ಕರ್ನಾಟಕಕ್ಕೆ ನಮೋ ಕೊಡುಗೆ ಏನು ಎಂದ ಸಿದ್ದರಾಮಯ್ಯ
Date : 2018-05-01 SHARE
ಧಾರವಾಡ : ಪ್ರಧಾನಿ ನರೇಂದ್ರ ಮೋದಿಯವರು ಕನ್ನಡಿಗರನ್ನ ಮೆಚ್ಚಿಸಲು ಕನ್ನಡದಲ್ಲೂ ಮಾತನಾಡಿದ್ದಾರೆ. ಆದರೆ ಕರ್ನಾಟಕಕ್ಕೆ ಇವರ ಕೊಡುಗೆ ಏನು ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಅವರು ಮಂಗಳವಾರ ನವಲಗುಂದ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿನೋದ ಅಸೂಟಿ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ಮಹಾದಾಯಿ ಕಳಸ ಬಂಡೂರಿ ವಿಚಾರಕ್ಕೆ ಎಲ್ಲಾರನ್ನ ಕರೆದುಕೊಂಡು ಹೋಗಿದ್ದೆ ಆದ್ರೆ ಅವರೇನು ಮಾಡಿಲ್ಲ. ರೈತರ ಹಿತಾಸಕ್ತಿ ಇದ್ದರೆ ಮಹದಾಯಿ ಇತ್ಯಾರ್ಥ ಮಾಡಲಿ. ಆದರೆ ಇದಕ್ಕೆ ಮೋದಿಯವರು ಒಪ್ಪಲಿಲ್ಲ ಎಂದರು. ಮೇ ೧೨ ರಂದು ನಡೆಯುವ ಚುನಾವಣೆ ರಾಜ್ಯದ ಹಿತ ದೃಷ್ಟಿಯಿಂದ ಈ ಚುನಾವಣೆ ಬಹಳ ಮಹತ್ವದ ದಿನ. ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಇಂದಿರಾಗಾಂಧಿ ಮೂರು ರಾಜ್ಯದ ಮುಖ್ಯಮಂತ್ರಿಗಳನ್ನ ಕರೆದುಕೊಂಡು ಹೋಗಿ ಚೆನೈ ನೀರು ಹರಿಸಿದ್ರು. ಎರಡನೇ ಬಾರಿ ಕರ್ನಾಟಕ ದಲ್ಲಿ ಭೀಕರ ಬರಗಾಲ ಎದುರಿಸಿದ ಸಂದರ್ಭದಲ್ಲಿ ನರೇದ್ರ ಮೋದಿಯವರ ಹತ್ತಿರ ಎರಡು ಪಕ್ಷದ ನಿಯೋಗ ಕರೆದುಕೊಂಡು ಹೋದ್ರು ನಮ್ಮ ರಾಜ್ಯದ ಬಗ್ಗೆ ಗಮನ ಹರಿಸಲಿಲ್ಲ ಎಂದು ದೂರಿದರು. ನಮ್ಮ ರಾಜ್ಯದ ರೈತರ ಸಾಲಮನ್ನಾ ಮಾಡಿ ಎಂದು ಕೈಮುಗಿದು ಕೇಳಿದ್ರು ಜಪ್ಪಯ್ಯ ಅಂದ್ರು ಕೇಳಲಿಲ್ಲ. ನನ್ನ ಜೊತೆ ಬಂದ ಬಿಜೆಪಿ, ಜೆಡಿಎಸ್ ನವರು ಮೋದಿ ಬಳಿ ತುಟಿ ಪಿಟುಕ್ ಎನ್ನಲಿಲ್ಲ ಎಂದು ಜರಿದರು. ಮೋದಿಯವರದು ಬರೀ ಮಾತು. ಚಾಮರಾಜನಗರಕ್ಕೆ ಹೋಗದೆ ಹೆದರಿ ಸಂತೆ ಮಾರಳ್ಳಿಗೆ ಹೋಗಿದ್ದಾರೆ ಎಂದು ಛೇಡಿಸಿದ ಅವರು ಮೂಢನಂಬಿಕೆಗೆ ಹೆದರಿ ಮೋದಿಯವರು ಚಾಮರಾಜ ನಗರಕ್ಕೆ ಹೋಗಲು ಹೆದರಿದ್ದಾರೆ ಎಂದು ಆಪಾದಿಸಿದರು