ಅಂತಾರಾಷ್ಟ್ರೀಯ

ಮಹಾ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ದೇವೇಂದ್ರ ಫಡ್ನವೀಸ್

ಮುಂಬೈ PRAJAKIRAN.COM : ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡುವ ಮುನ್ನವೇ ನಾಲ್ಕು ದಿನಗಳ ಬಳಿಕ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

ಈ ಕುರಿತು ಮಂಗಳವಾರ ಮಧ್ಯಾಹ್ನ ತುರ್ತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಳಿಕ ನೇರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿ ಹೊರಬಂದರು.

ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾರಾಷ್ಟ್ರ ಮಾಜಿ ಸಿಎಂ ಫಡ್ನವೀಸ್ ಶಿವಸೇನಾ ನಾಯಕರ ವರ್ತನೆ ವಿರುದ್ದ ಹರಿಹಾಯ್ದರು.

ಮಹಾರಾಷ್ಟ್ರ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿ-ಶಿವಸೇನಾ ಮೈತ್ರಿಗೆ ಜನಾದೇಶ ನೀಡಿತ್ತು. ಅಲ್ಲದೆ ಬಿಜೆಪಿ ರಾಜ್ಯದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಫಲಿತಾಂಶದ ಬಳಿಕ ಶಿವಸೇನೆ ಮೈತ್ರಿ ಸರಕಾರ ರಚನೆಗೆ ಅಸಹಕಾರ ನೀಡಿತ್ತು ಎಂದು ಆರೋಪಿಸಿದರು.

ಅಜೀತ್ ಪವಾರ ಅವರು ಎನ್ ಸಿಪಿ ಶಾಸಕರ ಬೆಂಬಲ ನೀಡುವುದಾಗಿ ಬಿಜೆಪಿ ಬಳಿ ಆಗಮಿಸಿದ್ದರು. ಹೀಗಾಗಿ ನಾವು ಅವರ ಬೆಂಬಲ ಪಡೆದು ಸರಕಾರ ರಚನೆ ಮಾಡಿದ್ದೇವು. ಆದರೆ ಕೊನೆ ಗಳಿಗೆಯಲ್ಲಿ ಅಜಿತ್ ಪವಾರ ಅವರು ತಮ್ಮ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದರಿಂದ ನಮ್ಮ ಬಳಿ ಸರಕಾರ ರಚನೆಗೆ ಅಗತ್ಯ ಬಹುಮತವಿಲ್ಲ. ಹೀಗಾಗಿ ವಿಶ್ವಾಸಮತ ಯಾಚನೆಗೆ ಮುನ್ನವೇ ರಾಜೀನಾಮೆ ನೀಡುವುದಾಗಿ ದೇವೇಂದ್ರ ಫಡ್ನವೀಸ್ ಅವರು ಪ್ರಕಟಿಸಿದರು.

ಇದರಿಂದಾಗಿ ಮಹಾರಾಷ್ಟ್ರದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದ ದೇವೇಂದ್ರ ಫಡ್ನವೀಸ್ ಅವರು ಚಾರ್ ದಿನ್ ಕಾ ಸುಲ್ತಾನ್ ಎಂಬಂತಾಗಿದೆ.

ದೇಶದೆಲ್ಲಡೆ ಅಧಿಕಾರದ ಚುನಾವಣೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದ ರಾಜಕೀಯ ಚಾಣಕ್ಯನೆಂದೆ ಪ್ರಸಿದ್ದಿ ಪಡೆದಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ತಂತ್ರಗಾರಿಕೆಯೂ ವಿಫಲವಾದಂತಾಗಿದೆ.

Please follow and like us:

Leave a Reply

Your email address will not be published. Required fields are marked *