ಗ್ವಾಲಿಯರ್ (ಮಧ್ಯಪ್ರದೇಶ) prajakiran.com : ಕೆಪಿಸಿಸಿ ಅಧ್ಯಕ್ಷ ಗಾದೆಯ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ ಇದೀಗ ಅದಕ್ಕಾಗಿ ದೇವರ ಮೊರೆ ಹೋಗಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಹೋಮ ಹವನ ನಡೆಸುತ್ತಿರುವ ಶಿವಕುಮಾರ್ ಅವರು ಶನಿವಾರದ ವರೆಗೆ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿದುಬಂದಿದೆ.
ಧೂಮಾವತಿ ಹಾಗೂ ಕಾಲಭೈರವ ದೇವಸ್ಥಾನದಲ್ಲಿ ಕೆಪಿಸಿಸಿ ಪಟ್ಟಕ್ಕಾಗಿ ಡಿಕೆಶಿ ದೇವರ ಮೋರೆ ಹೋಗಿದ್ದು, ಹೋಮ, ಹವನ, ವಿಶೇಷ ಪೂಜೆ ಪ್ರಾರ್ಥನೆ ಆಯೋಜಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕಾಗಿ ಡಿಕೆಶಿ ಸೇರಿದಂತೆ ಹಲವು ನಾಯಕರು ಕಸರತ್ತು ನಡೆಸಿದ್ದು, ಇದು ಯಾರ ಪಾಲಾಗಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.