ಸಚಿವ ವಿನಯ ಕುಲಕರ್ಣಿ ವಿರುದ್ಧ ಮತ್ತೇ ಗುಡುಗಿದ ಅಮೃತ ದೇಸಾಯಿ
Date : 2018-05-05 SHARE
ಧಾರವಾಡ : ಧಾರವಾಡ ವಿಧಾನ ಸಭಾ ಕ್ಷೇತ್ರ-71ರ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರು ಶುಕ್ರವಾರ ರಾತ್ರಿ ಹೆಬ್ಬಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಚುನಾವಣಾ ಕಾವು ಇನ್ನಷ್ಟು ರಂಗೇರುವಂತೆ ಮಾಡಿದರು. ಹೆಬ್ಬಳ್ಳಿ ಗ್ರಾಮದ ರೈತ ಕುಟುಂಬವಾದ ಬಸವರಾಜ ಸಾಲಿಯವರ ಮನೆಯಲ್ಲಿ ಕೇಕ್ ಕತ್ತರಿಸಿ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದರು. ಬಳಿಕ ಉತ್ತರ ಕರ್ನಾಟಕ ಶೈಲಿಯ ಕಡಕ್ ರೊಟ್ಟಿ, ಎಣ್ಣಗಾಯಿ ಪಲ್ಯಸೇರಿದಂತೆ ವಿವಿಧ ಆಹಾರ ಸವಿದರು. ಬಳಿಕ ಬಿಜೆಪಿ ಕಾರ್ಯಕರ್ತರೊಂದಿಗೆ ಮಧ್ಯರಾತ್ರಿಯವರೆಗೆ ಸಮಾಲೋಚನೆ ನಡೆಸಿ, ಸಚಿವ ವಿನಯ ಕುಲಕರ್ಣಿ ಅವರಿಗೆ ಈ ಬಾರಿ ಶತಾಯ ಗತಾಯ ಸೋಲಿನ ರುಚಿ ತೊರಿಸಲೇ ಬೇಕು ಎಂದು ಮನವಿ ಮಾಡಿದರು. ಇದಕ್ಕೂ ಮುನ್ನ ಕಲ್ಲೂರಿನಲ್ಲಿ ನಡೆದ ಬಿಜೆಪ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅಮೃತ ದೇಸಾಯಿ ಅವರು, ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರು ಎರಡು ಬಾರಿ ಶಾಸಕ, ಮತ್ತೇ ಸಚಿವರು ಆದರು. ಇವರು ಏನ್ ಅಭಿವೃದ್ಧಿ ಮಾಡ್ಯಾರ ಎಂಬುದು ನಾವು ನೀವು ಕಣ್ಯಾರೆ ನೋಡ್ಯಾವಿ. ಆದರೂ ಸೋಲಿನ ಹೆದರಿಕೆಯಿಂದ ಒಬ್ಬ ಜಿಲ್ಲಾಪಂಚಾಯತ್ ಸದಸ್ಯನೊಂದಿಗೆ ಹೊಲಿಸಿ ಮಾತನಾಡುತ್ತಿರುವುದು ನೋಡಿದರೆ ಅವರಿಗೆ ಭಯ ಹುಟ್ಟಿರುವುದು ಗೊತ್ತಾಗುತ್ತದೆ. ಜಿಲ್ಲಾ ಪಂಚಾಯತನ ಅಲ್ಪಸ್ವಲ್ಪ ಅನುದಾನ ಹಂಚಿಕೆ, ಮಾಡಿ ಕ್ಷೇತ್ರದಲ್ಲೆಡೆ ರಸ್ತೆ, ನೀರು, ಮಠಕ್ಕೆ ಅನುದಾನಕ್ಕೆ ದ್ಯಾಮವ್ವ ಗುಡಿಗೆ ಅನುದಾನ ನೀಡಿದ್ದೀನೆ. ಆದರೆ ಇವರು ಜಿಪಂ ಸದಸ್ಯನೊಂದಿಗೆ ಹೊಲಿಸಿಕೊಳ್ಳುವುದು ನೋಡಿದರೆ ಇವರ ಮಟ್ಟ ಎಂತಹದ್ದು ಎಂಬುದನ್ನು ಗೊತ್ತಾಗುತ್ತದೆ ಎಂದು ಗುಡುಗಿದರು. ಇದೇ ವೇಳೆ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿರುವ ರೈತರ ರಾಷ್ಟ್ರಿಕೃತ ಬ್ಯಾಂಕ್ಗಳಲ್ಲಿನ ಒಂದು ಲಕ್ಷ ರೂಪಾಯಿಯವರೆಗೆ ಸಾಲಮನ್ನಾ, ಬಡ ಹೆಣ್ಣುಮಕ್ಕಳಿಗೆ ಬಂಗಾರ ತಾಳಿ, ಅದು ಯಾವುದೇ ಜಾತಿಭೇದ ಗಳಿಲ್ಲದ ಸರಕಾರದಿಂದ ತಾಳಿ, ಸಾಕಷ್ಟು ಜನಪರ ಯೋಜನೆಗಳನ್ನು ಬಿಜೆಪಿ ಜಾರಿಗೆ ತರಲಿದ್ದಾರೆ ಎಂದ ಅವರು ಬಿಜೆಪಿ ಚಿಹ್ನೆಯಾದ ಕಮಲಕ್ಕೆ ಮತ ನೀಡಿ, ಆರ್ಶೀವಾದ ಮಾಡಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗುರುನಾಥಗೌಡ ಗೌಡರ, ಬಸವರಾಜ ಸಾಲಿ, ಗುಜ್ಜಪ್ಪ ಸಾಹುಕಾರ, ಸಹದೇವ ಹಾವೇರಿ, ಭೀಮಣ್ಣ ರಾಮದುರ್ಗ, ರಮೇಶ ದೊಡ್ಡಮನಿ, ಸಾವಿತ್ರಿ ಹುಬ್ಬಳ್ಳಿ, ನಿಂಗಪ್ಪ ಅಳಗವಾಡಿ, ನಿರ್ಮಲಾ ಹುಬ್ಬಳ್ಳಿ, ಶಾಂತವ್ವ ಕಿನ್ನಣ್ಣವರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶನಿವಾರ ಮುಂಜಾನೆ ಹೆಬ್ಬಳ್ಳಿಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಬಿರುಸಿನ ಪಾದಯಾತ್ರೆ ನಡೆಸಿ, ಮನೆಮನೆಗೆ ತೆರಳಿ ಮತಯಾಚನೆ ನಡೆಸಿದರು.