಲಕ ಬಡವರ ಸೇವೆ ಮಾಡಲು ಸದಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಮುಖಂಡರಾದ ಪಿ.ಎಚ್.ನೀರಲಕೇರಿ, ಕೆಪಿಸಿಸಿ ಸದಸ್ಯರಾದ ಪ್ರಕಾಶ ಘಾಟಗೆ, ಪಾಲಿಕೆ ಸದಸ್ಯರು ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಸಾವಿರಾರು ಸೀರೆ ವಶಪಡಿಸಿಕೊಂಡ ಚುನಾವಣಾಧಿಕಾರಿಗಳು

ಧಾರವಾಡ: ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ಸಂಗ್ರಹಿಸಿದ್ದ 4,050 ಸೀರೆಗಳನ್ನು ಚುನಾವಣಾಧಿಕಾರಿಗಳು ಬುಧವಾರ ವಶಕ್ಕೆ ಪಡೆದ ಘಟನೆ ಧಾರವಾಡದಲ್ಲಿ ನಡೆದಿದೆ. ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತ್ತಿಕೊಳ್ಳದ ರತ್ನಾ ಸಿಮೆಂಟ್ ಬ್ಲಾಕ್ ತಯಾರಿಕಾ ಘಟಕದಲ್ಲಿ ಈ ಸೀರೆಗಳು ಸಿಕ್ಕಿದ್ದು, ಮತದಾರರಿಗೆ ಹಂಚಲು ಸಂಗ್ರಹಿಸಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಚುನಾವಣಾಧಿಕಾರಿಗಳು ಈ ಅಕ್ರಮವನ್ನು ಪತ್ತೆ ಮಾಡಿದ್ದಾರೆ. ಅಸ್ಲಾಂ ಗೋಕಾಕ್ ಒಡೆತನದ ರತ್ನಾ ಸಿಮೆಂಟ್ ಗೋದಾಮು ಮೇಲೆ ದಾಳಿ ನಡೆಸಿದ ಚುನಾವಣಾ ಅಧಿಕಾರಿಗಳು ಎಲ್ಲ ಸೀರೆಗಳನ್ನು ಜಪ್ತಿ ಮಾಡಿ ಪೊಲೀಸರಿಗೆ ಹಸ್ತಾಂತರ ಮಾಡಿದರು. ಅವರು ಇವು ಯಾರಿಗೆ ಸೇರಿದ್ದು ಮತ್ತೇ ಏತಕ್ಕಾಗಿ ಇಲ್ಲಿ ಸಂಗ್ರಹಿಸಿಡಲಾಗಿತ್ತು ಎಂಬುದು ಪತ್ತೆ ಹಚ್ಚುವ ಕೆಲಸ ಮಾಡಬೇಕಿದೆ ಎಂದು ಚುನಾವಣಾಧಿಕಾರಿ ಜಯಮಾಧವ್ ಅವರು ಪ್ರಜಾಕಿರಣಕ್ಕೆ ತಿಳಿಸಿದ್ದಾರೆ. ರತ್ನಾ ಸಿಮೆಂಟ್ ಮಾಲೀಕ ಅಸ್ಲಾಂ ಗೋಕಾಕ್ ದಾಳಿ ವೇಳೆ ಲಭ್ಯ ಇರಲಿಲ್ಲ. ಹೀಗಾಗಿ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಆ ಸೀರೆಗಳು ಯಾರಿಗೆ ಸೇರಿದ್ದು ಎಂಬ ಸತ್ಯಾಂಶ ಹೊರಬರಲಿದೆ ಎಂದು ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿ ವೆಂಕಟೇಶ ಮೂರ್ತಿ ಪ್ರಜಾಕಿರಣಕ್ಕೆ ತಿಳಿಸಿದರು. ಸೀರೆಗಳ ಮೇಲೆ ಯಾವುದೇ ಪಕ್ಷದ ಚಿಹ್ನೆ ಅಥವಾ ಅಭ್ಯರ್ಥಿಯ ಭಾವಚಿತ್ರ ಇರಲಿಲ್ಲ. ಹೀಗಾಗಿ, ಸೀರೆಗಳನ್ನು ದಾಸ್ತಾನು ಮಾಡಿದ ಘಟಕದ ಮಾಲೀಕರಿಗೆ ಸೂಕ್ತ ದಾಖಲೆ ನೀಡುವಂತೆ ನೋಟಿಸ್ ನೀಡಲಾಗಿದೆ ಎಂದರು. ಈ ಕುರಿತು ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕಾಶ್ ರೈ ಗೆ ಎಲೆ, ಅಡಕೆ, ಸಮೇತ ಪಂಥಾಹ್ವಾನ ನೀಡಿದ ಬಿಜೆಪಿ ಮುಖಂಡ

ಧಾರವಾಡ : ಹಿರಿಯ ನಟ ಪ್ರಕಾಶ್ ರೈ ಅವರು ಬಳ್ಳಾರಿಯಲ್ಲಿ ಕಾಂಗ್ರೆಸ್ ಸರ್ಕಾರ ಹತ್ತು ಪರ್ಸೆಂಟ್ ಕಮಿಷನ್ ಸರ್ಕಾರ ಅಲ್ಲ ಎಂದು ಹೇಳಿಕೆ ನೀಡಿರುವುದಕ್ಕೆ ಬಿಜೆಪಿ ಮುಖಂಡ ಹನುಮಂತ ಕೊಟಬಾಗಿ ಗರಂ ಆಗಿದ್ದಾರೆ. ಅಲ್ಲದೆ, ಪ್ರಕಾಶ ರೈ ಗೆ ಏಲೆ ಅಡಕೆ ಸಮೇತವಾಗಿ ಪಂಥಾಹ್ವಾನ ನೀಡಿದ್ದು, ನನ್ನ ಹತ್ರ ದಾಖಲೆಯಿದೆ. ನಿಮಗೆ ನೈತಿಕತೆ ಇದ್ದರೆ ಬನ್ನಿ ಧಾರವಾಡಕ್ಕೆ ಎಂದು ಸವಾಲ್ ಎಸೆದಿದ್ದಾರೆ‌. ರಾಜ್ಯದ ಕಾಂಗ್ರೆಸ್ ಸರಕಾರ 100% ಕಮಿಷನ್ ಮತ್ತು ಭ್ರಷ್ಟಾಚಾರ ಇರುವ ಸರಕಾರ. ಅದರ ದಾಖಲೆ ನನ್ನ ಹತ್ರ ಇದೆ. ನಿಮಗೆ ತಾಕತ್ತಿದ್ದರೆ ನೀವು ಧಾರವಾಡಕ್ಕೆ ಬನ್ನಿ. ಎಲ್ಲ ಸಾಹಿತಿಗಳ, ವಿದ್ಯಾವಂತರ, ಸಕಲ ಮತದಾರರ ಮುಂದೆ ದಾಖಲೆಗಳನ್ನು ಬಹಿರಂಗಪಡಿಸುತ್ತೇನೆ ಎಂದು ಪ್ರಶ್ನಿಸಿದ್ದಾರೆ. ನನ್ನ ದಾಖಲೆಗಳು ಸುಳ್ಳಾದರೆ ಆ ಜನರ ಮುಂದೆ ನನ್ನ ತಲೆಯನ್ನು ಬೋಳಿಸಿಕೊಳ್ಳುತ್ತೇನೆ. ಅವು ಸತ್ಯವಾದರೆ ನೀವು ತಲೆ ನೀವು ತಲೆ ಬೋಳಿಸಿ ಕೊಳ್ಳಬೇಕು ಎಂದು ಗುಡುಗಿದ್ದಾರೆ. ನೀವು ದಾಖಲೆಗಳಿದ್ದರೆ ಬಿಡುಗಡೆ ಮಾಡಿ ಅಂತ ನಮ್ಮ ದೇಶದ ಪ್ರಧಾನಿ ಮೋದಿಜಿಯವರಿಗೆ ಸವಾಲ್ ಹಾಕುವುದಾದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಹತ್ತು ಪರ್ಸೆಂಟ್ ಕಮಿಷನ್ ಸರ್ಕಾರ ಅಂತ ಹೇಳಿರುವುದು ಸತ್ಯವಾಗಿದೆ. ಅಲ್ಲದೆ, ಅವರು ನಿಮಗೆ ದಾಖಲೆ ಕೊಡುವಂತಹ ಅವಶ್ಯಕತೆ ಇಲ್ಲ. ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಹನುಮಂತ ಕೊಟಬಾಗಿ ತಮಗೆ ಎಲೆ ಅಡಿಕೆಯ ಮುಖಾಂತರ ಪಂಥಾಹ್ವಾನವನ್ನು ನೀಡುತ್ತಾ ಇದ್ದೇನೆ ಸ್ವೀಕರಿಸಿ ಎಂದು ಆಹ್ವಾನದ ನೀಡಿದ್ದಾರೆ. ನೀವು ಕಾಂಗ್ರೆಸ್ ಪಕ್ಷದ ಏಜೆಂಟರಾಗಿ ಕೆಲಸ ಮಾಡ್ತಾ ಇದ್ದೀರಾ. ನಿಮಗೆ ಮೋದಿಜಿಯವರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಚಲನ ಚಿತ್ರದಲ್ಲಿ ವಿಲನ್ ಆಗಿ ರೋಲ್ ಮಾಡುವುದು ಬಹಳ ಸಹಜ. ಆದರೆ ನಿಜ ಜೀವನದಲ್ಲಿ ವಿಲನ್ ರೋಲ್ ಮಾಡುವುದು ಬಹಳ ಕಠಿಣ ನೀವು ಕಾಂಗ್ರೆಸ್ಸಿನ ಒಂದು ರಣ ನಿಮ್ಮ ರಕ್ತದಲ್ಲಿ ಹರಿತಾ ಇದೆ. ಅದಕ್ಕೆ ಈ ರೀತಿ ಭಾರತೀಯ ಜನತಾ ಪಕ್ಷದ ವಿರುದ್ಧ ಹಾಗೂ ವಿಶೇಷವಾಗಿ ಮೋದಿಜಿ ವಿರುದ್ಧ ಮಾತಾಡ್ತಾ ಇದ್ದೀರಿ. ಇದು ಸರಿಯಲ್ಲ ಬೃಹನ್ನಳೆ ನಾಟಕವನ್ನು ಬಂದ್ ಮಾಡ್ರಿ. ನೇರವಾಗಿ ರಾಜಕೀಯಕ್ಕೆ ಬನ್ನಿ ಯಾವುದಾದರೂ ಪಕ್ಷ ಸೇರಿ ರಾಜಕೀಯ ಮಾಡಿ ಆವಾಗ ಗೊತ್ತಾಗುತ್ತೆ ನಿಮಗೆ ಎಂದು ತಿರುಗೇಟು ನೀಡಿದ್ದಾರೆ. ಇದಲ್ಲದೆ, ಬನ್ನಿ ಧಾರವಾಡಕ್ಕೆ ದಾಖಲೆ ಸಮೇತ ನಿಮಗೆ ತೋರಿಸ್ತೇನೆ ನಿಮಗೆ ನಾಚಿಕೆ ಆಗುವಂತಹ ದಾಖಲೆಗಳು ನನ್ನ ಹತ್ರ ಇದೆ ಬನ್ನಿ ಬನ್ನಿ ಎಂದು ಬಹಿರಂಗ ಸವಾಲ್ ಹಾಕಿದ್ದಾರೆ. ಇದಕ್ಕೆ ಪ್ರಕಾಶ ರೈ ಯಾವ ರೀತಿ ಜವಾಜ್ ನೀಡುತ್ತಾರೆ ಅಥವಾ ನಯಣುಚಿಕೊಳ್ತಾರೆಯೇ ಕಾದು ನೋಡಬೇಕಿದೆ.

ಗಿನ್ನಿಸ್ ದಾಖಲೆ ಮಾಡಿದ ಉಡುಪಿ ಬಾಲೆ

ಉಡುಪಿ : ದೇಹದ ಎದೆಯ ಭಾಗ ಹಾಗೂ ತಲೆಯನ್ನು ಸ್ಥಿರವಾಗಿ ಇರಿಸಿ ಉಳಿದ ಭಾಗವನ್ನು ಒಂದು ನಿಮಿಷಗಳಲ್ಲಿ ೪೧ ಬಾರಿ ತಿರುಗಿಸುವ ಮೂಲಕ ಉಡುಪಿಯ ಬಾಲೆಯೊಬ್ಬಳು ಗಿನ್ನಿಸ್ ದಾಖಲೆ ಮಾಡಿದ್ದಾರೆ. ನೃತ್ಯಪಟು ಹಾಗೂ ಒಂಭತ್ತರ ಹರೆಯದ ತನುಶ್ರೀ ಪಿತ್ರೋಡಿ ದಾಖಲೆ ಬರೆದ ಬಾಲೆಯಾಗಿದ್ದಾಳೆ. ಇವಳ ಸಾಧನೆಗೆ ಇಡೀ ಉಡುಪಿ ಜಿಲ್ಲೆಯ ಜನತೆ ಅಭಿನಂದಿಸಿದ್ದಾರೆ. ಆಕೆಯ ಸಾಧನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊಸ್ಟ್ ಫುಲ್ ಬಾಡಿ ರೆವೊಲ್ಯುಶನ್ ಮೈಟೈನಿಂಗ್ ಎ ಚೆಸ್ಟ್ ಸ್ಟಾಂಡ್ ಪೋಸಿಶನ್ ಮೂಲಕ ಈ ಸಾಧನೆ ಮಾಡಿರುವ ತನುಶ್ರೀ ಗೆ www.prajakiran.com ಕೂಡ ಅಭಿನಂದಿಸುತ್ತದೆ.

ಹಿಂದುತ್ವಕ್ಕಾಗಿ ಪಣ ತೊಟ್ಟ ಧಾರವಾಡದ ಯುವ ಪಡೆ : ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನೂರಾರು ಯುವಕರು

