ಸಿಎಂ ಸಿದ್ದರಾಮಯ್ಯ ಪರ ನಟ ಸುದೀಪ್ ಪ್ರಚಾರ ಅನುಮಾನ ?
Date : 2018-05-05 SHARE
ಯಾದಗಿರಿ : ನಟ ಕಿಚ್ಚ ಸುದೀಪ್ ಅವರು ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧಿಸಿರುವ ಚಾಮುಂಡೇಶ್ವರಿ ಹಾಗೂ ಬಾದಾಮಿ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುವುದು ಇನ್ನು ನಿರ್ಧಾರವಾಗಿಲ್ಲ. ಹಾಗಂತ ಸ್ವತಃ ನಟ ಸುದೀಪ ಅವರು ಯಾದಗಿರಿಯಲ್ಲಿ ಸುದ್ದಿಗಾರರಿಗೆ ಸ್ಪಷ್ಟ ಪಡಿಸಿದ್ದಾರೆ. ಕೆಲವು ಚಾನಲ್‍ಗಳು ಅವರಾಗಿಯೇ ನಾನು ಸಿಎಂ ಪರ ಪ್ರಚಾರ ಮಾಡುತ್ತೇನೆ ಎಂದು ಊಹಿಸಿ ಪ್ರಚಾರ ಮಾಡಿದ್ದಾರೆ. ಆದರೆ ನಾನು ನನ್ನ ಬಾಯಾರೆ ಎಲ್ಲಿಯೂ ಪ್ರಚಾರಕ್ಕೆ ಹೋಗುತ್ತೇನ ಎಂದು ಹೇಳಿಲ್ಲವೆಂದುಸ್ಪಷ್ಟಪಡಿಸಿದರು. ಬಾದಾಮಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಾಲ್ಮೀಕಿ ಸಮಾಜದ ಮುಖಂಡರು ಆಗಿರುವ ಬಿ. ಶ್ರೀರಾಮುಲು ಅವರು ನಟ ಸುದೀಪ್ ಅವರು ಯಾವುದೇ ಕಾರಣಕ್ಕೂ ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಆಗಮಿಸಬಾರದು ಎಂದು ಮನವಿ ಮಾಡಿರುವುದು ಇಲ್ಲಿ ಸ್ಮರಿಸಬಹುದಾಗಿದೆ.