• ಬೆಳಗ್ಗೆದ್ದ ಬಳಿಕ ಹೊಟ್ಟೆ ಖಾಲಿ ಮಾಡಿ ಸುಮಾರು ಅರ್ಧಗಂಟೆ ನಡೆಯಿರಿ. ನಂತರ ಚೆನ್ನಾಗಿ ಹಣ್ಣಾದ ಪಪ್ಪಾಯಿಯನ್ನು ಮಾತ್ರ ಸೇವಿಸಿ. ನೀರನ್ನು ಕನಿಷ್ಟ ಪ್ರಮಾಣದಲ್ಲಿ ಕುಡಿಯಿರಿ. ಊಟದಲ್ಲಿ ಬೆಳ್ಳುಳ್ಳಿ, ಬೀಟ್ ರೂಟ್, ಕ್ಯಾಬೀಜ್ ಇತ್ಯಾದಿ ಹಣ್ಣುಗಳಾದ ಸೇಬು, ಬೆರ್ರಿ, ಲಿಂಬೆ ಹಣ್ಣು ಸೇವಿಸುವುದರಿಂದ ಕರಳು ಸ್ವಚ್ಛಗೊಳ್ಳುವುದು.
• ದ್ರಾಕ್ಷಿ : ಕೊಲೆಸ್ಟ್ರಾಲ್ ಅನ್ನು ದೇಹದಿಂದ ಹೊರ ಹಾಕುವಲ್ಲಿ ಸಹಕಾರಿ. ದೇಹದಿಂದ ಹಾನಿಕಾರಿ ವೈರಸ್ ಗಳನ್ನು ಹೊರದಬ್ಬಿ ರಕ್ತವನ್ನು ಕರುಳನ್ನು ಸ್ವಚ್ಛ ಮಾಡುವಲ್ಲಿ ಸಹಕಾರಿಯಾಗಿದೆ.
• ಸ್ಟ್ರಾಬೆರಿ : ಇದು ಕರುಳನ್ನು ಸ್ವಚ್ಛ ಮಾಡುವ ಹಣ್ಣುಗಳಲ್ಲಿ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ನಿಯಮಿತವಾಗಿ ಇದರ ಸೇವನೆ ಆರೋಗ್ಯಕ್ಕೆ ಉತ್ತಮ.
• ರಸ್ ಬೆರ್ರಿಗಳು : ಇದು ಕರುಳನ್ನು ಸ್ವಚ್ಛಗೊಳಿಸುವುದರೊಂದಿಗೆ ಜಠರವನ್ನು ಕಾಪಾಡುತ್ತದೆ.
• ಸೇಬು : ಕರುಳನ್ನು ಸ್ವಚ್ಛಗೊಳಿಸುವ ಹಣ್ಣು ಸೇಬಾಗಿದ್ದು, ಇದು ತೊಂದರೆಕಾರಿ ಕೀಟಾಣುಗಳನ್ನು ನಾಶಪಡಿಸುತ್ತದೆ. ಪ್ರತಿದಿನ ಸೇಬು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಪ್ರೋಟೀನುಗಳು ಮಿಟಮಿನ್ ಸಿ ಲಭ್ಯವಿರುವುದರಿಂದ ಉತ್ತಮ ಆರೋಗ್ಯ ಕಾಪಾಡುತ್ತದೆ.
• ಶುಂಠಿ, ಬೆಳ್ಳುಳ್ಳಿ ಮತ್ತು ಕರಿಮೆಣಸಿನ ಚಾಹವನ್ನು ದಿನಕ್ಕೆ ಒಂದು ಸಲ ಕುಡಿದರೆ ಅದರಿಂದ ಕರುಳು ಶುದ್ಧವಾಗುವುದು. ಇದನ್ನು ಅತಿಯಾಗಿ ಮಾಡಬಾರದು.
• ಮೊಸರು, ಉಪ್ಪಿನಕಾಯಿ, ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟಿರಿಯಾ ನಿರ್ಮಾಣ ಮಾಡುವುದು ಮತ್ತು ಕರುಳನ್ನು ಹಾಗೂ
• ಆರೋಗ್ಯ ವನ್ನು ಶುದ್ದವಾಗಿಡುವುದು.
• ಅಲೋವೆರಾ ಜ್ಯೂಸ್ ಸೇವನೆ ನಮ್ಮ ದೇಹದ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳುವುದು. ಇದರಿಂದಾಗಿ ಕರುಳನ್ನು ನೈಸರ್ಗಿಕವಾಗಿ ಶುದ್ದಿಕರಿಸಬಹುದು.
ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು.
Please follow and like us: