ಕಲಬುರಗಿ Prajakiran.com : ಮಹೇಂದ್ರ ಪಿಕ್ ಆಫ್ ಮಿನಿ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 18 ಜಾನುವಾರುಗಳು ರಕ್ಷಿಸುವಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಯಶಸ್ವಿ ಆದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಸೋಮವಾರ ಮಧ್ಯಾಹ್ನ 2 ಸುಮಾರಿಗೆ ಕಲಬುರ್ಗಿ ವಿಜಯಪುರ ಮುಖ್ಯ ರಸ್ತೆಯ ನೇಲೊಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಶ್ರೀ ರಾಮ್ ಸೇನೆ ಘಟಕ ಜೇವರ್ಗಿ ಕಾರ್ಯಕರ್ತರು ಕೆಎ 32 ಡಿ 5766
ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಈ ವಾಹನದಲ್ಲಿ, ದನಗಳು ಒಂದರ ಮೇಲೊಂದು ಹಾಕಿ, ಸ್ವಾಸ ( ಗಾಳಿ) ಆಡಿದಂತೆ ಉಸಿರುಗಟ್ಟಿಸಿ, ಹಿಂಸಾತ್ಮಕ, ಕ್ರೂರವಾಗಿ, ಆಹಾರ ನೀರು ಕೊಡದೆ 7×4 ಸೈಜ್ ಮಿನಿ ವಾಹನದಲ್ಲಿ 18 ಜಾನುವಾರುಗಳು. ಅಕ್ರಮವಾಗಿ ಸಾಗಿಸುತ್ತಿದ್ದರು.
ಈ ವಾಹನ ಮತ್ತು ವಾಹನ ದಲ್ಲಿನ ದನ ಸಾಗಣೆ ಮಾಡುವ ಆರೋಪಿ ಗಳೊಂದಿಗೆ ಕರೆ ತಂದು ನೇಲೊಗಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಈ ಕುರಿತು ನೇಲೊಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ಅಲ್ಲದೆ, ನ್ಯಾಯಾಲಯದ ಆದೇಶದಂತೆ ಹದಿನೆಂಟು ಜಾನುವಾರು ಗಳನ್ನು ನಂದಿ ವೆಲಫೇರ್ ಸೆಂಟರ್ ನಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದು ಪ್ರಾಣಿ ಸಂರಕ್ಷಣಾ ಸಮಿತಿ ಸದಸ್ಯ ಕೇಶವ (ಹುಣಚಿರಾಯ) ಮೊಟಗಿ ಪ್ರಜಾಕಿರಣ. ಕಾಮ್ ಗೆ ತಿಳಿಸಿದರು.


