ಅಣ್ಣಿಗೇರಿಯಲ್ಲಿ ಶಾಸಕ ಕೋನರಡ್ಡಿ ಬೃಹತ್ ರೋಡ್ ಶೋ
Date : 2018-05-09 SHARE
ಅಣ್ಣಿಗೇರಿ : ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಣ್ಣಿಗೇರಿ ಪಟ್ಟಣದಲ್ಲಿ ಬುಧವಾರ ಸಂಜೆ ಜೆಡಿ ಎಸ್ ನ ಬೃಹತ್ ಶಕ್ತಿ ಪ್ರದರ್ಶನ ನಡೆಯಿತು. ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಎನ್.ಹೆಚ್. ಕೋನರಡ್ಡಿ ಅವರ ನೇತೃತ್ವದಲ್ಲಿ ಬಸ್ ನಿಲ್ದಾಣದಿಂದ ಆರಂಭಗೊಂಡ ಬೃಹತ್ ರೋಡ್ ಶೋ ಪಟ್ಟಣದ ಓಣಿ ಓಣಿಗಳಲ್ಲಿ ಸಂಚರಿಸಿ ಶಾದಿಮಹಲ್ ಬಳಿ ಸಮಾಪ್ತಿಗೊಂಡಿತು. ಈ ವೇಳೆ ಮತದಾರರಿಗೆ ಕೈ ಮುಗಿದು, ಶಾಸಕ ಕೋನರಡ್ಡಿ ಮತಯಾಚನೆ ಮಾಡಿದರು. ರೋಡ್ ಶೋಗೆ ಮಹಿಳಾ ಡೊಳ್ಳು ಕುಣಿತದ ತಂಡ, ಝಾಂಜ್ ಮೇಳದ ಮೆರಗು ನೀಡಿದವು. ಸಾವಿರಾರು ಜೆಡಿಎಸ್ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಹೆಜ್ಜೆ ಹಾಕಿದರೆ,ಅವರಿಗೆ ಹೂವಿನ ಸುರಿಮಳೆ ಹರಿಸಿ ಅಣ್ಣಿಗೇರಿ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿ ಶುಭ ಹಾರೈಸಿದರು. ಬಳಿಕ ಶಾದಿಮಹಲ್ ಬಳಿ ನಡೆದ ಬೃಹತ್ ಸಮಾವೇಶವನ್ನು ಉದ್ದೆÃಶಿಸಿ ವಿಧಾನ ಪರಿಷತ್ ಹಿರಿಯ ಸದಸ್ಯ ಹಾಗೂ ಜೆಡಿಎಸ್ ಕಾರ್ಯಾಧ್ಯಕ್ಷ ಬಸವರಾಜ ಹೊರಟ್ಟಿ ಮಾತನಾಡಿ, ನಿಮಗೆ ಯೋಗ್ಯ ವ್ಯಕ್ತಿ ಬೇಕೋ ಅಥವಾ ಅವಾಗ ಇವಾಗ ಬಂದ ಹೋಗೋ ನಾಯಕ ಬೇಕು ವಿಚಾರ ಮಾಡಿ, ಕೋನರಡ್ಡಿ ಅಂತಹ ಸರಳ, ಸಜ್ಜನ ಶಾಸಕ ರಾಜ್ಯದ ೨೨೪ ಕ್ಷೆÃತ್ರಗಳಲ್ಲಿ ಯಾರು ಸಿಗಲ್ಲ. ಹೀಗಾಗಿ ಅವರನ್ನು ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಬಳಿಕ ಶಾಸಕ ಎನ್.ಹೆಚ್. ಕೋನರಡ್ಡಿ ಮಾತನಾಡಿ, ಕುಮಾರಸ್ವಾಮಿ ಅವರು ನವಲಗುಂದಕ್ಕೆ ಕುಮಾರಪರ್ವಕ್ಕೆ ಆಗಮಿಸಿದ ವೇಳೆಯೂ ಮಳೆಯಾಗಿದೆ. ಇಂದು ಅಣ್ಣಿಗೇರಿಯ ಈ ಐತಿಹಾಸಿಕ ಕಾರ್ಯಕ್ರಮ್ಕಕೆ ಹತ್ತು ಸಾವಿರಕ್ಕಿÃಂತ ಹೆಚ್ಚಿನ ಜನ ಪಾಲ್ಗೊಂಡಿದ್ದಾರೆ. ಇಂದು ಮತ್ತೆà ಮಳೆ ಬಂದಿರುವುದು ಶುಭ ಸೂಚಕ. ಕಾಲ ಕಾಲಕ್ಕೆ ಮಳೆಯಾದರೆ ಮಾತ್ರ ರೈತರ ಬದುಕು ಹಸನಾಗುತ್ತದೆ ಎಂದರು. ಈ ಚುನಾವಣೆಯನ್ನು ಜೆಡಿಎಸ್ನ ಪ್ರತಿಯೊಬ್ಬ ಕಾರ್ಯಕರ್ತರು ಸವಾಲ್ ಆಗಿ ಸ್ವೀಕಾರ ಮಾಡಿ, ಕುಮಾರಸ್ವಾಮಿ ಅವರ ಕೈ ಬಲ ಪಡಿಸಲು ಜೆಡಿಎಸ್ನ ಹೊರೆ ಹೊತ್ತ ಮಹಿಳೆಯ ಚಿಹ್ನೆಗೆ ಮತ ನೀಡಿ ಎಂದು ಮನವಿ ಮಾಡಿದರು. ಬಿಜೆಪಿ ಹಾಗೂ ಕಾಂಗ್ರೆಸ್ ಸಾಲಮನ್ನಾ ಮಾಡುವುದಾಗಿ ಹೇಳಿವೆ. ಆದರೆ ಅದು ಸಂಪೂರ್ಣ ಸಾಲಮನ್ನಾ ಅಲ್ಲ. ನಮ್ಮದು ಎಲ್ಲ ಕೃಷಿ ಸಾಲ, ಬೆಳೆ ಸಾಲ, ಟ್ರಾö್ಯಕ್ಟರ್ ಸಾಲ, ನೇಕಾರರ, ಮಹಿಳೆಯರ ಸ್ತಿçà ಶಕ್ತಿ ಸಂಘಗಳ ಸಾಲಮನ್ನಾ ಆಗಲಿದೆ ಎಂದರು. ಅಣ್ಣಿಗೇರಿಯನ್ನು ಹುಬ್ಬಳ್ಳಿ-ಧಾರವಾಡ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದ್ದೆÃವೆ. ಆದರೆ ನಮ್ಮ ಜನಪ್ರಿಯತೆ, ವ್ಯಾಪಕ ಜನ ಬೆಂಬಲ ಕಂಡು ಬಿಜೆಪಿಯವರು ಪಿತೂರಿ ಮಾಡುತ್ತಿದ್ದಾರೆ. ಮುಸ್ಲಿಂ ಸಮುದಾಯದ ಜನರ ದಾರಿ ತಪ್ಪಿಸಲು ಹುನ್ನಾರ ನಡೆಸಿದ್ದಾರೆ. ಅದಕ್ಕೆ ಕಿವಿಗೊಡದೆ ಮತಚಲಾಯಿಸಿ. ನಾವು ಕಳೆದ ಐದು ವರ್ಷಗಳ ಅವಧಿಯಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಅಷ್ಟೇ ಅಲ್ಲ ಎಲ್ಲ ಜನಾಂಗದ ಜನರನ್ನು ವಿಶ್ವಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದೆÃನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತರ ಘಟಕದ ಸಂಘಟನೆ ಕಾರ್ಯದರ್ಶಿ ಸಾಹೀನ್ ಕೌಸರ್, ಅಲ್ಲಂಪ್ರಭು ದಿಡ್ಡಿ, ಹನುಮಂತ ಚಲವಾದಿ, ಭಗವಂತ ಪುಟ್ಟಣವರ, ಹಸನಸಾಬ ಗುಡುನಾಯ್ಕರ, ಜಟ್ಟಪ್ಪ ಕಲ್ಲವಡ್ಡರ, ಬಾಸುಸಾಬ ನವಲಗುಂದ, ದಾವಲಸಾಬ ದರವಾನಿ, ರಾಜೇಸಾಬ ನಡಕಟ್ಟಿನ, ಐ.ಜಿ. ಸಮುದ್ರಿ, ಜೆಡಿಎಸ್ ಜಿಲ್ಲಾಧ್ಯಕ್ಷ ಮುಜಾಹಿದ್ ಕಾಂಟ್ರ್ಯಾಕ್ಟರ, ಶಿವಶಂಕರ ಕಲ್ಲೂರ, ಶ್ರೀಶೈಲಯ್ಯ ಮೂಲಿಮನಿ, ವೀರಣ್ಣ ನೀರಲಗಿ, ಗಂಗಾಧರ ಪಾಟೀಲ ಕುಲಕರ್ಣಿ, ಶಾಂತವೀರ ಬೆಟಗೇರಿ, ದೇವರಾಜ ಕಂಬಳಿ, ಹಸನನಾಯ್ಕ ನಾಯ್ಕವಾಡಿ, ಬಾಸು ಸಾಬ ಹುಲಕೋಟಿ, ಕಳಕಪ್ಪ ಅಕ್ಕಿ, ಹಟೇಲ ಸಾಬ ದಾರಗೋಳಿ, ಎಫ್. ಎಂ. ಶೇಖಸನದಿ, ಹಬೀದ್ ಅಲಿ ಹಾಸೀಂನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.