ಧಾರವಾಡ : ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹಾಗೂ ಶಾಸಕ ಅರವಿಂದ ಬೆಲ್ಲದ ಅವರ ಸಮ್ಮುಖದಲ್ಲಿ ಹಿಂದುತ್ವದ ಅಭಿಮಾನದಿಂದಾಗಿ ನೂರಾರು ಯುವಕರು ಕಾಂಗ್ರೇಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. ಹಿಂದುತ್ವವೇ ನಮ್ಮ ಉಸಿರು ಎಂದು ಇಂದಿನ ಯುವಪಡೆ ಭಾರತೀಯ ಜನತಾ ಪಕ್ಷದ ತತ್ವ, ಸಿದ್ದಾಂತಗಳನ್ನು ಅರಿತು ಕಾಂಗ್ರೇಸನ ದುರಾಡಳಿತ ಕಂಡು, ಲವ್ ಜಿಹಾದನಂತಹ ಕೃತ್ಯಗಳಿಗೆ ಬೆಂಬಲಿಸುತ್ತಿರುವ ಕಾಂಗ್ರೇಸಿಗರ ನಡೆ, ಹಿಂದೂ ಧರ್ಮ ಒಡೆಯುವ ಹುನ್ನಾರ, ಕ್ಷೇತ್ರದಲ್ಲಿನ ಸ್ಥಳೀಯ ಸಮಸ್ಯೆಗಳಾದ ಗಣೇಶ ಚತುರ್ಥಿ ಹಬ್ಬ ಆಚರಿಸುವ ಸಮಯದಲ್ಲಿ ಯುವಕರಿಗೆ ನೀಡುತ್ತಿರುವ ಕಿರುಕಳ, ನಗರದಲ್ಲಿ ಹೆಚ್ಚುತ್ತಿರುವ ಗುಂಡಾಗಿರಿಯನ್ನು ವಿರೋಧಿಸಿ ನಗರದ ಯುವಕರು ಸ್ವಯಂ ಪ್ರೇರಣೆಯಿಂದ ಜಾತಿ ಮತ್ತು ಪಂಗಡ ಲೆಕ್ಕಿಸದೇ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದರವರಿಗೆ ಬೆಂಬಲಿಸುವ ದಿಟ್ಟ ನಿರ್ಧಾರ ತೆಗೆದುಕೊಂಡರು. ಯುವಕರ ಪಡೆಯನ್ನು ಸ್ವಾಗತಿಸಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ, ಕ್ಷೇತ್ರದ ಅಭಿವೃದ್ಧಿ ಹಾಗೂ ಸಜ್ಜನ ವ್ಯಕ್ತಿಯ ಪರವಾಗಿ ಎದ್ದಿರುವ ಅಪಾರ ಗೌರವ, ಆಸಕ್ತಿ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿಜಿಯವರಿಗೆ ಜಗತ್ತಿನಲ್ಲಿ ನಡೆಯುತ್ತಿರುವ ಪ್ರಶಂಸೆ ಹಾಗೂ ರಾಷ್ಟ್ರದ ಅಭಿವೃದ್ಧಿಗಾಗಿ ದಿಟ್ಟ್ ಹೆಜ್ಜೆ, ಯುವಕರಿಗಾಗಿ ಅನೇಕ ಉದ್ಯೋಗ ಭರವಸೆಗಳೊಂದಿಗೆ ರಾಷ್ಟ್ರ ಮತ್ತು ರಾಜ್ಯಗಳಲ್ಲಿ ಅವರ ಘನತೆಯನ್ನು ಯುವ ಪೀಳಿಗೆ ಸ್ವಾಗತಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಮೋದಿಯವರ ಮುಂದಾಳತ್ವದಲ್ಲಿ ಭಾರತ ಸದೃಢ ರಾಷ್ಟ್ರವಾಗಲೂ ಸಾಧ್ಯವಾಗಿರುವುದು ಯುವಕರಲ್ಲಿ ಆಶಾಕಿರಣವಾಗಿದೆ. ಇಂದಿನ ಯುವ ಪೀಳಿಗೆ ಹಾಗೂ ಎಲ್ಲ ಸಮುದಾಯದ ಮತದಾರರು ಬಿಜೆಪಿಯ ಪರವಾಗಿರುವುದು ಬಿಜೆಪಿಗೆ ದೊಡ್ಡ ಶಕ್ತಿಯನ್ನು ತಂದುಕೊಟ್ಟಿದೆ ಎಂದರು. ನಗರದ ಸಜ್ಜನ ಜನತೆ ಬೆಂಬಲದಿಂದ ತಾವು ಉತ್ಸಾಹಿತರಾಗಿದ್ದು, ಸಜ್ಜನರೊಂದಿಗೆ ತಾವೆಲ್ಲರೂ ನಿಲ್ಲುವುದಾಗಿ ಹೇಳಿದರು. ಬಿಜೆಪಿಯ ಯುವ ಮೋರ್ಚಾದ ಮುಖಂಡರಾದ ರಾಕೇಶ ನಾಝರೆ, ನಾಗರಾಜ ನಾಯಕ, ಓಂಕಾರ ರಾಯಚೂರ, ಬಸವರಾಜ ಹೊಸಳ್ಳಿ, ಮಂಜುನಾಥ ಹೊಂಗಲದ , ಚೇತನ ಮೇಟಿ,ಗುರುಪ್ರಸಾದ ಕರಡೆನ್ನವರ ಅವರ ನೇತೃತ್ವದಲ್ಲಿ ಪ್ರೇಮ ಮಿರಜಕರ , ಸಂತೋಷ ಚವ್ಹಾಣ, ಸಂತೋಷ ಎಸ್.ಎಮ್, ಬಾಲರಾಜ,ಬಾಲಚಂದ್ರ ಗೂಳಪ್ಪನವರ, ಶಿವರಾಮ ತಲವಾಯಿ, ಪವನ ದುಬೆ, ಮಂಜುನಾಥ ಗುರನಹಳ್ಳಿಮಠ , ಮಂಜು ಮಡಿವಾಳರ, ಆನಂದ, ಮಂಜು ಡೊಳ್ಳಿನ, ಸಂಜಯ ಘಾಟಗೆ, ಮಂಜುನಾಥ ಸಿದ್ದಾಪುರ, ಶಿವು ಅಂಗಡಿ, ಕಿರಣ ಎ, ಸಿದ್ದು, ಸೋಮೇಶ,ಪ್ರವೀಣ ಎಮ್, ಶ್ರೀಕಾಂತ ಮನಿಕಟ್ಟಿ, ಹಾಗೂ ನೂರಾರು ಯುವಕರು ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಅರುಣ ಜೋಶಿ, ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಶಹರ ಘಟಕದ ಅಧ್ಯಕ್ಷ ಯಲ್ಲಪ್ಪ ಅರವಾಳದ, ಪಾಲಿಕೆ ಸದಸ್ಯರಾದ ಸಂಜಯ ಕಪಟಕರ, ಮುಖಂಡರಾದ ರಾಜು ಕೋಟೆನ್ನವರ, ಮೋಹನ ರಾಮದುರ್ಗ, ಹನಮಂತ ಹರಿವಾನ, ಪ್ರಕಾಶ ಗೋಡಬಾಲೆ, ಸಂಗು ಹಿತ್ತಲಮನಿ, ಸುನೀಲ ಕಲಾಲ, ಗಿರೀಶ ಪತಂಗಿ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಕನ್ನಡ ದೇಶದೋಳ್ ಚಿತ್ರದಲ್ಲಿ ಮಿಸ್ಟರ್ ಬೀನ್

ಬೆಂಗಳೂರು : ಸದಾ ಸುದ್ದಿಯಲ್ಲಿರುವ ಕನ್ನಡದ ಮಿಸ್ಟರ್ ಬೀನ್ ಈಗ ಮತ್ತೊಂದು ಸಿನೆಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಕನ್ನಡ ದೇಶದೋಳ್ " ಚಿತ್ರದಲ್ಲಿ ಕನ್ನಡದ ಮಿಸ್ಟರ್ ಬೀನ್ ಖ್ಯಾತಿಯ ಮಂಜುನಾಥ ರೇಳೆಕರ್ ನಟಿಸುತ್ತಿದ್ದು, ಕನ್ನಡ ಭಾಷೆಯ ಅಭಿಯಾನದೊಂದಿಗೆ ತಯಾಗುತ್ತಿರುವ " ಕನ್ನಡ ದೇಶದೋಳ್ " ಸಿನೆಮಾದಲ್ಲಿ ಮಂಜುನಾಥ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅವರು ಜಯಸೂರ್ಯ ಸಿನೆಮಾದ ಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ಮಂಜುನಾಥ ಈಗ ಅವರು ಲವರ್ ಬಾಯ್ ಆಗಿ ತೆರೆಯ ಮೇಲೆ ಬರುತ್ತಿದ್ದಾರೆ. ಈ ಚಿತ್ರ ಅವಿರಾಮ ಕಂಠೀರವ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು ಚಿತ್ರದ ಬಹುತೇಕ ಚಿತ್ರೀಕರಣ ಮುಗಿದು ಎಡಿಟಿಂಗ್ ಶುರುವಾಗಿದೆ. ಈ ಚಿತ್ರ ವಿಶೇಷವಾಗಿ ರಾಜ್ಯದ 30 ಜಿಲ್ಲೆಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು ಒಂದು ವಿಶೇಷ ದಿನದಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಮೇಲೆ ಐಟಿ ದಾಳಿ

ಶಿರಸಿ : ಇಲ್ಲಿಯ ಶಿರಸಿ - ಸಿದ್ಧಾಪುರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿರಸಿಯ ಅಯ್ಯಪ್ಪ ನಗರದಲ್ಲಿರುವ ಮನೆ ಮೇಲೆ ದಿಢೀರ್ ದಾಳಿ ನಡೆದಿದ್ದು, ಉದ್ಯಮಿಯೂ ಆಗಿರುವ ಭೀಮಣ್ಣ ನಾಯ್ಕ್ ಮನೆಗೆ ಹುಬ್ಬಳ್ಳಿಯಿಂದ ಬಂದಿರುವ ಆದಾಯ ತೆರಿಗೆ ಇಲಾಖೆಯ 8 ಅಧಿಕಾರಿಗಳ ತಂಡ ದಾಖಲೆ ಪತ್ರಗಳನ್ನು ಪರಿಶೀಲಿಸುತ್ತಿದೆ.

ಆನಂದ್ ಸಿಂಗ್ , ಸತೀಶ್ ಸೈಲ್ ಗೆ ಶಿಕ್ಷೆಯಾಗಿಲ್ಲ

ಹುಬ್ಬಳ್ಳಿ : ಆನಂದ್ ಸಿಂಗ್ , ಸತೀಶ್ ಸೈಲ್ ಗೆ ಜೈಲಿಗೆ ಹೋಗಿದ್ದಾರೆ ಆದ್ರೇ ಅವರಿಗೆ ಶಿಕ್ಷೆಯಾಗಿಲ್ಲ ಎಂದು ಅವರ ಮೇಲೆ ಆರೋಪ ಇದೆ ಎಂದು ಹುಬ್ಬಳ್ಳಿಯಲ್ಲಿ ಸಿಎಮ್ ಸಿದ್ದರಾಮಯ್ಯ ಹೇಳಿದರು. ನಾನು ಬಳ್ಳಾರಿ ರಡ್ಡಿಗಳ‌ ವಿರುದ್ಧ ಪಾದಯಾತ್ರೆ ಮಾಡಿದ್ದೆ. ಆನಂದ್ ಸಿಂಗ್, ನಾಗೇಂದ್ರ, ಸತೀಶ್ ಸೈಲ್ ವಿರುದ್ಧ ಪಾದಯಾತ್ರೆ ಮಾಡಿಲ್ಲ ಎಂದ ಅವರು ಆನಂದ್ ಸಿಂಗ್ ಹಾಗೂ ಸತೀಶ್ ಸೈಲಗೆ ಶಿಕ್ಷೆಯಾಗಲ್ಲ. ಆದ್ರೇ ರಡ್ಡಿಗಳಿಗೆ ಶಿಕ್ಷೆಯಾಗುತ್ತೆ ಎಂದು ಹಾರಿಕೆ ಉತ್ತರ ನೀಡಿದ‌ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಸ್ಪಷ್ಟವಾಗಿ ಹೇಳಲು ನಿರಾಕರಿಸಿದರು.

ಶೋಭಾಗೆ ಟಿಕೆಟ್ ಕೊಡಿಸಲು ಆಗದ ಯಡಿಯೂರಪ್ಪ

ಹುಬ್ಬಳ್ಳಿ : ಸಂಸದೆ ಶೋಭಾ ಕರಂದ್ಲಾಜೆ ಟಿಕೆಟ್ ಕೊಡಿಸಲು ಆಗದವ ಯಡಿಯೂರಪ್ಪ ನಮ್ಮ ಬಗ್ಗೆ ಏನ್ ಹೇಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದರು. ಅವರು ಬುಧವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಮಗನಿಗೆ ಟಿಕೆಟ್ ತಪ್ಪಿಸಿದವರು ಯಾರು ಎಂದು ಮೊದಲು ಹೇಳಲಿ ಎಂದರು. ಸಂತೋಷ, ಅನಂತಕುಮಾರ್, ಜಗದೀಶ ಶೆಟ್ಟರ್, ಈಶ್ವರಪ್ಪ ಸೇರಿ ಟಿಕೆಟ್ ತಪ್ಪಿಸಿದ್ದಾರೆ ಎಂದು ಆರೋಪಿಸಿದರು. ವಿಜಯೇಂದ್ರ ವರುಣಾದಲ್ಲಿ ಮನೆ ಮಾಡಿ, ಒಂದು ತಿಂಗಳು ಪ್ರಚಾರ ಮಾಡಿದ್ದ. ಅಪ್ಪ ಹೈಕಮಾಂಡ್ ಗೂ ಹೇಳಿ ಚುನಾವಣೆಗೆ ತಯಾರಿ ಮಾಡಿಸಿದ್ದರು. ಯಡಿಯೂರಪ್ಪ ಪಕ್ಷದಲ್ಲಿ ಎಲ್ಲರೂ ಒಟ್ಟಾಗಿ ಇದ್ದರೆ ವಿಜಯೇಂದ್ರಗೆ ಟಿಕೆಟ್ ತಪ್ಪುತ್ತಿರಲಿಲ್ಲ ಎಂದು ಕುಟುಕಿದರು. ನಮಗೆ ಉತ್ತರ ಕರ್ನಾಟಕ ಭಾಗದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ ಸಿಗುತ್ತಿದೆ. ನಮ್ಮ ಯೋಜನೆಗಳಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದ ಅವರು ನಾನು ಈ ಭಾಗದಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ, ಡಿ.ಕೆ. ಶಿವಕುಮಾರ್ ರಾಜ್ಯಾದ್ಯಂತ ಪ್ರಚಾರ ಮಾಡುತ್ತಿದ್ದಾರೆ. ನಾವೆಲ್ಲ ಒಟ್ಟಾಗಿ ಇದ್ದೇವೆ ಎಂದರು. ಮೋದಿಯವರು ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರಿಗೆ ವೃದ್ಧಾಶ್ರಮಕ್ಕೆ ಹೋಗಲು ಹೇಳಿದ್ದರು. ಆದರೆ ಈಗ ರಾಜಕೀಯ ಕಾರಣಕ್ಕೆ ದೇವೇಗೌಡರ ಬಗ್ಗೆ ಮೋದಿ ಹೊಗಳುತ್ತಿದ್ದಾರೆ. ಇದೆಲ್ಲ ನೋಡಿದ್ರೆ ಜೆಡಿಎಸ್, ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತೆ ಎಂದ ಅವರು ನಾನು ಜೆಡಿಎಸ್ ವಿರುದ್ಧ ಟೀಕೆ ಮಾಡುತ್ತೇನೆ. ಮೈಸೂರು ಭಾಗದಲ್ಲಿ ಓನ್ಲಿ ಜೆಡಿಎಸ್ ಮೇಲೆ ಅಟ್ಯಾಕ್ ಮಾಡುತ್ತೇನೆ ಎಂದರು.

ಗಣಿ ಕಳ್ಳರ ಹಣ ವಾಪಾಸು ತನ್ನಿ

ಧಾರವಾಡ : ಬಳ್ಳಾರಿ ಮೈನಿಂಗ್ ಮಾಫಿಯಾದ ಬಗ್ಗೆ ಬಹಳಷ್ಟು ಜನ ತಲೆ ಕೆಡಿಸಿಕೊಂಡಿಲ್ಲ. ಹದಿಮೂರು ಸಾವಿರ ಕೋಟಿ ಅಕ್ರಮ ಸಂಪದಾನೆ ಮಾಡಿದ ಗಣಿ ಕಳ್ಳರ ಹಣ ವಾಪಾಸು ಪಡೆದು ಅದರ ಶೇ. ಹತ್ತು ಪ್ರತಿಶತ ಜನರ ಅಭಿವೃದ್ಧಿ ಗೆ ಬಳಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್. ಆರ್. ಹಿರೇಮಠ ಮನವಿ ಮಾಡಿದರು. ಅವರು ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಚಿವ ಸಂತೋಷ ಲಾಡ್ ಸಂಡೂರಿನ ಮಹಾತ್ಮ ಗಾಂಧಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಅನುದಾನ ನೀಡಲು ಅಡ್ಡಗಾಲು ಹಾಕಿದ್ದಾರೆ. ಇದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು. ಸಂಡೂರಿನ ಜನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಮಾಂಜನಪ್ಪ ಆಲ್ದಳ್ಳಿ ಅವರಿಗೆ ಜನ ಅಕ್ಕಿ, ಬೆಳೆ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ಸಂತಸದ ವಿಷಯ ಎಂದರು. ಅದೇ ರೀತಿ ರಾಜ್ಯದ ಇಪ್ಪತ್ತು ಅಭ್ಯರ್ಥಿಗಳಿಗೆ ವ್ಯಾಪಕ ಬೆಂಬಲ ಸಿಗುತ್ತಿದೆ. ರಾಷ್ಟ್ರೀಯ ಬೆಂಬಲ ಸಿಗುತ್ತಿದೆ. ಹೀಗಾಗಿ ಬರುವ ದಿನಗಳಲ್ಲಿ ಪರ್ಯಾಯ ರಾಜಕಾರಣಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ. ಸಗಣಿ ತಿನ್ನುವವರಿಗೆ ಅಷ್ಟೇ ಅಲ್ಲ ನಮಗೂ ಒಳ್ಳೆಯ ವಾತವರಣ ನಿರ್ಮಾಣ ಮಾಡಿದೆ ಎಂದರು. ಎನ್ ದಾಡಿ ಆಗಿದೆ ಈ ಸಂತೋಷ ಲಾಡ್ ಗೆ . ೨೦೨೩ರ ಚುನಾವಣೆಯಲ್ಲಿ ಎಲ್ಲರಿಗೂ ಧೂಳಿಪಟ ಮಾಡುತ್ತೇವೆ‌. ಜನರ ಹಣ ಕೊಳ್ಳೆ ಹೊಡೆದ ನಾಲಾಯಕ್ ಜನರಿಗೆ ಪಾಠ ಕಲಿಸುತ್ತೇವೆ ಎಂದರು.

