ಹಾಸನ : ಇತಿಹಾಸ ಪ್ರಸಿದ್ಧ ಹಾಸನಾಂಬೆ ದರ್ಶನಕ್ಕೆ ವಿದ್ಯುಕ್ತವಾಗಿ ಶುಕ್ರವಾರ ತೆರೆ ಬಿದ್ದಿದೆ.
ದೇವಾಲಯದ ಬಾಗಿಲುಗಳನ್ನು ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಎಸ್.ಪಿ. ಡಾ ಪ್ರಕಾಶ್ ಗೌಡ ದೇವಸ್ಥಾನ ಆಡಳಿತಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಹೆಚ್.ಎಲ್ ನಾಗರಾಜ್ ಸಮ್ಮುಖದಲ್ಲಿ ದೇವಾಲಯದ ಬಾಗಿಲುಗಳಿಗೆ ಬೀಗ ಹಾಕಲಾಯಿತು.
ಹಾಸನ ಕ್ಷೇತ್ರದ ಶಾಸಕರಾದ ಪ್ರೀತಂ ಗೌಡ ರವರು ಅಂತಿಮ ದಿನದಂದು ದರ್ಶನ ಪಡೆದರು.
ಹಾಸನಾಂಬ ದೇವಿಗೆ ಈ ವರ್ಷ ಹುಂಡಿ ಹಣ- 89,67,331 ರೂಪಾಯಿ ಸಂದಾಯವಾಗಿದೆ.
ಟಿಕೇಟ್, ಲಾಡು, ಸೀರೆ ಮಾರಾಟ ಸೇರಿ ಇತರೆ ಮೂಲದಿಂದ 1,58,61,440 ಹಣ ಬಂದಿದ್ದು, ಒಟ್ಟು ದೇವಾಲಯಕ್ಕೆ ಬಂದ ಆದಾಯ 2,48,28,711 ಮೊತ್ತದಷ್ಟಾಗಿರುವುದು ಭಕ್ತರ ಮೊಗದಲ್ಲಿ ಸಂತಸ ಮೂಡಿಸಿದೆ.