ಹುಬ್ಬಳ್ಳಿ Prajakiran.com : ಕರೊನಾ ಸೋಂಕು ದೃಢಪಟ್ಟಿದ್ದ ರೋಗಿಯೊಬ್ಬ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ಕಳ್ಳತನ ಆರೋಪದಲ್ಲಿ ಉಪನಗರ ಠಾಣೆಯ ಪೊಲೀಸರು ಬಂಧಿಸಿದ್ದರು. ಪಿ. 14537 ರೋಗಿಯಾಗಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ಗೊತ್ತಾಗಿದೆ.
ಕಳ್ಳತನ ಕೇಸ್ ನ ಆರೋಪಿ ಇಂದು ಬೆಳಿಗ್ಗೆ 5:30 ಕ್ಕೆ ಕಿಮ್ಸ್ ಕೊವಿಡ್ ವಾರ್ಡ್ ನಿಂದ ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು ಪ್ರಜಾಕಿರಣ.ಕಾಮ್ ಗೆ ಲಭ್ಯವಾಗಿದೆ.
ಇಬ್ಬರು ಪೊಲೀಸ್ ಸಿಬ್ಬಂದಿ ಆತನ ಕಾವಲಿಗಿದ್ದರೂ ಅವರ ಕಣ್ಣು ತಪ್ಪಿಸಿ ಪರಾರಿಯಾಗಿದ್ದು ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿ, ಜನರಲ್ಲಿ ಮತ್ತಷ್ಟು ಆತಂಕ ಶುರುವಾಗಿದೆ.
ಈತನ ಸಂಪರ್ಕದಿಂದ ಉಪನಗರ ಠಾಣೆಯ ಒಬ್ಬ ಪೊಲೀಸ್ ಕಾನ್ಸ್ ಟೇಬಲ್ ಗೆ ಕರೊನಾ ದೃಢಪಟ್ಟಿದ್ದು, ಈಗ ಮತ್ತೆ ಸೋಂಕಿತ ಕಳ್ಳತನ ಆರೋಪಿ ಪರಾರಿಯಾಗಿರುವುದು ಪೊಲೀಸರ
ನಿದ್ದೆಗೆಡಿಸಿದೆ.
ಈ ಸಂಬಂಧ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