ಗಣಿ ರಡ್ಡಿ ಬಗ್ಗೆ ಮೋದಿ, ಅಮಿತ್ ಶಾ ನಿಲುವು ಸ್ಪಷ್ಟ ಪಡಿಸಲಿ

ಧಾರವಾಡ : ಮಹಾಭೂಪ, ಲೂಟಿಕೋರ ಗಣಿ ರಡ್ಡಿ ಮಹಾನ್‌ ನಾ ಚಿಕೆಗೇಡಿ, ಈ ಹಿಂದೆ ಮಾಡಬಾರದ ಮಾಡಿದ್ದನ್ನು ಈ ಯಡಿಯೂರಪ್ಪ ಮರೆತಿದ್ದಾರೆಯೇ ಎಂದು ಎಸ್.ಆರ್. ಹಿರೇಮಠ ಗುಡುಗಿದರು. ಅವರು ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದಂತೆಹ ವಾರ್ ರೀ. ಈ ಕಡೆ ಭ್ರಷ್ಟ ಯಡಿಯೂರಪ್ಪ ರಡ್ಡಿ ಸಹೋದರರು ನಮ್ಮ ಪರ ಪ್ರಚಾರ ಮಾಡುತ್ತಿರುವುದು ಆನೆ ಬಲ ಬಂದಿದೆ ಎಂದು ಹೇಳುತ್ತಿದ್ದಾರೆ.ಆದರೆ ವಾಮಾನಾಚಾರ್ಯ, ಅಮಿತ್ ಶಾ ಹಾಗೂ ಕೆಲವರು ಅದಕ್ಕೆ ನಮಗೆ ಸಂಬಂಧ ಇಲ್ಲ ಎಂದು ಹೇಳುವುದಾದರೆ ರಡ್ಡಿ ಬಗ್ಗೆ ನಿಮ್ಮ ಸ್ಪಷ್ಟ ನಿಲುವು ಬಹಿರಂಗ ಪಡಿಸಿ ಎಂದು ಆಗ್ರಹಿಸಿದರು. ಕ್ರಿಮಿನಲ್ ಗ್ಯಾಂಗ್ ಮುಖ್ಯಸ್ಥ ರಡ್ಡಿ ಸಹಚರರಾದ ಕಂಪ್ಲಿ ಅಭ್ಯರ್ಥಿ ಸುರೇಶ ಬಾಬು, ಬಳ್ಳಾರಿ ನಗರ ಅಭ್ಯರ್ಥಿ ಸೋಮಶೇಖರ ರಡ್ಡಿ, ಅದೇ ರೀತಿ ಹೊಸಪೇಟೆಯ ಆನಂದ ಸಿಂಗ್, ಕೂಡ್ಲಗಿಯ ನಾಗೇಂದ್ರ ಬಾಬು ಅವರನ್ನು ಹೇಗೆ ತೆಗೆದುಕೊಂಡ ಈ ಸಿಎಂ ಸಿದ್ದರಾಮಯ್ಯ ಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ, ಸಂಬಂಧ ಇಲ್ಲ ಅಂತರಾ ಎಂದು ತರಾಟೆ ತೆಗೆದುಕೊಂಡರು. ಅಮಿತ್ ಶಾ ಅವರು ಬಿಜೆಪಿಯ ಪರ ಬಹಿರಂಗ ಪ್ರಚಾರ ಮಾಡೋಡು ಬೇಡ ಅಂತರಾ. ಹಾಗಿದ್ರೆ ಲಾಲುಪ್ರಸಾದ ಯಾದವ್ ವಿರುದ್ದ ವಿಚಾರಣೆ ನಡೆಸಿದ ಹಾಗೇ ಕೇಂದ್ರ ಸರ್ಕಾರವು ಗಾಲಿ ಜನಾರ್ಧನ ರಡ್ಡಿ, ಯಡಿಯೂರಪ್ಪ, ಎಸ್.ಎಮ್. ಕೃಷ್ಣ ಅಂತಹ ಪ್ರಾಣಿಗಳನ್ನು ಹೇಗೆ ಪಕ್ಕದಲ್ಲಿ ಇಟ್ಟುಕೊಂಡು ಚುನಾವಣೆ ಎದುರಿಸುತ್ತೀರಿ. ಅವರ ವಿರುದ್ಧ ವಿಚಾರಣೆ ತೀವ್ರ ಗೊಳಿಸಿ ಎಂದು ಸವಾಲು ಮಾಡಿದರು. ಇಂತಹ ಅಭ್ಯರ್ಥಿಗಳಿಂದ ಬಿಜೆಪಿಯ ಗೌರವ ಹೆಚ್ಚುತ್ತಾ ಎಂದ ಅವರು ಇದೇನಾ ಮೋದಿಯ ಕಪ್ಪು ಹಣದ ವಾರ್ ಎಂದು ತರಾಟೆ ತೆಗೆದುಕೊಂಡರು.

ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಜೆಡಿಯು ದೂರು

ಧಾರವಾಡ : ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ ತಮಗೆ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವಂತೆ ಬೆದರಿಕೆ ಹಾಕಿದ್ದಾರೆ ಎಂದು ಜೆಡಿಯು ಅಭ್ಯರ್ಥಿ ಜಾವೇದ್ ಅಹ್ಮದ್ ಅಬ್ದುಲ್ ಖಾದರ್ ಬೆಳಗಾಂವಕರ್ ಆರೋಪಿಸಿದ್ದಾರೆ. ಈ ಕುರಿತು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿರುವ ಅವರು, ತಮಗೆ ಜೀವ ಬೆದರಿಕೆ ಇದ್ದು ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ನನ್ನ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಮನೆಯ ಕಿಟಿಕಿಗಳು ಒಡೆದು ಹೋಗಿವೆ. ನನಗೆ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದಲ್ಲಿ ಮುಕ್ತವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ. ಅಲ್ಲದೆ, ಈ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆ ಪೊಲೀಸರು ಈವರೆಗೆ ದೂರು ದಾಖಲಿಸಿಕೊಂಡಿಲ್ಲ.ಈ ಹಿನ್ನಲೆಯಲ್ಲಿ ಪೊಲೀಸ್ ಮಹಾ ನಿರ್ದೇಶಕರಿಗೆ ಹಾಗೂ ಚುನಾವಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಮಹಾನಗರ ಪಾಲಿಕೆ ಸದಸ್ಯ ಕಾಣೆಯಾಗಿದ್ದಾರೆ ?

ಧಾರವಾಡ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಾರ್ಡ ನಂಬರ್ ಇಪ್ಪತ್ತರ ಕಾಂಗ್ರೆಸ್ ಪಾಲಿಕೆ ಸದಸ್ಯ ರಘು ಲಕ್ಕಣ್ಣವರ ಕಾಣೆಯಾಗಿದ್ದಾರೆ ಎಂಬ ಬ್ಯಾನರ್ ಅವಳಿ ನಗರದ ಜನತೆಯ ವಾಟ್ಸ ಅಪ್‍ಗಳಲ್ಲಿ ಹರಿದಾಡುತ್ತಿದೆ. ವಾರ್ಡ ನಂ 20ರ ಕಾಂಗ್ರೆಸ್ ಕಾರ್ಪೋರೇಟರ್ ಕಾಣೆಯಾಗಿದ್ದಾರೆ. ಜನಗಳೇ ತೀರ್ಮಾನಿಸಿ, ಇಂತಹ ವ್ಯಕ್ತಿ ಬೇಕೆ. ಯಾಲಕ್ಕಿ ಶೆಟ್ಟರ್ ಕಾಲೋನಿಯ ಜನರೇ ಯೋಚಿಸಿ ಎಂದು ಬರೆದು ಬ್ಯಾನರ್ ನಲ್ಲಿ ಅವರ ಭಾವಚಿತ್ರವನ್ನು ಹಾಕಿ ವಾರ್ಡನಂಬರ್ 20ರಲ್ಲಿ ಹಲವಡೆ ಅಳವಡಿಸಿದ್ದಾರೆ. ಈ ಬಗ್ಗೆ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ರಘು ಲಕ್ಕಣ್ಣವರ್ ಅವರಿಗೆ ಪ್ರಜಾಕಿರಣ ಸಂಪರ್ಕಿಸಿದಾಗ ಇದು ಮುಜುಗರ ತರುವ ಉದ್ದೇಶದಿಂದ ಕೆಲ ಕಿಡಿಗೇಡಿಗಳು ಮಾಡಿದ್ದಾರೆ. ನಾನು ಹೇಗಿದ್ದೀನಿ ಎಂಬುದು ಜನರಿಗೆ ಗೊತ್ತಿದೆ. ನಾನು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದರೂ ಸಹಿಸದ ಕೆಲವರು ಇಂತಹ ಕೆಲಸ ಮಾಡಿದ್ದಾರೆ. ನನಗೂ ಈ ಚಿತ್ರ ವಾಟ್ಸ್‍ಪ್ ಗೆ ಬಂದಿದೆ. ಅದನ್ನು ಕೂಡಲೇ ತೆರವುಗೊಳಿಸಲಾಗುವುದು. ಜನರು ತಮ್ಮ ಸಮಸ್ಯೆಗಳಿದ್ದರೆ ನನಗೆ ನೇರವಾಗಿ ಕರೆ ಮಾಡಿ ಮಾತನಾಡಲಿ. ಅದು ಬಿಟ್ಟು ಕ್ಷುಲ್ಲಕ ಕೆಲಸ ಮಾಡುವುದು ಸರಿಯಲ್ಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್-ಬಿಜೆಪಿ ನಾಯಕರ ನಡುವಿನ ಪ್ರತಿಷ್ಟೆ ಕದನ ರಾಜ್ಯ ವಿಧಾನ ಸಭೆ ಚುನಾವಣೆ ನಂತರ ಮಹಾನಗರ ಪಾಲಿಕೆ ಚುನಾವಣೆಗೂ ವಿಸ್ತರಿಸುವ ಲಕ್ಷಣಗಳು ಈಗಲೇ ಗೋಚರಿಸುತ್ತಿರುವುದು ಸತ್ಯ.

