ನಮ್ಮ ಮಂತ್ರಿಗಳು ಜೈಲಿಗೆ ಹೋಗಿದ್ದಾರಾ? ಎಂದ ಸಿಎಂ ಸಿದ್ದರಾಮಯ್ಯ
Date : 2018-05-01 SHARE
ಧಾರವಾಡ : ನನ್ನ ಮೇಲೆ ಯಾವುದಾದರೂ ಹಗರಣದ ಆರೋಪ ಇದೆಯಾ? ಅಥವಾ ನಮ್ಮ ಮಂತ್ರಿಗಳು ಜೈಲಿಗೆ ಹೋಗಿದ್ದಾರಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಅವರು ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಪರ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದರು. ಯಡಿಯೂರಪ್ಪ ಮಾತೆತ್ತಿದೆರೆ ಸಾಕು ಸೀರೆ, ಸೈಕಲ್ ಅಂತಾರೆ ಅದೇ ಹರಕಲು ಸೀರೆ,ಮುರುಕಲು ಸೈಕಲ್ ಇವರ ಸಾಧನೆ. ಅದನ್ನ ಬಿಟ್ಟರೆ ಅವರ ಸಾಧನೆ ಜೈಲಿಗೆ ಹೋಗಿ ಬಂದಿದ್ದು ಅದನ್ನ ಬಿಟ್ಟರೆ ಅವರ ಸಾಧನೆ ಏನು? ಎಂದು ಯಡಿಯೂರಪ್ಪ ವಿರುದ್ದ ಸಿದ್ದರಾಮಯ್ಯ ಟೀಕಿಸಿದರು. ಮೋದಿಯವರೇ ಇವತ್ತು ನನ್ನನ್ನ ಪ್ರಶ್ನೆ ಮಾಡ್ತೀರಿ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುತ್ತೇನೆ ಅಂತಾ ಬಾದಾಮಿಗೆ ಬಂದಿರೋದಾಗಿ ಹೇಳ್ತೀರಾ? ಎಂದು ತರಾಟೆಗೆ ತೆಗೆದುಕೊಂಡ ಅವರು ಹಾಗಾದ್ರೆ ನೀವು ವಡೋದರಾ ಕ್ಷೇತ್ರಕ್ಕೆ ಹೆದರಿ ವಾರಣಾಸಿಗೆ ಹೋಗಿದ್ರಾ? ಎಂದು ಮೋದಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು. ಚೆಕ್ ಮೂಲಕ ಹಗರಣ ಮಾಡಿ ಜೈಲ್ ಗೆ ಹೋಗಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಬರುವ ಬಿಜೆಪಿಯವರು ಎಂದು ಗುಡುಗಿದ ಅವರು ದೇಶದಲ್ಲಿ ನುಡಿದಂತೆ ನಡೆದಿರುವ ಸರ್ಕಾರ ಇದ್ರೆ ಅದು ನಮ್ಮಕಾಂಗ್ರೆಸ್ ಸರಕಾರ ಎಂದರು. ರಾಜ್ಯದ ೯ ಲಕ್ಷ ರೈತರಿಗೆ ೫ ರೂಪಾಯಿ ಸಬ್ಸಿಡಿ ನೀಡಿದ್ದೆವೆ. ೨ ಲಕ್ಷ ಕೃಷಿಹೊಂಡ ನೀಡಿದ್ದೆವೆ. ೩ಲಕ್ಷದವರಗೆ ಬಡ್ಡಿರಹಿತ ಸಾಲಮನ್ನಾ ಮಾಡಿದ್ದೆವೆ. ೭೦ ಲಕ್ಷ ರೈತರಿಗೆ ನೇರವಾಗಿ ೧೦ ಸಾವಿರ ಹಣವನ್ನ ಈ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ ಎಂದರು. ಸಾಲ ಮನ್ನಾ ಮಾಡಿ ಎಂದು ಉಗ್ರಪ್ಪ ನವರು ಹೇಳಿದ್ರೆ ಹಸಿರು ಶಾಲು ಹಾಕುವ ಯಡಿಯ್ಯೂರಪ್ಪ ದುಡ್ಡು ಎಲ್ಲಿಂದ ತರೋಣ ಅಂತಾರೆ ಎಂದು ಕುಟುಕಿದರು.