ತಲೆ ನೋವು ಕಾಣಿಸಿಕೊಂಡಾಗ ಒಂದು ಚೂರು ಬೆಲ್ಲ ತಿಂದರೆ ತಲೆ ನೋವು ನಿವಾರಣೆಯಾಗುತ್ತದೆ.
ಬೆಲ್ಲದ ಚೂರು ಬಾಯಿಯಲ್ಲಿ ಹಾಕಿಕೊಂಡು ಲಾಲಾರಸ ಉತ್ಪತ್ತಿಯಾಗುವಂತೆ ಮಾಡಿದರೆ ಉಸಿರಾಟದ ತೊಂದರೆ ದೂರವಾಗುತ್ತದೆ.
ಗಂಟಲು ಕೆರತ ಹಾಗೂ ಕೆಮ್ಮು ಕಾಣಿಸಿದರೆ ಈರುಳ್ಳಿ ಇಲ್ಲವೇ ಬೆಳ್ಳೂಳ‍್ಳಿಯನ್ನು ಸುಟ್ಟು ಬೆಲ್ಲದೊಂದಿಗೆ ಸವಿದರೆ ಸಾಕು ಕ್ಷಣಾರ್ಧದಲ್ಲಿ ಗಂಟಲು ಕೆರತ ಹಾಗೂ ಕೆಮ್ಮು ಹೋಗುತ್ತದೆ.
ದಿನನಿತ್ಯ ನಿಯಮಿತ ಬೆಲ್ಲ ಸೇವನೆಯಿಂದ ರಕ್ತ ಕೂಡ ಶುದ್ದೀಕರಣಗೊಳ್ಳುತ್ತದೆ.
ಬೆಲ್ಲ ಸೇವನೆಯೂ ಅಜೀರ್ಣ ನಿವಾರಣೆ ಮಾಡಿ ಜೀರ್ಣ ಕ್ರಿಯೆಗೆ ಕೂಡ ಸಹಕಾರಿಯಾಗಿದೆ.
ಬೆಲ್ಲವೂ ಹೊಟ್ಟೆಯನ್ನು ಸದಾ ಕಾಲ ತಂಪಾಗಿ ಇರುವಂತೆ ಮಾಡುತ್ತದೆ.
ಮೊಡವೆ ನಿವಾರಣೆಗೆ ಬೆಲ್ಲವು ಅತ್ಯುತ್ತಮ ಔಷಧಿಯಾಗಿದ್ದು, ತ್ವಚ್ಛೆಯನ್ನು ಸುಂದರವಾಗಿರಿಸುತ್ತದೆ.
ಮುಟ್ಟಿನ ಸಮಯದಲ್ಲಿ ಅಧಿಕ ನೋವು ಕಂಡು ಬಂದರೆ ಮಾತ್ರೆ ಬದಲಿಗೆ ಬೆಲ್ಲ ಸೇವನೆಯಿಂದ ಕೂಡ ನೋವು ನಿವಾರಿಸಿಕೊಳ್ಳಬಹುದು.
ರಕ್ತ ಹೀನತೆಯಿಂದ ಬಳಲುವ ಹದಿಹರೆಯದ ಯುವತಿಯರು ಹಾಗೂ ಗರ್ಭೀಣಿ ಮಹಿಳೆಯರು ಬೆಲ್ಲ ಸೇವನೆಯಿಂದ ರಕ್ತ ಹೀನತೆಯನ್ನು ಕಡಿಮೆಮಾಡಿಕೊಳ್ಳಬಹುದು.
ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿವೈದ್ಯರು