ಜೆಡಿಎಸ್ ಗೆ ಒಮ್ಮೆ ಅಧಿಕಾರ ಕೊಟ್ಟು ನೋಡಿ : ಶಾಸಕ ಕೋನರಡ್ಡಿ ಮನವಿ

ನವಲಗುಂದ : ನವಲಗುಂದ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಎನ್.ಹೆಚ್. ಕೋನರಡ್ಡಿ ಅವರು ನವಲಗುಂದ ತಾಲೂಕಿನ ಗೊಬ್ಬರಗುಂಪಿ, ಅಳಗವಾಡಿ ಹಾಗೂ ಬೆಳವಟಗಿಯಲ್ಲಿ ಮಂಗಳವಾರ ಬಿರುಸಿನ ಪ್ರಚಾರನಡೆಸಿದರು. ನೂರಾರು ಕಾರ್ಯಕರ್ತರೊಂದಿಗೆ ರೋಡ್ ಶೋ, ಪಾದಯಾತ್ರೆ ಹಾಗೂ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಬಳಿಕ ನೆರೆದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು, ಅಳಗವಾಡಿ ಯಾವಾಗಲೂ ದೊಡ್ಡ ಹೊರಾಟಕ್ಕೆ ಹೆಸರು ಮಾಡಿದೆ. ನಾವು ಈ ಹಿಂದೆ 25-30 ವರ್ಷಗಳ ಹಿಂದೆ ಇಲ್ಲಿಂದಲೇ ಕಳಸಾ- ಬಂಡೂರಿ ಹೋರಾಟಕ್ಕೆ ವಕೀಲ ಬಿ.ವಿ. ಸೋಮಾಪುರ ನೇತೃತ್ವದಲ್ಲಿ ಮುನ್ನುಡಿ ಬರೆದಿದ್ದೇವು ಎಂದು ಸ್ಮರಿಸಿದರು. ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್‍ಗೆ ಒಮ್ಮೆ ಅಧಿಕಾರ ಕೊಟ್ಟು ನೊಡಿದ್ದೀರಿ. ಅದೇ ರೀತಿ ಒಮ್ಮೇ ಈ ಬಾರಿ ಜೆಡಿಎಸ್ ಗೆ ಅಧಿಕಾರ ಕೊಟ್ಟು ನೋಡಿ ಎಂದು ಮನವಿ ಮಾಡಿದರು. ಐದು ವರ್ಷ ಆಡಳಿತ ನಡೆಸಿದರೂ ರೈತರ ಸಂಪೂರ್ಣ ಸಾಲಮನ್ನಾದ ಸರಕಾರದ ವಿರುದ್ಧ ಜೆಡಿಎಸ್ ನಾಯಕ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳು ಕೈ ಕೊಟ್ಟಿವೆ. ಆದರೆ ಕುಮಾರಸ್ವಾಮಿ ಮಾತ್ರ ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ ಅವರಿಗೆ ಒಂದು ಸಲ ಅಧಿಕಾರ ಕೊಟ್ಟು ನೋಡಬೇಕು ಎಂದು ರೈತ ಬಾಂಧವರಲ್ಲಿ ಮನವಿ ಮಾಡಿದರು. ಕಳೆದ ಬಾರಿ ಅಳಗವಾಡಿ ಗ್ರಾಮದಿಂದ ಅತಿಹೆಚ್ಚು ಮತ ಬಂದಿದ್ದವು. ಈ ಬಾರಿಯೂ ಕೂಡ ಹೆಚ್ಚು ಮತ ನೀಡಬೇಕು ಎಂದು ಮನವಿ ಮಾಡಿದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ 70 ವರ್ಷ ಮೀರಿದವರಿಗೆ 5000 ಸಾವಿರ ಮಾಶಾಸನ, ಗಭೀರ್ಣಿ ಮಹಿಳೆಯರಿಗೆ 6500 ಭತ್ಯೆ, ನೇಕಾರರ ಸಾಲಮನ್ನಾ, ಟ್ರಾಕ್ಟರ್ , ಬೆಳೆಸಾಲ ಎಲ್ಲವೂ ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದರು. ಮಹದಾಯಿ,ಕಳಸಾ-ಬಂಡೂರಿ ಹೋರಾಟಕ್ಕಾಗಿ ಬಹಳ ನೋವು ಅನುಭವಿಸಿದ್ದೀರಿ. ಆಡಳಿತ ಪಕ್ಷದ ನಾಯಕರು ಲಾಠಿ ಪ್ರಹಾರ ನಡೆಸಿದರೆ, ಪಕ್ಕದಲ್ಲಿಯೇ ಇದ್ದ ವಿರೋಧ ಪಕ್ಷದನಾಯಕರು ನೆರವಿಗೆ ಬರಲಿಲ್ಲ. ನಾನು ಕುಮಾರಸ್ವಾಮಿ ಅವರಿಗೆ ಮನವಿ ಮಾಡಿ ಅವರನ್ನು ಇಲ್ಲಿಗೆ ಕರೆತಂದು ರೈತರಿಗೆ ಧೈರ್ಯ ತುಂಬಿದ್ದೇವೆ. ಹೀಗಾಗಿ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದರೆ ಹೋರಾಟಗಾರರಿಗೆ ಅಗತ್ಯ ಸಹಾಯ ಧನ ನೀಡಲಾಗುವುದು ಎಂದರು. ಅಳಗವಾಡಿಯ ದುರ್ಗಾದೇವಿ ದೇವಸ್ಥಾನಕ್ಕೆ 30 ಲಕ್ಷ ಅನುದಾನ, ಶಾಂತಾದೇವಿ ಗುಡಿಗೆ 15 ಲಕ್ಷ, ಜುಮ್ಮಾ ಮಸೀದಿಗೆ 15 ಲಕ್ಷ, ಚಕ್ಕಡಿ ರಸ್ತೆ, ಅಳಗವಾಡಿ ಶಾನವಾಡ ಬ್ರಿಜ್ ಕಂ ಬ್ಯಾರೇಜ್, ಗೊಬ್ಬರಗುಂಪಿ ಏತ ನೀರಾವರಿ ಯೋಜನೆ ಆರಂಭಗೊಂಡಿದ್ದು ಪೈಪ್ ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಮಲಪ್ರಭಾ ಕಾಲುವೆ ಆಧುನೀಕರಣ ಹೋರಾಟ, ಗುಡಿ ಗುಂಡಾರಗಳಿಗೆ 30 ಕೋಟಿ ಅನುದಾನ ನೀಡಲಾಗಿದೆ. ಅದೇ ರೀತಿ ಕಲ್ಮೇಶ್ವರ, ಮರಿಯಮ್ಮ ಗುಡಿ ಹಾಗೂ ಗೋಣಿ ಬಸಪ್ಪ ದೇವಸ್ಥಾನಕ್ಕೂ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ರೈತರ ಹಲ್ಲೆ ಖಂಡಿಸಿ, ಸದನದ ಬಾವಿಗಿಳಿದು ಹೋರಾಟ ಮಾಡಿದಾಗ ಸರಕಾರ ಪ್ರಕರಣಗಳನ್ನು ಹಿಂದಕ್ಕೆ ಪಡೆಯಿತು. ಆದರೆ ಬಿಜೆಪಿ ಏಕೆ ಮೌನ ವಹಿಸಿತ್ತು ಎಂದು ಪ್ರಶ್ನಿಸಿದ ಅವರು ಬಿಜೆಪಿಯ ನಾಯಕರಿಗೆ ತಾಕತ್ ಇದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲ್ ಹಾಕಿದರು. ನಾವು ಅವರ ಹಾಗೆ ಟೆಂಡರ್ ಆಗದೆ ಯಾವುದೇ ಭೂಮಿ ಪೂಜೆ ಮಾಡಿಲ್ಲ. ಹುಬ್ಬಳ್ಳಿ, ಬೆಂಗಳೂರುನಲ್ಲಿ ಕುಳಿತುಕೊಂಡಿಲ್ಲ. ನವಲಗುಂದ ಕ್ಷೇತ್ರದ ಜೀತದಾಳ ಆಗಿ ದುಡಿದಿದ್ದೇನೆ. ನಮ್ಮ ಹಣೆ ಬರಹ ಬರೆಯುವುದು ನಿಮ್ಮ ಕೈಯಲ್ಲಿ ಇದೆ. ಅದನ್ನು ಸಮರ್ಥವಾಗಿ ನಿರ್ವಹಿಸಿ ಎಂದು ಮನವಿ ಮಾಡಿದರು. ಇದಕ್ಕೂ ಮುನ್ನ ವೀರಣ್ಣ ನೀರಲಗಿ ಮಾತನಾಡಿ, ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಮಹದಾಯಿ ಹೋರಾಟಕ್ಕಾಗಿ ಸದನದ ಒಳಗೆ ಗಟ್ಟಿ ಧ್ವನಿ ಮೊಳಗಿಸಿದ್ದಾರೆ. 190 ಚಕ್ಕಡಿ ರಸ್ತೆ, ರೈತರ ಪರ ನಿರಂತರ ಹೋರಾಟ, ರೈತರು ಜೈಲು ವಾಸ ಅನುಭವಿಸಿದಾಗ ಅವರ ಬಳಿಗೆ ಹೋಗಿ ಅವರೊಂದಿಗೆ ನಿಂತಿದ್ದಾರೆ. ಆಗ ಬಿಜೆಪಿ ಏಕೆ ಮೌನ ವಹಿಸಿತ್ತುಎಂದು ತರಾಟೆ ತೆಗೆದುಕೊಂಡ ಅವರು ಸತತ ಮೂರು ನಾಲ್ಕು ದಶಕಗಳಿಂದ ಹೋರಾಟದ ಹಾದಿ ಹಿಡಿದಿರುವ ಕೋನರಡ್ಡಿ ಅವರನ್ನು ಮತ್ತೋಮ್ಮೇ ಆರಿಸಬೇಕುಎಂದು ಮನವಿಮಾಡಿದರು. ಅಳಗವಾಡಿ ಗ್ರಾಮದ ಸೋಮು ಈರೇಶನವರ ಮಾತನಾಡಿ, ಮಹದಾಯಿ, ಕಳಸಾ ಬಂಡೂರಿ ಹೋರಾಟಕ್ಕೆ ಸೌಜನ್ಯಕ್ಕಾದರೂ ಯಾರು ಸ್ಪಂದಿಸಲಿಲ್ಲ. ಆದರೆ ಶಾಸಕ ಕೋನರಡ್ಡಿ ಸದಾ ಕಾಲ ನಮ್ಮೊಂದಿಗೆ ಹೋರಾಟ ಮಾಡಿದ್ದಾರೆ. ವಾಲ್ಮೀಕಿ ಭವನ, ರಸ್ತೆ, ಮಸೂತಿಗೆ ಹಣ ನೀಡಿದ್ದಾರೆ. ಸಾಲದ ಸೂಳಿಯಲ್ಲಿ ಸಿಲುಕಿದ ಅನ್ನದಾತನನ್ನು ಮುಕ್ತ ಮಾಡುವ ಭರವಸೆ ನೀಡಿದ ಕುಮಾರಸ್ವಾಮಿ ಅವರೊಂದಿಗೆ ನಾವಿರಬೇಕಿದೆ. ಪ್ರಾದೇಶಿಕ ಪಕ್ಷದ ಅವಶ್ಯಕತೆ ಬಹಳಿಷ್ಟಿದೆ ಎಂದರು. ಶಿವಣ್ಣ ಹುಬ್ಬಳ್ಳಿ ಮಾತನಾಡಿ, ನರೇಂದ್ರ ಮೋದಿ ಒಂದು ಹನಿ ಅಮೃತ ಅಂತರಾ. ಆದರೆ ಮಹದಾಯಿ ನೀರು ವ್ಯಥ್ಯವಾಗಿ ಹರಿದರೂ ಅದಕ್ಕೆ ಸ್ಪಂದಿಸಿಲ್ಲ. ಅದು ಅಮೃತವಲ್ಲವೇ ಎಂದು ಪ್ರಶ್ನಿಸಿದರು. ಇದೇ ವೇಳೆ ಬೆಳವಟಗಿ ಗ್ರಾಮದ ಯುವ ಮುಖಂಡ ಕಲ್ಲನಗೌಡ ದೇಸಾಯಿಗೌಡ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡರು.ಬಳಿಕ ಮಾತನಾಡಿದ ಅವರು ಇಂತಹ ಸರಳ ಸಜ್ಜನಿಕೆ ಶಾಸಕರು ಸಿಕ್ಕಿರುವುದು ನಮ್ಮ ಸೌಭಾಗ್ಯ. ಅವರನ್ನು ಇನ್ನೊಮ್ಮೇ ಆಯ್ಕೆ ಮಾಡಬೇಕಿದೆ. ಏಕೆಂದರೆ ಹಿಂದಿನವರು ಆಯೇ ರಾಮ್ ಗಯಾ ರಾಮ್ ಶಾಸಕರು. ಇವರ ಬಗ್ಗೆ ಹಾಸನ, ಶಿವಮೊಗ್ಗ, ಮಂಡ್ಯ, ಮೈಸೂರು ಭಾಗದಲ್ಲಿ ಕೂಡ ಜನ ಗುರುತು ಹಿಡಿಯುವ ಏಕೈಕ ಹಸಿರು ಶಾಲು ಶಾಸಕ ಎಂದರು. ಇವರನ್ನು ನೊಡಿದರೆ, ಯುವಕರ ತಂಡ ದೊಡ್ಡ ಪ್ರಮಾಣದಲ್ಲಿ ಸೇರುತ್ತದೆ. ಜನರ ಇದ್ದಲಿಗೆ ಶಾಸಕರು ಬರುತ್ತಾರೆ. ಅಲ್ಲದೆ, ರಾಜ್ಯದಲ್ಲಿ ಗನ್ ಮೆನ್ ಇರದ ಶಾಸಕ ಕೋನರಡ್ಡಿ ಅವರು ಒಬ್ಬರೇ ಎಂದರು. ಈ ಸಂದರ್ಭದಲ್ಲಿ ಶಾಂತಾ ಚಿಕ್ಕನರಗುಂದ, ಪ್ರಚಾರ ಸಮಿತಿ ಅಧ್ಯಕ್ಷ ಶ್ರೀಶೈಲಯ್ಯ ಮೂಲಿಮನಿ, ದೊಡಮನಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಉಡುಪಿಯ ಜನತೆಗೆ ನಮೋ ಎಂಬ ಮೋದಿ

ಉಡುಪಿ : ಮಂಗಳವಾರ ಮಧ್ಯಾನ್ಹ ಉಡುಪಿ ಯಲ್ಲಿ ಪ್ರಧಾನಿ ನರೇಂದ್ರ ಮೊದಿ ಅವರು ಬಿಜೆಪಿಯ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದಾಗ ಅವರ ಭಾಷಣವನ್ನು ಕನ್ನಡದಲ್ಲಿ ಭಾಷಾಂತರ ಮಾಡುವುದು ಬೇಡ ಎನ್ನುವ ಮೂಲಕ ನಮೋ ಅಭಿಮಾನಿಗಳು ತಮ್ಮ ಅಭಿಮಾನ ಮೆರೆದಿದ್ದರು. ಇದಕ್ಕೆ ಭಾವುಕರಾದ ನಮೋ ಉಡುಪಿಯ ಜನತೆಗೆ ನಮೋಎಂದರು.ನಿಮ್ಮ ಈ ಅಭಿಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ. ನನಗೆ ನಿಮ್ಮನ್ನು ಸೇರಲು ಯಾವುದೇ ಭಾಷೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದೀರಿ. ನಾನು ನಿಮಗೆ ಆಭಾರಿಯಾಗಿದ್ದೇನೆ ಎಂದು ಹೇಳುವ ಮೂಲಕ ಭಾಷಾಂತರವನ್ನು ಕೈ ಬಿಟ್ಟು ಕೇವಲ ಹಿಂದಿಯಲ್ಲೇ ತಮ್ಮ ಮೊನಚಾದ ಮಾತುಗಳ ಮೂಲಕ ಜನರನ್ನು ಹುರಿದುಂಬಿಸಿದರು. ಅಲ್ಲದೇ ನೀವು ನನ್ನ ಮೇಲಿಟ್ಟಿರುವ ನಿಮ್ಮ ಪ್ರೀತಿಗೆ ನಾನು ನಿಮಗೆ ಶಿರಬಾಗಿಸಿ ನಮನ ಮಾಡುತ್ತೆನೆ ಎಂದರು.

ಪರವಾನಗಿ ಇಲ್ಲದ ಪ್ರಚಾರ ಸಾಮಗ್ರಿ ವಶ

ಧಾರವಾಡ : ಪರವಾನಗಿ ಇಲ್ಲದೇ ಚುನಾವಣಾ ಪ್ರಚಾರದ ಸಾಮಗ್ರಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಪ್ರಚಾರ ಸಾಮಾಗ್ರಿಗಳನ್ನು ನಗರದ ಕೃಷಿ ವಿಶ್ವವಿದ್ಯಾಲಯ ಸಮೀಪದ ಚೆಕ್ ಪೋಸ್ಟನಲ್ಲಿ ವಿಚಕ್ಷಣಾ ಅಧಿಕಾರಿ ಬಸನಗೌಡ ಪಾಟೀಲ ವಶಪಡಿಸಿಕೊಂಡಿದ್ದಾರೆ. ಧಾರವಾಡ ಗ್ರಾಮೀಣ ಪ್ರದೇಶದಲ್ಲಿ ಪ್ರಚಾರ ಮಾಡಲು ಭಾರತೀಯ ಜನತಾ ಪಕ್ಷದ ಚಿಹ್ನೆಯುಳ್ಳ ಟೋಪಿ ಹಾಗೂ ಕರಪತ್ರಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ ಎಂದು ಉಪನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಜೆಡಿಎಸ್ ಗೆ ಬೈ ಕಾಂಗ್ರೆಸ್ ಜೈ ಅಂದ ಪಾಲಿಕೆ ಸದಸ್ಯರು

ಹುಬ್ಬಳ್ಳಿ : ಇತ್ತೀಚೆಗೆ ಜೆಡಿ ಎಸ್ ಗೆ ಕೈ ಕೊಟ್ಟು ನಾಮಪತ್ರ ಹಿಂದಕ್ಕೆ ಪಡೆದಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಅಲ್ತಾಫ್ ಕಿತ್ತೂರ ಕೊನೆಗೂ ನಿರೀಕ್ಷೆ ಯಂತೆ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಉಣಕಲ್ ನಲ್ಲಿ ಜೆಡಿಎಸ್ ಹೊರೆ ಇಳಿಸಿ ಕೈ ಹಿಡಿದಿದ್ದಾರೆ. ಅವರ ಜೊತೆಗೆ ಇನ್ನಿಬ್ಬರು ಪಾಲಿಕೆ ಸದಸ್ಯರಾದ ಸಂತೋಷ ಹಿರೇಕೆರೂರ, ಈಶ್ವರ ಸಾಣಿಕೊಪ್ಪ ಕಾಂಗ್ರೆಸ್ ಸೇರಿದ್ದಾರೆ‌. ಅವರು ಕೂಡ ಇತ್ತೀಚೆಗೆ ಜೆಡಿಎಸ್ ಜೊತೆಗೆ ಮುನಿಸಿಕೊಂಡಿದ್ದರು. ಈ ಮೂವರು ಸದ್ಯ ಜೆಡಿಎಸ್ ನಿಂದ ಪಾಲಿಕೆ ಸದಸ್ಯರಾಗಿರುವುದು ವಿಶೇಷವಾಗಿದೆ.

ನಮ್ಮ ಊರಲ್ಲಿ ಪಾನಿಪುರಿ ಮಾರೋದು ಗುಜರಾತ್ ಮಾಡೆಲಾ ?

ಕುಂದಗೋಳ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತೆತ್ತಿದ್ದರೆ ಗುಜರಾತ್ ಮಾಡಲ್ ಎನ್ನುತ್ತಿದ್ದಾರೆ. ಅರೇ ಅದೇ ಗುಜರಾತಿ ಜನ ನಮ್ಮ ಊರಿನಲ್ಲಿ ಪಾನಿಪುರಿ ಮಾರೋಕೆ ಬಂದಿದ್ದಾರೆ. ಇದು ಗುಜರಾತ್ ಮಾಡೆಲಾ ಎಂದು ಕಾಂಗ್ರೆಸ್ ಮುಖಂಡ ಸಿ ಎಂ‌ ಇಬ್ರಾಹಿಂ ಪ್ರಶ್ನೆ ಮಾಡಿದರು. ಅವರು ಕುಂದಗೋಳ ಪಟ್ಟಣದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದರು. ಹೆಂಗಾದ್ರು‌ ಮಾಡಿ ನಮ್ಮ ಟಗುರನ್ನ(ಸಿಎಂ) ಕೆಡವೋಕೆ ನೋಡ್ತಿದ್ದಾರೆ. ಆದ್ರೆ ಅದು ಆಗಲ್ಲ. ರೆಡ್ಡಿಗಳಿಗೆ ಒಂದೇ ಒಂದು ಗುದ್ದು ಗುದ್ದಿದೆ. ಅದೇ ನೋವು ಇನ್ನ ಹೋಗಿಲ್ಲ. ನಮ್ಮ ಟಗರನ್ನ ನೋಡಿದ್ರೆ ಜಗದೀಶ್ ಶೆಟ್ಟರ್ ಎದೆ ಟುಕು ಟುಕು ಎನ್ನುತ್ತೆ ಎಂದು ಛೇಡಿಸಿದರು. ಸಿದ್ದರಾಮಯ್ಯ ಹೆಸರು ಕೇಳಿದ್ರ ಮೋದಿ ತಡರಾತ್ರಿ ದುಗ್ಗನೆ ಎದ್ದು ಕುಡ್ತಾರೆ. ಹೆಂಗಾದ್ರ‌ ಮಾಡಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಅವರನ್ನ ತೆಗೆಯಬೇಕು ಎನ್ನುತ್ತಿದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ ಎಂದರು. ನನ್ನ ಜೀವನದ ಕೊನೆ ಆಸೆನೇ ಹಿಂದೂ-ಮುಸ್ಲಿಂರು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕೆನ್ನುದು ನನ್ನ ಆಸೆ. ಜೀವನವೇ ಶಾಶ್ವತ ಅಲ್ಲ. ಆದ್ರೆ ನಮ್ಮಲ್ಲಿ ಬಿಜೆಪಿಯವರು ವಿಷ ಹಾಕುತ್ತಿದ್ದಾರೆ. ಅದಕ್ಕೆ ಕಿವಿಗೊಡಬೇಡಿ , ಶಿವಳ್ಳಿಗೆ ಮತ ನೀಡಿ ಶಾಂತಿ ಕಾಪಾಡಿ ಎಂದು ಸಿಎಂ ಇಬ್ರಾಹಿಂ ಮನವಿ ಮಾಡಿದರು.

ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ನಾಲಿಗೆ ಹರಿಬಿಟ್ಟ ಶಾಸಕ ಸಿ.ಎಸ್‌. ಶಿವಳ್ಳಿ

ಕುಂದಗೋಳ : ಕುಂದಗೋಳ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಸಿ.ಎಸ್.ಶಿವಳ್ಳಿ ಅವರು ಪಟ್ಟಣದ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ನಾಲಿಗೆ ಹರಿಬಿಟ್ಟ ಪ್ರಸಂಗ ಜರುಗಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಹೊಗುಳುವ ಬರದಲ್ಲಿ ಕೇಂದ್ರ ಸರ್ಕಾರದ ಜಿಎಸ್‌ಟಿ ಯೋಜನೆಯನ್ನು ಹಜಾಮತಿಗೆ ಹೊಲಿಸಿದರು. ಹಜಾಮತಿ ಪದವನ್ನು ರಾಜ್ಯದ ಕಾಂಗ್ರೆಸ್ ಸರಕಾರವೇ ನಿಷೇಧಿಸಿದೆ. ಇದಲ್ಲದೆ, ಬಿಜೆಪಿಯವರು ಉತ್ತರಕುಮಾರ ನಂತವರು ಎಂದ ಅವರು ಪ್ರಧಾನಿ ನರೇಂದ್ರ ಮೋದಿ ಮೇಕಪ್ ಮಾಡಿಕೊಂಡು ಭಾಷಣ ಮಾಡುತ್ತಾರೆ. ಮೇಕಪ್ ಸಲುವಾಗಿ ಕೋಟಿ ಕೋಟಿ ಖರ್ಚು ಮಾಡಿದ್ದಾರೆ. ದೇಶದ ಜನರ ಕಣ್ಣಲ್ಲಿ ಮಣ್ಣು ಎರಚಿ ಪ್ರಧಾನಿಯಾಗಿದ್ದಾರೆ. ಬಿಜೆಪಿಯವರು ರಾಜಕೀಯಕ್ಕಾಗಿ ಗೂಡ್ಸೆ ದೇವಸ್ಥಾನ ಕಟ್ಟಿ ಪೂಜೆ ಮಾಡುವವರು. ಬಿಜೆಪಿ ಕಾರ್ಯಕರ್ತರನ್ನ ಬಲಿಕೊಟ್ಟು ರಾಜಕೀಯ ಮಾಡುತ್ತಾರೆ ಎಂದು ಆಪಾದಿಸಿದರು. ಆದರೆ ಸಿದ್ದರಾಮಯ್ಯ ಧರ್ಮದ ಧರ್ಮದ ಜಗಳ ಹಚ್ಚಿದವರಲ್ಲ. ಕಟ್ಟ ಕಡೆಯ ಜನಕ್ಕೆ ಅವರ ಯೋಜನೆಗಳು ತಲುಪಿವೆ. ಬಿಜೆಪಿಯವರು ಧರ್ಮ ಧರ್ಮದ ಜಗಳ ನಡುವೆ ಜಗಳ ಹಚ್ಚಿದ್ದಾರೆ. ಬಿಜೆಪಿಯವರಿಗೆ ವ್ಯವಸಾಯ ಮಾಡಿ ಗೋತ್ತಿಲ್ಲ. ಅವರೇನಿದ್ದರೂ ಓಟಿಗಾಗಿ ಪ್ಲಾಸ್ಟಿಕ್ ಆಕಳವನ್ನು ಕಟ್ಟಿದವರು ಎಂದ ಅವರು ಬಿಜೆಪಿಯವರಿಗೆ ರೈತರ ಮೇಲೆ ಕಾಳಜಿ ಇದ್ದಿದ್ದರೆ, ರೈತರ ಸಾಲಮನ್ನಾ ಮಾಡಿ ರಾಜ್ಯ ಚುನಾವಣೆಗೆ ಹೋಗಬೇಕಾಗಿತ್ತು. ಕೇವಲ ಚುನಾವಣೆಗಾಗಿ ಹಿಂದು ಧರ್ಮವನ್ನ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕ ಸಿ.ಎಸ್.ಶಿವಳ್ಳಿ ನಾಲಿಗೆ ಹರಿಬಿಟ್ಟರು

ನಮ್ಮ‌ ಮಂತ್ರಿಗಳು ಜೈಲಿಗೆ ಹೋಗಿದ್ದಾರಾ? ಎಂದ ಸಿಎಂ ಸಿದ್ದರಾಮಯ್ಯ

ಧಾರವಾಡ : ನನ್ನ ಮೇಲೆ ಯಾವುದಾದರೂ ಹಗರಣದ ಆರೋಪ ಇದೆಯಾ? ಅಥವಾ ನಮ್ಮ‌ ಮಂತ್ರಿಗಳು ಜೈಲಿಗೆ ಹೋಗಿದ್ದಾರಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಅವರು ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಪರ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದರು. ಯಡಿಯೂರಪ್ಪ ಮಾತೆತ್ತಿದೆರೆ ಸಾಕು ಸೀರೆ, ಸೈಕಲ್ ಅಂತಾರೆ ಅದೇ ಹರಕಲು ಸೀರೆ,‌ಮುರುಕಲು ಸೈಕಲ್ ಇವರ ಸಾಧನೆ. ಅದನ್ನ ಬಿಟ್ಟರೆ ಅವರ ಸಾಧನೆ ಜೈಲಿಗೆ ಹೋಗಿ ಬಂದಿದ್ದು ಅದನ್ನ ಬಿಟ್ಟರೆ ಅವರ ಸಾಧನೆ ಏನು? ಎಂದು ಯಡಿಯೂರಪ್ಪ ವಿರುದ್ದ ಸಿದ್ದರಾಮಯ್ಯ ಟೀಕಿಸಿದರು. ಮೋದಿಯವರೇ ಇವತ್ತು ನನ್ನನ್ನ ಪ್ರಶ್ನೆ ಮಾಡ್ತೀರಿ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುತ್ತೇನೆ ಅಂತಾ ಬಾದಾಮಿಗೆ ಬಂದಿರೋದಾಗಿ ಹೇಳ್ತೀರಾ? ಎಂದು ತರಾಟೆಗೆ ತೆಗೆದುಕೊಂಡ ಅವರು ಹಾಗಾದ್ರೆ ನೀವು ವಡೋದರಾ ಕ್ಷೇತ್ರಕ್ಕೆ ಹೆದರಿ ವಾರಣಾಸಿಗೆ ಹೋಗಿದ್ರಾ? ಎಂದು ಮೋದಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು. ಚೆಕ್ ಮೂಲಕ ಹಗರಣ ಮಾಡಿ ಜೈಲ್ ಗೆ ಹೋಗಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಬರುವ ಬಿಜೆಪಿಯವರು ಎಂದು ಗುಡುಗಿದ ಅವರು ದೇಶದಲ್ಲಿ ನುಡಿದಂತೆ ನಡೆದಿರುವ ಸರ್ಕಾರ ಇದ್ರೆ ಅದು ನಮ್ಮಕಾಂಗ್ರೆಸ್‌ ಸರಕಾರ ಎಂದರು. ರಾಜ್ಯದ ೯ ಲಕ್ಷ ರೈತರಿಗೆ ೫ ರೂಪಾಯಿ ಸಬ್ಸಿಡಿ ನೀಡಿದ್ದೆವೆ. ೨ ಲಕ್ಷ ಕೃಷಿಹೊಂಡ ನೀಡಿದ್ದೆವೆ. ೩ಲಕ್ಷದವರಗೆ ಬಡ್ಡಿರಹಿತ ಸಾಲಮನ್ನಾ ಮಾಡಿದ್ದೆವೆ. ೭೦ ಲಕ್ಷ ರೈತರಿಗೆ ನೇರವಾಗಿ ೧೦ ಸಾವಿರ ಹಣವನ್ನ ಈ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ ಎಂದರು. ಸಾಲ ಮನ್ನಾ ಮಾಡಿ ಎಂದು ಉಗ್ರಪ್ಪ ನವರು ಹೇಳಿದ್ರೆ ಹಸಿರು ಶಾಲು ಹಾಕುವ ಯಡಿಯ್ಯೂರಪ್ಪ ದುಡ್ಡು ಎಲ್ಲಿಂದ ತರೋಣ ಅಂತಾರೆ ಎಂದು ಕುಟುಕಿದರು.

ಜೆ‌ಡಿಎಸ್-ಬಿಜೆಪಿ ಒಳ ಒಪ್ಪಂದ : ಸಿದ್ದರಾಮಯ್ಯ ಆರೋಪ

ನವಲಗುಂದ : ಕಳೆದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ಪ್ರಧಾನಿ ದೇವೆಗೌಡರನ್ನ ವೃದ್ದಾಶ್ರಮಕ್ಕೆ ಕಳಿಸಬೇಕು ಎಂದಿದ್ದರು. ಆದರೆ, ಇವತ್ತು ಮತ್ತೆ ದೇವಗೌಡರನ್ನ ಹೊಗಳುತ್ತಿದ್ದಾರೆ. ಅದನ್ನ ನೋಡಿದರೆ ಜೆ‌ಡಿಎಸ್-ಬಿಜೆಪಿ ಒಳ ಒಪ್ಪಂದ ಗೊತ್ತಾಗಿ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು. ಅವರು ನವಲಗುಂದ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಪರ ಚುನಾವಣಾ ಪ್ರಚಾರ ನಡೆಸಿ, ಮಾತನಾಡಿದರು. ಜೆಡಿಎಸ್ ನವರು ಅವಕಾಶವಾದಿಗಳು. ಜೆಡಿಎಸ್ ಜನತಾದಳ ಸಂಘ ಪರಿವಾರದ ತುಣುಕು ಎಂದರು. ಕೋನರಡ್ಡಿ ಜಾಸ್ತಿ ಸುಳ್ಳು ಹೇಳ್ತಾರೆ ಅವರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿದ್ದು ನಾನು, ನಮ್ಮ ಸರ್ಕಾರ ಅಂತಾ ಸಿ.ಎಂ. ಚಾಟಿ ಬೀಸಿದರು

ಕರ್ನಾಟಕಕ್ಕೆ ನಮೋ ಕೊಡುಗೆ ಏನು ಎಂದ ಸಿದ್ದರಾಮಯ್ಯ

ಧಾರವಾಡ : ಪ್ರಧಾನಿ ನರೇಂದ್ರ ಮೋದಿಯವರು ಕನ್ನಡಿಗರನ್ನ ಮೆಚ್ಚಿಸಲು ಕನ್ನಡದಲ್ಲೂ ಮಾತನಾಡಿದ್ದಾರೆ. ಆದರೆ ಕರ್ನಾಟಕಕ್ಕೆ ಇವರ ಕೊಡುಗೆ ಏನು ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಅವರು ಮಂಗಳವಾರ ನವಲಗುಂದ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿನೋದ ಅಸೂಟಿ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ಮಹಾದಾಯಿ ಕಳಸ ಬಂಡೂರಿ ವಿಚಾರಕ್ಕೆ ಎಲ್ಲಾರನ್ನ ಕರೆದುಕೊಂಡು ಹೋಗಿದ್ದೆ ಆದ್ರೆ ಅವರೇನು ಮಾಡಿಲ್ಲ. ರೈತರ ಹಿತಾಸಕ್ತಿ ಇದ್ದರೆ ಮಹದಾಯಿ ಇತ್ಯಾರ್ಥ ಮಾಡಲಿ. ಆದರೆ ಇದಕ್ಕೆ ಮೋದಿಯವರು ಒಪ್ಪಲಿಲ್ಲ ಎಂದರು. ಮೇ ೧೨ ರಂದು ನಡೆಯುವ ಚುನಾವಣೆ ರಾಜ್ಯದ ಹಿತ ದೃಷ್ಟಿಯಿಂದ ಈ ಚುನಾವಣೆ ಬಹಳ ಮಹತ್ವದ ದಿನ. ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಇಂದಿರಾಗಾಂಧಿ ಮೂರು ರಾಜ್ಯದ ಮುಖ್ಯಮಂತ್ರಿಗಳನ್ನ ಕರೆದುಕೊಂಡು ಹೋಗಿ ಚೆನೈ ನೀರು ಹರಿಸಿದ್ರು. ಎರಡನೇ ಬಾರಿ ಕರ್ನಾಟಕ ದಲ್ಲಿ ಭೀಕರ ಬರಗಾಲ ಎದುರಿಸಿದ ಸಂದರ್ಭದಲ್ಲಿ ನರೇದ್ರ ಮೋದಿಯವರ ಹತ್ತಿರ ಎರಡು ಪಕ್ಷದ ನಿಯೋಗ ಕರೆದುಕೊಂಡು ಹೋದ್ರು ನಮ್ಮ ರಾಜ್ಯದ ಬಗ್ಗೆ ಗಮನ ಹರಿಸಲಿಲ್ಲ ಎಂದು ದೂರಿದರು. ನಮ್ಮ ರಾಜ್ಯದ ರೈತರ ಸಾಲಮನ್ನಾ ಮಾಡಿ ಎಂದು ಕೈಮುಗಿದು ಕೇಳಿದ್ರು ಜಪ್ಪಯ್ಯ ಅಂದ್ರು ಕೇಳಲಿಲ್ಲ. ನನ್ನ ಜೊತೆ ಬಂದ ಬಿಜೆಪಿ, ಜೆ‌ಡಿಎಸ್ ನವರು ಮೋದಿ ಬಳಿ ತುಟಿ ಪಿಟುಕ್ ಎನ್ನಲಿಲ್ಲ ಎಂದು ಜರಿದರು. ಮೋದಿಯವರದು ಬರೀ ಮಾತು. ಚಾಮರಾಜನಗರಕ್ಕೆ ಹೋಗದೆ ಹೆದರಿ ಸಂತೆ ಮಾರಳ್ಳಿಗೆ ಹೋಗಿದ್ದಾರೆ ಎಂದು ಛೇಡಿಸಿದ ಅವರು ಮೂಢನಂಬಿಕೆಗೆ ಹೆದರಿ ಮೋದಿಯವರು ಚಾಮರಾಜ ನಗರಕ್ಕೆ ಹೋಗಲು ಹೆದರಿದ್ದಾರೆ ಎಂದು ಆಪಾದಿಸಿದರು

