ನಮ್ಮ ಊರಲ್ಲಿ ಪಾನಿಪುರಿ ಮಾರೋದು ಗುಜರಾತ್ ಮಾಡೆಲಾ ?
Date : 2018-05-01 SHARE
ಕುಂದಗೋಳ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತೆತ್ತಿದ್ದರೆ ಗುಜರಾತ್ ಮಾಡಲ್ ಎನ್ನುತ್ತಿದ್ದಾರೆ. ಅರೇ ಅದೇ ಗುಜರಾತಿ ಜನ ನಮ್ಮ ಊರಿನಲ್ಲಿ ಪಾನಿಪುರಿ ಮಾರೋಕೆ ಬಂದಿದ್ದಾರೆ. ಇದು ಗುಜರಾತ್ ಮಾಡೆಲಾ ಎಂದು ಕಾಂಗ್ರೆಸ್ ಮುಖಂಡ ಸಿ ಎಂ ಇಬ್ರಾಹಿಂ ಪ್ರಶ್ನೆ ಮಾಡಿದರು. ಅವರು ಕುಂದಗೋಳ ಪಟ್ಟಣದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದರು. ಹೆಂಗಾದ್ರು ಮಾಡಿ ನಮ್ಮ ಟಗುರನ್ನ(ಸಿಎಂ) ಕೆಡವೋಕೆ ನೋಡ್ತಿದ್ದಾರೆ. ಆದ್ರೆ ಅದು ಆಗಲ್ಲ. ರೆಡ್ಡಿಗಳಿಗೆ ಒಂದೇ ಒಂದು ಗುದ್ದು ಗುದ್ದಿದೆ. ಅದೇ ನೋವು ಇನ್ನ ಹೋಗಿಲ್ಲ. ನಮ್ಮ ಟಗರನ್ನ ನೋಡಿದ್ರೆ ಜಗದೀಶ್ ಶೆಟ್ಟರ್ ಎದೆ ಟುಕು ಟುಕು ಎನ್ನುತ್ತೆ ಎಂದು ಛೇಡಿಸಿದರು. ಸಿದ್ದರಾಮಯ್ಯ ಹೆಸರು ಕೇಳಿದ್ರ ಮೋದಿ ತಡರಾತ್ರಿ ದುಗ್ಗನೆ ಎದ್ದು ಕುಡ್ತಾರೆ. ಹೆಂಗಾದ್ರ ಮಾಡಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಅವರನ್ನ ತೆಗೆಯಬೇಕು ಎನ್ನುತ್ತಿದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ ಎಂದರು. ನನ್ನ ಜೀವನದ ಕೊನೆ ಆಸೆನೇ ಹಿಂದೂ-ಮುಸ್ಲಿಂರು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕೆನ್ನುದು ನನ್ನ ಆಸೆ. ಜೀವನವೇ ಶಾಶ್ವತ ಅಲ್ಲ. ಆದ್ರೆ ನಮ್ಮಲ್ಲಿ ಬಿಜೆಪಿಯವರು ವಿಷ ಹಾಕುತ್ತಿದ್ದಾರೆ. ಅದಕ್ಕೆ ಕಿವಿಗೊಡಬೇಡಿ , ಶಿವಳ್ಳಿಗೆ ಮತ ನೀಡಿ ಶಾಂತಿ ಕಾಪಾಡಿ ಎಂದು ಸಿಎಂ ಇಬ್ರಾಹಿಂ ಮನವಿ ಮಾಡಿದರು.