ರಾಜ್ಯ

ಕರ್ನಾಟಕ ವಿಶ್ವವಿದ್ಯಾಲಯ ಗುಣಮಟ್ಟದ ಬೋಧನೆ ಬದಲಿಗೆ ಶುಲ್ಕ ವಸೂಲಿಯಲ್ಲಿ ನಂಬರ್ ಒನ್ ….!?

ಸೋಮವಾರ ದಿಂದ ವಿವಿಧ ಹಂತದ ಹೋರಾಟ

ವಿದ್ಯಾರ್ಥಿ ಒಕ್ಕೂಟದ ಮುಖಂಡ ತರುಣ್ ದೊಡ್ಡಮನಿ ಎಚ್ಚರಿಕೆ

ಧಾರವಾಡ ಪ್ರಜಾಕಿರಣ.ಕಾಮ್ : ರಾಜ್ಯದ ಪ್ರತಿಷ್ಟಿತ ಕರ್ನಾಟಕ ವಿಶ್ವವಿದ್ಯಾಲಯ ಗುಣಮಟ್ಟದ ಬೋಧನೆ ಬದಲಿಗೆ
ಶುಲ್ಕ ವಸೂಲಿಯಲ್ಲಿ ನಂಬರ್ ಒನ್ ಆಗಿದೆ ಎಂದು ಕವಿವಿ ವಿದ್ಯಾರ್ಥಿ ಒಕ್ಕೂಟ ಆರೋಪಿಸಿದೆ.

ಈ ಕುರಿತು ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿ ಮುಖಂಡ ತರುಣ ದೊಡ್ಡಮನಿ, ಕುಲಪತಿಯವರು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ ಎಂದರು.

ಇದರಿಂದಾಗಿ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಶಿಕ್ಷೆ ಎಂದು ಪರಿಗಣಿಸಿ ಅರ್ಧದಲ್ಲಿಯೇ ಮೊಟಕುಗೊಳಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ಮನವಿ ಸಲ್ಲಿಸಿದಾಗ ಮಂಗಳವಾರ ವರೆಗೆ ಗಡುವ ನೀಡಲಾಗಿತ್ತು. ಆದರೆ ಅವರು ಸಕರಾತ್ಮಕವಾಗಿ ಸ್ಪಂದಿಸದ ಕಾರಣ ಪ್ರವೇಶ ಶುಲ್ಕ ಕಡಿಮೆ ಮಾಡದಿದ್ದರೆ ಅನಿರ್ದಿಷ್ಟ ಧರಣಿ ಆರಂಭಿಸಲಾಗುವುದು.

ಹಂತ ಹಂತವಾಗಿ ಮಂಗಳವಾರದಿಂದ ವಿದ್ಯಾರ್ಥಿಗಳು ಉಗ್ರ ಹೋರಾಟದ ಹಾದಿ ತುಳಿಯಲಿದ್ದಾರೆ ಎಂದು ಎಚ್ಚರಿಸಿದರು.

ಹಾಸ್ಟೆಲ್ ಶುಲ್ಕ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಆದರೆ,ಮೌಲ ಸೌಕರ್ಯ ಸರಿಯಾಗಿ ಸಿಗುತ್ತಿಲ್ಲ.

2022 ಸಾಲಿನ ಪ್ರವೇಶ ಶುಲ್ಕ ಕಳೆದ ಸಾಲಿಗೆ ಹೊಲಿಕೆ ಮಾಡಿದರೆ ಈ ಬಾರಿ ದ್ವಿಗುಣ ಮಾಡಲಾಗಿದೆ. ಪ್ರವೇಶಕ್ಕೆ ಡಿ.19 ಕೊನೆಯ ದಿನ. ಆದರೂ ಶೇ. 98 ರಷ್ಟು ವಿದ್ಯಾರ್ಥಿಗಳು ಶುಲ್ಕ ಹೆಚ್ಚಳದಿಂದಾಗಿ ಪರದಾಡುತ್ತಿದ್ದು, ಈವರೆಗೆ ಕಟ್ಟಿಲ್ಲ‌. ಕಡಿತಗೊಳಿಸುವರೆಗೆ ಪೂರ್ಣ ಶುಲ್ಕ ಕಟ್ಟಲು ಆಗಲ್ಲ ಎಂದು ಸ್ಪಷ್ಟ ಪಡಿಸಿದರು.

ಕವಿವಿ ಪ್ರವೇಶ ಶುಲ್ಕ ಒಂದೊಂದು ಸೆಂಟರ್ ನಲ್ಲಿ ವಿವಿಧ ರೀತಿಯಲ್ಲಿ ಇದೆ. ಶಿಕ್ಷಣ ದುಬಾರಿ ಆಗಿದೆ. ಕವಿವಿ ಗುಣಮಟ್ಟದ ಶಿಕ್ಷಣ ಬದಲಿಗೆ ಶುಲ್ಕ ವಸೂಲಿಗೆ ನಿಂತಿದೆ ಎಂದು ಕಿಡಿಕಾರಿದರು.

ಪಿ.ಜಿ ಪ್ರಥಮ ವರ್ಷದ ಪ್ರವೇಶ ಶುಲ್ಕ ಹಿಂತಿರುಗಿಸಬೇಕು‌. ದ್ವಿತೀಯ ವರ್ಷದ ಶುಲ್ಕ ಕಡಿತ ಮಾಡದಿದ್ದರೆ ತರಗತಿ ಬಹಿಷ್ಕರಿಸುತ್ತೇವೆ.

ಉಪವಾಸ ಸತ್ಯಾಗ್ರಹವನ್ನು ಮಾಡುತ್ತೇವೆ. ನಾಲ್ಕು ವರ್ಷ ಕಳೆದರೂ ಲ್ಯಾಪ್ ಟ್ಯಾಪ್ ಕೊಟ್ಟಿಲ್ಲ. ಈವರೆಗೆ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿಗೋಷ್ಠಿಯಲ್ಲಿ
ಗಣಪತಿ ಕಡೆಮನಿ, ನಾಗರಾಜ.ಸಿ.ಐ., ಉಮೇಶ ರಾಠೋಡ,ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *