ಸಿದ್ದರಾಮಯ್ಯ ಸರಕಾರಕ್ಕೆ ಸೋಲಿನ ಭೀತಿ
Date : 2018-05-05 SHARE
ಧಾರವಾಡ : ಸಿದ್ದರಾಮಯ್ಯ ಸರಕಾರಕ್ಕೆ ಸೋಲಿನ ಭೀತಿ ಆರಂಭವಾಗಿದೆ. ಹೀಗಾಗಿ ಅವರೇ ಸ್ವತಃ ಚಾಮುಂಡೇಶ್ವರಿ ಕ್ಷೇತ್ರದಿಂದ ಪಲಾಯನ ಆಗಿ ಬಾದಾಮಿ ಗೆ ಬಂದರು. ಅಲ್ಲಿಯೂ ಕೂಡ ಸೋಲು ಕಟ್ಟಿಟ್ಟ ಬುತ್ತಿ ಎಂದು ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ ಹೇಳಿದರು. ಅವರು ಧಾರವಾಡ ವಿಧಾನ ಸಭಾ ಕ್ಷೇತ್ರ-71ರ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದರು. ನಮ್ಮ ಯಡಿಯೂರಪ್ಪ ಸರಕಾರಕ್ಕೂ ಸಿದ್ದರಾಮಯ್ಯ ಸರಕಾರಕ್ಕೂ ಜನ ತುಲನೆ ಮಾಡುತ್ತಿದ್ದಾರೆ. ಇವರು ಐದು ವರ್ಷ ಜಾತಿ ಆಧಾರದ ಮೇಲೆ ಕೆಲವೊಂದು ಭಾಗ್ಯ ಮಾಡ್ಯಾರ. ಯಾವುದೇ ವಿಚಾರ ಮಾಡದೆ, ಅಧಿಕಾರದ ದರ್ಪದಿಂದ ಮೆರೆಯತ್ತಿದ್ದಾರೆ. ಕಾಂಗ್ರೆಸ್‍ನವರು ಕೆಜೆಪಿಯಿಂದಾಗಿ ಲಾಭ ಮಾಡಿಕೊಂಡು ಇಂದು ಭ್ರಷ್ಟಾಚಾರ, ಅನೈತಿಕ ಚಟುವಟಿಕೆಗೆ ಆರ್ಶೀವಾದ ಮಾಡುತ್ತಿದ್ದಾರೆ. ಅಲ್ಲದೆ, ಜಾತಿ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಮಾಜಿ ಶಾಸಕರಾದ ಎ.ಬಿ. ದೇಸಾಯಿ. ಪುಡಕಲಕಟ್ಟಿಯಂತಹ ಸಭ್ಯಸ್ಥ ಧಾರವಾಡ ಕ್ಷೇತ್ರ ಇಂದು ವಿನಯ ಕುಲಕರ್ಣಿಯವರಿಂದಾಗಿ ಹೆಸರು ಕೆಟ್ಟು ಹೋಗಿದೆ. ಆದರೆ ನಾವು ಇದೀಗ ಒಂದಾಗಿದ್ದು, ನಾವೆಲ್ಲ ಮಾಡಿದ ತಪ್ಪಿನಿಂದಾಗಿ ನೀವು ಐದು ವರ್ಷ ಶಾಸಕರಾಗಿದ್ದೀರಿ. ಇದನ್ನು ಮರೆತಿದ್ದೀರಿ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಕಾರ್ಯಕರ್ತರೇ ಸಿಗುತ್ತಿಲ್ಲ. ಬಿಜೆಪಿ ಕಾರ್ಯಕರ್ತರನ್ನು ಪೊಲೀಸ್ ಮೂಲಕ ಹೆದರಿಸುತ್ತಿದ್ದಾರೆ. ಅಣ್ಣವರ ಪರ ಕೆಲಸ ಮಾಡಕ್ಕ ಪೊಲೀಸ್ ಮೇಲಿಂದ ಒತ್ತಡ ಹಾಕಿಸುತ್ತಿದ್ದಾರೆ. ಇದಕ್ಕೆ ಮೇ 12ರಂದು ಜನತೆ ತಕ್ಕ ತೀರ್ಪು ನೀಡಬೇಕು ಎಂದು ಮನವಿ ಮಾಡಿದರು.