- ಒಂದು ಟೀ ಚಮಚ ಬೀಜಗಳನ್ನು ರಾತ್ರಿ ಒಂದು ಬಟ್ಟಲು ನೀರಿನಲ್ಲಿ ನೆನೆ ಇಡಬೇಕು. ಬೆಳಗ್ಗೆ ಇದರಲ್ಲಿ ಸ್ವಲ್ಪ ಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ ಸೇವಿಸುವುದರಿಂದ ಮಲಬದ್ಧತೆ ಮತ್ತು ಮೂಲವ್ಯಾಧಿ ಗುಣವಾಗುವುದು.
- ಕಾಮ ಕಸ್ತೂರಿ ಹಸಿ ಎಲೆಗಳ ರಸವನ್ನು ಹಿಂಡಿ ಬಟ್ಟೆಯಲ್ಲಿ ಶೋಧಿಸಿ ಜೇನು ತುಪ್ಪದಲ್ಲಿ ಬೆರೆಸಿ ನೆಕ್ಕುವುದರಿಂದ ಗಂಟಲು ಬೇನೆ ಗುಣವಾಗುವುದು.
- ಕಾಮ ಕಸ್ತೂರಿ ಎಲೆಯ ಕಷಾಯ ಮಾಡಿ ಸ್ವಲ್ಪ ಜೇನು ತುಪ್ಪ ಸೇರಿಸಿ ಕುಡಿಯುವುದರಿಂದ ಮೂಗಿನಿಂದ ನೀರು ಸುರಿಯುವುದು, ಶೀತ ಮತ್ತು ಜ್ವರ ಕಡಿಮೆಯಾಗುತ್ತದೆ.
- ಒಂದು ಟೀ ಚಮಚ ಕಾಮ ಕಸ್ತೂರಿ ಬೀಜವನ್ನು ಅರೆದು ಒಂದು ಬಟ್ಟಲು ತಣ್ಣೀರಿನಲ್ಲಿ ಬೆರೆಸಿ ಕುಡಿದರೆ ರಕ್ತ ಭೇದಿ ನಿಲ್ಲುತ್ತದೆ.
- ಕಾಮಕಸ್ತೂರಿ ಗಿಡದ ಹೂಗಳನ್ನು ನೀರಿನಲ್ಲಿ ಅರೆದು ಶೋಧಿಸಿ ಸ್ವಲ್ಪ ಜೇನು ಕೂಡಿಸಿ ಸೇವಿಸುವುದರಿಂದ ಅಜೀರ್ಣ ಮತ್ತು ಹೊಟ್ಟೆಯ ಬಾಧೆ ಶಮನವಾಗುವುದು.
ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿವೈದ್ಯರು,