ಜೆಡಿಎಸ್-ಬಿಜೆಪಿ ಒಳ ಒಪ್ಪಂದ : ಸಿದ್ದರಾಮಯ್ಯ ಆರೋಪ
Date : 2018-05-01 SHARE
ನವಲಗುಂದ : ಕಳೆದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ಪ್ರಧಾನಿ ದೇವೆಗೌಡರನ್ನ ವೃದ್ದಾಶ್ರಮಕ್ಕೆ ಕಳಿಸಬೇಕು ಎಂದಿದ್ದರು. ಆದರೆ, ಇವತ್ತು ಮತ್ತೆ ದೇವಗೌಡರನ್ನ ಹೊಗಳುತ್ತಿದ್ದಾರೆ. ಅದನ್ನ ನೋಡಿದರೆ ಜೆಡಿಎಸ್-ಬಿಜೆಪಿ ಒಳ ಒಪ್ಪಂದ ಗೊತ್ತಾಗಿ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು. ಅವರು ನವಲಗುಂದ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಪರ ಚುನಾವಣಾ ಪ್ರಚಾರ ನಡೆಸಿ, ಮಾತನಾಡಿದರು. ಜೆಡಿಎಸ್ ನವರು ಅವಕಾಶವಾದಿಗಳು. ಜೆಡಿಎಸ್ ಜನತಾದಳ ಸಂಘ ಪರಿವಾರದ ತುಣುಕು ಎಂದರು. ಕೋನರಡ್ಡಿ ಜಾಸ್ತಿ ಸುಳ್ಳು ಹೇಳ್ತಾರೆ ಅವರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿದ್ದು ನಾನು, ನಮ್ಮ ಸರ್ಕಾರ ಅಂತಾ ಸಿ.ಎಂ. ಚಾಟಿ ಬೀಸಿದರು