ರಾಜ್ಯ

ಪೋನ್ ತೆಗೆಯದ ಸಂಸದರಿಗೆ ಬೆವರಿಳಿಸಿದ ಅನ್ನದಾತ

ಮೈಸೂರು PRAJAKIRAN.COM : ರೈತ ಮುಖಂಡರ ಪೋನ್ ತೆಗೆಯದ ಸಂಸದರಿಗೆ ಅನ್ನದಾತನೊಬ್ಬ ಬೆವರಿಳಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಜವಾಬ್ದಾರಿ ಸ್ಥಾನದಲ್ಲಿದ್ದಿರಿ ಅದನ್ನ ಮರೆಯಬೇಡಿ.ರೈತರ ಕಷ್ಟ ಆಲಿಸುವುದು ನಿಮ್ಮ ಕರ್ತವ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದಿಂದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಇದರಿಂದಾಗಿ ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ಹೋರಟಗಾರರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

ತಂಬಾಕು ಬೆಳೆಗಾರರ ಸಮಸ್ಯೆ ಬಗೆಹರಿಸುಸುತ್ತಿಲ್ಲ, ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ ಎಂದು ಆರೋಪ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡರು.

ಏರುಧ್ವನಿಯಲ್ಲಿ ಸಂಸದ ಪ್ರತಾಪ್ ಸಿಂಹರನ್ನ ಪ್ರಶ್ನಿಸಿದ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ಮಾತಿನಿಂದಾಗಿ ಸಂಸದರು ಕೆಲಕಾಲ ತಡಬಡಾಯಿಸಿದರು.

ಅಲ್ಲದೆ, ರೈತರಿಗೆ ಸಮಜಾಯಸಿ ನೀಡಲು ಸಂಸದ ಪ್ರತಾಪ್ ಸಿಂಹ ಪರದಾಡಬೇಕಾಯಿತು.

Please follow and like us:

Leave a Reply

Your email address will not be published. Required fields are marked *