ಕೇಕ್ ಕತ್ತರಿಸಿ ಕಾರ್ಮಿಕ ದಿನಾಚರಣೆ ಆಚರಿಸಿದ ಶಾಸಕ ಕೋನರಡ್ಡಿ

ನವಲಗುಂದ : ವಿಶ್ವ ಕಾರ್ಮಿಕ ದಿನಾಚರಣೆಯನ್ನು ಮಂಗಳವಾರ ನವಲಗುಂದ ಪಟ್ಟಣದ ಗ್ರಾಮ ದೇವತೆ ದುರ್ಗಮ್ಮ ದೇವಿ ದೇವಸ್ಥಾನದ ಬಳಿಯಿರುವ ಶಾಸಕ ಎನ್.ಹೆಚ್. ಕೋನರಡ್ಡಿ ಅವರ ನಿವಾಸದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಕೇಕ್ ಕತ್ತರಿಸುವ ಮೂಲಕ ಕಾರ್ಮಿಕ ದಿನಾಚರಣೆಗೆ ಚಾಲನೆ ನೀಡಿ, ಎಲ್ಲ ಕಾರ್ಮಿಕರಿಗೆ ಶುಭಕೋರಿದರು. ಬಳಿಕ ಮಾತನಾಡಿದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು, ಇಂದು ಕಾರ್ಮಿಕ ದಿನಾಚರಣೆಯನ್ನು ವಿಭಿನ್ನವಾಗಿ ಆಚರಣೆ ಮಾಡಿರುವುದು ಸಂತಸ ತಂದಿದೆ, ಕಾರ್ಮಿಕ ಸಂಘಟನೆಗಳ ಆಟೋ ಚಾಲಕರು, ಕಟ್ಟಡ ಕಾರ್ಮಿಕರು, ಕಾರಪೇಂಟರ, ಗಾರೆ ಕೆಲಸ, ಹಮಾಲರು ಸೇರಿ ಅನೇಕರಿಗೆ ಜೆಡಿಎಸ ಸರಕಾರ ಅಧಿಕಾರಕ್ಕೆ ಬಂದರೆ ಹತ್ತುಹಲವು ಹೊಸ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕಾರ್ಮಿಕ ನಿಧಿಯಲ್ಲಿರುವ ಐದು ಸಾವಿರ ಕೋಟಿ ಹಣವನ್ನು ಸಮರ್ಥವಾಗಿ ಬಳಕೆ ಮಾಡಲು ಹೆಚ್.ಡಿ. ಕುಮಾರಸ್ವಾಮಿ ಅವರು ಯೋಜನೆ ರೂಪಿಸಲಿದ್ದಾರೆ ಎಂದರು, ಜನರೇ ಸ್ವಯಂ ಪ್ರೇರಣೆಯಿಂದ ಜೆಡಿಎಸ್ ಪಕ್ಷ ಸಂಘಟನೆ, ಪ್ರಚಾರ ಮಾಡುವ ಮೂಲಕ ವ್ಯಾಪಕ ಬೆಂಬಲ ನೀಡುತ್ತಿರುವುದನ್ನು ನೋಡಿ ಬೇರೆ ಪಕ್ಷಗಳು ಸಂಕಟ ಪಡುತ್ತಿವೆ. ನಮಗೆ ಜನರ ವಿಶ್ವಾಸದ ಮೇಲೆ ಆಡಳಿತ ನಡೆಸಬೇಕಿದೆ. ಹೀಗಾಗಿ ಎಲ್ಲ ಕಾರ್ಮಿಕರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಎಲ್ಲ ಸಮಾಜದ ಜನರು ಜಾತಿ ಭೇಧ ಮರೆತು ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕೂಲಿ ಕಾರ್ಮಿಕರ ಮತ್ತು ಇತರೆ ಕಟ್ಟಡ ಕೆಲಸಗಾರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಬಿಜೆಪಿ ತೊರೆದು ಜೆಡಿಎಸ್ ಪಕ್ಷವನ್ನು ಸೇರಿದರು. ಶಾಸಕ ಎನ್.ಹೆಚ್. ಕೋನರಡ್ಡಿ ಅವರು ನೂರಾರು ಕಾರ್ಮಿಕರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ನವಲಗುಂದ ತಾಲೂಕು ಜೆಡಿಎಸ್ ಅಧ್ಯಕ್ಷ ವೀರಣ್ಣ ನೀರಲಗಿ, ತಾಲೂಕು ಉಪಾಧ್ಯಕ್ಷ ಮಹಾಂತೇಶ ಹಂಚಿನಾಳ, ಶ್ರೀಮತಿ ಶಾಂತಾ ಚಿಕ್ಕನರಗುಂದ, ಮಲ್ಲಿಕಾರ್ಜುನ ಕಾಲವಾಡ, ಸಂತೋಷ ಮೆಣಸಿನಕಾಯಿ, ವೆಂಕಣ್ಣ ಕರಡ್ಡಿ, ಕರ್ನಾಟಕ ರಾಜ್ಯ ಕೂಲಿ ಕಾರ್ಮಿಕರ ಮತ್ತು ಇತರೆ ಕಟ್ಟಡ ಕೆಲಸಗಾರರ ಸಂಘದ ಸಂಘದ ಬೆಳಗಾವಿ ವಿಭಾಗದ ಅಧ್ಮಕ್ಷ ಮಕಬೂಲ ಸಾಬ ಶಿರಹಟ್ಟಿ, ಜಿಲ್ಲಾಧ್ಯಕ್ಷ ಪರಶುರಾಮ ಹೊನಕೇರಿ ಕಾರ್ಯಸಮಿತಿ ಅಧ್ಯಕ್ಷ ಮಹ್ಮದ ರಫೀಕ್ ಶೇಖ್, ಉಪಾಧ್ಯಕ್ಷ ಮಹಮ್ಮದ್ ಶಫೀ ಸದರಬಾಯಿ, ರೆಹಮಾನ್ ಸಾಬ ನೀರಲಗಿ, ಉಸ್ಮಾನ ಶೇಖ್, ರೇಣುಕಪ್ಪ ಬಂಡಿಹಾಳ, ರಫೀಕ ಶೇಕ್, ರಫೀಕ್ ಸಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಾರ್ಮಿಕರ ಬೃಹತ್ ಮೆರವಣಿಗೆ

ಧಾರವಾಡ : 132ನೇ ವಿಶ್ವಕಾರ್ಮಿಕರ ದಿನಾಚರಣೆಯನ್ನು ಧಾರವಾಡ ಶಹರದಲ್ಲಿಮೆರವಣಿಗೆ ಮೂಲಕ ಆಚರಿಸಲಾಯಿತು. ಮೆರವಣಿಗೆಯಲ್ಲಿ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸಿ ರ್ಯಾಲಿಯನ್ನು ಯಶಸ್ವಿಗೊಳಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘ ಡಾ. ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಹಿರಿಯ ಕಾರ್ಮಿಕ ಮುಖಂಡರಾದ ಡಾ. ಕೆ.ಎಸ್ ಶರ್ಮಾ ಉದ್ಘಾಟನಾ ಭಾಷಣ ನೆರವೇರಿಸಿದರು. ನಂತರ ಟಿ.ಯು.ಸಿ.ಐ ಮತ್ತು ಟಾಟಾ ಮಾರ್ಕೋಪೊಲೊ ಕ್ರಾಂತಿಕಾರಿ ಕಾರ್ಮಿಕ ಸಂಘದ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು. ಕಾರ್ಲ್ಮಾ ರ್ಸರವರ-ತತ್ವಶಾಸ್ತ್ರದ ಬಡತನ ಎನ್ನುವ ಲಡಾಯಿ-ಪ್ರಕಾಶನ ಪುಸ್ತಕವನ್ನು ಮಲ್ಲಪ್ಪ ಪೂಜಾರ ಎಂಬ ಕಾರ್ಮಿಕನಿಗೆ ವಿತರಿಸುವ ಮೂಲಕ ಬಿಡುಗಡೆಗೊಳಿಸಿದರು. ಲಡಾಯಿ-ಪ್ರಕಾಶನದ ಪ್ರಕಾಶಕ ಬಸವರಾಜ ಸೂಳಿಭಾವಿ, ರಾಜ್ಯ ಕಾರ್ಯದರ್ಶಿ ಕೆ.ಬಿ ಗೋನಾಳ, ಕೇಂದ್ರ ಖಜಾಂಚಿ ಗೋವಿಂದ ಪೂಜಾರ, ಮಲ್ಲಿಕಾರ್ಜುನ ಎಮ್, ಗುಂಡಪ್ಪ ಪಿ, ರಾಜಶೇಖರ ಜಿ, ಸಿದ್ಧನಗೌಡ, ಶಿವಯೋಗಿ ಹಾಲಭಾವಿ, ಭೀಮಾಶಂಕರ ಪೂಜಾರಿ, ಹಾಜರಿದ್ದರು.

ಸುಪರ್ ಮಾರ್ಕೆಟ್ ಸೇರಿ ವಿವಿಧಡೆ ಪಾದಯಾತ್ರೆ ನಡೆಸಿದ ಇಸ್ಮಾಯಿಲ್ ತಮಟಗಾರ

ಧಾರವಾಡ : ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ್ ಅವರು ಮನಕಿಲ್ಲಾ, ಸೂಪರ್ ಮಾರ್ಕೆಟ್ ನಲ್ಲಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ದೀಪಕ್ ಚಿಂಚೋರಿ, ಪ್ರತಾಪ್ ಚವ್ಹಾಣ್, ಆನಂದ ಜಾಧವ್,ದಾನಪ್ಪಾ ಕಬ್ಬೇರ,ಆನಂದ ಮುಷಣವರ್, ನಾಗರಾಜ್ ಗುರಿಕಾರ,ವಿನಾಯಕ ಬಡಿಗೇರ, ನಾಸಿರ ಮನಿಯಾರ, ಅಬ್ದುಲ್ ದೇಸಾಯಿ, ಅಶೋಕ ದೂಡ್ಡಮಣಿ, ಶಿವಮೂರ್ತಿ ಕೋಟುರ ಹಾಗೂ ಕಾಂಗ್ರೆಸ್ ಮುಖಂಡರು ಯುವಕರು ಉಪಸ್ಥಿತರಿದ್ದರು ಇದಕ್ಕೂ ಮುನ್ನ ಕರ್ನಾಟಕ ವಿಶ್ವವಿದ್ಯಾಲಯ ಕ್ರೀಡಾಗಣದಲ್ಲಿ ವಾಯುವಿಹಾರಕೈ ಆಗಮಿಸಿದ್ದ ಹಿರಿಯರು, ಮಹಿಳೆಯರು, ಹಾಗೂ ಕ್ರೀಡಾಪಟುಗಳಲ್ಲಿ ಇಸ್ಮಾಯಿಲ್ ತಮಟಗಾರ್ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಅಲಿ ಗೋರವನ್ಕೊಳ್ಳ, ವೆಂಕಟೇಶ್ ರಾಯಕರ, ಮಂಜುನಾಥ್ ಭೋವಿ, ವಸಂತ ಅರ್ಕಚಾರಿ, ವಿನಾಯಕ ಬಡಿಗೇರ,ಅಬ್ದುಲ್ ದೇಸಾಯಿ, ಅಕ್ಷಯ ಪಾಟೀಲ, ಫೈರೋಜ್ ಪಠಾಣ್, ಮುಜಮೀಲ್ ಪಠಾಣ್ ಹಾಗೂ ಕಾಂಗ್ರೆಸ್ ಮುಖಂಡರು ಯುವಕರು ಉಪಸ್ಥಿತರಿದ್ದರು.

ಬಿಜೆಪಿ ಅಭ್ಯರ್ಥಿಗೆ ಹೂವು ಚೆಲ್ಲಿ, ಆರತಿ ಬೆಳಗಿ ಸ್ವಾಗತಿಸಿದ ಗ್ರಾಮಸ್ಥರು

ಧಾರವಾಡ: ಧಾರವಾಡ ವಿಧಾನ ಸಭಾ ಕ್ಷೇತ್ರ -71ರಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮಂಗಳವಾರ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರಿಗೆ ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮಸ್ಥರು ಹೂವು ಚೆಲ್ಲಿ, ಆರತಿ ಬೆಳಗಿ ಸ್ವಾಗತ ಕೋರಿದರು. ಪ್ರತಿ ಮನೆಯಲ್ಲಿ ಮಹಿಳೆಯರು ಆರತಿ ಬೆಳಗಿ, ಕುಂಕುಮ ಹಚ್ಚಿ, ಸ್ವಾಗತ ಕೋರಿ, ಶುಭ ಹಾರೈಸಿದರು. ಇದೇ ವೇಳೆ ಗ್ರಾಮಸ್ಥರು ಅಮೃತ ದೇಸಾಯಿ ಅವರಿಗೆ ಹೂವಿನ ಸುರಿಮಳೆ ಹರಿಸಿ ಸ್ವಾಗತ ಕೋರಿದರು. ಬಳಿಕ ಗ್ರಾಮದಲ್ಲಿರುವ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರಚಾರ ಪ್ರಾರಂಭಿಸಿದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರಿಗೆ ಬಿಜೆಪಿ ಮುಖಂಡರಾದ ತವನಪ್ಪ ಅಷ್ಟಗಿ, ಗುರುನಾಥ ಗೌಡ ಗೌಡರ, ತಾಪಂ ಸದಸ್ಯರಾದ ಮಮತಾಜ ಅಂಕಲಗಿ, ಶಿವಾಜಿ ಜಾಧವ, ಎಂ.ಕದಂ, ಚಂದ್ರು ಚವ್ಹಾಣ, ಬಾಳು ಜಾಧವ, ತುಕಾರಾಮ ನಾಗೊಜಿ ಸೇರಿದಂತೆ ಅನೇಕರು ಸಾಥ್ ನೀಡಿದರು. ಭಾರೀ ಜನಸಮೂಹದೊಂದಿಗೆ ಗ್ರಾಮದಲ್ಲಿ ಬಿರುಸಿನ ಪಾದಯಾತ್ರೆ ನಡೆಸಿದ ಅಮೃತ ದೇಸಾಯಿ ಅವರು, ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಈ ಬಾರಿ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಕಮಲ ಅರಳಿಸುವ ಮೂಲಕ ಕಾಂಗ್ರೆಸನ ಭ್ರಷ್ಟ ಸರಕಾರಕ್ಕೆ ಮುಕ್ತಿ ಹಾಡಬೇಕು. ನವ ಕರ್ನಾಟಕ ನಿರ್ಮಾಣಕ್ಕೆ ಕಂಕಣ ಬದ್ಧರಾಗಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಕೈ ಬಲಪಡಿಸಲು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು. ಭಾರಿ ಪ್ರಮಾಣದಲ್ಲಿ ಸೇರಿದ ಜನಸಮೂಹದ ಮೂಲಕ ಅಮೃತ ದೇಸಾಯಿ ಅವರು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಬಳಿಕ ವೆಂಕಟಾಪುರ ಗ್ರಾಮದಲ್ಲಿ ಬಿರುಸಿನ ಪ್ರಚಾರ ನಡೆಸಿ ಮತದಾರರ ಗಮನ ಸೆಳೆದರು.

ಮತ್ತಷ್ಟು ಅಭಿವೃದ್ಧಿಗೆ ಮತ್ತೊಮ್ಮೆ ಆಶೀರ್ವದಿಸಿ : ಶಾಸಕ ಅರವಿಂದ ಬೆಲ್ಲದ

ಧಾರವಾಡ : ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ-74 ರ ಶಾಸಕರಾದ ಅರವಿಂದ ಬೆಲ್ಲದ ಅವರು ಮಂಗಳವಾರ ಧಾರವಾಡ-ಶಹರದ ವಾರ್ಡ ನಂಬರ 17 ರ ವ್ಯಾಪ್ತಿಯಲ್ಲಿ ಬರುವ ಶ್ರೀರಾಮ ನಗರದಲ್ಲಿ ಪಾದಯಾತ್ರೆ ನಡೆಸಿದರು. ಮನೆ ಮನೆ ಭೇಟಿ ನೀಡಿ ಮತ್ತಷ್ಟು ಅಭಿವೃದ್ಧಿಗೆ ಮತ್ತೊಮ್ಮೆ ಆಶೀರ್ವದಿಸಿ ಎಂದು ಮನವಿ ಮಾಡಿದರು. ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸುಧೀರ್ಘ ಹೋರಾಟ ನಡೆಸಿ ಹೆಮ್ಮೆಯ ಐಐಟಿ (ಇಂಡಿಯನ ಇನ್ಸ್ಟಿಟ್ಯುಟ್ ಆಫ್ ಟೆಕ್ನಾಲಜಿ) ತಂದಿದ್ದು, ತಡಸಿನಕೊಪ್ಪದಲ್ಲಿ ಐಐಐಟಿ(ಇಂಡಿಯನ ಇನ್ಸ್ಟಿಟ್ಯುಟ್ ಆಫ್ ಇನ್ ಫಾರ್ಮೆಶನ್ ಟೆಕ್ನಾಲಜಿ) , ಉನ್ನತ ಶಿಕ್ಷಣ ಅಕಾಡೆಮಿ, ಪೋಲೀಸ್ ತರಬೇತಿ ಕೇಂದ್ರ ಪ್ರಾರಂಭ, ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಮಹಿಳಾ ಕಾಲೇಜ್ ಸ್ಥಾಪನೆ, ಬಡ ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ರಾಜ್ಯಕ್ಕೆ ಮಾದರಿಯಾಗಿ ಪ್ರಪ್ರಥಮವಾಗಿ ಸರ್ಕಾರಿ ಶಾಲೆಯಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳನ್ನು ಪ್ರಾರಂಭಿಸಲಾಗಿದೆ ಎಂದರು. ಅಲ್ಲದೆ, ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ರೈತರಿಗಾಗಿ 10 ಕ್ಕೂ ಹೆಚ್ಚು ಚೆಕ್ ಡ್ಯಾಮಗಳ ನಿರ್ಮಾಣ, ಬಡವರಿಗಾಗಿ ಗುಂಪು ವಸತಿ ಯೋಜನೆಗಳ ಅಡಿಯಲ್ಲಿ ಸಮಾರು 2500 ಆಶ್ರಯ ಮನೆಗಳ ನಿರ್ಮಾಣ, ಕ್ಷೇತ್ರಾದ್ಯಂತ ಕಾಂಕ್ರೀಟ ರಸ್ತೆಗಳ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು. ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಶ್ರೀರಾಮನಗರ ಪ್ರದೇಶದಲ್ಲೂ ಎಲ್ಲ ಮುಖ್ಯ ರಸ್ತೆಗಳ ಕಾಂಕ್ರೀಟಕರೀಣ ಹಾಗೂ ಎಲ್ಲ ಬಡಾವಣೆಗಳಿಗೆ ವಿದ್ಯುತ ದ್ವೀಪ ಅಳವಡಿಸಿರುವಿಕೆ ಮತ್ತು ಕುಡಿಯುವ ನೀರಿನ ಸಂಪರ್ಕ ಇಂತಹ ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಈ ಭಾಗದಲ್ಲಿ ಕೈಗೊಂಡಿರುವುದಕ್ಕೆ ಸ್ಥಳೀಯರು ಯುವ ಮಿತ್ರರು ಬೆಂಬಲ ವ್ಯಕ್ತ ಪಡಿಸಿದ್ದನ್ನು ಕಂಡು ಶಾಸಕರು ಜನಪ್ರತಿನಿಧಿಯಾಗಿ ಮಾಡಿರುವ ಕೆಲಸಗಳು ತೃಪ್ತಿದಾಯಕವಾಗಿದೆಂದು ಭಾವಿಸಿದ್ದೇನೆ ಎಂದರು. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯನ್ನು ಮಾಡುವ ಗುರಿಯನ್ನು ಹೊಂದಿದ್ದು, ದೇಶದಲ್ಲಿ ಧಾರವಾಡ ಕ್ಷೇತ್ರವನ್ನು ಮಾದರಿಯನ್ನಾಗಿ ರೂಪಿಸಲು ಮತ್ತೊಮ್ಮೆ ಆಶೀರ್ವದಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಹು-ಧಾ ಮಹಾನಗರ ಪಾಲಿಕೆ ಸದಸ್ಯರಾದ ಶಿವು ಹೀರೆಮಠ, ಮುಖಂಡರಾದ ಮಹಾದೇವ ಕಾಂಬಳೆ, ರಾಜೇಶ ಚಾಂದಗುಡೆ, ಸುರೇಶ ಬೇಂದ್ರೆ, ಮುತ್ತುರಾಜು, ರಾಮಚಂದ್ರ ಪೋದಡ್ಡಿ, ಪ್ರಕಾಶ ಬಾಲ್ಕಿ ಹಾಗೂ ಅನೇಕ ಕಾರ್ಯಕರ್ತರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು

