ಹುಬ್ಬಳ್ಳಿ prajakiran.com : ಗೋಕುಲ್ ಗ್ರಾಮಸ್ಥರ ಮೇಲೆ ಹಲ್ಲೆಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೇ ರಾತ್ರಿ ಹುಬ್ಬಳ್ಳಿಯ ರೌಡಿಶೀಟರ್ ಚೇತನ ಹಿರೇಕೆರೂರ ಮೇಲೆ ಒಂದೇ ವಾರದಲ್ಲಿ ಎರಡನೇ ಪ್ರಕರಣ ದಾಖಲಾಗಿದೆ.
ಗೋಕುಲ್ ಗ್ರಾಮದಲ್ಲಿ ನಿನ್ನೇ ಸಂಜೆ ರೈತನೊಬ್ಬ ಕೆರೆಯ ಬಳಿ ಟ್ರ್ಯಾಕ್ಟರ್ ತೋಳೆಯುತ್ತಿದ್ದ. ಆಗ ರೈತನ ಮೇಲೆ ಚೇತನ ಹುಡುಗರು ಉಗುಳಿದಿದ್ದಾರೆ.
ಇದರಿಂದ ರೈತ ಹಾಗೂ ಚೇತನ ಹುಡುಗರ ನಡುವೆ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಿದ್ದಾರೆ. ಇದರಿಂದ ಕೆರೆಯಲ್ಲಿ ಟ್ರ್ಯಾಕ್ಟರ್ ತೊಳೆಯುತ್ತಿದ್ದ ರೈತ ಈ ವಿಷಯವನ್ನು ಗ್ರಾಮಸ್ಥರಿಗೆ ಮುಟ್ಟಿಸಿದ್ದಾನೆ.
ರೊಚ್ಚಿಗೆದ್ದ ಗ್ರಾಮಸ್ಥರು ಅವರ ಉಪಟಳ ತಾಳಲಾರದೆ ಅವರನ್ನು ಹಿಡಿದು ಥಳಿಸಿದ್ದಾರೆ. ಆಗ ಚೇತನ ತನ್ನ ನೂರು ಜನ ಹುಡುಗರನ್ನು ಕರೆದುಕೊಂಡು ಬಂದು ಮತ್ತೆ ಗಲಾಟೆ ಮಾಡಿದ್ದಾರೆ.
ಆಗ ಗ್ರಾಮಸ್ಥರು ಅವರನ್ನು ಹಿಡಿದು ಥಳಿಸಿದ್ದಾರೆ. ಆಗ ಚೇತನ ಹಾಗೂ ಆತನ ಹುಡುಗರು ಓಡಿ ಹೋಗಿದ್ದಾರೆ.
ಚೇತನ ಒಬ್ಬರ ಮನೆಯಲ್ಲಿ ಅಡಗಿದ್ದ. ಆಗ ಅವನನ್ನು ಹಿಡಿದು ಸಬ್ ಇನ್ಸಪೆಕ್ಟರ್ ಕೊರಳಪಟ್ಟಿ ಹಿಡಿದು ಚೆನ್ನಾಗಿ ಥಳಿಸಿದ್ದಾರೆ . ಪಿಎಸ್ ಐ ಗೆ ಅವಾಜ್ ಹಾಕಿದ ಚೇತನ ನ್ಯಾನಾರು ಗೊತ್ತೆ ಎಂದು ಗುಡುಗಿದ್ದಾನೆ.
ಇದರಿಂದ ಮತ್ತಷ್ಟು ಕುಪಿತಗೊಂಡ ಪಿಎಸ್ ಐ ತದಕಿದ್ದಾರೆ. ಆಗ ಮಧ್ಯ ಪ್ರವೇಶ ಮಾಡಿದ ಕೆಲ ಪೊಲೀಸರು ಆತನನ್ನು ಸಮಾಧಾನ ಪಡಿಸಿ ಅಲ್ಲಿಂದ ಕಳುಹಿಸಿ ಕೈ ತೊಳೆದುಕೊಂಡಿದ್ದಾರೆ.
ಇದರಿಂದ ಗರಂ ಆದ ಗ್ರಾಮಸ್ಥರು ಈ ವಿಷಯವನ್ನು ಪೊಲೀಸ್ ಆಯುಕ್ತ ಆರ್. ದಿಲೀಪ್ ಅವರ ಗಮನಕ್ಕೆ ತಂದಿದ್ದಾರೆ.
ಇದರಿಂದ ಪೊಲೀಸ್ ಆಯುಕ್ತ ಆರ್ ಗೋಕುಲ್ ಪೊಲೀಸ್ ಠಾಣೆ ಸಿಬ್ಬಂದಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದು, ತಕ್ಷಣ ಆತನನ್ನು ಬಂಧಿಸುವಂತೆ ತಾಕಿತು ಮಾಡಿದ್ದಾರೆ.
ಅಲ್ಲದೆ,ಈ ಕುರಿತು ಚೇತನ ಹಿರೇಕೆರೂರ ಹಾಗೂ ಆತನ ಸಹಚರರ ವಿರುದ್ದ ಗೋಕುಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಈ ಹಿಂದೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲಿ ಯುವಕನೊಬ್ಬ ಹೊಸ ಬೈಕ್ ತೆಗೆದುಕೊಂಡು ಶೋಕಿ ಮಾಡಿದ್ದಕ್ಕೆ ಆತನನ್ನು ಹಿಡಿದು ಥಳಿಸಿದ್ದರು.
ಇದರ ವಿರುದ್ದ ದೂರು ದಾಖಲಾದ ಬೆನ್ನಲ್ಲೇ ವಾರದಲ್ಲಿಯೇ ಚೇತನ ವಿರುದ್ದ ಎರಡನೇ ಎಫ್ ಐಆರ್ ದಾಖಲಾಗಿದೆ. ಆತನ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಪೊಲೀಸರು ಆತನ ಪರ ವಕಾಲತ್ತು ವಹಿಸುವುದು ಬಿಡುತ್ತಿಲ್ಲ.
ಚೇತನ್ ಅರೆಸ್ಟ್ ಮಾಡಲು ಕೆಲ ಪೊಲೀಸರು ಮೀನಾಮೇಷ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ಪೊಲೀಸರ ನಡೆ ವಿರುದ್ದ ಪೊಲೀಸ್ ಆಯುಕ್ತರು ಗರಂ ಆಗಿದ್ದು ತಕ್ಷಣ ಬಂಧಿಸುವಂತೆ ಆದೇಶಿಸಿದ್ದಾರೆ. ಈಗಲಾದರೂ ಆತನನ್ನು ಹಿಡಿದುಕೊಂಡು ಬರುತ್ತಾರೆಯೇ ಎಂಬುದು ಕಾದು ನೋಡಬೇಕಿದೆ.

