ಜಿಲ್ಲೆ

ಧಾರಾಕಾರ ಮಳೆ ಗಾಳಿಗೆ ಭಾರಿ ಹಾನಿ‌

ಕುಂದಗೋಳ : ತಡರಾತ್ರಿ ಸುರಿದ ಧಾರಾಕಾರ ಮಳೆ ಗಾಳಿಗೆ ಕುಂದಗೋಳ ತಾಲೂಕಿನಲ್ಲಿ ಭಾರಿ ಹಾನಿ‌ ಸಂಭವಿಸಿದೆ.

ತಾಲೂಕಿನ ಚಿಕ್ಕನರ್ತಿ ಗ್ರಾಮದಲ್ಲಿ ನಿನ್ನೆ ಬಾರಿ ಮಳೆ ಗಾಳಿಗೆ ಮನೆಯ ಮೇಲಿನ ಮೇಲ್ಚಾವಣಿಯಲ್ಲಿ ಹಾರಿ ಹೋಗಿವೆ.

ಮಳೆರಾಯನ ಅರ್ಭಟಕ್ಕೆ ಚಿಕ್ಕನರ್ತಿ ಗ್ರಾಮದ 8ಕ್ಕೂ ಹೆಚ್ಚು ಮನೆಗಳ ಮೇಲ್ಚಾವಣಿಯ ತಗಡಗಳು ಹಾರಿ ಇತರ ಅಪಾರ ಪ್ರಮಾಣದ ವಸ್ತುಗಳು ಹಾನಿಗೀಡಾಗಿವೆ.

ಅಲ್ಲಾಸಾಬ ನಧಾಪ್, ಮಂಜುನಾಥ್ ಬಿಳೆಬಾಳ, ಸಹದೇವಪ್ಪ ಬಿಳೆಬಾಳ, ಮಲ್ಲಿಕಾರ್ಜುನ ಅತ್ತಿಗೇರಿ, ಗುರುಪಾದ ಮುಂದಿನ ಮನಿ, ಮುತ್ತಣ್ಣ ಗೊಣಿ ಎಂಬುವವರ ಮನೆಯಲ್ಲಿ ಮೇಲ್ಚಾವಣಿ ತಗಡು ಹಾರಿ ಹೋಗಿವೆ. ಆದ್ರೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.‌

Please follow and like us:

Leave a Reply

Your email address will not be published. Required fields are marked *