ರಾಜ್ಯ

ಕಂಪ್ಲಿ ಶಾಸಕ ಗಣೇಶ ಶೀಘ್ರ ಬಂಧನ

ಬೆಂಗಳೂರು : ಹೊಸಪೇಟೆಯ ವಿಜಯ ನಗರ ಶಾಸಕ ಆನಂದ ಸಿಂಗ್ ಮೇಲೆ ಈಗಲ್ ಟನ್ ರೆಸಾರ್ಟ್ ನಲ್ಲಿ ಮಾರಣಾಂತಿಕ ಹಲ್ಲೆ ಮಾಡಿ ತಲೆ ಮರೆಸಿಕೊಂಡಿರುವ ಕಂಪ್ಲಿ ಶಾಸಕ ಜೆ.ಎನ್. ಗಣೇಶನನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಗೃಹ ಸಚಿವ ಎಂ.ಬಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅವರು ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗಣೇಶ ಬಂಧನ ಶೀಘ್ರದಲ್ಲಿಯೇ ಆಗಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಸಮಜಾಯಿಸಿ ನೀಡಿದರು.

ನಾನು ಇಷ್ಟೇ ಹೇಳಬಲ್ಲೇ, ನಮ್ಮ ಪೊಲೀಸರು ಹುಡುಕಾಡುತ್ತಿದ್ದಾರೆ. ಅವನು ಎಲ್ಲಿಯೇ ಇದ್ದರೂ ಅಲ್ಲಿಗೆ ಹೋಗಿ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಯಾರೇ ಪ್ರಕರಣ ದಾಖಲಿಸಿದರೂ ಇಂತಹ ಪ್ರಕರಣಗಳಿದ್ದಾಗ ನಾಪತ್ತೇ ಆಗುವುದು ಸಹಜ. ಆದರೆ ಈ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಗಲ್ಲ ಎಂದರು.

ಈ ಮೊದಲು ಮುಂಬೈ, ಗೋವಾಕ್ಕೆ ಹೋಗಿದ್ದರು. ನಮ್ಮ ಪೊಲೀಸರು ಅಲ್ಲಿ ಹೋಗಿದ್ದರು. ನಮ್ಮವರು ಗಂಭೀರವಾಗಿ ಪ್ರಯತ್ನಿಸುತ್ತಿದ್ದಾರೆ ಸಾಧ್ಯವಾದಷ್ಟು ಶೀಘ್ರ ಬಂಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

Please follow and like us:

Leave a Reply

Your email address will not be published. Required fields are marked *