ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ನಾಲಿಗೆ ಹರಿಬಿಟ್ಟ ಶಾಸಕ ಸಿ.ಎಸ್. ಶಿವಳ್ಳಿ
Date : 2018-05-01 SHARE
ಕುಂದಗೋಳ : ಕುಂದಗೋಳ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಸಿ.ಎಸ್.ಶಿವಳ್ಳಿ ಅವರು ಪಟ್ಟಣದ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ನಾಲಿಗೆ ಹರಿಬಿಟ್ಟ ಪ್ರಸಂಗ ಜರುಗಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಹೊಗುಳುವ ಬರದಲ್ಲಿ ಕೇಂದ್ರ ಸರ್ಕಾರದ ಜಿಎಸ್ಟಿ ಯೋಜನೆಯನ್ನು ಹಜಾಮತಿಗೆ ಹೊಲಿಸಿದರು. ಹಜಾಮತಿ ಪದವನ್ನು ರಾಜ್ಯದ ಕಾಂಗ್ರೆಸ್ ಸರಕಾರವೇ ನಿಷೇಧಿಸಿದೆ. ಇದಲ್ಲದೆ, ಬಿಜೆಪಿಯವರು ಉತ್ತರಕುಮಾರ ನಂತವರು ಎಂದ ಅವರು ಪ್ರಧಾನಿ ನರೇಂದ್ರ ಮೋದಿ ಮೇಕಪ್ ಮಾಡಿಕೊಂಡು ಭಾಷಣ ಮಾಡುತ್ತಾರೆ. ಮೇಕಪ್ ಸಲುವಾಗಿ ಕೋಟಿ ಕೋಟಿ ಖರ್ಚು ಮಾಡಿದ್ದಾರೆ. ದೇಶದ ಜನರ ಕಣ್ಣಲ್ಲಿ ಮಣ್ಣು ಎರಚಿ ಪ್ರಧಾನಿಯಾಗಿದ್ದಾರೆ. ಬಿಜೆಪಿಯವರು ರಾಜಕೀಯಕ್ಕಾಗಿ ಗೂಡ್ಸೆ ದೇವಸ್ಥಾನ ಕಟ್ಟಿ ಪೂಜೆ ಮಾಡುವವರು. ಬಿಜೆಪಿ ಕಾರ್ಯಕರ್ತರನ್ನ ಬಲಿಕೊಟ್ಟು ರಾಜಕೀಯ ಮಾಡುತ್ತಾರೆ ಎಂದು ಆಪಾದಿಸಿದರು. ಆದರೆ ಸಿದ್ದರಾಮಯ್ಯ ಧರ್ಮದ ಧರ್ಮದ ಜಗಳ ಹಚ್ಚಿದವರಲ್ಲ. ಕಟ್ಟ ಕಡೆಯ ಜನಕ್ಕೆ ಅವರ ಯೋಜನೆಗಳು ತಲುಪಿವೆ. ಬಿಜೆಪಿಯವರು ಧರ್ಮ ಧರ್ಮದ ಜಗಳ ನಡುವೆ ಜಗಳ ಹಚ್ಚಿದ್ದಾರೆ. ಬಿಜೆಪಿಯವರಿಗೆ ವ್ಯವಸಾಯ ಮಾಡಿ ಗೋತ್ತಿಲ್ಲ. ಅವರೇನಿದ್ದರೂ ಓಟಿಗಾಗಿ ಪ್ಲಾಸ್ಟಿಕ್ ಆಕಳವನ್ನು ಕಟ್ಟಿದವರು ಎಂದ ಅವರು ಬಿಜೆಪಿಯವರಿಗೆ ರೈತರ ಮೇಲೆ ಕಾಳಜಿ ಇದ್ದಿದ್ದರೆ, ರೈತರ ಸಾಲಮನ್ನಾ ಮಾಡಿ ರಾಜ್ಯ ಚುನಾವಣೆಗೆ ಹೋಗಬೇಕಾಗಿತ್ತು. ಕೇವಲ ಚುನಾವಣೆಗಾಗಿ ಹಿಂದು ಧರ್ಮವನ್ನ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕ ಸಿ.ಎಸ್.ಶಿವಳ್ಳಿ ನಾಲಿಗೆ ಹರಿಬಿಟ್ಟರು