- ಹೊಗೆಯ ಹೂವನ್ನು ತುಪ್ಪದಲ್ಲಿ ಹುರಿದು ನಂತರ ಪುಡಿ ಮಾಡಿಟ್ಟುಕೊಂಡು ಬೆಳಗ್ಗೆ ಸಂಜೆ ಎರಡು ಹೊತ್ತು ಆರು ವಾರ ಸೇವಿಸಿದರೆ ಸಕಲ ಮೇಹ ರೋಗಗಳು ವಾಸಿಯಾಗುತ್ತವೆ.
- ಹೊಂಗೆಯ ಪಂಚಾಗಗಳನ್ನು ಅರೆದು ಹಾಲು ಸೇರಿಸಿ ಕುಡಿಯುವುದರಿಂದ ಪಾಂಡುರೋಗ ಗುಣವಾಗುತ್ತದೆ. ದೇಹದ ಬಲವು ಬರುತ್ತದೆ.
- ಹೊಂಗೆಯ ಪಂಚಾಂಗದ ಚೂರ್ಣಕ್ಕೆ ತುಪ್ಪ ಸೇರಿಸಿ ತಿನ್ನುವುದರಿಂದ ವಾತ ಸಂಬಂಧದ ವ್ಯಾದಿಗಳು ಗುಣವಾಗುತ್ತದೆ.
- ಹೊಂಗೆಯ ಪಂಚಾಂಗಗಳನ್ನು ಅರೆದು ಅದಕ್ಕೆ ಎಳ್ಳೆಣ್ಣೆ ಸೇರಿಸಿ ಕಾಯಿಸಿ ಎಣ್ಣೆಮಾತ್ರ ಉಳಿಸಿಕೊಂಡು ಬಾಟಲ್ ನಲ್ಲಿ ಸಂಗ್ರಹಿಸಿಟ್ಟು ಈ ತೈಲವನ್ನು ಹಚ್ಚುವುದರಿಂದ ಚರ್ಮವ್ಯಾದಿಗಳು ವಾಸಿಯಾಗುತ್ತವೆ.
- ಹೊಂಗೆ ಬೀಜವನ್ನು ನೀರಿನಲ್ಲಿ ನೆನೆಸಿಟ್ಟು ಸಿಪ್ಪೆ ಸುಲಿದು ಒಣಗಿಸಿ ಕುಟ್ಟಿ ವಸ್ತ್ರಗಾಳಿತ ಚೂರ್ಣ ಮಾಡಿಕೊಂಡು ಹೊತ್ತಿಗೆ 5 ರಿಂದ 6 ಗುಂಜಿ ತೂಕದಷ್ಟು ಚೂರ್ಣವನ್ನು ತೆಗೆದುಕೊಂಡು ಜೇನುತುಪ್ಪದಲ್ಲಿ ಕಲಿಸಿ ದಿನಕ್ಕೆ 3ರಿಂದ 4 ಬಾರಿ ಸೇವಿಸಿದರೆ ಮಲೇರಿಯಾ ಜ್ವರ ವಾಸಿಯಾಗುತ್ತದೆ.
- ಹೊಂಗೆಯ ಚಿಗುರುಲೆಯ ರಸ 2 ಚಮಚಕ್ಕೆ ಎರಡು ಗುಂಜಿ ತೂಕ ಕಾಳು ಮೆಣಸಿನ ಚೂರ್ಣ ಸೇರಿಸಿ ನಿತ್ಯ ಬೆಳಗ್ಗೆ ಸಂಜೆ ಸೇವಿಸಿದರೆ ಕಫ ಕಡಿಮೆಯಾಗಿ ಕೆಮ್ಮು ಸಹ ಕಡಿಮೆ ಆಗುತ್ತದೆ.
- ಹೊಂಗೆಯ ಎಣ್ಣೆ 6 ತೊಲದಷ್ಟು ತೆಗೆದುಕೊಂಡು ಅದಕ್ಕೆ ಒಂದೂವರೆ ತೊಲ ಆರತಿ ಕರ್ಪೂರ ಮಿಶ್ರ ಮಾಡಿ ಬಿಸಿ ಮಾಡಿಟ್ಟುಕೊಂಡು ಆ ಎಣ್ಣೆಯನ್ನು ಹಚ್ಚಿ ತಿಕ್ಕುವುದರಿಂದ ಸಂಧಿವಾತ (ಆಮವಾತ) ನಿವಾರಣೆಯಾಗುತ್ತದೆ.
ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿವೈದ್ಯರು

