ಜನಸಾಮಾನ್ಯರ, ಮಹಿಳೆಯರ, ರೈತರ ಕಲ್ಯಾಣಕ್ಕಾಗಿ ಜೆಡಿಎಸ್ ಗೆ ಆರ್ಶೀವದಿಸಿ : ಎನ್.ಹೆಚ್. ಕೋನರಡ್ಡಿ
Date : 2018-05-08 SHARE
ನವಲಗುಂದ : ರಾಜ್ಯದಲ್ಲಿ ಜನಸಾಮಾನ್ಯರು, ರೈತರು, ಮಹಿಳೆಯರ ಬದುಕು ಸಮೃದ್ಧಿಯಾಗಿ ಸ್ವಾಭಿಮಾನದಿಂದ ನೆಮ್ಮದಿಜೀವನ ನಡೆಸಲು ಈ ಬಾರಿ ಜೆಡಿಎಸ್ ಪಕ್ಷಕ್ಕೆ ಆರ್ಶೀವದಿಸಬೇಕು ಎಂದು ನವಲಗುಂದ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಎನ್.ಹೆಚ್. ಕೋನರಡ್ಡಿ ಅವರು ಮನವಿ ಮಾಡಿದರು. ಅವರು ಸೋಮವಾರ ರಾತ್ರಿ ನವಲಗುಂದ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹಳ್ಳಿಕೇರಿ, ಇಬ್ರಾಹಿಂಪೂರ, ನಾವಳ್ಳಿಯಲ್ಲಿ ಜೆಡಿಎಸ್ ಪರ ರೋಡ್ ಶೋ, ಪಾದಯಾತ್ರೆ ಹಾಗೂ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ ಬಳಿಕ ನೆರೆದಿದ್ದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು. ಕುಮಾರಣ್ಣ ಈ ನಾಡಿಗಾಗಿ ಹತ್ತಾರು ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಅವರ ಕನಸು ಸಾಕಾರಗೊಳಿಸಲು ಶತಾಯ ಗತಾಯ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬರಲೇಬೇಕಿದೆ. ಆ ನಿಟ್ಟಿನಲ್ಲಿ ಮತದಾರರು ಉತ್ತಮ ನಿರ್ಧಾರ ಕೈಗೊಳ್ಳುವ ಮೂಲಕ ಜನಸಾಮಾನ್ಯರ ಕೈಯಲ್ಲಿ ಅಧಿಕಾರ ಇರುವಂತೆನೋಡಿಕೊಳ್ಳುವುದು ನಿಮ್ಮೇಲ್ಲರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಎಲ್ಲಡೆ ಜೆಡಿಎಸ್ ಪರ ಉತ್ತಮವಾದ ವಾತವರಣ ನಿರ್ಮಾಣವಾಗಿದೆ. ಮೇ 12ರಂದು ಪ್ರತಿಯೊಬ್ಬರು ತಪ್ಪದೆ ಜೆಡಿಎಸ್ನ ಎರಡನೇ ಬಟನ್ ಒತ್ತುವ ಮೂಲಕ ಇನ್ನೋಮ್ಮೇ ವಿಧಾನಸೌಧಕ್ಕೆ ಕಳುಹಿಸಲು ಪಣತೊಡಬೇಕಿದೆ ಎಂದರು. ಇಬ್ರಾಹಿಂಪೂರ, ಹಳ್ಳಿಕೇರಿ ಹಾಗೂ ನಾವಳ್ಳಿ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ನೂರಾರು ಕೋಟಿ ಅನುದಾನ ತಂದು ಪ್ರತಿಯೊಂದು ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ, ಶುದ್ಧ ಕುಡಿಯುವ ನೀರು, ಚಕ್ಕಡಿ ರಸ್ತೆ, ಕೃಷಿ ಹೊಂಡ ಸೇರಿದಂತೆ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಬರುವ ದಿನಗಳಲ್ಲಿ ಯುವಕರಿಗೆ ಉದ್ಯೋಗ, ಹಿರಿಯರ ನಾಗರಿಕರಿಗೆ ಪ್ರತಿ ತಿಂಗಳು 5 ಸಾವಿರ ಮಾಸಾಶನ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುವ ಜೊತೆಗೆ ರೈತರ, ನೇಕಾರರ, ಸ್ತ್ರೀ ಶಕ್ತಿ ಸಂಘಗಳ ಎಲ್ಲ ಸಾಲಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ವೀರಣ್ಣ ನೀರಲಗಿ, ಪ್ರಚಾರ ಸಮಿತಿ ಅಧ್ಯಕ್ಷ ಶ್ರೀಶೈಲಯ್ಯ ಮೂಲಿಮನಿ, ಈಗಾಗಲೇ ನವಲಗುಂದ ವಿಧಾನ ಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಇಡೀ ರಾಜ್ಯಕ್ಕೆ ಎನ್.ಹೆಚ್. ಕೋನರಡ್ಡಿ ಮಾದರಿ ಶಾಸಕರಾಗಿದ್ದಾರೆ. ಜನಸಾಮಾನ್ಯರ ಕೈಗೆ ಸುಲಭವಾಗಿ ದಿನದ 24 ಗಂಟೆಗಳ ಕಾಲ ದೊರೆಯುವ ಏಕೈಕ ಶಾಸಕ ನಮ್ಮ ಎನ್.ಹೆಚ್. ಕೋನರಡ್ಡಿ ಅವರು. ಇಂತಹ ಅಪರೂಪದ ಜನಸಾಮಾನ್ಯರ ಶಾಸಕ ಹಾಗೂ ಅಭಿವೃದ್ಧೀಯ ಹರಿಕಾರರನ್ನು ಉಳಿಸಿಕೊಂಡು ಹೋಗುವ ಜವಬ್ದಾರಿ ಮತದಾರರ ಮೇಲೆ ಇದ್ದು, ಯಾವುದೇ ಕಾರಣಕ್ಕೂ ಬಿಜೆಪಿ ಹಾಗೂ ಕಾಂಗ್ರೆಸನ ಸುಳ್ಳು ಆಶ್ವಾಸನೆಗಳಿಗೆ ಮರಳಾಗದೆ ಜೆಡಿಎಸ್ ಅಭ್ಯರ್ಥಿಯಾಗಿರುವ ಎನ್.ಹೆಚ್. ಕೋನರಡ್ಡಿ ಅವರ ಹೊರೆ ಹೊತ್ತ ಮಹಿಳೆಯ ಚಿಹ್ನೆಯ ಎರಡನೇ ಬಟನ್ ಒತ್ತಬೇಕು ಎಂದು ಮನವಿ ಮಾಡಿದರು. ಇದಕ್ಕೂ ಮುನ್ನ ಜೆಡಿಎಸನ ನೂರಾರು ಯುವಕರು, ಮಹಿಳೆಯರು ಶಾಸಕ ಎನ್.ಹೆಚ್. ಕೋನರಡ್ಡಿ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು. ವಿವಿಧ ಗ್ರಾಮದಲ್ಲಿ ಜೆಡಿಎಸನ ಬೃಹತ್ ಶಕ್ತಿ ಪ್ರದರ್ಶನ ನಡೆಯುತ್ತಿದ್ದು, ಎಲ್ಲಡೆ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.