ಸೀರೆ ಊಡುಗೋರೆ ನೀಡಿ ಕಾರ್ಮಿಕ ದಿನಾಚರಣೆ

ಧಾರವಾಡ: ಧಾರವಾಡದ ಕುಮಾರೇಶ್ವರ ನಗರದಲ್ಲಿ ಕಾರ್ಮಿಕ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲಾಯಿತು. ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಸನ್ಮಾನ ಮಾಡುವ ಮೂಲಕ ಸನ್ನಿಧಿ ಮಹಿಳಾ ಮಂಡಳದ ಸದಸ್ಯರು ಕಾರ್ಮಿಕ ದಿನಾಚರಣೆಗೆ ಅರ್ಥ ತಂದುಕೊಟ್ಟರು. ಮಹಿಳಾ ಕಾರ್ಮಿಕರಿಗೆ ಸೀರೆಯನ್ನು ಊಡುಗೋರೆ ನೀಡುವುದರ ಮೂಲಕ ಅದರ ಮಹತ್ವ ಹೆಚ್ಚಿಸಿದರು. ಪ್ರತಿದಿನ ನಮ್ಮ ಮನೆಯ ಎದುರು ಹಾಗೂ ರಸ್ತೆ ಕಸ ಗೂಡಿಸುವ ಕಾರ್ಮಿಕರಿಗೆ ನಾವು ಏನೂ ಮಾಡಿಲ್ಲ ಎಂಬ ನೋವಿತ್ತು. ಈ ಹಿನ್ನಲೆಯಲ್ಲಿ ಕಾರ್ಮಿಕರ ದಿನವನ್ನು ನಮ್ಮ ಕಡೆಯಿಂದ ಒಂದು ಚಿಕ್ಕ ಉಡುಗೊರೆ ನೀಡಿ ಸನ್ಮಾನ ಮಾಡಿದ್ದು ಖುಷಿ ತಂದಿದೆ ಎಂದು ಮಹಿಳಾ ಮಂಡಳದ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ ಹೇಳಿದರು. ಪೌರಕಾರ್ಮಿಕರು ಮಹಿಳಾ ಮಂಡಳದ ಗೌರವಕ್ಕೆ ಅಭಿಮಾನದಿಂದ ಸ್ವಾಗತಿಸಿದರು. ನಮಗೆ ಎಲ್ಲರಂತೆ ಗೌರವ ನೀಡಿದರೆ ಅದೇ ಎಷ್ಟೋ ಖುಚಿ ಕೊಡುತ್ತದೆ ಎಂದರು.

ಕಾಂಗ್ರೆಸ್ ನಿಂದ ದಲಿತರಿಗೆ ಅನ್ಯಾಯವಾಗಿದೆ ಎಂದ ಜಿಗಜಿಣಗಿ

ಹುಬ್ಬಳ್ಳಿ : ಕಾಂಗ್ರೆಸ್ನವರಿಗೆ ದಲಿತರ ಮತದ ರುಚಿ ಹತ್ತಿದೆ. ಅವರು ದಲಿತರಿಗೆ ಸಾಕಷ್ಟು ಅನ್ಯಾಯ ಮಾಡಿದ್ದಾರೆ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದ್ದಾರೆ. ಅವರು ಮಂಗಳವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಚುನಾವಣೆಯನ್ನು ದಾಟುವ ಸಲುವಾಗಿ ಮೀಸಲಾತಿಯನ್ನ ಬಿಜೆಪಿಯವರು ತೆಗೆದು ಹಾಕುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹುಟ್ಟಿಸಿದ್ದಾರೆ. ಎಂದರು. ಬಿಜೆಪಿ ಯಾವುತ್ತು ಮೀಸಲಾತಿ ತೆಗೆದು ಹಾಕುವುದಿಲ್ಲ.ಒಂದು ವೇಳೆ ತೆಗೆದು ಹಾಕಿದ್ರೆ ನಾವು ಸರ್ಕಾರದಲ್ಲಿ ಇರುವುದಿಲ್ಲ ಎಂದ ಅವರು ಕಾಂಗ್ರೆಸ್ ಪಕ್ಷ ಇಲ್ಲಿಯವರೆಗೆ ದಲಿತರಿಗೆ ಅನ್ಯಾಯ ಮಾಡಿದನ್ನು ಬಹಿರಂಗ ಮಾಡಿದ್ರೆ ಅವರು ನೇಣು ಹಾಕಿಕೊಳ್ಳುತ್ತಾರೆ. ನಾವು (ಬಿಜೆಪಿ)ದಲಿತರ ಪರ ಇದ್ದೆವೆ ಎಂದು ಹೇಳಿದರು.

ಬಿಜೆಪಿ ಭಿನ್ನಮತ ಮತ್ತೇ ಸ್ಪೋಟ

ಹುಬ್ಬಳ್ಳಿ : ಕೇಂದ್ರ ಸಚಿವ ರಮೇಶ ಜಿಗಜಿಣಗಿ ಎದುರಿನಲ್ಲಿಯೇ ಬಿಜೆಪಿ ಭಿನ್ನಮತದ ಅಸಮಾಧಾನ ಸ್ಪೋಟಗೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಟಿಕೇಟ್ ಕೈತಪ್ಪಿದ್ದಕ್ಕೇ ಮತ್ತೊಮ್ಮೇ ಅಸಮಾಧಾನವನ್ನು ಹೊರಹಾಕಿದ ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ ಈ ಬಾರಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಟಿಕೇಟ್ ವಂಚಿತರಾಗಿದಕ್ಕೆ ತಮ್ಮ ಅಸಮಧಾನ ಹೊರಹಾಕಿದರು. ಇಂದಿರಾ ನಗರದಲ್ಲಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರದ ಸಮಯದಲ್ಲಿ ಈ ಭಿನ್ನಮತ ಸ್ಪೋಟಗೊಂಡಿದೆ. ವಾರ್ಡನ ಸಭೆಯಲ್ಲಿ ಮಾತನಾಡುವ ಸಮಯದಲ್ಲಿ ಟಿಕೇಟ್ ತಪ್ಪಿದ್ದಕ್ಕೇ ಅಸಮಾಧಾನವನ್ನು ಹೊರಹಾಕಿದ ವೀರಭದ್ರಪ್ಪ ಹಾಲರವಿ ಅವರು ಆಕ್ರೋಶಗೊಂಡರು. ಇದರಿಂದ ಕೇಂದ್ರ ಸಚಿವ ಜಿಗಜಿಣಗಿ ಅವರು ಗರಂ ಆದ ಆದರು. ಟಿಕೇಟ್ ಹಂಚಿಕೆಯಲ್ಲಿ ಮಾದರ ಸಮಾಜಕ್ಕೇ ಅನ್ಯಾಯವನ್ನು ಮಾಡಲಾಗಿದೆ ಎಂದರು. ನೆಹರು ಓಲೆಕಾರ ಮೇಲೆ ಸಾಕಷ್ಟು ಕ್ರಿಮಿನಲ್ ಕೇಸ್ ಗಳಿದ್ದರೂ ಅವರಿಗೆ ಟಿಕೇಟ್ ಕೊಟ್ಟಿದ್ದಿರಾ, ನನ್ನ ಮೇಲೆ ಯಾವುದೇ ಒಂದು ಆರೋಪವಿಲ್ಲ ನನಗ್ಯಾಕೆ ಟಿಕೇಟ್ ಕೊಡಲಿಲ್ಲ ಎಂದು ಪ್ರಶ್ನಿಸಿದ ವೀರಭದ್ರಪ್ಪ ಹಾಲರವಿ ಅವರು ಸೂತಕದಲ್ಲೂ ಪ್ರಚಾರಕ್ಕೇ ಬಂದಿದ್ದಿರಿ ಆದ್ರೂ ನಿಮ್ಮೊಂದಿಗೆ ನಾವು ಇದ್ದೇವೆ ಪಕ್ಷ ಅರ್ಥ ಮಾಡಿಕೊಳ್ಳದಿದ್ದರೇ ಮಾದಿಗರ ಶಾಪ ಖಂಡಿತಾ ತಟ್ಟುತ್ತದೆ ಎಂದು ಅಸಮಾಧಾನ ಹೊರಹಾಕಿದರು. ನಮ್ಮ ನೋವನ್ನು ಅರ್ಥ ಮಾಡಿಕೊಳ್ಳುವರು ಯಾರು ಎಂದು ಪ್ರಶ್ನಿಸಿದ ಹಾಲಹರವಿ ಆಡಳಿತ ಮಾಡುವ ಸಂಸದರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಮಾತನಾಡುವಾಗಲೇ ಟೈಮ್ ಆಗುತ್ತದೆ ಸಾಕು ಎಂದ ಸಾರ್ವಜನಿಕರು ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ಅವರು ಟೈಮ್ ಆಗುತ್ತದೆ ಎಂದ್ರೇ ನಾವು ಹೋಗುತ್ತೇವೆ ನೋವನ್ನು ಹೇಳಿಕೊಳ್ಳಲು ಈಗ ಸಿಕ್ಕಿದ್ದಾರೆ ಎಂದರು. ಆಗ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರು ಮತ್ತೊಮ್ಮೇ ಗರಂ ಆಗಿ ವೀರಭದ್ರಪ್ಪ ಹಾಲಹರವಿಯನ್ನು ತರಾಟೆಗೆ ತೆಗೆದುಕೊಂಡು ಹೇ ಸುಮ್ಮನೇ ಕುಳಿತುಕೊ ಎಂದರು. ಕೇಂದ್ರದ ಸಚಿವರ ಎದುರಿನಲ್ಲಿಯೇ ಕೈ ಕೈ ಮಿಗಿಲಾಯಿಸುವ ಹಂತಕ್ಕೇ ಹೋದ ಪಕ್ಷದಲ್ಲಿನ ಅಸಮಾಧಾನವನ್ನು ಬಗೆಹರಿಸಲು ಮುಖಂಡರು ಹರಸಾಹಸ ಪಡಬೇಕಾಯಿತು.

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರನನ್ನೇ ಷಂಡ ಎಂದ ಕಾಂಗ್ರೆಸ್ ಮುಖಂಡ

ಧಾರವಾಡ : ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ನಿಜವಾದ ದಲಿತ ನಾಯಕನಲ್ಲ. ಅವರೊಬ್ಬ ಷಂಡ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಆರೋಪಿಸಿದರು. ಅವರು ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಮೇಶ್ವರ ಅವರು ಸಿಎಂ ಸಿದ್ದರಾಮಯ್ಯ ಅವರ ಚಮಚಾಗಿರಿ ಮಾಡುತ್ತ ಪಕ್ಷ ಸರ್ವ ನಾಶ ಮಾಡುತ್ತಿದ್ದಾರೆ ಎಂದರು. ಸಿಎಂ ಸಿದ್ದರಾಮಯ್ಯ ಅವರನ್ನು ಜವಾಬ್ದಾರಿಯಿಂದ ಇಳಿಸಿ, ಮಲ್ಲಿಕಾರ್ಜುನ ಖರ್ಗೆ ಅವರನ್ನುಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಬೇಕು. ಖರ್ಗೆ ಅವರು ಗಟ್ಟಿ ಹಾಗೂ ನಿಷ್ಟಾವಂತ ನಾಯಕ. ಅವರಿಗೆ ಸಿಎಂ ಪಟ್ಟ ನೀಡಿ ಚುನಾವಣೆ ಎದುರಿಸದರೆ ಮಾತ್ರ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆಎಂದು ವಿಶ್ವಾಸ ವ್ಯಕ್ತಪಡಿಸಿದರು. ಆರ ಎಸ್ ಎಸ್ ನಿಂದ ಬಂದ 30 ಜನರಿಗೆ ಕಾಂಗ್ರೆಸ್ ಟಿಕೇಟ್ ಕೊಟ್ಟು ಕಾಂಗ್ರೆಸ್ ಪಕ್ಷದ ಸರ್ವನಾಶ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ. ಕಾಂಗ್ರೆಸ್ ಪಕ್ಷ ಸಿಎಂ ಸಿದ್ದರಾಮಯ್ಯ ಅವರ ಸ್ವಂತ ಆಸ್ತಿ ಅಲ್ಲ ಅದರಲ್ಲಿ ಕಾರ್ಯಕರ್ತರ ಶ್ರಮವಿದೆ. ಆದರೆ ಸದ್ಯ ಪಕ್ಷವು ಬುಸಿನೆಸ್ ಮೆನ್ ಹಿಡಿತದಲ್ಲಿ ಸಿಲುಕಿ ನಲಗುತ್ತಿದೆ. ವಿಶೇಷವಾಗಿ ರಾಜ್ಯ ಉಸ್ತುವಾರಿ ವೇಣುಗೋಪಾಲ, ಹಾಗೂ ಮಾಣಿಕ್ಯಂ ಠ್ಯಾಗೂರ ಅವರು ಟಿಕೇಟ್ ನೀಡಲು ಇಪ್ಪತ್ತು ಕೋಟಿ ಹಣ ಮಾಡಿದ್ದಾರೆ ಎಂದು ಆಪಾದಿಸಿದ ಅವರು ಬೆಳಗಾವಿಯಲ್ಲಿ ಈ ಬಾರಿ ಜಾರಕಿಹೊಳಿ ಸಹೋದರರು ಯಮನಕರಡಿ ಹಾಗೂ ಗೋಕಾಕನಲ್ಲಿ ಸೋಲು ಅನುಭವಿಸಲಿದ್ದಾರೆ ಎಂದರು. ರಾಜ್ಯದ ೬೦- ೭೦ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡುವ ಮೂಲಕ ಸೋಲಿನ ರುಚಿ ತೋರಿಸಲಾಗುವುದು. ಅಲ್ಲದೆ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿರುವ ಬಾದಾಮಿಯಲ್ಲಿ ನೋಟಾ ಚಲಾವಣೆಮಾಡುವಂತೆ ಮನವಿಮಾಡಲಾಗುತ್ತಿದೆ ಎಂದರು. ಸಿಎಂ ಸಿದ್ದರಾಮಯ್ಯ ಸಮಾಜವಾದಿ ಮುಖವಾಡ ಧರಿಸಿ ರಾಜಕೀಯವಾಗಿ ಹಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ದೇವರಾಜ ಅರಸ್ ಆಗಲು ಸಾಧ್ಯವಿಲ್ಲ ಅವರೊಬ್ಬ ಲೂಟಿ ಕೂರಎಂದು ದೂರಿದರು.

