ಭರ್ಜರಿ ಸ್ಟೆಪ್ಸ್ ಹಾಕಿದ ನಟಿ ಪೂಜಾ ಗಾಂಧಿ
Date : 2018-05-08 SHARE
ನವಲಗುಂದ : ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ ಎನ್ನುವ ವಚನ ಹಾಡುವ ಮೂಲಕ ನಟಿ ಪೂಜಾ ಗಾಂಧಿ ಎಲ್ಲರ ಗಮನ ಸೆಳೆದ ಘಟನೆ ನವಲಗುಂದ ಜೆಡಿಎಸ್ ಪ್ರಚಾರ ಸಭೆಯಲ್ಲಿ ನಡೆದಿದೆ. ಶಿರಕೋಳದಲ್ಲಿ ಶಾಸಕ ಎನ್.ಹೆಚ್. ಕೋನರಡ್ಡಿ ಅವರ ಪರ ಮತಯಾಚನೆ ಮಾಡುವ ವೇಳಿ ಜನರಿಗೆ ಈ ವಚನ ಹೇಳುವ ಮೂಲಕ ಗಮನ ಸೆಳದ ಅವರು ಮೊರಬ ಗ್ರಾಮದಲ್ಲಿ ಇವನಾರವ ಇವನಾರವ ಎಂದಿನಸಬೇಡಯ್ಯ, ಇವ ನಮ್ಮವ, ಇವ ನಮ್ಮವ ಎಂದಿನಿಸಯ್ಯ ಎಂದು ಹೇಳಿದರು. ಅಲ್ಲದೆ, ಒಂದು ಪಕ್ಷಕ್ಕೆ ಬೂತ್ ಮ್ಯಾನೇಜರ್ ಇದ್ದರೆ, ಇನ್ನೊಂದು ಪಕ್ಷಕ್ಕೆ ಪೇಜ್ ಪ್ರಮುಖ ಇದ್ದಾರೆ. ಆದರೆ ನಮ್ಮ ಜೆಡಿಎಸ್ ಪಕ್ಷದಲ್ಲಿ ಪ್ರತಿ ಮನೆ ಮನೆಯಲ್ಲಿ ಕುಮಾರಸ್ವಾಮಿ, ಕೋನರಡ್ಡಿ ಇದ್ದಾರೆ. ಕರ್ನಾಟಕಕ್ಕೆ ಕುಮಾರಣ್ಣ, ನವಲಗುಂದಕ್ಕೆ ಕೋನರಡ್ಡಿ ಅಣ್ಣ ಎಂದು ಘೋಷಣೆ ಮೊಳಗಿಸಿದರು. ಇದಕ್ಕೂ ಮುನ್ನ ನಟಿ ಪೂಜಾ ಗಾಂಧಿ ಅವರು ಜೆಡಿಎಸ್ಗೆ ನಿಮ್ಮ ಮತ ಜೆಡಿಎಸ್ ಗೆ ಹಾಡಿಗೆ ವೇದಿಕೆ ಮೇಲೆ ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ಮತದಾರರ ಗಮನ ಸೆಳೆದರು. ಬಳಿಕ ತಮ್ಮ ಭಾಷಣದ ಕೊನೆಗೆ ಮುಂಗಾರು ಮಳೆಯ ಕುಣಿದು ಕುಣಿದು ಬಾರೆ ಹಾಡು ಹಾಡಿ ಎಲ್ಲರನ್ನು ರಂಜಿಸಿದರು.