ರೈತರ ಸ್ವಾಭಿಮಾನದ ಬದುಕಿಗಾಗಿ ಜೆಡಿಎಸ್ ಆರ್ಶೀವದಿಸಿ : ಶಾಸಕ ಕೋನರಡ್ಡಿ
Date : 2018-05-03 SHARE
ಹುಬ್ಬಳ್ಳಿ : ಇಡೀ ನಾಡಿನ ರೈತ ಕುಲದ ಸ್ವಾಭಿಮಾನದ ಬದುಕಿಗಾಗಿ ಈ ಬಾರಿ ಜೆಡಿಸ್ ಅನ್ನು ಬೆಂಬಲಿಸಬೇಕು. ಆ ಮೂಲಕ ಕುಮಾರಣ್ಣ ಸರ್ಕಾರ ರೈತರ ಕೈಯಲ್ಲಿ ಅಧಿಕಾರ ಸಾಬೀತು ಪಡಿಸಬೇಕು ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು. ಅವರು ಬುಧವಾರ ನವಲಗುಂದ ತಾಲೂಕಿನ ಕುಮಾರಗೊಪ್ಪ, ಯಮನೂರ, ಭದ್ರಾಪೂರದಲ್ಲಿ ಬಿರುಸಿನ ಪಾದಯಾತ್ರೆ ನಡೆಸಿ, ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದ ಬಳಿಕ ನೆರೆದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು. ಮಹದಾಯಿ, ಕಳಸಾ-ಬಂಡೂರಿ ರೈತ ಹೋರಾಟಗಾರರ ಮೇಲೆ ಪ್ರಕರಣ ಹಿಂದಕ್ಕೆ ಪಡೆಯುವಂತೆ ಜೆಡಿಎಸ್ ಮಾತ್ರ ಸದನದ ಬಾವಿಗಿಳಿದು ಹೋರಾಟ ನಡೆಸಿದೆ. ಬಿಜೆಪಿ ನಾಯಕರು ಈ ಬಗ್ಗೆ ಚಕಾರ ಎತ್ತದಿರವುದು ನೋಡಿದರೆ, ರೈತರ ಮೇಲಿನ ನಿಜವಾದ ಕಾಳಜಿ ಅರ್ಥವಾಗುತ್ತದೆ ಎಂದು ಟೀಕಿಸಿದರು. ರೈತರ, ಸ್ತ್ರೀ ಶಕ್ತಿ ಸಂಘಗಳ ಹಾಗೂ ನೇಕಾರರ ಸಂಪೂರ್ಣ ಸಾಲಮನ್ನಾ ಸೇರಿದಂತೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಜನ ಪರ ನೀತಿಗಳನ್ನು ಜಾರಿಗೊಳಿಸುವ ಮೂಲಕ ಪ್ರತಿಯೊಬ್ಬರ ಬದುಕನ್ನು ಹಸನುಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಸ ನವಲಗುಂದ ತಾಲೂಕು ಜೆಡಿಎಸ್ ಅಧ್ಯಕ್ಷ ವೀರಣ್ಣ ನೀರಲಗಿ, ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಮೇಗಳಮನಿ, ಅನ್ನಪೂರ್ಣ ದೊಡ್ಡಮನಿ, ನೀಲಕಂಠಪ್ಪ ಹಾವಿನ, ನಾಗಪ್ಪ ಗಾಣಗೇರ, ಶಂಕ್ರಪ್ಪ ವೀರಶೆಡ್ಡಿ, ಬಸವರಾಜ ಹಾವಿನ, ರಮೇಶ ಜಮಖಂಡಿ, ಮೈನೋದ್ದೀನ್ ದಖನಿ, ಮಕಬೂಲ್ಸಾಬ ಠಾಣೆದ, ದಾವಲಸಾಬ ನಲವಡಿ, ಅಮೀನಸಾಬ ನಾಯಕವಾಡಿ, ಯಮನೂರ ಜೆಡಿಎಸ್ ಮುಖಂಡರಾದ ಶರಣು ಯಮನೂರ, ಶ್ರೀಶೈಲ ಮೂಲಿಮನಿ, ಬಸನಗೌಡ ಪಾಟೀಲ, ಹೇಮರಡ್ಡಿ ನಿಂಗರಡ್ಡಿ, ಬಸಯ್ಯ ಕಂಬಿ, ಆಸೀಫ್ ಯಲಿಗಾರ, ಶರಣು ಗೊರಲೆಕೊಪ್ಪ, ಶಿವಣ್ಣಪ್ಪ ಮೊರಬದ, ಗುರು ಮೇಟಿ, ದ್ಯಾಮಣ್ಣ ಹೊನಕುದರಿ, ಮಹಾಂತೇಶ ಕುಲಕರ್ಣಿ, ಸಿದ್ದು ಕಡೇಮನಿ, ಸುರೇಶ ಮಾದರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.