ರಂಭಾಪುರಿ ಪೀಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ

ಚಿಕ್ಕಮಗಳೂರು: ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿದರು. ಶೃಂಗೇರಿಯಿಂದ ಹೆಲಿಕಾಪ್ಟರ್ ಮೂಲಕ ಬಾಳೆಹೊನ್ನೂರಿಗೆ ಆಗಮಿಸಿದ ಅಮಿತ್ ಶಾ ಅವರು ಸ್ವಾಮೀಜಿಯ ಭೇಟಿಗೂ ಮುನ್ನ ಮಠದ ಆವರಣದ ಸೋಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಬಳಿಕ ರಂಭಾಪುರಿ ಶ್ರೀಗಳ ಪಾದಕ್ಕೆ ನಮಸ್ಕರಿಸಿದರು. ಈ ವೇಳೆ ಅಮಿತ್ ಶಾ ಅವರಿಗೆ ರಂಭಾಪುರಿ ಶ್ರೀಗಳು ಶಾಲು ಹೊದಿಸಿ, ಜಗದ್ಗುರು ರೇಣುಕಾಚಾರ್ಯರ ಫೋಟೋ ನೀಡಿ ಸತ್ಕರಿಸಿದರು. ಬಳಿಕ ರಂಭಾಪುರಿ ಶ್ರೀಗಳ ಜೊತೆ ಕೆಲ ಕಾಲ ರಹಸ್ಯ ಮಾತುಕತೆ ನಡೆಸಿದ ಅಮಿತ್ ಶಾ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಆಶೀರ್ವಾದ ಮಾಡಲು ಕೋರಿದರು. ಸ್ಥಳೀಯ ಪೊಲೀಸ್ ಹಾಗೂ ಸಿ.ಆರ್.ಪಿ.ಎಫ್ ತಂಡದಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮಠದ ಭೇಟಿಗೆ ನಿಷೇಧ ಹೇರಲಾಗಿತ್ತು. ಭೇಟಿಯ ಬಳಿಕ ಮಠದಲ್ಲೇ ಅಮಿತ್ ಶಾ ಅವರು ಚಪಾತಿ, ಎರಡು ತರಹದ ಪಲ್ಯ,ದಾಲು,ರೈಸ್, ಮೊಸರು ಪ್ರಸಾದ ಸ್ವೀಕರಿಸಿದರು. ಮಠದ ಆವರಣದಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

ಯಡಿಯೂರಪ್ಪ ಸಿಎಂ ಆಗಲು ನಾಲಾಯಕ್ ಎಂದ ಸಿದ್ದರಾಮಯ್ಯ

ಗದಗ : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವಿನ ವಾಕ್ ಸಮರ ತಾರಕಕ್ಕೇರಿದೆ. ಗದಗದಲ್ಲಿ ನಡೆದ ಕಾಂಗ್ರೆಸ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಯಡಿಯೂರಪ್ಪ ರಾಜ್ಯ ಆಳಲು ಯೋಗ್ಯನಾ ಎಂದು ಪ್ರಶ್ನಿಸಿದರು. ಅದಕ್ಕೆ ಜನರು ಅಲ್ಲ. ಅಲ್ಲ ಪ್ರತಿಕ್ರಿಯಿಸಿದರು, ಇದರಿಂದ ಇನ್ನಷ್ಟು ಉತ್ಸಾಹಗೊಂಡ ಸಿದ್ದರಾಮಯ್ಯ ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿಕ್ಕೆ ಅಯೋಗ್ಯ, ಸಿಎಂ ಆಗಿ ಏನು ಮಾಡಿದರೂ ಹೇಳಿ ಜೈಲಿಗೆ ಹೋಗಿ ಬಂದರು. ಹೀಗಾಗಿ ಅವರು ಸಿಎಂ ಆಗಲು ನಾಲಾಯಕ್ ಎಂದು ಗುಡುಗಿದರು. ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೇಳಿಕೆಗೆ ಕಟುವಾಗಿಯೇ ಟೀಕಿಸಿದರು.

ಕನ್ನಡದಲ್ಲಿಯೇ ಮಾತು ಆರಂಭಿಸಿ ಕನ್ನಡದಲ್ಲಿಯೇ ಭಾಷಣ ಮುಗಿಸಿದ ಪ್ರಧಾನಿ

ಚಾಮರಾಜನಗರ : ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಚಾಮರಾಜ ನಗರ ಜಿಲ್ಲೆಯ ಮೂಲಕ ತಮ್ಮ ಆಧಿಕೃತ ಚುನಾವಣಾ ಪ್ರಚಾರ ಆರಂಭಿಸಿದರು. ಅವರು ತಮ್ಮ ಭಾಷಣವನ್ನು ಕನ್ನಡದಲ್ಲಿಯೇ ಆರಂಭಿಸಿ, ಕನ್ನಡದಲ್ಲಿಯೇ ಮುಗಿಸಿದ್ದು ವಿಶೇಷವಾಗಿತ್ತು. ಎಲ್ಲರಿಗೂ ನಮಸ್ಕಾರ ಎನ್ನುತ್ತಲೇ ಮುಗಿಲು ಮುಟ್ಟಿದ ಘೋಷಣೆಗಳು, ಮಲೆಮಹದೇಶ್ವರ, ಮಂಟೆಸ್ವಾಮಿ, ಜೆ.ಪಿ, ರಾಜರತ್ನಂ ಸೇರಿದಂತೆ ಅನೇಕರಿಗೆ ನಮಿಸಿದ ನಮೋ, ಕೊನೆಗೆ ಭಾಷಣದ ಮುಕ್ತಾಯದಲ್ಲಿ ಕೂಡ ಕನ್ನಡತನವನ್ನು ಮೆರೆದರು. ಅವರು ನೀವು ನಮ್ಮೊಂದಿಗೆ ಬನ್ನಿ ಬಿಜೆಪಿಗೆ ಬೆಂಬಲಿಸಿ, ಬದಲಾವಣೆಗೆ ಮುಂದಾಗಿ ನಿಮ್ಮ ಜೊತೆಗೆ ದಿಲ್ಲಿ ನಿಲ್ಲಲಿದೆ. ಸ್ವಚ್ಛಸುಂದರ ಕರ್ನಾಟಕ ನಿರ್ಮಿಸೋಣ ಬನ್ನಿ ಎಲ್ಲರೂ ಕೈ ಜೋಡಿಸಿ,. ಸರಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ, ಎಂದು ಕನ್ನಡದಲ್ಲಿಯೇ ಹೇಳಿ ಮೋದಿಗೆ ಜೈಕಾರಗಳಸುರಿಮಳೆ, ಎಲ್ಲರಿಗೂ ನಮಸ್ಕಾರಗಳು, ಭಾರತಮಾತೆಗೆ ಜೈ ಎನ್ನುವ ಮೂಲಕ ಭಾಷಣ ಮುಗಿಸಿ, ಎಲ್ಲರಿಗೂ ಕೈ ಬೀಸಿ ವೇದಿಕೆಯಿಂದ ನಿರ್ಗಮಿಸಿದರು,

ರಾಜ್ಯದ ಕಾನೂನು ವ್ಯವಸ್ಥೆ ಹದಗೆಟ್ಟಿದೆ ಎಂದ ಪ್ರಧಾನಿ ಮೋದಿ

ಚಾಮರಾಜನಗರ : ಕಳೇದ ಐದು ವರ್ಷಗಳಲ್ಲಿ ರಾಜ್ಯದ ಕಾನೂನು ವ್ಯವಸ್ಥೆ ಕುಸಿದು ಬಿದ್ದಿದೆ. ಜನ ಭೀತಿಯಲ್ಲಿ ಬದುಕುತ್ತಿದ್ದಾರೆ. ಮಹಿಳೆಯರು, ಮಕ್ಕಳು ಅಷ್ಟೇ ಲೋಕಾಯುಕ್ತರಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಿದ್ದರಾಮಯ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು ಮಂಗಳವಾರ ರಾಜ್ಯದಲ್ಲಿ ಶಾಪಪೀಡಿತ ಜಿಲ್ಲೆ ಚಾಮರಾಜನಗರದಿಂದಲೇತಮ್ಮ ಪ್ರಚಾರ ಆರಂಭಿಸಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಕಾಂಗ್ರೆಸ್ ಅಂದ್ರೆ, ಭ್ರಷ್ಟ, ದುಷ್ಟ, ಅಪರಾಧಗಳಿಗೆ ಕುಮ್ಮಕ್ಕು ನೀಡುವ ಸರಕಾರ ಎಂದು ಎಲ್ಲರಿಗೂ ಗೊತ್ತಿದೆ. ಅಂದ ಮೇಲೆ ರಾಜ್ಯ ಹೇಗೆ ಸುರಕ್ಷಿತವಾಗಿರಲು ಸಾಧ್ಯ. ರಾಜ್ಯದ ಹಿರಿಯ ಅಧಿಕಾರಿಗಳಿಗೆ ಸತ್ಯ ಹೇಳಿದರೆ, ಒತ್ತಡ ಹಾಕುವುದು, ದೌರ್ಜನ್ಯ ಎಸುಗುವುದು ಸಾಮಾನ್ಯವಾಗಿದೆ ಎಂದು ಟೀಕಿಸಿದ ಮೋದಿ ಅವರು ಕಾಂಗ್ರೆಸ್ ಇದ್ದಲೆಲ್ಲಾ ಭ್ರಷ್ಟಚಾರ, ದೌರ್ಜನ್ಯ, ವಿಕಾಸ ನಿಂತು ಹೋಗಿದೆ. ಕರ್ನಾಟಕದಲ್ಲಿ ನೀರು ಸಿಗುತ್ತಿಲ್ಲ. ರೈತರ ಆತ್ಯಹತ್ಮೆ ನಿಂತಿಲ್ಲ. ಪ್ರವಾಸೋದ್ಯ,ಮ ಕುಸಿದಿದೆ. ಚಾಮರಾಜನಗರದ ಪರಿಸ್ಥಿತಿ ಕೇಳುವವರಿಲ್ಲ. ಕಪ್ಪು ಗ್ರಾನ್ಯೇಟ್ ಇದ್ದರೂ, ಯುವಕರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ ಎಂದು ಪಟ್ಟಿಯೇ ನೀಡಿದರು.

2+1 ಕುಟುಂಬ ರಾಜಕಾರಣದ ವಿರುದ್ಧ ಮೋದಿ ಗರಂ

ಚಾಮರಾಜ ನಗರ : ರಾಜ್ಯದಲ್ಲಿ 2+1 ಕುಟುಂಬ ರಾಜಕಾರಣದ ಫ್ಯಾಮಿಲಿ ಪ್ಯಾಕೇಜ್ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಪಾದಿಸಿದರು. ಅವರು ಚಾಮರಾಜನಗರದ ಸಂತೆ ಮಾರನಹಳ್ಳಿಯಲ್ಲಿ ಬಿಜೆಪಿಯ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಅತಿ ಹೆಚ್ಚು ಮಲಗುವ ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ಸೂತ್ರ ನೋಡಿ ನನಗೆ ಅವರ ಮೇಲೆ ಕರುಣೆ ಬರುತ್ತಿದೆ. ಅವರು ಪರಾಜಯದಿಂದ ಹೆದರಿ, ಚಾಮುಂಡೇಶ್ವರಿಯಿಂದ ಬಾದಾಮಿಗೆ ಓಡಿ ಹೋಗಿದಲ್ಲದೆ, ವರುಣಾದಲ್ಲಿ ಮಗನಿಗೆ ಬಲಿ ಕೊಡಲು ಸಿದ್ಧರಾಗಿದ್ದಾರೆ ಎಂಬಂತೆ ಕಾಣುತ್ತಿದೆ. ಮೂರರಲ್ಲಿ ಒಬ್ಬರಾದರೂ ಉಳಿದರೆ ಕುಟುಂಬ ನಡೆಯುತ್ತದೆ ಎಂಬುದು ಸಿಎಂ ಗೆ ಅರಿವಾಗಿದೆ ಎಂದು ಟೀಕಿಸಿದ ಅವರು ಮಿನಿಸ್ಟರ್ ಗೆ 1+1 ಸ್ಥಾನ ನೀಡಿರುವುದು ಬಿಜೆಪಿಯ ಕಾರ್ಯಕರ್ತರಿಗೆ ಅದರಲ್ಲೂ ವಿಶೇಷವಾಗಿ ರಾಜ್ಯದ ಜನರ ಮನಸ್ಸಿಗೆ ನೋವುಂಟು ಮಾಡಿದೆ ಎಂದರು. ಕುಟುಂಬ ರಾಜಕಾರಣ ಇಡೀ ಸಮಾಜ, ದೇಶ ಹಾಳು ಮಾಡಿದೆ. ಹೀಗಾಗಿ ಇದು ಜನರ ಮತ್ತು ಕುಟುಂಬ ರಾಜಕಾರಣದ ಚುನಾವಣೆಯಾಗಿದೆ. ಶೇ. 10 ಪ್ರತಿಷತ ಕಮಿಷನ್ ಸರಕಾರ ಇಡೀ ರಾಜ್ಯದ ವ್ಯವಸ್ಥೆ ಹಾಳು ಮಾಡಿದೆ. ಹೀಗಾಗಿ ನೀವು ಮೇ 12ರಂದು ಇದನ್ನು ನಿರ್ಧರಿಸಬೇಕಿದೆ. ಕಮಲ ಅರಳಿಸುವ ಮೂಲಕ ರಾಜ್ಯದ ಭಾಗ್ಯ ಬದಲಾವಣೆ ಮಾಡಬೇಕಿದೆ ಎಂದರು. ಆ ನಿಮ್ಮ ನಿರ್ಧಾರ ಸತ್ಯವಂತರಿಗೆ ಅಧಿಕಾರ ನೀಡುವ ಮೂಲಕ ಭ್ರಷ್ಟರಿಗೆ, ದುಷ್ಟರಿಗೆ ಶಿಕ್ಷೆ ನೀಡಬೇಕಿದೆ. ನೋಟ್ ಬ್ಯಾನ್ ನಿಂದ ಹೆಣಗಾಡಿದ ಜನರಿಗೆ ಪಾಠ ಕಲಿಸಲು ಇದು ಸದವಕಾಶವಾಗಿದೆ. ಭ್ರಷ್ಟಚಾರ ಹೊಗಲಾಡಿಸಲು ಬಲ ತುಂಬುವ ಪ್ರಯತ್ನ ಮಾಡಿ, ಆ ಮೂಲಕ ಕರ್ನಾಟಕ ನಾಮ್ ದಾರರಿಗೆ ಪಾಠಕಲಿಸಿ ಕಾಮ್ ದಾರರಿಗೆ ಬೆಂಬಲಿಸಿ ಎಂದರು.

ರಾಹುಲ್ ಗಾಂಧಿಗೆ ತಿರುಗೇಟು ನೀಡಿದ ಮೋದಿ

ಚಾಮರಾಜನಗರ : ಸಂಸತ ನಲ್ಲಿ ನಾನು ಹದಿನೈದು ನಿಮಿಷ ಮಾತನಾಡಿದರೆ ನೀವು ಕೂಡಲು ಆಗುವುದಿಲ್ಲ ಎಂದು ಗುಡುಗಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುಡುಗಿದ್ದಾರೆ. ಅವರು ಮಂಗಳವಾರ ಚಾಮರಾಜನಗರ ಜಿಲ್ಲೆಯ ಸಂತೆಮಾರನಹಳ್ಳಿಯ ಬಿಜೆಪಿಯ ಸಮಾವೇಶ ಉದ್ದೇಶಿಸಿ ಮಾತನಾಡಿ, ಮಾತು ಮಾತಿಗೂ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಮ್ಮ ಬಗ್ಗೆ ನೀವು ಮಾತನಾಡುವುದು ಹೋಗಲಿ. ಕರ್ನಾಟಕದ ಕಾಂಗ್ರೆಸ್ ಸರಕಾರದ ಸಾಧನೆಯನ್ನು ಹೇಳಿ ನೋಡೋಣ ಎಂದು ಸವಾಲ್ ಹಾಕಿದರು. ನಿಮ್ಮ ಮಾತು ಕೇಳಿಯೇ ನನಗೆ ನಗು ಬರುತ್ತಿದೆ. ನೀವು ಸಂಸತ್ ನಲ್ಲಿ ಮಾತನಾಡುತ್ತಿರಿ ಎಂದು ಹೇಳಿರುವುದೇ ದೊಡ್ಡ ಸಾಧನೆ. ಅದು ನಿಮ್ಮ ಸಾಧ್ಯವೇ ಎಂದಿರುವ ಪ್ರಧಾನಿ ಮೋದಿ, ಹದಿನೈದು ನಿಮಿಷ್ ಮಾತನಾಡುವುದು ಇರಲಿ, ನೀವು ಕೇವಲ ಸರ್ ಎಂ. ವಿಶ್ವೇಶ್ವರಯ್ಯ ಅವರ ಹೆಸರನ್ನು ಐದು ಬಾರಿ ಹೇಳಿ ನೋಡೋಣ. ಇಷ್ಟು ಮಾಡಿದರೆ ಸಾಕು ನಿಮ್ಮ ಮಾತಿನಲ್ಲಿ ಎಷ್ಟು ಧಮ್ ಇದೆ ಎಂಬುದು ಗೊತ್ತಾಗುತ್ತದೆ ಎಂದು ಕುಟುಕಿದರು. ನೀವು ಬೇಕಿದ್ದರೆ ನಿಮ್ಮ ತಾಯಿಯ ಮಾತೃಭಾಷೆಯಲ್ಲಿಯೇ ಮಾತನಾಡಿ, ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಬೇಕಾದರೂ ಮಾತನಾಡಿ, ಎಂದು ತೀವ್ರ ವಾಗ್ದಾಳಿ ನಡೆಸಿದರು.