ಗುಜರಾತ್ : ಸದಾ ಒಂದಿಲ್ಲ ಒಂದು ವಿಭೀನ್ನ ಕಾರ್ಯಶೈಲಿಯಿಂದಲೇ ಪ್ರಚಲಿತದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ವೈಶಿಷ್ಟಪೂರ್ಣ ಕಾರ್ಯಕ್ರಮವೊಂದರ ಮೂಲಕ ಮತ್ತೆ ದೇಶದ ಜನರ ಗಮನ ಸೆಳೆದಿದ್ದಾರೆ.
ರಕ್ಷ ಬಂಧನದ ಸಂದರ್ಭದಲ್ಲಿ ಗುಜರಾತ್ ನ ವಲ್ಸದಾ ಜಿಲ್ಲೆಯ ಜುಜ್ವಾ ನಲ್ಲಿ 1.5 ಲಕ್ಷ ಸಹೋದರಿಯರಿಗೆ ಪ್ರಧಾನಮಂತ್ರಿ ಅವಾಸ್ ಯೋಜನೆ ಯಡಿ ಮನೆ ನಿರ್ಮಾಣ ಮಾಡಿ ಹಸ್ತಾಂತರಿಸುವ ಮೂಲಕ ಸಾರ್ಥಕ ಭಾವ ಮೆರೆದರು.
ರಾಜ್ಯದ 26 ಜಿಲ್ಲೆಯ 1 ಲಕ್ಷ ಮಹಿಳೆಯರ ಕುಟುಂಬಗಳಿಗೆ ವಸತಿ ಕಲ್ಪಿಸುವ ಮೂಲಕ ಹೊಸ ದಾಖಲೆ ಬರೆದರು. ಇದಕ್ಕಾಗಿ 1727 ಕೋಟಿ ವೆಚ್ಚ ಮಾಡಲಾಗಿತ್ತು. ಬಳಿಕ ಲಕ್ಷಾಂತರ ಸಹೋದರಿಯರೊಂದಿಗೆ ಸಂವಾದ ನಡೆಸಿ, ಹರ್ಷ ವ್ಯಕ್ತಪಡಿಸಿದರು.
ಮುರ್ಶೀದಾಬಾದ್ : ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹಿಸಿದ್ದ ಹಿನ್ನಲೆಯಲ್ಲಿ 19 ವರ್ಷದ ವಿದ್ಯಾರ್ಥಿಯೊಬ್ಬನನ್ನು ಬಂಧೀಸಿದ ಘಟನೆ ಪಶ್ಚಿಮ ಬಂಗಾಳದ ಮುರ್ಶೀದಾಬಾದ್ ನಲ್ಲಿ ಬೆಳಕಿಗೆ ಬಂದಿದೆ. ಮುರ್ಶೀದಾಬಾದ್ ನ ಚಂದ್ರರ್ ಮೋರೆ ಬಡಾವಣೆಯಲ್ಲಿ ಈ ದುಷ್ಕೃತ್ಯ ಬಯಲಿಗೆ ಬಂದಿದ್ದು, ಅಷ್ಟೊಂದು ಪ್ರಮಾಣದ ಶಸ್ತ್ರಾಸ್ತ್ರ ಕಂಡು ಸ್ವತಃ ದಾಳಿ ನಡೆಸಿದ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಬಂಧಿತನಿಂದ 7.65 ಎಂಎಂ ನ 12 ಪಿಸ್ತೂಲ್ 24 ಜೀವ ಸಹಿತ ಗುಂಡುಗಳು, 7.65 ಎಂಎಂ ನ 84 ನಾಡ ಬಂದೂಕು, ಸೇರಿದಂತೆ ಇನ್ನಿತರ […]
ನವದೆಹಲಿ : ಕಳೆದ ಹಲವು ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಂಜೆ 5.05 ನಿಮಿಷಕ್ಇಕೆ ಹಲೋಕ ತ್ಯಜಿಸಿದ್ದಾರೆ. ಕಳೆದ ಆರು ವಾರಗಳಿಂದ ಅವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಿಡ್ನಿ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಅವರು ಬಳಲುತ್ತಿದ್ದರು. ಏಮ್ಸ್ ಆಸ್ಪತ್ರೆ ಮಂಡಳಿ ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿದ್ದು, ನಿನ್ನೇ ರಾತ್ರಿಯಿಂದ ವೆಂಟಿಲೇಶನ್ ಮೇಲೆ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಬಿಜೆಪಿಯನ್ನು ರಾಷ್ಟ್ಯದಾಂತ್ಯ ಕಟ್ಟಿ ಬೆಳೆಸಿದ್ದ ಹಿರಿಯ ನಾಯಕ ವಾಜಪೇಯಿ […]
ನವದೆಹಲಿ : ಸ್ವಾತಂತ್ರ್ಯೋತ್ಸವ ದಿನಾಚರಣೆಗೂ ಮುನ್ನ ಭಾರೀ ಪ್ರಮಾಣದ ಶಸ್ತಾಸ್ತ ಜಪ್ತಿ ಆದ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಎಲ್ಲಡೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆಗೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿರುವ ಈ ಸಂದರ್ಭದಲ್ಲಿ ಅಷ್ಟೊಂದು ಪ್ರಮಾಣದ ಶಸ್ತ್ರಾಸ್ತ್ರ ದೊರೆತಿರುವುದು ದೆಹಲಿ ನಾಗರಿಕರನ್ನು ಆತಂಕಕ್ಕೀಡು ಮಾಡಿದೆ. ದೆಹಲಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಕೈಗೊಂಡಿದ್ದು, ಇಷ್ಟ್ರೊಂದು ಪ್ರಮಾಣದ ಅಕ್ರಮ ಶಸ್ತ್ರಾಸ್ತ್ರ ಯಾರು ದಾಸ್ತಾನು ಮಾಡಿದ್ದರು. ಅವುಗಳನ್ನು ಎಲ್ಲಿಗೆ ಸಾಗಿಸುತ್ತಿದ್ದರು ಎಂಬುದನ್ನು […]