ಧಾರವಾಡ : ಕ್ರಿ.ಶ 12 ನೇ ಶತಮಾನದಲ್ಲಿ ಬಸವಣ್ಣನಿಂದ ಆರಂಭವಾದ ಲಿಂಗಾಯತ ಧರ್ಮ ಕೆಲವರ ಷ್ಯಡ್ಯಂತ್ರಕ್ಕೆ ಸಿಕ್ಕು ನಲುಗುವಂತಾಯಿತು. ಇದಕ್ಕೆ ಕಾರಣ ನಮ್ಮ ಜನರ ಅಜ್ಞಾನವೇ ಕಾರಣ. ಜಗತ್ತಿನ ಧರ್ಮಗಳ ಸಾಲಿನಲ್ಲಿ ಬಸವಣ್ಣ ಕೊಟ್ಟ ಲಿಂಗಾಯತ ಧರ್ಮ ನಿಲ್ಲಬೇಕು ಎಂದು ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೇ ಮಹಾದೇವಿ ಹೇಳಿದರು.
ಅವರು ನಗರದ ಮುರುಘಾಮಠದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಶ್ರೀಮನ್ನಿರಂಜನ ಜಗದ್ಗುರು ಮುರುಘರಾಜೇಂದ್ರ ಪ್ರಸಾದ ನಿಲಯದ ಶತಮಾನೋತ್ಸವ ಹಾಗೂ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಿಂಗಾಯತ ಧರ್ಮದ ನಂತರ ಹುಟ್ಟಿಕೊಂಡ ಸಿಖ್ ಧರ್ಮಕ್ಕೆ ಪತ್ಯೇಕ ಧರ್ಮದ ಸ್ಥಾನಮಾನ ಲಭಿಸಿತು. ಏಕೆಂದರೆ ಸಿಖ್‍ರಿಗೆ ತಮ್ಮ ಧರ್ಮದ ಬಗ್ಗೆ ಅಷ್ಟೊಂದು ಇಚ್ಚಾಶಕ್ತಿ ಇತ್ತು. ಅವರ ಹಾಗೇ ‘ಗಡಸು’ ನಮ್ಮ ಜನರಲ್ಲಿ ಇಲ್ಲ. ಸಿಖ್‍ರು ಇಂಗ್ಲೆಂಡ್ ಸರಕಾರನೂ ಬಿಟ್ಟಿಲ್ಲ, ದೆಹಲಿ ದೊರೆಗಳನ್ನು ಬಿಟ್ಟಿಲ್ಲ ಎಂದ ಅವರು, ಧರ್ಮದ ಸ್ಥಾನ ಮಾನ ಪಡೆಯಲು ಕತ್ತಿ ಹಿಡಿದು ಹೋರಾಟ ಮಾಡಬೇಕು ಎಂದಲ್ಲ. ಪ್ರತಿಯೊಬ್ಬರು ಅಜ್ಞಾನ ತೊಡೆದು, ಜ್ಞಾನದ ದೀವಿಗೆ ಹಿಡಿದು ಶಾಂತಿಯುತ ಹೋರಾಟಕ್ಕೆ ದುಮುಕಬೇಕು ಎಂದರು.
ಬೆಂಗಳೂರಿನ ಬೇಲಿಮಠದ ಶಿವರುದ್ರ ಶ್ರೀ ಮಾತನಾಡಿ, ಇತಿಹಾಸದಲ್ಲಿ ಅತಿ ಹೆಚ್ಚು ಅನ್ಯಾಯಕ್ಕೊಳಗಾದ ಧರ್ಮ ಎಂದರೆ ಅದು, ಲಿಂಗಾಯತ ಧರ್ಮ. ಇನ್ನಾದರೂ ಲಿಂಗಾಯತ ಜನ ಎಚ್ಚೆತ್ತುಕೊಂಡು ನಡೆಯಬೇಕು. ಬಸವಣ್ಣನನ್ನು ಅನುಸರಿಸುತ್ತಿರುವ ಮುರುಘಾಮಠ ಲಿಂಗಾಯತ ಧರ್ಮದ ದಿವ್ಯಜ್ಯೋತಿ ಎಂದರು.
ಇದೇ ಸಂದರ್ಭದಲ್ಲಿ ಭಕ್ತಿಗೀತೆಗಳು, ದೇಜಗೌ ಅವರ ಬಸವ ದರ್ಶನ, ಬಸವ ಸಂದೇಶ, ವರ್ತಮಾನಕ್ಕೂ ವಚನ ಗ್ರಂಥಗಳನ್ನು ಲೋಕಾರ್ಪಣೆ ಮಾಡಲಾಯಿತು. ಇದೇವೇಳೆ ಗ್ರಂಥ ದಾಸೋಹಿಗಳಾದ ಪುಟ್ಟಮ್ಮ ಬಶೆಟ್ಟೆಪ್ಪ ಬಶೆಟ್ಟಿಯವರ, ಎಚ್.ಎ. ವಿಜಯಕುಮಾರ, ಎಚ್.ಎಂ. ರೇವಣಸಿದ್ದಯ್ಯ ಅವರನ್ನು ಸನ್ಮಾನಿಸಲಾಯಿತು.
ಬೆಂಗಳೂರಿನ ಗಂಜಾಂಮಠದ ಚಿದ್ಘನ ಶ್ರೀ, ಭೈರನಟ್ಟಿಯ ಶಿವಪುತ್ರ ಶ್ರೀ, ಚಿಕ್ಕೇರೂರ ವಿರಕ್ತಮಠದ ಚಂದ್ರಶೇಖರ ಶ್ರೀ, ಮುರುಘಾಮಠದ ಮಲ್ಲಿಕಾರ್ಜುನ ಶ್ರೀ, ಶೇಗುಣಸಿ ವಿರಕ್ತಮಠದ ಮಹಾಂತ ದೇವರು, ನಾಗರಾಜ ಪಟ್ಟಣಶೆಟ್ಟಿ, ಲಕಮನಹಳ್ಳಿ, ಸಿದ್ದರಾಮಣ್ಣ ನಡಕಟ್ಟಿ ಇತರರಿದ್ದರು. ಶ್ರುತಿ ಶ್ರೀಧರ ಕುಲಕರ್ಣಿ ವಚನ ಸಂಗೀತ ಪ್ರಸ್ತುತಪಡಿಸಿದರು.
ಬೆಳಗಾವಿ : ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಸಾಗರ ಲಾಖೆಗೆ ಸಿ ಐ ಡಿ ಪೊಲೀಸರು ನೋಟಿಸ್ ನೀಡಿದ್ದಾರೆ. ಪರಶುರಾಮ್ ವಾಘ್ಮೋರೆ ಬಂದೂಕು ತರಬೇತಿ ವೇಳೆ ಆತನಿಗೆ ನೆರವು ಹಾಗೂ ಸಿಮ್ ಕೊಡಿಸಿದ್ದ ಆರೋಪದ ಹಿನ್ನಲೆಯಲ್ಲಿ ಈ ನೋಟಿಸ್ ನೀಡಲಾಗಿದೆ. ಈಗಾಗಲೇ ಎಸ್ ಐ ಟಿ ವಶದಲ್ಲಿರುವ ಭರತ ಕುರನೆ ಜೊತೆಗೆ ಈ ಸಾಗರ ಲಾಖೆ ನಿಕಟ ಸಂಪರ್ಕ ದಲ್ಲಿದ್ದ. ಇತ ಕೂಡ ಪರಶುರಾಮನೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಬೆಳಗಾವಿಯಲ್ಲಿ ಮೊಬೈಲ್ […]
ಹುಬ್ಬಳ್ಳಿ : ಹುಬ್ಬಳ್ಳಿ ನೂತನ ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗಾಗಿ ಆಗಮಿಸಿದ್ದ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ವಿಶೇಷ ಲೋಕ ಅದಾಲತ್ನಲ್ಲಿ ಕೌಟುಂಬಿಕ ವಾಜ್ಯ ಒಂದನ್ನು ಖುದ್ದಾಗಿ ಇತ್ಯರ್ಥ ಪಡಿಸಿದರು. ಭಾನುವಾರ ನೂತನ ನ್ಯಾಯಾಲಯದಲ್ಲಿ ಏರ್ಪಡಿಸಲಾಗಿದ್ದ ಹುಬ್ಬಳ್ಳಿ ಕೌಟುಂಬಿಕ ನ್ಯಾಯಾಲಯದ ಮುಂದೆ ಇದ್ದ ಗಂಡ-ಹೆಂಡಿರ ನಡುವಿನ ವಿಚ್ಛೇದನ ಪ್ರಕರಣ ಬಗೆಹರಿಸಿ ದಂಪತಿ ಹಾಗೂ ಮಕ್ಕಳನ್ನು ಒಗ್ಗೂಡಿಸಿದರು. ಇಲ್ಲಿನ ಕೇಶ್ವಾಪುರದ ನಿವಾಸಿ ಜಗದೀಶ್ ಶೆಳಗಿ ಹಾಗೂ ಪಾರ್ವತಿ ದಂಪತಿ ವಿಚ್ಛೇಧನ ಪ್ರಕರಣ ವಿಶೇಷ ಲೋಕ ಅದಾಲತ್ನಲ್ಲಿ […]
ಬೆಂಗಳೂರು : ಜೆಡಿಎಸ್ ಮುಖಂಡ ಹಾಗೂ ಕಡೂರು ಮಾಜಿ ಶಾಸಕ ವೈ ಎಸ್ ವಿ ದತ್ತ ಅವರ ಪತ್ನಿ ನಿರ್ಮಲಾ (೬೦) ಅವರು ಬುಧವಾರ ಸಂಜೆ ವಿಧಿವಶರಾದರು. ಅವರು ಕಳೆದ ಹಲವು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅವರು ಇಂದು ಚಿಕಿತ್ಸೆಗೆ ಸ್ಪಂದಿಸದೆ ಬೆಂಗಳೂರಿನ ಶಂಕರ ಕ್ಯಾನ್ಸರ್ ಆಸ್ಪತ್ರೆ ಯಲ್ಲಿ ನಿಧನ ಹೊಂದಿದರು. ಅವರ ನಿಧನದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ. […]