- ಎಳನೀರು ಹಾಗೂ ಟೋಮಾಟೋ ರಸ ಎರಡನ್ನು ಸಮ ಪ್ರಮಾಣದಲ್ಲಿ ಸೇರಿಸಿ ತ್ವಚೆಗೆ ಲೇಪಿಸಿ ಸೌಮ್ಯವಾಗಿ ಮಾಲೀಶ್ ಮಾಡಬೇಕು.
- ತೆಂಗಿನೆಣ್ಣಿಯಲ್ಲಿ ಸ್ವಲ್ಪ ಕಡಲೆ ಗಿಡದ ಬೇರನ್ನು ಅರೆದು ಸೇರಿಸಿ ಇದನ್ನು ದಿನದಲ್ಲಿ 4 ರಿಂದ 5 ಬಾರಿ ಕಜ್ಜಿಗಳ ಮೇಲೆ ಲೇಪಿಸಬೇಕು.
- ಕಮಲದ ಬೇರನ್ನು ತೆಂಗಿನ ನೀರಿನಲ್ಲಿ ತೇಯ್ದು ಯಥಾ ಸ್ಥಾನದಲ್ಲಿ ಲೇಪಿಸಬೇಕು.
- ಕೊಬ್ಬರಿ ಎಣ್ಣೆಗೆ ನಿಂಬೆಯ ರಸ ಸೇರಿಸಿ ಕಜ್ಜಿಗಳಿಗೆ ಲೇಪಿಸುವುದರಿಂದ ಕ್ರಮೇಣವಾಗಿ ಅವು ಒಣಗುತ್ತಾ ಹೋಗುತ್ತದೆ.
- ಕೊಬ್ಬರಿ ಎಣ್ಣೆಯಲ್ಲಿ ತುಳಸಿ ಎಲೆಯ ರಸ ಹಾಗೂ ನಿಂಬೆಯ ರಸ ಎರಡನ್ನು ಸಮ ಪ್ರಮಾಣದಲ್ಲಿ ಸೇರಿಸಿ ಕಜ್ಜಿಗಳ ಮೇಲೆ ಹಿತ ಕಾಣುವವರೆಗೆ ಲೇಪಿಸುತ್ತಿರಬೇಕು.
- ಸ್ವಲ್ಪ ಕೊಬ್ಬರಿ ಎಣ್ಣೆಯಲ್ಲಿ ಬೇವಿನ ಎಲೆಗಳ ಭಸ್ಮವನ್ನು ಸೇರಿಸಿ ಯತಾಸ್ಥಾನದಲ್ಲಿ ಲೇಪಿಸಬೇಕು.
- ಸಾಸಿವೆ ಎಣ್ಣೆಯಲ್ಲಿ ಹುರಿದ ಪಟಕದ ಚೂರ್ಣ ಸುಟ್ಟ ಹಸಿ ಶುಂಠಿಯ ಭಸ್ಮ 4 ರಿಂದ 5 ಹಸಿ ಸೀಮೆ ಎಣ್ಣೆ ಇವುಗಳನ್ನು ಸೇರಿಸಿ ಭಾದಿತ ಚರ್ಮದ ಮೇಲೆ ಲೇಪಿಸಬೇಕು.
- ಸ್ವಲ್ಪ ಮಲ್ಲಿಗೆ ತೈಲದಲ್ಲಿ ನಿಂಬೆರಸ ಹಾಗೂ ಹಸಿ ಶುಂಠಿಯ ರಸ ಎರಡನ್ನು ಸಮಾನ ಪ್ರಮಾಣದಲ್ಲಿ ಸೇರಿಸಿ ಕಜ್ಜಿಗಳ ಮೇಲೆ ಲೇಪಿಸಬೇಕು.
- ಬೇವಿನ ಎಣ್ಣೆಯಲ್ಲಿ ಸ್ವಲ್ಪ ಹಸಿ ಶುಂಠಿಯ ರಸ ಸೇರಿಸಿ ಪದೆ ಪದೇ ಲೇಪಿಸುತ್ತಿರಬೇಕು.
- ಶುದ್ದ ನೆಲ ಜೇನುತುಪ್ಪ ಕಜ್ಜಿಗಳ ಮೇಲೆ ಮುಲಾಮಿನಂತೆ ಲೇಪಿಸಬಹುದು.
ಮಾಹಿತಿ PRAJAKIRAN.COM : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು